Wednesday, June 8, 2011

'ಪಶುಸಂಗೋಪನೆಯ ಜೊತೆಗೆ ಸಂರಕ್ಷಣೆಗೆ ಆದ್ಯತೆ ನೀಡಿ'

ಮಂಗಳೂರು,ಜೂನ್.08:ಭಾರತೀಯ ಸಂಸ್ಕೃತಿಯಲ್ಲಿ ದಾನ ಮತ್ತು ಸೇವೆಗೆ ಉತ್ಕೃಷ್ಟ ಸ್ಥಾನವಿದೆ. ಅದರಲ್ಲೂ ಮೂಕ ಪ್ರಾಣಿಗಳಿಗೆ ನೀಡುವ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ,ನಮ್ಮ ಪಶುವೈದ್ಯಾಧಿಕಾರಿಗಳು ಅಂತಹ ಸೇವೆಯಲ್ಲಿ ನಿರತರಾಗಿದ್ದು, ಅವರಿಂದ ಇನ್ನಷ್ಟು ಉತ್ತಮ ಸೇವೆಯನ್ನು ನಿರೀಕ್ಷಿಸಿದ್ದು ಸರ್ಕಾರ ಇದಕ್ಕೆ ಪೂರಕ ಸೌಲಭ್ಯಗಳನ್ನು ನೀಡಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ ಟಿ ಶೈಲಜಾ ಭಟ್ ಹೇಳಿದರು.
ಅವರಿಂದು ನಗರದಲ್ಲಿ ಪಶುವೈದ್ಯಾಧಿಕಾರಿಗಳ ಸಂಘ, ರಾಜ್ಯ ಪಶುಸಂಗೋಪನೆ ಸಂಘ ಹಾಗೂ ವರ್ಬ್ಯಾಕ್ ಅನಿಮಲ್ ಹೆಲ್ತ್ ಇಂಡಿಯಾ ಪ್ರೈ.ಲಿ. ನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಜಾಗತಿಕ ಪಶುವೈದ್ಯ ವರ್ಷಾಚರಣೆ ಸಮಾರಂಭದಲ್ಲಿ ಹಿರಿಯ ಪಶು ವೈದ್ಯಾಧಿಕಾರಿಗಳನ್ನು ಗೌರವಿಸಿ ಮಾತನಾಡಿದರು. ಪಶುವೈದ್ಯಾಧಿಕಾರಿಗಳ ಸೇವೆ ಉತ್ತಮವಾಗಿರುವುದಕ್ಕೆ ಹಲವು ಉದಾಹರಣೆಗಳನ್ನು ನೀಡಿದ ಅವರು, ಗೋಮಾಳ ರಕ್ಷಣೆಗೂ ಪ್ರಸ್ತಾವನೆ ಸಲ್ಲಿಸುವುದಾಗಿ ಹೇಳಿದರು.
ಸಮಾ ರಂಭ ವನ್ನು ಉದ್ಘಾ ಟಿಸಿ ಮಾತ ನಾಡಿದ ಕೃಷಿ ಹಾಗೂ ಕೈಗಾ ರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ರಾದ ನವೀನ್ ಕುಮಾರ್ ಮೆನಾಲಾ ಅವರು, ಕೃಷಿ ಪ್ರಧಾನ ದೇಶ ದಲ್ಲಿ ಪಶು ಸಂಗೋ ಪನೆಗೆ ಹೆಚ್ಚಿನ ಮಹತ್ವ ವಿದೆ. ಪಶು ವೈದ್ಯಕ್ಕೆ 250 ವರ್ಷ ತುಂಬಿದ ಹಿನ್ನಲೆಯಲ್ಲಿ ಆಯೋಜಿಸಿರುವ ಕಾರ್ಯಕ್ರಮ ಸಮಯೋಚಿತವಾಗಿದ್ದು, ಇಂದು ಹೈನುಗಾರಿಕೆ, ಕೋಳಿ ಸಾಕಾಣಿಕೆ, ಹಂದಿ ಸಾಕಾಣಿಕೆ ಕ್ಷೇತ್ರಗಳಲ್ಲಿ ಹಲವು ಸವಾಲುಗಳಿದ್ದು, ಸವಾಲೆದುರಿಸಲು ತಾಂತ್ರಿಕತೆಯ ಅಗತ್ಯವಿದೆ ಎಂದರು. ಒಂದು ಗಂಟೆಗಳ ಕಾಲ ತಾಂತ್ರಿಕತೆಯ ಕುರಿತು ಮಾಹಿತಿ ನೀಡಲಾಯಿತು. ಹಿರಿಯ ಪಶುವೈದ್ಯಾಧಿಕಾರಿ ಡಾ. ಕೆ. ಎಸ್ ಪ್ರಭಾಕರ ರಾವ್, ಡಾ ಬಾಲಕೃಷ್ಣ, ಡಾ. ಕೆ. ತಾರನಾಥ, ಡಾ ಎಚ್ ರಮಾನಂದ ಶೆಟ್ಟಿ ಅವರನ್ನು ಗೌರವಿಸಲಾಯಿತು. ಅನಾ ರೋಗ್ಯದ ಕಾರಣ ಸಮಾ ರಂಭದಲ್ಲಿ ಪಾಲ್ಗೊ ಳ್ಳಲಾ ಗದ ಕ್ಯಾಪ್ಟನ್ ಕೆ. ಸುಖಾ ನಂದ ಶೆಟ್ಟಿ, ಡಾ ರಮಾ ನಾಥ ಕಾಮತ್ ಅವರ ಮನೆಗೆ ತೆರಳಿ ಗೌರವಿ ಸಲಾ ಗುವುದು ಎಂದು ಸಭೆ ಯಲ್ಲಿ ತಿಳಿಸಿದರು. ಗೌರವ ಸ್ವೀಕರಿಸಿ ಮಾತನಾಡಿದ ವೈದ್ಯರು ಜಾನುವಾರುಗಳ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು.
ಪಶುಸಂಗೋಪನಾ ಇಲಾಖೆ ಉಪನಿರ್ದೇಶಕರು ಸ್ವಾಗತಿಸಿದರು. ಡಾ ಪ್ರಸನ್ನ ಕುಮಾರ್ ಹೆಬ್ಬಾರ್ ವಂದಿಸಿದರು. ವೇದಿಕೆಯಲ್ಲಿ ಕೆವಿಎ ಅಧ್ಯಕ್ಷ ಡಾ ಜಿ ಶಿವಾನಂದ, ಕೆ ಎಸ್ ಜಿವಿಎ ಕಾರ್ಯದರ್ಶಿ ಡಾ ಕೆ. ಅಶೋಕ್ ಕುಮಾರ್, ಕೆ ಎಂ ಎಫ್ ನ ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಸತ್ಯನಾರಾಯಣ, ಡಾ ಎಸ್ ಎನ್ ಮೂರ್ತಿ ಉಪಸ್ಥಿತರಿದ್ದರು. ಡಾ ತಂಗಪಾಂಡ್ಯನ್ ಸಂಪನ್ಮೂಲ ವ್ಯಕ್ತಿಗಳ ನುಡಿಗಳನ್ನಾಡಿದರು.