Saturday, July 30, 2011

ಶೇಕಡ 98ರಷ್ಟು ಆಸ್ತಿ ತೆರಿಗೆ ಸಂಗ್ರಹ ಮನಾಪ ಸಾಧನೆ: ವಿಜಯಪ್ರಕಾಶ್

ಮಂಗಳೂರು,ಜುಲೈ.30:ಸ್ವಯಂಘೋಷಿತ ಆಸ್ತಿ ತೆರಿಗೆ ಜಾರಿ ಬಳಿಕ ತೆರಿಗೆ ವಸೂಲಿಯಲ್ಲಿ ಶೇ.98 ಪ್ರಗತಿ ಸಾಧಿಸಿರುವ ರಾಜ್ಯದ ಏಕೈಕ ಪಾಲಿಕೆ ಎಂಬ ಹೆಗ್ಗಳಿಕೆಗೆ ಮಂಗಳೂರು ಮಹಾನಗರಪಾಲಿಕೆ ಪಾತ್ರವಾಗಿದೆ ಎಂದು ಪಾಲಿಕೆ ಆಯುಕ್ತರಾದ ಡಾ.ಕೆ.ಎನ್.ವಿಜಯಪ್ರಕಾಶ್ ಹೇಳಿದರು.ಅವ ರಿಂದು ಕುಡ್ಸೆಂಪ್ ಕಚೇರಿ ಯಲ್ಲಿ ಕರೆದ ಪತ್ರಿಕಾ ಗೋಷ್ಠಿ ಯಲ್ಲಿ ತಮ್ಮ ಅವಧಿ ಯಲ್ಲಿ ಪಾಲಿಕೆ ಯಲ್ಲಾದ ಅಭಿ ವೃದ್ಧಿಯ ಬಗ್ಗೆ ತೃಪ್ತಿ ವ್ಯಕ್ತ ಪಡಿಸಿ ದರಲ್ಲದೆ, ಸಾಧನೆಗೆ ಪೂರಕ ನೆರವು ನೀಡಿದ ಪ್ರತಿ ಯೊಬ್ಬ ರಿಗೂ ಧನ್ಯ ವಾದ ಗಳನ್ನು ತಿಳಿ ಸಿದರು.
ಮಂಗಳೂರು ಮಹಾನಗರಪಾಲಿಕೆ ಹಲವು ಪ್ರಥಮಗಳಿಗೆ ಮುನ್ನುಡಿ ಬರೆದಿದೆ. ಇನ್ನೂ ಕ್ರಮಿಸಬೇಕಾದ ಹಾದಿ ಬಹಳವಿದೆ. ಆದರೆ ತಮ್ಮ ವ್ಯಾಪ್ತಿಯಲ್ಲಿ ಕ್ರಮಿಸಿರುವ ಹಾದಿಯ ಬಗ್ಗೆ ಸಮಾಧಾನವಿದೆ ಎಂದರು. ಪಾಲಿಕೆಯ ವಾರ್ಷಿಕ ಆದಾಯ ರೂ. 9.65 ಕೋಟಿ ಇತ್ತು. ಎಸ್ಎಎಸ್ ಜಾರಿಗೊಂಡ ಬಳಿಕ ಅದು ರೂ. 38.85 ಕೋಟಿಗಳಿಗೆ ಏರಿಕೆಯಾಗಿದೆ. ಎಂದರು.
ಕಳೆದ ಎರಡು ವರ್ಷಗಳ ಅವಧಿಯಲ್ಲಿ ಪಾಲಿಕೆಗೆ ಐದು ಪ್ರಶಸ್ತಿಗಳು ಬಂದಿವೆ. ಇದು ಜನತೆ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ಸಾಧ್ಯವಾಗಿದೆ ಎಂದು ಹೇಳಿದ ಆಯುಕ್ತರು, ಘನತ್ಯಾಜ್ಯ ನಿರ್ವಹಣೆಗೂ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಉರ್ವದಲ್ಲಿ ತ್ಯಾಜ್ಯ ಬಳಸಿ ಬಯೋ ಗ್ಯಾಸ್ ಪ್ಲಾಂಟ್ ಆರಂಭಿಸಲಾಗುತ್ತಿದೆ. ಮುಂಬೈಯ ಬಾಬಾ ಅಣು ಸಂಶೋಧನಾ ಸಂಸ್ಥೆ ಈ ಯೋಜನೆಯಲ್ಲಿ ಪಾಲಿಕೆ ಜೊತೆ ಕೈ ಜೋಡಿಸಿದೆ. ಶಕ್ತಿನಗರದಲ್ಲಿ ಎರಹುಳು ಗೊಬ್ಬರ ತಯಾರಿಕಾ ಘಟಕ ನಿರ್ಮಾಣಗೊಳ್ಳುತ್ತಿದೆ. ನಗರವನ್ನು ಹಸುರೀಕರಣಗೊಳಿಸುವುದಕ್ಕಾಗಿ ಕಳೆದ ಸಾಲಿನಲ್ಲಿ 18 ಸಾವಿರ ಗಿಡಗಳನ್ನು ನೆಡಲಾಗಿದೆ. ಈ ಸಲವೂ ಅರಣ್ಯ ಇಲಾಖೆಯ ಸಹಯೋಗ ದೊಂದಿಗೆ 22 ಸಾವಿರ ಗಿಡಗಳನ್ನು ನೆಡಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಟಿಡಿಆರ್ ಜಾರಿಗೊಳಿಸಿ ರಸ್ತೆಗಳನ್ನು ವಿಸ್ತರಿಸಿದ ಮತ್ತು ಅಭಿವೃದ್ಧಿ ಪಡಿಸಿದ ಕೀರ್ತಿ ಮಂಗಳೂರು ಮಹಾನಗರ ಪಾಲಿಕೆಗೆ ಇದೆ. ಟಿಡಿಆರ್ ನಿಂದಾಗಿ ಸುಮಾರು ರೂ.60 ಕೋಟಿ ಮೌಲ್ಯದ 12 ಎಕರೆ ಜಮೀನನ್ನು ನಗರದ ಜನತೆಯಿಂದ ಪಡೆಯಲಾಗಿದೆ ಎಂದು ಅವರು ವಿವರಿಸಿದರು.
ರುದ್ರಭೂಮಿ ಅಭಿವೃದ್ಧಿ
ರೂ. 45 ಲಕ್ಷ ವೆಚ್ಚದಲ್ಲಿ ನಂದಿಗುಡ್ಡೆ, ರೂ.35 ಲಕ್ಷ ವೆಚ್ಚದಲ್ಲಿ ಶಕ್ತಿನಗರ ಹಾಗೂ ರೂ. 20 ಲಕ್ಷದಲ್ಲಿ ಸುರತ್ಕಲ್ ಹಿಂದು ರುದ್ರಭೂಮಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಸ್ಮಶಾನಗಳಿಗೂ ತಮ್ಮ ಅವಧಿಯಲ್ಲಿ ಆದ್ಯತೆ ನೀಡಿದೆ. ನಗರದ ಮೂರು ಕಡೆಗಳಲ್ಲಿ ಸಮಗ್ರ ಸೇವಾಕೇಂದ್ರ `ಮಂಗಳೂರು ವನ್' ತೆರೆಯಲಾಗಿದೆ. ಹಿರಿಯ ನಾಗರಿಕರಿಗೆ ಮತ್ತು ಅಂಗವಿಕಲರಿಗೆ ಸಹಾಯಕ್ಕಾಗಿ `ಆಶಾ ಚಾವಡಿ'ಯನ್ನು ಸ್ಥಾಪಿಸಲಾಗಿದೆ. ಕುಂದು ಕೊರತೆಗಳ ದಾಖಲಾತಿಗಾಗಿ ಮತ್ತು ಸಾರ್ವಜನಿಕರ ಮಾಹಿತಿಗಾಗಿ `ನಗರ ಮಿತ್ರ' ಕೌಂಟರ್ನ್ನು ತೆರೆದು ಪಾಲಿಕೆಯನ್ನು ಸಾರ್ವಜನಿಕರಿಗೆ ಮುಕ್ತ ಕಚೇರಿ ಯನ್ನಾಗಿ ಮಾಡಲಾಗಿದೆ ಎಂದು ನುಡಿದರು. ಮಹಾನಗರಪಾಲಿಕೆಯ ಆಡಳಿತ ಮಂಡಳಿ, ಜನತೆಯ ಸಹಕಾರವನ್ನು ಸ್ಮರಿಸಿದ ಅವರು, ಆಗಸ್ಟ್ ಒಂದರಂದು ಪೂರ್ವಾಹ್ನ ದ.ಕ.ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳುವುದಾಗಿ ತಿಳಿಸಿದರು.
ಪಾಕ್ರ್ ಗಳ ಅಭಿವೃದ್ಧಿಗೆ ಕ್ರಮ: ಮನಪಾ ಪಾರ್ಕ್ ಗಳ ಅಭಿವೃದ್ಧಿಗೆ ಕೈಗೊಂಡಿರುವ ಶ್ರಮಗಳನ್ನು ವಿವರಿಸಿದ ಅವರು, ಗಾಂಧಿನಗರದಲ್ಲಿ ವಿಶೇಷ ಮಕ್ಕಳಿಗಾಗಿ ಪಾರ್ಕನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಅಂತಿಮ ಹಂತದಲ್ಲಿದೆ. ಹ್ಯಾಟ್ ಹಿಲ್ ನಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಉದ್ಯಾನವನವನ್ನು ರೂಪಿಸಲಾಗಿದೆ. ಶೀಘ್ರ ಇದರ ಉದ್ಘಾಟನೆ ನೆರವೇರಲಿದೆ ಎಂದರು.

Friday, July 29, 2011

'ಶಾಲಾ ಕೆಲಸಗಳಿಗೆ ವಿದ್ಯಾರ್ಥಿಗಳನ್ನು ಉಪಯೋಗಿಸದಿರಿ'

ಮಂಗಳೂರು,ಜುಲೈ.29: ಜಿಲ್ಲೆಯಲ್ಲಿರುವ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಶಾಲಾ ಕೆಲಸಗಳಿಗೆ (ಕಸಗುಡಿಸುವುದು/ ಶೌಚಾಲಯ ತೊಳೆಯುವುದು/ಶಿಕ್ಷಕರ ಖಾಸಗಿ ಕೆಲಸಗಳನ್ನು ಮಾಡುವುದು) ವಿದ್ಯಾರ್ಥಿಗಳನ್ನು ಉಪಯೋಗಿಸಿಕೊಂಡು ಕೆಲಸ ನಿರ್ವಹಿಸುತ್ತಿರುವುದು ಸಾರ್ವಜನಿಕ ಶಿಕ್ಷಣ ಇಲಾಖೆಯ ಗಮನಕ್ಕೆ ಬಂದಿದ್ದು ಶಾಲೆಗಳಲ್ಲಿ ಕೆಲಸಗಳಿಗೆ ವಿದ್ಯಾರ್ಥಿಗಳನ್ನು ಉಪಯೋಗಿಸಿಕೊಳ್ಳುವುದನ್ನು ನಿಷೇಧಿಸಿ ವಿದ್ಯಾಂಗ ಇಲಾಖೆಯ ಉಪನಿರ್ದೇಶಕರಾದ ಮೊಸೆಸ್ ಜಯಶೇಖರ್ ಅವರು ಆದೇಶ ಹೊರಡಿಸಿದ್ದಾರೆ.
ಮಕ್ಕಳ ಹಕ್ಕುಗಳ ಅಧಿನಿಯಮ 2009ರ ನಿಯಮ 17ರಲ್ಲಿ ಯಾವ ಮಗುವನ್ನು ದೈಹಿಕ ದಂಡನೆ ಅಥವಾ ಮಾನಸಿಕ ಕಿರುಕುಳಕ್ಕೆ ಗುರಿಪಡಿಸಿದಲ್ಲಿ ಇದಕ್ಕೆ ಕಾರಣರಾದವರನ್ನು ಶಿಸ್ತು ಕ್ರಮಕ್ಕೆ ಒಳಪಡಿಸತಕ್ಕದ್ದು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಆದುದರಿಂದ ಇನ್ನು ಮುಂದೆ ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳಲ್ಲಿ ಶಾಲಾ ಕೆಲಸಗಳಿಗೆ ವಿದ್ಯಾರ್ಥಿಗಳನ್ನು ಉಪಯೋಗಿಸಬಾರದು. ಹಾಗೂ ದೂರುಗಳು ಬಂದಲ್ಲಿ ಸಂಬಂಧಿಸಿದ ಶಾಲಾ ಮುಖ್ಯಸ್ಥರು, ಆಡಳಿತಮಂಡಳಿಯ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯಸ್ಥರಿಗೆ ಸುತ್ತೋಲೆಯನ್ನು ಕಳುಹಿಸಲಾಗಿದೆ.

Wednesday, July 27, 2011

ದ.ಕ.ಪತ್ರಕರ್ತರ ಸಂಘದಿಂದ ವನಮಹೋತ್ಸವ

ಮಂಗಳೂರು,ಜುಲೈ.27:ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಮಂಗಳೂರು ಪ್ರೆಸ್ ಕ್ಲಬ್ ಆಶ್ರಯದಲ್ಲಿ ನಗರದ ಕದ್ರಿ ಉದ್ಯಾನವನದಲ್ಲಿ ವನಮಹೋತ್ಸವ ಆಚರಣೆ ನಡೆಯಿತು.ಉದ್ಯಾ ನವ ನದಲ್ಲಿ ಗಿಡ ನೆಡುವ ಮೂಲಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತ ನಾಡಿದ ಮಂಗ ಳೂರು ಮಹಾ ನಗರ ಪಾಲಿಕೆ ಆಯುಕ್ತ ಡಾ.ಎನ್. ವಿಜಯ ಪ್ರಕಾಶ್ ಅವರು `ಪತ್ರ ಕರ್ತರು ಪರಿ ಸರ ಸಂರ ಕ್ಷಣೆಯ ಸಂ ದೇಶ ನೀ ಡಲು ಮುಂದಾ ಗಿರು ವುದು ಸ್ತು ತ್ಯಾರ್ಹ. ನಗರ ದಲ್ಲಿ ರಸ್ತೆ ಅಗಲ ಮಾಡುವ ಸಂ ದರ್ಭ ಅನಿ ವಾರ್ಯ ವಾಗಿ ಕೆಲವು ಮರ ಗಳನ್ನು ಕಡಿಯ ಬೇಕಾ ಯಿತು. ಇದನ್ನು ಸರಿದೂ ಗಿಸಲು ಕಳೆದ ವರ್ಷ ನಗರ ದಾದ್ಯಂತ ಸುಮಾರು 20 ಸಾವಿರ ಗಿಡ ಗಳನ್ನು ನೆಡ ಲಾಗಿದೆ. ಈ ವರ್ಷ ಮತ್ತೆ ಅರಣ್ಯ ಇಲಾಖೆಯ ಸಹಯೋಗದಲ್ಲಿ 22 ಸಾವಿರ ಗಿಡ ನೆಡುವ ಕಾರ್ಯ ಆರಂಭಗೊಂಡಿದ್ದು, ಒಂದು ತಿಂಗಳ ಒಳಗಾಗಿ ಈ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.ಮುಖ್ಯ ಅತಿಥಿ ಮಂಗಳೂರು ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೊ ಮಾತನಾಡಿ ` ಹಸಿರು ಕವಚ ಹಸಿರು ಮಂಗಳೂರು ಅಭಿಯಾನದ ಮೂಲಕ ನಗರದ ಪರಿಸರವನ್ನು ಇನ್ನಷ್ಟು ಸುಂದರಗೊಳಿಸಲಾಗುತ್ತಿದೆ. ಕದ್ರಿ ಉದ್ಯಾನವನದಲ್ಲಿ 200ಕ್ಕೂ ಅಧಿಕ ಮರಗಳನ್ನು ನೆಡುವ ಯೋಜನೆಯಿದೆ'ಎಂದರು.
ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ,ಮಹಾನಗರ ಪಾಲಿಕೆಯ ಪರಿಸರ ಅಭಿಯಂತರ ಮಧು ಮನೋಹರ್ ಉಪಸ್ಥಿತರಿದ್ದರು. ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಬಿ.ಹರೀಶ್ ರೈ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ನಾಯಕ್ ಇಂದಾಜೆ ವಂದಿಸಿದರು.

ಪಣಂಬೂರು ಮತ್ತು ತಣ್ಣೀರುಬಾವಿ ಕಡಲತೀರದಲ್ಲಿ ಪ್ಲಾಸ್ಟಿಕ್ ನಿಷೇಧ

ಮಂಗಳೂರು,ಜುಲೈ.27:ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಣಂಬೂರು ಮತ್ತು ತಣ್ಣೀರುಬಾವಿ ಕಡಲ ತೀರದ ಪ್ರದೇಶಗಳಲ್ಲಿ ಬಳಸಿ ಎಸೆಯಲ್ಪಟ್ಟ ಪ್ಲಾಸ್ಟಿಕ್ ವಸ್ತುಗಳು ಮತ್ತು ತ್ಯಾಜ್ಯಗಳು ಕಡಲ ಕಿನಾರೆಯ ಪರಿಸರಕ್ಕೆ ಹಾನಿ ಮಾಡುತ್ತಿದ್ದು,ಇದನ್ನು ಮನಗಂಡ ಮಹಾನಗರ ಪಾಲಿಕೆ ಆಯುಕ್ತರು ಈ ವಲಯವನ್ನು ಪ್ಲಾಸ್ಟಿಕ್ ನಿಷೇಧ ಪ್ರದೇಶವೆಂದು ಘೋಷಿಸಿ ದಿನಾಂಕ 15-7-11 ರಂದು ಆದೇಶ ಹೊರಡಿಸಿದ್ದಾರೆ.ನಿಷೇಧಿತ ಪ್ರದೇಶದಲ್ಲಿ ಯಾವುದೇ ವ್ಯಕ್ತಿ ಯಾವುದೇ ರೀತಿಯ ಪ್ಲಾಸ್ಟಿಕ್ ಕವರುಗಳು,ಲೋಟಗಳು,ತಟ್ಟೆಗಳನ್ನು ಕ್ಯಾರಿ ಬ್ಯಾಗ್ಗಳ ಉಪಯೋಗ,ದಾಸ್ತಾನು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಅಲ್ಲದೆ ಪ್ರವೇಶ ದ್ವಾರದಲ್ಲಿ ತನಿಖಾ ಠಾಣೆಯನ್ನು ನಿರ್ಮಿಸಿ,ಪ್ಲಾಸ್ಟಿಕ್ ಕವರುಗಳು,ತಟ್ಟೆಗಳು,ಕ್ಯಾರಿಬ್ಯಾಗ್ ಗಳು ಇತ್ಯಾದಿ ಒಳಗೆ ಒಯ್ಯದಂತೆ ತಡೆದು ಮುಟ್ಟುಗೋಲು ಹಾಕಿಕೊಳ್ಳುವುದು,ಸೂಚನಾ ಫಲಕಗಳನ್ನು ಅಳವಡಿಸುವುದು. ಈ ಆದೇಶವನ್ನು ಉಲ್ಲಂಘಿಸಿದವರಿಂದ ನಿಯಮದಂತೆ ದಂಡ ವಸೂಲಿ ಮಾಡತಕ್ಕದ್ದು.ಸಣ್ಣ ಪ್ರಮಾಣದ ದಾಸ್ತಾನಿಗೆ ರೂ.200 ದಂಡ ಮತ್ತು ದೊಡ್ಡ ಪ್ರಮಾಣದ ದಾಸ್ತಾನಿಗೆ ರೂ.1000 ದಂಡವನ್ನು ವಸೂಲಿ ಮಾಡಲಾಗುವುದೆಂದು ಮಹಾನಗರಪಾಲಿಕೆ ಆಯುಕ್ತರು ತಿಳಿಸಿರುತ್ತಾರೆ.

Tuesday, July 26, 2011

ಎಲ್ ಪಿ ಜಿ ದಾಖಲೆ ಸಲ್ಲಿಕೆಗೆ ಎಂಟು ಕೌಂಟರ್

ಮಂಗಳೂರು,ಜುಲೈ.26:ಎಲ್ ಪಿ ಜಿ ಗ್ರಾಹಕರು ತಮ್ಮ ಸಂಪರ್ಕ ಸಿಂಧುವೇ ಅಸಿಂಧುವೇ ಎಂಬ ಮಾಹಿತಿ ಪಡೆಯಲು ಅನುಕೂಲವಾಗುವಂತೆ ಆಹಾರ ಇಲಾಖೆಯಲ್ಲಿ ಹೆಚ್ಚಿನ ಕೌಂಟರ್ ಗಳನ್ನು ತೆರೆಯಲು ಜಿಲ್ಲಾಧಿಕಾರಿ ಡಾ ಎನ್ ಎಸ್ ಚೆನ್ನಪ್ಪ ಗೌಡ ಅವರು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇಂದು ಜಿಲ್ಲಾ ಧಿಕಾ ರಿಗಳ ಕಚೇರಿ ಆವರ ಣದ ಲ್ಲಿರುವ ಆಹಾರ ಮತ್ತು ನಾಗ ರೀಕ ಸರಬ ರಾಜು ಇಲಾಖೆ ಜನ ರಿಂದ ಭರ್ತಿ ಯಾಗಿದ್ದು, ತಮ್ಮ ಎಲ್ ಪಿ ಜಿ ಸಂಪ ರ್ಕಗಳ ಮಾಹಿತಿ ಯನ್ನು ಪಡೆ ಯಲು ಜನರು ಸರತಿ ಸಾಲಿ ನಲ್ಲಿ ನಿಂತಿ ರುವು ದನ್ನು ಗಮನಿ ಸಿದ ಜಿಲ್ಲಾ ಧಿಕಾ ರಿಗಳು ಇಲಾ ಖೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಸಂದ ರ್ಭ ದಲ್ಲಿ ಕಡಿಮೆ ಕೌಂ ಟರ್ ಗಳನ್ನು ಗಮನಿಸಿ ನಾಲ್ಕ ರಿಂದ ಎಂಟ ಕ್ಕೆ ಹೆಚ್ಚಿ ಸಲು ಹಾಗೂ ಮಾಹಿತಿ ಕೌಂಟ ರ್ ನಲ್ಲಿ ಸೂಕ್ತ ಮಾಹಿತಿ ನೀ ಡಲು ಸೂಚನೆ ನೀಡಿ ದರು.ಜನ ಸಾಮಾ ನ್ಯರಿಗೆ ನೆರ ವಾಗಲು ಹಾಗೂ ಜನ ಜಂಗುಳಿ ತಪ್ಪಿಸುವ ದಿಸೆ ಯಲ್ಲಿ ವ್ಯವಸ್ಥೆ ಮಾಡ ಲಾಗಿದ್ದು, ಅಪ ರಾಹ್ನದ ವೇಳೆಗೆ ವ್ಯವಸ್ಥೆ ಸುಗಮವಾಯಿತು ಎಂದರು.
ಜನರಿಗೆ ದಾಖಲೆ ಸಲ್ಲಿಸಲು ಹಾಗೂ ಅಹವಾಲು ಆಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದ್ದು, ಜನರ ಸಮಸ್ಯೆಗೆ ಸ್ಪಂದಿಸಲಾಗುವುದು ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕರಾದ ಶರಣಬಸಪ್ಪ ಅವರು ಹೇಳಿದರು.

ಅಪಾರ್ಟ್ ಮೆಂಟ್ ಗಳಲ್ಲಿನ ಬಾಲಕಾರ್ಮಿಕರ ಮಾಹಿತಿಗೆ ಜಿಲ್ಲಾಧಿಕಾರಿ ಮನವಿ

ಮಂಗಳೂರು,ಜುಲೈ.26:ಮಂಗಳೂರಿನಲ್ಲಿ 173 ಕ್ಕೂ ಅಧಿಕ ಅಪಾರ್ಟಮೆಂಟ್ ಗಳಿದ್ದು ಬಹಳಷ್ಟು ಮನೆಗಳಲ್ಲಿ ಹೊರ ರಾಜ್ಯದ ಜನ ವಾಸವಿರುತ್ತಾರೆ. ಅವರುಗಳು ತಮ್ಮ ಮನೆಗೆಲಸಕ್ಕೆ 14 ವರ್ಷಗಳಿಗಿಂತ ಕಡಿಮೆ ವಯಸ್ಸಿನವರನ್ನು ನೇಮಿಸಿಕೊಂಡಿದ್ದಲ್ಲಿ ಅಂತಹವರ ಬಗ್ಗೆ ಸಹಾಯಕ ಕಾರ್ಮಿಕ ಅಧಿಕಾರಿಗಳಿಗಾಗಲಿ ಅಥವಾ ಜಿಲ್ಲಾಧಿಕಾರಿಗಳಿಗಾಗಲಿ ಮಾಹಿತಿ ನೀಡಬೇಕೆಂದು ಜಿಲ್ಲಾಧಿಕಾರಿ ಹಾಗೂ ಡಿಸ್ಟ್ರಿಕ್ಟ್ ಲೇಬರ್ ಪ್ರಾಜೆಕ್ಟ್ ಸೊಸೈಟಿಯ ಅಧ್ಯಕ್ಷರಾದ ಡಾ.ಎನ್.ಎಸ್.ಚನ್ನಪ್ಪಗೌಡ ಅವರು ತಿಳಿಸಿದ್ದಾರೆ. ಅವರು ಇಂದು ತಮ್ಮ ಕಚೇರಿಯಲ್ಲಿ ಡಿಸ್ಟ್ರಿಕ್ಟ್ ಚೈಲ್ಡ್ ಲೇಬರ್ ಪ್ರಾಜೆಕ್ಟ್ ಸೊಸೈಟಿ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.14 ವರ್ಷಕ್ಕಿಂತ ಚಿಕ್ಕ ಮಕ್ಕಳನ್ನು ಮನೆಗೆಲಸಕ್ಕೆ ಇಟ್ಟುಕೊಳ್ಳುವುದು ಅಪರಾಧ. ಆದ್ದರಿಂದ ಅಪಾರ್ಟ್ ಮೆಂಟುಗಳಲ್ಲಿ ವಾಸಿಸುವವರು ಈ ಬಗ್ಗೆ ಜಾಗೃತರಾಗಿ ನೆರೆಮನೆಗಳಲ್ಲಿ ಇಂತಹ ಬಾಲಕಾರ್ಮಿಕರನ್ನು ಕಂಡಲ್ಲಿ ಸಹಾಯಕ ಕಾರ್ಮಿಕ ಆಯುಕ್ತರಿಗಾಗಲೀ ಅಥವಾ ಜಿಲ್ಲಾಧಿಕಾರಿಗಳಿಗಾಗಲೀ ತಿಳಿಸುವಂತೆ ಅಪಾರ್ಟ್ ಮೆಂಟ್ ರವರಿಗೆ ಸೂಚಿಸಿದರು.ಸಭೆಯಲ್ಲಿ ಜಿಲ್ಲಾ ಕಾರ್ಮಿಕಾಧಿಕಾರಿ ನಾಗೇಶ್,ಮಹಾನಗರಪಾಲಿಕೆ ಆಯುಕ್ತ ಡಾ.ವಿಜಯ ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಕಳೆದ 4 ವರ್ಷಗಳಲ್ಲಿ 16424 ತಪಾಸಣೆ ಮಾಡಿ 30 ಬಾಲಕಾರ್ಮಿಕರ ಪತ್ತೆ:ಬಾಲಕಾರ್ಮಿಕ ಪದ್ದತಿ ನಿರ್ಮೂಲನಾ ಕ್ರಿಯಾ ಯೋಜನೆ ಅನುಷ್ಠಾನದನ್ವಯ ಜಿಲ್ಲೆಯಲ್ಲಿ 2007-08 ರಿಂದ 2010-11 ರ ವರೆಗೆ ಕಾಮಿಕ ಇಲಾಖಾಧಿಕಾರಿಗಳು ಹಾಗೂ ಇತರ ಇಲಾಖಾಧಿಕಾರಿಗಳು ಒಟ್ಟು 16424 ತಪಾಸಣೆಗಳನ್ನು ,ನಡೆಸಿ 30 ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಲಾಗಿದೆಯೆಂದು ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪಗೌಡ ತಿಳಿಸಿದ್ದಾರೆ. ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನಾ ಕ್ರಿಯಾ ಯೋಜನೆ ಅನುಷ್ಠಾನ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪತ್ತೆ ಹಚ್ಚಲಾದ 30 ಬಾಲಕಾರ್ಮಿಕರ ಪುನರ್ ವಸತಿ ಕಲ್ಪಿಸಲಾಗಿದೆ. ಬಾಲಕಾರ್ಮಿಕರಿಗೆ ಪುನರ್ ವಸತಿ ಕಲ್ಪಿಸುವ ನಿಧಿಗಾಗಿ ಮಾಲೀಕರಿಂದ ಒಟ್ಟು 2,25,000/- ರೂ.ಗಳ ನಿಧಿ ವಸೂಲಿ ಮಾಡಲಾಗಿದೆ
2011 ನೇ ಮೇ ಮಾಹೆಯಲ್ಲಿ ಮಂಗಳೂರಿನ ಬಂದರಿನಲ್ಲಿರುವ ಧಕ್ಕೆಯಲ್ಲಿ ಮೂರು ಬಾಲಕಾರ್ಮಿಕರನ್ನು ಪತ್ತೆಹಚ್ಚಿ ಕೆಲಸದಿಂದ ವಿಮುಕ್ತಿಗೊಳಿಸಿ ಶಾಲೆಗೆ ದಾಖಲಿಸಲಾಗಿದೆ ಎಂದು ಸಹಾಯಕ ಕಾರ್ಮಿಕ ಆಯುಕ್ತರಾದ ವೆಂಕಟೇಶ್ ಅಪ್ಪಯ್ಯ ಶಿಂದಿಹಟ್ಟಿ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಸರ್ಕಾರಿ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಕಲಿಯುತ್ತಿರುವ ಪೋಷಕರಿಂದ ತಮ್ಮ ಮನೆಗಳಲ್ಲಿ/ಅಂಗಡಿಗಳಲ್ಲಿ ಬಾಲಕಾರ್ಮಿಕರನ್ನು ನೇಮಿಸಿ ಕೊಂಡಿಲ್ಲ ಎಂಬ ಘೋಷಣಾ ಪತ್ರ ಪಡೆದು ಜಿಲ್ಲಾಧಿಕಾರಿಗಳಿಗೆ ದೃಢೀಕರಣ ನೀಡಬೇಕು ಎಂದು ಈಗಾಗಲೇ ತಿಳಿಸಲಾಗಿದ್ದು, ಜಿಲ್ಲೆಯ 913 ಶಾಲಾ ಕಾಲೇಜುಗಳಿದ್ದು ಈ ರೀತಿ ದೃಢೀಕರಣ ನೀಡಿದವರು ಹಲವರು ಮಾತ್ರ. ಆದ್ದರಿಂದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳವರು ಕೂಡಲೇ ದೃಢೀಕರಣ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಪುತ್ತೂರು ಉಪವಿಭಾಗಾಧಿಕಾರಿ ಡಾ.ಹರೀಶ ಕುಮಾರ್ ,ಕಾರ್ಮಿಕ ಅಧಿಕಾರಿ ನಾಗೇಶ್ ಮುಂತಾದವರು ಸಭೆಯಲ್ಲಿ ಹಾಜರಿದ್ದರು.

ಅಪಾರ್ಟ್ ಮೆಂಟ್ ಗಳ ಘನತ್ಯಾಜ್ಯ ವಿಲೆಗೆ ಪ್ಲಾಸ್ಟಿಕ್ ನಿಷಿದ್ಧ : ಜಿಲ್ಲಾಧಿಕಾರಿ

ಮಂಗಳೂರು,ಜುಲೈ.26:ಮಂಗಳೂರು ನಗರದಲ್ಲಿರುವ 173 ಕ್ಕೂ ಹೆಚ್ಚಿನ ಬಹುಮಹಡಿ ವಸತಿ ಸಮುಚ್ಛಯ ಅಪಾರ್ಟ್ ಮೆಂಟಿನವರು ಇನ್ನು ಮುಂದೆ ಘನತ್ಯಾಜ್ಯ ವಸ್ತುಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ವಿಲೇ ಮಾಡುವುದನ್ನು ನಿಷೇಧಿಸಿದೆ ಎಂದು ದ.ಕ. ಜಿಲ್ಲಾಧಿಕಾರಿ ಹಾಗೂ ಡಿಸ್ಟ್ರಿಕ್ಟ್ ಚೈಲ್ಡ್ ಲೇಬರ್ ಪ್ರಾಜೆಕ್ಟ್ ಸೊಸೈಟಿಯ ಅಧ್ಯಕ್ಷರಾದ ಡಾ.ಎನ್.ಎಸ್.ಚನ್ನಪ್ಪ ಗೌಡ ತಿಳಿಸಿದ್ದಾರೆ.ಅಪಾರ್ಟ್ ಮೆಂಟ್ ವಾಸಿಗಳು ತಮ್ಮಲ್ಲಿ ಸಂಗ್ರಹವಾಗುವ ಘನತ್ಯಾಜ್ಯ ವಸ್ತುಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಎಸೆಯುವುದರ ಬದಲು ಮಹಾನಗರಪಾಲಿಕೆ ವಾಹನಗಳಿಗೆ ನೀಡುವ ಮೂಲಕ ವಿಲೇವಾರಿ ಮಾಡಬೇಕೆಂದರು.
ಸಭೆಯಲ್ಲಿ ಜಿಲ್ಲಾ ಕಾರ್ಮಿಕಾಧಿಕಾರಿ ನಾಗೇಶ್,ಮಹಾನಗರಪಾಲಿಕೆ ಆಯುಕ್ತ ಡಾ.ವಿಜಯ ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.

ನಮ್ಮ ಭೂಮಿ ಸೀಮಿತ -ಜನಸಂಖ್ಯೆಯೂ ಸೀಮಿತವಾಗಿರಲಿ-ಡಾ.ಎನ್.ಎಸ್.ಚನ್ನಪ್ಪ ಗೌಡ

ಮಂಗಳೂರು,ಜುಲೈ.26:ಪ್ರಾಣಿ ಸಂಕುಲ ಮಾನವ,ಪಶು ಪಕ್ಷಿಗಳು ವಾಸಿಸಲು ಇರುವ ಭೂಮಿ ಸೀಮಿತ. ಆದರೆ ನಾವು ಮಾನವರು ಇತರೆಲ್ಲಾ ಪ್ರಾಣಿ ವರ್ಗಗಳಿಗಿಂತ ನಮ್ಮಲ್ಲಿ ವಿವೇಚನೆ ಇಲ್ಲದೆ ನಮ್ಮ ಜನಸಂಖ್ಯೆಯನ್ನು ಹೆಚ್ಚುಗೊಳಿಸುತ್ತಿದ್ದೇವೆ. ಇದರಿಂದಾಗಿ ಅತೀ ಶೀಘ್ರದಲ್ಲಿ ನಾವು ಇದರ ದುಷ್ಪರಿಣಾಮಗಳನ್ನು ಎದುರಿಸಬೇಕಾದೀತು.ಆದ್ದರಿಂದ ನಮ್ಮ ಭೂಮಿಗೆ ತಕ್ಕುದಾಗಿ ನಮ್ಮ ಜನಸಂಖ್ಯೆಯನ್ನು ನಿಯಂತ್ರಿಸೋಣ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪಗೌಡ ಅವರು ಜನತೆಗೆ ಕರೆ ನೀಡಿದ್ದಾರೆ.
ಅವರು ಇಂದು ದ.ಕ.ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೆನ್ಲಾಕ್ ಆಸ್ಪತ್ರೆ ಸಹಯೋಗದಲ್ಲಿ ವೆನ್ಲಾಕ್ ಮಕ್ಕಳ ಆಸ್ಪತ್ರೆ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಉದ್ಘಾಟಿಸಿ ಮಾತನಾಡುತ್ತಿದ್ದರು.
ನಮ್ಮ ಶೈಕ್ಷಣಿಕ ಮಟ್ಟ ಹೆಚ್ಚಿದರೆ ಜನಸಂಖ್ಯಾ ನಿಯಂತ್ರಣ ಸಾಧಿಸಬಹುದು,ಕುಟುಂಬ ಕಲ್ಯಾಣ ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಹಾಗೂ ಒಂದು ಕುಟುಂಬಕ್ಕೆ ಒಂದೇ ಮಗು ಸೂತ್ರ ಬದ್ದರಾದಾಗ ಮತ್ತು ಜನಸಂಖ್ಯೆ ನಿಯಂತ್ರಿಸಲು ಸಾಧ್ಯ ಎಂದರು. ಗ್ರಾಮೀಣ ಜನರಲ್ಲಿ ಜನಸಂಖ್ಯಾ ಸ್ಪೋಟಕ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಯು.ಟಿ.ಖಾದರ್ ಅವರು ತಿಳಿಸಿದ್ದಾರೆ.
`` ಜನಸಂಖ್ಯೆಯ ಸ್ಥಿರತೆಗಾಗಿ ನಾವೆಲ್ಲರೂ ಕೈ ಜೋಡಿಸೋಣ '' ಎಂಬ ವಿಷಯದ ಕುರಿತು ಜಿಲ್ಲಾ ಆರ್.ಸಿ.ಹೆಚ್.ಅಧಿಕಾರಿ ಡಾ.ರುಕ್ಮಿಣಿ ಅವರು ಮಾತನಾಡಿ ದಕ್ಷಿಣಕನ್ನಡ ಜಿಲ್ಲಾ ಜನಸಂಖ್ಯೆ 20,80,627 ಇವರಲ್ಲಿ ಮಹಿಳೆಯರು 10,51,048 ,ಪುರುಷರು 10,32,577 ಇಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು.ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ 502 ಮಹಿಳೆಯರು ಸಂತಾನಹರಣ ಚಿಕಿತ್ಸೆಗೆ ಒಳಪಟ್ಟಿದ್ದರೆ ಇದೇ ಅವಧಿಯಲ್ಲಿ ಸಂತಾನಹರಣ ಚಕಿತ್ಸೆಗೊಳಪಟ್ಟ ಪುರುಷರ ಸಂಖ್ಯೆ ಕೇವಲ 35 ಆಗಿದ್ದು,ರಾಜ್ಯದಲ್ಲಿ ಜಿಲ್ಲೆ 30 ನೇ ಸ್ಥಾನದಲ್ಲಿದೆ ಎಂದರು.
ಜನಸಂಖ್ಯಾ ಸ್ಪೋಟದಿಂದ ನಿರುದ್ಯೋಗ,ವಸತಿ,ಆಹಾರ ,ಬಟ್ಟೆ ಇವೇ ಮೊದಲಾದ ಇನ್ನು ಹಲವಾರು ಮೂಲಭೂತ ಸಮಸ್ಯೆಗಳು ನಮ್ಮನ್ನು ಕಾಡಲಿವೆ. ಇದರಿಂದ ದೇಶದ ಅಭಿವೃದ್ಧಿಗೆ ಮಹಾ ತೊಡಕಾಗಲಿದೆ. ಸಾಮಾಜಿಕ ಕ್ಷೊಭೆಯೂ ಉಂಟಾಗಲಿದೆ. ಆದ್ದರಿಂದ ನಾವು ಜನಸಂಖ್ಯೆ ನಿಯಂತ್ರಣ ಮಾಡಲೇ ಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶೈಲಜಾ ಭಟ್ ಅವರು ಮಾತನಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಓ.ಆರ್. ಶ್ರೀರಂಗಪ್ಪ ,ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಜ್ಯೋತಿ,ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸಂಗಮೇಶ್ವರ್ ಮುಂತಾದವರು ಭಾಗವಹಿಸಿದ್ದರು.

ಪಿಲಿಕುಳದಲ್ಲಿ ಆಟಿದ ಗತ್ತ್ -ಗಮ್ಮತ್ತು

ಮಂಗಳೂರು,ಜುಲೈ.26:ಪಿಲಿಕುಳದ ನಿಸರ್ಗಧಾಮದಲ್ಲಿ ತುಳುನಾಡಿನ ಕೃಷಿ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವನ್ನು ಪಡೆದ ಆಟಿ ತಿಂಗಳ ವಿಶಿಷ್ಟತೆಯ ಅನಾವರಣ ಕಾರ್ಯಕ್ರಮ ಆಟಿಡೊಂಜಿ ದಿನ ಸೋಮವಾರದಂದು ನಡೆಯಿತು. ಇಲ್ಲಿನ ಗುತ್ತಿನ ಮನೆಯ ಪರಿಸರದಲ್ಲಿ ಆಯೋಜಿದ್ದ ಕಾರ್ಯಕ್ರಮಕ್ಕೆ ಅತಿಥಿಗಳು ನೇಜಿ ನೆಡುವ ಮೂಲಕ ಚಾಲನೆ ನೀಡಿದರು. ಶಾಸಕ ರಾದ ಅಭಯ ಚಂದ್ರ ಜೈನ್, ಜಿಲ್ಲಾ ಧಿಕಾರಿ ಡಾ.ಚನ್ನಪ್ಪ ಗೌಡ, ಜಿಲ್ಲಾ ಪಂಚಾ ಯತ್ ಅಧ್ಯಕ್ಷೆ ಶೈಲಜ ಭಟ್, ಪಾಲಿಕೆ ಮೇ ಯರ್ ಪ್ರ ವೀಣ್, ಕ್ಯಾಪ್ಕೊ ಅಧ್ಯಕ್ಷ ಕೊಂ ಕೊಡಿ ಪದ್ಮ ನಾಭ ಭಟ್,ಜಿಲ್ಲಾ ಪಂಚಾ ಯತ್ ಸದಸ್ಯೆ ಯಶ ವಂತಿ ಆಳ್ವಾ,ಕನ್ನಡ ಸಾಹಿತ್ಯ ಪರಿ ಷತ್ ಜಿಲ್ಲಾ ಧ್ಯಕ್ಷ ಪ್ರ ದೀಪ್ ಕುಮಾರ್ ಕಲ್ಕೂರ,ಪಿಲಿ ಕುಳ ನಿಸರ್ಗ ಧಾಮದ ನಿರ್ದೇ ಶಕ ಜೆ. ಆರ್. ಲೋ ಬೊ, ಮಹಿಳಾ ಮಂಡ ಳಗಳ ಒಕ್ಕೂ ಟದ ಅಧ್ಯಕ್ಷೆ ವಿಜಯ ಲಕ್ಷ್ಮೀ ಶೆಟ್ಟಿ,ವಸಂತ ಕುಮಾರ್ ಪೆರ್ಲ ಮತ್ತಿ ತರ ಗಣ್ಯರು ಕಾರ್ಯ ಕ್ರಮ ದಲ್ಲಿ ಸಕ್ರೀ ಯವಾಗಿ ಪಾಲ್ಗೊಂ ಡರು.ಇದೇ ಸಂದರ್ಭ ದಲ್ಲಿ ಮಂಗ ಳೂರು ತಾಲೂಕು ಮಹಿಳಾ ಮಂಡ ಳಗಳ ಒಕ್ಕೂ ಟದ ಪ್ರಾಯೋ ಜಕತ್ವ ದಲ್ಲಿ ಮಾಡಿದ ಆಟಿ ತಿಂಗಳ ಬಗೆ ಬಗೆಯ ತಿಂಡಿ ತಿನಸು ಗಳಾದ ಪತ್ರೊಡೆ,ಕುಡುತ್ತ ಚಟ್ನಿ,ಪೆಲಕಾಯಿದ ಗಟ್ಟಿ ಗಾರಿಗೆ ,ಮೆಂತೆದ ಗಂಜಿ,ತೇಟ್ಲದ ಗಸಿ,ಹೀಗೆ ವೈವಿಧ್ಯಮಯ ಅಡುಗೆಗಳನ್ನು ಅಥಿತಿಗಳಿಗೆ ಉಣ ಬಡಿಸಿದರು.ಕವಿಗೊಷ್ಟಿ,ರಸಪ್ರಶ್ನೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Monday, July 25, 2011

ಆಗಸ್ಟ್ 15ರಿಂದ ಎಲ್ಲಾ ಗ್ರಾಮಗಳಲ್ಲಿ ಘನತ್ಯಾಜ್ಯ ವಿಲೇ ಕಡ್ಡಾಯ: ಜಿಲ್ಲಾಧಿಕಾರಿ ಚೆನ್ನಪ್ಪ ಗೌಡ

ಮಂಗಳೂರು,ಜುಲೈ.25: ಇದೇ ಆಗಸ್ಟ್ 15ರಿಂದ ಎಲ್ಲ ಗ್ರಾಮಗಳ ಕಸ ಆಯಾ ಗ್ರಾಮಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳು ಕಾರ್ಯಾರಂಭವಾಗ ಬೇಕು ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳು ಈ ನಿಟ್ಟಿನಲ್ಲಿ ಹೆಚ್ಚಿನ ಹೊಣೆ ಹೊರಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಹೇಳಿದರು.ಅವ ರಿಂದು ಜಿಲ್ಲಾ ಪಂಚಾ ಯತ್ ನ ನೇತ್ರಾ ವತಿ ಸಭಾಂ ಗಣ ದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ನೀರು ಮತ್ತು ನೈ ರ್ಮಲ್ಯ ಸಮಿತಿ ಸಭೆ ಅಧ್ಯ ಕ್ಷತೆ ವಹಿಸಿ ಮಾತ ನಾಡು ತ್ತಿದ್ದರು. ಸ್ವಚ್ಛತೆ ಸಂಬಂಧ ಹಲವು ಮಾದರಿ ಗಳನ್ನು ನೀಡಿ ರುವ ಹಾಗೂ ಪ್ರಶಸ್ತಿ ಯನ್ನು ಪಡೆ ದಿರುವ ದಕ್ಷಿಣ ಕನ್ನಡ ಜಿಲ್ಲೆ ಸ್ವಚ್ಛತೆ ಯಲ್ಲಿ ನಿರಂತ ರತೆ ಯನ್ನು ಸಾಧಿ ಸಲು ಕಾರ್ಯೋ ನ್ಮುಖ ವಾಗ ಬೇಕೆಂದ ಜಿಲ್ಲಾಧಿಕಾರಿಗಳು, ಘನತ್ಯಾಜ್ಯ ವಿಲೇವಾರಿ ಘಟಕಗಳ ಅನುಷ್ಟಾನ ಮತ್ತು ನಿರ್ವಹಣೆಯಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಗ್ರಾಮಪಂಚಾಯತ್ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಜಾಗದ ಸಮಸ್ಯೆ, ರಾತ್ರಿ ವೇಳೆ ಎಲ್ಲೆಂದರಲ್ಲಿ ಕಸ ಎಸೆದು ಹೋಗುವ ಬಗ್ಗೆ, ಮನೆಗಳಿಂದ ಕಸ ವಿಭಜನೆಯಾಗದೆ ಕಸ ವಿಭಜಿಸಲು ಪಡುತ್ತಿರುವ ತ್ರಾಸಗಳನ್ನು ಅಧಿಕಾರಿಗಳು ಸಭೆಯಲ್ಲಿ ವಿವರಿಸಿದರು. ನಿರ್ದಿಷ್ಟ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು ಸೂಕ್ತ ಪರಿಹಾರವನ್ನು ಸಭೆಯಲ್ಲಿ ಸೂಚಿಸಿದರು.
ಗ್ರಾಮಪಂಚಾಯತ್ ಗಳಲ್ಲಿ ನಿರ್ಮಿಸಲಾಗಿರುವ ಪ್ಲಾಸ್ಟಿಕ್ ಸೌಧಗಳನ್ನು ಈಗಿರುವ ಡಂಪ್ ಯಾರ್ಡಗಳನ್ನಾಗಿ ಪರಿವರ್ತಿಸದೆ ಸದ್ಬಳಕೆ ಮಾಡಿದರೆ ಆ ಪ್ಲಾಸ್ಟಿಕ್ ವಿಲೇ ಹೊಣೆಯನ್ನು ಜಿಲ್ಲಾಡಳಿತ ವಹಿಸಲಿದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಪುನರ್ ಬಳಕೆ ಮಾಡಲು ಬೇಕಾದ ವ್ಯವಸ್ಥೆಯನ್ನು ಮಾಡಲಾಗು ವುದು ಎಂದರು. ಜನರಿಗೆ ಕಸ ವಿಲೇ ಬಗ್ಗೆ ಇನ್ನಷ್ಟು ಮಾಹಿತಿ, ಶಿಕ್ಷಣ ಹಾಗೂ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದ ಅವರು, ಇಲ್ಲಿ ಆಗುತ್ತಿರುವ ಲೋಪಗಳನ್ನು ಸರಿಪಡಿಸಲು ಜಿಲ್ಲಾ ಮಟ್ಟದ ಪರಿಣಿತರ ಸಮಿತಿ ರಚಿಸುವುದಾಗಿ ನುಡಿದರು.
ಕಸದ ಬಗ್ಗೆ ಜನರು ಸ್ಪಂದಿಸಲು ನಿರಾಕರಿಸಿದರೆ ಪಿಡಿಒ ಗಳು ನೋಟೀಸ್ ಜಾರಿ ಮಾಡಬಹುದು ಎಂದ ಜಿಲ್ಲಾಧಿಕಾರಿಗಳು, ತಾಲೂಕು ಮಟ್ಟದಲ್ಲಿ ನೀರು ಮತ್ತು ನೈರ್ಮಲ್ಯ ಸಮಿತಿ ವರದಿ ಬಾರದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಎಲ್ಲ ಕಾರ್ಯನಿರ್ವಾಹಕ ಅಧಿಕಾರಿಗಳು ಒಂದು ವಾರದೊಳಗಾಗಿ ತಾಲೂಕುಗಳ ನೀರು ಸರಬರಾಜು ವ್ಯವಸ್ಥೆ ಬಗ್ಗೆ ವರದಿ ನೀಡಬೇಕೆಂದು ಆದೇಶಿಸಿದರು.
ವಾರ್ಡ್ ವಾರು ಸ್ವಚ್ಛತಾ ಸಮಿತಿ ಮಾಡಿ ಈ ಸಭೆಗಳು ಸಕ್ರಿಯವಾಗಿರುವ ಬಗ್ಗೆ ವರದಿ ಕಳುಹಿಸಲೂ ಜಿಲ್ಲಾಧಿಕಾರಿಗಳು ತಿಳಿಸಿದರು.ಜಿಲ್ಲೆಯ
ಧರ್ಮಸ್ಥಳ, ಸುಬ್ರಹ್ಮಣ್ಯ,ಕಟೀಲು, ಉಪ್ಪಿನಂಗಡಿ ಇಂತಹ ಪುಣ್ಯ ಕ್ಷೇತ್ರಗಳಲ್ಲಿ ನದಿಯ ನೀರು ಮಲಿನವಾಗುತ್ತಿರುವ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಸೂಕ್ತ ಮಾಹಿತಿ ನೀಡದಿರುವ ಅಧಿಕಾರಿಗಳ ನಿರಾಸಕ್ತಿಯ ಬಗ್ಗೆ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದರು.
153 ಶಾಲೆಗಳಲ್ಲಿ ಶೌಚಾಲಯ ಇಲ್ಲ:ಜಿಲ್ಲೆಯ 933 ಶಾಲೆಗಳಲ್ಲಿ 176 ಶಾಲೆಗಳಲ್ಲಿ ಗಂಡು ಮಕ್ಕಳಿಗೆ ಶೌಚಾಲಯವಿಲ್ಲ ಎಂಬುದನ್ನು ಶಿಕ್ಷಣಾಧಿಕಾರಿಗಳು ಸಭೆಯ ಗಮನಕ್ಕೆ ತಂದರಲ್ಲದೆ, ಸರ್ವಶಿಕ್ಷಣ ಅಭಿಯಾನದಡಿ 176ರಲ್ಲಿ 23 ಶಾಲೆಗಳಿಗೆ ಶೌಚಾಲಯ ಮಂಜೂರಾಗಿದ್ದು, ಉಳಿದ 153 ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ವಾಗಬೇಕಿದೆ ಎಂದರು. ಈ ನಿಟ್ಟಿನಲ್ಲಿ ಒಂದು ವಾರದೊಳಗೆ ಸಮಸ್ಯೆ ಪರಿಹಾರ ಸೂಚಿಸುವುದಾಗಿ ನುಡಿದರು.
ಪಂಚತಂತ್ರದಡಿ ರೇಷನ್ ಕಾರ್ಡ್ ಮ್ಯಾಚಿಂಗ್ ನಲ್ಲಿ ಶೇಕಡ 10ರಿಂದ 15 ಬಾಕಿ ಇದ್ದು ಈ ತಿಂಗಳಾಂತ್ಯದಲ್ಲಿ ಕ್ರಮಕೈಗೊಳ್ಳಲು ಸೂಚಿಸಿದರು. ತೆರಿಗೆ ವಿಧಿಸದ ಮನೆಗಳಿಗೆ ತೆರಿಗೆ ವಿಧಿಸಬೇಕು ಪಂಚಾಯತ್ ವ್ಯಾಪ್ತಿಯ ಆಸ್ತಿಗಳನ್ನು ಪಂಚತಂತ್ರದಲ್ಲಿ ಶೀಘ್ರವೇ ನಮೂದಿಸಲು ಪಿಡಿಒಗಳಿಗೆ ಸೂಚನೆ ನೀಡಿದರು. ಉಪಕಾರ್ಯದರ್ಶಿ ಶಿವರಾಮೇಗೌಡ, ಸಿಪಿಒ ನಝೀರ್, ಸಿ ಎ ಒ ರಾಮದಾಸ್ ಅವರು ಉಪಸ್ಥಿತರಿದ್ದರು.

ಡಿಸೆಂಬರ್ ನಲ್ಲಿ ಕರಾವಳಿ ಉತ್ಸವ:ಡಾ.ಎನ್.ಎಸ್.ಚನ್ನಪ್ಪಗೌಡ

ಮಂಗಳೂರು,ಜುಲೈ.25:ಕರಾವಳಿ ಉತ್ಸವವನ್ನು ವೈವಿಧ್ಯಮಯವಾಗಿ ಅತ್ಯಂತ ಆಕರ್ಷಕವಾಗಿ 2011 ರ ಡಿಸೆಂಬರ್ ನಲ್ಲಿ ಹಮ್ಮಿಕೊಳ್ಳಲು ಎಲ್ಲಾ ಪೂರ್ವಭಾವೀ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಂಬಂಧಿಸಿದವರಿಗೆ ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ ಇವರು ಸೂಚಿಸಿದ್ದಾರೆ. ಅವರು ಶನಿವಾರ ತಮ್ಮ ಕಚೇರಿ ಯಲ್ಲಿ ಈ ಸಂಬಂಧ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕರಾವಳಿ ಉತ್ಸವ ಸಂಬಂಧ ಏರ್ಪಡಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯರಿಗೆ ವಿಪುಲ ಅವಕಾಶಗಳನ್ನು ಕಲ್ಪಿಸಿ ಅಂತೆಯೇ ಖ್ಯಾತನಾಮರ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲು ಸೂಚಿಸಿದರು. ಈ ಬಾರಿಯೂ ಜನಾಕರ್ಷಣೆಯ ಬೀಚ್ ಉತ್ಸವವನ್ನು ಹಮ್ಮಿಕೊಳ್ಳಲು ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಕರಾವಳಿ ಉತ್ಸವ ಮೈದಾನದಲ್ಲಿ ಪ್ರತೀ ವರ್ಷದಂತೆ ಈ ಸಲವೂ ವಸ್ತು ಪ್ರದರ್ಶನ ಮಳಿಗೆಗಳನ್ನು ತೆರೆಯಲು ಹಾಗೂ ವಸ್ತು ಪ್ರದರ್ಶನ ಮಳಿಗೆಗಳ ಗುಣಮಟ್ಟ ಹಾಗೂ ಆಕರ್ಷಕವಾಗಿರುವಂತೆ ನಿಗಾವಹಿಸಲು ಸೂಚಿಸಿದರು. ಕದ್ರಿ ಉದ್ಯಾನವನದಲ್ಲಿಯೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಜಿಲ್ಲಾಧಿಕಾರಿಗಳು ಒಪ್ಪಿಗೆ ನೀಡಿದ್ದಾರೆ.
ಕಳೆದ 2010-11 ನೇ ಸಾಲಿನ ಕರಾವಳಿ ಉತ್ಸವಕ್ಕೆ ಒಟ್ಟಾರೆ ರೂ.44,46,363-00 ವೆಚ್ಚವಾಗಿತ್ತು.ಬೀಚ್ ಉತ್ಸವಕ್ಕೆ ರೂ.10 ಲಕ್ಷ ವೆಚ್ಚ ಮಾಡಲಾಗಿತ್ತು. ಕರಾವಳಿ ಉತ್ಸವಕ್ಕಾಗಿ ಸಂಗ್ರಹವಾದ ದೇಣಿಗೆ ರೂ.60,91,000/- ಗಳೆಂದು ಹಿಂದಿನ ಕರಾವಳಿ ಉತ್ಸವದ ಆದಾಯ ವೆಚ್ಚಗಳನ್ನು ಸಭೆಗೆ ತಿಳಿಸಿದರು.

Saturday, July 23, 2011

ಪ್ರಾಕೃತಿಕ ವಿಕೋಪ ಅನುದಾನ ಬಳಕೆ ದಾಖಲೆ ಶೀಘ್ರ ಸಲ್ಲಿಸಿ: ಪಾಲೆಮಾರ್ ಸೂಚನೆ

ಮಂಗಳೂರು,ಜುಲೈ.23:ಕಳೆದ ಸಾಲಿನಲ್ಲಿ ಪ್ರಾಕೃತಿಕ ವಿಕೋಪದಡಿ ಕೈಗೊಂಡಿರುವ ಕಾಮಗಾರಿಗಳ ಬಳಕೆ ಪ್ರಮಾಣ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸದಿರುವುದರಿಂದ ಪ್ರಸಕ್ತ ಸಾಲಿನಲ್ಲಿ ಹಣ ಬಿಡುಗಡೆಗೆ ತೊಡಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ ಪಾಲೆಮಾರ್ ತಿಳಿಸಿದ್ದಾರೆ.
ಅವ ರಿಂದು ಜಿಲ್ಲಾಧಿ ಕಾರಿಗಳ ಕಚೇರಿ ಯಲ್ಲಿ ಆಯೋ ಜಿಸಿದ್ದ ಮುಂಗಾರು ಮಳೆ ಮತ್ತು ಪ್ರಾಕೃ ತಿಕ ವಿಕೋಪ ಸಭೆ ಯನ್ನು ದ್ದೇಶಿಸಿ ಮಾತ ನಾಡು ತ್ತಿದ್ದರು. ಪ್ರಾಕೃ ತಿಕ ವಿಕೋ ಪದಡಿ ಜಿಲ್ಲೆ ಯಲ್ಲಿ ಕೈ ಗೊಂಡಿದ್ದ ಹಾಗೂ ಕೈ ಗೊಂಡಿ ರುವ ಕಾಮ ಗಾರಿ ಗಳನ್ನು ಪರಿ ಶೀಲಿಸಿದ ಅವರು ಜಿಲ್ಲಾ ಪಂಚಾ ಯತ್ ಇಂಜಿ ನಿಯ ರಿಂಗ್ ಮತ್ತು ಲೋಕೋ ಪಯೋಗಿ ಇಲಾಖೆಯ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದರಲ್ಲದೆ ಎಲ್ಲ ದಾಖಲೆಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಲು ಸಮಯಮಿತಿ ನಿಗದಿಪಡಿಸಿದರು. 06-07 ನೇ ಸಾಲಿನ ಕೆಲಸಗಳ ಬಳಕೆಪ್ರಮಾಣ ಪತ್ರ ಮತ್ತು ದಾಖಲೆಗಳನ್ನು ಮುಂದಿನ 15 ದಿನಗಳೊಳಗೆ ಅಂದರೆ ಆಗಸ್ಟ್ 8 ರೊಳಗೆ ಸಲ್ಲಿಸಬೇಕೆಂದ ಅವರು, 07-08 ಮತ್ತು 08-09ರ ಸಾಲಿನ ಕಾಮಗಾರಿಗಳ ದಾಖಲೆಯನ್ನು ಕ್ರಮವಾಗಿ ಆಗಸ್ಟ್ 31 ಮತ್ತು ಅಕ್ಟೋಬರ್ ತಿಂಗಳೊಳಗಾಗಿ ನೀಡಬೇಕು. ನಂತರ ಬಂದ ವರದಿಗಳನ್ನು ಸ್ವೀಕರಿಸಲಾಗುವುದಿಲ್ಲ ಹಾಗೂ ಹಣ ಬಿಡುಗಡೆ ಮಾಡಲಾಗುವುದಿಲ್ಲ ಎಂದು ಖಡಾ ಖಂಡಿತವಾಗಿ ನುಡಿದರು.
ಕರ್ತವ್ಯಕ್ಕೆ ಎಕ್ಸಿಕ್ಯೂಟಿವ್ ಇಂಜಿನಿಯರ್ಸ್ ಮತ್ತು ಅಸಿಸ್ಟೆಂಟ್ ಇಂಜಿನಿಯರ್ಸ್ ಗಳನ್ನು ಹೊಣೆ ಮಾಡಲಾಗುವುದು ಎಂದು ಸಚಿವರು ಎಚ್ಚರಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲ ತಹಸೀಲ್ದಾರರಿಂದ ತಾಲೂಕಿನಲ್ಲಿ ಸಂಭವಿಸಿರುವ ನೆರೆ ಹಾನಿ ವರದಿ ಹಾಗೂ ವಿತರಿಸಲಾದ ಪರಿಹಾರದ ಮಾಹಿತಿಯನ್ನು ಪಡೆದರು. ಮಂಗಳೂರು ತಹಸೀಲ್ದಾರ್ ರವಿಚಂದ್ರ ನಾಯಕ್ ಅವರು ಮಾಹಿತಿ ನೀಡಿ ತಾಲೂಕಿನಲ್ಲಿ 40 ತಂಡಗಳನ್ನು ರಚಿಸಲಾಗಿದ್ದು, ನೇತ್ರಾವತಿ ಮತ್ತು ಗುರುಪುರ ನದೀ ತೀರದಲ್ಲಿ 24 ಗಂಟೆಗಳು ಕಾರ್ಯನಿರತವಾಗಿರುವ ಕಾರ್ಯಪಡೆಗಳಿವೆ ಎಂದರು. ತಾಲೂಕಿನಲ್ಲಿ 4 ಮನೆಗಳು ಸಂಪೂರ್ಣ ಹಾನಿಗೊಂಡಿವೆ. 8 ಮನೆ ತೀವ್ರ ಹಾನಿಗೊಳಗಾಗಿದೆ ಹಾಗೂ 48ಮನೆಗಳಿಗೆ ಭಾಗಶ: ಹಾನಿ ಸಂಭವಿಸಿದೆ. ಒಂದು ಜೀವ ಹಾನಿಯಾಗಿದ್ದು ಪರಿಹಾರ ನೀಡಲಾಗಿದೆ ಎಂದರು. ಬಂಟ್ವಾಳದಲ್ಲಿ ಎರಡು ಜೀವಹಾನಿಗೆ ಎರಡು ಲಕ್ಷ ರೂ ಪರಿಹಾರ ನೀಡಲಾಗಿದೆ. ಕೃಷಿ ನಾಶ ಹಾಗೂ ಇತರೆ ನಾಶ ನಷ್ಟಗಳಿಗೆ ಸಂಬಂಧಿಸಿದಂತೆ 1,12,000ರೂ.ಗಳಷ್ಟು ಪರಿಹಾರ ವಿತರಿಸಿದೆ ಎಂದು ಬಂಟ್ವಾಳ ಪ್ರಭಾರ ತಹಸೀಲ್ದಾರ್ ವಿಜಯ್ ಮಾಹಿತಿ ನೀಡಿದರು. ಇಲ್ಲಿ ನೆರೆ ಪರಿಹಾರ ಕಾರ್ಯಾಚರಣೆಗೆ 6 ತಂಡಗಳನ್ನು ರಚಿಸಲಾಗಿದೆ. ಬೆಳ್ತಂಗಡಿ ತಹಸೀಲ್ದಾರ್ ಪ್ರಮೀಳ ಅವರು ಮಾಹಿತಿ ನೀಡಿ ತಾಲೂಕಿನಲ್ಲಿ ಒಂದು ಜೀವ ಹಾನಿ ಮತ್ತು 17 ಮನೆ ಹಾನಿ ವರದಿಯಾಗಿದ್ದು ಪರಿಹಾರ ವಿತರಿಸಲಾಗಿದೆ ಎಂದರು.ಸುಳ್ಯ ತಹ ಸೀಲ್ದಾರ್ ವೈದ್ಯ ನಾಥ್ ಅವರು ನೀಡಿದ ಮಾಹಿತಿ ಯಂತೆ ಸುಳ್ಯ ತಾಲೂಕಿ ನಲ್ಲಿ ಒಂದು ಜೀವ ಹಾನಿ ಯಾಗಿದೆ. ಒಂದು ಮನೆ ಸಂಪೂರ್ಣ ನಾಶ ವಾಗಿದೆ ಸೂಕ್ತ ಪರಿ ಹಾರ ನೀಡ ಲಾಗಿದೆ ಎಂದರು. ಸಾಂಕ್ರಾ ಮಿಕ ರೋಗ ಹರಡ ದಂತೆ ಕೈ ಗೊಂಡಿ ರುವ ಕ್ರಮ ಗಳನ್ನು ವಿವ ರಿಸಿ ದರು.
ಪುತ್ತೂರು ತಹಸೀಲ್ದಾರ್ ದಾಸೇಗೌಡ ಅವರು ಮಾಹಿತಿ ನೀಡಿ ಪುತ್ತೂರಿನಲ್ಲಿ ಒಂದು ಜೀವಹಾನಿ ಹಾಗೂ 6 ಜಾನುವಾರುಗಳು ಮೃತಪಟ್ಟಿದ್ದು ನಿಯಮಾನುಸಾರ ಪರಿಹಾರ ಪಾವತಿಸಲಾಗಿದೆ ಎಂದರು.
ಮೂಡಬಿದ್ರೆಯಲ್ಲಿ ಕೃಷಿ ಬೆಳೆ 3.54 ಎಕರೆಯಷ್ಟು ನಷ್ಟವಾಗಿದ್ದು 22,000 ರೂ. ನಷ್ಟ ಎಂದು ವರದಿಯಾಗಿದ್ದು ಪರಿಹಾರ ಪಾವತಿಗೆ ಬಾಕಿಯಿದೆ ಎಂದರು. ಏಳು ಮನೆಗೆ ಭಾಗಷ ಹಾನಿ ಹಾಗೂ ಒಂದು ಪೂರ್ತಿ ಹಾನಿಯಾಗಿದೆ ಎಂದು ತಹಸೀಲ್ದಾರ್ ಮುರಳೀಧರ್ ತಿಳಿಸಿದರು.
ಮೆಸ್ಕಾಂನ 439 ಕಂಬಗಳು ಹಾಗೂ 38 ಪರಿವರ್ತಕಗಳು ಹಾಳಾಗಿದ್ದು ಎಲ್ಲವುಗಳನ್ನು ಸರಿಪಡಿಸಲಾಗಿದೆ ಎಂದು ಮೆಸ್ಕಾಂ ಅಧಿಕಾರಿ ಮಂಜಪ್ಪ ಅವರು ಸಭೆಗೆ ಮಾಹಿತಿ ನೀಡಿದರು.
ಮಹಾನಗರಪಾಲಿಕೆಗೆ ಸಂಬಂಧಿಸಿದಂತೆ ಮೇಯರ್ ಅವರ ಅಧ್ಯಕ್ಷತೆಯಲ್ಲಿ ಸಭೆ ಕರೆದು ಸೂಕ್ತ ಕ್ರಮಕೈಗೊಳ್ಳಲು ಉಸ್ತುವಾರಿ ಸಚಿವರು ಸೂಚಿಸಿದರು. ಶಾಸಕ ಯು ಟಿ ಖಾದರ್ ಅವರು ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಚಿವರ ಗಮನ ಸೆಳೆದರು. ಆರ್ ಟಿ ಒ, ಕೆ ಎಸ್ ಆರ್ ಟಿಸಿ, ಅಗ್ನಿಶಾಮಕ ದಳ ನಿರ್ವಹಿಸಿರುವ ವಿಕೋಪ ನಿರ್ವಹಣೆ ಬಗ್ಗೆ ವರದಿಯನ್ನು ಸಚಿವರು ಪಡೆದುಕೊಂಡರು. ಜಿಲ್ಲಾಧಿಕಾರಿ ಡಾ ಎನ್ ಎಸ್ ಚೆನ್ನಪ್ಪಗೌಡ ಹಾಗೂ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಉಪಸ್ಥಿತರಿದ್ದರು.

