Thursday, June 30, 2011

`ಪೋಲಿಸ್ ಸಹಾಯವಾಣಿ '

ಮಂಗಳೂರು,ಜೂನ್.30:ಬಡಜನರಿಗೆ ,ಹಿರಿಯ ನಾಗರೀಕರಿಗೆ,ಹೆಚ್ಐವಿ ಹೊಂದಿದವರಿಗೆ ಹಾಗೂ ಇತರೆ ಜನರಿಗೆ ಪೊಲೀಸ್ ಇಲಾಖೆಯಿಂದ ಸಹಾಯವಾಗುವಂತೆ ಟೋಲ್ ಫ್ರೀ ಹೆಲ್ಪ್ ಲೈನ್ ನಂ.1800 4250 100 ರಿಂದ ಫ್ರೀ ಕಾಲ್ (ಶುಲ್ಕ ರಹಿತ)ಮಾಡಿ ಪೊಲೀಸರ ಸಹಾಯ ಅಪರಾಧ/ಅಪರಾಧಿಗಳ ಬಗ್ಗೆ/ಪೊಲೀಸ್ ಬಾಂಧವ್ಯ ಸುಧಾರಿಸಲು/ಲಂಚಗುಳಿತನ ಬಗ್ಗೆ ಹಾಗೂ ಇನ್ನಿತರ ಕುಂದುಕೊರತೆ/ಸಲಹೆ ಸೂಚನೆಗಳ ಬಗ್ಗೆ ಫ್ರೀ ಕಾಲ್ ಮಾಡಿ ತಿಳಿಸಲು ಹಾಗೂ ಪೊಲೀಸ್ ಇಲಾಖೆಯಿಂದ ಕೈಗೊಂಡ ಕ್ರಮದ ಬಗ್ಗೆ ತಿಳಿಯಬಹುದಾಗಿದೆ.ಅಲ್ಲದೆ ಬಿಎಸ್ಎನ್ಎಲ್ ಸ್ಥಿರ ದೂರವಾಣಿ/ಬಿಎಸ್ಎನ್ಎಲ್ ಮೊಬೈಲ್ ಹೊಂದಿದವರು ಕೂಡಾ ನೇರವಾಗಿ ಹೊಸ ಟ್ರೋಲ್ ಫ್ರೀ ನಂಬರ್ 155365 ಕ್ಕೆ ಸಂಪರ್ಕಿಸಿ,ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದೆಯೆಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ತಿಳಿಸಿರುತ್ತಾರೆ.

Wednesday, June 29, 2011

ಕೂಲಿ ಕಾರ್ಮಿಕರು ಗ್ರಾಮ ಪಂಚಾಯತ್ ನಲ್ಲಿ ಹೆಸರು ನೊಂದಾಯಿಸಿ

ಮಂಗಳೂರು,ಜೂನ್.29:ಪ್ರಸ್ತುತ 2011-12 ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ 203 ಗ್ರಾಮ ಪಂಚಾಯತ್ ಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

ಈ ಯೋಜನೆಯ ಅನುಷ್ಠಾನಕ್ಕಾಗಿ ಕೂಡಲೇ ಅಕುಶಲ ಕೂಲಿ ಕಾರ್ಮಿಕರು 18 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ದೈಹಿಕ ಶಕ್ತರು ತಮ್ಮ ಹೆಸರನ್ನು ಗ್ರಾಮ ಪಂಚಾಯತ್ ನಲ್ಲಿ ನೊಂದಾಯಿಸಿ ಉದ್ಯೋಗ ಚೀಟಿ ಪಡೆದು ಕೆಲಸಕ್ಕಾಗಿ ಅರ್ಜಿ ಸಲ್ಲಿಸಬೇಕು.ಆಗ ಅವರಿಗೆ ಉದ್ಯೋಗ ನೀಡಿ ಕೂಲಿ ಹಣವನ್ನು ನೀಡಲಾಗುವುದು.ಉದ್ಯೋಗ ನೀಡದಿದ್ದಲ್ಲಿ ನಿರುದ್ಯೋಗ ಭತ್ಯೆಯನ್ನು ನೀಡಲಾಗುವುದು. ಅರ್ಜಿ ನಮೂನೆಯನ್ನು ಉಚಿತವಾಗಿ ಗ್ರಾಮ ಪಂಚಾಯತ್ ಕಚೇರಿಗಳಿಂದ ಪಡೆದು ಭರ್ತಿ ಮಾಡಿ ಅದೇ ಕಚೇರಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಯನ್ನು ಗ್ರಾಮ ಪಂಚಾಯತ್ ಕಚೇರಿಗಳಲ್ಲಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ/ಕಾರ್ಯದರ್ಶಿಯವರನ್ನು ಸಂಪರ್ಕಿಸಿ ಪಡೆಯಬಹುದಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ವಾಸವಿರುವ ಅಕುಶಲ ಕೆಲಸ ಮಾಡಲು ಇಚ್ಚಿಸುವ ಕುಟುಂಬವೊಂದಕ್ಕೆ ಒಂದು ಆರ್ಥಿಕ ವರ್ಷದಲ್ಲಿ 100 ಮಾನವ ದಿನಗಳ ಕೆಲಸ ನೀಡಿ ಅವರ ಜೀವನ ಭದ್ರತೆ ಒದಗಿಸಲಾಗುವುದು.
2010-11 ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನುಷ್ಠಾನ ಮಾಡಲಾಗಿದ್ದು, ಜಿಲ್ಲೆಗೆ ಲಭ್ಯವಿರುವ ಅನುದಾನ ರೂ.3896.609 ಲಕ್ಷದಲ್ಲಿ ,203 ಗ್ರಾಮ ಪಂಚಾಯತ್ ಗಳ 17012 ಕಾಮಗಾರಿಗಳಿಗೆ ರೂ.1822.390 ಲಕ್ಷ ವೆಚ್ಚ ಮಾಡಲಾಗಿದೆ. ಈ ವೆಚ್ಚದಲ್ಲಿ ಅಕುಶಲ ಕೂಲಿ ಬಾಬ್ತು ರೂ.1056.941 ಲಕ್ಷ , ಕುಶಲ ಕೂಲಿ ಬಾಬ್ತು ರೂ.40.810 ಲಕ್ಷ ಮತ್ತು ಸಾಮಾಗ್ರಿಗಳಿಗೆ ರೂ.594.157 ಲಕ್ಷ ವೆಚ್ಚ ಮಾಡಲಾಗಿದೆ.
ಈ ಯೋಜನೆಯಡಿ ಮಾರ್ಚ್ 2011 ರ ಅಂತ್ಯದವರೆಗೆ 90502 ಕುಟುಂಬಗಳು ನೊಂದಣಿ ಮಾಡಿರುತ್ತದೆ. ಈ ಪೈಕಿ 90266 ಕುಟುಂಬಗಳಿಗೆ ಉದ್ಯೋಗ ಚೀಟಿಗಳನ್ನು ನೀಡಲಾಗಿದೆ. ಇದರಲ್ಲಿ 25357 ಕುಟುಂಬಗಳ ಸದಸ್ಯರಿಗೆ 8,87,836 ಕೆಲಸವನ್ನು ನೀಡಲಾಗಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಯಾವುದೇ ದೂರುಗಳು ಇದ್ದಲ್ಲಿ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ದೂ.ಸಂ.0824-2451036,ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ 08255-233339,ಬೆಳ್ತಂಗಡಿ 08256-232026,ಮಂಗಳೂರು-0824-2423675,ಪುತ್ತೂರು 08251-232361,ಸುಳ್ಯ 08257-230336 ಇವರಿಗೆ ದೂರವಾಣಿಯಲ್ಲಿ ದೂರು ಸಲ್ಲಿಸಬಹುದಾಗಿದೆಯೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯವರು ತಿಳಿಸಿರುತ್ತಾರೆ.

Tuesday, June 28, 2011

ನಗರದ ಮಾರುಕಟ್ಟೆಗಳಿಗೆ ಅಗತ್ಯ ಸೌಲಭ್ಯ:ಸಚಿವ ಪಾಲೆಮಾರ್

ಮಂಗಳೂರು,ಜೂನ್.28:ನಗರದ ಸೆಂಟ್ರಲ್ ಮಾರ್ಕೆಟ್,ಸ್ಟೇಟ್ ಬ್ಯಾಂಕ್ ಬಳಿಯ ಮೀನು ಮಾರುಕಟ್ಟೆ ಪ್ರದೇಶಗಳಿಗೆ ಬಂದರು, ಮೀನುಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೆಮಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ವ್ಯಾಪಾರಿಗಳ ಅಹವಾಲುಗಳನ್ನು ಆಲಿಸಿದರು.

ಮಾರು ಕಟ್ಟೆ ಪ್ರದೇಶ ಗಳಲ್ಲಿ ರುವ ವ್ಯಾಪಾ ರಿಗಳಿಗೆ ಸಮ ರ್ಪಕ ಕುಡಿ ಯುವ ನೀರು, ವಿದ್ಯುತ್,ಶುಚಿತ್ವ ಸೇರಿ ದಂತೆ ಮೂಲ ಭೂತ ಸೌಕರ್ಯ ಗಳನ್ನು ಪಾಲಿಕೆ ವತಿಯಿಂದ ಮುಂದಿನ ಒಂದು ವಾರ ದೊಳಗೆ ನೀಡಲು ಕ್ರಮ ಕೈ ಗೊಳ್ಳುವು ದಾಗಿ ಮತ್ತು ತಕ್ಷಣ ದಿಂದ ಪರಿಸ ರದ ಸುಚಿತ್ವ ವನ್ನು ನಿರ್ವ ಹಿಸಲು ಪಾಲಿಕೆಯ ಅಧಿ ಕಾರಿ ಗಳಿಗೆ ಸೂಚನೆ ನೀಡ ಲಾಗಿದೆ ಎಂದು ಸಚಿವರು ಸುದ್ದಿ ಗಾರರಿಗೆ ಹೇಳಿ ದರು.ಶೀಘ್ರ ದಲ್ಲೇ ಸರ್ಕಾ ರದ ವತಿ ಯಿಂದ 100 ಕೋಟಿ ರೂ.ಗಳ ಸು ಸಜ್ಜಿತ ಮಾರು ಕಟ್ಟೆ ನಿರ್ಮಿ ಸಲಾ ಗುವುದು ಎಂದು ಸಚಿವರು ನುಡಿದರು.
ಬೀದಿ ಬದಿ ವ್ಯಾಪರಿಗಳಿಗೆ ಆಗುತ್ತಿರುವ ತೊಂದರೆ ಗಳನ್ನು ಗಮನಿ ಸಲಾಗಿದ್ದು, ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಜಿಲ್ಲಾಧಿಕಾರಿ,ಪೋಲಿಸ್ ಮತ್ತು ಪಾಲಿಕೆಯ ಅಧಿಕಾರಿಗಳ ಸಂಯುಕ್ತ ಸಭೆ ಕರೆದು ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.ಮೇಯರ್ ಪ್ರವೀಣ್, ಉಪಮೇಯರ್ ಗೀತಾ ನಾಯಕ್, ಪಾಲಿಕೆ ಆಯುಕ್ತ ಡಾ.ವಿಜಯ ಪ್ರಕಾಶ್,ಪಾಲಿಕೆಯ ಸದಸ್ಯರುಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

Monday, June 27, 2011

ತುಮಕೂರು-ಗುಬ್ಬಿ ನಡುವೆ ನಡೆದ ಅಪಘಾತದಲ್ಲಿ ಮಡಿದವರಿಗೆ ತಲಾ ಒಂದು ಲಕ್ಷ ರೂ ಪರಿಹಾರ: ಮುಖ್ಯಮಂತ್ರಿ

ಮಂಗಳೂರು,ಜೂ.27: ಸುಬ್ರಹ್ಮಣ್ಯದಿಂದ ನೇರವಾಗಿ ಮಂಗಳೂರಿಗೆ
ಆಗ ಮಿಸಿದ ಮುಖ್ಯ ಮಂತ್ರಿ ಗಳು ಎರಡು ದಿನಗಳ ಮಾತೃ ವಿಯೋಗ ದಿಂದ ದು:ಖಿ ತರಾದ ಕರಾ ವಳಿ ಅಭಿ ವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ರಾದ ಬಿ ನಾಗ ರಾಜ ಶೆಟ್ಟಿ ಅವರ ಮನೆಗೆ ತೆರಳಿ ಸಾಂತ್ವನ ಹೇಳಿದರು.ಈ ಸಂದರ್ಭ ದಲ್ಲಿ ಮಾಧ್ಯಮ ದೊಂದಿಗೆ ಮಾತ ನಾಡಿದ ಮುಖ್ಯ ಮಂತ್ರಿಗಳು ತುಮಕೂರು - ಗುಬ್ಬಿ ನಡುವೆ ನಡೆದ ಅಪಘಾತದಲ್ಲಿ ಇಂದು ಮೃತಪಟ್ಟ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂ. ಪರಿಹಾರ ಘೋಷಿಸಿದರು.
ಈ ಸಂದ ರ್ಭದಲ್ಲಿ ಸಚಿವರಾದ ಕೃಷ್ಣ ಜೆ ಪಾಲೆಮಾರ್, ರೇಣುಕಾಚಾರ್ಯ, ವಿಧಾನಸಭಾ ಉಪಾಧ್ಯಕ್ಷರಾದ ಎನ್ ಯೋಗೀಶ್ ಭಟ್, ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನಪರಿಷತ್ ಸದಸ್ಯ ಕ್ಯಾ ಗಣೇಶ್ ಕಾರ್ಣಿಕ್ ಮತ್ತಿತರರು ಉಪಸ್ಥಿತರಿದ್ದರು.

60ಕೋಟಿ ರೂ. ವೆಚ್ಚದಲ್ಲಿ ಸುಬ್ರಹ್ಮಣ್ಯದಲ್ಲಿ ಎರಡನೇ ಹಂತದ ಕಾಮಗಾರಿ

ಮಂಗಳೂರು,ಜೂ.27:ರಾಜ್ಯಾದ್ಯಂತ ಕಳೆದ ಮೂರು ವರ್ಷಗಳಲ್ಲಿ 5,700ಕ್ಕೂ ಅಧಿಕ ಧಾರ್ಮಿಕ ಸಂಸ್ಥೆಗಳ ಅಭಿವೃದ್ದಿಗಾಗಿ, ಮೂಲಭೂತ ಸೌಕರ್ಯಕ್ಕೆ 300 ಕೋಟಿ ವೆಚ್ಚ ಮಾಡಿದ್ದು, ದೇಶ ವಿದೇಶಗಳ ಭಕ್ತಾದಿಗಳನ್ನು ಆಕರ್ಷಿಸುವ ಕುಕ್ಕೆ ಸುಬ್ರಹ್ಮಣ್ಯದ ಅಭಿವೃದ್ಧಿಗೆ ಎರಡನೇ ಹಂತದಲ್ಲಿ 60 ಕೋಟಿ ರೂ.ಗಳನ್ನು ನೀಡುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿ ಯೂರಪ್ಪ ನವರು ಹೇಳಿದರು.


ಎರ ಡನೇ ಹಂತ ದಲ್ಲಿ ನೀರು ಸರ ಬರಾಜು,ಒಳ ಚರಂಡಿ, ವಸತಿ ಗೃಹ, ಗೋ ಶಾಲೆ, ರಥದ ಮನೆ ನಿರ್ಮಿ ಸುವು ದಾಗಿ ಹೇಳಿ ದರು. ಇದೇ ಸಂದ ರ್ಭದಲ್ಲಿ 5 ಕೋಟಿ ರೂ. ವೆಚ್ಚ ದಲ್ಲಿ ಪೂರ್ಣ ಗೊಳಿ ಸಿರುವ ಮೊದಲ ಹಂತದ ಅಭಿ ವೃದ್ಧಿ ಕಾಮ ಗಾರಿ ಉದ್ಘಾ ಟನೆ ಮಾಡಿ ದರು. ಅಲ್ಪ ಸಂಖ್ಯಾ ತರೂ ಸೇರಿ ದಂತೆ ಎಲ್ಲ ವರ್ಗದ ಜನ ರಿಗೆ ತಮ್ಮ ಆಡಳಿ ತಾವ ಧಿಯಲ್ಲಿ ಸಮಾನ ನ್ಯಾಯ ದೊರ ಕಿಸಿ ಕೊಟ್ಟಿ ರುವು ದಾಗಿ ಹೇಳಿದ ಅವರು ಅಧಿ ಕಾರಿ ಗಳು ಅಭಿ ವೃದ್ಧಿಗೆ ವೇಗ ನೀಡ ಬೇಕೆಂದು ಸೂಚಿ ಸಿದರು. ಡಾ ವಿ ಎಸ್ ಆಚಾರ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಸಕ ಎಸ್ ಅಂಗಾರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವರಾದ ಜೆ. ಕೃಷ್ಣ ಪಾಲೆಮಾರ್, ಉಪಸಭಾಧ್ಯಕ್ಷ ಎನ್ ಯೋಗೀಶ್ ಭಟ್, ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್, ಸಚಿವ ರೇಣುಕಾಚಾರ್ಯ, ಕ್ಯಾ. ಗಣೇಶ್ ಕಾರ್ಣಿಕ್, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ ಟಿ ಶೈಲಜಾ ಭಟ್, ತಾಲೂಕು ಪಂಚಾಯತ್ ಅಧ್ಯಕ್ಷರಾದ ಕೇಶವ ಭಟ್, ಗ್ರಾಮ ಪಂಚಾಯತ್ ಅಧ್ಯಕ್ಷ ಭಾಸ್ಕರ ಉರ್ಜಿಕೋಡಿ, ಧಾರ್ಮಿಕ ದತ್ತಿ ಇಲಾಕೆ ಆಯುಕ್ತರಾದ ಬಿ ಜಿ ನಂದಕುಮಾರ್, ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ವೇದಿಕೆಯಲ್ಲಿದ್ದರು. ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠ, ಸುಬ್ರಹ್ಮಣ್ಯ ಸ್ವಾಮೀಜಿ ವಿದ್ಯಾಪ್ರಸನ್ನ ತೀರ್ಥರು ಆಶೀರ್ವಚನ ನೀಡಿದರು.

ಧರ್ಮಸ್ಥಳದಲ್ಲಿ ಮುಖ್ಯಮಂತ್ರಿಗಳಿಂದ ದೇವರ ದರ್ಶನ

ಮಂಗಳೂರು,ಜೂನ್27: ಇಂದು ಧರ್ಮಸ್ಥಳಕ್ಕೆ ಆಗಮಿಸಿದ


ಮುಖ್ಯ ಮಂತ್ರಿ ಬಿ ಎಸ್ ಯಡಿ ಯೂರ ಪ್ಪನ ವರು ದೇವರ ದರ್ಶನ ಪಡೆದ ಬಳಿಕ ಮಾಧ್ಯಮ ದೊಂದಿಗೆ ಮಾತ ನಾಡಿ, ಮುಂದಿನ ಎರಡು ವರ್ಷ ಗಳ ಕಾಲ ರಾಜ್ಯದ ಅಭಿ ವೃದ್ಧಿ ಗಾಗಿ ಅವಿ ರತ ಶ್ರಮಿ ಸುವು ದಾಗಿ ಭರ ವಸೆ ನೀಡಿ ದರು. ಅನ್ನ ದಾತನ ಆರ್ಥಿಕ ಸ್ವಾವ ಲಂಬ ನೆಯತ್ತ ಗಮನ ಹರಿಸು ವುದಾಗಿ ಭರ ವಸೆ ನೀಡಿದ ಅವರು ದೇವರ ಬಳಿ ರಾಜ್ಯದ ಅಭ್ಯು ದಯ ಮತ್ತು ಜನ ಕ್ಷೇಮ ಹಾಗೂ ಸು ಭಿಕ್ಷೆ ಗಾಗಿ ಭಗ ವಂತ ನಲ್ಲಿ ಪ್ರಾರ್ಥಿ ಸಿರು ವುದಾಗಿ ಪ್ರಕಟಿಸಿದರು.

ನೆಟ್ಟಣದಲ್ಲಿ ಮುಖ್ಯಮಂತ್ರಿಗೆ ಸ್ವಾಗತ

ಮಂಗಳೂರು,ಜೂನ್27:ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯಕ್ಕೆ

ಇಂದು ಭೇಟಿ ನೀಡಿದ ಮುಖ್ಯ ಮಂತ್ರಿ ಬಿ. ಎಸ್ ಯಡಿ ಯೂರ ಪ್ಪನ ವರನ್ನು ನೆಟ್ಟಣ ಸುಬ್ರ ಹ್ಮಣ್ಯ ರೋಡ್ ರೈಲ್ವೇ ನಿಲ್ದಾಣ ದಲ್ಲಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್,ಸ್ಥ ಳೀಯ ಶಾಸಕ ಅಂಗಾ ರ ಹಾಗೂ ಜಿಲ್ಲಾ ಧಿಕಾರಿ ಡಾ ಎನ್ ಎಸ್ ಚನ್ನಪ್ಪ ಗೌಡ, ಪೊಲೀಸ್ ವರಿಷ್ಠಾ ಧಿಕಾರಿ ಲಾಬೂ ರಾಮ್ ಅವರು ಸ್ವಾಗತಿ ಸಿದರು.

Friday, June 24, 2011

ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣ ಅಭಿವೃದ್ಧಿಗೆ ಕ್ರಮ: ರೈನಾ

ಮಂಗಳೂರು,ಜೂನ್.24:ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಇನ್ನೂ ಎರಡು ಪ್ಲಾಟ್ ಫಾರಂಗಳನ್ನು ನಿರ್ಮಿಸಿ ಮೇಲ್ದರ್ಜೆಗೇರಿಸಲು 16 ಕೋಟಿ ರೂ.ಗಳ ಪ್ರಸ್ತಾವನೆಯನ್ನು ರೈಲ್ವೇ ಬೋರ್ಡ್ ಗೆ ಕಳುಹಿಸಿ ಮುಂದಿನ ಸಾಲಿನ ಬಜೆಟ್ ನಲ್ಲಿ ಅನುಮೋದನೆ ಪಡೆಯಲು ದಕ್ಷಿಣ ರೈಲ್ವೇ ಯೋಜನೆ ಸಲ್ಲಿಸಿದೆ ಎಂದು ಡಿಆರ್ಎಂ ಎಸ್. ಕೆ ರೈನಾ ಅವರು ತಿಳಿಸಿದರು.

ಅವರಿಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ರೈಲ್ವೇ ಸಮ ನ್ವಯ ಸಮಿತಿ ಸಭೆಯಲ್ಲಿ ಪಾಲಕ್ಕಾಡ್ ವಿಭಾಗದಲ್ಲಿ ಕೈ ಗೊಂಡಿರುವ ಅಭಿವೃದ್ಧಿ ಕಾರ್ಯಗಳ ವಿವರ ನೀಡುತ್ತಿದ್ದರು.
ಮಂಗಳೂರು ರೈಲ್ವೇ ನಿಲ್ದಾಣದಲ್ಲಿ 4ನೇ ಪ್ಲಾಟ್ಟ್ ಫಾರ್ಮ್ ನಿರ್ಮಾಣಕ್ಕೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದ ಅವರು, ಮಂಗಳೂರು ರೈಲ್ವೇ ನಿಲ್ದಾಣದ ಅಭಿವೃದ್ಧಿಗೆ 10 ಕೋಟಿ ರೂ.ಗಳ ಕೆಲಸ ವಿವಿಧ ಹಂತದಲ್ಲಿದೆ. ಎರಡೂವರೆ ಕೋಟಿ ರೂ.ಗಳನ್ನು ಕಳೆದ ಎರಡು ವರ್ಷಗಳಿಂದ ಸ್ಟೇಷನ್ ಸುವ್ಯವಸ್ಥೆಗೆ ಬಳಕೆ ಮಾಡಲಾಗಿದೆ. ಐದು ಕೋಟಿ ರೂ.ಗಳ ಪೈಪ್ ಲೈನ್ ಅಳವಡಿಕೆಗೆ ಟೆಂಡರ್ ಕರೆಯಲಾಗಿದೆ. ಒಂದೂವರೆ ಕೋಟಿ ರೂ.ಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದರು. ಯಶವಂತಪುರ ರೈಲನ್ನು ಕಾರವಾರದವರೆಗೆ ವಿಸ್ತ ರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು. ನೇತ್ರಾವತಿ ಸೇತುವೆಯಲ್ಲಿ ಡಬಲ್ ಲೈನಿಂಗ್ ಮಾಡಲು 50 ಕೋಟಿ ರೂ. ತಗುಲಲಿದೆ ಎಂದ ಅವರು, ರೈಲ್ವೇ ಲೈನ್ ಅನ್ನು ಪಣಂಬೂರುವರೆಗೆ ವಿಸ್ತರಿಸಲು 150 ಕೋಟಿ ರೂ. ಯೋಜನೆಯಿದೆ ಎಂದರು. ಈ ವಲಯದಲ್ಲಿ ಸೇತುವೆ ನಿರ್ಮಾಣಕ್ಕಿಂತ ಮುಂಚೆ ಜಿಯೋಟೆಕ್ನಿಕಲ್ ಇನ್ವೆಸ್ಟಿಗೇಷನ್ ನ ಅಗತ್ಯವನ್ನು ಒತ್ತಿ ಹೇಳಿದ ಅವರು, ಪರಿಣತ ಇಂಜಿನಿಯರ್ ಗಳಿಂದ ಸಮಗ್ರ ಸಮೀಕ್ಷೆಗೆ ರೈಲ್ವೇ ಆದ್ಯತೆ ನೀಡಿದೆ. ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ ಎಂದರು. ಮುಂದಿನ ಡಿಸೆಂಬರ್ ವೇಳೆಗೆ ನೇತ್ರಾವತಿ ಸೇತುವೆ ಸಂಚಾರಕ್ಕೆ ತೆರೆದುಕೊಳ್ಳುವ ನಿರೀಕ್ಷೆಯನ್ನು ಅವರು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು. ದಕ್ಷಿಣ ವಲಯದಲ್ಲಿ 27 ಜೆಟಿಬಿಎಸ್ ಗಳನ್ನು ತೆರೆಯಲಾಗಿದ್ದು, ಸಾಮಾನ್ಯ ಪ್ರಯಾಣಿಕರಿಗೆ ಇದರಿಂದ ಬಹಳಷ್ಟು ಅನುಕೂಲವಾಗಿದೆ ಎಂದರು. ಕಾರ್ಪೋ ರೇಷನ್ ವಲಯದಲ್ಲಿ ಸ್ಥಳೀಯಾಡ ಳಿತ ದಿಂದ ಪೂರಕ ನೆರವು ದೊರೆ ತರೆ ಸೂಕ್ತ ವಾಗಿ ಯೋಜನೆ ಅನು ಷ್ಠಾನಕ್ಕೆ ತರಲು ರೈಲ್ವೆ ಇಲಾಖೆ ಸ್ಪಂದಿ ಸಲಿದೆ ಎಂದರು. ಪಡೀಲ್ ಬಜಾಲ್,ಮಹಾ ಕಾಳಿ ಪಡ್ಪು ಲೆವೆಲ್ ಕ್ರಾ ಸಿಂಗ್, ಮೈಸೂರು ವಿಭಾಗದಡಿ ಬರುವ ಪುತ್ತೂರು, ಸುಬ್ರಹ್ಮಣ್ಯದಲ್ಲಿ ರೈಲ್ವೇ ಸ್ಟೇಷನ್ ಅಭಿವೃದ್ಧಿಪಡಿಸುವ ಬಗ್ಗೆಯೂ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎನ್. ಎಸ್. ಚನ್ನಪ್ಪಗೌಡ, ಪಾಲಿಕೆ ಆಯುಕ್ತರಾದ ಡಾ. ಕೆ. ಎನ್. ವಿಜಯಪ್ರಕಾಶ್, ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಸೀನಿಯರ್ ಡಿಸಿಎಂ ದಾಮೋದರನ್, ಡೆಪ್ಯುಟಿ ಇಂಜಿನಿಯರ್ ವೆಸ್ಟ್ ನಲ್ಲೆಮುತ್ತುಮಾಣಿಕ್ಯಂ, ಮೈಸೂರು ವಲಯದಿಂದ ಡಿಆರ್ ಇ ರಂಗನಾಥ ಉಪಸ್ಥಿತರಿದ್ದರು.

ಸಂಸದರ ಕ್ಷೇತ್ರವ್ಯಾಪ್ತಿಯಲ್ಲಿ ತಾಲೂಕು ಮಟ್ಟದಲ್ಲೂ ನಿಯಮಿತ ಪ್ರಗತಿ ಪರಿಶೀಲನೆ

ಮಂಗಳೂರು,ಜೂನ್.24:ದಕ್ಷಿಣ ಕನ್ನಡ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಅವರು ಸಂಸದರ ನಿಧಿಯಿಂದ ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಪರಿಶೀಲನೆಯನ್ನು ತಮ್ಮ ಕ್ಷೇತ್ರ ವ್ಯಾಪ್ತಿಯ ಎಲ್ಲ ತಾಲೂಕುಗಳಲ್ಲಿ ಪ್ರತೀ ತಿಂಗಳು ನಡೆಸುವುದಾಗಿ ತಿಳಿಸಿದ್ದಾರೆ.ಅವರಿಂದು ತಮ್ಮ ಮಂಗಳೂರಿನ ಕಚೇರಿಯಲ್ಲಿ ನಡೆದ ಸಂಸದರ ಅನುದಾನದಿಂದ ವಿವಿಧ ಇಲಾಖೆಗಳ ಮೂಲಕ ಕೈಗೊಳ್ಳಲಾದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಪರಿಶೀಲನೆಯನ್ನು ಮಾಡಿ ಮಾತನಾಡುತ್ತಿದ್ದರು.

