Tuesday, June 7, 2011

ವಿಮಾನ ನಿಲ್ದಾಣಕ್ಕೆ ಶೀಘ್ರದಲ್ಲೇ ವೋಲ್ವೊ ಬಸ್ ಸೇವೆ

ಮಂಗಳೂರು,ಜೂನ್.07:ಮಂಗಳೂರು ವಿಮಾನ ನಿಲ್ದಾಣಕ್ಕೆ ನಗರದಿಂದ ವೋಲ್ವೋ ಬಸ್ ಸಂಚಾರವನ್ನು ಜುಲೈ 15ರೊಳಗೆ ಆರಂಭಿಸಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಹೇಳಿದರು.

ಇಂದು ಜಿಲ್ಲಾಧಿ ಕಾರಿಗಳ ಕಚೇರಿಯಲ್ಲಿ ಸಂಸದರ ಅಧ್ಯಕ್ಷತೆಯಲ್ಲಿ ನಡೆದ ಮಂಗಳೂರು ವಿಮಾನ ನಿಲ್ದಾಣ ಸಮರ್ಪಕ ನಿರ್ವಹಣೆಯ ಸಮನ್ವಯ ಸಭೆಯಲ್ಲಿ ನಡೆದ ಚಚರ್ೆಯ ಬಳಿಕ ಏರ್ ಪೋಟ್ರ್ ಗೆ ವೋಲ್ವೋ ಬಸ್ ಪರಿಚಯಿಸಲು ನಿರ್ಧರಿಸಲಾಯಿತು.
ಮಂಗಳೂರು ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ದರ್ಜೆಗೇರಿಸಲು, ಮೂಲಸೌಕರ್ಯ ಅಭಿವೃದ್ಧಿ ಪಡಿಸಲು, ಈಗಿರುವ ರನ್ ವೇಯನ್ನು 8000 ಅಡಿಯಿಂದ 9,500ಕ್ಕೇರಿಸಲು ಅಗತ್ಯವಿರುವ ಭೂಮಿಯ ಬಗ್ಗೆ, ಪೊಲೀಸ್ ಔಟ್ ಪೋಸ್ಟ್ ನಿರ್ಮಿಸಿ ಯಾತ್ರಿಕರಿಗೆ ಸುರಕ್ಷೆ ನೀಡುವ ಬಗ್ಗೆ ರಾತ್ರಿ ರಸ್ತೆಗಳಿಗೆ ವಿದ್ಯುತ್ ದೀಪ ಅಳವಡಿಸುವ ಬಗ್ಗೆ ಸಭೆಯಲ್ಲಿ ಸವಿವರ ಚರ್ಚೆ ನಡೆಯಿತು.
ರನ್ ವೇ ವಿಸ್ತರಣೆಗೆ 150 ಎಕರೆ ಭೂಮಿ ಗುರುತಿಸಿದ್ದು, ಭೂಸ್ವಾಧೀನ ವೆಚ್ಚ ಸುಮಾರು 36 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈ ಮೊತ್ತ ಪುನರ್ ವಸತಿ ವೆಚ್ಚವನ್ನು ಒಳಗೊಂಡಿಲ್ಲ. ಏರ್ ಪೋಟ್ರ್ ಗೆ ಸಂಪರ್ಕ ರಸ್ತೆ ನಿರ್ಮಿಸುವ ಬಗ್ಗೆ ಎಲ್ಲ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಸಂಬಂಧಪಟ್ಟ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲು ಸಭೆಯಲ್ಲಿ ನಿರ್ಧರಿಸಲಾಯಿತು.ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕರಾದ ಎಂ.ಆರ್. ವಾಸುದೇವ್ ಅವರ ಕೋರಿಕೆಯಂತೆ ವಿಮಾನ ನಿಲ್ದಾಣಕ್ಕೆ ಪಾಲಿಕೆಯಿಂದ ನೀರು ವಿತರಿಸಲು, ಹಾಗೂ ತ್ಯಾಜ್ಯ ನಿರ್ವಹಣೆಗೆ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಹಳೇ ವಿಮಾನ ನಿಲ್ದಾಣವನ್ನು ಸರಕು ಸಾಗಾಣೆ ನಿರ್ವಹಣೆಗಾಗಿ (ಕಾಗರ್ೊ) ಪ್ರಸ್ತಾಪಸಲ್ಲಿಸುವ ಬಗ್ಗೆಯೂ ಸಭೆ ಚರ್ಚಿಸಿತು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶrfmA, ಸೂಪರಿಂಟೆಂಡೆಂಟ್ ಇಂಜಿನಿಯರ್ ಬಾಲಕೃಷ್ಣ, ಸಹಾಯಕ ಆಯುಕ್ತರಾದ ಪ್ರಭುಲಿಂಗ ಕವಳಿಕಟ್ಟಿ, ಕೆ ಎಸ್ ಆರ್ ಟಿ ಸಿ ಡಿ ಸಿ ಕರುಂಬಯ್ಯ, ಆರ್ ಟಿ ಒ ಎಂ ಎನ್ ಬನವಳ್ಳಿ ತಹಸೀಲ್ದಾರ್ ರವಿಚಂದ್ರ ನಾಯಕ್ ಉಪಸ್ಥಿತರಿದ್ದರು