Tuesday, July 5, 2011

ಕಡ್ಡಾಯ ಶಿಕ್ಷಣ ಕಾಯಿದೆಯಿಂದ ಎಲ್ಲ ಮಕ್ಕಳಿಗೂ ಶಿಕ್ಷಣ: ಜಿಲ್ಲಾಧಿಕಾರಿ

ಮಂಗಳೂರು,ಜುಲೈ.05:ಸರ್ಕಾರ ರೂಪಿಸಿರುವ ಕಡ್ಡಾಯ ಶಿಕ್ಷಣ ಕಾಯಿದೆಯಿಂದಾಗಿ ಎಲ್ಲ ಮಕ್ಕಳಿಗೂ ಶಿಕ್ಷಣ ಲಭ್ಯ. ಯಾವುದೇ ಮಗುವು ಶಿಕ್ಷಣದಿಂದ ವಂಚಿತವಾಗಬಾರದೆಂಬ ಸದುದ್ದೇಶದಿಂದ ಕಾಯಿದೆ ರೂಪುಗೊಂಡಿದ್ದು ಸೌಲಭ್ಯದ ಸದ್ಬಳಕೆಯಾಗಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪಗೌಡ ಅವರು ಹೇಳಿದರು.

ಅವರಿಂದು ನಗರದ ಮಣ್ಣ ಗುಡ್ಡೆಯ ಗಾಂಧೀ ನಗರ ಸರ್ಕಾರಿ ಪ್ರಾಥ ಮಿಕ ಶಾಲೆ ಯಲ್ಲಿ ಶಾಲೆ ಗಾಗಿ ನಾವು ನೀವು ಎಂಬ ಕಾರ್ಯ ಕ್ರಮ ದಲ್ಲಿ ಪಾಲ್ಗೊಂಡು ಮಾತ ನಾಡು ತ್ತಿದ್ದರು. ಗುಣಾ ತ್ಮಕ ಶಿಕ್ಷಣ ಕ್ಕಾಗಿ ಕ್ರಿಯಾ ಶೀಲ ಆಡಳಿತ ಎಂಬ ಘೋಷ ವಾಕ್ಯದಡಿ ಶ್ವೇತ ಪತ್ರ ಹಾಗೂ ಕೈಪಿಡಿ ಬಿಡು ಗಡೆ ಮಾಡಿ ವಿದ್ಯಾರ್ಥಿ ಗಳನ್ನು ಉದ್ದೇ ಶಿಸಿ ಮಾತ ನಾಡಿದರು. ಮಾತೃಭಾಷೆಯಲ್ಲಿ ಕಲಿಕೆಯಿಂದ ವಿಷಯಗ್ರಹಿಕೆ ಸುಲಭ ಎಂದ ಜಿಲ್ಲಾಧಿಕಾರಿಗಳು ಸರ್ಕಾರಿ ಶಾಲೆಗಳಲ್ಲಿ ಪೋಷಕರ ಮನೋಭಾವವನ್ನು ಬದಲಾಯಿಸುವಂತಹ ಉತ್ತಮ ಪರಿಸರವಿರಬೇಕು; ವಿಚಾರಗಳಿರಬೇಕು. ಶಿಕ್ಷಕರು ಸಂಪನ್ಮೂಲ ವ್ಯಕ್ತಿಗಳಾಗಿರಬೇಕು ಎಂದರು. ಎಸ್ ಎಸ್ ಎಲ್ ಸಿಯ ಫಲಿತಾಂಶವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಗ್ರಾಮೀಣ ಮಕ್ಕಳು ಫಲಿತಾಂಶದಲ್ಲಿ ಮೇಲುಗೈ ಪಡೆದಿರುವ ಅಂಶ ನಿಚ್ಛಳವಾಗಿ ಗೋಚರಿಸುತ್ತದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡದಲ್ಲಿ ಶೈಕ್ಷಣಿಕ ಗುಣಮಟ್ಟ ಉತ್ತಮವಾಗಿದೆ ಎಂದರು. ಶಾಲೆಯಲ್ಲಿರುವ ಶೈಕ್ಷಣಿಕ ಸೌಲಭ್ಯಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ವಿದ್ಯಾರ್ಥಿಗಳಿಂದ ಶಿಕ್ಷಣ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು. ಉಪಯೋಜನಾಧಿಕಾರಿ ಶಿವಪ್ರಕಾಶ್, ಪಾಲಿಕೆ ಸದಸ್ಯೆ ಅಮಿತಕಲಾ, ಅಕ್ಷರದಾಸೋಹ ಅಧಿಕಾರಿ ಮಂಜುಳ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಜಲಜಾಕ್ಷಿ, ಮುಖ್ಯೋಪಾಧ್ಯಾಯರಾದ ನೇತ್ರಾವತಿ, ಹಳೆ ವಿದ್ಯಾರ್ಥಿಗಳು ಶಾಲೆಯಲ್ಲಿ ಹಾಜರಿದ್ದರು.