Tuesday, June 7, 2011

ಕೊರಗ ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ 3.75 ಕೋಟಿ ಮೀಸಲು: ಜಿಲ್ಲಾಧಿಕಾರಿ

ಮಂಗಳೂರು,ಜೂನ್.07:ದಕ್ಷಿಣ ಜಿಲ್ಲೆಯಲ್ಲಿ ಅತ್ಯಂತ ಹಿಂದುಳಿದ ಜನಾಂಗವೆಂದು ಗುರುತಿಸಲ್ಪಟ್ಟ ಕೊರಗ ಜನಾಂಗದ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು 3 ಕೋಟಿ 75 ಲಕ್ಷ ಅನುದಾನ ಬೇಕಿದ್ದು 55.65 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ತಿಳಿಸಿದರು.ಅವರು ಜೂನ್ 6ರಂದು ತಮ್ಮ ಕಚೇರಿಯಲ್ಲಿ ಕರೆದ ಕೊರಗ ಜನಾಂಗದವರ ಸಮಗ್ರ ಅಭಿವೃದ್ಧಿ ಕುರಿತ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಕೊರಗ ಸಮುದಾ ಯಗಳಿಗೆ ಸಾ ಮೂಹಿಕ ನೀರಾ ವರಿ ಸೌಲಭ್ಯ ಕಾಮ ಗಾರಿ ಗಳಿಗೆ ಮಂಗ ಳೂರು ತಾಲೂ ಕಿನ ಶಿರ್ತಾಡಿ, ಗುರು ಪುರ, ನೆಲ್ಲಿಕಾರು, ಬಡಗ ಮಿಜಾರು, ಬೆಳು ವಾಯಿ, ಪರಂಕಾಡಿ (ಹೊಸಬೆಟ್ಟು) ತಾಳಿ ಪ್ಪಾಡಿ (ಕಿನ್ನಿಗೋಳಿ) ಕಿನ್ಯಾ, ಕವತ್ತಾರು (ಬಳ್ಕುಂಜೆ) ಮೆಲ್ಲಟ್ಟು, ಕಕ್ಕ (ಕಿಲ್ಪಾಡಿ) ಮತ್ತು ಪುನರೂರು (ಕಿನ್ನಿಗೋಳಿ)ಯ ಕೊರಗ ಕಾಲೊನಿಗಳೀಗೆ ಒಟ್ಟು ಅಂದಾಜು 40 ಲಕ್ಷ ರೂ.ಗಳನ್ನು ಅಗತ್ಯವಿದ್ದು, 20 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ.ಆದರೆ ಅನುದಾನ ಬಿಡುಗಡೆಯಾಗಿದ್ದರೂ ಕಾಮಗಾರಿ ಸಮರ್ಪಕವಾಗಿ ನಡೆದಿರದ ಬಗ್ಗೆ ಕೊರಗ ಪ್ರತಿನಿಧಿಗಳು ಜಿಲ್ಲಾಧಿಕಾರಿಗಳ ಗಮನ ಸೆಳೆದಾಗ ಮೂರು ದಿನಗಳೊಳಗೆ ಕಾಮಗಾರಿ ವರದಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಜಿಲ್ಲಾಪಂಚಾಯತ್ ಕಾರ್ಯನಿರ್ವಾಹಕ ಇಂಜಿನಿಯರ್ ಸತ್ಯ ನಾರಾಯಣ್ ಅವರಿಗೆ ಸೂಚಿಸಿದರು. ಪ್ರತಿಯೊಂದು ಕಾಮಗಾರಿಯಡಿ ಮೆಸ್ಕಾಂಗೆ ಹಣಪಾವತಿಸಿದ ವರದಿಯ ದಿನಾಂಕ ಹಾಗೂ ಮೊತ್ತವನ್ನೂ ತಮಗೆ ನೀಡಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು.
