Wednesday, October 31, 2012

ದ.ಕ:19 ಮಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಮಂಗಳೂರು,ಅಕ್ಟೋಬರ್31:ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕ್ಷೇತ್ರಗಳ 19 ಮಂದಿ ಸಾಧಕರಿಗೆ ಜಿಲ್ಲಾಡಳಿತ ಜಿಲ್ಲಾ `ರಾಜ್ಯೋತ್ಸವ ಪ್ರಶಸ್ತಿ'ಪ್ರಕಟಿಸಿದೆ. ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ  ಬುಧವಾರ ಸುದ್ದಿಗೋಷ್ಠಿಯಲ್ಲಿ ಸಾಧಕರ ಹೆಸರುಗಳನ್ನು  ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದರು.
ಸಾಹಿತ್ಯ ಕ್ಷೇತ್ರದಲ್ಲಿ ಕೆ.ಟಿ.ಗಟ್ಟಿ ಮತ್ತು ಅಝೀಜ್ ಬೈಕಂಪಾಡಿ, ಶಿಕ್ಷಣಕ್ಕಾಗಿ ಪ್ರೊ.ಎಸ್.ಪ್ರಭಾಕರ ಉಜಿರೆ, ಯಕ್ಷಗಾನಕ್ಕಾಗಿ ಪುತ್ತೂರು ಶ್ರೀಧರ ಭಂಡಾರಿ,ಸಮಾಜ ಸೇವೆಗಾಗಿ ನರಿಕೊಂಬು ಪ್ರಕಾಶ್ ಕಾರಂತ್, ಶ್ರೀಧರ ಭಟ್ ಮತ್ತು ಕಡಂಬೋಡಿ ಮಹಾಬಲ ಪೂಜಾರಿಯವರಿಗೆ ಪ್ರಶಸ್ತಿ ಪ್ರಕಟಿಸಲಾಗಿದೆ.
ಸಂಗೀತಕ್ಕಾಗಿ ಕಾಂಚನ ರೋಹಿಣಿ ಸುಬ್ಬರತ್ನಂ, ರಂಗಭೂಮಿಯ ಸೇವೆಗಾಗಿ ಸುಳ್ಯದ ಜೀವನ್ರಾಂ, ಜಾನಪದ ಕ್ಷೇತ್ರದ ಸಾಧನೆಗೆ ಲೋಕಯ್ಯ ಸೇರ, ಕೃಷಿಗಾಗಿ ತಾಕೋಡೆಯ ಎಡ್ವಡರ್್, ಚಿತ್ರಕಲೆಗಾಗಿ ವಿಟ್ಲದ ಮೋಹನ ಸೋನ, ಪ್ರಸಾದನಕ್ಕಾಗಿ ಶಾಂತರಾಮ ಆಚಾರ್ಯ ಕಲ್ಲಡ್ಕ ಪ್ರಶಸ್ತಿ ಪಡೆಯಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ನೃತ್ಯಕ್ಕಾಗಿ ಶಾರದಾಮಣಿ ಶೇಖರ್, ಪರಿಸರಕ್ಕಾಗಿ ಅಶೋಕವರ್ಧನ, ಸಂಶೋಧನಾ ಸಾಧನೆಗಾಗಿ ಗಾಯತ್ರಿ ನಾವಡ, ಮಾಧ್ಯಮ ಸೇವೆಗಾಗಿ ಡಾ.ರೊನಾಲ್ಡ್ ಅನಿಲ್ ಫೆರ್ನಾಂಡೀಸ್ ಮತ್ತು ಧಾರ್ಮಿಕ ಸಾಂಸ್ಕೃತಿಕ ಕ್ಷೇತ್ರಕ್ಕಾಗಿ ಕೊಡಿಪಾಡಿ ನಾರಾಯಣ ಜೋಯಿಸ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಮಂಗಳೂರಿನ ರಾಮಕೃಷ್ಣ ಆಶ್ರಮವೂ ವಿಶೇಷ ಸೇವೆಗಾಗಿ ಪ್ರಶಸ್ತಿ ಪಡೆಯಲಿದೆ.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅಧ್ಯಕ್ಷತೆಯ ಸಮಿತಿ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಪ್ರದೀಪ್ಕುಮಾರ್ ಕಲ್ಕೂರ, ಮಂಗಳೂರು ಮಹಾ ನಗರ ಪಾಲಿಕೆಯ ಆಯುಕ್ತ ಡಾ.ಹರೀಶ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳಾ ನಾಯ್ಕ್ ಮತ್ತು ಮೂಡುಬಿದರೆಯ ಡಾ.ಮೋಹನ್ ಆಳ್ವ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು ಎಂದು ವಿವರಿಸಿದ ಜಿಲ್ಲಾಧಿಕಾರಿಯವರು ಕ್ರೀಡಾ ಕ್ಷೇತ್ರದ ಉನ್ನತ ಸಾಧಕರಾದ ಸಹನಾ ಕುಮಾರಿ ಮತ್ತು ಸದಾನಂದ ಪ್ರಭು ಅವರಿಗೆ ವಿಶೇಷ ಪುರಸ್ಕಾರ ನೀಡಲಾಗುವುದು ಎಂದರು.
ಕಸಾಪ ಅಧ್ಯಕ್ಷ ಪ್ರದೀಪ್ಕುಮಾರ್ ಕಲ್ಕೂರ, ಅಪರ ಜಿಲ್ಲಾಧಿಕಾರಿ ಕೆ.ಎ.ದಯಾನಂದ, ಪಾಲಿಕೆ ಆಯುಕ್ತರಾದ ಡಾ.ಹರೀಶ್ಕುಮಾರ್ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಮಂಗಳಾ ನಾಯ್ಕ್ ಉಪಸ್ಥಿತರಿದ್ದರು.





ಎಂಡೋ ಸಲ್ಫಾನ್ ಸಂತ್ರಸ್ತರ ಸಮೀಕ್ಷೆ ಪೂರ್ಣ 103 ಗ್ರಾಮಗಳು, 5,226 ಸಂತ್ರಸ್ತರು

ಮಂಗಳೂರು,ಅಕ್ಟೋಬರ್.31:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಡೋ ಸಲ್ಫಾನ್ ಸಂತ್ರಸ್ತರ ಸಮೀಕ್ಷೆ ಅಂತಿಮ ಹಂತಕ್ಕೆ ತಲುಪಿದೆ. ಜಿಲ್ಲೆಯಲ್ಲಿ ಸಮೀಕ್ಷೆ ಪ್ರಕಾರ 5226 ಎಂಡೋ ಸಲ್ಫಾನ್ ಸಂತ್ರಸ್ತರಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ ತಿಳಿಸಿದ್ದಾರೆ.
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಮೀಕ್ಷೆ ಇಂದು ಸಂಜೆ ಮುಕ್ತಾಯಗೊಳ್ಳಲಿದೆ. ತಾಲೂಕು ಆರೋಗ್ಯ ಅಧಿಕಾರಿಗಳು, ಆರೋಗ್ಯ ಸಹಾಯಕಿಯರು, ಕಾರ್ಯಕರ್ತರು ಸಮೀಕ್ಷೆ ನಡೆಸಿರುವರು. ಸಮೀಕ್ಷೆಯ ವರದಿಯನ್ನು ಇಂದು ಸಂಜೆಯೇ ಸರಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಪ್ರಸ್ತುತ ಸಮೀಕ್ಷೆಯ ಪ್ರಕಾರ ಎಂಡೋ ಸಲ್ಫಾನ್ ಪೀಡಿತರಲ್ಲಿ 179 ಮಂದಿ ಪೂರ್ಣ ಹಾಸಿಗೆ ಹಿಡಿದವರು. ಅಂತಹವರಿಗಾಗಿ ಕೊಕ್ಕಡ ಮತ್ತು ಕೊಯಿಲದಲ್ಲಿ ಎರಡು ಡೇ ಕೇರ್ ಸೆಂಟರ್ಗಳಿವೆ. ಸಂತ್ರಸ್ತರ ತಪಾಸಣೆಗಾಗಿ ತಜ್ಞ ವೈದ್ಯರ ತಂಡ ನೇಮಕ ಮಾಡುವಂತೆ ಸರಕಾರಕ್ಕೆ ಕೋರಿಕೆ ಸಲ್ಲಿಸಲಾಗಿದೆ. ವೈದ್ಯರ ತಂಡ ತಪಾಸಣೆ ನಡೆಸಿ ಬಾಧಿತರನ್ನು ಗುರುತಿಸಿ ಕೊಟ್ಟಲ್ಲಿ ಶಾಶ್ವತವಾದ ಪುನರ್ ವಸತಿ ಕೇಂದ್ರವನ್ನು ತೆರೆಯುವ ಉದ್ದೇಶವನ್ನು ಜಿಲ್ಲಾಡಳಿತ ಹೊಂದಿದೆ ಎಂದು ಜಿಲ್ಲಾಧಿಕಾರಿ ನುಡಿದರು.
ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಪ್ರಕಾರ 42 ಗ್ರಾಮಗಳಿಗೆ ಮಾತ್ರ ಎಂಡೋ ಸಲ್ಫಾನ್ ಬಾಧಿಸಿದೆ. ಆದರೆ ಜಿಲ್ಲಾಡಳಿತ ವಿವಿಧ ಸಂಘಟನೆಗಳು, ಎಂಡೋ ಸಲ್ಫಾನ್ ಸಂತ್ರಸ್ತರ ಸಮಿತಿ ಮೊದಲಾದವರಿಂದ ಮಾಹಿತಿ ಪಡೆದು ಕೊಂಡು 103 ಗ್ರಾಮಗಳಲ್ಲಿ ಸಮೀಕ್ಷೆ ನಡೆಸಿದೆ. ನೈಜ ಬಾಧಿತರನ್ನು ದೂರ ಮಾಡುವ ಪ್ರಶ್ನೆಯೇ ಇಲ್ಲ. ಒಂದು ವೇಳೆ ಅರ್ಹರು ಬಿಟ್ಟು ಹೋಗಿದ್ದರೆ ಪರಿಗಣಿಸುವ ಅವಕಾಶವನ್ನು ಮುಕ್ತವಾಗಿರಿಸಲಾಗುವುದು ಎಂದು ಜಿಲ್ಲಾಧಿಕಾರಿ ಸ್ಪಷ್ಟ ಪಡಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಉಪಸ್ಥಿತರಿದ್ದರು. 

ದ.ಕ ದಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ಮುಹೂರ್ತ ನಿಗದಿ

ಮಂಗಳೂರು,ಅಕ್ಟೋಬರ್.31:ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಪ್ಲಾಸ್ಟಿಕ್ ಮುಕ್ತ ಮಂಗಳೂರಿಗಾಗಿ ಜಿಲ್ಲಾಡಳಿತ ಸಂಕಲ್ಪ ಮಾಡಲಿದೆ. ವಿಶೇಷವಾಗಿ ಮಂಗಳೂರು ಮತ್ತು ಜಿಲ್ಲೆಯ ಇತರ ನಗರಗಳಲ್ಲಿ ನ.1ರಿಂದ ಪ್ಲಾಸ್ಟಿಕ್ ನಿಷೇಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಎಲ್ಲಾ ರೀತಿಯ ಪ್ಲಾಸ್ಟಿಕ್ ಉತ್ಪಾದನೆ, ಬಳಕೆಯನ್ನು ನಿಷೇಧಿಸಲು ನಿರ್ಧರಿಸಲಾಗಿದೆ. ಬಳಸಿದ ಪ್ಲಾಸ್ಟಿಕ್ನ ನಿರ್ವಹಣೆಗೂ ನಿರ್ಬಂಧ ಹೇರಲಾಗುವುದು. ಮಂಗಳೂರು ನಗರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅದಕ್ಕಾಗಿ ಪಾಲಿಕೆಯ ಆಯುಕ್ತರಾದ ಡಾ.ಹರೀಶ್ ಕುಮಾರ್ ನಿರ್ದಿಷ್ಟವಾದ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ ಎಂದು ಜಿಲ್ಲಾಧಿಕಾರಿ ನುಡಿದರು.
ಪ್ಲಾಸ್ಟಿಕ್ ಉತ್ಪಾದನೆ, ಬಳಕೆ ಮತ್ತು ನಿರ್ವಹಣೆ ಕಾಯ್ದೆ 2011ರ ಪ್ರಕಾರ ಜಿಲ್ಲೆಯಾದ್ಯಂತ ಕ್ರಮ ಕೈಗೊಳ್ಳಲಾಗುವುದು. ಆರಂಭದ 15 ದಿನ ವಾಹನವೊಂದರಲ್ಲಿ ಜಿಲ್ಲೆಯಾದ್ಯಂತ ಪ್ಲಾಸ್ಟಿಕ್ ನಿಷೇಧದ ಜಾಗೃತಿ ಮೂಡಿಸಲಾಗುವುದು . ಬಳಿಕ ದಂಡ ವಿಧಿಸಲಾಗುವುದು  ಎಂದು ಹೇಳಿದ ಜಿಲ್ಲಾಧಿಕಾರಿಗಳು ನ.1ರಂದು  ಬೆಳಿಗ್ಗೆ 7.30ಕ್ಕೆ ನಗರದ ಸ್ಕೌಟ್ ಭವನದಿಂದ ಹೊರಡುವ  ಪ್ಲಾಸ್ಟಿಕ್ ನಿಷೇಧ ಜಾಥಾಕ್ಕೆ ಜಿಲ್ಲಾ ಉಸ್ತುವಾರಿ ಮಂತ್ರಿ ಸಿ.ಟಿ.ರವಿ ಚಾಲನೆ ನೀಡುವರು ಎಂದರು.
ಹಾಲಿನ ಪ್ಯಾಕೆಟ್ಗೂ ಪ್ಲಾಸ್ಟಿಕ್ ಗೆ ಪರ್ಯಾಯ ಹುಡುಕಲು ಕೆ.ಎಂ.ಎಫ್ ಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ನುಡಿದರು.

ನಗರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ಜಿಲ್ಲಾಡಳಿತದ ಹೆಜ್ಜೆ

ಮಂಗಳೂರು,ಅಕ್ಟೋಬರ್. 31.: ಮಂಗಳೂರು ನಗರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸುವಲ್ಲಿ ಜಿಲ್ಲಾಡಳಿತ ಮತ್ತು ಮಂಗಳೂರು ಮಹಾನಗರಪಾಲಿಕೆ ಹಲವು ವಿನೂತನ ಪರಿಕ್ರಮಗಳನ್ನು ಆರಿಸಿಕೊಂಡಿದ್ದು, ಜನಜಾಗೃತಿಗೆ ಹೆಚ್ಚಿನ ಮಹತ್ವ ನೀಡಿದೆ.
ಇಂದು ದಕ್ಷಿಣ ಕನ್ನಡ ಜಿಲ್ಲಾ ಧಿಕಾರಿ ಡಾ ಎನ್ ಎಸ್ ಚನ್ನಪ್ಪ ಗೌಡ, ಮಹಾ ನಗರ ಪಾಲಿಕೆ ಆಯು ಕ್ತರಾದ ಡಾ. ಹರೀಶ್ ಕುಮಾರ್, ಪಾಲಿಕೆಯ ಪರಿಸರ ಇಂಜಿನಿ ಯರ ಗಳು ಪಾಲಿಕೆ ಡಾಕ್ಟರ್ ಸುದ ರ್ಶನ ಸೇರಿ ದಂತೆ ಎಲ್ಲ ಇಲಾಖಾ ಧಿಕಾರಿ ಗಳು ಕದ್ರಿ ಮಾರ್ಕೆಟ್ ನಲ್ಲಿ ಗ್ರಾಹ ಕರಿಗೆ ಪ್ಲಾಸ್ಟಿಕ್ ಬಳಸ ದಂತೆ ಅರಿವು ಮೂಡಿ ಸುವ ನಿಟ್ಟಿನಲ್ಲಿ ಬಟ್ಟೆಯ ಕೈ ಚೀಲ ಗಳನ್ನು ಹಂಚಿ ದರು.
ಕಸ ವಿಲೇ ವಾರಿ, ತ್ಯಾಜ್ಯ ವಿಲೇ ವಾರಿ ಯಲ್ಲಿ ಪ್ಲಾಸ್ಟಿಕ್ ನಿಂದಾಗಿ ಸವಾ ಲುಗ ಳನ್ನು ಎದು ರಿಸುತ್ತಿದ್ದು, ಜಿಲ್ಲೆಯ ಉದ್ಯ ಮಿಗಳು ಮಾರ್ಕೆಟ್ ನವರು, ಸಂಘ ಸಂಸ್ಥೆಗಳು ಜಿಲ್ಲಾ ಡಳಿತದ ಮನವಿಗೆ ಸ್ಪಂದಿಸುತ್ತಿದೆ ಎಂದು ಮಹಾನಗರಪಾಲಿಕೆ ಆಯುಕ್ತರಾದ ಡಾ ಹರೀಶ್ ಹೇಳಿದರು.

 

Tuesday, October 30, 2012

ಸಕಾಲ ವ್ಯಾಪ್ತಿಗೆ 267 ಸೇವೆ: ನಾಲ್ಕು ಜಿಲ್ಲೆಗಳು ಪೈಲೆಟ್ ಯೋಜನೆಯಡಿ

ಮಂಗಳೂರು, ಅಕ್ಟೋಬರ್. 30 : ನವೆಂಬರ್ ಎರಡರಿಂದ 'ಸಕಾಲ' ವ್ಯಾಪ್ತಿಗೆ ಹೊಸ 116 ಸೇವೆಗಳನ್ನು ಸೇರ್ಪಡೆಗೊಳಿಸಲಾಗಿದ್ದು, ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ನವೆಂಬರ್ ಎರಡರಿಂದ ಈ ಸೇವೆಗಳು ಪೈಲಟ್ ಯೋಜನೆಯಡಿ ಕಾರ್ಯಾನುಷ್ಠಾನಗೊಳ್ಳಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ, ಧಾರವಾಡದಲ್ಲಿ, ಚಿತ್ರದುರ್ಗದಲ್ಲಿ, ಬೀದರ್ ನ ಔರಾದ್ ನಲ್ಲಿ ಹೊಸ ಸೇವೆಗಳು ಪೈಲಟ್ ಯೋಜನೆಯಡಿ ಅನುಷ್ಠಾನಗೊಳ್ಳಲಿದೆ. ಪಶುಸಂಗೋಪನೆ, ಮೀನುಗಾರಿಕೆ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾಚ್ಯವಸ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಇಲಾಖೆ, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ, ಒಳಾಡಳಿತ ಇಲಾಖೆ, ಬೃಹತ್ ಬೆಂಗಳೂರು ಮಹಾನಗರಪಾಲಿಕೆ, ಕೊಳಚೆ ಅಭಿವೃದ್ಧಿ ಮಂಡಳಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸೇವೆಗಳು ಸಕಾಲ ಸೇವೆಯಡಿ ಸೇರ್ಪಡೆಗೊಂಡಿವೆ.
ಮಾರ್ಚ್ ನಲ್ಲಿ ಜಿಲ್ಲೆಯ ಪುತ್ತೂರಿನಿಂದ ಜಾರಿಯಾದ ಸ'ಕಾಲ ಯೋಜನೆಯಡಿ 151 ಸೇವೆಗಳನ್ನು ನೀಡಲಾಗುತ್ತಿದ್ದು, ಈಗ 116 ಸೇವೆಗಳನ್ನು ಹೊಸದಾಗಿ ಸೇರ್ಪಡೆಗೊಳಿಸಲಾಗಿದೆ. ಇದರಿಂದಾಗಿ ಒಟ್ಟು 267 ಸೇವೆಗಳು ಸಕಾಲ ಕಾಯಿದೆಯಡಿ ಸೇರ್ಪಡೆಗೊಂಡು ಜನರಿಗೆ ಅನುಕೂಲವಾಗಲಿದೆ. ಈ ಬಾರಿಯೂ ನೂತನ ಸೇವೆಗಳಿಗೆ ಜಿಲ್ಲೆಯಲ್ಲಿ ಪೈಲೆಟ್ ಪ್ರಾಜೆಕ್ಟ್ ನಡಿ ಪುತ್ತೂರನ್ನು ಆರಿಸಲಾಗಿದೆ.
ಅಕ್ಟೋಬರ್ 30ರವರೆಗೆ ಸಕಾಲ ಕಾಯಿದೆಯಡಿ ಜಿಲ್ಲೆಯಲ್ಲಿ 4,8,412 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 3.90,085 ಅರ್ಜಿಗಳನ್ನು ವಿಲೇ ಮಾಡಲಾಗಿದೆ. 18,361 ಅರ್ಜಿಗಳನ್ನು ತಿರಸ್ಕರಿಸಲಾಗಿದೆ.

ಸಕಾಲ ಯೋಜನೆಗೆ  ಜಿಲ್ಲೆಯ ನೋಡಲ್ ಅಧಿಕಾರಿಯಾಗಿರುವ ಅಪರ ಜಿಲ್ಲಾಧಿಕಾರಿ ದಯಾನಂದ್ ಅವರು ಮಾಹಿತಿ ನೀಡಿ ಪುತ್ತೂರು ತಾಲೂಕಿನಲ್ಲಿ ತ್ವರಿತವಾಗಿ ಸಕಾಲ ಕಾಯಿದೆಯಡಿ ಬರುವ ಅರ್ಜಿಗಳನ್ನು ವಿಲೇ ಮಾಡಲಾಗುತ್ತಿದೆ ಎಂದರು. ಮೆಸ್ಕಾಂ ಮತ್ತು ಸಮಾಜ ಕಲ್ಯಾಣ ಇಲಾಖೆಯನ್ನು ಸಕಾಲ ಸೇವಾ ವ್ಯಾಪ್ತಿಗೆ ಸೇರಿಸುವ ಸಂಬಂಧ ನಿರ್ಧಾರ ಶೀಘ್ರದಲ್ಲೇ ಪ್ರಕಟವಾಗಬಹುದು ಎಂದೂ ಅವರು ಹೇಳಿದರು.

ಸುರಕ್ಷತಾ ವಲಯದಲ್ಲಿ ಕ್ರಷರ್ ಗೆ ಅರ್ಜಿ ಸಲ್ಲಿಸಲು ನ.5 ಕೊನೆಯ ದಿನ

ಮಂಗಳೂರು,ಅಕ್ಟೋಬರ್. 30.: ಸುಪ್ರೀಂ ಕೋರ್ಟ್ ನ ನಿರ್ದೇಶನದಂತೆ ಜಿಲ್ಲಾಡಳಿತ ಜಿಲ್ಲೆಯಲ್ಲಿ ಒಟ್ಟು 8 ಸುರಕ್ಷತಾ ವಲಯಗಳನ್ನು ಗುರುತಿಸಿದ್ದು, ಈ ಪ್ರದೇಶದಲ್ಲಿ ಕ್ರಷರ್ ಆರಂಭಿಸಲು ಆಸಕ್ತಿ ಇರುವವರು ನವೆಂಬರ್ 5 ರೊಳಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಥವಾ ಜಿಲ್ಲಾಧಿಕಾರಿಗಳ ಕಚೇರಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಅಂತಿಮ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಹೇಳಿದರು.
ಇಂದು ಜಿಲ್ಲಾಧಿ ಕಾರಿಗಳ ಕಚೇರಿ ಯಲ್ಲಿ ಈ ಸಂ ಬಂಧ ನಡೆದ ಕಲ್ಲು ಪುಡಿ ಘಟಕ ನಿಯಂ ತ್ರಣ ಸಮಿತಿ ಸಭೆಯ ಅಧ್ಯ ಕ್ಷತೆ ವಹಿಸಿ ಮಾತ ನಾಡು ತ್ತಿದ್ದ ಅವರು, ಈ ವರೆಗೆ ಈ ಸಂಬಂ ಧದ ಪ್ರ ಕ್ರಿಯೆ ಗಳನ್ನು ಪರಿ ಶೀಲಿ ಸಿದರು.
ಜಿಲ್ಲೆ ಯಲ್ಲಿ ಎಂಟು ಸು ರಕ್ಷತಾ ವಲಯ ಗಳನ್ನು  ಗುರುತಿ ಸಲಾಗಿದೆ. ಇಲ್ಲಿ ಗಣಿಗಾರಿಕೆ ನಡೆಸಲು ಅವಕಾಶ ನೀಡಲಾಗುವುದು. ಜಿಲ್ಲೆಯಲ್ಲಿ ಅಕ್ರಮವಾಗಿರುವ ಕ್ರಷರ್ ಗಳನ್ನು ಪತ್ತೆ ಹಚ್ಚಲು ಗಣಿ ಮತ್ತು ಭೂವಿಜ್ಞಾನ ಇಲಾಖಾಧಿಕಾರಿಗಳು, ತಹಸೀಲ್ದಾರ್ರು ಮತ್ತು ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿಗಳು ಹೊಣೆ ಹೊರಬೇಕೆಂದರು.
ಈಗಾಗಲೇ ಈ ಸಂಬಂಧದ ಸಮಗ್ರ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ನವೆಂಬರ್ 10ರೊಳಗೆ ವರದಿ ಸಲ್ಲಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕೆಐಎಡಿಬಿಗೂ ಈ ಪ್ರಕ್ರಿಯೆಯಲ್ಲಿ ಸಮಾನ ಹೊಣೆಗಾರಿಕೆಯಿದ್ದು, ಇಲಾಖೆಗಳ ಅಧಿಕಾರಿಗಳು ಹೊಣೆಯರಿತು ಕಾರ್ಯೋನ್ಮುಖರಾಗಿ ಎಂದರು. ಜಿಲ್ಲೆಯಲ್ಲಿ ಸುರಕ್ಷತಾ ವಲಯದಲ್ಲಿ ಕ್ರಷರ್ ಅಳವಡಿಸಲು 18 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಆಸಕ್ತರಿಗೆ ನವೆಂಬರ್ 5ರವರೆಗೆ ಅವಕಾಶ ನೀಡಲಾಗಿದೆ. ಇನ್ನು ಷರತ್ತಬದ್ಧವಾಗಿ ಗುರುತಿಸಿಕೊಂಡಿರುವ ಕೆಲವು ಪ್ರದೇಶಗಳನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕರಾದ ಡಾ ರವೀಂದ್ರ, ಎಲ್ಲ ತಹಸೀಲ್ದಾರ್ ಗಳು, ಅಪರ ಜಿಲ್ಲಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ನವೆಂಬರ್ ನಲ್ಲಿ ಜಿಲ್ಲೆಯಲ್ಲಿ ಮಕ್ಕಳ ಚಲನಚಿತ್ರೋತ್ಸವ

ಮಂಗಳೂರು, ಅಕ್ಟೋಬರ್. 30 : ನವೆಂಬರ್ 26 ಮತ್ತು 27ರಂದು ಮಂಗಳೂರು ನಗರ ವ್ಯಾಪ್ತಿಯಲ್ಲಿ ಹಾಗೂ 28 ಮತ್ತು 29ರಂದರು ತಾಲೂಕುಗಳಲ್ಲಿ ಮಕ್ಕಳ ಚಲನಚಿತ್ರೋತ್ಸವ ಆಯೋಜಿಸಲಾಗಿದೆ.
ಅಪರ ಜಿಲ್ಲಾಧಿಕಾರಿ ದಯಾನಂದ ಕೆ ಎ ಇವರ ಅಧ್ಯಕ್ಷತೆಯಲ್ಲಿ ಈ ಸಂಬಂಧ ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ಜಿಲ್ಲೆಯಾದ್ಯಂತ ಮಕ್ಕಳ ಚಲನಚಿತ್ರೋತ್ಸವ ಆಚರಿಸಲು ನಿರ್ಧರಿಸಲಾಯಿತು. ಜಿಲ್ಲಾಡಳಿತದ ಸಹಕಾರದೊಂದಿಗೆ ಮಕ್ಕಳ ಚಲನಚಿತ್ರ ಸೊಸೈಟಿ (ಸಿಎಫ್ಎಸ್ಐ) ಚೆನ್ನೈ ಇವರ ಸಹಕಾರದೊಂದಿಗೆ ಉತ್ಸವ ನಡೆಯಲಿದೆ.
ನಗರದಲ್ಲಿ ಜ್ಯೋತಿ, ಸೆಂಟ್ರಲ್, ಸುಚಿತ್ರಾ ಮತ್ತು ಪ್ಲಾಟಿನಂ ಚಿತ್ರಮಂದಿರಗಳಲ್ಲಿ ಮಕ್ಕಳ ಚಲನಚಿತ್ರೋತ್ಸವ ನಡೆಯಲಿದೆ. ಸುಚಿತ್ರ ಮತ್ತು ನ್ಯೂಚಿತ್ರಾ ಮಂದಿರಗಳ ಮಾಲೀಕರು ಮತ್ತು ವಿದ್ಯಾಂಗ ಉಪನಿರ್ದೇಶಕರು, ಬಿಇಒಗಳು ಉಪಸ್ಥಿತರಿದ್ದರು.

ಮತದಾರರಪಟ್ಟಿ ಪರಿಷ್ಕರಣೆಗೆ ಅವಕಾಶ


ಮಂಗಳೂರು, ಅಕ್ಟೋಬರ್. 30 : 202 ಮಂಗಳೂರು ಉತ್ತರ ಹಾಗೂ 203 ಮಂಗಳೂರು ದಕ್ಷಿಣ ವ್ಯಾಪ್ತಿಯಲ್ಲಿ ಬರುವ ವಿಧಾನ ಸಭಾ ಚುನಾ ವಣಾ ಕ್ಷೇತ್ರ ಗಳ ಮತ ದಾರರ ಪಟ್ಟಿ ಪರಿಷ್ಕ ರಣೆಯು ದಿನಾಂಕ 30.10.2012 ರಿಂದ 29.11.2012 ರವರೆಗೆ ನಡೆ ಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಧಿಕಾರಿ ಡಾ ಎನ್ ಎಸ್ ಚನ್ನಪ್ಪ ಗೌಡ ತಿಳಿಸಿ ದ್ದಾರೆ. 
ಈ ಅವಧಿ ಯಲ್ಲಿ ಈ ಕ್ಚೇತ್ರದ ಸಾರ್ವ ಜನಿಕರು ಕಚೇರಿ ವೇಳೆಯಲ್ಲಿ ಸಂಬಂ ಧಪಟ್ಟ ಮತ ಗಟ್ಟೆ ಗಳಲ್ಲಿ ಮನವಿ ಸಲ್ಲಿಸು ವಂತೆ ಜಿಲ್ಲಾ ಧಿಕಾರಿ ಯವರು ಕೋರಿದ್ದಾರೆ,

ರಾಜ್ಯೋತ್ಸವ ಆಚರಣೆಗೆ ಸಕಲ ಸಿದ್ಧತೆ: ಡಾ.ಚನ್ನಪ್ಪ ಗೌಡ

ಮಂಗಳೂರು,ಅಕ್ಟೋಬರ್. 30 :ಮಂಗಳೂರು ನಗರವನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸುವ ದಿಕ್ಕಿನಲ್ಲಿ ಈಗಾಗಲೇ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು,ನವೆಂಬರ್ 1 ರ ಕನ್ನಡ ರಾಜ್ಯೋತ್ಸವವನ್ನು ಪ್ಲಾಸ್ಟಿಕ್ ನಿಷೇಧಿಸಿ ಎಂಬ ಧ್ಯೇಯದೊಂದಿಗೆ  ಆಚರಿಸಲು  ಸಿದ್ಧತೆಗಳು ನಡೆದಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಾಜ್ಯೋತ್ಸವ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾದ ಡಾ.ಎನ್.ಎಸ್.ಚನ್ನಪ್ಪ ಗೌಡರು ತಿಳಿಸಿದ್ದಾರೆ.
                ಅವರು ಇಂದು ಈ ಸಂಬಂಧ ತಮ್ಮ ಕಚೇರಿ ಯಲ್ಲಿ ನಡೆದ ಪೂರ್ವ ಭಾವೀ ಸಭೆಯ ಅಧ್ಯ ಕ್ಷತೆ ವಹಿಸಿ ಮಾತ ನಾಡು ತ್ತಿದ್ದರು. ಸುಮಾರು 250 ಕ್ಕೂ ಹೆಚ್ಚು ಶಾಲಾ ಮಕ್ಕಳು,ವಿವಿಧ ಕಲಾ ಪ್ರಕಾ ರಗಳ ಆಕ ರ್ಷಕ ವಾದ್ಯ ಕುಣಿತ ಗಳು ಸೇರಿದಂತೆ 10ಕ್ಕೂ ಹೆಚ್ಚು ಸ್ಥಬ್ಧ ಚಿತ್ರಗ ಳಿಂದೊ ಡಗೂ ಡಿದ ಅತ್ಯಾ ಕರ್ಷಕ ಮೆರ ವಣಿಗೆ ಯು ನವೆಂಬರ್ 1 ರಂದು ಬೆಳಿಗ್ಗೆ 7.45 ಕ್ಕೆ ಜ್ಯೋತಿ ವೃತ್ತದಿಂದ ಹೊರಟು ನೆಹರೂ ಮೈದಾನ ಸೇರಲಿದೆ.ಶಾಲಾ ಮಕ್ಕಳಿಂದ ನಾಡಗೀತೆಗಳ ಗಾಯನ,ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
 ಉನ್ನತ ಶಿಕ್ಷಣ ಸಚಿವರು ಹಾಗೂ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಆದ ಸಿ.ಟಿ.ರವಿಯವರು ಬೆಳಿಗ್ಗೆ 9.00 ಗಂಟೆಗೆ ಸರಿಯಾಗಿ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡುವರು.ಪೋಲೀಸ್ ಸ್ಕೌಟ್ಸ್ ಗೈಡ್ಸ್ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಲಿದೆ. ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.  ಅಂದು ಪುರಭವನದಲ್ಲಿ  ಸಂಜೆ 5 ಗಂಟೆಯಿಂದ 6 ಗಂಟೆಯ ವರೆಗೆ ನಗರದ ಆಯ್ದ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮವಿದೆ. ಸಾರ್ವಜನಿಕರು ಪ್ಲಾಸ್ಟಿಕ್ ಧ್ವಜಗಳನ್ನು ಕಡ್ಡಾಯವಾಗಿ ಬಳಸದಂತೆ ಜಿಲ್ಲಾಧಿಕಾರಿಗಳು ವಿನಂತಿಸಿದ್ದಾರೆ.


ಅಡ್ಡಾದಿಡ್ಡಿ ಪ್ಲಾಸ್ಟಿಕ್ ಕಸ ಹಾಕಿ ದಂಡ ತೆರದಿರಿ;ಡಾ. ಹರೀಶ್ ಕುಮಾರ್



ಮಂಗಳೂರು, ಅಕ್ಟೋಬರ್.30 : ಮಂಗಳೂರು ನಗರವನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸುವ ಮಹತ್ಕಾರ್ಯವನ್ನು ದ.ಕ.ಜಿಲ್ಲಾಡಳಿತ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಹಮ್ಮಿಕೊಂಡಿದ್ದು,ಈ ದಿಸೆಯಲ್ಲಿ ನವೆಂಬರ್ 1ರಿಂದ ಸಾರ್ವಜನಿಕರಲ್ಲಿ ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮೂಡಿಸಲಾಗುವುದು.ನಂತರ ಡಿಸೆಂಬರ್ ಮಾಹೆಯಿಂದ  ಬಳಸಿ ಎಸೆಯುವ ಪ್ಲಾಸ್ಟಿಕ್ನ್ನು ಸಂಪೂರ್ಣವಾಗಿ ನಿಷೇಧಿಸಲಿದ್ದು, ಬಳಸುವವರು,ಮಾರಾಟಗಾರರ ವಿರುದ್ಧ ಕಾನೂನು ಕ್ರಮ ಜರುಗಿಸಿ ದಂಡ ವಿಧಿಸಲಾಗುವುದೆಂದು ಮಂಗಳೂರು ಮಹಾನಗರಪಾಲಿಕೆ ಆಯುಕ್ತರಾದ ಡಾ. ಹರೀಶ್ ಕುಮಾರ್ ಅವರು ತಿಳಿಸಿದ್ದಾರೆ.                  ಅವರು ಇಂದು ತಮ್ಮ   ಕಚೇರಿ ಯಲ್ಲಿ ಈ ಸಂಬಂಧ ನಗರದ ವ್ಯಾಪಾ ರಸ್ಥರು,ಬಹು ಮಹಡಿ ಮಾಲೀ ಕರು,ನಿವಾ ಸಿಗಳ ಸಂಘದ ಪದಾ ಧಿಕಾರಿ ಗಳೊಂದಿಗೆ ಸಭೆ ನಡೆಸಿ ಅವರ ಸಲಹೆ ಗಳನ್ನು ಆಲಿ ಸಿದರು.
          ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ತ್ಯಾಜ್ಯವನ್ನು ವಿಂಗಡಿಸಿ ವಿಲೇವಾರಿ ಮಾಡದವರಿಗೂ ದಂಡ ತಪ್ಪಿದ್ದಲ್ಲ ಎಂದ ಆಯುಕ್ತರು ಸಾರ್ವಜನಿಕರು ಇದು ನಮ್ಮ ಮಂಗಳೂರು ಎಂಬ ಭಾವನೆ ಬೆಳೆಸಿಕೊಂಡು ನಗರವನ್ನು ಸ್ವಚ್ಛ ಸುಂದರವನ್ನಾಗಿಡಲು ಸಹಕರಿಸುವಂತೆ ಕೋರಿದರು. ಇನ್ನು 2-3 ತಿಂಗಳಲ್ಲಿ ಇಡೀ ನಗರದ ಮನೆಮನೆಗಳಿಂದ ಮಹಾನಗರಪಾಲಿಕೆಯವರೇ ಕಸವನ್ನು ಸಂಗ್ರಹಿಸಲಿದ್ದು ,ನಗರದಲ್ಲಿರುವ ನಗರಪಾಲಿಕೆಯ 600 ಕಸ ಸಂಗ್ರಹಗಾರಗಳನ್ನು ತೆರವುಗೊಳಿಸುವುದಾಗಿ ಅವರು ತಿಳಿಸಿದ್ದಾರೆ.
ಮಂಗಳೂರು ನಗರವನ್ನು ತ್ಯಾಜ್ಯ ಮುಕ್ತ ಪ್ಲಾಸ್ಟಿಕ್ ಮುಕ್ತವ ನ್ನಾಗಿ ಸುವ ದಿಕ್ಕಿ ನಲ್ಲಿ ಇನ್ನು ಮುಂದೆ ಯಾವುದೇ ರಾಜಕೀಯ ಸಮಾ ವೇಶಗಳು ನಡೆ ಯುವಾಗ ಬಂಟಿಂಗ್ಸ್, ಪ್ಲೆಕ್ಸ್,ಬ್ಯಾನರ್ ಗಳನ್ನು ಅಳ ವಡಿಸು ವುದನ್ನು ಕಡ್ಡಾಯ ವಾಗಿ ನಿಷೇಧಿ ಸುವುದಾಗಿ ತಿಳಿಸಿದ ಆಯುಕ್ತರು ಸಾರ್ವಜನಿಕರು ವಾಣಿಜ್ಯೋದ್ಯಮಿಗಳು ಪರಿಸರ ಸ್ನೇಹಿಬಟ್ಟೆ, ಬ್ಯಾಗುಗಳನ್ನು,ಕೈಚೀಲಗಳನ್ನು ಅಂಗಡಿ/ಮಾರುಕಟ್ಟೆಗಳಿಗೆ ಹೋಗುವಾಗ ಜೊತೆಯಲ್ಲಿ ಕೊಂಡೊಯ್ಯುವುದನ್ನು ರೂಢಿಸಿಕೊಳ್ಳುವ ಮೂಲಕ ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಲು ತಿಳಿಸಿದರು.
ಸಭೆಯಲ್ಲಿ ಜಂಟಿ ಆಯುಕ್ತ ಶ್ರೀಕಾಂತ ರಾವ್,ಸ್ಥಾಯಿ ಸಮಿತಿ ಅಧ್ಯಕ್ಷರು ಮುಂತಾದವರು ಹಾಜರಿದ್ದರು.

Monday, October 29, 2012

ಮಂಗಳೂರಿನಲ್ಲಿ ಮಹರ್ಷಿ ವಾಲ್ಮೀಕಿ ಜನ್ಮ ದಿನಾಚರಣೆ

ಮಂಗಳೂರು, ಅಕ್ಟೋಬರ್. 29 : ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉಡುಪಿ ಜಿಲ್ಲೆಗಳಲ್ಲಿ ವಾಸವಾಗಿರುವ ಗುಡ್ಡಗಾಡು ಜನರ ಅಭಿವೃದ್ಧಿಗೆ 500 ಕೋಟಿ ರೂ.ಗಳ ಪ್ಯಾಕೇಜ್ ನ್ನು ವಿಧಾನಮಂಡಲದ ಅರ್ಜಿ ಸಮಿತಿ ಸ್ವಯಂ  ಪ್ರೇರಿತ ಆಸಕ್ತಿಯಿಂದ ರೂಪಿಸಿದೆ ಎಂದು ವಿಧಾನಸಭಾ ಉಪಾಧ್ಯಕ್ಷರಾದ  ಎನ್ ಯೋಗೀಶ್ ಭಟ್ ಅವರು ಹೇಳಿದರು.
ಅವ ರಿಂದು ಜಿಲ್ಲಾ ಪಂಚಾ ಯತ್ ನ ನೇತ್ರಾ ವತಿ ಸಭಾಂ ಗಣ ದಲ್ಲಿ ಆಯೋ ಜಿಸ ಲಾದ ಮಹರ್ಷಿ ವಾಲ್ಮೀಕಿ ಜನ್ಮ ದಿನಾ ಚರಣೆ ಸಮಾ ರಂಭದ ಅಧ್ಯ ಕ್ಷತೆ ವಹಿಸಿ ಮಾತ ನಾಡು ತ್ತಿದ್ದರು. ಈ ಮೂರು ಜಿಲ್ಲೆ ಗಳಲ್ಲಿ ಗುಡ್ಡ ಗಾಡು ಪ್ರದೇಶದಲ್ಲಿ ವಾಸ ವಾಗಿರುವ ಅತ್ಯಂತ ಹಿಂದು ಳಿದಿರುವ ಪ್ರದೇಶದ ಸುಮಾರು 1500  ಕುಟುಂಬಗಳನ್ನು ಗುರುತಿಸಲಾಗಿದ್ದು, ಇವರನ್ನು ಮುಖ್ಯವಾಹಿನಿಗೆ ಕರೆತರಲು ಪೂರಕ ಪ್ಯಾಕೇಜ್ ಇದಾಗಿರುತ್ತದೆ ಎಂದರು. ಈ ಸಂಬಂಧ ಹಲವು ಸುತ್ತಿನ ಮಾತುಕತೆಗಳನ್ನು ಸಂಬಂಧಪಟ್ಟ ಇಲಾಖೆಗಳೊಂದಿಗೆ ನಡೆಸಲಾಗಿದೆ ಎಂದರು.
ಈ ಪ್ಯಾಕೇಜ್ನ್ನು ಹಿಂದುಳಿದ ಜನರ ಆರೋಗ್ಯ, ಶಿಕ್ಷಣ, ವೃತ್ತಿಜೀವನ ರೂಪಿಸಲು ಹಾಗೂ ಸಾಮಾಜಿಕ ಪಿಡುಗುಗಳಿಂದ ದೂರ ಉಳಿಯುವ ಉದ್ದೇಶವನ್ನಿರಿಸಿ ರೂಪಿಸಲಾಗಿದೆ ಎಂದರು.
ಆದಿ ಕವಿ ವಾಲ್ಮೀಕಿ ಸಾಂಸ್ಕೃತಿಕ ಭಾರತದ ಕಾರಣ ಪುರುಷ.ಅವರ ಜೀವನ ಚರಿತ್ರೆ, ಕಾವ್ಯ ಎಲ್ಲವೂ ನಮಗಿಂದು ಪ್ರಸಕ್ತ ಹಾಗೂ ಮಾದರಿ ಎಂದರು. ಸದಾ ಕಾಲಕ್ಕೆ ಪ್ರಸ್ತುತವಾಗಿರುವ ರಾಮಾಯಣವನ್ನು ಭಾರತಕ್ಕೆ ನೀಡಿದವರು ವಾಲ್ಮೀಕಿ. ರಾಮಾಯಣ, ಮಹಾಭಾರತದ ಜೀವನ ಸಂದೇಶಗಳು, ಚಿಂತನೆಗೆ ಹಚ್ಚುತ್ತವೆ ಎಂದರು. ಇಂತಹ ದಿನಾಚರಣೆಗಳು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದೆ ಎಂದೂ ಅವರು ಹೇಳಿದರು.
ಸಮಾ ರಂಭ ವನ್ನು ಜಿಲ್ಲಾ ಪಂಚಾ ಯತ್ ಉಪಾ ಧ್ಯಕ್ಷ ರಾದ  ರಿತೇಶ್ ಶೆಟ್ಟಿ ಉದ್ಘಾ ಟಿಸಿ, ಸಮಾನ ಸಮಾಜ ರೂಪು ಗೊಳ್ಳಲಿ ಎಂದು ಹಾರೈ ಸಿದರು. ಮಂಗ ಳೂರು ವಿಶ್ವ ವಿದ್ಯಾನಿ ಲಯದ ಉಪ ಗ್ರಂಥ ಪಾಲಕ ರಾದ ಡಾ ಪಿ ವೈ ಮಲ್ಲಯ್ಯ ಅವರು ಮುಖ್ಯ ಭಾಷಣಕಾರರಾಗಿದ್ದರು. ಜಿಲ್ಲಾ ಪಂಚಾಯತ್ ನ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ  ಜನಾರ್ಧನ ಗೌಡ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಎನ್ ಎಸ್ ಚನ್ನಪ್ಪಗೌಡ, ಮಹಾನಗರಪಾಲಿಕೆ ಆಯುಕ್ತರಾದ ಡಾ. ಹರೀಶ್ ಕುಮಾರ್, ಉಪಕಾರ್ಯದರ್ಶಿ ಡಿ ಎಸ್ ಶಿವರಾಮೇಗೌಡ ಉಪಸ್ಥಿತರಿದ್ದರು. ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ಸಬೀರ್ ಅಹಮ್ಮದ್ ಮುಲ್ಲಾ ಅವರು ಸ್ವಾಗತಿಸಿದರು. ದಕ್ಷಿಣ ಕನ್ನಡ ಜಿಲ್ಲಾ ವಾಲ್ಮೀಕಿ ಅಸೋಸಿಯೇಷನ್ ನ  ಆಲೇಶಪ್ಪ ವಂದಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ತಂಡ ಸಮಾರಂಭದಲ್ಲಿ ಪಾಲ್ಗೊಂಡಿತ್ತು.

Friday, October 26, 2012

ಪ್ಲಾಸ್ಟಿಕ್ ಬಳಕೆ ಅರಿವು ಮೂಡಿಸಲು ವಾಹನ ಜಾಗೃತಿ

ಮಂಗಳೂರು, ಅಕ್ಟೋಬರ್.26 :-ಮಂಗಳೂರು ತಾಲೂಕಿನಲ್ಲಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ  ನಾಗರಿಕರಲ್ಲಿ  ಜಾಗೃತಿ ಮೂಡಿಸುವ ವಾಹನಕ್ಕೆ ಮೇಯರ್ ಗುಲ್ಜಾರ್ ಭಾನು ಅವರು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದ ರ್ಭದಲ್ಲಿ ಮಾತ ನಾಡಿದ ಜಿಲ್ಲಾ ಧಿಕಾರಿ ಡಾ ಎನ್ ಎಸ್ ಚನ್ನಪ್ಪ ಗೌಡ ಅವರು, ಜಿಲ್ಲೆ ಯಲ್ಲಿ ಪ್ಲಾಸ್ಟಿಕ್ ಹಾವಳಿ ಯನ್ನು ನಿಷೇ ಧಿಸಲು ಜಿಲ್ಲಾ ಡಳಿತ ಹಂತ ಹಂತ ವಾಗಿ ಕ್ರಮ ಕೈ ಗೊಳ್ಳು ತ್ತಿದ್ದು, ಪ್ರಥಮ ಹಂತ ದಲ್ಲಿ ನವೆಂಬರ್ ಒಂದ ರಿಂದ ಮಂಗ ಳೂರು ತಾಲೂಕಿ ನಾದ್ಯಂತ ಕೈ ಚೀಲ, ಪ್ಲಾಸ್ಟಿಕ್ ಕಪ್ಸ್ ಮತ್ತು ಡೈ ನಿಂಗ್ ಟೇಬಲ್ ಗೆ ಹಾಸುವ ಶೀಟ್ ಗಳನ್ನು ನಿಷೇಧಿ ಸಲಾಗಿದೆ ಎಂದರು.
ಈ ಬಗ್ಗೆ ಸಾಕಷ್ಟು ಎಚ್ಚರಿಕೆಯನ್ನು, ಮಾಹಿತಿಯನ್ನು ನೀಡಲಾಗಿದ್ದು, ಕೆಲವು ಸುತ್ತಿನ ಸಭೆಗಳನ್ನು ನಡೆಸಲಾಗಿದೆ. ಮಾಹಿತಿ ವಿನಿಮಯವಾಗಿದೆ; ಬಳಕೆ ಮುಂದುವರಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದರು.
ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಒಂದು ಸವಾಲಾಗಿ ಪರಿಣಮಿಸಿದ್ದು, ಜನಜಾಗೃತಿಯೊಂದೇ ಪರಿಹಾರ; ಈ ಕುರಿತು ಮಾಹಿತಿ ನೀಡಲು ಸಾಕಷ್ಟು ಯತ್ನಗಳನ್ನು ಮಾಡಲಾಗಿದೆ ಎಂದರು. ಪರಿಸರ ಸ್ನೇಹಿ ಕೈಚೀಲ ತಯಾ ರಿಕೆಗೆ ಸ್ವಸಹಾಯ ಸಂಘಗಳ ನೆರ ವನ್ನೂ ಪಡೆ ಯಲಾ ಗಿದೆ. ಮಂಗ ಳೂರು ತಾಲೂ ಕಿನಲ್ಲಿ ಮುಖ್ಯ ವಾಗಿ ಪ್ಲಾಸ್ಟಿಕ್ ನಿಷೇ ಧಿಸಲು ಜನರ ಸಹ ಕಾರ ಅಗತ್ಯ ಎಂದು ಜಿಲ್ಲಾ ಧಿಕಾ ರಿಗಳು ಹೇಳಿ ದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಡಾ ಹರೀಶ್ ಕುಮಾರ್, ಅಪರ ಜಿಲ್ಲಾಧಿಕಾರಿ ದಯಾನಂದ ಕೆ ಎ, ಉಪಸ್ಥಿತರಿದ್ದರು.

ಅಂಬೇಡ್ಕರ್ ಭವನ: ಪೂರ್ವಭಾವಿ ಸಭೆ

ಮಂಗಳೂರು, ಅಕ್ಟೋಬರ್. 26:- ನಗರದಲ್ಲಿ ನಿರ್ಮಿಸಲುದ್ದೇಶಿಸಲಾಗಿರುವ ಅಂಬೇಡ್ಕರ್ ಭವನಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಯಿತು.
ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಅಧಿಕಾರಿ ಅರುಣ್ ಫುರ್ಟಾಡೊ ಅವರು ಸಭೆಗೆ ಮಾಹಿತಿ ನೀಡಿದರು.
ಈ ಬಗ್ಗೆ ಭಿನ್ನಾಭಿಪ್ರಾಯಗಳಿರುವುದನ್ನು ಸಭೆಯ ಗಮನಕ್ಕೆ ತಂದಾಗ, ಎಲ್ಲರೊಂದಿಗೆ ಇನ್ನೊಂದು ಸುತ್ತು ಸಾಧಕ ಬಾಧಕ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳು ಸೂಚಿಸಿದರು. ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಡಾ ಹರೀಶ್ ಕುಮಾರ್, ಅಪರ ಜಿಲ್ಲಾಧಿಕಾರಿ ದಯಾನಂದ ಕೆ ಎ., ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವರಾಮೇಗೌಡ, ಪಿ ಡಬ್ಲ್ಯುಡಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಗೋಪಾಲ್ ನಾಯಕ್, ಜಿಲ್ಲಾ ಪಂಚಾಯತ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಸತ್ಯನಾರಾಯಣ್,ನಿರ್ಮಿತಿ ಕೇಂದ್ರದ ರಾಜೇಂದ್ರ ಕಲ್ಬಾವಿ ಉಪಸ್ಥಿತರಿದ್ದರು.


Thursday, October 25, 2012

ನಗರದಲ್ಲಿ ಪ್ಲಾಸ್ಟಿಕ್ ನಿಷೇಧ ಜಾಥಾ

ಮಂಗಳೂರು, ಅಕ್ಟೋಬರ್. 25 :-ಹಾನಿಕಾರಕ ಹಾಗೂ ಮರುಬಳಕೆಗೆ ಯೋಗ್ಯವಲ್ಲದ ಪ್ಲಾಸ್ಟಿಕ್ ನಿಂದ ತಯಾರಿಸಲಾದ ತೆಳುಬ್ಯಾಗ್,ಚಾ-ಕಾಫಿ ಹಾಗೂ ತಂಪು ಪಾನೀಯ ಕಪ್, ಪ್ಲಾಸ್ಟಿಕ್ ಬ್ಯಾನರ್ ಗಳನ್ನು ನವೆಂಬರ್  ತಿಂಗಳಿಂದ  ನಿಷೇಧಿಸಲಾಗುವ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಲು ನವೆಂಬರ್ 1 ರಂದು ಬೆಳಿಗ್ಗೆ 7.30 ಗಂಟೆಗೆ ಕಾಲೇಜು ವಿದ್ಯಾರ್ಥಿಗಳು,ಸ್ಕೌಟ್ಸ್ ಮತ್ತು ಗೈಡ್ಸ್ ,ಎನ್ ಸಿ ಸಿ,ಎನ್ಎಸ್ ಎಸ್ ಹಾಗೂ ವಿವಿಧ ಸಂಘಟನೆಗಳಿಂದ ಮಂಗಳಾ ಕ್ರೀಡಾಂಗಣದಿಂದ  ನೆಹರೂ ಮೈದಾನದವರೆಗೆ ಕಾಲ್ನಾಡಿಗೆ ಜಾಥಾವನ್ನು ಏರ್ಪಡಿಸಲಾಗಿದೆಯೆಂದು ದ.ಕ.ಜಿಲ್ಲಾ ಅಪರ ಜಿಲ್ಲಾಧಿಕಾರಿ  ದಯಾನಂದ ಕೆ.ಎ.ತಿಳಿಸಿದರು. ಅವರು ಇಂದು ಜಿಲ್ಲಾಡಳಿತದಿಂದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ಲಾಸ್ಟಿಕ್ ಮುಕ್ತ ಮಂಗಳೂರು ಕಾರ್ಯಕ್ರಮದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
          ದ.ಕ ಜಿಲ್ಲೆಯಲ್ಲಿ ಹಂತ ಹಂತ ವಾಗಿ ಪ್ಲಾಸ್ಟಿಕ್ ಬಳಕೆ ಯನ್ನು ನಿಷೇಧಿ ಸಲಾ ಗುವುದು. ಈ ಕುರಿತು ಶಾಲಾ ಕಾಲೇಜು ಗಳಲ್ಲಿ ಕಾರ್ಯಕ್ರಮ ಏರ್ಪಡಿಸಲಾಗುವುದು.ಜಾಥಾದಲ್ಲಿ ಭಾಗವಹಿಸುವ ಎಲ್ಲರಿಗೂ ನಗರದ ಸ್ಕೌಟ್ಸ್ ಭವನದಲ್ಲಿ ಉಪಹಾರ ವ್ಯವಸ್ಥೆ ಮಾಡಲಾಗಿದೆ ಹಾಗೂ ಭಾಗವಹಿಸುವ ತಂಡಗಳಿಗೆ ಸಮವಸ್ತ್ರ,ಶಿಸ್ತು ಹಾಗೂ ಘೋಷಣೆಗಳಿಗೆ ಪ್ರತ್ಯೇಕವಾದ 3 ಬಹುಮಾನಗಳನ್ನು ಇರಿಸಲಾಗಿದೆ. ಅಂದು ಕನ್ನಡ ರಾಜ್ಯೋತ್ಸವದ ಮೆರವಣಿಗೆ  ಜ್ಯೋತಿ ವೃತ್ತದಿಂದ ಪ್ರಾರಂಭವಾಗಿ ನೆಹರೂ ಮೈದಾನದಲ್ಲಿ ಅಂತ್ಯಗೊಳ್ಳಲಿರುವುದರಿಂದ  ಎರಡೂ ಕಾರ್ಯಕ್ರಮಗಳನ್ನು ನೆಹರೂ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ  ಸಚಿವರ ಅಧ್ಯಕ್ಷತೆಯಲ್ಲಿ ನಡೆಯಲಿದೆಯೆಂದು ಅವರು ತಿಳಿಸಿದರು.
 ಈ ಜಾಥಾ ಕಾರ್ಯಕ್ರಮದಲ್ಲಿ ಪ್ರತೀ ಕಾಲೇಜಿನಿಂದ ಕನಿಷ್ಠ 100 ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ  ಸುರೇಶ್ ಹೇಳಿದರು.
    ಸಭೆಯಲ್ಲಿ ವಿವಿಧ ಇಲಾಖಾಧಿಕಾರಿಗಳು, ಎಂ.ವಿ.ಶೆಟ್ಟಿ,ಯೇನಪೋಯಕಾಲೇಜು, ಶ್ರೀ ದೇವಿ ಕಾಲೇಜು ಹಾಗೂ ಕರಾವಳಿ ಕಾಲೇಜು ಪ್ರತಿನಿಧಿಗಳು,ಮಂಗಳೂರು ಮಹಾನಗರಪಾಲಿಕೆ ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.

Tuesday, October 23, 2012

ಅಭಿವೃದ್ಧಿಯಲ್ಲಿ ತಾರತಮ್ಯ ಇಲ್ಲ: ಸಿ ಟಿ ರವಿ


 2660 ಫಲಾನುಭವಿಗಳಿಗೆ 478.20 ಲಕ್ಷ ರೂ. ಸಾಲಸೌಲಭ್ಯ ವಿತರಣೆ
ಮಂಗಳೂರು, ಅಕ್ಟೋಬರ್. 23:- ರಾಜ್ಯದ ಎಲ್ಲ ಸಮಸ್ತ ಹಿತವನ್ನು ಗಮನದಲ್ಲಿರಿಸಿ ಸರ್ಕಾರ ಯೋಜನೆ ರೂಪಿಸುತ್ತಿದ್ದು, ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಬಿಡುಗಡೆಯಲ್ಲಿ ಯಾವುದೇ ತಾರತಮ್ಯ ಇಲ್ಲ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ  ಸಿ ಟಿ ರವಿ ಅವರು ಹೇಳಿದ್ದಾರೆ.
ಇಂದು ಕರ್ನಾ ಟಕ ಅಲ್ಪ ಸಂಖ್ಯಾ ತರ ಅಭಿ ವೃದ್ಧಿ ನಿಗಮ 2012-13ನೇ ಸಾಲಿನ ವಿವಿಧ ಸಾಲ ಯೋಜ ನೆಗ ಳಡಿ ಮಂಗ ಳೂರು, ಬಂಟ್ವಾಳ ಮತ್ತು ಬೆಳ್ ತಂಗಡಿ ವಿಧಾನ ಸಭಾ ಕ್ಷೇತ್ರಗಳ ಫಲಾ ನುಭ ವಿಗಳಿಗೆ ಸಾಲ ಸೌಲಭ್ಯ ಗಳ ಚೆಕ್ ವಿತ ರಣಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಬಂಟ್ವಾಳದ ಬ್ರಹ್ಮಶ್ರೀ ನಾರಾ ಯಣ ಗುರು ಸಭಾ ಭವನ ದಲ್ಲಿ ಈ ಸಂಬಂಧ ಆಯೋ ಜಿಸ ಲಾದ ಕಾರ್ಯ ಕ್ರಮ ವನ್ನು ಉದ್ಘಾ ಟಿಸಿ ಅವರು ಮಾತ ನಾಡು ತ್ತಿದ್ದರು. ಪೂರ್ವಾಹ್ನ ಬಂಟ್ವಾ ಳದಲ್ಲಿ ಆಯೋ ಜಿಸ ಲಾದ ಸಭಾ ಕಾರ್ಯ ಕ್ರಮ ದಲ್ಲಿ 1515 ಫಲಾನು ಭವಿಗಳಿಗೆ 247 ಲಕ್ಷ ರೂ.ಗಳ ಸಾಲಸೌಲಭ್ಯ ವಿತರಿಸಲಾಯಿತು.
ಸ್ವಾವಲಂಬಿಗಳಾಗಿ ಬದುಕಲು ನಿಗಮದ ಮೂಲಕ ಸರ್ಕಾರ ಅಲ್ಪಸಂಖ್ಯಾತ ಅರ್ಹ ಫಲಾನುಭವಿಗಳನ್ನು ಆರಿಸಿ ಸೌಲಭ್ಯ ವಿತರಿಸುತ್ತಿದ್ದು, ಸಾಲವನ್ನು ದುಡಿಮೆಯ ಬಂಡವಾಳವನ್ನಾಗಿಸಿ ಎಂದು ಸಲಹೆ ಮಾಡಿದರು. ದುಡಿಮೆ ಮಾತ್ರ ನಮಗೆ ಉತ್ತಮ ಬದುಕನ್ನು ಕಟ್ಟಿಕೊಡಲು ಸಾಧ್ಯ ಎಂದ ಅವರು, ಕಳೆದ ನಾಲ್ಕು ವರ್ಷಗಳಲ್ಲಿ 4ರಿಂದ 6ಪಟ್ಟು ಹೆಚ್ಚು ಅನುದಾನ ಅಲ್ಪಸಂಖ್ಯಾತರ ಅಭಿವೃದ್ಧಿಗೆ ನೀಡಿದೆ. ಮಾಜಿ ಮುಖ್ಯ ಮಂತ್ರಿ  ಡಿ ವಿ ಸದಾ ನಂದ ಗೌಡ ಅವರ ಅವಧಿ ಯಲ್ಲಿ ಬೆಂಗ ಳೂರಿನ ಹೆಗಡೆ ನಗರ ದಲ್ಲಿ ಹಜ್ ಘರ್ ನಿರ್ಮಾಣ ಕ್ಕಾಗಿ 50 ಕೋಟಿ ರೂ. ಬಿಡು ಗಡೆ ಮಾಡಿದೆ ಎಂದರು. ಎಲ್ಲರೂ ವಿದ್ಯಾ ವಂತರಾಗಿ; ಮಾಜಿ ರಾಷ್ಟ್ರ ಪತಿ ಡಾ.ಎ ಪಿ ಜೆ ಅಬ್ದುಲ್ ಕಲಾಂ ಅವರನ್ನು ಮಾದರಿ ಯನ್ನಾ ಗಿಸಿ ಜೀವನ ದಲ್ಲಿ ಮುಂದೆ ಬನ್ನಿ ಎಂದು ಶುಭ ಹಾರೈ ಸಿದರು.
ಸಮಾ ರಂಭದ ಅಧ್ಯಕ್ಷತೆ ಯನ್ನು ಬಂಟ್ವಾಳ ಶಾಸಕ ರಾದ  ಬಿ ರಮಾ ನಾಥ ರೈ ಅವರು ವಹಿಸಿ, ಅಲ್ಪ ಸಂಖ್ಯಾ ತರ ಅಭಿ ವೃದ್ಧಿಗೆ ಅನುದಾನ ದೊರೆತಿ ರುವುದು ಉತ್ತಮ ಬೆಳವ ಣಿಗೆ ಎಂದರು.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಎನ್ ಬಿ ಅಬೂಬಕ್ಕರ್ ಪ್ರಾಸ್ತಾವಿಕ ಭಾಷಣದಲ್ಲಿ ನಿಗಮ ಅಭಿವೃದ್ಧಿ ಹೊಂದಿದ ರೀತಿಯನ್ನು ವಿವರಿಸಿದರು. ವಿಧಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ರಿತೇಶ್ ಶೆಟ್ಟಿ, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಲಲಿತಾ ಶಿವಪ್ಪನಾಯ್ಕ್, ಪುರಸಭಾ ಅಧ್ಯಕ್ಷ ದಿನೇಶ್ ಭಂಡಾರಿ, ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷ  ಉಸ್ಮಾನ್ ಹಾಜಿ, ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಜೋನ್ ಡಿ ಸೋಜಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಸೋಮಪ್ಪ ಸ್ವಾಗತಿಸಿದರು. ಈ ಕಾರ್ಯಕ್ರಮದ ಬಳಿಕ ಮತದಾರರ ಪಟ್ಟಿಗೆ ಹೆಸರು ಸೇರಿಸುವ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸ ಲಾಯಿತು.
         ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು, ದಕ್ಷಿಣ ಕನ್ನಡ ಜಿಲ್ಲೆಯ ನಾಗರೀಕರು ಪ್ಲಾಸ್ಟಿಕ್ ಬಳಕೆ ನಿಯಂತ್ರಿಸುವಲ್ಲಿ ಜಿಲ್ಲಾಡಳಿತದ ಯತ್ನಗಳಿಗೆ ಪೂರಕ ಸ್ಪಂದನೆ ನೀಡಬೇಕೆಂದರು. ನವೆಂಬರ್ ಒಂದರಿಂದ ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧ ಜಾರಿಯಾಗಲಿದ್ದು, ತಾನು ಮೂರು ತಿಂಗಳ ಹಿಂದೆಯೇ ಈ ಬಗ್ಗೆ ಮೌಖಿಕ ವಾಗಿ ಮಾಹಿತಿಯನ್ನು ನೀಡಿದ್ದೆ. ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಲೋಟಗಳು ಮತ್ತು ಊಟದ ಟೇಬಲ್ ಗೆ ಹಾಸುವ ಶೀಟ್ ಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗುವುದು ಎಂದು ಹೇಳಿದರು.
ಪರಿಸರ ಸ್ನೇಹಿ ಜಿಲ್ಲಾಡಳಿತದ ಕ್ರಮಕ್ಕೆ ಜನರು ಸಹಕಾರ ನೀಡಬೇಕೆಂದು ಅವರು ಜಿಲ್ಲೆಯ ಜನತೆಯಲ್ಲಿ ಮನವಿ ಮಾ
ಡಿದರು.

ಅಪ ರಾಹ್ನ ಬೈಕಂ ಪಾಡಿ ಇಂಡ ಸ್ಟ್ರಿಯಲ್ ಏರಿ ಯಾದ ಅಡ್ಕ ಕಮ್ಯು ನಿಟಿ ಹಾಲ್ ನಲ್ಲಿ ಆಯೋ ಜಿಸ ಲಾದ ಮಂಗ ಳೂರು ಉತ್ತರ, ದಕ್ಷಿಣ ಮತ್ತು ಮೂಡ ಬಿದ್ರೆ ವಿಧಾನ ಸಭಾ ಕ್ಷೇತ್ರ ಗಳ ಫಲಾನು ಭವಿ ಗಳಿಗೆ ಸಾಲ ಸೌಲಭ್ಯ ಗಳ ಚೆಕ್ ವಿತ ರಣಾ ಸಮಾ ರಂಭವನ್ನು ಉದ್ದೇಶಿಸಿ ಮಾತನಾಡಿ, ರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ಎಲ್ಲ ಜನರು ಆರ್ಥಿಕವಾಗಿ ಸಬಲರಾಗಬೇಕು. ಈ ನಿಟ್ಟಿನಲ್ಲಿ ನಿಗಮದ ಮೂಲಕ ಮಾಡುತ್ತಿರುವ ಕಾರ್ಯಕ್ರಮ ಶ್ಲಾಘನೀಯ ಎಂದರು.
ಸರ್ಕಾ ರದ ಜನ ಪರ ಯೋಜನೆ ಗಳಿಂದ ಬಡ ವರ್ಗದ ದುರ್ಬಲ ಜನರು ಸ್ವಾವ ಲಂಬಿ ಗಳಾ ಗುತ್ತಾರೆ. ಸಮಾ ಜದ ಮುಖ್ಯ ವಾಹಿನಿ ಯಲ್ಲೊಂದಾ ಗುತ್ತಾರೆ. ಈ ವರೆಗೆ ನಿಗಮ ಒಟ್ಟು 12 ಲಕ್ಷ ಕುಟುಂಬ ಗಳನ್ನು ಆರ್ಥಿಕ ವಾಗಿ ಚೇತರಿ ಸಿಕೊ ಳ್ಳಲು ಸಾಲ ಸೌಲಭ್ಯ ನೀಡಿದೆ ಎಂದರು.
ಇಂದಿನ ಅಪ ರಾಹ್ನದ ಸಮಾ ರಂಭ ದಲ್ಲಿ 661 ಫಲಾನು ಭವಿ ಗಳಿಗೆ 139 ಲಕ್ಷ ರೂ. ಸಾಲ ಸೌಲಭ್ಯ ವಿತರಿ ಸಲಾ ಯಿತು. ಅಧ್ಯಕ್ಷ ತೆಯನ್ನು ಮಂಗ ಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಶಾಸಕ ರಾದ ಕೃಷ್ಣ ಜೆ ಪಾಲೆ ಮಾರ್ ಅವರು ಮಾತನಾಡಿ, ದುರ್ಬಲ ವರ್ಗದವರನ್ನು ಸಬಲೀಕರಣಗೊಳಿಸುವುದಕ್ಕೆ ಸರ್ಕಾರದಿಂದ ಬಂದಿರುವ ನೆರವು ಗಮನಾರ್ಹ ಎಂದರಲ್ಲದೆ, ಈ ಸಾಲವನ್ನು ಹಿಂದಿರುಗಿಸುವಲ್ಲಿ ತನ್ನ ಕ್ಷೇತ್ರದ ಜನರು ತೋರಿರುವ ಮರುಪಾವತಿ ಮನೋಭಾವದಿಂದ ಭವಿಷ್ಯದಲ್ಲಿ ಇನ್ನೂ ಹೆಚ್ಚು ನೆರವು ಹರಿದುಬರಲಿದೆ ಎಂದರು.
ಉಪಸಭಾಪತಿ  ಎನ್ ಯೋಗೀಶ್ ಭಟ್ ಅವರು ಚೆಕ್ ವಿತರಿಸಿ, ಶುಭ ಹಾರೈಸಿದರು. ಮೂಡಬಿದ್ರೆ ವಿಧಾನಸಭಾ ಶಾಸಕರಾದ  ಕೆ ಅಭಯಚಂದ್ರ ಜೈನ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನಪರ ಯೋಜನೆಗಳು ಅರ್ಹರಿಗೆ ತಲುಪುತ್ತಿರುವುದಕ್ಕೆ ಇಂದಿನ ಕಾರ್ಯಕ್ರಮ ಸಾಕ್ಷಿ ಎಂದರು.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಎನ್ ಬಿ ಅಬೂಬಕ್ಕರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಧಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ತಾಲೂಕು ಪಂಚಾಯತ್ ಅಧ್ಯಕ್ಷ ಕೆ ಹರೀಶ್ ಕುಮಾರ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ರಹೀಂ ಉಚ್ಚಿಲ್, ಮನಾಪ ಸದಸ್ಯ ಸುಧೀರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವರಾಮೇಗೌಡ, ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ  ಜೋನ್ ಡಿ ಸೋಜಾ ಮುಂತಾದವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Monday, October 22, 2012

ಏಳು ಹೊಸ ಪೊಲೀಸ್ ಠಾಣೆಗಳು: ಉಪ ಮುಖ್ಯಮಂತ್ರಿ ಅಶೋಕ್

ಮಂಗಳೂರು,ಅಕ್ಟೋಬರ್.22:  ರಾಜ್ಯದಲ್ಲಿ  ಸಾರ್ವಜನಿಕರ ದೂರು ದುಮ್ಮಾನಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಜಾಗೃತವಾಗಿದ್ದು, ಹೊಸದಾಗಿ 7 ಪೊಲೀಸ್ ಠಾಣೆಗಳನ್ನು ಮಂಜೂರು ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿಗಳೂ ಹಾಗೂ ಗೃಹ ಮತ್ತು ಸಾರಿಗೆ ಸಚಿವ ಆರ್.ಅಶೋಕ್  ತಿಳಿಸಿದರು.
                  ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂ ಗಡಿ ತಾಲೂ ಕಿನ ಪುಂಜಾಲ ಕಟ್ಟೆ ಯಲ್ಲಿ ಅವರು  48 ಲ.ರೂ ವೆಚ್ಚ ದಲ್ಲಿ ನಿರ್ಮಾಣ ಗೊಂಡ  ಪೊಲೀಸ್ ಠಾಣೆಯ ನೂತನ ಕಟ್ಟಡವನ್ನು  ಉದ್ಘಾ ಟಿಸಿ ಅವರು ಮಾತ ನಾಡಿದರು. ಈ ಭಾಗದ ಜನರ ಅನು ಕೂಲಕ್ಕಾಗಿ, ಕಾನೂನಿನ ರಕ್ಷಣೆ ಒದ ಗಿಸುವ ಉದ್ದೇಶ ದಿಂದ ಠಾಣೆಯ ಹೊಸ ಕಟ್ಟಡವನ್ನು ಸಾರ್ವಜನಿಕ ಸೇವೆಗೆ ಅರ್ಪಿಸುವುದಾಗಿ ಅವರು ತಿಳಿಸಿದರು. ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು ರಾಜ್ಯದ ಕರಾವಳಿ ಪ್ರದೇಶದ 300 ಕಿ.ಮೀ.ವ್ಯಾಪ್ತಿ ಯ ಭದ್ರತೆಗೆ ಹೆಚ್ಚು ಒತ್ತು ನೀಡಲಾಗಿದ್ದು ನಕ್ಸಲ್ ಚಟುವಟಿಕೆ, ನುಸುಳುಕೋರರು ಹಾಗೂ ಭಯೋತ್ಪಾದಕರ ನುಸುಳುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಇಲಾಖೆಯನ್ನು ಹಾಗೂ ಗುಪ್ತಚರ ವಿಭಾಗವನ್ನು ಮತ್ತಷ್ಟು ಬಲಪಡಿಸುವ ಕಾರ್ಯ ನಡೆಯುತ್ತಿದೆ ಎಂದರು.ಸರ್ಕಾರ ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ನಿಗಾ ವಹಿಸುತ್ತಿದೆ, ರಾಜ್ಯದಲ್ಲಿ ಇದೇ ಮೊದಲಬಾರಿಗೆ ಆರಂಭಿಸಿರುವ ಇಂಡಸ್ಟ್ರಿಯಲ್  ಸೆಕ್ಯೂರಿಟಿ ಫೋರ್ಸ್ ಗೆ  2000ಕ್ಕೂ ಅಧಿಕ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆಯೂ ಅಂತಿಮ ಹಂತದಲ್ಲಿದೆ. ಕೈಗಾರಿಕೆ ಗಳಿಗೆ ರಕ್ಷಣೆ ಕೊಡುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಮಹತ್ವದ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದು, ಈ ಸಿಬ್ಬಂದಿಗಳ ಸೇವೆಯನ್ನು   ಬೃಹತ್ ಅಣೆಕಟ್ಟುಗಳು, ಅಣುಸ್ಥಾವರ ಹಾಗೂ ಐಟಿ ಕಂಪೆನಿಗಳ ರಕ್ಷಣೆಗೆ ಬಳಸಿಕೊಳ್ಳುವುದಾಗಿ ಅವರು ತಿಳಿಸಿದರು. ಈ ಹಿಂದೆ ಇಂತಹಾ ರಕ್ಷಣಾ ಸೇವೆಗಾಗಿ ಕೇಂದ್ರ ಸರ್ಕಾರವನ್ನು ಆಶ್ರಯಿಸಬೇಕಾಗಿತ್ತು ಅಥವಾ ಪೊಲೀಸರ ಸೇವೆ ಪಡೆಯಬೇಕಾಗಿತ್ತು. ಇದರಿಂದ ಪೊಲೀಸ್ ಸಿಬ್ಬಂದಿಗಳ  ಕೊರೆತೆಯೂ ತಲೆದೋರುತ್ತಿತ್ತು. ಆದರೆ ಇನ್ನುಮುಂದೆ ಆಸಮಸ್ಯೆ ಇಲ್ಲ ಎಂದವರು ತಿಳಿಸಿದರು.
 ಬೆಂಗ ಳೂರಿನಲ್ಲಿ ತಲೆ ದೋರಿ ರುವ ತ್ಯಾಜ್ಯವಿಲೇ ವಾರಿ ಸಮ ಸ್ಯೆಯ ಬಗ್ಗೆ  ಸುದ್ದಿ ಗಾರರ ಪ್ರಶ್ನೆಗೆ ಉತ್ತ ರಿಸಿದ ಅವರು, ತ್ಯಾಜ್ಯ ವಿಲೇ ವಾರಿ ಸಮಸ್ಯೆ ಯನ್ನು ಶಾಶ್ವತ ವಾಗಿ ಬಗೆ ಹರಿಸುವ ನಿಟ್ಟಿನಲ್ಲಿ ಕ್ರಮ ಗಳನ್ನು ಕೈ ಗೊಳ್ಳ ಲಾಗಿದೆ.ತ್ಯಾಜ್ಯ ಗಳನ್ನು ವೈಜ್ಞಾ ನಿಕವಾಗಿ ಸಂಸ್ಕ ರಿಸುವ ನಿಟ್ಟಿನಲ್ಲಿ ಕೆಲವೊಂದು  ಖಾಸಗಿ ಕಂಪೆನಿಗಳಿಗೆ ಜವಬ್ದಾರಿ ವಹಿಸಲಾಗಿದ್ದು, ಈ ಬಗೆಗಿನ ಪ್ರಕ್ರಿಯೆ ಅನುಷ್ಠಾನ ದ ಹಂತದಲ್ಲಿದೆ ಎಂದವರು ಹೇಳಿದರು.
ಶಾಸಕ ರಾದ ಬಿ.ರಮಾನಾಥ ರೈ , ಕೆ.ವಸಂತ ಬಂಗೇರ , ಮಲ್ಲಿಕಾ ಪ್ರಸಾದ್  ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಲಾಲ್ ರುಕುಮ ಪಚಾವ್, ನಿರ್ದೇಶಕ ಎಮ್.ಎನ್.ರೆಡ್ಡಿ,  ಪಶ್ಚಿಮ ವಲಯ ಐಜಿಪಿ ಪ್ರತಾಪ ರೆಡ್ಡಿ ,ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಎಂ.ತುಂಗಪ್ಪ ಬಂಗೇರ,ರಾಜ್ಯ ಬಾಲಭವನ ಸೊಸೈಟಿ ಅಧ್ಯಕ್ಷೆ ಸುಲೋಚನಾ ಜಿ.ಕೆ.`ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ , ಪೋಲಿಸ್ ಆಯುಕ್ತ ಮನೀಷ್ ಕರ್ಬೀಕರ್, ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕ ಅಭಿಷೇಕ್ ಗೋಯಲ್ ,ಸಹಾಯಕ ಅಧೀಕ್ಷಕ ಅನುಚೇತ್ ಎಂ.ಎನ್ ,ಬೆಳ್ತಂಗಡಿ ವೃತ್ತ ನಿರೀಕ್ಷಕ ಭಾಸ್ಕರ ರೈ,ಪುಂಜಾಲಕಟ್ಟೆ ಠಾಣಾಧಿಕಾರಿ ಜಯಾನಂದ  ಸೇರಿದಂತೆ ಅನೇಕ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
  

ರಾಜ್ಯ ಉಪಮುಖ್ಯಮಂತ್ರಿ ಆರ್.ಅಶೋಕ್  ಬಂಟ್ವಾಳ ನಗರ ಠಾಣಾ ನೂತನ ಕಟ್ಟಡವನ್ನು ಉಧ್ಘಾಟಿಸಿದರು

ಶಾಸಕ ಬಿ.ರ,ಮಾನಾಥ ರೈ, ಶಾಸಕಿ ಮಲ್ಲಿಕಾ ಪ್ರಸಾದ್,  ವಿಧಾನ ಪರಿಷತ್ತು ಸದಸ್ಯ ಮೋನಪ್ಪ ಭಂಡಾರಿ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಬಂಟ್ವಾಳ ತಾಲೂಕು ಪಂಚಾಯತು ಅಧ್ಯಕ್ಷೆ ಲಲಿತಾ ಎಸ್.ನಾಯ್ಕ, ಉಪಾಧ್ಯಕ್ಷ ಆನಂದ ಎ., ಪುರಸಭಾದ್ಯಕ್ಷ ದಿನೇಶ ಭಂಡಾರಿ, ಪೋಲೀಸ್ ಮಹಾನಿರ್ದೇಶಕ ಲಾಲ್ ರುಖುಮ ಪಚಾವ್, ಕೆ.ಎಸ್.ಪಿ.ಹೆಚ್.ಸಿ. ವ್ಯವಸ್ಥಾಪಕ ಎಮ್.ಎನ್.ರೆಡ್ಡಿ, ಪಶ್ಮಿಮ ವಲಯ ಪೋಲೀಸ್ ಮಹಾನಿರೀಕ್ಷಕ ಪ್ರತಾಪ್ ರೆಡ್ಡಿ, ಮಂಗಳೂರು ಪೋಲೀಸ್ ಕಮೀಷನರ್ ಮನೀಷ್ ಕರ್ಬೀಕರ್, ಜಿಲ್ಲಾ ಪೋಲೀಸ್ ಅಧೀಕ್ಷಕ ಅಭಿಷೇಕ್ ಗೋಯಲ್, ಸಹಾಯಕ್ ಪೋಲೀಸ್ ಅಧೀಕ್ಷಕ ಅನುಚೇತ್ ಎಂ.ಎನ್., ಪೋಲೀಸ್ ವೃತ್ತ ನಿರೀಕ್ಷಕ ಅನಿಲ್ ಎಸ್.ಕುಲಕರ್ಣಿ, ನಗರ ಠಾಣಾಧಿಕಾರಿ ಶೇಖರ್, ಗ್ರಾಮಾಂತರ ಠಾಣಾಧಿಕಾರಿ ಮಹೇಶ್ ಪ್ರಸಾದ್ ಮೊದಲಾದವರಿದ್ದರು.
ಪೊಲೀಸ್ ಠಾಣೆಗಳು ಜನಸ್ನೇಹಿ ಠಾಣೆಗಳಾಗಿ ರೂಪುಗೊಳ್ಳಬೇಕು. ಪೋಲೀಸರು ಜನರೊಂದಿಗೆ ಸೌಜನ್ಯದಿಂದ ವರ್ತಿಸುತ್ತಾ, ಜನರ ಮನಸ್ಸನ್ನು ಗೆಲ್ಲುವ- ಪರಿವರ್ತಿಸುವ ಕೆಲಸವನ್ನು ಮಾಡಬೇಕೆಂದು ಈ ಸಂದರ್ಭದಲ್ಲಿ  ಉಪಮುಖ್ಯಮಂತ್ರಿಗಳು ಕರೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ  ಉಪಮುಖ್ಯಮಂತ್ರಿಗಳು ಟ್ರಾಫಿಕ್ ಸಮಸ್ಯೆಯನ್ನುನಿವಾರಿಸುವ ನಿಟ್ಟಿನಲ್ಲಿ ರಾಜ್ಯದ ವಿವಿಧೆಡೆಗಳಲ್ಲಿ ಟ್ರಾಫಿಕ್ ಪೋಲೀಸ್ ಠಾಣೆಗಳ ಸ್ಥಾಪನೆಗೆ ಬೇಡಿಕೆ ಇದ್ದು ಆದ್ಯತೆಯ ನೆಲೆಯಲ್ಲಿ ಮಂಜೂರುಗೊಳಿಸಲಾಗುವುದು.
ಭಯೋತ್ಪಾದಕರು ಹಾಗೂ ನುಸುಳುಕೋರರನ್ನು ತಡೆಗಟ್ಟುವ ನಿಟ್ಟಿನಲ್ಲಿ ಕರಾವಳಿ ರಕ್ಷಣಾ ಪಡೆಯನ್ನು ಬಲಪಡಿಸಲು ಯೋಜನೆ ರೂಪಿಸಲಾಗಿದೆ. ಮುಂಬೈ ದಾಳಿ ಮರುಕಳಿಸದಂತೆ ಎಲ್ಲಾ ರೀತಿಯ ರಕ್ಷಣಾ ತಂತ್ರಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು ಭಯೋತ್ಪಾದನೆ ನಿಗ್ರಹಕ್ಕಾಗಿ ಕೇಂದ್ರ ಸರಕಾರದ ಅನುದಾನವನ್ನು  ಬಳಸಿಕೊಂಡು ಯೋಜನೆ ರೂಪಿಸಲಾಗುತ್ತಿದೆ. ಕಾನೂನು ಸುವ್ಯವಸ್ತೆ ಕಾಪಾಡಲು ರಾಜ್ಯ ಪೋಲೀಸ್ ಇಲಾಖೆ ಹೆಚ್ಚಿನ ಆಧ್ಯತೆ ನೀಡಿದದ್ದು ಕಾವಲು ಪಡೆಗೆ 3000 ಮಂದಿಯ ಹೊಸ ನೇಮಕಾತಿ ಪ್ರಕ್ರಿಯೆಯು ಅಂತಮ ಹಂತದಲ್ಲಿದೆ.
ರಾಜ್ಯದ ಪೋಲೀಸ್ ಠಾಣೆಗಳ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದ್ದು ಸಶಸ್ರ್ತ ಸಹಿತ ಎಲ್ಲಾ ರೀಯ ಮೂಲಭೂತ ಸೌಲಭ್ಯಗಳ ಒದಗಣೆಯೊಂದಿಗೆ ಆಧುನೀಕರಣಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಮತದಾರರ ಪಟ್ಟಿಗೆ ಹೆಸರು ಸೇರಿಸುವ ಆಂದೋಲನ

ಮಂಗಳೂರು ಅಕ್ಟೋಬರ್ 22:-ಎಲ್ಲಾ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಜನವರಿ 2013 ರಂದು 18  ವರ್ಷ ತುಂಬುವವರು ಕಡ್ಡಾಯವಾಗಿ ಮತದಾರರ ಪಟ್ಟಿಗೆ ನಮೂನೆ 6 ರಲ್ಲಿ ಭರ್ತಿ ಮಾಡಿ ವಯಸ್ಸು,ವಿಳಾಸ,ದಾಖಲಾತಿಗಳೊಂದಿಗೆ ತಮ್ಮ ಅರ್ಜಿಯನ್ನು ಸಲ್ಲಿಸಬೇಕೆಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ ಅವರು ತಿಳಿಸಿದರು.
         ಅವರು ಇಂದು ಅಕ್ಟೋಬರ್ 22 ರಂದು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಮತದಾರರ ಪಟ್ಟಿಗೆ ಹೆಸರು ಸೇರಿಸುವ ಆಂದೋಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಶಾಲಾ ಕಾಲೇಜುಗಳಿಗೆ ನಮೂನೆ  6 ನ್ನು ಸರಬರಾಜು ಮಾಡಲಾಗಿದ್ದು,ಭರ್ತಿ ಮಾಡಿದ ನಮೂನೆಗಳನ್ನು ನವೆಂಬರ್ 30,2012ರೊಳಗೆ ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ಶಾಖೆಗೆ ಹಿಂತಿರುಗಿಸಬೇಕಾಗಿದೆ. ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಲು ಹಾಗೂ ತಿದ್ದುಪಡಿ,ವರ್ಗಾವಣೆ ಅಪೇಕ್ಷಿಸಿ ಮನವಿ ಸಲ್ಲಿಸಬಹುದಾಗಿದೆ. ಬರವಣಿಗೆಯಲ್ಲಿಯೂ/ ಆನ್ಲೈನ್ನಲ್ಲಿಯೂ ಮತದಾರರ ಪಟ್ಟಿ ನೊಂದಾವಣೆಗೆ ಅರ್ಜಿ ಸಲ್ಲಿಸಬಹುದಾಗಿದೆ. ವೆಬ್ ಸೈಟ್ 
karnataka.nic.in ವಿಳಾಸವನ್ನು    ಸಂಪರ್ಕಿಸಬಹುದಾಗಿದೆ.

         ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ಮಂಗಳೂರು ನಗರ,ಉತ್ತರ ಮತ್ತು ದಕ್ಷಿಣ ವಿಧಾನಸಭಾ ಚುನಾವಣಾ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ನಡೆಯಲಿದೆಯೆಂದು ಅಪರ ಜಿಲ್ಲಾಧಿಕಾರಿ  ದಯಾನಂದ್ ಕೆ.ಎ. ಇವರು ಹಾಜರಿದ್ದ ಎಲ್ಲಾ ಇಲಾಖಾಧಿಕಾರಿಗಳಿಗೆ ವಿವರಿಸಿದರು. ವಿದ್ಯಾಂಗ ಇಲಾಖೆಗೆ ಹೆಚ್ಚಿನ ಜವಾಬ್ದಾರಿಯನ್ನು  ವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕರೆ ನೀಡಿದರು.

ಸಭೆಯಲ್ಲಿ  ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮೋಸೆಸ್ ಜಯಶೇಖರ್, ಶಿಕ್ಷಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀಮತಿ ಫಿಲೋಮಿನಾ ಲೋಬೋ ಹಾಗೂ ಚುನಾವಣಾ ಶಾಖೆಯ ರಾಮಚಂದ್ರ ಉಪಸ್ಥಿತರಿದ್ದರು.

ಸಾರ್ವಜನಿಕರು ಹೆಚ್ಚಿನ ಮಾಹಿತಿಗೆ ಚುನಾವಣಾ ಶಾಖೆ 2220592,ಅಪರ ಜಿಲ್ಲಾಧಿಕಾರಿ ದಯಾನಂದ್ ಇವರ ಮೊಬೈಲ್ ಸಂಖ್ಯೆ 9449649019 ಹಾಗೂ ರಾಮಚಂದ್ರ 9880352194 ಇವರನ್ನು ಸಂಪರ್ಕಿಸಬಹುದಾಗಿದೆಯೆಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ.
ನಮೂನೆ 6 ನ್ನು ಸಾರ್ವಜನಿಕರು ಹತ್ತಿರದ ಮತಗಟ್ಟೆಯಲ್ಲಿ ಪಡೆಯಬಹುದಾಗಿದೆ.

 

Saturday, October 20, 2012

'ಸ್ತ್ರೀ ಶಕ್ತಿ ಸಬಲೀಕರಣಕ್ಕೆ ಪೂರಕ ಯೋಜನೆ '

ಮಂಗಳೂರು, ಅಕ್ಟೋಬರ್.20 :- ಸ್ತ್ರೀ ಶಕ್ತಿ ಸಬಲೀಕರಣದ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಆದ್ಯತೆ ನೀಡಿದ್ದು, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು ಮತ್ತು ಮಹಿಳಾ ಉದ್ಯಮಿಗಳು ತಯಾರಿಸಿದ ಉತ್ಪನ್ನಗಳಿಗೆ ಶಾಶ್ವತ ಮಾರುಕಟ್ಟೆ ಒದಗಿಸಲಾಗುವುದು ಎಂದು ಉಪಸಭಾಪತಿಗಳಾದ  ಎನ್. ಯೋಗೀಶ್ ಭಟ್ ಹೇಳಿದರು.
ಅವರಿಂದು ಕರ್ನಾಟಕ ರಾಜ್ಯ ಮಹಿಳಾ ಅಭಿ ವೃದ್ಧಿ ನಿಗಮ, ಬೆಂಗ ಳೂರು, ಮಹಿಳಾ ಮತ್ತು ಮಕ್ಕಳ ಅಭಿ ವೃದ್ಧಿ ಇಲಾಖೆ ಸಹ ಯೋಗ ದಲ್ಲಿ ಇಂದು ಮಂಗಳಾ ದೇವಿ ದೇವಾ ಲಯದ ಬಳಿಯ ಕಾಂತಿ ಚರ್ಚ್ ಸಭಾಂ ಗಣ ದಲ್ಲಿ ಪ್ರದ ರ್ಶನ ಹಾಗೂ ಮಾರಾಟ ಮೇಳದ ಉದ್ಘಾ ಟನಾ ಸಮಾ ರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ನಗರದ ಕೆ ಎಸ್ ಆರ್ ಟಿಸಿ ಬಸ್ ಸ್ಟ್ಯಾಂಡ್ ಎದು ರಿರುವ ಜಾಗ ದಲ್ಲಿ ಸ್ತ್ರೀ ಶಕ್ತಿ ಮಾರಾಟ ಮಳಿಗೆ ನಿರ್ಮಾ ಣಕ್ಕೆ 34 ಲಕ್ಷ ರೂ.ಗಳ ಅನು ದಾನ ಬಂದಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸ ಲಾಗು ವುದು ಎಂದರು. ಸ್ತ್ರೀ ಶಕ್ತಿ ಸಹ ಕಾರಿ ಬ್ಯಾಂಕ್ ಸ್ಥಾಪಿ ಸುವು ದರಿಂದ ಮಹಿಳೆಯರಿಗೆ ಅನುಕೂಲವಾಗಲಿದ್ದು, ಈ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು.
ನಗರದ ಪ್ರಮುಖ ಸಮಸ್ಯೆಯಾಗಿರುವ ಕಸ ವಿಲೇವಾರಿಯನ್ನು ಸುಲಭಗೊಳಿಸಲು ಸ್ತ್ರೀ ಶಕ್ತಿ ಸಂಘಟನೆಗಳ ನೆರವಿನ ಅಗತ್ಯವಿದೆ ಎಂದರು. ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಮೇಯರ್ ಶ್ರೀಮತಿ ಗುಲ್ಜಾರ್ ಭಾನು ಅವರು ಮಹಿಳೆಯರ ಮಾರಾಟ ಮೇಳ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಸದಸ್ಯರಾದ  ಜನಾರ್ಧನ ಗೌಡ, ಉಪಮೇಯರ್ ಶ್ರೀಮತಿ ಅಮಿತಕಲಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶ್ರೀಮತಿ ಚಂದ್ರಿಕಾ ಉಪಸ್ಥಿತರಿದ್ದರು.
 

Friday, October 19, 2012

ರಾಜ್ಯೋತ್ಸವ ಪೂರ್ವಭಾವಿ ಸಭೆ

ಮಂಗಳೂರು, ಅಕ್ಟೋಬರ್. 19 :- ನವೆಂಬರ್ 1 ರಂದು ವಿಜೃಂಭಣೆಯಿಂದ, ಅರ್ಥಪೂರ್ಣವಾಗಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ಅಕ್ಟೋಬರ್ 18 ರಂದು ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿತ್ತು.
ಸಭೆಯನ್ನು ನಿರ್ವಹಿಸಿದ ಅಪರ ಜಿಲ್ಲಾಧಿಕಾರಿ ದಯಾನಂದ ಕೆ ಎ ಅವರು, ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ನಿಗದಿತ ಹೊಣೆಗಾರಿಕೆಯನ್ನು ವಹಿಸಿದರಲ್ಲದೆ, ನಿಗದಿತ ಸಮಯ 7.45ಕ್ಕೆ ಜ್ಯೋತಿ ವೃತ್ತದಿಂದ ನೆಹರು ಮೈದಾನಕ್ಕೆ ಮೆರವಣಿಗೆ ಹೊರಡಬೇಕೆಂದರು. ಕಳೆದ ವರ್ಷ ವಿವಿಧ ಇಲಾಖೆಗಳ ಸಹಕಾರ ಹಾಗೂ ಸಮನ್ವಯದಿಂದ ಅತ್ಯಾಕರ್ಷಕ ಮೆರವಣಿಗೆ ರೂಪುತಳೆದಿದ್ದು, ಈ ಬಾರಿಯೂ ಮಹಾನಗರಪಾಲಿಕೆ, ಜಿಲ್ಲಾ ಪಂಚಾಯತ್, ಆರೋಗ್ಯ, ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ, ಕೆ ಎಸ್ ಆರ್ ಟಿಸಿ ಪ್ರವಾಸೋದ್ಯಮ ಇಲಾಖೆಗಳ ಸಹಕಾರ ಬೇಕೆಂದು ಹೇಳಿದರು. ಈ ಸಂಬಂಧ ಪೂರಕ ನೆರವನ್ನು ಒದಗಿಸಲು ಜಿಲ್ಲಾಡಳಿತ ಬದ್ಧವಾಗಿದ್ದು, ಎಲ್ಲರೂ ಆಸಕ್ತಿಯಿಂದ ಮೆರವಣಿಗೆಯನ್ನು ಯಶಸ್ಸು ಗೊಳಿಸಬೇಕೆಂದು ಕೋರಿದರು.
7.45ಕ್ಕೆ ಮೆರವಣಿಗೆ ಜ್ಯೋತಿ ವೃತ್ತದಿಂದ ಆರಂಭಗೊಂಡು 8.45ಕ್ಕೆ ನೆಹರು ಮೈದಾನ ತಲುಪುವುದು. 8.50ರಿಂದ ಶಾಲಾ ಮಕ್ಕಳಿಂದ ಕನ್ನಡ ನಾಡಗೀತೆಗಳು, 9 ಗಂಟೆಗೆ ಧ್ವಜಾರೋಹಣ, 9 ಗಂಟೆಗೆ ರಾಜ್ಯೋತ್ಸವ ಸಂದೇಶ, ಪಥಸಂಚಲನ ಹಾಗೂ ಸಾಧಕರಿಗೆ ಸನ್ಮಾನ ಮತ್ತು ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಅಪರಾಹ್ನ 3 ಗಂಟೆಗೆ ಪೊಲೀಸು ಬ್ಯಾಂಡಿನೊಂದಿಗೆ ಕಾರ್ಯಕ್ರಮ ಪುರಭವನದಲ್ಲಿ ಆರಂಭಗೊಳ್ಳಲಿದ್ದು, 6.30ಕ್ಕೆ ಮುಕ್ತಾಯಗೊಳ್ಳಲಿದೆ. ರಾಜ್ಯೋತ್ಸವ ಆಚರಣೆಯಲ್ಲಿ ಯಾವುದೇ ಚ್ಯುತಿ ಬಾರದಿರಲು ವಿವಿಧ ಇಲಾಖಾಧಿಕಾರಿಗಳ ಅಧ್ಯಕ್ಷತೆಯಲ್ಲಿ  ಉಪಸಮಿತಿ ರಚಿಸಲಾಯಿತು.
ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಗೊಳಿಸುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮಂಗಳಾ ಕ್ರೀಡಾಂಗಣದಿಂದ ವಿವಿಧ ಶಾಲಾ, ಕಾಲೇಜು ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳ ಸಹಕಾರದಿಂದ ಅರಿವು ಜಾಥಾ ಆಯೋಜಿಸಲು ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರಾದ ಸುರೇಶ್ ಕುಮಾರ್ ಅವರಿಗೆ ಜಿಲ್ಲಾಧಿಕಾರಿಗಳು ಹೊಣೆ ವಹಿಸಿದರು. 
ಸಭೆಯಲ್ಲಿ ಮಹಾನಗರಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್, ವಿದ್ಯಾಂಗ ಉಪನಿರ್ದೇಶಕರಾದ ಮೋಸೆಸ್ ಜಯಶೇಖರ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ, ಕನ್ನಡ ಸಂಸ್ಕೃತಿ ಇಲಾಖೆ ಅಧಿಕಾರಿ ಮಂಗಳಾ ವೆಂ. ನಾಯಕ್, ತಹಸೀಲ್ದಾರ್ ರವಿಚಂದ್ರ ನಾಯಕ್ ಅವರು ಉಪಸ್ಥಿತರಿದ್ದರು.



ಜೀತಪದ್ಧತಿ ವರದಿ ನೀಡಿ: ಜಿಲ್ಲಾಧಿಕಾರಿ

ಮಂಗಳೂರು, ಅಕ್ಟೋಬರ್. 19 :- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೀತಪದ್ಧತಿಯ ಕುರಿತು ಸಮಗ್ರ ಸಮೀಕ್ಷೆ ನಡೆಸಿ ವರದಿ ನೀಡಲು ಈಗಾಗಲೇ ಜಿಲ್ಲೆಯ ಉಪವಿಭಾಗಾಧಿಕಾರಿಗಳಿಗೆ ಸೂಚಿಸಲಾಗಿದ್ದು, ಪ್ರಗತಿ ವರದಿಯನ್ನು ತಕ್ಷಣವೇ ಸಲ್ಲಿಸಿ ಎಂದು ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಹೇಳಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯೋಜಿಸಲಾದ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಜಿಲ್ಲೆಯಲ್ಲಿ ಸುಶಿಕ್ಷಿತರಿದ್ದು, ಇಂತಹ ಅನಿಷ್ಠ ಪದ್ದತಿ ಇರುವ ಬಗ್ಗೆ ಮಾಹಿತಿ ಇಲ್ಲ. ಆದರೂ ಕಲ್ಲು ಕೋರೆಗಳಲ್ಲಿ, ಮರಳುಗಾರಿಕೆಯಲ್ಲಿ ಹಾಗೂ ಪ್ಲಾಂಟೇಷನ್ ಗಳನ್ನೂ ದೃಷ್ಟಿಯಲ್ಲಿರಿಸಿ ಸಮಗ್ರ ಸಮೀಕ್ಷೆಯಾಗಬೇಕೆಂದರು.
ಈ ಕುರಿತು ಯಾರಿಗಾದರೂ ಮಾಹಿತಿ ದೊರೆತರೆ ತಕ್ಷಣವೇ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಅಪರ ಜಿಲ್ಲಾಧಿಕಾರಿ ದಯಾನಂದ ಕೆ ಎ ಅವರು ಮಾತನಾಡಿ, ನಿಗದಿತ ಗುಂಪುಗಳನ್ನು ಗಮನದಲ್ಲಿರಿಸಿ ಕಾರ್ಮಿಕ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ, ವಾರ್ತಾ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ಜೀತಪದ್ಧತಿಗೆ ಸಂಬಂಧಿಸಿದ ಕಾನೂನಿನ ಕುರಿತು ಮಾಹಿತಿ ನೀಡುವ ಕೆಲಸವಾಗಬೇಕೆಂದರು.
ಎಲ್ಲ ಪಿಡಿಒ ಗಳು, ಗ್ರಾಮಕರಣಿಕರಲ್ಲಿ ಸ್ಥಳೀಯ ಮಟ್ಟದ ಮಾಹಿತಿ ಸಂಗ್ರಹಿಸಿ ತಮ್ಮ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಜೀತಪದ್ಧತಿ ಪಾಲನೆಯಾಗುತ್ತಿಲ್ಲ ಎಂಬ ವರದಿಯನ್ನು ತರಿಸಿ ಎಂದೂ ಅಪರ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ನವೆಂಬರ್ ಎರಡನೇ ವಾರ ಈ ಸಂಬಂಧ ಒಂದು ಕಾರ್ಯಾಗಾರ ಆಯೋಜಿಸಲು ಸಭೆ ನಿರ್ಧರಿಸಿತು. ಮಂಗಳೂರು ಉಪವಿಭಾಗದಿಂದ ನವೆಂಬರ್ 15ರೊಳಗೆ ಸಮೀಕ್ಷೆ ವರದಿ ಸಿದ್ಧವಿರಬೇಕೆಂದ ಅವರು, ಸರ್ಕಾರೇತರ ಸಂಸ್ಥೆಯ ಪ್ರತಿನಿಧಿ ರೆನ್ನಿ ಡಿಸೋಜ ಅವರ ಅಭಿಪ್ರಾಯ ಹಾಗೂ ಸಹಕಾರವನ್ನು ಕೋರಲಾಯಿತು. ಲೀಡ್ ಬ್ಯಾಂಕ್ ನ ಹೇಮಂತ್ ಭಿಡೆ ಅವರು ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತ್ ನಿಂದ ನಾಗೇಂದ್ರ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು.

 

ಯಶವಂತಪುರ-ಮಂಗಳೂರು- ಕಾರವಾರ ಪ್ರಯಾಣಿಕರ ರೈಲಿಗೆ ಹಸಿರು ನಿಶಾನೆ



ಮಂಗಳೂರು,ಅಕ್ಟೋಬರ್.19: ಯಶವಂತಪುರ-ಮಂಗಳೂರು- ಕಾರವಾರ  ಪ್ರಯಾಣಿಕರ ರೈಲಿಗೆ ಹಸಿರು ನಿಶಾನೆ ತೋರಿ ಸುವ ಕಾರ್ಯ ಕ್ರಮ ಮಂಗ ಳೂರಿನ ಸೆಂಟ್ರಲ್  ರೈಲು ನಿಲ್ದಾ ಣದಲ್ಲಿ ಗುರು ವಾರ ನಡೆಯಿತು. ಸಮಾ ರಂಭ ದಲ್ಲಿ ಕೇಂದ್ರ ರೈಲ್ವೇ  ಸಹಾಯಕ ಸಚಿವ ಕೆ.ಎಚ್. ಮುನಿಯಪ್ಪ, ರಾಜ್ಯ ಸಭಾ ಸದಸ್ಯ ಆಸ್ಕರ್  ಫೆರ್ ನಾಂಡಿಸ್, ಸಂಸದ ನಳಿನ್ ಕುಮಾರ್ ಕಟೀಲ್, ಜಯ ಪ್ರಕಾಶ್ ಹೆಗ್ಡೆ, ವಿಧಾನ ಸಭಾ ಉಪ ಸಭಾಪತಿ ಎನ್. ಯೋಗಿಶ್ ಭಟ್, ಮೇಯರ್ ಗುಲ್ಜಾರ್ ಭಾನು, ಶಾಸಕರಾದ ರಮನಾಥ ರೈ,ಯು.ಟಿ. ಖಾದರ್ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.

ನ.15 ರೊಳಗೆ ಬಿಸಿರೋಡ್ ಫ್ಲೈ ಓವರ್ ಪೂರ್ಣಗೊಳಿಸಿ: ಸಚಿವ ಮುನಿಯಪ್ಪ

ಮಂಗಳೂರು, ಅಕ್ಟೋಬರ್. 19:- ನಗರದಲ್ಲಿ ರೈಲ್ವೇ ಮತ್ತು ಜಿಲ್ಲಾಡಳಿತ ಸಮನ್ವಯದಿಂದ ಹಲವು ಪ್ರಮುಖ ಕಾಮಗಾರಿಗಳು ಸಮಯಮಿತಿಯೊಳಗೆ ಸಾಗಬೇಕಿದ್ದು, ಸಂಬಂಧಪಟ್ಟವರು ಅಕ್ಟೋಬರ್ 23ರೊಳಗೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡುವುದರ ಜೊತೆಗೆ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿ ಎಂದು ರೈಲ್ವೇ ಖಾತೆಯ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ  ರೈಲ್ವೇ ಮೇಲ್ಸೇತುವೆ, ಪ್ಲೈ ಓವರ್ ಕಾಮಗಾರಿಗಳ ಕುರಿತಂತೆ ಜನಪ್ರತಿನಿಧಿಗಳು, ಜಿಲ್ಲಾಡಳಿತ, ಸ್ಥಳೀಯಾಡಳಿತ ಹಾಗೂ ಸಂಬಂದಫಟ್ಟ ಅಧಿಕಾರಿಗಳ ಜೊತೆ ಸಚಿವ ಮುನಿಯಪ್ಪನವರು ಆಯೋಜಿಸಿದ ತುರ್ತು ಸಭೆಯಲ್ಲಿ ಈ ನಿರ್ದೇಶನ ನೀಡಿದ್ದಾರೆ.
ಕಳೆದ ಸುಮಾರು ಎಂಟು ವರ್ಷಗಳಿಂದ ಕುಂಟುತ್ತಾ ಸಾಗಿರುವ ಬಿಸಿರೋಡ್ ಫ್ಲೈ ಓವರ್ ಕಾಮಗಾರಿ ನವೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಕಾಮಗಾರಿ ಗುತ್ತಿಗೆ ವಹಿಸಿರುವ ಇರ್ಕಾನ್ ಸಂಸ್ಥೆಗೆ  ಸಚಿವರು ಎಚ್ಚರಿಕೆ ನೀಡಿದರು.
ಬಿಸಿರೋಡ್ ಮೇಲ್ಸೇತುವೆ ಕಾಮಗಾರಿ, ಸರ್ವಿಸ್ ರೋಡ್  ಗಳ ಕುರಿತಂತೆ ಸಾಕಷ್ಟು ಬಾರಿ ಸಭೆಗಳು ನಡೆದು ಅಂತಿಮ ಗಡುವನ್ನು ನೀಡಲಾಗಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದ ಜನಸಾಮಾನ್ಯರಿಗೆ ತೀರಾ ಸಮಸ್ಯೆಯಾಗಿದೆ. ಕೂಳೂರು ಸರ್ವಿಸ್ ರೋಡ್ ಕೂಡಾ ಸಂಪೂರ್ಣವಾಗಿಲ್ಲ ಎಂದು ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪ ಗೌಡ ಸಚಿವರ ಗಮನ ಸೆಳೆದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಂದ ಕಾಮಗಾರಿ ವಿಳಂಬವಾಗುತ್ತಿದ್ದು, ಜಿಲ್ಲಾಡಳಿತದೊಂದಿಗೆ ಸಹಕಾರ ನೀಡುತ್ತಿಲ್ಲ. ಈ ಬಗ್ಗೆ ವರದಿಯನ್ನೂ ನೀಡಲಾಗಿದೆ. ಎನ್ ಎಂ ಪಿ ಟಿ ಬಳಿ, ಪಡೀಲು ಸೇತುವೆ ಬಳಿ, ಮಹಾಕಾಳಪಡ್ಪುವಿನ ಸೇತುವೆ, ಕಾಮಗಾರಿಗಳು ಆಗಬೇಕಿದೆ. ರೈಲ್ವೇಯವರ ಜಾಗದಲ್ಲಿ ಡಾಮರೀಕರಣಕ್ಕೂ ಅವಕಾಶವಾಗುತ್ತಿಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ರೈಲ್ವೇ ಸಚಿವರ ಗಮನ ಸೆಳೆದರು. 
ಬಿಸಿರೋಡ್  ಕಾಮಗಾರಿಯನ್ನು ನವೆಂಬರ್ 15ರೊಳಗೆ ಸಂಪೂರ್ಣಗೊಳಿಸಲಾಗುವುದು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಇರ್ಕಾನ್  ಯೋಜನಾ ವ್ಯವಸ್ಥಾಪಕರು ಹೇಳಿದರು.
ಇದೇ ವೇಳೆ ಕೂಳೂರು ಪ್ಲೈ ಓವರ್ ಬಳಿಯ ಸರ್ವಿಸ್ ರಸ್ತೆಯನ್ನು  ಕೂಡಾ  ನವೆಂಬರ್ನೊಳಗೆ ಪೂರ್ಣಗೊಳಿಸುವಂತೆ ಸಚಿವರು  ಇರ್ಕಾನ್ ಸಂಸ್ಥೆಯ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಬೈಕಂಪಾಡಿ ಸೇತುವೆ ಕಾಮಗಾರಿಯ ಕುರಿತಾದ ತಾಂತ್ರಿಕ ಸಮಸ್ಯೆ ಸೇರಿದಂತೆ ಕುಂಟುತ್ತಾ ಸಾಗಿರುವ ವಿವಿಧ ಫ್ಲೈ ಓವರ್ಗಳು, ಜಪ್ಪು ಕುಡುಪಾಡಿ ಮತ್ತು ಪಡೀಲ್ ರೈಲ್ವೇ ಸೇತುವೆಗಳ ಕುರಿತಂತೆ ಸಮಗ್ರ  ಚರ್ಚೆಗಾಗಿ  ಅ.23ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಶೇಷ ಸಭೆ ನಡೆಯಲಿದೆ ಎಂದು ಸಚಿವ ಮುನಿಯಪ್ಪ ಈ ಸಂದರ್ಭ ತಿಳಿಸಿದರು.
ಸಭೆಯಲ್ಲಿ ಪಾಲ್ಘಾಟ್ ಮತ್ತು ಮೈಸೂರು ರೈಲ್ವೇ ವಿಭಾಗಗಳ ವ್ಯವಸ್ಥಾಪಕರು,  ನ್ಯಾಷನಲ್ ಹೈವೇ ಅಥಾರಿಟಿ ಮಹಾ ಪ್ರಬಂಧಕರು, ಇರ್ಕಾನ್ ಸಂಸ್ಥೆ ಅಧಿಕಾರಿಗಳು, ಮನಪಾ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದವರು ಹೇಳಿದರು.
ಸಭೆಯಲ್ಲಿ ಈಗಾಗಲೇ ಕಾರ್ಯಾರಂಭಿಸಿರುವ ಕೂಳೂರು ಸೇರಿದಂತೆ ಫ್ಲೈ ಓವರ್ಗಳ ಕಾಮಗಾರಿ ಗುಣಮಟ್ಟದಲ್ಲಿಲ್ಲ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಹಾಗೂ ವಿಧನಸಭೆಯ ಉಪಾಧ್ಯಕ್ಷ ಯೋಗೀಶ್ ಭಟ್ ಸಚಿವರ ಗಮನಕ್ಕೆ ತಂದರು. ಈ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಸಂಬಂಧಫಟ್ಟ ಅಧಿಕಾರಿಗಳಿಗೆ ಸಚಿವ ಮುನಿಯಪ್ಪ ಈ ಸಂದರ್ಭ ನಿರ್ದೇಶನ ನೀಡಿದರು.
ಶಿರಾಡಿ ಘಾಟಿ ರಸ್ತೆ ದುರಸ್ತಿಯ ಕುರಿತಂತೆ ಸಭೆಯಲ್ಲಿ ವ್ಯಕ್ತವಾದ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಮುನಿಯಪ್ಪ, 40 ಕಿ.ಮೀ. ಉದ್ದದ ರಸ್ತೆಯನ್ನು ಕಾಂಕ್ರಿಟೀಕರಣಗೊಳಿಸುವ ಮೂಲಕ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ ಎಂದರು.
ಸಭೆಯಲ್ಲಿ ಸಂಸತ್ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಸಂಸದ ಜಯಪ್ರಕಾಶ್ ಹೆಗ್ಡೆ, ರೈಲ್ವೇ ಡಿ ಆರ್ ಎಂ ಪಿಯುಷ್ ಅಗರ್ ವಾಲ್, ಮಂಗಳೂರು ಪೊಲೀಸ್ ಆಯುಕ್ತ ಮನೀಷ್ ಕರ್ಬಿಕರ್, ಮನಪಾ ಆಯುಕ್ತ ಡಾ. ಹರೀಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್ ಹಾಗೂ ಸಂಬಂಧಪಟ್ಟ ಇತರ ಅಧಿಕಾರಿಗಳು, ಇತರ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
 

ಮಲೇರಿಯಾ ನಿಯಂತ್ರಣ:ಶ್ಲಾಘನೆ

ಮಂಗಳೂರು, ಅಕ್ಟೋಬರ್19 :-ಮಂಗಳೂರು ಮಲೇರಿಯಾ ನಿಯಂತ್ರಣ ಕುರಿತು ಮಂಗಳೂರು ನಗರದಲ್ಲಿ ಮಲೇರಿಯಾ ನಿಯಂತ್ರಣ ಕಾರ್ಯಕ್ರಮದ ಕಾರ್ಯ ವೈಖರಿ ಹಾಗೂ ನಿಯಂತ್ರಣದ ಅಧ್ಯಯನ ನಡೆಸಿ ಮಲೇರಿಯಾ ನಿಯಂತ್ರಣ ವಿಧಾನಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಶಿಫಾರಸು ನೀಡಲು ಕರ್ನಾಟಕ ಸರಕಾರದ ಪ್ರಧಾನ ಕಾರ್ಯದರ್ಶಿ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು)  ಮದನ್ ಗೋಪಾಲ್ ಇವರ ನಿರ್ದೇಶನದ ಮೇರೆಗೆ  ಕಳೆದ ಒಂದು ವಾರದಿಂದ ಡಾ.ಘೋಷ್,ಸಯಂಟಿಸ್ಟ್(ಐಸಿಎಂಆರ್) ಬೆಂಗಳೂರು ಇವರ ನೇತೃತ್ವದಲ್ಲಿ ಅಧ್ಯಯನ ನಡೆಸಲಾಯಿತು.
 ಮಹಾನಗರಪಾಲಿಕೆ ಆರೋಗ್ಯಾಧಿಕಾರಿ,ವಿಜ್ಞಾನಿಗಳು,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಮತ್ತು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಜೊತೆಗೆ ಚರ್ಚಿಸಿ ಪ್ರಸ್ತುತ ನಡೆಯುತ್ತಿರುವ ನಿರ್ಮಾಣ ಹಂತದ ಕಟ್ಟಡಗಳಲ್ಲಿ ಹಾಗೂ ಮನೆ ಭೇಟಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದ್ದು, ಮಲೇರಿಯಾ ಹತೋಟಿಗೆ ಬರಲು ಪ್ರಮುಖ ಪಾತ್ರ ವಹಿಸಿದೆ. ಇದೇ ರೀತಿ ಚಟುವಟಿಕೆ ಮುಂದುವರಿಸಲು ಶಿಫಾರಸು ಮಾಡಿರುತ್ತಾರೆ.
           2012 ಜೂನ್ನಲ್ಲಿ ನಡೆಸಿದ ಅಧ್ಯಯನಕ್ಕೆ ಹೋಲಿಸಿದಾಗ ನಿರ್ಮಾಣ ಹಂತದ ಕಟ್ಟಡಗಳಲ್ಲಿ ಸೊಳ್ಳೆಯ ಉತ್ಪತ್ತಿ ಕಂಡು ಬರುತ್ತಿದ್ದರೂ, ಸಹ ಸಾಂದ್ರತೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕೈಗೊಂಡ ಕ್ರಮಗಳು, ಪಾಲಿಕೆಯ ಕ್ರಮಗಳು ಹಾಗೂ ವೈದ್ಯಾಧಿಕಾರಿಗಳ ಅನುಷ್ಠಾನ ಕ್ರಮಗಳ ಬಗ್ಗೆ ತಂಡ ಮೆಚ್ಚುಗೆ ವ್ಯಕ್ತಪಡಿಸಿದೆ.

