
ಅವರಿಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾ ಯತ್ ನಲ್ಲಿ ಏರ್ಪಡಿ ಸಲಾದ ತ್ರೈ ಮಾಸಿಕ ಕೆಡಿಪಿ ಸಭೆಗೆ ಮಾಹಿತಿ ನೀಡು ತ್ತಿದ್ದರು. ಜಿಲ್ಲಾ ಉಸ್ತು ವಾರಿ ಸಚಿವರ ಅಧ್ಯಕ್ಷ ತೆಯಲ್ಲಿ ನಡೆದ ಸಭೆ ಯಲ್ಲಿ ಜಿಲ್ಲೆಯ ಗ್ರಾ ಮೀಣ ಪ್ರದೇಶ ಗಳಿಗೆ ಜನ ಸಾಮಾನ್ಯ ರಿಗೆ ಅನು ಕೂಲ ವಾಗು ವಂತೆ ಬಸ್ಸಿನ ವ್ಯವಸ್ಥೆ ಇಲ್ಲದ ಕಡೆಗಳಲ್ಲಿ ಬಸ್ಸು ಗಳನ್ನು ಹಾಕುವಂತೆ ಹಾಗೂ ಬಸ್ಸುಗಳಿಗೆ ಡ್ರೈವರ್ ಗಳ ವ್ಯವಸ್ಥೆ ಮಾಡುವಂತೆ ಕಳೆದ ಸಭೆಯಲ್ಲಿ ಸೂಚಿಸಲಾಗಿತ್ತು. ಅದರಂತೆ 78 ಚಾಲಕರನ್ನು ನೇಮಿಸಲಾಗಿದ್ದು, ಬಸ್ಸುಗಳನ್ನು ಓಡಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಭಾಧ್ಯಕ್ಷತೆ ವಹಿಸಿದ್ದ ಸಚಿವರು ಕೂಡ ಮನೆ ನಂಬ್ರ ನೀಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು. ಸಂಸತ್ ಸದಸ್ಯ ನಳಿನ್ ಕುಮಾರ್ ಕಟೀಲು ಮಾತನಾಡಿ, ಇದು ಆದ್ಯತೆಯಲ್ಲಿ ಆಗಬೇಕು. ಇಲ್ಲವಾದರೆ ಬಡವರು ಇನ್ನಷ್ಟು ಕಾಲ ಸರ್ಕಾರ ನೀಡುವ ಸೌಲಭ್ಯಗಳಿಂದ ವಂಚಿತರಾಗುತ್ತಾರೆ ಎಂದರು.
ವಿಮಾನ ನಿಲ್ದಾಣಕ್ಕೆ ಬಸ್:ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬಿಜೈ ಕೆಎಸ್ಆರ್ ಟಿಸಿ ನಿಲ್ದಾಣ ಮಧ್ಯೆ ಸರಕಾರಿ ಬಸ್ ಓಡಾಟ ಪ್ರಾರಂಭಿಸಲಿದೆ. ಜುಲೈ 15ರಿಂದ ಸರಕಾರಿ ಬಸ್ ಗಳು ವಿಮಾನ ನಿಲ್ದಾಣ ಮತ್ತು ಮಂಗಳೂರು ನಗರ ಮಧ್ಯೆ ಸಂಚಾರ ಸೌಲಭ್ಯ ಒದಗಿಸುವವು ಎಂದು ಜಿಲ್ಲಾಧಿಕಾರಿ ಡಾ. ಎನ್.ಎಸ್. ಚನ್ನಪ್ಪ ಗೌಡ ಸಭೆಗೆ ತಿಳಿಸಿದರು.
ರನ್ ವೇ ವಿಸ್ತರಣೆ:ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗಾಗಿ ಭೂ ಸ್ವಾಧೀನ ಕ್ರಮ ಕೈಗೊಳ್ಳುವಂತೆ ವಿಮಾನ ನಿಲ್ದಾಣ ಪಾಧ್ರಿಕಾರದ ನಿರ್ದೇಶಕ ಎಂ.ಆರ್. ವಾಸುದೇವ್ ವಿನಂತಿಸಿದರು.
ಪುನರ್ವಸತಿ ಮತ್ತು ಭೂ ಸ್ವಾನಕ್ಕಾಗಿ ರೂ. 56 ಕೋಟಿ ಅವಶ್ಯಕತೆ ಇದೆ. ಮುಂಗಡಪತ್ರದಲ್ಲಿ ರೂ. 15 ಕೋಟಿ ಒದಗಿಸಲಾಗಿದೆ ಎಂದು ವಿವರಿಸಿದ ಸಹಾಯಕ ಆಯುಕ್ತ ಪ್ರಭುಲಿಂಗ ಕವಳಿಕಟ್ಟಿ , ಡೆಕ್ಕನ್ ಪಾರ್ಕನ್ನು ಭದ್ರತಾ ದೃಷ್ಟಿಯಿಂದ ಸ್ವಾಧೀನ ಪಡಿಸಿಕೊಳ್ಳುವ ಅವಶ್ಯಕತೆ ಇದೆ. ಆದರೆ ಅದರ ಪರಿಹಾರ ಧನವನ್ನು ಯಾರು ಪಾವತಿಸಬೇಕೆಂಬುದು ನಿರ್ಧಾರವಾಗಿಲ್ಲ ಎಂದರು.ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಕಟೀಲು -ಕಿನ್ನಿಗೋಳಿ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವಂತೆ ಅಭಯಚಂದ್ರ ಜೈನ್ ಆಗ್ರಹಿಸಿದರು.
ಜಿ.ಪಂ. ಅಧ್ಯಕ್ಷೆ ಕೆ.ಟಿ.ಶೈಲಜಾ ಭಟ್, ಉಪಾಧ್ಯಕ್ಷೆ ಧನಲಕ್ಷ್ಮೀ, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷರಾದ ಜನಾರ್ಧನ ಗೌಡ, ಈಶ್ವರ ಕಟೀಲು, ನವೀನಕುಮಾರ್ ರೈಮೇನಾಲ, ಪ್ರಭಾರ ಮುಖ್ಯ ಕಾರ್ಯ ನಿರ್ವಾಹಕ ಅಕಾರಿ ಕೆ.ಶಿವರಾಮೇ ಗೌಡ, ಮನಪಾ ಆಯುಕ್ತ ಡಾ.ವಿಜಯಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.