Tuesday, March 12, 2013

ಸುಳ್ಯದಲ್ಲಿ ಅತ್ಯಧಿಕ 61.6 ಮಿಲಿಮೀಟರ್ ಮಳೆ

ಮಂಗಳೂರು,ಮಾರ್ಚ್.12:- ದಕ್ಷಿಣಕನ್ನಡ ಜಿಲ್ಲೆಯಲ್ಲಿ ವಾಡಿಕೆ ಮಳೆಗಿಂತ ಬಿನ್ನವಾಗಿ ಮಾರ್ಚ್ ಮಾಹೆಯಲ್ಲಿ ಈ ಬಾರಿ ಮಳೆಯಾಗಿದ್ದು,ಮಾರ್ಚ್ 7 ರಿಂದ 12 ರ ವರೆಗೆ ಸುಳ್ಯದಲ್ಲಿ 61.6 ಮಿಲಿಮೀಟರ್ ಅತ್ಯಧಿಕ ಮಳೆ ದಾಖಲಾಗಿದೆ.  ಇದೇ ಮೇಲ್ಕಂಡ  ಅವಧಿಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ 43.6 ಮಿಲಿಮೀಟರ್,ಪುತ್ತೂರು 23.78 ,ಬಂಟ್ವಾಳದಲ್ಲಿ 14.2 ಮಿಲಿಮೀಟರ್ ಹಾಗೂ ಕನಿಷ್ಠ 12.0 ಮಿಲಿಮೀಟರ್ ಮಳೆ ಮಂಗಳೂರಿನಲ್ಲಿ ದಾಖಲಾಗಿದೆ.