Saturday, March 16, 2013

ಬಸವ ವಸತಿ ಯೋಜನೆ ಸಮಗ್ರ ಅನುಷ್ಠಾನಕ್ಕೆ ಆಗ್ರಹ

ಮಂಗಳೂರು,ಮಾರ್ಚ್.16:- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಸವ ವಸತಿ ಯೋಜನೆಯ ಅನುಷ್ಠಾನದಲ್ಲಿ ಅಧಿಕಾರಿಗಳು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಿಲ್ಲ. ಸಮನ್ವಯತೆ ಕೊರತೆಯಿಂದ ಫಲಾನುಭವಿಗಳು ಪರದಾಡುವಂತಾಗಿದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯರು ಆರೋಪಿಸಿದರು.
            ಇಂದು ಜಿ.ಪಂ.ನ ನೇತ್ರಾ ವತಿ ಸಭಾಂ ಗಣ ದಲ್ಲಿ ಅಧ್ಯಕ್ಷ ಕೊರ ಗಪ್ಪ ನಾಯ್ಕ ಅಧ್ಯಕ್ಷ ತೆಯಲ್ಲಿ ನಡೆದ ಜಿಲ್ಲಾ ಪಂಚಾ ಯತ್ ನ 11ನೆ ಸಾಮಾನ್ಯ ಸಭೆ ಯಲ್ಲಿ ಬಸವ ವಸತಿ ಯೋಜನೆ ಅನು ಷ್ಠಾನ ತೀವ್ರ ವಾದ ವಿವಾದಕ್ಕೆ ಕಾರಣವಾಯಿತು. ಕೆಲವೊಂದು ಪ್ರದೇಶಗಳಲ್ಲಿ ಫಲಾನುಭವಿಗಳು ಪ್ರಥಮ ಹಂತದ ಕಾಮಗಾರಿ ಮುಗಿಸಿ ಮನೆ ಕಟ್ಟಲು ಆರಂಭಿಸಿದ್ದರೂ ಹಣ ಬಿಡುಗಡೆಯಾಗಿಲ್ಲ. ಮತ್ತೆ ಕೆಲವು ಮನೆಗಳನ್ನು ರದ್ದುಪಡಿಸಲಾಗಿದೆ ಎಂಬ ಉತ್ತರ ಅಧಿಕಾರಿಗಳಿಂದ ಬರುತ್ತಿದ್ದರೆ, ಮತ್ತೆ ಕೆಲವು ಮನೆಗಳನ್ನು ಲಾಕ್ ಮಾಡಲಾಗಿದೆ ಎಂಬ ಉತ್ತರ ಸಿಗುತ್ತಿದೆ. ಬಡವರ ಅನುಕೂಲಕ್ಕೆ ಸರಕಾರ ರೂಪಿಸಿದ ಉತ್ತಮ ಯೋಜನೆ ನಿರೀಕ್ಷಿತ ಗುರಿ ಸಾಧಿಸಿಲ್ಲ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದರು.
ಮಾತ್ರವಲ್ಲದೆ, ಮನೆಗಳಿಗೆ ಪಂಚಾಂಗ ಹಾಕುವ ಅವಧಿಯನ್ನು ಮೂರು ತಿಂಗಳಿನಿಂದ ಆರು ತಿಂಗಳಿಗೆ ಏರಿಕೆ ಮಾಡಬೇಕೆಂಬ ಪ್ರಸ್ತಾಪದ ಕುರಿತು ಸಭೆ ನಿರ್ಣಯ ಕೈಗೊಂಡಿತು.
ಈ ವೇಳೆ, ಮುಖ್ಯ ಯೋಜನಾಧಿಕಾರಿ ನಝೀರ್ ಮಾತನಾಡಿ, ಬಸವ ವಸತಿ ಯೋಜನೆಯಡಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ತಲಾ 4000 ಮನೆಗಳಂತೆ ಹಾಗೂ ಬೆಳ್ತಂಗಡಿಗೆ ಹೆಚ್ಚುವರಿ 2000 ಮನೆಗಳು ಸೇರಿ ದ.ಕ. ಜಿಲ್ಲೆಗೆ ಒಟ್ಟು 30,000 ಮನೆಗಳು ಮಂಜೂರು ಆಗಿವೆ. 32,000 ರೂ. ಒಳಗಿನ ವಾಷರ್ಿಕ ಆದಾಯ ಹೊಂದಿರುವವರು ಅಥವಾ ಬಿಪಿಎಲ್ ಕಾಡರ್್ದಾರರು ಈ ಯೋಜನೆಗೆ ಅರ್ಹರಾಗಿರುತ್ತಾರೆ. ಪಿಡಿಒಗಳು ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳ ಮುತುವರ್ಜಿಯಲ್ಲಿ ಈ ಯೋಜನೆ ಸಮರ್ಪಕವಾಗಿ ಅನುಷ್ಠಾನ ಆಗಬೇಕಿದೆ ಎಂದರು.
        ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್ ಪ್ರತಿಕ್ರಿಯಿಸಿ, ಮನೆಯ ಪಂಚಾಂಗ ನಿರ್ಮಾಣ ಅವಧಿಯನ್ನು ಈಗಿರುವ 3 ತಿಂಗಳಿನಿಂದ ನಾಲ್ಕು ತಿಂಗಳಿಗೆ ಏರಿಕೆ ಮಾಡಲು ನಿರ್ಣಯ ಮಾಡಬಹುದಾಗಿದೆ. ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಸಂಬಂಧಿಸಿ ಐದು ತಾಲೂಕುಗಳ ನೋಡಲ್ ಅಧಿಕಾರಿಗಳು ಮುಂದಿನ ವಾರದಿಂದ ಪ್ರತಿ ತಾಲೂಕಿಗೆ ಭೇಟಿ ನೀಡಿ ತಾಲೂಕಿನ ಇಒ ಹಾಗೂ ಪಿಡಿಒಗಳ  ಸಭೆ ನಡೆಸಿ, ಪರಿಶೀಲನೆ ನಡೆಸಬೇಕು. ಮಾತ್ರವಲ್ಲದೆ, ಅಧ್ಯಕ್ಷರ ಸಮಕ್ಷಮದಲ್ಲಿ ತಾನು ಕೂಡಾ ಯೋಜನೆಯ ಪ್ರಗತಿ ಬಗ್ಗೆ ಮೇಲುಸ್ತುವಾರಿ ವಹಿಸಿಕೊಂಡು ಸಮೀಕ್ಷೆ ನಡೆಸುವುದಾಗಿ ತಿಳಿಸಿದರು.
ಇದೇ ವೇಳೆ ಯೋಜನೆಯ ಪ್ರಥಮ ಹಂತದ ಕಾಮಗಾರಿಯ ಅವಧಿಯನ್ನು 3 ತಿಂಗಳಿನಿಂದ ನಾಲ್ಕು ತಿಂಗಳಿಗೆ ವಿಸ್ತರಿಸಲು ನಿರ್ಣಯಿಸಲಾಯಿತು.ಕೊರಗರ ಮನೆಗಳಿಗೆ ಇದುವರೆಗೆ ರಚನಾತ್ಮಕ ಕಾರ್ಯವಾಗಿಲ್ಲ ಎಂಬ ಆಕ್ಷೇಪಕ್ಕೆ ಐಟಿಡಿಪಿ ಅಧಿಕಾರಿ ಉತ್ತರಿಸಿದರು. ನಬಾರ್ಡ್ ಯೋಜನೆಯಡಿ ಅಂಗನವಾಡಿ ಪಟ್ಟಿ ಬದಲೀ ಪ್ರಸ್ತಾವನೆ ಕಳುಹಿಸಬೇಕು. ಹಾಗೂ ಪಟ್ಟಿಯನ್ನು ಎಲ್ಲ ಜಿಲ್ಲಾ ಪಂಚಾಯತ್ ಸದಸ್ಯರಿಗೆ ನಿಡಬೇಕೆಂದು ಸದಸ್ಯರು ಆಗ್ರಹಿಸಿದರು. ಉಪಾಧ್ಯಕ್ಷ ರಿತೇಶ್ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಉಪಸ್ಥಿತರಿದ್ದರು.