ಸಾಮೂಹಿಕ ನೀರಾವರಿ ಯೋಜನೆಯಡಿ ಟೆಂಡರ್ ಪ್ರಕ್ರಿಯೆ ಮಾತ್ರ ಪ್ರಗತಿಯಲ್ಲಿದೆ. ಆದರೆ ನಿರೀಕ್ಷಿತ ಪ್ರಗತಿ ಸಾಧಿಸದ ಬಗ್ಗೆ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿಗಳು ಇಲ್ಲದವರಿಗೆ ಯೋಜನೆಗಳು ತಲುಪಬೇಕು. ಕೊರಗರ ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ವಹಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ತಾಲೂಕುವಾರು ಅಭಿವೃದ್ಧಿ ವರದಿಯನ್ನು ಅಧಿಕಾರಿಗಳು ಸೋಮವಾರದೊಳಗೆ ತಮಗೆ ಸಲ್ಲಿಸಬೇಕೆಂದ ಜಿಲ್ಲಾಧಿಕಾರಿಗಳು, ಬೋರ್ ವೆಲ್ ಹಾಕಿ ಕನೆಕ್ಷನ್ ನೀಡದ ಬಗ್ಗೆ, ತೆರೆದ ಬಾವಿ ನಿರ್ಮಿಸದ ಬಗ್ಗೆ, ನೀರಾವರಿ ಒದಗಿಸದ ಬಗ್ಗೆ ಬಂದ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದರು. ಕೊರಗರಿಗಾಗಿ ಆರೋಗ್ಯ ಯೋಜನೆಗಳು, ಶೈಕ್ಷಣಿಕ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ ಅವರು, ಕಾರ್ಯಕ್ರಮ ನೀಡಿದ ಬಗ್ಗೆ ಮಾಹಿತಿಯನ್ನು ನೀಡಬೇಕೆಂದರು. ಆರೋಗ್ಯ ಸಮಿತಿಯನ್ನು ರಚಿಸಬೇಕು. ಸ್ವ ಉದ್ಯೋಗದಡಿ ಹೈನುಗಾರಿಕೆಗೆ, ಹೊಲಿಗೆಮಿಷನ್ ಗಳನ್ನು ನೀಡುವ ಬಗ್ಗೆಯೂ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಬಂಟ್ವಾಳ ತಾಲೂ ಕಿನ ಪಿಲಾತ ಬೆಟ್ಟು ಗ್ರಾಮ ಪಂಚಾ ಯಿತಿ ದುಗಮ ರಗುಡ್ಡೆ, ಅಮ್ಟಾಡಿ ಪಂ ಚಾಯ್ತಿ, ಪರಿ ಯಾಳ ವೀರ ಕಂಬದ ನಾರಂ ಗೋಡಿ, ಚೆನ್ನೈ ತೋಡಿ, ವಿಟ್ಲಾ ಕಸ್ಬಾ, ಗಮಿ ಕೊರಗ ಕಾಲನಿ,ಸರಪಾಡಿ, ರಾಯಿ, ಪಂಜಿಗಲ್ಲು, ಕರಿಮಣ್ಣು ಹಾಗೂ ಪಂಜಿಕಲ್ಲು ಕೊರಗರ ಕಾಲೊನಿಗೆ 36 ಲಕ್ಷ ಅಂದಾಜು ಬೇಕಾಗಿದ್ದು, 18 ಲಕ್ಷ ಬಿಡುಗಡೆಯಾಗಿದೆ.
ಪುತ್ತೂರು ತಾಲೂಕಿನ ಕೋಡಿಂಬಾಡಿಯ ಕಟಾರ ಬೆಳ್ಳಿಪಾಡಿ, ಬಜತ್ತೂರು ಪಂಜಳ, ಪಾಣಾಜೆಯ ಬೇರಿಕೆ, ಕೊರಗರ ಕಾಲೊನಿಗೆ ರೂ. 3.65 ಲಕ್ಷ ರೂ. ಬಿಡುಗಡೆಯಾಗಿದೆ.ಬೆಳ್ತಂಗಡಿಯ ಮೇಲಂತಬೆಟ್ಟು, ಕಲ್ಮಂಜ, ಉಜಿರೆ, ಮುಂಡಾಜೆ ಮತ್ತು ಪಡಂಗಡಿಗಳ ಕೊರಗರ ಕಾಲೊನಿಗೆ 13 ಲಕ್ಷ ಬಿಡುಗಡೆ ಮಾಡಿರುತ್ತಾರೆ. ಸುಳ್ಯದ ಮಡಪ್ಪಾಡಿಗೆ 2.50 ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿ ಅನುಷ್ಠಾನಕ್ಕೆ ಕ್ರಮ ವಹಿಸಲಾಗಿದೆ.
ಕುಡಿಯುವ ನೀರಿಗಾಗಿ ಜಿಲ್ಲೆಗೆ 19 ಲಕ್ಷ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ.
ಕೊರಗ ಸಮುದಾಯಗಳಿಗೆ ಕೃಷಿ ನೀರಾವರಿ ಮತ್ತು ಭೂ ಅಭಿವೃದ್ಧಿಗೆ 18.80 ಲಕ್ಷ ಅನುದಾನ ಬಿಡುಗಡೆಯಾಗಿದೆ. ಸಮುದಾಯ ಭವನ ನಿರ್ಮಾಣಕ್ಕೆ 30.60 ಲಕ್ಷ ಬಿಡುಗಡೆಯಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ ಎಂದು ಸಭೆಗೆ ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲಿ ಐಟಿಡಿಪಿ ಅಧಿಕಾರಿ, ವೆಂಕಟರವಣ ರೆಡ್ಡಿ ಉಪಸ್ಥಿತರಿದ್ದರು. ಜಿ.ಪಂ.ಪ್ರಭಾರ ಸಿ ಇ ಒ ಶಿವರಾಮೇಗೌಡ, ಮಹಾನಗರಪಾಲಿಕೆ ಜಂಟಿ ಆಯುಕ್ತರು, ಪಶುಸಂಗೋಪನೆ ಉಪನಿರ್ದೇಶಕ ಹಲಗಪ್ಪ, ಡಿ ಎಚ್ ಒ ಶ್ರೀರಂಗಪ್ಪ ಸೇರಿದಂತೆ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು, ಕೊರಗ ಸಮುದಾಯದ ಪ್ರತಿನಿಧಿಗಳು, ಜನಶಿಕ್ಷಣ ಸಂಸ್ಥೆಯಿಂದ ಕೃಷ್ಣ ಮೂಲ್ಯರು ಉಪಸ್ಥಿತರಿದ್ದರು.