Tuesday, July 5, 2011

ಜುಲೈ 8 ರಂದು ವಿಪತ್ತು ನಿರ್ವಹಣೆ ಕುರಿತು ಎನ್ ಸಿಸಿ ಕೆಡೆಟ್ ಗಳಿಗೆ ತರಬೇತಿ

ಮಂಗಳೂರು,ಜುಲೈ.05:ರಾಷ್ಟ್ರೀಯ ವಿಪತ್ತು ನಿರ್ವಹಣೆ ಪ್ರಾಧಿಕಾರದ ಆದೇಶದ ಮೇರೆಗೆ ಜುಲೈ 8 ರಂದು ನಗರದ ಕರ್ನಾಟಕ ಪಾಲಿಟೆಕ್ನಿಕ್ನಲ್ಲಿ ಎನ್ ಸಿಸಿ ಕೆಡೆಟ್ ಗಳಿಗೆ ಒಂದು ದಿನದ ವಿಪತ್ತು ನಿರ್ವಹಣೆ ಅಣುಕು ಪ್ರದರ್ಶನ ಮತ್ತು ತರಬೇತಿಯನ್ನು ನೀಡಲಾಗುವುದೆಂದು ಅಪರ ಜಿಲ್ಲಾಧಿಕಾರಿ ಕೆ.ಪ್ರಭಾಕರ ಶರ್ಮಾ ಅವರು ತಿಳಿಸಿದ್ದಾರೆ.
ಅವರು ಇಂದು ಈ ಬಗ್ಗೆ ನಡೆದ ಜಿಲ್ಲಾ ವಿಪತ್ತು ನಿರ್ವ ಹಣಾ ಸಮಿತಿ ಸಭೆ ಯಲ್ಲಿ ಈ ವಿಷಯ ತಿಳಿ ಸಿದರು.ಒಟ್ಟು 540 ಎನ್ ಸಿ ಸಿ ಕೆಡೆಟ್ ಗಳು ಶಿಬಿರ ದಲ್ಲಿ ಭಾಗ ವಹಿಸ ಲಿರುವರು. ಅವರಿಗೆ ಗಗನ ಚುಂಬಿ ಕಟ್ಟಡ ಗಳಲ್ಲಿ ಅವ ಘಡ ಗಳು ಸಂಭ ವಿಸಿದಾಗ ಅಪಘಾತಕ್ಕೀಡಾದವರನ್ನು ರಕ್ಷಿಸುವ, ಬೆಂಕಿ ನಂದಿಸುವಿಕೆ ಬಗ್ಗೆ ಉಪನ್ಯಾಸ ಹಾಗೂ ಪ್ರದರ್ಶನ ಪ್ರಥಮ ಚಿಕಿತ್ಸೆ ಮತ್ತು ಗಾಯಾಳುಗಳ ಗುಂಪು ನಿರ್ವಹಣೆ, ವಿಪತ್ತು ನಿರ್ವಹಣೆಯಲ್ಲಿ ಎನ್ ಸಿ ಸಿ ಹಾಗೂ ಎನ್ಎಸ್ ಎಸ್ ನ ಪಾತ್ರದ ಬಗ್ಗೆ ಹಾಗೂ ಭೂಕಂಪ ಪ್ರವಾಹ ಸಂದರ್ಭಗಳಲ್ಲಿ ನಿರ್ವಹಣೆ ಕುರಿತು ತರಬೇತಿ ನೀಡಲಾಗುವುದೆಂದರು.
ಸಭೆಯಲ್ಲಿ ಅಗ್ನಿಶಾಮಕ ಅಧಿಕಾರಿ,ಆರೋಗ್ಯ ಇಲಾಖೆ ಅಧಿಕಾರಿಗಳು ಮುಂತಾದವರು ಭಾಗವಹಿಸಿದ್ದರು.