ಸ್ವಾತಂತ್ರ್ಯ ದಿನಾಚರಣೆ - ಸಕಲ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ

ಮಂಗಳೂರು,ಜುಲೈ.23:ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಗಸ್ಟ್ 15 ರಂದು ಮಂಗಳೂರು ನಗರದ ನೆಹರೂ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲು ಜಿಲ್ಲಾಧಿಕಾರಿ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಜಿಲ್ಲಾ ಸಮಿತಿ ಅಧ್ಯಕ್ಷರಾದ ಡಾ.ಎನ್.ಎಸ್. ಚೆನ್ನಪ್ಪಗೌಡ ಅವರ ಅಧ್ಯಕ್ಷತೆಯಲ್ಲಿ ಇಂದು ಈ ಬಗ್ಗೆ ನಡೆದ ಪೂರ್ವ ಭಾವೀ ಸಭೆಯಲ್ಲಿ ನಿರ್ಣಯಿಸಲಾಯಿತು. ಅಂದು ಬೆಳಿಗ್ಗೆ 9.00 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ರಾಷ್ಟ್ರ ಧ್ವಜಾರೋಹಣ ನಂತರ ಸಶಸ್ತ್ರ ಮೀಸಲು ಪಡೆ.ಕರಾವಳಿ ರಕ್ಷಣಾ ಪಡೆ,ಸ್ಕೌಟ್ಸ್ ಗೈಡ್ಸ್ ,ರೈಲ್ವೆ ರಕ್ಷಣಾ ದಳ ಮುಂತಾದವರಿಂದ ಆಕರ್ಷಕ ಪಥ ಸಂಚಲನ ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.ಸಂಜೆ 3.30 ರಿಂದ ಮಂಗಳೂರು ಪುರಭವನದಲ್ಲಿ ಶಾಲಾ/ಕಾಲೇಜು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮನರಂಜನಾ ಕಾರ್ಯಕ್ರಮ ,ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕವಿಗೋಷ್ಠಿ ಏರ್ಪಡಿಸಲು ಸಭೆಯಲ್ಲಿ ಜಿಲ್ಲಾಧಿಕಾರಿಗಳು ಸೂಚಿಸಿದರು. ಸರಕಾರಿ ನೌಕರರು ,ಶಾಲಾ ಕಾಲೇಜುಗಳವರು ತಮ್ಮ ಕಚೇರಿ ,ಶಾಲಾ ಕಾಲೇಜುಗಳಲ್ಲಿ ಧ್ವಜಾರೋಹಣ ನೆರವೇರಿಸಿ 9.00 ಗಂಟೆಗೆ ನೆಹರೂ ಮೈದಾನಕ್ಕೆ ತಪ್ಪದೆ ಹಾಜರಾಗಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಪ್ಲಾಸ್ಟಿಕ್ ಧ್ವಜವನ್ನು ನಿಷೇಧಿಸಲಾಗಿದೆ. ಪ್ರಮುಖ ರಸ್ತೆಗಳಲ್ಲಿರುವ ಸರಕಾರಿ ಕಛೇರಿಗಳು, ಖಾಸಗಿ ಕಟ್ಟಡಗಳು ಆಗಸ್ಟ್ 14 ಮತ್ತು 15 ರಂದು ವಿದ್ಯುತ್ ದೀಪಗಳಿಂದ ಅಲಂಕರಿಸುವಂತೆ ವಿನಂತಿಸಿದ್ದಾರೆ. ರಾಜ್ಯ ,ರಾಷ್ಟ್ರ ಮಟ್ಟದಲ್ಲಿ ಕ್ರೀಡೆಗಳಲ್ಲಿ ಬಹುಮಾನ ಗಳಿಸಿದವರಿಗೆ ಸನ್ಮಾನ ಮಾಡಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರದೀಪ್ ಕಲ್ಕೂರಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ವಿಜ್ಞಾನ ತಂತ್ರಜ್ಞಾನ ಸೌಲಭ್ಯ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಲಿ :ಜೆ.ಕೃಷ್ಣ ಪಾಲೆಮಾರ್

ಮಂಗಳೂರು,ಜುಲೈ.23:ಕರ್ನಾಟಕ ರಾಜ್ಯ ಭಾರತದ ಮಾಹಿತಿ ತಂತ್ರಜ್ಞಾನದ ರಾಜಧಾನಿಯಾಗಿದ್ದು,ಮಾಹಿತಿ ತಂತ್ರಜ್ಞಾನ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರ ,ತಾಲೂಕು ಕೇಂದ್ರಗಳಲ್ಲಿ ಕಾರ್ಯಾಚರಿಸುತ್ತಿದ್ದು,ಇದು ಗ್ರಾಮೀಣ ಪ್ರದೇಶಕ್ಕೂ ವಿಸ್ತರಣೆ ಆಗಬೇಕು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ,ಪರಿಸರ ಜೀವಶಾಸ್ತ್ರ,ಒಳನಾಡು ಬಂದರು,ಮೀನುಗಾರಿಕೆ ಹಾಗೂ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ.ಪಾಲೆಮಾರ್ ಅವರು ತಿಳಿಸಿದ್ದಾರೆ.ಅವರು ಇಂದು ಮಂಗ ಳೂರಿ ನಲ್ಲಿ ಕರ್ನಾ ಟಕ ಸರ್ಕಾ ರದ ಕರ್ನಾ ಟಕ ವಿದ್ಯು ನ್ಮಾನ ಅಭಿ ವೃದ್ಧಿ ನಿಗಮ ನಿಯ ಮಿತ ಮಾಹಿತಿ ತಂತ್ರ ಜ್ಞಾನ - ಜೈವಿಕ ತಂತ್ರ ಜ್ಞಾನ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆಗಳ ಸಹಯೋಗದೊಂದಿಗೆ ಕರ್ನಾಟಕ ರಾಜ್ಯದಲ್ಲೇಪ್ರಥಮ ಸರಕಾರಿ ಸೈಬರ್ ಲ್ಯಾಬ್ ನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯ ದಲ್ಲಿ ರೂ.26 ಕೋಟಿ ವೆಚ್ಚ ದಲ್ಲಿ 10 ಉಪ ವಿಜ್ಞಾನ ಕೇಂದ್ರ ಗಳನ್ನು ಹಾಗೂ ರೂ.14.4 ಕೋಟಿ ವೆಚ್ಚ ದಲ್ಲಿ 3 ವಲಯ ವಿಜ್ಞಾನ ಕೇಂದ್ರ ಗಳನ್ನು ಸ್ಥಾಪಿ ಸಲಾ ಗುತ್ತಿದೆ ಎಂದ ಸಚಿ ವರು ರಾಜ್ಯ ದಲ್ಲೇ ಪ್ರಥಮ ಬಾರಿಗೆ ಸೈಬರ್ ಲ್ಯಾಬ್ ನ್ನು ಮಂಗ ಳೂರಿ ನಲ್ಲಿ ಮಾಡು ತ್ತಿರು ವುದ ರಿಂದ ಕರಾವಳಿ ಜಿಲ್ಲೆಯಲ್ಲಿ ಇತ್ತೀಚೆಗೆ ಹೆಚ್ಚಿಸುವ ಅಪರಾಧ ಪ್ರಮಾಣ ತಗ್ಗಲಿದೆ ಎಂದರು.ಮುಖ್ಯ ಅತಿಥಿ ಗಳಾಗಿ ಆಗ ಮಿಸಿದ್ದ ಕರ್ನಾ ಟಕ ರಾಜ್ಯ ಉನ್ನತ ಶಿಕ್ಷಣ,ಮಾಹಿತಿ ತಂತ್ರ ಜ್ಞಾನ ಜೈವಿಕ ತಂತ್ರ ಜ್ಞಾನ ಹಾಗೂ ಉಡುಪಿ ಜಿಲ್ಲಾ ಉಸ್ತು ವಾರಿ ಸಚಿವರಾದ ಡಾ. ವಿ.ಎಸ್. ಆಚಾರ್ಯ ಅವರು ಮಾತ ನಾಡಿ ನಮ್ಮ ದೇಶ ಕಚ್ಚಾ ತೈಲ ಆಮದಿ ಗಾಗಿ ವೆಚ್ಚ ಮಾಡು ವಷ್ಟೇ ಹಣ ವನ್ನು ಮಹಿತಿ ತಂತ್ರ ಜ್ಞಾನ ರಫ್ತಿ ನಿಂದ ಗಳಿಸಲಾಗುತ್ತಿದೆ. ರಾಷ್ಟ್ರದ ರಕ್ಷಣಾ ದೃಷ್ಠಿಯಿಂದ ಸೈಬರ್ ಲ್ಯಾಬ್ ಗಳ ಆವಶ್ಯಕತೆ ಇದೆ. ಸೈಬರ್ ಸೆಕ್ಯೂರಿಟಿ ಕುರಿತು ಸಂಶೋಧನೆ ಮತ್ತು ಅಭಿವೃದ್ಧಿ ಆಗಬೇಕಿದೆ ಎಂದು ತಿಳಿಸಿದರು.
ಸಮಾ ರಂಭ ದಲ್ಲಿ ಸೈಬರ್ ಲ್ಯಾಬ್ ಕುರಿತು ಮಹಿತಿ ನೀಡಿದ ಕರ್ನಾ ಟಕ ಸರ್ಕಾ ರದ ಮಾಹಿತಿ ತಂತ್ರ ಜ್ಞಾನ ಜೈವಿಕ ತಂತ್ರ ಜ್ಞಾನ ಪ್ರಧಾನ ಕಾರ್ಯ ದರ್ಶಿ ಗಳಾದ ಎಂ.ಎನ್.ವಿದ್ಯಾಶಂಕರ್ ಅವರು ಮಾತನಾಡಿ ನಾವು ನಮ್ಮ ಕಂಪ್ಯೂಟರ್ ಲ್ಯಾಪ್ ಟ್ಯಾಪ್ ಗಳನ್ನು ಸಂಗ್ರಹಿಸಿದ ಮಾಹಿತಿಗಳು ಅತ್ಯಂತ ಗೌಪ್ಯವಾಗಿರಬೇಕು .ಆದರೆ ಅವು ಸೋರಿಕೆಯಾಗುತ್ತದೆ,ಕೆಲವೊಮ್ಮೆ ನಮಗೆ ಅರಿವಿಲ್ಲದಂತೆ ಅಳಿಸಲಾಗುತ್ತಿದೆ. ಇದರಿಂದ ವೈಯಕ್ತಿಕವಾಗಿ ಹಾಗೂ ದೇಸದ ದೃಷ್ಠಿಯಿಂದ ಇದು ಉತ್ತಮ ಬೆಳವಣಿಗೆಯಲ್ಲ.ಇದನ್ನು ತಪ್ಪಿಸಲು ಮಾಹಿತಿ ಸಂರಕ್ಷಣೆಯನ್ನು ಯಾವ ರೀತಿ ಮಾಡಿಕೊಳ್ಳಬೇಕು ಎಂಬ ಬಗ್ಗೆ ಈ ಸೈಬರ್ ಲ್ಯಾಬ್ ನಲ್ಲಿ ಅರಿವು ಮೂಡಿಸಲಾಗುತ್ತಿದೆ.
ಕಿಯೋನಿಕ್ಸ್ ಸೈಬರ್ ಲ್ಯಾಬ್ ನ ಮುಖ್ಯ ಉದ್ದೇಶ ಎಂದರೆ ದೇಸದ ಸೈಬರ್ ಭದ್ರತೆ ವ್ಯವಸ್ಥೆಯನ್ನು ಬಲಪಡಿಸುವುದಾಗಿದೆ. ಎಲ್ಲಾ ಸರಕಾರಿ ಇಲಾಖೆಗಳಿಗೆ ಹಲವು ಸೈಬರ್ ಸುರಕ್ಷಿತ ಸಂವೇದನಾ ಶೀಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಹಾಗೂ ಸೈಬರ್ ಅಪರಾಧ ಪ್ರಕರಣಗಳ ತನಿಖೆಯಲ್ಲಿ ಅರಕ್ಷಕರಿಗೆ ಮಾರ್ಗದರ್ಶಿಯಾಗಿ ಕೆಲಸ ಮಾಡುವ ಕೆಲವೇ ಕೆಲವು ಸಂಸ್ಥೆಗಳಂತೆ ಸಂಪನ್ಮೂಲ ಕೇಂದ್ರವಾಗಿ ಕಾರ್ಯನಿರ್ವಹಿಸಲಿವೆ. ಸೈಬರ್ ಲ್ಯಾಬ್ ಪ್ರಾಥಮಿಕವಾಗಿ ಅರಕ್ಷಕ ವರ್ಗಗಳ ವಿಭಾಗ ನ್ಯಾಯಾಂಗ ಇಲಾಖೆ, ಸರಕಾರಿ ಇಲಾಖೆ, ಬ್ಯಾಂಕಿಂಗ್ ,ಶೈಕ್ಷಣಿಕ ವಿಭಾಗಗಳಿಗೆ ನೆರವಾಗಲಿದೆ ಎಂದರು.
ಕಿಯೋನಿಕ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಅರವಿಂದ ಜನ್ನು ಅವರು ಸ್ವಾಗತಿಸಿದರು. ಅಧ್ಯಕ್ಷತೆಯನ್ನು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ.ಖಾದರ್ ವಹಿಸಿದ್ದರು. ಮೇಯರ್ ಪ್ರವೀಣ್,ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶೈಲಜಾ ಭಟ್ ಕಿಯೋನಿಕ್ಸ್ ಅಧ್ಯಕ್ಷ ಯಂಗಾ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