 

Saturday, October 13, 2012

ಗ್ರಾಮೀಣ ಮಹಿಳೆಯರ ಮೌನಕ್ರಾಂತಿ

ಮಂಗಳೂರು,ಅಕ್ಟೋಬರ್.13:  'ನಾವು ಕೇವಲ ಲಾಭದ ಉದ್ದೇಶವನ್ನಿಟ್ಟುಕೊಂಡು ಸಂಘ ಸ್ಥಾಪಿಸಿದ್ದಲ್ಲ; ಸ್ವಾವಲಂಬಿಗಳಾಗಲು, ಒಗ್ಗಟ್ಟಿನಿಂದ ಬಾಳಲು ನಮ್ಮ ಸಂಘವನ್ನು ಸ್ಥಾಪಿಸಿದ್ದೇವೆ' ಇದು ಉಳಾಯಿಬೆಟ್ಟಿನ ಪೆರ್ಮಂಕಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀಮತಿ ಸುಭದ್ರಾ ರಾವ್ ಅವರ ಸ್ಪಷ್ಟ ನುಡಿ.
ಅಕ್ಟೋ ಬರ್ 12, 20 12ಕ್ಕೆ ಅವರ ಸಂಘಕ್ಕೆ ಮೂರರ ಹರೆಯ. ಪ್ರೀತಿ ನಂದಿನಿ, ಜ್ಯೋತಿ ನಂದಿನಿ, ದೀಪ ನಂದಿನಿ ಎಂಬ ಮೂರು ಗುಂಪು ಗಳ ನ್ನೊಳ ಗೊಂಡ 45 ಜನರ ನ್ನೊಳ ಗೊಂಡ ಸ್ವ ಸಹಾಯ ಸಂಘದ ಉದ್ದೇಶ ಕೇವಲ ಸಾಲ ಕೊಡು ವುದಲ್ಲ. ಹೈನು ಗಾರಿ ಕೆಯನ್ನು ಪ್ರಮುಖ ಕಸುಬ ನ್ನಾಗಿ ಸಿಕೊಂಡಿ ರುವ ಕುಟುಂ ಬದ ಮಹಿಳೆ ಯರು ತಮ್ಮ ಹಸು ಗಳಿಗೆ ಉತ್ತಮ ಹಿಂಡಿಯನ್ನು ತಯಾರಿಸಲು ತಿಂಗಳಲ್ಲಿ ಕನಿಷ್ಠ ಎರಡು ಬಾರಿ ಸಂಘದ ಅಂಗಳದೆದುರು ಒಟ್ಟು ಸೇರುತ್ತಾರೆ.
ಜೋಳ, ಗೋಧಿ, ಉಪ್ಪು, ತೌಡು(ಭತ್ತದ ಹೊಟ್ಟು), ಹೆಸರು, ತೊಗರಿ, ಉದ್ದು, ಲವಣ ಮಿಶ್ರಣ, ತೆಂಗಿನ ಹಿಂಡಿ, ನೆಲಕಡಲೆ ಹಿಂಡಿ, ರಾಗಿಯನ್ನೊಳಗೊಂಡಂತೆ 11 ಬಗೆಯ ಕಚ್ಚಾ ವಸ್ತುಗಳನ್ನು ಸೇರಿಸಿ ಮಿಶ್ರಣ ಮಾಡಿ ಸಮತೋಲಿತ ಪಶು ಆಹಾರ ತಯಾರಿಸುತ್ತಾರೆ. ತಯಾರಿಕಾ ವೆಚ್ಚ 15.50 ರೂ.ಗಳಾದರೆ ಮಾರಾಟ ವೆಚ್ಚ 17ರೂ. ಲಾಭ 1.50 ರೂ. ಆದರೂ ನಾವು ಬರಿ ಲಾಭಕ್ಕೋಸ್ಕರ ಪಶು ಆಹಾರ ತಯಾರಿಸುತ್ತಿಲ್ಲ; ಗುಣಮಟ್ಟಕ್ಕೆ ಪ್ರಥಮ ಆದ್ಯತೆ, ನಮ್ಮ ಪಶುಗಳಿಗೆ ಉತ್ತಮ ಸಮತೋಲಿತ ಆಹಾರ ದೊರೆಯುತ್ತದೆ.  ವೈದ್ಯರಿಗೆ ನೀಡುವ ಹಣ ಖರ್ಚಾಗುವುದಿಲ್ಲ ಎನ್ನುತ್ತಾರೆ ಈ ಮಹಿಳೆಯರು. ನಾವು ಎಲ್ಲರೂ ಒಗ್ಗಟ್ಟಿನಿಂದ, ಪ್ರೀತಿಯಿಂದ ದುಡಿಯುತ್ತೇವೆ ಎನ್ನುತ್ತಾರೆ.
ಕೇವಲ 6000 ರೂ. ರಿವಾ ಲ್ವಿಂಗ್ ಫಂಡ್(Revo lving fund) ನಿಂದ ಆರಂ ಭಿಸಿದ ಸಂಘ ಪ್ರತೀ ಮೂರು ಗುಂಪಿ ನಿಂದ 4000 ರೂ. ಸಂಗ್ರಹಿಸಿ ಕಚ್ಚಾ ಪದಾರ್ಥ ತಂದು ಮಿಶ್ರಣ ತಯಾ ರಿಸಿ 3 ಟನ್ ಉತ್ಪಾ ದನೆಯಿಂದ ಆರಂಭ ವಾಗಿದ್ದು ಇಂದು 16 ಟನ್  ಪಶು ಆಹಾರ ಉತ್ಪಾದಿ ಸುತ್ತಿ ದ್ದೇವೆ. ಕಳೆದ 9 ತಿಂಗ ಳಲ್ಲಿ 74,000 ರೂ. ಲಾಭ ಗಳಿಸಿದ್ದೇವೆ ಎನ್ನುತ್ತಾರೆ ಶ್ರೀಮತಿ ರೋಸ್ ಮೇರಿ. ಬಂದ ಹಣದಲ್ಲಿ 50% ಉಳಿಸಿ 50% ಹಂಚಿಕೊಳ್ಳುತ್ತೇವೆ. ಪ್ರಸಕ್ತ ಎರಡು ಗಂಟೆಯ ಕೆಲಸಕ್ಕೆ 200 ರೂ. ದೊರೆಯುತ್ತದೆ. ಇದಲ್ಲದೆ ಸ್ವಸಹಾಯ ಸಂಘದ ಮೂಲಕ ಹುಲ್ಲು ಬೆಳೆಸುತ್ತಿದ್ದೇವೆ. ಇವರಿಗೆ ಇದಕ್ಕೆಲ್ಲ ಬೆಂಬಲವಾಗಿ ಮಾರ್ಗದರ್ಶಕರಾಗಿ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಮಂಡಳಿ ಅಧಿಕಾರಿ ಡಿ. ಎಸ್. ಹೆಗಡೆ ಅವರು ಕಾಲಕಾಲಕ್ಕೆ ಸಲಹೆ ನೀಡುತ್ತಾರೆ. ಇವರ ಪಶುಗಳ ಆರೈಕೆಗೆ ಬೆಂಬಲವಾಗಿ ಇಲ್ಲಿನ ಪಶುಪಾಲನಾ ಇಲಾಖೆಯ ಡಾ ವಸಂತ ಶೆಟ್ಟಿ ಇದ್ದಾರೆ. ಹಾಗಾಗಿ ನಮಗೆ ಈ ಕುರಿತು ಚಿಂತೆ ಇಲ್ಲ ಎನ್ನುವ ಇವರನ್ನು ಹುರಿದುಂಬಿಸಿ ಸಲಹೆ ನೀಡಲು ಕಳೆದ ಸಾಲಿನಲ್ಲಿ ಉತ್ತಮ ಹೈನುಗಾರಿಕೆ ಪ್ರಶಸ್ತಿಯನ್ನು ಕೆ ಎಂ ಎಫ್ ನಿಂದ ಪಡೆದ  ರೈತ  ಆಂಟನಿ ಡಿ' ಸೋಜಾ ಅವರಿದ್ದಾರೆ. ಹಾಗಾಗಿ ಸಂಘ ಸಮಗ್ರವಾಗಿ ಸಮೃದ್ಧಿಯಿಂದ ಮುಂದಡಿ ಇಡುತ್ತಿದೆ.
ನಂದಿನಿ ಯವರಿಗೆ ಹಸಿರು ಹುಲ್ಲಿನ ಅವಶ್ಯ ಕತೆ ಯಿದೆ. ಹಾಗಾಗಿ ಹಸಿ ಹುಲ್ಲಿಗೆ ಮಾರು ಕಟ್ಟೆ ಯಲ್ಲಿ ಮೋಸ ಇಲ್ಲ. ಹಾಗಾಗಿ ಸಂಘ ಈ ನಿಟ್ಟಿ ನಲ್ಲೂ ಗಂಭೀ ರವಾಗಿ ಚಿಂತಿಸಿ ಹುಲ್ಲು ಬೆಳೆ ಯಲು ಆರಂ ಭಿಸಿದೆ. 2005 ರಿಂದ 24 ಲೀಟರ್ ಹಾಲಿನಿಂದ ಆರಂಭಗೊಂಡ ಹಾಲು ಸಂಗ್ರಹ ಇಂದು 700 ಲೀಟರ್ ಗುಣಮಟ್ಟದ ಹಾಲನ್ನು ನೀಡುತ್ತಿದೆ. ಉತ್ತಮ ಪಶುಆಹಾರದಿಂದಾಗಿ 8.5 ಎಸ್ ಎನ್ ಎಫ್ ಜಿಡ್ಡಿನಂಶ ಹಾಲಿನಲ್ಲಿದೆ. ಸಂಘಟಿತರಾಗಿ ಮಹಿಳೆಯರು ಬೆಳೆಯುತ್ತಿದ್ದಾರೆ. ಹೈನುಗಾರಿಕೆಯಲ್ಲಿ ಯಶಸ್ಸನ್ನು ದಾಖಲಿಸಿದ ರೋಸ್ ಮೇರಿಯವರು, ಕೃಷಿಯಲ್ಲಿ ಯಶಸ್ಸು ಸಾಧಿಸುತ್ತಿರುವ ಸುಭದ್ರ ಅವರು ಇವರಿಗೆ ಮಾದರಿಯಾಗಿದ್ದಾರೆ. ಸ್ವಾವಲಂಬಿ ಹಳ್ಳಿಗಳಿಂದ ಸಮೃದ್ಧ ಭಾರತ ಎಂಬ ರಾಷ್ಟ್ರಪಿತ ಮಹತ್ಮಾ ಗಾಂಧಿಜೀ ಅವರ ಕನಸು ಈ ಮೂಲಕ ನನಸಾಗುತ್ತಿದೆ.

Friday, October 12, 2012

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಂದ ಪ್ರಗತಿ ಪರಿಶೀಲನಾ ಸಭೆ

ಮಂಗಳೂರು, ಅಕ್ಟೋಬರ್.12 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆಗಳಲ್ಲಿ ಅದರಲ್ಲೂ ಮುಖ್ಯವಾಗಿ ಸ್ಥಳೀಯವಾಗಿ ತರಕಾರಿ ಬೆಳೆಯುವ ನಿಟ್ಟಿನಲ್ಲಿ ಉತ್ತಮ ಮಾದರಿಗಳನ್ನು ತೋಟಗಾರಿಕಾ ಇಲಾಖೆ ನೀಡಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ  ಭರತ್ ಲಾಲ್ ಮೀನಾ ಅವರು ಹೇಳಿದರು.
ಅವ ರಿಂದು ಜಿಲ್ಲಾ ಧಿಕಾ ರಿಗಳ ಕಚೇ ರಿಯಲ್ಲಿ ಜಿಲ್ಲೆಯ ಪ್ರಗತಿ ಪರಿ ಶೀಲನಾ ಸಭೆಯ ಅಧ್ಯ ಕ್ಷತೆ ವಹಿಸಿ ಮಾತ ನಾಡು ತ್ತಿದ್ದರು. ಜಿಲ್ಲೆಗೆ ತರ ಕಾರಿ ಪೂರೈಕೆ ಇತರ ಜಿಲ್ಲೆ ಗಳಿಂ ದಾಗು ತ್ತಿದ್ದು,  ಸಾಮಾನ್ಯ ಜನರ ಹಿತ ವನ್ನು ಗಮ ನದಲ್ಲಿ ರಿಸಿ, ನೆರ ವಾಗುವ ನಿಟ್ಟಿನಲ್ಲಿ ಕಡಿಮೆ ಬೆಲೆಗೆ ಉತ್ತಮ ಗುಣ ಮಟ್ಟದ ತರಕಾರಿ ಪೂರೈಸಲು ಇಲಾಖೆ ಕಾರ್ಯೋನ್ಮುಖವಾಗಬೇಕಿದೆ ಎಂದ ಕಾರ್ಯದರ್ಶಿಗಳು, ಆಸಕ್ತ ಕೃಷಿಕರೊಂದಿಗೆ ವ್ಯವಹರಿಸಿ ಈ ನಿಟ್ಟಿನಲ್ಲಿ ಚಿಂತನೆ ನಡೆಸಸಬೇಕೆಂದು  ಎಂದು ತೋಟಗಾರಿಕಾ ಅಧಿಕಾರಿಗಳಿಗೆ ಸೂಚಿಸಿದರು.
ತೋಟಗಾರಿಕಾ ಇಲಾಖೆಯಡಿ ಯೋಜನೆಗಳಿಗೆ ಸಂಬಂಧಿಸಿದಂತೆ ತುರ್ತು ನಿರ್ಧಾಗಳನ್ನು ಕೈಗೊಳ್ಳಲು ಪೂರಕವಾಗಿ ಇಲ್ಲಿನ ಹಿರಿಯ ಅಧಿಕಾರಿಗೆ ಉಪನಿರ್ದೇಶಕರ ಪ್ರಭಾರ ವಹಿಸಿ ಎಂದು ತೋಟಗಾರಿಕಾ ಇಲಾಖಾ ಹಿರಿಯ ಅಧಿಕಾರಿಗಳಲ್ಲಿ ಕೋರಿದರು. ಇದಲ್ಲದೆ ಸಮಾಜ ಕಲ್ಯಾಣ, ಜಿಲ್ಲಾ ಪಂಚಾಯತ್ನ ವಸತಿ ಯೋಜನೆ ಸಂಬಂಧದ  ಇಲಾಖೆಗಳ ಸಮಸ್ಯೆಗಳಿಗೆ ಸ್ಪಂದಿಸಲು ಸಭೆಯ ಸಂದರ್ಭದಲ್ಲೇ ಇಲಾಖಾ ಮುಖ್ಯಸ್ಥರೊಡನೆ ದೂರವಾಣಿ ಮೂಲಕ ಮಾತನಾಡಿ ಪರಿಹಾರ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಭೆಗೆ ಗೈರು ಹಾಜರಾದುದಕ್ಕೆ ನೋಟೀಸ್ ನೀಡಲು ಸೂಚಿಸಿದರು. ಲೋಕೋಪಯೋಗಿ ಇಲಾಖೆ ಕೈಗೊಂಡಿರುವ ರಸ್ತೆ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದ ಕಾರ್ಯರ್ಶಿಗಳು ನಗರದೊಳಗಿನ ಸರ್ಕಾರಿ ವಸತಿಗೃಹಗಳ ಪ್ರದೇಶವನ್ನು ಸಮೀಕ್ಷೆ ಮಾಡಿ ಈಗಿರುವ ವಸತಿ ಗೃಹಗಳ ಬದಲಿಗೆ ಬಹುಮಹಡಿ ಕಟ್ಟಡ ನಿರ್ಮಿಸಿ ಉಳಿದ ಜಾಗದಲ್ಲಿ ಕ್ರೀಡಾ ಚಟುವಟಿಕೆಗೆ ಮೈದಾನ ನಿರ್ಮಿಸುವ ಸಾಧ್ಯತೆ ಪರಿಶೀಲಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ವಸತಿ ಶಾಲೆ ನಿರ್ಮಾಣಗಳ ಪ್ರಗತಿಯ ಬಗ್ಗೆ ಮಾಹಿತಿ ಪಡೆದ ಕಾರ್ಯದರ್ಶಿಗಳು, ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸಮಯಮಿತಿ ನಿಗದಿಪಡಿಸಿ ಕಟ್ಟಡ ನಿರ್ಮಾಣ ಕಾರ್ಯ ಆರಂಭಿಸಿ ಎಂದರು.
ರಂಗ ಮಂದಿರ ನಿರ್ಮಾಣ ಸಂಬಂದ ಕಾಮ ಗಾರಿ ಯನ್ನೂ ಶೀಘ್ರವೇ ಆರಂ ಭಿಸಲು ಸೂಚಿ ಸಿದ ಕಾರ್ಯ ದರ್ಶಿ ಗಳು, ಪಿಲಿ ಕುಳ ದಲ್ಲಿ ನಿರ್ಮಾ ಣವಾ ಗಲಿ ರುವ  ಜಾನ ಪದ ಲೋಕ ಅಭಿ ವೃದ್ಧಿಯ ಬಗ್ಗೆ ಪರಿ ಶೀಲಿ ಸಿದರು. ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಜಿಲ್ಲೆಗೆ ಯೂರಿಯಾ ಪ್ರಮಾಣವನ್ನು 200 ರಿಂದ 800 ಟನ್ ಹೆಚ್ಷಿಸುವಂತೆ ಕೋರಿದ ಅವರು, ಸ್ಥಳೀಯ ಅಧಿಕಾರಿಗಳಿಗೆ ಸುಫಲಾ ಶೇಖರಣೆಗೆ ಸಂಬಂಧಿಸಿದ ಸಮಸ್ಯೆಗೆ ಪರಿಹಾರ ರೂಪಿಸಲು ಮಾರ್ಗದರ್ಶನ ನೀಡಿದರು. ಎಪಿಎಂಸಿ ಕಟ್ಟಡಗಳನ್ನು ಅಭಿವೃದ್ಧಿಪಡಿಸಿ ಸಾಮಾನ್ಯ ಕೃಷಿ ಚಟುವಟಿಕೆಗಳಿಗೆ ಪೂರಕ ಕಾರ್ಯಕ್ರಮ ರೂಪಿಸಿ ಎಂದರು.
ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಪಡಿತರ ಚೀಟಿಗೆ ಸಂಬಂಧಿಸಿದಂತೆ  ಜನರ ಅನುಕೂಲಕ್ಕಾಗಿ ಪಾಲಿಕೆ ಕಚೇರಿ, ಸುರತ್ಕಲ್ ಮಹಾನಗರಪಾಲಿಕೆ ವಿಭಾಗ, ಉಳ್ಳಾಲದಲ್ಲೂ ಘಟಕಗಳನ್ನು ತೆರೆದು ನೋಂದಣಿಗೆ ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಉಸ್ತುವಾರಿ ಕಾರ್ಯದರ್ಶಿಗಳ ಗಮನಕ್ಕೆ ತಂದರು.
ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉದ್ಭವವಾಗದಂತೆ ವಿವಿಧ ಯೋಜನೆಗಳಡಿ ಸಮಗ್ರ ಜಲ ಯೋಜನೆ ಶೀಘ್ರವಾಗಿ ಕಾಯರ್ಾನುಷ್ಠಾನಗೊಳಿಸಿ ಎಂದು ಜಿಲ್ಲಾ ಪಂಚಾಯತ್ನ ಎಕ್ಸಿಕ್ಯುಟಿವ್ ಇಂಜಿನಿಯರ್ ಗೆ ಸೂಚಿಸಿದರು. ಅವು ಕೆರೆ ಅಭಿವೃದ್ಧಿ, ಕಿಂಡಿ ಅಣೆಕಟ್ಟು, ಜಲಸಮೃದ್ಧಿ ಯೋಜನೆ, ಬಹುಗ್ರಾಮ ಕುಡಿಯುವ ನೀರು ಯೋಜನೆಗಳಾಗಿರಬಹುದು ಎಲ್ಲ ಯೋಜನೆಗಳನ್ನು ಒಟ್ಟುಗೂಡಿಸಿ ನೀರು ಸಮಸ್ಯೆ ಯಾಗದಂತೆ ಕಾರ್ಯರೂಪಕ್ಕೆ ತನ್ನಿ ಎಂದರು.
ಮಲೇರಿಯ ನಿಯಂತ್ರಣ ಕ್ರಮಗಳು ನಿರಂತರವಾಗಿರಲಿ ಎಂದ ಕಾರ್ಯದರ್ಶಿಗಳೂ, ಪರಿಸರ ಪ್ರವಾಸೋದ್ಯಮದಡಿ ಕಾಡು ಬೆಳೆಸಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಎಲ್ಲ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.


