Friday, July 22, 2011

ನೀರಿನ ಶುಲ್ಕ ವಸೂಲಾತಿ ಮಾಡಿ ಸಂಪನ್ಮೂಲ ವೃದ್ಧಿಸಿ :ಎ.ಜಿ.ಕೊಡ್ಗಿ

ಮಂಗಳೂರು,ಜುಲೈ.22:ಮಂಗಳೂರು ಮಹಾನಗರಪಾಲಿಕೆಯು ಪ್ರತಿನಿತ್ಯ ತುಂಬೆಯಿಂದ 160 ಎಂಎಲ್ಡಿ ಪ್ರಮಾಣದಷ್ಟು ನೀರನ್ನು ನಗರದ ನಾಗರೀಕರಿಗೆ ಸರಬರಾಜು ಮಾಡುತ್ತಿದ್ದು ಗ್ರಾಹಕರೆಲ್ಲರಿಗೂ ನೀರನ ಮೀಟರ್ ಅಳವಡಿಸಿ ಕಡ್ಡಾಯವಾಗಿ ನೀರಿನ ಶುಲ್ಕ ಕಾಲಕಾಲಕ್ಕೆ ವಸೂಲಿ ಮಾಡುವ ಮೂಲಕ ಮಹಾನಗರಪಾಲಿಕೆ ಸಂಪನ್ಮೂಲ ವೃದ್ಧಿಸಿಕೊಳ್ಳುವಂತೆ ಕರ್ನಾಟಕ ರಾಜ್ಯ 3ನೇ ಹಣಕಾಸು ಆಯೋಗದ ಅನುಷ್ಠಾನ ಕಾರ್ಯಪಡೆ ಅಧ್ಯಕ್ಷರಾದ ಎ.ಜಿ.ಕೊಡ್ಗಿ ಅವರು ಸಲಹೆಯಿತ್ತಿದ್ದಾರೆ. ಅವರು ಇಂದು ಮಂಗ ಳೂರು ಮಹಾ ನಗರ ಪಾಲಿಕೆ ಯಲ್ಲಿ 3ನೇ ಹಣ ಕಾಸು ಆಯೋಗ ಶಿಫಾ ರಸು ಮಾಡಿದ್ದ ಕಾಮ ಗಾರಿ ಗಳ ಅನುಷ್ಠಾ ನದಲ್ಲಿ ಕಂಡು ಬಂದಿ ರುವ ತೊಡಕು ಗಳ ಹಾಗೂ ಸಮಸ್ಯೆ ಗಳನ್ನು ತಿಳಿದು ಕೊಂಡು ರಾಜ್ಯ ಸರ್ಕಾರಕ್ಕೆ ವರದಿ ನೀಡುವ ಸಲುವಾಗಿ ಸಭೆ ನಡೆಸಿದರು.
ಮಹಾನಗರಪಾಲಿಕೆಯವರು ತಮ್ಮ ವ್ಯಾಪ್ತಿಯ ವಾಣಿಜ್ಯ ಸಂಸ್ಥೆಗಳ/ಅಂಗಡಿಗಳವರು ಪರವಾನಿಗೆಯನ್ನು ಕಡ್ಡಾಯವಾಗಿ ಪಡೆಯುವಂತೆ ಕಟ್ಟಡ ನಿರ್ಮಾಣಕ್ಕೆ ಸೂಕ್ತ ಪರವಾನಿಗೆಯನ್ನು ಪಡೆದೇ ನಿರ್ಮಿಸುವಂತೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಂಡಲ್ಲಿ ನಗರಪಾಲಿಕೆ ವರಮಾನ ಹೆಚ್ಚಲಿದೆ ಎಂದರು.ಮಂಗಳೂರು ಮಹಾನಗರಪಾಲಿಕೆಯಲ್ಲಿ 1338 ಮಂಜೂರಾದ ಸಿಬ್ಬಂದಿಗಳು. ಆದರೆ ಇದೀಗ 08 ಎ ಶ್ರೇಣಿ ,11 ಬಿ ಶ್ರೇಣಿ ,126 ಸಿ ದರ್ಜೆ ಹಾಗೂ 335 ಡಿ ದರ್ಜೆ ಹುದ್ದೆಗಳು ಹಾಲಿ ಖಾಲಿ ಇದ್ದು, ಇದರಿಂದ ನಗರಪಾಲಿಕೆಯ ದೈನಂದಿನ ಕೆಲಸ ಕಾರ್ಯಗಳು ವಿಳಂಬವಾಗುತ್ತಿದೆ ಎಂದು ಪ್ರಭಾರ ಆಯುಕ್ತರಾದ ವಿಜಯಲಕ್ಷ್ಮಿ ನಾಯಕ್ ಅವರು ಅಧ್ಯಕ್ಷರ ಗಮನಕ್ಕೆ ತಂದರು.ಮಹಾ ನಗರ ಪಾಲಿಕೆ ವ್ಯಾಪ್ತಿ ಯಲ್ಲಿ ಒಟ್ಟು 21 ಕೊಳಚೆ ಪ್ರದೇಶ ಗಳಿದ್ದು, 1776 ಕುಟುಂಬ ಗಳು ವಾಸ ಮಾಡು ತ್ತಿದ್ದಾರೆ. ಇವರಿಗೆ ಸ್ವಂತ ಮನೆ ಗಳನ್ನು ಕಟ್ಟಿ ಕೊಡಲು ಕ್ರಮ ಕೈ ಗೊಳ್ಳ ಲಾಗಿದ್ದು ,ಬಹು ಮಹಡಿ ಮಾದರಿ ಮನೆ ಗಳನ್ನು ನಿರ್ಮಿಸುವುದಾಗಿ ಅಧ್ಯಕ್ಷರಿಗೆ ತಿಳಿಸಿದರು.
ಹಣಕಾಸು ಆಯೋಗದ ಸದಸ್ಯ ಡಾ.ಕಂಠಿ,ಮೇಯರ್ ಪ್ರವೀಣ್,ಸಂಸದರಾದ ನಳಿನ್ ಕುಮಾರ್ ಕಟೀಲ್, ಜಿಲ್ಲಾಧಿಕಾರಿ ಡಾ.ಎನ್.ಎಸ್,ಚನ್ನಪ್ಪ ಗೌಡ,ಉಪ ಮೇಯರ್ ಶ್ರೀಮತಿ ಗೀತಾ ನಾಯಕ್ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.