Friday, July 22, 2011

ನೀರಿನ ಶುಲ್ಕ ವಸೂಲಾತಿ ಮಾಡಿ ಸಂಪನ್ಮೂಲ ವೃದ್ಧಿಸಿ :ಎ.ಜಿ.ಕೊಡ್ಗಿ

ಮಂಗಳೂರು,ಜುಲೈ.22:ಮಂಗಳೂರು ಮಹಾನಗರಪಾಲಿಕೆಯು ಪ್ರತಿನಿತ್ಯ ತುಂಬೆಯಿಂದ 160 ಎಂಎಲ್ಡಿ ಪ್ರಮಾಣದಷ್ಟು ನೀರನ್ನು ನಗರದ ನಾಗರೀಕರಿಗೆ ಸರಬರಾಜು ಮಾಡುತ್ತಿದ್ದು ಗ್ರಾಹಕರೆಲ್ಲರಿಗೂ ನೀರನ ಮೀಟರ್ ಅಳವಡಿಸಿ ಕಡ್ಡಾಯವಾಗಿ ನೀರಿನ ಶುಲ್ಕ ಕಾಲಕಾಲಕ್ಕೆ ವಸೂಲಿ ಮಾಡುವ ಮೂಲಕ ಮಹಾನಗರಪಾಲಿಕೆ ಸಂಪನ್ಮೂಲ ವೃದ್ಧಿಸಿಕೊಳ್ಳುವಂತೆ ಕರ್ನಾಟಕ ರಾಜ್ಯ 3ನೇ ಹಣಕಾಸು ಆಯೋಗದ ಅನುಷ್ಠಾನ ಕಾರ್ಯಪಡೆ ಅಧ್ಯಕ್ಷರಾದ ಎ.ಜಿ.ಕೊಡ್ಗಿ ಅವರು ಸಲಹೆಯಿತ್ತಿದ್ದಾರೆ. ಅವರು ಇಂದು ಮಂಗ ಳೂರು ಮಹಾ ನಗರ ಪಾಲಿಕೆ ಯಲ್ಲಿ 3ನೇ ಹಣ ಕಾಸು ಆಯೋಗ ಶಿಫಾ ರಸು ಮಾಡಿದ್ದ ಕಾಮ ಗಾರಿ ಗಳ ಅನುಷ್ಠಾ ನದಲ್ಲಿ ಕಂಡು ಬಂದಿ ರುವ ತೊಡಕು ಗಳ ಹಾಗೂ ಸಮಸ್ಯೆ ಗಳನ್ನು ತಿಳಿದು ಕೊಂಡು ರಾಜ್ಯ ಸರ್ಕಾರಕ್ಕೆ ವರದಿ ನೀಡುವ ಸಲುವಾಗಿ ಸಭೆ ನಡೆಸಿದರು.
ಮಹಾನಗರಪಾಲಿಕೆಯವರು ತಮ್ಮ ವ್ಯಾಪ್ತಿಯ ವಾಣಿಜ್ಯ ಸಂಸ್ಥೆಗಳ/ಅಂಗಡಿಗಳವರು ಪರವಾನಿಗೆಯನ್ನು ಕಡ್ಡಾಯವಾಗಿ ಪಡೆಯುವಂತೆ ಕಟ್ಟಡ ನಿರ್ಮಾಣಕ್ಕೆ ಸೂಕ್ತ ಪರವಾನಿಗೆಯನ್ನು ಪಡೆದೇ ನಿರ್ಮಿಸುವಂತೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಂಡಲ್ಲಿ ನಗರಪಾಲಿಕೆ ವರಮಾನ ಹೆಚ್ಚಲಿದೆ ಎಂದರು.ಮಂಗಳೂರು ಮಹಾನಗರಪಾಲಿಕೆಯಲ್ಲಿ 1338 ಮಂಜೂರಾದ ಸಿಬ್ಬಂದಿಗಳು. ಆದರೆ ಇದೀಗ 08 ಎ ಶ್ರೇಣಿ ,11 ಬಿ ಶ್ರೇಣಿ ,126 ಸಿ ದರ್ಜೆ ಹಾಗೂ 335 ಡಿ ದರ್ಜೆ ಹುದ್ದೆಗಳು ಹಾಲಿ ಖಾಲಿ ಇದ್ದು, ಇದರಿಂದ ನಗರಪಾಲಿಕೆಯ ದೈನಂದಿನ ಕೆಲಸ ಕಾರ್ಯಗಳು ವಿಳಂಬವಾಗುತ್ತಿದೆ ಎಂದು ಪ್ರಭಾರ ಆಯುಕ್ತರಾದ ವಿಜಯಲಕ್ಷ್ಮಿ ನಾಯಕ್ ಅವರು ಅಧ್ಯಕ್ಷರ ಗಮನಕ್ಕೆ ತಂದರು.ಮಹಾ ನಗರ ಪಾಲಿಕೆ ವ್ಯಾಪ್ತಿ ಯಲ್ಲಿ ಒಟ್ಟು 21 ಕೊಳಚೆ ಪ್ರದೇಶ ಗಳಿದ್ದು, 1776 ಕುಟುಂಬ ಗಳು ವಾಸ ಮಾಡು ತ್ತಿದ್ದಾರೆ. ಇವರಿಗೆ ಸ್ವಂತ ಮನೆ ಗಳನ್ನು ಕಟ್ಟಿ ಕೊಡಲು ಕ್ರಮ ಕೈ ಗೊಳ್ಳ ಲಾಗಿದ್ದು ,ಬಹು ಮಹಡಿ ಮಾದರಿ ಮನೆ ಗಳನ್ನು ನಿರ್ಮಿಸುವುದಾಗಿ ಅಧ್ಯಕ್ಷರಿಗೆ ತಿಳಿಸಿದರು.
ಹಣಕಾಸು ಆಯೋಗದ ಸದಸ್ಯ ಡಾ.ಕಂಠಿ,ಮೇಯರ್ ಪ್ರವೀಣ್,ಸಂಸದರಾದ ನಳಿನ್ ಕುಮಾರ್ ಕಟೀಲ್, ಜಿಲ್ಲಾಧಿಕಾರಿ ಡಾ.ಎನ್.ಎಸ್,ಚನ್ನಪ್ಪ ಗೌಡ,ಉಪ ಮೇಯರ್ ಶ್ರೀಮತಿ ಗೀತಾ ನಾಯಕ್ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.

ಪಡಿತರ ಚೀಟಿ ಮತ್ತು ಅಡುಗೆ ಅನಿಲ ಗ್ರಾಹಕರ ಗಮನಕ್ಕೆ

ಮಂಗಳೂರು,ಜುಲೈ.22:ಅಡುಗೆ ಅನಿಲ ಸಂಪರ್ಕ ಮತ್ತು ಪಡಿತರ ಚೀಟಿಗಳನ್ನು ಕಾನೂನು ಬದ್ಧ ಮತ್ತು ಪಡಿತರ ಚೀಟಿಗಳನ್ನು ಕಾನೂನು ಬದ್ಧ ಎಂದು ಪರಿಗಣಿಸಲಾಗಿದೆಯೇ ಅಥವಾ ರದ್ದು ಪಡಿಸಲಾಗಿದೆಯೇ ಎಂಬುದನ್ನು ತಿಳಿಯಲು http://ahara.kar.nic.in ವೆಬ್ ಸೈಟಿಗೆ ಭೇಟಿ ನೀಡಲು ಸೂಚಿಸಲಾಗಿದೆ.
ಇಂಟರ್ ನೆಟ್ ಸೌಲಭ್ಯ ಇಲ್ಲದೇ ಇರುವವರು ತಾಲೂಕು ಕಚೇರಿಯಲ್ಲಿ ಆಹಾರ ಶಿರಸ್ತೇದಾರರು ಹಾಗೂಅಹಾರ ನಿರೀಕ್ಷಕರನ್ನು ಭೇಟಿಯಾಗಿ ಮಾಹಿತಿ ಮತ್ತು ಪರಿಹಾರ ಪಡೆಯಬಹುದು.ಇಲಾಖೆಯಿಂದ ಕಂಪ್ಯೂಟರ್ ಹಾಗೂ ಇಂಟರ್ ನೆಟ್ ಸೌಲಭ್ಯ ಒದಗಿಸಿ ಸಹಾಯ ಕೇಂದ್ರ ತೆರೆಯಲಾಗಿದೆಯೆಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Thursday, July 21, 2011

ರೂ.4 ಲಕ್ಷ ಶೈಕ್ಷಣಿಕ ಸಾಲಕ್ಕೆ ಜಾಮೀನು ಕಡ್ಡಾಯವಿಲ್ಲ

ಮಂಗಳೂರು,ಜುಲೈ.21:ಬಡ ಪ್ರತಿಭಾವಂತ ಮಕ್ಕಳಿಗೆ ರಾಷ್ಟ್ರೀಕೃತ ಬ್ಯಾಂಕುಗಳು ನೀಡುತ್ತಿರುವ ಶೈಕ್ಷಣಿಕ ಸಾಲದ ಪ್ರಮಾಣ ರೂ.4 ಲಕ್ಷದ ವರೆಗೆ ಯಾವುದೇ ಜಾಮೀನು ಕಡ್ಡಾಯವಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕಿನ ಪ್ರಬಂಧಕರಾದ ಎಂ.ಎಸ್.ಹಸನ್ ಅವರು ತಿಳಿಸಿದ್ದಾರೆ. ಅವರು ಇಂದು ಮಂಗಳೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ.ಖಾದರ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಸಣ್ಣ ಮತ್ತು ಮಧ್ಯಮ ಕೈಗಾ ರಿಕೆ ಗಳಿಗೆ ನೀಡುವ ರೂ.10 ಲಕ್ಷದ ವರೆ ಗಿನ ಸಾಲಕ್ಕೂ ಜಾಮೀನು ಆವಶ್ಯ ಕತೆ ಯಿಲ್ಲವೆಂದು ಹಾಗೂ ಈ ಬಗ್ಗೆ ಗ್ರಾಹ ಕರಿಗೆ ತೊಂದರೆ ನೀಡ ಬಾರ ದಾಗಿ ವಿವಿಧ ಬ್ಯಾಂಕು ಗಳ ಅಧಿಕಾ ರಿಗಳಿಗೆ ತಾಕೀತು ಮಾಡಿದರು.
ಲೀಡ್ ಬ್ಯಾಂಕ್ ಸಿಂಡಿ ಕೇಟ್ ಬ್ಯಾಂಕ್ ಉಪ ಮಹಾ ಪ್ರಬಂಧ ಕರಾದ ಜೆ.ಎಸ್.ಶೆಣೈ ಯವರು ಈ ಸಂದರ್ಭ ದಲ್ಲಿ ಮಾತ ನಾಡಿ ಜಿಲ್ಲೆಯಲ್ಲಿ 2011ರ ಮಾರ್ಚ್ ಅಂತ್ಯಕ್ಕೆ 25,885 ಕೋಟಿ ರೂ.ಗಳ ವಹಿವಾಟನ್ನು ನಡೆಸಲಾಗಿದ್ದು,ಜಿಲ್ಲೆಯ 427 ಬ್ಯಾಂಕ್ ಶಾಖೆಗಳಲ್ಲಿ ರೂ.16,472 ಕೋಟಿ ಠೇವಣಿ ಸಂಗ್ರಹಿಸಲಾಗಿದ್ದರೆ, ಇದೇ ಅವಧಿಯಲ್ಲಿ ರೂ.9413 ಕೋಟಿ ಮುಂಗಡವನ್ನು ನೀಡಲಾಗಿದೆ ಎಂದರು.
ಲೀಡ್ ಬ್ಯಾಂಕಿನ ಜಿಲ್ಲಾ ಮುಖ್ಯ ವ್ಯವಸ್ಥಾಪಕರಾದ ಹೇಮಂತ್ ಭಿಡೆ ಅವರು ಮಾತನಾಡಿ ಆದ್ಯತಾ ವಲಯ ಸಾಲ ಯೋಜನೆ 2010-11 ನೇ ಸಾಲಿನಲ್ಲಿ 2275 ಕೋಟಿ ರೂ.ನಿಗಧಿಯಾಗಿದ್ದು 2382 ಕೋಟಿ ರೂ.ಗಳ ಸಾಲ ಬಿಡುಗಡೆಗೊಳಿಸಲಾಗಿದೆ ಎಂದರು. ಇದರಿಂದಾಗಿ ವಾಷರ್ಿಕ ಗುರಿಯ ಶೇ.87 ರಷ್ಟುಸಾಧಿಸಲಾಗಿದೆ. ಕೃಷಿ ವಲಯಕ್ಕೆ 1173 ಕೋಟಿ ಸಣ್ಣ ಕೈಗಾರಿಕೆಗಳಿಗೆ 440 ಕೋಟಿ ಮತ್ತಿತರ ಆದ್ಯತಾ ವಲಯಕ್ಕೆ ರೂ.770 ಕೋಟಿ ಸಾಲ ನೀಡಲಾಗಿದೆ ಎಂದರು. ಕಿಸಾನ್ ಕ್ರೆಡಿಟ್ ಕಾಡ್ರ್ ಯೋಜನೆಯಡಿ ಜಿಲ್ಲೆಯಲ್ಲಿ ಬ್ಯಾಂಕುಗಳು 56245 ಜನರಿಗೆ ಕಾಡ್ರ್ ಗಳನ್ನು ಬಿಡುಗಡೆ ಮಾಡಲಾಗಿದ್ದು ರೈತರಿಗೆ 1934 ಕೋಟಿ,ಮಹಿಳೆಯರಿಗೆ 1141 ಕೋಟಿ,ದುರ್ಬಲ ವರ್ಗದವರಿಗೆ 1220 ಕೋಟಿ ಹಾಗೂ ಅಲ್ಪ ಸಂಖ್ಯಾತರಿಗೆ 1447 ಕೋಟಿ ಸಾಲ ವಿತರಿಸಲಾಗಿದೆಯೆಂದರು.ಸರ ಕಾರಿ ಪ್ರಾ ಯೋಜಿತ ಯೋಜನೆ ಗಳಿಗೆ 2010-11 ನೇ ಸಾಲಿ ನಲ್ಲಿ ಹಿಂದು ಳಿದ ವರ್ಗ ಅಲ್ಪ ಸಂಖ್ಯಾ ತರ ಅಭಿ ವೃದ್ಧಿ ಕಾರ್ಪೋ ರೇಷನ್ ಚೈತನ್ಯ ಯೋಜನೆ ಯಡಿ 178 ಜನರಿಗೆ ಸ್ವಾವ ಲಂಬ ನಾ ಯೋಜನೆ ಯಡಿ 455 ಜನರಿಗೆ ಸಾಲ ದೊರೆ ತಿದೆ. ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡದ ಅಭಿವೃದ್ಧಿ ಕಾರ್ಪೋರೇಷನ್ ಯೋಜನೆಯಡಿಯಲ್ಲಿ 149 ಜನರಿಗೆ ಸಾಲ ಬಿಡುಗಡೆ ಮಾಡಿದೆ. ಈ ವರ್ಷ ಒಟ್ಟು 26085 ಸ್ವಸಹಾಯ ಸಂಘಗಳು ಬ್ಯಾಂಕ್ ಗಳಿಂದ ಸಾಲ ಪಡೆದಿವೆ. ಇವುಗಳಿಗೆ 460 ಕೋಟಿ ಸಾಲ ಬಿಡುಗಡೆ ಯಾಗಿದೆ.
ಸ್ವರ್ಣ ಜಯಂತಿ ಗ್ರಾಮ ಸ್ವರೋಜ್ ಗಾರ್ ಯೋಜನೆಯಲ್ಲಿ 180 ಸ್ವಸಹಾಯ ಗುಂಪುಗಳಿಗೆ ಸ್ವ ಉದ್ಯೋಗಕ್ಕಾಗಿ ರೂ.111 ಲಕ್ಷ ದಷ್ಟು ಸಹಾಯಧನ ನೀಡಿದೆ. ಸಹಾಯಧನ ಯೋಜನೆಯಲ್ಲಿ ಕರ್ನಾಟಕ ಸರಕಾರದಿಂದ ವಾಜಪೇಯಿ ನಗರ ವಸತಿ ಯೋಜನೆಯನ್ನು ಮುನಿಸಿಪಾಲಿಟಿ,ನಗರಪಂಚಾಯತಿ,ಪಟ್ಟಣ ಪಂಚಾಯತಿ ಪ್ರದೇಶಗಳಲ್ಲಿ ಆರ್ಥಿಕವಾಗಿ ಹಿಂದುಳಿದವರು ಮತ್ತು ಕಡಿಮೆ ಆದಾಯದವರಿಗೆ ರೂ.1.30 ಲಕ್ಷ ದವರೆಗೆ ಮನೆ ಕಟ್ಟಿಕೊಳ್ಳುವ ಯೋಜನೆ ಜಾರಿಯಲ್ಲಿದೆ.ಈ ಜಿಲ್ಲೆಗೆ 1325 ಗುರಿ ನಿಗಧಿಪಡಿಸಲಾಗಿದೆ. ಈ ಯೋಜನೆಯಲ್ಲಿ ರೂ.50,000 ವರೆಗೆ ಸರಕಾರದ ಸಹಾಯಧನ ರೂ.30000 ಫಲಾನುಭವಿ ಹಣ ಭರಿಸಬೇಕು.ಉಳಿದ ರೂ.50,000 ವರೆಗೆ ಬ್ಯಾಂಕ್ ಮೂಲಕ ಸಾಲ ಪಡೆಯಬಹುದು.
ಸಭೆಯಲ್ಲಿ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ನ ಪ್ರಭಾರ ಮುಖ್ಯ ಕಾರ್ಯ ನಿವರ್ವಾಹಕ ಅಧಿಕಾರಿ ಶಿವರಾಮೇಗೌಡ,ಮುಖ್ಯ ಯೋಜನಾಧಿಕಾರಿ ತಾಕತ್ ರಾವ್,ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಸೀತಮ್ಮ ,ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಾಣಿಬಲಿ ನಿಷೇಧ ಕಾನೂನು ಜಾರಿಗೆ ಕ್ರಮ

ಮಂಗಳೂರು,ಜುಲೈ.21:ದೃಶ್ಯ,ಶ್ರಾವ್ಯ ಹಾಗೂ ಮುದ್ರಣ ಮಾಧ್ಯಮಗಳ ಮೂಲಕ ಧಾರ್ಮಿಕ ಕಾರ್ಯಗಳ ಹೆಸರಿನಲ್ಲಿ ಬಕ್ರೀದ್, ಸಂಕ್ರಾಂತಿ, ವಿಜಯದಶಮಿ ಮತ್ತು ಇತರೆ ಜಾತ್ರಾ ಸಂದರ್ಭಗಳಲ್ಲಿ ಧಾರ್ಮಿಕ ತಾಣಗಳಾದ ದರ್ಗಾ,ದೇವಾಲಯ,ಮಸೀದಿ ಮತ್ತಿತರ ಧಾರ್ಮಿಕ ಸ್ಥಳಗಳಲ್ಲಿ ಸಾರ್ವಜನಿಕವಾಗಿ ಪ್ರಾಣಿಗಳನ್ನು ಬಲಿ ಕೊಡುವುದನ್ನು ಕರ್ನಾಟಕ ಪ್ರಾಣಿ ನಿಷೇಧ 1959 ಹಾಗೂ 1963 ರ ಕಾನೂನು ರೀತ್ಯಾ ನಿಷೇಧಿಸಲಾಗಿದ್ದು ಈ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಶಿವರಾಮ ಇವರು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಈ ಕಾನೂನು ಜಾರಿಯಲ್ಲಿ ತುಂಬಾ ಗಂಭೀರವಾಗಿದ್ದು ಎಲ್ಲಾ ಜಿಲ್ಲಾಧಿಕಾರಿಗಳು,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮ ಹಾಗೂ ಜಾತ್ರೆಗಳಲ್ಲಿ ದೇವರ ಹೆಸರಲ್ಲಿ ಪ್ರಾಣಿಗಳಿಗೆ ಹಿಂಸೆ ನೀಡುವುದನ್ನು ತಡೆಯಲಿಕ್ಕಾಗಿ ಪ್ರಾಣಿ ಬಲಿ ನಿಷೇಧ ಕಾನೂನನ್ನು ಕಡ್ಡಾಯವಾಗಿ ಮತ್ತು ಕಟ್ಟುನಿಟ್ಟಾಗಿ ಪಾಲಿಸುವಂತೆ ಕ್ರಮ ಕೈಗೊಳ್ಳಲು ಅವರು ಸೂಚಿಸಿದ್ದಾರೆ. ಅಲ್ಲದೆ ಕಾನೂನು ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲು ಸಹ ತಿಳಿಸಿದ್ದಾರೆ.

