Saturday, April 30, 2011

ಮಂಗಳಗಂಗೋತ್ರಿಯಲ್ಲಿ 29ನೇ ವಾರ್ಷಿಕ ಘಟಿಕೋತ್ಸವ

ಮಂಗಳೂರು,ಏಪ್ರಿಲ್.30:ಮಂಗಳ ಗಂಗೋತ್ರಿಯಲ್ಲಿ



ಇಂದು 29ನೇ ವಾರ್ಷಿಕ ಘಟಿ ಕೋತ್ಸವ ನೆರ ವೇರಿತು. ಕರ್ನಾಟಕ ರಾಜ್ಯದ ಗೌರವ್ವನಿತ ರಾಜ್ಯ ಪಾಲರು ಹಾಗೂ ಮಂಗ ಳೂರು ವಿಶ್ವ ವಿದ್ಯಾ ನಿಲಯದ ಕುಲಾಧಿ ಪತಿಗಳಾದ ಹೆಚ್. ಆರ್ ಭಾರ ದ್ವಾಜ್ ಅಧ್ಯಕ್ಷತೆ ವಹಿಸಿದ್ದರು. ಮಾನ್ಯ ಉನ್ನತ ಶಿಕ್ಷಣ ಸಚಿವರು ಮತ್ತು ವಿಶ್ವ ವಿದ್ಯಾ ನನಿಲಯದ ಸಹ ಕುಲಾಧಿ ಪತಿಗಳಾದ ಡಾ. ವಿ. ಎಸ್. ಆಚಾರ್ಯ ಉಪ ಸ್ಥಿತರಿದ್ದರು. ಸರ್ವೋಚ್ಛ ನ್ಯಾಯಾ ಲಯದ ನಿವೃತ್ತ ಮುಖ್ಯ ನ್ಯಾಯಾ ಧೀಶರಾದ ನ್ಯಾಯಮೂರ್ತಿ ಎಂ. ಎನ್. ವೆಂಕಟಾ ಚಲಯ್ಯ ಘಟಿ ಕೋತ್ಸವ ಭಾಷಣ ದಲ್ಲಿ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಶುಭ ಹಾರೈಸಿ ದರಲ್ಲದೆ ಆಯ್ಕೆಯ ಸಂದರ್ಭ ದಲ್ಲಿ ಎಚ್ಚರಿಕೆ ಯಿಂದ ಉತ್ತಮ ವಾದುದನ್ನು ಆರಿಸಿ ಎಂದು ಸಲಹೆ ಮಾಡಿದರು. ವಿಶ್ವ ವಿದ್ಯಾ ನಿಲಯ ಗಳು ವಿದ್ಯಾರ್ಥಿ ಗಳಲ್ಲಿ ಕ್ರಿಯಾ ಶಕ್ತಿಗೆ ಪೂರಕ ವಾತಾವರಣ ಒದಗಿಸಬೇಕು. ಮಾನವ ಕಲ್ಯಾಣ ಮತ್ತು ಆರ್ಥಿಕ ಅಭಿವೃದ್ಧಿ ಪರಸ್ಪರ ಪೂರಕ ವಿಷಯಗಳಾಗಿದ್ದು ಸಮಗ್ರ ಬೆಳವಣಿಗೆಯ ಬಗ್ಗೆಗಿನ ದೃಷ್ಟಿಕೋನದ ಬಗ್ಗೆ ಮಾತನಾಡಿದರು.ಇದೇ ಸಂದರ್ಭದಲ್ಲಿ ಮಾಜಿ ಡಿಜಿಪಿ ಡಾ. ಅಜಯ್ ಕುಮಾರ್ ಸಿಂಗ್, ಬನ್ನಂಜೆ ಗೋವಿಂದಾಚಾರ್ಯ, ಡಿ ಕೆ ಚೌಟ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಪ್ರೊ. ಟಿ ಸಿ ಶಿವಶಂಕರ ಮೂರ್ತಿಯವರು ಸ್ವಾಗತ ಭಾಷಣ ಮಾಡಿದರು.ಕಲಾವಿಭಾಗದ 16, ವಿಜ್ಞಾನದಿಂದ 47, ವಾಣಿಜ್ಯ ವಿಭಾಗದಿಂದ 5, ಶಿಕ್ಷಣ 2 ರಿಗೆ ಒಟ್ಟು 70 ಡಾಕ್ಟರ್ ಆಫ್ ಫಿಲಾಸಫಿ, 87 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಮತ್ತು ನಗದು ಬಹುಮಾನ ನೀಡಲಾಯಿತು.

Friday, April 29, 2011

ಜಿಲ್ಲೆಯ ಕಡಲಕಿನಾರೆಯ 20 ಸ್ಥಳಗಳಲ್ಲಿ ಮೇ 1ರಂದು ಏಕಕಾಲಕ್ಕೆ ಶ್ರಮದಾನ

ಮಂಗಳೂರು,ಏಪ್ರಿಲ್. 29: ಸ್ವಚ್ಛ, ಹಸಿರು, ಪ್ರಗತಿಪರ ಮಂಗಳೂರು ಧ್ಯೇಯದಡಿ ಜಿಲ್ಲೆಯಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಆಂದೋಲನವನ್ನು ಜಿಲ್ಲಾಡಳಿತ ಎಲ್ಲರ ಸಹಕಾರದೊಂದಿಗೆ ಈಗಾಗಲೇ ಆರಂಭಿಸಿದ್ದು, ಮೇ ಒಂದರಂದು 43 ಕಿ.ಮೀ ಉದ್ದದ ಕಡಲಕಿನಾರೆಯ 20 ಪ್ರದೇಶಗಳಲ್ಲಿ 20 ತಂಡಗಳು ಏಕಕಾಲದಲ್ಲಿ ಕಡಲತೀರ ಸ್ವಚ್ಛತೆಗೆ ಶ್ರಮದಾನವನ್ನು ಆಯೋಜಿಸಿದೆ.

ನಮ್ಮ ಪರಿಸರ ಸ್ವಚ್ಛವಾಗಿರಿಸುವ ಸದುದ್ದೇಶದಿಂದ ಆರಂಭಿಸಲಾಗಿರುವ ಈ ಅಭಿಯಾನದಲ್ಲಿ ಅಂದು ಆರರಿಂದ ಏಳು ಸಾವಿರದವರೆಗೆ ಮಾನವ ಶಕ್ತಿ ಸದ್ಬಳಕೆಯಾಗಲಿದೆ ಎಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ಹೇಳಿದರು. ಈ ಸಂಬಂಧ ಹಲವು ಸುತ್ತಿನ ಪೂರ್ವಭಾವಿ ಸಭೆಗಳಾಗಿದ್ದು, ಇಂದು ಸಂಜೆ ಅಂತಿಮ ಸುತ್ತಿನ ಸಭೆಯನ್ನು ಅವರು ನಡೆಸಿದರು.
ಕೇರಳದ ಗಡಿ ಪ್ರದೇಶ ತಲಪಾಡಿ ಕಡಲತೀರದಿಂದ ಉಡುಪಿಯ ಗಡಿ ಹೆಜಮಾಡಿ ವರೆಗೆ ಕಡಲತೀರ ಸ್ವಚ್ಛಗೊಳಿಸಲು ಐದು ವಲಯಗಳನ್ನಾಗಿ ವಿಂಗಡಿಸಿ ಮುಕ್ಕಾಚೇರಿ, ಮೊಗವೀರಪಟ್ಣ, ಕೋಟೆಪುರ, ಸೋಮೇಶ್ವರ ದೇವಾಲಯ, ಬಟ್ಟಪಾಡಿ, ಬೆಂಗ್ರೆ ಫುಟ್ ಬಾಲ್ ಮೈದಾನ, ನಾಗದೇವರ ಬನ, ಫಾತಿಮಾ ಚರ್ಚ್ ತಣ್ಣೀರು ಬಾವಿ, ಪಣಂಬೂರು ಬೀಚ್, ಬೈಕಂಪಾಡಿ, ನವಜ್ಯೋತಿ ಮೈದಾನ, ಚಿತ್ರಾಪು ಪ್ರೌಢಶಾಲೆ, ಭಗವತೀ ದೇವಾಲಯ, ಮುಕ್ಕಾ ಭಜನಾ ಮಂದಿರ, ಗುಡ್ಡೆಕೊಪಲ್ಪು ರಾಮಭಜನಾ ಮಂದಿರ, ದೊಡ್ಡೆಕೊಪ್ಪಲು, ಕರಾವಳಿ ಫ್ರೆಂಡ್ಸ್ ಸರ್ಕಲ್, ಐಸ್ ಪ್ಲಾಂಟ್ ಸಸಿಹಿತ್ಲು, ಚಿತ್ರಾಪು ಸ್ಮಶಾನ, ಸ್ಟರ್ಲಿಂಗ್ ಕಸ್ಟಮ್ಸ್ ಹೌಸ್, ಕೊಳಚಿ ಕಂಬಳದಲ್ಲಿ ಮೇ ಒಂದರಂದು ಬೆಳಗ್ಗೆ 7.30ಕ್ಕೆ ಏಕಕಾಲದಲ್ಲಿ ಶ್ರಮದಾನ ಆರಂಭಗೊಳ್ಳಲಿದೆ. ಈಗಾಗಲೇ ಎಲ್ಲ ಸೇವಾ ಸಂಸ್ಥೆಗಳೊಂದಿಗೆ, ಎಂ ವಿ ಶೆಟ್ಟಿ, ಆಳ್ವಾಸ್. ಕೆ ಎಂ ಸಿ, ಇನ್ಫೊಸಿಸ್, ಯೂತ್ ಹಾಸ್ಟೆಲ್, ಕೆನರಾ ಸಣ್ಣ ಕೈಗಾರಿಕೆ, ಎಂ ಸಿ ಎಫ್ ಸಕ್ರಿಯವಾಗಿ ಸ್ವಚ್ಛತೆಯಲ್ಲಿ ಪಾಲ್ಗೊಳ್ಳಲಿದೆ. ತೋಟ ಬೆಂಗ್ರೆಯಲ್ಲಿ ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯ ಮೂರ್ತಿ ಹಾಗೂ ದ ಕ ಜಿಲ್ಲೆ ಆಡಳಿ ತಾತ್ಮಕ ನ್ಯಾಯ ಮೂರ್ತಿ ನಾಗ ಮೋಹನ್ ದಾಸ್ ಅವರು ಅಭಿಯಾ ನಕ್ಕೆ ಚಾಲನೆ ನೀಡುವರು. ಈ ಸಂದರ್ಭ ದಲ್ಲಿ ಜಿಲ್ಲಾ ಉಸ್ತು ವಾರಿ ಸಚಿವರಾದ ಜೆ. ಕೃಷ್ಣ ಪಾಲೆ ಮಾರ್, ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಸುರೇಶ್ ಕುಮಾರ್, ಉನ್ನತ ಶಿಕ್ಷಣ ಸಚಿವ ವಿ. ಎಸ್ ಆಚಾರ್ಯ, ವಿಧಾನಸಭಾ ಉಪಸಭಾಧ್ಯಕ್ಷರಾದ ಎನ್ ಯೋಗೀಶ್ ಭಟ್, ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವು ಗಣ್ಯತಿ ಗಣ್ಯರುರು ಕಡಲತೀರ ಸ್ವಚ್ಛತಾ ಆಂದೋಲನದಲ್ಲಿ ಪಾಲ್ಗೊಳ್ಳಲಿರುವರು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಎಂ ಆರ್ ಪಿ ಎಲ್ ಅಭಿಯಾನದ ಪ್ರಾಯೋಜಕತ್ವವನ್ನು ವಹಿಸಿದ್ದು, ಸಕ್ರಿಯ ಪಾಲ್ಗೊಳ್ಳುವಿಕೆಯಲ್ಲಿ ನಿರತರಾದವರಿಗೆ ಕ್ಯಾಪ್ ಮತ್ತು ತಿಂಡಿ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಸ್ಥಳೀಯರು, ನಾಗರೀಕ ಬಂಧುಗಳು ಸ್ವಚ್ಛತಾ ಆಂದೋಲನದಲ್ಲಿ ಪಾಲ್ಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ವಿನಂತಿಸಿದ್ದು ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಾಲಾ ಮಕ್ಕಳು ಹಾಗೂ ಸಂಸ್ಥೆಗಳು ಕಿರು ನಾಟಕ ಹಾಗೂ ಪ್ರಾತ್ಯಕ್ಷಿಕೆಗಳನ್ನು ನೀಡಲಿರುವರು. ಒಟ್ಟು 150 ಅಧಿಕಾರಿಗಳು ಈ ಅಭಿಯಾನದ ಯಶಸ್ವಿಗೆ ದುಡಿದಿದ್ದು, ಜಿಲ್ಲೆಯಲ್ಲಿ ಸ್ವಚ್ಛತೆಗೆ ಸಂಬಂಧಿಸಿದ ಮೂರನೇ ಅಭಿಯಾನ ಇದಾಗಿದೆ. ವಾಹನ, ಸ್ವಚ್ಛತೆಗೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ಪ್ರಾಯೋಜಕರು ಒದಗಿಸಿದ್ದಾರೆ. ಮಂಗಳೂರನ್ನು ಹಸಿರು, ಸುಂದರ ನಗರವನ್ನಾಗಿಸುವ ಧ್ಯೇಯದಡಿ ಈಗಾಗಲೇ ಫೆ.20ರಂದು ಹಾಫ್ ಮ್ಯಾರಥಾನ್, ಮಾರ್ಚ್ 27ರಂದು ಮಹಾ ಶ್ರಮದಾನ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಆರರಿಂದ ಏಳು ಸಾವಿರ ಜನರು ಪಾಲ್ಗೊಂಡಿದ್ದು ಕನಸಿನ ಸುಂದರ ನಗರಿಯನ್ನು ಸಾಕ್ಷಾತ್ಕರಿಸಲು ನಿರಂತರ ಇಂತಹ ಅಭಿಯಾನಗಳು ಸಾಕಾರವಾಗಲಿದೆ ಎಂಬುದು ಜಿಲ್ಲಾಧಿಕಾರಿ ಅಭಿಪ್ರಾಯ. ಜನರಲ್ಲಿ ಜಾಗೃತಿ, ಅರಿವು ಹಾಗೂ ಕರ್ತವ್ಯಪ್ರಜ್ಞೆ, ವಿದ್ಯಾರ್ಥಿಗಳಲ್ಲಿ ಜವಾಬ್ದಾರಿ ಇಂತಹ ಕಾರ್ಯಕ್ರಮಗಳಿಂದ ಮೂಡಲಿದೆ ಎಂಬ ವಿಶ್ವಾಸ ಜಿಲ್ಲಾಧಿಕಾರಿಗಳದ್ದು. ಇದಕ್ಕೆ ಎಲ್ಲರ ಸಹಕಾರದ ಅಗತ್ಯವಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಸರ್ಕಿಟ್ ಹೌಸ್ ನೂತನ ಕಟ್ಟಡಕ್ಕೆ ಶಿಲಾನ್ಯಾಸ

ಮಂಗಳೂರು,ಏಪ್ರಿಲ್.29:ಮಂಗಳೂರಿನ ಕದ್ರಿ ಹಿಲ್ಸ್ ನಲ್ಲಿ ಸುಸಜ್ಜಿತ ನೂತನ ಸರ್ಕಿಟ್ ಹೌಸ್ ನ್ನು ನಿರ್ಮಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿ, 300.00 ಲಕ್ಷ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿದ್ದು, 23.8.10ರಂದು ಕಾಮಗಾರಿಯ ನಿವೇಶನವನ್ನು ಖುದ್ದಾಗಿ ಪರಿಶೀಲಿಸಿ ಕಾಮಗಾರಿ ಕೈಗೆತ್ತಿಕೊಳ್ಳಲು ಮಾರ್ಗದರ್ಶನ ನೀಡಿದ್ದರು.

ಈ ಕಟ್ಟಡದ ಕಾಮ ಗಾರಿಯ ಶಿಲಾ ನ್ಯಾಸ ವನ್ನು ಮುಖ್ಯ ಮಂತ್ರಿ ಗಳಿಂದು ನೆರವೇ ರಿಸಿದರು. 1339.00 ಚದರ ಮೀಟರ್ ವ್ಯಾಪ್ತಿಯ ಎರಡು ಅಂತ ಸ್ತುಗಳ ಅತಿ ಗಣ್ಯ ವ್ಯಕ್ತಿ ಗಳಿಗೆ ಸೂಟ್ -1, ಗಣ್ಯ ವ್ಯಕ್ತಿ ಗಳಿ ಗಾಗಿ ಸುಸಜ್ಜಿತ ಸೂಟ್ 6 ಸಂಖ್ಯೆ, ಡೈನಿಂಗ್ ಹಾಲ್, ಅಡುಗೆ ಕೋಣೆ ಸಹಿತ, ಸಭಾಂಗಣ 40 ಸೀಟು ಗಳ ಅವಕಾಶ, ವೈಟಿಂಗ್ ಲಾಂಜ್, ಸ್ವಾಗತ ಕಾರರ ಕೌಂಟರ್, ಕಾರ್ ಪೋಚ್ , ಲಿಫ್ಟ್, ಅಗ್ನಿ ಶಾಮಕ ಸೌಲಭ್ಯ ಗಳನ್ನೊ ಳಗೊಂಡ ಕಟ್ಟಡದ ನಿರ್ಮಾಣಕ್ಕೆ ಗುತ್ತಿಗೆ ನಿಗದಿ ಪಡಿಸುವ ಕಾಮ ಗಾರಿ ಪ್ರಕ್ರಿಯೆ ಪ್ರಗತಿ ಯಲ್ಲಿದೆ.
ವಿಧಾನಸಭಾ ಉಪಾಧ್ಯಕ್ಷರಾದ ಎನ್ ಯೋಗೀಶ್ ಭಟ್, ಜಿಲ್ಲಾ ಉಸ್ತುವಾರಿ ಸಚಿವರಾದ ಜೆ. ಕೃಷ್ಣ ಪಾಲೆಮಾರ್ ಅವರು, ಸಂಸದರಾದ ನಳಿನ್ ಕುಮಾರ್ ಕಟೀಲ್, ಸದಾನಂದ ಗೌಡ, ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಶಾಸಕರಾದ ಮಲ್ಲಿಕಾ ಪ್ರಸಾದ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಿ.ನಾಗರಾಜ ಶೆಟ್ಟಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಕೆ. ಟಿ ಶೈಲಜಾ ಭಟ್,ಮೇಯರ್ ಪ್ರವೀಣ್,ಉಪಮೇಯರ್ ಗೀತಾ ನಾಯಕ್,ಜಿಲ್ಲಾಧಿಕಾರಿ ಸುಬೋಧ್ ಯಾದವ್, ಐಜಿಪಿ ಅಲೋಕ್ ಮೋಹನ್, ಪೋಲಿಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಪಾಲಿಕೆ ಆಯುಕ್ತರಾದ ಡಾ ಕೆ. ಎನ್ ವಿಜಯಪ್ರಕಾಶ್, ಸಿಇಒ ಪಿ. ಶಿವಶಂಕರ್ ಉಪಸ್ಥಿತರಿದ್ದರು.

ಎಂಡೋಸಲ್ಫಾನ್ ಶಾಶ್ವತ ನಿಷೇಧಕ್ಕೆ ಮುಖ್ಯಮಂತ್ರಿ ಒತ್ತಾಯ

ಮಂಗಳೂರು, ಏಪ್ರಿಲ್.29:ಜನರ ಆಶಯಕ್ಕೆ ಪೂರಕವಾಗಿ ಎಂಡೋಸಲ್ಫಾನ್ ನಿಷೇಧಿಸಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಪೂರಕ ಕ್ರಮ ಕೈಗೊಳ್ಳಬೇಕಿದೆ ಎಂದು ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಹೇಳಿದರು.


ಇಂದು ಮಂಗ ಳೂರಿನ ಕದ್ರಿ ಹಿಲ್ಸ್ ನಲ್ಲಿ ಹೊಸ ಸರ್ಕಿಟ್ ಹೌಸ್ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ ಹಾಗೂ ಮೀನು ಗಾರರ ರಾಷ್ಟ್ರೀಯ ಸಮಾ ವೇಶ ದಲ್ಲಿ ಪಾಲ್ಗೊ ಳ್ಳಲು ನಗರಕ್ಕೆ ಆಗ ಮಿಸಿದ್ದ ಅವರು ಮೇರಿ ಹಿಲ್ ಹೆಲಿ ಪ್ಯಾಡಿನಲ್ಲಿ ಪತ್ರಕ ರ್ತರ ಪ್ರಶ್ನೆಗೆ ಉತ್ತ ರಿಸಿದ ಎಂಡೋ ಸಲ್ಫಾನ್ ನಿಷೇಧದ ಬಗ್ಗೆ ಹೋರಾಟ ನಡೆಸು ತ್ತಿರುವ ಕೇರಳ ಮುಖ್ಯ ಮಂತ್ರಿ ಗಳಿಗೆ ತಾವು ಸಂಪೂರ್ಣ ಬೆಂಬಲ ನೀಡು ವುದಾಗಿ ಹೇಳಿ ದರು.ಕೆಂದ್ರ ಸರ್ಕಾರ ಕೂಡ ಎಂಡೋ ಸಲ್ಫಾನ್ ಶಾಶ್ವತ ನಿಷೇಧ ಮಾಡುವ ನಿಟ್ಟಿನಲ್ಲಿ ಪೂರಕ ಕ್ರಮ ಗಳನ್ನು ಕೈ ಗೊಳ್ಳ ಬೇಕೆಂದು ಒತ್ತಾ ಯಿಸಿದರು. ಜನರ ಆಶೋ ತ್ತರ ಗಳಿಗೆ ರಾಜ್ಯ ಸರ್ಕಾರ ಸ್ಪಂದಿ ಸುತ್ತಿದೆ, ಮೀನು ಗಾರರಿಗೆ ನೆರವು ನೀಡು ವುದರಲ್ಲಿ ರಾಜ್ಯ ದೇಶಕ್ಕೆ ಮಾದರಿಯಾಗಿದ್ದು, ಶ್ರಮ ಜೀವಿಗಳ ನೆರವಿಗೆ ಪೂರಕ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದರು. ಮೀನುಗಾರರ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು.

Monday, April 25, 2011

ಮನಪಾಗೆ' ಗ್ರೀನ್ ಲೀಫ್ ' ಪ್ರಶಸ್ತಿಯ ಗರಿ

ಮಂಗಳೂರು,ಏಪ್ರಿಲ್.25:ಮಂಗಳೂರು ಮಹಾನಗರ ಪಾಲಿಕೆಗೆ ಘನ ತಾಜ್ಯ ನಿರ್ವಹ ಣೆಗಾಗಿ ಪ್ರತಿಷ್ಟಿತ ಗ್ರೀನ್ ಲೀಫ್ ಪ್ರಶಸ್ತಿ ದೊರೆ ತಿದೆ.ಹೈದ್ರಾ ಬಾದ್ ನಲ್ಲಿ ನಡೆದ 'ಕ್ಲೀನ್ ಇಂಡಿಯಾ 2011'ರಾಷ್ಟ್ರೀಯ ಸಮ್ಮೇಳ ನದಲ್ಲಿ ಚಿತ್ರನಟಿ ಅಮಲಾ ಅವರು ಪ್ರಶಸ್ತಿ ಯನ್ನು ಪ್ರದಾನ ಮಾಡಿದರು.ಮಂಗಳೂರು ಮೇಯರ್ ಪ್ರವೀಣ್,ಆಯುಕ್ತರಾದ ಡಾ. ವಿಜಯಪ್ರಕಾಶ್,ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಯಶವಂತ ಮೀನ ಕಳಿಯ,ಆರೊಗ್ಯಧಿಕಾರಿ ಮಂಜಯ್ಯ ಶೆಟ್ಟಿ,ಇಂಜಿನೀಯರ್ ಮಂಜುನಾಥ್ ಅವರು ಪಾಲಿಕೆ ಪರವಾಗಿ ಪ್ರಶಸ್ತಿಯನ್ನು ಪಡಕೊಂಡರು.

Saturday, April 23, 2011

ಪಾಲಿಕೆ ಕಾಮಗಾರಿ-ಗುತ್ತಿಗೆದಾರರಿಗೆ ಕಾಲಮಿತಿಯಲ್ಲಿ ಬಿಲ್ ಪಾವತಿಸಿ:ಪಾಲೇಮಾರ್

ಮಂಗಳೂರು,ಎಪ್ರಿಲ್:23:ಮಂಗಳೂರು ನಗರದಲ್ಲಿ ಮೂಲಭೂತ ಸೌಲಭ್ಯಗಳ ಸರ್ವಂಗೀಣ ಅಭಿವೃದ್ಧಿಗಾಗಿ ಮಾನ್ಯ ಮುಖ್ಯ ಮಂತ್ರಿಗಳು ನೀಡಿರುವ ವಿಶೇಷ ಅನುದಾನದಡಿಯಲ್ಲಿ ವಿವಿಧ ಕಾಮಗಾರಿಗಳ ಗುತ್ತಿಗೆ ಪಡೆದಿರುವ ಗುತ್ತಿಗೆದಾರರಿಗೆ ಕಾಮಗಾರಿ ಪೂರ್ಣಗೊಂಡ 20 ದಿನಗಳೊಳಗೆ ಬಿಲ್ಲಿನ ಹಣ ಪಾವತಿ ಮಾಡುವಂತೆ ಮಹಾನಗರಪಾಲಿಕೆಯ ಅಧಿಕಾರಿಗಳಿಗೆ ರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ,ಮೀನುಗಾರಿಕೆ,ಪರಿಸರ ಸಚಿವರಾದ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ.ಪಾಲೇಮಾರ್ ಅವರು ಸೂಚಿಸಿದ್ದಾರೆ.
ಅವರು ಶುಕ್ರವಾರ ಮಂಗಳೂರು ಮಹಾನಗರಪಾಲಿಕೆಯಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ಈ ವಿಷಯ ತಿಳಿಸಿದರು.ಈಗಾಗಲೇ ಜಿಲ್ಲಾಧಿಕಾರಿಗಳು ಗುತ್ತಿಗೆದಾರರ ಬಿಲ್ ಪಾವತಿಗೆ ಹಾಕಿಕೊಟ್ಟಿರುವ ಮಾರ್ಗಸೂಚಿ ಕಾಲಮಿತಿಯಲ್ಲಿ ಬಿಲ್ಲುಗಳನ್ನು ಪಾವತಿಸುವ ಮೂಲಕ ಗುತ್ತಿಗೆದಾರರು ತಮಗೆ ವಹಿಸಿದ ಕಾಮಗಾರಿಗಳನ್ನು ನಿಗಧಿತ ಸಮಯದಲ್ಲಿ ಪೂರ್ಣಗೊಳಿಸಲು ಹಾಗೂ ಉತ್ತಮ ಗುಣಮಟ್ಟದ ಕಾಮಗಾರಿ ನೀಡಲು ಅನುಕೂಲವಾಗಲಿದೆಯೆಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.ನಗರಪಾಲಿಕೆಗೆ ಮುಖ್ಯಮಂತ್ರಿಗಳು ನೀಡಿರುವ ವಿಶೇಷ ಅನುದಾನದಲ್ಲಿ 13 ರಸ್ತೆಗಳನ್ನು ರೂ.53.80 ಕೋಟಿ ವೆಚ್ಚದಲ್ಲಿ ಕಾಂಕ್ರೀಟಿಕರಣಗೊಳಿಸಲಾಗಿದ್ದು,3 ಕಾಮಗಾರಿಗಳು ಪ್ರಗತಿಯಲ್ಲಿವೆ.
ಇದೇರೀತಿ 86 ರಸ್ತೆಗಳಿಗೆ ಡಾಂಬರೀಕರಣ ಹಾಗೂ 64 ರಸ್ತೆಗಳ ಇಂಟರ್ ಲಾಕ್ ಕಾಮಗಾರಿಗಳು ಪೂರ್ಣಗೊಂಡಿದ್ದು,ಇದಕ್ಕಾಗಿ ರೂ.4.47 ಕೋಟಿ ವೆಚ್ಚ ಮಾಡಲಾಗಿದೆಯೆಂದು ಮಹಾನಗರಪಾಲಿಕೆ ಆಯುಕ್ತರಾದ ಡಾ.ವಿಜಯ ಪ್ರಕಾಶ್ ಅವರು ಸಚಿವರ ಮಾಹಿತಿ ನೀಡಿದರು.
ಸಭೆಯಲ್ಲಿ ವಿಧಾನಸಭೆ ಉಪಸಭಾಪತಿ ಯೋಗೀಶ್ ಭಟ್,ಮೇಯರ್ ಪ್ರವೀಣ್ ,ಉಪಮೇಯರ್ ಗೀತಾ ನಾಯಕ್, ಹಾಗೂ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಸೇರಿದಂತೆ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು ,ಉಪಾಧ್ಯಕ್ಷರು ಪಾಲ್ಗೊಂಡಿದ್ದರು.

ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮತ್ತು ಲೇಡಿಗೋಷನ್ ಆಸ್ಪತ್ರೆ ಬಳಕೆ ಶುಲ್ಕ 8.22 ಕೋಟಿ

ಮಂಗಳೂರು,ಎಪ್ರಿಲ್.23:ಮಂಗಳೂರು ನಗರದ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮತ್ತು ಲೇಗೋಷನ್ ಆಸ್ಪತ್ರೆಗಳ ಬಳಕೆ ಶುಲ್ಕ ಹಾಗೂ ಕ್ಲಿನಿಕಲ್ ಫೀಗಳಿಂದ ಸಂಗ್ರಹವಾಗಿರುವ ಆರೋಗ್ಯ ರಕ್ಷಾ ನಿಧಿ ಮೊತ್ತ ರೂ.8,22,66,529 ನ್ನು ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಠೇವಣಿ ಇಡಲಾಗಿದ್ದು,ಈ ಮೊತ್ತದಿಂದ ಎರಡೂ ಆಸ್ಪತ್ರೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷರಾದ ಸುಬೋಧ್ ಯಾದವ್ ತಿಳಿಸಿದ್ದಾರೆ.ಅವರು ಎಪ್ರಿಲ್ 22 ರಂದು ಈ ಸಂಬಂಧ ತಮ್ಮ ಕಚೇರಿಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿದ್ದರು.

ಆರೋಗ್ಯ ರಕ್ಷಾ ಸಮಿತಿ ವತಿಯಿಂದ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಹಾಗೂ ಲೇಡಿಗೋಷನ್ ಆಸ್ಪತ್ರೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ ನೀಡಲಾಯಿತು. ನಿರ್ಮಿತಿ ಕೇಂದ್ರದವರು ವೆನ್ಲಾಕ್ ಆಸ್ಪತ್ರೆಯ ಆವರಣಗೋಡೆ ಮತ್ತು ಚರಂಡಿ ಕಾಮಗಾರಿ ಹಾಗೂ ಆಸ್ಪತ್ರೆಯ ನೀರಿನ ಪೈಪ್ಲೈನ್ ಗಳನ್ನು ಬದಲಾಯಿಸಿ ಪಿವಿಸಿ ಪೈಪ್ ಅಳವಡಿಸುವ ಕಾಮಗಾರಿಯ ವೆಚ್ಚದ ಶೇ.50 ರಷ್ಟು ಹಣ ಪಡೆದು ಕಾಮಗಾರಿ ಇನ್ನು ಪೂರ್ಣಗೊಳಿಸದಿರುವ ಬಗ್ಗೆ ಜಿಲ್ಲಾಧಿಕಾರಿಗಳು ನಿರ್ಮಿತಿ ಕೇಂದ್ರ ಅಧಿಕಾರಿಗಳನ್ನು ಕೂಡಲೇ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು.
ಸಭೆಯಲ್ಲಿ 2009-10 ನೇ ಸಾಲಿನ ಆರೋಗ್ಯ ರಕ್ಷಾ ಸಮಿತಿ ಲೆಕ್ಕ ಪರಿಶೋಧನೆಗೆ ಅನುಮೋದನೆ ನೀಡಲಾಯಿತು. ಡಾ.ಶಕುಂತಳಾ ಲೇಡಿಗೋಷನ್ ಆಸ್ಪತ್ರೆ ಅಧೀಕ್ಷಕಿ ,ವೆನ್ಲಾಕ್ ಆಸ್ಪತ್ರೆ ಜಿಲ್ಲಾ ಸರ್ಜನ್ ಡಾ.ಸಂಗಮೇಶ್ವರ್,ನಿವಾಸಿ ವೈದ್ಯಾಧಿಕಾರಿ ಡಾ .ಸರೋಜ ಮುಂತಾದವರು ಹಾಜರಿದ್ದರು.

Friday, April 22, 2011

ಫುಟ್ ಪಾತ್ ವ್ಯಾಪಾರ ತೆರವಿಗೆ ವಿಶೇಷ ದಳ

ಮಂಗಳೂರು.ಏಪ್ರಿಲ್.22: ಮಂಗ ಳೂರು ಮಹಾ ನಗರ ಪಾಲಿಕೆ ವ್ಯಾಪ್ತಿ ಯಲ್ಲಿನ ಪ್ರಮುಖ ರಸ್ತೆ ಗಳು ಮತ್ತು ಫುಟ್ ಪಾತ್ ಗಳನ್ನು ಆಕ್ರ ಮಿಸಿ ವ್ಯಾಪಾರ ಮಾಡುವ ಅನಾ ಧಿಕೃತ ವ್ಯಾಪಾರಿ ಗಳನ್ನು ತೆರವು ಗೊಳಿ ಸಲು ಪಾಲಿಕೆ ವಾಹನ ಹೊಂದಿ ರುವ ವಿಶೇಷ ಕಾರ್ಯಾ ಚರಣಾ ದಳವನ್ನು ರಚಿಸಿದ್ದು,ಮಂಗಳೂರು ಪಾಲಿಕೆ ಮೇಯರ್ ಪ್ರವೀಣ್ ಗುರುವಾರ ಚಾಲನೆ ನೀಡಿದರು. ಪಾಲಿಕೆ ಉಪ ಮೇಯರ್ ಗೀತಾ ನಾಯಕ್,ಆಯುಕ್ತರಾದ ಡಾ.ವಿಜಯ ಪ್ರಕಾಶ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Thursday, April 21, 2011

'ಅಡಿಕೆಯಿಂದ ಆಹಾರ ಬೆಳೆಯತ್ತ ಮುಖ ಮಾಡುವ ರೈತರಿಗೆ ಪೈಲಟ್ ಯೋಜನೆ ರೂಪಿಸಿ'

ಮಂಗಳೂರು,ಏಪ್ರಿಲ್.21:ಅಡಿಕೆ ಕೃಷಿಯಿಂದ ಆಹಾರ ಬೆಳೆಯನ್ನು ಬೆಳೆಯಲು ಉತ್ಸುಕರಾಗಿರುವ ರೈತರಿಗೆ ಪ್ರೋತ್ಸಾಹ ನೀಡಲು ಸರ್ಕಾರ ರೈತರಿಗಾಗಿ ಪೈಲಟ್ ಯೋಜನೆಯನ್ನು ರೂಪಿಸಬೇಕು ಎಂದು ರೈತ ಮುಖಂಡರಲ್ಲೊಬ್ಬರಾದ ರವಿಕಿರಣ ಪುಣಚ ಹೇಳಿದರು.
ಅವರಿಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅವರ ಕಚೇರಿಯಲ್ಲಿ ಆಯೋಜಿಸಿದ್ದ ರೈತರ ಸಭೆಯಲ್ಲಿ ಮಾತನಾಡುತ್ತಿದ್ದರು. ಸಾಲಮನ್ನಾ ಯೋಜನೆ, ಅಡಿಕೆ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ, ಹಳದಿರೋಗ, ಕೊಳೆ ರೋಗ ತಡೆಗೆ ಕ್ರಮ, ಕುಮ್ಕಿ ಜಮೀನು ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ರೈತರು ಜಿಲ್ಲಾಡಳಿತದ ಗಮನ ಸೆಳೆದರು.

ರೈತರ ಸಮಸ್ಯೆ ಗಳನ್ನು ಆಲಿಸಿದ ಜಿಲ್ಲಾಧಿ ಕಾರಿಗಳು, ಜಪ್ತಿ ವಿಷಯ ದಲ್ಲಿ ಪ್ರತಿ ಯೊಂದು ಪ್ರಕರಣದ ಹಿನ್ನಲೆ ಯನ್ನು ಅರ್ಥೈಸಿ ನಿರ್ಧಾರ ಕೈಗೊ ಳ್ಳಬೇಕೆಂದು ಸಂಬಂಧ ಪಟ್ಟವರಿಗೆ ಸೂಚನೆ ನೀಡಿದರು. ಅಡಿಕೆಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸುವ ಬಗ್ಗೆ ಕ್ಯಾಂಪ್ಕೊದ ಸಲಹೆಯನ್ನು ಕೋರಿದರು. ಈ ಸಂಬಂಧ ಕ್ಯಾಂಪ್ಕೊ, ತೋಟಗಾರಿಕ ಇಲಾಖೆ, ರೈತರ ಜೊತೆ ಚರ್ಚಿಸಿ ಸಮರ್ಪಕ ನಿರ್ಧಾರ ತೆಗೆದುಕೊಳ್ಳಲು ಸೂಚಿಸಿದರು. ಬಳಿಕ ಸರ್ಕಾರಕ್ಕೆ ಈ ಸಂಬಂಧ ವರದಿ ಕಳುಹಿಸುವುದಾಗಿ ನುಡಿದರು. ಕೃಷಿ ಸಾಲ ಜಪ್ತಿಯ ಸಂಬಂಧ ಲೀಡ್ ಬ್ಯಾಂಕ್, ಡಿಸಿಸಿ ಬ್ಯಾಂಕ್, ಸಹಕಾರಿಗಳ ಜೊತೆ ಸಭೆ ನಡೆಸಿ ನಿರ್ಣಯ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು. ಉದ್ಯೋಗ ಖಾತರಿ ಯೋಜನೆ ಬಗ್ಗೆ ಸಮಗ್ರ ಮಾಹಿತಿ ರೈತರಿಗೆ ನೀಡುವಂತೆ, ಕೆಲಸವಾದ ಕಡೆ ಹಣ ಬಿಡುಗಡೆ ಮಾಡುವ ಸಂಬಂಧ ರೈತರ ಪ್ರಶ್ನೆಗಳಿಗೆ ಸಹಾಯಕ ಕಾರ್ಯದರ್ಶಿ ಚಂದ್ರಶೇಖರ ಮಸಗುಪ್ಪಿ ಅವರು ಉತ್ತರಿಸಿದರು.

