Wednesday, October 2, 2013

ಗಾಂಧೀವಾದದಿಂದ ದೇಶದ ಅಭಿವೃದ್ಧಿ: ನಾಮದೇವ ಶೆಣೈ

ಮಂಗಳೂರು,ಅಕ್ಟೋಬರ್ 2:- ಆತ್ಮಜ್ಞಾನ ಮತ್ತು ವಿಜ್ಞಾನ ಸೇರಿದರೆ ಸರ್ವೋದಯ. ದೇಶದ ಅಭಿವೃದ್ಧಿ ಗ್ರಾಮಸ್ವರಾಜ್ಯದಲ್ಲಿದೆ. ನಮ್ಮ ಗ್ರಾಮಗಳಿನ್ನೂ ಸ್ವರಾಜ್ಯದ ಬೆಳಕನ್ನು ಕಂಡಿಲ್ಲ ಎಂದು ಹಿರಿಯ ಸ್ವಾತಂತ್ರ್ಯಹೋರಾಟಗಾರ ಹಾಗೂ 'ಬದಿಯಡ್ಕ ಗಾಂಧಿ' ಎಂದೇ ಹೆಸರಾಗಿರುವ  ನಾಮದೇವ ಶೆಣೈ ಅವರು ಹೇಳಿದರು.
ವಾರ್ತಾ ಇಲಾಖೆ ದಕ್ಷಿಣಕನ್ನಡ, ಗ್ರಾಮ ಪಂಚಾಯತ್ ಬಾಳೆಪುಣಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವವಿದ್ಯಾನಿಲಯ ಇವರ ಸಂಯುಕ್ತಾಶ್ರಯದಲ್ಲಿ 'ಗಾಂಧೀಜಿ ಮತ್ತು ಗ್ರಾಮ ಸ್ವರಾಜ್ಯ' ಕುರಿತು ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂಸೆಯ ಇಂದಿನ ದಿನಗಳಲ್ಲಿ ಗಾಂದೀವಾದ ಮತ್ತು ಅಹಿಂಸೆ ಹೆಚ್ಚು ಪ್ರಸ್ತುತವಾಗಿದ್ದು ಅಭಿವೃದ್ಧಿಗೂ ಗಾಂಧಿಯವರ ಗ್ರಾಮಸ್ವರಾಜ್ಯವೇ ಕಾರಣವಾಗಲಿದೆ. ಚೀನಾದಂತಹ ಕಮ್ಯುನಿಸ್ಟ್ ದೇಶದಲ್ಲೂ ಗಾಂಧಿ ಸ್ಥಾನ ಪಡೆದಿದ್ದು ನಮ್ಮಲ್ಲಿ ಯುವಜನರು ಗಾಂಧಿಯನ್ನು ಮರೆಯುತ್ತಿದ್ದಾರೆ. ಪಠ್ಯ ಪುಸ್ತಕಗಳಲ್ಲಿ, ಶಾಲೆಗಳಲ್ಲಿ ಗಾಂಧೀಜಿಯ ಸರ್ವೋದಯ, ಅಹಿಂಸವಾದಗಳು ಪರಿಚಯವಾಗಬೇಕಿದೆ. ಜಗಕ್ಕೆ ಶಾಂತಿ ಮಂತ್ರ ನೀಡಿದ ಗಾಂಧಿಯವರು ನಮಗಿಂದು ಅನಿವಾರ್ಯ ಎಂದರು.
ತಮ್ಮ ಸ್ವಾತಂತ್ರ್ಯ ಹೋರಾಟದ ದಿನಗಳು, 1942ರಲ್ಲಿ ಭಾರತ ಬಿಟ್ಟು ತೊಲಗಿ ಘೋಷಣೆಯ ಸಂದರ್ಭದಲ್ಲಿ ನಡೆದ ಅಹಿಂಸಾ ಹೋರಾಟದ ವೇಳೆ ಎರಡೂವರೆ ವರ್ಷ ಬಳ್ಳಾರಿಯಲ್ಲಿ ಸೆರೆಮನೆಯಲ್ಲಿ ಕಳೆದ ದಿನಗಳು, ವಿನೋಬಬಾವೆಯವರ ಒಡನಾಟದ ದಿನಗಳನ್ನು ಸ್ಮರಿಸಿಕೊಂಡ ಹಿರಿಯ ಗಾಂಧೀವಾದಿಗಳು, ಮಕ್ಕಳಿಗೆ ನಿರರ್ಗಳ ಒಂದು ಗಾಂಟೆ ಕಾಲ ಸರ್ವಧರ್ಮ ಭಜನ್ ಗೀತೆಗಳನ್ನು ಹೇಳಿಕೊಟ್ಟರು.
ಇದೇ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಇಳಂತಿಲದ ಮದ್ಯಮುಕ್ತ ಕೂಸಪ್ಪ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕುಡಿಯುವ ಚಟಕ್ಕೆ ಗುರಿಯಾದವನಿಗೆ ವಿನಾಶವಲ್ಲದೆ ಬೇರೆ ದಾರಿ ಇಲ್ಲ ಎಂದರು. ತಾವು ಕುಡಿತವನ್ನು ಆರಂಭಿಸಿದ ದಿನಗಳು, ಚಟಕ್ಕೆ ದಾಸರಾದ ದಿನಗಳು, ಬಳಿಕ ಮದ್ಯವರ್ಜನ ಶಿಬಿರದಲ್ಲಿ ಸೇರಿದ ಬಳಿಕ ಮದ್ಯಪಾನ ವರ್ಜಿಸಿ ಬದುಕು ಕಟ್ಟಿದ ದಿನಗಳನ್ನು ವೇದಿಕೆಯಲ್ಲಿ ಹಂಚಿಕೊಂಡರು.
ಅಧ್ಯಕ್ಷತೆಯನ್ನು ಬಾಳೆಪುಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ  ಗಿರೀಶ್ ಬೆಳ್ಳೇರಿ ಮಾತನಾಡಿದರು. ಸಮಾರಂಭಕ್ಕೆ ಆಗಮಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯರಾದ  ಸಂತೋಷ್ ಕುಮಾರ್ ರೈ ಅವರು ತಮ್ಮ ಬಾಳೆಪುಣಿ ಗ್ರಾಮಪಂಚಾಯಿತಿಯ ಕೊರಗ ಕಾಲನಿಯನ್ನು ಮಾದರಿಯಾಗಿಸುವ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ವಾರ್ತಾಧಿಕಾರಿ ಶ್ರೀಮತಿ ರೋಹಿಣಿ, ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಪ್ರೊ. ವಿನೀತ ಕೆ ಸಮಾರಂಭದಲ್ಲಿದ್ದರು. ವಾರ್ತಾಇಲಾಖೆಯ ಫ್ರಾನ್ಸಿಸ್ ಲೂಯಿಸ್ ಕಾರ್ಯಕ್ರಮ ನಿರೂಪಿಸಿದರು. ಪಂಚಾಯಿತಿ ಪಿ ಡಿ ಒ ಉಗ್ಗಪ್ಪ ಮೂಲ್ಯ, ಕಾರ್ಯದರ್ಶಿ ನಳಿನಿ ಹಾಗೂ ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.
ಕೆನರಾ ಕಾಲೇಜು, ಗೋಕರ್ಣನಾಥೇಶ್ವರ ಕಾಲೇಜು, ಶ್ರೀ ನಾರಾಯಣ ಗುರು ಕಾಲೇಜು, ರಥಬೀದಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು ಬಾಳೆಪುಣಿ ಪಂಚಾಯಿತಿ ಕೊರಗರ ಕಾಲನಿಯ ಒಂದು ರಸ್ತೆಯನ್ನು ಶ್ರಮದಾನದ ಮುಖಾಂತರ ಸ್ವಚ್ಛಗೊಳಿಸಿದರು.

Tuesday, October 1, 2013

ಹಿರಿಯರನ್ನು ಗೌರವಿಸಿ: ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ

ಮಂಗಳೂರು,ಅಕ್ಟೋಬರ್ 01: ಹಿರಿಯರನ್ನು ವೃದ್ಧಾಶ್ರಮಗಳಿಗೆ ಸೇರಿಸದೆ ಗೌರವಿಸಿ ಕುಟುಂಬದೊಂದಿರಿಸಿ ಪೋಷಿಸಬೇಕು. ಆದರೆ ಇಂದಿನ ದಿನಗಳಲ್ಲಿ ಹಿರಿಯರನ್ನು ವೃದ್ಧಾಶ್ರಮಗಳಿಗೆ ಸೇರಿಸತ್ತಿರುವುದು ದುರ್ದೈವ  ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ, ಜೀವಿಶಾಸ್ತ್ರ, ಪರಿಸರ ಸಚಿವ ಬಿ. ರಮಾನಾಥ ರೈ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದ ಬಜ್ಜೋಡಿಯ  ಲಿಟ್ಲ್ ಸಿಸ್ಟರ್ ಆಫ್ ದಿ ಪುವರ್ ಸಂಸ್ಥೆಯಲ್ಲಿ  ಅಂತಾರಾಷ್ಟ್ರೀಯ ಹಿರಿಯ ನಾಗರಿಕರ ದಿನಾಚರಣೆ-2013 ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾಡಳಿತ, ದ. ಕ. ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇಂದು ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಇಂದಿನ ಪೀಳಿಗೆ ಹಿರಿಯ ನಾಗರಿಕರ ಬಗ್ಗೆ ಚಿಂತಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಪ್ರಸಕ್ತ ಸರಕಾರವು ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಸ್ಪಂದನೆ ನೀಡುತ್ತಿದೆ. ಹಲವಾರು ಯೋಜನೆಗಳು ಜಾರಿಯಲ್ಲಿವೆ.  ಹಿರಿಯ ನಾಗರಿಕರಿಗಾಗಿ  ಗುರುತು ಚೀಟಿ, ಬಸ್ ಪ್ರಯಾಣ ರಿಯಾಯಿತಿ, ಪಿಂಚಣಿ, ಸಂಧ್ಯಾ ಸುರಕ್ಷಾ ಮೊದಲಾದ ಯೋಜನೆಗಳ ಮೂಲಕ ಸರಕಾರ ಹಿರಿಯ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಸಂಧ್ಯಾ ಸುರಕ್ಷಾ ಪಿಂಚಣಿ ಯೋಜನೆಯನ್ನು ಸರಳೀಕರಣಕ್ಕೆ ನೂತನ ಸರಕಾರ ಮುಂದಾಗಿದೆ ಎಂದವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ನಾಗರಿಕರ ಸಂಘದ ಉಪಾಧ್ಯಕ್ಷ ಟಿ. ಜಿ. ಶೆಣೈ ವಹಿಸಿದ್ದರು.
ದ.ಕ.ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಪಕೀರ ಎಂ. ಮುಖ್ಯ ಅತಿಥಿಯಾಗಿದ್ದರು. ವಿಶ್ವಾಸ್ ಟ್ರಸ್ಟ್ನ ಕಾರ್ಯದರ್ಶಿ ಒಲಿಂಡಾ ಪಿರೇರಾ, ಲಿಟ್ಲ್ ಸಿಸ್ಟರ್ ಆಫ್ ದಿ ಪುವರ್ ಸಂಸ್ಥೆಯ ಸಿ. ಜೋಸ್ಲಿನ್ ಉಪಸ್ಥಿತರಿದ್ದರು.
ಮಂಗಳೂರು ಹಿರಿಯ ನಾಗರಿಕರ ಸಂಘದ ವತಿಯಿಂದ ಉಸ್ತುವಾರಿ ಸಚಿವರಿಗೆ ಈ ವೇಳೆ ಮನವಿ ಸಲ್ಲಿಸಲಾಯಿತು. ಹಿರಿಯ ನಾಗರಿಕರಿಗೆ ಆರಾಮ ಪ್ರಯಾಣ ಅವಶ್ಯವಿದ್ದು, ಕನರ್ಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವೋಲ್ವೋ ಹಾಗೂ ಸ್ಲೀಪರ್ ಬಸ್ಗಳಲ್ಲಿ ಶೇ. 25ರ ರಿಯಾಯಿತಿ ದರ ನೀಡುವಲ್ಲಿ ಕ್ರಮ ಕೈಗೊಳ್ಳಬೇಕು, ಸಂಧ್ಯಾ ಸುರಕ್ಷಾ ಯೋಜನೆಯನ್ವಯ ಕೊಡುತ್ತಿರುವ 500 ರೂ.ಗಳ ಮಾಸಿಕ ಪಿಂಚಣಿಯನ್ನು 2 ಸಾವಿರ ರೂ.ಗಳಿಗೆ ಏರಿಸಬೇಕು. ಅಲ್ಲದೇ ಪಿಂಚಣಿ ಪಡೆಯುವವರ ವಯೋಮಿತಿಯನ್ನು 65ರಿಂದ 60ಕ್ಕೆ ಇಳಿಸಬೇಕು ಎಂಬ ಹಲವು ಬೇಡಿಕೆಗಳ ಈಡೇರಿಕೆಗೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ದ.ಕ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗಟ್ರೂಡ್ ವೇಗಸ್ ಸ್ವಾಗತಿಸಿದರು. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಚಂದ್ರಿಕಾ ಎಸ್. ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಶರ್ಮಿಳಾ ವಿದ್ಯಾಸಾಗರ್ ಹಾಗೂ ಸಂದೀಪ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಹಿರಿಯ ನಾಗರಿಕರ ದಿನಾಚರಣೆಯ ಕುರಿತಂತೆ ಮಾತನಾಡಿದರು.

Monday, September 30, 2013

ಲೇಡಿಗೋಷನ್ ಗೆ ಆಂಬುಲೆನ್ಸ್ ದೇಣಿಗೆ

ಮಂಗಳೂರು,ಸೆಪ್ಟೆಂಬರ್.30:- ಎನ್ ಎಂ ಪಿ ಟಿ ವತಿಯಿಂದ 13 ಲಕ್ಷ ರೂ.ಗಳ ಆಂಬುಲೆನ್ಸ್ ನ್ನು ನಗರದ ಲೇಡಿಗೋಷನ್ ಆಸ್ಪತ್ರೆಗೆ ಇಂದು ಜಿಲ್ಲಾಧಿಕಾರಿಗಳಿಗೆ ಕೀ ಕೊಡುವ ಮೂಲಕ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ  ಜೆ ಆರ್ ಲೋಬೋ ಅವರು ಉಪಸ್ಥಿತರಿದ್ದರು.
ಆಂಬುಲೆನ್ಸ್ ಜೀವರಕ್ಷಕ ಔಷಧಿ ಮತ್ತು ಸಲಕರಣೆಗಳೊಂದಿಗೆ ಸುಸ್ಸಜ್ಜಿತವಾಗಿದೆ ಎಂದು ಲೇಡಿಗೋಷನ್ ಆಸ್ಪತ್ರೆಯ ಅಧೀಕ್ಷಕರಾದ ಡಾ ಶಕುಂತಳಾ ಅವರು ಹೇಳಿದರು. ಎನ್ ಎಂ ಪಿಟಿ ಅಧ್ಯಕ್ಷರಾದ ತಮಿಳ್ವಾನನ್ ಮತ್ತು ಸಹೋದ್ಯೋಗಿಗಳು ಉಪಸ್ಥಿತರಿದ್ದರು.  

Sunday, September 29, 2013

ದ.ಕ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯTuesday, September 24, 2013

ಕೇಂದ್ರ ತಂಡದಿಂದ ಅತಿವೃಷ್ಟಿ ಹಾನಿ ಮಾಹಿತಿ ಸಂಗ್ರಹ

ಮಂಗಳೂರು, ಸೆಪ್ಟೆಂಬರ್ 24:- ಅತಿವೃಷ್ಟಿಯಿಂದಾದ ಅನಾಹುತಗಳ ಕುರಿತು ಸ್ಥಳ ಪರಿಶೀಲನೆಗೆ ದಕ್ಷಿಣ ಜಿಲ್ಲೆಗೆ ಆಗಮಿಸಿದ ಕೇಂದ್ರ ಪರಿಹಾರ ಸಮೀಕ್ಷಾ ತಂಡ ಇಂದು ಬೆಳಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲ್ಗಿ ಸಭೆ ನಡೆಸಿ ಸಮಗ್ರ ಮಾಹಿತಿ ಸಂಗ್ರಹಿಸಿದರು. ಕೇಂದ್ರ ಗೃಹಸಚಿವಾಲಯದ ಜಂಟಿ ಕಾರ್ಯದರ್ಶಿ ಆರ್ ಕೆ ಶ್ರೀವಾಸ್ತವ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅವರ ಜೊತೆಗೆ ಸಂಜಯ್ ಗಾರ್ಗ್ ಸಾರಿಗೆ ಮತ್ತು ಹೆದ್ದಾರಿ ವಿಭಾಗದ ಪ್ರಾದೇಶಿಕ ಅಧಿಕಾರಿ,  ಮುರಳೀಧರನ್ ಹಿರಿಯ ಸಂಶೋಧನಾ ಅಧಿಕಾರಿ ಯೋಜನಾ ಆಯೋಗ ದೆಹಲಿ, ಡಾ ಕೆ ಮನೋಹರನ್ ನಿರ್ದೇಶಕರು ಪ್ರಭಾರ, ತಂಬಾಕು ಅಭಿವೃದ್ಧಿ ಇವರು ತಂಡದಲ್ಲಿದ್ದರು.
ಅತಿವೃಷ್ಟಿಯಲ್ಲಿ 18 ಜನರು ಒಟ್ಟಿಗೆ ಮೃತಪಟ್ಟಿದ್ದು, 16 ಜಾನುವಾರುಗಳ ಜೀವಹಾನಿಯಾಗಿದೆ. 909 ಮನೆಗಳು ಹಾನಿಗಳೊಗಾಗಿದೆ. 72 ಹೆಕ್ಟೆರ್ ವ್ಯಾಪ್ತಿಯಲ್ಲಿ ಕೃಷಿ ಹಾನಿಯಾಗಿದೆ. 547.35 ಕಿ.ಮೀ ವ್ಯಾಪ್ತಿಯಲ್ಲಿ ರಸ್ತೆಗಳು ಹಾನಿಗೊಳಗಾಗಿವೆ. ಸೇತುವೆ ಮತ್ತು ಕಿರುಸೇತುವೆ ಒಟ್ಟು 39 ಹಾನಿಯಾಗಿವೆ. ಸಣ್ಣ ನೀರಾವರಿ ಕಾಮಗಾರಿಗಳು 21 ಮಳೆಯಿಂದಾಗಿ ಹಾನಿಗೊಳಗಾಗಿದೆ ಎಂದು ಜಿಲ್ಲಾಧಿಕಾರಿ ಎನ್ ಪ್ರಕಾಶ್ ಅವರು ಮಾಹಿತಿ ನೀಡಿದರು.  ಅಪರ ಜಿಲ್ಲಾಧಿಕಾರಿ ದಯಾನಂದ ಕೆ ಎ, ಸಿಇಒ ಶ್ರೀಮತಿ ತುಳಸಿ ಮದ್ದಿನೇನಿ, ಸಹಾಯಕ ಆಯುಕ್ತರಾದ ಡಾ. ಪ್ರಶಾಂತ್ ಸಭೆಯಲ್ಲಿ ಉಪಸ್ಥಿತರಿದ್ದರು.
 

Monday, September 23, 2013

ಜಿಲ್ಲೆಯಲ್ಲಿ ಸಾಹಸ ಜಲಕ್ರೀಡೆಗೆ ಪ್ರೋತ್ಸಾಹ: ಸಚಿವ ಅಭಯಚಂದ್ರ ಜೈನ್

ಮಂಗಳೂರು, ಸೆಪ್ಟೆಂಬರ್ 23:- ತಣ್ಣೀರು ಬಾವಿಯಲ್ಲಿ ಸಾಹಸ ಜಲಕ್ರೀಡೆ ಆರಂಭಿಸುವ ಬಗ್ಗೆ ಯುವ ಜನ ಸೇವಾ ಮತ್ತು ಮೀನುಗಾರಿಕೆ ಸಚಿವರಾದ  ಅಭಯಚಂದ್ರ ಜೈನ್ ಅವರು ಇಂದು ಸ್ಥಳ ಪರಿಶೀಲನೆ ನಡೆಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಯುವಜನಸೇವೆ ಇಲಾಖಾಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕ್ರೀಡಾಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಸಲು ಇಲಾಖೆ ಬದ್ಧವಾಗಿದೆ ಎಂದರು.  ತಾಲೂಕು ಮಟ್ಟದಲ್ಲಿ ಕ್ರೀಡಾಂಗಣ ಅಭಿವೃದ್ಧಿ ಹಾಗೂ ಕ್ರೀಡಾ ತರಬೇತಿಗೆ ಪೂರಕ ವಾತಾವರಣವಿದ್ದು, ಅಗತ್ಯ ಸೌಲಭ್ಯಗಳನ್ನು ಕ್ರೀಡಾಪಟುಗಳಿಗೆ ಒದಗಿಸಲಾಗುವುದು. ಮಂಗಳಾ ಕ್ರೀಡಾಂಗಣವನ್ನು ಇನ್ನಷ್ಟು ಅಭಿವೃದ್ಧಿಪಡಿಸಲಾಗುವುದು ಎಂದು ಸಚಿವರು ಹೇಳಿದರು.
ಜಿಲ್ಲೆಯಲ್ಲಿರುವ ಕ್ರೀಡಾಶಾಲೆಯಲ್ಲಿ ಮಕ್ಕಳ ಕೊರತೆಯಿದ್ದು, ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಎಲ್ಲ ತಾಲೂಕುಗಳ ಅಗತ್ಯಗಳನ್ನು ಪರಿಶೀಲಿಸಿ, ಇಲಾಖೆಯ ಕಾರ್ಯಕ್ರಮಗಳ ಸಮಗ್ರ ವಿವರ ಪಡೆದರಲ್ಲದೆ ಅನುಷ್ಠಾನಕ್ಕೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಶಾಸಕರಾದ  ಜೆ ಆರ್ ಲೋಬೋ,  ಮೊಹಿಯುದ್ದಿನ್ ಬಾವಾ, ಜಿಲ್ಲಾಧಿಕಾರಿ  ಎನ್ ಪ್ರಕಾಶ್, ಇಲಾಖೆಯ ನಿರ್ದೇಶಕರಾದ ಐಪಿಎಸ್ ವಿಕಾಸ್ ಕುಮಾರ್ ವಿಕಾಸ್, ಜಂಟಿ ನಿರ್ದೇಶಕರಾದ ಎಂ ಎಸ್ ರಮೇಶ್, ಡಾ ಜಿತೇಂದ್ರ ಶೆಟ್ಟಿ ಉಪಸ್ಥಿತರಿದ್ದರು.

ಸಾಮಾಜಿಕ ನ್ಯಾಯ ಸರ್ಕಾರದ ಸಂಕಲ್ಪ: ನಿರ್ದೇಶಕರು ಟ್ರೈಬಲ್ ವೆಲ್ಫೆರ್

ಮಂಗಳೂರು, ಸೆಪ್ಟೆಂಬರ್ 23:-ರಾಜ್ಯ ಸರ್ಕಾರ ರಾಜ್ಯದ ಪರಿಶಿಷ್ಟ ವರ್ಗದ ಜನತೆಯ ಕಲ್ಯಾಣಕ್ಕಾಗಿ 2,480 ಕೋಟಿ ರೂ.ಗಳನ್ನು ಬಜೆಟ್ ನಲ್ಲಿ ಕಾದಿರಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಕೊರಗ ಮತ್ತು ಮಲೆಕುಡಿಯರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ನಿರ್ದೇಶಕರು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕರಾದ ಡಾ ಕೆ ಎನ್ ವಿಜಯಪ್ರಕಾಶ್ ಹೇಳಿದರು. ಅವರಿಂದು ಜಿಲ್ಲಾ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಕಚೇರಿಗೆ ಭೇಟಿ ನೀಡಿ ಸಮುದಾಯದ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.
ಜಿಲ್ಲೆಯ ಕೊರಗರ ಹಾಗೂ ಮಲೆಕುಡಿಯರ ಪರಿಸ್ಥಿತಿಯ ಅರಿವು ಈಗಾಗಲೇ ಇದ್ದು, ಇವರ ಶಿಕ್ಷಣ, ಆರೋಗ್ಯ, ವಸತಿ, ಸ್ವಯಂ ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ನಿರ್ದೇಶಕರು ಹೇಳಿದರು.
ಈಗಾಗಲೇ ಚಾಮರಾಜನಗರದ ಬಿ ಆರ ಹಿಲ್ಸ್ ನ ಸೋಲಿಗರ ಹಾಡಿ,  ಬೈಲುಕುಪ್ಪೆಯ ಡೊಂಗ್ರಗರೇಷಿಯಾ ಸಮುದಾಯದವರು, ಜೇನುಕುರುಬರನ್ನು ಹಾಗೂ ಕೆಲವು ಆಶ್ರಮ ವಸತಿ ಶಾಲೆಗಳನ್ನು ಭೇಟಿ ನೀಡಿದ್ದು, ಇವರಿಗಾಗಿ ಸರ್ಕಾರ ನೀಡಿರುವ ಎಲ್ಲ ಯೋಜನೆಗಳ ಫಲವನ್ನು ಈ ಸಮುದಾಯಕ್ಕೆ ತಲುಪಿಸಲು ಕ್ರಮಕೈಗೊಳ್ಳುವುದಾಗಿ ನಿರ್ದೇಶಕರು ಹೇಳಿದರು.
ಈ ಸಂಬಂಧ ರಾಜ್ಯಮಟ್ಟದಲ್ಲಿ 25ರಂದು ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದೆ. ಜಿಲ್ಲೆಯಲ್ಲಿ ಪರಿಶಿಷ್ಟ ವರ್ಗಗಳಡಿ 82,000 ಜನಸಂಖ್ಯೆಯಿದ್ದು, ಇವರಲ್ಲಿ 4,858 ಕೊರಗರು ಹಾಗೂ 7,684 ಮಲೆಕುಡಿಯರಿದ್ದಾರೆ ಎಂಬ ಅಂಕಿಅಂಶಗಳು ಲಬ್ಯವಿದೆ. ಇವರಿಗೆ ವಿವಿಧ ಯೋಜನೆಗಳಡಿ ವಸತಿ ಹಾಗೂ ನಿರ್ಮಲ ಭಾರತ ಅಭಿಯಾನದಡಿ ಶೌಚಾಲಯ ನಿಮರ್ಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ನಿರ್ದೇಶಕರು ಹೇಳಿದರು.
ಸಭೆಯಲ್ಲಿ ಐಟಿಡಿಪಿ ಅಧಿಕಾರಿ ಸಾಬಿರ್ ಅಹಮದ್ ಮುಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಸಮುದಾಯದ ಮುಖಂಡರು ಉಪಸ್ಥಿತರಿದ್ದು, ಅಹವಾಲು ಹಾಗೂ ಸಲಹೆಗಳನ್ನು ನೀಡಿದರು.

ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಿ: ಸಚಿವ ಅಭಯಚಂದ್ರ ಜೈನ್

ಮಂಗಳೂರು, ಸೆಪ್ಟೆಂಬರ್ 23:- ಮೀನುಗಾರಿಕೆ ಇಲಾಖೆಯಿಂದ ನೀಡಿರುವ ಎಲ್ಲ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಿ. ಇಲಾಖೆಯ ಯೋಜನೆಗಳು ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ಬರಲಿ. ದಕ್ಷಿಣ ಕನ್ನಡ ಜಿಲ್ಲೆಯ  ಮೀನುಗಾರಿಕಾ ಬಂದರುಗಳ ಅಭಿವೃದ್ಧಿ ಕಾರ್ಯಗಳು ತಕ್ಷಣದಿಂದ ಆರಂಭವಾಗಲಿ ಎಂದು  ಯುವ ಜನ ಸೇವಾ ಮತ್ತು ಮೀನುಗಾರಿಕೆ ಸಚಿವರಾದ  ಅಭಯಚಂದ್ರ ಜೈನ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಸಚಿವರು, ಕುಳಾಯಿ ಜೆಟ್ಟಿ ಅಭಿವೃದ್ಧಿಗೆ ಈಗಾಗಲೇ ಸಿಡಬ್ಲುಪಿಆರ್ ಎಸ್ ( ಸೆಂಟ್ರಲ್ ವಾಟರ್ ಪವರ್ ರೀಸರ್ಚ್ ಸ್ಟೇಷನ್) ಸಿಐಇಸಿಎಫ್ (ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಕೋಸ್ಟಲ್ ಎಕ್ಸಪೀರಿಯನ್ಸ್ ಫಾರ್ ಫಿಶರಿಸ್) ಈಗಾಗಲೇ ಯೋಜನೆಗೆ ಮಂಜೂರಾತಿ ಪಡೆದಿದ್ದು, ಶೀಘ್ರವೇ ಹಳೆ ಯೋಜನೆಯಂತೆ ಕಾಮಗಾರಿ ಆರಂಭಿಸಲು ಸೂಚನೆ ನೀಡಿದರಲ್ಲದೆ ಒಂದು ತಿಂಗಳೊಳಗೆ ವರದಿ ನೀಡಬೇಕೆಂದು ಸಚಿವರು ಆದೇಶಿಸಿದರು.
ಮೀನುಗಾರಿಕಾ ಬಂದರುಗಳ ಮೂರನೇ ಹಂತದ ಕಾಮಗಾರಿ ಕೈಗೊಳ್ಳುವ ಬಗ್ಗೆ ರೂ. 57.60 ಕೋಟಿ ಬಿಡುಗಡೆಯಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಈಗಾಗಲೇ ಸುಮಾರು 2,000 ದಷ್ಟು ಮೀನುಗಾರಿಕಾ ದೋಣಿಗಳು ತಂಗುತ್ತಿದ್ದು ಈ ದೋಣಿಗಳಿಗೆ ಬಂದರಿನಲ್ಲಿ ಸ್ಥಳಾವಕಾಶ ಕಡಿಮೆ ಇರುವುದರಿಂದ ಕೇಂದ್ರ ಪುರಸ್ಕೃತ ಯೋಜನೆಯಡಿ ಸುಮಾರು ರೂ. 60 ಕೋಟಿ ವೆಚ್ಚದಲ್ಲಿ ಮಂಗಳೂರು ಮೀನುಗಾರಿಕಾ ಬಂದರಿನ ಮೂರನೇ ಹಂತದ ಯೋಜನೆಯಡಿ ವಿಸ್ತರಣೆಯನ್ನು ಮಾಡುವ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಮೀನುಗಾರಿಕೆ ಉಪನಿರ್ದೇಶಕರು ವಿವರಿಸಿದರು.
ಅಳಿವೆಬಾಗಿಲಿನಲ್ಲಿ ಹಾಗೂ ಚ್ಯಾನಲ್ನಲ್ಲಿ ಹೂಳೆತ್ತುವ ಕೆಲಸವನ್ನು ರೂ. 4.53 ಕೋಟಿ ಮೊತ್ತದಲ್ಲಿ ಮಾಡಲಾಗಿದೆ ಎಂದು ಮೀನುಗಾರಿಕೆ ಉಪನಿದರ್ೇಶಕರಾದ ಎಂ ಡಿ ಪ್ರಸಾದ್ ಅವರು ಸಚಿವರಿಗೆ ಮಾಹಿತಿ ನೀಡಿದರು. ಹೆಜಮಾಡಿ ಕೋಡಿಯಲ್ಲಿ ಜೆಟ್ಟಿ ನಿಮರ್ಾಣಕ್ಕೂ ಚಾಲನೆ ನೀಡಲು ಉಪಸ್ಥಿತರಿದ್ದ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಪ್ರಸಕ್ತ ಸಾಲಿನಲ್ಲಿ ಮೀನುಗಾರಿಕಾ ಯಾಂತ್ರೀಕೃತ ದೋಣಿಗಳು ಬಳಸುವ ಡೀಸಿಲ್ ಎಣ್ಣೆಯ ಮೇಲಿನ ರಾಜ್ಯ ಮಾರಾಟಕರವನ್ನು ಸಂಪೂರ್ಣವಾಗಿ ಮಾಫಿ ಮಾಡಲಾಗಿದೆ. ಇದರಿಂದ ಮೀನುಗಾರರು ಪ್ರತೀ ಲೀಟರ್ ಡೀಸಿಲ್ ಮೇಲೆ ರೂ. 7. 00 ರಷ್ಟು ಸಹಾಯಧನ ಪಡೆಯುತ್ತಿದ್ದಾರೆ. ಆಧುನಿಕ ಬಹುದಿನಗಳ ಮೀನುಗಾರಿಕಾ ದೋಣಿಗಳ ನಿಮರ್ಾಣದ ಸಲುವಾಗಿ ಕೇಂದ್ರ ಸಕರ್ಾರ ಘಟಕ ವೆಚ್ಚ ಮೇಲೆ ಶೇಕಡ 10ರಷ್ಟು ಅಂದರೆ ಗರಿಷ್ಠ ರೂ. 6 ಲಕ್ಷ ಸಹಾಯಧನ ನೀಡಲಾಗುತ್ತಿದೆ. ಈ ಯೋಜನೆಯಡಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ 2011-12 ಸಾಲಿನಿಂದ 200 ಘಟಕಗಳು ಸಹಾಯಧನ ಪಡೆದಿದೆ. ಕೇಂದ್ರ ಪುರಸ್ಕೃತ ಯೋಜನೆಯಡಿ ಮೀನುಗಾರಿಕೆಗೆ ಉಪಯೋಗಿಸುವ ಮಂಜುಗಡ್ಡೆ ಕಾರ್ಖಾನೆಗಳ ನಿಮರ್ಾಣಕ್ಕೆ ಘಟಕ ವೆಚ್ಚ ಗರಿಷ್ಠ ರೂ. ಒಂದು ಕೋಟಿಗೆ ಮಿತಿಗೊಳಿಸಿ ಸಹಾಯಧನ ನೀಡಲಾಗುತ್ತಿದೆ. ಕಳೆದ 5 ವರ್ಷಗಳಿಂದ ದಕ್ಷಿಣ ಕನ್ನಡ ಮತ್ತು ಉಡುಪಿಜಿಲ್ಲೆಯಲ್ಲಿ ಯೋಜನೆಯಡಿ ಈ ತನಕ 45 ಘಟಕಗಳಿಗೆ ಸಹಾಯಧನ ನೀಡಲಾಗಿದೆ. ವಸತಿ ರಹಿತ ಮೀನುಗಾರರಿಗೆ ಮನೆಗಳನ್ನು ನಿಮರ್ಿಸುವ ಯೋಜನೆಯಡಿ ಕಳೆದ 5 ವರ್ಷಗಳಲ್ಲಿ ಕೇಂದ್ರ ಪುರಸ್ಕೃತ ಮತ್ತು ಮತ್ಸ್ಯಾಶ್ರಯ ಯೋಜನೆಯಡಿ ದ.ಕ  ಮತ್ತು ಉಡುಪಿ ಜಿಲ್ಲೆಯ 2837 ಮೀನುಗಾರ ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಲು ಒಟ್ಟು 137.08 ಲಕ್ಷ ಸಹಾಯಧನ ನೀಡಲಾಗಿದೆ. 12-13ನೇ ಸಾಲಿನಲ್ಲಿ ದ.ಕ ಜಿಲ್ಲೆಗೆ 220 ಮತ್ತು ಉಡುಪಿ ಜಿಲ್ಲೆಗೆ 960 ಹೀಗೆ ಒಟ್ಟು 1180 ಮನೆಗಳನ್ನು ಹಂಚಿಕೆ ಮಾಡಲಾಗಿದೆ.
ಮತ್ಸ್ಯ ಮಹಿಳಾ ಸ್ವಾವಲಂಬನಾ ಯೋಜನೆಯನ್ನು ಮೀನುಗಾರ ಮಹಿಳೆಯರಿಗೆ ವಿವಿಧ ಸೌಲಭ್ಯಗಳನ್ನು ವಿತರಿಸಲಾಗುತ್ತಿದೆ. ಮೀನುಗಾರರ ಮೀನುಗಾರಿಕೆ ಮಾಡುವಾಗ ಮೃತರಾದಲ್ಲಿ ಅವರ ವಾರಸುದಾರರಿಗೆ ಸಂಕಷ್ಟ ಪರಿಹಾರ ನಿಧಿಯಡಿ ರೂ. 50.000.00 ವನ್ನು ಪರಿಹಾರ ಧನವಾಗಿ ನೀಡಲಾಗುತ್ತಿದೆ. ಮೀನುಗಾರರಲ್ಲಿ ಉಳಿತಾಯ ಮನೋಭಾವವನ್ನು ಬೆಳೆಸುವ ಸಲುವಾಗಿ ಉಳಿತಾಯ ಮತ್ತು ಪರಿಹಾರ ಯೋಜನೆ ಯನ್ನು ಹಮ್ಮಿಕೊಳ್ಳಲಾಗಿದೆ.
ಕರಾವಳಿ ಮತ್ತು ಒಳನಾಡು ಮೀನುಗಾರರ ಭದ್ರತೆಗಾಗಿ ಹಾಗೂ ಸುರಕ್ಷತೆಯ ಮೀನುಗಾರಿಕೆಗಾಗಿ ಲೈಫ್ ಜಾಕೆಟ್ ಮತ್ತು ಲೈಫ್ ಬಾಯ್ಸ್ ಖರೀದಿಗೆ ಸಹಾಯಧನ ನೀಡಲಾಗುತ್ತದೆ. ಕೇಂದ್ರದ ಮರ್ಚಂಟ್ ಶಿಪ್ಪಿಂಗ್ ಕಾಯಿದೆಯನ್ವಯ ಮೀನುಗಾರಿಕೆಯಲ್ಲಿ ನಿರತವಾಗಿರುವ ಎಲ್ಲ ಯಾಂತ್ರೀಕೃತ ದೋಣಿ, ಮೋಟರೀಕೃತ ದೋಣಿ ಮತ್ತು ಸಾಂಪ್ರಾದಾಯಿಕ ನಾಡದೋಣಿಗಳನ್ನು ಓನ್ ಲೈನ್ ಮೂಲಕ ಮೀನುಗಾರಿಕೆ ಇಲಾಖೆಯಲ್ಲಿ ನೋಂದಾವಣೆ ಮಾಡಲಾಗುತ್ತಿದೆ. ಈ ತನಕ 2120 ಯಾಂತ್ರಿಕೃತ ದೋಣಿಗಳನ್ನು, 4615 ಮೋಟರೀಕೃತ ದೋಣಿಗಳನ್ನು ಹಾಗೂ 1925 ಸಾಂಪ್ರಾದಾಯಿಕ ದೋಣಿಗಳನ್ನು ನೋಂದಾವಣೆ ಮಾಡಲಾಗಿದೆ.
ಅಲ್ಲದೆ ಸಮುದ್ರ ಮೀನುಗಾರಿಕೆಯಲ್ಲಿ ನಿರತವಾಗಿರುವ ಎಲ್ಲ ಮೀನುಗಾರರಿಗೆ ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಗುರುತುಕಾರ್ಡು ನೀಡುವ ಕಾರ್ಯಕ್ರಮವನ್ನು ಮೀನುಗಾರಿಕೆ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದು ಈವರೆಗೆ 26,739 ಮೀನುಗಾರರಿಗೆ ಗುರುತು ಚೀಟಿ ನೀಡಲಾಗಿದೆ.
ಕುಂದಾಪುರ ಹೆಜಮಾಡಿ ಬಂದರಿನ ಅಬಿವೃದ್ದಿ ಸಂಬಂಧ ಮಣ್ಣು ಪರೀಕ್ಷೆಗೆ ಕಳುಹಿಸಲಾಗಿದ್ದು ವರದಿ ಬಂದ ತಕ್ಷಣ ಕ್ರಮಕೈಗೊಳ್ಳಲಾಗುವುದು. ಕರಾವಳಿ ಕೊಂಡಿ ರಸ್ತೆಗಳ ನಿರ್ವಹಣೆಗೆ 390 ಲಕ್ಷ ರೂ. ಮೀಸಲಿರಿಸಿದೆ. ಸಭೆಯಲ್ಲಿ ಶಾಸಕರಾದ  ಜೆ ಆರ್ ಲೋಬೋ,  ಮೊಹಿಯುದ್ದಿನ್ ಬಾವಾ, ಜಿಲ್ಲಾಧಿಕಾರಿ ಎನ್ ಪ್ರಕಾಶ್, ಅಪರ ಜಿಲ್ಲಾಧಿಕಾರಿ ದಯಾನಂದ ಕೆ. ಎ., ಕೆ ಎಫ್ ಡಿ ಸಿಯ ವೀರಪ್ಪಗೌಡ, ಸಹಾಯಕ ನಿರ್ದೇಶಕರಾದ ಪಾಶ್ರ್ವನಾಥ್ ಮುಂತಾದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


Saturday, September 21, 2013

ಎಂಡೋಪೀಡಿತರ ಸಮಗ್ರ ಅಭಿವೃದ್ಧಿಗೆ ಯೋಜನೆ: ವಿಶೇಷ ಸಭೆ

                  ಎಂಡೋಪೀಡಿತರ ಸಮಗ್ರ ಅಭಿವೃದ್ಧಿಗೆ ಯೋಜನೆ: ವಿಶೇಷ ಸಭೆ   
 ಮಂಗಳೂರು , ಸೆಪ್ಟೆಂಬರ್ 21;- ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅಕ್ಟೋಬರ್/ನವೆಂಬರ್ 2012 ರಲ್ಲಿ ಎಂಡೋಪೀಡಿತರ ಸಮೀಕ್ಷೆ ನಡೆಸಿ 23 ಪ್ರಾಥಮಿಕ ಆರೋಗ್ಯ ಕೇಂದ್ರಗಳ 310165 ಜನಸಂಖ್ಯೆಯಲ್ಲಿ 5223 ಶಂಕಿತ ಎಂಡೋಸಲ್ಫಾನ್ ಪೀಡಿತ ಖಾಯಿಲೆಗೆ ತುತ್ತಾಗಿರುವುದನ್ನು  ಪತ್ತೆಹಚ್ಚಲಾಗಿತ್ತು. ಇವರಲ್ಲಿ 179 ಸಂಪೂರ್ಣ ಎಂಡೋಪೀಡಿತ ಬಾಧಿತರಾಗಿ ಮಲಗಿದಲ್ಲೇ ಇರುತ್ತಾರೆ ಎಂದು ಆರೋಗ್ಯ ಇಲಾಖೆ ಕಾರ್ಯಕರ್ತೆಯರ ಸಮೀಕ್ಷೆ ಮಾಹಿತಿ ನೀಡಿತ್ತು. ಬಳಿಕ ನಡೆದ ಸಮಗ್ರ ಸಮೀಕ್ಷೆಯಲ್ಲಿ 2,479 ಮಂದಿ ಎಂಡೋಪೀಡಿತರು ಎಂದು ಕಂಡುಬಂದಿದೆ ಎಂದು ಇಲಾಖೆ ಸಭೆಗೆ ಮಾಹಿತಿ ನೀಡಿದೆ.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಮಾಹಿತಿಯನ್ನು ನೀಡಲಾಯಿತು. ಬಂಟ್ವಾಳದ 3 ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 43213 ಜನಸಂಖ್ಯೆಯಲ್ಲಿ 680 ಎಂಡೋಪೀಡಿತ ಕಾಯಿಲೆಯಿಂದ ನರಳುವವರು, 26 ಜನರು ಮಲಗಿದ್ದಲ್ಲೇ ಇದ್ದಾರೆ. ಬೆಳ್ತಂಗಡಿಯಲ್ಲಿ 6 ಪಿಎಚ್ ಸಿ ವ್ಯಾಪ್ತಿಯಲ್ಲಿ 75973 ಜನಸಂಖ್ಯಾ ವ್ಯಾಪ್ತಿಯಲ್ಲಿ 2445 ಶಂಕಿತ ಎಂಡೋಪೀಡಿತರು, 53 ಜನರು ಮಲಗಿದ್ದಲ್ಲೇ ಇದ್ದಾರೆ. ಸುಳ್ಯದ 3 ಪಿಎಚ್ ಸಿ ವ್ಯಾಪ್ತಿಯಲ್ಲಿ 38807 ಜನಸಂಖ್ಯೆಯಲ್ಲಿ 726 ಶಂಕಿತರಲ್ಲಿ 39 ಜನ ಮಲಗಿದ್ದಲೇ ಇದ್ದಾರೆ. ಪುತ್ತೂರಿನ 11 ಪಿಎಚ್ ಸಿ ವ್ಯಾಪ್ತಿಯಲ್ಲಿ 152172 ಜನಸಂಖ್ಯೆಯಲ್ಲಿ 1372 ಶಂಕಿತರು, 61 ಜನರು ಮಲಗಿದ್ದಲ್ಲೇ ಇದ್ದಾರೆ.
ಪ್ರಾಥಮಿಕ ಸಮೀಕ್ಷೆಯಲ್ಲಿ ದೈಹಿಕ ಅಂಗವಿಕಲತೆ, ಮಾನಸಿಕ ಅಸ್ವಸ್ಥತೆ, ಬುದಿ ಮಾಂದ್ಯತೆ, ಅಪಸ್ಮಾರ, ಅಬರ್ುದ ಪ್ರಕರಣಗಳು,ಪಾಶ್ವವಾಯು, ಬಂಜೆತನ ಮತ್ತು ಗರ್ಭಪಾತ ಇತ್ಯಾದಿ.
ಎಂಡೋಸಲ್ಫಾನ್ ಸಂಬಂಧಿತ ಕಾಯಿಲೆಯಿಂದ ಮೃತಪಟ್ಟವರ ಸಂಖ್ಯೆ 15, ಸಂಪೂರ್ಣ ಹಾಸಿಗೆ ಡಿದವರು 130, ತೀವ್ರ ಬುದ್ದಿ ಮಾಂದ್ಯತೆ (%40 ಅಂಗವಿಕಲತೆ)-376. ಇತರ ಅಂಗವಿಕಲತೆ (%40 ಮತ್ತು ತೀವ್ರ ಸಂಬಂಧಿತ ಕ್ಯಾನ್ಸರ್ ನಿಂದ ಬಳಲುತ್ತಿರುವವರು -1056.

ಒಟ್ಟು 1934 ಕುಟುಂಬಗಳ ಸಮೀಕ್ಷೆ ನಡೆಸಲಾಗಿದೆ. 73 ಕುಟುಂಬಗಳಲ್ಲಿ ಒಬ್ಬರಿಗಿಂತ ಹೆಚ್ಚು ಪೀಡಿತರು. 161 ಕುಟುಂಬ ಮುಖ್ಯಸ್ಥ ಬಾಧಿತರು. 130 ಸಂಪೂರ್ಣ ಹಾಸಿಗೆ ಹಿಡಿದವರು. ಸಂಪೂರ್ಣ ಹಾಸಿಗೆ ಹಿಡಿದವರಿಗೆ/ತೀವ್ರ ಬುದ್ದಿಮಾಂದ್ಯತೆ ಮತ್ತು ಸಹಾಯ ಇಲ್ಲದೆ ಚಲಿಸಲಾಗದಂತವರಿಗೆ ಮತ್ತು ಸತ್ತವರ ವಾರಸುದಾರರಿಗೆ ರೂ. 5 ಲಕ್ಷ. ಇತರೆ ಅಂಗವಿಕಲತೆ ಇರುವವರಿಗೆ ರೂ. 3 ಲಕ್ಷ. ವೈದ್ಯಕೀಯ ಸೌಲಭ್ಯಗಳನ್ನು ನೀಡುವುದು.
ಇವರೆಲ್ಲ ಸಮಸ್ಯೆ ಪರಿಹಾರಕ್ಕೆ ಸಾಮಾನ್ಯ ಸಮಿತಿ (ಎಂಡೋಲ್ಫಾನ್ ಕಲ್ಯಾಣ) ರಚಿಸಲಾಗಿದೆ. ಸಮಿತಿಯ ಅಧಿಕಾರಿಗಳು ಎಂಡೋಸಲ್ಫಾನ್ ಪೀಡಿತರನ್ನು ಗುರುತಿಸುವುದು. ಗುರುತಿಸಿದವರಿಗೆ ಸ್ಮಾಟ್ರ್  ಕಾರ್ಡು ನೀಡುವ ಮುಖಾಂತರ ಉಚಿತ ವೈದ್ಯಕೀಯ ಸೇವೆಯನ್ನು ನೀಡುವುದು. ಅಂಗವಿಕಲತೆ ಹೊಂದಿರುವವರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಲು ವಾಹನದ ವ್ಯವಸ್ಥೆ ಮಾಡುವುದು. ಗ್ರಾಮ ಪಂಚಾಯತ್ ಗೆ ಸ್ಟಾಫ್ ನಸ್ರ್ ನ್ನು ನೀಡಿ ಮನೆಯಲ್ಲಿಯೇ ಹಾಸಿಗೆಯ ಮೇಲೆ ಹಾಸಿಗೆ ಹಿಡಿದ ರೋಗಿಗಳಿಗೆ ಚಿಕಿತ್ಸೆ ನೀಡಲು ಏರ್ಪಾಡು ಮಾಡುವುದು. ಮೊಬೈಲ್ ಮೆಡಿಕಲ್ ಯುನಿಟನ್ನು ನೀಡುವುದು. ಉಚಿತಜ ಆಹಾರವನ್ನು ಎಂಡೋಸಲ್ಫಾನ್ ಪೀಡಿತರಿಗೆ ಒದಗಿಸುವುದು. ಎಂಡೋಸಲ್ಫಾನ್ ಬಾಧಿತ ಪ್ರದೇಶಗಳಲ್ಲಿ ಅದರ ನಿವಾರಣೆಗೆ ಯಾವುದಾದರು ಒಂದು ವಿಶೇಷ ಆರೋಗ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.
 

