Friday, March 29, 2013

'ಮತದಾರರನ್ನು ಮತದಾನಕ್ಕೆ ಪ್ರೇರೆಪಿಸಿ'

ಮಂಗಳೂರು, ಮಾರ್ಚ್. 29 : ಅರ್ಹ ಮತದಾರರನ್ನು ಮತದಾನಕ್ಕೆ ಪ್ರೇರೆಪಿಸಿ ಪ್ರಜಾಪ್ರಭುತ್ವವನ್ನು ಸುಭದ್ರ ಪಡಿಸಲು ಈಗಾಗಲೇ ಎಲ್ಲ ಜಿಲ್ಲೆಗಳಲ್ಲು ಸ್ವೀಪ್ ಕಾರ್ಯಕ್ರಮವನ್ನು ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಕ್ರಿಯಾಯೋಜನೆ ರೂಪಿಸಿ ಜಾರಿಗೊಳಿಸಲಾಗಿದ್ದು, ಇದನ್ನು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗದ ಖರ್ಚು ವೆಚ್ಚದ ವಿಶೇಷ ಅಧಿಕಾರಿಯೂ ಆಗಿರುವ ಪಂಕಜ್ ಕುಮಾರ್ ಪಾಂಡೆ ಅವರು ಹೇಳಿದರು.
  ಇಂದು ನಡೆದ ವಿಡಿಯೋ ಕಾನ್ಫ ರೆನ್ಸ್ನಲ್ಲಿ ಜಾಗೃತಿ ಯೋಜ ನೆಯ ಬಗ್ಗೆ ವಿವ ರಿಸಿದ ಅವರು, ವಿವಿಧ ಜಿಲ್ಲೆಯ ಜಿಲ್ಲಾ ಧಿಕಾರಿ ಗಳಿಂದ ಅಭಿ ಪ್ರಾಯ ವನ್ನು ಸಂಗ್ರ ಹಿಸಿ ದರು. ದಕ್ಷಿಣ ಕನ್ನಡ ಜಿಲ್ಲಾ ಧಿಕಾರಿ ಹರ್ಷ ಗುಪ್ತಾ ಅವರು ಅಭಿಪ್ರಾ ಯಿಸಿ, ಉಳಿ ದೆಲ್ಲ ಸ್ವೀಪ್ ನ ಕ್ರಿಯಾ ಯೋಜನೆ ಗಳ ಜೊತೆಗೆ ಕಾರ್ಯ ಕ್ರಮ ಗಳಲ್ಲಿ ಸ ಕ್ರಿಯ ವಾಗಿ ನೇರ ವಾಗಿ ಜನ ರೊಂದಿಗೆ ಸಂಪರ್ಕ ಹೊಂದಿ ರುವ ಬಿ ಎಲ್ ಒಗಳನ್ನು ಈ ನಿಟ್ಟಿನಲ್ಲಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.
ಲೋಕಲ್ ಚಾನೆಲ್ ಗಳು ಚುನಾವಣಾ ಸಂದೇಶಗಳನ್ನು ಸಮಾಜದ ಹಿತದೃಷ್ಟಿಯಿಂದ ನೀಡಬೇಕು. ಜನ ಜಾಗೃತಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಬಹುಮಾಧ್ಯಮಗಳ ನೆರವನ್ನು ಪಡೆಯಲಾಗಿದೆ.
ಇದಕ್ಕೂ ಮುಂಚೆ ಮಾತನಾಡಿದ ಅನಿಲ್ ಝಾ ಅವರು ಸದಾಚಾರ ಸಂಹಿತೆ ಬಗ್ಗೆ ವಿವರಿಸಿದರು. ಅಪರ ಜಿಲ್ಲಾಧಿಕಾರಿ ದಯಾನಂದ ಕೆ ಎ, ಸಿಇಒ ಡಾ ಕೆ ಎನ್ ವಿಜಯಪ್ರಕಾಶ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.