ಸಭೆಯಲ್ಲಿ ಎಂಡೋ ಸಲ್ಫಾನ್ ನಿಷೇಧಕ್ಕೆ ಒತ್ತಾ ಯಿಸಿದ ರೈತರು, ಈ ಬಗ್ಗೆ ನೀಡಿರುವ ಪರಿಹಾರದ ಬಗ್ಗೆ ಜಿಲ್ಲಾಧಿ ಕಾರಿ ಗಳಿಂದ ಮಾಹಿತಿ ಕೋರಿದರು. 220 ಎಂಡೋ ಸಲ್ಫಾನ್ ಪೀಡಿ ತರನ್ನು ಗುರುತಿ ಸಲಾಗಿದ್ದು, 50.000 ರೂ. ಪರಿಹಾರ ನೀಡಿದೆ. ಶೇ. 75ರಷ್ಟು ಅಂಗವಿಕಲರು ಮತ್ತು ಶೇ. 75ರಷ್ಟು ಅಂಗವಿಕಲರಲ್ಲಿ 135 ಜನರಿಗೆ ವಿಶೇಷ ಪೆನ್ಷನ್ ನೀಡಿದೆ. ಕೊಕ್ಕಡದಲ್ಲಿ ಇಂತಹವರಿಗಾಗಿಯೇ ಡೇ ಕೇರ್ ಸೆಂಟರ್ ತೆರೆಯಲಾಗಿದ್ದು, ವೈದ್ಯರು ಮತ್ತು ಎಲ್ಲ ಮೂಲ ಸೌಲಭ್ಯಗಳನ್ನು ಏರ್ಪಡಿಸಿದ್ದು ಇವರನ್ನು ಮನೆಗಳಿಂದ ಕರೆದೊಯ್ಯಲು ಮನೆಗಳಿಗೆ ಬಿಡಲು ಬಸ್ ಸೌಲಭ್ಯವನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು. ಸೆಜ್ ಬಗ್ಗೆ, ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ಮುಳುಗಡೆಯಾಗುವ ರೈತರ ಭೂಮಿ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಸುವರ್ಣ ಭೂಮಿ ಬಗ್ಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಪದ್ಮಯ್ಯ ನಾಯ್ಕ್ ಅವರು ಮಾಹಿತಿ ನೀಡಿದರು . ಕೃಷಿ, ಜಲಾನಯನ, ಪಶುಸಂಗೋಪನೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Wednesday, April 20, 2011

ಡಾ.ನಿದರ್ಶ ಹೆಗ್ಡೆಗೆ ಮುಖ್ಯಮಂತ್ರಿ ಸ್ವರ್ಣಪದಕ

ಮಂಗ ಳೂರು, ಏಪ್ರಿಲ್. 20: ದಕ್ಷಿಣ ಕನ್ನಡ ಜಿಲ್ಲಾ ಗೃಹ ರಕ್ಷಕ ದಳದ ಕಮಾಂ ಡೆಂಟ್ ಡಾ. ಎನ್. ನಿದರ್ಶ ಹೆಗ್ಡೆ ಅವ ರಿಗೆ ಇಂದು ಬೆಂಗ ಳೂರಿ ನಲ್ಲಿ ನಡೆದ ಸಮಾ ರಂಭ ದಲ್ಲಿ ಮುಖ್ಯ ಮಂತ್ರಿ ಗಳು ಸ್ವರ್ಣ ಪದಕ ವನ್ನು ಪ್ರದಾನ ಮಾಡಿ ದರು.ಗೃಹ ರಕ್ಷಕ ದಳ ಹಾಗೂ ಅಗ್ನಿ ಶಾಮಕ ದಳದ ಡಿಜಿ ಮತ್ತು ಐಜಿ ಡಾ. ಗುರುಪ್ರಸಾದ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಎಪ್ರಿಲ್ 27-28 ರಂದು ಮಂಡೆಕೋಲು ಗ್ರಾಮದಲ್ಲಿ ಗಡಿನಾಡ ಉತ್ಸವ

ಮಂಗಳೂರು,ಎಪ್ರಿಲ್.20:ಕರ್ನಾಟಕ ರಾಜ್ಯ ಗಡಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ರಾಜ್ಯ ಗಡಿ ಪ್ರದೇಶಗಳ ಜನರ ಸ್ಥಿತಿಗತಿ ಸುಧಾರಿಸುವುದು ಸೇರಿದಂತೆ ಕೃಷಿ ಭಾಷಾಭಿವೃದ್ಧಿ ಇವೇ ಮೊದಲಾದ ವಿಷಯಗಳ ಕುರಿತು ವಿಚಾರಗೋಷ್ಠಿಗಳನ್ನು ಏರ್ಪಡಿಸುವ ಮೂಲಕ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳನ್ನು ಇದೇ ಎಪ್ರಿಲ್ 27 ಮತ್ತು 28 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಮಂಡೆಕೋಲು ಗ್ರಾಮದಲ್ಲಿ ಏರ್ಪಡಿಸಲು ತೀರ್ಮಾನಿಸಲಾಗಿದೆಯೆಂದು ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಅವರು ಹೇಳಿದ್ದಾರೆ.ಅವರು ಈ ಬಗ್ಗೆ ತಮ್ಮ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು, ಬಂಟ್ವಾಳ,ಪುತ್ತೂರು ಹಾಗೂ ಸುಳ್ಯ ತಾಲ್ಲೂಕುಗಳು ಗಡಿನಾಡ ತಾಲ್ಲೂಕುಗಳಾಗಿದ್ದು,ಗಡಿನಾಡ ಉತ್ಸವ ಸಂದರ್ಭದಲ್ಲಿ ಇಲ್ಲಿಯ ಕನ್ನಡ ಶಾಲೆಗಳ ಸ್ಥಿತಿಗತಿಗಳನ್ನು ಅರಿಯುವುದು,ಇರುವ ಸಮಸ್ಯೆಗಳ ಪರಿಹಾರಕ್ಕೆ ಮಾರ್ಗೋಪಾಯಗಳನ್ನು ಕಂಡು ಕೊಳ್ಳುವುದು ಹಾಗೂ ಗಡಿನಾಡು ಪ್ರದೇಶಗಳ ಸ್ಥಳೀಯ ಕಲಾ ಶ್ರೀಮಂತಿಕೆಯ ಅನಾವರಣ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಗಡಿ ತಾಲ್ಲೂಕುಗಳ ಸಮಸ್ತ ಅಭಿವೃದ್ಧಿಗೆ ಗಡಿನಾಡು ಉತ್ಸವಕ್ಕೆ ನಾಂದಿಯಾಗಬೇಕೆಂದು ಸಭೆಯಲ್ಲಿ ಉಪಸ್ಥಿತರಿದ್ದ ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರಾ ಅವರು ತಿಳಿಸಿದರು.
ಗಡಿನಾಡು ತಾಲ್ಲೂಕುಗಳಲ್ಲಿ ಉತ್ತಮ ಗ್ರಂಥಾಲಯಗಳ ವ್ಯವಸ್ಥೆ,ರಸ್ತೆಗಳ ದುರಸ್ಥಿ ಶಾಲಾ ಕಟ್ಟಡಗಳ ದುರಸ್ಥಿ ಹೀಗೆ ಹತ್ತಾರು ಮೂಲಭೂತ ಸೌಲಭ್ಯಗಳ ಕಡೆ ಗಡಿನಾಡು ಉತ್ಸವದಲ್ಲಿ ಗಮನ ಹರಿಸಬೇಕಿದೆ ಎಂದು ಸಭೆಯಲ್ಲಿದ್ದ ಇತರ ಪ್ರಮುಖರು ಅಭಿಪ್ರಾಯ ಪಟ್ಟರು.ಎಪ್ರಿಲ್ 27 ರಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಹಾಸ ಗುರಪ್ಪ ಬೆಲ್ಲದ ಅವರು ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರು,ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳ ಒಳಗೊಂಡಂತೆ ಎಲ್ಲರನ್ನು ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಪುತ್ತೂರು ಉಪ ವಿಭಾಗಾಧಿಕಾರಿ ಡಾ.ಹರೀಶ್ ಕುಮಾರ್,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಮಂಗಳಾ ವೆಂ.ನಾಯಕ್ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.

Tuesday, April 19, 2011

ಸುವರ್ಣ ಭೂಮಿ ಯೋಜನೆ, ಅರ್ಜಿ ಸಲ್ಲಿಸಲು ಎ.25 ಕೊನೆಯ ದಿನ: ಸುಬೋಧ್ ಯಾದವ್

ಮಂಗಳೂರು,ಏಪ್ರಿಲ್.19:ಸುವರ್ಣ ಭೂಮಿ ಯೋಜನೆಗೆ ಅರ್ಜಿ ಸಲ್ಲಿಸಲು ಏಪ್ರಿಲ್ 25 ಕೊನೆಯ ದಿನಾಂಕವಾಗಿದ್ದು ಜಿಲ್ಲೆಯ ಸಣ್ಣ ಮತ್ತು ಅತಿ ಸಣ್ಣ ರೈತರು ಆದಷ್ಟು ಶೀಘ್ರ ಅರ್ಜಿ ಸಲ್ಲಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಹೇಳಿದ್ದಾರೆ.

ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುವರ್ಣ ಭೂಮಿ ಯೋಜನೆಯ ಅನುಷ್ಠಾನ ಕುರಿತಂತೆ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಫಲಾನುಭವಿಗಳು ಆಯಾಯ ತಾಲೂಕು, ಗ್ರಾಮ ಪಂಚಾಯತ್ ಗಳಿಂದ ಅರ್ಜಿ ಪಡೆದು ಭರ್ತಿ ಮಾಡಿ ರೈತ ಸಂಪರ್ಕ ಕೇಂದ್ರಕ್ಕೆ ಸಲ್ಲಿಸಬೇಕು. ಈ ಯೋಜನೆ ಯಶಸ್ವಿಯಾಗಲು ಸಂಬಂಧಪಟ್ಟ ಇಲಾಖೆಗಳು ರೈತರಿಗೆ ಸರಿಯಾದ ಮಾಹಿತಿ ಒದಗಿಸುವ ಕೆಲಸ ಮಾಡಬೇಕು.ನೋಡೆಲ್ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನ ನೀಡಬೇಕು.ಆಯಾ ತಾಲೂಕಿನಲ್ಲಿ ತಹಶೀಲ್ದಾರ್ ಮತ್ತು ಉಪ ಆಯುಕ್ತರ ನೇತೃತ್ವದಲ್ಲಿ ಮುಂದಿನ ಎರಡು ದಿನಗಳೊಳಗೆ ಸಭೆ ನಡೆಸಬೇಕೆಂದು ಸೂಚಿಸಿದರು.
ರೈತ ಸಂಪರ್ಕ ಕೇಂದ್ರಕ್ಕೆ ಬಂದ ಅರ್ಜಿಗಳನ್ನು ಶೀಘ್ರವಾಗಿ ಪರಿಶೀಲಿಸಿ ವಿಲೇವಾರಿ ಮಾಡುನ ಕಾರ್ಯ ನಡೆಯಬೇಕು. ಇಲಾಖೆ ನಿಗದಿ ಪಡಿಸಿದ ವರ್ಗ,ಜಾತಿವಾರು ಅರ್ಹತೆ ಇರುವ ಅರ್ಜಿಗಳು ಹೆಚ್ಚು ಬಂದಲ್ಲಿ ಫಲಾನುಭವಿಗಳನ್ನು ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಬೇಕು. ಈ ಎಲ್ಲಾ ಪ್ರಕ್ರೀಯೆ ಮೇ.9 ರ ಒಳಗೆ ಮುಗಿಸಬೇಕಾಗಿದೆ ಎಂದರು. ಜಿಲ್ಲಾ ಪಂಚಾಯತ್ ಸಿಇಓ ಪಿ. ಶಿವಶಂಕರ್,ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಪದ್ಮಯ್ಯ ನಾಯ್ಕ್ ಮತ್ತಿತರ ಅಧಿಕಾರಿಗಳು ಸಭೇಯಲ್ಲಿ ಪಾಲ್ಗೊಂಡಿದ್ದರು.

Monday, April 18, 2011

ಮೀನುಗಾರಿಕೆ ಬಂದರ್ ವರೆಗೆ ಸಿಟಿ ಬಸ್

ಮಂಗಳೂರು,ಎಪ್ರಿಲ್.18:ಮೀನುಗಾರರಿಗೆ ಅನುಕೂಲವಾಗುವಂತೆ ಈ ಹಿಂದೆ ಇದ್ದಂತೆ ರೂಟ್ ಸಂ.26,32 ಹಾಗೂ ಇನ್ನು ಕೆಲವು ಮಾರ್ಗದ ಬಸ್ಸುಗಳನ್ನು ಹಳೆ ಬಂದರು ಪ್ರದೇಶದ ಮೀನುಗಾರಿಕಾ ಬಂದರ್ ವರೆಗೆ ವಿಸ್ತರಣೆ ಮಾಡಲು ಕ್ರಮಕೈಗೊಳ್ಳುವುದಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ಮೀನುಗಾರರ ಸಂಘದ ಪದಾಧಿಕಾರಿಗಳಿಗೆ ತಿಳಿಸಿದ್ದಾರೆ.

ಅವರು ಇಂದು ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಮೀನುಗಾರಿಕೆಗೆ ಸಂಬಂಧಿಸಿದ ವಿಷಯಗಳ ಕುರಿತ ಸಭೆಯಲ್ಲಿ ಈ ವಿಷಯ ತಿಳಿಸಿದರು.
ಮೀನುಗಾರರ ಸೂಕ್ತ ರಕ್ಷಣೆಗೆ ಸಂಘದ ಸದಸ್ಯರು ಜಿಲ್ಲಾಧಿಕಾರಿಗಳನ್ನು ವಿನಂತಿಸಿದರು. ಇತ್ತೀಚೆಗೆ ಮೀನುಗಾರರಿಗೆ ಅಪರಾತ್ರಿಯಲ್ಲಿ ಮೀನುಗಾರಿಕೆ ಮುಗಿಸಿ ಬಂದಾಗ ತಂಡೋಪತಂಡಗಳಲ್ಲಿ ದುಷ್ಕರ್ಮಿಗಳು ತಲವಾರು,ಲಾಂಗುಗಳನ್ನು ಹಿಡಿದು ಬೆದರಿಸಿ ಬೆಲೆಬಾಳುವ ಸಿಗಡಿ ಅಂಜಿಲ್,ಮಾಂಜಿ ಮೀನುಗಳನ್ನು ದೋಚುತ್ತಿದ್ದಾರೆ. ಇಂತಹ ದುಷ್ಕರ್ಮಿಗಳಿಂದ ಮೀನುಗಾರರನ್ನು ರಕ್ಷಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಚರ್ಚಿಸಿದ ಇತರ ವಿಷಯಗಳೆಂದರೆ, ಗುರುಪುರ ನದಿಯಲ್ಲಿ ತುಂಬಿರುವ ಹೂಳು ತೆಗೆಯುವುದು,ಎಂಆರ್ ಪಿಎಲ್-ಒಎನ್ ಜಿಸಿಯವರು ನವಮಂಗಳೂರು ಬಂದರಿನ ಎದುರು ಸುಮಾರು 16 ಕಿ.ಮೀ.ದೂರದಲ್ಲಿ ನಿರ್ಮಿಸುತ್ತಿರುವ ತೇಲು ಜೆಟ್ಟಿಯ ಹಾಗೂ ಪೈಪ್ ಲೈನ್ ಗಳ ಕುರಿತಂತೆ ಚರ್ಚಿಸಲಾಯಿತು.
ಮೀನುಗಾರಿಕಾ ಇಲಾಖೆ ಉಪನಿರ್ದೇಶಕರು ಹಾಗೂ ವಿವಿಧ ಮೀನುಗಾರಿಕಾ ಬೋಟ್ ಗಳ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Saturday, April 16, 2011

ಸ್ವಾವಲಂಬಿ ಬದುಕಿಗೆ ಸಮಗ್ರ ನೆರವು: ಮುಖ್ಯಮಂತ್ರಿ ಯಡಿಯೂರಪ್ಪ

ಮಂಗಳೂರು,ಏಪ್ರಿಲ್.16:ಮೀನುಗಾರರು,ನೇಕಾರರು,ರೈತರ ವಿಶೇಷ ಅಭಿವೃದ್ಧಿಗೆ ತಮ್ಮ ಸರ್ಕಾರ ಬದ್ಧವಾಗಿದ್ದು, ಶ್ರಮ ಜೀವಿಗಳು ಸ್ವಾವಲಂಬಿಗಳಾಗಿ ಬದುಕಲು ಪೂರಕ ಯೋಜನೆಗಳಿಗೆ ಸರ್ಕಾರ ನೆರವು ನೀಡಲಿದೆ ಎಂದು ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಅವರು ಹೇಳಿದರು.



ಅವ ರಿಂದು ಮೀನು ಗಾರರ ಸಂಘ ಟನೆ ಪುರ ಭವ ನದಲ್ಲಿ ಆಯೋ ಜಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಮೀನು ಮಾರಾಟ ಮಹಿ ಳೆಯ ರಿಗೆ ಸಾಲ ವಿತ ರಣಾ ಸಮಾ ರಂಭ ದಲ್ಲಿ ಮಾತ ನಾಡು ತ್ತಿದ್ದರು. ಸರ್ಕಾರ 50,000 ರೂ. ಮುಂಗ ಡವನ್ನು ಶೇ. 3ರ ದರ ದಲ್ಲಿ ಮೀನು ಗಾರರಿಗೆ ನೀಡಿದೆ. ಮುಲ್ಕಿ,ಉಳ್ಳಾಲ, ಸೋಮೇ ಶ್ವರದ 2,400 ಮೀನು ಗಾರ ಮಹಿಳೆ ಯರನ್ನು ಗುರು ತಿಸಿದ್ದು ಮಹಿಳಾ ಮೀನು ಗಾರ ರಿಗೆ 12 ಕೋಟಿ ರೂ.ಗಳ ಸಾಲ ವಿತ ರಣೆ ಯಾಗಿದೆ. ಮೀನು ಗಾರ ಮಹಿಳೆ ಯರಿಗೆ ನೆರವು ನೀಡುವ ಮೂಲಕ ಮಹಿಳಾ ಸಬ ಲೀಕ ರಣದ ಐತಿ ಹಾಸಿಕ ಉಪ ಕ್ರಮಕ್ಕೆ ದ.ಕ. ಜಿಲ್ಲೆ ಹೊಸ ಭಾಷ್ಯ ಬರೆದಿದೆ ಎಂದರು. ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ವಿ ಎಸ್ ಆಚಾರ್ಯ,ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್, ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷ ಕ್ಯಾ. ಗಣೇಶ್ ಕಾರ್ಣಿಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ , ಮೇಯರ್ ಪ್ರವೀಣ್ ಅಂಚನ್, ಉಪಮೇಯರ್ ಗೀತಾ ಎನ್. ನಾಯಕ್, ಪಾಲಿಕೆ ಸದಸ್ಯೆ ಸುರೇಖಾ, ದ.ಕ.ಜಿ.ಪಂ. ಅಧ್ಯಕ್ಷರಾದ ಕೆ.ಟಿ.ಶೈಲಜಾ ಭಟ್, ಬಿಸಿಎಂ ನಿಗಮದ ಅಧ್ಯಕ್ಷ ಎನ್.ಬಿ. ಅಬೂಬಕ್ಕರ್, ರಾಜ್ಯ ಬಾಲಭವನ ಅಧ್ಯಕ್ಷೆ ಸುಲೋಚನಾ ಭಟ್, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅನ್ವರ್ ಮನಿಪ್ಪಾಡಿ ಉಪಸ್ಥಿತರಿದ್ದರು.ರಾಮಚಂದ್ರ ಬೈಕಂಪಾಡಿ ಸ್ವಾಗತಿಸಿದರು.

ಲೇಡಿಗೋಶನ್ ಆಸ್ಪತ್ರೆಅಭಿವೃದ್ಧಿ: 18 ಕೋಟಿ ರೂ.ಗಳ ಕಟ್ಟಡಕ್ಕೆ ಮುಖ್ಯಮಂತ್ರಿಗಳಿಂದ ಶಿಲಾನ್ಯಾಸ

ಮಂಗಳೂರು,ಏಪ್ರಿಲ್.16:ನಗರದ ಸರ್ಕಾರಿ ಲೇಡಿಗೋಶನ್ ಆಸ್ಪತ್ರೆಗೆ ಆಂಧ್ರ ಪ್ರದೇಶದ ಉದ್ಯಮಿ ರಾಘವ ನಾಯ್ಡು ಅವರು 18 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿಕೊಡಲಿರುವ ಎಂಟು ಅಂತಸ್ತುಗಳ ಮಲ್ಟಿ ಸ್ಪೆಶಾಲಿಟಿ ಕಟ್ಟಡಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶನಿವಾರ ಶಿಲಾನ್ಯಾಸ ನೆರವೇರಿಸಿದರು.

ಬಳಿಕ ನಡೆದ ಸಭಾ ಕಾರ್ಯ ಕ್ರಮದಲ್ಲಿ ಮಾತ ನಾಡಿದ ಮುಖ್ಯ ಮಂತ್ರಿ ಗಳು, ರಾಜ್ಯ ದಲ್ಲಿ ದಾನಿ ಗಳ ಕೊರತೆ ಇಲ್ಲ ವೆಂಬುದು ಅತಿ ವೃಷ್ಟಿ ಯಲ್ಲಿ ನಲು ಗಿದಾ ಗಲೇ ಸಾಬೀತಾ ಗಿದ್ದು, ದಾನಿ ಗಳನ್ನು ಪ್ರೇರೇಪಿ ಸುವಂತ ಹ ಕೆಲಸ ವಾಗ ಬೇಕಿದೆ. ಅಂತಹ ಕೆಲಸಕ್ಕೆ ಇಂದಿನ ಸಮಾ ರಂಭ ಸಾಕ್ಷಿ ಯಾಗಿದೆ ಎಂದರು. ಮಗಳ ಹೆಸರನ್ನು ಶಾಶ್ವತವಾಗಿಸಲು ಬಡಜನರ ಆರೋಗ್ಯ ಸೇವೆಗಾಗಿ ನೀಡಿದ ದಾನಕ್ಕಾಗಿ ನಾಯ್ಡು ದಂಪತಿಯನ್ನು ರಾಜ್ಯ ಸರಕಾರದ ಪರವಾಗಿ ಅಭಿನಂದಿಸಿದರು. ಯೋಗೀಶ ಭಟ್ ಅವರು ರಾಘವ ನಾಯ್ಡು ಅವರನ್ನು ಪ್ರೇರೇಪಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಈ ಭಾಗದ ಜನತೆಗೆ ಉತ್ತಮ ಕೊಡುಗೆ ಲಭಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು ಕಟ್ಟಡ ನಿರ್ಮಾಣದ ಸಂದರ್ಭ ಹಾಗೂ ನಿರ್ವಹಣೆ ಮತ್ತು ಅಗತ್ಯ ಸಲಕರಣೆಗಳಿಗೆ ಸಕಲ ನೆರವು ನೀಡಲು ಸರಕಾರ ಬದ್ಧವಾಗಿದೆ ಎಂದರು. ಇದೇ ವೇಳೆ ಬಿ.ಎಸ್.ಯಡಿ ಯೂರಪ್ಪ ಬಂಟ್ವಾಳದ ಎಸ್ ವಿಎಸ್ ಪ್ರಾಥಮಿಕ ಶಾಲೆಯ ನೂತನ ಕಟ್ಟ ಡಕ್ಕೂ ಒಂದೂ ವರೆ ಕೋಟಿ ರೂ.ಗಳನ್ನು ನಾಯ್ಡು ನೀಡಿದ್ದು, ಸಾಂಕೇ ತಿಕವಾಗಿ ಶಿಲಾ ನ್ಯಾಸ ನೆರ ವೇರಿ ಸಿದರು. ದಾನಿ ಗಳಾದ ರಾಘವ ನಾಯ್ಡು ದಂಪತಿ ಯನ್ನು ಶಾಲು, ಹಾರ, ಫಲ ಪುಷ್ಪ ನೀಡಿ ಮುಖ್ಯ ಮಂತ್ರಿ ಗೌರ ವಿಸಿದರು.ದಾನಿ, ಕೆ.ಆರ್. ಕೀರ್ತಿ ಫೌಂಡೇ ಶನ್ ಟ್ರಸ್ಟ್ ನ ಆಡ ಳಿತ ಟ್ರಸ್ಟಿ ರಾಘವ ನಾಯ್ಡು ಮಾತ ನಾಡಿ, ಶಿಕ್ಷಣ ಮತ್ತು ಆರೋ ಗ್ಯ ಕ್ಷೇ ತ್ರಕ್ಕೆ ಬೆಂಬಲ ನೀಡು ವುದು ಸರ್ವರ ಕರ್ತವ್ಯ ವಾಗಿದೆ. ಕರ್ನಾ ಟಕ ವಿಧಾನ ಸಭೆಯ ಉಪಾ ಧ್ಯಕ್ಷ ಎನ್.ಯೋಗೀಶ ಭಟ್ ಅವರು ಈ ಭಾಗದ ಲೇಡಿ ಗೋಶನ್ ಆಸ್ಪತ್ರೆ ಯ ಅಭಿ ವೃದ್ಧಿ ಯಲ್ಲಿ ತಾನು ಪಾಲ್ಗೊ ಳ್ಳುವ ಅವ ಕಾಶ ಮಾಡಿ ಕೊಟ್ಟಿ ದ್ದಾರೆ. ಒಂದು ವರ್ಷ ದೊಳಗೆ ರೂ. 18 ಕೋಟಿ ವೆಚ್ಚ ದಲ್ಲಿ ತನ್ನ ಕೀರ್ತಿ ಶೇಷ ಪುತ್ರಿ ಕೆ.ಆರ್.ಕೀರ್ತಿ ಯ ಹೆಸರಿ ನಲ್ಲಿ 18 ಅಂತ ಸ್ತುಗಳ ಕಟ್ಟಡ ನಿರ್ಮಿಸಿ ಹಸ್ತಾಂ ತರಿಸ ಲಾಗು ವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಪಸಭಾಪತಿಗಳಾದ ಎನ್.ಯೋಗೀಶ ಭಟ್, ಲೇಡಿಗೋಶನ್ ಆಸ್ಪತ್ರೆಗೆ ದಾನಿಗಳ ನೆರವಿನಿಂದ ನಿರ್ಮಾಣಗೊಳ್ಳುವ 8 ಅಂತಸ್ತುಗಳ ನೂತನ ಕಟ್ಟಡದ ನಿರ್ವಹಣೆಗೆ ವಾರ್ಷಿಕ ರೂ. 2.5 ಕೋಟಿಯ ಅಗತ್ಯವಿದೆ. ಉಪಕರಣಗಳಿಗಾಗಿ ರೂ. 10 ಕೋಟಿ ಬೇಕು. ಮುಖ್ಯಮಂತ್ರಿಗಳು ಈ ಅನುದಾನ ಒದಗಿಸಿ ಸಹಕರಿಸಬೇಕೆಂದು ವಿನಂತಿಸಿದರು.
ಸರಕಾರಿ ವೆನ್ಲಾಕ್ ಆಸ್ಪತ್ರೆಯ ಬಳಿ ಸುಪರ್ ಸ್ಪೆಶಾಲಿಟಿ ಬ್ಲಾಕ್ ನಿರ್ಮಿಸುವುದು ನನ್ನ ಮುಂದಿನ ಗುರಿ. ಅದಕ್ಕಾಗಿ ರೂ. 100 -150 ಕೋಟಿ ಅನುದಾನ ಅಗತ್ಯವಿದೆ. ದಾನಿಗಳನ್ನು ಜೋಡಿಸುವ ಪ್ರಯತ್ನ ಆರಂಭವಾಗಿದೆ ಎಂದರು. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್, ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷ ಕ್ಯಾ. ಗಣೇಶ್ ಕಾರ್ಣಿಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ , ಮೇಯರ್ ಪ್ರವೀಣ್ ಅಂಚನ್, ಉಪಮೇಯರ್ ಗೀತಾ ಎನ್. ನಾಯಕ್, ಪಾಲಿಕೆ ಸದಸ್ಯೆ ಸುರೇಖಾ, ದ.ಕ.ಜಿ.ಪಂ. ಅಧ್ಯಕ್ಷರಾದ ಕೆ.ಟಿ.ಶೈಲಜಾ ಭಟ್, ಬಿಸಿಎಂ ನಿಗಮದ ಅಧ್ಯಕ್ಷ ಎನ್.ಬಿ. ಅಬೂಬಕ್ಕರ್, ಜಿಲ್ಲಾಧಿಕಾರಿ ಸುಬೋಧ್ ಯಾದವ್, ರಾಜ್ಯದ ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಡಾ| ಅರುಣಾ, ದ.ಕ.ಜಿ.ಪಂ. ಮುಖ್ಯ ಕಾರ್ಯ ನಿವರ್ಾಹಕ ಅಕಾರಿ ಪಿ. ಶಿವಶಂಕರ್, ಮನಪಾ ಆಯುಕ್ತ ಡಾ.ಕೆ.ಎನ್. ವಿಜಯಪ್ರಕಾಶ್ ಉಪಸ್ಥಿತರಿದ್ದರು.
ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ| ಶಕುಂತಳಾ ಸ್ವಾಗತಿಸಿದರು. ಹಿರಿಯ ತಜ್ಞೆ ಡಾ| ಜೆ.ಪೂರ್ಣಿಮಾ ವಂದಿಸಿದರು.

ಅಕ್ರಮ ಗಣಿಗಾರಿಕೆ;ಸುಪ್ರೀಂ ಕೋರ್ಟ್ ಸೂಚಿಸಿದರೆ ನಷ್ಟ ವಸೂಲಿ:ಮುಖ್ಯಮಂತ್ರಿ ಯಡಿಯೂರಪ್ಪ

ಮಂಗಳೂರು,ಏಪ್ರಿಲ್.16:ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯಿಂದ ಆಗಿರುವ ನಷ್ಟವನ್ನು ವಸೂಲು ಮಾಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದರೆ ಗಣಿ ಮಾಲಕರಿಗೆ ದಂಡ ವಿಧಿಸಿ ವಸೂಲು ಮಾಡಲು ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಇಂದು ವಿವಿಧ ಅಭಿವೃದ್ದಿ ಕಾರ್ಯ ಕ್ರಮಗಳಲ್ಲಿ ಪಾಲ್ಗೊಳ್ಳಲು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ ಮುಖ್ಯ ಮಂತ್ರಿ ಗಳು ಬಜ್ಪೆ ವಿಮಾನ ನಿಲ್ದಾಣ ದಲ್ಲಿ ಸುದ್ದಿ ಗಾರ ರೊಂದಿಗೆ ಮಾತ ನಾಡಿದರು.ಸರ್ವೋಚ್ಚ ನ್ಯಾಯಾಲಯ ನೇಮಿಸಿದ್ದ ಕೇಂದ್ರ ಉನ್ನತಾ ಧಿಕಾರ ಸಮಿತಿ (ಸಿಇಸಿ) ಸಲ್ಲಿಸಿದ ವರದಿಯಲ್ಲಿ ಐದು ಪಟ್ಟು ದಂಡ ವಸೂಲಿ ಮಾಡುವಂತೆ ಶಿಫಾರಸು ಮಾಡಿರುವುದಾಗಿ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಅದಕ್ಕೆ ಬೇಕಾದ ಅಗತ್ಯ ಕ್ರಮ ಕೈಗೊಳ್ಳಲು ಸರಕಾರ ಸಿದ್ಧವಿದೆ ಎಂದರು.
ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆ ಮತ್ತು ಅದಿರು ರಫ್ತು ಬಗ್ಗೆ ನಾನು ವಿಧಾನಸಭೆಯಲ್ಲಿ ನೀಡಿದ ಮಾಹಿತಿ ಆಧಾರದಲ್ಲಿ ಸಿಇಸಿ ಸುಪ್ರೀಂ ಕೋರ್ಟಿಗೆ ವರದಿ ಸಲ್ಲಿಸಿದೆ. ವರದಿ ಸಿದ್ಧಪಡಿಸಲು ಬೇಕಾದ ಎಲ್ಲ ಸಹಕಾರವನ್ನು ರಾಜ್ಯ ಸರ್ಕಾರ ನೀಡಿದೆ ಎಂಬುದಾಗಿ ಕೂಡಾ ಸಿಇಸಿ ವರದಿಯಲ್ಲಿ ಹೇಳಿದೆ.ಸರ್ವೋಚ್ಚ ನ್ಯಾಯಾಲಯದ ಅಂತಿಮ ತೀರ್ಪಿಗೆ ಸರಕಾರ ಬದ್ಧವಾಗಿದೆ ಎಂದರು.ಸಿಇಸಿ ಮನವಿ ಪ್ರಕಾರ ಕ್ರಮ ಕೈಗೊಳ್ಳಲು ಸರಕಾರ ಸಿದ್ಧವಿದೆ. ಅಕ್ರಮ ಗಣಿಗಾರಿಕೆ ಮತ್ತು ರಫ್ತು ನಿಲುಗಡೆಯಾಗಬೇಕು ಎಂಬುದು ರಾಜ್ಯದ ಸ್ಪಷ್ಟ ನಿಲುವು. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ನಮ್ಮ ಸರಕಾರ ದೇಶದಲ್ಲೇ ಮೊದಲ ಬಾರಿಗೆ ಅದಿರು ರಫ್ತನ್ನು ನಿಷೇಧಿಸಿ ಅಕ್ರಮ ಗಣಿಗಾರಿಕೆ ತಡೆಗೆ ದಿಟ್ಟ ಕ್ರಮ ಕೈಗೊಂಡಿದೆ ಎಂದರು.
ಅಕ್ರಮ ಗಣಿಗಾರಿಕೆ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ಕೇಂದ್ರ ಸರಕಾರ ಮುಂದೆ ಬರಬೇಕು. ಈ ಕುರಿತು 2010ರ ಜುಲೈ ತಿಂಗಳಲ್ಲಿ ನಡೆದ ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಕೂಡಾ ನಾನು ಪ್ರಸ್ತಾಪಿಸಿದ್ದೆ. ಆದರೆ ಪ್ರಧಾನಮಂತ್ರಿಗಳು ಆ ಬಗ್ಗೆ ಗಮನ ಹರಿಸಿಲ್ಲ, ಕೂಡಲೇ ಪ್ರಧಾನ ಮಂತ್ರಿಗಳು ಗಮನ ಹರಿಸಬೇಕಿದೆ.ಇಡೀ ದೇಶದಲ್ಲಿ ಇದು ಜಾರಿಗೆ ಬಂದು ಖನಿಜ ಸಂಪತ್ತು ಲೂಟಿಯಾಗುವುದು ನಿಲ್ಲಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಧ್ಯಪ್ರವೇಶ ಮಾಡಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಯಡಿಯೂರಪ್ಪ ಒತ್ತಾಯಿಸಿದರು.

ರೈತರ ಭೂಸ್ವಾಧೀನ ಇಲ್ಲ,ಮುಖ್ಯಮಂತ್ರಿ ಸ್ಪಷ್ಟನೆ:
ಕರಾವಳಿ ಜಿಲ್ಲೆಗಳಲ್ಲಿ ರೈತರ ವಶದಲ್ಲಿರುವ ಕುಮ್ಕಿ, ಕಾನೆ,ಬಾಣೆ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ಸ್ವಾಧೀನ ಪಡಿಸಿಕೊಳ್ಳಲಾಗುವುದಿಲ್ಲ.ಯಾವುದೇ ಸಮಸ್ಯೆ ಇದ್ದರೆ ಅದನ್ನು ಬಗೆಹರಿಸಲಾಗುವುದು. ಈ ಕುರಿತು ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೇಮಾರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ, ವಿಧಾನಸಭಾ ಉಪಾಧ್ಯಕ್ಷ ಎನ್. ಯೋಗೀಶ್ ಭಟ್, ಸಂಸದ ನಳಿನ್ ಕುಮಾರ್ ಕಟೀಲು, ಮೇಯರ್ ಪ್ರವೀಣ್, ಜಿ.ಪಂ. ಅಧ್ಯಕ್ಷೆ ಕೆ.ಟಿ. ಶೈಲಜಾ ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ,ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ಬಿ. ಅಬೂಬಕ್ಕರ್ ಮುಂತಾದವರು ಉಪಸ್ಥಿತರಿದ್ದರು.

Friday, April 15, 2011

111 ವೈದ್ಯಕೀಯ ಸಂಸ್ಥೆಗಳಿಗೆ ಸರ್ಟಿಫಿಕೇಟ್ ನೀಡಲು ನಿರ್ಧಾರ

ಮಂಗಳೂರು, ಏಪ್ರಿಲ್.15 :ಅರ್ಹ ನೋಂದಾಯಿಸಲ್ಪಡದ 111 ಖಾಸಗೀ ವೈದ್ಯಕೀಯ ಸಂಸ್ಥಗಳಿಗೆ ಪ್ರಮಾಣ ಪತ್ರ ನೀಡಲು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ಸಮ್ಮತಿಸಿದ್ದಾರೆ.

ಇಂದು ಈ ಸಂಬಂಧ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿಗದಿತ ಸಮಯಾವಕಾಶದಲ್ಲಿ ಕಾಯಿದೆಯನ್ವಯ ಎಲ್ಲ ಕಾನೂನು ಪಾಲಿಸಿ ನೋಂದಾವಣೆಗೆ ಅರ್ಹ ಎಂದು ತನಿಖೆಯ ಬಳಿಕ ತನಿಖಾ ತಂಡ ನೀಡಿದ ಅಭಿಪ್ರಾಯದಂತೆ ಅಂತಹ ಸಂಸ್ಥೆಗಳಿಗೆ ಪ್ರಮಾಣಪತ್ರ ನೀಡಲು ಜಿಲ್ಲಾಧಿಕಾರಿ ಹಾಗೂ ಕಾನೂನು ಅನುಷ್ಠಾನ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳು ಸಮ್ಮತಿಸಿದ್ದಾರೆ.
ಇನ್ನೂ 70 ಪ್ರಕರಣಗಳಿಗೆ ನೋಟೀಸು ನೀಡಲಾಗಿದ್ದು, ಉತ್ತರ ಬರಲಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದರು. ಮಂಗಳೂರು ತಾಲೂಕಿನಲ್ಲಿ ಸಮಸ್ಯೆ ಜಟಿಲವಾಗಿದ್ದು, ಅನುಷ್ಠಾನಕ್ಕಿರುವ ತೊಡಕುಗಳನ್ನು ತಾಲೂಕು ವೈದ್ಯಾಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಮಂಗಳೂರಿನ 500 ಪ್ರಕರಣಗಳನ್ನು ಅಂತಿಮವಾಗಿ ಮೇ 31ರೊಳಗೆ ತೀರ್ಮಾನಿಸಲು ಜಿಲ್ಲಾಧಿಕಾರಿಗಳು ಸಮಯಮಿತಿ ನಿಗದಿಪಡಿಸಿದರು. ಬಂಟ್ವಾಳದಲ್ಲಿ ನೋಟೀಸು ಸ್ವೀಕರಿಸಿದ ತಕ್ಷಣ ನೋಂದಾಯಿಸಲ್ಪಡದ 4 ವೈದ್ಯಕೀಯ ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಮುಚ್ಚಲ್ಪಟ್ಟಿದೆ ಎಂದು ಬಂಟ್ವಾಳ ತಾಲೂಕು ವೈದ್ಯಾಧಿಕಾರಿಗಳು ಮಾಹಿತಿ ನೀಡಿದರು. ಇನ್ನು ಕೆಲವು ಸಂಸ್ಥೆಗಳು ನೋಟೀಸಿಗೆ ಉತ್ತರಿಸಿದ್ದು, ತಮ್ಮ ಕೇಂದ್ರಗಳನ್ನು ಮೆಡಿಕಲ್ ಸೆಂಟರ್ ಗಳಾಗಿ ಪರಿವರ್ತಿಸಲು ಅನುಮತಿ ಕೋರಿವೆ. ಒಟ್ಟು 106 ಸಂಸ್ಥೆಗಳಿಗೆ ಸೆಕ್ಷನ್ 22 ರಡಿ ನೋಟೀಸು ಜಾರಿಗೊಳಿಸಲಾಗಿತ್ತು. 125 ವೈದ್ಯಕೀಯ ಸಂಸ್ಥೆಗಳಿಗೆ ತನಿಖಾ ತಂಡ ಭೇಟಿ ನೀಡಿ ಇವುಗಳಲ್ಲಿ 16 ಮಾತ್ರ ನೋಂದಾಯಿಸಲು ಅರ್ಹ ಎಂದು ವರದಿ ನೀಡಿದೆ. ಎಲ್ಲ ತಾಲೂಕುಗಳ ವೈದ್ಯಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ನಗರ ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಅವಕಾಶ ಬೇಡ: ಜಿಲ್ಲಾಧಿಕಾರಿ

ಮಂಗಳೂರು,ಏಪ್ರಿಲ್.15 :ನಗರ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸಲು ಅದರಲ್ಲೂ ಮುಖ್ಯವಾಗಿ ಯೋಜನೆ ಉಲ್ಲಂಘಿಸಿ ನಿರ್ಮಾಣವಾಗುವ ಕಟ್ಟಡಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸ ಬೇಕೆಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ಹೇಳಿದರು.

ಅವರಿಂದು ಪಾಲಿಕೆ ಕಚೇರಿಯಲ್ಲಿ ನಡೆದ ಪಾಲಿಕೆ ಅಭಿವೃದ್ಧಿ ಸಭೆಯಲ್ಲಿ ಪ್ರಗತಿಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿಗಳ ಕಚೇರಿಗೆ ಕಟ್ಟಡ ನಿಮರ್ಾಣದಲ್ಲಿ ಅಕ್ರಮ ನಡೆಯುತ್ತಿರುವ ಬಗ್ಗೆ ಬಹಳಷ್ಟು ದೂರುಗಳು ಬರುತ್ತಿದ್ದು, ನಗರ ಯೋಜನಾಧಿಕಾರಿಗಳು ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದರು. ಅಕ್ರಮಗಳ ದೂರು ವ್ಯಾಪಕವಾದರೆ ತನ್ನ ಮಧ್ಯಪ್ರವೇಶ ಅನಿವಾರ್ಯವಾದೀತು ಎಂಬ ಎಚ್ಚರಿಕೆಯನ್ನು ಜಿಲ್ಲಾಧಿಕಾರಿಗಳು ನೀಡಿದರು.
ಈ ಸಂಬಂಧ ಮಾಹಿತಿ ನೀಡಿದ ಪಾಲಿಕೆ ಆಯುಕ್ತರಾದ ಡಾ ಕೆ. ಎನ್. ವಿಜಯಪ್ರಕಾಶ್ ಅವರು, ಕಟ್ಟಡ ನೀತಿ ಉಲ್ಲಂಘನೆಯಾಗದಂತೆ ಕಾನೂನನ್ನು ಕಠಿಣವಾಗಿ ಅನುಷ್ಠಾನಕ್ಕೆ ತರಲಾಗಿದ್ದು, ನಗರದಲ್ಲಿ ಅಂತಹ ಎರಡು ಪ್ರಕರಣಗಳನ್ನು ಪತ್ತೆ ಹಚ್ಚಿ ಕಾಮಗಾಗಿ ಸ್ಥಗಿತಗೊಳಿಸಿದೆ ಎಂದು ತಿಳಿಸಿದರು. ನಾಲ್ಕು ಹಂತಗಳಲ್ಲಿ ನಿರ್ಮಾಣ ಕಾಮಗಾರಿಗಳನ್ನು ಪರಿಶೀಲಿಸಲಾಗುತ್ತಿದ್ದು ಕಾನೂನು ಮೀರಿ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಹಾಗೂ ಯೋಜನೆಯಂತೆ ರೂಪಿಸಲು ಮಹಾನಗರ ಪಾಲಿಕೆ ಪ್ರತಿಯೊಂದು ಹಂತದಲ್ಲೂ ಪರಿಶೀಲನೆ ನಡೆಸುತ್ತಿದೆ ಎಂದರು.
ನಗರದಲ್ಲಿ ಕಟ್ಟಡ ತ್ಯಾಜ್ಯಗಳನ್ನು ಎಸೆಯುವ ಬಗ್ಗೆ ನಾಲ್ಕು ಕೇಸ್ ಗಳನ್ನು ದಾಖಲಿಸಲಾಗಿದ್ದು, ಸುಲ್ತಾನ ಬತ್ತೇರಿಯಲ್ಲಿ ಎರಡು ಮತ್ತು ಮೋರ್ಗನ್ ಗೇಟ್ ನಲ್ಲಿ ಎರಡು ಕೇಸ್ ಗಳನ್ನು ಹಾಕಲಾಗಿದೆ ಎಂದು ಆಯುಕ್ತರು ಸಭೆಗೆ ತಿಳಿಸಿದರು. ಪ್ಲಾಸ್ಟಿಕ್ ನಿಷೇಧಿಸುವಲ್ಲಿಯೂ ಕಠಿಣವಾಗಿ ಕ್ರಮಕೈಗೊಳ್ಳಲಾಗಿದ್ದು, 160 ಕೇಸ್ ಗಳನ್ನು ದಾಖಲಿಸಲಾಗಿದೆ. ಈ ನಿಟ್ಟಿನಲ್ಲಿ ನಿರೀಕ್ಷೆ ಮೀರಿ ಜಾಗೃತಿ ವ್ಯವಹಾರಸ್ಥರಿಂದ ಮತ್ತು ಗ್ರಾಹಕರಿಂದ ವ್ಯಕ್ತವಾಗಿದೆ. ಈ ಸಂಬಂಧ ನಿರಂತರತೆ ಕಾಯ್ದುಕೊಳ್ಳುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿಗಳು ಅಭಿಪ್ರಾಯ ಪಟ್ಟರು. ಸಭೆಯಲ್ಲಿ ಪಾಲಿಕೆಯ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು.

Thursday, April 14, 2011

ಡಾ.ಅಂಬೇಡ್ಕರ್ ಹೆಸರು ಶಾಶ್ವತವಾಗಿ ಉಳಿಯಬೇಕು: ಸಚಿವ ಪಾಲೇಮಾರ್

ಮಂಗಳೂರು,ಏಪ್ರಿಲ್.14:ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರು ಶಾಶ್ವತವಾಗಿ ಜನರ ಮನದಲ್ಲಿ ಉಳಿಯಬೇಕು. ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸುವಂತಾಗಬೇಕು ಎಂದು ರಾಜ್ಯ ಬಂದರು,ಮೀನುಗಾರಿಕೆ,ಒಳನಾಡು ಜಲಸಾರಿಗೆ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೇಮಾರ್ ಹೇಳಿದ್ದಾರೆ.

ಇಂದು ಮಂಗ ಳೂರಿನ ಪುರ ಭವನ ದಲ್ಲಿ ಜಿಲ್ಲಾ ಡಳಿತ, ಜಿಲ್ಲಾ ಪಂಚಾ ಯತ್, ಮಂಗ ಳೂರು ಮಹಾ ನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಯ ಸಂಯು ಕ್ತ ಆಶ್ರಯ ದಲ್ಲಿ ನಡೆದ ಸಂವಿ ಧಾನ ಶಿಲ್ಪಿ,ಭಾರತ ರತ್ನ ಡಾ.ಬಿ.ಆರ್.ಅಂಬೇ ಡ್ಕರ್ ಅವರ 120 ನೇ ಜನ್ಮ ದಿನಾ ಚರಣೆ ಕಾರ್ಯ ಕ್ರಮ ಉದ್ಘಾ ಟಿಸಿ ಅವರು ಮಾತ ನಾಡಿದರು.ಡಾ.ಅಂಬೇ ಡ್ಕರ್ ದೇಶದ ಮಹಾನ್ ಶಿಲ್ಪಿ. ದೇಶದ ಮುಂದಿನ ಪೀಳಿಗೆ ಯೂ ಅವರ ಆದರ್ಶ ಗಳನ್ನು ಮೈ ಗೂಡಿಸಿ ಕೊಳ್ಳು ವಂತಾ ಗಬೇಕು, ಈ ನಿಟ್ಟಿ ನಲ್ಲಿ ಇಂದಿನ ಪೀಳಿ ಗೆಗೆ ಅಂಬೇ ಡ್ಕರ್ ಅವರ ಕಾರ್ಯ ಸಾಧನೆ ಗಳ ಬಗ್ಗೆ ಅರಿವು ಮೂಡಿ ಸುವ ಕೆಲಸ ನಡೆಯ ಬೇಕಿದೆ ಎಂದರು.
ಸಮಾರಂಭದಲ್ಲಿ ಮಾತನಾಡಿದ ಮೂಡದ ಅಧ್ಯಕ್ಷ ಡಾ. ಮಾಧವ ಭಂಡಾರಿ ಪ್ರತಿಯೊಬ್ಬರೂ ಅಂಬೇಡ್ಕರ್ ಅವರ ಪ್ರತಿಬಿಂಬಗಳಾಗಬೇಕು. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಪರಿವರ್ತನೆಯ ಕಡೆ ಹೆಜ್ಜೆ ಇಡಬೇಕೆಂದರು.
ಪ್ರಮುಖ ಭಾಷಣಕಾರಾದ ಮಂಗಳೂರು ವಿವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಂ.ಕುಮಾರಸ್ವಾಮಿ ಮಾತನಾಡಿ, ಡಾ.ಅಂಬೇಡ್ಕರ್ ಕೇವಲ ಶೋಷಿತ ವರ್ಗದ ಸಮಸ್ಯೆಯ ವಿರುದ್ಧ ಮಾತ್ರ ಹೋರಾಟ ಮಾಡಿಲ್ಲ,ಮಹಿಳೆಯರು, ಹಿಂದುಳಿದ ವರ್ಗ, ನಿರ್ಗತಿಕರು ಸೇರಿದಂತೆ ಸಮಾಜದ ಎಲ್ಲಾ ವರ್ಗದ ಜನರಿಗೆ ನ್ಯಾಯ ಒದಗಿಸುವಲ್ಲಿ ಹೋರಾಟ ನಡೆಸಿದವರು ಎಂದರು.ಶಾಸಕ ಯು.ಟಿ.ಖಾದರ್ ಮಾತನಾಡಿ ಸಂವಿಧಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆಗಬೇಕು. ದೇಶದ ಎಲ್ಲಾ ಜನರಿಗೆ ಸಂವಿಧಾನ ಪವಿತ್ರ ಗ್ರಂಥವಿದ್ದ ಹಾಗೆ ಎಂದು ನುಡಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ ಅವರು ಮಾತನಾಡಿ ಭವ್ಯ ಮತ್ತು ಸಧೃಡ ಭಭಾರತದ ಕನಸು ಕಂಡವರು ಡಾ.ಅಂಬೇಡ್ಕರ್, ಇದಾಗ ಬೇಕಿದ್ದರೆ ಸರಕಾರದ ಸವಲತ್ತುಗಳು ಸಮಾಜ ಕಟ್ಟ ಕಡೆಯ ವ್ಯಕ್ತಿಗೂ ದೊರಕುವಂತಾಗಬೇಕು ಎಂದು ನುಡಿದರು.
ಪಾಲಿಕೆ ಮೇಯರ್ ಪ್ರವೀಣ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಸಮಾ ರಂಭ ದಲ್ಲಿ ಐದು ಮಂದಿ ಸಾಧಕ ರನ್ನು ಗೌರವಿ ಸಲಾ ಯಿತು. ಇದೇ ಸಂದರ್ಭ ದಲ್ಲಿ 11 ಮಂದಿಗೆ ಟೆಂಪೋ ಮತ್ತು 6 ಮಂದಿಗೆ ಅಟೋ ರಿಕ್ಷಾ ವಿತ ರಣೆ, 1.5 ಲಕ್ಷ ಸಹಾ ಯ ಧನ ಹಾಗೂ 10 ಮಂದಿಗೆ ದೋಣಿ ಘಟಕ ದ 3.5 ಲಕ್ಷ ಸಹಾಯ ಧನ ವಿತ ರಿಸಲಾ ಯಿತು.ಅಲ್ಲದೆ ಕೃಷಿ, ಕಲಾ ಕ್ಷೇತ್ರ ದಲ್ಲಿ ಸಾಧನೆ ಗೈದ ಫಲಾ ನುಭವಿ ಗಳಿಗೆ ವಿವಿಧ ಸವಲತ್ತು ಗಳನ್ನು ವಿತರಿಸಲಾಯಿತು.
ದ.ಕ.ಜಿಲ್ಲಾಧಿಕಾರಿ ಸುಬೋದ್ ಯಾದವ್, ಜಿ.ಪಂ.ಅಧ್ಯಕ್ಷೆ ಕೆ.ಟಿ.ಶೈಲಜಾ ಭಟ್, ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಶಿವಶಂಕರ್, ಉಪಮೇಯರ್ ಗೀತಾ ನಾಯಕ್, ಮಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಎಸ್ಪಿ ಲಾಬೂರಾಮ್, ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ಬಿ.ಅಬೂಬಕ್ಕರ್, ಮನಪಾ ಆಯುಕ್ತ ಡಾ.ಕೆ.ಎನ್.ವಿಜಯ ಪ್ರಕಾಶ್, ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಅಕಾರಿ ಅರುಣ್ ಪುರ್ಟಡೋ ಸ್ವಾಗತಿಸಿದರು. ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.

ಕ್ಲೀನ್ ಬೀಚ್ ಗೆ ಸ್ವಚ್ಛತಾಂದೋಲನ

ಮಂಗಳೂರು,ಏಪ್ರಿಲ್.14:ಸ್ವಚ್ಛ ಹಸಿರು, ಪ್ರಗತಿಪರ ಮಂಗಳೂರಿನ ಮುಂದುವರಿದ ಭಾಗವಾಗಿ ಜಿಲ್ಲೆಯ ಸಮುದ್ರ ತೀರ ಸ್ವಚ್ಛತಾ ಆಂದೋಲನವನ್ನು ಎಲ್ಲರ ಸಹಕಾರದೊಂದಿಗೆ ಆಯೋಜಿಸಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ತಿಳಿಸಿದ್ದಾರೆ.

ಇಂದು ಜಿಲ್ಲಾಧಿಕಾರಿ ಅಧ್ಯಕ್ಷತೆ ಯಲ್ಲಿ ನಡೆದ ಅಧಿಕಾರಿ ಗಳು, ಜನಶಿಕ್ಷಣ ಟ್ರಸ್ಟ್, ಲಯನ್ಸ್, ಜೆಸಿ,ರೋಟರಿ ಹಾಗೂ ಎಂಆರ್ ಪಿ ಎಲ್, ಎಂಸಿಎಫ್ ಹಾಗೂ ಕೆನರಾ ಚೇಂಬರ್ಸ್ ಪ್ರತಿನಿಧಿಗಳು ಭಾಗವಹಿಸಿದ್ದರು. ತೀರ ಸ್ವಚ್ಛತಾ ಆಂದೋಲನವನ್ನು ಸಮರ್ಪಕವಾಗಿ ನಡೆಸಲು ಪ್ರದೇಶವನ್ನು 5 ವಲಯಗಳನ್ನಾಗಿ ವಿಭಾಗಿಸಿದ ಜಿಲ್ಲಾಧಿಕಾರಿಗಳು ಪ್ರತಿಯೊಂದು ವಲಯಕ್ಕೂ ಜಿಲ್ಲಾ ಮಟ್ಟದ ಅಧಿಕಾರಿ ಹಾಗೂ ಗ್ರಾಮೀಣ ವಲಯದಲ್ಲಿ ಸ್ಥಳೀಯ ಅಧಿಕಾರಿಗಳನ್ನು ನಿಯೋಜಿಸಿದರಲ್ಲದೆ, ಪರಸ್ಪರ ಸಹಕಾರ ಹಾಗೂ ಸಂವಹನದಲ್ಲಿ ಕುಂದುಂಟಾಗದಂತೆ ಕರ್ತವ್ಯ ನಿರ್ವಹಿಸಲು ಯೋಜನೆ ರೂಪಿಸಿದರು.ಜಿಲ್ಲೆಯ ಪ್ರವಾಸೋದ್ಯಮದ ಮೂಲವಾಗಿರುವ ಬೀಚ್ ಗಳನ್ನು ಸ್ವಚ್ಛಗೊಳಿಸುವುದರಿಂದಾಗುವ ಅನುಕೂಲಗಳು, ಸ್ವಚ್ಛ ಸಮಾಜದಿಂದಾಗುವ ಅನುಕೂಲಗಳನ್ನು ದೂರದೃಷ್ಟಿಯಲ್ಲಿಟ್ಟುಕೊಂಡು ಜಿಲ್ಲಾಡಳಿತ ಆಯೋಜಿಸುವ ಇಂತಹ ಕಾರ್ಯಕ್ರಮಗಳಿಗೆ ಉತ್ತಮ ಆಯೋಜಕರನ್ನು ಹುಡುಕುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.
ತಲಪಾಡಿಯಿಂದ-ನೇತ್ರಾವತಿ, ಬೆಂಗ್ರೆಯಿಂದ- ಎನ್ ಎಂ ಪಿ ಟಿ ಸೌತ್, ಪಣಂಬೂರು-ಹೊಸಬೆಟ್ಟು, ಹೊಸಬೆಟ್ಟು-ಸಸಿಹಿತ್ಲು, ಚಿತ್ರಾಪುರ- ಹೆಜಮಾಡಿ ಎಂದು ವಿಭಾಗಿಸಿ ಬಳಿಕ ಹಳ್ಳಿ ಮಟ್ಟದಲ್ಲಿ ಸಮನ್ವಯ ಸಾಧಿಸುವಂತೆ, ಹಾಗೂ ಈ ಸಂಬಂಧ ನಿರಂತರತೆ ಸಾಧಿಸಲು ಯತೀಶ್ ಬೈಕಂಪಾಡಿ ಸಲಹೆ ಮಾಡಿದರು. ಸ್ವಚ್ಛತಾ ಪರಿಕರಗಳು, ಶ್ರಮ, ಜನ ಸಂಪನ್ಮೂಲ, ಉದ್ದೇಶ ಹಾಗೂ ಕಾರ್ಯಕ್ರಮದ ಸಫಲತೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳು, ಮನಾಪ ಆಯುಕ್ತರು, ಸಿಇಒ ಅವರು ಉಪಸ್ಥಿತರಿದ್ದರು.
ನಾಲ್ಕರಿಂದ ಐದು ಸಾವಿರ ಜನರ ಪಾಲ್ಗೊಳ್ಳುವಿಕೆಯನ್ನು ಸಭೆಯಲ್ಲಿ ಖಚಿತಪಡಿಸಿಕೊಳ್ಳಲಾಯಿತು. 22 ತಂಡಗಳನ್ನು ರಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಒಟ್ಟು 34 ಕಿಮೀ ಸಮುದ್ರ ತೀರ ಗುರುತಿಸಲಾಯಿತು. ಮಂಗಳವಾರದೊಳಗೆ ಈ ಸಂಬಂದ ಇನ್ನೊಂದು ವಲಯ ಸಭೆಯನ್ನು ನಡೆಸಲು ನಿರ್ಧರಿಸಲಾಯಿತಲ್ಲದೆ, ಇದಕ್ಕೂ ಮೊದಲು ಗ್ರಾಮಾಂತರ ವಲಯದಲ್ಲೂ ಸಭೆ ನಡೆಸಲು ತೀರ್ಮಾನಿಸಲಾಯಿತು.
ಮೇ1ರಿಂದ ಮಂಗಳೂರು ಸೆಂಟ್ರಲ್ ನಲ್ಲಿ ಪ್ರೀ ಪೇಯ್ಡ್ ಆಟೋ ಕೇಂದ್ರ:
ಮಂಗಳೂರು ಕೇಂದ್ರ ರೈಲ್ವೇ ನಿಲ್ದಾಣದಲ್ಲಿ ಪ್ರೀಪೇಯ್ಡ್ ಆಟೋ ನಿಲ್ದಾಣವನ್ನು ಮೇ ಒಂದರಿಂದ ಆರಂಭಿಸಲು ನಿನ್ನೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ರಸ್ತೆ ಸುರಕ್ಷತಾ ಸಭೆಯಲ್ಲಿ ನಿರ್ಧರಿಸಲಾಯಿತು.ಚೇಂಬರ್ ಆಫ್ ಕಾಮರ್ಸ್ ನವರು ಈ ಸಂಬಂಧ ಅಗತ್ಯ ಮೂಲಭೂತ ಸೌಕರ್ಯಗಳನ್ನು ಪ್ರಾಯೋಜಿಸಲು ಮುಂದೆ ಬಂದಿದ್ದು, ರೈಲ್ವೇ ಅವರು ಇದಕ್ಕೆ ಜಾಗ ನೀಡಲು ಒಪ್ಪಿದ್ದಾರೆ. ಈ ಸಂಬಂಧ ಆಟೋ ಚಾಲಕರಿಗೆ ಅಗತ್ಯ ತರಬೇತಿ ನೀಡಲಾಗುವುದು. ಆಟೋ ರಿಕ್ಷಾದವರು ಈ ವ್ಯವಸ್ಥೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.

Wednesday, April 13, 2011

ಮಹಿಳೆಯ ಅಭಿವೃದ್ಧಿಗೆ ಆರ್ಥಿಕ ಸಬಲತೆ ಮುಖ್ಯ: ಶೈಲಜಾ ಭಟ್

ಮಂಗಳೂರು,ಏಪ್ರಿಲ್.13:ಮಹಿಳೆಯ ಅಭಿವೃದ್ಧಿಗೆ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ವೃತ್ತಿಪರ ತರಬೇತಿಗಳಿಂದ ಮಹಿಳೆಯನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ. ಟಿ. ಶೈಲಜಾ ಭಟ್ ಅವರು ಹೇಳಿದರು.

ಅವರಿಂದು ಮುಡಿಪುವಿನ ನವಚೇತನ ಜೀವನ ಶಿಕ್ಷಣ ಕೇಂದ್ರದಲ್ಲಿ ಸಮಾಜ ಕಾರ್ಯ ಸಂಸ್ಥೆ ಜನಶಿಕ್ಷಣ ಟ್ರಸ್ಟ್, ಲೋಕ ಶಿಕ್ಷಣ ನಿರ್ದೇಶನಾಲಯ, ದ.ಕ ಜಿಲ್ಲಾ ಸಾಕ್ಷರತಾ ಸಮಿತಿ, ಜಿಲ್ಲಾ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ಗಳ ಸಹಭಾಗಿತ್ವದಲ್ಲಿ ನಡೆದ ನವಸಾಕ್ಷರರ ವೃತ್ತಿ ಕೌಶಲ್ಯ ಮಾಸಿಕ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಪ್ರಸಕ್ತ ಸಂದರ್ಭದಲ್ಲಿ ವೃತ್ತಿಪರ ತರಬೇತಿಗಳಿಂದಾಗುವ ಅನುಕೂಲಗಳನ್ನು ವಿವರಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಇಂದು ಎಲ್ಲಡೆಯಿಂದಲೂ ಮಹಿಳೆಯರ ಅಭಿವೃದ್ಧಿಗೆ ಪೂರಕ ವಾತಾವರಣ ಇದೆ. ಮಹಿಳೆಯರು ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ಪಿ.ಶಿವ ಶಂಕರ್ ಅವರು ಮಾತನಾಡಿ, ರಾಜ್ಯಕ್ಕೆ ಮಾದರಿ ಎನಿಸುವಂತಹ ಹಲವು ಯೋಜನೆಗಳನ್ನು ದಕ್ಷಿಣ ಕನ್ನಡ ಜಿಲ್ಲೆ ನೀಡಿದ್ದು, ಈ ತರಬೇತಿಯೂ ರಾಜ್ಯಕ್ಕೆ ಮಾದರಿಯಾಗಿದೆ ಎಂದರು. ನಿರಂತರ ಕಲಿಕೆ ಅದರಲ್ಲೂ ವೃತ್ತಿಪರ ಕಲಿಕೆ ಮತ್ತು ಅದರ ಅನುಷ್ಠಾನ ಎಲ್ಲರಿಗೂ ಅನುಕೂಲವಾಗಲಿದೆ ಸ್ವಯಂ ಉದ್ಯೋಗ ಮತ್ತು ಉದ್ಯೋಗಿಗಳು ರಾಜ್ಯದ ಆರ್ಥಿಕ ವಲಯಕ್ಕೆ ನೀಡುವ ಕೊಡುಗೆ ಗಮನೀಯವಾಗಿದೆ ಎಂದು ಹೇಳಿದರು. ಉತ್ಪಾದನೆಯನ್ನು ವಿತರಿಸುವ ವ್ಯವಸ್ಥೆಯೂ ಸಮರ್ಪಕವಾಗಿ ಆಗಬೇಕಿದ್ದು, ಜಿಲ್ಲಾ ಪಂಚಾಯತ್ ನಿಂದ ಈ ಸಂಬಂಧ ಸಂಪೂರ್ಣ ಸಹಕಾರದ ಭರವಸೆಯನ್ನು ಅವರು ನೀಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ್ ಆಳ್ವಾ ಅವರು ಮಾತನಾಡಿದರು. ಒಂಬಡ್ಸ್ ಮನ್ ಶೀನ ಶೆಟ್ಟಿಯವರು ಮಾತನಾಡಿ, ಸಾಕ್ಷರತೆ, ಸ್ವಚ್ಛತೆ, ಉದ್ಯೋಗಖಾತ್ರಿಯಲ್ಲಿ ಜಿಲ್ಲೆ ಸಾಧಿಸಿದ ಪ್ರಗತಿ ಹಾಗೂ ಉದ್ಯೋಗ ಖಾತ್ರಿಯಿಂದಾಗಬಹುದಾದ ಪವಾಡಗಳ ಬಗ್ಗೆ, ಸಾಮಾಜಿಕ ಸ್ಥಿತಿಗತಿ ಅಭಿವೃದ್ಧಿಯ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದರು. ದೊಡ್ಡ ಯೋಜನೆಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯ ವರ್ಗದವರು ಉದ್ಯೋಗ ಚೀಟಿಯನ್ನು ಪಡೆಯುವುದರಿಂದಾಗುವ ಬದಲಾವಣೆ, ವೃತ್ತಿಪರತೆ ಕಲಿತು ಸಾಧಿಸುವ ಆರ್ಥಿಕ ಸಬಲೀಕರಣದ ಬಗ್ಗೆ ಮಾತನಾಡಿದರು.

ರಸ್ತೆ ಸುರಕ್ಷತಾ ಸಮಿತಿ ನಿರ್ಣಯ ಕಟ್ಟುನಿಟ್ಟಾಗಿ ಅನುಷ್ಠಾನಿಸಿ: ಜಿಲ್ಲಾಧಿಕಾರಿ ಸೂಚನೆ

ಮಂಗಳೂರು,ಏಪ್ರಿಲ್.13:ಬಸ್ಸುಗಳಿಗೆ ಜಿಪಿಎಸ್ ಅಳವಡಿಸುವ ಬಗ್ಗೆ, ಆಟೋ ರಿಕ್ಷಾ ಚಾಲಕರಿಗೆ ಆಟೋ ಸ್ಟಾಂಡ್ ಗೆ ಜಾಗ ನಿಗದಿಪಡಿಸುವ ಬಗ್ಗೆ, ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ಸ್ಪೀಡ್ ಬ್ರೇಕರ್ ಗಳನ್ನು ಅಳವಡಿಸದಿರುವ ಬಗ್ಗೆ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ಸಂಬಂಧಪಟ್ಟ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಇಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ರಸ್ತೆ ಸುರಕ್ಷತಾ ಸಭೆಯಲ್ಲಿ ಬಸ್ಸುಗಳಿಗೆ ಜಿಪಿಎಸ್ ಅಳವಡಿಸುವ ಬಗ್ಗೆಗಿನ ನಿರ್ಣಯದಲ್ಲಿ ಯಾವುದೇ ಬದಲಾವಣೆ ಇಲ್ಲ; ತಕ್ಷಣವೇ ಈ ನಿರ್ಣಯಕ್ಕೆ ಸಂಬಂದಪಟ್ಟವರು ಬದ್ಧರಾಗಿ ನಿರ್ಣಯ ಅನುಷ್ಠಾನಕ್ಕೆ ತರಬೇಕೆಂದರು. ಬಸ್ಸುಗಳ ಸಿಬ್ಬಂದಿ ಅಶಿಸ್ತಿನಿಂದ ವರ್ತಿಸುತ್ತಿದ್ದು, ಪ್ರಯಾಣಿಕರೊಂದಿಗೆ ಸಭ್ಯವಾಗಿ ವರ್ತಿಸುತ್ತಿಲ್ಲ; ನಗರದಲ್ಲಿ ಎಲ್ಲೆಂದರಲ್ಲಿ ಪ್ರಯಾಣಿಕರನ್ನು ಹತ್ತಿಸುವ ಮತ್ತು ತೀರಾ ಅಜಾಗರೂಕತೆಯಿಂದ ವಾಹನಗಳನ್ನು ಚಲಾಯಿಸುತ್ತಿರುವ ಬಗ್ಗೆ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಜರುಗಿಸಬೇಕೆಂದು ಪೊಲೀಸ್ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ರಸ್ತೆಗಳ ಕಾಮಗಾರಿ ಸರಿಯಾಗಿಲ್ಲ ಎಂಬ ಚೇಂಬರ್ ಆಫ್ ಕಾಮರ್ಸ್ ನ ಆರೋಪದ ಬಗ್ಗೆ ಪಿಡಬ್ಲ್ಯುಡಿ, ಆರ್ ಟಿ ಒ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಜಂಟಿ ಸಮೀಕ್ಷೆ ನಡೆಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.ಮಂಗಳೂರು ನಗರದ ರಸ್ತೆಗಳಿಗೆ ರಸ್ತೆ ವಿಭಾಜಕಗಳು ಮತ್ತು ಪಾದಾಚಾರಿಗಳ ರಸ್ತೆ ದಾಟುಗಳಿಗೆ ಬಣ್ಣ ಬಳಿಯುವ ಬಗ್ಗೆ ಸಾಧಿಸಿದ ಅಭಿವೃದ್ಧಿಯನ್ನು ಸಭೆಯಲ್ಲಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಆಟೋರಿಕ್ಷಾ ಪ್ರೀ ಪೇಯ್ಡ್ ಕೌಂಟರ್ ಗಳನ್ನು ಸ್ಥಾಪಿಸುವ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿದರು.
ವಿಶೇಷ ಆಂದೋಲನ ಮಾದರಿಯಲ್ಲಿ ಭೂಮಿ ಗುರುತಿಸುವಿಕೆ
ಬಡವರಿಗೆ ಸರ್ಕಾರಿ ಭೂಮಿ ಗುರುತ್ತಿಸುವಿಕೆ:ಸರ್ಕಾರಿ ಯೋಜನೆಗಳಡಿ ಬಡತನ ರೇಖೆಗಿಂತ ಕೆಳಗಿರುವ ಫಲಾನುಭವಿಗಳಿಗೆ ಜಿಲ್ಲೆಯಲ್ಲಿ ಸೌಲಭ್ಯಗಳನ್ನು ಒದಗಿಸಲು ಭೂಮಿ ಗುರುತಿಸುವಿಕೆಗೆ ವಿಶೇಷ ಆಂದೋಲನ ಮಾದರಿಯಲ್ಲಿ ರೂಪುರೇಷೆಯನ್ನು ವಿನ್ಯಾಸ ಮಾಡಿದ್ದು, ಈ ಸಂಬಂಧ ಇಂದು ಸಹಾಯಕ ಆಯುಕ್ತರು ಮತ್ತು ತಹಸೀಲ್ದಾರ್ ಗಳ ಸಭೆಯನ್ನು ನಡೆಸಿದರು.
ಈ ಸಂಬಂಧ ಈ ವಾರದೊಳಗೆ ಸಂಬಂಧಪಟ್ಟ ತಹಸೀಲ್ದಾರ್ ಗ್ರಾಮಪಂಚಾಯತ್ ಕಾರ್ಯದರ್ಶಿ ಮತ್ತು ಗ್ರಾಮಲೆಕ್ಕಿಗರ ಜೊತೆ ಸಭೆ ನಡೆಸಲು ಸೂಚಿಸಲಾಗಿದ್ದು, ಈ ಸಂಬಂಧ ಸಮರ್ಪಕ ಮಾರ್ಗದರ್ಶನಗಳನ್ನು ನೀಡಿದರು. ಭೂಮಿ ಗುರುತಿಸುವಿಕೆಯ ಜೊತೆಗೆ ಸಮೀಕ್ಷೆ ಮತ್ತು ನಕ್ಷೆಗಳನ್ನು ಮಾಡಿ ತಹಸೀಲ್ದಾರರು ಸಹಾಯಕ ಆಯುಕ್ತರ ಮೂಲಕ ಕಾರ್ಯಯೋಜನೆ ಸಲ್ಲಿಸಲು ಸೂಚನೆ ನೀಡಿದರು. ಯೋಜನೆಗಳ ತುರ್ತು ಅನುಷ್ಠಾನಕ್ಕೆ ಭೂಮಿ ಗುರುತಿಸುವಿಕೆ ಅತ್ಯಗತ್ಯವಾಗಿದ್ದು, ಈ ಕಾರ್ಯಕ್ಕಾಗಿ ಸಮಯಮಿತಿಯನ್ನು ಜಿಲ್ಲಾಧಿಕಾರಿಗಳು ನಿಗದಿಪಡಿಸಿದ್ದಾರೆ.

312 ಅನಧಿಕೃತ ಧಾರ್ಮಿಕ ರಚನೆ ತೆರವು:
ಸರ್ವೋಚ್ಛ ನ್ಯಾಯಾಲಯದ ಆದೇಶ ಅನುಷ್ಠಾನಿಸಲು ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗುವಂತಹ ಅನಧಿಕೃತ ಧಾರ್ಮಿಕ ಕಟ್ಟಡ ತೆರವು ಗೊಳಿಸುವ ಸಂಬಂಧ ನಡೆದ ಆರನೇ ಸಭೆಯಲ್ಲಿ ಗುರುತಿಸಲಾದ 312 ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.245 ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸಲಾಗಿದೆ. 65 ಸಕ್ರಮ ಗೊಳಿಸಲಾಗಿದೆ. ಕಟ್ಟಡ ತೆರವು ಕಾರ್ಯಾಚರಣೆ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಈ ಬಗ್ಗೆ ಸಾಕಷ್ಟು ಮಾಹಿತಿ ಅಧಿಕಾರಿಗಳಿಗಿದ್ದು, ಇನ್ನು ಮುಂದೆ ಪ್ರತೀ ತಿಂಗಳು ಸಭೆ ನಡೆಸದೆ ಅಂತಿಮ ವರದಿ ನೀಡಲು ಸೂಚಿಸಿದರು. ಅತಿ ಸೂಕ್ಷ್ಮ, ನಿಭಾಯಿಸಲಾರದ ಸಮಸ್ಯೆಗಳನ್ನು ಮಾತ್ರ ತಮ್ಮ ಗಮನಕ್ಕೆ ತರಬೇಕೆಂದು ಸೂಚಿಸಿದರು. ಎಲ್ಲ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Tuesday, April 12, 2011

ದ.ಕ.ದಲ್ಲಿ ಏ.27-28ರಂದು ಗಡಿ ಉತ್ಸವ, ಜೂನ್ ನಲ್ಲಿ ಗಡಿ ಸಮಸ್ಯೆ ಕುರಿತ ಪುಸ್ತಕ ಸಿದ್ಧ: ಬೆಲ್ಲದ

ಮಂಗಳೂರು,ಏಪ್ರಿಲ್.12: ಗಡಿನಾಡ ಸಾಂಸ್ಕೃತಿಕ ಉತ್ಸವಗಳ ಮೂಲಕ ಗಡಿ ಪ್ರದೇಶದ ಸಮಸ್ಯೆಗಳನ್ನು ದಾಖಲಿಸಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಕಾಂತ ಗುರಪ್ಪ ಬೆಲ್ಲದ ಹೇಳಿದ್ದಾರೆ.
ಅವರು ಮಂಗಳವಾರ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ ಗಡಿ ಪ್ರದೇಶದ ಅಭಿವೃದ್ಧಿ ಹಾಗೂ ಕಾಮಗಾರಿ ಅಭಿವೃದ್ಧಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ನಾಡಿನ ಗಡಿ ಪ್ರದೇಶದ ಸ್ಥಳೀಯ ಸಮಸ್ಯೆ, ಕಡಲ್ಕೊರೆತ, ಪ್ರವಾಸೋದ್ಯಮ, ಪರಿಸರ, ಶಿಕ್ಷಣ, ಸಾಂಸ್ಕೃತಿಕ ಅಂಶಗಳು ಭಾಷಾ ಅಳಿವು ಉಳಿವಿನ ಸಮಸ್ಯೆ ಸೇರಿದಂತೆ ಸ್ಥಳೀಯ ಜನರ ಸಮಸ್ಯೆಗಳನ್ನು ಬಗೆಹರಿಸಬೇಕಿದೆ. ಗಡಿನಾಡ ಉತ್ಸವದ ಮೂಲಕ ಪ್ರತಿಯೊಂದು ಕಡೆ ಸಮಸ್ಯೆಗಳನ್ನು ದಾಖಲಿಸುವ ಕೆಲಸ ಆಗುತ್ತಿದೆ. ಎರಡು ದಿನದ ಉತ್ಸವದಲ್ಲಿ ಗಡಿನಾಡ ಸಮಸ್ಯೆಗಳ ಕುರಿತು ವಿಚಾರಗೋಷ್ಠಿಗಳನ್ನು ನಡೆಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಏ.27 ಮತ್ತು 28 ರಂದು ಗಡಿನಾಡ ಉತ್ಸವ ನಡೆಯಲಿದ್ದು, ಇದಕ್ಕಾಗಿ ಸೂಕ್ತ ಸ್ಥಳವನ್ನು ಗೊತ್ತುಪಡಿಸಲಾಗುವುದು ಎಂದರು.
ಈಗಾಗಲೇ ಐದು ಗಡಿ ರಾಜ್ಯದ ಅಂಚಿನಲ್ಲಿರುವ 19 ಜಿಲ್ಲೆಯ 52 ತಾಲೂಕುಗಳಿಗೆ ಭೇಟಿ ನೀಡಿದ್ದೇನೆ. ಚಾಮರಾಜನಗರ, ಉತ್ತರ ಕನ್ನಡ, ಬೀದರ್, ಬೆಳಗಾವಿ ಜಿಲ್ಲೆಗಳಲ್ಲಿ ಗಡಿನಾಡ ಉತ್ಸವ ನಡೆದಿದ್ದು, ಅಲ್ಲಿನ ಸಮಸ್ಯೆಗಳನ್ನು ಪಟ್ಟಿ ಮಾಡಲಾಗಿದೆ. ಸರಕಾರ ಈಗಾಗಲೇ ಪ್ರಾಧಿಕಾರಕ್ಕೆ 15 ಕೋಟಿ ರೂ. ಬಿಡುಗಡೆ ಮಾಡಿದೆ. ಅದರಲ್ಲಿ ಗಡಿನಾಡ ಉತ್ಸವಕ್ಕೆ ತಲಾ ನಾಲ್ಕು ರೂ. ಲಕ್ಷ ಒದಗಿಸಲಾಗಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕೂಡ ಇದರಲ್ಲಿ ಕೈಜೋಡಿಸಬೇಕು. ಒಟ್ಟು 100 ಕೋಟಿ ಅನುದಾನಕ್ಕಾಗಿ ಸರಕಾರವನ್ನು ಒತ್ತಾಯಿಸಲಾಗಿದೆ ಎಂದು ಬೆಲ್ಲದ ನುಡಿದರು.ಗಡಿ ಪ್ರದೇಶಲ್ಲಿ ಶಿಕ್ಷಕರಿ ಗಾಗಿ ವಸತಿ ಗೃಹ ಗಳು, ಗ್ರಂಥಾ ಲಯ ಕಟ್ಟಡ ಗಳು, ಸಾಂಸ್ಕೃ ತಿಕ ಚಟು ವಟಿ ಕೆಗ ಳಿಗಾಗಿ ಬಯಲು ರಂಗ ಮಂದಿರ ನಿರ್ಮಿ ಸಲು ಇಲಾಖೆ ಒತ್ತು ನೀಡಿದೆ. ಗಡಿ ಪ್ರದೇ ಶದ ಗ್ರಾ ಮೀಣ ಶಾಲೆ ಗಳಲ್ಲಿ ಶಿಕ್ಷಕ ರಿಗೋ ಸ್ಕರ ವಸತಿ ಗೃಹ, ಗ್ರಂಥಾ ಲಯ, ಕ್ರೀಡಾ ಚಟು ವಟಿಕೆ ಪ್ರೋತ್ಸಾ ಹಿಸಲು ಗಡಿ ಅಭಿ ವೃದ್ಧಿ ಪ್ರಾಧಿ ಕಾರ ದಿಂದ ನೆರವು ನೀಡ ಲಾಗುವುದು ಎಂದ ಬೆಲ್ಲದ ಅವರು, ಗ್ರಾಮೀಣ ಮಕ್ಕಳ ಆಸಕ್ತಿಯನ್ನು ಗಮನಿಸಿ ಬೇಡಿಕೆಗಳ್ನನ್ನು ಪೂರೈಸುವ ಕೆಲಸವನ್ನು ಶಿಕ್ಷಣ ಇಲಾಖೆ ಮಾಡಬೇಕು. ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕಲ್ಲದೆ ಅಗತ್ಯವಾಗಿ ಬಯಲು ರಂಗಮಂದಿರವನ್ನು ನಿರ್ಮಿಸಬೇಕು ಎಂದರು. ಡಿಡಿಪಿಐ ಸಿ.ಚಾಮೇಗೌಡ, ಸಹಾಯಕ ಆಯುಕ್ತರು ಉಪಸ್ಥಿತರಿದ್ದರು.
ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಮೋಹನ್ ನಾಗಮ್ಮನವರ್, ದ.ಕ. ಜಿಲ್ಲಾ ಅಪರ ಜಿಲ್ಲಾಕಾರಿ ಪ್ರಭಾಕರ ಶರ್ಮಾ,ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಶಿವಶಂಕರ್, ಶಾಸಕ ಯು.ಟಿ.ಖಾದರ್ ಉಪಸ್ಥಿತರಿದ್ದರು.

Saturday, April 9, 2011

ಉತ್ತಮ ಆಡಳಿತಕ್ಕೆ ಲೋಕಪಾಲ್ ಮಸೂದೆ: ಮುಖ್ಯಮಂತ್ರಿ ಯಡಿಯೂರಪ್ಪ

ಮಂಗಳೂರು,ಏಪ್ರಿಲ್.09:ದೇಶ ಭ್ರಷ್ಟಾಚಾರ ಮುಕ್ತ ಮತ್ತು ಉತ್ತಮ ಆಡಳಿತಕ್ಕೆ ಲೋಕಪಾಲ್ ಮಸೂದೆ ಜಾರಿಯಾಗಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದರು.


ಅವರಿಂದು ಬಜಪೆ ಯಲ್ಲಿ ಪತ್ರಕರ್ತ ರೊಂದಿಗೆ ಮಾತ ನಾಡುತ್ತಾ,ಲೋಕ ಪಾಲ್ ಕಾಯಿದೆಯ ಅನುಷ್ಠಾನ ದಿಂದ ಪ್ರಜೆ ಗಳಿಗೆ ಅನು ಕೂಲವಾ ಗಲಿದ್ದು, ಉತ್ತಮ ಆಡಳಿತ ದೊರೆ ಯಲಿದೆ ಎಂದರು. ಪ್ರಧಾನ ಮಂತ್ರಿಗಳು ಈ ಸಂಬಂಧ ರಾಜ್ಯದ ಎಲ್ಲ ಮುಖ್ಯ ಮಂತ್ರಿ ಗಳೊಂದಿಗೆ ಚರ್ಚಿಸಿ ಕಾಯಿದೆ ಜಾರಿಗೆ ತರ ಬೇಕೆಂದು ಸಲಹೆ ಮಾಡಿದರು. ಮುಖ್ಯ ಮಂತ್ರಿಯವರೊಡನೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ ಪಾಲೆಮಾರ್, ಜಿ.ಪಂ. ಅಧ್ಯಕ್ಷರಾದ ಶೈಲಜಾ ಕೆ.ಟಿ., ಮೇಯರ್ ಪ್ರವೀಣ್ ಅಂಚನ್, ಉಪಮೇಯರ್ ಗೀತಾ ನಾಯಕ್, ಜಿಲ್ಲಾಧಿಕಾರಿ, ಐಜಿಪಿ ಅಲೋಕ್ ಮೋಹನ್ ಒಳಗೊಂಡಂತೆ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು.

Friday, April 8, 2011

ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಸಲು ಬರ ಪರಿಹಾರ ನಿಧಿಯಿಂದ ನೆರವು-ಸುಬೋಧ್ ಯಾದವ್

ಮಂಗಳೂರು,ಎಪ್ರಿಲ್.08;ದಕ್ಷಿಣಕನ್ನಡ ಜಿಲ್ಲೆಯ ಪಟ್ಟಣಪ್ರದೇಶಗಳಲ್ಲಿ ಎಪ್ರಿಲ್-ಮೇ ಮಾಹೆಗಳಲ್ಲಿ ಕುಡಿಯುವ ನೀರಿಗೆ ಉಂಟಾಗುವ ಸಂಕಷ್ಟವನ್ನು ತಾತ್ಕಾಲಿಕವಾಗಿ ಪರಿಹರಿಸಲು ಜಿಲ್ಲಾ ಬರ ಪರಿಹಾರ ನಿಧಿಯಿಂದ ನೆರವು ನೀಡಲಾಗುವುದೆಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ತಿಳಿಸಿದ್ದಾರೆ.
ಅವರು ಇಂದು ತಮ್ಮ ಕಚೇರಿಯಲ್ಲಿ ನಡೆದ ದಕ್ಷಿಣಕನ್ನಡ ಜಿಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳ ಕಚೇರಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಪುರಸಭೆ/ಪಟ್ಟಣ ಪಂಚಾಯತ್ ಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ತೊಂದರೆ ಉಂಟಾದಲ್ಲಿ ಅಂತಹ ಸ್ಥಳೀಯ ಸಂಸ್ಥೆಯವರು ನೆರವು ಕೋರಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಲ್ಲಿ ಬರ ಪರಿಹಾರ ನಿಧಿಯಿಂದ ಹಣ ಒದಗಿಸುವುದಾಗಿ ತಿಳಿಸಿದರು.ದಕ್ಷಿಣಕನ್ನಡ ಜಿಲ್ಲೆಯಲ್ಲಿ 7 ಸ್ಥಳೀಯ ಸಂಸ್ಥೆಗಳಿಗೆ 2010-11 ನೇ ಸಾಲಿನಲ್ಲಿ ಒಟ್ಟು ರೂ.405.31 ಲಕ್ಷ ತೆರಿಗೆ ಸಂಗ್ರಹ ಬೇಡಿಕೆ ಇತ್ತು. 31-3-2011 ರ ಅಂತ್ಯಕ್ಕೆ ರೂ.391.32 ಲಕ್ಷ ವಸೂಲಾತಿ ಮಾಡುವ ಮೂಲಕ ಶೇ.97 ರಷ್ಟು ಸಾಧನೆ ಮಾಡಲಾಗಿದೆ. ಜಿಲ್ಲೆಯಲ್ಲಿರುವ 7 ಪುರಸಭೆಗಳ ವ್ಯಾಪ್ತಿಯಲ್ಲಿ 9078 ವಾಣಿಜ್ಯ ಉದ್ದಿಮೆಗಳಿಂದ 2011-12 ನೇ ಸಾಲಿಗೆ ಲೈಸನ್ಸ್ ನವೀಕರಣಗೊಳಿಸಿದ್ದು ಒಟ್ಟು ರೂ.34.33 ಲಕ್ಷ ಶುಲ್ಕ ವಸೂಲಾತಿ ಮಾಡಲಾಗಿದೆ.ಉದ್ದಿಮೆ ವ್ಯಾಪಾರ ಮಾಡುವವರು ಕಡ್ಡಾಯವಾಗಿ ಲೈಸನ್ಸ್ ಪಡೆಯಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ವಾಜಪೇಯಿ ನಗರ ವಸತಿ ಹಾಗೂ ನಮ್ಮ ಮನೆ ಯೋಜನೆಯಡಿ ಜಿಲ್ಲೆಯ ಮಂಗಳೂರು ಮಹಾನಗರಪಾಲಿಕೆ ಸೇರಿದಂತೆ ಉಳಿದ 7 ಪುರಸಭೆಗಳಲ್ಲಿ ಒಟ್ಟು 1325 ಜನರಿಗೆ ವಸತಿ ಒದಗಿಸುವ ಗುರಿ ಹೊಂದಲಾಗಿತ್ತು.1139 ಫಲಾನುಭವಿಗಳು ವಸತಿಗೆ ಅರ್ಜಿ ಸಲ್ಲಿಸಿರುತ್ತಾರೆ. ಆಶ್ರಯ ಸಮಿತಿಯಲ್ಲಿ ಆಯ್ಕೆಯಾದ 824 ರಲ್ಲಿ 565 ಫಲಾನುಭವಿಗಳ ಅರ್ಜಿಗಳನ್ನು ಬ್ಯಾಂಕುಗಳಿಗೆ ರವಾನಿಸಲಾಗಿದೆ. ವಾಜಪೇಯಿ ನಗರ ನಿವೇಶನ ಯೋಜನೆಯನ್ವಯ ಜಿಲ್ಲೆಯಲ್ಲಿ 2650 ಕುಟುಂಬಗಳಿಗೆ ನಿವೇಶನ ಒದಗಿಸುವ ಗುರಿ ಹೊಂದಲಾಗಿತ್ತು.ಆದರೆ 2003 ರ ನಿವೇಶನ ರಹಿತರ ಪಟ್ಟಿಯಲ್ಲಿ 4798 ಕುಟುಂಬಗಳನ್ನು ಗುರುತಿಸಲಾಗಿದ್ದು, ಪಟ್ಟಿಯಿಂದ 728 ಕುಟುಂಬಗಳನ್ನು ಪರಿಷ್ಕರಿಸಲಾಗಿದೆ. 2004 ರಿಂದ ಇದುವರೆಗೆ ಬಂದಿರುವ ಅರ್ಜಿಗಳು 5509 ,ಒಟ್ಟು 6237 ಅರ್ಜಿಗಳು ಬಂದಿರುತ್ತವೆ.
ಬಂಟ್ವಾಳ ತಾಲೂಕಿನಲ್ಲಿ 62 ಫಲಾನುಭವಿಗಳಿಗೆ ನಿವೇಶನ ಹಕ್ಕು ಪತ್ರ ಹಂಚಲು ಕ್ರಮ ಕೈಗೊಂಡಿದ್ದು ತಾಂತ್ರಿಕ ಕಾರಣದಿಂದ ವಿಳಂಬವಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ 22 ಫಲಾನುಭವಿಗಳಿಗೆ ನಿವೇಶನ ಹಕ್ಕು ಪತ್ರ ವಿತರಿಸಲಾಗಿದೆ. ಮೂಡಬಿದ್ರೆ 100 ಹಕ್ಕು ಪತ್ರಗಳನ್ನು, ಸುಳ್ಯದಲ್ಲಿ 25 ಹಕ್ಕು ಪತ್ರಗಳನ್ನು ಶೀಘ್ರದಲ್ಲಿ ವಿತರಿಸಲಾಗುವುದೆಂದು ತಿಳಿಸಿದರು.ಪುತ್ತೂರಿನಲ್ಲಿ 60 ಕುಟುಂಬಗಳನ್ನು ಆಯ್ಕೆ ಮಾಡಿ ಹಕ್ಕು ವಿತರಣೆಗೆ ಕ್ರಮಕೈಗೊಳ್ಳಲಾಗಿದೆ.
ಸಭೆಯಲ್ಲಿ ಪುತ್ತೂರು ಉಪವಿಭಾಗಾಧಿಕಾರಿ ಡಾ. ಹರೀಶ್ ಕುಮಾರ್,ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಮೇ 1 ರಂದು ಕರಾವಳಿ ತೀರ ಪ್ರದೇಶ ಸ್ವಚ್ಛತೆಗೆ ಶ್ರಮದಾನ:
ದಕ್ಷಿಣಕನ್ನಡ ಜಿಲ್ಲೆಯ ವ್ಯಾಪ್ತಿಗೊಳಪಡುವ ಕರಾವಳಿ ತೀರ ಪ್ರದೇಶ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಮೇ 1 ಕಾರ್ಮಿಕ ದಿನಾಚರಣೆಯಂದು ಮೆಗಾ ಶ್ರಮದಾನದ ಮೂಲಕ ಸ್ವಚ್ಛತಾ ಅಭಿಯಾನ ನಡೆಸಲಾಗುವುದೆಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ತಿಳಿಸಿದ್ದಾರೆ.

ಸರಕಾರಿ ಸ್ಥಳಗಳಲ್ಲಿ ತ್ಯಾಜ್ಯ ಎಸೆದಲ್ಲಿ ದೂ.ಸಂ. 2220306 ಕ್ಕೆ ಕರೆಮಾಡಿ ತಿಳಿಸಿ

ಮಂಗಳೂರು,ಎಪ್ರಿಲ್.08:ಮಂಗಳೂರು ಮಹಾನಗರಪಾಲಿಕಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ರಸ್ತೆ ಬದಿಯಲ್ಲಿ ಮತ್ತು ಸರಕಾರಿಖಾಲಿ ಸ್ಥಳಗಳಲ್ಲಿ ನಿರುಪಯುಕ್ತ ಕಟ್ಟಡ ತ್ಯಾಜ್ಯತ ವಸ್ತು ಮತ್ತು ಕಸಕಡ್ಡಿಗಳನ್ನು ಎಸೆದು ನಗರ ನೈರ್ಮಲ್ಯಕ್ಕೆ ಮತ್ತು ಪರಿಸರಕ್ಕೆ ಮಾಲಿನ್ಯವನ್ನುಂಟು ಮಾಡುತ್ತಿರುವುದಲ್ಲದೆ ಪಾದಾಚಾರಿಗಳಿಗೆ ಮತ್ತು ವಾಹನ ಸಂಚಾರಕ್ಕೆ ಅಡೆತಡೆಯನ್ನುಂಟು ಮಾಡುತ್ತಿರುವುದು ಪಾಲಿಕೆಯ ಗಮನಕ್ಕೆ ಬಂದಿರುತ್ತದೆ. ಆದ್ದರಿಂದ ಸಾರ್ವಜನಿಕರು ರಸ್ತೆ ಬದಿಯಲ್ಲಿ ಹಾಗೂ ಸರಕಾರಿ ಸ್ಥಳಗಳಲ್ಲಿ ನಿರುಪಯುಕ್ತ ಕಟ್ಟಡ ತ್ಯಾಜ್ಯ ಮತ್ತು ಕಸಕಡ್ಡಿಗಳನ್ನು ವಾಹನಗಳಲ್ಲಿ ತಂದು ಎಸೆಯಬಾರದು.ಎಸೆದಲ್ಲಿ ಅಂತಹವರ ವಿಕರುದ್ಧ ಕಾನೂನುಕ್ರಮ ಕೈಗೊಳ್ಳಲಾಗುವುದು. ಸ್ಥಳೀಯರು ಇಂತಹ ವಾಹನಗಳ ನಂಬರ್ ಗುರುತಿಸಿ ಕೂಡಲೇ ನಗರಪಾಲಿಕೆಯ ದೂ.ಸಂ.2220306 ಕ್ಕೆ ಕರೆಮಾಡಿ ತಿಳಿಸಲು ಮಹಾನಗರಪಾಲಿಕೆ ಆರೋಗ್ಯಾಧಿಕಾರಿಗಳು ತಿಳಿಸಿರುತ್ತಾರೆ

Thursday, April 7, 2011

ಮಕ್ಕಳ ರಕ್ಷಣೆ/ಪೋಷಣೆ ಸಂಸ್ಥೆ ನೋಂದಣಿ ಕಡ್ಡಾಯ

ಮಂಗಳೂರು,ಎಪ್ರಿಲ್.07:ಭಾರತ ಸರ್ಕಾರದ ನಿರ್ದೇಶದನುಸಾರ ಜಿಲ್ಲೆಯಲ್ಲಿ ಅನಾಥ ಮಕ್ಕಳ ಕುಟೀರ,ಶೆಲ್ಟರ್ ಹೋಂ,ಬಾಲಮಂದಿರ ಇತ್ಯಾದಿ ಸಂಸ್ಥೆಗಳು ಮಕ್ಕಳ ಪಾಲನೆ /ಪೋಷಣೆಗಾಗಿ ವಿವಿಧ ಕಾಯಿದೆಗಳಡಿ ನೊಂದಾಯಿಸ್ಪಟ್ಟು ಕಾರ್ಯನಿರ್ವಹಿಸುತ್ತಿವೆ. ಬಾಲನ್ಯಾಯ ಕಾಯಿದೆ (ಮಕ್ಕಳ ರಕ್ಷಣೆ, ಪೋಷಣೆ) ಮಾಡುವ ಎಲ್ಲಾ ಸಂಸ್ಥೆಗಳು ಬಾಲನ್ಯಾಯ ಕಾಯ್ದೆಯಡಿ ನೊಂದಾಯಿಸ್ಪಡುವುದು ಕಡ್ಡಾಯವಾಗಿರುತ್ತದೆ. ಆದ್ದರಿಂದ ಬಾಲ ನ್ಯಾಯ ಕಾಯ್ದೆಯಡಿ ನೊಂದಾಯಿಸದ ಸಂಸ್ಥೆಗಳು ಕೂಡಲೇದಿನಾಂಕ 30-4-2011 ರೊಳಗೆ ಮಹಿಳಾ ಮತ್ತು ಮಕ್ಕಳ ಅಭಿವ್ರಧ್ಧಿ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳತಕ್ಕದ್ದು. ನೊಂದಾಯಿಸದ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಿಗಧಿತ ಅರ್ಜಿ ನಮೂನೆ ಮತ್ತು ಹೆಚ್ಚಿನ ಮಾಹಿತಿಗೆ ಉಪನಿರ್ದೇಶಕರು,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಪಂಚಾಯತ್ ಕಟ್ಟಡ, ಮಂಗಳೂರು ಇವರನ್ನು (ದೂ.ಸಂ.2451254)ಸಂಪರ್ಕಿಸಬಹುದಾಗಿದೆ.

ಡಾ| ಎ.ಎಸ್.ರಾವ್ ಬೀಳ್ಕೊಡುಗೆ 'ಅವಿಸ್ಮರಣೀಯ ಸೇವಾನುಭವ'

ಮಂಗಳೂರು,ಏಪ್ರಿಲ್,07:ದಕ್ಷಿಣ ಕನ್ನಡದಲ್ಲಿ ಪೊಲೀಸ್ ವರಿಷ್ಠಾಕಾರಿಯಾಗಿ ಸೇವೆ ಸಲ್ಲಿಸಿದ್ದ ದಿನಗಳು ಅತ್ಯಂತ ಅವಿಸ್ಮರಣೀಯ. ಪೊಲೀಸ್ ಇಲಾಖೆಗೆ ಅದು ಅಗ್ನಿ ಪರೀಕ್ಷೆಯ ಕಾಲಘಟ್ಟ ಅಂತಹ ಸಮಯದಲ್ಲಿ ಇಲ್ಲಿಗೆ ಎಸ್ಪಿಯಾಗಿ ಬಂದೆ. ಆಮೇಲೆ ನಡೆದ ಘಟನೆಗಳು ತನ್ನ ಸೇವಾವಧಿಯಲ್ಲಿ ಮರೆಯಲಾಗದ ದಿನಗಳಾಗಿ ದಾಖಲಾದವು ಎಂದು ನಿರ್ಗಮನ ಎಸ್ಪಿ ಡಾ| ಎ.ಸುಬ್ರಹ್ಮಣ್ಯೇಶ್ವರ ರಾವ್ ಹೇಳಿದ್ದಾರೆ.
ದ.ಕ.ಜಿಲ್ಲಾಪೊಲೀಸ್ ಮತ್ತು ಮಂಗಳೂರು ನಗರ ಪೊಲೀಸ್ ವತಿಯಿಂದ ಬುಧವಾರ ಸಂಜೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಡಾ|ರಾವ್ ಮಾತನಾಡಿದರು.
ಉತ್ತಮ ಕೆಲಸ ಕ್ಕೆ ಜಿಲ್ಲೆ ಯಲ್ಲಿ ಸಿಗು ತ್ತಿದ್ದ ಸ್ಪಂದನೆ ಯಿಂದ ಪ್ರೋತ್ಸಾ ಹಿತ ನಾದೆ; ದಕ್ಷಿಣ ಕನ್ನಡ ಜಿಲ್ಲೆಯ ಸಹ ಕಾರಕ್ಕೆ ಚಿರ ಋಣಿ ಎಂದು ಹೇಳಿದ ಡಾ| ರಾವ್, ಜಿಲ್ಲೆ ಯಲ್ಲಿ ಶಾಂತಿ -ಸುವ್ಯವಸ್ಥೆ ಮರು ಸ್ಥಾಪಿಸು ವಲ್ಲಿ ಜನತೆ, ಹಿರಿಯ ಅಧಿ ಕಾರಿ ಗಳು ಹಾಗೂ ಸಹೋ ದ್ಯೋಗಿ ಗಳು ನೀಡಿದ ಸಹಕಾರ ಅಪಾರ ಎಂದರು.ಮಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ ಕುಮಾರ್ ಸಿಂಗ್ ಅವರು ಜಿಲ್ಲೆಯಲ್ಲಿ ಹಲವಾರು ಬದಲಾವಣೆ ಗಳನ್ನು ತಂದ ಉತ್ತಮ ಅಧಿಕಾರಿ ಎಂದು ಡಾ| ಎ.ಎಸ್. ರಾವ್ ಅವರನ್ನು ಬಣ್ಣಿಸಿದರು.ದ.ಕ.ಜಿಲ್ಲಾ ಎಸ್ಪಿ ಲಾಬುರಾಮ್ ಡಾ.ಎ.ಎಸ್.ರಾವ್ ರವರ ಕರ್ತವ್ಯ ಪ್ರೀತಿಯನ್ನು ಕೊಂಡಾಡಿದರು.ದ.ಕ.ಜಿಲ್ಲಾ ಹೆಚ್ಚುವರಿ ಜಿಲ್ಲಾಧಿ ಕಾರಿ ಎಸ್.ಎ. ಪ್ರಭಾಕರ ಶರ್ಮ, ಪುತ್ತೂರು ವಿಭಾಗದ ಸಹಾ ಯಕ ಪೊಲೀಸ್ ಅಧೀ ಕ್ಷಕಿ ಡಾ| ರೋಹಿಣಿ ಕಟೋಚ, ಡಿಸಿ ಐಬಿ ಇನ್ಸ್ ಪೆಕ್ಟರ್ ವೆಂಕಟೇಶ ಪ್ರಸನ್ನ , ದ.ಕ.ಜಿಲ್ಲಾ ಸ್ಪೆಷಲ್ ಬ್ರಾಂಚ್ ಉಪ ನಿರೀ ಕ್ಷಕ ನಂದಕುಮಾರ್, ಬೆರಳಚ್ಚು ವಿಭಾಗದ ಪ್ರಭಾರ ಡಿವೈಎಸ್ಪಿ ಹರೀಶ್ಚಂದ್ರ ಹೆಜಮಾಡಿ, ನಿರ್ಗಮನ ಎಸ್ಪಿ ರಾವ್ ಅವರ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ಅಲೋಕ್ ಮೋಹನ್ ಮಾತನಾಡಿ, ಡಾ| ಸುಬ್ರಹ್ಮಣ್ಯೇಶ್ವರ ರಾವ್ ಅವರ ಪ್ರಥಮ ಭೇಟಿಯನ್ನು ಸ್ಮರಿಸಿದರಲ್ಲದೆ ಅಧಿಕಾರಿಯ ಪ್ರಾಮಾಣಿಕತೆ ಮತ್ತು ಸರಳತೆಯನ್ನು ಪ್ರಶಂಸಿಸಿದರು. ಅವರ ತಂಡವನ್ನು ಮುನ್ನಡೆಸುವ ಸಾಮರ್ಥ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಡಾ| ರಾವ್ ಕೇಂದ್ರ ಸೇವೆಗೆ ನಿಯೋಜನೆಗೊಳ್ಳುತ್ತಿದ್ದಾರೆ. ಅವರು ಸಿಬಿಐಗೆ ತೆರಳುತ್ತಿರುವುದು ಕರ್ನಾಟಕದ ಪೊಲೀಸ್ ಇಲಾಖೆ ಹೆಮ್ಮೆ ಪಡುವ ಸಂಗತಿಯಾಗಿದೆ; ಆದರೆ ರಾಜ್ಯ ಪೊಲೀಸ್ ಅವರ ಸೇವೆ ಯನ್ನು ಮುಂದಿನ ದಿನ ಗಳಲ್ಲಿ ಸದ್ಬಳಕೆ ಮಾಡಿ ಕೊಳ್ಳಲಿದೆ ಎಂದರು.ಅಪ ರಾಧ ಪತ್ತೆ ಗಾಗಿ ಡಾ| ರಾವ್ ಜಾರಿಗೆ ತಂದ ಉಪಕ ರಣಗಳ ಪೆಟ್ಟಿಗೆ ರಾಜ್ಯದ ಪೊಲೀಸ್ ಇಲಾಖೆ ಗೆ ಮಾದರಿ ಯಾಗಿದೆ ಮತ್ತು ಪ್ರಶಂಸಿ ಸಲ್ಪಟ್ಟಿದೆ ಎಂದರು.ಯೋಚನೆ, ಯೋಜನೆ, ಸಮರ್ಪಕ ಅನುಷ್ಠಾನ ಅವರ ನಾಯ ಕತ್ವದ ಗುಣಗಳು ಎಂದರು.
ಮಂಗಳೂರು ನಗರ ಪೊಲೀಸ್ ಉಪ ಆಯುಕ್ತ ಎಂ.ಮುತ್ತುರಾಯ ಹಾಗೂ ಡಾ| ದೀಪ್ತಿ ಎಸ್. ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹೆಚ್ಚುವರಿ ಎಸ್ಪಿ ಎಂ,ಪ್ರಭಾಕರ್ ಸ್ವಾಗತಿಸಿದರು. ಡಿಸಿಆರ್ ಬಿ ಡಿವೈಎಸ್ಪಿ ಬಿ.ಜೆ.ಭಂಡಾರಿ ವಂದಿಸಿದರು. ಲೆನೆಟ್ ಕ್ಯಾಸ್ಟಲಿನೊ ಕಾರ್ಯಕ್ರಮ ನಿರೂಪಿಸಿದರು.

Wednesday, April 6, 2011

ಕೃಷಿಗೆ ಆದ್ಯತೆ ನೀಡಿ: ಸಿಇಒ ಪಿ.ಶಿವಶಂಕರ್

ಮಂಗಳೂರು,ಮಾರ್ಚ್.06: ಜಿಲ್ಲೆಯಲ್ಲಿ ಕೃಷಿ ಹಾಗೂ ಕೃಷಿ ಪೂರಕ ಚಟುವಟಿಕೆಗಳ ಪ್ರೋತ್ಸಾಹಕ್ಕಾಗಿ ಜಿಲ್ಲಾ ಸಾಲ ಯೋಜನೆ 2011-12 ರಲ್ಲಿ ಹೆಚ್ಚಿನ ಅನುದಾನವನ್ನು ನಿಗಧಿಪಡಿಸುವ ಮೂಲಕ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಪಿ.ಶಿವಶಂಕರ್ ಜಿಲ್ಲೆಯ ಬ್ಯಾಂಕಿಂಗ್ ಕ್ಷೇತ್ರದ ಮುಖ್ಯಸ್ಥರಿಗೆ ಕರೆ ನೀಡಿದ್ದಾರೆ.

ಅವರು ಇಂದು ಜಿಲ್ಲಾ ಪಂಚಾ ಯತ್ ನ ನೇತ್ರಾವತಿ ಸಭಾಂಗ ಣದಲ್ಲಿ 2011-12 ನೇ ಸಾಲಿನ ಜಿಲ್ಲಾ ಬ್ಯಾಂಕಿಂಗ್ ಸಾಲಯೋಜನೆ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. 2010-11 ನೇ ಸಾಲಿನಲ್ಲಿ ಜಿಲ್ಲಾ ಆದ್ಯತಾ ವಲಯ ಸಾಲ ಯೋಜನೆಯನ್ವಯ ಮೂರನೇ ತ್ರೈಮಾಸಿಕದಲ್ಲಿ ವಾಷರ್ಿಕವಾಗಿ 2276 ಕೋಟಿ ರೂ.ನಿಗಧಿಯಾಗಿದ್ದು,1653 ಕೋಟಿ ರೂ.ಗಳ ಸಾಲ ಬಿಡುಗಡೆಯಾಗಿತ್ತು. ಇದರಲ್ಲಿ ಕೃಷಿ ವಲಯಕ್ಕೆ 843 ಕೋಟಿ ,ಸಣ್ಣ ಕೈಗಾರಿಕೆಗೆ ರೂ.333 ಕೋಟಿ ಇತರೆ ಆದ್ಯತಾ ವಲಯಕ್ಕೆ 475 ಕೋಟಿ ರೂ. ಸಾಲ ನೀಡಲಾಗಿತ್ತು. ಈ ವರ್ಷ 2011-12 ನೇ ಸಾಲಿನಲ್ಲಿ 4078 ಕೋಟಿ ರೂ.ಗಳನ್ನು ಹೆಚ್ಚಿನ ಸಾಲ ಯೋಜನೆ ಬಿಡುಗಡೆಯಾಗಿದೆ. ಈ ಬಾರಿ ಆದ್ಯತಾ ವಲಯಕ್ಕೆ ಯೋಜನೆಯ ಶೇ.77 ಅಂದರೆ 3141 ಕೋಟಿ,ಯೋಜನಾವಾರು ಶೇ. 28 ಅಂದರೆ 1443 ಕೋಟಿ ರೂ.ಕೃಷಿ ವಲಯಕ್ಕೆ ಸಣ್ಣ ಕೈಗಾರಿಕಾಭಿವೃದ್ಧಿಗೆ 431 ಕೋಟಿ ನಿಗಧಿಯಾಗಿದೆ. ಇನ್ನಿತರ ಆದ್ಯತಾ ವಲಯ ಕ್ಷೇತ್ರಗಳಿಗೆ 1267 ಕೋಟಿ ರೂ.ಮೀಸಲಿಡಲಾಗಿದೆ.
ಆದ್ಯೇತರ ವಲಯಕ್ಕೆ 937 ಕೋಟಿ ರೂ.ಮೀಸಲಿರಿಸಲಾಗಿದೆ.
ಸಭೆಯಲ್ಲಿ ಲೀಡ್ ಬ್ಯಾಂಕ್ ಉಪ ಮಹಾ ಪ್ರಬಂಧಕ ಜೆ.ಎಸ್.ಶೆಣೈ,ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಿವರಾಮೇ ಗೌಡ,ಯೋಜನಾ ನಿರ್ದೇಶಕಿ ಸೀತಮ್ಮ ಮುಂತಾದವರು ಹಾಜರಿದ್ದರು.