6,68,600 ರೂ.ಗಳ ಕ್ರಿಯಾಯೋಜನೆಗೆ ಅನುಮೋದನೆ

ಮಂಗಳೂರು,ಜುಲೈ.21: 2011-12ನೇ ಸಾಲಿನಲ್ಲಿ ನೆಹರೂ ಯುವಕೇಂದ್ರಕ್ಕೆ ಕಾರ್ಯಕ್ರಮ ಅನುಷ್ಠಾನಕ್ಕೆ ಸಂಬಂಧಿಸಿದಂತೆ 6,68,600 ರೂ.ಗಳ ಕ್ರಿಯಾಯೋಜನೆಗೆ ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪಗೌಡ ಅವರು ಅನುಮೋದನೆ ನೀಡಿದರು.
ನೆಹರೂ ಯುವ ಕೇಂದ್ರಕ್ಕೆ ಸಂಬಂಧಿ ಸಿದಂತೆ ಜಿಲ್ಲಾ ಸಲಹಾ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿ ಕಾರಿಗಳು ಕ್ರಿಯಾ ಯೋಜನೆಯ ಬಗ್ಗೆ ಜುಲೈ 20ರಂದು ನಡೆದ ಸಭೆಯಲ್ಲಿ ಮಾಹಿತಿ ಪಡೆದರಲ್ಲದೆ ಪರಿಣಾಮಕಾರಿ ಅನುಷ್ಠಾನಕ್ಕೆ ಮಾರ್ಗದರ್ಶನವನ್ನೂ ನೀಡಿದರು.
ಮಂಗಳುರು, ಬಂಟ್ವಾಳ, ಪುತ್ತೂರು,ಸುಳ್ಯ ಹಾಗೂ ಬೆಳ್ತಂಗಡಿ ಬ್ಲಾಕ್ ಗಳಲ್ಲಿ ಮೆಂಟರ್ ಯೂತ್ ಕ್ಲಬ್ ಪ್ರೊಜೆಕ್ಟ್ ಗೆ ಒಂದು ಲಕ್ಷ ರೂ., ಮಂಗಳೂರಿನ ಕ್ರಿಯಾ ಶೀಲ ಯುವಸಂಘಟನೆ ಸದಸ್ಯರಿಗೆ 50,000ರೂ., ಯೂತ್ ಕ್ಲಬ್ ಎಕ್ಸ್ ಚೇಂಜ್ ಕಾರ್ಯಕ್ರಮಕ್ಕೆ 70,600 ರೂ., ಸಂಸದರ ಮಾರ್ಗದರ್ಶನದಂತೆ ಯೂತ್ ಕ್ಲಬ್ ಗಳಿಗೆ ಸೌಲಭ್ಯ ಒದಗಿಸಲು 1,56,000ರೂ.ಗಳ ವಿಶೇಷ ಯೋಜನೆ, ವಕ್ರ್ ಕ್ಯಾಂಪ್ ಗೆ ಮಂಗಳೂರು ಮತ್ತು ಪುತ್ತೂರನ್ನು ಆಯ್ಕೆ ಮಾಡಲಾಗಿದ್ದು 40,000ರೂ., ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮಗಳಿಗೆ 37,500ರೂ., ಜಾನಪದ ಸಾಂಸ್ಕೃತಿಕ ಕಾರ್ಯಕ್ರಮದಡಿ ಬಂಟ್ವಾಳ, ಪುತ್ತೂರು ಮತ್ತು ಸುಳ್ಯ ತಾಲೂಕಿಗೆ ತಲಾ 10,000ರೂ., ಬೆಳ್ತಂಗಡಿಯಲ್ಲಿ ಆಯೋಜಿಸಲು ನಿರ್ಧರಿಸಲಾಗಿರುವ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 20,000ರೂ., ಜಿಲ್ಲಾ ಯುವ ಪ್ರಶಸ್ತಿಗೆ 10.000ರೂ., ರಾಷ್ಟ್ರೀಯ, ಅಂತಾರಾಷ್ಟ್ರೀಯ ದಿನಾಚರಣೆ ಮತ್ತು ಮಾಸಾಚರಣೆಗಳಿಗೆ 42,000 ರೂ., ಮೀಸಲಿರಿಸಿದೆ.
ರಾಷ್ಟ್ರೀಯ ಯುವ ಸಪ್ತಾಹಕ್ಕೆ 16,000ರೂ., ಜಿಲ್ಲಾ ಯುವ ಸಮ್ಮೇಳನಕ್ಕೆ 25,000ರೂ., ದಾಖಲೀಕರಣಕ್ಕೆ 5,000ರೂ., ಇತರೆ ಖಚರ್ಿಗೆ 4,000ರೂ.ಗಳ ಕ್ರಿಯಾಯೋಜನೆಯನ್ನು ಸಿದ್ದಪಡಿಸಲಾಗಿದೆ. ಯುವಜನಾಂಗದ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ ಎಂದು ಜಿಲ್ಲಾಧಿಕಾರಿಗಳು ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿಗಳಾದ ಸಿ ಜೆ ಎಫ್ ಡಿ ಸೋಜಾ ಅವರಿಗೆ ಹೇಳಿದರು. ಸಭೆಯಲ್ಲಿ ಇಲಾಖೆಯ ವಿಷ್ಣುಮೂರ್ತಿ, ಕುಂದಾಪುರ, ಕಾರ್ಕಳ, ಮೈಸೂರು, ಉಡುಪಿ ಜಿಲ್ಲಾ ಯುವ ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸಿದ್ದರು.
ಕುಳಾಯಿ ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ರಮಾ ವಿಷ್ಣುಮೂರ್ತಿ ಅವರು ತಮ್ಮ ಮಹಿಳಾ ಮಂಡಲದ ಸಾಧನೆ ಬಗ್ಗೆ ಹಾಗೂ ಈಗ ಪ್ರಸಕ್ತ ಇರುವ ಕಟ್ಟಡದ ಬದಿಯಲ್ಲಿರುವ ಸರ್ಕಾರಿ ಜಾಗವನ್ನು ಅತಿಕ್ರಮಿಸಲಾಗಿದ್ದು, ಆ ಜಾಗವನ್ನು ಮಹಿಳಾ ಮಂಡಳಿಗೆ ನೀಡಬೇಕೆಂದು ಕೋರಿ ಮನವಿ ಸಲ್ಲಿಸಿದರು.

ರಾಜ್ಯಮಟ್ಟದ ಭಾವೈಕ್ಯತಾ ಮಂಡಳಿ

ಮಂಗಳೂರು,ಜುಲೈ.21:ಕೋಮು ಸೌಹಾರ್ಧತೆಯನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಮಟ್ಟದಲ್ಲಿ ಭಾವೈಕ್ಯತಾ ಮಂಡಳಿ ಎಂಬ ನ್ಯಾಯ ಸಭೆಯನ್ನು ಸ್ಥಾಪಿಸಲು ನಿರ್ಧರಿಸಿರುವ ಸರ್ಕಾರವು ಈ ಹಿನ್ನಲೆಯಲ್ಲಿ ಮತೀಯ ಸಾಮರಸ್ಯ ಕಾಪಾಡಲು ವಿವಿಧ ಮತಗಳ ನಡುವಿನ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಲು ಕರ್ನಾಟಕ ಸರ್ಕಾರವು ರಾಜ್ಯ ಭಾವೈಕ್ಯತಾ ಮಂಡಳಿ ಎಂಬ ನ್ಯಾಯ ಸಭೆಯನ್ನು ಸ್ಥಾಪಿಸಲು ನಿರ್ಧರಿಸಿದೆ. ಈ ಮಂಡಳಿಯಲ್ಲಿ ಸಮಾಜದ ವಿವಿಧ ಸುಮಾರು 54 ಗಣ್ಯ ಸದಸ್ಯರಿರುತ್ತಾರೆ.ಮುಖ್ಯಮಂತ್ರಿಯ ಅಧ್ಯಕ್ಷತೆಯಲ್ಲಿ ನ್ಯಾಯ ಮಂಡಳಿ ಕಾರ್ಯ ನಿರ್ವಹಿಸಲಿದೆ. ದಕ್ಷಿಣಕನ್ನಡ ಜಿಲ್ಲೆಯಿಂದಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಡೆಯವರು,ಉಡುಪಿ ಶ್ರೀ ಪೇಜಾವರ ಸ್ವಾಮಿಗಳು,ಸುಳ್ಯದ ಶ್ರೀಮತಿ ವಹಿದಾ ಇಸ್ಮಾಯಿಲ್ ಸದಸ್ಯರಾಗಿರುತ್ತಾರೆ.
ಈ ಮಂಡಳಿಯ ಕಾರ್ಯನಿರ್ವಹಣೆ ಇಂತಿದೆ:ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಸೇರುವುದು,ಅವಧಿಯ ಮಧ್ಯೆ ಆವಶ್ಯಕತೆ ಸಂದರ್ಭದಲ್ಲಿ ಭಾನುವಾರಗಳಂದು ಸಭೆ ನಡೆಸಬಹುದು. ಸದಸ್ಯರ ಸಂಖ್ಯಾಬಲ 1/3 ರಷ್ಟು.ಸಾರ್ವಜನಿಕರ ವ್ಯವಸ್ಥೆ ಮತ್ತು ಕಾನೂನು,ಸುವ್ಯವಸ್ಥೆ ಪರಿಸ್ಥಿತಿಯನ್ನು ಪರಾಮರ್ಶಿಸಿ ಸಮಿತಿಯ ಸದಸ್ಯರ ಅಭಿಪ್ರಾಯ ಸಂಗ್ರಹಿಸುವುದು. ಭಾವೈಕ್ಯತಾ ಮಂಡಳಿಯು ಕಾನೂನು ಸುವ್ಯವಸ್ಥೆ ಕೋಮಗಲಭೆಗಳು ಮತ್ತು ಆಡಳಿತಕ್ಕೆ ಸಂಬಂಧಪಟ್ಟಂತೆ ಕ್ಲಿಷ್ಟಕರವಾದ ನಿರ್ಬಂದವುಳ್ಳ ವಿಷಯಗಳನ್ನು ಸಮಾಜದಲ್ಲಿ ಐಕ್ಯತೆ ಮತ್ತು ಏಕೀಭಾವಕ್ಕೆ ಸಲಹೆ ಮಾಡುವುದು.ಆಡಳಿತಾತ್ಮಕ ಕ್ರಮ ಕೈಗೊಳ್ಳುವಲ್ಲಿ ಉಂಟಾಗುವ ಸಮಸ್ಯೆಗಳ ಬಗ್ಗೆ ಪರಸ್ಪರ ಚರ್ಚಿಸುವುದು. ರಾಜ್ಯ ಭಾವೈಕ್ಯ ಮಂಡಳಿಯು ಸಮಾಜದಲ್ಲಿನ ಜನರ ಪರಸ್ಪರ ಸೌಹಾರ್ದತೆ ಮತ್ತು ಒಗ್ಗಟ್ಟು ವೃದ್ಧಿಪಡಿಸಲು ಸೂಕ್ತವಾದ ರೀತಿನೀತಿಗಳನ್ನು ಸಾರ್ವಜನಿಕ ಅಬಿಪ್ರಾಯಗಳ ಬೆಂಬಲದಿಂದ ರೂಪಿಸಿ ಅಳವಡಿಸಿಕೊಳ್ಳುವುದು ಮುಂತಾದ ಕಾರ್ಯಗಳನ್ನು ಮಂಡಳಿಯು ನಿರ್ವಹಿಸುವುದು. ನಮ್ಮ ಸಮಾಜವು ಬಹುಮತಗಳ,ಬಹುಭಾಷೆಗಳ,ಬಹು ಕುಲದಿಂದ ಕೂಡಿದ ಸಮಾಜ.ಇದರಿಂದ ಮತೀಯ ಗಲಭೆ ಕಲಹಗಳುಂಟಾಗದಂತೆ ಸರ್ಕಾರವು ರಾಜ್ಯ ಮಟ್ಟದ ಭಾವೈಕ್ಯತಾ ಮಂಡಳಿಯನ್ನು ಸ್ಥಾಪಿಸಲು ನಿರ್ದರಿಸಿ ಆದೇಶ ಹೊರಡಿಸಿದೆಯೆಂದು ಪೊಲೀಸ್ ಅಧೀಕ್ಷಕರಾದ ಲಾಬೂರಾಮ್ ತಿಳಿಸಿದ್ದಾರೆ.

Wednesday, July 20, 2011

ವಿವಿ ಕುಲಪತಿಗೆ ಎನ್ ಸಿಸಿ ಗೌರವ ಪದವಿ

ಮಂಗಳೂರು,ಜುಲೈ.20: ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಟಿ.ಸಿ.ಶಿವ ಶಂಕರ್ ಮೂರ್ತಿ ಅವರಿಗೆ ಎನ್ ಸಿಸಿ ಮಂಗ ಳೂರು ಗ್ರೂಪ್ ಕಮಾ ಡೆಂಟ್ ದಿನೇಶ್ ಪಿ. ನಾಯ್ಕ್ವಾಡೆ ಅವರು ವಿಶ್ವ ವಿದ್ಯಾ ನಿಲ ಯ ದಲ್ಲಿ ನಡೆದ ಸಮಾ ರಂಭ ದಲ್ಲಿ ಗೌರವ ಕರ್ನಲ್ ಕಮಾ ಡೆಂಟ್ ಪದವಿ ಪ್ರದಾನ ಮಾಡಿ ದರು.ವಿಶ್ವ ವಿದ್ಯಾ ನಿಲ ಯದ ಕುಲ ಸಚಿವ ರಾದ ಡಾ. ಕೆ. ಚಿನ್ನಪ್ಪ ಗೌಡ,ಲೆಫ್ಟಿ ನೆಂಟ್ ಕರ್ನಲ್ ಅಲೋಕ್ ಪರ ಮಾರ್ ಮತ್ತಿ ತರ ಗಣ್ಯರು ಸಮಾ ರಂಭ ದಲ್ಲಿ ಉಪ ಸ್ಥಿತ ರಿದ್ದರು.

281 ಅನಧಿಕೃತ ಧಾರ್ಮಿಕ ಕಟ್ಟಡ ತೆರವು

ಮಂಗಳೂರು,ಜುಲೈ.20:ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಸಾರ್ವಜನಿಕ ರಸ್ತೆ,ಉದ್ಯಾನ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ನಿರ್ಮಾಣಗಳೆಂದು ಗುರುತಿಸಲಾದ 1579 ಧಾರ್ಮಿಕ ಕಟ್ಟಡ ನಿರ್ಮಾಣಗಳಲ್ಲಿ ಈ ವರೆಗೆ ಒಟ್ಟು 281 ಪ್ರಕರಣಗಳನ್ನು ತೆರವುಗೊಳಿಸಲಾಗಿದೆ.
ಇಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಸಂಬಂಧ ನೋಡಲ್ ಅಧಿಕಾರಿಗಳು, ತಹ ಶೀಲ್ದಾರರು ಮತ್ತು ಸಂಬಂಧ ಪಟ್ಟ ಅಧಿ ಕಾರಿಗಳು ಸಮಿತಿಯ ನಿರ್ದೇಶ ನದಂತೆ ಕೈಗೊಂಡ ಕ್ರಮಗಳನ್ನು ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪ ಗೌಡ ಅವರಿಗೆ ಮಾಹಿತಿ ನೀಡಿದರು.ಇನ್ನುಳಿದ ಪ್ರಕರಣಗಳ ತೆರವಿಗೆ ಆಗಸ್ಟ್ 15 ರವರೆಗೆ ಜಿಲ್ಲಾಧಿಕಾರಿಗಳು ಸಮಯಾವಕಾಶ ನೀಡಿದ್ದು, ನಿಗದಿತ ಸಮಯಮಿತಿಯೊಳಗೆ ಶೇ. 75ರಷ್ಟು ಸಾಧನೆ ದಾಖಲಾಗಬೇಕೆಂದು ಸೂಚಿಸಿದರು. .
ಒಟ್ಟು 281 ಪ್ರಕರಣಗಳನ್ನು ತೆರವುಗೊಳಿಸಿದ್ದು, 55 ಪ್ರಕರಣಗಳನ್ನು ಸಕ್ರಮಗೊಳಿಸಿದ್ದು, 1243 ಅನಧಿಕೃತ ನಿರ್ಮಾಣಗಳ ತೆರವು ಕಾರ್ಯಾಚರಣೆ ನಡೆಯಬೇಕಿದೆ. ಒತ್ತುವರಿಯಾದ ಸರ್ಕಾರಿ ಜಾಗಗಳನ್ನು ವಶಪಡಿಸಿಕೊಂಡು ಬೇಲಿ ಹಾಕಲು ಸೂಚಿಸಿದ ಜಿಲ್ಲಾಧಿಕಾರಿಗಳು, ಸರ್ಕಾರಿ ಕಾಮಗಾರಿಗಳಿಗೆ ಜಮೀನಿನ ಅಗತ್ಯವಿದ್ದು, ಸರ್ಕಾರಿ ಜಮೀನಿನ ದುರುಪಯೋಗ ತಡೆಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಸೂಚಿಸಿದರು.
ಈ ಸಂಬಂಧ ಎಲ್ಲಾ ಕಡತಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಎಲ್ಲಾ ನೆರವನ್ನು ನೀಡುವ ಭರವಸೆಯನ್ನು ನೀಡಿದರು. ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಿಸಿದ ಜಿಲ್ಲಾಧಿಕಾರಿಗಳು, ಪ್ರತಿಯೊಂದು ಪ್ರಕರಣ ಇತ್ಯರ್ಥ ಪಡಿಸುವ ಸಂಬಂಧ ಸಮಯ ಮಿತಿ ನಿಗಧಿಪಡಿಸಿದರು. ಕ್ಲೀಷೆ ಪ್ರಕರಣಗಳ ತನಿಖೆಗೆ ಉಪವಿಭಾಗಾಧಿಕಾರಿಗಳನ್ನೊಳಗೊಂಡ ಜಂಟಿ ಸ್ಥಳ ತನಿಖೆಗೂ ಜಿಲ್ಲಾಧಿಕಾರಿಗಳು ಮಾರ್ಗದರ್ಶನ ನೀಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಪೊಲೀಸ್ ಅಧೀಕ್ಷಕರಾದ ಲಾಬೂರಾಮ್ ಅವರು ಕಣ್ಣೂರಿನಿಂದ ಬಂಟ್ವಾಳದ ವರೆಗೆ ನಿರ್ಮಿಸಲ್ಪಟ್ಟ ಬಸ್ ನಿಲ್ದಾಣಗಳ ಬಗ್ಗೆ ಮಾಹಿತಿ ಕೋರಿದರು. ಅವುಗಳು ಅಕ್ರಮ ನಿರ್ಮಾಣಗಳಾಗಿದ್ದರೆ ತಕ್ಷಣವೇ ಈ ನಿಲ್ದಾಣಗಳನ್ನು ತೆರವು ಗೊಳಿಸಲು ಸೂಚಿಸಿದ ಎಸ್ ಪಿ ಅವರು, ಈ ಸಂಬಂಧ ಯಾವುದಾದರೂ ದೂರುಗಳು ದಾಖಲಾದರೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ ಎಂದರು. ಕಾನೂನು ಅನುಷ್ಠಾನ ಎಲ್ಲ ಅನುಷ್ಠಾನಾಧಿಕಾರಿಗಳ ಹೊಣೆ ಎಂದರು.

Tuesday, July 19, 2011

ಹೆಣ್ಣು ಮಕ್ಕಳಿಗಾಗಿ 2.9 ಕೋ.ರೂ ವೆಚ್ಚದಲ್ಲಿ ಐಟಿಐ :ಪಾಲೆಮಾರ್

ಮಂಗಳೂರು,ಜುಲೈ.19:ಹೆಣ್ಣು ಮಕ್ಕಳಿಗಾಗಿ 2.9 ಕೋಟ.ರೂ.ವೆಚ್ಚದಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆಯನ್ನು(ಐಟಿಐ) ಮಂಗಳೂರಿನಲ್ಲಿ ನಿರ್ಮಿಸಲಾಗುತ್ತಿದೆ. ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದೆ ಎಂದು ರಾಜ್ಯದ ಮೀನುಗಾರಿಕೆ, ಬಂದರು, ಪರಿಸರ, ಜೀವಿಶಾಸ್ತ್ರ ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವರಿ ಸಚಿವರಾದ ಕೃಷ್ಣ ಜೆ.ಪಾಲೆಮಾರ್ ತಿಳಿಸಿದ್ದಾರೆ.ಅವರು ಯೆಯ್ಯಾಡಿ ಸಮೀಪದ ಶರಬತ್ ಕಟ್ಟೆ ಯಲ್ಲಿ ಕರ್ನಾ ಟಕ ಪಾಲಿ ಟೆಕ್ನಿಕ್ ನೂತನ ವಿದ್ಯಾ ರ್ಥಿನಿ ನಿಲಯ ಕಟ್ಟಡ ವನ್ನು ಉದ್ಘಾ ಟಿಸಿ ಮಾತ ನಾಡು ತ್ತಿದ್ದರು.ರೂ.1 ಕೋಟಿ ವೆಚ್ಚ ದಲ್ಲಿ ಬೋಂದೆಲ್ ನಲ್ಲಿ ಡಬ್ಲ್ಯೂ ಪಿಟಿ ವಿದ್ಯಾ ರ್ಥಿನಿ ಯರಿ ಗಾಗಿ ವಿದ್ಯಾ ರ್ಥಿನಿ ನಿಲಯ ನಿರ್ಮಾ ಣಕ್ಕೆ ಮಂಜೂರಾತಿ ದೊರೆತಿದೆ. ಕರ್ನಾಟಕ ಪಾಲಿಟೆಕ್ನಿಕ್ ಸಂಸ್ಥೆಯ ವಿದ್ಯಾರ್ಥಿನಿಯರಿಗಾಗಿ ರೂ.1 ಕೋಟಿ ವೆಚ್ಚದಲ್ಲಿ ಇನ್ನೊಂದು ವಿದ್ಯಾರ್ಥಿನಿ ನಿಲಯ ನಿರ್ಮಾಣಗೊಳ್ಳಲಿದೆ ಎಂದು ಸಚಿವರು ಹೇಳಿದರು.ಶೈಕ್ಷಣಿಕ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮುಂದಿದ್ದು, ಖಾಸಗಿಯವರೊಂದಿಗೆ ಸರ್ಕಾರಿ ಶಿಕ್ಷಣ ಕ್ಷೇತ್ರಗಳು ಪೈಪೋಟಿಯನ್ನು ಸಮರ್ಥವಾಗಿ ಎದುರಿಸಿ ಉತ್ತಮ ಶಿಕ್ಷಣ ನೀಡುತ್ತಿದೆ ಎಂದರು. ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿದೆ. ಗ್ರಾಮೀಣ ವಿದ್ಯಾರ್ಥಿನಿಯರ ಅನುಕೂಲಕ್ಕೆ ವಿದ್ಯಾರ್ಥಿನಿ ನಿಲಯಗಳನ್ನು ತೆರೆಯಲು ಆದ್ಯತೆ ನೀಡಲಾಗಿದೆ ಎಂದರು.ಮಂಗ ಳೂರಿ ನಲ್ಲಿ ಹಿಂದು ಳಿದ ಮತ್ತು ಅಲ್ಪ ಸಂ ಖ್ಯಾತ ಇಲಾಖೆ ಯ ವತಿ ಯಿಂದ ಇದೇ ಶೈಕ್ಷ ಣಿಕ ವರ್ಷ ದಲ್ಲಿ ವಿದ್ಯಾ ರ್ಥಿನಿ ನಿಲಯ ಆರಂ ಭಗೊ ಳ್ಳಲಿದೆ. ಕಟ್ಟ ಡದ ಹುಡು ಕಾಟ ನಡೆ ದಿದೆ. 100 ವಿದ್ಯಾ ರ್ಥಿನಿ ಯರಿಗೆ ಇಲ್ಲಿ ಪ್ರವೇಶಾವಕಾಶವಿದೆ ಎಂದು ಸಚಿವರು ತಿಳಿಸಿದರು.ಸಮಾ ರಂಭ ದಲ್ಲಿ ಮುಖ್ಯ ಅತಿಥಿ ಸ್ಥಾನ ದಿಂದ ಮಾತ ನಾಡಿದ ಮಂಗ ಳೂರು ನಗರಾ ಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಡಾ.ಮಾಧವ ಭಂಡಾರಿ ಮಾತ ನಾಡಿ, ಮಹಿಳಾ ಸಬಲೀ ಕರ ಣದ ಜೊತೆಗೆ ನಮ್ಮ ಸಂ ಸ್ಕೃತಿಯ ರಕ್ಷಣೆ ಯ ಹೊಣೆ ಯನ್ನು ವಿದ್ಯಾ ರ್ಥಿನಿ ಯರು ವಹಿಸಿ ಕೊಳ್ಳ ಬೇಕಾಗಿದೆ ಎಂದರು.
ವಿಧಾನ ಸಭೆಯ ಉಪಸಭಾಪತಿ ಎನ್.ಯೋಗೀಶ್ ಭಟ್, ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್, ಶಾಸಕ ಯು.ಟಿ.ಖಾದರ್ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಕಟ್ಟಡಗಳ ಗುತ್ತಿಗೆದಾರರಾದ ಮಹಾಬಲ ಸುವರ್ಣ ಅವರನ್ನು ಸನ್ಮಾನಿಸಲಾಯಿತು.
ಕರ್ನಾಟಕ ಪಾಲಿಟೆಕ್ನಿಕ್ ನ ಪ್ರಾಚಾರ್ಯ ಮೇಜರ್ ಬಿ.ವಿಜಯ್ ಕುಮಾರ್ ಸ್ವಾಗತಿಸಿದರು. ಶಿಕ್ಷಕಿ ಕೀರ್ತಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಲೇಜಿನ ಇ ಎಂ ಜೋಸ್ ವಂದಿಸಿದರು.
ರೂ.60 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ನೂತನ ವಿದ್ಯಾರ್ಥಿನಿ ನಿಲಯವು 800 ಚದರ ಮೀಟರ್ ವಿಸ್ತೀರ್ಣ ಹೊಂದಿದೆ. ಎರಡು ಅಂತಸ್ತಿನಲ್ಲಿ 14 ಕೊಠಡಿಗಳಿದ್ದು ನೆಲಮಹಡಿಯಲ್ಲಿ ಅಡುಗೆ ಕೋಣೆ, ವಾರ್ಡನ್ ರೂಮ್ ಒಳಗೊಂಡಂತೆ ಎಲ್ಲ ಮೂಲಸೌಕರ್ಯಗಳನ್ನು ಹೊಂದಿದೆ. ಸುಮಾರು 80 ವಿದ್ಯಾರ್ಥಿನಿಯರು ಇಲ್ಲಿ ಸೌಲಭ್ಯ ಪಡೆಯಬಹುದಾಗಿದೆ.

