Tuesday, June 14, 2011

ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ.35.50 ಲಕ್ಷ ಬಿಡುಗಡೆ

ಮಂಗಳೂರು,ಜೂನ್.14:_ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 2010-11 ನೇ ಸಾಲಿಗೆ ಒಟ್ಟು 35 ಕಾಮಗಾರಿಗಳಿಗೆ ರೂ.71.00 ಲಕ್ಷ ಅನುದಾನ ಮಂಜೂರಾಗಿದ್ದು,ಪ್ರಸ್ತುತ ಕಾಮಗಾರಿಗಳ ಅನುಷ್ಠಾನಕ್ಕಾಗಿ ಶೇ. 50 ಅಂದರೆ ಒಟ್ಟು ರೂ.35.50 ಲಕ್ಷ ರೂ.ಗಳನ್ನು ಕಾರ್ಯಪಾಲಕ ಅಭಿಯಂತರರು,ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗ ಇವರಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ದಿನಾಂಕ:6-6-2011 ರಂದು ಬಿಡುಗಡೆ ಮಾಡಿರುತ್ತಾರೆ.ಕಾಮಗಾರಿಗಳ ವಿವರ ಈ ಕೆಳಗಿನಂತಿದೆ.
ಮಂಗಳೂರು ಕೋಟೆಕಾರು ಗ್ರಾಮದ ಕೊಂಡಾಣ ಮಿತ್ರನಗರ ರಸ್ತೆ ಅಭಿವೃದ್ಧಿಗೆ ರೂ 1 ಲಕ್ಷ, ಅಂಬ್ಲಮೊಗರು ಗ್ರಾಮದ ಶಾಂತಿಪಡ್ಪು ಸೇನೆರೆಹಿತ್ತಿಲು ಅಭಿವೃದ್ಧಿಗೆ 1 ಲಕ್ಷ,ಉಳ್ಳಾಲ ಮೊಗವೀರ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ರಚನೆಗೆ 0.75ಲಕ್ಷ ರೂ.,ಚೇಳೂರು ಹಿಂದೂ ರುದ್ರಭೂಮಿ ಅಭಿವೃದ್ಧಿಗೆ 0.75 ಲಕ್ಷ,ಪಜೀರು ಪಾನೆಲ್ ನೆಟ್ಟಿಲ್ ರಸ್ತೆ ಅಭಿವೃದ್ಧಿ 1.25ಲಕ್ಷ, ಮುನ್ನೂರು ಗ್ರಾಮದ ದೆಕ್ಕಾಡುನಿಂದ ಕುತ್ತಾರುಗುತ್ತು ರಸ್ತೆ ಕಾಂಕ್ರೀಟಿಕರಣ 1.00 ಲಕ್ಷ,ಮಾದಕಟ್ಟೆ ವಿಷ್ಣುಮೂರ್ತಿ ದೇವಸ್ಥಾನದ ಕಾಲುದಾರಿ ಅಗಲೀಕರಣ 1.00 ಲಕ್ಷ, ಬರ್ಕೆಗೆ ಹೋಗುವ ಕಾಲು ಸಂಕದಿಂದ ಬೆಳ್ಳೂರು ಸಂಪರ್ಕಿಸುವ ಕಾಲು ಸಂಕದ ವರೆಗೆ ಚರಂಡಿ ನಿರ್ಮಾಣ 1.00 ಲಕ್ಷ, ಅಡ್ಯಾರು ನಾಗಬನ ರಸ್ತೆ ಅಭಿವೃದ್ಧಿಗೆ 1.00 ಲಕ್ಷ, ಬಡಗ ಎಡಪದವು ಗ್ರಾಮದ ಕಾಂಬೆಟ್ಟು ರಸ್ತೆ ಅಭಿವೃದ್ಧಿಗೆ 1.00 ಲಕ್ಷ, ತೆಂಕ ಎಡಪದವು ಗ್ರಾಮದ ಮಟಪಾಡಿ ಬೀಡಿ ಕಾಲೊನಿ ರಸ್ತೆ ಅಭಿವೃದ್ಧಿಗೆ 1.00ಲಕ್ಷ,ಅರ್ಕುಳ ಗ್ರಾಮದ ಹಿಂದೂ ರುದ್ರ ಭೂಮಿಯ ಕಟ್ಟಡ ನಿರ್ಮಾಣ ರೂ.1.00 ಲಕ್ಷ,ಕೂಳೂರು ದೇರೆಬೈಲು ಪರೆಪಾದೆ ಹಿರಿಯ ಪ್ರಾಥಮಿಕ ಶಾಲೆ ಆವರಣ ಗೋಡೆ ನಿರ್ಮಾಣ 0.50 ಲಕ್ಷ ರೂ.ಕದ್ರಿ ಪಾಲಿಟೆಕ್ನಿಕ್ ಶೌಚಾಲಯ ಮತ್ತು ಮಹಿಳಾ ಸಿಬ್ಬಂದಿಗಳ ವಿಶ್ರಾಂತಿ ಕೊಠಡಿ ನಿರ್ಮಾಣ 1.00 ಲಕ್ಷ, ತೆಂಕಮಿಜಾರು ಶಾಂತಿಗಿರಿ ರಸ್ತೆ ಡಾಮರೀಕರಣ 1.00 ಲಕ್ಷ, ಬಳ್ಕುಂಜೆ ಕವತ್ತಾರು ಮೇಂದಡ್ಕ ರಸ್ತೆ ಅಭಿವೃದ್ಧಿ 1.00 ಲಕ್ಷ,ಬಡಗ ಎಕ್ಕಾರು ಕೊಡಮಣಿತ್ತಾಯ ದೈವಸ್ಥಾನದ ಜರಿಬೆಟ್ಟು ರಸ್ತೆ ಡಾಮರೀಕರಣ 1.00 ಲಕ್ಷ, ಹಳೆಯಂಗಡಿ ಸಸಿಹಿತ್ಲು ಹಿಂದೂ ರುದ್ರಭೂಮಿ ಅಭಿವೃದ್ದಿ 0.50 ಲಕ್ಷ, ಏಳಿಂಜ ಗ್ರಾಮದ ಕುದ್ರಿಪದವು ಪಟ್ಟೆ ಶ್ರೀ ಜಾರಂದಾಯ ಬಂಟ ದೈವಸ್ಥಾನದ ರಸ್ತೆ ಅಭಿವೃದ್ಧಿ 1.00 ಲಕ್ಷ,ಕರ್ನಿರೆ ಶ್ರೀ ಜಾರಂದಾಯ ದೇವಸ್ಥಾನ ರಸ್ತೆ ಅಭಿವೃದ್ಧಿ 1.00 ಲಕ್ಷ, ಮಾಸ್ತಿಕಟ್ಟೆ ಮೂಡಬಿದ್ರೆ ಮಂಗಳೂರು ಇದರ ಬಯಲು ರಂಗಮಂದಿರ ನಿರ್ಮಾಣ 0.75 ಲಕ್ಷ, ಬಂಟ್ವಾಳ ತಾಲೂಕು ನಾವೂರು ಗ್ರಾಮದ ಕನಕಪಾದೆ ಸಾರ್ವಜನಿಕ ಕ್ರೀಡಾಂಗಣದ ಬಳಿ ತಡೆಗೋಡೆ ರಚನೆ 1.00 ಲಕ್ಷ,ರಾಯಿ ಗ್ರಾಮದ ಪಡ್ರಾಯಿ ಪರಿಶಿಷ್ಟರ ಕಾಲನಿಗೆ ನೀರಿನ ಟ್ಯಾಂಕ್ ಮತ್ತು ಪೈಪ್ ಲೈನ್ ವಿಸ್ತರಣೆ 1.00 ಲಕ್ಷ,ಪುತ್ತೂರು ಉಪ್ಪಿನಂಗಡಿ ಮರಿಕೆ ಜನತಾ ಕಾಲೊನಿ ರಸ್ತೆ ಅಭಿವೃದ್ಧಿ 1.50ಲಕ್ಷ, ಆರ್ಯಾಪು ಗ್ರಾಮದ ಸಂಟ್ಯಾರು ಶಾಲೆಯ ರಂಗಮಂದಿರ ರಚನೆ 1.00 ಲಕ್ಷ,ಬಂಟ್ವಾಳ ಕೆದಿಲಗ್ರಾಮದ ಗಾಂಧಿನಗರ ಪಾಟ್ರಕೋಡಿ ರಸ್ತೆ ಅಭಿವೃದ್ಧಿ 2.50 ಲಕ್ಷ,ಪುತ್ತೂರು ಆರ್ಯಾಪು ಪರ್ಪುಂಜ ಮುಂಡೂರು 5 ಕಿ ಮೀ ರಸ್ತೆ ಅಭಿವೃದ್ಧಿ 2.00 ಲಕ್ಷ, ಬೆಳ್ತಂಗಡಿ ಪದಂಗಡಿ ಸರಕಾರಿ ಪ್ರೌಢಶಾಲೆ ಕಟ್ಟಡ ಮೈದಾನ ರಚನೆ 1.50 ಲಕ್ಷ ಪೆರಾಬೆ ಕಜೆ ಇಡಾಲ ರಸ್ತೆಯ ಕುಂಟ್ಯಾನ ರಸ್ತೆ ಅಭಿವೃದ್ಧಿ 0.50 ಲಕ್ಷ,ನೆಲ್ಯಾಡಿ ಗ್ರಾಮದ ಪಟ್ಟಡ್ಕ ರಸ್ತೆ ಅಭಿವೃದ್ಧಿ 1.00 ಲಕ್ಷ, ಕೋಣಾಜೆ ಉದನೆ ಕಲ್ಲುಗುಡ್ಡೆ ರಸ್ತೆ ಅಭಿವೃದ್ಧಿ 0.50, ಸುಳ್ಯ ತಾಲೂಕು ಪಂಜ ಗುತ್ತಿಗಾರು ರಸ್ತೆಯ ಕುದ್ವ ಎಂಬಲ್ಲಿಂದ ಪಂಜ ದೇವಸ್ಥಾನ ರಸ್ತೆಯ ಡಾಮರೀಕರಣ 1.00 ಲಕ್ಷ, ಸುಳ್ಯ ಮಂಡೆಕೋಲು ಹಿರಿಯ ಪ್ರಾಥಮಿಕ ಶಾಲೆಯ ಆವರಣ ಗೋಡೆ ರಚನೆ 0.50 , ಆಲೆಟ್ಟಿ ಗ್ರಾಮದ ಕುಡೆಕಲ್ಲು ಕಟ್ಟೆಂಗಳ ರಸ್ತೆ ಅಭಿವೃದಿ 0.50, ಕಾಂತಮಂಗಲ ಶಾಲೆ ಕಟ್ಟಡ ರಚನೆ 1.00 ಲಕ್ಷ ಅನುದಾನ ಬಿಡುಗಡೆಯಾಗಿರುತ್ತದೆ. ಕಾಮಗಾರಿಗಳ ಒಟ್ಟು ಮೊತ್ತ ರೂ.71,00,000 ದಲ್ಲಿ ಶೇಕಡಾ 50 ಮುಂಗಡ ರೂ 35,50,000 ವನ್ನು 9-6-11 ರಂದು ಅನುಷ್ಠಾನಾಧಿಕಾರಿಯಾದ ಕಾರ್ಯನಿರ್ವಾಹಕ ಇಂಜಿನಿಯರ್ ,ದ.ಕ.ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗ,ಮಂಗಳೂರು ಇವರಿಗೆ ಬಿಡುಗಡೆ ಮಾಡಲಾಗಿದೆಯೆಂದು ಅಪರ ಜಿಲ್ಲಾಧಿಕಾರಿಯವರು ತಿಳಿಸಿರುತ್ತಾರೆ.