Thursday, July 21, 2011

6,68,600 ರೂ.ಗಳ ಕ್ರಿಯಾಯೋಜನೆಗೆ ಅನುಮೋದನೆ

ಮಂಗಳೂರು,ಜುಲೈ.21: 2011-12ನೇ ಸಾಲಿನಲ್ಲಿ ನೆಹರೂ ಯುವಕೇಂದ್ರಕ್ಕೆ ಕಾರ್ಯಕ್ರಮ ಅನುಷ್ಠಾನಕ್ಕೆ ಸಂಬಂಧಿಸಿದಂತೆ 6,68,600 ರೂ.ಗಳ ಕ್ರಿಯಾಯೋಜನೆಗೆ ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪಗೌಡ ಅವರು ಅನುಮೋದನೆ ನೀಡಿದರು.
ನೆಹರೂ ಯುವ ಕೇಂದ್ರಕ್ಕೆ ಸಂಬಂಧಿ ಸಿದಂತೆ ಜಿಲ್ಲಾ ಸಲಹಾ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿ ಕಾರಿಗಳು ಕ್ರಿಯಾ ಯೋಜನೆಯ ಬಗ್ಗೆ ಜುಲೈ 20ರಂದು ನಡೆದ ಸಭೆಯಲ್ಲಿ ಮಾಹಿತಿ ಪಡೆದರಲ್ಲದೆ ಪರಿಣಾಮಕಾರಿ ಅನುಷ್ಠಾನಕ್ಕೆ ಮಾರ್ಗದರ್ಶನವನ್ನೂ ನೀಡಿದರು.
ಮಂಗಳುರು, ಬಂಟ್ವಾಳ, ಪುತ್ತೂರು,ಸುಳ್ಯ ಹಾಗೂ ಬೆಳ್ತಂಗಡಿ ಬ್ಲಾಕ್ ಗಳಲ್ಲಿ ಮೆಂಟರ್ ಯೂತ್ ಕ್ಲಬ್ ಪ್ರೊಜೆಕ್ಟ್ ಗೆ ಒಂದು ಲಕ್ಷ ರೂ., ಮಂಗಳೂರಿನ ಕ್ರಿಯಾ ಶೀಲ ಯುವಸಂಘಟನೆ ಸದಸ್ಯರಿಗೆ 50,000ರೂ., ಯೂತ್ ಕ್ಲಬ್ ಎಕ್ಸ್ ಚೇಂಜ್ ಕಾರ್ಯಕ್ರಮಕ್ಕೆ 70,600 ರೂ., ಸಂಸದರ ಮಾರ್ಗದರ್ಶನದಂತೆ ಯೂತ್ ಕ್ಲಬ್ ಗಳಿಗೆ ಸೌಲಭ್ಯ ಒದಗಿಸಲು 1,56,000ರೂ.ಗಳ ವಿಶೇಷ ಯೋಜನೆ, ವಕ್ರ್ ಕ್ಯಾಂಪ್ ಗೆ ಮಂಗಳೂರು ಮತ್ತು ಪುತ್ತೂರನ್ನು ಆಯ್ಕೆ ಮಾಡಲಾಗಿದ್ದು 40,000ರೂ., ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮಗಳಿಗೆ 37,500ರೂ., ಜಾನಪದ ಸಾಂಸ್ಕೃತಿಕ ಕಾರ್ಯಕ್ರಮದಡಿ ಬಂಟ್ವಾಳ, ಪುತ್ತೂರು ಮತ್ತು ಸುಳ್ಯ ತಾಲೂಕಿಗೆ ತಲಾ 10,000ರೂ., ಬೆಳ್ತಂಗಡಿಯಲ್ಲಿ ಆಯೋಜಿಸಲು ನಿರ್ಧರಿಸಲಾಗಿರುವ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 20,000ರೂ., ಜಿಲ್ಲಾ ಯುವ ಪ್ರಶಸ್ತಿಗೆ 10.000ರೂ., ರಾಷ್ಟ್ರೀಯ, ಅಂತಾರಾಷ್ಟ್ರೀಯ ದಿನಾಚರಣೆ ಮತ್ತು ಮಾಸಾಚರಣೆಗಳಿಗೆ 42,000 ರೂ., ಮೀಸಲಿರಿಸಿದೆ.
ರಾಷ್ಟ್ರೀಯ ಯುವ ಸಪ್ತಾಹಕ್ಕೆ 16,000ರೂ., ಜಿಲ್ಲಾ ಯುವ ಸಮ್ಮೇಳನಕ್ಕೆ 25,000ರೂ., ದಾಖಲೀಕರಣಕ್ಕೆ 5,000ರೂ., ಇತರೆ ಖಚರ್ಿಗೆ 4,000ರೂ.ಗಳ ಕ್ರಿಯಾಯೋಜನೆಯನ್ನು ಸಿದ್ದಪಡಿಸಲಾಗಿದೆ. ಯುವಜನಾಂಗದ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ ಎಂದು ಜಿಲ್ಲಾಧಿಕಾರಿಗಳು ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿಗಳಾದ ಸಿ ಜೆ ಎಫ್ ಡಿ ಸೋಜಾ ಅವರಿಗೆ ಹೇಳಿದರು. ಸಭೆಯಲ್ಲಿ ಇಲಾಖೆಯ ವಿಷ್ಣುಮೂರ್ತಿ, ಕುಂದಾಪುರ, ಕಾರ್ಕಳ, ಮೈಸೂರು, ಉಡುಪಿ ಜಿಲ್ಲಾ ಯುವ ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸಿದ್ದರು.
ಕುಳಾಯಿ ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ರಮಾ ವಿಷ್ಣುಮೂರ್ತಿ ಅವರು ತಮ್ಮ ಮಹಿಳಾ ಮಂಡಲದ ಸಾಧನೆ ಬಗ್ಗೆ ಹಾಗೂ ಈಗ ಪ್ರಸಕ್ತ ಇರುವ ಕಟ್ಟಡದ ಬದಿಯಲ್ಲಿರುವ ಸರ್ಕಾರಿ ಜಾಗವನ್ನು ಅತಿಕ್ರಮಿಸಲಾಗಿದ್ದು, ಆ ಜಾಗವನ್ನು ಮಹಿಳಾ ಮಂಡಳಿಗೆ ನೀಡಬೇಕೆಂದು ಕೋರಿ ಮನವಿ ಸಲ್ಲಿಸಿದರು.