Friday, October 5, 2012

ಕೃಷಿ ಉತ್ತೇಜಿಸಲು ಜಾಗೃತಿ ಆಂದೋಲನ

ಮಂಗಳೂರು, ಅಕ್ಟೋಬರ್.05 :- ಜಿಲ್ಲೆಯಲ್ಲಿ ಕೃಷಿಯನ್ನು ಉತ್ತೇಜಿಸಲು ಹಾಗೂ ತಾಂತ್ರಿಕ ನೆರವಿನಿಂದ ಲಾಭದಾಯಕವಾಗಿ ಕೃಷಿ ನಡಸಲು ಹಾಗೂ ವಿನೂತನ ಆವಿಷ್ಕಾರಗಳನ್ನು ಪರಿಚಯಿಸಲು ದಕ್ಷಿಣ ಕನ್ನಡ ಕೃಷಿ ಇಲಾಖೆಯಿಂದ ಕೃಷಿ ಮಾಹಿತಿ ಮತ್ತು ಜಾಗೃತಿ ಆಂದೋಲನ ಸೋಮವಾರ ಬೆಳಗ್ಗೆ 10 ಗಂಟೆಗೆ ಕಂಕನಾಡಿಯ ಮೀನುಗಾರಿಕಾ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಕ್ರಮ ಉದ್ಘಾಟಿ ಸುವರು ಎಂದು ಜಂಟಿ ಕೃಷಿ ನಿರ್ದೇ ಶಕರಾದ ಪಿ ಮೋಹನ್ ಅವರು ವಾರ್ತಾ ಇಲಾಖೆ ಯಲ್ಲಿ ಆಯೋಜಿ ಸಲಾದ ಪತ್ರಿಕಾ ಗೋಷ್ಠಿ ಯಲ್ಲಿ ವಿವ ರಿಸಿದರು.
ಭತ್ತದಕೃಷಿ ಪ್ರೋತ್ಸಾಹಿಸಲು ಕೇರಳ ಮಾದರಿ ಪ್ಯಾಕೇಜ್ ನ್ನು ಇಲ್ಲಿ ಪರಿಚಯಿಸುವಂತೆ ಪ್ರಸ್ತಾವನೆ ಕಳುಹಿಸಲಾಗಿದೆ. ಜಿಲ್ಲೆಯಲ್ಲಿ ಮಳೆ ವಿಳಂಬದಿಂದ ಒಂದುಸಾವಿರ ಹೆಕ್ಟೇರ್ ಬಿತ್ತನೆ ಕಳೆದ ಸಾಲಿಗೆ ಹೋಲಿಸಿದರೆ ಕಡಿಮೆಯಾಗಿದೆ. ಸವಾಲು ಬೃಹತ್ ಆಗಿದ್ದು, ಕೃಷಿಗೆ ಪೂರಕ ವಾತಾವರಣ ಸೃಷ್ಟಿಸಲು ಹಾಗೂ ಪ್ರೋತ್ಸಾಹಿಸಲು ಇಲಾಖೆ ಯತ್ನಿಸುತ್ತಿದೆ ಎಂದರು.
ಜಿಲ್ಲೆಯ 16 ಕೃಷಿ ಸಹಕಾರಿ ಸಂಘಗಳಿಗೆ ತಲಾ 10 ಲಕ್ಷ ರೂಪಾಯಿ ಸಹಾಯಧನ ಒದಗಿಸಿ ಕೃಷಿ ಯಂತ್ರಗಳನ್ನು ರೈತರು ಕೊಳ್ಳುವಂತೆ ನೋಡಿಕೊಳ್ಳಲಾಗುವುದು ಎಂದರು. ಕಾರ್ಯಕ್ರಮದಂದು ಮಾಹಿತಿಗಳನ್ನು ಹಲವು ಮಾದರಿಗಳಲ್ಲಿ ರೈತರಿಗೆ ನೀಡಲಾಗುವುದು ಎಂದರು.