ತಮ್ಮ ಈ ತನ ಕದ ಅಧಿಕಾ ರಾವಧಿ ಯಲ್ಲಿ ಸಂಸ ದರ ನಿಧಿ ಯಿಂದ ಬಂದಿ ರುವ ರೂ. 3 ಕೋಟಿ ಗಳ ಜೊತೆಗೆ 2 ಕೋಟಿ ರೂ. ಮಳೆ ಹಾನಿ ಪರಿ ಹಾರ ಕ್ಕಾಗಿ ಹಾಗೂ ಮುಖ್ಯ ಮಂತ್ರಿ ಗಳ ವಿಶೇಷ ಅನು ದಾನ ರೂ. 6 ಕೋಟಿ ಗಳನ್ನು ಕ್ಷೇತ್ರಕ್ಕೆ ತರು ವಲ್ಲಿ ಯಶಸ್ವಿ ಯಾಗಿ ದ್ದೇನೆ ಎಂದು ತಿಳಿಸಿದ ಸಂಸದರು, ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮ ವಾಸ್ತವ್ಯ ಮಾಡಿದ ಹಾಗೂ 3 ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನೆ ನಡೆಸುತ್ತಿರುವ ರಾಜ್ಯದ ಏಕೈಕ ಸಂಸದ ಎಂದು ಹೆಮ್ಮೆಯಿಂದ ತಿಳಿಸಿದರು.
ಅಧಿಕಾರಿಗಳಲ್ಲಿ ಚುರುಕು ಮೂಡಿಸುವುದು ಅಭಿವೃದ್ಧಿ ಕಾರ್ಯಗಳ ಶೀಘ್ರ ಅನುಷ್ಠಾನಕ್ಕೆ ತಾವು ಕೈಗೊಳ್ಳುತ್ತಿರುವ ಪ್ರಗತಿಪರಿಶೀಲನಾ ಸಭೆಗಳು ನೆರವಾಗುತ್ತಿವೆ ಎಂದ ಸಂಸದರು, ಇನ್ನು ಒಂದು ವಾರದೊಳಗೆ ಸಂಸದರ ಕ್ಷೇತ್ರಾಭಿವೃದ್ಧಿಗೆ ಸಂಬಂಧಿಸಿದ ಕಾಮಗಾರಿಗಳ ಅಂದಾಜು ಪಟ್ಟಿ ತಯಾರಿಸುವಂತೆ ಈಗಾಗಲೇ ಅಂದಾಜು ಪಟ್ಟಿ ಸಿದ್ಧವಿರುವ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಆರಂಭಿಸಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಅವರು ಸಂಬಂಧಿಸಿ ಅಧಿಕಾರಿಗಳಿಗೆ ಸೂಚಿಸಿದರು.
ತಮ್ಮ ಸಂಸದರ ನಿಧಿ ಬಳಕೆಯಲ್ಲಿ ಪ್ರಗತಿ ಆಗಿದೆ ಆದರೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಕಂಪ್ಯೂಟರ್ ಮೂಲಕ ಲೋಕಸಭೆ ಕಚೇರಿಗೆ ಕಳುಹಿಸುವಲ್ಲಿನ ತಾಂತ್ರಿಕ ತೊಂದರೆಯಿಂದಾಗಿ ಅಲ್ಲಿಗೆ ಶೂನ್ಯ ವರದಿ ತಲುಪಿಸುವ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿ ಇನ್ನು ಮುಂದೆ ಕ್ರಮಬದ್ಧ ವರದಿಗಳನ್ನು ಕಳುಹಿಸುವಂತೆ ತಾಕೀತು ಮಾಡಿದರು.
ಕಿಲ್ಪಾಡಿ ಬಳಿ ನಿರ್ಮಿಸಿರುವ ಕಿಂಡಿ ಅಣೆಕಟ್ಟಿ ಕಾಮಗಾರಿ ಬಿಲ್ಲು ರೂ. 75,000 ಗಳು ಕಂಟ್ರಾಕ್ಟುದಾರರಿಗೆ ಶೀಘ್ರ ಪಾವತಿಸುವಂತೆ ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಸತ್ಯನಾರಾಯಣ ಅವರಿಗೆ ಸೂಚಿಸಿದರು.

Tuesday, June 21, 2011

ಸುಸ್ಥಿರ ಹಾಲು ಉತ್ಪಾದನೆಗೆ ಕರು ಸಾಕಾಣಿಕೆ ಯೋಜನೆ

ಮಂಗಳೂರು,ಜೂನ್.21:ಅವಿಭಜಿತ ದಕ್ಷಿಣಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸುಸ್ಥಿರ ಕ್ಷೀರಕ್ರಾಂತಿ ಸಾಧಿಸಲು ಹಾಗೂ ಹೈನುಗಾರಿಕೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಲು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ವಿನೂತನ ಕರು ಸಾಕಾಣಿಕೆ ಯೋಜನೆಯನ್ನು ಹಮ್ಮಿಕೊಂಡಿದೆ ಎಂದು ವ್ಯವಸ್ಥಾಪಕ ನಿರ್ದೇಶಕರಾದ ರವಿಕುಮಾರ್ ಕಾಕಡೆ ಅವರು ತಿಳಿಸಿದರು.
ಹಾಲು ಉತ್ಪಾ ದಕರ ಸಂಘದ ಹಾಲು ಹಾಕುವ ಸಕ್ರಿಯ ಸದಸ್ಯರ ಮನೆಯಲ್ಲಿ ಕರುಹಾಕಿದ 10 ದಿನಗಳೊಳಗೆ ಹೆಣ್ಣು ಕರುವಿಗೆ ಅದರ ಆರೋಗ್ಯ ಸ್ಥಿತಿಯನ್ನು ಅವಲೋಕಿಸಿ ಯೋಜನೆಗೆ ನೋಂದಾವಣೆ ಮಾಡಿಕೊಳ್ಳಲಾಗುವುದು. ಒಂದು ಸಾವಿರ ರೂ. ಬೆಲೆಯ ವಿಶೇಷ ಪಶು ಆಹಾರವನ್ನು ನೀಡಲಾಗುವುದು. ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ 5,000 ಕರುಗಳನ್ನು ಯೋಜನೆಯಡಿ ಸೇರ್ಪಡೆ ಮಾಡಿಕೊಂಡಿದ್ದು, ಪಶುವೈದ್ಯರು ಈ ಕರುಗಳನ್ನು ನಿಯಮಿತವಾಗಿ ಪರಿಶೀಲಿಸಿ 2 ತಿಂಗಳಿಗೊಮ್ಮೆ ಹೆಣ್ಣು ಕರುವನ್ನು ಸಾಕುವ ಬಗ್ಗೆ ತಾಂತ್ರಿಕ ಸಲಹೆ ಮತ್ತು ಮಾರ್ಗದರ್ಶನ ನೀಡುವರು. ಹೊಟ್ಟೆ ಹುಳದ ಬಾಧೆಗೆ ಮದ್ದು ನೀಡುವುದರಿಂದ ಹಿಡಿದು ವೈಜ್ಞಾನಿಕವಾಗಿ ಕರುಗಳ ಸಾಕಾಣಿಕೆ ಬಗ್ಗೆ ಅರಿವು ಮೂಡಿಸಲಾಗುವುದು.
ಮಹಾ ರಾಷ್ಟ್ರದ ಕೊಲ್ಲಾ ಪುರದ ಗೋಕುಲ್ ಡೈರಿ ಈ ಯೋಜ ನೆಗೆ ಪ್ರೇರಣೆ ಯಾಗಿದ್ದು, ಈ ಯೋಜನೆ ಯಿಂದ ಇಂದು ಕೊಲ್ಲಾ ಪುರ ಹಾಲಿನ ಸ್ಥಿರತೆ ಯನ್ನು ಕಾಯ್ದು ಕೊಂಡಿದೆ. ಅದೇ ಯಶಸ್ವಿ ಮಾದರಿ ಯನ್ನು ಇಲ್ಲಿ ಅನುಷ್ಠಾನಕ್ಕೆ ತರಲಾಗಿದೆ. ಈ ಯೋಜನೆಯಡಿ ಹೆಣ್ಣು ಕರುವಿಗೆ ಟಿಕ್ಕಿ ಹಾಕಿಸಿ ಅದರ ಸಂಪೂರ್ಣ ಪಾಲನೆ ಪೋಷಣೆಯನ್ನು ನೋಡಿಕೊಳ್ಳಲಾಗುವುದು. 18 ರಿಂದ 20 ತಿಂಗಳವರೆಗೆ ಪೋಷಿಸಿ ಅದು ಗರ್ಭ ಧರಿಸುವವರೆಗೆ ನೋಡಿಕೊಳ್ಳಲಾಗುತ್ತದೆ. ಒಕ್ಕೂಟದಿಂದ 2,000 ರೂ. ಪ್ರೋತ್ಸಾಹಧನವನ್ನು ನೀಡಲಾಗುವುದು. ಜಿಲ್ಲೆಯಲ್ಲಿ 600 ಜನರನ್ನು ನೋಂದಾಯಿಸಲಾಗಿದೆ. ಪೋಷಕ ಆಹಾರ ವೆಚ್ಚದಲ್ಲಿ ಫಲಾನುಭವಿಗಳಿಂದ ಶೇ.50 ಖರ್ಚು ಭರಿಸಲಾಗುತ್ತದೆ ಎಂದು ಉಪ ವ್ಯವಸ್ಥಾಪಕರಾದ ಡಿ.ಎಸ್. ಹೆಗ್ಡೆ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರೂ ನಮ್ಮ ಫಲಾನುಭವಿಗಳಲ್ಲಿ ಒಬ್ಬರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ.ಟಿ. ಶೈಲಜಾ ಭಟ್ ಅವರು ಪ್ರತಿಕ್ರಿಯಿಸಿ, ಒಕ್ಕೂಟದ ಈ ಮಾದರಿ ಪ್ರೋತ್ಸಾಹಕ್ಕೆ ಸಂತೋಷ ವ್ಯಕ್ತಪಡಿಸಿದ್ದು, ರೈತರೇ ನಮ್ಮ ದೇಶದ ಜೀವಾಳ; ಅವರ ಪರವಾಗಿ ರೂಪಿಸಲ್ಪಡುವ ಎಲ್ಲ ಯೋಜನೆಗಳಿಗೂ ಜಿಲ್ಲಾ ಪಂಚಾಯತ್ ವತಿಯಿಂದ ನೆರವು ಹಾಗೂ ವೈಯಕ್ತಿಕ ಪ್ರೋತ್ಸಾಹ ನೀಡಲಾಗುವುದು ಎಂದರು. ಈ ಯೋಜನೆ ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದು ದಕ್ಷಿಣ ಕನ್ನಡ ಒಕ್ಕೂಟ ಹಲವು ವಿನೂತನ ಯೋಜನೆಗಳನ್ನು ಹೈನುಗಾರರಿಗೆ ಒದಗಿಸಿದೆ. ಹೈನುಗಾರಿಕೆ ಬಗ್ಗೆ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸಲು ಹಲವು ಕಾರ್ಯಕ್ರಮಗಳನ್ನು ನಂದಿನಿ ಹಮ್ಮಿಕೊಂಡಿದೆ. ಹಸುಗಳ ತಳಿ ಅಭಿವೃದ್ಧಿಯಲ್ಲಿ ಒಕ್ಕೂಟ ಮುಂಚೂಣಿಯಲ್ಲಿದ್ದು 10-11ರಲ್ಲಿ 350 ಕೃತಕ ಗರ್ಭಧಾರಣೆ ಕೇಂದ್ರಗಳಿಂದ ಒಟ್ಟು 1,73,513 ಕೃತಕ ಗರ್ಭಧಾರಣೆ ಆಗಿರುತ್ತದೆ. 2009 ರಲ್ಲಿ ರೂ. 6.21 ಕೋಟಿ ವೆಚ್ಚದಲ್ಲಿ ಮಂಗಳೂರು ಡೈರಿಯ ಸಾಮಥ್ರ್ಯವನ್ನು ಒಂದು ಲಕ್ಷ ಲೀ. 2.5 ಲೀ. ವಿಸ್ತರಿಸಲಾಗಿದೆ. ರೈತರಿಗೆ ಆಧುನಿಕ ಹೈನುಗಾರಿಕೆ ಬಗ್ಗೆ ವಿಚಾರ ಸಂಕಿರಣದ ಮೂಲಕ ಮಾಹಿತಿ, ಲವಣ ಮಿಶ್ರಣ ಹಾಗೂ ಜಂತು ಹುಳದ ಔಷಧ, ಹಾಲು ಕರೆಯುವ ಯಂತ್ರಕ್ಕೆ, ಹುಲ್ಲು ಕೊಚ್ಚುವ ಯಂತ್ರಕ್ಕೆ, ಹಟ್ಟಿ ತೊಳೆಯುವ ಯಂತ್ರಕ್ಕೆ ಅಲ್ಲದೆ ಗೋಬರ್ ಗ್ಯಾಸ್ ಘಟಕ ನಿರ್ಮಾಣಕ್ಕೆ ಅನುದಾನ ನೀಡುತ್ತಿದೆ. ಹೊಸದಾಗಿ ಮಿನಿ ಡೈರಿ ಯೋಜನೆಯನ್ನು ಅಳವಡಿಸುವವರಿಗೂ ಅನುದಾನ ನೀಡುತ್ತಿದೆ.
ಹೈನುಗಾರಿಕೆಯನ್ನು ಲಾಭದಾಯಕವಾಗಿ ಮಾಡುವ ದೃಷ್ಟಿಯಲ್ಲಿಟ್ಟುಕೊಂಡು ಸಾಂಪ್ರಾದಾಯಿಕ ಹೈನುಗಾರಿಕೆಯಲ್ಲಿ ಪರಿವರ್ತನೆ ತಂದು ನವನವೀನ ವಿಧಿವಿಧಾನಗಳನ್ನು ಆಧುನಿಕ ತಂತ್ರಗಾರಿಕೆಯನ್ನು ತಮ್ಮ ವೃತ್ತಿಯಲ್ಲಿ ಅಳವಡಿಕೊಳ್ಳುವ ಬಗ್ಗೆ ಪ್ರತಿಯೊಂದು ಹಳ್ಳಿಯಲ್ಲೂ ಹಾಲು ಉತ್ಪಾದಕರಿಗೆ ಅರಿವು/ಮಾಹಿತಿ ನೀಡಲು ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ಮುಂದುವರಿಸಲಾಗುವುದು ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಕ್ಕೂಟದ ಸದಸ್ಯರು ಸಕ್ರಿಯವಾಗಿದ್ದು, ಪಶುಸಂಗೋಪನೆ ಇಲಾಖೆಯು ಪೂರಕ ನೆರವನ್ನು ಒದಗಿಸುತ್ತಿದೆ ಎಂದರು.

Monday, June 20, 2011

'ನಂದಿನಿ ಬೈಟ್ 'ಚಾಕೋಲೇಟ್

ಮಂಗಳೂರು,ಜೂನ್.20:ಮಂಗಳೂರಿನ ಕುಲಶೇಕರದ ಡೈರಿ ಸಭಾಂಗಣದಲ್ಲಿ ನಂದಿನಿ ಬೈಟ್ ಚಾಕೋಲೇಟ್ ನ್ನು ಉನ್ನತ ಶಿಕ್ಷಣ ಸಚಿವ ಡಾ.ವಿ. ಎಸ್. ಆಚಾರ್ಯ ಬಿಡುಗಡೆ ಮಾಡಿದರು.
ಶಾಂತಾ ಆಚಾರ್ಯ, ಪಾಲಿಕೆ ಸದಸ್ಯ ಭಾಸ್ಕರ್, ಒಕ್ಕೂಡದ ಎಂ ಡಿ ರವಿ ಕುಮಾರ್ ಕಾಕಡೆ, ನಿರ್ದೇ ಶಕ ರಾದ ರಾಮ ಭಟ್, ಜಾನಕಿ ಹಂದೆ, ವಿಜಯ ಲಕ್ಷ್ಮಿ, ವೀಣಾ ರೈ, ಪಶು ಸಂಗೋ ಪನೆ ಉಪ ನಿರ್ದೇ ಶಕ ಡಾ. ಹಲ ಗಪ್ಪರವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಹಾಲು ಒಕ್ಕೂಟದ ವಿನೂತನಗಳನ್ನು ಪ್ರಶಂಸಿಸಿದ ಸಚಿವರು, ಪೂರಕ ನೆರವುಗಳನ್ನು ಸರ್ಕಾರದಿಂದ ನೀಡುವ ಭರವಸೆಯನ್ನು ನೀಡಿದರು. ಒಕ್ಕೂಟದ ಅಧ್ಯಕ್ಷರಾದ ರವಿರಾಜ ಹೆಗ್ಡೆ ಅವರು, ಒಕ್ಕೂಟದ ಬೇಡಿಕೆಗಳನ್ನು ಸಚಿವರ ಗಮನಕ್ಕೆ ತಂದರಲ್ಲದೆ, ರಜತಮಹೋತ್ಸವ ವರ್ಷದಲ್ಲಿ ದಕ್ಷಿಣ ಕನ್ನಡ ಹಾಲು ಒಕ್ಕೂಟ ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ಸಚಿವರಿಗೆ ವಿವರಿಸಿದರು. ಈ ಸಂದರ್ಭದಲ್ಲಿ ಸಚಿವರನ್ನು ಸನ್ಮಾನಿಸಲಾಯಿತು.

