Saturday, March 16, 2013

ಸ್ವಚ್ಚ ಮಂಗಳೂರಿಗೆ: ಕಸಗುಡಿಸುವ ಯಂತ್ರ

ಮಂಗಳೂರು, ಮಾರ್ಚ್.16:-ಮಂಗಳೂರು ಮಹಾ ನಗರಪಾಲಿಕೆ ವ್ಯಾಪ್ತಿಯನ್ನು ಶುಚಿಯಾಗಿಡುವ ನಿಟ್ಟಿನಲ್ಲಿ 57 ಲಕ್ಷ ರೂ.ಗಳ ಗುಡಿಸುವ ಯಂತ್ರವನ್ನು ಇಂದು ಜಿಲ್ಲಾಧಿಕಾರಿ  ಎನ್.ಪ್ರಕಾಶ್ ನಾಗರೀಕರಿಗೆ ಅರ್ಪಿಸಿದರು.
ಮಂಗ ಳೂರು ನಗರ ವನ್ನು ಶುಚಿ ಯಾಗಿ ರಿಸುವ  ನಿಟ್ಟಿ ನಲ್ಲಿ ಕಸ ಗುಡಿಸುವ ಯಂತ್ರದ ಜೊತೆಗೆ ಮಣ್ಣ ಗುಡ್ಡೆ,ಕೋರ್ಟ್  ವಾರ್ಡಿನ ನಾಗ ರೀಕರಿಗೆ ಈ ಸಂದರ್ಭದಲ್ಲಿ ಹಳದಿ ಮತ್ತು ಹಸಿರು ಕಸದ ಬುಟ್ಟಿಗಳನ್ನು ವಿತರಿಸಲಾಯಿತು.  ಸಾರ್ವಜನಿಕರು ಕಸವಿಲೇವಾರಿಯಲ್ಲಿ ತಮ್ಮ ಸಹಕಾರವನ್ನು ನೀಡುವುದು ಅತ್ಯಗತ್ಯ ಎಂದು ನುಡಿದರು. ಹಸಿಕಸ ಮತ್ತು ಒಣಕಸವನ್ನು ವಿಭಜಿಸಿ ನೀಡುವುದರಿಂದ ತ್ಯಾಜ್ಯ ವಿಲೇ ಸುಲಭವಾಗಲಿದೆ ಎಂದು ಅವರು ನುಡಿದರು.
ಈ ಸಮಾ ರಂಭದ ಲ್ಲಿದ್ದ ಮಹಾ ನಗರ ಪಾಲಿಕೆ ಆಯುಕ್ತ ರಾದ ಡಾ. ಹರೀಶ್ ಕುಮಾರ್ ಮಾತನಾಡಿ ಮಹಾನಗರಪಾಲಿಕೆ ಸ್ವಾವಲಂಬಿಯಾಗುವ ನಿಟ್ಟಿನಲ್ಲಿ ಕಸಗುಡಿಸುವ ಯಂತ್ರವನ್ನು ಖರೀದಿಸಲಾಗಿದ್ದು ಕಾರ್ಮಿಕರ ಅಸಹಕಾರದ ವೇಳೆಯಲ್ಲಿ ಈ ಯಂತ್ರ ಪಾಲಿಕೆಗೆ ವರದಾನವಾಗಲಿದೆಯೆಂದರು.ಕಾಂಕ್ರೀಟ್ ರಸ್ತೆಗಳಲ್ಲಿ ಅತ್ಯಂತ ಸುಲಲಿತವಾಗಿ ಕಸಗುಡಿಸಲು ಈ ಯಂತ್ರದಿಂದ ಸಾಧ್ಯವಾಗಲಿದೆ ಎಂದರು.10ಲೀಟರ್ ನ 7800 ಟಿನ್ ಗಳು- 3900 ಹಸಿರು ಮತ್ತು 3900 ಹಳದಿ,120 ಲೀಟರ್ ನ 600 ಟಿನ್ ಗಳು -300 ಹಸಿರು ಮತ್ತು 300 ಹಳದಿ ,240 ಲೀಟರ್ 50 ಟಿನ್ ಗಳು- ತಲಾ 25 ರಂತೆ ವಿತರಿಸಲಾಯಿತು.
ಜಂಟಿ ಆಯುಕ್ತರಾದ ಶ್ರೀಕಾಂತ್ ,ವಲಯ ಆಯುಕ್ತರಾದ  ಶ್ರೀಮತಿ ಪ್ರಮೀಳಾ ಅವರನ್ನೊಳಗೊಂಡಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.