Friday, March 22, 2013

ನ್ಯಾಯಯುತ ಮತದಾನಕ್ಕೆ ಜಿಲ್ಲಾಡಳಿತ ಸಜ್ಜಾಗುತ್ತಿದೆ: ಜಿಲ್ಲಾಧಿಕಾರಿ

ಮಂಗಳೂರು, ಮಾರ್ಚ್. 22:-ಜಿಲ್ಲೆಯಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಯಾವುದೇ ಚ್ಯುತಿ ಬಾರದಂತೆ ಕಾರ್ಯ ನಿರ್ವಹಿಸುವಂತೆ ಚುನಾವಣಾ ಪ್ರಕ್ರಿಯೆಯಲ್ಲಿ
ಪಾಲ್ಗೊಳ್ಳುವ ಎಲ್ಲಾ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನ್ಯಾಯಯುತ ಪಾರದರ್ಶಕ ಹಾಗೂ ಮುಕ್ತ ಚುನಾವಣೆಯ ಹೊಣೆ ನಮ್ಮೆಲ್ಲರದ್ದು ಎಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿಗಳಾದ ಎನ್.ಪ್ರಕಾಶ್ ತಿಳಿಸಿದರು.
ಇವರು ಇಂದು ಜಿಲ್ಲಾ ಧಿಕಾರಿ ಕಚೇರಿ ಯಲ್ಲಿ ನಡೆದ ಪತ್ರಿಕಾ ಗೋಷ್ಠಿ ಯನ್ನು ಉದ್ದೇ ಶಿಸಿ ಮಾತ ನಾಡು ತ್ತಿದ್ದರು.
ಚುನಾ ವಣಾ ಅಧಿ ಸೂಚನೆ ದಿನಾಂಕ 10-4-13 ರಂದು ಪ್ರಕಟಿ ಸಲಾ ಗುತ್ತಿದೆ. ನಾಮ ಪತ್ರ ಸಲ್ಲಿಸಲು ಕೊನೇ ದಿನಾಂಕ 17-4-13, ನಾಮಪತ್ರ ಪರಿಶೀಲನೆ 18-4-13, ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೇ ದಿನಾಂಕ 20-4-13. ಚುನಾವಣೆಯನ್ನು ದಿನಾಂಕ 5-5-13 ರಂದು ಪೂರ್ವಾಹ್ನ 8 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ,ಮತ ಎಣಿಕೆ ದಿನಾಂಕ 8-5-13 ಮತ್ತು ಚುನಾವಣಾ ಪ್ರಕಿೃಯೆ ದಿನಾಂಕ 11-5-13 ರಂದು ಪೂರ್ಣಗೊಳ್ಳಲಿದೆ.ಭಾರತ ಚುನಾವಣಾ ಆಯೋಗದ ರಾಜ್ಯ ವಿಧಾನ ಸಭೆಯ ವೇಳಾಪಟ್ಟಿಯು ದಿನಾಂಕ 11-5-13 ರ ವರೆಗೆ ಜಾರಿಯಲ್ಲಿರುತ್ತದೆ.
ಜಿಲ್ಲೆಯಲ್ಲಿ 16-1-3 ಮತ್ತು 28-1-13 ರಂದು ಅಂತಿಮವಾಗಿ ಪ್ರಕಟಿಸಲ್ಪಟ್ಟ ಮತದಾರತರ ಪಟ್ಟಿಗಳಲ್ಲಿ ಪ್ರಕಟಿಸಲಾಗಿದೆ.  ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ 96494  ಗಂಡಸರು 93131 ಹೆಂಗಸರು ಒಟ್ಟು 189625 ಮತದಾರರು /ಮೂಡಬಿದ್ರೆ 79855 ಗಂಡಸರು 87281 ಹೆಂಗಸರು ಒಟ್ಟು 167136 ಮತದಾರರು/ಮಂಗಳೂರು ಉತ್ತರದಲ್ಲಿ 96994 ಗಂಡಸರು 101372 ಹೆಂಗಸರು ಒಟ್ಟು 198366 ಮತದಾರರು/ಮಂಗಳೂರು ದಕ್ಷಿಣ 94816 ಗಂಡಸರು 103566 ಹೆಂಗಸರು ಒಟ್ಟು 198382 ಮತದಾರರು/ಮಂಗಳೂರು 81069 ಗಂಡಸರು ,83236 ಹೆಂಗಸರು ಒಟ್ಟು 164305 ಮತದಾರರು/ಬಂಟ್ವಾಳ 97221 ಗಂಡಸರು 95663  ಹೆಂಗಸರು ಒಟ್ಟು 192884 ಮತದಾರರು/ಪುತ್ತೂರು 89198 ಗಂಡಸರು 85409 ಹೆಂಗಸರು ಒಟ್ಟು 174607ಮತದಾರರು/
ಸುಳ್ಯ 89515 ಗಂಡಸರು 86839 ಹೆಂಗಸರು ಒಟ್ಟು 176354 ಮತದಾರರು ಹೀಗೆ ಜಿಲ್ಲೆಯಲ್ಲಿ ಒಟ್ಟು 725162 ಗಂಡಸರು,  736497 ಹೆಂಗಸರು ಒಟ್ಟು 1461659 ಮತದಾರರಿದ್ದಾರೆ.  ಒಟ್ಟು 1627 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಜಿಲ್ಲೆಯಲ್ಲಿ ಈಗಾಗಲೇ 99.76 ಶೇಕಡಾ ಮತದಾರರಿಗೆ ಗುರುತಿನ ಚೀಟಿ ವಿತರಿಸಲಾಗಿದೆ.ದಿನಾಂಕ 1-1-13 ರಂದು 18 ವರ್ಷ ಪ್ರಾಯ ತುಂಬಿದ ಸಾರ್ವಜನಿಕರು 13-4-13 ರೊಳಗೆ ನಮೂನೆ 6 ರಲ್ಲಿ ಸಲ್ಲಿಸಿದರೆ ದಿನಾಂಕ 20-4-13ರೊಳಗೆ ಇತ್ಯರ್ಥಪಡಿಸಿ ಅಂತಿಮ ಮತದಾರರ ಪಟ್ಟಿಗಳಲ್ಲಿ ನೊಂದಾಯಿಸಲಾಗುವುದು.ತಿದ್ದುಪಡಿಗಳನ್ನು ನಮೂನೆ 8 ರಲ್ಲಿ ಸಲ್ಲಿಸಿದರೆ ಇತ್ಯರ್ಥ ಪಡಿಸಿ ಸರಿಪಪಡಿಸಲಾಗುವುದು .ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್, ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರಾದ ಡಾ ಹರೀಶ್ ಕುಮಾರ್ ಹಾಗೂ ಅಪರ ಜಿಲ್ಲಾಧಿಕಾರಿ ಕೆ ಎ ದಯಾನಂದ ಉಪಸ್ಥಿತರಿದ್ದರು.