Tuesday, September 17, 2013

ಅಧಿಕಾರಿಗಳು ಮಾಹಿತಿಯೊಂದಿಗೆ ಸಭೆಗೆ ಹಾಜರಾಗಿ: ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೊರಗಪ್ಪ ನಾಯಕ್

ಮಂಗಳೂರು, ಸೆಪ್ಟೆಂಬರ್.17:- ಬೆಳ್ತಂಗಡಿಯ ಮುಂಡಾಜೆ, ಕಡಿರುದ್ಯಾವರ ಪ್ರದೇಶ ವ್ಯಾಪ್ತಿಯಲ್ಲಿ ಸುಮಾರು 200 ಎಕರೆಯಷ್ಟು ಭತ್ತದ ಕೃಷಿಗೆ ನೀರಿನ ಅಗತ್ಯವಿದ್ದು, ಇಲ್ಲಿನ ಮುಂಡಾಜೆ ಮತ್ತು ಒಳಂಬ್ರ ಅಳದಂಗಡಿ ಕಿಂಡಿ ಅಣೆಕಟ್ಟಿನ ಚಾನೆಲ್ ಅಭಿವೃದ್ಧಿಗೆ ಅನುದಾನ ಮೀಸಲಿಡಬೇಕೆಂದು ಜಿಲ್ಲಾ ಪಂಚಾಯತ್ ನ ಅಧ್ಯಕ್ಷರಾದ ಕೊರಗಪ್ಪ ನಾಯಕ್ ಅವರು  ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ಜಿಲ್ಲಾಪಂಚಾಯತ್ನಲ್ಲಿ ಜರುಗಿದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಕಿಂಡಿ ಅಣೆಕಟ್ಟುಗಳ ವಾರ್ಷಿಕ ನಿರ್ವಹಣೆ ಕೊರತೆಯಿಂದ ಹಲಗೆಗಳು ಮತ್ತು ಚಾನೆಲ್ ಗಳು ಹಾಳಾಗಿದ್ದು, ಕೃಷಿಕರ ಹಿತವನ್ನು ಗಮನದಲ್ಲಿರಿಸಿ ಕಾಮಗಾರಿಯನ್ನು ಮುಗಿಸಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರು ಅಧಿಕಾರಿಗಳಿಗೆ ಹೇಳಿದರು.
ಸುಳ್ಯ ತಾಲೂಕಿನ ಕಲ್ಮಕಾರು ಕಿಂಡಿ ಅಣೆಕಟ್ಟು ಕಾಮಗಾರಿಗೆ 12-13ನೇ ಸಾಲಿನಲ್ಲಿ ರೂ. 10 ಲಕ್ಷ ಅನುದಾನ ಮೀಸಲಿರಿಸಿದ್ದು ಪ್ರಸ್ತುತ ಸಾಲಿನಲ್ಲಿ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, ಕಾಮಗಾರಿಯನ್ನು ಶೀಘ್ರವೇ ಕೈಗೆತ್ತಿಕೊಂಡು ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ 2013ನೇ ಆಗಸ್ಟ್ ತಿಂಗಳಲ್ಲಿ ವಿಶೇಷ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಒಟ್ಟು 609 ಮಕ್ಕಳನ್ನು ಕಡಿಮೆ ತೂಕದ ಮಕ್ಕಳು ಎಂದು ಗುರುತಿಸಲಾಗಿತ್ತು. ಇವರಲ್ಲಿ 83 ಮಕ್ಕಳಿಗೆ ಬಾಲಸಂಜೀವಿನಿ ಯೋಜನೆಯಡಿ ನಗರದ ವೆನ್ಲಾಕ್, ಯೆನಪೋಯ, ಎ ಜೆ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೊಳಪಡಿಸಲಾಗಿದ್ದು, ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಗಮನಹರಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಶ್ರೀಮತಿ ಗಟ್ರೂಡ್ ವೇಗಸ್ ಅವರು ಅಧ್ಯಕ್ಷರ ಪ್ರಶ್ನೆಗೆ ಉತ್ತರಿಸಿದರು.
ಮುಂದಿನ ಕೆಡಿಪಿ ಸಭೆಗೆ ಮುಂಚಿತವಾಗಿ ಎಲ್ಲ ಅಂಗನವಾಡಿಗಳಲ್ಲಿ ವಿದ್ಯುದ್ದೀಕರಣ ಸಂಪೂರ್ಣಗೊಳಿಸಬೇಕೆಂದು ಅಧ್ಯಕ್ಷರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಒಟ್ಟು 2102 ಅಂಗನವಾಡಿ ಕೇಂದ್ರಗಳಿದ್ದು, 1624 ಸ್ವಂತ ಕಟ್ಟಡ ಹೊಂದಿದೆ. 1604 ಅಂಗನವಾಡಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ ಎಂದು ಉಪನಿದರ್ೇಶಕರು ಸಭೆಗೆ ಮಾಹಿತಿ ನೀಡಿದರು.
ನಿಮರ್ಿತಿ ಕೇಂದ್ರದಿಂದ ಕೈಗೆತ್ತಿಕೊಳ್ಳಲಾದ ಮಳೆ ನೀರಿನ ಕೊಯ್ಲಿನ ಕಾಮಗಾರಿ ವ್ಯವಸ್ಥೆ ಕಲ್ಪಿಸಿರುವ ಶಾಲೆಗಳ ಪೈಕಿ 399 ಶಾಲೆಗಳಲ್ಲಿ ಮಾಹಿತಿ ಕಲೆ ಹಾಕಿದ್ದು, 118 ಶಾಲೆಗಳಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ ಸುಸ್ಥಿತಿಯಲ್ಲಿದೆ. 281 ಶಾಲೆಗಳಲ್ಲಿ ಮಳೆ ಕೊಯ್ಲು ವ್ಯವಸ್ಥೆ ದುರಸ್ತಿಯ ಅಗತ್ಯವಿದೆ. ಈ ಎಲ್ಲ ದುರಸ್ತಿಗೆ ಅಂದಾಜು 20 ಲಕ್ಷ ರೂ. ಅನುದಾನ ಬೇಕಿದೆ ಎಂದು ಶಿಕ್ಷಣ ಅಧಿಕಾರಿಗಳು ಮಾಹಿತಿ ನೀಡಿದರು.
ಚಾಮರ್ಾಡಿಯಿಂದ ಉಜಿರೆಗೆ ಶೀಘ್ರದಲ್ಲೇ ಹೆಚ್ಚಿನ ಬಸ್ಸುಗಳನ್ನು ಪುತ್ತೂರು ವಿಭಾಗದಿಂದ ಆರಂಭಿಸುವುದಾಗಿ ಕನರ್ಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅಧಿಕಾರಿಗಳು ಮಾಹಿತಿ ನೀಡಿದರು. ಇದೇ ರೀತಿ ಮಂಗಳೂರು ಸುಬ್ರಹ್ಮಣ್ಯಕ್ಕೆ ಸಂಚರಿಸುವ ಬಸ್ಸುಗಳು ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿಗದಿತ ಕಾಲಕ್ಕೆ ನಿಯಮಿತವಾಗಿ ಕಾಯರ್ಾಚರಿಸಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಲಾಗಿದೆ ಎಂದರು. ಬಸ್ಸುಗಳನ್ನು ಸ್ವಚ್ಛ ಹಾಗೂ ಸುಂದರವಾಗಿರಿಸಲು ಕ್ರಮಕೈಗೊಂಡಿರುವುದಕ್ಕೆ ಅಧ್ಯಕ್ಷರು ಕ. ರಾ. ರಸ್ತೆ ಸಾರಿಗೆ ನಿಗಮದವರನ್ನು ಅಭಿನಂದಿಸಿದರು.
ಬಿಸಿಎಂ ಮತ್ತು ಐಟಿಡಿಪಿ ಇಲಾಖಾ ಹಾಸ್ಟೆಲ್ ಗಳಲ್ಲಿ ಇರುವ ಎಲ್ಲ ಅಡುಗೆಯವರ ನಿಯೋಜನೆ ರದ್ದುಪಡಿಸಿ ಎಂದು ಅಧ್ಯಕ್ಷರು ಸೂಚನೆ ನೀಡಿದರು.
ಜಿಲ್ಲೆಯ 203 ಪಂಚಾಯಿತಿಯಲ್ಲಿ ಕನಿಷ್ಠ ಪಂಚಾಯಿತಿ ಕಾರ್ಯದರ್ಶಿ ಅಥವಾ ಪಿಡಿಒ ಗಳಿರಲೇಬೇಕೆಂದ ಅಧ್ಯಕ್ಷರು, ಪ0ಚಾಯಿತಿ ಅಭಿವೃದ್ಧಿಗೆ ಇದು ಅತ್ಯಗತ್ಯ. ಹಾಗಾಗಿ ಜಿಲ್ಲಾ ಪಂಚಾಯತ್ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ ಎಂದರು. ಆಶ್ರಯ ಯೋಜನೆಯಡಿ ಜಮೀನು ಕಾದಿರಿಸಿ ಹಕ್ಕುಪತ್ರ ನೀಡಲು ವಿಳಂಬ ಮಾಡುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಮುಂದಿನ ಕೆಡಿಪಿಗೆ ಹತ್ತು ದಿನ ಮುಂಚಿತವಾಗಿ ಈ ಬಗ್ಗೆ ಅಧಿಕಾರಿಗಳು ಸಮಗ್ರ ಮಾಹಿತಿ ನೀಡದಿದ್ದರೆ ಪ್ರಗತಿ ಪರಿಶೀಲನೆ ಸಭೆಯೇ ಕರೆಯುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದರು. ತಾಲೂಕುವಾರು ಇಒಗಳಿಂದ ಪ್ರಗತಿ ವಾಚಿಸಿದ ಅಧ್ಯಕ್ಷರು, ಅರ್ಹರಿಗೆ ಹಕ್ಕುಪತ್ರ ನೀಡಲು ಸಮಯಮಿತಿ ನಿಗದಿಪಡಿಸಿದರು.
ತೋಟಗಾರಿಕಾ ಇಲಾಖೆಯಲ್ಲಿ ಗೊಬ್ಬರ ವಿತರಣೆಯಲ್ಲಿ ಅವ್ಯವಹಾರ ಹಾಗೂ ಈ ಸಂಬಂಧದ ದೂರುಗಳ ಬಗ್ಗೆ ಸಮಗ್ರ ತನಿಖೆಗೆ ರಾಷ್ಟ್ರೀಯ ಮಾಧ್ಯಮ ಶಿಕ್ಷಣ ಅಭಿಯಾನದ ಅಧಿಕಾರಿ ಶಿವರಾಮಯ್ಯ ಅವರಿಗೆ ಹೊಣೆಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರು ವಹಿಸಿದರು.
ಕೆಡಿಪಿ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ  ರಿತೇಶ್ ಶೆಟ್ಟಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಫಕೀರ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ  ಶ್ರೀಮತಿ ಆಶಾ ತಿಮ್ಮಪ್ಪ ಗೌಡ, ಕೃಷಿ ಮತ್ತು ಕೈಗಾರಿಕಾ ಶಿಕ್ಷಣ ಸ್ಥಾಯಿಸಮಿತಿಯ ಶ್ರೀಮತಿ ಜಯಶ್ರೀ, ಸಿಇಒ ತುಳಸಿಮದ್ದಿನೇನಿ, ಉಪಕಾರ್ಯದರ್ಶಿ ಎನ್ ಆರ್ ಉಮೇಶ್ ಉಪಸ್ಥಿತರಿದ್ದರು. 

Friday, September 13, 2013

ಎಪಿಎಲ್ ಕುಟುಂಬಕ್ಕೂ ಆರೋಗ್ಯ ಶ್ರೀ: ಖಾದರ್

ಮಂಗಳೂರು,ಸೆಪ್ಟೆಂಬರ್.13: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 12 ಆಸ್ಪತ್ರೆಗಳನ್ನು ವಾಜಪೇಯಿ ಆರೋಗ್ಯಶ್ರೀ ಯೋಜನೆಯಡಿ ಆರೋಗ್ಯ ಸೌಲಭ್ಯಗಳನ್ನು ನೀಡಲು ಆರಿಸಲಾಗಿದ್ದು, ಅರ್ಹ ಫಲಾನುಭವಿಗಳಿಗೆ ಸುವರ್ಣ ಸುರಕ್ಷಾ ಆರೋಗ್ಯ ಟ್ರಸ್ಟ್ ಮೂಲಕ ಉಚಿತ ಆರೋಗ್ಯ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
 ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಯೋಜನೆಯ ಮೂಲಕ ಎಪಿಎಲ್ ಕುಟುಂಬದ ಸದಸ್ಯರು, ಶಿಕ್ಷಕರು, ಮಧ್ಯಮ ವರ್ಗ ಹಾಗೂ ಸರಕಾರಿ ನೌಕರ ವೃಂದಕ್ಕೆ ಉಚಿತವಾಗಿ ಆರೋಗ್ಯ ಸೇವೆ ಒದಗಿಸುವ ಯೋಜನೆ ರೂಪಿಸಲಾಗಿದೆ ಎಂದರು. ಮೈಸೂರು, ರಾಯಚೂರು ಮತ್ತು ಮಂಗಳೂರಿನಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗುವುದು. ವಾಜಪೇಯಿ ಆರೋಗ್ಯ ಶ್ರೀ ಯೋಜನೆಯ ಮುಂದುವರಿದ ಭಾಗವಾಗಿ ಈ ಯೋಜನೆ ಜಾರಿಯಾಗುತ್ತಿದೆ ಎಂದರು.
ವಾಜಪೇಯಿ ಆರೋಗ್ಯ ಶ್ರೀ ಯೋಜನೆಯಡಿ ಹೃದ್ರೋಗ, ಕ್ಯಾನ್ಸರ್, ನರರೋಗ, ಮೂತ್ರಪಿಂಡದ ಕಾಯಿಲೆ, ಸುಟ್ಟಗಾಯ, ಅಪಘಾತ, ನವಜಾತ ಶಿಶುಗಳಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಸಂಬಂಧಿಸಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯದ 147 ಆಸ್ಪತ್ರೆಗಳಲ್ಲಿ ಇದಕ್ಕೆ ಅವಕಾಶ ಕಲ್ಪಿಸಲಾಗಿದೆ..
ಯೋಜನೆಯ ಕುರಿತು ಮಾಹಿತಿ ನೀಡಲು ಪ್ರತಿ ಆಸ್ಪತ್ರೆಯಲ್ಲಿ `ಆರೋಗ್ಯ ಮಿತ್ರ' ಕೌಂಟರ್ ಇರಲಿದ್ದು ಅವರು ಸೇವೆಯ ಕುರಿತು ಅರ್ಹ ಫಲಾನುಭವಿಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ನೆರವು ನೀಡಲಿರುವರು. ಚಿಕ್ಕಮಗಳೂರು, ಮಂಗಳೂರು ಮತ್ತು ಕೊಡಗಿನಲ್ಲಿ ಈಗಾಗಲೇ 70 ಆರೋಗ್ಯ ಮಿತ್ರರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ ಸಚಿವರು, ಆರೋಗ್ಯ ಸೇವೆಯಿಂದ ಯಾರೂ ವಂಚಿತವಾಗಬಾರದು. ಆದ್ದರಿಂದ ರಾಜ್ಯದ ಪ್ರತಿಯೊಬ್ಬರೂ ಯಾವುದಾದರೊಂದು ಆರೋಗ್ಯ ಕಾರ್ಡು ಹೊಂದಿರುವಂತೆ ಆದ್ಯತೆ ನೀಡಲಾಗಿದೆ ಎಂದರು.
ಎಂಡೋ ಪಾಲನಾ ಸಮಿತಿಗೆ  ರೂ.50 ಲಕ್ಷ
ಎಂಡೋ ಪೀಡಿತರ ಸಮಸ್ಯೆಯನ್ನು ಬಗೆಹರಿಸಲು ಸರಕಾರ ಬದ್ಧವಾಗಿದೆ. ಈಗಾಗಲೇ ಎರಡು ಪಾಲನಾ ಸಮಿತಿಗಳಿಗೆ ಎಂಡೋ ಪೀಡಿತರ ವಾಷರ್ಿಕ ನಿರ್ವಹಣೆಗಾಗಿ ತಲಾ ರೂ.25 ಲಕ್ಷ ಒದಗಿಸುತ್ತಿದ್ದು, ಇನ್ನು ಮುಂದೆ ತಲಾ ರೂ.50 ಲಕ್ಷ ನೀಡಲಾಗುವುದು ಎಂದು ಮಾಹಿತಿ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಸುವರ್ಣ ಸುರಕ್ಷಾ ಆರೋಗ್ಯ ಟ್ರಸ್ಟ್ ವಾಜಪೇಯಿ ಆರೋಗ್ಯ ಶ್ರೀ ಯ ಕಾರ್ಯನಿರ್ವಾಹಕ ನಿರ್ದೇಶಕ ಡಾ ಸಿ ಬೋರೇಗೌಡ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ನ ಡಾ.ಎನ್.ರಮೇಶ್ ಉಪಸ್ಥಿತರಿದ್ದರು.
ಸೇವಾ ಮನೋಭಾವ ಬೆಳೆಸಿಕೊಳ್ಳಿ: ಆರೋಗ್ಯ ಮಿತ್ರ ತರಬೇತಿ ಉದ್ಘಾಟಿಸಿ ಆರೋಗ್ಯ ಸಚಿವರು
ಮಂಗಳೂರು: ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳುವುದರೊಂದಿಗೆ ಬರುವ ರೋಗಿಗಳ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸಿ ಯೋಜನೆಗಳು ತಳ ಮಟ್ಟದ ಜನತೆಗೂ ತಲುಪುವಲ್ಲಿ `ಆರೋಗ್ಯ ಮಿತ್ರರು' ನೆರವಾಗಬೇಕು. ಆರೋಗ್ಯ ಮಿತ್ರರ ಉತ್ತಮ ಸೇವೆಯಿಂದ ಇಲಾಖೆಗೂ ಉತ್ತಮ ಹೆಸರು ಬರಲು ಸಾಧ್ಯ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.
ಸುವರ್ಣ ಆರೋಗ್ಯ ಸುರಕ್ಷ ಟ್ರಸ್ಟ್ ಆಶ್ರಯದಲ್ಲಿ ಶುಕ್ರವಾರ ನಗರದ ಐಎಂಎ ಸಭಾಂಗಣದಲ್ಲಿ ಏರ್ಪಡಿಸಿದ್ದ ವಾಜಪೇಯಿ ಆರೋಗ್ಯ ಶ್ರೀ ಜಿಲ್ಲಾ ವ್ಯವಸ್ಥಾಪಕ ಮತ್ತು ಆರೋಗ್ಯ ಮಿತ್ರ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ತಮ್ಮ ಕರ್ತವ್ಯದ ಮಹತ್ವವನ್ನು ಅರಿತುಕೊಂಡು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಸೇವಾ ಬದ್ಧತೆಯಿಂದ ಕೆಲಸ ಮಾಡಿದ್ದಲ್ಲಿ ಇಲಾಖೆ ಕೂಡ ಹೆಚ್ಚಿನ ಸವಲತ್ತು ಒದಗಿಸಲಿದೆ. ಸೇವೆಗೆ ಸೇರ್ಪಡೆಗೊಂಡ ಬಳಿಕ ತಮಗೆ ವೇತನ ಹೆಚ್ಚಿಸಿ, ಇನ್ನಷ್ಟು ಸವಲತ್ತು ನೀಡಿ ಎಂದು ಪ್ರತಿಭಟನೆಗೆ ಮುಂದಾಗಿ ಆರೋಗ್ಯ ಸೇವೆಯ ಮಹತ್ವವನ್ನು ಮರೆಯಬಾರದು.  ಸೇವೆಗೆ ಸೇರುವ ಮುನ್ನವೇ ಈ ಬಗ್ಗೆ ಯೋಚಿಸುವುದು ಒಳಿತು ಎಂದ ಸಚಿವರು, ವಾಜಪೇಯಿ ಆರೋಗ್ಯ ಶ್ರೀ ಯೋಜನೆಯಡಿ ಸೇವೆ ಸಲ್ಲಿಸಲು ಸೇರ್ಪಡೆಯಾಗಿರುವ `ಆರೋಗ್ಯ ಮಿತ್ರರಿಗೆ ಸೂಚನೆ ನೀಡಿದರು.
ವಾಜಪೇಯಿ ಆರೋಗ್ಯ ಶ್ರೀ ಯೋಜನೆಯ ಕುರಿತು ಆಸ್ಪತ್ರೆಗಳ ಪ್ರತಿ ಆರೋಗ್ಯ ಮಿತ್ರ ಕೌಂಟರ್ನಲ್ಲಿ ಫಲಕಗಳನ್ನು ಅಳವಡಿಸಬೇಕು. ಪ್ರತಿಯೊಬ್ಬರಿಗೂ ಆರೋಗ್ಯ ಸೇವೆಯ ಸಮರ್ಪಕ ಮಾಹಿತಿ ಲಭ್ಯವಾಗಬೇಕು. ಆರೋಗ್ಯ ಮಿತ್ರರು ರಾಜಕೀಯ ಪ್ರಭಾವಕ್ಕೆ ಒಳಗಾಗದೆ ಜನಸಾಮಾನ್ಯರೊಂದಿಗೆ ಬೆರೆತು ಕೆಲಸ ಮಾಡಬೇಕು ಎಂದು ಸಚಿವರು ತಿಳಿಸಿದರು.

ಆಶಾ ಕಾರ್ಯಕರ್ತೆಯರ ಸಮಸ್ಯೆಯನ್ನು ಆಲಿಸಿದ ಆರೋಗ್ಯ ಸಚಿವರು

ಮಂಗಳೂರು, ಸೆಪ್ಟೆಂಬರ್ 13 : ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ಆಶಾ ಕಾರ್ಯಕರ್ತರಿಗೆ ನೀಡುವ ಸಂಭಾವನೆಯಷ್ಟೇ ಮ್ಯಾಚಿಂಗ್ ಗ್ರ್ಯಾಂಟ್ ನ್ನು ರಾಜ್ಯ ಸರ್ಕಾರದಿಂದ ನೀಡಲು ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು ಟಿ ಖಾದರ್ ಅವರು ಹೇಳಿದರು.
ಅವರಿಂದು ಮಂಗಳೂರು ತಾಲೂಕು ಪಂಚಾಯಿತಿಯ ಸಾಮಥ್ರ್ಯ ಸೌಧದಲ್ಲಿ ಆಶಾ ಕಾರ್ಯಕರ್ತೆಯರಿಗೆ ಆಯೋಜಿಸಲಾದ ತರಬೇತಿ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕರ್ತೆಯರ ಸಮಸ್ಯೆಗಳನ್ನು ಆಲಿಸಿ ಸ್ಪಂದಿಸುವ ಭರವಸೆ ನೀಡಿದರು.
ಆಶಾ ಕಾರ್ಯಕರ್ತೆಯರ ಸಮಸ್ಯೆಗಳ ಅರಿವು ತಮಗಿದ್ದು, ಇದು ಕೇಂದ್ರ ಸರ್ಕಾರದ ನೀತಿ ನಿರೂಪಣೆಯಡಿ ಬರುವುದರಿಂದ ರಾಜ್ಯ ಸರ್ಕಾರ ಪ್ರತ್ಯೇಕ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ; ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆ ಆರೋಗ್ಯ ವ್ಯವಸ್ಥೆಯಲ್ಲಿ ಉತ್ತಮವಾಗಿದೆ. ಹಾಗಾಗಿ ದುಡಿದದ್ದಕ್ಕೆ ಸಂಭಾವನೆಯಡಿ  ಇಲ್ಲಿರುವ ಆಶಾ ಕಾರ್ಯಕರ್ತೆಯರಿಗೆ ಕೊಡುವ ಸಂಭಾವನೆ ಕಡಿಮೆ ಎಂಬುದನ್ನು ಸಚಿವರು ಒಪ್ಪಿಕೊಂಡರು.
ಈಗ ವಾಜಪೇಯಿ ಆರೋಗ್ಯ ಶ್ರೀ ಯೋಜನೆಯಡಿ ರೋಗಿಗಳನ್ನು ಗುರುತಿಸಿ ಆಸ್ಪತ್ರೆಗೆ ಕರೆತರುವ ಆಶಾ ಕಾರ್ಯಕರ್ತೆಯರಿಗೆ 200ರೂ. ಅದರಲ್ಲೂ ರೋಗಿಗಳು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದರೆ ಇನ್ನೂ 100 ರೂ. ಅಧಿಕ ನೀಡಲು ಅವಕಾಶವಿದೆ. ಈ ಯೋಜನೆಯ ಉದ್ದೇಶ ಎಲ್ಲರಿಗೂ ಆರೋಗ್ಯ ಎಂದು ಸಚಿವರು ವಿವರಿಸಿದರು. ಆಶಾ ಕಾರ್ಯಕರ್ತೆಯರು ಎಪಿಎಲ್ ಕಾರ್ಡುಗಳಿಂದಾಗುತ್ತಿರುವ ತೊಂದರೆಯನ್ನು ಸಚಿವರ ಗಮನಕ್ಕೆ ತಂದಾಗ, ಈಗಾಗಲೇ ಸಮಸ್ಯೆ ತಮ್ಮ ಗಮನಕ್ಕೆ ಬಂದಿದ್ದು, ಈ ಬಗ್ಗೆ ಶೀಘ್ರವೇ ಹೊಸ ನೀತಿಯನ್ನು ಜಾರಿಗೆ ತರುವುದಾಗಿ ಹೇಳಿದರು.
ಸಮಸ್ಯೆಗಳನ್ನು ಲಿಖಿತವಾಗಿ ಬರೆದು ತಮಗೆ ನೀಡುವುದರಿಂದ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟವರ ಗಮನ ಸೆಳೆಯಲು ತಮಗೆ ಅನಕೂಲವಾಗಲಿದೆ. ಹಾಗಾಗಿ ಎಲ್ಲ ಸಮಸ್ಯೆಗಳನ್ನು ಬರಹ ರೂಪದಲ್ಲಿ ಕೊಡಿ ಎಂದು ಸಚಿವರು ಆಶಾ ಕಾರ್ಯಕರ್ತೆಯರಲ್ಲಿ ಹೇಳಿದರು.
ಸಚಿವರ ಜೊತೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಎನ್ ಎಸ್ ಕರೀಂ ಉಪಸ್ಥಿತರಿದ್ದರು.

