Sunday, June 12, 2011

ಪರಿಶಿಷ್ಟವರ್ಗದ ಅಭಿವೃದ್ಧಿಗೆ ರೂ.18ಕೋಟಿ20ಲಕ್ಷ: ಸಚಿವ ಪಾಲೆಮಾರ್

ಮಂಗಳೂರು,ಜೂನ್.12:ರಾಜ್ಯ ಸರ್ಕಾರ ಹಿಂದುಳಿದವರನ್ನು ಮುಖ್ಯವಾಹಿನಿಗೆ ಕರೆತರಲು ಹಲವು ಯೋಜನೆಗಳನ್ನು ಪ್ರಕಟಿಸಿ ಅನುಷ್ಠಾನಕ್ಕೆ ತರುತ್ತಿದ್ದು, ಪರಿಶಿಷ್ಟಜಾತಿ ಮತ್ತು ವರ್ಗದವರ ಅಭಿವೃದ್ಧಿಗೆಂದೇ 18 ಕೋಟಿ 20ಲಕ್ಷ ರೂ.ಗಳನ್ನು ಮೀಸಲಿಟ್ಟಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ ಪಾಲೆಮಾರ್ ಅವರು ನುಡಿದರು.

ಅವರಿಂದು ಭಾರತ ರತ್ನ, ಸಂವಿ ಧಾನ ಶಿಲ್ಪಿ ಡಾ. ಬಿ. ಆರ್. ಅಂಬೇ ಡ್ಕರ್ ಅವರ ಪ್ರತಿಮೆ ಯನ್ನು ನಗರದ ಪುರ ಭವನ ದಲ್ಲಿ ಅನಾ ವರಣ ಗೊಳಿಸಿ ಮಾತ ನಾಡು ತ್ತಿದ್ದರು. ಅಂಬೇ ಡ್ಕರ್ ಅವರ ಆಶಯ ಗಳನ್ನು ಪಾಲಿಸಿ ಸರ್ವರ ಅಭಿ ವೃದ್ಧಿ ಯನ್ನು ಗಮನ ದಲ್ಲಿರಿಸಿ ನಗರದ ಹೃದಯ ಭಾಗ ದಲ್ಲೇ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಆಶ್ರಯ ಯೋಜನೆಯಡಿ ಮನೆಗಳನ್ನು ನೀಡಲಾಗಿದೆ. ವಸತಿಯ ಜೊತೆ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. ಮೀನುಗಾರರಿಗೆ ಉಚಿತ ಕಿಟ್, ಮನೆಕಟ್ಟಲು 50,000 ರೂ.ಗಳ ನೆರವು, ತ್ರಿಚಕ್ರ ವಾಹನ, ಮೀನು ಸಾಕಾಣಿಕೆಗೆ ಒಂದು ಹೆಕ್ಟೇರ್ ಗೆ 1,60,000 ರೂ.ಗಳ ನೆರವು ನೀಡಲಾಗುವುದು ಎಂದರು.ಸಮಾ ರಂಭದ ಅಧ್ಯ ಕ್ಷತೆ ವಹಿ ಸಿದ್ದ ಉಪ ಸಭಾ ಪತಿ ಗಳಾದ ಎನ್. ಯೋಗೀಶ್ ಭಟ್ ಅವರು, ಅಂಬೇ ಡ್ಕರ್ ದೇಶದ ಆಸ್ತಿ; ನಮ್ಮ ದೇಶದ ಸರ್ವಾಂ ಗೀಣ ಅಭಿ ವೃದ್ದಿಗೆ ರೂಪು ನೀಡಿ ದವರು. ದೇಶದ ಸರ್ವ ತೋಮುಖ ಅಭಿ ವೃದ್ಧಿಗೆ ಎಲ್ಲರೂ ದುಡಿಯುವುದೇ ಮಹಾನ್ ಮಾನವತಾವಾದಿಗೆ ಸಲ್ಲಿಸುವ ಪುಷ್ಪಾಂಜಲಿ ಎಂದರು.ಮಂಗಳೂರು ಮಹಾನಗರಪಾಲಿಕೆ ರಾಜ್ಯಕ್ಕೆ ನಂಬರ್ ವನ್ ಆಗಬೇಕಿದ್ದು, ಜಿಲ್ಲೆಯಲ್ಲಿ ಸುಸ್ಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 9 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಸಾಮಾಜಿಕ ಕಲ್ಯಾಣ ಸಚಿವ ನಾರಾಯಣ ಸ್ವಾಮಿ ಅವರೊಂದಿಗೆ ಚರ್ಚಿಸಲಾಗಿದೆ. ಉರ್ವದಲ್ಲಿ ಮನಾಪ ನಿರ್ಮಿಸಿರುವ ಮನೆ ರಾಜ್ಯಕ್ಕೆ ಮಾದರಿ ಎಂಬ ಪ್ರಶಂಸೆ ಮುಖ್ಯಮಂತ್ರಿಗಳಿಂದ ವ್ಯಕ್ತವಾಗಿದೆ ಎಂದರು.ಪಾಲಿಕೆ ಮಹಾಪೌರ ಪ್ರವೀಣ್ ಅಂಚನ್, ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ, ವಿಧಾನಪರಿಷತ್ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಶಾಸಕ ಯು.ಟಿ.ಖಾದರ್, ಪಾಲಿಕೆ ಆಯುಕ್ತರಾದ ಡಾ.ಕೆ.ಎನ್. ವಿಜಯಪ್ರಕಾಶ್, ವಿಪಕ್ಷ ನಾಯಕ ಲ್ಯಾನ್ಸ್ ಲೊಟ್ ಪಿಂಟೋ, ಸುಧೀರ್ ಶೆಟ್ಟಿ ಸೇರಿದಂತೆ ಪಾಲಿಕೆಯ ಹಲವು ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಸಮಾರಂಭದಲ್ಲಿ ಶಿಲ್ಪಿ ಬೆಂಗಳೂರಿನ ಬಿ.ಸಿ. ಶಿವಕುಮಾರ್, ಪೀಠದ ಶಿಲ್ಪಿ ಗೋಪಾಲಸ್ವಾಮಿ, ತಮಟೆ ಕಲಾವಿದ ಆರ್. ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು.