Wednesday, March 20, 2013

ಚುನಾವಣಾ ಕರ್ತವ್ಯದಲ್ಲಿ ನಿರ್ಲಕ್ಷ್ಯ ಸಲ್ಲ: ಜಿಲ್ಲಾಧಿಕಾರಿ

ಮಂಗಳೂರು, ಮಾರ್ಚ್. 20 :- ಇತ್ತೀಚೆಗೆ ನಡೆದ ನಗರ ಸ್ಥಳೀಯಸಂಸ್ಥೆ ಚುನಾವಣೆ ಯಶಸ್ವಿಯಾಗಿದ್ದು, ಮುಂಬರುವ ಚುನಾವಣೆಯಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ  ಎನ್ ಪ್ರಕಾಶ್ ಅವರು ಹೇಳಿದರು.
ಅವ ರಿಂದು ಜಿಲ್ಲಾಧಿ ಕಾರಿ ಕಚೇರಿ ಯಲ್ಲಿ ಜಿಲ್ಲಾ ಕಂದಾ ಯಾಧಿ ಕಾರಿ ಗಳ ಸಮ ನ್ವಯ ಸಮಿತಿ ಸಭೆಯ ಆರಂಭ ದಲ್ಲಿ ಚುನಾ ವಣಾ ಕರ್ತ ವ್ಯದ ಬಗ್ಗೆ, ಆದ್ಯತೆ ಗಳ ಬಗ್ಗೆ ಅಧಿ ಕಾರಿ ಗಳನ್ನು ದ್ದೇಶಿಸಿ ಮಾತ ನಾಡು ತ್ತಿದ್ದರು. ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವುದು ತನಗೆ ಖುಷಿ ಕೊಡುವ ವಿಷಯವಲ್ಲ; ಆದ್ದರಿಂದ ಎಲ್ಲರೂ ಪ್ರಾಮಾಣಿಕವಾಗಿ ಕಾರ್ಯೋನ್ಮುಖರಾಗಿ ಎಂದ ಜಿಲ್ಲಾಧಿಕಾರಿಗಳು, ನಾಳೆಯಿಂದಲೇ ಗ್ರಾಮಪಂಚಾಯಿತಿಯಿಂದ ಪಾಲಿಕೆ ವ್ಯಾಪ್ತಿಯ ವರೆಗೆ ಸಂಬಂಧಪಟ್ಟ ಅಧಿಕಾರಿಗಳು ಮತದಾರರ ಹೆಸರು ಸೇರ್ಪಡೆಯಲ್ಲಿ ಹೆಚ್ಚಿನ ಅಸ್ಥೆ ವಹಿಸಿ ದುಡಿಯಬೇಕು. ಈ ಸಂಬಂಧ ನೆರವು ಬಯಸಿ ಬರುವ ಯಾವುದೇ ಅರ್ಹ ಮತದಾರ ನಿರಾಸೆಯಾಗದಂತೆ ಅವನ ಕೆಲಸ ಮುಗಿದ ಖುಷಿಯಲ್ಲಿ ಹಿಂದಿರುಗಬೇಕು. ಅರ್ಹರಿಗೆ ಸ್ಪಂದಿಸದ ವರದಿಗಳು ಪ್ರಕಟವಾದರೆ ಕಠಿಣ ಕ್ರಮ ನಿಶ್ಚಿತ ಎಂದರು.
ಜಿಲ್ಲಾ ಪಂಚಾ ಯತ್ ಮುಖ್ಯ ಕಾರ್ಯ ನಿರ್ವ ಹಣಾ ಧಿಕಾ ರಿಗಳು ಈ ನಿಟ್ಟಿ ನಲ್ಲಿ ತಮ್ಮ ಸಂಪೂರ್ಣ ಸಹ ಕಾರ ನೀಡಿದ್ದು, ಇದರ ಸದ್ಬಳ ಕೆಯಾ ಗಬೇಕು. ಚುನಾ ವಣಾ ಪ್ರ ಕ್ರಿಯೆ ಮೇಲ್ವಿ ಚಾರಣೆ ತಹ ಸೀಲ್ದಾ ರರದ್ದೆ. ಅವರದ್ದೇ ಉಸ್ತುವಾರಿ. ಯಾವುದೇ ತಪ್ಪುಗಳಿಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು. ಸಹಾಯವಾಣಿಗಳು ಸುಸ್ಥಿತಿಯಲ್ಲಿರಬೇಕು. ಸಂವಹನದಲ್ಲಿ ಕೊರತೆಯಾಗಬಾರದು. ಬಿ ಎಲ್ ಒಗಳಲ್ಲೂ ತಹಸೀಲ್ದಾರ ಕಚೇರಿಯಲ್ಲೂ ಮತದಾರರ ಪಟ್ಟಿ ಲಭ್ಯವಿರಬೇಕು ಎಂದರು. ತಪ್ಪು ಮಾರ್ಗದರ್ಶನ ಅಥವಾ ಸುಳ್ಳು ಮಾಹಿತಿಗೆ ಶಿಕ್ಷೆ ಖಚಿತ ಎಂದರು.ಅಪರ ಜಿಲ್ಲಾಧಿಕಾರಿ ದಯಾನಂದ ಕೆ ಎ ಅವರು ಉಪಸ್ಥಿತರಿದ್ದರು.
ಅಪರಾಹ್ನ ಜಿಲ್ಲಾ ಧಿಕಾರಿಗಳ ಕಚೇರಿಯಲ್ಲಿ ನಡೆದ ಪಿಡಿಒ ಹಾಗೂ ಇಒಗಳ ಸಭೆಯಲ್ಲೂ ಮಾದರಿ ನೀತಿ ಸಂಹಿತೆ ಮತ್ತು ಕರ್ತವ್ಯ ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಅರ್ಹ ಮತದಾರರಿಗೆ ಫೆಸಿಲಿಟಿ ನೀಡುವ ವ್ಯವಸ್ಥೆಗಳ ಬಗ್ಗೆ, ಮತದಾರರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳು ಸೂಚನೆಗಳನ್ನು ನೀಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಮಹಾನಗರಪಾಲಿಕೆ ಆಯುಕ್ತರು, ಅಪರ ಜಿಲ್ಲಾಧಿಕಾರಿಗಳು ಮಾಹಿತಿ ಹಾಗೂ ನಿರ್ದೇಶನಗಳನ್ನು ನೀಡಿದರು.