Thursday, September 12, 2013

ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡಲು ಕಲಿಕೋತ್ಸವ


ಮಂಗಳೂರು,ಸೆಪ್ಟೆಂಬರ್.12: ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ವಿದ್ಯಾರ್ಥಿಗಳಿಗೆ ನೀಡಲು ಕಲಿಕೋತ್ಸವ ಎನ್ನುವ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಕ್ಕಳಲ್ಲಿ ಕಲಿಕೆ ಹಾಗೂ ಕಲಿಕಾ ಖಾತರಿಯನ್ನು ಆಚರಿಸುವುದೇ ಕಲಿಕೋತ್ಸವ ಎಂದು ಯುವ ಜನ ಸೇವೆ ಮತ್ತು ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಹೇಳಿದರು.
ಇಂದು ನಗರದ ಗಾಂಧಿನಗರದ ಬಿಆರ್ ಸಿಯಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಸರ್ವ ಶಿಕ್ಷಣ ಅಭಿಯಾನದಡಿ ಕೇಂದ್ರ ಸರ್ಕಾರ ನೀಡಿದ ಅನುದಾನದ ಸದ್ವಿನಿಯೋಗದಲ್ಲಿ ರಾಜ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಎಂದು ಅವರು ನುಡಿದರು.
ಪರಿಣಾಮಕಾರಿ ಬೋಧನಾ, ಸ್ಪಷ್ಟ ಓದು, ಶುದ್ಧ ಬರಹ, ಸರಳ ಗಣಿತ, ಸಾಮಥ್ರ್ಯ ವಿಕಾಸ ಅಭಿವ್ಯಕ್ತಿಗೆ ಉತ್ತಮ ವೇದಿಕೆ, ವಿಶೇಷ ಕಲಿಕೆ ಸಾಧಿಸಿದ ಮಕ್ಕಳು ಇತರ ಮಕ್ಕಳಿಗೆ ಪ್ರೇರಣೆ ನೀಡುವಂತೆ ಸಮಾಜದ ಪ್ರೋತ್ಸಾಹ ಕಲಿಕೋತ್ಸವದ ಉದ್ದೇಶವಾಗಿದ್ದು, ವಿವಿಧ ಹಂತಗಳಲ್ಲಿ 1ರಿಂದ 5 ನೇ ತರಗತಿ ಹಾಗೂ 6ರಿಂದ 8ನೇ ತರಗತಿಯ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುವುದು.
ಸರ್ವ ಶಿಕ್ಷಣ ಅಭಿಯಾನದಡಿ ಕ್ಷೇತ್ರ ಸಂಪನ್ಮೂಲ ಕೇಂದ್ರದ ಮಂಗಳೂರು ಉತ್ತರ ವಲಯದಲ್ಲಿ 2012-13ನೇ ಸಾಲಿನಲ್ಲಿ ಮಂಗಳೂರು ಉತ್ತರ ವಲಯಕ್ಕೆ ಒಟ್ಟು 2,23,86,568 ರೂ.ಬಿಡುಗಡೆ ಮಾಡಲಾಗಿದ್ದು, 2,22,59,700 ರೂ.ಗಳನ್ನು ಬಳಕೆ ಮಾಡಿರುವ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಮಂಗಳೂರು ಉತ್ತರ ವಲಯಕ್ಕೆ ಸಂಬಂಧಿಸಿದಂತೆ ಅನುಷ್ಠಾನಗೊಂಡ ಕಾರ್ಯಕ್ರಮಗಳ ದಾಖಲೀಕರಣದ ಪ್ರತಿಯನ್ನು ಬಿಡುಗಡೆಗೊಳಿಸಿದ ಅವರು, ಪ್ರಸಕ್ತ ಸಾಲಿನಲ್ಲಿ 26 ಕೋ.ರೂ. ಬಂದಿದೆ ಎಂದರು. 1-8-2012ರಿಂದ ಮಂಗಳೂರು ತಾಲೂಕು ಮತ್ತು ಮಂಗಳೂರು ನಗರ ವಲಯದ ಶಾಲೆಗಳನ್ನು ಸಮಾನವಾಗಿ ವಿಂಗಡಿಸಿ ಮಂಗಳೂರು ಉತ್ತರ ವಲಯ ಮತ್ತು ಮಂಗಳೂರು ದಕ್ಷಿಣ ಎಂದು ನಾಮಕರಣ ಮಾಡಲಾಗಿದೆ. ಅದರಂತೆ ಮಂಗಳೂರು ಉತ್ತರ ವಲಯಕ್ಕೆ ಈ ಹಿಂದೆ ಇದ್ದ 200 ಶಾಲೆಗಳಿಗೆ ಬದಲಾಗಿ 117 ಶಾಲೆಗಳು ಮಂಗಳೂರು ತಾಲೂಕಿನಿಂದ ಉತ್ತರ ವಲಯಕ್ಕೆ ಸೇರ್ಪಡೆಗೊಂಡಿದೆ. ಇದರಿಂದಾಗಿ ಉತ್ತರ ವಲಯದಲ್ಲಿ ಒಟ್ಟು 317 ಶಾಲೆಗಳಿವೆ. ಇವುಗಳಲ್ಲಿ 102 ಸರಕಾರಿ, 85 ಅನುದಾನಿತ ಶಾಲೆಗಳು, ಉಳಿದವರು ಅನುದಾನರಹಿತ ಶಾಲೆಗಳಾಗಿದ್ದು, 15 ಕ್ಲಸ್ಟರ್ ಗಳಿವೆ. ಪ್ರತೀ ಕ್ಲಸ್ಟರ್ ಗಳಿಗೆ 20ರಿಂದ 25 ಶಾಲೆಗಳಿವೆ. ಇದರಿಂದ ಮಕ್ಕಳ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಲು ಸಾಧ್ಯವಾಗಿದೆ ಎಂದರು.
ಉಚಿತ ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ ಶಾಲೆಗಳಲ್ಲಿ ಮೂಲ ಸೌಕರ್ಯವನ್ನು ಒದಗಿಸುವುದರ ಮೂಲಕ ಮಕ್ಕಳನ್ನು ಶಾಲೆಯತ್ತ ಪ್ರೇರೇಪಿಸಲು ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಶಿಕ್ಷಕರ ನೇಮಕ, ಅಕ್ಷರ ದಾಸೋಹ, ವಿದ್ಯಾರ್ಥಿ ವೇತನ, ಉಚಿತ ಪಠ್ಯ ಪುಸ್ತಕ, ಸಮವಸ್ತ್ರ ವಿತರಣೆ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಅಲ್ಲದೇ ಹೆಚ್ಚುವರಿ ಕೊಠಡಿ, ಶೌಚಾಲಯಗಳ ನಿರ್ಮಾಣ, ಆವರಣ ಗೋಡೆ ನಿರ್ಮಾಣ, ಕುಡಿಯುವ ನೀರು, ವಿದ್ಯುಚ್ಛಕ್ತಿ ವ್ಯವಸ್ಥೆ, ದುರಸ್ತಿ ಕಾರ್ಯಕ್ಕೆ ಒತ್ತು ನೀಡಲಾಗಿದೆ ಎಂದರು.
ಶಾಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕಲಿಕಾ ಸಾಧನೆ ಆಗುತ್ತಿದೆಯೇ ಎನ್ನುವುದನ್ನೂ ದಾಖಲೀ ಕರಣ ಗೊಳಿಸಲಾಗುತ್ತಿದೆ. ಶಾಲಾ ಹಂತ, ಕ್ಲಸ್ಟರ್ ಹಂತ, ಬ್ಲಾಕ್ ಹಂತ ಹೀಗೆ ಮೂರು ಹಂತಗಳಲ್ಲಿ ಒಟ್ಟು 18 ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. ಪ್ರತಿ ಬ್ಲಾಕ್ ಗೆ 50,000 ರೂ.ದಂತೆ ಕ್ಲಸ್ಟರ್ಗಳಿಗೆ 30 ಸಾವಿರ ರೂ. ಬ್ಲಾಕ್ಗಳಿಗೆ 20 ಸಾವಿರ ರೂ.ಕಲಿಕೋತ್ಸವಕ್ಕೆ ಬಳಸಲಾಗುತ್ತಿದೆ ಎಂದರು.
ಶಾಸಕ ಜೆ.ಆರ್.ಲೋಬೋ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಜಯಂತಿ ಆಚಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ, ಕ್ಷೇತ್ರ ಸಮನ್ವಯಾಧಿಕಾರಿ ಪೀತಾಂಬರ ಉಪಸ್ಥಿತರಿದ್ದರು.

Tuesday, September 10, 2013

ಪಿಂಚಣಿ ಅದಾಲತ್ ಗೆ ಚಾಲನೆ

ಮಂಗಳೂರು, ಸೆಪ್ಟೆಂಬರ್.10:ಮಂಗಳೂರಿನ ಉಳ್ಳಾಲ- ತೊಕ್ಕೊಟು ಕಾಪಿಕಾಡ್ ಅಂಬಿಕಾರೋಡ್ ಗಟ್ಟಿ ಸಮಾಜ ಭವನದಲ್ಲಿ ಕಂದಾಯ ಇಲಾಖೆಯ ಮಂಗಳೂರು ತಾಲೂಕು ಬಿ. ಹೋಬಳಿಯ 22 ಗ್ರಾಮಗಳ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಉದ್ಘಾಟಿಸಿ 103 ಫಲಾನುಭವಿಗಳಿಗೆ ಪಿಂಚಣಿ ಪತ್ರವನ್ನು ಹಸ್ತಾಂತರ ಮಾಡಿದರು. ಸಹಾಯಕ ಆಯುಕ್ತ ಡಾ. ಪ್ರಶಾಂತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
 ಮಂಗಳೂರು ತಾಲೂಕು ತಹಶೀಲ್ದಾರ್ ಕೆ. ಮೋಹನ್ ರಾವ್, ಜಿಲ್ಲಾ ಪಂಚಾಯಿತಿ ಸದಸ್ಯ ಸತೀಶ್ ಕುಂಪಲ,  ತಾಲೂಕು ಪಂಚಾಯಿತಿ ಸದಸ್ಯ ಮಹಮ್ಮದ್ ಮುಸ್ತಾಫ, ತಾಲೂಕು ಪಂಚಾಯಿತಿ ಸದಸ್ಯ ಮಹಮ್ಮದ್ ಮೋನು, ಉಳ್ಳಾಲ ಪುರಸಭಾ ಮಾಜಿ ಅಧ್ಯಕ್ಷ ಬಾಝಿಲ್ ಡಿ.ಸೋಜ, ಸದಸ್ಯರಾದ ಗಿರಿಜಾ ಬಾ, ರಝೀಯಾ ಇಬ್ರಾಹಿಂ, ಮಹಮ್ಮದ್ ಮುಕ್ಕಚ್ಚೇರಿ ಹಾಗೂ ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಸ್ಥಿತರಿದ್ದರು.


Thursday, September 5, 2013

ಶಿಕ್ಷಕರಲ್ಲಿ ವೃತ್ತಿ ಗೌರವ ಸದಾ ಇರಲಿ: ಜಿಲ್ಲಾ ಉಸ್ತುವಾರಿ ಸಚಿವರು

ಮಂಗಳೂರು, ಸೆಪ್ಟೆಂಬರ್ 05:- ಸಂಪೂರ್ಣ ಸಾಕ್ಷರ ಜಿಲ್ಲೆ; ಬುದ್ದಿವಂತರ ಜಿಲ್ಲೆ ಎಂದು ದಕ್ಷಿಣ ಕನ್ನಡ ಜಿಲ್ಲೆ ಹೆಸರಾಗಿದ್ದು ಇದರಲ್ಲಿ ಶಿಕ್ಷಕರ ಕೊಡುಗೆ ಅಪಾರ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರೂ ಆಗಿರುವ  ಬಿ. ರಮಾನಾಥ ರೈ ಅವರು ಹೇಳಿದರು.
ಅವರಿಂದು ಜಿಲ್ಲಾ ಮಟ್ಟದ ಶಿಕ್ಷಕ ದಿನಾಚರಣೆ ಹಾಗೂ ಗುರುವಂದನಾ ಸಮಾರಂಭವನ್ನು ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪ ಸಭಾಂಗಣ, ಬಂಟ್ವಾಳದಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಿಕ್ಷಕರು ಸಮಾಜಕ್ಕೆ ಮಾದರಿಯಾಗಿರಬೇಕು. ಆರೋಗ್ಯವಂತ ಸಮಾಜ ನಿಮರ್ಾಣದಲ್ಲಿ ಶಿಕ್ಷಕರ ಹೊಣೆ ಹಿರಿದು ಮತ್ತು ಮಹತ್ವದ್ದು. ಬದಲಾಗುತ್ತಿರುವ ವ್ಯವಸ್ಥೆಯಲ್ಲಿ ಶಿಕ್ಷಕರು ತಮ್ಮ ವೃತ್ತಿಯ ಬಗ್ಗೆ ಗೌರವ ಇರಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶಕರಾಗಬೇಕೆಂದರು.
ಆರೋಗ್ಯ ಸಚಿವ ಯು ಟಿ ಖಾದರ್ ಅವರು ಸಮಾರಂಭವನ್ನುದ್ದೇಶಿಸಿ ಮಾತನಾಡಿ, ಶಿಕ್ಷಕರ ದಿನಾಚರಣೆಯನ್ನು ಕೋಲಾರದಲ್ಲಿ ಆಚರಿಸದೆ ತಮ್ಮ ಶಿಕ್ಷಕರು ಹಾಗೂ ಭವಿಷ್ಯ ರೂಪಿಸಿದವರ ಮೇಲಿನ ಪ್ರೀತಿಯಿಂದ ತಮ್ಮ ಊರಲ್ಲಿ ಆಚರಿಸಿ, ಶಿಕ್ಷಕರ ಆಶೀರ್ವಾದ ಪಡೆಯಲು ಆಗಮಿಸಿರುವುದಾಗಿ ನುಡಿದರು. ಆರೋಗ್ಯ ಇಲಾಖೆಯಲ್ಲಿದ್ದರೂ ಶಿಕ್ಷಣ ಇಲಾಖೆ, ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ನಿಗಾ ಇರಿಸಲು ಶಾಲಾ ಆರೋಗ್ಯ ತಂಡವೊಂದನ್ನು ರಚಿಸಿದ್ದು ಈ ತಂಡದಲ್ಲಿ ಒಬ್ಬ ಡಾಕ್ಟರ್ ಮತ್ತು ದಾದಿ ಇರುತ್ತಾರೆ. ಇವರು ತಮ್ಮ ವ್ಯಾಪ್ತಿಯ ಶಾಲೆಗಳ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸುವರು. ಗಜೆಟೆಡ್ ಹುದ್ದೆ ಹೊರತುಪಡಿಸಿ ಸರ್ಕಾರಿ ನೌಕರರನ್ನು ಆರೋಗ್ಯ ಸಂಜೀವಿನಿ ವ್ಯಾಪ್ತಿಗೆ ಒಳಪಡಿಸಲಾಗುವುದು ಎಂದರು.
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ. ವರ್ಗಾವಣೆ ನೀತಿಯನ್ನು ರೂಪಿಸಲಾಗುವುದು; ಕೌನ್ಸಿಲಿಂಗ್ ವ್ಯವಸ್ಥೆಯನ್ನು ಉತ್ತಮಪಡಿಸಲಾಗುವುದಲ್ಲದೆ ಈ ಸಂಬಂಧ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಲಾಗುವುದು ಎಂದರು.
ಶೈಕ್ಷಣಿಕ ವ್ಯವಸ್ಥೆಗೆ ಪೂರಕವಾದ ಆರೋಗ್ಯ ಪರಿಸರ ನಿರ್ಮಾಣವೇ ಸರ್ಕಾರದ ಧ್ಯೇಯ ಎಂದ ಸಚಿವರು, ದೇಶದ ಭವಿಷ್ಯ ನಿರ್ಮಾಣ ಶಿಕ್ಷಕರ ಕೈಯ್ಯಲಿದ್ದು, ಅವರಿಗೆ ಎಲ್ಲ ಸೌಕರ್ಯಗಳನ್ನು ಒದಗಿಸಲಾಗುವುದು ಎಂದರು.
ಸಮಾರಂಭದ ಸಂಪನ್ಮೂಲ ವ್ಯಕ್ತಿಗಳಾಗಿ ವಿಶೇಷ ಉಪನ್ಯಾಸ ನೀಡಿದ ವಿವೇಕಾನಂದ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ ಮಾಧವ ಭಟ್ ಅವರು ಮಾತನಾಡಿ, ಶಿಕ್ಷಕ ವೃತ್ತಿಗಿರುವ ಗೌರವ ಹಾಗೂ ಅಭಿಮಾನ ಇನ್ನಾವುದೇ ಕ್ಷೇತ್ರದಲ್ಲಿ ಇಲ್ಲ ಎಂದರು. ನಮ್ಮ ದೇಶದಲ್ಲಿ 660 ಮಿಲಿಯನ್ ವಿದ್ಯಾರ್ಥಿ ಸಂಪತ್ತಿದ್ದು ಈ ಸಂಪತ್ತಿನ ಸದ್ಬಳಕೆ ಮತ್ತು ಅವಕಾಶ ಸೃಷ್ಟಿಯಾಗಬೇಕಿದೆ ಎಂದರು.
ಇಂದು ವಿದ್ಯಾರ್ಥಿಗಳಲ್ಲಿರುವ ಸ್ಪಧರ್ಾ ಮನೋಭಾವ ಆರೋಗ್ಯಕರವಾಗಿಲ್ಲ. ಅನವಶ್ಯಕ ಒತ್ತಡ ಹಾಗೂ ಸ್ಪರ್ಧೆಗಳು ವಿದ್ಯಾರ್ಥಿಗಳನ್ನು ಬೆಳೆಯಲು ಬಿಡುತ್ತಿಲ್ಲ.  ನಾವು ಯಶಸ್ಸಿನ ಸಂಭ್ರಮಾಚರಣೆಯನ್ನು ಮಾಡದೆ ಜೀವನವನ್ನು ಎದುರಿಸುವುದು ಹೇಗೆ ಎಂಬುದನ್ನು ವಿದ್ಯಾರ್ಥಿಗಳಿಗೆ ಕಲಿಸುವುದರ ಬಗ್ಗೆ ಶಿಕ್ಷಣದಲ್ಲಿ ಒತ್ತು ನೀಡಬೇಕೆಂದು ಅವರು ಹೇಳಿದರು.
ಕಷ್ಟದಲ್ಲಿರುವ ಸಂದೇಶ ಸುಖದಲ್ಲಿ ಇಲ್ಲ ಎಂಬುದನ್ನು ಮನಗಾಣಿಸುವ ಅಗತ್ಯ ಹಿಂದೆಂದಿಗಿಂತಲೂ ಇಂದಿನ ಅಗತ್ಯವಾಗಿದೆ ಎಂದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ. ಕೊರಗಪ್ಪ ನಾಯ್ಕ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಲಲಿತಾ ಶಿವಪ್ಪ ನಾಯ್ಕ, ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಆಶಾ ತಿಮ್ಮಪ್ಪ, ಮಮತಾ ಗಟ್ಟಿ, ಶೈಲಜಾ ಭಟ್, ಎಂ ಎಸ್ ಮೊಹಮ್ಮದ್ ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ  ಪ್ರದೀಪ್ ಕುಮಾರ್ ಕಲ್ಕೂರ, ದ.ಕ. ಜಿ.ಪಂ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ತುಳಸಿ ಮದ್ದಿನೇನಿ, ಕಾರ್ಯನಿರ್ವಹಣಾಧಿಕಾರಿ ಡಯಟ್ ನ ಪ್ರಾಂಶುಪಾಲರಾದ  ಪಾಲಾಕ್ಷಪ್ಪ, ಬಂಟ್ವಾಳ ತಾಲೂಕು ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಶೇಷನಯನ ಕಾರಿಂಜ ಉಪಸ್ಥಿತರಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ  ಮೋಸೆಸ್ ಜಯಶೇಖರ್ ಸ್ವಾಗತಿಸಿದರು. ಈ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿ ವಿಜೇತ ಶಿಕ್ಷಕರು ಹಾಗೂ ತಾಲೂಕು ಮಟ್ಟದ ಪ್ರಶಸ್ತಿ ವಿಜೇತ ಶಿಕ್ಷಕರು ಹಾಗೂ ಕಳೆದ ಸಾಲಿನ ರಾಷ್ಟ್ರ ಮಟ್ಟದ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿ ವಿಜೇತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಾವಿರಾರು ವರ್ಷಗಳ ಪರಿಸರವನ್ನು ಸಂರಕ್ಷಿಸೋಣ-ದಯಾನಂದ

ಮಂಗಳೂರು,ಸೆಪ್ಟೆಂಬರ್,05: ಮಾನವನ ದುರಾಸೆಯ ಫಲ ಸಾವಿರಾರು ವರ್ಷಗಳಿಂದ ಪ್ರಾಣಿ ಸಂಕುಲವನ್ನು ಪೋಷಿಸುತ್ತಿರುವ ಪರಿಸರವನ್ನು ನಾವು ಮುಂದಿನ ಪೀಳಿಗೆಗಾಗಿ ಕಾದಿರಿಸಲು ಸಂರಕ್ಷಿಸಬೇಕಿದೆ ಎಂದು ದಕ್ಷಿಣಕನ್ನಡ ಜಿಲ್ಲೆ ಅಪರ ಜಿಲ್ಲಾಧಿಕಾರಿ  ದಯಾನಂದ ಅವರು ಜನತೆಗೆ ಕರೆ ನೀಡಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬೆಂಗಳೂರಿನ ಅರಣ್ಯ,ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ ವತಿಯಿಂದ ದಿನಾಂಕ 5-9-13 ರಿಂದ 7-9-13 ರ ವರೆಗೆ ಏರ್ಪಡಿಸಿರುವ ಕರಾವಳಿ ನಿಯಂತ್ರಣ ವಲಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾನವನ ಸರಾಸರಿ ಆಯಸ್ಸು 50-60 ವರ್ಷ ಆದರೆ ನಾವು ಸಾವಿರಾರು ವರ್ಷಗಳಿಂದ ನಮಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಮೂಲಭೂತವಾದ ನೀರು,ಗಾಳಿ ಮುಂತಾದವುಗಳನ್ನು ನೀಡಿರುವ ಪರಿಸರವನ್ನು ಅಭಿವೃದ್ಧಿ ಆಧುನಿಕತೆ ಹೆಸರಲ್ಲಿ ವಿನಾಶ ಮಾಡುತ್ತಿದ್ದೇವೆ.ಆದ್ದರಿಂದ ಪರಿಸರ ಕುರಿತಾದ ನಮ್ಮ ಮನೋಸ್ಥಿತಿ ಬದಲಾಗಬೇಕು. ನಮ್ಮ ಪರಿಸರವನ್ನು ಸಂರಕ್ಷಿಸಲು ಎಲ್ಲರೂ ಸಂಘಟಿತರಾಗಬೇಕು. ಪರಿಸರ ಸಂರಕ್ಷಣೆಗಾಗಿ ಸರ್ಕಾರ ರೂಪಿಸಿರುವ ಕಾನೂನನ್ನು ಗೌರವಿಸುವುದನ್ನು ರೂಢಿಸಿಕೊಳ್ಳಬೇಕೆಂದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ ಮಹಾನಿದರ್ೇಶಕರಾದ  ಶ್ರೀ ಕೆ.ಎಚ್.ವಿನಯಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ತಮ್ಮ ಸಂಸ್ಥೆ ಕನರ್ಾಟಕ ಸಕರ್ಾರದ ಅರಣ್ಯ,ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಅಧೀನದಲ್ಲಿ ಕಾರ್ಯಾಚರಿಸುತ್ತಿದ್ದು,ಪರಿಸರ ನಿರ್ವಹಣೆಗೆ ಪರಿಸರ ಸಂಬಂಧಿ ವಿಷಯಗಳ ಕುರಿತು ತರಬೇತಿ ನೀಡುವ ಮೂಲಕ ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವ ಕಾರ್ಯಗಳನ್ನು ಮಾಡುತ್ತಿದೆ ಎಂದರು.
ಪರಿಸರ ಸಂರಕ್ಷಣೆ ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆ,ಮಳೆ ನೀರು ಕೊಯಿಲು ಹಾಗೂ ಕರಾವಳಿ ನಿಯಂತ್ರಣ ವಲಯ ವಿಷಯಗಳ ಕುರಿತು ಅಧಿಕಾರಿಗಳು,ಸಿಬ್ಬಂದಿ,ವೈದ್ಯಕೀಯ ಕ್ಷೇತ್ರದ ವೈದ್ಯರು,ದಾದಿಯರು,ಶುಶ್ರೂಷಕರು,ಪ್ರಯೋಗಾಲಯ ತಂತ್ರಜ್ಞರು,ಗ್ರಾಮ ಪಂಚಾಯತ್ ಗಳ ಚುನಾಯಿತ ಪ್ರತಿನಿಧಿಗಳು,ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮುಂತಾದವರಿಗೆ  ತರಬೇತಿಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನೀಡಲಾಗುತ್ತಿದೆ ಎಂದರು.
 ರಾಜ್ಯದ ಕರಾವಳಿ ತೀರ ಪ್ರದೇಶ ಕಲುಷಿತವಾಗದಂತೆ ಮಾಲಿನ್ಯವಾಗದಂತೆ ತಡೆಯುವ ಉದ್ದೇಶದಿಂದ ಕರಾವಳಿ ನಿಯಂತ್ರಣ ವಲಯ ತರಬೇತಿಯನ್ನು ದಕ್ಷಿಣಕನ್ನಡ ಜಿಲ್ಲೆ ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಜೈವಿಕ ವೈದ್ಯಕೀಯ ತ್ಯಾಜ್ಯದ ಪ್ರಮಾಣ ಶೇಕಡಾ 15-20 ಆದರೆ ಇದನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೇ ಹೋದಲ್ಲಿ ಸಾಮಾನ್ಯ ತ್ಯಾಜ್ಯದ ಒಟ್ಟಿಗೆ ಸೇರಿ ಇಡೀ ಪರಿಸರವನ್ನು ವಿಷಮಯವಾಗಿಸಲಿದೆ .ಆದ್ದರಿಂದ ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಆಸಕ್ತಿ ಆವಶ್ಯ ಎಂದು ವಿನಯ ಕುಮಾರ್ ತಿಳಿಸಿದರು.
2013-14 ರಲ್ಲಿ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯು ಎರಡು ಪ್ರಮುಖ ವಿಷಯಗಳನ್ನು ಕೈಗೆತ್ತಿಕೊಂಡಿದೆ.ಘನತ್ಯಾಜ್ಯ ನಿರ್ವಹಣೆ ತರಬೇತಿ ಮತ್ತು ಕಸಾಯಿಖಾನೆಗಳಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಹಾಗೂ ಕರಾವಳಿ ನಿಯಂತ್ರಣ ವಲಯ ಸೇರಿದೆ. ಸಮಾರಂಭಕ್ಕೆ ತರಬೇತಿ ಮುಖ್ಯಸ್ಥರು ಬಿ.ಬಸವರಾಜು ಸ್ವಾಗತಿಸಿದರು.           

ಶಿಕ್ಷಣವೇ ನಮ್ಮ ಯಶಸ್ಸು ಗಳಿಸುವ ಸಾಧನ

ಮಂಗಳೂರು,ಸೆಪ್ಟೆಂಬರ್.05:- ಶಿಕ್ಷಕರಿಲ್ಲದ್ದಿದ್ದರೆ ನಾವಿಲ್ಲ.ಶಿಕ್ಷಣವೇ ನಮ್ಮ ಯಶಸ್ಸು ಗಳಿಸುವ ಸಾಧನ. ಶಿಕ್ಷಣ ಕ್ಷೇತ್ರ ಅತ್ಯಂತ ಪವಿತ್ರ ಹಾಗೂ ಜವಾಬ್ದಾರಿಯುತ ಕ್ಷೇತ್ರವಾಗಿದೆ. ನಮ್ಮ ಜ್ಞಾನವನ್ನು ಬೆಳಗಿಸಲು ಹಾಗೂ ಜೀವನ ರೂಪಿಸಲು ಶಿಕ್ಷಕರು ಶ್ರಮಿಸುತ್ತಿದ್ದಾರೆ. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನೋತ್ಸವ ಹಾಗೂ ಶಿಕ್ಷಕ ದಿನಾಚರಣೆಯನ್ನು  ಆಚರಿಸುವುದು ಶ್ಲಾಘನೀಯ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಜೆ.ಆರ್.ಲೋಬೋ ಅಭಿಪ್ರಾಯಪಟ್ಟರು.
      ಇಂದು ಕರ್ನಾಟಕ ಸರ್ಕಾರದ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು ಉತ್ತರವಲಯ ಶಿಕ್ಷಕ ದಿನಾಚರಣೆ ಸಮಿತಿ ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ  ಮಂಗಳೂರು ಪುರಭವನದಲ್ಲಿ ಏರ್ಪಡಿಸಿದ ಶಿಕ್ಷಕರ ದಿನಾಚರಣೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
 ಶಿಕ್ಷಣ ಈಗ ವ್ಯಾಪಾರೀಕರಣಗೊಳ್ಳುತ್ತಿದೆ. ವಿದ್ಯಾರ್ಥಿಗಳಿಗೆ ಅಂಕ ಪಡೆಯುವ ಗುರಿಯೇ ಮುಖ್ಯವಾಗಿದೆ. ಸಾಮಾನ್ಯ ಜ್ಞಾನ ಯಾರಿಗೂ ಬೇಡವಾಗಿದೆ. ಜೀವನದ ಮೌಲ್ಯವನ್ನು ರೂಪಿಸುವಲ್ಲಿ ಹಾಗೂ ಸಮಜ ಪರಿವರ್ತನೆ ಕುರಿತು ವಿದ್ಯಾರ್ಥಿಗಳಿಗೆ  ಶಿಕ್ಷಕರು ಅರಿವು ಮೂಡಿಸಬೇಕು ಎಂದರು. ಯಾವುದೇ ಶಿಕ್ಷಣ ಸಂಸ್ಥೆಗಳ ಜಾಗದ ತಕರಾರು ಅಥವಾ ಆರ್ಟಿಸಿ ತಕರಾರು ಏನಾದರೂ ಇದ್ದಲ್ಲಿ 3 ತಿಂಗಳ ಆಂದೋಲನವನ್ನು ಮಂಗಳೂರು ತಾಲೂಕು ತಹಶೀಲ್ದಾರರು ಏರ್ಪಡಿಸಿರುತ್ತಾರೆ. ಸಂಬಂಧಪಟ್ಟ  ಶಾಲೆಗಳ ಮುಖ್ಯಸ್ಥರು ಪರಿಹಾರವನ್ನು ಕಂಡುಕೊಳ್ಳಬಹುದು.
ಸಮಾರಂಭವನ್ನು ವಿಧಾನಪರಿಷತ್ ಸದಸ್ಯರಾದ ಮೋನಪ್ಪ ಭಂಡಾರಿ ಉದ್ಘಾಟಿಸಿ ಉತ್ತಮ ಶಿಕ್ಷಕರಿದ್ದರೆ ಮಾತ್ರ ಉತ್ತಮ ಸಮಾಜದ ನಿರ್ಮಾಣವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ವಿವಿಧ ಶಾಲೆಗಳ 65 ನಿವೃತ್ತ ಶಿಕ್ಷಕರನ್ನು ಶಾಲು ಹೊದಿಸಿ ಫಲಪುಷ್ಪ ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಲಾಯಿತು. ಸನ್ಮಾನಿತರ ಅನಿಸಿಕೆಗಳನ್ನು ಆಲಿಸಲಾಯಿತು.
ಸಮಾರಂಭದಲ್ಲಿ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ರಿತೇಶ್ ಶೆಟ್ಟಿ,ಮಂಗಳೂರು ತಾಲೂಕು ಪಂಚಾಯತ್ ಸದಸ್ಯರಾದ ಹರೀಶ್ ಕುಮಾರ್, ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಆಶಾತಿಮ್ಮಪ್ಪ, ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಲರಾದ ಶ್ರೀಮತಿ ಫಿಲೋಮಿನಾ ಲೋಬೋ,  ಎಂ.ಬಾಲಕೃಷ್ಣ ಶೆಟ್ಟಿ, ಪ್ರಾಂಶುಪಾಲರಾದ  ದುರ್ಗಾಪರಮೇಶ್ವರಿ ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್. ಸಿ. ಮಂಗಳೂರು ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ರೋಹಿದಾಸ್ ಉಪಸ್ಥಿತರಿದ್ದರು.

Wednesday, September 4, 2013

ಆಧಾರ್ ನೋಂದಣಿ ಕೇಂದ್ರಗಳಲ್ಲಿ ಹಾಜರಾತಿ ಕಡಿಮೆ;ನೋಂದಣಿ ಮಾಡಿಸಿಕೊಳ್ಳಿ-ಅಪರ ಜಿಲ್ಲಾಧಿಕಾರಿ


ಮಂಗಳೂರು, ಸೆಪ್ಟೆಂಬರ್.04:- ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಹೊರತುಪಡಿಸಿ ಉಳಿಕೆ ಎಲ್ಲಾ ತಾಲೂಕುಗಳಲ್ಲಿರುವ 19 ಆಧಾರ್ ಕೇಂದ್ರಗಳಲ್ಲಿ ನೋಂದಣಿ ಕಾರ್ಯ ನಡೆಸಲಾಗುತ್ತಿದೆ. ಮಂಗಳೂರು ಮಹಾನಗರ ಪಾಲಿಕೆಯ ವಾಣಿಜ್ಯ ಸಂಕೀರ್ಣ ಲಾಲ್ಭಾಗ್,ಮಂಗಳೂರು, ಮಹಾನಗರಪಾಲಿಕೆ ಸಂಕೀರ್ಣ ಕದ್ರಿ ಮಲ್ಲಿಕಟ್ಟೆ, ಸಮುದಾಯ ಭವನ ಪೆರ್ಮನ್ನೂರು,ಸಮುದಾಯ ಭವನ ಉಳ್ಳಾಲ,ಕಾರ್ನಾಡ್ ಸದಾಶಿವ ರಾವ್ ಸ್ಮಾರಕ ಕಟ್ಟಡ,ಲೈಟ್ ಹೌಸ್ ಹಿಲ್ ರಸ್ತೆ ಮಂಗಳೂರು,ಮಹಾನಗರಪಾಲಿಕೆ ಉಪ ಕಚೇರಿ ಸುರತ್ಕಲ್,ಐಬಿ ನಾಡ ಕಚೇರಿ ಮೂಡಬಿದ್ರೆ, ಹಳೆ ತಾಲೂಕು ಪಂಚಾಯತ್ ಕಚೇರಿ,ಬಿ.ಸಿ.ರೋಡ್ ಬಂಟ್ವಾಳ,ಪಾಣೆಮಂಗಳೂರು ಶಾಲೆ ಬಂಟ್ವಾಳ,ಸಮುದಾಯ ಭವನ ಪುತ್ತೂರು,ಪಂಚಾಯತ್ ಕಚೇರಿ ವಿಟ್ಲ, ಗ್ರಾಮ ಪಂಚಾಯತ್ ಉಪ್ಪಿನಂಗಡಿ,ನಗರ ಪಂಚಾಯತ್ ಬೆಳ್ತಂಗಡಿ,ಗ್ರಾಮಪಂಚಾಯತ್ ಧರ್ಮಸ್ಥಳ,ಕಪಿತಾನಿಯೋ ಪಂಪ್ವೆಲ್,ರೊಜಾರಿಯೋ ಶಾಲೆ, ನಗರಪಂಚಾಯತ್ ಮೂಲ್ಕಿ,ಇನ್ಫೋಸಿಸ್, ಮುಡಿಪು, ಐಸಿಐಸಿ ಕಟ್ಟಡಗಳಲ್ಲಿರುವ ಆಧಾರ್ ಕೇಂದ್ರಗಳಲ್ಲಿ ದ್ವಿತೀಯ ಹಂತದ ನೋಂದಣಿ ಕಾರ್ಯ ಪ್ರಗತಿಯಲ್ಲಿದ್ದು,ಸಾರ್ವಜನಿಕರು ಯಾವುದೇ ಶುಲ್ಕವನ್ನು ಪಾವತಿಸದೇ ತಮ್ಮ ನೊಂದಣಿಯನ್ನು ಮಾಡಬೇಕಾಗಿ ಅಪರ ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ.ನೋಂದಣಿ ಕೇಂದ್ರಗಳಲ್ಲಿ ಸಾರ್ವಜನಿಕರ ಹಾಜರಾತಿ ಕಡಿಮೆ ಇರುವುದು ಕಂಡು ಬರುತ್ತಿದೆ. ಆಧಾರ್ ಕಾರ್ಡ್  ಬಹು ಉಪಯೋಗಿ ಬಳಕೆಗಳಿಗೆ ಉಪಯೋಗಿಸಬಹುದಾದ ಗುರುತಿನ ಚೀಟಿಯಾಗಿದ್ದು, ಸಾರ್ವಜನಿಕರು ಸೆಪ್ಟೆಂಬರ್ ತಿಂಗಳ ಕೊನೆಯ ಒಳಗೆ ತಮ್ಮ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ.

ಜಿಲ್ಲೆಯಲ್ಲಿ 31,646 ಹೆಕ್ಟೇರ್ ನಲ್ಲಿ ಟನ್ ಭತ್ತ ಬಿತ್ತನೆ

ಮಂಗಳೂರು,ಸೆಪ್ಟೆಂಬರ್ 4:-ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದು,ಆಗಸ್ಟ್ 31 ರ ವರೆಗೆ ಜಿಲ್ಲೆಯಲ್ಲಿ 31646 ಹೆಕ್ಟೇರ್ನಲ್ಲಿ ಭತ್ತ ಬಿತ್ತನೆ  ಮಾಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ. ಜಿಲ್ಲೆಯ ಒಟ್ಟು ಐದು ತಾಲೂಕುಗಳಲ್ಲಿ ಭತ್ತ ಬಿತ್ತನೆ ಮಾಡಿದ ವಿವರ ಇಂತಿದೆ.
ಮಂಗಳೂರು ತಾಲೂಕಿನಲ್ಲಿ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ 11,800 ಹೆಕ್ಟೇರ್ ಭತ್ತ ಬೆಳೆಯುವ  ಗುರಿ ಇದ್ದು,10,820 ಹೆಕ್ಟೇರ್ ಭತ್ತವನ್ನು ಬಿತ್ತನೆ ಮಾಡಿದ್ದು,91.6 ಶೇಕಡಾ ಗುರಿ ಸಾಧಿಸಲಾಗಿದೆ.
ಬಂಟ್ವಾಳ ತಾಲೂಕಿನಲ್ಲಿ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ 9,500 ಹೆಕ್ಟೇರ್ ಭತ್ತ ಬೆಳೆಯುವ  ಗುರಿ ಇದ್ದು,9,125 ಹೆಕ್ಟೇರ್ ಬಿತ್ತನೆಯಾಗಿದ್ದು,96,84 ಶೇಕಡಾ ಗುರಿ ಸಾಧಿಸಲಾಗಿದೆ.
ಬೆಳ್ತಂಗಡಿ ತಾಲೂಕಿನಲ್ಲಿ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ 8,500 ಹೆಕ್ಟೇರ್ ಭತ್ತ ಬೆಳೆಯುವ  ಗುರಿ ಇದ್ದು,8,175 ಹೆಕ್ಟೇರ್ ಬಿತ್ತನೆಯಾಗಿದ್ದು,96 ಶೇಕಡಾ ಗುರಿ ಸಾಧಿಸಲಾಗಿದೆ.
ಪುತ್ತೂರು ತಾಲೂಕಿನಲ್ಲಿ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ 3,200 ಹೆಕ್ಟೇರ್ ಭತ್ತ ಬೆಳೆಯುವ  ಗುರಿ ಇದ್ದು,2,953 ಹೆಕ್ಟೇರ್ ಬಿತ್ತನೆಯಾಗಿದ್ದು,92 ಶೇಕಡಾ ಗುರಿ ಸಾಧಿಸಲಾಗಿದೆ.
ಸುಳ್ಯ ತಾಲೂಕಿನಲ್ಲಿ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ 500 ಹೆಕ್ಟೇರ್ ಭತ್ತ ಬೆಳೆಯುವ  ಗುರಿ ಇದ್ದು,501 ಹೆಕ್ಟೇರ್ ಬಿತ್ತನೆಯಾಗಿದ್ದು,100 ಶೇಕಡಾ ಗುರಿ ಸಾಧಿಸಲಾಗಿದೆ.
            ಕಳೆದ ವರ್ಷ ಇದೇ ಅವಧಿಯಲ್ಲಿ ಜಿಲ್ಲೆಯಲ್ಲಿ 31498 ಹೆಕ್ಟೇರ್ನಲ್ಲಿ ಬಿತ್ತನೆ ಕಾರ್ಯ ನಡೆದಿತ್ತು.ಕರ್ನಾಟಕ ರಾಜ್ಯ ಬೀಜ ನಿಗಮದಿಂದ ಆಗಸ್ಟ್ 31 ರ ವರೆಗೆ ಒಟ್ಟು 483.50 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನು ಪಡೆದು ಇಲ್ಲಿಯ ವರೆಗೆ 468.75 ಕ್ವಿಂಟಾಲ್ ವಿತರಿಸಲಾಗಿದೆ.
           ಮುಂಗಾರು ಹಂಗಾಮಿಗೆ ಒಟ್ಟು 18000 ಟನ್ ರಸಗೊಬ್ಬರ ಬೇಡಿಕೆ ಇದ್ದು,18,035 ಟನ್ ರಸಗೊಬ್ಬರ ವಿತರಣೆಯಾಗಿದ್ದು,8,220 ಟನ್ ದಾಸ್ತಾನು ಇದೆ. ಈ ಹಂಗಾಮಿನಲ್ಲಿ ಕರ್ನಾಟಕ ಸರ್ಕಾರದ ಜನಪ್ರಿಯ ಕೃಷಿ ಯೋಜನೆ ಭೂಚೇತನ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಒಟ್ಟು 25,000 ಹೆಕ್ಟೇರ್ ನಲ್ಲಿ ಕೃಷಿ ಕಾರ್ಯ ಅತ್ಯಂತ ಯಶಸ್ವಿಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.
                 

Saturday, August 31, 2013

ಸೆ.4ರಿಂದ 6ರವರೆಗೆಮಂಗಳೂರು ವಿವಿ ಅಂತರ್ ಕಾಲೇಜು ಮಟ್ಟದ ಸಾಂಸ್ಕೃತಿಕ ಉತ್ಸವ

ಮಂಗಳೂರು,ಆಗಸ್ಟ್.31: ಮಂಗಳೂರು ವಿಶ್ವವಿದ್ಯಾನಿಲಯವು ಅಂತರ್ ಕಾಲೇಜು ಮಟ್ಟದ ಸಾಂಸ್ಕೃತಿಕ ಉತ್ಸವನ್ನು ಸೆ.4ರಿಂದ 6ರವರೆಗೆ ಆಯೋಜಿಸಿದೆ ಎಂದು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಟಿ.ಸಿ.ಶಿವಶಂಕರ ಮೂರ್ತಿ ಹೇಳಿದ್ದಾರೆ.
ಇಂದು ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ  ಉತ್ಸವದ ಕುರಿತು ಮಾಹಿತಿ ನೀಡಿದರು.

   ಸೆಪ್ಟೆಂಬರ್ 4ರಂದು ಪೂರ್ವಾಹ್ನ 10 ಗಂಟೆಗೆ ಪದ್ಮಶ್ರೀ ಡಾ.ಬಿ.ಜಯಶ್ರೀ ಅವರು ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡುವರು. ಸೆ.6ರಂದು ಅಪರಾಹ್ನ 2.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ನಿವೃತ್ತ ಏರ್ ಮಾರ್ಷಲ್ ಮಡಿಕೇರಿಯ ಕೆ.ಸಿ.ಕಾರ್ಯಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
    ಮಂಗಳೂರು ವಿಶ್ವ ವಿದ್ಯಾನಿಲಯ ಅಧೀನದ 67 ಕಾಲೇಜುಗಳ ಸುಮಾರು 1600 ವಿದ್ಯಾರ್ಥಿಗಳು ಈ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದು, ಮೂರು ದಿನಗಳ ಈ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆಯಲಿದೆ. ವಿವಿಯ 5 ಸಭಾಂಗಣದಲ್ಲಿ ಸ್ಪರ್ಧೆಗಳು ನಡೆಯಲಿವೆ. ಪ್ರತಿ ಸ್ಪರ್ಧೆಯನ್ನು ಆಯೋಜಿಸುವಲ್ಲಿ ಪ್ರಾಧ್ಯಾಪಕರನ್ನೊಳಗೊಂಡ ತಂಡಗಳನ್ನು ಈಗಾಗಲೇ ರಚಿಸಲಾಗಿದೆ. ಫಲಿತಾಂಶ ನಿರ್ಧರಿಸಲು ಪರಿಣತ ತೀರ್ಪುಗಾರರನ್ನು ನಿಯೋಜಿಸಲಾಗಿದೆ ಎಂದು ಕುಲಪತಿಗಳು ಮಾಹಿತಿ ನೀಡಿದರು. ಉತ್ತಮ ಸಾಧನೆ ತೋರುವ ತಂಡ ಅಂತರ್ ವಿಶ್ವ ವಿದ್ಯಾನಿಲಯ ಮಟ್ಟ ಮತ್ತು ತದನಂತರ ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲಿದೆ. ಮೊದಲನೇ ದಿನ ಸಮೂಹ ಗಾಯನ, ಮಿಮಿಕ್ರಿ, ರಂಗೋಲಿ,  ಜಾನಪದ ಗೀತೆ, ಕ್ಲಾಸಿಕಲ್ ಇನ್ಸ್ಟ್ರುಮೆಂಟಲ್ ಮುಂತಾದ ಸ್ಪರ್ಧೆಗಳು ನಡೆದರೆ,2ನೇ ದಿನ ಜಾನಪದ ನೃತ್ಯ, ಕ್ಲಾಸಿಕಲ್ ಡ್ಯಾನ್ಸ್, ಕ್ವಿಜ್, ಸ್ಕಿಟ್,  ಡಿಬೇಟ್ ಮತ್ತಿತತ ಸ್ಪರ್ಧೆಗಳು ನಡೆಯಲಿವೆ.  ಎಂದು ಕುಲಪತಿಗಳು ವಿವರಿಸಿದರು.
           ಕುಲಸಚಿವ ಪ್ರೊ.ಪಿ.ಎಸ್.ಯಡಪಡಿತ್ತಾಯ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಪ್ರೊ.ಜಿ.ಪಿ.ಶಿವರಾಂ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕದ ನಿರ್ದೇಶಕ ಪ್ರೊ.ಪಿ.ಎಲ್.ಧರ್ಮ, ಮಂಗಳೂರು ವಿವಿ ಕಾಲೇಜಿ ಉಪ ಪ್ರಾಂಶುಪಾಲೆ ಪಾರ್ವತಿ ಅಪ್ಪಯ್ಯ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Friday, August 30, 2013

ಮಾಹಿತಿ ತಂತ್ರಜ್ಞಾನ; ರಾಜ್ಯದಲ್ಲಿ 40 ಲಕ್ಷ ಉದ್ಯೋಗ ಸೃಷ್ಠಿ -ಎಸ್.ಆರ್.ಪಾಟೀಲ್

ಮಂಗಳೂರು,ಆಗಸ್ಟ್. 30: ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನದ  ಕ್ಷೇತ್ರದಲ್ಲಿ ಅಪಾರ0 ಬಂಡವಾಳ ಹೂಡಿಕೆಯಾಗಲಿದ್ದು, ಈ ಮೂಲಕ ಮಂಗಳೂರು,ಮೈಸೂರು,ಹುಬ್ಬಳ್ಳಿ-ಧಾರಾವಾಡ, ಗುಲ್ಬರ್ಗಾ, ಬೆಳಗಾವಿ, ತುಮುಕೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ನೇರವಾಗಿ 12 ಲಕ್ಷ ಜನರಿಗೆ ಹಾಗೂ ಪರೋಕ್ಷವಾಗಿ 28 ಲಕ್ಷ ಜನರಿಗೆ ಉದ್ಯೋಗ ಭಾಗ್ಯ ಒದಗಲಿದೆ ಎಂದು  ರಾಜ್ಯ ಮಾಹಿತಿ ತಂತ್ರಜ್ಞಾನ,ಜೈವಿಕ ತಂತ್ರಜ್ಞಾನ,ಯೋಜನೆ ಹಾಗೂ ಅಂಕಿ ಸಂಖ್ಯೆಗಳ ಖಾತೆ ಸಚಿವರಾದ  ಎಸ್. ಆರ್.ಪಾಟೀಲ್ ತಿಳಿಸಿದ್ದಾರೆ.
ಅವರು ಇಂದು ಮಂಗಳೂರಿನಲ್ಲಿ ಕರ್ನಾಟಕ ಸರ್ಕಾರ ,ಬೆಂಗಳೂರಿನ ಇನ್ ಫರ್ಮೇಷನ್ ಟೆಕ್ನಾಲಜಿ ಬಿಜ್ ವತಿಯಿಂದ ಆಯೋಜಿಸಿದ್ದ ಹೊಸ ಪ್ರದೇಶಗಳಿಗೆ ಮಾಹಿತಿ ತಂತ್ರಜ್ಞಾನ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ರಾಜ್ಯದ ಮಾಹಿತಿ ತಂತ್ರಜ್ಞಾನ ರಫ್ತಿನಿಂದ 2012-13 ನೇ ಸಾಲಿನಲ್ಲಿ ರೂ.1.35 ಲಕ್ಷ ಕೋಟಿವಿದೇಶಿ ವಿನಿಮಯ ಗಳಿಸಿದ್ದು, ಎರಡನೇ ಪಂಕ್ತಿ ನಗರಗಳಾದ ಮೈಸೂರು,ಮಂಗಳೂರು ಮತ್ತು ಹುಬ್ಬಳ್ಳಿ,ಧಾರವಾಡ ನಗರಗಳ ಪಾಲು ರೂ.2,680 ಕೋಟಿಗಳಾಗಿದೆ. ಎರಡನೇ ಪಂಕ್ತಿ ನಗರಗಳು ಮುಂದಿನ ದಿನಗಳಲ್ಲಿ ಮಾಹಿತಿ ತಂತ್ರಜ್ಞಾನ ರಫ್ತಿನಿಂದ ಸುಮಾರು ರೂ.4,000 ಕೋಟಿ ಆದಾಯ ಗಳಿಸುವ ವಿಶ್ವಾಸ ಹೊಂದಿರುವುದಾಗಿ ಸಚಿವರು ಆಶಾಭಾವ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಅರಣ್ಯ,ಪರಿಸರ,ಜೀವಿಶಾಸ್ತ್ರ ಹಾಗೂ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ ಅವರು ಮಾತನಾಡಿ, ಜಿಲ್ಲೆಯ ಜನ ಅತ್ಯಂತ ಉದ್ಯಮಶೀಲರಾಗಿದ್ದು,ದೇಶದಲ್ಲೇ ಅಲ್ಲದೆ ವಿದೇಶಗಳಲ್ಲಿ ಕೈಗಾರಿಕೆ ಬ್ಯಾಂಕುಗಳನ್ನು ಸ್ಥಾಪಿಸಿದ್ದಾರೆ. ಆದ್ದರಿಂದ ಈ ಜಿಲ್ಲೆ ಮಾಹಿತಿ ತಂತ್ರಜ್ಞಾನ ಪಾರ್ಕ್  ಆಗುವುದರಿಂದ ಜಿಲ್ಲೆಯ ಜನತೆಗೆ ಹೆಚ್ಚಿನ ಉದ್ಯೋಗಾವಕಾಶಗಳು ಲಭಿಸಲಿವೆ ಎಂದರು.
              ರಾಜ್ಯ ಮೀನುಗಾರಿಕೆ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಸಚಿವರಾದ ಕೆ.ಅಭಯಚಂದ್ರ ಜೈನ್ ಅವರು ಮಾತನಾಡಿ ಬೆಂಗಳೂರು ನಂತರ ಅತ್ಯಂತ ಹೆಚ್ಚಿನ ಇಂಜಿನಿಯರ್ ಗಳು ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯ  ಕಾಲೇಜುಗಳಲ್ಲಿ ಪದವಿ ಪಡೆದು ಹೊರಬರುತ್ತಿದ್ದಾರೆ. ಆದ್ದರಿಂದ ಇಂತಹ ವಿದ್ಯಾವಂತ ನಿರದ್ಯೋಗಿಗಳಿಗೆ ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಉದ್ಯೋಗ ಒದಗಿಸುವ ತಾಣಗಳಾಗಬೇಕೆಂದರು.
 ಆರೋಗ್ಯ ಸಚಿವ ಯು.ಟಿ,ಖಾದರ್ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಮಾಹಿತಿ ತಂತ್ರಜ್ಞಾನ ಪಾರ್ಕಿಗೆ ವಿಪುಲ ಅವಕಾಶಗಳಿದ್ದು, ಕೈಗಾರಿಕೆ ಸ್ಥಾಪಿಸಲು ಭೂಮಿಯನ್ನು ಪಡೆದು ಹಲವಾರು ವರ್ಷಗಳ ವರೆಗೂ ಜಮೀನನ್ನು ಹಾಗೇ ಬಿಡುತ್ತಿರುವುದು ಉದ್ಯಮಿಗಳಿಂದ ನಡೆಯುತ್ತಿದೆ. ಇದು ತಪ್ಪಿ ಉದ್ಯಮಪತಿಗಳು ತಮ್ಮ ಉದ್ಯಮವನ್ನು ಅತೀ ಶೀಘ್ರವಾಗಿ ಆರಂಭಿಸುವ ಮೂಲಕ ಜಿಲ್ಲೆಯ ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಠಿ ಮಾಡಬೇಕೆಂದರು.
ಮಾಹಿತಿ ತಂತ್ರಜ್ಞಾನ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆ ಮುಖ್ಯಕಾರ್ಯದರ್ಶಿ ಎನ್.ಎಸ್.ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಚಾರ ಸಂಕಿರಣದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದ ಇನ್ಫೋಸಿಸ್  ಉಪಾಧ್ಯಕ್ಷ  ಕ್ರಿಸ್ ಗೋಪಾಲಕೃಷ್ಣ ಅವರು ಮಾಹಿತಿ ತಂತ್ರಜ್ಞಾನ ಭವಿಷ್ಯದಲ್ಲಿ ದೇಶದ ಆರ್ಥಿಕತೆಗೆ ಬಹು ದೊಡ್ಡ ಪಾಲನ್ನು ನೀಡಲಿದ್ದು, ಸರ್ಕಾರವೂ ಇದಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದರು.ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್. ಪ್ರಕಾಶ್, ಕೆನರ ವಾಣಿಜ್ಯ ಮತ್ತು ಕೈಗಾರಿಕ ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ಅಮೀನ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.ಬೆಂಗಳೂರಿನ  ಎಸ್ ಟಿಪಿಐ ಸಂಸ್ಥೆ ನಿರ್ದೇಶಕ ಪಿ.ಕೆ ದಾಸ್ ವಂದಿಸಿದರು. ವಿದ್ಯಾದಿನಾಕರ್ ಕಾರ್ಯಕ್ರಮ ನಿರೂಪಣೆ ಮಾಡಿದರು.

Monday, August 26, 2013

ಗ್ರಾಮೀಣ ಪ್ರದೇಶಗಳಲ್ಲಿ ಪಿಂಚಣಿ ಅದಾಲತ್ -ರಮಾನಾಥ ರೈ

ಮಂಗಳೂರು ಆಗಸ್ಟ್ 26:- ಸಾಮಾಜಿಕ ಭದ್ರತಾ ಯೊಜನೆಗಳಲ್ಲಿ ಮಾಸಾಶನ ಪಡೆಯುತ್ತಿರುವ ನಿರ್ಗತಿಕರು, ಬಡವರಿಗೆ ಕ್ರಮಬದ್ಧವಾಗಿ ಪ್ರತೀ ತಿಂಗಳು ಮಾಸಾಶನ-ಪಿಂಚಣಿ ದೊರಕಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರಕಾರ ಎಲ್ಲಾ ಹೋಬಳಿ ಮಟ್ಟದಲ್ಲಿ ಪಿಂಚಣಿ ಅದಾಲತ್ ಗಳನ್ನು ನಡೆಸಲು ಉಪ ವಿಭಾಗಾಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ.ರಮಾನಾಥ ರೈ ಅವರು ತಿಳಿಸಿದ್ದಾರೆ.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದ ಕರ್ನಾಟಕ ಸರಕಾರದ ಸಾಧನೆಗಳನ್ನು ಬಿಂಬಿಸುವ  ``ನೂರು ದಿನಗಳು ನೂರಾರು ನಿರ್ಣಯಗಳು'' ಹೊತ್ತಗೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಕರ್ನಾಟಕ ಸರಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯಡಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ  511 ನ್ಯಾಯಬೆಲೆ ಅಂಗಡಿಗಳ ಮೂಲಕ 1.79 ಲಕ್ಷ  ಬಿಪಿಎಲ್ ಕಾಡರ್್ದಾರರು ಹಾಗೂ 21079 ಅಂತ್ಯೋದಯ ಕಾರ್ಡ್ ದಾರರು ರೂ.1/-ರ ದರದಲ್ಲಿ ಒಂದು ಕೆಜಿ ಅಕ್ಕಿಯಂತೆ 30 ಕೆಜಿ ಅಕ್ಕಿ ಪಡೆಯುತ್ತಿದ್ದಾರೆ ಎಂದ ಸಚಿವರು, ಕಳೆದ ನೂರು ದಿನಗಳಲ್ಲಿ ಮಾನ್ಯ ಮುಖ್ಯ ಮಂತ್ರಿಗಳ ನೇತೃತ್ವದಲ್ಲಿ ಮಕ್ಕಳಿಗೆ ಪೌಷ್ಠಿಕ ಆಹಾರ ಒದಗಿಸುವ ಕ್ಷೀರಭಾಗ್ಯ, ಪರಿಶಿಷ್ಟರು ಹಿಂದುಳಿದ ವರ್ಗಗಳ ಹಾಗೂ ಅಲ್ಪ ಸಂಖ್ಯಾತರ ಸಾಲ ಮನ್ನಾ, ಭಾಗ್ಯಜ್ಯೋತಿ ಕುಟೀರಗಳು ಬಳಸಿದ್ದ ಹೆಚ್ಚುವರಿ ವಿದ್ಯುತ್ ಬಿಲ್ ಪಾವತಿಸದೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದವರ ಶುಲ್ಕ ಮನ್ನಾ ಮಾಡಿ ಮರುಸಂಪರ್ಕ ಕಲ್ಪಿಸಿದ್ದು, ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ನಿಗಧಿಗೆ  ಕೃಷಿ ಆಯೋಗ ರಚನೆ, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಆವರ್ತ ನಿಧಿಯನ್ನು ರೂ.5000/-ಗಳಿಂದ ರೂ.20,000ಗೆ ಏರಿಸಿದ್ದು, ಬಡವರಿಗೆ  ವಸತಿ ಯೋಜನೆಯಲ್ಲಿ  ನೀಡಲಾಗುತ್ತಿದ್ದ ರೂ.75,000/- ಅನುದಾನದ ಬದಲಾಗಿ ರೂ.1.20 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಹೀಗೆ ಸರಕಾರ ಜನತೆಗೆ ನೀಡಿದ್ದ 160 ಭರವಸೆಗಳಲ್ಲಿ ಕೇವಲ 100 ದಿನಗಳಲ್ಲೇ 60 ಭರವಸೆಗಳನ್ನು ಈಡೇರಿಸಿ ಜನಪರ ಸರಕಾರವಾಗಿದೆ ಎಂದು ಸಚಿವರು ತಿಳಿಸಿದರು. ಮನಸ್ವಿನಿ-40 ವರ್ಷ ಮೇಲ್ಪಟ್ಟ ವಿಚ್ಚೇದಿತ ಮಹಿಳೆ ಅಥವಾ ವಿಧವೆಯರಿಗೆ ರೂ.500/- ನೀಡುವ ಮಾಸಾಶನ ಹಾಗೂ (ಮಂಗಳಮುಖಿಯರು) ಲೈಂಗಿಕ ಅಲ್ಪಸಂಖ್ಯಾತರಿಗೆ ಮಾನವೀಯತೆಯಿಂದ ನೀಡುವ ಮಾಸಾಶನ ಮೈತ್ರಿ ಯೋಜನೆಗಳನ್ನು ಸರಕಾರ ಹೊಸದಾಗಿ ಜಾರಿಗೆ ತಂದಿದೆ ಎಂದು ಸಚಿವರು ತಿಳಿಸಿದರು.
ಸಮಾರಂಭದಲ್ಲಿ ಜಿಲ್ಲಾಧಿಕಾರಿ ಎನ್.ಪ್ರಕಾಶ್, ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ,ಅಪರ ಜಿಲ್ಲಾಧಿಕಾರಿ ದಯಾನಂದ ಹಾಜರಿದ್ದರು.  

Friday, August 23, 2013

ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ಗಳು ಸುಸ್ಥಿತಿಯಲ್ಲಿ- ಎಂ.ಶಿವಣ್ಣ

ಮಂಗಳೂರು, ಆಗಸ್ಟ್. 23:- ಇತರೆ ರಾಜ್ಯಗಳು ಹಾಗೂ ಕರ್ನಾಟಕದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ವಹಿಸುತ್ತಿರುವ ಹಾಸ್ಟೆಲ್ ಗಳು ಅತ್ಯುತ್ತಮವಾಗಿವೆಯೆಂದು ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಸದಸ್ಯರಾದ ಮಾನ್ಯ  ಎಂ.ಶಿವಣ್ಣ ಅವರು ತಮ್ಮ ಅಭಿಪ್ರಾಯ ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪರಿಶಿಷ್ಟ ಜಾತಿಯವರಿಗೆ ಸಂವಿಧಾನಾತ್ಮಕವಾಗಿ ವಿವಿಧ ಇಲಾಖೆಗಳ ಮುಖೇನ ನೀಡಲಾಗಿರುವ ವಿವಿಧ ಸವಲತ್ತುಗಳ ಅನುಷ್ಟಾನ ಪ್ರಗತಿ ಪರಿಶೀಲನೆ ನಡೆಸಿ ತಮ್ಮ ಅಭಿಪ್ರಾಯ ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 32 ವಿದ್ಯಾರ್ಥಿ ನಿಲಯಗಳು ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ವಹಿಸಲ್ಪಡುತ್ತಿದ್ದು,ಇವುಗಳಲ್ಲಿ 3018 ವಿದ್ಯಾರ್ಥಿಗಳಿಗೆ ಅವಕಾಶವಿದ್ದು. 2615 ವಿದ್ಯಾರ್ಥಿಗಳು ಸೌಲಭ್ಯ ಪಡೆಯುತ್ತಿದ್ದಾರೆ. 30 ವಿದ್ಯಾರ್ಥಿನಿಲಯಗಳು ಇಲಾಖೆಯ ಸ್ವಂತ ಕಟ್ಟಡ ಹೊಂದಿವೆ ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಅರುಣ್ ಪುರ್ಟಾಡೋ ಮಾನ್ಯ ಸದಸ್ಯರಿಗೆ ಮಾಹಿತಿ ಒದಗಿಸಿ,2012-13 ನೇ ಸಾಲಿನಲ್ಲಿ ಈ ವಿದ್ಯಾರ್ಥಿ ನಿಲಯಗಳಲ್ಲಿ ಕಲಿಯುತ್ತಿದ್ದ 191 ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾಗಿದ್ದು ಅವರಲ್ಲಿ 161 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇಕಡಾ 84.29 ಫಲಿತಾಂಶ ಬಂದಿದೆ.
ಪಿಯುಸಿ ಪರೀಕ್ಷೆಗೆ 52 ವಿದ್ಯಾರ್ಥಿಗಳು ಹಾಜರಾಗಿದ್ದು ಅವರಲ್ಲಿ 48 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 92 ರಷ್ಟು ಫಲಿತಾಂಶ ಬಂದಿದೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಶಿವಣ್ಣನವರು ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಇಂಗ್ಲೀಷ್ ಹಾಗೂ ಗಣಿತ ವಿಷಯಗಳಲ್ಲಿ  ಸ್ವಲ್ಪ ಹಿಂದಿದ್ದು, ಅಂತಹ ವಿದ್ಯಾರ್ಥಿಳಿಗೆ ವಿಶೇಷ ಟ್ಯೂಷನ್ ಮೂಲಕ ಎರಡೂ ವಿಷಯಗಳನ್ನು ಕಲಿಸುವಂತೆ ಹಾಗೂ ವಿದ್ಯಾ ರ್ಥಿನಿಲಯದ ಮಕ್ಕಳಿಗೆ ಉತ್ತಮ ಹಾಸಿಗೆ ಹಾಗೂ ಹೊದಿಕೆಗಳನ್ನು ಸರಬರಾಜು ಮಾಡುವಂತೆ ತಿಳಿಸಿದರು.
ಸ್ಥಳೀಯ ಸಂಸ್ಥೆಗಳ ಅನುದಾನದಲ್ಲಿ ಪರಿಶಿಷ್ಟರಿಗಾಗಿ ಮೀಸಲಿರುವ ಶೇಕಡಾ 22.75 ಅನುದಾನವನ್ನು ಆಯಾ ಸ್ಥಳೀಯ ಸಂಸ್ಥೆಗಳ ಪರಿಶಿಷ್ಟ ಕಾಲೊನಿಗಳಲ್ಲಿ ರಸ್ತೆ, ಚರಂಡಿ,ಶಾಲಾ ಕಟ್ಟಡ ಇನ್ನಿತರೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮಾತ್ರ ಬಳಸಬೇಕೆಂದು ಶಿವಣ್ಣನವರು ಅಧಿಕಾರಿಗಳಿಗೆ ತಿಳಿಸಿದರು. ಜಿಲ್ಲೆಯಲ್ಲಿರುವ ಸ್ಥಳೀಯ ಸಂಸ್ಥೆಗಳು ಶೇಕಡಾ 22.75 ರ ಅನುದಾನದಲ್ಲಿ ಶೇಕಡಾ 62.08 ರಷ್ಟು 1249.87 ಲಕ್ಷದಲ್ಲಿ ರೂ.775.95 ಲಕ್ಷ ಅನುದಾನ ವೆಚ್ಚ ಮಾಡಲಾಗಿದೆ. ಅದೇ ರೀತಿ ಗ್ರಾಮ ಪಂಚಾಯತ್ ಗಳ ಅನುದಾನದಲ್ಲಿ ಮೀಸಲಿಟ್ಟಿರುವ ಶೇಕಡಾ 25 ಅನುದಾನ 2,09,00,984 ರೂ.ಗಳಲ್ಲಿ ರೂ.1,75,18,961 ರೂ.ಗಳನ್ನು ವೆಚ್ಚ ಮಾಡುವ ಮೂಲಕ ಶೇಕಡಾ 84 ಸಾಧನೆ ಮಾಡಲಾಗಿದೆ. ಒಂದನೇ ತರಗತಿಯಿಂದ ಎಂಟನೇ ತರಗತಿಗಳಲ್ಲಿ ಕಲಿಯುತ್ತಿರುವ 11,117 ಪ್ರೀ ಮೆಟ್ರಿಕ್  ವಿದ್ಯಾರ್ಥಿಗಳಿಗೆ  ರೂ.36.94 ಲಕ್ಷ,9 ಮತ್ತು 10ನೇ ತರಗತಿಯಲ್ಲಿ ಕಲಿಯುತ್ತಿರುವ  3108 ವಿದ್ಯಾರ್ಥಿಗಳಿಗೆ ರೂ.65.12 ಲಕ್ಷ ಹಾಗೂ 4368 ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿಗಳಿಗೆ  ರೂ.353.62 ಲಕ್ಷ ಪೋಸ್ಟ್ ಮೆಟ್ರಿಕ್ ವೇತನ ಮಂಜೂರು ಮಾಡುವ ಮೂಲಕ ಒಟ್ಟು 18593 ವಿದ್ಯಾರ್ಥಿಗಳಿಗೆ 455.68 ಲಕ್ಷ ರೂ.ಗಳ ವಿದ್ಯಾರ್ಥಿವೇತನ ವಿತರಿಸಲಾಗಿದೆ ಎಂದು ಸಮಾಜ ಕಲ್ಯಾಣಾಧಿಕಾರಿ ಸಭೆಗೆ ತಿಳಿಸಿದರು.
ವಿಶೇಷ ಘಟಕ ಯೋಜನೆಯಡಿ ಜಿಲ್ಲೆಯಲ್ಲಿ ಕೃಷಿ,ಶಿಕ್ಷಣ,ಖಾದಿ ಗ್ರಾಮೋದ್ಯೋಗ,ಸಣ್ಣ ನೀರಾವರಿ,ಪ್ರವಾಸೋದ್ಯಮ,ಲೋಕೋಪಯೋಗಿ ಸೇರಿದಂತೆ ಇತರೆ ಇಲಾಖೆಗಳು ಶೇಕಡಾ 100 ರಷ್ಟು ಪ್ರಗತಿ ಸಾಧಿಸಿರುವ ಬಗ್ಗೆ ಮಾನ್ಯ ಸದಸ್ಯ ಶಿವಣ್ಣನವರು ಪ್ರಶಂಸಿಸಿದರು.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪರಿಶಿಷ್ಟರ ಮೇಲೆ ಅತೀ ಕಡಿಮೆ ದೌರ್ಜನ್ಯ ಮೊಕದ್ದಮೆಗಳು ದಾಖಲಾಗಿದ್ದು, ಜಿಲ್ಲೆಯು ಸುಶಿಕ್ಷಿತರಿಂದ ಕೂಡಿರುವುದೇ ಇದಕ್ಕೆ ಮುಖ್ಯ ಕಾರಣ ಎಂದು  ಶಿವಣ್ಣ ಜಿಲ್ಲೆಯ ಜನತೆಗೆ ಅಭಿನಂದಿಸಿದರು.
ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ 946 ಫಲಾನುಭವಿಗಳಿಗೆ ಮಂಜೂರಾಗಿದ್ದ  ಸಾಲವನ್ನು ಮನ್ನಾ ಮಾಡಲಾಗಿದೆ ಎಂದರು. ಸಭೆಯಲ್ಲಿ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ರಾಜ್ಯ ಘಟಕದ ನಿರ್ದೇಶಕಿ ಶ್ರೀಮತಿ.ಪಿ.ಗಿರಿಜಾ , ಸಹಾಯಕ  ನಿರ್ದೇಶಕಿ ಶ್ರೀಮತಿ ಶೀಲಾನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಎನ್.ಪ್ರಕಾಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀಮತಿ ತುಳಸಿ ಮದ್ದಿನೇನಿ, ಜಿಲ್ಲಾ ಪೋಲೀಸ್ ಅಧೀಕ್ಷಕ ಅಭಿಷೇಕ್ ಗೋಯಲ್ ಮುಂತಾದವರು ಹಾಜರಿದ್ದರು.
 

Wednesday, August 21, 2013

ವಾಹನಗಳಲ್ಲಿ ಟಿಂಟ್ ಫಿಲಂ ಅಳವಡಿಸಿದರೆ ದಂಡ


ಮಂಗಳೂರು, ಆಗಸ್ಟ್. 21:-ಸರ್ವೋ ಚ್ಛ ನ್ಯಾಯಾಲಯದ ಆದೇಶದಂತೆ ಸಾರ್ವಜನಿಕರು ತಮ್ಮ ವಾಹನಗಳ ಮುಂಭಾಗ ಹಾಗೂ ಹಿಂಭಾಗದ ವಿಂಡ್ ಸ್ಕ್ರೀನ್ ಗಳನ್ನು ಶೇಕಡಾ 70 ರಷ್ಟು ಪಾರದರ್ಶಕತೆ ಹಾಗೂ ವಾಹನದ ಎರಡು ಬದಿಗಳನ್ನು ಶೇಕಡಾ 50 ರಷ್ಟು ಹೊಂದಿರುವ ಗಾಜುಗಳನ್ನು ಹೊಂದಿರಬಹುದು.ಆದರೆ ಇಷ್ಟೇ ಪ್ರಮಾಣದ ಸನ್ ಫಿಲಂಗಳನ್ನು ಯಾವುದೇ ಅಂಗಡಿ,ಕಾರ್ ಅಕ್ಷೆಸರೀಸ್ ಅಂಗಡಿಗಳಿಂದ ಖರೀದಿಸಿ ಅಳವಡಿಸುವಂತಿಲ್ಲ.ಒಂದು ವೇಳೆ ಈ ನಿಯಮ ಉಲ್ಲಂಘಿಸಿದರೆ ದಂಡ ತೆರಬೇಕಾಗುತ್ತದೆ ಎಂದು ಮಂಗಳೂರು ನಗರ ಪೋಲೀಸ್ ಆಯುಕ್ತರು ತಿಳಿಸಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ಸೂಚನೆಗಳನ್ನು ಪಾಲಿಸುವದು ಪ್ರತಿಯೊಬ್ಬ ನಾಗರೀಕನ ಕರ್ತವ್ಯ.ತಪ್ಪಿದಲ್ಲಿ ಕಾನೂನು  ರೀತ್ಯ ಕ್ರಮ ಜರುಗಿಸಲು ಸಂಚಾರಿ ಪೊಲೀಸ್ ಅಧಿಕಾರಿಗಳು ಬದ್ಧರಾಗಿರುತ್ತಾರೆಂದು ಪೋಲೀಸ್ ಆಯುಕ್ತರು ತಿಳಿಸಿರುತ್ತಾರೆ.

Friday, August 16, 2013

ಆರು ತಿಂಗಳೊಳಗೆ ಕಸವಿಭಜನೆ ಮನೆಗಳಿಂದ ಆರಂಭವಾಗಲಿ: ಭರತ್ ಲಾಲ್ ಮೀನ

ಮಂಗಳೂರು, ಆಗಸ್ಟ್.16:- ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇಯನ್ನು ಯಶಸ್ವಿಯಾಗಿಸಲು ಮುಂದಿನ ಆರು ತಿಂಗಳೊಳಗಾಗಿ ಪ್ರತಿಯೊಂದು ಮನೆಯಿಂದ ಕಸವಿಭಜಿಸಿ ಸಂಗ್ರಹ ಆರಂಭವಾಗಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಭರತ್ ಲಾಲ್ ಮೀನಾ ಅವರು ಸೂಚಿಸಿದರು.
ಆರು ತಿಂಗಳೊಳಗೆ ಶೇ 80 ಪ್ರಗತಿ ದಾಖಲಿಸಬೇಕೆಂದ ಉಸ್ತುವಾರಿ ಕಾರ್ಯದರ್ಶಿಗಳು, ಈ ಸಂಬಂಧ ಪ್ರತೀ ವಾರಕ್ಕೊಮ್ಮೆ ಪ್ರಗತಿಯನ್ನು ತಮಗೆ ಕಳುಹಿಸಿಕೊಡಬೇಕೆಂದು ಮಹಾನಗರಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಮೂಡಬಿದ್ರೆಯಲ್ಲಿ ಕಸವಿಭಜಿಸಿ ಸಂಗ್ರಹಿಸುವ ಕಾರ್ಯ ಯಶಸ್ವಿಯಾಗಿದ್ದು, ಈ ಯಶೋಗಾಥೆ ಉಳಿದವರಿಗೆ ಪ್ರೇರಪಣೆ ನೀಡುವಂತೆ ಇಂತಹ ಮಾದರಿಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕೆಂದು ಉಸ್ತುವಾರಿ ಕಾರ್ಯದರ್ಶಿ ಹಾಗೂ ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಮೀನಾ ಅವರು ಹೇಳಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಉತ್ತಮ ರಸ್ತೆಗಳಾಗಿದ್ದು, ಒಳಚರಂಡಿ ಮತ್ತು ರಸ್ತೆ ಬದಿಗೆ ಇಂಟರ್ ಲಾಕ್ ಹಾಕುವ ಬಗ್ಗೆ, ಏರ್ಪೋರ್ಟವರೆಗಿನ ರಸ್ತೆಗೆ ಕಾಂಕ್ರೀಟ್ ಹಾಕುವ ಅನುದಾನ ಕುರಿತು ಉಸ್ತುವಾರಿ ಕಾರ್ಯದರ್ಶಿಗಳ ಗಮನಕ್ಕೆ ತರಲಾಯಿತು.
ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಣೆಗೆ ತೊಂದರೆ ಇಲ್ಲ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಉಪನಿರ್ದೇಶಕರು ಸ್ಪಷ್ಟಪಡಿಸಿದರು. ಬಿಪಿಎಲ್ ಕಾರ್ಡ್ ದಾರರು ಅಕ್ಕಿ ಪಡೆದುಕೊಂಡು ಹೊರಗಡೆ ಮಾರಾಟವಾದ ಪ್ರಕರಣಗಳು ಬಂದರೆ ಅಂತಹವರ ಕಾರ್ಡ್ ಗಳನ್ನು ರದ್ದುಪಡಿಸುವುದಲ್ಲದೆ ಕಾನೂನಿನಡಿ ಕ್ರಮಕೈಗೊಳ್ಳಲು ಕಾರ್ಯದರ್ಶಿಗಳು ಸೂಚನೆ ನೀಡಿದರು.  ಹಾಸ್ಟೆಲ್ ಗಳಿಗೆ 381 ಟನ್ ಅಕ್ಕಿ ಪೂರೈಕೆ ಮಾಡಲಾಗಿದೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಮುಂದಿನ ಎರಡು ವಾರಗಳೊಳಗಾಗಿ ಕಾರ್ಮಿಕ ಇಲಾಖೆ ಅಧಿಕಾರಿಗಳು ಮಹಾನಗರಪಾಲಿಕೆ ಆಯುಕ್ತರು ಮತ್ತು ಉಪವಿಭಾಗಾಧಿಕಾರಿಗಳ ನೆರವಿನೊಂದಿಗೆ ನಗರದ ಬಹುಮಹಡಿಗಳ ಕಾರ್ಮಿಕರಲ್ಲಿ ಗುರುತು ಪತ್ರ ಇರುವ ಕುರಿತು ಪರಿಶೀಲನೆ ಮತ್ತು ಇಲ್ಲದವರಿಗೆ ಗುರುತುಪತ್ರ ನೀಡುವ ಬಗ್ಗೆ ಆಂದೋಲನ ಮಾದರಿಯಲ್ಲಿ ಕ್ರಮಕೈಗೊಂಡು ಗುರುತುಪತ್ರ ಪೂರೈಸಬೇಕೆಂದು ಸೂಚನೆ ನೀಡಿದರು.
ನೆರೆಹಾವಳಿಯಡಿ ಜಿಲ್ಲೆಗೆ 1.60 ಕೋಟಿ ರೂ.ಅನುದಾನ ಬಿಡುಗಡೆಯಾಗಿದ್ದು ಅರ್ಹರಿಗೆ ಪರಿಹಾರ ತಕ್ಷಣವೇ ನೀಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಶ್ರೀ ಕೆ ಎ ದಯಾನಂದ ಅವರು ಮಾಹಿತಿ ನೀಡಿದರು. ಇದಲ್ಲದೆ ವಿಕೋಪ ಪರಿಹಾರವನ್ನು ಹೆಚ್ಚಿಸಲಾಗಿದ್ದು, ಪಕ್ಕಾ ಮನೆಗೆ 70,000 ರೂ. ಹಾಗೂ ಕೃಷಿ ಬೆಳೆ ಹಾನಿಗೆ ಹೆಕ್ಟೇರ್ ಗೆ 4,500 ರೂ.ಗಳನ್ನು ನೀಡುವ ಸಂಬಂಧ ಹೊಸ ಆದೇಶ ಬಂದಿದೆ ಎಂದು ವಿವರಿಸಿದರು.
ಸಾಮಾಜಿಕ ಭದ್ರತಾ ಯೋಜನೆಯಡಿ 72,110 ಫಲಾನುಭವಿಗಳಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿಗಳು ನುಡಿದರು. ಜಿಲ್ಲೆಯಲ್ಲಿ ಶೇಕಡ 91 ಬಿತ್ತನೆಯಾಗಿದ್ದು, ರಸಗೊಬ್ಬರ ಪೂರೈಕೆಯಲ್ಲಿ ತೊಂದರೆ ಇಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದರು.  ಬೆಳೆ ಹಾನಿ ಬಗ್ಗೆ ಸವಿವರ ವರದಿ ಸಿದ್ಧಪಡಿಸಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ವ್ಯಾಪ್ತಿಯಡಿ ಬರುವ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಿಇಒ ಶ್ರೀಮತಿ ತುಳಸಿ ಮದ್ದಿನೇನಿ ಅವರು ಮಾಹಿತಿ ನೀಡಿ ವಸತಿ ಯೋಜನೆ ಅನುಷ್ಠಾನಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು. ಸುವರ್ಣ ಗ್ರಾಮಕ್ಕೆ ಸಂಬಂಧಿಸಿದಂತೆ ಯೋಜನೆ ರೂಪಿಸಲಾಗಿದೆ. ಪಿಎಂಜಿಎಸ್ವೈಯಡಿ 200 ಕಿ.ಮೀ ಒಟ್ಟು ಜಿಲ್ಲೆಗೆ ತಾಲೂಕಿಗೆ 40 ಕಿ.ಮೀ ಹಾಗೆ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆಯಡಿ ರೈತರ ಅನುಕೂಲಕ್ಕೆ ವೈಯಕ್ತಿಕ ಮತ್ತು ಸಾಮೂಹಿಕ ಕಾಮಗಾರಿಗಳ ಸೇರ್ಪಡೆ ಬಗ್ಗೆ ಕಾರ್ಯದರ್ಶಿಗಳು ಸಲಹೆಗಳನ್ನು ನೀಡಿದರು.
ಕ್ಷೀರಭಾಗ್ಯ ಯೋಜನೆಯಡಿ ಹಾಲಿನಪುಡಿಗೆ 3,800 ಕೆ.ಜಿ.ಬೇಡಿಕೆ ಇಡಲಾಗಿದ್ದು, 2345 ಕೆ. ಜಿ  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳು ಹೇಳಿದರು ಸಭೆಯಲ್ಲಿ ಜಿಲ್ಲಾಧಿಕಾರಿ ಎನ್ ಪ್ರಕಾಶ್, ಉಪಸ್ಥಿತರಿದ್ದರು. 

Thursday, August 15, 2013

ದ.ಕ. 67ನೇ ಸ್ವಾತಂತ್ರೋತ್ಸವದ ಸಂಭ್ರಮ

ಮಂಗಳೂರು, ಆಗಸ್ಟ್.15:  67ನೇ ಸ್ವಾತಂತ್ರೋತ್ಸವ ಮಂಗಳೂರಿನಲ್ಲಿಂದು ಸಂಭ್ರಮ ಸಡಗರಗಳಿಂದ ಆಚರಿಸಲಾಯಿತು.ನಗರದ ನೆಹರು ಮೈದಾನಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ಅವರು ಧ್ವಜಾರೋಹಣ ನೆರವೇರಿಸಿ ,ಗೌರವ ವಂದನೆ ಸ್ವೀಕರಿಸಿದರು.
 ಬಳಿಕ ಸ್ವಾತಂತ್ರೋತ್ಸವ ಸಂದೇಶ ನೀಡಿದ ಉಸ್ತುವಾರಿ ಸಚಿವರು, 2014-15ರ ಬಜೆಟ್ ಮಂಡಿಸುವ  ವೇಳೆ ರಾಜ್ಯ ಸರಕಾರವು ನೂತನ ಕೈಗಾರಿಕಾ ನೀತಿ-2013 ಅನ್ನು ಜಾರಿಗೆ ತರಲಿದೆ ಎಂದರು.
ಈ ಬಾರಿಯ ಬಜೆಟ್ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದ ಅವರು, ಬಜೆಟ್ ನಲ್ಲಿ ತಿಳಿಸಿರುವಂತೆ ಮಂಗಳೂರಿನಲ್ಲಿ ಅಬ್ದುಲ್ ನಜೀರ್ ಸಾಬ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರ ಸ್ಥಾಪನೆ ಹಾಗೂ ಮಂಗಳೂರು ಕೇಂದ್ರ ಸ್ಥಾನದಲ್ಲಿ ಪೊಲೀಸ್ ಸಾರ್ವಜನಿಕ ಶಾಲೆಯ ಮಾದರಿಯ ಶಾಲೆಯನ್ನು ಪ್ರಾರಂಭಿಸಲಾಗುವುದು ಎಂದರು.
ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಪೀಠ ಸ್ಥಾಪಿಸುವ ಹಿನ್ನಲೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸಲು ಎರಡು ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಜೈನ ಕವಿ ರತ್ನಾಕರವರ್ಣಿ ಅಧ್ಯಯನ ಪೀಠ ಆರಂಭ ಹಾಗೂ ಮೂಡಬಿದರೆಯಲ್ಲಿ ಜೈನ ಕವಿ ರತ್ನಾಕರ ವಣರ್ಿ ಜಯಂತಿ ಆಚರಣೆಗೆ ಆರ್ಥಿಕ ನೆರವನ್ನು ಸಹ ಈ ಬಾರಿಯ ಬಜೆಟ್ನಲ್ಲಿ ಘೋಷಿಸಲಾಗಿದೆ.  ತುಳು ಮತ್ತು ಬಿಲ್ಲವ ಸಮಾಜದ ಆರಾಧ್ಯ ದೈವವಾದ ಕೋಟಿ ಚನ್ನಯ್ಯನವರ ಜನ್ಮಸ್ಥಳವಾದ ಪುತ್ತೂರು ತಾಲೂಕಿನ ಪಡುಮಲೆಯಲ್ಲಿ ಅವರು ಹುಟ್ಟಿ ಬೆಳೆದ ಕುರುಹುಗಳನ್ನು ಅಭಿವೃದ್ಧಿಪಡಿಸಲು 5 ಕೋಟಿ ರೂ. ನೀಡಲಾಗಿದೆ. ಕರಾವಳಿ ಮೀನುಗಾರಿಕೆಗೆ ಅತೀ ಅಗತ್ಯವಿರುವ ಮೀನುಗಾರಿಕೆ ಬಂದರನ್ನು ಮಂಗಳೂರಿನ ಕುಳಾಯಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ರಾಜ್ಯದ ಮೀನುಗರಿಕಾ ಇಲಾಖಾ ಕಾರ್ಯಕ್ರಮಕ್ಕಾಗಿ 2013-14ನೇ ಸಾಲಿಗೆ 229 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಹೇಳಿದರು. 
ಅನ್ನ ಭಾಗ್ಯ, ಕ್ಷೀರ ಭಾಗ್ಯ, ಹಾಲಿಗೆ ಪೋತ್ಸಾಹ ಧನ, ಅಲ್ಪಸಂಖ್ಯಾತರ ಕಲ್ಯಾಣ ಕೋಶ, ವಿದ್ಯುತ್ ಬಾಕಿ ಮನ್ನಾ, ಸೇರಿದಂತೆ ರೈತರು, ಬಡವರು, ಅಲ್ಪಸಂಖ್ಯಾತರು ಸೇರಿದಂತೆ ಜನಪರ ಯೋಜನೆಗಳು, ಸಹಕಾರಗಳ ಮೂಲಕ ರಾಜ್ಯ ಸರಕಾರ ರಾಜ್ಯವನ್ನು ಗುಡಿಸಲು ರಹಿತ ರಾಜ್ಯವನ್ನಾಗಿ ರೂಪಿಸುವ ಗುರಿಯನ್ನು ಹೊಂದಿದೆ. 2017ರ ಅವಧಿಗೆ ವಿದ್ಯುತ್ ವಲಯದಲ್ಲಿ ಸಂಪೂರ್ಣ ಸ್ವಾವಲಂಬನೆಯನ್ನು ಸಾಧಿಸುವ ಬದ್ಧತೆಯನ್ನು ಸರಕಾರ ಹೊಂದಿದೆ ಎಂದರು. 
ಜನಪರ ನೀತಿ ಮತ್ತು ಜನೋಪಯೋಗಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ಕನರ್ಾಟಕವನ್ನು  ಪ್ರಗತಿಯ ಪಥಕ್ಕೆ ಕೊಂಡೊಯ್ಯುವ ವಿಶ್ವಾಸ ಸರಕಾರದ್ದಾಗಿದ್ದು, ಕಳೆದ ಎರಡು ತಿಂಗಳ ಅವಧಿಯಲ್ಲಿ ನಾವು ಜಾರಿಗೊಳಿಸಿರುವ ಹಲವಾರು ಜನಪರ ಕಾರ್ಯಕ್ರಮಗಳು ಜನತೆಯ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸರಕಾರದ ಕಾಳಜಿ ಮತ್ತು ಬದ್ಧತೆಗೆ ದಿಕ್ಸೂಚಿ ಎಂದು ಉಸ್ತುವಾರಿ ಸಚಿವರು ನುಡಿದರು. ದೇಶ ಹಾಗೂ ರಾಜ್ಯದ ಸಾಂಸ್ಕೃತಿಕ ಹಾಗೂ ಪಾರಂಪರಿಕ ಜನಜೀವನದಲ್ಲಿ ಕೊರಗ ಸಮುದಾಯದ ಪಾತ್ರ ಅಮೂಲವಾಗಿರುವ ಹಿನ್ನೆಲೆಯಲ್ಲಿ ಮೂಲ ನಿವಾಸಿಗಳಿಗೆ ಸೂಕ್ತ ಮೂಲಭೂತ ಸೌಲಭ್ಯ ಒದಗಿಸುವುದರೊಂದಿಗೆ ಅವರನ್ನು ರಾಷ್ಟ್ರೀಯ ಮುಖ್ಯವಾಹಿನಿಗೆ ತರುವ ಉದ್ದೇಶದೊಂದಿಗೆ ದ.ಕ. ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವೆಬ್ ಸೈಟ್ www.itdpdk.com  ನ ಅನಾವರಣ ಹಾಗೂ ಕೊರಗ ಸಮುದಾಯದ ನಾಲ್ವರಿಗೆ ಸಾಂಕೇತಿಕವಾಗಿ ಗುರುತಿನ ಚೀಟಿಯನ್ನು ರಾಜ್ಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ. ರಮಾನಾಥ ರೈ ವಿತರಿಸಿದರು
ಕಾರ್ಯಕ್ರಮದಲ್ಲಿ ಯೆನೆಪೊಯ ಶಾಲೆಯ 3ನೆ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿ, ರಾಜ್ಯ ಹಾಗೂ ರಾಷ್ಟ್ರ ಮಟ್ಟಗಳಲ್ಲಿ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ  ನೇಸರ ಆರ್. ಪೂಜಾರಿ ಅವರನ್ನು ಸಚಿವರು ಸನ್ಮಾನಿಸಿದರು.
ಇದೇ ವೇಳೆ ಪಥಸಂಚಲನದಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದಕ್ಕಾಗಿ ಎನ್ ಸಿ ಸಿ ಏರ್ ವಿಂಗ್ ಸೀನಿಯರ್ ವಿಭಾಗಕ್ಕೆ ಪ್ರಥಮ ಹಾಗೂ ಅಳಿಕೆ ಶ್ರೀ ಸತ್ಯಸಾಯಿ ಬ್ಯಾಂಡ್ ತಂಡಕ್ಕೆ ದ್ವಿತೀಯ ಬಹುಮಾನ ನೀಡಿ ಗೌರವಿಸಲಾಯಿತು.
ಕಾರ್ಕಳದ ಇಂಡಿಯನ್ ಏರೋ ಮಾಡಲಿಂಗ್ ಸೊಸೈಟಿಯ ರತ್ನಾಕರ ನಾಯಕ್ ಅವರ ಪುಟಾಣಿ ಮಾದರಿ ಹೆಲಿಕಾಪ್ಟರ್ ಗ ಳು ನೆಹರೂ ಮೈದಾನದಲ್ಲಿ ಹಾರಾಟ ನಡೆಸುತ್ತಾ ಅಲ್ಲಿ ಸೇರಿದ್ದ ಶಾಲಾ ಮಕ್ಕಳು ಹಾಗೂ ಪ್ರೇಕ್ಷಕರನ್ನು ರಂಜಿಸಿತು. 
ಬಿಷಪ್ ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಮೋನಪ್ಪ ಭಂಡಾರಿ, ಜೆ.ಆರ್. ಲೋಬೋ, ಜಿ.ಪಂ. ಅಧ್ಯಕ್ಷ ಕೊರಗಪ್ಪ ನಾಯ್ಕ, ತಾಲೂಕು ಪಂಚಾಯತ್ ಅಧ್ಯಕ್ಷ ಹರೀಶ್ ಕುಮಾರ್, ಜಿ.ಪಂ. ಜಿಲ್ಲಾಧಿಕಾರಿ ಎನ್. ಪ್ರಕಾಶ್, ಅಪರ ಜಿಲ್ಲಾಧಿಕಾರಿ ದಯಾನಂದ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ, ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್, ಪೊಲೀಸ್ ಆಯುಕ್ತ ಮನೀಶ್ ಕರ್ಬೀಕರ್ ಮೊದಲಾದವರು ಉಪಸ್ಥಿತರಿದ್ದರು. 

ಪಚ್ಚನಾಡಿ ತ್ಯಾಜ್ಯ ಸಮಸ್ಯೆ ಪರಿಹರಿಸಲು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ


ಮಂಗಳೂರು,ಆಗಸ್ಟ್ 15: ಒಂದು ವಾರದೊಳಗೆ ಜಿಲ್ಲಾಧಿಕಾರಿಗಳು ಪಚ್ಚನಾಡಿ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ತ್ಯಾಜ್ಯ ವಿಲೇ ಸಮಸ್ಯೆಗೆ ವೈಜ್ಞಾನಿಕ ಪರಿಹಾರ ನೀಡಲು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅರಣ್ಯ, ಪರಿಸರ  ಹಾಗೂ ಜೀವಿಶಾಸ್ತ್ರ ಸಚಿವರು ಆಗಿರುವ  ಬಿ. ರಮಾನಾಥ ರೈ ಅವರು ಸೂಚನೆ ನೀಡಿದರು.
          ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಸಂಬಂಧ ಶಾಸಕರು, ಮಹನಗರಪಾಲಿಕೆ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಪಾಲಿಕೆ ಸದಸ್ಯರೊಂದಿಗೆ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲರ ಸಲಹೆಗಳನ್ನು, ಸಮಸ್ಯೆಗಳನ್ನು ಆಲಿಸಿದ ಬಳಿಕ ಮೇಲಿನ ನಿರ್ಧಾರವನ್ನು ಪ್ರಕಟಿಸಿದರು.
ಮಹಾನಗರಪಾಲಿಕೆ ಆಯುಕ್ತರು ಪ್ರಸಕ್ತ ಅಲ್ಲಿ ತ್ಯಾಜ್ಯ ವಿಲೇಗೆ ಗುತ್ತಿಗೆ ಪಡೆದಿರುವ ಹಾಗೂ ಸಮಸ್ಯೆಗಳ ಇತ್ಯರ್ಥಕ್ಕೆ ಅಗತ್ಯವಿರುವ ಕುಂದುಗಳನ್ನು ನಿವಾರಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು ನುಡಿದರು. ಮನೆ ಮನೆ ಕಸ ಸಂಗ್ರಹ ಹಾಗೂ ಕಸವಿಭಜನೆಯನ್ನು ಮನೆಯಿಂದಲೇ ಆರಂಭಿಸುವ ಬಗ್ಗೆ ಜನರಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕೆಂದು ಸಚಿವರು ಹೇಳಿದರು. ಈ ಬಗ್ಗೆ ಮಹಾನಗರಪಾಲಿಕೆ ಆಯುಕ್ತರು ಮಾಧ್ಯಮದವರ ಸಹಕಾರ ಪಡೆಯಬೇಕೆಂದು ಸಚಿವರು ಹೇಳಿದರು. ಅರಣ್ಯ ಇಲಾಖೆಗೆ 4000 ಮರಗಳನ್ನು ಅದರಲ್ಲೂ ಆಮ್ಲಜನಕ ಹೆಚ್ಚಿಗೆ ಉತ್ಪಾದಿಸುವ ಉತ್ತಮ ಮರಗಳನ್ನು ಈ ಪ್ರದೇಶದಲ್ಲಿ ಬೆಳೆಸಲು ಸಚಿವರು ನಿರ್ದೇಶನ ನೀಡಿದ್ದು, ಮಹಾಗಣಿಯಂತಹ ಸಸಿಗಳನ್ನು ಈಗಾಗಲೇ ಅರಣ್ಯ ಇಲಾಖೆ ಬೆಳೆಸಲು ಅಲ್ಲಿ ಆರಂಭಿಸಿದೆ ಎಂದಸುತ್ತಮುತ್ತಲ ಪ್ರದೇಶಗಳ ಜನರಿಗೆ ತ್ಯಾಜ್ಯ ವಿಲೇ ಘಟಕದಿಂದ ಆರೋಗ್ಯಕ್ಕೆ ತೊಂದರೆಯಾದ ಸಂದರ್ಭದಲ್ಲಿ ಪಾಲಿಕೆಯ ಆರೋಗ್ಯ ವಿಭಾಗ ತುತರ್ಾಗಿ ಸ್ಪಂದಿಸಬೇಕು. ಜನರ ಸಮಸ್ಯೆಗಳನ್ನು ಆಲಿಸಿ, ಸೂಕ್ತವಾಗಿ ಸ್ಪಂದಿಸಿ ಎಂದು ಸಚಿವರು ಸೂಚಿಸಿದರು.
ಸುತ್ತಮುತ್ತಲ ಪ್ರದೇಶಗಳು ಕಲುಷಿತಗೊಳ್ಳದಂತೆ ತಡೆಯಲು ಹಾಗೂ ವಾಸನೆಯನ್ನು ತಡೆಯಲು ಬಯೋ ಎನ್ಜೈಮ್ಸ್ ಬಳಕೆ ಅನಿವಾರ್ಯ. ಇನ್ನು ಮುಂದೆಯೂ ಕಸದ ಮೇಲೆ ಮಣ್ಣು ಹಾಕಿ ಮುಚ್ಚುವ ಪ್ರಕ್ರಿಯೆಯನ್ನೇ ಮುಂದುವರಿಸಿದರೆ ಕಸ ಹಾಕಲು ಸ್ಥಳದ ಕೊರತೆ ಉದ್ಭವವಾಗಲಿದೆ. ಪ್ರತಿದಿನಕ್ಕೆ ಇಲ್ಲಿಗೆ 250ರಿಂದ 300 ಟನ್ ಕಸ ಬರುತ್ತಿದ್ದು, ಪ್ರತಿ ಪುರಸಭೆಗಳಲ್ಲಿ ಅಲ್ಲಿನ ಕಸ ಅಲ್ಲೇ ವಿಲೇ ಆಗುವಂತೆ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಪರಿಸರ ಅಧಿಕಾರಿಗಳು ತಮ್ಮ ಅಧಿಕಾರವನ್ನು ಉಪಯೋಗಿಸಿ ಸಮಸ್ಯೆಗಳ ಪರಿಹಾರಕ್ಕೆ ಪೂರಕ ನೆರವು ನೀಡಬೇಕೆಂದು ಉಸ್ತುವಾರಿ ಸಚಿವರು ಹೇಳಿದರು. ತ್ಯಾಜ್ಯ ವಿಲೇ ಆಗಲೇಬೇಕು. ಹಾಗಾಗಿ ವೈಜ್ಞಾನಿಕ ತ್ಯಾಜ್ಯ ವಿಲೇಗೆ ಪಚ್ಚನಾಡಿ ಮಾದರಿ ಆಗಲಿ. ಜಿಲ್ಲಾಧಿಕಾರಿಗಳಿಗೆ ಈ ಸಂಬಂಧ ಎಲ್ಲ ನಿರ್ಧಾರ ಕೈಗೊಳ್ಳಲು ಎಲ್ಲ ಅಧಿಕಾರವನ್ನು ನೀಡಲಾಗಿದೆ ಎಂದು ಉಸ್ತುವಾರಿ ಸಚಿವರು ಸ್ಪಷ್ಟಪಡಿಸಿದರು.  ಸಭೆಯಲ್ಲಿ ಶಾಸಕರಾದ ಜೆ ಆರ್ ಲೋಬೋ, ಮೊಹಿಯುದ್ದಿನ್ ಬಾವಾ, ಅಪರ ಜಿಲ್ಲಾಧಿಕಾರಿ ದಯಾನಂದ ಕೆ. ಎ., ಪಾಲಿಕೆ ಆಯುಕ್ತರಾದ ಶಾನಾಡಿ ಅಜಿತ್ ಹೆಗ್ಡೆ, ಡಿಸಿಎಫ್ ಪಾಲಯ್ಯ, ವಲಯ ಅರಣ್ಯ ಸಂರಕ್ಷಣಾಧಿಕಾರಿ ಶಾಂತಪ್ಪ ಮತ್ತು ವಲಯ ಆಯುಕ್ತರಾದ ಶ್ರೀಮತಿ ಪ್ರಮೀಳಾ, ಪರಿಸರ ಅಧಿಕಾರಿಗಳು, ಡಾ. ಸುದರ್ಶನ್, ಪರಿಸರ ಅಧಿಕಾರಿ, ಕಾರ್ಪೋರೇಟರ್ ಗಳು ಪಾಲ್ಗೊಂಡಿದ್ದರು.

Wednesday, August 14, 2013

ಕೃಷಿಕರಿಗೆ ಸೌಲಭ್ಯ ತಲುಪಿಸಿ: ಕೊರಗಪ್ಪ ನಾಯಕ್

ಮಂಗಳೂರು ಆಗಸ್ಟ್ 14 :- ಜಿಲ್ಲೆಯಲ್ಲಿ ಒಟ್ಟು 813 ಕಿಂಡಿ ಅಣೆಕಟ್ಟುಗಳಿದ್ದು 230 ಕಿಂಡಿ ಅಣೆಕಟ್ಟುಗಳು ದುರಸ್ತಿಯಾಗಬೇಕಿವೆ ಎಂದು ಜಿಲ್ಲಾ ಜಲಾನಯನ ಅಧಿಕಾರಿಗಳು ಮಾಹಿತಿ ನೀಡಿದರು.
ಕೃಷಿ ಪ್ರದಾನ ದೇಶ ನಮ್ಮದು. ನಮ್ಮ ಜಿಲ್ಲೆಯಲ್ಲೂ ಕೃಷಿಗೆ ಆದ್ಯತೆ ನೀಡಲಾಗುತ್ತಿದ್ದು, ಕೃಷಿ ಸೌಲಭ್ಯಗಳನ್ನು ಕೃಷಿಕರಿಗೆ ಒದಗಿಸುವ ಬಗ್ಗೆ ಉದಾಸೀನ ಮಾಡದೆ ತಲುಪಿಸುವ ಕೆಲಸಗಳನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಾಡಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೊರಗಪ್ಪ ನಾಯ್ಕ್ ಅವರು ಆದೇಶಿಸಿದರು.
ಇಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನಲ್ಲಿ ಜರುಗಿದ ಕೆಡಿಪಿ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಜಲಾನಯನ ಇಲಾಖೆಗಳ ಕಿಂಡಿ ಅಣೆಕಟ್ಟು/ ಚೆಕ್ ಡ್ಯಾಂಗಳು ನಿರ್ವಹಣೆಯಿಲ್ಲದೆ ದುಸ್ತಿತಿಯಲ್ಲಿದ್ದು, ಈ ಯೋಜನೆಗಳ ಸಮರ್ಪಕ ನಿರ್ವಹಣೆಯಿಂದ ನೂರಾರು ಕೃಷಿಕರಿಗೆ ನೆರವಾಗಲಿದೆ. ಹೊಸ ಯೋಜನೆಗಳ ಬದಲು ನಿರ್ವಹಣೆಗೆ ಆದ್ಯತೆ ನೀಡಿ ಎಂದು ಅಧ್ಯಕ್ಷರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದಂತೆ ಗಂಗಾ ಕಲ್ಯಾಣ ಯೋಜನೆಯಡಿ 11-12 ನೇ ಸಾಲಿನಲ್ಲಿ 66 ಕೊಳವೆ ಬಾವಿಗಳನ್ನು ಕೊರೆಯಲು ಬಾಕಿ ಇದ್ದು, ಇವುಗಳನ್ನು ಅಕ್ಟೋಬರ್ ಅಂತ್ಯದ ವೇಳೆಗೆ ಸಂಪೂರ್ಣಗೊಳಿಸಲಾಗುವುದು. 12-13ನೇ ಸಾಲಿಗೆ ಕೊಳವೆ ಬಾವಿ ಕೊರೆಯಲು ಗುತ್ತಿಗೆದಾರರ ನೇಮಕವಾಗಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗಲಿದೆ ಎಂದು ಅಧಿಕಾರಿಗಳು ಅಧ್ಯಕ್ಷರಿಗೆ ಮಾಹಿತಿ ನೀಡಿದರು.
ಕಾರ್ಮಿಕ ಇಲಾಖೆ ಅಧಿಕಾರಿಗಳು ಗ್ರಾಮಪಂಚಾಯತ್ನ ಗ್ರಾಮಸಭೆಗೆ ಹಾಜರಾಗುತ್ತಿಲ್ಲ ಎಂಬ ದೂರಿನ ಬಗ್ಗೆ ಅಧ್ಯಕ್ಷರು ಮಾಹಿತಿ ಕೋರಿ, ನಗರದಲ್ಲಿ ಮಾತ್ರ ಇಲಾಖೆಯು ಕರ್ತವ್ಯ ನಿರ್ವಹಿಸದೆ ಗ್ರಾಮೀಣ ಪ್ರದೇಶದ ನಾಗರೀಕರ ಬಗ್ಗೆಯೂ ಇದೇ ಬಗೆಯ ಹಿತಾಸಕ್ತಿಯನ್ನು ವಹಿಸಿಕೊಂಡು ಕಾರ್ಯೋನ್ಮುಖವಾಗಬೇಕೆಂದರು.
ಕೆಳಹಂತದ ಅಧಿಕಾರಿಗಳು ಗ್ರಾಮಸಭೆಗೆ ಹಾಜರಾಗುವುದನ್ನು ಖಾತ್ರಿ ಪಡಿಸಿಕೊಳ್ಳಿ ಎಂದು ಅಧ್ಯಕ್ಷರು ಅಧಿಕಾರಿಗಳಿಗೆ ಹೇಳಿದರು. ಗುರುತು ಚೀಟಿ ಹೊಂದಿರುವ ಕಾರ್ಮಿಕರಿಗೆ ಎಲ್ಲರೂ ಕೆಲಸ ನೀಡುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕೆಂದರು. ಕಾರ್ಮಿಕರು ಗುರುತುಚೀಟಿ ಹೊಂದಿರುವುದರಿಂದ ಅವಘಡಗಳು ನಡೆದಾಗ ಪರಿಹಾರ ನೀಡುವುದು ಸುಲಭ ಎಂದರು.
ಕ್ಷಯರೋಗದವರಿಗೆ ವಿಶೇಷ 10 ಹಾಸಿಗೆಗಳ ಸೌಲಭ್ಯ ವೆನ್ ಲಾಕ್ ಆಸ್ಪತ್ರೆಯಲ್ಲಿದ್ದು ಕ್ಷಯರೋಗಿಗಳಿಗೆ ಇಲ್ಲಿ ಶುಶ್ರೂಷೆ ನೀಡಲಾಗುವುದು ಎಂದು ಡಿಎಚ್ ಒ ಶಿವಕುಮಾರ್ ಉತ್ತರಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಪೌಷ್ಠಿಕ ಮಕ್ಕಳ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು.  ಬಾಲಸಂಜೀವಿನಿ ಯೋಜನೆಯಡಿ ಮಕ್ಕಳಿಗೆ ಚಿಕಿತ್ಸೆ ನೀಡುವ ಬಗ್ಗೆ ಮಾಹಿತಿ ನೀಡಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲ ಅಂಗನವಾಡಿಗಳಲ್ಲಿ ಲೈಟ್ ಮತ್ತು ಫ್ಯಾನ್ ತಿರುಗಿದ ಬಳಿಕವೇ ವಿದ್ಯುತ್ ಸಂಪರ್ಕ ಸಂಪೂರ್ಣ ಎಂಬ ವರದಿ ನೀಡಬೇಕು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ತುಳಸಿ ಮದ್ದಿನೇನಿ ಸೂಚಿಸಿದರು.
ಎಲ್ಲ ಶಾಲೆಗಳಲ್ಲಿ ಮಳೆನೀರು ಕೊಯ್ಲು ಕಾಮಗಾರಿ ನಿರ್ವಹಣೆ ಹಾಗೂ ಉಪಯೋಗದ ಬಗ್ಗೆ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದವರು ಸಮೀಕ್ಷೆ ಮಾಡಿ ವರದಿ ನೀಡಬೇಕೆಂದು ಅಧಿಕಾರಿಗಳಿಗೆ ಅಧ್ಯಕ್ಷರು ಸೂಚಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಗ್ರಾಮೀಣ ಪ್ರದೇಶಗಳಾದ ಸುಬ್ರಹ್ಮಣ್ಯ-ಕಡಬ- ಚಾರ್ಮಡಿಗೆ ಶಾಲಾ ವೇಳೆಯಲ್ಲಿ ಹೆಚ್ಚಿಗೆ ಬಸ್ ಹಾಕಬೇಕೆಂದು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷರಾದ ಶ್ರೀಮತಿ ಆಶಾ ತಿಮ್ಮಪ್ಪ ಗೌಡ ಅವರು ಒತ್ತಾಯಿಸಿದರು. ಶೀಘ್ರದಲ್ಲೇ ಬಸ್ ಗಳನ್ನು ಹಾಕುವುದಾಗಿ ಸಂಸ್ಥೆಯ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
ಆಶ್ರಯ ನಿವೇಶನಗಳು, ಬಸವವಸತಿ ಯೋಜನೆ, ಅಂಬೇಡ್ಕರ್ ಯೋಜನೆಗಳನ್ನು ಮುಖ್ಯವಾಹಿನಿಗೆ ತರಲು ಒಂದು ತಿಂಗಳು ವಿಶೇಷ ಗಮನಹರಿಸಿ ಸಮಸ್ಯೆ ನಿವಾರಿಸಲು ಯತ್ನಿಸಲಾಗುವುದು ಎಂದು ಸಿಇಒ ಹೇಳಿದರು. 2009-10ನೇ ಸಾಲಿನವರೆಗಿನ ಯೋಜನೆಗಳ ಬಗ್ಗೆ ನಿರ್ದೇಶನಾಲಯದಿಂದ ಸ್ಷಷ್ಟ ಸುತ್ತೋಲೆ ಬಂದಿದ್ದು ಎಲ್ಲ ಯೋಜನೆಗಳನ್ನು ರದ್ದು ಪಡಿಸಲಾಗುವುದು. ನಂತರದ ಸಾಲಿನ ಮನೆಗಳ ಬಗ್ಗೆ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದು ಸಿಇಒ ಸ್ಪಷ್ಟಪಡಿಸಿದರು.
ಅನ್ನಭಾಗ್ಯ ಯೋಜನೆ ಬಗ್ಗೆ ಜಿಲ್ಲೆಯಲ್ಲಿ 1,87,000 ಫಲಾನುಭವಿಗಳಿದ್ದು, 5,100 ಟನ್ ಅಕ್ಕಿ ಎತ್ತುವರಿಯಾಗಿದೆ. 130ಟನ್ ಗೋಧಿ ವಿತರಣೆಯಾಗಿದೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಉಪನಿರ್ದೇಶಕರು ಮಾಹಿತಿ ನೀಡಿದರು.
8,000 ಎಪಿಎಲ್ ಮತ್ತು 8,000 ಬಿಪಿಎಲ್ ಪಡಿತರ ಚೀಟಿದಾರರ ಅರ್ಜಿ ಸ್ವೀಕರಿಸಲಾಗಿದೆ. ಬಿಪಿಎಲ್ ಗೆ ಅರ್ಹರಾಗಿರುವ ಪಡಿತರ ಚೀಟಿದಾರರು ಆನ್ ಲೈನ್ ನಲ್ಲಿ ಎಪಿಎಲ್ ಕಾಡ್ರ್  ಒಪ್ಪಿಸಿ ಅರ್ಜಿ ಹಾಕಬಹುದು ಎಂದು ಉಪನಿರ್ದೇಶಕರು ಸ್ಪಷ್ಟಪಡಿಸಿದರು.
ಕೃಷಿ ಇಲಾಖೆ, ಮೀನುಗಾರಿಕೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಕೃಷಿ ಕ್ಷೇತ್ರದಲ್ಲಿ ದುಡಿಯುವ ಕಾರ್ಮಿಕರು ಕೂಲಿ ಮಾಡುವಾಗ ಅವಘಡ ಸಂಭವಿಸಿದರೆ ಆ ಭೂಮಿಯ ಆರ್ ಟಿ ಸಿ ಹಾಗೂ ದೃಢೀಕರಣದ ಮೇಲೆ ಅವರಿಗೆ ಪರಿಹಾರ ನೀಡುವ ಬಗ್ಗೆ ಚರ್ಚಿಸಲಾಯಿತು.
ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಫಕೀರ, ಉಪಕಾರ್ಯದರ್ಶಿ ಉಮೇಶ್ ಎನ್ ಆರ್. ಉಪಸ್ಥಿತರಿದ್ದರು.

Tuesday, August 13, 2013

20 ದಿನದೊಳಗೆ ಬೆಳೆ ಹಾನಿ ವರದಿ ನೀಡಿ: ಕೊರಗಪ್ಪ ನಾಯ್ಕ

ಮಂಗಳೂರು,ಆಗಸ್ಟ್.13:- ಕಳೆದ ಮೂರು ತಿಂಗಳಿಂದ ಎಡೆಬಿಡದೆ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಅಡಿಕೆ ಬೆಳೆ ಸಂಪೂರ್ಣ ಕೊಳೆರೋಗಕ್ಕೆ ತುತ್ತಾಗಿದ್ದು, ಅಡಿಕೆ ಮತ್ತು ಭತ್ತದ ಬೆಳೆ ಹಾನಿಗೆ ಸಂಬಂಧಿಸಿದಂತೆ ಸಮಗ್ರ ವರದಿಯನ್ನು 20 ದಿನಗಳೊಳಗಾಗಿ ನೀಡುವಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ  ಕೆ .ಕೊರಗಪ್ಪ ನಾಯ್ಕ್ ಅವರು ಸೂಚಿಸಿದರು.
ದ.ಕ. ಜಿಲ್ಲಾ ಪಂಚಾಯತ್  ನೇತ್ರಾವತಿ ಸಭಾಂಗಣದಲ್ಲಿ ಇಂದು ಅಧ್ಯಕ್ಷ ಕೊರಗಪ್ಪ ನಾಯ್ಕ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಪಂಚಾಯತ್ನ 13ನೆ ಸಾಮಾನ್ಯ ಸಭೆಯಲ್ಲಿ ಅಡಿಕೆ ಕೊಳೆರೋಗದಿಂದ ಜಿಲ್ಲೆಯ ರೈತರು ಕಂಗೆಟ್ಟಿರುವ ಬಗ್ಗೆ ಸದಸ್ಯರು ಸಭಾಧ್ಯಕ್ಷರ ಗಮನ ಸೆಳೆದರು. ಅಡಿಕೆಯ ಫಸಲು ಮರದ ಮೇಲಿರದೆ ಅಡಿಕೆ ಗಿಡದ ಬುಡದಲ್ಲಿ ಹೆಕ್ಕುವ ಪರಿಸ್ಥಿತಿ ಬಂದಿದೆ. ಪರಿಹಾರ ನೀಡಲು ಕೇಂದ್ರ ಹಾಗೂ ರಾಜ್ಯ ಸಕರ್ಾರಕ್ಕೆ ಸಮೀಕ್ಷೆ ನಡೆಸಿ ಸಮಗ್ರ ವರದಿ ಸಲ್ಲಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಕೃಷಿ ಸಂಶೋಧನಾ ಕೇಂದ್ರಗಳ ತಜ್ಞರ ಸಲಹೆ ರೈತರಿಗೆ ಈ ವೇಳೆಯಲ್ಲಿ ಅಗತ್ಯವಿದೆ. ಈ ನಡುವೆ ಬಯೋಫೈಟ್/ಬಯೊಪಾಟ್/ ಬಯೋಫಿಟ್ಟ್/ ಬಯೋಕ್ಯೂರ್ ಬಳಕೆಯ ಬಗ್ಗೆಯೂ ಹಲವು ಗೊಂದಲಗಳಿವೆ. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಕೃಷಿ ಹಾಗೂ ತೋಟಗಾರಿಕಾ ಇಲಾಖಾಧಿಕಾರಿಗಳಿಗೆ ಅಧ್ಯಕ್ಷರು ಸೂಚಿಸಿದರು.      ಕೃಷಿಕರಿಗೆ ನೆರವು ಹಾಗೂ ಸಮಗ್ರ ಮಾಹಿತಿ ಬೇಕಿದೆ. ಈಗಾಗಲೇ ಸಹಕಾರ ಸಂಘಗಳಿಂದ ರೈತರು ಸಾಲ ಪಡೆದಿದ್ದು, ಬಡ್ಡಿ ಮನ್ನಾ ಹಾಗೂ ಸಾಲ ಪಾವತಿಸಲು ರೈತರಿಗೆ ಕಾಲಾವಕಾಶ ಕೋರಿ ಜಿಲ್ಲಾ ಪಂಚಾಯತ್ನಲ್ಲಿ ನಿರ್ಣಯ ಮಾಡಿ ಸರ್ಕಾರಕ್ಕೆ, ಸಚಿವರುಗಳಿಗೆ ವರದಿ ನೀಡುವ ಬಗ್ಗೆ ಜಿಲ್ಲ ಪಂಚಾಯತ್ನಲ್ಲಿ ನಿರ್ಧರಿಸಲಾಯಿತು.
ರೈತರ ಹೆಸರು, ಎಕರೆ ಮತ್ತು ಎಷ್ಟು ಶೇಕಡ ಮಾದರಿ ವರದಿ ತಯಾರಿಸಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ತುಳಸಿ ಮದ್ದಿನೇನಿ ಅಧಿಕಾರಿಗಳಿಗೆ ಸೂಚಿಸಿದರು.
ಬಜಪೆ ಕಿನ್ನಿಗೋಳಿ ಸೊಸೈಟಿಗಳಲ್ಲಿ ರೈತರಿಗೆ ಅಗತ್ಯ ಗೊಬ್ಬರ ಲಭ್ಯವಿಲ್ಲ ಎಂಬ ದೂರಿಗೆ ಸ್ಪಂದಿಸಿದ ಸಿಇಒ ಅವರು, ರೈತರಿಗೆ ರಸಗೊಬ್ಬರ ಲಭ್ಯವಾಗಿಸಿ ಎಂದು ರಸ ಗೊಬ್ಬರ ಸರಬರಾಜು ಕಂಪೆನಿಗೆ ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರಕ್ಕೆ ನೀಡುವ ಬಗ್ಗೆ ಸದಸ್ಯರ ಅಸಮಾಧಾನವನ್ನು ಗಮನಿಸಿದ ಸಿಇಒ ಅವರು 15 ದಿನಗಳೊಳಗೆ ನಿರ್ಮಿತಿ ಕೇಂದ್ರಕ್ಕೆ ನೀಡಿದ ಕಾಮಗಾರಿಗಳ ಪ್ರಗತಿಪರಿಶೀಲನೆ ನಡೆಸುವುದಾಗಿ ಹೇಳಿದರು. ಆದರೆ ಸದಸ್ಯರು ಅಂಗನವಾಡಿ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರದಿಂದ ಹಿಂಪಡೆದು ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗಕ್ಕೆ ನೀಡಬೇಕೆಂದು ಒತ್ತಾಯಿಸಿದರು.
ಬಜಪೆ ಗ್ರಾಮಪಂಚಾಯತ್ ವ್ಯಾಪ್ತಿಯ ತೊಟ್ಟಿಲಗುರಿಯಲ್ಲಿ ನಿರಾಶ್ರಿತರಾದವರಿಗೆ ನ್ಯಾಯಒದಗಿಸುವ ಬಗ್ಗೆಯೂ ಸಭೆ ನಿರ್ಧರಿಸಿತು.  
ಬಸವ ವಸತಿ ಯೋಜನೆ ಸಂಬಂಧ ನಡೆದ ಸವಿವರ ಚರ್ಚೆಗೆ ಉತ್ತರಿಸಿದ ಸಿಇಒ ಶ್ರೀಮತಿ ತುಳಸಿ ಮದ್ದಿನೇನಿ, ವಸತಿ ಯೋಜನೆಗೆ ಸಂಬಂಧಿಸಿ 2009-10ನೆ ಸಾಲಿನ ಬಾಕಿ ಪ್ರಕರಣಗಳನ್ನು ಪೂರ್ಣಗೊಳಿಸಲು ಅಥವಾ ಅಂತಿಮಗೊಳಿಸಲು ನಿದರ್ೇಶನ ನೀಡಲಾಗಿದೆ. ಈ ಬಗ್ಗೆ ಪ್ರತಿವಾರ ಪ್ರಗತಿ ಪರಿಶೀಲನೆಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಒಟ್ಟಿನಲ್ಲಿ ವಸತಿ ಯೋಜನೆಗೆ ಸಂಬಂಧಿಸಿದ ಎಲ್ಲಾ ರೀತಿಯ ಗೊಂದಲಗಳನ್ನು ಮುಂದಿನ ಎರಡು ಮೂರು ತಿಂಗಳಲ್ಲಿ ನಿವಾರಿಸುವುದಾಗಿ ಹೇಳಿದರು.
ಡೆಂಗ್ಯು ಬಗ್ಗೆ ನಡೆದ ಚರ್ಚೆಗೆ ಉತ್ತರಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶಿವಕುಮಾರ್, ದ.ಕ. ಜಿಲ್ಲೆಯಲ್ಲಿ ಡೆಂಗ್ಯುಗೆ ಐದು ಮಂದಿ ಬಲಿಯಾಗಿದ್ದು, 242 ಮಂದಿ ಶಂಕಿತ ಡೆಂಗ್ಯು ರೋಗಕ್ಕೆ ಒಳಗಾಗಿದ್ದರು ಎಂದು ತಿಳಿಸಿದರು. ಮೃತ ಕುಟುಂಬಗಳಿಗೆ ಪರಿಹಾರಕ್ಕಾಗಿ ಜುಲೈ 17ರಂದು ಮುಖ್ಯಮಂತ್ರಿ ಪರಿಹಾರ ನಿಧಿಗೆ ಪತ್ರ ಬರೆಯಲಾಗಿದೆ ಎಂದರು.
ಖಾಸಗಿ ಆಸ್ಪತ್ರೆಗಳಲ್ಲಿ ಡೆಂಗ್ಯುನಿಂದ ಮೃತಪಟ್ಟವರು ಹಾಗೂ ಚಿಕಿತ್ಸೆ ಪಡೆದವರ ಬಗ್ಗೆ ಜಿಲ್ಲಾ ಪಂಚಾಯತ್ನಲ್ಲಿ ಯಾವುದೇ ಮಾಹಿತಿ ಇಲ್ಲ ಎಂದು ಸದಸ್ಯರು ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು. ಮಾತ್ರವಲ್ಲದೆ, ಪ್ರತಿ ತಾಲೂಕಿನ ಆರೋಗ್ಯ ಕೇಂದ್ರಗಳಲ್ಲೂ ಎಲಿಸಾ ಪರೀಕ್ಷಾ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಸಭೆಯಲ್ಲಿ ವ್ಯಕ್ತವಾಯಿತು.
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವಿಳಂಬವಾಗುತ್ತಿರುವ ಬಗ್ಗೆ ತೀವ್ರ ಅಸಮಾಧಾನ ಸಭೆಯಲ್ಲಿ ವ್ಯಕ್ತವಾದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ 20 ಯೋಜನೆಗಳಲ್ಲಿ 14 ಕುಡಿಯುವ ನೀರಿನ ಯೋಜನೆಗಳು ಪ್ರಗತಿಯಲ್ಲಿವೆ. ಕಿನ್ನಿಗೋಳಿ ಕುಡಿಯುವ  ನೀರಿನ ಯೋಜನೆಯನ್ನು ತಾವು ಭೇಟಿ ನೀಡಿ ಪರಿಶೀಲಿಸಿರುವುದಾಗಿ ಹೇಳಿದರಲ್ಲದೆ, ಈ ಯೋಜನೆಯಡಿ ಡಿಸೆಂಬರ್ ನಿಂದ ನೀರು ಪೂರೈಕೆ ಮಾಡಲಾಗುವುದು ಎಂದು ಹೇಳಿದರು.
ವೆನ್ಲಾಕ್ ಆಸ್ಪತ್ರೆ ಸೇರಿದಂತೆ ಸರಕಾರಿ ಆಸ್ಪತ್ರೆಗಳಲ್ಲಿ ಇದಕ್ಕುತ್ತರಿಸಿದ ಡಾ. ಶಿವಕುಮಾರ್, ತುರ್ತು ಸಂದರ್ಭಕ್ಕೆ ಮುಖ್ಯವಾಗಿ ಹಾವು ಹಾಗೂ ಹುಚ್ಚುನಾಯಿ ಕಡಿತದ ಲಸಿಕೆಗಳು ಪ್ರಾಥಮಿಕ ಆರೋಗ್ಯ ಕೇಂದ್ರಗಳಲಿ ಲಸಿಕೆಗಳು ಸದಾ ಲಭ್ಯವಿರುವಂತೆ ಆದೇಶ ನೀಡಲಾಗಿದೆ. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ರಿತೇಶ್ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಆಶಾ ತಿಮ್ಮಪ್ಪ ಗೌಡ, ಜಯಶ್ರೀ, ಪಕೀರ ಉಪಸ್ಥಿತರಿದ್ದರು.
 

ರಾಷ್ಟ್ರಧ್ವಜ_ ಜಿಲ್ಲಾಧಿಕಾರಿಗಳ ಸೂಚನೆ

ಮಂಗಳೂರು, ಆಗಸ್ಟ್.13:-ದೇಶದ ಸ್ವಾತಂತ್ರ್ಯದ ಸಂಕೇತವಾದ ತ್ರಿವರ್ಣ ರಾಷ್ಟ್ರ ಧ್ವಜವನ್ನು ಎಲ್ಲೆಂದರಲ್ಲಿ ಮನಬಂದಂತೆ ಹಾರಿಸುತ್ತಿರುವುದು ದಕ್ಷಿಣಕನ್ನಡ  ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿರುತ್ತದೆ. ದಿನಾಂಕ 26-1-2002 ರಂದು ಜಾರಿಗೆ ಬಂದಿರುವ  ನಿಯಮಗಳಂತೆ ರಾಷ್ಟ್ರಧ್ವಜವನ್ನು ಹಾರಿಸಲು ಎಲ್ಲಾ ಭಾರತೀಯರಿಗೆ, ಖಾಸಗಿ ಸಂಘ ಸಂಸ್ಥೆಗಳಿಗೆ.ಶಿಕ್ಷಣ ಸಂಸ್ಥೆಗಳಿಗೆ ಅವಕಾಶ ನೀಡಲಾಗಿದೆ. ಆದರೂ ಸಹ ರಾಷ್ಟ್ರಧ್ವಜಕ್ಕೆ ನೀಡಬೇಕಾದ ಗೌರವವನ್ನು ನೀಡಿ ಪಾವಿತ್ರ್ಯತೆಯನ್ನು ಕಾಪಾಡಬೇಕೆಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿಗಳು ಸೂಚಿಸಿರುತ್ತಾರೆ. ಅವರ ಸೂಚನೆಯಂತೆ ದಿನಾಂಕ 15-8-13 ರಂದು ಸೂರ್ಯೋದಯದ ನಂತರ ಹಾರಿಸಿದ ರಾಷ್ಟ್ರ ಧ್ವಜವನ್ನು ಸೂರ್ಯಾಸ್ತದ ಮೊದಲೇ ಇಳಿಸತಕ್ಕದ್ದು. ಹರಿದುಹೋದ,ಮಾಸಿದ,ಬಣ್ಣಹೋದ,ಕೊಳೆಯಾಗಿ ಸುಕ್ಕುಸುಕ್ಕಾದ ರಾಷ್ಟ್ರಧ್ವಜವನ್ನು ಹಾರಿಸಬಾರದು. ರಾಷ್ಟ್ರಧ್ವಜವನ್ನು ಸಾಮಾನ್ಯ ಬಟ್ಟೆಯೆಂದು ಬೇರೆ ಯಾವುದೇ ಉದ್ದೇಶಕ್ಕೆ  ಬಳಸಿದರೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದಂತಾಗುತ್ತದೆ ಮತ್ತು ಅವರು ದಂಡನೆಗೆ ಅರ್ಹರಾಗುತ್ತಾರೆ.  ಪ್ಲಾಸ್ಟಿಕ್ ಧ್ವಜವನ್ನು ಬಳಸಬಾರದು. ಹಾರಿಸಿದ ರಾಷ್ಟ್ರಧ್ವಜವು ಸ್ಪಷ್ಟವಾಗಿ ಕಾಣುವಂತಿರಬೇಕು. ರಾಷ್ಟ್ರಧ್ವಜವನ್ನು ನೆಲಕ್ಕೆ ತಾಗಿಸಬಾರದು,ನೀರಿನಲ್ಲಿ ಬೀಳಿಸಬಾರದು.ಕರವಸ್ತ್ರ,ಟವೆಲ್,ಪ್ಯಾಕಿಂಗ್ ಸಾಮಾಗ್ರಿ ಮುಂತಾದ ಬಟ್ಟೆಗಳಲ್ಲಿ ರಾಷ್ಟ್ರಧ್ವಜವನ್ನು ಮುದ್ರಿಸಬಾರದು. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದರೆ ಕಠಿಣ ಸಜೆ ವಿಧಿಸಲಾಗುತ್ತದೆ. ಜಿಲ್ಲೆಯಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ಆಗುತ್ತಿರುವುದನ್ನು  ಕಂಡುಬಂದರೆ, ಸಾರ್ವಜನಿಕರು ಕೂಡಲೇ ಹತ್ತಿರದ ಪೋಲೀಸ್ ಠಾಣೆಗೆ,ತಾಲೂಕು ಕಚೇರಿಗೆ, ಸಹಾಯಕ ಕಮೀಷನರ್ ಕಚೇರಿಗೆ ಮತ್ತು ಜಿಲ್ಲಾಧಿಕಾರಿಗಳ ಕಚೇರಿಗೆ ಮಾಹಿತಿ ನೀಡಲು ಟಾಲ್ಫ್ರೀ ದೂರವಾಣಿ ಸಂಖ್ಯೆ 1077 ಕ್ಕೆ ಕರೆಮಾಡಿ ತಿಳಿಸಬಹುದಾಗಿದೆಯೆಂದು ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ.