Wednesday, April 6, 2011

ಸೇನಾ ನೇಮಕಾತಿ ರಾಲಿಗೆ 3,800 ಕ್ಕೂ ಹೆಚ್ಚು ಆಕಾಂಕ್ಷಿಗಳು ಹಾಜರ್

ಮಂಗಳೂರು,ಮಾರ್ಚ್.06:ಭಾರತೀಯ ಸೇನೆಯ ವಿವಿಧ ಹುದ್ದೆಗಳ ನೇಮಕಾತಿಗಾಗಿ ಎಪ್ರಿಲ್ 1 ರಿಂದ ಆರಂಭವಾಗಿರುವ ನೇಮಕಾತಿ ರಾಲಿಗೆ ರಾಜ್ಯದ 11 ಜಿಲ್ಲೆಗಳಿಂದ ಸುಮಾರು 3800 ಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದಾರೆಯೆಂದು ನೇಮಕಾತಿ ರಾಲಿಯ ಅಧಿಕಾರಿ ಬ್ರಿಗೇಡಿಯರ್ ಎಂ.ಎಂ.ಗುಪ್ತಾ ಪತ್ರಕರ್ತರಿಗೆ ಈ ವಿಷಯ ತಿಳಿಸಿದರು.

ಭಾರ ತೀಯ ಸೇನೆ ಗೆ ನೇಮಕ ವಾದಲ್ಲಿ ಆರಂಭ ದಲ್ಲೇ ರೂ.15,000 ಮೇಲ್ಪ ಟ್ಟು ವೇತನ ಸಿಗ ಲಿದೆ.ಇದರ ಜೊತೆಗೆ ಆಕ ರ್ಷಕ ಭತ್ಯೆ ಗಳು ದೊರೆ ಯಲಿವೆ. ಮೈ ಸೂರಿನ ಚಾ ಮುಂಡಿ ವಿಹಾರ ಸ್ಟೇಡಿ ಯಂ ನಲ್ಲಿ ಎಪ್ರಿಲ್ 14 ರಿಂದ ರಾಲಿ ನಡೆ ಯಲಿದ್ದು ಅಲ್ಲಿ ಸಹ ದ.ಕ.ಜಿಲ್ಲೆಯ ಆಸಕ್ತ ಅಭ್ಯರ್ಥಿ ಗಳು ಭಾಗ ವಹಿಸ ಬಹು ದಾಗಿದೆ ಎಂದು ಕಮಾಂ ಡರ್ ಸಿ.ಆರ್.ದೇಶಪಾಂಡೆ ತಿಳಿಸಿದ್ದಾರೆ.ಎಲ್ಲಾ ದಾಖಲೆಗಳು ಕ್ರಮಬದ್ಧವಾಗಿದ್ದು,ಅಭ್ಯರ್ಥಿಯ ದೇಹದಾಡ್ರ್ಯತೆ ತೃಪ್ತಿಕರ ವಾಗಿದ್ದಲ್ಲಿ ಅಂತಹ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುವುದೆಂದರು.