Saturday, June 4, 2011

ನಗರಾಭಿವೃದ್ಧಿಗೆ ಹೆಚ್ಚುವರಿ ನೂರು ಕೋಟಿ ಅನುದಾನಕ್ಕೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ

ಮಂಗಳೂರು,ಜೂನ್.04:ಮಂಗಳೂರು ನಗರ ಅಭಿವೃದ್ಧಿಗೆ ಮಾನ್ಯ ಮುಖ್ಯಮಂತ್ರಿಗಳು ನೀಡಿದ ವಿಶೇಷ ಅನುದಾನ ರೂ. 100 ಕೋಟಿಯಲ್ಲಿ 261 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು ಅವುಗಳಲ್ಲಿ 181 ಪೂರ್ಣಗೊಂಡಿದೆ. 16 ರಸ್ತೆಗಳನ್ನು ಕಾಂಕ್ರೀಟಿಕರಣಗೊಳಿಸಿದೆ. ಮತ್ತೆ ನೂರು ಕೋಟಿ ಅನುದಾನ ಕೋರಲಾಗಿದೆ ಎಂದು ಶಾಸಕರು ಹಾಗೂ ಉಪಸಭಾಪತಿಗಳೂ ಆಗಿರುವ ಯೋಗೀಶ್ ಭಟ್ ಅವರು ಹೇಳಿದರು.

ಮಂಗ ಳೂರು ಮಹಾ ನಗ ರದ ಸರ್ವಂ ಗೀಣ ಅಭಿ ವೃದ್ಧಿಗೆ ನೆರ ವಾಗಲು ಪಾಲಿಕೆ ವ್ಯಾ ಪ್ತಿಯ 60 ವಾರ್ಡ್ ಗಳಲ್ಲಿ 60 ವಾರ್ಡ್ ಸಮಿತಿ ಯನ್ನು ರಚಿಸು ವಂತೆ ಶಾಸಕ ಯೋಗೀಶ್ ಭಟ್ ಸೂಚನೆ ನೀಡಿ ದ್ದಾರೆ.ನಗರದ ಪುರಭವನದಲ್ಲಿ ಶನಿವಾರ ನಡೆದ ಮಂಗ ಳೂರು ತಾಲ್ಲೂಕು `ಎ' ಹೋಬಳಿ ಮಟ್ಟದ ಜನಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ನಗರದ ಒಳ ರಸ್ತೆಗಳ ಅಭಿವೃದ್ಧಿಗೆ 25 ಕೋಟಿ ರೂ. ಮೀಸಲಿಡಲಾಗಿದ್ದು, ಮಳೆಗಾಲ ಮುಗಿದ ಬಳಿಕ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು, 5 ಕೋಟಿ ರೂ. ವೆಚ್ಚದಲ್ಲಿ ನಗರದ ಕೆರೆಗಳ ಹೂಳೆತ್ತಲಾಗುವುದು, ಜಪ್ಪಿನಮೊಗರುವಿನಲ್ಲಿ ಪ್ರತೀ ವರ್ಷ ಸಂಭವಿಸುವ ಕೃತಕ ನೆರೆ ತಡೆಗೆ 85 ಲಕ್ಷ ರೂ. ಮೀಸಲಿಡಲಾಗಿದೆ. ತೋಡು ಅತಿಕ್ರಮಿಸುವುದನ್ನು ತಪ್ಪಿಸಲು ಸರ್ವೇ ನಡೆಸಿ ನೀರು ಸರಾಗವಾಗಿ ಹರಿಯಲು ಸೂಕ್ತ ಕ್ರಮಕೈಗೊಳ್ಳಲಾಗುವುದೆಂದು ಜನತೆಯ ಅಹವಾಲು ಆಲಿಸಿದ ಬಳಿಕ ಶಾಸಕರು ಉತ್ತರಿಸಿದರು.
ನಗರದ ರಸ್ತೆ ಅಗಲೀಕರಣ ಸಂದರ್ಭ 1284 ಅಂಗಡಿ ಮುಂಗಟ್ಟುಗಳನ್ನು ತೆರವು ಮಾಡಲಾಗಿದ್ದರೂ ಕೂಡ, ಹಲವೆಡೆ ಪ್ರಮುಖ ರಸ್ತೆಗಳನ್ನು ಅತಿಕ್ರಮಿಸಿದ್ದು, ಅತಿಕ್ರಮಣದ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಸಂಚಾರಿ ಒತ್ತಡವನ್ನು ನಿಭಯಿಸುವ ಸಲುವಾಗಿ ನಗರದಲ್ಲಿ 12 `ನೋ ಪಾರ್ಕಿಂಗ್ ಝೋನ್' ಗಳನ್ನು ಗುರುತಿಸಲಾಗಿದೆ ಎಂದು ಮನಪಾ ಆಯುಕ್ತರು ಹೇಳಿದರು.
ಮಹಾ ನಗರ ಪಾಲಿಕೆಯ ಎಲ್ಲ ವಾಡರ್್ಗಳಲ್ಲಿ ಕಾಪರ್ೊರೇಟರ್ಗಳ ಅಧ್ಯಕ್ಷತೆಯಲ್ಲಿ ಹಿರಿಯ ಮತ್ತು ನಿವೃತ್ತ ನಾಗರಿಕರನ್ನೊಳಗೊಂಡ ವಾಡರ್್ ಸಮಿತಿಯನ್ನು ರಚಿಸುವ ಭರವಸೆ ನೀಡಿದ ಶಾಸಕರು, ಮಂಗಳೂರು ನಗರದ ಅಭಿವೃದ್ಧಿ, ಸುಂದರೀಕರಣಕ್ಕೆ ಅನೇಕ ಸಂಘಟನೆಗಳು ಮುಂದೆ ಬಂದಿದೆ. ಈ ಸಂದರ್ಭ ವಾರ್ಡ್ ಸಮಿತಿ ರಚಿಸುವುದು ಔಚಿತ್ಯಪೂರ್ಣ. ಹಾಗಾಗಿ ಕಮಿಷನರ್, ಮೇಯರ್,ಪಾಲಿಕೆ ಸದಸ್ಯರುಗಳು ಈ ನಿಟ್ಟಿನಲ್ಲಿ ಶೀಘ್ರ ನಿರ್ಧಾರ ತಾಳಬೇಕಾಗಿದೆ ಎಂದು ಭಟ್ ನುಡಿದರು.
ಜನಸ್ಪಂದನ ಸಭೆಯಲ್ಲಿ ಆದಾಯ, ಜಾತಿ ಪ್ರಮಾಣ ಪತ್ರ, ಸರಕಾರಿ ಬಸ್, ರಸ್ತೆ ಅವ್ಯವಸ್ಥೆ,ಬಿಪಿಎಲ್ ಕಾರ್ಡ್, ವಿದ್ಯುತ್, ನೀರು, ಪಹಣಿಪತ್ರ, ಗ್ರಂಥಾಲಯ, ಬಸ್ ತಂಗುದಾಣ ಇತ್ಯಾದಿ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಲ್ಪಟ್ಟಿತು.
ಬಳಿಕ ಬಿಸಿಎಂ ಇಲಾಖೆಯಿಂದ ಮೀನುಗಾರರಿಗೆ ಮೂರು ಲಕ್ಷ ರೂ.ಗಳ ಚೆಕ್ ಹಾಗೂ ಕಂಪ್ಯೂಟರ್ ಕೋಸ್ರ್ ಮಾಡಿದ 8 ಜನರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಸಭೆಯಲ್ಲಿ ಮೇಯರ್ ಪ್ರವೀಣ್, ಉಪಮೇಯರ್ ಗೀತಾ ನಾಯಕ್, ಮನಪಾ ಆಯುಕ್ತ ಡಾ.ವಿಜಯ ಪ್ರಕಾಶ್, ಮಂಗಳೂರು ಸಹಾಯಕ ಉಪವಿಭಾಗಾಧಿಕಾರಿ ಪ್ರಭುಲಿಂಗ ಕವಳಿಕಟ್ಟ್ಟಿ, ತಹಶೀಲ್ದಾರ್ ರವಿಚಂದ್ರ ನಾಯಕ್, ಪೊಲೀಸ್ ಅಧಿಕಾರಿಗಳಾದ ರವೀಂದ್ರ ಗಡದಿ, ಟಿ.ಆರ್.ಜಗನ್ನಾಥ್, ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್,ಪಾಲಿಕೆ ಸದಸ್ಯರುಗಳಾದ ರಂಗನಾಥ ಕಿಣಿ, ರಾಜೇಂದ್ರ, ಸುಧೀರ್ ಶೆಟ್ಟಿ, ಮರಿಯಮ್ಮ ಥಾಮಸ್ ಮತ್ತಿತರರಿದ್ದರು.