Tuesday, March 5, 2013

ಮಾರ್ಚ್ 7. ಸಾರ್ವತ್ರಿಕ ರಜೆ

ಮಂಗಳೂರು, ಮಾರ್ಚ್.05:-ದಿನಾಂಕ 7-3-13 ರಂದು ರಾಜ್ಯದ 30 ಜಿಲ್ಲೆಗಳ 201 ನಗರ ಸ್ಥಳೀಯ ಸಂಸ್ಥೆಗಳು ಹಾಗೂ 07 ಮಹಾನಗರಪಾಲಿಕೆಯ ಚುನಾವಣೆಯು ನಡೆಯಲಿದ್ದು,ಸದರೀ ಕ್ಷೇತ್ರಗಳ ವ್ಯಾಪ್ತಿಯಲ್ಲಿ (ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿ ಹೊರತುಪಡಿಸಿ) ರುವಂತಹ ಮತದಾರರು ಮತ ಚಲಾಯಿಸಲು ಅನುಕೂಲವಾಗುವಂತೆ ಆಯಾ ಮತ ಕ್ಷೇತ್ರಗಳ ಎಲ್ಲಾ ಕೇಂದ್ರ ಹಾಗೂ ರಾಜ್ಯಸರ್ಕಾರಿ ಕಚೇರಿಗಳಿಗೆ ,ಶಾಲಾ ಕಾಲೇಜುಗಳಿಗೆ (ಅನುದಾನಿತ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ) ಸರ್ಕಾರವು ಆಯಾ ಚುನಾವಣಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುವ ದಿನಾಂಕ 7-3-13 ರಂದು ಸಾರ್ವತ್ರಿಕ ರಜೆಯನ್ನು ಸರ್ಕಾರವು ಘೋಷಿಸಿದೆ. ರಜೆಯು ತುರ್ತು ಸೇವೆಗಳಿಗೆ ಅನ್ವಯಿಸುವುದಿಲ್ಲ.ಚುನಾವಣಾ ಕಾರ್ಯಗಳಿಗೆ ನಿಯೋಜಿಸಲ್ಪಟ್ಟ ಎಲ್ಲಾ ಸರ್ಕಾರಿ ನೌಕರರುಗಳು ಚುನಾವಣಾ ಕಾರ್ಯಕ್ಕೆ ಹಾಜರಾಗತಕ್ಕದ್ದು.
 ಮತದಾನಕ್ಕೆ ಈ ದಾಖಲೆಗಳಿರಲಿ:
ಮತದಾರರು ಮತದಾನ ಮಾಡುವಾಗ ಮತದಾರರನ್ನು ಗುರುತಿಸಲು ಅವರು ನೀಡಬೇಕಾದ ಗುರುತಿನ ದಾಖಲೆಗಳನ್ನು ಭಾರತ ಚುನಾವಣಾ ಆಯೋಗವು ಮತದಾರರ ಭಾವಚಿತ್ರದ ಗುರುತಿನ ಚೀಟಿ ಅಥವಾ 21 ದಾಖಲೆಗಳ ಪೈಕಿ ಯಾವುದಾದರೊಂದನ್ನು ಹಾಜರುಪಡಿಸುವುದನ್ನು ಕಡ್ಡಾಯ ಮಾಡಿದೆ. ಮತಪತ್ರವನ್ನು ಮತದಾರರಿಗೆ ನೀಡುವ ಮುನ್ನ ಅವರು ತಮ್ಮ ಗುರುತನ್ನು ಸಾಬೀತು ಪಡಿಸತಕ್ಕದ್ದು.ಕುಟುಂಬದ ಮುಖ್ಯಸ್ಥರ ಹೆಸರಿನಲ್ಲಿ ನೀಡಲಾಗಿರುವ ಈ ಕೆಳಕಂಡ 21 ದಾಖಲೆಗಳ ಪೈಕಿ ಯಾವುದಾದರೊಂದು ದಾಖಲೆಯನ್ನು ಆ ಕುಟುಂಬದ ಇನ್ನಿತರ ಸದಸ್ಯರು ಗುರುತಿಗೆ ಬಳಸಬಹುದಾಗಿದೆ. ಪಾಸ್ ಪೋರ್ಟ್/ಡ್ರೈವಿಂಗ್ ಲೈಸನ್ಸ್/ಆದಾಯತೆರಿಗೆ ಗುರುತಿನ ಚೀಟಿ/ರಾಜ್ಯ:ಕೇಂದ್ರ ಸರ್ಕಾರ ಹಾಗೂ ಸಾರ್ವಜನಿಕ ಉದ್ದಿಮೆಗಳು ಅಥವಾ ಇತರೆ ಖಾಸಗಿ ಔದ್ಯಮಿಕ ಸಂಸ್ಥೆಗಳು ಅವರ ಕೆಲಸಗಾರರಿಗೆ ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು/ಸಾರ್ವಜನಿಕ ವಲಯದ ಬ್ಯಾಂಕ್/ಕಿಸಾನ್ ಮತ್ತು ಅಂಚೆ ಕಚೇರಿ ನೀಡಿರುವ ಭಾವಚಿತ್ರವಿರುವ ಪಾಸ್ ಪುಸ್ತಕ/ಮಾನ್ಯತೆ ಪಡೆದ ನೋಂದಾಯಿತ ವಿದ್ಯಾ ಸಂಸ್ಥೆಗಳು ವಿದ್ಯಾರ್ಥಿಗಳು ಕೊಟ್ಟಿರುವ ಗುರುತಿನ ಚೀಟಿಗಳು/ಭಾವಚಿತ್ರವಿರುವ ನೋಂದಾಯಿತ ಡೀಡ್ ಗಳು/ಪಟ್ಟಾಗಳು ಮುಂತಾದ ಆಸ್ತಿ ದಾಖಲೆಗಳು/ಭಾವಚಿತ್ರವಿರುವ ಪಡಿತರ ಚೀಟಿಗಳು/ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಪಿಂಚಣಿ ಪಾವತಿ ಆದೇಶಗಳು ಅಥವಾ ಮಾಜಿ ಯೋಧರ ಪಿಂಚಣಿ ಪುಸ್ತಕ/ಪಿಂಚಣಿ ಸಂದಾಯ ಆದೇಶಗಳಂತಹ ಪಿಂಚಣಿ ದಾಖಲೆಗಳು,ವೃದ್ಧಾಪ್ಯ ವೇತನ ಆದೇಶಗಳು,ವಿಧವಾ ವೇತನ ಆದೇಶಗಳು/ಭಾವಚಿತ್ರವಿರುವ ಸ್ವಾತಂತ್ರ್ಯ ಯೋಧರ ಗುರುತಿನ ಚೀಟಿಗಳು/ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಶಸ್ತ್ರ ಪರವಾನಗಿ/ಅಂಗವಿಕಲರಿಗೆ ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಗುರುತಿನ ಚೀಟಿಗಳು/ಮಾಜಿ ಯೋಧರ ಭಾವಚಿತ್ರವಿರುವ ಸಿ.ಎಸ್.ಡಿ ಕ್ಯಾಂಟೀನ್ ಕಾರ್ಡ್ /ಸಂಧ್ಯಾ ಸುರಕ್ಷಾ ಯೋಜನೆಯ ಭಾವಚಿತ್ರವಿರುವ ಗುರುತಿನ ಚೀಟಿ/ಎನ್ಆರ್ಇಜಿ ಯೋಜನೆಯಡಿಯಲ್ಲಿ  ನೀಡಿರುವ ಭಾವಚಿತ್ರವಿರುವ ಉದ್ಯೋಗ ಕಾರ್ಡ್ /ಭಾವಚಿತ್ರವಿರುವ ಯಶಸ್ವಿನಿ ಕಾರ್ಡ್/ಮಹಾನಗರಪಾಲಿಕೆ,ನಗರಸಭೆ,ಪುರಸಭೆ,ಗ್ರಾಮ ಪಂಚಾಯತಿಗಳು ಇತ್ಯಾದಿ ಸ್ಥಳೀಯ ಸಂಸ್ಥೆಗಳು  ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು/ಸರ್ಕಾರಿ ಇಲಾಖೆ ನೀಡಿರುವ ಭಾವಚಿತ್ರವಿರುವ ಹಿರಿಯ ನಾಗರೀಕರ ಗುರುತಿನ ಚೀಟಿ/ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ನೀಡಿರುವ ಕುಟುಂಬದ ಸದಸ್ಯರ ಹೆಸರು ಮತ್ತು ವಯಸ್ಸು ಹಾಗೂ ಕುಟುಂಬದ ಯಜಮಾನನೊಂದಿಗೆ ಹೊಂದಿರುವ ಸದಸ್ಯರ ಸಂಬಂಧ ಒಳಗೊಂಡ ಭಾವಚಿತ್ರ ಇರುವ ತಾತ್ಕಾಲಿಕ/ಮೂಲ ಪಡಿತರ ಚೀಟಿ/ಭಾವಚಿತ್ರವಿರುವ ಆರೋಗ್ಯ ವಿಮಾ ಯೋಜನೆಯ ಸ್ಮಾರ್ಟ್ ಕಾರ್ಡ್ ಗಳು ಮತದಾನ ಸಂದರ್ಭದಲ್ಲಿ ಗುರುತಿನ ದಾಖಲೆಗೆ ನೀಡಬಹುದಾಗಿದೆ.
ಸ್ಥಳೀಯ ಸಂಸ್ಥೆ ಚುನಾವಣೆ :ಆಧಾರ್ ನೋಂದಣಿಗೆ ರಜೆ :
' ಆಧಾರ್ ' ದ್ವಿತೀಯ ಹಂತದ ನೋಂದಣಿ ಕಾರ್ಯದಲ್ಲಿ ಮಂಗಳೂರು ಮತ್ತು ಬಂಟ್ವಾಳದಲ್ಲಿ ಒಟ್ಟು 11 ಕೇಂದ್ರಗಳಲ್ಲಿ  ಕಾರ್ಯಾಚರಿಸುತ್ತಿದ್ದು,ಮಂಗಳೂರು ಮಹಾನಗರಪಾಲಿಕೆ  ವಾಣಿಜ್ಯ ಸಂಕೀರ್ಣ,ಲಾಲ್ಭಾಗ್ ,ಮಹಾನಗರಪಾಲಿಕೆ ವಾಣಿಜ್ಯ ಸಂಕೀರ್ಣ ಕದ್ರಿ ಮಲ್ಲಿಕಟ್ಟೆ ಸಮುದಾಯ ಭವನ  ಪೆರ್ಮನ್ನೂರು,ಸಮುದಾಯ ಭವನ ಉಳ್ಳಾಲ ಮತ್ತು ಕಾರ್ನಾಡ್ ಸದಾಶಿವ ರಾವ್ ಸ್ಮಾರಕ ಕಟ್ಟಡ,ಲೈಟ್ ಹೌಸ್ ಹಿಲ್ ರಸ್ತೆ,ಮಹಾನಗರಪಾಲಿಕೆ ಉಪ ಕಚೇರಿ ಸುರತ್ಕಲ್,ಐಬಿ ನಾಡ ಕಚೇರಿ ಬಳಿ,ಮೂಡಬಿದ್ರೆ,ಹಳೆ ತಾಲೂಕು ಪಂಚಾಯತ್ ಕಚೇರಿ ಕಟ್ಟಡ,ಬಿ.ಸಿ ರೋಡ್,ಸಮುದಾಯ ಭವನ ಪುತ್ತೂರು,ಎನ್ಐಟಿಕೆ ಸುರತ್ಕಲ್ ಮತ್ತು ಪಂಚಾಯತ್ ಕಚೇರಿ ವಿಟ್ಲ ಇಲ್ಲಿ ಆಧಾರ್ ನೋಂದಣಿ ಪ್ರಗತಿಯಲ್ಲಿದ್ದು 7-3-13 ರಂದು ಆಧಾರ್ ಕೇಂದ್ರಗಳು ಕಾರ್ಯ ನಿರ್ವಹಿಸುವುದಿಲ್ಲ.
ಮತದಾನದಂದು ಕಾರ್ಮಿಕರಿಗೆ ವೇತನ ಸಹಿತ ಅನುಮತಿ:
ಕರ್ನಾಟಕ ಚುನಾವಣಾ ಆಯೋಗವು ರಾಜ್ಯದಲ್ಲಿ 30 ಜಿಲ್ಲೆಗಳ 7 ನಗರಪಾಲಿಕೆಗಳ ಮತ್ತು 201 ನಗರ ಸ್ಥಳೀಯ ಸಂಸ್ಥೆಗಳಿಗೆ ದಿನಾಂಕ 7-3-13 ರಂದು ಸಾರ್ವತ್ರಿಕ ಚುನಾವಣೆಯನ್ನು ನಡೆಸಲಿದ್ದು,ಮತದಾನದ ದಿನದಂದು ಮತ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಾರ್ಖಾನೆಗಳು,ಕೈಗಾರಿಕಾ ಸಂಸ್ಥೆಗಳು ಮತ್ತು ಅಂಗಡಿ ,ವಾಣಿಜ್ಯ ಸಂಸ್ಥೆಗಳು ಇತರೆ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಅಂದು ಮತದಾನದ ಕ್ಷೇತ್ರಗಳಲ್ಲಿ ತಮ್ಮ ಸಂವಿಧಾನಾತ್ಮಕ ಹಕ್ಕಾದ ಮತ ಚಲಾಯಿಸಲು ಅನುಕೂಲವಾಗುವಂತೆ ಕಾರ್ಮಿಕರಿಗೆ ವೇತನ ಸಹಿತ ಅನುಮತಿ ನೀಡಬೇಕೆಂದು ಮಾಲೀಕರು/ನಿಯೋಜಕರಿಗೆ ಕಾರ್ಮಿಕ ಅಯುಕ್ತರು ಸೂಚಿಸಿದ್ದಾರೆ.