ಪ್ರಶಸ್ತಿ ಸ್ಫೂರ್ತಿ ಆಗಲಿ:ಸಚಿವ ಪಾಲೆಮಾರ್

ಮಂಗಳೂರು,ಜೂನ್.20:ಸುಚಿತ್ವಕ್ಕೆ ಹೆಚ್ಚಿನ ಆದ್ಯತೆ ಕೊಡುವ ಮೂಲಕ ಗ್ರಾಮ ಪಂಚಾಯತ್ ಗಳು,ಪ್ಲಾಸ್ಟಿಕ್ ಮುಕ್ತ ಸ್ವಚ್ಛ ಸುಂದರ ಮತ್ತು ಆರೋಗ್ಯ ಪೂರ್ಣ ಪರಿಸರ ನಿರ್ಮಾಣ ಮಾಡುವ ಗುರಿಯನ್ನು ಹೊಂದಬೇಕುಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣ ಪಾಲೆಮಾರ್ ಕರೆ ನೀಡಿದ್ದಾರೆ.ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ 2009-10ನೇ ಸಾಲಿನ ಕರ್ನಾಟಕ ರಾಜ್ಯ ನೈರ್ಮಲ್ಯ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ದಕ್ಷಿಣ ಕನ್ನಡ ಜಿಲ್ಲೆಗೆ ರಾಜ್ಯ ನೈ ರ್ಮಲ್ಯ ರತ್ನ ಪ್ರಶಸ್ತಿ ಬಂದಿ ರುವುದು ಜಿಲ್ಲೆಯ ಜನ ತೆಗೆ ಸಿಕ್ಕ ಗೌರವ ಆಗಿದೆ.ಸದಾ ಸ್ವಚ್ಛ ಜಿಲ್ಲೆ ಯಾಗಿ ದಕ್ಷಿಣ ಕನ್ನಡ ವನ್ನು ಗುರು ತಿಸಿ ಕೊಳ್ಳುವ ಮೂಲಕ ಮಾದರಿ ಜಿಲ್ಲೆ ಯಾಗಲಿ. ಮುಂದಿನ ವರ್ಷ ದಿಂದ ಪರಿಸರ ಪ್ರಶಸ್ತಿ ಯನ್ನು ನೀಡು ವುದಾಗಿ ರಾಜ್ಯ ಸರ ಕಾರ ಈಗಾ ಗಲೇ ಘೋಷಿ ಸಿದ್ದು, ಈ ಪ್ರಶಸ್ತಿ ಕೂಡ ಸಿಗುವ ನಿಟ್ಟಿನಲ್ಲಿ ಸಾಂಘಿಕ ಪ್ರಯತ್ನ ಮಾಡಬೇಕೆಂದರು.
ರಸ್ತೆ ಬದಿ ಕಸ ಸುರಿದು ಹೋಗುವ ಲಾರಿಗಳು ಮತ್ತು ಇತರ ವಾಹನಗಳ ಬಗ್ಗೆ ನಿಖರ ಮಾಹಿತಿ ಲಭಿಸಿದ ತಕ್ಷಣ ಯಾವುದೇ ಮುಲಾಜಿಲ್ಲದೆ ಅಂತಹ ಲಾರಿಗಳನ್ನು ಮುಟ್ಟುಗೋಲು ಹಾಕಲಾಗುವುದು.ಆಸ್ಪತ್ರೆಯ ತ್ಯಾಜ್ಯಗಳನ್ನು ರಸ್ತೆ ಬದಿ ಹಾಕುವಂತದ್ದು ಕಂಡು ಬಂದರೂ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಯಾವುದೇ ಭಾಗದಲ್ಲಿ ಲಾರಿಗಳಲ್ಲಿ ತ್ಯಾಜ್ಯವನ್ನು ತಂದು ಬೇಕಾಬಿಟ್ಟಿ ಎಲ್ಲೆಡೆ ರಸ್ತೆ ಬದಿ ಸುರಿದು ಹೋಗಿ ಾ ಮೂಲಕ ಪರಿಸರ ಹಾಳು ಮಾಡುವುದು ಕಂಡು ಬಂದಲ್ಲಿ ಆ ಲಾರಿಯ ನಂಬರ್ ಸಮೇತ ಹೆಲ್ಪ್ ಲೈನ್ ಮೂಲಕ ಗಮನಕ್ಕೆ ತರಬೇಕು. ಪ್ರಥಮವಾಗಿ ಮಾಹಿತಿ ನೀಡುವ ಮಂದಿಗೆ ರೂ.ಒಂದು ಸಾವಿರ ಬಹುಮಾನ ನೀಡಲಾಗುವುದು.ಈ ಬಗ್ಗೆ ಶೀಘ್ರದಲ್ಲಿ ಹೆಲ್ಪ್ಲೈನ್ ಸ್ಥಾಪಿಸಿ ನಂಬರ್ ನೀಡಲಾಗುವುದು ಎಂದು ಸಚಿವರು ಹೇಳಿದರು.

ಸಮಾ ರಂಭ ದಲ್ಲಿ ಸಚಿ ವರು ನೈ ರ್ಮಲ್ಯ ರತ್ನ ಪ್ರ ಶಸ್ತಿ ವಿ ಜೇತ ದ.ಕ. ಜಿಲ್ಲಾ ಪಂಚಾ ಯತ್ ಗೆ ರೂ.30 ಲಕ್ಷ ಮೊತ್ತದ ದ ಚೆಕ್, ಪ್ರ ಶಸ್ತಿ ಫಲಕ ವಿತರಿ ಸಿದರು.ಅಲ್ಲದೆ ನೈ ರ್ಮಲ್ಯ ರತ್ನ, ಸ್ವರ್ಣ ನೈ ರ್ಮಲ್ಯ, ರಜತ ನೈ ರ್ಮಲ್ಯ ಹಾಗೂ ನೈ ರ್ಮಲ್ಯ ಪ್ರಶಸ್ತಿ ಪಡೆದ ಹೊಸಂ ಗಡಿ ಗ್ರಾ.ಪಂ.ಗೆ ರೂ. 19 ಲಕ್ಷದ ಚೆಕ್,ಪ್ರಶಸ್ತಿ ಹಾಗೂ ರಜತ ನೈ ರ್ಮಲ್ಯ ದ್ವಿ ತೀಯ ಪ್ರಶಸ್ತಿ ಮತ್ತು ನೈ ರ್ಮಲ್ಯ ಪ್ರಶಸ್ತಿ ಪಡೆದ ಬಂ ಟ್ವಾಳ ತಾಲೂ ಕಿನ ಇರಾ ಗ್ರಾಮ ಪಂಚಾ ಯತ್ ಗೆ ರೂ.3 ಲಕ್ಷದ ಚೆಕ್ ಮತ್ತು ಪ್ರಶಸ್ತಿ ಪ್ರದಾನ ಮಾಡ ಲಾಯಿತು.
ರಜತ ನೈರ್ಮಲ್ಯ ತೃತೀಯ ಮತ್ತು ನೈರ್ಮಲ್ಯ ಪ್ರಶಸ್ತಿ ವಿಜೇತ ಪುತ್ತೂರು ತಾಲೂಕಿನ 34ನೇ ನೆಕ್ಕಿಲಾಡಿ ಗ್ರಾ.ಪಂ, ನೈರ್ಮಲ್ಯ ಪ್ರಶಸ್ತಿ ಪಡೆದ ಮಂಗಳೂರು ತಾಲೂಕಿನ ಕಿಲ್ಪಾಡಿ ಮತ್ತು ಸುಳ್ಯದ ಆಲೆಟ್ಟಿ ಗ್ರಾ.ಪಂ.ಗಳಿಗೆ ತಲಾ ರೂ.ಒಂದು ಲಕ್ಷದಂತೆ ಪ್ರಶಸ್ತಿ ವಿತರಿಸಲಾಯಿತು.
ಅಂಗನವಾಡಿ ನೈರ್ಮಲ್ಯ ಪ್ರಶಸ್ತಿ:
ಬಂಟ್ವಾಳ ಬಾರಿಂಜೆ ಅಂಗನವಾಡಿ,(ರೂ 15 ಸಾವಿರ), ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಪೂಂಜಾಲಕಟ್ಟೆ, ಮಂಗಲೂರಿನ ಕಲ್ಲ ಮುಂಡ್ಕೂರು, ಪೂತ್ತೂರು ಕೊಯ್ಲ ಏನಿತಡ್ಕ, ಮತ್ತು ಸುಳ್ಯ ತಾಲೂಕಿನ ಅಮರ ಮುಡ್ನೂರು ಅಕ್ಕೋಜಿಪಾಲ್ ಅಂಗನವಾಡಿಗಳಿಗೆ ತಲಾ 10 ಸಾವಿರದ ಚೆಕ್ನೊಂದಿಗೆ ಪ್ರಶಸ್ತಿ ವಿತರಿಸಲಾಯಿತು.
ಶಾಲೆಗಳಿಗೆ ನೈರ್ಮಲ್ಯ ಪ್ರಶಸ್ತಿ:
ಬಂಟ್ವಾಳ ತಾಲೂಕಿನ ಕೆದ್ದಳಿಕೆ ಕಾವಳ ಮುಡೂರು ಸ.ಹಿ.ಪ್ರಾ.ಶಾಲೆ(ರೂ.30ಸಾವಿರ), ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ, ಕುವೆಟ್ಟು ಪ್ರಾಥಮಿಕ ಶಾಲೆ, ಮಂಗಳೂರು ತಾಲೂಕಿನ ಕುಪ್ಪೆಪದವು, ಪುತ್ತೂರು ತಾಲೂಕಿನ ಉಪ್ಪಿನಂಗಡಿ ಮತ್ತು ಸುಳ್ಯ ತಾಲೂಕಿನ ಅಜ್ಜಾವರ ಮುಳ್ಯ ಅಟೂರು ಶಾಲೆಗಳಿಗೆ ಪ್ರಶಸ್ತಿಯೊಂದಿಗೆ ತಲಾ 20 ಸಾವಿರದ ಚೆಕ್ ವಿತರಿಸಲಾಯಿತು
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ಟಿ.ಶೈಲಜಾ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸ್ವಚ್ಛತಾ ಸಿಡಿ ಮತ್ತು ಕಿರು ಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಯಿತು.ವಿಧಾನ ಸಭಾ ಉಪ ಸಭಾಧ್ಯಕ್ಷ ಎನ್.ಯೋಗೀಶ್ ಭಟ್, ಶಾಸಕರಾದ ಯು.ಟಿ.ಖಾದರ್, ಬಿ.ರಮಾನಾಥ ರೈ , ತಾ.ಪಂ.ಅಧ್ಯಕ್ಷೆ ಭವ್ಯ, ಜಿ.ಪಂ.ಉಪಾಧ್ಯಕ್ಷೆ ಧನಲಕ್ಷ್ಮೀ ಜನಾರ್ದನ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಈಶ್ವರ ಕಟೀಲ್, ಜನಾರ್ದನ ಗೌಡ, ನವೀನ್ ಕುಮಾರ್ ಮೇನಾಲ,ಜಿಲ್ಲಾ ಪಂಚಾಯತ್ ಸದ್ಯರುಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.ಜಿಲ್ಲಾ ಪಂಚಾಯತ್ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವರಾಮೇ ಗೌಡ ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

Sunday, June 19, 2011

ಎಂಡೋಸಲ್ಫಾನ್ ಪೀಡಿತರಿಗೆ ಶಾಶ್ವತ ಪುನರ್ವಸತಿಗೆ ರೂ. 70 ಲಕ್ಷ : ಶೋಭಾ ಕರಂದ್ಲಾಜೆ

ಮಂಗಳೂರು,ಜೂನ್.19:ಕಳೆದ 15 ವರ್ಷಗಳಿಂದ ಕೊಕ್ಕಡ,ಪಟ್ರಮೆ, ಅಲಂಕಾರ ಪ್ರದೇಶಗಳಲ್ಲಿರುವ ಎಂಡೋಸಲ್ಫಾನ್ ನಿಂದ ಬಾಧಿತರಾದ ಅಂಗವಿಕಲರು ಹಾಗೂ ಅವರ ಹೆತ್ತವರ ನೋವನ್ನು ಗಮನದಲ್ಲಿರಿಸಿ ರಾಜ್ಯ ಸರ್ಕಾರ ತಾತ್ಕಾಲಿಕ ಡೇ ಕೇರ್ ಸೆಂಟರನ್ನು ಕೊಕ್ಕಡದಲ್ಲಿ ಆರಂಭಿಸಿದೆ ಎಂದು ಇಂಧನ ಹಾಗೂ ಆಹಾರ ಸಚಿವರಾದ ಕು. ಶೋಭಾ ಕರೆಂದ್ಲಾಜೆ ಹೇಳಿದರು.

ಇಂದು ದ.ಕ ಜಿಲ್ಲೆಯ ಬೆಳ್ತಂ ಗಡಿಯ ಕೊಕ್ಕಡ ದಲ್ಲಿ ತಾತ್ಕಾ ಲಿಕ ಡೇ ಕೇರ್ ಸೆಂಟ ರನ್ನು ಉದ್ಘಾ ಟಿಸಿ ಮಾತ ನಾಡಿದ ಅವರು, ಪಕ್ಕ ದಲ್ಲೇ ಹತ್ತು ಸೆಂಟ್ಸ್ ಜಾಗ ಮತ್ತು 70 ಲಕ್ಷ ರೂ.ಗಳ ಅಂದಾಜು ಪಟ್ಟಿಯನ್ನು ಶಾಶ್ವತ ಕಟ್ಟಡಕ್ಕೆ ರೂಪಿಸಲಾಗಿದ್ದು ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು ಎಂದರು.ಪುನರ್ ವಸತಿ ಕೇಂದ್ರ ಬೆ.8 ಗಂಟೆ ಯಿಂದ ಸಂಜೆ 6.30 ರವ ರೆಗೆ ಕಾರ್ಯಾ ಚರಿ ಸಲಿದೆ. ಇಲ್ಲಿ ಸೌಲಭ್ಯ ಗಳನ್ನು ಒದ ಗಿಸಲು 22 ಲಕ್ಷ ರೂ.ಗಳನ್ನು ಸರ್ಕಾರ ಈಗಾ ಗಲೇ ಬಿಡು ಗಡೆ ಮಾಡಿದೆ. ಎಂಡೋಸಲ್ಫಾನ್ ನಿಷೇಧಕ್ಕೆ ರಾಜ್ಯ ಬದ್ಧವಾಗಿದ್ದು ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಹಾಗೂ ಪ್ರಧಾನಿಗೂ ಪತ್ರ ಬರೆಯಲಾಗಿದೆ ಎಂದರು. ಇದಲ್ಲದೆ ಇಲ್ಲಿನ ಪೀಡಿತರ ಅಹವಾಲಿಗೆ ಸ್ಪಂದಿಸಿ ಜೆನೆಟಿಕ್ ಪರೀಕ್ಷೆ ನಡೆಸಲು ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರೀಸರ್ಚ್ ದೆಹಲಿಯ ಜೊತೆ ಮಾತುಕತೆ ನಡೆಸಲಾಗಿದೆ ಎಂದರು. ಈಗಾಗಲೇ ಸ್ಥಳೀಯರ ಸಮಸ್ಯೆಗೆ ಸ್ಪಂದಿಸಿ ಸರ್ಕಾರ 28.2.10ರಂದು ಪರಿಹಾರ ಹಾಗೂ ಮಾಸಾಶನ ನೀಡಲಾಗಿದೆ. ಈ ಸಂಬಂಧ ಜಿಲ್ಲಾಡಳಿತದ ನೆರವನ್ನು ಪಡೆದು ಸಮಗ್ರ ಸಮೀಕ್ಷೆಗೂ ಸೂಚನೆ ನೀಡಲಾಗಿದೆ ಎಂದರು.ಜಿಲ್ಲಾ ಉಸ್ತು ವಾರಿ ಸಚಿವ ರಾದ ಕೃಷ್ಣ ಜೆ ಪಾಲೆ ಮಾರ್ ಅವರು ಮಾತ ನಾಡಿ, ರಾಸಾ ಯಿನಿ ಕಗ ಳನ್ನು ವಿವೇಚ ನೆಯಿ ಲ್ಲದೆ ಬಳ ಸುವು ದರಿಂ ದಾಗುವ ದುಷ್ಪರಿಣಾಮಗಳನ್ನು ವಿವರಿಸಿದರು. ಮಲಿನ ಪರಿಸರವನ್ನು ಶುದ್ಧೀಕರಿಸಲು ಹಾಗೂ ಪರಿಸರವನ್ನು ಸಂರಕ್ಷಿಸಲು ಪರಿಸರ ಇಲಾಖೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ಅಂಗವಿಕಲ ಮಕ್ಕಳಿಗೆ ಚೆಂಡು ಹಾಗೂ ಅವರಿಗೆ ನೆರವಾಗುವ ಪರಿಕರಗಳನ್ನು ಕೇಂದ್ರಕ್ಕೆ ನೀಡಲಾಯಿತು. ಜಿಲ್ಲಾ ಪಂಚಾ ಯತ್ ಅಧ್ಯಕ್ಷ ರಾದ ಕೆ ಟಿ ಶೈಲಜಾ ಭಟ್, ಉಪಾ ಧ್ಯಕ್ಷ ರಾದ ಧನಲಕ್ಷ್ಮಿ, ಬೆಳ್ತಂ ಗಡಿ ತಾಲೂಕು ಪಂಚಾ ಯಿತಿ ಅಧ್ಯಕ್ಷ ರಾದ ಮಮತಾ ಎಂ. ಶೆಟ್ಟಿ, ಕೊಕ್ಕಡ ಗ್ರಾ.ಪಂ. ಅಧ್ಯಕ್ಷ ಕುಶಾಲಪ್ಪ ಗೌಡ, ಪಟ್ರಮೆ ಗ್ರಾ.ಪಂ.ಅಧ್ಯಕ್ಷ ಆನಂದ ಗೌಡ, ನಿಡ್ಲೆ ಗ್ರಾ.ಪಂ. ಅಧ್ಯಕ್ಷ ಪುಷ್ಪ ಅಂಗವಿಕಲ ಆಯೋಗದ ಆಯುಕ್ತರಾದ ಕೆ. ವಿ. ರಾಜಣ್ಣ, ಪ್ರಭಾರ ಸಿಇಒ ಶಿವರಾಮೇಗೌಡ, ಪುತ್ತೂರು ಎಸಿ ಡಾ.ಹರೀಶ್ ಕುಮಾರ್ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪಗೌಡ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎಸ್ ಕೆ ಡಿ ಆರ್ ಡಿಪಿ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಎಲ್.ಎಚ್. ಮಂಜುನಾಥ್ ಮಾತನಾಡಿದರು.

Saturday, June 18, 2011

ರಾಜ್ಯದಲ್ಲಿ 50 ಲಕ್ಷಕ್ಕೂ ಮಿಕ್ಕಿ ನಕಲಿ ಪಡಿತರ ಚೀಟಿ

ಮಂಗಳೂರು,ಜೂನ್.18: ರಾಜ್ಯದಲ್ಲಿ ಸುಮಾರು 50 ಲಕ್ಷಕ್ಕೂ ಮಿಕ್ಕಿ ನಕಲಿ ಪಡಿತರ ಚೀಟಿಗಳಿರುವ ಬಗ್ಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಸಚಿವರಾದ ಶೋಭಾ ಕರಂದ್ಲಾಜೆ ಅವರು ಶಂಕೆ ವ್ಯಕ್ತಪಡಿಸಿದ್ದಾರೆ.

ಸಚಿವರು ಶನಿ ವಾರ ನಗರ ದಲ್ಲಿ ಕಾರ್ಯ ಕ್ರಮ ಗಳಲ್ಲಿ ಪಾ ಲ್ಗೊಂಡ ಬಳಿಕ ಮಾಧ್ಯಮ ಪ್ರತಿ ನಿಧಿ ಗಳೊಂ ದಿಗೆ ಮಾತ ನಾಡಿ, ರಾಜ್ಯದಲ್ಲಿ ಒಟ್ಟು 1.17ಕೋಟಿ ಕುಟುಂಬಗಳಿವೆ. ಇದೇ ವೇಳೆ 1.76ಕೋಟಿ ಪಡಿತರ ಚೀಟಿಗಳು ವಿತರಣೆಯಾಗಿವೆ. ಹೆಚ್ಚುವರಿ ಯಾಗಿ ವಿತರಣೆಯಾದ ಪಡಿತರ ಚೀಟಿಗಳು ನಕಲಿ ಎಂದು ಭಾವಿಸಲಾಗಿದೆ ಎಂದರು.ಕೆಲವೊಂದು ಮನೆಗಳಲ್ಲಿ 10 ರಿಂದ 13ರ ತನಕ ಪಡಿತರ ಚೀಟಿಗಳಿ ರುವುದು ಸಮೀಕ್ಷೆಯಿಂದ ತಿಳಿದುಬಂದಿದೆ. ಪಡಿತರ ಅಂಗಡಿ ಹೊಂದಿರುವವರು ಕೂಡ ಒಂದಷ್ಟು ನಕಲಿ ಪಡಿತರ ಚೀಟಿಯನ್ನು ಹೊಂದಿರುವುದು ತಿಳಿದುಬಂದಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.ರಾಜ್ಯದಲ್ಲಿ 72ಲಕ್ಷ ಅಡುಗೆ ಅನಿಲ ಸಂಪರ್ಕಗಳಿವೆ. ಸಮೀಕ್ಷೆಯಿಂದ 50ಲಕ್ಷ ಸಂಪರ್ಕಗಳಿಗೆ ಮಾತ್ರ ದಾಖಲೆಯಿದೆ. ಪ್ರಸ್ತುತ ಪಡಿತರ ಚೀಟಿ, ಮನೆ ತೆರಿಗೆ ಮತ್ತು ಅಡುಗೆ ಅನಿಲ ಸಂಪರ್ಕವನ್ನು ತಾಳೆ ನೋಡುವ ಕಾರ್ಯ ಪ್ರಗತಿಯಲ್ಲಿದೆ. ನಗರ ಪ್ರದೇಶದಲ್ಲಿ ಇದು ಮುಂದಿನ ಹತ್ತು ದಿನಗಳೊಳಗೆ ಅಂತಿಮಗೊಳ್ಳಲಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಸುಮಾರು ಒಂದೂವರೆ ತಿಂಗಳಲ್ಲಿ ಈ ಕಾರ್ಯ ಕೊನೆಗೊಳ್ಳಲಿದೆ ಎಂದು ಸಚಿವರು ನುಡಿದರು.
ಈ ಬಗ್ಗೆ ಸಮಗ್ರ ಮಾಹಿತಿ ಪಡೆದ ಬಳಿಕ ಅಪೇಕ್ಷಿತ ಅರ್ಹ ಕುಟುಂಬಗಳಿಗೆ ನೂತನ ಪಡಿತರ ಚೀಟಿ ನೀಡಲಾಗು ವುದು ಮಾತ್ರವಲ್ಲದೆ, ತಿದ್ದುಪಡಿಗಳನ್ನು ಕೂಡ ಕೈಗೊಳ್ಳಲಾಗುವುದು ಎಂದು ಶೋಭಾ ಕರಂದ್ಲಾಜೆ ಹೇಳಿದರು. ವಿದ್ಯುತ್ ದರ ಏರಿಕೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ನಿರ್ಧರಿಸಲಿದೆ ಎಂದರು.ಕುಟುಂಬವೊಂದರಲ್ಲಿ ಪ್ರತ್ಯೇಕವಾಗಿ ಮೂರು ಮಂದಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರೆ ತಲಾ 10 ಎಚ್ ಪಿ ಯಂತೆ 30 ಎಚ್ ಪಿ ಉಚಿತ ವಿದ್ಯುತ್ ಒದಗಿಸಲಾಗುವುದು ಕೇಂದ್ರ ಸರಕಾರ ಸೂಚಿಸಿದಂತೆ 2016ರವರೆಗೆ ಸೋಲಾರ್ ಪವರ್ ನಿಂದ 200 ಮೆಗಾ ವ್ಯಾಟ್ ವಿದ್ಯುತ್ ತಯಾರಿಸಲು ರಾಜ್ಯ ಸರಕಾರ ಬದ್ಧವಾಗಿದೆ ಎಂದ ಅವರು, ಸದ್ಯ 1300 ಮೆಗಾ ವ್ಯಾಟ್ ಪವನ ವಿದ್ಯುತ್ ತಯಾರಾಗುತ್ತಿದೆ ಎಂದರು.

ರಾಜ್ಯಕ್ಕೆ 167 ನೂತನ ಸಬ್ ಸ್ಟೇಷನ್, 2500 ಲೈನ್ ಮ್ಯಾನ್ ನೇಮಕ: ಇಂಧನ ಸಚಿವರು

ಮಂಗಳೂರು,ಜೂನ್.18: ರಾಜ್ಯವನ್ನು ವಿದ್ಯುತ್ ಸ್ವಾವಲಂಬಿಯನ್ನಾಗಿ ಮಾಡಲು ಹಲವು ದಿಟ್ಟ ಕ್ರಮಗಳನ್ನು ಸರ್ಕಾರ ಕೈಗೊಂಡಿದ್ದು, ಪೂರಕ ಅನುದಾನವನ್ನೂ ನೀಡಲಾಗಿದೆ. ಸಮರ್ಪಕ ವಿದ್ಯುತ್ ಪೂರೈಕೆಗೆ ಇನ್ನಷ್ಟು ಹೊಸ ಮಾರ್ಗಗಳು ಮತ್ತು ಸಬ್ ಸ್ಟೇಷನ್ ಗಳ ಅಗತ್ಯವಿದೆ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಹೊಸ ಮಾರ್ಗ ಗಳ ನಿರ್ಮಾ ಣಕ್ಕೆ ಕ್ರಮ ಕೈ ಗೊಳ್ಳ ಲಾಗಿದೆ. 167 ಹೊಸ ಸಬ್ ಸ್ಟೇ ಷನ್ ಗಳನ್ನು ಸ್ಥಾಪಿ ಸಲು ನಿರ್ಧ ರಿಸ ಲಾಗಿದೆ, ಇಲಾ ಖೆಗೆ ಅಗತ್ಯ ವಿರುವ 2,500 ಲೈನ್ ಮ್ಯಾನ್ ಗಳನ್ನು ಮೆರಿಟ್ ಆಧಾರ ದಲ್ಲಿ ನೇರ ನೇಮಕ ಮಾಡಲು ಕ್ರಮ ಕೈಗೊಳ್ಳ ಲಾಗಿದೆ ಎಂದ ಅವರು, ಮೆಸ್ಕಾಂಗೆ 411 ಲೈನ್ ಮ್ಯಾನ್ ಗಳನ್ನು ನೇಮಿಸ ಲಾಗು ವುದು ಎಂದು ಕರ್ನಾಟಕ ವಿದ್ಯುತ್ ಮಂಡಳಿ ಇಂಜಿನಿಯರ್ ಗಳ ಸಂಘದ ಮಂಗಳೂರು ವಲಯ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡು ತ್ತಿದ್ದರು.ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿ, ವಿಶ್ವಾಸ ಬರುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವ ಮೂಲಕ ಸಿಬ್ಬಂದಿಗಳು ಇಂಧನ ಇಲಾಖೆಗೆ ಹೊಸ ಕಾಯಕಲ್ಪವನ್ನು ನೀಡಬೇಕು ಎಂದು ಸಚಿವರು ವಿನಂತಿಸಿದರು.ವಿದ್ಯುತ್ ಸ್ವಾವಲಂಬಿಯಾಗುವ ನಿಟ್ಟಿನಲ್ಲಿ 1500 ಮೆ.ವ್ಯಾ. ವಿದ್ಯುತ್ ರಾಜ್ಯದ ಗ್ರಿಡ್ ಗೆ ಹೆಚ್ಚುವರಿಯಾಗಿ ಹರಿದು ಬರಲಿದೆ ಎಂದ ಅವರು, ಇಲಾಖಾ ನೌಕರರ ಬೇಡಿಕೆಗಳಿಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ನೌಕರರು ಪ್ರತಿಯಾಗಿ ಕಾರ್ಯದಕ್ಷತೆ ಹೆಚ್ಚಿಸಬೇಕು ಎಂದರು.ಕಾರ್ಯ ಕ್ರಮ ದಲ್ಲಿ ಮುಖ್ಯ ಅತಿಥಿ ಯಾಗಿ ಪಾ ಲ್ಗೊಂಡ ವಿಧಾನ ಸಭೆಯ ಉಪ ಸಭಾ ಪತಿಗ ಳಾದ ಎನ್. ಯೋಗೀಶ್ ಭಟ್ ಮಾತ ನಾಡಿ, ರಾಜ್ಯದ 10 ವಲಯ ಗಳ ಪೈಕಿ 8 ವಲಯ ಗಳು ಸ್ವಂತ ಕಟ್ಟಡವನ್ನು ಹೊಂದಿವೆ. ಮಂಗಳೂರು ಮತ್ತು ಬಿಜಾಪುರಕ್ಕೆ ಕಟ್ಟಡದ ಕೊರತೆ ಇತ್ತು. ಇಂದು ಮಂಗಳೂರಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನಡೆದಿದು, ಸಮಯಮಿತಿಯಲ್ಲಿ ಕಾಮಗಾರಿ ಪೂರೈಸುವ ಸಂಕಲ್ಪವನ್ನು ಮಾಡಬೇಕೆಂದರು.
ಸಿಬ್ಬಂದಿಗಳಲ್ಲಿ ಕಾರ್ಯಕ್ಷಮತೆಯನ್ನು ಪ್ರೋತ್ಸಾಹಿಸಲು 10 ವಲಯಗಳ ಮಧ್ಯೆ ಸೇವೆ ನೀಡುವ ವಿಷಯದಲ್ಲಿ ಸ್ಪರ್ಧೆಯನ್ನು ಏರ್ಪಡಿಸಬೇಕು. ಆ ಮೂಲಕ ಸೇವಾ ಗುಣಮಟ್ಟವನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದ ಯೋಗೀಶ್ ಭಟ್, ನಗರದ ಕೆಲವು ಭಾಗಗಳಲ್ಲಿರುವ ಲೋ ವೋಲ್ಟೇಜ್ ಸಮಸ್ಯೆಯನ್ನು ಕೆಪಿಟಿಸಿಎಲ್ ಮತ್ತು ಮೆಸ್ಕಾಂ ಜೊತೆಯಾಗಿ ಬಗೆಹರಿಸಬೇಕೆಂದರು.ಅಧ್ಯ ಕ್ಷತೆ ವಹಿ ಸಿದ್ದ ಕರ್ನಾ ಟಕ ವಿದ್ಯುತ್ ಮಂಡ ಳಿ ಇಂಜಿ ನಿಯ ರಿಂಗ್ ಸಂಘದ ಅಧ್ಯಕ್ಷ ಎಲ್.ರವಿ ಮಾ ತನಾಡಿ, ಇಂ ಧನ ಇಲಾಖೆ ಯಲ್ಲಿ ನೌಕರರ ವರ್ಗಾವಣೆಗೆ ನೂತನ ವರ್ಗಾವಣೆ ನೀತಿಯನ್ನು ಜಾರಿಗೊಳಿಸುವಂತೆಯೂ ರವಿ ಒತ್ತಾಯಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ.ಟಿ. ಶೈಲಜಾ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ ಅತಿಥಿಗಳಾಗಿ ಪಾಲ್ಗೊಂಡು ಶುಭಹಾರೈಸಿದರು. ಕೆಪಿಟಿಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕ ಪಿ. ರವಿಕುಮಾರ್, ಕೆಪಿಟಿಸಿಎಲ್ ತಾಂತ್ರಿಕ ನಿರ್ದೇಶಕ ಪ್ರತಾಪ್ ಕುಮಾರ್, ಮೆಸ್ಕಾಂ ಕಾರ್ಯನಿರ್ವಾಹಕ ನಿರ್ದೇಶಕ ವಿಜಯ ನರಸಿಂಹ, ತಾಂತ್ರಿಕ ನಿರ್ದೇಶಕ ಎಚ್. ನಾಗೇಶ್ ಮುಖ್ಯ ಅತಿಥಿಗಳಾಗಿ ಸಮಾರಂಭದಲ್ಲಿ ಪಾಲ್ಗೊಂಡರು. ಸಂಘದ ಪ್ರಧಾನ ಕಾರ್ಯದರ್ಶಿ ವಿ. ವೆಂಕಟಶಿವ ರೆಡ್ಡಿ ಸ್ವಾಗತಿಸಿ, ಹಿರಿಯ ಉಪಾಧ್ಯಕ್ಷ ಎಸ್. ರಾಜೇಂದ್ರಕುಮಾರ್ ವಂದಿಸಿದರು.