Thursday, October 11, 2012

ನ. 1 ರಿಂದ ಮಂಗಳೂರು ತಾಲೂಕಿನಲ್ಲಿ ಪ್ಲಾಸ್ಟಿಕ್ ನಿಷೇಧ: ಜಿಲ್ಲಾಧಿಕಾರಿ

ಮಂಗಳೂರು, ಅಕ್ಟೋಬರ್. 11:ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ಲಾಸ್ಟಿಕ್ ಹಾವಳಿಯಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಹಂತಹಂತವಾಗಿ ಪ್ಲಾಸ್ಟಿಕ್ ನಿಷೇಧ ಜಾರಿ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. ಪ್ರಾಯೋಗಿಕವಾಗಿ ಮೂಡಬಿದ್ರೆಯಲ್ಲಿ ಜಾರಿಗೆ ತಂದ ಪ್ಲಾಸ್ಟಿಕ್ ನಿಷೇಧ, ಮುಂದಿನ ಹಂತವಾಗಿ ನವೆಂಬರ್ 1ರಿಂದ ಮಂಗಳೂರು ನಗರ ಹಾಗೂ ತಾಲೂಕಿನಲ್ಲಿ ಜಾರಿಗೆ ಬರಲಿದೆ ಎಂದು ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಹೇಳಿದ್ದಾರೆ.
ಇಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿವಿಧ ಸಂಘಟನೆಗಳು ಹಾಗೂ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯ ಪ್ರಜ್ಞಾವಂತ ಜನರ ಸಹಕಾರ ಪ್ಲಾಸ್ಟಿಕ್ ಹಾವಳಿಯನ್ನು ನಿಷೇಧಿಸಲು ಅಗತ್ಯವಿದ್ದು, ಸರ್ಕಾರದ ಆದೇಶ, ಯೋಜನೆಗಳ ಯಶಸ್ವಿಗೆ ಜನರ ಸಹಕಾರಬೇಕೆಂದು ಭಿನ್ನವಿಸಿದ್ದಾರೆ.
ಸಭೆಯಲ್ಲಿ ಪ್ಲಾಸ್ಟಿಕ್ ನಿಯಂತ್ರಣದ ಕುರಿತು ಜಾಗೃತಿ ಮೂಡಿಸಿದ ಸಂಘಸಂಸ್ಥೆಗಳು ಮತ್ತು ಪ್ಲಾಸ್ಟಿಕ್ ಬಳಕೆದಾರರು, ಉತ್ಪಾದಕರು ಹಾಗೂ ಕೆನರಾ ಚೇಂಬರ್ಸ್ ನವರು ಈ ಸಂಬಂಧ ನೀಡಿದ ಸಲಹೆಗಳನ್ನು ಆಲಿಸಿದ ಬಳಿಕ ಹಂತ ಹಂತವಾಗಿ ಪ್ಲಾಸ್ಟಿಕ್ ನಿಷೇಧವನ್ನು ಜಾರಿಗೆ ತರಲಾಗುವುದು ಎಂದರು.
ಈಗಾಗಲೇ 40ಮೈಕ್ರಾನ್ ಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಕೈಬಳಕೆ ಚೀಲಗಳನ್ನು ನಿಷೇಧಿಸಲಾಗಿದೆ. ಪಾಲಿಕೆ ನಿರಂತರವಾಗಿ ಇಂತಹ ಉತ್ಪಾದಕರ ವಿರುದ್ಧ ದಾಳಿ ನಡೆಸಿ ದಂಡ ಕಟ್ಟಿಸಿಕೊಂಡಿದೆಯಲ್ಲದೆ, ಬಿಗಿ ಕಾನೂನು ಕ್ರಮಗಳನ್ನು ಕೈಗೊಂಡಿದೆ.  ನಗರದ ಹಲವು ಕಾಲೇಜುಗಳು,ಸಂಘಸಂಸ್ಥೆಗಳ ಸಹಕಾರದಿಂದ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಕ್ರಮಕೈಗೊಳ್ಳುವಂತೆ ಹಲವು ಬಾರಿ ಸೂಚನೆ ನೀಡಿದ್ದಾರೆ.
ಆದರೆ ಜಿಲ್ಲಾಡಳಿತ ನಿಷೇಧ ಆದೇಶ ಜಾರಿಗೆ ತರುವ ಮೊದಲು ಸಾಧಕ ಬಾಧಕಗಳನ್ನು ಗಂಭೀರವಾಗಿ ಅಧ್ಯಯನ ಮಾಡಿ ಕ್ರಮಕೈಗೊಳ್ಳಲು ನಿರ್ಧರಿಸಿದೆ. ಪ್ರಥಮ ಹಂತವಾಗಿ ನವೆಂಬರ್ ಒಂದರಿಂದ ಮಂಗಳೂರು ತಾಲೂಕಿನಲ್ಲಿ ಪ್ಲಾಸ್ಟಿಕ್ ನಿಷೇಧಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಪ್ಲಾಸ್ಟಿಕ್ ಉತ್ಪಾದಿಸುವ 60 ಕೈಗಾರಿಕೆಗಳು ಸ್ಥಳೀಯವಾಗಿದ್ದು, ಪ್ಲಾಸ್ಟಿಕ್ ಗೆ ಪರ್ಯಾಯ ರೂಪಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಸ್ತ್ರೀ ಶಕ್ತಿ ಸಂಘಗಳು, ಸ್ವಸಹಾಯ ಸಂಘಗಳು ಬಟ್ಟೆ ಚೀಲ ಉತ್ಪಾದಿಸಲು ಮುಂದೆ ಬಂದರೆ ಅವರಿಗೆ ಸಬ್ಸಿಡಿ ನೀಡಲಾಗುವುದು. ಜನರಿಗೆ ಹೊರೆಯಾಗದ ರೀತಿಯಲ್ಲಿ ಮಾರುಕಟ್ಟೆಗೆ ಚೀಲಗಳನ್ನು ವಿತರಿಸಲು ಚಿಂತನೆ ನಡೆಸುವುದಾಗಿ ನುಡಿದರು.
ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿಗೂ ಸಮರ್ಪಕ ವ್ಯವಸ್ಥೆಯಾಗಬೇಕೆಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಜನರ ಸಹಕಾರ ಹಾಗೂ ಪ್ಲಾಸ್ಟಿಕನ್ನುಬೇಕಾಬಿಟ್ಟಿಯಾಗಿ ಬಳಸುವ ಮನಸ್ಥಿತಿ ಬದಲಾದರೆ ಸಮಸ್ಯೆಯ ಸ್ವರೂಪ ನಗಣ್ಯವಾಗಲಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಜಿಲ್ಲೆಯ ಸುಶಿಕ್ಷಿತ ಜನರು ಪ್ಲಾಸ್ಟಿಕ್ ಬಳಸುವ ಸಂದರ್ಭ ಜಿಲ್ಲಾಡಳಿತದ ಕೋರಿಕೆಯನ್ನು ಒಪ್ಪುವರೆಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಡಾ ಕೆ ಎನ್ ವಿಜಯಪ್ರಕಾಶ್ ಮತ್ತು ಮಹಾನಗರ ಪಾಲಿಕೆ ಆಯುಕ್ತ ಡಾ ಹರೀಶ್ ಕುಮಾರ್, ಮಾಲಿನ್ಯ ನಿಯಂತ್ರಣಾಧಿಕಾರಿ ಲಕ್ಷ್ಮಣ್ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿಗಳು ತಮ್ಮ ಅವಧಿಯಲ್ಲಿ ಚಿಕ್ಕಮಗಳೂರಿನಲ್ಲಿ ಪ್ಲಾಸ್ಟಿಕ್ ನಿಷೇಧದ ಅನುಭವವನ್ನು ಸಭೆಗೆ ತಿಳಿಸಿದರು. ಮೂಡಬಿದರೆ ಪುರಸಭೆ ಅಧಿಕಾರಿಗಳು ಮೂಡಬಿದ್ರೆಯಲ್ಲಿ ಪ್ಲಾಸ್ಟಿಕ್ ನಿಷೇಧ ಅನುಷ್ಠಾನಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

Wednesday, October 10, 2012

'ಕಾರಂತರ ಬಹುತ್ವದೆಡೆಗಿನ ಒಲವು ನಮಗೆ ಮಾದರಿ'

ಮಂಗಳೂರು, ಅಕ್ಟೋಬರ್. 10 : ಇಂದು ನಮ್ಮ ತಜ್ಞತೆ ಅತ್ಯಂತ ಸಣ್ಣ ವಿಭಾಗಕ್ಕೆ ಸೀಮಿತವಾಗಿದೆ; ಅರಿವಿನ ವ್ಯಾಪಕತೆಯನ್ನು ನಾವಿಂದು ಕನಿಷ್ಠಗೊಳಿಸುತ್ತಿದ್ದು, ಜಗತ್ತನ್ನು ಚಿಕ್ಕದಾಗಿಸಿಕೊಂಡಿದ್ದೇವೆ. ಕಾರಂತರ ಬದುಕು, ಬರಹಗಳು ಅವರ ಬಹುತ್ವದೆಡೆಗಿನ ಒಲವಿನಿಂದಾಗಿ ಪ್ರಸಕ್ತವಾಗಿವೆ ಎಂದು ಮಂಗಳೂರು ವಿಶ್ವವಿದ್ಯಾನಿಲಯ ಡಾ. ಶಿವರಾಮ ಕಾರಂತ ಅಧ್ಯಯನ ಪೀಠದ ನಿರ್ದೇಶಕರಾದ ಡಾ. ಸಬೀಹಾ ಭೂಮಿ ಗೌಡ ಹೇಳಿದರು.
    ಡಾ. ಶಿವ ರಾಮ ಕಾರಂ ತರ ಜನ್ಮ ದಿನಾ ಚರಣೆ ಸಂಬಂ ಧ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂ ರಿನ ಬಾಲ ವನ ದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ, ಡಾ ಶಿವ ರಾಮ ಕಾರಂತ ಬಾಲ ವನ ಸಮಿತಿ ಆಯೋ ಜಿಸಿದ್ದ 'ಬಾಲ ವನ ಹಬ್ಬ' ಕಾರ್ಯ ಕ್ರಮ ದಲ್ಲಿ ಡಾ ಶಿವ ರಾಮ ಕಾರಂ ತರ ಸಾಹಿತ್ಯ ಲೋಕ ರಾಜ್ಯ ಮಟ್ಟದ ವಿಚಾರ ಗೋಷ್ಠಿ ಅಧ್ಯ ಕ್ಷತೆ ವಹಿಸಿ ಮಾತ ನಾಡುತ್ತಿದ್ದರು.
ಕಾರಂತರ ಕೃತಿಗಳನ್ನು ಸಮಕಾಲೀನ ಪಠ್ಯವನ್ನಾಗಿಸುವುದರಿಂದ ವರ್ತಮಾನದ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಬದುಕನ್ನು ಮುಖಾಮುಖಿಯಾಗಿಸಿ ಸಮಸ್ಯೆಗಳಿಗೆ ಬೆನ್ನು ಮಾಡದೆ ಎದುರಿಸುವ ಸಾಮಥ್ರ್ಯವನ್ನು ನೀಡುತ್ತದೆ. ಬದುಕಿದಂತೆ ಬರೆದ ದಿಟ್ಟ ವ್ಯಕ್ತಿತ್ವ ಅವರದ್ದು ಎಂದರು. ಪರಿಪೂರ್ಣತೆಯ ಹುಡುಕಾಟವನ್ನು ತಮ್ಮ 90ರ ಇಳಿ ವಯಸ್ಸಿನಲ್ಲೂ ಕಿಂಚಿತ್ತೂ ಬೇಸರಿಸದೆ ನಡೆಸಿ ಬೆಳಕು ತೋರಿದ ಜೀವ ಅವರದ್ದು. ಇನ್ನು ಕಾರಂತರ ಸಾಂಸ್ಕೃತಿಕ ಬದುಕು ಕ್ರಿಯಾಶೀಲ ಬದುಕಿಗೆ ಅತ್ಯುತ್ತಮ ಮಾದರಿ ಎಂದರು.
'ಡಾ ಶಿವರಾಮ ಕಾರಂತರ ಕೃತಿಗಳಲ್ಲಿ ಸಾಮಾಜಿಕ ತುಡಿತಗಳು' ಗೋಷ್ಠಿಯನ್ನು ನಡೆಸಿಕೊಟ್ಟ ಮೈಸೂರು ಬಿಳಿಕೆರೆಯ ಸಕರ್ಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಡಾ ಗಣೇಶ್ ಚಿಕ್ಕಮಗಳೂರು ಅವರು ಮಾತನಾಡಿ  ಹೆಣ್ಣಿನ ಚೈತನ್ಯ ಶೀಲ ವ್ಯಕ್ತಿತ್ವವನ್ನ್ಗು ತಮ್ಮ ಕಾದಂಬರಿಗಳಲ್ಲಿ ಚಿತ್ರಿಸಿದ ಕಾರಂತರು, ಅವರ ಗಾಢ ಜೀವನ ಶ್ರದ್ಧೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಜೀವನ ಮೌಲ್ಯವಿರದವರು ಹುಸಿ ಬದುಕು ಬಾಳುತ್ತಾರೆ ಹಾಗೂ ಇವರು ಅಪಾಯಕಾರಿಗಳು ಎಂಬುದು ಕಾರಂತರ ಬೆಟ್ಟದ ಜೀವ ಕಾದಂಬರಿ ಪ್ರತಿಪಾದಿಸುತ್ತದೆ ಎಂದರು. ಕಾರಂತರಿಂದ ಮಾತ್ರ ಪುತ್ತೂರಿನ ಬಾಲವನದಲ್ಲಿ ಕುಳಿತು ಕನ್ನಡದ ಕಿಟಕಿಯ ಮೂಲಕ ಜಗತ್ತನ್ನೇ ನೋಡಲು ಸಾಧ್ಯ. ಅವರ ಸಾಂಸ್ಕೃತಿಕ ಒಲವುಗಳು ಅವರನ್ನು ಸದಾ ಕಾಲ ಸ್ಮರಣೀಯರನ್ನಾಗಿಸುತ್ತದೆ ಎಂದರು.
'ಡಾ ಶಿವರಾಮ ಕಾರಂತರ ಸಾಂಸ್ಕೃತಿಕ ಒಲವುಗಳು' ಕುರಿತು ಎಂ ಡಿ ಸುದರ್ಶನ ಅವರು ಪ್ರಬಂಧ ಮಂಡಿಸಿದರು. ಡಾ ವರದರಾಜ ಚಂದ್ರಗಿರಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಉಪಸ್ಥಿತರಿದ್ದರು. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷರಾ ಪ್ರೊ. ಎಂ ಎಲ್ ಸಾಮಗ ಕಾರ್ಯಕ್ರಮ  ಉದ್ಘಾಟಿಸಿದರು. ಡಾ ರಾಜೇಶ್ ಬೆಜ್ಜಂಗಳ ನಿರ್ವಹಿಸಿದರು. ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸುವ ಹೊಣೆ ಹೊತ್ತ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರು ಹಾಗೂ ಬಾಲವನ ಸಮಿತಿ ಅಧ್ಯಕ್ಷರೂ  ಪ್ರಸನ್ನ ಉಪಸ್ಥಿತರಿದ್ದರು.
ಸಮಾರಂಭದ ಅಂಗಳದಲ್ಲಿ  ಮೋಹನ ಸೋನ ಮತ್ತು ತಂಡದವರ ಮಾರ್ಗದರ್ಶನದಲ್ಲಿ ಸುಮಾರು 22 ಮಕ್ಕಳ ಕಲಾ ಪ್ರದರ್ಶನ ಆಸಕ್ತರ ಮನ ಸೂರೆಗೊಂಡಿತು. ಪ್ರಾಕೃತಿಕ ಬಣ್ಣವನ್ನು ಮಕ್ಕಳು ಸ್ವತ: ತಯಾರಿಸಿ ತಮ್ಮ ಕಲಾಕೃತಿಗಳನ್ನು ರಚಿಸಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಅಪರಾಹ್ನ ಬೆಟ್ಟದ ಜೀವ ಚಲನಚಿತ್ರ ವೀಕ್ಷಣೆ ಮತ್ತು ನಿರ್ದೇಶಕ ಪಿ ಶೇಷಾದ್ರಿ ಅವರೊಂದಿಗೆ ಸಂವಾದ ಹಾಗೂ ಬಾಲವನ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸಾಂಸ್ಕೃತಿಕ ರಸಸಂಜೆಯನ್ನು ಆಯೋಜಿಸಲಾಗಿತ್ತು.