Thursday, July 21, 2011

ರೂ.4 ಲಕ್ಷ ಶೈಕ್ಷಣಿಕ ಸಾಲಕ್ಕೆ ಜಾಮೀನು ಕಡ್ಡಾಯವಿಲ್ಲ

ಮಂಗಳೂರು,ಜುಲೈ.21:ಬಡ ಪ್ರತಿಭಾವಂತ ಮಕ್ಕಳಿಗೆ ರಾಷ್ಟ್ರೀಕೃತ ಬ್ಯಾಂಕುಗಳು ನೀಡುತ್ತಿರುವ ಶೈಕ್ಷಣಿಕ ಸಾಲದ ಪ್ರಮಾಣ ರೂ.4 ಲಕ್ಷದ ವರೆಗೆ ಯಾವುದೇ ಜಾಮೀನು ಕಡ್ಡಾಯವಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕಿನ ಪ್ರಬಂಧಕರಾದ ಎಂ.ಎಸ್.ಹಸನ್ ಅವರು ತಿಳಿಸಿದ್ದಾರೆ. ಅವರು ಇಂದು ಮಂಗಳೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ.ಖಾದರ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಸಣ್ಣ ಮತ್ತು ಮಧ್ಯಮ ಕೈಗಾ ರಿಕೆ ಗಳಿಗೆ ನೀಡುವ ರೂ.10 ಲಕ್ಷದ ವರೆ ಗಿನ ಸಾಲಕ್ಕೂ ಜಾಮೀನು ಆವಶ್ಯ ಕತೆ ಯಿಲ್ಲವೆಂದು ಹಾಗೂ ಈ ಬಗ್ಗೆ ಗ್ರಾಹ ಕರಿಗೆ ತೊಂದರೆ ನೀಡ ಬಾರ ದಾಗಿ ವಿವಿಧ ಬ್ಯಾಂಕು ಗಳ ಅಧಿಕಾ ರಿಗಳಿಗೆ ತಾಕೀತು ಮಾಡಿದರು.
ಲೀಡ್ ಬ್ಯಾಂಕ್ ಸಿಂಡಿ ಕೇಟ್ ಬ್ಯಾಂಕ್ ಉಪ ಮಹಾ ಪ್ರಬಂಧ ಕರಾದ ಜೆ.ಎಸ್.ಶೆಣೈ ಯವರು ಈ ಸಂದರ್ಭ ದಲ್ಲಿ ಮಾತ ನಾಡಿ ಜಿಲ್ಲೆಯಲ್ಲಿ 2011ರ ಮಾರ್ಚ್ ಅಂತ್ಯಕ್ಕೆ 25,885 ಕೋಟಿ ರೂ.ಗಳ ವಹಿವಾಟನ್ನು ನಡೆಸಲಾಗಿದ್ದು,ಜಿಲ್ಲೆಯ 427 ಬ್ಯಾಂಕ್ ಶಾಖೆಗಳಲ್ಲಿ ರೂ.16,472 ಕೋಟಿ ಠೇವಣಿ ಸಂಗ್ರಹಿಸಲಾಗಿದ್ದರೆ, ಇದೇ ಅವಧಿಯಲ್ಲಿ ರೂ.9413 ಕೋಟಿ ಮುಂಗಡವನ್ನು ನೀಡಲಾಗಿದೆ ಎಂದರು.
ಲೀಡ್ ಬ್ಯಾಂಕಿನ ಜಿಲ್ಲಾ ಮುಖ್ಯ ವ್ಯವಸ್ಥಾಪಕರಾದ ಹೇಮಂತ್ ಭಿಡೆ ಅವರು ಮಾತನಾಡಿ ಆದ್ಯತಾ ವಲಯ ಸಾಲ ಯೋಜನೆ 2010-11 ನೇ ಸಾಲಿನಲ್ಲಿ 2275 ಕೋಟಿ ರೂ.ನಿಗಧಿಯಾಗಿದ್ದು 2382 ಕೋಟಿ ರೂ.ಗಳ ಸಾಲ ಬಿಡುಗಡೆಗೊಳಿಸಲಾಗಿದೆ ಎಂದರು. ಇದರಿಂದಾಗಿ ವಾಷರ್ಿಕ ಗುರಿಯ ಶೇ.87 ರಷ್ಟುಸಾಧಿಸಲಾಗಿದೆ. ಕೃಷಿ ವಲಯಕ್ಕೆ 1173 ಕೋಟಿ ಸಣ್ಣ ಕೈಗಾರಿಕೆಗಳಿಗೆ 440 ಕೋಟಿ ಮತ್ತಿತರ ಆದ್ಯತಾ ವಲಯಕ್ಕೆ ರೂ.770 ಕೋಟಿ ಸಾಲ ನೀಡಲಾಗಿದೆ ಎಂದರು. ಕಿಸಾನ್ ಕ್ರೆಡಿಟ್ ಕಾಡ್ರ್ ಯೋಜನೆಯಡಿ ಜಿಲ್ಲೆಯಲ್ಲಿ ಬ್ಯಾಂಕುಗಳು 56245 ಜನರಿಗೆ ಕಾಡ್ರ್ ಗಳನ್ನು ಬಿಡುಗಡೆ ಮಾಡಲಾಗಿದ್ದು ರೈತರಿಗೆ 1934 ಕೋಟಿ,ಮಹಿಳೆಯರಿಗೆ 1141 ಕೋಟಿ,ದುರ್ಬಲ ವರ್ಗದವರಿಗೆ 1220 ಕೋಟಿ ಹಾಗೂ ಅಲ್ಪ ಸಂಖ್ಯಾತರಿಗೆ 1447 ಕೋಟಿ ಸಾಲ ವಿತರಿಸಲಾಗಿದೆಯೆಂದರು.ಸರ ಕಾರಿ ಪ್ರಾ ಯೋಜಿತ ಯೋಜನೆ ಗಳಿಗೆ 2010-11 ನೇ ಸಾಲಿ ನಲ್ಲಿ ಹಿಂದು ಳಿದ ವರ್ಗ ಅಲ್ಪ ಸಂಖ್ಯಾ ತರ ಅಭಿ ವೃದ್ಧಿ ಕಾರ್ಪೋ ರೇಷನ್ ಚೈತನ್ಯ ಯೋಜನೆ ಯಡಿ 178 ಜನರಿಗೆ ಸ್ವಾವ ಲಂಬ ನಾ ಯೋಜನೆ ಯಡಿ 455 ಜನರಿಗೆ ಸಾಲ ದೊರೆ ತಿದೆ. ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡದ ಅಭಿವೃದ್ಧಿ ಕಾರ್ಪೋರೇಷನ್ ಯೋಜನೆಯಡಿಯಲ್ಲಿ 149 ಜನರಿಗೆ ಸಾಲ ಬಿಡುಗಡೆ ಮಾಡಿದೆ. ಈ ವರ್ಷ ಒಟ್ಟು 26085 ಸ್ವಸಹಾಯ ಸಂಘಗಳು ಬ್ಯಾಂಕ್ ಗಳಿಂದ ಸಾಲ ಪಡೆದಿವೆ. ಇವುಗಳಿಗೆ 460 ಕೋಟಿ ಸಾಲ ಬಿಡುಗಡೆ ಯಾಗಿದೆ.
ಸ್ವರ್ಣ ಜಯಂತಿ ಗ್ರಾಮ ಸ್ವರೋಜ್ ಗಾರ್ ಯೋಜನೆಯಲ್ಲಿ 180 ಸ್ವಸಹಾಯ ಗುಂಪುಗಳಿಗೆ ಸ್ವ ಉದ್ಯೋಗಕ್ಕಾಗಿ ರೂ.111 ಲಕ್ಷ ದಷ್ಟು ಸಹಾಯಧನ ನೀಡಿದೆ. ಸಹಾಯಧನ ಯೋಜನೆಯಲ್ಲಿ ಕರ್ನಾಟಕ ಸರಕಾರದಿಂದ ವಾಜಪೇಯಿ ನಗರ ವಸತಿ ಯೋಜನೆಯನ್ನು ಮುನಿಸಿಪಾಲಿಟಿ,ನಗರಪಂಚಾಯತಿ,ಪಟ್ಟಣ ಪಂಚಾಯತಿ ಪ್ರದೇಶಗಳಲ್ಲಿ ಆರ್ಥಿಕವಾಗಿ ಹಿಂದುಳಿದವರು ಮತ್ತು ಕಡಿಮೆ ಆದಾಯದವರಿಗೆ ರೂ.1.30 ಲಕ್ಷ ದವರೆಗೆ ಮನೆ ಕಟ್ಟಿಕೊಳ್ಳುವ ಯೋಜನೆ ಜಾರಿಯಲ್ಲಿದೆ.ಈ ಜಿಲ್ಲೆಗೆ 1325 ಗುರಿ ನಿಗಧಿಪಡಿಸಲಾಗಿದೆ. ಈ ಯೋಜನೆಯಲ್ಲಿ ರೂ.50,000 ವರೆಗೆ ಸರಕಾರದ ಸಹಾಯಧನ ರೂ.30000 ಫಲಾನುಭವಿ ಹಣ ಭರಿಸಬೇಕು.ಉಳಿದ ರೂ.50,000 ವರೆಗೆ ಬ್ಯಾಂಕ್ ಮೂಲಕ ಸಾಲ ಪಡೆಯಬಹುದು.
ಸಭೆಯಲ್ಲಿ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ನ ಪ್ರಭಾರ ಮುಖ್ಯ ಕಾರ್ಯ ನಿವರ್ವಾಹಕ ಅಧಿಕಾರಿ ಶಿವರಾಮೇಗೌಡ,ಮುಖ್ಯ ಯೋಜನಾಧಿಕಾರಿ ತಾಕತ್ ರಾವ್,ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಸೀತಮ್ಮ ,ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳು ಭಾಗವಹಿಸಿದ್ದರು.