Sunday, March 17, 2013

ಕೆ ಎಚ್ ಬಿ ಬಹುಮಹಡಿ ವಸತಿ ಸಮುಚ್ಚಯಕ್ಕೆ ಸಚಿವ ಸೋಮಣ್ಣರಿಂದ ಶಿಲನ್ಯಾಸ

ಮಂಗಳೂರು, ಮಾರ್ಚ್.17:- ಮಧ್ಯಮ ವರ್ಗದವರಿಗೆ ಸೂರನ್ನು ಒದಗಿಸುವ ದೃಷ್ಟಿಯಿಂದ ಕರ್ನಾಟಕ ಗೃಹಮಂಡಳಿ ಕುಡುಪುವಿನಲ್ಲಿ 70ಮನೆ ಹಾಗೂ ಕೋಟೆಕಾರ್ ಬಡಾವಣೆಯಲ್ಲಿ 216 ಮನೆಗಳನ್ನೊಳಗೊಂಡ ಬಹು ಮಹಡಿ ವಸತಿ ಸಮುಚ್ಚಯಗಳಿಗೆ ಗುದ್ದಲಿ ಪೂಜೆಯನ್ನು ವಸತಿ ಸಚಿವ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರಾದ ವಿ. ಸೋಮಣ್ಣ ನೆರವೇರಿಸಿದರು.
          ಇಂದು ಮಂಗ ಳೂರು ನಗರದ ಕುಡುಪು ಬಡಾ ವಣೆ ಯಲ್ಲಿ ಶಂಕು ಸ್ಥಾಪನಾ ಸಮಾ ರಂಭ ನೆರ ವೇರಿಸಿ ಮಾತ ನಾಡಿದ ಅವರು, ಕಳೆದ 56 ವರ್ಷಗಳಲ್ಲಿ ಆಗದ ಸಾಧನೆ ತಮ್ಮ ಸರ್ಕಾರದ ಅವಧಿಯಲ್ಲಿ ಆಗಿದ್ದು, 40,000ಕ್ಕೂ ಅಧಿಕ ಸೈಟ್ ಗಳನ್ನು ಹಾಗೂ 12,000ಕ್ಕೂ ಹೆಚ್ಚಿನ ಮನೆಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಮನೆಗಳು ಮಾತ್ರವಲ್ಲದೆ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ರಾಜ್ಯದ ಎಲ್ಲ  30 ಜಿಲ್ಲಾ ಕೇಂದ್ರಗಳಲ್ಲೂ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಮನೆ ನಿರ್ಮಾಣದಲ್ಲಿ ದೇಶಕ್ಕೆ ಉತ್ತಮ ಮಾದರಿಯನ್ನು ಕರ್ನಾಟಕ ನೀಡಿದೆ.
                ಬಸವ ವಸತಿ ಯೋಜನೆಯಿಂದ 6ಲಕ್ಷಕ್ಕೂ ಮೇಲ್ಪಟ್ಟ ಜನರಿಗೆ ವಸತಿ ರಾಜ್ಯದಲ್ಲಿ ಒದಗಿಸುವ ಪ್ರಕ್ರಿಯೆಯ ಪ್ರಗತಿಯಲ್ಲಿದೆ. ಕೇಂದ್ರದ ನೆರವು ಹಾಗೂ ರಾಜ್ಯದ ಯೋಜನೆಗಳಿಂದ ವಸತಿ ರಹಿತರಿಗೆ ವಸತಿ ಒದಗಿಸುವ ಹಿನ್ನಲೆಯಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯಿಂದ 100 ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ ಎಂದರು.
          ಕಾರ್ಯಕ್ರಮವನ್ನು ಉನ್ನತ ಶಿಕ್ಷಣ ಸಚಿವ ಸಿ ಟಿ ರವಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ವಿಧಾನ ಸಭಾ ಉಪಸಭಾಧ್ಯಕ್ಷರಾದ  ಎನ್ ಯೋಗೀಶ್ ಭಟ್ ಉಪಸ್ಥಿತರಿದ್ದರು. ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ  ಜೆ ಕೃಷ್ಣ ಪಾಲೆಮಾರ್ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಕೆ. ಮೋನಪ್ಪ ಭಂಡಾರಿ, ಸ್ಥಳಿಯ ಪಾಲಿಕೆ ಸದಸ್ಯ ಭಾಸ್ಕರ ಮೊಯಿಲಿ ಉಪಸ್ಥಿತರಿದ್ದರು.
        ಉಳ್ಳಾಲ ಕೋಟೆ ಕಾರ್ ಬಡಾ ವಣೆ ಯಲ್ಲಿ ಶಂಕು ಸ್ಥಾಪನೆ ನೆರ ವೇರಿಸಿ ಮಾತ ನಾಡಿದ ಸಚಿವರು ಕೆ ಎಚ್ ಬಿ ವ್ಯವಹಾರ ಪಾರದರ್ಶಕವಾಗಿದ್ದು, ಇದು ವ್ಯವಹಾರವಲ್ಲ; ಸೇವೆ ಎಂದು ಸ್ಪಷ್ಟ ಪಡಿಸಿದರು. ನಗರದ ಎಂ ಜಿ ರೋಡ್ ಮತ್ತು ಕೊಟ್ಟಾರದಲ್ಲಿ ವಸತಿ ಸಮುಚ್ಛಯಕ್ಕೆ 1,500 ಕೋಟಿ ರೂ.ಗಳ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಈಗಿರುವ ಸರ್ಕಾರಿ ವಸತಿಗೃಹಗಳನ್ನು ಸರಿ ಪಡಿಸುವ ಉದ್ದೇಶವಿದೆ ಎಂದರು. ಸಭೆಯ ಅಧ್ಯಕ್ಷತೆಯನ್ನು ಮಂಗಳೂರು ಕ್ಷೇತ್ರ ವಿಧಾನಸಭಾ ಸದಸ್ಯರಾದ  ಯು ಟಿ ಖಾದರ್ ಅವರು ವಹಿಸಿದ್ದರು. ಗ್ರಾಮಪಂಚಾಯತ್ ಅಧ್ಯಕ್ಷ ಶೇಖರ್ ಕಣೀರುತೋಟ, ಕೆ ಎಚ್ ಬಿಯ ಮುಖ್ಯ ಅಭಿಯಂತರರಾದ ಬಿ ಗುರುಪ್ರಸಾದ್ ಅವರು ಉಪಸ್ಥಿತರಿದ್ದರು.