ದ.ಕ. ಜಿಲ್ಲೆಯಲ್ಲಿ ಮಳೆ ಹಾನಿ

ಮಂಗಳೂರು,ಜುಲೈ.19:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಸಂಭ ವಿಸಿದ ಹಾನಿ ಯಲ್ಲಿ ಪ್ರಸಕ್ತ ಸಾಲಿನಲ್ಲಿ ಒಟ್ಟು ಆರು ಜನ ಮರಣ ಹೊಂದಿದ್ದು, 7 ಜನ ಗಾಯ ಗೊಂಡಿ ರುತ್ತಾರೆ. 12 ಮನೆಗಳು ಪೂರ್ಣ ಹಾನಿ ಯಾಗಿದ್ದು,56 ಮನೆಗಳಿಗೆ ತೀವ್ರ ಹಾನಿ ಯಾಗಿರುತ್ತದೆ. 142 ಮನೆಗಳಿಗೆ ಭಾಗಶ: ಹಾನಿಯಾಗಿದೆ. 5 ಜಾನುವಾರುಗಳು ಹಾನಿಯಾಗಿವೆ.
210 ಖಾಸಗಿ ಮನೆಗಳ ಹಾನಿಗೆ ರೂ.26.57 ಲಕ್ಷ ನಷ್ಟ ಅಂದಾಜಿಸಲಾಗಿದೆ. 392.13 ಕಿಲೋಮೀಟರ್ ರಸ್ತೆಗೆ ರೂ.1707 ಲಕ್ಷ ,56 ಸೇತುವೆ ಮತ್ತು ಮೋರಿಗಳಿಗೆ ರೂ.161 ಲಕ್ಷ, 171 ಖಾಸಗಿ ಕಟ್ಟಡಗಳ ನಷ್ಠಕ್ಕೆ ರೂ.24.30 ಲಕ್ಷ, 966 ವಿದ್ಯುತ್ ಸರಬರಾಜು ನಷ್ಟಕ್ಕೆ 43.70ಲಕ್ಷ, ಬೆಳೆಹಾನಿಯಡಿ 2 ಪ್ರಕರಣ ದಾಖಲಾಗಿದ್ದು, 5.70 ಲಕ್ಷ ಮತ್ತು ಇತರೆ ನಷ್ಟಗಳಿಗೆ ರೂ.202 ಲಕ್ಷ ,ಹೀಗೆ ಒಟ್ಟು ರೂ.2170.27 ಲಕ್ಷ ರೂ.ಗಳ ಹಾನಿಯನ್ನು ಅಂದಾಜಿಸಲಾಗಿದೆ. ಜಿಲ್ಲೆಯ ಪ್ರಾಕೃತಿಕ ವಿಕೋಪ (ಸಿ ಆರ್ ಎಫ್) ನಿಧಿಯಲ್ಲಿ ಕೇವಲ 50.00 ಲಕ್ಷ ಅನುದಾನ ಲಭ್ಯವಿದ್ದು ಹೆಚ್ಚಿನ ಅನುದಾನ ಸುಮಾರು 5 ಕೋಟಿ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿ ಡಾ. ಎನ್. ಎಸ್. ಚೆನ್ನಪ್ಪ ಗೌಡ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಇಳೆಗೆ ಬಿದ್ದ ಮಳೆ

ಮಂಗಳೂರು,ಜುಲೈ.19:ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಮಳೆಗಾಲದ ವರ್ಷಧಾರೆ ಆರಂಭವಾಗಿದೆ. ಜಿಲ್ಲೆಯಲ್ಲಿ ವಾರ್ಷಿಕ ಒಟ್ಟು ಸರಾಸರಿ 3912.2 ಮಿಲಿಮೀಟರ್ ಮಳೆಯಾಗುತ್ತಿತ್ತು. ಪ್ರಸಕ್ತ ಸಾಲಿನಲ್ಲಿ ಜನವರಿ 2011 ರಿಂದ ಜುಲೈ 19 ರ ವರೆಗೆ ಒಟ್ಟು ಸರಾಸರಿ 2393.2 ಮಿಲಿಮೀಟರ್ ಮಳೆಯಾಗಿದೆ. ಕಳೆದ ಸಾಲಿನಲ್ಲಿ ಇದೇ ಅವಧಿಯಲ್ಲಿ ಒಟ್ಟು ಸರಾಸರಿ 1217.0 ಮಿಲಿ ಮೀಟರ್ ಮಳೆಯಾಗಿತ್ತು. ಕಳೆದ ಸಾಲಿಗೆ ಹೋಲಿಸಿದರೆ ಈ ಸಾರಿ ಮಳೆಯ ಪ್ರಮಾಣ ಅಧಿಕವಾಗಿದೆ.
ದಿನಾಂಕ 19-7-11 ರಂದು ಬಿದ್ದ ಮಳೆ ಪ್ರಮಾಣ ಇಂತಿದೆ. ಕಳೆದ ವರ್ಷ ಬಿದ್ದ ಮಳೆ ಪ್ರಮಾಣ ಆವರಣದಲ್ಲಿ ನೀಡಲಾಗಿದೆ.
ಬಂಟ್ವಾಳ ತಾಲೂಕಿನಲ್ಲಿ 43.2 ಮಿಲಿಮೀಟರ್ ( 37.0 ಮಿಲಿಮೀಟರ್)
ಬೆಳ್ತಂಗಡಿ ತಾಲೂಕಿನಲ್ಲಿ 61.2 ಮಿಲಿಮೀಟರ್(29.1 ಮಿಲಿಮೀಟರ್)
ಮಂಗಳೂರು ತಾಲೂಕಿನಲ್ಲಿ 29.4 ಮಿಲಿಮೀಟರ್(56.8 ಮಿಲಿಮೀಟರ್)
ಪುತ್ತೂರು ತಾಲೂಕಿನಲ್ಲಿ 43.6 ಮಿಲಿಮೀಟರ್(47.0 ಮಿಲಿಮೀಟರ್)
ಸುಳ್ಯ ತಾಲೂಕಿನಲ್ಲಿ 43.2 ಮಿಲಿಮೀಟರ್ ( 32.6 ಮಿಲಿಮೀಟರ್) ಮಳೆಯಾಗಿದೆ. ಇಡೀ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಜುಲೈ 19 ರಂದು ಒಟ್ಟು ಸರಾಸರಿ 44.1 ಮಿಲಿಮೀಟರ್ ಮತ್ತು ಕಳೆದ ವರ್ಷ ಇದೇ ಅವಧಿಯಲ್ಲಿ 40.5 ಮಿಲಿಮೀಟರ್ ಮಳೆಯಾಗಿದೆ.
ವಾರ್ಷಿಕ ಸರಾಸರಿ ಮಳೆ ಬಂಟ್ವಾಳದಲ್ಲಿ 3833.0 ಮಿಲಿಮೀಟರ್ ಆಗಬೇಕಾಗಿದ್ದು, ಜನವರಿ 2011 ರಿಂದ ದಿನಾಂಕ 19-7-11 ರ ವರೆಗೆ ಒಟ್ಟು 2097.5 ಮಿಲಿಮೀಟರ್ ಮಳೆಯಾಗಿರುತ್ತದೆ. ಕಳೆದ ವರ್ಷ ಇದೇ ಅವಧಿಗೆ 1846.3 ಮಿಲಿಮೀಟರ್ ಮಳೆಯಾಗಿತ್ತು.ಬೆಳ್ತಂಗಡಿಯಲ್ಲಿ ವಾರ್ಷಿಕ 4509.0 ಮಿಲಿಮೀಟರ್ ಮಳೆಯಾಗಬೇಕಾಗಿದ್ದು,ಇದುವರೆಗೆ 2178.4 ಮಿಲಿಮೀಟರ್ ಕಳೆದ ವರ್ಷ 1324.1 ಮಿಲಿಮೀಟರ್ ಆಗಿತ್ತು,ಮಂಗಳೂರಿನಲ್ಲಿ ವಾರ್ಷಿಕ 3609.0 ಆಗಬೇಕಾಗಿದ್ದು,ಇದುವರೆಗೆ 1448.1 ಮಿಲಿಮೀಟರ್,ಕಳೆದ ವರ್ಷ 1725.4 ಮಿಲಿಮೀಟರ್ ಮಳೆಯಾಗಿತ್ತು. ಪುತ್ತೂರಿನಲ್ಲಿ ವಾರ್ಷಿಕ 4017.0ಮಿಲಿಮೀಟರ್, ಇದುವರೆಗೆ 1851.0 ಮಿಲಿಮೀಟರ್ ಮಳೆಯಾಗಿದೆ, ಕಳೆದ ವರ್ಷ 1349.7 ಮಿಲಿಮೀಟರ್ ಆಗಿದೆ. ಸುಳ್ಯದಲ್ಲಿ ವಾಷಿಕ 3593.0 ಮಿಲಿಮೀಟರ್ ಮಳೆಯಾಗಬೇಕಾಗಿದ್ದು ,ಇದುವರೆಗೆ 1944.9 ಮಿಲಿಮೀಟರ್ ಮಳೆಯಾಗಿದೆ .ಕಳೆದ ವರ್ಷ ಇದೇ ಸಮಯಕ್ಕೆ 1374.4 ಮಿಲಿಮೀಟರ್ ಮಳೆಯಾಗಿತ್ತು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ಸರಾಸರಿ 3912.2 ವಾರ್ಷಿಕ ಮಳೆಯಾಗಬೇಕಿದ್ದು, ಈವರೆಗೆ 1904.0 ಮಳೆಯಾಗಿದೆ. ಕಳೆದ ಸಾಲಿನಲ್ಲಿ ಇದೇ ಅವಧಿಗೆ 1524.0 ಮಳೆಯಾಗಿತ್ತು ಎಂದು ಜಿಲ್ಲಾಧಿಕಾರಿಗಳ ಕಚೇರಿ ವರದಿ ತಿಳಿಸಿದೆ.

ಜಿಲ್ಲಾ ಯೋಜನಾ ಸಮಿತಿಗೆ ಸದಸ್ಯರ ನೇಮಕ

ಮಂಗಳೂರು,ಜುಲೈ.19:ಸರಕಾರವು ದಕ್ಷಿಣ ಕನ್ನಡ ಜಿಲ್ಲೆಗೆ ಯೋಜನಾ ಸಮಿತಿಯನ್ನು ರಚಿಸಿದ್ದು,ಇದರಲ್ಲಿ ಪಂಚಾಯತ್ ಮತ ಕ್ಷೇತ್ರದಿಂದ ಒಟ್ಟು 15 ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಈ ಕೆಳಗಿನ ಅಭ್ಯರ್ಥಿಗಳು ಯೋಜನಾ ಸಮಿತಿಗೆ ಸದಸ್ಯರಾಗಿ ಪಂಚಾಯತ್ ಮತ ಕ್ಷೇತ್ರದಿಂದ ಆಯ್ಕೆಯಾಗಿರುತ್ತಾರೆ.
ಬೆಳ್ತಂಗಡಿಯಿಂದ ತುಳಸಿ ಜೆ.ಪೂಜಾರಿ ಹಾರಾಬೆ,ಬಂಟ್ವಾಳ ತಾಲೂಕು ಸಂತೋಷ್ ಕುಮಾರ್ ರೈ, ಪುತ್ತೂರು ತಾಲೂಕು ಸಾವಿತ್ರಿ ಹೆಚ್.ಎಸ್.ಬಂಟ್ವಾಳ ಆರ್.ಚೆನ್ನಪ್ಪ ಕೋಟ್ಯಾನ್,ಬಂಟ್ವಾಳ ನಳಿನಿ ಶೆಟ್ಟಿ, ಮಂಗಳೂರು ರೀತೇಶ್ ಶೆಟ್ಟಿ, ಮಂಗಳೂರು ಜನಾರ್ಧನ ಗೌಡ,ಕಡಂದಲೆ ಸುನಿತಾ ಸುಚರಿತ ಶೆಟ್ಟಿ,ಮಂಗಳೂರು ಈಶ್ವರ ಕಟೀಲು,ಸುಳ್ಯದ ನವೀನ್ ಕುಮಾರ್ ಮೇನಾಲ, ಮಂಗಳೂರು ಸತೀಶ್ ಕುಂಪಲ, ಉಜಿರೆ ಸಿ.ಕೆ.ಚಂದ್ರಕಲಾ,ನೆಲ್ಯಾಡಿ ಬಾಲಕೃಷ್ಣ ಸುವರ್ಣ, ಪುತ್ತೂರು ತಾಲೂಕು ಕೇಶವ ಗೌಡ ಬಜತ್ತೂರು ಮತ್ತು ಪುತ್ತೂರು ತಾಲೂಕು ಬೆಟ್ಟಂಪಾಡಿ ಕೆ.ಮೀನಾಕ್ಷಿ ಮಂಜುನಾಥ ಇವರುಗಳು ಆಯ್ಕೆಯಾಗಿರುತ್ತಾರೆ.
ಸದ್ರಿ ಸದಸ್ಯರು ಪದಾವಧಿಯು ಕರ್ನಾಟಕ ಪಂಚಾಯತ್ ರಾಜ್ ಜಿಲ್ಲಾ ಯೋಜನಾ ಸಮಿತಿ ಸದಸ್ಯರು ಚುನಾವಣೆ ನಿಯಮಗಳನ್ವಯ ಜಿಲ್ಲಾ ಪಂಚಾಯತ್ ಸದಸ್ಯರುಗಳ ಅವಧಿ ಇರುವ ತನಕ ಇರುತ್ತದೆಯೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.