ಭತ್ತದ ಕೃಷಿ ಪ್ರೋತ್ಸಾಹಿಸಲು ಭೂಚೇತನ ಕಾರ್ಯಕ್ರಮ

ಮಂಗಳೂರು,ಜೂನ್.18:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭತ್ತದ ಕೃಷಿಕರನ್ನು ಪ್ರೋತ್ಸಾಹಿಸಲು ಕೃಷಿ ಇಲಾಖೆ ಭೂಚೇತನ ಕಾರ್ಯಕ್ರಮವನ್ನು ಪರಿಚಯಿಸಿದ್ದು ಹೈದರಾಬಾದಿನ ಇಕ್ರಿಸ್ಯಾಟ್ ಸಂಸ್ಥೆಯ ಸಹ ಯೋಗದೊಂದಿಗೆ ಕೃಷಿ ಪೂರಕ ಚಟುವಟಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಪದ್ಮಯ್ಯ ನಾಯಕ್ ತಿಳಿಸಿದರು.

ಇಕ್ರಿಸ್ಯಾಟ್ (ಇಂಟರ್ ನ್ಯಾಷ ನಲ್ ಕ್ರಾಪ್ ರೀ ಸರ್ಚ್ ಇನ್ಸ್ಟ ಟ್ಯೂಟ್ ಫಾರ್ ಸೆಮಿ ಅರಿಡ್ ಟ್ರಾ ಪಿಕ್ಸ್) ಸಂಸ್ಥೆ ಜಿಲ್ಲೆ ಯಲ್ಲಿ 5,200 ಹೆಕ್ಟೇರ್ ಪ್ರದೇಶ ವ್ಯಾಪ್ತಿ ಯಲ್ಲಿ ಭತ್ತದ ಬೆಳೆಗೆ ಸತು ವಿನ ಸ ಲ್ಫೇಟ್, ಬೋ ರ್ಯಾಕ್ಸ್, ಸುಣ್ಣ, ಜಿಪ್ಸಾನ್ ಇತ್ಯಾದಿ ಗಳನ್ನು ಒದ ಗಿಸಿ ಇಳು ವರಿ ಹೆಚ್ಚಿ ಸಲು ರೈತ ರಿಗೆ ನೆರ ವಾಗ ಲಿದೆ. ಈ ಸಂಬಂಧ ಪ್ರತೀ 500 ಹೆಕ್ಟೇರ್ ಪ್ರದೇಶಕ್ಕೆ ರೈತ ಅನುವುಗಾರರನ್ನು ಕೃಷಿ ವಿಜ್ಞಾನ ಕೇಂದ್ರ ಕಂಕನಾಡಿಯಲ್ಲಿ ತರಬೇತಿ ನೀಡಿ ರೈತರನ್ನು ಆರಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭೂಚೇತನ ವ್ಯಾಪ್ತಿಯಡಿ ಇತರ ರೈತರು ಬಿತ್ತನೆ ಬೀಜವನ್ನು ಪ್ರತೀ ಕೆ ಜಿಗೆ 9 ರೂ. ಸಹಾಯಧನದಲ್ಲಿ ರೈತರು ರೈತ ಸಂಪರ್ಕಕೇಂದ್ರಗಳಿಂದ ಪಡೆದು ಉತ್ತಮ ಭತ್ತವನ್ನು ಬೆಳೆಯಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಸಲಹೆ ಮಾಡಿದ್ದಾರೆ.
ಈ ಸಂಬಂಧ ಹೆಚ್ಚಿನ ಮಾಹಿತಿಗೆ ಇಲಾಖೆಯ ಸಹಾಯಕ ನಿರ್ದೇಶಕರು ಅಥವಾ ರೈತ ಸಂಪಕ್ ಕೇಂದ್ರಗಳನ್ನು ಸಂಪರ್ಕಿಸಬಹುದು.
ಭತ್ತದ ಕೃಷಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 34,000 ಹೆಕ್ಟೇರ್ ಗುರಿಯನ್ನು ಪ್ರಸಕ್ತ ಸಾಲಿನಲ್ಲಿ ಹೊಂದಲಾಗಿದ್ದು, ಕಳೆದ ಸಾಲಿಗಿಂತ 1,000 ಹೆಕ್ಟೇರ್ ವ್ಯಾಪ್ತಿ ಪ್ರದೇಶ ಕಡಿಮೆಯಾಗಿದೆ. ಇದುವರೆಗೆ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 248 ಹೆಕ್ಟೇರ್ ಗುರಿ ಸಾಧನೆಯಾಗಿದೆ. ತಾಲೂಕುವಾರು ಮಂಗಳೂರಿನಲ್ಲಿ 12,100 ಗುರಿ ಇದ್ದು 80 ಹೆ. ಸಾಧನೆಯಾಗಿದೆ. ಬಂಟ್ವಾಳದಲ್ಲಿ 9,500 ಗುರಿ ಇದ್ದು, 65 ಹೆ. ಸಾಧನೆ ಆಗಿದೆ. ಬೆಳ್ತಂಗಡಿಯಲ್ಲಿ 8,500 ಹೆ. ಗುರಿ ನಿಗದಿಯಾಗಿದ್ದು, 77 ಹೆ. ಸಾಧನೆಯಾಗಿದೆ. ಪುತ್ತೂರಿನಲ್ಲಿ 3,400 ಹೆ. ಗುರಿ ನಿಗದಿಯಾಗಿದ್ದು, 26 ಹೆ. ಸಾಧನೆಯಾಗಿದೆ. ಸುಳ್ಯದಲ್ಲಿ 500 ಹೆ. ಗುರಿ ನಿಗದಿಯಾಗಿದ್ದು, ಸಾಧನೆ ದಾಖಲಾಗಿಲ್ಲ.
ಪೂರ್ವ ಮುಂಗಾರು ಮಳೆ ಸಮರ್ಪಕವಾಗಿಲ್ಲದಿರುವುದರಿಂದ ಭತ್ತದ ಸಸಿಮಡಿ ತಡವಾಗಿರುವ ಕಾರಣ ಸಾಧನೆಯಲ್ಲಿ ಹಿನ್ನಡೆ ದಾಖಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ವಿವರಿಸಿದರು. ಮಳೆ ಜೂನ್ ಆರಂಭದಿಂದಲೇ ಉತ್ತಮವಾಗಿದ್ದರೂ ಮೊದಲು ಮಳೆಯಾಗದ ಕಾರಣ ಸಸಿಮಡಿಯಲ್ಲಿ ವ್ಯತ್ಯಾಸವಾಗಿದೆ.
ಬಿತ್ತನೆ ಬೀಜ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದ್ದು, ರಸಗೊಬ್ಬರ ದಾಸ್ತಾನು ಸಾಕಷ್ಟಿದೆ. ಬಿತ್ತನೆ ಬೀಜ 425 ಕ್ವಿಂಟಾಲ್ ಎಂ ಒ 4 ಭದ್ರ, 100 ಕ್ವಿಂಟಾಲ್ ಜ್ಯೋತಿ ದಾಸ್ತಾನಿದೆ. ಈವರೆಗೆ 350 ಕ್ವಿಂಟಾಲ್ ಬಿತ್ತನೆ ಬೀಜ ವಿತರಣೆಯಾಗಿದೆ. 175 ಕ್ವಿಂಟಾಲ್ ದಾಸ್ತಾನಿದೆ ಎಂಬ ಮಾಹಿತಿ ನೀಡಿದ್ದಾರೆ. ಇನ್ನು ಸುವರ್ಣಭೂಮಿ ಯೋಜನೆಯಡಿ ಗುರುತಿಸಿರುವ ಸಣ್ಣ ಹಾಗೂ ಅತಿ ಸಣ್ಣ ರೈತರ ಕೃಷಿ ವಿಸ್ತೀರ್ಣ ಚಟುವಟಿಕೆಗಳಿಗೆ ಕೃಷಿ ವಿಸ್ತೀರ್ಣಕ್ಕೆ ಅನುಗುಣವಾಗಿ ಶೇ. 50 ಅನುದಾನವನ್ನು ಅವರ ಖಾತೆಗೆ ಜಮೆ ಮಾಡಲು ಕ್ರಮಕೈಗೊಳ್ಳಲಾಗಿದೆ. ಈವರೆಗೆ 709 ಜನರ ಅರ್ಜಿಯನ್ನು ಪುರಸ್ಕರಿಸಲಾಗಿದೆ. ಗುರುತಿಸಲ್ಪಡದ ರೈತರ ಬಗ್ಗೆ ಹೆಚ್ಚಿನ ಮಾಹಿತಿಗೆ ಹಾಗೂ ಪುನರ್ ಪರಿಶೀಲನೆಗೆ ಕಂದಾಯ ಇಲಾಖೆಯನ್ನು ಕೋರಲಾಗಿದೆ.

Friday, June 17, 2011

ಪರಿಶಿಷ್ಟರ ಸೌಲಭ್ಯ ಸಮರ್ಪಕ ಜಾರಿಗೆ ಕ್ರಮ;ಡಿಸಿಆರ್ಇ ಡಿಐಜಿ ಚಕ್ರವರ್ತಿ ಸ್ಪಷ್ಟನೆ

ಮಂಗಳೂರು,ಜೂನ್.17:ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಎಲ್ಲಾ ಇಲಾಖೆಗಳಲ್ಲಿ ಸೌಲಭ್ಯಗಳನ್ನು ಮೀಸಲಿರಿಸಲಾಗಿದೆ. ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳನ್ನು ತಲುಪಿಸುವ ಜವಾಬ್ದಾರಿ ಇಲಾಖಾಕಾರಿಗಳದ್ದಾಗಿದೆ. ಅಕಾರಿಗಳು ತಮಗೆ ನಿಗದಿಪಡಿಸಲಾದ ಹೊಣೆಯನ್ನು ಸಮರ್ಪಕವಾಗಿ ನಿಭಾಯಿಸಬೇಕು ಎಂದು ರಾಜ್ಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಉಪ ಪೊಲೀಸ್ ಮಹಾ ನಿರೀಕ್ಷಕ ಅರುಣ್ ಚಕ್ರವರ್ತಿ ಹೇಳಿದ್ದಾರೆ.
ಅವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದು, ಜಿಲ್ಲೆಯ ಅತ್ಯಂತ ಹಿಂದುಳಿದ ಬುಡಕಟ್ಟು ಜನಾಂಗವೆಂದು ಪರಿಗಣಿಸಲ್ಪಟ್ಟಿರುವ ಕೊರಗರ ಕಾಲೊನಿಗಳಿಗೆ ಭೇಟಿ ನೀಡಿದರು. ಕೊರಗ ಸಮುದಾಯದ ಮುಖಂಡರು ಮತ್ತು ಕೆಲವು ಇಲಾಖೆಗಳ ಅಕಾರಿಗಳೊಂದಿಗೆ ಚರ್ಚೆ ನಡೆಸಿದರು.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಎಲ್ಲಾ ಇಲಾಖೆಗಳು ಸಂವಿಧಾನಬದ್ಧವಾಗಿ ಕರ್ತವ್ಯ ನಿರ್ವಹಿಸಿ ಸಕಾಲದಲ್ಲಿ ಸೌಲಭ್ಯಗಳನ್ನು ನೀಡುತ್ತಿವೆಯೇ ಎಂಬುದನ್ನು ಅರಿತುಕೊಳ್ಳುವ ಹೊಣೆಯನ್ನು ನಿರ್ದೇಶನಾಲಯಕ್ಕೆ ವಹಿಸಲಾಗಿದೆ. ಇಲಾಖೆಗಳು ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ನಿರ್ದೇಶನಾಲಯದೊಂದಿಗೆ ಸಹಕರಿಸಬೇಕು ಎಂದು ಅರುಣ್ ಚಕ್ರವರ್ತಿ ವಿನಂತಿಸಿದರು.
ನಾಗರಿಕ ಹಕ್ಕು ಜಾರಿ ವಿಭಾಗವನ್ನು 1974ರಲ್ಲಿ ರಾಜ್ಯದಲ್ಲಿ ಸ್ಥಾಪಿಸಲಾಗಿದೆ. ಎಡಿಜಿಪಿ, ಡಿಐಜಿ, ಹಾಗೂ 7 ಎಸ್ಪಿಗಳನ್ನೊಳಗೊಂಡಂತೆ ನಿರ್ದೇಶನಾಲಯವು 200 ಸಿಬ್ಬಂದಿಗಳನ್ನು ಹೊಂದಿದೆ ಎಂದು ಡಿಐಜಿ ವಿವರಿಸಿದರು.ಸಂವಿಧಾನದಡಿ ದೌರ್ಜನ್ಯ ತಡೆ ಕಾಯಿದೆಯನ್ನು ರೂಪಿಸಿದ್ದು, ಡಿಸಿಆರ್ಇಗೆ ಈ ಕಾಯಿದೆಯ ಅನುಷ್ಠಾನದ ಹೊಣೆಯನ್ನು ನೀಡಲಾಗಿದೆ. ಇತ್ತೀಚೆಗೆ ಸಮಾಜ ಕಲ್ಯಾಣ ಸಚಿವರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವಿಭಜಿತ ಜಿಲ್ಲೆಗಳ ಅಕಾರಿಗಳ ಸಭೆಯನ್ನು ನಡೆಸಿದ್ದರು. ಸಭೆಯಲ್ಲಿ ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಕಟ್ಟು ನಿಟ್ಟಾಗಿ ಅನುಷ್ಠಾನಗೊಳಿಸಲು ನಿರ್ದೇಶನ ನೀಡಿದ್ದಾರೆ. ಸಚಿವರ ನಿರ್ದೇಶನಗಳನ್ನು ಇಲಾಖೆಗಳು ಪಾಲನೆ ಮಾಡುವ ನಿಟ್ಟಿನಲ್ಲಿ ನಿರ್ದೇಶನಾಲಯ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ ಎಂದರು.
ಮಂಗಳೂರು ವಲಯವು 4 ಜಿಲ್ಲೆಗಳು ಮತ್ತು ಒಂದು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯನ್ನು ಹೊಂದಿದೆ. ಎಲ್ಲಾ ಇಲಾಖೆಗಳು ಸಮನ್ವಯ ಸಾಸಿ ಪರಿಶಿಷ್ಟರ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿರುವುದನ್ನು ಕಾಲ ಕಾಲಕ್ಕೆ ಖಚಿತಪಡಿಸಿಕೊಳ್ಳುವಂತೆ ಈ ವಲಯದ ಪೊಲೀಸ್ ಅಕ್ಷಕರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿರುವುದಾಗಿ ಅರುಣ್ ಚಕ್ರವರ್ತಿ ತಿಳಿಸಿದರು.ಶೇ. 25 ಮತ್ತು ಶೇ 22.76 ಕಾದಿರಿಸಿದ ನಿಯ ದುರುಪಯೋಗ, ಉದ್ಯೋಗ ಮೀಸಲಾತಿ ನಿಯಮಾವಳಿ ಉಲ್ಲಂಘನೆ, ಜಮೀನು ಮಂಜೂರು ನಿಯಮಾವಳಿಗಳ ಉಲ್ಲಂಘನೆ , ಜಮೀನು ಅಕ್ರಮ ಪರಾಭಾರೆ, ಭೂಮಾಲಿಕರಿಂದ ಪರಿಶಿಷ್ಟ ಜಾತಿ/ ಪಂಗಡಗಳ ಅಕ್ರಮ ಎತ್ತಂಗಡಿ ಪ್ರಕರಣಗಳು, ಸುಳ್ಳು ಜಾತಿ ಪ್ರಮಾಣಪತ್ರ ಪ್ರಕರಣಗಳು, ಪರಿಶಿಷ್ಟರನ್ನು ಜೀತದಾಳುಗಳಾಗಿ ದುಡಿಸಿಕೊಳ್ಳುವುದು, ಕರ್ನಾಟಕ ಋಣ ಪರಿಹಾರ ಆಧ್ಯಾದೇಶ 1975, ಪರಿಶಿಷ್ಟರ ಅಕ್ರಮ ಬಂಧನ ಪ್ರಕರಣಗಳ ತನಿಖೆಯನ್ನು ನಡೆಸಿ ಸಂಬಂಧಪಟ್ಟ ಇಲಾಖೆಗಳಿಗೆ ಕ್ರಮಗಳ ಕುರಿತಂತೆ ಶಿಫಾರಸು ಮಾಡುವ ಅಕಾರವನ್ನು ನಿರ್ದೇಶನಾಲಯ ಹೊಂದಿರುತ್ತದೆ.
ಈ ತನಕ ತೆರೆಯ ಮರೆಯಲ್ಲಿದ್ದ ನಿರ್ದೇಶನಾಲಯವನ್ನು ಈಗ ಕ್ರಿಯಾಶೀಲಗೊಳಿಸಲಾಗಿದೆ. ಎಲ್ಲಾ ಇಲಾಖೆಗಳ ಅಕಾರಿಗಳಿಗೂ ನಿರ್ದೇಶನಾಲಯದ ಮಹತ್ವ ಮನವರಿಕೆಯಾಗುತ್ತಿದೆ. ಅಕಾರಿಗಳು ಪರಿಶಿಷ್ಟರ ಯೋಜನೆಗಳನ್ನು ಸಕಾಲದಲ್ಲಿ ಮತ್ತು ಸಮರ್ಪಕವಾಗಿ ತಲುಪಿಸಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಕೈಗೊಳ್ಳಲಾರಂಭಿಸಿದೆ ಎಂದು ಚಕ್ರವರ್ತಿ ನುಡಿದರು.

2006-10ರವರೆಗೆ ಜಿಲ್ಲೆಗೆ 5.28 ಕೋಟಿ ರೂ. ನೈರ್ಮಲ್ಯ ಪ್ರಶಸ್ತಿ, 3.10 ಕೋಟಿ ರೂ. ಬಾಕಿ

ಮಂಗಳೂರು,ಜೂ.17:ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ದಕ್ಷಿಣ ಕನ್ನಡ ಜಿಲ್ಲೆಗೆ ನೈರ್ಮಲ್ಯ ಯೋಜನೆಯಡಿ 2006-07ನೆ ಸಾಲಿನಿಂದ 2009-10ನೆ ಸಾಲಿನವರೆಗೆ ಒಟ್ಟು 5,28,95,000 ರೂ. ಪ್ರಶಸ್ತಿ ಹಣ ದೊರಕಿದ್ದು, ಇದರಲ್ಲಿ 3.10 ಕೋಟಿ ರೂ. ಇನ್ನಷ್ಟೆ ಜಿಲ್ಲೆಗೆ ಮಂಜೂರಾಗಬೇಕಿದೆ ಎಂದು ಜಿ.ಪಂ.ಅಧ್ಯಕ್ಷೆ ಶೈಲಜಾ ಭಟ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ಇಂದು 2009-10ನೆ ಸಾಲಿನ ಕರ್ನಾಟಕ ರಾಜ್ಯ ನೈಮಲ್ಯ ಪ್ರಶಸ್ತಿಯಡಿ ಜಿಲ್ಲೆಗೆ ನೈರ್ಮಲ್ಯ ರತ್ನ ಪ್ರಥಮ ಪ್ರಶಸ್ತಿ ಲಭ್ಯವಾಗಿದ್ದು, ಪ್ರಶಸ್ತಿ ಪ್ರದಾನ ಸಮಾರಂಭದ ಬಗ್ಗೆ ಅವರು ವಿವರ ನೀಡಿದರು.
ಈ ಪ್ರಶಸ್ತಿಯಡಿ ಜಿಲ್ಲೆಗೆ 30 ಲಕ್ಷ ರೂ. ಪ್ರಶಸ್ತಿ ಹಣ ಲಭ್ಯವಾಗಿದೆ. ಜೂ.20ರಂದು ಬೆಳಗ್ಗೆ 11 ಗಂಟೆಗೆ _ರಾಜ್ಯ ನೀರು ಮತ್ತು ನೈರ್ಮಲ್ಯ ಮಿಶನ್ ಹಾಗು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಗಳ ಸಹಯೋಗದಲ್ಲಿ ಪ್ರಶಸ್ತಿಯ ಚೆಕ್ ವಿತರಣಾ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ.ಪಾಲೆಮಾರ್ ಕಾರ್ಯಕ್ರಮ ಉದ್ಘಾಟಿಸಲಿರವರು ಎಂದವರು ತಿಳಿಸಿದರು.ಪ್ರಶಸ್ತಿ ಮೊತ್ತವನ್ನು ಸರಕಾರಿ ಮಾರ್ಗಸೂಚಿ ಪ್ರಕಾರ ನೈರ್ಮಲ್ಯ ಕಾರ್ಯಕ್ರಮಗಳಿಗೆ ಬಳಕೆ ಮಾಡಲಾಗುವುದು. 2009ರ ಮಾಚರ್್ 31ರ ಅವಧಿಯಲ್ಲಿ ಜಿಲ್ಲೆಯ ಒಟ್ಟು 2,43,568 ಕುಟುಂಬಗಳಲ್ಲಿ 1,48558 ಕುಟುಂಬಗಳು ಶೌಚಾಲಯ ಹೊಂದಿದ್ದವು. ಉಳಿದ 94970 ಕುಟುಂಬಗಳಿಗೆ 2009-10ನೆ ಸಾಲಿನಲ್ಲಿ ಶೌಚಾಲಯ ಒದಗಿಸುವ ಮೂಲಕ ಸಂಪೂರ್ಣ ಶೌಚಾಲಯಯುಕ್ತ ಜಿಲ್ಲೆಯನ್ನಾಗಿಸಲಾಗಿದೆ. ಇದೇ ವೇಳೆಯಲ್ಲಿ 693 ಶಾಲೆಗಳು ಶೌಚಾಲಯ ಇಲ್ಲವಾಗಿದ್ದು, ಇದೀಗ ಈ ಎಲ್ಲಾ ಶಾಲೆಗಳಲ್ಲೂ ಶೌಚಾಲಯವನ್ನು ಒದಗಿಸಲಾಗಿದೆ ಎಂದು ಅವರು ತಿಳಿಸಿದರು.ರಾಜ್ಯ ನೈರ್ಮಲ್ಯ ಯೋಜನೆಯಡಿ ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮ ಪಂಚಾಯತ್ ರಾಜ್ಯ ಮಟ್ಟದ ನೈರ್ಮಲ್ಯ ರತ್ನ ಹಾಗೂ ವಿಭಾಗೀಯ ಮಟ್ಟದ ಸ್ವರ್ಣ ನೈರ್ಮಲ್ಯ ಹಾಗೂ ಜಿಲ್ಲಾ ಮಟ್ಟದ ರಜತ ನೈರ್ಮಲ್ಯ ಪ್ರಶಸ್ತಿ ಪಡೆದಿದೆ.
ಇರಾ ಗ್ರಾಮ ಪಂಚಾ ಯತ್ ಜಿಲ್ಲಾ ಮಟ್ಟದ ರಜತ ನೈ ರ್ಮಲ್ಯ ದ್ವಿ ತೀಯ ಸ್ಥಾನ ಹಾಗೂ ನೆಕ್ಕಿಲಾಡಿ ಗ್ರಾ.ಪಂ. ತೃತೀಯ ಸ್ಥಾನ ಪಡೆದಿದೆ.
ಇದೇ ವೇಳೆ ಇರಾ ಗ್ರಾ.ಪಂ., 34ನೆ ನೆಕ್ಕಿಲಾಡಿ ಗ್ರಾ.ಪಂ., ಕಿಲ್ಪಾಡಿ ಗ್ರಾ.ಪಂ. ಹಾಗೂ ಆಲೆಟ್ಟಿ ಗ್ರಾ.ಪಂ.ಗಳು ತಾಲೂಕು ಮಟ್ಟದ ನೈರ್ಮಲ್ಯ ಪ್ರಶಸ್ತಿಯ ಪ್ರಥಮ ಸ್ಥಾನ ಪಡೆದಿವೆ. ಬಂಟ್ವಾಳದ ಕಾವಳಮುಡೂರಿನ ಸ.ಹಿ.ಪ್ರಾ. ಶಾಲೆ ಜಿಲ್ಲಾ ಮಟ್ಟದ ರಜತ ನೈರ್ಮಲ್ಯ ಹಾಗೂ ತಾಲೂಕು ಮಟ್ಟದ ನೈರ್ಮಲ್ಯ ಪ್ರಶಸ್ತಿ ಪಡೆದಿವೆ.ಬೆಳ್ತಂಗಡಿ ಓಡಿಲ್ನಾಳದ ಸ.ಹಿ.ಪ್ರಾ. ಶಾಲೆ, ಕುಪ್ಪೆಪದವು ಸ.ಹಿ.ಪ್ರಾ. ಶಾಲೆ, ಉಪ್ಪಿನಂಗಡಿಯ ಸ.ಹಿ.ಪ್ರಾ. ಶಾಲೆ, ಸುಳ್ಯ ಅಜ್ಜಾವರದ ಮುಳ್ಯಅಟ್ಲೂರು ಸ.ಹಿ.ಪ್ರಾ. ಶಾಲೆ, ಬಂಟ್ವಾಳ ಕರಿಯಂಗಳದ ಬಾರಿಂಜ ಅಂಗನವಾಡಿ ಕೇಂದ್ರ, ಮಡಂತ್ಯಾರು ಪೂಂಜಾಲಕಟ್ಟೆ ಅಂಗನವಾಡಿ ಕೇಂದ್ರ, ಮಂಗಳೂರು ಕಲ್ಲಮುಂಡ್ಕೂರು ಅಂಗನವಾಡಿ ಕೇಂದ್ರ, ಕೊಯ್ಲ ಏಣಿತಡ್ಕ ಅಂಗನವಾಡಿ ಕೇಂದ್ರ, ಸುಳ್ಯದ ಅಕ್ಕೋಜಿಪಾಲ್ ಅಂಗನವಾಡಿ ಕೇಂದ್ರ ತಾಲೂಕು ಮಟ್ಟದ ನೈರ್ಮಲ್ಯ ಪ್ರಶಸ್ತಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಬಾರಿಂಜ ಅಂಗನವಾಡಿ ಕೇಂದ್ರವು ಜಿಲ್ಲಾ ಮಟ್ಟದ ರಜತ ನೈರ್ಮಲ್ಯ ಪ್ರಶಸ್ತಿಯ ಪ್ರಥಮ ಸ್ಥಾನವನ್ನೂ ತನ್ನದಾಗಿಸಿಕೊಂಡಿದೆ ಎಂದು ಶೈಲಜಾ ಭಟ್ ವಿವರ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಧನಲಕ್ಷ್ಮಿ, ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವರಾಮೇ ಗೌಡ ಉಪಸ್ಥಿತರಿದ್ದರು.

Thursday, June 16, 2011

ಸೊಳ್ಳೆಗ್ಯಾಕೆ ಮಲೇರಿಯಾ ಬರಲ್ಲ?

