Monday, June 13, 2011

ಸಂಸದರಿಂದ ರಸ್ತೆ ಪ್ರಗತಿ ಪರಿಶೀಲನೆ ಸಭೆ

ಮಂಗಳೂರು, ಜೂ.13: ಕೆಆರ್ ಡಿಸಿಎಲ್ ಮತ್ತು ಎನ್ ಎಚ್ ಎ ಐ ಅವರು ಮಳೆಗಾಲದಲ್ಲಿ ಜನರಿಗೆ ತೊಂದರೆಯಾಗದಂತೆ ರಸ್ತೆ ಕಾಮಗಾಗಿರಿಗಳನ್ನು ನಿಗದಿತ ಸಮಯದಲ್ಲಿ ಮುಗಿಸಿಕೊಡಬೇಕಲ್ಲದೆ, ಅಗತ್ಯ ಪ್ರದೇಶಗಳಲ್ಲಿ ಜೆಸಿಬಿ ಹಾಗೂ ಪರಿಹಾರ ತಂಡಗಳನ್ನು ನಿಯೋಜಿಸಿ ಜನರ ಸಮಸ್ಯೆಗೆ ಸ್ಪಂದಿಸುವುದರ ಮುಖಾಂತರ ಜನರಿಂದ ದೂರುಗಳು ಬಾರದಂತೆ ನೋಡಿಕೊಳ್ಳಬೇಕೆಂದು ಸಂಸದ ನಳಿನ್ ಕುಮಾರ್ ಕಟೀಲ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಇಂದು ಜಿಲ್ಲಾಧಿ ಕಾರಿಗಳ ಕಚೇರಿ ಯಲ್ಲಿ ನಡೆದ ಪ್ರಗತಿ ಪರಿಶೀ ಲನೆ ಸಭೆ ಯಲ್ಲಿ ಮಾಣಿ-ಸಂಪಾಜೆ ರಸ್ತೆ ಅಭಿ ವೃದ್ಧಿ ಪಡಿ ಸುವ ವೇಳೆ ಅಲ್ಲಲ್ಲಿ ಮಣ್ಣನ್ನು ಅಗೆಯ ಲಾಗಿದೆ. ಮಳೆಗಾ ಲದಲ್ಲಿ ಇದರಿಂದ ಭಾರೀ ಸಮಸ್ಯೆ ಉಂಟಾ ಗಿದೆ. ಅದರಲ್ಲೂ ಸುಳ್ಯ, ಕಬಕ, ಕುಂಬ್ರ ಪರಿಸ ರದಲ್ಲಿ ಕೆಸರಿ ನಿಂದಾಗಿ ವಾಹನ ಓಡಾಟ ಅಸಾಧ್ಯ. ಅಲ್ಲಲ್ಲಿ ಗುಂಡಿ ಎದ್ದು ಕಾಣು ತ್ತಿವೆ. ಕಳೆದ ಮೂರು ಸಭೆ ಯಲ್ಲಿ ಸಮಸ್ಯೆ ಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದರೂ ಭರವಸೆ ಈಡೇರಿಲ್ಲ ಎಂದು ಸಂಸದ ಕಟೀಲ್ ಕೆಆರ್ ಡಿಸಿಎಲ್ ಎಂಜಿನಿಯರ್ ಮಂಜುನಾಥ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಮೂಡಬಿದರೆಗೆ ಬೈಪಾಸ್, ಗುರುಪುರ ಸೇತುವೆ, ಬಿಸಿರೋಡ್ ಮೂಡಬಿದ್ರೆ ರಸ್ತೆ ಕಾಮಗಾರಿಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಬಜ್ಪೆ ಕೆಂಜಾರಿನ 1.1ಕಿ.ಮೀ. ಉದ್ದದ ನಿರ್ಗಮನ ರಸ್ತೆಯನ್ನು ಚತುಷ್ಪಥಗೊಳಿಸಲಾಗುವುದು. 7.6 ಕೋಟಿ ರೂ. ವೆಚ್ಚದ ಈ ರಸ್ತೆಯ ಟೆಂಡರ್ ಇನ್ನೂ ಆಗಿಲ್ಲ ಎಂದು ಮಂಜುನಾಥ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಜೂ.21ರೊಳಗೆ ಎಲ್ಲ ಸಮಸ್ಯೆಗಳನ್ನು ಪರಿಹರಿಸುವುದಾಗಿ ಹೇಳಿದರು. ಮೂಡಬಿದ್ರೆ ಮತ್ತು ಮಿಜಾರಿನ ತಿರುವು ಅಗಲೀಕರಣ, ಜಿಲ್ಲೆಯ ಬಹುತೇಕ ಸಣ್ಣ ಮತ್ತು ದೊಡ್ಡ ಸೇತುವೆಗಳ ದುಸ್ಥಿತಿ, ಬಿ.ಸಿ.ರೋಡ್ ಫ್ಲೈ ಓವರ್ ಸಮಸ್ಯೆ ಇತ್ಯಾದಿ ಬಗ್ಗೆ ಸಭೆಯಲ್ಲಿ ಪ್ರಸ್ತಾಪಗೊಂಡಿತು.ಮೂಲ್ಕಿಯಲ್ಲಿ ಬೈಪಾಸ್ ನಿರ್ಮಾಣಕ್ಕೆ ಸ್ಥಳೀಯರ ವಿರೋಧವಿದೆ. ಬಪ್ಪನಾಡು ದೇವಸ್ಥಾನಕ್ಕೆ ಅಪಾಯವಿದೆ ಎಂಬ ಸುದ್ದಿ ಕೇಳಿ ಭಕ್ತರು ಭೀತರಾಗಿದ್ದಾರೆ. ಬೈಪಾಸ್ ಬದಲು ಫ್ಲೈಓವರ್ ನಿರ್ಮಿಸುವುದು ಒಳಿತು ಎಂದು ಶಾಸಕ ಅಭಯಚಂದ್ರ ಜೈನ್ ಆಗ್ರಹಿಸಿದರು. ರಾ.ಹೆ.ಪ್ರಾ.ಯೋಜನಾ ನಿರ್ದೇಶಕರು ಇದರ ಸಾಧಕ ಬಾಧಕಗಳ ಬಗ್ಗೆ ವಿವರಣೆ ನೀಡಿದರು. ಸಂಸದರು ಜೂ.20ರಂದು ಈ ಬಗ್ಗೆ ಸ್ಥಳ ಪರಿಶೀಲನೆ ಮಾಡಿದ ಬಳಿಕ ಸೂಕ್ತ ನಿರ್ಧಾರಕ್ಕೆ ಬರುವುದಾಗಿ ತಿಳಿಸಿದರು.
ನಗರ ಹೊರ ವಲ ಯದ ಪಂಪ್ ವೆಲ್ ಬಳಿ ನಿರ್ಮಿ ಸಲು ಉದ್ದೇ ಶಿಸಿ ರುವ ಬಸ್ ನಿಲ್ದಾ ಣಕ್ಕೆ 8 ಎಕ್ರೆ ಜಾಗ ಸ್ವಾಧೀನ ಪಡಿ ಸಲಾ ಗಿದ್ದು, 30 ಲಕ್ಷ ರೂ.ಖರ್ಚು ಮಾಡಿ ಜಾಗ ಸಮ ತಟ್ಟು ಮಾಡ ಲಾಗಿದೆ. ತನ್ಮಧ್ಯೆ ರಾ.ಹೆ. ಪ್ರಾಧಿ ಕಾರವು ಪಂಪ್ ವೆಲ್ ಬಳಿ ಫ್ಲೈ ಓವರ್ ಮತ್ತು ಚತು ಷ್ಪಥ ಕಾಮ ಗಾರಿ ನಡೆ ಸಲಿ ರುವು ದರಿಂದ ಬಸ್ ತಂಗು ದಾಣ ನಮ್ಮ ಯೋಜನೆ ಯಂತೆ ಮಾಡಲು ಕಷ್ಟವಾಗಿದೆ ಎಂದು ಮನಪಾ ಎಂಜಿನಿಯರ್ ಮಣಿ ನಾರಾಯಣ ಹೇಳಿದರು. ಸಂಬಂಧಪಟ್ಟ ಅಧಿಕಾರಿಗಳ ಸಭೆಯೊಂದನ್ನು ಕರೆಯಲು ಸಭೆ ನಿರ್ಧರಿಸಿತು.
ಸಭೆಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗರಾಜ ಶೆಟ್ಟಿ, ಮನಪಾ ಆಯುಕ್ತ ಡಾ. ವಿಜಯ ಪ್ರಕಾಶ್ ಮತ್ತಿತರರಿದ್ದರು.