Friday, July 1, 2011

'ದನಿಯಿಲ್ಲದವರ ದನಿಯಾಗಿ'

ಮಂಗಳೂರು,ಜು.1:ಮಾತನಾಡುವವರಿಗೆ ಮಾತಾಗದೆ,ಮಾತನಾಡಲು


ಬಾರದ ವರ್ಗದ ದನಿ ಯಾಗಿ ಎಂದು ಲೇಖಕರು ಹಾಗೂ ಉಪ ನ್ಯಾಸಕ ರಾದ ನರೇಂದ್ರ ರೈ ದೇರ್ಲ ಅವರು ಹೇಳಿ ದರು. ಅವರಿಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರ ಕರ್ತರ ಸಂಘ ಹಾಗೂ ಪ್ರೆಸ್ ಕ್ಲಬ್ ಮಂಗ ಳೂರು ಆಯೋ ಜಿಸಿದ್ದ ಪತ್ರಿಕಾ ದಿನಾ ಚರಣೆ ಯಲ್ಲಿ 'ಅಭ್ಯು ದಯ ಪತ್ರಿ ಕೋದ್ಯಮ' ಕುರಿತು ಮಾತ ನಾಡು ತ್ತಿದ್ದರು. ದೇಶದ ಶೇ.70 ಜನರು ರೈತಾ ಪಿವರ್ಗ ದವರು. ನಮ್ಮ ದೇಶ ಕೃಷಿ ಪ್ರದಾನ ದೇಶ ವೆಂದು ಹೇಳು ತ್ತಲೇ ಆ ವಲಯ ವನ್ನು ನಾ ವಿಂದು ಕಡೆ ಗಣಿಸು ತ್ತಿದ್ದೇವೆ ಎಂದ ಅವರು ಪತ್ರಿಕೋದ್ಯಮ ಆದ್ಯತೆ ನೀಡಬೇಕಾದ ವಲಯದ ಬಗ್ಗೆ ಮಾತನಾಡಿದರು. ಕಾರ್ಯಕ್ರಮವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಉದ್ಘಾಟಿಸಿ ಸಮಾಜಮುಖಿ ಉತ್ತಮ ವಾರ್ತೆಗಳನ್ನು ಪತ್ರಕರ್ತರು ನೀಡಲಿ ಎಂದು ಶುಭಹಾರೈಸಿದರು.ಪ್ರಾಸ್ತಾವಿಕ ಮಾತುಗಳನ್ನಾಡಿದ ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಅವರು ಮೂರು ದಶಕಗಳ ತಮ್ಮ ಅನುಭವಗಳನ್ನು ಪತ್ರಕರ್ತರೊಂದಿಗೆ ಹಂಚಿಕೊಂಡರು. ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪಿ ಬಿ ಹರೀಶ್ ರೈ ಅವರು ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ವಂದಿಸಿದರು. ಪತ್ರಕರ್ತ ರವೀಂದ್ರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.