ಮಂಗಳೂರು,ಜೂನ್.16:ಮಲೇರಿಯಾವನ್ನು ಹರಡುವ ಸೊಳ್ಳೆಗಳಿಗೆ ಯಾಕೆ ಮಲೇರಿಯಾ ಬರುವುದಿಲ್ಲ ಎಂಬುದು ಮುಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯ ಪ್ರಶ್ನೆ?ಮಲೇರಿಯಾ


ನಿಯಂ ತ್ರಣ ಮಾಸಾ ಚರಣೆ ಅಂಗ ವಾಗಿ ಕ್ಷೇತ್ರ ಪ್ರಚಾರ ನಿರ್ದೇ ಶನಾ ಲಯ, ಆರೋ ಗ್ಯ ಮತ್ತು ಕು ಟುಂಬ ಕಲ್ಯಾಣ ಇಲಾಖೆ, ವಾರ್ತಾ ಇಲಾಖೆ ಹಾಗೂ ಮುಲ್ಕಿ ಸರ ಕಾರಿ ಪದವಿ ಪೂರ್ವ ಕಾಲೇ ಜಿನ ಸಂಯು ಕ್ತಾಶ್ರ ಯದ ಲ್ಲಿ ಏರ್ಪ ಡಿಸ ಲಾದ ಜಾಗೃತಿ ಕಾರ್ಯ ಕ್ರಮ ದಲ್ಲಿ ಉಪ ನ್ಯಾಸ ಕರಿಗೆ ವಿದ್ಯಾರ್ಥಿ ಗಳಿಂದ ಪ್ರಶ್ನೆ ಯ ಸುರಿ ಮಳೆ.
ಮಲೇ ರಿಯಾ ಹರ ಡುವ ಸೊಳ್ಳೆ ಗಳಿಗೆ ಮಲೇ ರಿಯಾ ಯಾಕೆ ಬರು ವುದಿಲ್ಲ? ಸೊಳ್ಳೆ ಗಳ ನಿರ್ಮೂ ಲನಕ್ಕೆ ರಾಸಾ ಯಿನಿಕ ರಕ್ಷಣೆ ಗಳನ್ನು ಬಳ ಸುವು ದರಿಂದ ಅಡ್ಡ ಪರಿಣಾ ಮಗಳೇನು?ಹೆಣ್ಣು ಅನಾ ಫಿಲಿಸ್ ಸೊಳ್ಳೆಯೇ ಮಲೇ ರಿಯಾ ವನ್ನು ಯಾಕೆ ಹರ ಡುತ್ತದೆ ಎಂಬು ದು ವಿದ್ಯಾರ್ಥಿ ಗಳ ಪ್ರಶ್ನೆ ಗಳು. ಉಪ ನ್ಯಾಸ ನೀಡಿದ ಡಾ ಅರುಣ್ ಕುಮಾರ್ ಅವರು, ಮಲೇ ರಿಯಾ 1990ರ ನಂತರ ದಕ್ಷಿಣ ಕನ್ನಡದಲ್ಲಿ ಆರಂಭವಾದ ಬಗ್ಗೆ, ಮಲೇರಿಯಾದ ಲಕ್ಷಣಗಳ ಬಗ್ಗೆ, ಪ್ಲಾಸ್ಮೋಡಿಯಂ ಎಂಬ ಏಕಕೋಶ ಜೀವಿ ಇದನ್ನು ಹರಡುವ ರೀತಿ, ಮಲೇರಿಯಾದ 4 ವಿಧಗಳ ಬಗ್ಗೆ,ಕಾಯಿಲೆ ಕಂಡು ಹಿಡಿಯುವ ಬಗ್ಗೆ, ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡುವ ಬಗ್ಗೆ ಮಕ್ಕಳಿಗೆ ವಿವರಿಸಿದರು.
ಸೊಳ್ಳೆಗಳ ನಿಯಂತ್ರಣದ ಬಗ್ಗೆ ಜೈವಿಕ ವಿಧಾನ ಹಾಗೂ ರಾಸಾಯಿನಿಕ ವಿಧಾನ, ಸ್ವಯಂರಕ್ಷಣೆಯ ಬಗ್ಗೆ ಮಲೇರಿಯಾ ಅಧಿಕಾರಿ ಜಯರಾಮ್ ಅವರು ವಿವರಿಸಿದರು. ಉಪ ನ್ಯಾಸಕ್ಕೆ ಮುಂಚೆ ನಡೆದ ಸಭಾ ಕಾರ್ಯ ಕ್ರಮ ಉದ್ಘಾ ಟಿಸಿ ಮಾತ ನಾಡಿದ, ಮುಲ್ಕಿ ನಗರ ಪಂಚಾ ಯತ್ ಅಧ್ಯಕ್ಷ ರಾದ ಬಿ ಎಂ ಆಸಿಫ್ ಅವರು ಮುಲ್ಕಿ ಸುತ್ತಮುತ್ತಲ ಪರಿಸರದಲ್ಲಿ ಮಲೇರಿಯಾ ನಿಯಂತ್ರಣ ಅಗತ್ಯವಾಗಿದ್ದು, ಮಕ್ಕಳಲ್ಲಿ ಈ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಶ್ಲಾಘನೀಯ ಎಂದರು. ಮುಖ್ಯ ಅತಿಥಿಗಳಾಗಿದ್ದ ನಗರಸಭೆ ಉಪಾಧ್ಯಕ್ಷ ಯೋಗೇಶ್ ಕೋಟ್ಯಾನ್, ಕಾಲೇಜಿನ ಪ್ರಾಂಶುಪಾಲರಾದ ಸೂಸನ್ ಚೆರಿಯನ್, ಮುಖ್ಯಾಧಿಕಾರಿ ಹರೀಶ್ಚಂದ್ರ ಸಾಲಿಯಾನ್ ಮಾತನಾಡಿದರು.ಕ್ಷೇತ್ರ ಪ್ರಚಾ ರಾಧಿ ಕಾರಿ ಟಿ ಬಿ ನಂಜುಂ ಡಸ್ವಾಮಿ ಸ್ವಾಗ ತಿಸಿ ದರು. ಈ ಸಂಬಂಧ ಮಕ್ಕ ಳಿಗೆ ವಿವಿಧ ಸ್ಪರ್ಧೆ ಗಳನ್ನು ಏರ್ಪ ಡಿಸ ಲಾಗಿದ್ದು ಉಪ ಸ್ಥಿತ ರಿದ್ದ ಗಣ್ಯರು ಬಹುಮಾನ ವಿತರಿಸಿದರು.

Wednesday, June 15, 2011

ಅಧಿಕಾರಿಗಳಿಗೆ ಮಾಹಿತಿ ಹಕ್ಕು ತರಬೇತಿ

ಮಂಗಳೂರು,ಜೂ.15: ಜನರಿಂದ ಜನರಿಗಾಗಿ ರೂಪಿಸಲ್ಪಟ್ಟ ಮಾಹಿತಿ ಹಕ್ಕು ಕಾಯಿದೆಯನ್ನು ಹೆಚ್ಚು ಬಳಸಿಕೊಂಡದ್ದು ಸರ್ಕಾರೇತರ ಸಂಘಸಂಸ್ಥೆಗಳೋ, ಪತ್ರಕರ್ತರೋ ಅಲ್ಲ; ಈ ಕಾಯಿದೆಯ ಪ್ರಯೋಜನವನ್ನು ಪಡೆದುಕೊಂಡವರು ಸರ್ಕಾರಿ ಅಧಿಕಾರಿಗಳು ಎಂದು ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ನ ಅಸೋಸಿಯೇಟ್ ಪ್ರೊ. ಡಾ ಸಾಯಿರಾಂ ಭಟ್ ಹೇಳಿದರು.

ಅವರು ಜಿಲ್ಲಾ ಪಂಚಾ ಯತ್ ನ ನೇತ್ರಾ ವತಿ ಸಭಾಂ ಗಣ ದಲ್ಲಿ ಮೈಸೂ ರಿನ ಆಡಳಿತ ತರ ಬೇತಿ ಸಂಸ್ಥೆ ಆಯೋ ಜಿಸಿದ್ದ 'ಮಾಹಿತಿ ಹಕ್ಕು -2005 ಕಾಯಿದೆ ಯ ಪರಿಣಾ ಮಕಾರಿ ಅನುಷ್ಠಾ ನದ ಮುಖಾಂ ತರ ಪಾರ ದರ್ಶ ಕತೆ ಮತ್ತು ಜವಾ ಬ್ದಾರಿ ವೃದ್ಧಿ' ಕುರಿತ ಕಾರ್ಯಾ ಗಾರ ದಲ್ಲಿ ಅಧಿ ಕಾರಿ ಗಳನ್ನು ಉದ್ದೇ ಶಿಸಿ ಮಾತ ನಾಡು ತಿದ್ದರು.
ಸರ್ಕಾರಿ ವ್ಯವಸ್ಥೆಯಲ್ಲಿ ಮಾಹಿತಿ ಪಡೆದುಕೊಳ್ಳುವ ಕ್ಲಿಷ್ಟ ಪ್ರಕ್ರಿಯೆಗೆ ಹಾಗೂ ಆಡಳಿತದಲ್ಲಿ ಪಾರದರ್ಶಕತೆ ತರುವಲ್ಲಿ ಮಾಹಿತಿ ಹಕ್ಕು ಸಂಚಲನವನ್ನೇ ಮೂಡಿಸಿತು. ಈ ಸಂಬಂಧ ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಜನರು ಪಡೆದುಕೊಂಡ ಅನುಕೂಲದ ಬಗ್ಗೆ ಸಮೀಕ್ಷೆ ನಡೆಸಿದಾಗ ಈ ಹಕ್ಕನ್ನು ಹೆಚ್ಚಾಗಿ ಬಳಸಿಕೊಂಡದ್ದು, ಸರ್ಕಾರಿ ಅಧಿಕಾರಿಗಳು ಮತ್ತು ನಿವೃತ್ತ ಸರ್ಕಾರಿ ಅಧಿಕಾರಿಗಳು ಎಂದು ಡಾ ಸಾಯಿರಾಂ ಭಟ್ ಹೇಳಿದರು.ಸಾರ್ವಜನಿಕ ಪ್ರಾಧಿಕಾರ, ದಾಖಲೆಗಳ ನಿರ್ವಹಣೆ, ಸೆಕ್ಷನ್ 4(1) (ಬಿ), ಅರ್ಧ ಮಾಹಿತಿ ನೀಡುವಿಕೆ, ಮೂರನೇ ಪಾರ್ಟಿ ಮಾಹಿತಿ ನೀಡುವುದು, ನೀಡಲಾಗದ ಮಾಹಿತಿಗಳ ಬಗ್ಗೆ ಸವಿವರ ಮಾಹಿತಿ ನೀಡಿದರು.ಸಾರ್ವಜನಿಕ ಪ್ರಾಧಿಕಾರದ ಕರ್ತವ್ಯಗಳ ಕುರಿತಂತೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.ಈ ಕಾಯ್ದೆ ಕೇಂದ್ರ ಕಾನೂನಿಗೆ ಒಳಪಟ್ಟಿದ್ದರೂ ಇದನ್ನು ಅನುಷ್ಠಾನಗೊಳಿಸುವ ಸಂದರ್ಭ ಸಂಬಂಧಪಟ್ಟ ರಾಜ್ಯಗಳ ಸರಕಾರಗಳು ಕೆಲವೊಂದು ನಿಯಮಗಳನ್ನು ತರಬಹುದಾಗಿದೆ. ಸರಕಾರದ ಪಾಲುದಾರಿಕೆ ಹೊಂದಿರುವ ಎಲ್ಲಾ ಸಾರ್ವಜನಿಕ ವಲಯದ ಸಂಸ್ಥೆಗಳು ಈ ಕಾನೂನಿನ ವ್ಯಾಪ್ತಿಗೊಳಪಡುತ್ತವೆ. ಒಂದು ವರ್ಷದಲ್ಲಿ 25 ಲಕ್ಷಕ್ಕಿಂತ ಹೆಚ್ಚಿನ ಸರಕಾರಿ ಹಣಕಾಸು ನೆರವನ್ನು ಪಡೆಯುವ ಸರಕಾರೇತರ ಸಂಸ್ಥೆಗಳೂ ಸಹ ಈ ಕಾನೂನಿನ ವ್ಯಾಪ್ತಿಗೊಳಪಡುತ್ತವೆ ಎಂದು ಇಂಡಿಯನ್ ಒಲಿಂಪಿಕ್ ಅಸೋಸಿಯೇಶನ್ನ ಪ್ರಕರಣವೊಂದನ್ನು ಉದಾಹರಿಸಿದರು.ಮಾಹಿತಿ ಹಕ್ಕು ಕಾಯ್ದೆ ಯಡಿ ಮಾಹಿತಿ ಪಡೆ ಯಲು 30 ದಿನ ಗಳ ಕಾಲ ನಿಗದಿ ಪಡಿಸ ಲಾಗಿದ್ದು, ಈ ತೃ ತೀಯ ವ್ಯಕ್ತಿ ಯ ಮೂಲಕ ಮಾಹಿತಿ ಪಡೆ ಯಲು 40 ದಿನ ಗಳ ಕಾಲಾ ವಕಾ ಶವನ್ನು ನಿಗದಿ ಪಡಿ ಸಲಾ ಗಿದೆ ಎಂ ದರು. ಜೂನ್ 15 ರಂದು ನಿವೃತ್ತ ರಾಜ್ಯ ಸರ್ಕಾರಿ ಕಾರ್ಯ ದರ್ಶಿ ರಾಬಿನ್ಸ್ ಡಿ ಸೋಜಾ ಅವರು ತಮ್ಮ ಕರ್ತವ್ಯದ ಅವಧಿಯಲ್ಲಿ ಮಾಹಿತಿ ನೀಡುವ ಹಾಗೂ ಪಡೆಯುವ ಕಷ್ಟದ ಬಗ್ಗೆ ಹಾಗೂ ಮಾಹಿತಿ ಹಕ್ಕು ಕಾಯಿದೆಯಿಂದ ಬದಲಾದ ವ್ಯವಸ್ಥೆ ಬಗ್ಗೆ ಹಲವು ಉದಾಹರಣೆಗಳೊಂದಿಗೆ ತರಬೇತಿ ತರಗತಿಯನ್ನು ಆರಂಭಿಸಿದರು. ಆರ್ ಟಿ ಯ ಕಾಯಿದೆಯಡಿ ಅರ್ಜಿಗಳನ್ನು ಸ್ವೀಕರಿಸಿ, ವಿಲೇ ಮಾಡುವ ರೀತಿಯನ್ನು ಈ ಸಂಬಂಧ ಎಲ್ಲರಿಗೂ ತರಬೇತಿ ನೀಡುವ ಅಗತ್ಯವನ್ನು ಅವರು ಪ್ರತಿಪಾದಿಸಿದರು.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಭಾರ ಸಿಇಒ ಶಿವರಾಮೇಗೌಡ ನೆರವೇರಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮ ಸಂಯೋಜಕ ಕೆ.ಎಂ. ಪ್ರಸಾದ್, ಮಂಗಳೂರು ಉಪವಿಭಾಗಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಸಮಾರೋಪ ಸಮಾರಂಭದಲ್ಲಿ ಪಿಲಿಕುಳ ನಿಸರ್ಗಧಾಮದ ಆಡಳಿತಾಧಿಕಾರಿ ಹಾಗೂ ಡಿಟಿಐ ನ ಪ್ರಾಂಶುಪಾಲರಾದ ಜೆ.ಆರ್.ಲೋಬೋ ಉಪಸ್ಥಿತರಿದ್ದರು