Monday, July 18, 2011

ಉದ್ಯೋಗ ಖಾತ್ರಿಯಡಿ ಮಾದರಿ ಗ್ರಾಮಗಳ ಸೃಷ್ಟಿಗೆ ನಿರ್ಧಾರ

ಮಂಗಳೂರು,ಜುಲೈ.18:ಪುದುವೆಟ್ಟು, ಮುಚ್ಚೂರು, ನೀರುಮಾರ್ಗ, ಉಳಾಯಿಬೆಟ್ಟು, ಬನ್ನೂರು ಗ್ರಾಮಪಂಚಾಯಿತಿಗಳನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಮಾದರಿ ಗ್ರಾಮಪಂಚಾಯಿತಿಗಳನ್ನಾಗಿ ರೂಪಿಸಲು ನಿರ್ಧರಿಸಲಾಯಿತು.
ದುಡಿ ಯುವ ಕೈಗಳಿಗೆ ಕೆಲಸದ ಖಾತರಿ ನೀಡುವ ಮಹಾತ್ಮ ಗಾಂಧಿ ರಾ ಷ್ಟ್ರೀಯ ಉ ದ್ಯೋಗ ಖಾತರಿ ಯೋಜನೆ ಯನ್ನು ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ ಪರಿ ಣಾಮ ಕಾರಿ ಯಾಗಿ ಅನು ಷ್ಠಾನಕ್ಕೆ ತರಲು ಜಿಲ್ಲೆಯ ಒಂಬಡ್ಸ ಮೆನ್ ಅವರ ಅಧ್ಯಕ್ಷ ತೆಯಲ್ಲಿ ಜುಲೈ 16 ರಂದು ಜಿಲ್ಲಾ ಪಂಚಾ ಯಿತಿ ಯಲ್ಲಿ ಸೇರಿದ ಸರ್ಕಾ ರೇತರ ಸಂಘ ಸಂಸ್ಥೆ ಗಳ ಮತ್ತು ಜಿಲ್ಲಾ ಪಂಚಾ ಯತ್ ನ ಪ್ರಮುಖ ಅಧಿ ಕಾರಿ ಗಳ ಸಭೆ ಯಲ್ಲಿ ನಿರ್ಧಾ ರಕ್ಕೆ ಬರ ಲಾಯಿತು.
ಜಿಲ್ಲೆಯನ್ನು ದೂರು ರಹಿತ ನರೇಗಾವನ್ನಾಗಿ ರೂಪಿಸುವ ಹಾಗೂ ಈ ಯೋಜನೆಯಡಿಯಲ್ಲೇ ವಿನೂತನ ಮಾದರಿಗಳನ್ನು ಜಿಲ್ಲೆಯಿಂದ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಈ ಸಂಬಂಧ ಆರ್ ಡಿ ಪಿ ಆರ್ ಸಚಿವರಾದ ಜಗದೀಶ್ ಶೆಟ್ಟರ್ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ದಕ್ಷಿಣ ಕನ್ನಡದ ಒಂಬಡ್ಸಮನ್ ಅವರ ಕಾರ್ಯವೈಖರಿಯನ್ನು ಪ್ರಶಂಸಿಸಲಾಯಿತಲ್ಲದೆ ಹೆಚ್ಚಿನ ಹೊಣೆಗಾರಿಕೆಯನ್ನೂ ವಹಿಸಲಾಯಿತು. ಇತರೆ ಜಿಲ್ಲೆಗಳಿಗಿಂತ ಈ ಯೋಜನೆಯಲ್ಲಿ ಜಿಲ್ಲೆ ಹಿಂದೆ ಬಿದಿದ್ದು ಜಿಲ್ಲೆಯಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಒತ್ತು ನೀಡಲು ಸಚಿವರು ಸೂಚಿಸಿದ್ದರು.
ಜನರ ಪಾಲ್ಗೊಳ್ಳುವಿಕೆ ಹಾಗೂ ಯೋಜನೆಯ ಅನುಷ್ಠಾನಕ್ಕೆ ಸರ್ಕಾರೇತರ ಸಂಘ ಸಂಸ್ಥೆಗಳ ನೆರವು ಪಡೆಯಲು ಹಾಗೂ ಈ ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿ ನೀಡಲು, ಪಂಚಾಯಿತಿ ಕಾರ್ಯದರ್ಶಿಗಳು ಮತ್ತು ಅಭಿವೃದ್ಧಿ ಅಧಿಕಾರಿಗಳು ಯೋಜನೆಯ ಅನುಷ್ಠಾನವನ್ನು ಪ್ರೋತ್ಸಾಹಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಚರ್ಚಿಸಲಾಯಿತು.
ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಆದ್ಯತೆ ನೀಡುವ ಬಗ್ಗೆ, ಅಂಗವಿಕಲರಿಗೆ ಶೇ. 25 ಕಡಿಮೆ ಕೆಲಸಕ್ಕೆ ಅವಕಾಶವಿರುವ ಬಗ್ಗೆ, ದುಡಿಯುವವರಿಗೆ ಮಾತ್ರ ಹಣ ಪಾವತಿಸುವ ಬಗ್ಗೆ, ಯೋಜನೆಯಿಂದಾಗುವ ತಾತ್ಕಾಲಿಕ ಮತ್ತು ದೂರಗಾಮಿ ಅನುಕೂಲಗಳ ಬಗ್ಗೆ, ಇನ್ನೂ ಹಲವು ಗ್ರಾಮಪಂಚಾಯಿತಿಗಳಲ್ಲಿ ಕಾಮಗಾರಿಗಳು ಆರಂಭವಾಗದ ಕುರಿತು, ವೈಯಕ್ತಿಕ ಮತ್ತು ಗುಂಪು ಕಾಮಗಾರಿ ಬಗ್ಗೆ ಎನ್ ಜಿ ಒಗಳಿಗೆ ಇರುವ ಹಲವು ಸಂಶಯಗಳಿಗೆ ಮುಖ್ಯ ಲೆಕ್ಕಾಧಿಕಾರಿ ರಾಮದಾಸ್ ಅವರು ಪರಿಹರಿಸಿದರು.
ಜಿಲ್ಲಾ ಪಂಚಾಯಿತಿ ಸಿ ಒ ಒ ಯೋಜನೆಯ ಬಗ್ಗೆ ಸಭೆಯ ಆರಂಭದಲ್ಲೇ ಮಾಹಿತಿ ನೀಡಿ. ಪಂಚಾಯಿತಿ ಸದಸ್ಯರ ಕೋರಿಕೆ ಮೇರೆಗೆ ಗ್ರಾಮಪಂಚಾಯಿತಿಗೆ ಉದ್ಯೋಗ ಖಾತ್ರಿ ಬಗ್ಗೆ ಮಾಹಿತಿ ನೀಡಲು ತೆರಳಿದರು. ಉದ್ಯೋಗ ಖಾತ್ರಿ ಬಗ್ಗೆ ದೂರುಗಳಿದ್ದರೆ ಮೊದಲು ಪಂಚಾಯಿತಿ ಕುಂದುಕೊರತೆ ಅಧಿಕಾರಿಗೆ ದೂರು ಕೊಡಿ, ಸ್ಪಂದಿಸದಿದ್ದರೆ ತಾಲೂಕು ಪಂಚಾಯಿತಿ ಇ ಒಗೆ ದೂರು ನೀಡಿ. ಇಲ್ಲೂ ಉತ್ತರ ದೊರೆಯದಿದ್ದರೆ ಸಿಇಒ ಅವರಿಗೆ ದೂರು ಕೊಡಿ ಎಂದ ಒಂಬಡ್ಸ್ ಮನ್ ಶೀನ ಶೆಟ್ಟಿ ಅವರು, ಅಂತಿಮವಾಗಿ ದೂರಿಗೆ ಉತ್ತರ ಸಿಗದಿದ್ದರೆ ತನ್ನ ಬಳಿ ಉತ್ತರ ದೊರಕಿಸಿಕೊಡುವ ವ್ಯವಸ್ಥೆ ಇದೆ ಎಂದರು. 12 ತಿಂಗಳೂ ಕೆಲಸಕ್ಕೆ ಈ ಕಾಯಿದೆಯಡಿ ಅವಕಾಶವಿದ್ದು 203 ಗ್ರಾಮಪಂಚಾಯಿತಿಯಲ್ಲಿ ಈಗಾಗಲೇ 93ಕಡೆ ಕೆಲಸ ಆರಂಭವಾಗಿದೆ ಎಂಬ ಮಾಹಿತಿಯನ್ನು ನೀಡಿದರು. ಪಂಚಾ ಯಿತಿ ಅಭಿವೃದ್ಧಿ ಗೆಂದೇ ಅಭಿವೃದ್ಧಿ ಪಡಿಸ ಲಾದ ಪಂಚತಂತ್ರ ವೆಬ್ ಸೈಟ್ ಸಾರ್ವಜ ನಿಕರಿ ಗಾಗಿ ಲಭ್ಯವಿದ್ದು, ಪಂಚಾ ಯಿತಿ ಅಭಿವೃದ್ಧಿ ಕೆಲಸ ಗಳಲ್ಲದೆ ಸರ್ವ ಮಾಹಿತಿಗಳು ಇದರಲ್ಲಿ ಲಭ್ಯವಿದೆ ಎಂದು ಮುಖ್ಯ ಲೆಕ್ಕಾಧಿ ಕಾರಿಗಳು ಹೇಳಿದರು. ಈ ಕುರಿತ ಮಾಹಿತಿ ಯನ್ನು ಇಂಜಿನಿ ಯರ್ ಅರುಣ್ ಅವರು ಪಿಪಿಟಿ ಪ್ರಸಂಟೇಷನ್ ಮೂಲಕ ತೋರಿಸಿದರು. ಎಲ್ಲ ಪಂಚಾಯಿತಿಗಳಲ್ಲೂ ಮಾಹಿತಿ ಗೋಡೆಗಳಿರಬೇಕು ಎಂದ ಅವರು, ಉದ್ಯೋಗ ಚೀಟಿ ಕೋರಿದ ಅರ್ಜಿಯನ್ನು ಬಾಕಿ ಇಡಲು ಅವಕಾಶವಿಲ್ಲ; ಅರ್ಜಿ ನೀಡಿದ ತಕ್ಷಣವೆ ವ್ಯಕ್ತಿಗೆ ಉದ್ಯೋಗ ಪಡೆಯುವ ಹಕ್ಕು ಈ ಕಾಯಿದೆಯಲ್ಲಿದೆ ಎಂದರು.
ಕಳೆದ ಸಾಲಿನಲ್ಲಿ ಈ ಯೋಜನೆಯಡಿ ಜಿಲ್ಲೆಗೆ 33 ಕೋಟಿ ರೂ. ಬಂದಿದ್ದು 17 ಕೋಟಿ ರೂ. ಖರ್ಚಾಗಿದೆ. ಪ್ರಸಕ್ತ ಸಾಲಿನಲ್ಲಿ 16 ಕೋಟಿ ಬಿಡುಗಡೆಯಾಗಿದ್ದು 77 ಲಕ್ಷ ರೂ. ಇದುವರೆಗೆ ಖರ್ಚಾಗಿದೆ ಎಂದು ಮುಖ್ಯ ಲೆಕ್ಕಾಧಿಕಾರಿ ರಾಮದಾಸ್ ಮಾಹಿತಿ ನೀಡಿದರು. ಯೋಜನೆಯ ಯಶಸ್ಸಿಗೆ ಜನರ ಪಾಲ್ಗೊಳ್ಳುವಿಕೆ ಅಗತ್ಯ ಎಂದ ಅವರು ಈ ಯೋಜನೆಯಡಿ ದುಡ್ಡಿಗೆ ಕೊರತೆ ಇಲ್ಲ ಎಂಬುದನ್ನು ಸ್ಪಷ್ಟ ಪಡಿಸಿದರು. ವಿವಿಧ ತಾಲೂಕುಗಳಿಂದ ಬಂದ ಎನ್ ಜಿ ಒ ಗಳು ಪಾಲ್ಗೊಂಡು ಯೋಜನೆ ಬಗ್ಗೆ ಸಮಗ್ರ ಮಾಹಿತಿ ಪಡೆದರು.

'ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ'

ಮಂಗಳೂರು,ಜುಲೈ.18 :ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಈ ಪ್ರಕ್ರಿಯೆಯಲ್ಲಿ ನಿರಂತರತೆಯ ಅಗತ್ಯವೂ ಇದೆ ಎಂದು ಹೊಸಂಗಡಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮೀ ರಮೇಶ್ ಹೇಳಿದರು.
ಅವರು ಶನಿ ವಾರ ದ.ಕ. ಜಿ.ಪ. ಹಿ.ಪ್ರಾ ಶಾಲೆ ಪೆರಿಂಜೆ ಯಲ್ಲಿ ಪರಿ ಸರ ದಿನಾ ಚರಣೆ ಸಂ ಬಂಧ ಏರ್ಪ ಡಿಸಿದ ಸಭಾ ಕಾರ್ಯ ಕ್ರಮ ವನ್ನು ದ್ದೇಶಿಸಿ ಮಾತ ನಾಡು ತ್ತಿದ್ದರು. ಹೊ ಸಂಗ ಡಿಯಲ್ಲಿ ಪ್ರತಿ ಯೊಂದು ಕಾರ್ಯ ಕ್ರಮ ವನ್ನು ಎಲ್ಲರ ಸಹ ಕಾರ ದೊಂದಿಗೆ ಅರ್ಥ ಪೂರ್ಣ ವಾಗಿ ಆಚ ರಿಸ ಲಾಗುತ್ತಿದೆ. ರಾಜ್ಯ ನೈರ್ಮಲ್ಯ ರತ್ನ ಪ್ರಶಸ್ತಿ ಪುರಸ್ಕೃತ ಹಾಗೂ ಕೇಂದ್ರ ಸರ್ಕಾರದ ನಿರ್ಮಲ ಗ್ರಾಮ ಪ್ರಶಸ್ತಿ ಪುರಸ್ಕಾರ ಪಡೆದ ನಮ್ಮ ಗ್ರಾಮಪಂಚಾಯಿತಿಯ ಹೊಣೆ ಹೆಚ್ಚಿದೆ. ಜನರು ಈ ಬಗ್ಗೆ ಸದಾ ಜಾಗೃತರಾಗಿರಲು ಹಾಗೂ ಸ್ವಚ್ಛತೆಯಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳುವ ಜವಾಬ್ದಾರಿ ಇಲ್ಲಿನ ಪ್ರತಿಯೊಬ್ಬರದ್ದು ಎಂದು ಅವರು ಹೇಳಿದರು.ಗ್ರಾಮ ಪಂಚಾ ಯತಿ ಹೊ ಸಂಗಡಿ, ಫ್ರೆಂಡ್ಸ್ ಕ್ಲಬ್ ಹೊ ಸಂಗಡಿ, ಅರಣ್ಯ ಇಲಾಖೆ ಬೆಳ್ತಂ ಗಡಿ, ಶ್ರೀ ಕ್ಷೇತ್ರ ಧರ್ಮ ಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ), ಹೊಸಂಗಡಿ-ಬಡಕೋಡಿ, ಶಾಲಾಭಿವೃದ್ಧಿ ಸಮಿತಿ ದ.ಕ.ಜಿ.ಪ.ಹಿ.ಪ್ರಾ ಶಾಲೆ ಪೆರಿಂಜೆ ಹಾಗೂ ಆಳ್ವಾಸ್ ಸಮಾಜ ಕಾರ್ಯ ಕಾಲೇಜು ಮೂಡಬಿದ್ರೆ ಇವರ ಸಂಯುಕ್ತ ಆಶ್ರಯದಲ್ಲಿ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಪರಿಸರ ದಿನಾಚರಣೆಯ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಪರಿಸರ ಸ್ಪರ್ಧೆಗಳು, ಪರಿಸರ ಗೀತೆ, ಎಲೆ ಗುರುತಿಸುವುದು, ಚಿತ್ರಕಲೆ, ಭಾಷಣ, ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಅಂದು ಬೆಳಗ್ಗೆ 9ರಿಂದ 10ಗಂಟೆಯವರೆಗೆ ಗ್ರಾಮದ ವಿವಿಧ ಶಾಲಾ ಕಾಲೇಜುಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಬೆಳಗ್ಗೆ 10ರಿಂದ ಶಾಲೆಯಲ್ಲಿ ಗಿಡ ನೆಡುವುದು ಮತ್ತು ತರಕಾರಿ ತೋಟದ ರಚನೆಗೆ ಶ್ರಮದಾನವನ್ನು ಗ್ರಾಮಸ್ಥರು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿಗಳು ಮಾಡಿದರು. ಈ ಎಲ್ಲ ಕಾರ್ಯ ಕ್ರಮಗಳು ಎಸ್ ಡಿ ಎಂ ಪ್ರೌಢ ಶಾಲೆ ಪೆರಿಂಜೆ ಹಾಗೂ ದ.ಕ. ಜಿ.ಪ. ಹಿ.ಪ್ರಾ ಶಾಲೆ ಪಡ್ಡಂ ದಡ್ಕ, ಪೆರಿಂಜೆ ಮತ್ತು ಬಡ ಕೋಡಿ ಶಾಲೆ ಗಳಲ್ಲಿ ಏಕ ಕಾಲ ದಲ್ಲಿ ನಡೆಯಿತು. ಅರಣ್ಯ ಇಲಾಖೆ ಯವರು ರಸ್ತೆಯ ಇಕ್ಕೆಲ ಗಳಲ್ಲಿ ಸಸಿ ಗಳನ್ನು ಇಲಾಖೆ ಯ ವತಿ ಯಿಂದ ನೆಟ್ಟರು.
ಕಳೆದ ಸಾಲಿನಲ್ಲಿ ಪೆರಿಂಜೆ ಶಾಲಾವನ ಹಾಗೂ ಸುತ್ತಮುತ್ತಲೂ ನೆಟ್ಟಿದ್ದ 400 ಸಸಿಗಳು ಬೆಳೆದು ನಿಂತಿದ್ದು ಇಲ್ಲಿನ ವಿದ್ಯಾರ್ಥಿಗಳಿಗೆ ಮತ್ತು ಹಿರಿಯರಿಗೆ ಶಾಲಾ ವನ ಬೆಳೆಸುವಲ್ಲಿ ಇರುವ ಆಸಕ್ತಿಗೆ ಸಾಕ್ಷಿಯಾಗಿತ್ತು. ಕಳೆದ ಸಾಲಿನಲ್ಲಿ ಆನಂದ ಬಂಗೇರ ಅವರು ಶಾಲೆಗೆ ನೀಡಿದ 30 ತೆಂಗಿನ ಸಸಿಗಳನ್ನು ಇದೇ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಗೆ ಹಸ್ತಾಂತರ ಮಾಡಲಾಯಿತು.
ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಆಸಕ್ತಿ ಹಾಗೂ ಜಾಗೃತಿ ಮೂಡಿಸಲು ಗ್ರಾಮದ ಸರ್ಕಾರಿ ಶಾಲೆಗಳಿಗೆ ಹಸಿರು ಪೆಟ್ಟಿಗೆಯನ್ನು ವಿತರಿಸಲಾಯಿತು. ವರ್ಷ ಪೂರ್ತಿ ಹಸಿರು ಪೆಟ್ಟಿಗೆಯಲ್ಲಿ ಪರಿಸರದ ಬಗ್ಗೆ ಉತ್ತಮ ಲೇಖನಗಳನ್ನು ಬರೆಯುವ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವುದಾಗಿ ಗ್ರಾಮ ಪಂಚಾಯಿತಿ ಹೇಳಿತು.ಸಭಾ ಕಾರ್ಯ ಕ್ರಮದಲ್ಲಿ ಹೊ ಸಂಗಡಿ ತಾಲೂಕು ಪಂಚಾ ಯಿತಿ ಅಧ್ಯಕ್ಷ ರಾದ ಶ್ರೀಮತಿ ಲೀನಾ ಡಿ' ಕೋಸ್ಟ, ಬೆಳ್ತಂ ಗಡಿ ಎ ಪಿ ಯಂ ಸಿ ಸದಸ್ಯ ರಾದ ಧರ ಣೇಂದ್ರ ಕುಮಾರ್, ವೇಣೂರು ವಲಯ ಅರಣ್ಯಾ ಧಿಕಾರಿ ಜಿ.ಎಸ್. ಕೊಟ್ಟಾರಿ, ಸಾಮಾಜಿಕ ಅರಣ್ಯ ವಿಭಾಗದ ವಲಯ ಅಧಿಕಾರಿ ಸುಬ್ರಹ್ಮಣ್ಯ ಗೌಡ, ಶ್ರೀ ಕ್ಷೇ. ಧ.ಗ್ರಾ. ಯೋ. ಯೋಜನಾಧಿಕಾರಿ ವಸಂತ ಸಾಲ್ಯಾನ್, ದ. ಕ ಜಿಲ್ಲಾ ನೆರವು ಘಟಕದ ಶ್ರೀಮತಿ ಮಂಜುಳಾ ಎಲ್, ಹರಿಪ್ರಸಾದ್, ಆಸಕ್ತ ಜನರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Saturday, July 16, 2011

ಪರಿಶೀಲನೆ ನಂತರ ಬಸ್ ದರ ಏರಿಕೆ ತೀರ್ಮಾನ ; ಜಿಲ್ಲಾಧಿಕಾರಿ

ಮಂಗಳೂರು,ಜುಲೈ.16:ಇತ್ತೀಚಿನ ದಿನಗಳಲ್ಲಿ ಇಂಧನ,ವಾಹನದ ಬಿಡಿಭಾಗಗಳ ಬೆಲೆ ಏರುತ್ತಿರುವುದರಿಂದ ಖಾಸಗಿ ಬಸ್ ಪ್ರಯಾಣದರ ಏರಿಸುವುದು ಸೂಕ್ತವೇ?ಅಲ್ಲವೇ? ಎಂಬ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಎನ್.ಎಸ್.ಚನ್ನಪ್ಪ ಗೌಡ ಅವರು ತಿಳಿಸಿದರು.

ಇಂದು ತಮ್ಮ ಕಚೇ ರಿಯ ಸಭಾಂ ಗಣ ದಲ್ಲಿ ಜರು ಗಿದ ಪ್ರಾ ದೇಶಿಕ ಸಾರಿಗೆ ಪ್ರಾಧಿ ಕಾರದ ಸಭೆ ಯಲ್ಲಿ ಸಾರ್ವ ಜನಿಕರ ಹಾಗೂ ಖಾಸಗಿ ಬಸ್ ಮಾ ಲೀಕರ ಅಹ ವಾಲು ಆಲಿಸಿದ ನಂತರ ಜಿಲ್ಲಾಧಿ ಕಾರಿ ಗಳು ಪರಿ ಶೀಲನೆ ನಂತರ ಖಾಸಗಿ ಬಸ್ ಪ್ರಯಾಣ ದರ ನಿಗಧಿಗೆ ಸರ್ಕಾ ರದ ಮಾರ್ಗ ದರ್ಶ ನದಂತೆ ತೀ ರ್ಮಾನ ಕೈ ಗೊಳ್ಳುವುದಾಗಿ ತಿಳಿಸಿದರು.
ಸಭೆಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮಾತನಾಡಿ ಈಗಾಗಲೇ ಎಲ್ಲಾ ದರಗಳು ಏರಿಕೆಯಾಗಿ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿರುವುದರಿಂದ ಹಾಗೂ ಕಡಿಮೆ ಸಂಬಳಗಾರರು ದರ ಏರಿಕೆಯಿಂದ ತತ್ತರಿಸುತ್ತಿರುವಾಗ ಖಾಸಗಿ ಪ್ರಯಾಣ ದರವನ್ನು ಏರಿಕೆ ಮಾಡಬಾರದಾಗಿ ಸಭೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸಿದರು. ಖಾಸಗಿ ಬಸ್ ಗಳ ರಹದಾರಿಯನ್ನು ರದ್ದು ಪಡಿಸಿ ಮಾರ್ಗಗಳನ್ನು ರಾಷ್ಟ್ರೀಕರಣಗೊಳಿಸಿ ಸರ್ಕಾರಿ ಬಸ್ ಸಂಚಾರ ಆರಂಭಿಸುವಂತೆ ಪ್ರಾಧಿಕಾರದವರಲ್ಲಿ ಮನವಿ ಮಾಡಿದರು. ಬಸ್ ಮಾಲೀ ಕರ ಸಂಘದ ಪದಾ ಧಿಕಾ ರಿಗಳು ಮಾತ ನಾಡಿ ಬಸ್ ಪ್ರಯಾಣ ದರ ವನ್ನು ಕನಿಷ್ಠ 0-50 ಪೈಸೆ ಗಳನ್ನು ಮೊದಲ 4 ಸ್ಟೇಜ್ ಗಳ ತನಕ ಹಾಗೂ ನಂತ ರದ ಸ್ಟೇಜ್ ಗಳಿಗೆ ರೂ.1.00 ಕನಿಷ್ಠ ಏರಿಕೆ ಮಾಡು ವಂತೆ ವಿನಂತಿ ಸಿದರು. ಪ್ರತೀ ಕಿಲೋ ಮೀಟರ್ ಗೆ ತಮಗೆ ತಗ ಲುವ ವೆಚ್ಚ ಹೆಚ್ಚಾ ಗಿರು ವುದರಿಂದ ಅನಿ ವಾರ್ಯ ವಾಗಿ ಪ್ರಯಾಣ ದರ ಏರಿಕೆ ಮಾಡದ ಹೊರತು ತಮಗೆ ನಷ್ಟ ಉಟಾ ಗಲಿದೆ ಯೆಂದರು.ಸಾರ್ವಜನಿಕರ ಹಾಗೂ ಖಾಸಗಿ ಬಸ್ ಮಾಲೀಕರ ಅಹವಾಲು ಆಲಿಸಿದ ಜಿಲ್ಲಾಧಿಕಾರಿಗಳು ಮತ್ತೊಂದು ಬಾರಿ ಸಭೆ ಕರೆದು ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.
ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಮಲ್ಲಿಕಾರ್ಜುನ,ಸದಸ್ಯರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಲಾಬುರಾಂ ಅವರು ಉಪಸ್ಥಿತರಿದ್ದರು.