Monday, December 31, 2012

30 ರೈತ ಸಂಪರ್ಕ ರಸ್ತೆಗಳಿಗೆ ಟೆಂಡರ್ ಪ್ರಕ್ರಿಯೆ ಆರಂಭ: ಕೆ.ಕೃಷ್ಣರಾಜ ಹೆಗ್ಡೆ.

ಮಂಗಳೂರು, ಡಿಸೆಂಬರ್.31:-ಮಂಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ 2012-13 ನೇ ಸಾಲಿನಲ್ಲಿ 30 ಗ್ರಾಮೀಣ ರೈತ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆಯೆಂದು ಎಪಿಎಂಸಿಯ ಅಧ್ಯಕ್ಷರಾದ ಕೆ.ಕೃಷ್ಣರಾಜ ಹೆಗ್ಡೆ ಅವರು ತಿಳಿಸಿದ್ದಾರೆ. 
     ಅವರು ಇಂದು ಬೈಕಂಪಾಡಿಯ ತಮ್ಮ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು.2010-11 ಮತ್ತು 2011-12 ನೇ ಸಾಲಿಗೆ ಸುಮಾರು ರೂ.44.50 ಲಕ್ಷ ವೆಚ್ಚದಲ್ಲಿ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಎಪಿಎಂಸಿಯ ವಾರ್ಷಿಕ ಸಂಪನ್ಮೂಲದ ಹಣದಿಂದ ರೈತರಿಗೆ ಹೊಲದಿಂದ ಹೊಲಕ್ಕೆ ರಸ್ತೆ ನಿರ್ಮಾಣ ಕಾರ್ಯಕ್ರಮದಂತೆ ಪ್ರತೀ ವರ್ಷ ರೂ.30.00 ಲಕ್ಷಗಳನ್ನು ರಸ್ತೆ ನಿರ್ಮಾಣಗಳಿಗೆ ವೆಚ್ಚ ಮಾಡಲಾಗಿದೆಯೆಂದರು.ಇದಲ್ಲದೆ ಎಪಿಎಂಸಿ ಸದಸ್ಯರ ಸೂಚನೆ ಮೇರೆಗೆ ಅಗತ್ಯವಿರುವ ಕಡೆ ರಸ್ತೆ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ ಎಂದರು.ರೂ.12 ಕೋಟಿ ವೆಚ್ಚದ ನಬಾರ್ಡ್ ಸಹಾಯಧನ ಕಾಮಗಾರಿ ಯೊಜನೆಯಂತೆ ಮುಖ್ಯ ಮಾರುಕಟ್ಟೆ ಪ್ರಾಂಗಣದ ಬೈಕಂಪಾಡಿಯಲ್ಲಿ ರೂ.12.10 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇದಕ್ಕಾಗಿ ನಬಾರ್ಡ್ ಸಂಸ್ಥೆಯಿಂದ ರೂ.3.00 ಕೋಟಿ ಸಬ್ಸಿಡಿಯನ್ನು ಪಡೆಯಲು ಕ್ರಮ ವಹಿಸಲಾಗಿದೆಯಲ್ಲದೆ 2012-13 ನೇ ಸಾಲಿನಲ್ಲಿ ರೂ.61.50 ಲಕ್ಷ ವೆಚ್ಚದಲ್ಲಿ ಬೈಕಂಪಾಡಿ ಮಾರುಕಟ್ಟೆ ಪ್ರಾಂಗಣದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ.
ಚುನಾಯಿತ ಸಮಿತಿ ಅಸ್ಥಿತ್ವಕ್ಕೆ ಬರುವ ಮುನ್ನ ಬೈಕಂಪಾಡಿ ಪ್ರಾಂಗಣದಲ್ಲಿ ಕೇವಲ 58 ವರ್ತಕರು ಇದ್ದರು. ಆದರೆ ಇಂದು ಇಲ್ಲಿ 250 ಜನ ವರ್ತಕರು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಹಂಚಿಕೆಯಾದ ನಿವೇಶನಗಳನ್ನು 122 ಜನ ವರ್ತಕರು ತಮ್ಮ ಸ್ವಂತ ಕಟ್ಟಡ ಹೊಂದಿ ವಹಿವಾಟು ನಡೆಸುತ್ತಿದ್ದಾರೆ.
ಮಂಗಳೂರು ನಗರದ ನೆಲ್ಲಿಕಾಯಿ ರಸ್ತೆಯಲ್ಲಿರುವ ಎಪಿಎಂಸಿಯ 1.10 ಎಕರೆ ಜಾಗವನ್ನು ರಾಜ್ಯ ಸರಕಾರ ನಿರೂಪಿಸಿದ ಪಬ್ಲಿಕ್ ಪ್ರೈವೇಟ್ ಪಾರ್ಟನರ್ ಯೋಜನೆಯಡಿಯಲ್ಲಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆಯೆಂದರು.ಕರ್ನಾಟಕ ರಾಜ್ಯ ಮಾರಾಟ ಇಲಾಖೆ ಮಂಗಳೂರು ಎಪಿಎಂಸಿಗೆ ನಿಗಧಿಡಿಸಿದ್ದ ರೂ.5.90 ಕೋಟಿ ಮಾರುಕಟ್ಟೆ ಶುಲ್ಕ ವಸೂಲಾತಿಗೆ ಈಗಾಗಲೇ 3.16 ಕೋಟಿ ವಸೂಲು ಮಾಡಲಾಗಿದೆಯೆಂದರು.
ಪತ್ರಿಕಾಗೋಷ್ಟಿಯಲ್ಲಿ ಎಪಿಎಂಸಿ ಕಾರ್ಯದರ್ಶಿ ರಾಮಚಂದ್ರ ರೆಡ್ಡಿ,ಉಪಾಧ್ಯಕ್ಷರಾದ ಪ್ರಶಾಂತ್ ಗಟ್ಟಿ ಹಾಗೂ ಇತರೆ ಸದಸ್ಯರು ಹಾಜರಿದ್ದರು.
 

Saturday, December 29, 2012

ಜೈವಿಕ ಇಂಧನ ಅಭಿವೃದ್ಧಿಗೆ ಕಾರ್ಯಯೋಜನೆ ರೂಪಿಸಿ: ವೈ ಬಿ ರಾಮಕೃಷ್ಣ

ಮಂಗಳೂರು,ಡಿಸೆಂಬರ್.29:- ಜಿಲ್ಲೆಯಲ್ಲಿ ಜೈವಿಕ ಇಂಧನ ಅಭಿವೃದ್ಧಿಗೆ ವಿಫುಲ ಅವಕಾಶವಿದ್ದು, ಸಾಮಾಜಿಕ ಅರಣ್ಯ, ಅರಣ್ಯ ಇಲಾಖೆ, ಕೃಷಿ, ತೋಟಗಾರಿಕಾ ಇಲಾಖೆಗಳ ಅಧಿಕಾರಿಗಳ ಕೋರ್ ಸಮಿತಿ ರಚಿಸಿ ಕ್ರಿಯಾಯೋಜನೆ ರೂಪಿಸಿ ಎಂದು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕರಾದ  ವೈ ಬಿ ರಾಮಕೃಷ್ಣ  ಅವರು ಹೇಳಿದರು.
      ಇಂದು ಜಿಲ್ಲಾ ಪಂಚಾ ಯತ್ ನ ಮಿನಿ ಹಾಲ್ ನಲ್ಲಿ ಆಯೋ ಜಿಸ ಲಾಗಿದ್ದ ಜೈವಿಕ ಇಂಧನ ಕಾರ್ಯ ಕ್ರಮದ ಪ್ರಗತಿ ಪರಿ ಶೀಲನೆ ಸಭೆ ಯನ್ನು ಉದ್ದೇ ಶಿಸಿ ಮಾತ ನಾಡು ತ್ತಿದ್ದ ಅವರು, ಕೃಷಿಕ ರಲ್ಲಿ ಜೈವಿಕ ಇಂಧನದ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಸುರಹೊನ್ನೆ, ಸರ್ವೇ ಮರ ಬೆಳೆಯುವುದರಿಂದ ಮುಂದಿನ ದಿನಗಳಲ್ಲಿ ರೈತರಿಗೆ ಹಾಗೂ ಕಡಲಕೊರತೆ ತಡೆಗೆ ಆಗುವ ಅನುಕೂಲಗಳ ಬಗ್ಗೆ ಮಾಹಿತಿ ನೀಡಿದರಲ್ಲದೆ, ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಪಿಡಿಒಗಳಿಂದ ಜಿಲ್ಲಾ ಮಟ್ಟದ ಅಧಿಕಾರಿಗಳವರೆಗೆ ಈ ಸಂಬಂಧ ಮಾಹಿತಿ ಕಾರ್ಯಾಗಾರ ಏರ್ಪಡಿಸಿ ಎಂಬ ಸಲಹೆಯನ್ನೂ ನೀಡಿದರು.
ಮುಂದಿನ ವರ್ಷದ ಕ್ರಿಯಾ ಯೋಜನೆಯಲ್ಲಿ ಜೈವಿಕ ಇಂಧನ ಅಭಿವೃದ್ಧಿ ಕಡ್ಡಾಯ ಕಾರ್ಯಕ್ರಮವಾಗಲಿದ್ದು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಾರ್ಯಯೋಜನೆ ರೂಪಿಸುವುದರಿಂದ ಮುಂದಿನ ದಿನಗಳಲ್ಲಿ ಅನುಕೂಲವಾಗಲಿದೆ ಎಂದರು.
ಜಿಲ್ಲೆಯಲ್ಲಿ ಈ ಸಂಬಂಧ ಆಗಿರುವ ಅಭಿವೃದ್ಧಿಯ ಸ್ಥೂಲ ಪರಿಚಯವನ್ನು ನೀಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಅವರು ಸಾಮಾಜಿಕ ಅರಣ್ಯ ಯೋಜನೆಯಡಿ, ಅರಣ್ಯ ಯೋಜನೆಯಡಿ, ಜಲಾನಯನ ಯೋಜನೆಯಡಿ ಈಗಾಗಲೇ 67,000 ಗಿಡಗಳನ್ನು ನೆಡಲಾಗಿದೆ. ಮುಂದಿನ ಸಾಲಿನಲ್ಲಿ ನೆಡಲು 80,000 ಸಸಿಗಳನ್ನು ಸಿದ್ಧಪಡಿಸಲಾಗಿದೆ ಎಂದರು.
ವ್ಯವ ಸ್ಥಾಪಕ ನಿರ್ದೇ ಶಕರಾದ  ಎ. ಕೆ ಮೊನ್ನಪ್ಪ ಅವರು ಮಾತ ನಾಡಿ, ಸುರ ಹೊನ್ನೆ ಮತ್ತು ಸರ್ವೇ ಮರ ಗಳು ಇಲ್ಲಿನ ಪ್ರದೇ ಶಕ್ಕೆ ಹೆಚ್ಚು ಸೂಕ್ತ ವಾಗಿವೆ. ರಬ್ಬರ್ ಬೀಜ, ಗೇರು ಹಣ್ಣಿ ನಿಂದಲೂ ಎಣ್ಣೆ ತೆಗೆ ಯಲು ಸಾಧ್ಯ ವಿದ್ದು ಇತರ ಜಿಲ್ಲೆ ಗಳ ರೈತ ರಿಂದ ಜೈವಿಕ ಇಂಧನ ದೊರೆ ಯುವ ಮರ ಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ, ಇಲ್ಲಿ ಅಧಿ ಕಾರಿ ಗಳು ಮತ್ತು ರೈತರು ಉತ್ತಮ ಸಂವ ಹನದಿಂದ ಮಾತ್ರ ಯೋಜನೆ ಯಶಸ್ವಿಯಾಗಲಿದೆ ಎಂದರು. ನರೇಗಾದಲ್ಲೂ ಈ ಸಂಬಂಧ ಯೋಜನೆ ರೂಪಿಸಿ ಎಂದು ಸಲಹೆ ಮಾಡಿದರು. ಪ್ರತೀ ಜಿಲ್ಲೆಯಲ್ಲೂ ಈ ಸಂಬಂಧ ಒಂದು ಕಾರ್ಯಯೋಜನೆ ಅಗತ್ಯವಿದೆ ಎಂದರು. ರಾಜ್ಯ ಜೈವಿಕ ಅಭಿವೃದ್ಧಿ ಮಂಡಳಿ ಸದಸ್ಯರಾದ  ಅತ್ತಿಹಳ್ಳಿ ದೇವರಾಜ್, ಯೋಜನಾ ನಿರ್ದೇಶಕರಾದ ಶ್ರೀಮತಿ ಸೀತಮ್ಮ ಅವರು ಉಪಸ್ಥಿತರಿದ್ದರು. 
 

'ಅಪೌಷ್ಟಿಕತೆ ನಿವಾರಣೆಗೆ ಎಲ್ಲರ ಸಹಕಾರ ಅಗತ್ಯ'

ಮಂಗಳೂರು, ಡಿಸೆಂಬರ್.29 :- ಪೌಷ್ಟಿಕ ಆಹಾರಕ್ಕಾಗಿ ಕ್ರಿಯಾ ಯೋಜನೆ ರೂಪಿಸಿದ ಪ್ರಥಮ ಗ್ರಾಮ ಪಂಚಾಯತ್ ಮುಚ್ಚೂರು. ಪ್ರಥಮವಾಗಿ ಅಪೌಷ್ಠಿಕ ಮಕ್ಕಳ ಸಮಸ್ಯೆ ಪರಿಹರಿಸಲು ಪೋಷಕರ ಸಭೆ ನಡೆಸಿ ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಪಂಚಾಯಿತಿ ಮುಚ್ಚೂರು. ಈ ಎಲ್ಲಾ ಕಾರ್ಯಕ್ರಮಗಳಿಂದಾಗಿ 23 ರಷ್ಟಿದ್ದ ಅಪೌಷ್ಠಿಕ ಮಕ್ಕಳ ಸಂಖ್ಯೆ ಇಂದು 11 ಕ್ಕೆ ಇಳಿದಿದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯರಾದ ಜನಾರ್ಧನ ಗೌಡ ಅವರು ಹೇಳಿದರು.
   ವಾರ್ತಾ ಇಲಾಖೆ ಇಂದು ಕೊಂಪ ದವಿನ ಹಿರಿಯ ಪ್ರಾಥ ಮಿಕ ಶಾಲೆ ಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾ ಯತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿ ವೃದ್ಧಿ ಯೋಜನೆ ಮಂಗ ಳೂರು ಗ್ರಾಮಾಂ ತರ ಹಾಗೂ ಪ್ರಾಥ ಮಿಕ ಆರೋಗ್ಯ ಕೇಂದ್ರ, ಕೊಂಪದವು ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 'ಪೌಷ್ಟಿಕ ಆಹಾರ ಸದೃಢ ಸಮಾಜಕ್ಕೆ ಆಧಾರ'  ಕುರಿತ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅರವರು ಮಾತನಾಡಿದರು. ನಮ್ಮ ಜಿಲ್ಲೆ ಶೈಕ್ಷಣಿಕವಾಗಿ ಮುಂದುವರಿದಿದ್ದು ಹಲವು ಜನಾಂದೋಲನಗಳಿಗೆ ಸಾಕ್ಷಿಯಾಗಿದೆ. ಆದರೂ ಕೆಲವು ಕಾರಣಗಳಿಂದಾಗಿ ನಮ್ಮ ಜಿಲ್ಲೆಯಲ್ಲೂ ಅಪೌಷ್ಠಿಕ ಮಕ್ಕಳು ಲಭ್ಯವಾಗಿದ್ದಾರೆ. ಈ ಸಮಸ್ಯೆ ಪರಿಹಾರಕ್ಕೆ ಎಲ್ಲರೂ ಒಟ್ಟಾಗಿ ದುಡಿಯುತ್ತಿದ್ದು, ನೈಸರ್ಗಿಕವಾಗಿ ದೊರೆಯುವ ಪೌಷ್ಟಿಕ ಆಹಾರಗಳಿಂದಲೂ ಅಪೌಷ್ಟಿಕತೆ ನಿವಾರಣೆ ಸಾಧ್ಯವಿದೆ ಎಂದರು. 
ಕಾರ್ಯಕ್ರಮದಲ್ಲಿ ಪಡೆಯುವ ಮಾಹಿತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದರೆ ಸಮಸ್ಯೆ ಪರಿಹಾರ ಸುಲಭ ಸಾಧ್ಯ ಎಂದರು. ಮುಚ್ಚೂರು ಗ್ರಾಮಪಂಚಾಯತ್ ಅಧ್ಯಕ್ಷರಾದ  ಪ್ರಕಾಶ್ ಹೆಗ್ಡೆ, ಅಧ್ಯಕ್ಷೀಯ ಭಾಷಣದಲ್ಲಿ ನೂಡಲ್ಸ್ ಸಂಸ್ಕೃತಿಯಿಂದ ದೂರವಾಗಿ ಹಸಿದಾಗ ಪೌಷ್ಟಿಕಾಂಶವುಳ್ಳ ಆಹಾರ ಸೇವಿಸಿದರೆ ಸಮಸ್ಯೆ ಶಾಶ್ವತವಾಗಿ ನಿವಾರಣೆಯಾಗಲಿದೆ ಎಂದರು.
ಸಂಪ ನ್ಮೂಲ ವ್ಯಕ್ತಿಗಳಾದ ಡಾ. ಚಿರಾಗ್ ಅವರು ಮಾತನಾಡಿ, ಗರ್ಭ ವತಿಯಾ ದಾಗಿ ನಿಂದ ಉತ್ತಮ ಆಹಾರ ಹಾಗೂ ತಾಯಿ ಕಾರ್ಡಿ ನಲ್ಲಿ ಕೊಟ್ಟಿರುವ ಮಾಹಿತಿ ಯನ್ನು ಅಳ ವಡಿ ಸಿದರೆ ಅಪೌ ಷ್ಟಿಕತೆ ಸಮಸ್ಯೆ ಉದ್ಭವ ವಾಗು ವುದಿಲ್ಲ ಎಂದು ಹೇಳಿ ದರು.
ಕೆಲವು ಅ ವೈಜ್ಞಾನಿಕ  ಸಂಪ್ರ ದಾಯಗಳನ್ನು ಪಾಲಿಸುವುದರಿಂದ ಹಾಗೂ ಅಮ್ಮಂದಿರು ಆಹಾರದ ಬಗ್ಗೆ ನಿರ್ಲಕ್ಷ್ಯ ವಹಿಸುವುದರಿಂದ ಅಪೌಷ್ಟಿಕತೆ ಸಮಸ್ಯೆ ಉದ್ಭವಿಸಿದೆ ಎಂದ ಅವರು, ಮಕ್ಕಳಿಗೆ ಆರು ತಿಂಗಳವರೆಗೆ ಎದೆಹಾಲು ಅತ್ಯುತ್ತಮ. ಬಳಿಕ ಎರಡು ವರ್ಷದವರೆಗೆ ತರಕಾರಿ, ಹಣ್ಣು, ಹಂಪಲುಗಳನ್ನು ನೀಡಬಹುದು ಎಂದ ಅವರು, ಅಂಗನವಾಡಿಗಳಲ್ಲಿ ಬೆಳವಣಿಗೆ ನಕ್ಷೆಯನ್ನು ಪಡೆದು ಮಗುವಿನ ಬೆಳವಣಿಗೆಯ ಬಗ್ಗೆ ಸಮಗ್ರ ಮಾಹಿತಿ ಪಡೆಯಿರಿ. ಇಂದು ಸ್ತ್ರೀ ಶಕ್ತಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಸಕ್ರಿಯವಾಗಿದ್ದು ಇವರೆಲ್ಲರ ಸಹಕಾರದಿಂದ ಮಾಹಿತಿ ಕೊರತೆ ಇಲ್ಲ. ಆದರೆ ತಿಳಿದುದನ್ನು ಅನುಷ್ಠಾನಕ್ಕೆ ತರುವ  ಒಳ್ಳೆಯ ಮನಸ್ಸು ಬೇಕಿದೆ ಎಂದರು. ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಇಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಮಸ್ಯೆ ನಿವಾರಿಸಿಕೊಂಡು ಜಯದತ್ತ ಹೆಜ್ಜೆ ಇರಿಸುತ್ತಿದ್ದೇವೆ ಎಂದರು.
ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಡಾ ರತ್ನಾಕರ ಅವರು, ತಾಲೂಕಿನಲ್ಲಿ 138 ಅಪೌಷ್ಟಿಕ ಮಕ್ಕಳನ್ನು ಪತ್ತೆ ಹಚ್ಚಲಾಗಿದ್ದು, ನಿರಂತರ ಅರಿವು ಮೂಡಿಸುವ ಹಾಗೂ ಪೌಷ್ಟಿಕ ಆಹಾರ ವಿತರಿಸುವ ಕ್ರಮಗಳಿಂದ ಸಮಸ್ಯೆ ಪರಿಹಾರವಾಗುತ್ತಿದ್ದು, ಸಮಸ್ಯೆ ನಿವಾರಣೆ ಸಾಮಾಜಿಕ ಹೊಣೆ ಎಂದರು. ವಾಜಪೇಯಿ ಆರೋಗ್ಯ ಶ್ರೀ ಯೋಜನೆಯ ಬಗ್ಗೆಯೂ ಮಾಹಿತಿ ನೀಡಿದರು. ಐಸಿಡಿಎಸ್ ನಿರೂಪಣಾಧಿಕಾರಿ ಸುಂದರ ಪೂಜಾರಿ ಮಾತನಾಡಿದರು. ಮುಚ್ಚೂರು ಗ್ರಾಮಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಕುಸುಮ, ಗ್ರಾಮ ಪಂಚಾಯತ್  ಸದಸ್ಯರಾದ ಪ್ರಕಾಶ್, ವೀರಪ್ಪ ಗೌಡ, ಶಿಶು ಅಭಿವೃದ್ಧಿ ಅಧಿಕಾರಿ ಶ್ಯಾಮಲ ಉಪಸ್ಥಿತರಿದ್ದರು. ವಾರ್ತಾಧಿಕಾರಿ ಶ್ರೀಮತಿ ರೋಹಿಣಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಶು ಅಭಿವೃದ್ಧಿ ಮೇಲ್ವಿಚಾರಕಿ ಮಾಲಿನಿ ಅವರು ನಿರೂಪಿಸಿದರು.
 

ವಿದೇಶಿ ವಿನಿಮಯ ಗಳಿಸಲು ಜೈವಿಕ ಇಂಧನ ಸಸಿ ಬೆಳೆಸಿ: ಸಿ.ಟಿ.ರವಿ

ಮಂಗಳೂರು, ಡಿಸೆಂಬರ್. 29: ಸಾಂಪ್ರದಾಯಿಕ ಇಂಧನ ಮೂಲಗಳಾದ ಪಟ್ರೋಲ್, ಡೀಸೆಲ್, ಮುಂತಾದ ಇಂಧನಗಳ ಆಮದಿಗಾಗಿ ನಮ್ಮ ದೇಶ ಪ್ರತಿ ವರ್ಷ ರೂ.5ಲಕ್ಷ ಕೋಟಿಗೂ  ಅಧಿಕ ವಿದೇಶಿ ವಿನಿಮಯವನ್ನು ವೆಚ್ಚ ಮಾಡುತ್ತಿದೆ, ಈ ಅಮೂಲ್ಯವಾದ ವಿದೇಶಿ ವಿನಿಮಯವನ್ನು ಉಳಿಸಲು ನಮ್ಮ ರೈತರು ತಮ್ಮ ಹೊಲ, ಗದ್ದೆ,ತೋಟಗಳ ಬದುಗಳಲ್ಲಿ ಹೊಂಗೆ, ಸುರಹೊನ್ನೆ, ಜತ್ರೋಪ, ಬೇವು ಮುಂತಾದ ಗಿಡಗಳನ್ನು ಬೆಳಸಬೇಕೆಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಸಚಿವರು ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಿ.ಟಿ.ರವಿ ಅವರು ರೈತರಿಗೆ ಕರೆ ನೀಡಿದ್ದಾರೆ.
       ಅವರು ಇಂದು ಸುರತ್ಕಲ್ ಎನ್.ಐ,ಟಿ.ಕೆ. ಯಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ದಿ ಮಂಡಲಿ, ಬೆಂಗಳೂರು ಹಾಗೂ ಎನ್.ಐ.ಟಿ.ಕೆ. ಸಹಯೋಗದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಜೈವಿಕ ಇಂಧನ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
     ಒಂದು ಅಂದಾಜಿನ ಪ್ರಕಾರ ಒಂದು ಎಕರೆಯಲ್ಲಿ ಹೊಂಗೆ ಬೆಳೆಸಿದರೆ ಈಗಿನ ಮಾರುಕಟ್ಟೆ ದರದಲ್ಲಿ 3ವರ್ಷದ ನಂತರ 30,000/ರೂ ಸಂಪಾದನೆ ಆದರೆ ಅದೇ ಒಂದು ಎಕರೆ ಪ್ರದೇಶದ ಹೊಂಗೆ ಮರಗಳಿಂದ 15ವರ್ಷಗಳ ನಂತರ ರೂ.3ಲಕ್ಷಕ್ಕೂ ಅಧಿಕ ಲಾಭ ಗಳಿಸಬಹುದೆಂದರು. ದೇಶಕ್ಕೂ ಒಳಿತಾಗುವ ರೈತರ ಆರ್ಥಿಕ ಸಂಕಷ್ಟಗಳನ್ನೂ ದೂರ ಮಾಡಬಲ್ಲ ಜೈವಿಕ ಇಂಧನ ಮೂಲ ಸಸ್ಯಗಳನ್ನು ಬೆಳೆಸುವುದು ಅವಶ್ಯಕತೆಗಿಂತ ಅನಿವಾರ್ಯವಾಗಿದೆ ಎಂದು ತಿಳಿಸಿದರು.
     ಕರಾವಳಿ ಪ್ರದೇಶದಲ್ಲಿ ದೊರಕುವ ಬೂತಾಯ ಮಿನಿನಿಂದ ತೆಗೆದ 20ಸಾವಿರ ಟನ್ ಎಣ್ಣೆಯನ್ನು ಬೇರೆ ದೇಶಗಳಿಗೆ ರಫ್ತು ಮಾಡುವ ಬದಲು ಅದರಲ್ಲಿರುವ ಒಮೇಗಾ 3ಫ್ಯಾಟನ್ನು ಬೇರ್ಪಡಿಸಿ ಇಂಧನವನ್ನಾಗಿ ಬಳಕೆ ಮಾಡುವ ಕುರಿತು ಚಿಂತನೆಗಳು ನಡೆಯುತ್ತಿವೆ ಎಂದು ಅವರೆಂದರು.
        ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ದಿ ಮಂಡಳಿಯ ಕಾರ್ಯಕಾರಿ ಅಧ್ಯಕ್ಷರಾದ ವೈ.ಬಿ.ರಾಮಕೃಷ್ಣ ಅವರು ಮಾತನಾಡಿ ಸಂಪ್ರದಾಯ ಇಂಧನಗಳಿಗೆ ಪಯರ್ಾಯವಾಗಿ ಅಸಂಪ್ರದಾಯ ಇಂಧನಗಳನ್ನು ಉತ್ಪಾದಿಸಿ ಬಳಕೆ ಮಾಡುವ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ದಿಸೆಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಜೈವಿಕ ಇಂಧನ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರಗಳನ್ನು ತೆರೆಯಲಾಗಿದೆ, ಪ್ರತಿ ಗ್ರಾಮದಲ್ಲೂ ಇಂತಹ ಕೇಂದ್ರಗಳನ್ನು ತೆರೆಯುವ ಆಲೋಚನೆ ಇದೆ ಎಂದು ತಿಳಿಸಿ ಜೈವಿಕ ಇಂಧನ ಕಾರ್ಯಕ್ರಮಗಳಿಗಾಗಿ ರಾಜ್ಯದಲ್ಲಿ 235ಕೋಟಿಗೂ ಹೆಚ್ಚು ಹಣ ವೆಚ್ಚ ಮಾಡಲಾಗುತ್ತಿದೆ  ಕೆ.ಎಸ್.ಆರ್.ಟಿ.ಸಿ. ಬಸ್ಸುಗಳಲ್ಲಿ ಹೊಂಗೆ ಬೀಜಗಳಿಂದ ತಯಾರಿಸಲಾದ ಜೈವಿಕ ಡಿಸೆಲ್ನ್ನು ಬಳಸಲಾಗುತ್ತಿದ್ದು, ದೊಡ್ಡಬಳ್ಳಾಪುರದ ಜೈವಿಕ ಇಂಧನ  ಘಟಕದಲ್ಲಿ ಉತ್ಪಾದನೆಯಾಗುತ್ತಿರುವ 30,000 ಲೀಟರ್ ಬಯೋ ಡೀಸೆಲ್ನ್ನು ಅಲ್ಲಿಯ ಕೆ.ಎಸ್.ಆರ್.ಟಿ.ಸಿ. ಬಸ್ಸುಗಳಲ್ಲಿ ಶೇ.100ರಷ್ಠು ಬಳಸಲಾಗುತ್ತಿದೆ ಎಂದರು.
ಕರಾವಳಿ ಜಿಲ್ಲೆಗಳಲ್ಲಿ ದೊರಕುವ ಗೇರು ಹಣ್ಣಿನಿಂದ ಇಂಧನ ಉತ್ಪಾದಿಸುವ ಬಗ್ಗೆ ಯೋಜನೆ ತಯಾರಿಯಲ್ಲಿದೆ ಎಂದರು.
     ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಉತ್ತರ ಕ್ಷೇತ್ರ ಶಾಸಕರಾದ ಕೃಷ್ಣ ಜೆ. ಪಾಲೆಮಾರ್ ಅವರು ವಹಿಸಿದ್ದರು. ಕನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ದಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕರಾದ ಎ.ಕೆ.ಮೊನ್ನಪ್ಪ, ಸದಸ್ಯರಾದ ಅತ್ತಿಹಳ್ಳಿ ದೇವರಾಜ್, ಮುಂತಾದವರು ಭಾಗವಹಿಸಿದ್ದರು.
     ಜೈವಿಕ ಇಂಧನ ಸಸಿಗಳನ್ನು ನೆಟ್ಟು ,ಮಾನ್ಯ ಸಚಿವರು ಹಾಗೂ ಇತರೆ ಗಣ್ಯರು ಈ ಸಂದರ್ಭದಲ್ಲಿ ವಾಹನಗಳಿಗೆ ಜೈವಿಕ ಇಂಧನವನ್ನು  ತುಂಬಿದರು.


  

ರಾಜ್ಯದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮಹಿಳೆಯರ ಸುರಕ್ಷತೆಗೆ ಸಮಿತಿ ರಚನೆ: ಸಿ.ಟಿ.ರವಿ

ಮಂಗಳೂರು, ಡಿಸೆಂಬರ್. 29: ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರ ಹಾಗೂ ಅಲ್ಲಿ ಕೆಲಸ ಮಾಡುವ ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಅಲ್ಲಿಯ ಪ್ರಾಂಶುಪಾಲರು ಹಾಗೂ ಮಹಿಳಾ ಸಿಬ್ಬಂದಿ ಸೇರಿದಂತೆ ಸಮಿತಿ ರಚಿಸಲಾಗುವುದು, ಈ ಸಮಿತಿಯು ವಿದ್ಯಾರ್ಥಿನಿಯರ ಹಾಗೂ ಅಲ್ಲಿ ಕಾರ್ಯ ನಿರ್ವಹಿಸುವ ಮಹಿಳೆಯರ ಕುಂದು ಕೊರತೆಗಳನ್ನು ಪ್ರತಿ ವಾರಕ್ಕೊಮ್ಮೆ ವಿಚಾರಿಸಬೇಕು ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವರು ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಟಿ.ರವಿ ಅವರು ತಿಳಿಸಿದ್ದಾರೆ.
     ಅವರು ಇಂದು ಸರ್ಕಿಟ್  ಹೌಸ್ ನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು. ಈ ಸಮಿತಿಗೆ ದೂರು ನೀಡುವವರ ಬಗ್ಗೆ ಗೌಪ್ಯತೆಯನ್ನು ಕಾಪಾಡುವುದು ಹಾಗೂ ಅವರಿಗೆ ರಕ್ಷಣೆ ಒದಗಿಸುವುದು ಸೇರಿದಂತೆ ಗಂಭೀರ ಪ್ರಕರಣಗಳಲ್ಲಿ ಅವಶ್ಯಕತೆ ಕಂಡುಬಂದಲ್ಲಿ ಪೋಲೀಸರಿಗೂ ಮಾಹಿತಿ ನೀಡಲಾಗುವುದೆಂದರು. ಇದಲ್ಲದೆ ಅವರ ಸಮಸ್ಯೆಗಳ ವಿಚಾರ ವಿನಿಮಯಕ್ಕೆ ಆಪ್ತಸಮಾಲೋಚನೆ ನಡೆಸಲಾಗುವುದೆಂದರು.ಈ ಕುರಿತಂತೆ ಚರ್ಚಿಸಲು ಈ ತಿಂಗಳ 31ರಂದು ಅಥವಾ ಜನವರಿ 5ರಂದು ರಾಜ್ಯದ ಎಲ್ಲಾ ಕುಲಪತಿಗಳ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಸಭೆ ಕರೆಯಲಾಗುವುದೆಂದರು.
      ವಾರಕ್ಕೊಮ್ಮೆಯಾದರೂ ಶಾಲಾ/ಕಾಲೇಜುಗಳಲ್ಲಿ ನೈತಿಕ/ಮೌಲ್ಯಯುತ ಶಿಕ್ಷಣಕ್ಕೆ ಒತ್ತು ನೀಡಬೇಕೆಂದರು.
ಶಿಕ್ಷಣ ಸಂಸ್ಥೆಗಳಲ್ಲಿ ದೌರ್ಜನ್ಯಗಳು ನಡೆಯದಂತೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲಾಗುವುದೆಂದರು.
 

Friday, December 28, 2012

ಜೀವನಶಿಸ್ತು ವಿದ್ಯಾರ್ಥಿದೆಸೆಯಿಂದಲೇ ಆರಂಭ: ಜಿಲ್ಲಾಧಿಕಾರಿ

ಮಂಗಳೂರು, ಡಿಸೆಂಬರ್.28 :- ಜೀವನದಲ್ಲಿ ಶಿಸ್ತು ಆರಂಭವಾಗುವುದು ವಿದ್ಯಾರ್ಥಿ ದಿನಗಳಿಂದ. ವಿದ್ಯಾರ್ಥಿ ದೆಸೆಯಲ್ಲಿ ಕಲಿತದ್ದು ಜೀವನದುದ್ದಕ್ಕೂ ನಮ್ಮ ಜೊತೆ ಇರುತ್ತದೆ ಎಂದು ದ.ಕ.ಜಿಲ್ಲಾಧಿಕಾರಿ ಎನ್ ಪ್ರಕಾಶ್ ಅವರು ಹೇಳಿದರು.
ಇಂದು ಮುಲ್ಕಿಯ ಶ್ರೀ ನಾರಾಯಣಗುರು ಶಿಕ್ಷಣ ಸಂಸ್ಥೆ ವಠಾರದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಮೇಳ ಉದ್ಘಾಟಿಸಿ ಮಾತನಾಡುತ್ತಿದ್ದರು.
      ರೋವರ್ಸ್-ರೇಂಜರ್ಸ್ ಸಮಾಗಮ, ಸ್ಕೌಟ್ಸ್-ಗೈಡ್ಸ್ ಮೇಳ ಮತ್ತು ಕಬ್ಸ್ -ಬುಲ್ಬುಲ್ಸ್ ಉತ್ಸವ 2012-2013 ಕಾರ್ಯಕ್ರಮ ಇಲ್ಲಿ ನಡೆಯುತ್ತಿದ್ದು, ತಮ್ಮ ವಿದ್ಯಾರ್ಥಿ ಜೀವನ ಸ್ಮರಿಸಿದ ಅವರು, ಅಂದು ಕಲಿತದ್ದು ಶಾಶ್ವತ ಎಂದರು. ಶಿಸ್ತು, ಸೇವೆ ಮತ್ತು ಮೌಲ್ಯಗಳನ್ನು ಸ್ಕೌಟ್ಸ್ ಕಲಿಸುತ್ತದೆ. ಜೀವನವನ್ನು ಧೈರ್ಯವಾಗಿ ಎದುರಿಸುವುದನ್ನು ಕಲಿಸುತ್ತದೆ ಎಂದ ಅವರು, ಎಲ್ಲ ಮಕ್ಕಳು ತಮ್ಮ ವಿದ್ಯಾರ್ಥಿ ದಿನಗಳಲ್ಲಿ ಇಂತಹ ಚಟುವಟಿಕೆಗಳಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಶಾಸಕ  ಕೆ. ಅಭಯಚಂದ್ರ ಜೈನ್ ಅವರು, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವುದರಿಂದ ಜೀವನದಲ್ಲಿ ಎತ್ತರಕ್ಕೇರಲು ಸಾಧ್ಯ. ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳು ನಮ್ಮ ಜೀವನವನ್ನು ಅರಳಿಸುತ್ತದೆ. ಸ್ಕೌಟ್ಸ್ ಮತ್ತು ಗೈಡ್ಸ್ ನ ಉತ್ತಮ ವಿದ್ಯಾರ್ಥಿಯಾಗಿದ್ದ ಡಾ. ವಿ. ಎಸ್ ಆಚಾರ್ಯ ಅವರು ಅತ್ಯುತ್ತಮ  ರಾಜಕೀಯ ಪಟುವಾಗಿದ್ದರು; ಅವರ ಪತ್ನಿ ಇಂದೂ ಈ ಸ್ಕೌಟ್ಸ್ ಜೊತೆ ತಮ್ಮನ್ನು ಗುರುತಿಸಿಕೊಂಡಿದ್ದಾರೆ ಎಂದರು. ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದರಿಂದ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದರು.
ಮಂಗಳೂರು ಮಹಾನಗರಪಾಲಿಕೆ ಆಯುಕ್ತರಾದ ಡಾ. ಹರೀಶ್ ಕುಮಾರ್ ಅವರು, ಶಿಸ್ತು ಮತ್ತೆ ಸೇವೆ ಪದಗಳು ಇಂದು ತಮ್ಮ ನೈಜ ಮೌಲ್ಯವನ್ನು ಕಳೆದುಕೊಂಡಿದ್ದು, ವಿದ್ಯಾರ್ಥಿಗಳಿಂದ ಮಾತ್ರ ಇದರ ಮೌಲ್ಯವನ್ನು ಮತ್ತೆ ಎತ್ತಿ ಹಿಡಿಯಲು ಸಾಧ್ಯ. ಇಂತಹ ಅವಕಾಶಗಳನ್ನು ಬಳಸಿಕೊಂಡು ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದರಿಂದ ಉತ್ತಮ ಜೀವನ ನಮ್ಮದಾಗಲಿದೆ ಎಂದರು. ಶ್ರೀ ನಾರಾಯಣ ಗುರು ವಿದ್ಯಾಸಂಸ್ಥೆಯ ಸಂಚಾಲಕರಾದ  ಹರೀಶ್ಚಂದ್ರ ವಿ ಕೋಟ್ಯಾನ್ ಅತಿಥಿಗಳಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಸ್ಕೌಟ್ಸ್ ಮತ್ತು ಗೈಡ್ಸ ನ ಜಿಲ್ಲಾ ಮುಖ್ಯ ಆಯುಕ್ತರಾದ  ಎನ್ ಜಿ ಮೋಹನ್, ಜಿಲ್ಲಾ ಆಯುಕ್ತರಾದ ರಾಮಶೇಷ ಶೆಟ್ಟಿ, ವಾಸುದೇವ ಬೋಳೂರು, ಎಂ ಪ್ರಭಾಕರ್ ಭಟ್ ವೇದಿಕೆಯಲ್ಲಿದ್ದರು. ಸರ್ವೋತ್ತಮ್ ಅಂಚನ್ ವಂದಿಸಿದರು.

Wednesday, December 26, 2012

ವಿಟ್ಲ ಪಂಚಲಿಂಗೇಶ್ವರ ದೇವಾಲಯ: ಪೂರ್ವಭಾವಿ ಸಭೆ

ಮಂಗಳೂರು, ಡಿಸೆಂಬರ್.27:-ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಸಮರ್ಪಣೆ ಪುನ:ಪ್ರತಿಷ್ಠಾಷ್ಟಬಂಧ ಬ್ರಹ್ಮ ಕಲಶಾಭಿಷೇಕೋತ್ಸವ ಜನವರಿ 9ರಿಂದ 21ರವರೆಗೆ ನಡೆಯಲಿದ್ದು, ಈ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಸೇರುವ ಹಿನ್ನಲೆಯಲ್ಲಿ ಕಾರ್ಯಕ್ರಮವನ್ನು ಸುಗಮವಾಗಿ ನಿರ್ವಹಿಸಲು ಸಂಸದ ನಳಿನ್ ಕುಮಾರ್ ಕಟೀಲ್ ಅವರ ಅಧ್ಯಕ್ಷತೆಯಲ್ಲಿ ವಿಟ್ಲದ ಅನಂತ ಸದನದಲ್ಲಿ ಇಂದು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಯಿತು.
  ಜಿಲ್ಲೆಯ ಅತ್ಯಂತ ಪುರಾ ತನ ಸುಮಾರು 400 ವರ್ಷ ಗಳ ಐತಿಹ್ಯ ವುಳ್ಳ ದೇವಾ ಲಯದ ಜೀರ್ಣೋ ದ್ಧಾರ ಮತ್ತು 150 ವರ್ಷ ಗಳ ನಂತರ ಬ್ರಹ್ಮ ಕಲಶ ನಡೆ ಯುತ್ತಿ ರುವ ವೇಳೆ ಯಲ್ಲಿ ಜನವರಿ 9ರಂದು ರಾಜ್ಯದ ಮುಖ್ಯ ಮಂತ್ರಿ ಗಳು ಬರುವ ನಿರೀಕ್ಷೆ ಯಿದ್ದು, ಸಮಾ ರಂಭ ಸುಲಲಿ ತವಾಗಿ ನಡೆ ಯಲು ಎಲ್ಲಾ ಇಲಾಖಾ ಧಿಕಾರಿಗಳು ಸಂಪೂರ್ಣ ಸಹಕಾರ ನೀಡಬೇಕೆಂದು ಸಂಸದರು ಹೇಳಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಎನ್. ಪ್ರಕಾಶ್ ಅವರು, ಅಧಿಕಾರಿಗಳು ಈ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಮುಖ್ಯವಾಗಿ ಲೋಕೋಪಯೋಗಿ, ಮೆಸ್ಕಾಂ ಮತ್ತು ಪೊಲೀಸ್ ವ್ಯವಸ್ಥೆಯ ಹೊಣೆ ಹಿರಿದಾಗಿದ್ದು ಇಲಾಖಾಧಿಕಾರಿಗಳು ಸ್ವಯಂಪ್ರೇರಿತರಾಗಿ ಕಾರ್ಯಕ್ರಮದಲ್ಲಿ ತೊಡಗಿಕೊಂಡು ಕಾರ್ಯಕ್ರಮದ ಯಶಸ್ವಿಗೆ ಸ್ಪಂದಿಸಬೇಕೆಂದರು. ಮುಖ್ಯವಾಗಿ ಜನವರಿ 9, 18 ,21ರಂದು ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದು, ಸಂಚಾರ ವ್ಯವಸ್ಥೆ ಮತ್ತು ಸುರಕ್ಷತೆಯ ಬಗ್ಗೆ ಪೊಲೀಸ್ ಇಲಾಖೆ ಹೆಚ್ಚಿನ ಕಾಳಜಿ ವಹಿಸಬೇಕೆಂದರು.
ದೇವಳದ ಆಡಳಿತಮಂಡಳಿಯೊಂದಿಗೆ ಸಮನ್ವಯ ಸಾಧಿಸಿ, ಪರಸ್ಪರ ಸಹಕಾರದಿಂದ ಸಂಕ್ಷಿಪ್ತ ಅವಧಿಯಲ್ಲಿ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕೆಂದ ಅವರು, ಸಭೆಗೆ ಬಾರದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಲೋಕೋಪಯೋಗಿ ಇಲಾಖೆ ಎಕ್ಸಿಕ್ಯೂಟಿವ್ ಇಂಜಿನಿಯರ್  ಗೋಪಾಲ್ ನಾಯಕ್ ಅವರು ಮಾತನಾಡಿ, ಡಿಸೆಂಬರ್ 30ರೊಳಗೆ ರಸ್ತೆ ಕಾಮಗಾರಿ ಸಂಪೂರ್ಣಗೊಳಿಸುವುದಾಗಿ ನುಡಿದರು. ರಸ್ತೆ ಬದಿಯಲ್ಲಿರುವ ಮೆಸ್ಕಾಂನ ಕಂಬಗಳ ಸ್ಥಳಾಂತರಿಸುವ ಕುರಿತು ನಾಳೆ ಮೆಸ್ಕಾಂ ಮತ್ತು ಲೋಕೋಪಯೋಗಿ ಇಲಾಖಾಧಿಕಾರಿಗಳ ಸಭೆಯನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆಯುವುದಾಗಿ ಜಿಲ್ಲಾಧಿಕಾರಿಗಳು ಹೇಳಿದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ  ಎಲ್ ಎನ್ ಕೂಡೂರು ಅವರು ಜಿಲ್ಲಾಡಳಿತದಿಂದಾಗ ಬೇಕಾದ ನೆರವುಗಳನ್ನು ಪಟ್ಟಿ ಮಾಡಿದರು. ಸ್ಥಳದಲ್ಲಿ ನೀರಿನ ಕೊರತೆ ಇಲ್ಲ; ಆದರೆ ಸುಮಾರು 20,000 ಲೀಟರ್ ನೀರಿನ ಟ್ಯಾಂಕ್ ನೀರು ಸಂಗ್ರಹಿಸಲು ಮತ್ತು ನೀರು ಕೊಂಡೊಯ್ಯಲು ಟ್ಯಾಂಕರುಗಳ ಅಗತ್ಯವಿದೆ ಎಂದರು.
        ಸಂಸ ದರು ಈ ಸಮಸ್ಯೆ ಗಳನ್ನು ಪರಿ ಹರಿ ಸುವು ದಾಗಿ ಭರ ವಸೆ ನೀಡಿದ ಬಳಿಕ, ಲೋಕೋ ಪಯೋಗಿ ಇಲಾಖೆ ಯಿಂದ ವಾಹನ ಸಂಚ ರಿಸಲು ಯೋಗ್ಯ ರಸ್ತೆ, ವೇದಿಕೆ ನಿರ್ಮಾಣ, ಚಪ್ಪರ ಗಳನ್ನು ಪರಿ ಶೀಲಿಸ ಬೇಕೆಂ ದರು. ದೇವಾ ಲಯದ ಪುಷ್ಕರಿಣಿ ನವೀಕರಿಸಲು 18.50 ಲಕ್ಷ ರೂ., ಹಾಗೂ ಶೌಚಾಲಯ ನಿರ್ಮಾಣಕ್ಕೆ 4 ಲಕ್ಷ ರೂ.,ಬಿಡುಗಡೆ ಮಾಡಲು ಕ್ರಮಕೈಗೊಳ್ಳುವುದಾಗಿ ಹೇಳಿದರು. ಈ ದಿನಗಳಲ್ಲಿ ಯಾವುದೇ ಕಾರಣಕ್ಕೂ ಪವರ್ ಕಟ್ ಇರಬಾರದೆಂದ ಸಂಸದರು, ಮೆಸ್ಕಾಂ ಮತ್ತು ಅಗ್ನಿಶಾಮಕ ಪಡೆಯವರು ವ್ಯವಸ್ಥೆಗಳನ್ನು ಅಧಿಕಾರಿಗಳು ಖುದ್ದಾಗಿ ನಿಂತು ಪರಿಶೀಲಿಸಿ ಸಮ್ಮತಿ ಪತ್ರನೀಡಬೇಕೆಂದರು. ಈ ದಿನಗಳಲ್ಲಿ ಸಂತೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಆರೋಗ್ಯ ಇಲಾಖೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಸದರು ಸಲಹೆ ಹಾಗೂ ಸೂಚನೆಗಳನ್ನು ಜಿಲ್ಲಾ ಆರೋಗ್ಯಾಧಿಕಾರಿ ( ಪ್ರಭಾರ) ಡಾ. ರಾಮಕೃಷ್ಣ ರಾವ್ ಅವರಿಗೆ ನೀಡಿದರು. ಅಗತ್ಯ ಬಿದ್ದಲ್ಲಿ ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ನೆರವನ್ನು ಪಡೆಯಲೂ ಸಂಸದರು ಸೂಚಿಸಿದರು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದ್ದು, ತ್ಯಾಜ್ಯ ವಿಲೇಗೂ ಕ್ರಮಕೈಗೊಳ್ಳಲು ಸಹಕಾರ ಹಾಗೂ ಸಲಹೆಗಳನ್ನು ನೀಡಿದರು. ನೀರು ವಿತರಣೆ, ಊಟದ ವ್ಯವಸ್ಥೆಯ ಬಗ್ಗೆ ಈ ಸಂದರ್ಭದಲ್ಲಿ ಯಾವುದೇ ಗೊಂದಲಗಳಾದಂತೆ ನೆರವಿಗಾಗಿ ಉತ್ತಮ ಸ್ವಯಂಸೇವಕರ ಪಡೆಯನ್ನು ದೇವಾಲಯದ ಆಡಳಿತ ಮಂಡಳಿ ಪಡೆದಿದ್ದು ಅವರನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ ಎಂದರು. ಕರಸೇವೆ ದೇವಾಲಯ ಪುನರ್ ನಿಮರ್ಾಣ ಸಂದರ್ಭದಲ್ಲೂ ಪರಿಣಾಮಕಾರಿಯಾಗಿ ನಡೆದಿದೆ. ಎಲ್ಲರೂ ತಮ್ಮ ಮನೆಯ ಕೆಲಸದಂತೆ ದೇವಾಲಯದ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದ ಸಂಸದರು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೆ ಕಾರ್ಯತತ್ಪರಾಗಬೇಕೆಂದರು. ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರಲ್ಲದೆ ಕಾರ್ಯಕ್ರಮದ ಬೆಳವಣಿಗೆ ಬಗ್ಗೆ ಜನವರಿ ಒಂದರಂದು ಮತ್ತೆ ಆಗಮಿಸಿ ಪರಿಶೀಲನೆ ನಡೆಸುವುದಾಗಿಯೂ ನುಡಿದರು.
ಸಭೆಯಲ್ಲಿ ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ್ ಸ್ವಾಮೀಜಿ, ಪುತ್ತೂರಿನ ಶಾಸಕರಾದ ಶ್ರೀಮತಿ ಮಲ್ಲಿಕಾ ಪ್ರಸಾದ್, ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಕೆ ಟಿ ಶೈಲಜಾ ಭಟ್,  ಸಹಾಯಕ ಆಯುಕ್ತರಾದ ಡಾ ವೆಂಕಟೇಶ್, ಪುತ್ತೂರು ಎ ಎಸ್ ಪಿ ಅನುಚೇತ್, ಆರ್ ಟಿ ಒ ಮಲ್ಲಿಕಾರ್ಜುನ್, ಬಂಟ್ವಾಳ ತಹಸೀಲ್ದಾರ್ ಆನಂದ ನಾಯಕ್,  ಕೆ ಎಸ್ ಆರ್ ಟಿ ಸಿ ಅಧಿಕಾರಿಗಳು, ಅಗ್ನಿಶಾಮಕ ದಳದ ಮುಖ್ಯಸ್ಥರಾದ ವರದರಾಜ್ ಅವರನ್ನೊಳಗೊಂಡಂತೆ ದೇವಾಲಯದ ಆಡಳಿತ ಮಂಡಳಿಯವರು, ಸ್ಥಳೀಯರು ಉಪಸ್ಥಿತರಿದ್ದರು. 
 

Friday, December 21, 2012

ಸಾಮುದಾಯಿಕ ಪ್ರಜ್ಞೆಗೆ ಕರಾವಳೀ ಉತ್ಸವ ಸಾಕ್ಷಿಯಾಗಲಿ:ಸಿ.ಟಿ.ರವಿ


ಮಂಗಳೂರು,ಡಿಸೆಂಬರ್.22 : ಜನವರಿ 27ರವರೆಗೆ ನಡೆಯಲಿರುವ ದಕ್ಷಿಣ ಕನ್ನಡ ಜಿಲ್ಲಾ ಕರಾವಳಿ ಉತ್ಸವಕ್ಕೆ ಜಿಲ್ಲಾ ಉಸ್ತುವಾರಿ ಮತ್ತು ರಾಜ್ಯದ ಉನ್ನತ ಶಿಕ್ಷಣ ಸಚಿವರಾದ  ಸಿ.ಟಿ.ರವಿಯವರು ಇಂದು ಮಂಗಳೂರಿನಲ್ಲಿ  ಚಾಲನೆ ನೀಡಿದರು.
    ನಂತರ ನಡೆದ ಸಮಾ ರಂಭದಲ್ಲಿ  ಮಾತ ನಾಡಿದ ಅವರು  ಕರಾ ವಳಿ ನಗರದ ದಕ್ಷಿಣ ಕನ್ನಡ ಸಾಂಸ್ಕೃ ತಿಕವಾಗಿ ಬಹಳ ಸಿರಿ ವಂತಿ ಕೆಯ ಜಿಲ್ಲೆ. ಇಲ್ಲಿನ ಭಾಷಾ ವೈ ವಿಧ್ಯತೆ ಅನು ಕರಣೀಯ. ಈ ಉತ್ಸವ ಜಿಲ್ಲೆಯ ಸಾಂ ಸ್ಕೃತಿಕ ವೈಭವವನ್ನು ಇನ್ನೂ ಎತ್ತರಕ್ಕೆ ಏರಿಸಲು ಸಹಕಾರಿಯಾಗಲಿ. ಆಧುನಿಕತೆಯ ಭರಾಟೆಯಲ್ಲಿ ಕೊಚ್ಚಿ ಹೋಗುತ್ತಿರುವ ಜಿಲ್ಲೆಯ ಜೀವನ-ಸಂಸ್ಕೃತಿಯನ್ನು ಮತ್ತಷ್ಟು ಗಟ್ಟಿಗೊಳಿಸುವಂತಾಗಲಿ ಎಂದರು.
ಸಮಾ ರಂಭದ ಅಧ್ಯ ಕ್ಷತೆ ವಹಿಸಿ ಮಾತ ನಾಡಿದ ವಿಧಾನ ಸಭಾ ಉಪ ಸಭಾ ಪತಿ ಎನ್.ಯೋಗೀಶ್ ಭಟ್ ಅವರು  ಜಿಲ್ಲೆಯ ಪ್ರವಾ ಸೋದ್ಯಮ ಅಭಿ ವೃದ್ಧಿಗೆ ಪೂರಕ ವಾಗ ಬಲ್ಲ ಸೌಲಭ್ಯ ಗಳು ಕೈ ಗೂಡು ತ್ತಿವೆ. ಸುಲ್ತಾನ್ ಬತ್ತೇರಿ ಯಲ್ಲಿ ಬಹು ನಿರೀ ಕ್ಷಿತ ರೋಪ್ ವೇ ಕಾಮ ಗಾರಿ ಶೀಘ್ರ ಆರಂಭಗೊಳ್ಳಲಿದೆ. ರಂಗಮಂದಿರದ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ರೂ.150-200 ಕೋಟಿ ಹೂಡಿಕೆಯ ಗಾಲ್ಫ್ ಕೋರ್ಸ್ ಶೀಘ್ರದಲ್ಲೇ ನಗರಕ್ಕೆ  ಬರಲಿದೆ ಎಂದರು.
ಶಾಸಕರಾದ  ಕೃಷ್ಣ ಜೆ.ಪಾಲೆಮಾರ್, ವಿಧಾನ ಪರಿಷತ್ ಸದಸ್ಯ ಕೆ.ಮೋನಪ್ಪ ಭಂಡಾರಿ, ಮೇಯರ್ ಗುಲ್ಜಾರ್ ಭಾನು, ಉಪ ಮೇಯರ್ ಅಮಿತಕಲಾ, ಮಾಡಾ ಅಧ್ಯಕ್ಷ ಎಸ್.ರಮೇಶ್ ,ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್,  ಬ್ಯಾರಿ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್  ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.ಮಂಗಳೂರು ಮಹಾ ನಗರ ಪಾಲಿಕೆ ಆಯುಕ್ತ ಡಾ.ಹರೀಶ್ ಕುಮಾರ್, ಪಶ್ಚಿಮ ವಲಯ ಪೊಲೀಸ್ ಮಹಾ ನಿರೀಕ್ಷಕ ಪ್ರತಾಪ ರೆಡ್ಡಿ,ಸಹಾಯಕ ಕಮಿಷನರ್ ಡಾ.ವೆಂಕಟೇಶ್ ಸಹಿತ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಎನ್,ಪ್ರಕಾಶ್ ಸ್ವಾಗತಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ವಂದಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಪ್ರಸ್ತಾವನೆಗೈದರು.  ಉಪಸ್ಥಿತರಿದ್ದರು.ನಗರದ ಲೇಡಿ ಹಿಲ್  ಕರಾವಳಿ ಉತ್ಸವ ಮೈದಾನ ದಲ್ಲಿ ಸಂಜೆ ಜರು ಗಿದ ವರ್ಣ ರಂಜಿತ ಸಮಾ ರಂಭ ದಲ್ಲಿ  ತುಳು ನಾಡಿನ ಕೊಂಬು, ಕಲ್ಲಡ್ಕದ ಗೊಂಬೆ ಗಳ ನರ್ತನ ಮತ್ತು ಆಕಾಶ ದೆತ್ತ ರಕ್ಕೆ ಚಿಮ್ಮಿದ ಸುಡು ಮದ್ದು ಗಳು ವಿಶೇಷ ಮೆರು ಗನ್ನು ನೀಡಿ ದವು.ಜನವರಿ 27, 2013 ರವರೆಗೆ ಕರಾವಳಿ ಉತ್ಸವದ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
     

Thursday, December 20, 2012

' ಜನರಲ್ಲಿ ಮಾಹಿತಿ ಹಕ್ಕಿನ ಜಾಗೃತಿ ಅಗತ್ಯ'

ಮಂಗಳೂರು,ಡಿಸೆಂಬರ್.20: ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ಭಾರತ ಸರ್ಕಾರದ ವಾರ್ತಾ ಶಾಖೆ ಹಮ್ಮಿಕೊಂಡಿರುವ 3 ದಿನಗಳ ಮಾಹಿತಿ ಆಂದೋಲನದ ಮೂರನೇ ದಿನವಾದ ಇಂದು ಸರ್ವ ಶಿಕ್ಷಣ ಅಭಿಯಾನ, ಮಧ್ಯಾಹ್ನ ಬಿಸಿಯೂಟ ಯೋಜನೆ, ಸ್ವಸಹಾಯ ಸಂಘಗಳು, ಮಾಹಿತಿ ಹಕ್ಕು ಖಾಯ್ದೆ, ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗಳ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು.

 ಜಿ.ಪಂಉಪ ಕಾರ್ಯದರ್ಶೀ ಶಿವರಾಮೇಗೌಡ ಮಾಹಿತಿ ಹಕ್ಕಿನ ಬಗ್ಗೆ ವಿಶೇಷ ಉಪನ್ಯಾಸ ನೀಡುತ್ತಿರುವುದು
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶಿವರಾಮೇಗೌಡ ಮಾಹಿತಿ ಹಕ್ಕಿನ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಅಕ್ಷರ ದಾಸೋಹದ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ, ಅಕ್ಷರ ದಾಸೋಹದ ಜಿಲ್ಲಾ ಶಿಕ್ಷಣಾಧಿಕಾರಿ  ಶ್ರೀಮತಿ ಮಂಜುಳಾರವರು ಈ ಕಾರ್ಯಕ್ರಮ ಪ್ರಮುಖ ಉದ್ದೇಶಗಳು ಅಕ್ಷರ ದಾಸೋಹದಲ್ಲಿ ಆಹಾರ ಸೇವನೆಯಿಂದ ಮಗು ಬಲಿಷ್ಠವಾಗಿ ಬೆಳೆಯಬೇಕು ಮುಂದೆ ಆ ಮಗು ನಮ್ಮ ಬಲಿಷ್ಠ ಭಾರತ ನಿರ್ಮಾಣ  ಸಹಕಾರಿಯಾಗಬೇಕೆಂಬುದು ಇದರ ಮುಖ್ಯ ಉದ್ದೇಶ ಹಾಗು ನಮ್ಮ ಜಿಲ್ಲೆಯಲ್ಲಿ 806 ಅಡಿಗೆ ಕೋಣೆಗಳಿವೆ ಹಾಗೂ ಪ್ರತಿ ದಿನ ಪ್ರತಿ ಮಕ್ಕಳಿಗೆ 1 ರಿಂದ 5ನೇ ತರಗತಿಯವರೆಗೆ 3 ರೂ 11ಪೈಸೆ ಹಾಗು 6 ರಿಂದ 7 ತರಗತಿ ಮಕ್ಕಳಿಗೆ 4 ರೂ 68 ಪೈಸೆ ಮತ್ತು 8 ರಿಂದ 10ನೇ ತರಗತಿ ಮಕ್ಕಳಿಗೆ 6 ರೂ. 68 ಪೈಸೆ ಪ್ರತಿ ದಿನ ಮಕ್ಕಳಿಗೆ ವೆಚ್ಚವಾಗುತ್ತಿದೆ ಎಂದು ತಿಳಿಸಿದರು.
ಮಂಗಳೂರಿನ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ, ಯೋಜನಾ ನಿರ್ದೇಶಕರಾದ ನಾಗೇಶ್ ಯೋಜನೆ ಬಗ್ಗೆ ವಿವರಿಸಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ, ಜಿಲ್ಲಾ ನಿರೂಪಣಾ ಅಧಿಕಾರಿ, ಸುಂದರ ಪೂಜಾರಿ, ಐ.ಸಿ.ಡಿ.ಎಸ್. ಹಾಗೂ ಸ್ವಸಹಾಯ ಸಂಘಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಭಾರತ ಸರ್ಕಾರ ವಾರ್ತಾ ಶಾಖೆಯ, ಹೆಚ್ಚುವರಿ ಮಹಾ ನಿರ್ದೇಶಕರಾದ ಎಸ್. ವೆಂಕಟೇಶ್ವರ್, ಕ್ಷೇತ್ರ ಪ್ರಚಾರಾಧಿಕಾರಿ ಜಿ. ತುಕಾರಾಂ ಗೌಡ, ಕ್ಷೇತ್ರ ಪ್ರದರ್ಶನಾಧಿಕಾರಿ ಪಿ.ಜಿ. ಪಾಟೀಲ್ ಇನ್ನಿತರರು ಉಪಸ್ಥಿತರಿದ್ದರು.

ಸರ್ವ ಶಿಕ್ಷಣ ಅಭಿಯಾನದಲ್ಲಿ ಕ್ರಾಂತಿಕಾರಿ ಬದಲಾವಣೆ

ಮಂಗಳೂರು,ಡಿಸೆಂಬರ್.20: ಸರ್ವ ಶಿಕ್ಷಣ ಅಭಿಯಾನ ದ.ಕ. ಜಿಲ್ಲೆಯಲ್ಲಿ ದೇಶಕ್ಕೆ ಹೋಳಿಸಿದರೆ ಎರಡು ಹೆಜ್ಜೆ ಮುಂದಿದೆ, ಸ್ವಚ್ಛತೆ ಹೆಣ್ಣು ಮಕ್ಕಳ ವಿದ್ಯಾಭ್ಯಾಸ, ಇತ್ಯಾದಿಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದು ಮಂಗಳೂರು ಜಿಲ್ಲ್ಲಾ ಸರ್ವ ಶಿಕ್ಷಣ ಅಭಿಯಾನದ, ಉಪಯೋಜನಾ ಅಧಿಕಾರಿ  ಶಿವಪ್ರಕಾಶ್ ಎಂದು ಹೇಳಿದರು.
 ಜಿಲ್ಲ್ಲಾ ಉಪಯೋಜನಾ ಅಧಿಕಾರಿ, ಶಿವಪ್ರಕಾಶ್ ಸರ್ವ ಶಿಕ್ಷಣ ಅಭಿಯಾನದ ಬಗ್ಗೆ ಮಾತನಾಡುತ್ತಿರುವುದು.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿಂದು  ಭಾರತ ಸರ್ಕಾರದ ವಾರ್ತಾ ಶಾಖೆ ಹಮ್ಮಿಕೊಂಡಿರುವ 3 ದಿನಗಳ ಮಾಹಿತಿ ಆಂದೋಲನದ ಮೂರನೇ ದಿನವಾದ ಇಂದು ಸರ್ವ ಶಿಕ್ಷಣ ಅಭಿಯಾನ, ಮಧ್ಯಾಹ್ನ ಬಿಸಿಯೂಟ ಯೋಜನೆ, ಕುರಿತು ಮಾತನಾಡುತ್ತಾ ಸರ್ವ ಶಿಕ್ಷಣ ಅಭಿಯಾನ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜಂಟಿ  ಯೋಜನೆಯಾಗಿದ್ದು ಇದರ ಮುಖ್ಯ ಉದ್ದೇಶ 6 ರಿಂದ 16 ವರುಷದ ಎಲ್ಲಾ ಮಕ್ಕಳು ಶಾಲೆಗೆ ಬರಬೇಕೆಂಬುದು ಮುಖ್ಯ ಗುರಿಯಾಗಿದೆ. ಈ ಯೋಜನೆಯು ಜಾರಿಗೆ ಬಂದ 11 ವರ್ಷದಲ್ಲಿ ಈ ಜಿಲ್ಲೆಯಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಿದೆ ಹಾಗು ಪ್ರತಿ ಶಾಲೆಯಲ್ಲಿ ಹೆಣ್ಣು ಹಾಗು ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚಾಲಯವನ್ನು ಈ ಯೋಜನೆಯ ಅಡಿಯಲ್ಲಿ ನಿರ್ಮಿಸಲಾಗಿದೆ ಎಂದರು.
ಈ ಯೋಜನೆಯು ಜಾರಿಗೆ ಬಂದ ನಂತರ ರಾಜ್ಯದಲ್ಲಿ ಅತೀ ಹೆಚ್ಚು ಸಾಕ್ಷರರು ದಕ್ಷಿಣ ಕ್ನನಡ ಜಿಲ್ಲೆಯಲ್ಲಿ ಶೇ 86.16 ರಷ್ಟಿದೆ. ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ಶೇ 75ರಷ್ಟಿದೆ ಎಂದು ತಿಳಿಸಿದರು.

Wednesday, December 19, 2012

ಬಹುಗ್ರಾಮ ಕುಡಿಯುವ ನೀರಿಗೆ ಜಿಲ್ಲೆಗೆ 342 ಕೋಟಿ: ಸಿ ಟಿ ರವಿ

ಮಂಗಳೂರು,ಡಿಸೆಂಬರ್.19: ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಜಿಲ್ಲೆಗೆ 342 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉನ್ನತ ಶಿಕ್ಷಣ ಸಚಿವರು ಆಗಿರುವ ಸಿ.ಟಿ. ರವಿ ಹೇಳಿದ್ದಾರೆ.
ಅವರು ಇಂದು ಉಜಿರೆ ಶ್ರೀ ಶಾರದಾ ಮಂಟಪ ದಲ್ಲಿ ಉಜಿರೆ ಗ್ರಾಮ ಪಂಚಾ ಯತ್ ವತಿ ಯಿಂದ ನಾನಾ ಕಾಮ ಗಾರಿ ಗಳ ಉದ್ಘಾಟನೆ ಹಾಗೂ ದ್ರವ ತ್ಯಾಜ್ಯ ಘಟಕಕ್ಕೆ ಶಂಕು ಸ್ಥಾಪನೆ ನೆರ ವೇರಿಸಿ ಮಾತ ನಾಡು ತ್ತಿದ್ದರು.
ಬೆಳ್ತಂಗಡಿ ತಾಲೂಕಿನ ಲಾಲ ಹಾಗೂ ನೆರಿಯಾ ಗ್ರಾಮಕ್ಕೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂ ರಾಗಿದೆ. ತಾಲೂಕಿನ 8 ಗ್ರಾಮ ಗಳಿಗೆ ಸುವರ್ಣ ಗ್ರಾಮ ಯೋಜನೆ ಮಂಜೂ ರಾಗಿದ್ದು, ಉಜಿರೆ ಗ್ರಾಮಕ್ಕೆ ಸುವರ್ಣ ಗ್ರಾಮ ಯೋಜನೆ ಯಲ್ಲಿ2.58 ಕೋಟಿ ರೂ. ಮಂಜೂ ರಾಗಿದೆ. ಅಲ್ಲದೆ ಉಜಿರೆ ಶಾಶ್ವತ ಕುಡಿ ಯುವ ನೀರಿನ ಯೋಜನೆ ಯನ್ನು ರೂಪಿಸಲು ಸಮೀಕ್ಷೆ ನಡೆಸು ವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮಾಂ ತರ ಪ್ರದೇ ಶದ ಅಭಿ ವೃದ್ದಿಗೆ ಸರ್ಕಾರ ಅದ್ಯತೆ ನೀಡಿದ್ದು, ಕೃಷಿಕ ರಲ್ಲಿ ವಿಶ್ವಾಸ ತುಂ ಬಲು ಹೆಚ್ಚಿನ ಗಮನ ವನ್ನು ನೀಡ ಲಾಗಿದೆ. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ ಯಡಿ ತಾಲೂಕಿಗೆ 37 ಕಿ.ಮೀ. ರಸ್ತೆ ಯನ್ನು ಮಂಜೂರು ಮಾಡಿದೆ ಎಂದರು.
ಶಾಸಕ ಕೆ. ವಸಂತ ಬಂಗೇರ ಮಾತನಾಡಿ, ವಿಕೇಂದ್ರೀಕೃತ ಪಂಚಾಯತ್ರಾಜ್ ವ್ಯವಸ್ಥೆಯಿಂದ ಅಭಿವೃದ್ಧಿ ಕಾಮಗಾರಿಗಳು ಮನೆಬಾಗಿಲಿಗೆ ತಲುಪುತ್ತಿದೆ ಎಂದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜುಳಾ ಉಮೇಶ್ ಅಧ್ಯಕ್ಷತೆ ವಹಿಸಿದ್ದರು.  ಉಜಿರೆ ಶ್ರೀ ಜನಾರ್ದನಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಯು.ವಿಜಯರಾಘವ ಪಡ್ವೇಟ್ನಾಯ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೊರಗಪ್ಪ ನಾಯ್ಕ, ಸದಸ್ಯೆ ಸಿ.ಕೆ. ಚಂದ್ರಕಲಾ, ತಾಲೂಕು ಪಂಚಾಯತ್ ಅಧ್ಯಕ್ಷ ಕೇಶವ ಎಂ., ಸದಸ್ಯೆ ವಿಮಲ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಹಮ್ಮದ್ ನಝೀರ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಲೋಕೇಶ್, ಶಿಶು ಅಭಿವೃದ್ದಿ ಯೋಜನಾಧಿಕಾರಿ ಬಿ.ಪಿ. ಪುಟ್ಟಸ್ವಾಮಿ, ತಾಲೂಕು ವ್ಯದ್ಯಾಧಿಕಾರಿ ಕಲಾಮಧು,  ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಂಗಾಧರ ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಸದಸ್ಯ ರಾಧಾಕೃಷ್ಣ ಶೆಟ್ಟಿ ಸ್ವಾಗತಿಸಿದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ಸುಶೀಲ ಹೆಗ್ಡೆ ವಂದಿಸಿದರು. ಸದಸ್ಯ ಕೆ. ಬಾಲಕೃಷ್ಣ ಗೌಡ ಕಾರ್ಯಕ್ರಮ ನಿರೂಪಿಸಿದರು.



ಎಲ್ಲಾ ಮಕ್ಕಳಿಗೂ ಚುಚ್ಚು ಮದ್ದು ನೀಡಲು ಸಲಹೆ : ಡಾ. ಹೇಮಲತಾ

ಮಂಗಳೂರು, ಡಿಸೆಂಬರ್.19:  ತಾಯಿ ಮಗುವಿನ ಮರಣ ಸಂಖ್ಯೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಜನನಿ ಸುರಕ್ಷಾ ಯೋಜನೆ ಹಾಗು ಜನನಿ ಶಿಶು ಸುರಕ್ಷಾ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಈ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆದುಕೊಂಡು ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾ ಯೋಜನಾ ನಿರ್ವಹಣಾಧಿಕಾರಿ,  ಡಾ. ಹೇಮಲತಾ ತಿಳಿಸಿದರು.
 ಭಾರತ್ ನಿರ್ಮಾಣ್ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಾಗಾರದಲ್ಲಿ ಜಿಲ್ಲಾ ಯೋಜನಾ ನಿರ್ವಹಣಾಧಿಕಾರಿ,  ಡಾ. ಹೇಮಲತಾ ಅವರು ಮಾತನಾಡಿದರು.
ಭಾರತ ಸರ್ಕಾರದ ವಾರ್ತಾ ಇಲಾಖೆ ಏರ್ಪಡಿಸಿದ್ದ  "ಭಾರತ ನಿರ್ಮಾಣ" ಸಾರ್ವಜನಿಕ ಮಾಹಿತಿ ಆಂದೋಲನ ಅಂಗವಾಗಿ ನಡೆದ ರಾಷ್ಟ್ರೀಯ ಆರೋಗ್ಯ ಅಭಿಯಾನದ ಕುರಿತು ನಡೆದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಸಿ ಮಾತಡುತ್ತಿದ್ದರು.
 ಸಧೃಡ ಜನಾಂಗವನ್ನು ರೂಪಿಸುವ ನಿಟ್ಟಿನಲ್ಲಿ ಸರ್ಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು ಅವುಗಳ ಸದುಪಯೋಗ ಪಡೆಸಿಕೊಂಡಾಗ ಮಾತ್ರ ಈ ಯೋಜನೆಗಳು ಸಾರ್ಥಕವಾಗುತ್ತವೆ ಎಂದು ಹೇಳಿದರು.ಹುಟ್ಟುವ  ಎಲ್ಲಾ ಮಕ್ಕಳಿಗೂ ಸರಿಯಾದ ಸಮಯಕ್ಕೆ ಚುಚ್ಚು ಮದ್ದುಗಳನ್ನು ನೀಡುವುದರಿಂದ ಅವರನ್ನು ಸಾಂಕ್ರಾಮಿಕ ರೋಗಗಳಿಂದ ರಕ್ಷಿಸಬಹುದು ಎಂದು ಅವರು ಕಿವಿಮಾತು ಹೇಳಿದರು.

ನೀರು ಪೂರೈಸುವ ಹಳ್ಳಿಗಳಿಗೆ ಜನವಸತಿ ಗ್ರಾಮ ಘೋಷಣೆ

ಮಂಗಳೂರು,ಡಿಸೆಂಬರ್.19: 2,500 ಸಾವಿರ ಜನವಸತಿ ಇರುವ ಗ್ರಾಮಕ್ಕೆ ಪ್ರತಿ ಒಬ್ಬರಿಗೆ 40 ಲೀಟರ್ ನೀರಿನಂತೆ 10,000 ಲೀಟರ್ ನೀರನ್ನು ಜನರಿಗೆ ಪೂರೈಸಲು ಸಾಧ್ಯವಾದರೆ ಅದನ್ನು ಜನವಸತಿ ಗ್ರಾಮ ಎಂದು ಘೋಘಿಸಲಾಗುವುದು. ಗ್ರಾಮಕ್ಕೆ ನೀರು ಪೂರೈಸಲಾಗುತ್ತದೆ.  ನೀರು ಪೂರೈಸಲು ಸಾಧ್ಯವಾಗಿಲ್ಲವಾದರೆ ಆ ಗ್ರಾಮಕ್ಕೆ ಬೋರ್ವೆಲ್ ಇಳುವರಿ ಸಾಮತ್ರ್ಯ ಕಡಿಮೆಯಾದರೆ ಅದನ್ನು ಹೆಚ್ಚಿಸಲಿಕ್ಕೆ ಪ್ರಯತ್ನಪಡಲಾಗುತ್ತದೆ ಹಾಗು ಈ ಯೋಜನೆಯಲ್ಲಿ ಶಾಲೆಗಳಿಗೆ ಹಾಗೂ ಅಂಗನವಾಡಿಗಳಿಗೆ ನೀರು ಪೂರೈಸಲಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಇಂಜಿನಿಯರಿಂಗ್ ವಿಭಾಗ, ಕಾರ್ಯನಿರ್ವಾಹಕ ಅಧಿಕಾರಿಯಾದ  ಸತ್ಯನಾರಾಯಣ ಅವರು ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ಭಾರತ ಸರ್ಕಾರದ ವಾರ್ತಾ ಶಾಖೆ ಹಮ್ಮಿಕೊಂಡಿರುವ 3 ದಿನಗಳ ಮಾಹಿತಿ ಆಂದೋಲನದ ಎರಡನೇ ದಿನವಾದ ಇಂದು ರಾಷ್ಟ್ರೀಯ ಕುಡಿಯುವ ನೀರು ಯೋಜನೆ, ಕೃಷಿ, ತೋಟಗಾರಿಕೆ, ರೇಷ್ಮೆ, ಜಲಾನಯನ ಹಾಗೂ ಭರತ ನಿರ್ಮಲ ಅಭಿಯಾನ (ಟಿ.ಎಸ್.ಸಿ.) ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು,
ಜಿಲ್ಲಾ ನೆರವು ಘಟಕದ ಸಂಯೋಜಕರಾದ ಶ್ರೀಮತಿ ಮಂಜುಳಾ ಅವರು ಮಾತನಾಡಿ ಗ್ರಾಮೀಣ ಜನರಿಗೆ ಯೋಜನೆ ಇದೆಯೋ ಅದರ ಬಗ್ಗೆ ಅರಿವು ಮೂಡಿಸುವುದು ಅಗತ್ಯ. ಅದ್ದರಿಂದ ಸ್ವಯಂಪ್ರೇರಿತರಾಗಿ ಅನುಸರಿಸಿದಾಗ ಮಾತ್ರ ಈ ಕಾರ್ಯಕ್ರಮ ಯಶಸ್ಸು ಹೊಂದಲು ಸಾಧ್ಯವಾಗುತ್ತದೆ. ಹೊರತು ಕೇವಲ ಸಹಾಯ ಧನ ಪ್ರೋತ್ಸಾಹ ಧನದಿಂದ ಈ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯವಿಲ್ಲ. ನಿರ್ಮಲ ಭಾರತ ಅಡಿಯಲ್ಲಿ ಶೌಚಾಲಯ ನಿರ್ಮಿಸಲು ಬಿ.ಪಿ.ಎಲ್ ಕಾಡರ್ುದಾರರಿಗೆ ಹಾಗೂ ಎ.ಪಿ.ಎಲ್, ಕಾರ್ಡುದಾರರಿಗೆ ಮಹಿಳೆ ಮುಖ್ಯಸ್ಥರು ಹಾಗು ಅಂಗವಿಕಲರಿಗೆ 1.4.12 ರಿಂದ 4-700 ರೂ ಅನುದಾನ ನೀಡಲಾಗುತ್ತದೆ ಎಂದು ಹೇಳಿದರು.
ಪುತ್ತೂರಿನ ಕಡಬ ಗ್ರಾಮಪಂಚಾಯಿತಿಯ ಘನ ಹಾಗೂ ದ್ರವ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಮಾಡುವಲ್ಲಿ ರಾಜ್ಯಕ್ಕೆ  ಮಾದರಿಯಾಗಿದೆ ಎಂದು ಈ ಸಂದರ್ಭದಲ್ಲಿ ಅವರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಅಬ್ದುಲ್ ನಹೀಮ್ ಅವರು ಮಾತನಾಡಿ ನಮ್ಮಲ್ಲಿ ನೀರಾವರಿ ಸೌಲಭ್ಯವಿಲ್ಲ ಮಳೆಯನ್ನು ನಂಬಿ ಕೃಷಿ ಮಾಡುವ ಹಾಗಿದೆ ಎಂದು ರಸಗೊಬ್ಬರ ಬಳಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭೂಮಿಯಲ್ಲಿ ಸವಳು ಜವಳು ಪ್ರಮಾಣ ಹೆಚ್ಚುತ್ತಿದ್ದು, ರೈತರು ಹೇಗೆ ಅದನ್ನು ನಿವಾರಿಸಬಹುದು ಎಂಬ ಬಗ್ಗೆ ಸಲಹೆ ನೀಡಿದರು.
ಜಲಾಂತರ್ಗಾಮಿ ಪಂಪ್ ಸೆಟ್ ಗಳಿಗೆ ಶೇ 90 ರಷ್ಟು ಸಹಾಯಧನ , ಹಾಗೂ ಕೃಷಿ ಮಾಡುವ ಸಮಯದಲ್ಲಿ ರೈತರಿಗೆ ಹಾವು ಕಡಿದರೆ ಒಂದು ಲಕ್ಷ ರೂಪಾಯಿಗಳು ಪರಿಹಾರ ಧನ, ಮುಸುಕಿನ ಜೋಳ ಉತ್ಪಾದನೆಗೆ ರಸಗೊಬ್ಬರ ಹಾಗು ಲಘು ಪೋಷಕಾಂಶಗಳಿಗೆ ಶೇ 50 ರಷ್ಟು ಸಹಾಯ ಧನ ನೀಡಲಾಗುವುದು ಎಂದು ಈ ಸಂದರ್ಭದಲ್ಲಿ ಅವರು ಹೇಳಿದರು.
ಪುತ್ತುರು ತಾಲೂಕು, ತೋಟಗಾರಿಕೆ ಇಲಾಖೆ, ಸಹಾಯಕ ನಿರ್ದೇಶಕ ಪ್ರವೀಣ್ ಮೊದಲಾದವರು ಈ ಕಾರ್ಯಾಗಾರದಲ್ಲಿ ಮಾತನಾಡಿದರು.

ಜಲಾನಯನ ಅಭಿವೃದ್ಧಿ ಯೋಜನೆಯಡಿ ಪಶ್ಚಿಮಘಟ್ಟ ಪ್ರಗತಿ

ಮಂಗಳೂರು,ಡಿಸೆಂಬರ್.19: ಆಯ್ದ ಪ್ರದೇಶಗಳ ವ್ಯಾಪ್ತಿಯಲ್ಲಿ ಜಲಾನಯನ ಪ್ರದೇಶದಲ್ಲಿ ಮಣ್ಣು ಮತ್ತು ನೀರು ಸಂರಕ್ಷಣೆ ಮಾಡುವುದು. ಅಂತರ್ಜಲ ಅಭಿವೃದ್ಧಿಪಡಿಸುವುದು, ಜಾನುವಾರ ಆರೋಗ್ಯ ಶಿಬಿರಗಳ ಮೂಲಕ  ಜಾನುವಾರಗಳು ಉತ್ಪಾದಕತೆ ಮತ್ತು ಉತ್ಪಾದನೆ ಹೆಚ್ಚಿಸುವುದು. ಭೂರಹಿತ ರೈತ ಮಹಿಳೆ, ಕುಶಲ ಕರ್ಮಿಗಳು, ಪರಿಶಿಷ್ಟಜಾತಿ, ಪರಿಶಿಷ್ಟ ವರ್ಗದವರಿಗೆ, ತರಬೇತಿ ನೀಡಿ ಆದಾಯೋತ್ಪನ್ನ ಚಟುವಟಿಕೆಗಳ ಮೂಲಕ ಉದ್ಯಮ ಶೀಲತೆಯನ್ನು ಬೆಳೆಸುವುದು ಜಲಾನಯನ ಅಭಿವೃದ್ಧಿ ಇಲಾಖೆಯ ಯೋಜನೆಗಳ ಉದ್ದೇಶವೆಂದು ಪುತ್ತುರು ತಾಲ್ಲೂಕು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ  ಪ್ರವೀಣ್ ಹೇಳಿದರು.

 ಭಾರತ್ ನಿರ್ಮಾಣ್ ನಿರ್ಮಲ ಭಾರತ ಕಾರ್ಯಾಗಾರದಲ್ಲಿ ಜಿಲ್ಲಾ ನೆರವು ಘಟಕದ ಸಂಯೋಜಕರಾದ ಶ್ರೀಮತಿ ಮಂಜುಳಾ ಮಾತನಾಡಿದರು.
          ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಕೇಂದ್ರ ವಾರ್ತಾ ಇಲಾಖೆ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಏರ್ಪಡಿಸಿರುವ ಭಾರತ ನಿರ್ಮಾಣ ಯೋಜನೆ ಎರಡನೇ ದಿನದ ಕಾರ್ಯಕ್ರಮದಲ್ಲಿ ಕಾರ್ಯಾಗಾರ ಉದ್ದೇಶಿ ಅವರು ಮಾತನಾಡಿದರು.
ಈ ಯೋಜನೆಯ ಮೂಲಕ ಜೈವಿಕ ವೈವಿಧ್ಯತೆಯ ಸಂರಕ್ಷಣೆ ಮತ್ತು ಅಭಿವೃದ್ಧಿ ಮಾಡಲಾಗುತ್ತದೆ. ಯೋಜನೆಯನ್ನು ಸಮಗ್ರ  ಜಲಾನಯನ ತತ್ವವಾದ ಕೃಷಿ, ತೋಟಗಾರಿಕೆ, ಅರಣ್ಯೀಕರಣ, ಪಶುಸಂಗೋಪನೆ, ಮೀನುಗಾರಿಕೆ, ಕಾಮಗಾರಿಗಳ ಮೂಲಕ ಮಣ್ಣು, ನೀರು ಸಂರಕ್ಷಣೆ, ಉತ್ಪಾದನೆ, ಉತ್ಪಾದಕತೆ ಹೆಚ್ಚಿಸುವುದರೊಂದಿಗೆ ಆದಾಯೋತ್ಪನ್ನ ಚಟುವಟಿಕೆ ಹಾಗೂ ಸಮುದಾಯ ಸಂಘಟನೆ, ತರಬೇತಿಗಳ ಮೂಲಕ ಸಮಗ್ರ ಜಲಾನಯನ ಅಭಿವೃದ್ಧಿ ಆಧಾರದ ಮೇಲೆ ಅನುಷ್ಠಾನಿಸಿ ಪಶ್ಚಿಮ ಘಟ್ಟ ಪ್ರದೇಶದ ಜನರ ಜೀವನ ಮಟ್ಟ ಸುಧಾರಣೆ ಮಾಡಲಾಗುತ್ತದೆ ಎಂದು ಪ್ರವೀಣ್ ವಿವರಿಸಿದರು.
ಈ ಯೋಜನೆಯ ಮೂಲಕ ಜೈವಿಕ ವೈವಿಧ್ಯತೆಯ ಸಂರಕ್ಷಣೆ ಮತ್ತು ಅಭಿವೃದ್ಧಿ ಮಾಡುವುದು. ಔಷಧೀಯ ಸಸ್ಯಗಳನ್ನು ಬೆಳೆಯುವುದು. ಅಂತರ್ಜಲ ಹೆಚ್ಚಳ ಮಾಡುವುದು, ಮಳೆ ನೀರು ಸಂಗ್ರಹಣೆ ಮಾಡಿ ಸಂದಿಗ್ಧ ಹಂತದಲ್ಲಿ ಕೃಷಿಗೆ ಬಳಕೆ ಮಾಡಿ ಕೃಷಿ ಉತ್ಪಾದನೆಯನ್ನು ಹೆಚ್ಚಿಸಿ ರೈತರ ಆರ್ಥಿಕಾಭಿವೃದ್ಧಿ ಮಾಡುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.

ಭಾರತ್ ನಿರ್ಮಾಣ್ ಸಾರ್ವಜನಿಕ ಮಾಹಿತಿ ಆಂದೋಲನ

ಮಂಗಳೂರು,ಡಿಸೆಂಬರ್.19: ದಕ್ಷಿಣ ಕನ್ನಡ ಜಿಲ್ಲೆಯಪುತ್ತೂರಿನಲ್ಲಿ ಹಮ್ಮಿಕೊಂಡಿರುವ 3 ದಿನಗಳ ಭಾರತ್ ನಿರ್ಮಾಣ್ ಸಾರ್ವಜನಿಕ ಮಾಹಿತಿ ಆಂದೋಲನ  ಹಾಗೂ ವಸ್ತು ಪ್ರದರ್ಶನಕ್ಕೆ  ಶಾಸಕರಾದ  ಶ್ರೀಮತಿ ಮಲ್ಲಿಕಾ ಪ್ರಸಾದ್  ಚಾಲನೆ ನೀಡಿದರು. ಜಿಲ್ಲಾ ಪಂಚಾ ಯತ್ ಸಿಇಓ ಡಾ. ಕೆ.ಎನ್. ವಿಜಯ ಪ್ರಕಾಶ್, ಪುತ್ತೂರು ಉಪ ವಿಭಾಗಾ ಧಿಕಾರಿ ಎಹ್. ಪ್ರಸನ್ನ, ತಾಲೂಕು ಪಂಚಾ ಯತ್ ಅಧ್ಯಕ್ಷೆ ಶಶಿ ಪ್ರಭಾ ಸಂಪ್ಯ, ಪುರಸಭಾ ಅಧ್ಯಕ್ಷೆ ಕಮಲ ಆನಂದ್, ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ನಿರ್ದೇಶಕರಾದ ನಾಗೇಂದ್ರ ಸ್ವಾಮಿ, ಹೆಚ್ಚುವರಿ ನಿರ್ದೇಶಕ ವೆಂಕಟೇಶ್ವರಲು,ಕ್ಷೇತ್ರ ಪ್ರಚಾರಾಧಿಕಾರಿ ಎನ್.ಡಿ. ಪ್ರಸಾದ್ ಅವರು ಉಪಸ್ಥಿತರಿದ್ದರು.
.
 ಭಾರತ್ ನಿರ್ಮಾಣ್ ಸಾರ್ವಜನಿಕ ಮಾಹಿತಿ ಆಂದೋಲನದ ಅಂಗವಾಗಿ ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ವತಿಯಿಂದ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ
ಭಾರತ್ ನಿರ್ಮಾಣ್ ಸಾರ್ವಜನಿಕ ಮಾಹಿತಿ ಆಂದೋಲನದ ವಸ್ತು ಪ್ರದರ್ಶನದ ಮಳಿಗೆಗಳನ್ನು ಸಾರ್ವಜನಿಕರು ವಿಕ್ಷಿಸುತ್ತಿರುವುದು.

 

Tuesday, December 18, 2012

'ಮಗುವಿಗೆ ಪೌಷ್ಠಿಕ ಆಹಾರ ಸದೃಢ ಸಮಾಜಕ್ಕೆ ಆಧಾರ'

ಮಂಗಳೂರು, ಡಿಸೆಂಬರ್.18: ಆರೋಗ್ಯವಂತ ಶಿಶು ಸಮಾಜದ ಸಂಪತ್ತು. ಬೆಳೆಯುವ ಈ ಸಿರಿಗಳನ್ನು ಮೊಳಕೆಯಲ್ಲೇ ಜೋಪಾನ ಮಾಡಿ ಸದೃಢವಾಗಿ ಬೆಳೆಸುವುದು ಸಾಮಾಜಿಕ ಜವಾಬ್ದಾರಿ ಜೊತೆಗೆ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಕೂಡ ಆಗಿದೆ.
       ಮಾನವ ಶರೀರದ ಹಾಗೂ ಮಾನಸಿಕ ಬೆಳವಣಿಗೆಗೆ ಪೌಷ್ಠಿಕ ಆಹಾರ ಬಹು ಮುಖ್ಯವಾಗಿದ್ದು, ಪೋಷಕಾಂಶಗಳ ಕೊರತೆ ಅಂಗವಿಹೀನತೆಯನ್ನು ಉಂಟು ಮಾಡುತ್ತದೆ. ಸರಿಯಾದ ಪ್ರಮಾಣದಲ್ಲಿ ಪೌಷ್ಠಿಕ ಆಹಾರ ಪದಾರ್ಥಗಳನ್ನು ಸೇವಿಸದಿದ್ದರೆ ಶರೀರವು ಸಾಮಾನ್ಯವಾದ ರೀತಿಯಲ್ಲಿ ಬೆಳವಳಿಗೆಯಾಗುವುದಿಲ್ಲ. ಇದರಿಂದ ಮಗು ಜನಿಸಿದಾಗ ಕಡಿಮೆ ತೂಕವನ್ನು  ಹೊಂದಿರುತ್ತದೆ ಹಾಗೂ ಮಗು ಬೆಳೆಯುತ್ತಾ ವಯಸ್ಸಿಗೆ ತಕ್ಕ ತೂಕವನ್ನು ಹೊಂದಿರದಿಲ್ಲದಿರುವುದು ಅಪೌಷ್ಠಿಕತೆಯ ಮುಖ್ಯ ಲಕ್ಷಣ. ಮಾಂಸಖಂಡಗಳು ಬಲಹೀನವಾಗಿ ಮಗು ತೆಳ್ಳಗಾಗುತ್ತದೆ ಅಥವಾ ಮಾಂಸ ಮೂಳೆಗೆ ಅಂಟಿಕೊಂಡಿರುತ್ತದೆ. ಹೊಟ್ಟೆಯು ದಪ್ಪವಾಗಿ ಎದ್ದು ಕಾಣುತ್ತದೆ. ಮಗುವಿಗೆ ಯಾವ ಚಟುವಟಿಕೆಯಲ್ಲೂ ಆಸಕ್ತಿ ಇರುವುದಿಲ್ಲ. ವಯಸ್ಸಿಗೆ ತಕ್ಕ ಬೆಳವಣಿಗೆ ಇರುವುದಿಲ್ಲ. ಕೂದಲು ಕಂದು ಬಣ್ಣಕ್ಕೆ ತಿರುಗಿರುತ್ತದೆ. ತೀವ್ರ ಬಲಹೀನತೆ, ಪಾದ ಹಾಗೂ ಮುಖದಲ್ಲಿ ಊತ, ಅತಿಸಾರ ಭೇದಿ ಕಾಣಿಸಿಕೊಳ್ಳುತ್ತಿರುತ್ತದೆ.
ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಗು ರಕ್ತಹೀನತೆಯಿಂದ ಬಳಲುತ್ತಿದ್ದು ರೋಗ ನಿರೋಧಕ ಶಕ್ತಿ ಕುಂಠಿತವಾಗಿರುತ್ತದೆ. ಅತಿಸಾರ, ವಾಂತಿ, ನ್ಯುಮೊನಿಯಾ ಸೋಂಕುಗಳು ಮಗುವಿನಲ್ಲಿ ಪದೇ ಪದೇ ಕಾಣಿಸಿಕೊಳ್ಳಬಹುದು. ಬಡತನ, ಆರೋಗ್ಯ ಶಿಕ್ಷಣ ಕೊರತೆ, ಲಿಂಗ ತಾರತಮ್ಯ, ಬಾಲ್ಯ ವಿವಾಹ ಹಾಗೂ ಎಳೆಯ ವಯಸ್ಸಿನಲ್ಲಿ ಗರ್ಭಧಾರಣೆ, ಸಮರ್ಪಕವಾಗಿ ಎದೆಹಾಲು ಉಣಿಸದೇ ಇರುವುದು, ಪೂರಕ ಪೌಷ್ಠಿಕ ಆಹಾರವನ್ನು ನೀಡದೇ ಇರುವುದು, ಸ್ವಚ್ಛತೆ ಅನುಸರಿಸದಿರುವುದು, ಮಗು ಹುಟ್ಟಿದ ಅರ್ಧಗಂಟೆಯೊಳಗೆ ಮೊದಲ ಎದೆಹಾಲನ್ನು ಕುಡಿಸದೇ ಇರುವುದು. ಪೂರಕ ಪೌಷ್ಠಿಕ ಆಹಾರವನ್ನು ಮಗುವಿಗೆ 6 ತಿಂಗಳಾದ ನಂತರ ತಕ್ಷಣ ಪ್ರಾರಂಭಿಸದೇ ಇರುವುದು  ಮುಖ್ಯ ಕಾರಣಗಳಾಗಿರುತ್ತದೆ.
   ಮಗು ಹುಟ್ಟಿದ ಅರ್ಧ ಗಂಟೆ ಯೊಳಗೆ ಮೊದಲ ಎದೆ ಹಾಲನ್ನು ಕುಡಿ ಸುವು ದರಿಂದ ಹಾಲಿ ನಲ್ಲಿ ರುವ ಕೊಲೆ ಸ್ಟ್ರಮ್ ನಿಂದ ಮಗುವಿಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಆರು ತಿಂಗಳು ಎದೆಹಾಲು ನೀಡುವುದರಿಂದ ಯಾವುದೇ ಸೋಂಕು ಬಾರದಂತೆ ತಡೆಯಬಹುದು. ಆರು ತಿಂಗಳ ನಂತರ ಎದೆ ಹಾಲಿನ ಜೊತೆಗೆ ಪೂರಕ ಆಹಾರವಾದ ಬೇಳೆಯ ತಿಳಿ, ಹಣ್ಣಿನ ರಸ, ಚೆನ್ನಾಗಿ ಬೇಯಿಸಿದ ತರಕಾರಿ, ಇವುಗಳನ್ನು ನೀಡಬಹುದು. ಪೂರಕ ಆಹಾರದೊಂದಿಗೆ ಮಗುವಿವೆ 2 ವರ್ಷಗಳು ತುಂಬುವವರೆಗೆ ಎದೆಹಾಲು ಉಣಿಸುವುದು ಕಡ್ಡಾಯ. 5 ವರ್ಷಗಳು ತುಂಬುವವರೆಗೆ ಪ್ರತಿ ತಿಂಗಳು ತೂಕ ಮಾಡಿಸಿ ಮಗುವಿನ ತೂಕ ಹೆಚ್ಚಾಗುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು.
ಅಪೌಷ್ಠಿಕತೆ ನಿವಾರಣೆಗೆ ಸರ್ಕಾರ ಸಮಗ್ರ ಪರಿಹಾರಕ್ರಮಗಳನ್ನು ಕೈಗೊಂಡಿದ್ದು, ಅಪೌಷ್ಠಿಕತೆಯನ್ನು ತೀವ್ರವಾಗಿ ಅನುಭವಿಸುತ್ತಿರುವ ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಪೌಷ್ಟಿಕ ಪುನರ್ವಸತಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ತೀವ್ರ ಅಪೌಷ್ಠಿಕ ಮಕ್ಕಳಿಗೆ ಪ್ರತಿ ದಿನ ರೂ. 6.90 ಮೌಲ್ಯದ ಪೂರಕಪೌಷ್ಠಿಕ ಆಹಾರವನ್ನು ನೀಡಲಾಗುತ್ತಿದೆ. ತುರ್ತು ಚಿಕಿತ್ಸೆಯ ಅಗತ್ಯವಿರುವ ಮಕ್ಕಳಿಗೆ ಬಾಲ ಸಂಜೀವಿ ಯೋಜನೆಯಡಿ ರಾಜ್ಯದ 15 ಆಸ್ಪತ್ರೆಗಳ ಮೂಲಕ ಗುರುತಿಸಿರುವ 18 ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ.
ತೀವ್ರ ಅಪೌಷ್ಠಿಕ ಮಕ್ಕಳಿಗೆ ವಾರದಲ್ಲಿ 4 ದಿನ ಮೊಟ್ಟೆ ಹಾಗೂ 2 ದಿನ 200 ಎಂ ಎಲ್ ಹಾಲನ್ನು, ಮೊಟ್ಟೆ ತಿನ್ನದ ಮಕ್ಕಳಿಗೆ ವಾರದಲ್ಲಿ 6 ದಿನ ಹಾಲನ್ನು ನೀಡಲಾಗುತ್ತದೆ. ತೀವೃ ಅಪೌಷ್ಠಿಕ ಮಕ್ಕಳ ವೈದ್ಯಕೀಯ ವೆಚ್ಚ ಯೋಜನೆಯಡಿ ಔಷಧಿ ಹಾಗೂ ಚಿಕಿತ್ಸೆಗೆ ಪ್ರತಿವರ್ಷ ಮಗುವಿಗೆ ರೂ. 750 ಗಳನ್ನು ನೀಡಲಾಗುತ್ತಿದೆ. ಹೆಚ್ಚಿನ ವಿವರಗಳಿಗೆ ಸ್ಥಳೀಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಹೆಚ್ಚಿನ ಮಾರ್ಗದರ್ಶನ ಪಡೆದುಕೊಳ್ಳ ಬಹುದು. 

 

Saturday, December 15, 2012

ಅಟೋರಿಕ್ಷಾ ದರ ಮರು ನಿಗದಿ


ಮಂಗಳೂರು, ಡಿಸೆಂಬರ್. 15 :- ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಅಟೋ ರಿಕ್ಷಾಗಳ ದರಗಳನ್ನು ಪರಿಷ್ಕರಣೆ ಮಾಡಿ ದಿನಾಂಕ 15-12-12 ರಿಂದ ಜಾರಿಗೆ ಬರುವಂತೆ ಆದೇಶಿಸಿದೆ.
        ಪ್ರತೀ ಕಿಲೋ ಮೀಟರ್ ದರ (ಮೂರು ಪ್ರಯಾಣಿಕರಿಗೆ) ರೂ.13-00/ಕನಿಷ್ಠ ದರ ಮೊದಲ 1.5 ಕಿಮೀ ರೂ.20/-ಕಾಯುವ ದರಗಳು ಮೊದಲ 15 ನಿಮಿಷ ಉಚಿತ,ನಂತರದ 45 ನಿಮಿಷದವರೆಗೆ ಪ್ರಯಾಣ ದರದ ಶೇಕಡಾ 25,ಲಗೇಜು ದರ ಮೊದಲ 20 ಕಿ.ಗ್ರಾಂ ಉಚಿತ,ನಂತರ ಪ್ರತೀ 20 ಕಿ.ಗ್ರಾಂ ಅಥವಾ ಭಾಗಕ್ಕೆ ರೂ.2.00,ರಾತ್ರಿ ವೇಳೆ ದರ  10.00 ಗಂಟೆ ನಂತರ ಬೆಳಿಗ್ಗೆ 5.00 ಗಂಟೆಯೊಳಗೆ ಸಾಮಾನ್ಯ ದರದ ಒಂದೂವರೆ ಪಟ್ಟು ಎಂದು ನಿಗಧಿಪಡಿಸಿರುತ್ತಾರೆ. ಪರಷ್ಕೃತ ದರಗಳ ಮೀಟರಿನಲ್ಲಿ ಪ್ರದರ್ಶನವಾಗುವಂತೆ ಮೀಟರ್ ಗಳನ್ನು 30  ದಿನಗಳೊಳಗೆ ಪುನ: ಸತ್ಯಾಪನೆ ಮಾಡಿ ಮುದ್ರೆ ಹಾಕಿಕೊಳ್ಳತಕ್ಕದೆಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಗಳು ತಿಳಿಸಿರುತ್ತಾರೆ.

 

Friday, December 14, 2012

'ವನ್ ಎಂಪಿ-ವನ್ ಐಡಿಯಾ'


ಮಂಗಳೂರು, ಡಿಸೆಂಬರ್ 14 :- ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಿ ವಿನೂತನವಾಗಿ ಪರಿಹಾರಗಳನ್ನು, ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಪ್ರತೀ ಲೋಕಸಭಾ ಕ್ಷೇತ್ರಗಳಲ್ಲಿ ವಾರ್ಷಿಕ ವನ್ ಎಂಪಿ-ವನ್ ಇಂಡಿಯಾ ಸ್ಪರ್ಧೆಯನ್ನು ಏರ್ಪಡಿಸಬೇಕಿದ್ದು, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಸ್ಪರ್ಧೆ ಏರ್ಪಡಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ.
ಶಿಕ್ಷಣ ಮತ್ತು ಕೌಶಲ್ಯ, ಆರೋಗ್ಯ, ನೀರು ಮತ್ತು ನೈರ್ಮಲ್ಯ, ವಸತಿ ಮತ್ತು ಮೂಲಭೂತ ಸೌಕರ್ಯ, ಕೃಷಿ, ಇಂಧನ, ಪರಿಸರ, ಸಮುದಾಯ, ಸಾಮಾಜಿಕ ಸೇವೆ ಮುಂತಾದ ಕ್ಷೇತ್ರಗಳಲ್ಲಿ ಅನ್ವೇಷಾಣ್ಮಾತ್ಮಕವಾಗಿ ಪರಿಹಾರಗಳನ್ನು ಸೂಚಿಸುವ ವ್ಯಕ್ತಿಗಳು, ಗುಂಪುಗಳು, ಕೈಗಾರಿಕೆಗಳು, ಅಕಾಡೆಮಿಗಳು, ಸರ್ಕಾರೇತರ ಸಂಸ್ಥೆಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
ನಗದು ಬಹುಮಾನವಿದ್ದು ಪ್ರಥಮ 2.5 ಲಕ್ಷರೂ, ದ್ವಿತೀಯ 1.5 ಲಕ್ಷ ಹಾಗೂ ತೃತೀಯ ಬಹುಮಾನ ರೂ. 1ಲಕ್ಷ ಗಳನ್ನು ನೀಡಲಾಗುವುದು. 2013ರ ಜನವರಿ 1ರವರೆಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ.
ಈ ಸಂಬಂಧ ಹೆಚ್ಚಿನ ಮಾಹಿತಿಗೆ ಜಿಲ್ಲಾಧಿಕಾರಿಗಳ ಕಚೇರಿಯನ್ನು ಸಲ್ಲಿಸಬಹುದು ಅಥವಾ ವೆಬ್ ಸೈಟ್ 
www.dk.nic.in ಸಂಪರ್ಕಿಸಬಹುದು ಎಂದು ಜಿಲ್ಲಾಡಳಿತದ  ತಿಳಿಸಿದೆ.

ನಂದಿನಿ ಜಾನಪದ ಸ್ಪರ್ಧೆ

ಮಂಗಳೂರು, ಡಿಸೆಂಬರ್.14:- ಸಮಗ್ರ ಆಹಾರ ಹಾಲಿನ ಉಪಯೋಗದ ಬಗ್ಗೆ ಅರಿವು ಮೂಡಿಸಲು ಅತ್ಯಂತ ಸಮೃದ್ಧ ಮಾಧ್ಯಮ ಜಾನಪದವನ್ನು ಬಳಸಿಕೊಂಡು ಬೆಳೆಯುವ ಮಕ್ಕಳಲ್ಲಿ ಜ್ಞಾನವನ್ನು ಹೆಚ್ಚಿಸುವ ಕೆಲಸದಲ್ಲಿ ದಕ್ಷಿಣ ಕನ್ನಡ ಹಾಲು ಒಕ್ಕೂಟ (ನಂದಿನಿ) ನಿರತವಾಗಿರುವುದು ಅಭಿನಂದನಾರ್ಹ ಎಂದು ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ಹರೀಶ್ ಕುಮಾರ್ ಹೇಳಿದರು.
            ದಕ್ಷಿಣ ಕನ್ನಡ ಹಾಲು ಒಕ್ಕೂ ಟವು  ತಾಲೂಕು ಮಟ್ಟದ  ಜಾನ ಪದ ಸ್ಪರ್ಧೆಯ ಅಂತಿಮ ಹಂತ ವನ್ನು ಕುಲ ಶೇಖರದ ಕೊರ್ಡೆಲ್ ಹಾಲ್  ನಲ್ಲಿ ಆಯೋ ಜಿಸಲಾ ಗಿದ್ದು, ಸಾಂಸ್ಕೃತಿಕ ಕಾರ್ಯ ಕ್ರಮದ ಅಧ್ಯ ಕ್ಷತೆ ವಹಿಸಿ ಅವರು ಮಾತ ನಾಡುತ್ತಿದ್ದರು.
ಹೈನುಗಾರಿಕೆ ಮತ್ತು ಕೃಷಿ ಸೊರಗುತ್ತಿರುವ ಸಂದರ್ಭದಲ್ಲಿ ಯುವ ಜನಾಂಗವನ್ನು ಈ ಕ್ಷೇತ್ರದತ್ತ ಆಕರ್ಷಿಸುವುದು ಹಾಗೂ ಈ ಬಗ್ಗೆ ಅವರಿಗೆ ಮಾಹಿತಿ ನೀಡುವ ಕಾರ್ಯಕ್ರಮ ಆಯೋಜಿಸುತ್ತಿರುವುದು ಉತ್ತಮ ಕೆಲಸ ಎಂದು ದಕ್ಷಿಣ ಕನ್ನಡ ಹಾಲು ಒಕ್ಕೂಟದ ಕಾಯಕವನ್ನು ಶ್ಲಾಘಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಮಾ ರಂಭ ದಲ್ಲಿ ಕ್ಷೇತ್ರ ಶಿಕ್ಷಣಾ ಧಿಕಾರಿ ಶ್ರೀಮತಿ ರಾಜ ಲಕ್ಷ್ಮಿ, ಪಶು ಸಂಗೋ ಪನ ಇಲಾ ಖೆಯ ಉಪ ನಿರ್ದೇ ಶಕ ರಾದ ಡಾ. ಕೆ. ವಿ ಹಲ ಗಪ್ಪ ಪಾಲ್ಗೊಂ ಡರು. ಪ್ರಾಸ್ತಾ ವಿಕ ಮಾತು ಗಳ ನ್ನಾಡಿದ ದಕ್ಷಿಣ ಕನ್ನಡ ಹಾಲು ಒಕ್ಕೂ ಟದ ವ್ಯವ ಸ್ಥಾ ಪಕ ನಿರ್ದೇ ಶಕರಾದ ಎಂ ವಿ ಸತ್ಯ ನಾರಾಯಣ ಅವರು ಕಾರ್ಯಕ್ರಮದ ಉದ್ದೇಶ ವಿವರಿಸುತ್ತಾ, ಉಡುಪಿಯ ಮೂರು ತಾಲೂಕು ಮತ್ತು ದಕ್ಷಿಣ ಕನ್ನಡದ ನಾಲ್ಕು ತಾಲೂಕುಗಳಲ್ಲಿ ತಾಲೂಕು ಮಟ್ಟದ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಡಿಸೆಂಬರ್ 19 ರಂದು ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ ಅಂತಿಮ ಸುತ್ತಿನ ಕಾರ್ಯಕ್ರಮಗಳು ನಡೆಯಲಿವೆ ಎಂದರು. ಸುಬ್ಬರಾವ್ ಸ್ವಾಗತಿಸಿದರು. ಜಾನೆಟ್ ವಂದಿಸಿದರು. ಅಪರಾಹ್ನ ಸ್ಪರ್ಧಾ ವಿಜೇತರನ್ನು ಸೈಂಟ್ ಜೋಸೆಫ್ ಶಾಲೆಯ ಮುಖ್ಯೋಪಾಧ್ಯಾಯರಾದ ವಿನುತ ಡಿ ಸೋಜಾ ಸನ್ಮಾನಿಸಿದರು.
 

Thursday, December 13, 2012

ಕ್ರೀಡೆಯಿಂದ ದೈಹಿಕ ಸಾಮಥ್ರ್ಯ ವೃದ್ಧಿ: ಎನ್.ಪ್ರಕಾಶ್

ಮಂಗಳೂರು, ಡಿಸೆಂಬರ್.13: "ಆರೋಗ್ಯವೇ ಭಾಗ್ಯ '' ಮಾನವ ಆರೋಗ್ಯ ವಂತರಾಗಲು  ಕ್ರೀಡೆಗಳು ಅಗತ್ಯ .ಕ್ರೀಡೆಗಳಿಂದ ಮನುಷ್ಯ ಸರ್ವ ವಿಧದಲ್ಲಿ ಸಮರ್ಥರಾಗಲು ಸಾಧ್ಯ ಎಂದು ದ.ಕ.ಜಿಲ್ಲಾಧಿಕಾರಿ ಎನ್. ಪ್ರಕಾಶ್ ಅವರು ಹೇಳಿದರು.
       ಅವರು ಇಂದು ನಗ ರದ ಪೋಲೀ ಸ್ ಕವಾ ಯತು ಮೈದಾ ನದಲ್ಲಿ ಮಂಗ ಳೂರು ನಗರ ಪೋಲೀಸ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೋಲೀಸ್ ಸಂಯು ಕ್ತಾಶ್ರ ಯದಲ್ಲಿಏರ್ಪ ಡಿಸಿದ್ದ ವಾರ್ಷಿಕ ಪೋಲೀಸ್ ಕ್ರೀಡಾ ಕೂಟ ವನ್ನು ಉದ್ಘಾಟಿಸಿ ಮಾತನಾಡಿದರು. ಜನರ ಆಸ್ತಿಪಾಸ್ತಿಗಳ ರಕ್ಷಣೆ ಮಾಡುವ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ  ಕಾಪಾಡುವ ಪೋಲೀಸರು ಆರೋಗ್ಯವಂತರಾಗಿದ್ದರೆ ಮಾತ್ರ ಅವರಿಂದ ಸಮರ್ಪಕ ಕಾರ್ಯ ನಿರೀಕ್ಷಿಸಲು ಸಾಧ್ಯ ಎಂದ ಜಿಲ್ಲಾಧಿಕಾರಿಗಳು ಪೋಲೀಸರು ಕ್ರೀಡೆಗಳಲ್ಲಿ ಹೆಚ್ಚು ತೊಡಗಲು ತಿಳಿಸಿದರು. ಕ್ರೀಡಾ ಪಟುಗಳ ಪರ ವಾಗಿ ಕೆ.ಎಸ್.ಪ್ರ ಶಾಂತ್ ಪ್ರತಿಜ್ಞೆ ಸ್ವೀಕ ರಿಸಿ ದರು.ಮಂಗ ಳೂರು ನಗರ ಪೋ ಲೀಸ್ ಆಯುಕ್ತ ರಾದ  ಮನೀಷ್  ಕರ್ಬಿ ಕರ್ ಸ್ವಾಗ ತಿಸಿದರು.ಪೋ ಲೀಸ್ ಅಧೀಕ್ಷ ಕರಾದ ಅಭಿ ಷೇಕ್ ಗೋಯಲ್ ವಂದಿ ಸಿದರು.
 ಮಂಗಳೂರು ಉತ್ತರ,ದಕ್ಷಿಣ,ಮಂಗಳೂರು ಪೂರ್ವ ವಲಯ ಮತ್ತು ಪುತ್ತೂರು ಉಪವಿಭಾಗ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೋಲೀಸ್ ಸಿಬ್ಬಂದಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ.

ಹೊಸ ಸಮಾಜದ ನಿರ್ಮಾಣಕ್ಕೆ ಆಕಾಶವಾಣಿ ಮಾದರಿ- ಡಾ. ಮೋಹನ್ ಆಳ್ವ

ಮಂಗಳೂರು,ಡಿಸೆಂಬರ್.13: ಉತ್ತಮ, ಶ್ರೇಷ್ಠಮಟ್ಟದ ಸಾಂಸ್ಕೃತಿಕ, ಸಂಗೀತ, ಸಾಹಿತ್ಯ, ಯಕ್ಷಗಾನ, ಕೃಷಿ ಮುಂತಾದ ಹಲವು ಕಾರ್ಯಕ್ರಮಗಳ ಮೂಲಕ ನಗರ ಮತ್ತು ಹಳ್ಳಿಗಳಲ್ಲಿ ಪ್ರತಿನಿತ್ಯ ಸುಮಾರು 30ಲಕ್ಷದಷ್ಟು ಶೋತೃಗಳನ್ನು ಹೊಂದಿರುವ ಮಂಗಳೂರಿನ ಆಕಾಶವಾಣಿಯು ಸ್ವಾಸ್ಥ ಸಮಾಜದ ನಿರ್ಮಾಣ ಮಾಡುವಲ್ಲಿ ಮಾಧ್ಯಮಗಳಿಗೆ ಮಾದರಿಯಾಗಿದೆ ಎಂದು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ  ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.
  ಆಳ್ವಾಸ್ ಕನ್ನಡ ಸಂಸ್ಕೃತಿ ಅಧ್ಯ ಯನ ಕೇಂ ದ್ರದ ಸಹ ಕಾರ ದಲ್ಲಿ ಪ್ರಸಾರ ಭಾರತಿ(ಭಾರ ತೀಯ ಪ್ರಸಾರ ನಿಗಮ) ಆಕಾಶ ವಾಣಿ ಮಂಗ ಳೂರು ಇದರ ಆಶ್ರಯ ದಲ್ಲಿ ಬುಧವಾರ ವಿದ್ಯಾಗಿರಿಯ ರತ್ನಾಕರವರ್ಣೀ ವೇದಿಕೆಯಲ್ಲಿ ನಡೆದ ಆಹ್ವಾನಿತ ಶ್ರೋತೃಗಳ ಸಮ್ಮುಖದಲ್ಲಿ ಯುವಜನರ ಮತ್ತು ವನಿತೆಯರ ವೈವಿಧ್ಯಮಯ ಕಾರ್ಯಕ್ರಮ "ಬಾನುಲಿ ವೈಭವ" ವನ್ನು ಉದ್ಘಾಟಿಸಿ ಮಾತನಾಡಿದರು.
 ಮೂಡುಬಿದಿರೆ ಜೈನ ಮಠದ ಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ಆಶೀರ್ವಚನ ನೀಡಿ ಕರಾವಳಿಯ ಮತ್ತು ಮಲೆನಾಡಿನ ಜನರ ಬದುಕನ್ನು  ಶ್ರೀಮಂತಗೊಳಿಸಿ ಉತ್ತಮ ಜ್ಞಾನವನ್ನು ನೀಡಿದ ಮಾಧ್ಯಮ ಆಕಾಶವಾಣಿ. ಕನ್ನಡ ಮಾತ್ರವಲ್ಲದೆ ಬಹುಗಾಷಿಗರನ್ನು ಈ ಮಾಧ್ಯಮ ಸೆಳೆಯುವುದರ ಮೂಲಕ ಇತರ ಮಾಧ್ಯಮದ ಶ್ರೋತೃಗಳಿಗಿಂತ  ರೇಡಿಯೋ ತನ್ನದೇ ಆದ ಶ್ರೋತೃಗಳನ್ನು ದೇಶದಲ್ಲೇ ವಿಸ್ತರಿಸಿಕೊಂಡಿದೆ ಎಂದು ಹೇಳಿದರು.
 ಮಂಗ ಳೂರು ಆಕಾಶ ವಾಣಿಯ ಡಾ.ವಸಂತ ಕುಮಾರ್ ಪೆರ್ಲ ಅಧ್ಯಕ್ಷ ತೆಯನ್ನು ವಹಿಸಿ ಮಾತ ನಾಡುತ್ತಾ ಆಕಾಶ ವಾಣಿಯ ಒಳಗೆ ಮಾತ್ರ ವಲ್ಲದೆ ಹೊರಗೆ ಜನರ ಬಳಿಗೆ ಬಂದು ಅವರ ನೋವು ನಲಿವಿ ನಲ್ಲಿ ಸ್ಪಂದಿ ಸುವಂ ತಹ ಕೆಲಸ ವನ್ನು ಆಕಾಶ ವಾಣಿ ಮಾಡು ತ್ತಿದೆ ಎಂದರು.
  ಆಕಾಶವಾಣಿಯ ಉಪನಿರ್ದೇಶಕ ಜಿ.ರಮೇಶ್ಚಂದ್ರನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
 ಕೆ.ಅಶೋಕ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಡಾ.ಬಿ.ಎಂ.ಶರಭೇಂದ್ರ ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಡಾ.ಸದಾನಂದ ಪೆರ್ಲ ವಂದಿಸಿದರು.
 ಸಭಾ ಕಾರ್ಯಕ್ರಮದ ನಂತರ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ನಿಟ್ಟೆ ಡಾ.ಎನ್.ಎಸ್.ಎ.ಎಂ.ಪ್ರಥಮದರ್ಜೆ ಕಾಲೇಜು, ಮಿಜಾರಿನ ಆಳ್ವಾಸ್ ಇಂಜಿನಿ ಯರಿಂಗ್ ಕಾಲೇಜು ಮತ್ತು ಆಳ್ವಾಸ್ ಕಾಲೇ ಜಿನ ವಿದ್ಯಾ ರ್ಥಿಗ ಳಿಂದ ಯುವ ವೈಭವ ಹಾಗೂ "ರಂಗ ಮನೆ-ಸುಳ್ಯ" ಇದರ ಸದಸ್ಯ ರಿಂದ ರಂಗ ಗೀತೆ ಮತ್ತು ಜನ ಪದ ವೈವಿಧ್ಯ ಹಾಗೂ ಪುತ್ತೂರು ದರ್ಬೆಯ ಶ್ರೀ ಶಾರದಾ ಕಲಾ ಶಾಲೆಯ ಸದಸ್ಯರಿಂದ ಮತ್ತು ಮಹಿಳೆಯರಿಂದ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ "ಮೇಘ ಸಂಧ್ಯಾ" ನಡೆಯಿತು.

ಆಧಾರ್ ಪ್ರಕ್ರಿಯೆ ದೇಶಕಟ್ಟುವ ಕೆಲಸ:ಅಪರ ಜಿಲ್ಲಾಧಿಕಾರಿ ದಯಾನಂದ

ಮಂಗಳೂರು,ಡಿಸೆಂಬರ್.1: ಆಧಾರ್ ನೋಂದಣಿ ಕಾರ್ಯವೆಂಬುದು ದೇಶ ಕಟ್ಟುವ ಕೆಲಸ; ಈ ಕೆಲಸವನ್ನು ಇಷ್ಟಪಟ್ಟು ಮಾಡಬೇಕೆಂದು ಅಪರ ಜಿಲ್ಲಾಧಿಕಾರಿ ಕೆ ಎ ದಯಾನಂದ ಅವರು ಹೇಳಿದರು.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾದ ಆಧಾರ ದ್ವಿತೀಯ ಹಂತದ ನೋಂದಣಿ ಕಾರ್ಯದ ಯೋಜನೆ ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಹಿನ್ನಲೆಯಲ್ಲಿ 'ಪರಿಶೀಲಕರಿಗಾಗಿ' ಆಯೋಜಿಸಲಾಗಿದ್ದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಆಧಾರ್ ನಡಿ ನೋಂದಣಿಕರಿಸುವುದನ್ನು ಸಮಗ್ರವಾಗಿಸಲು ನಿವೃತ್ತ ಅಧಿಕಾರಿಗಳನ್ನು ಪರಿಶೀಲಕರನ್ನಾಗಿ ನೇಮಿಸಲಾಗಿದ್ದು, ಅವರಿಗಾಗಿ ತರಬೇತಿಯನ್ನು ಆಯೋಜಿಸಲಾಗಿದೆ. ಇದನ್ನು ಮನಸ್ಸಿಟ್ಟು ಮಾಡಬೇಕು. ಪರಿಶೀಲಕರ ಜವಾಬ್ದಾರಿ ಮತ್ತು ಕರ್ತವ್ಯ ಬಹುಮುಖ್ಯವಾಗಿದ್ದು, ಪರಿಶೀಲನೆಯ ನಂತರದ ಪರಿಶೀಲಿಸಿದ ಮಾಹಿತಿಯ ದೋಷಗಳಿಗೆ ಪರಿಶೀಲಕರೇ ಜವಾಬ್ದಾರರು. ಹಾಗಾಗಿ ಕಾರ್ಯಾಗಾರವನ್ನು ಗಂಭೀರವಾಗಿ ತೆಗೆದುಕೊಂಡು ಎಲ್ಲ ಪ್ರಶ್ನೆಗಳಿಗೆ ಉತ್ತರಪಡೆಯುವ ಪ್ರಕ್ರಿಯೆಯು ಇದೇಸಂದರ್ಭದಲ್ಲಾಗಬೇಕು ಎಂದು ಹೇಳಿದರು.
ಪರಿಶೀಲನಾ ಕ್ರಮ, ದಾಖಲಾತಿಗಳ ಪರಿಶೀಲನೆ, ದಾಖಲೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಸಂಪನ್ಮೂಲ ವ್ಯಕ್ತಿಗಳಿಂದ ಪಡೆಯಿರಿ ಎಂದು ಅಪರ ಜಿಲ್ಲಾಧಿಕಾರಿಗಳು ಹೇಳಿದರು.
ವೇದಿಕೆಯಲ್ಲಿ ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರಾದ ಡಾ ಹರೀಶ್ ಕುಮಾರ್, ಮಂಗಳೂರು ವಿಭಾಗದ ಸಹಾಯಕ ಆಯುಕ್ತರಾದ ಡಾ ವೆಂಕಟೇಶ್ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಸತ್ಯಮೂರ್ತಿ, ಇಸಾಕ್ ಅವರು ಕಾರ್ಯಾಗಾರ ನಡೆಸಿಕೊಟ್ಟರು. ಸಂಧ್ಯಾ ಅವರು ಧನ್ಯವಾದ ಸಮರ್ಪಿಸಿದರು.

ಜಿಲ್ಲೆಯಲ್ಲಿ 1907 ಜನ ಎಂಡೋಸಂತ್ರಸ್ತರು


ಮಂಗಳೂರು,ಡಿಸೆಂಬರ್.13:ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ,ಬಂಟ್ವಾಳ,ಸುಳ್ಯ ಮತ್ತು ಪುತ್ತೂರು ತಾಲೂಕುಗಳಲ್ಲಿ 2012 ರ ಡಿಸೆಂಬರ್ 5 ರಿಂದ 8 ರ ವರೆಗೆ 11 ವಿಶೇಷ ತಜ್ಞರ ತಂಡ ನಡೆಸಿದ ಸಮೀಕ್ಷೆಯಂತೆ ಎಂಡೋಸಲ್ಫಾನ್ ಸಿಂಪಣೆಯಿಂದ ಸಂತ್ರಸ್ಥರಾದವರ ಸಂಖ್ಯೆ 1907 ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಓ.ಶ್ರೀರಂಗಪ್ಪ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರ ಹೋರಾಟ ಸಮಿತಿಯವರು ನೀಡಿದ್ದ 92 ಗ್ರಾಮಗಳು ಸೇರಿದಂತೆ ಆರೋಗ್ಯ ಇಲಾಖೆಯ ವಿಶೇಷ ತಂಡಗಳು ಒಟ್ಟು 103 ಗ್ರಾಮಗಳಲ್ಲಿ ಸಮೀಕ್ಷೆಯನ್ನು ನಡೆಸಿದಾಗ ಎಂಡೋ ಸಲ್ಪಾನ್ ಸಿಂಪಡಿಸಿದ ಪ್ರದೇಶಗಳಲ್ಲಿ ಎಂಡೋಸಲ್ಫಾನ್ ಸಂಬಂಧಿಸಿದ ಕಾಯಿಲೆಗಳು 1907 ಜನರಲ್ಲಿ ಕಂಡು ಬಂದಿದೆ ಎಂದು 11 ವಿಶೇಷ ತಜ್ಞರ ತಂಡ ವರದಿ ನೀಡಿದೆ. ವಿಶೇಷ ತಜ್ಞರ ತಂಡದಲ್ಲಿ 7 ಖಾಸಗಿ ವೈದ್ಯಕೀಯ ಮಹಾವಿದ್ಯಾಲಯಗಳಾದ ಕೆಎಂಸಿ,ಯೇನೋಪಯಾ,ಕೆ.ಎಸ್.ಹೆಗ್ಡೆ,ಫಾದರ್ ಮುಲ್ಲರ್ಸ್,ಶ್ರೀನಿವಾಸ,ಎಜೆ ಆಸ್ಪತ್ರೆ,ಸುಳ್ಯದ ಕೆವಿಜೆ ಸೇರಿವೆ. ಈ ಎಲ್ಲಾ ಮಹಾವಿದ್ಯಾಲಯಗಳ ಜೊತೆ ಆರೋಗ್ಯ ಇಲಾಖೆ ತಜ್ಞರ ಸಿಬ್ಬಂದಿಗಳು ಭಾಗವಹಿಸಿದ್ದರು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

Wednesday, December 12, 2012

ಮಕ್ಕಳ ಹಕ್ಕುಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ-ಎನ್.ಪ್ರಕಾಶ್

ಮಂಗಳೂರು,ಡಿಸೆಂಬರ್.12:ಮಗು ಈ ದೇಶದ ಮುಂದಿನ ಪ್ರಜೆ.ಅದು ತನ್ನ ಎಲ್ಲಾ ಹಕ್ಕುಗಳನ್ನು ಪಡೆದುಕೊಂಡು ಉತ್ತಮ ಪ್ರಜೆಯಾಗಿ ರೂಪುಗೊಳ್ಳಬೇಕಿದೆ.ಆದ್ದರಿಂದ ಮಕ್ಕಳ ಹಕ್ಕುಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಎನ್.ಪ್ರಕಾಶ್ ಅವರು ತಿಳಿಸಿದ್ದಾರೆ.
ಅವರು ಇಂದು ಜಿಲ್ಲಾಧಿ ಕಾರಿ ಗಳ ಕಚೇರಿಯ ಸಭಾಂಗ ಣದಲ್ಲಿ ಕರ್ನಾ ಟಕ ರಾಜ್ಯ ಸಮಗ್ರ ಮಕ್ಕಳ ಸೊಸೈಟಿ,ಜಿಲ್ಲಾ ಮಕ್ಕಳ ರಕ್ಷಣಾ ಘಟಕ,ಬಾಲ ನ್ಯಾಯ (ಮಕ್ಕಳ ಪಾಲನೆ ಪೋಷಣೆ)ಅಧಿ ನಿಯಮ 2000,ತಿದ್ದು ಪಡಿ 2006 ಕರ್ನಾಟಕ ನಿಯಮ 2010 ರ ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕಾರ್ಯಾ ಗಾರ ದಲ್ಲಿ ಉಪ ಸ್ಥಿತ ರಿದ್ದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ್ಯೆ ಶ್ರೀಮತಿ ಆಶಾ ನಾಯಕ್ ಅವರು ಮಾತ ನಾಡಿ ಮಕ್ಕಳ ಪಾಲನೆ ಪೋಷಣೆ ಯಲ್ಲಿ ತೊಡ ಗಿರುವ ಎಲ್ಲಾ ಸ್ವಯಂ ಸೇವಾ ಸಂಸ್ಥೆ ಗಳು ಕಡ್ಡಾ ಯವಾಗಿ ನೊಂದಾ ಯಿಸಿ ಕೊಳ್ಳ ಬೇಕು.ಪ್ರತೀ 6 ತಿಂಗ ಳಿಗೊ ಮ್ಮೆ ತಮ್ಮ ಲ್ಲಿರುವ ಮಕ್ಕಳ ಆರೋಗ್ಯ ತಪಾ ಸಣೆ ನಡೆಸಬೇಕು. ಮಕ್ಕಳು 7 ದಿನಗಳಿಗಿಂತ ಹೆಚ್ಚು ಹೊರಗೆ ಹೋಗುವಾಗ ಅಂತಹ ಮಕ್ಕಳ ಬಗ್ಗೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು. ಕಾರ್ಯಾಗಾರದಲ್ಲಿ ಶ್ರೀಮತಿ ರಮೀಳ ಶೇಖರ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.ಹೆಚ್ಚುವರಿ ಜಿಲ್ಲಾಧಿಕಾರಿ ದಯಾನಂದ,ಮಹಾನಗರಪಾಲಿಕೆ ಆಯುಕ್ತ ಹರೀಶ್ ಕುಮಾರ್ ಹಾಜರಿದ್ದರು.
ಇಂದಿನ ಕಾರ್ಯಾಗಾರದಲ್ಲಿ ಜಿಲ್ಲೆಯ ಎಲ್ಲಾ 41 ನೊಂದಾಯಿತ ಮಕ್ಕಳ ಪೋಷಣೆ ಸಂಸ್ಥೆಗಳು ಭಾಗವಹಿಸಿದ್ದವು.ಮಕ್ಕಳ ಜಿಲ್ಲಾರಕ್ಷಣಾಧಿಕಾರಿ ಶ್ರೀಮತಿ ಗ್ರೇಸಿ ಗೋನ್ಸಾಲಿಸ್ ಸ್ವಾಗತಿಸಿ,ಜಿಲ್ಲೆಯಲ್ಲಿ 2284 ಮಕ್ಕಳು 41 ನೋಂದಾಯಿತ ಸಂಸ್ಥೆಗಳಲಿದ್ದಾರೆ ಎಂದರು.

Saturday, December 8, 2012

ಸಮಾಜ ಕಟ್ಟುವ ಕೆಲಸ ದೇವಾಲಯಗಳಿಂದ ಆರಂಭವಾಗಲಿ : ಸಚಿವ ಕೋಟ ಶ್ರೀನಿವಾಸ ಪೂಜಾರಿ

ಮಂಗಳೂರು,ಡಿಸೆಂಬರ್.08:ದೇವಸ್ಥಾನಗಳಲ್ಲಿ ಪೂಜೆ ಮಾಡುವ ಅರ್ಚಕರ ಭಾವುಕತೆ, ಅವರ ಸದ್ವಿಚಾರಗಳು, ಸಂಘರ್ಷ ರಹಿತ ಪರಿಸರ, ಜಾತಿವಾದಗಳಿಂದ ಹೊರತಾದ ವಿಚಾರಧಾರೆ, ನಿಷ್ಕಲ್ಮಷ ಭಕ್ತಿ ಮೂಡುವ ಕೆಲಸಗಳು ಕ್ಷೇತ್ರ ವಠಾರದಲ್ಲಿ ನಡೆಯಬೇಕು. ಈ ಮೂಲಕ ಸಮಾಜ ಕಟ್ಟುವ ಕೆಲಸಗಳು ದೇವಾಲಯಗಳಿಂದ ಪ್ರಾರಂಭವಾಗಬೇಕು ಎಂದು ರಾಜ್ಯ ಮುಜರಾಯಿ ಮತ್ತು ಬಂದರು ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು.
ನಗರದ ಪುರಭವನದಲ್ಲಿ ಧಾರ್ಮಿಕ ದತ್ತಿ ಇಲಾಖೆ ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್ ಇದರ ಆಶ್ರಯದಲ್ಲಿ ಜಿಲ್ಲೆಯಲ್ಲಿರುವ ದೇವಸ್ಥಾನ, ಗರೋಡಿ, ಭಜನಾ ಮಂದಿರಗಳ ಅರ್ಚಕರ, ಸದಸ್ಯರ ಮತ್ತು ವ್ಯವಸ್ಥಾಪನಾ ಸಮಿತಿ ಸದಸ್ಯರ ಒಂದು ದಿನದ ಸಮಾವೇಶ ಹಾಗೂ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಯಾಯ ಪ್ರದೇಶದಲ್ಲಿರುವ ದೇವಾಲಯಗಳಲ್ಲಿ ಪೂಜೆ, ಪುನಸ್ಕಾರಗಳು ವಿಭಿನ್ನವಾಗಿದ್ದರೂ ಎಲ್ಲರ ಆಶಯ ಉತ್ತಮ ಸಮಾಜ ನಿರ್ಮಾಣವೇ ಪ್ರಥಮ ಗುರಿಯಾಗಿದೆ.ಮುಜರಾಯಿ ವ್ಯಾಪ್ತಿಯೊಳಪಡುವ 34,266 ದೇವಾಲಯಗಳ ಸಿಬ್ಬಂದಿಗಳಿಗೆ 6ನೇ ವೇತನ ಆಯೋಗದ ವರದಿ ಶೀಘ್ರದಲ್ಲೇ ಜಾರಿಯಾಗಲಿದೆ.ಜಿಲ್ಲೆಯ 14 ದೇವಾಲಯಗಳ ಸಿಬ್ಬಂದಿಗಳಿಗೆ ಗೃಹ ನಿರ್ಮಾಣ ಮತ್ತು ಗುರುತು ಚೀಟಿ ವಿತರಣೆಗೆ ಆದ್ಯತೆ ನೀಡಲಾಗಿದೆ. 25 ದೇವಾಲಯಗಳನ್ನು ಪ್ರವಾಸಿ ದೇವಾಲಯಗಳನ್ನಾಗಿ ಆಯ್ಕೆ ಮಾಡಿ, ಇಲ್ಲಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಪ್ರತಿ ಕ್ಷೇತ್ರಕ್ಕೆ 1ಕೋಟಿ ರೂ.ಗಳನ್ನು ನೀಡಲಾಗುತ್ತಿದೆ. ಜೊತೆಗೆ, ಅರ್ಚಕರ ಸ್ಥಿತಿಗತಿಗಳನ್ನು ಅರಿತುಕೊಂಡು ಆರ್ಥಿಕವಾಗಿ ಅವರನ್ನು ಸಬಲರನ್ನಾಗಿ ಮಾಡುವ ಕಾರ್ಯ ಕೂಡ ಜೊತೆಯಲ್ಲಿ ನಡೆಯಲಿದೆ ಎಂದರು.
ಅಧ್ಯಕ್ಷತೆಯನ್ನು ಉಪಸಭಾಪತಿ ಎನ್.ಯೋಗೀಶ್ ಭಟ್ ವಹಿಸಿದ್ದರು.ಇದೇ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅರ್ಚಕರಿಗೆ ಗುರುತು ಪತ್ರ ಹಾಗೂ ಆಯ್ದ ಅರ್ಚಕರನ್ನು ಸನ್ಮಾನಿಸಲಾಯಿತು. ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದ ಸಂಚಾಲಕ ಡಾ.ಕೆ.ಪ್ರಭಾಕರ ಭಟ್ ಮಾರ್ಗದರ್ಶಿ ಉಪನ್ಯಾಸ ನೀಡಿದರು. ವಿಧಾನ ಪರಿಷತ್ ಸದಸ್ಯರಾದ ಕ್ಯಾ.ಗಣೇಶ್ ಕಾರ್ಣಿಕ್, ಮೋನಪ್ಪ ಭಂಡಾರಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಅಶೋಕ್, ಎಂಡೋಮೆಂಟ್ ತಹಶೀಲ್ದಾರ್ ಪ್ರಭಾಕರ್ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಡಾ.ಸೋಂದಾ ಭಾಸ್ಕರ್ ಭಟ್ ಸ್ವಾಗತಿಸಿದರು.

Friday, December 7, 2012

'ವಿಧಾನಸಭೆ- 60' ಅಪೂರ್ವ ಛಾಯಾಚಿತ್ರ ಪ್ರದರ್ಶನ ಉದ್ಘಾಟನೆ

ಮಂಗಳೂರು, ಡಿಸೆಂಬರ್.07: ವಾರ್ತಾ ಇಲಾಖೆಯು 'ವಿಧಾನಸಭೆ- 60' ಹೆಸರಿನಲ್ಲಿ ಅಪರೂಪದ ಛಾಯಾಚಿತ್ರ ಪ್ರದರ್ಶನವನ್ನು ಇಂದಿನಿಂದ ಎರಡು ದಿನಗಳ ಕಾಲ (ಡಿಸೆಂಬರ್ 7 ಮತ್ತು 8)  ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಏರ್ಪಡಿಸಿದೆ.
          ಪ್ರದರ್ಶ ನವನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾ ಯತ್ ಮುಖ್ಯ ಕಾರ್ಯ ನಿರ್ವ ಹಣಾ ಧಿಕಾರಿ ಡಾ. ಕೆ. ಎನ್. ವಿಜಯ ಪ್ರಕಾಶ್ ಮತ್ತು ಮಂಗ ಳೂರು ಮಹಾ ನಗರ ಪಾಲಿಕೆ ಆಯುಕ್ತ ರಾದ ಡಾ. ಹರೀಶ್ ಕುಮಾರ್ ಅವರು ಉದ್ಘಾಟಿಸಿದರು. ಮಂಗಳೂರು ವಿ ವಿ ಪ್ರಾಂಶುಪಾಲರಾದ  ಲಕ್ಷ್ಮೀ ನಾರಾಯಣ್ , ವಾಣಿಜ್ಯ ವಿಭಾಗದ ಪ್ರೊಫೆಸರ್ ಉದಯಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
       ವಿಧಾನ ಸಭೆಗೆ 60 ವರ್ಷ ತುಂಬಿದ ಹಿನ್ನೆಲೆ ಯಲ್ಲಿ ರೂಪಿಸ ಲಾಗಿ ರುವ ಈ ಛಾಯಾ ಚಿತ್ರ ಪ್ರದ ರ್ಶನ ದಲ್ಲಿ ರಾಜ್ಯ ಸರ್ಕಾರದ ಪ್ರಮುಖ ಮಜಲು ಗಳು, ಪ್ರಮುಖ ಘಟನೆ ಗಳನ್ನು ಬಿಂಬಿ ಸುವ 250ಕ್ಕೂ ಹೆಚ್ಚು ಚಿತ್ರ ಗಳನ್ನು ಪ್ರದರ್ಶ ನದಲ್ಲಿ ಕಾಣ ಬಹುದು. ಪ್ರದರ್ಶನ ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಸಾರ್ವಜನಿಕರಿಗೆ ಮುಕ್ತವಾಗಿದೆ. ವಿಧಾನ ಸಭೆಯ ವಜ್ರ ಮಹೋತ್ಸವ ಸಂದರ್ಭ ದಲ್ಲಿ ವಿಧಾನ ಸೌಧ ದಲ್ಲಿ ಮೊದಲ ಬಾರಿಗೆ ಈ ಛಾಯಾ ಚಿತ್ರ ಪ್ರದ ರ್ಶನ ಏರ್ಪ ಡಿಸ ಲಾಗಿತ್ತು. ಇದಕ್ಕೆ ನಾಗರಿ ಕರಿಂದ ಅಭೂತ ಪೂರ್ವ ಪ್ರತಿ ಕ್ರಿಯೆ ವ್ಯಕ್ತ ವಾದ ಹಿನ್ನೆಲೆ ಯಲ್ಲಿ ಬೆಂಗ ಳೂರಿನ ಚಿತ್ರ ಕಲಾ ಪರಿ ಷತ್ತಿ ನಲ್ಲಿ ಎರ ಡನೇ ಪ್ರದರ್ಶ ನವನ್ನು ನಡೆ ಸಲಾ ಯಿತು.
  ಇತ್ತೀಚೆಗೆ ಬೆಳಗಾವಿಯಲ್ಲಿ ಸುವರ್ಣ ಸೌಧದ ಉದ್ಘಾಟನೆ ಹಾಗೂ ಮೈಸೂರು ದಸರಾ ವೇಳೆಯೂ ಅಪರೂಪದ ಛಾಯಾಚಿತ್ರ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಇದೇ ಸರಣಿಯ ಅಂಗವಾಗಿ ಈ ಅಪರೂಪದ ಛಾಯಾಚಿತ್ರ ಪ್ರದರ್ಶನವು ಮಂಗಳೂರಿನಲ್ಲಿ ನಡೆಯುತ್ತಿದೆ.


 

Thursday, December 6, 2012

ಉತ್ತಮ ಪರಿಸರ ನಿರ್ಮಾಣ ಎಲ್ಲರ ಕರ್ತವ್ಯ: ಡಾ ಹರೀಶ್


ಮಂಗಳೂರು. ಡಿಸೆಂಬರ್.06: ಉತ್ತಮ ಪರಿಸರ ನಿರ್ಮಾಣ ನಮ್ಮೆಲ್ಲರ ಕರ್ತವ್ಯ ಎಂದು  ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಡಾ.ಹರೀಶ್ ಕುಮಾರ್ ಹೇಳಿದರು.
 ಅವರು ಇಂದು ನಗ ರದ ಅತ್ತಾ ವರ ಸರ ಕಾರಿ ಪ್ರಾಥ ಮಿಕ ಹಾಗು ಪ್ರೌಢ ಶಾಲೆಯ ಆವರ ಣದಲ್ಲಿ ಮಂಗ ಳೂರು ರೋಟರಿ ಪೂರ್ವ ಹಾಗು ಸ್ಥಳೀಯ ಶಾಲಾ ಸಹ ಕಾರ ದೊಂದಿಗೆ ಪಾಸ್ಲಿಕ್ ಬಳಕೆಯ ವಿರುದ್ಧದ ಹಮ್ಮಿಕೊಂಡ ಜಾಗೃತಿ  ಕಾರ್ಯ ಕ್ರಮದ ಸಭೆ ಹಾಗು ಜಾಗೃತಿ ಜಾಥವನ್ನುದ್ದೇಶಿಸಿ ಮಾತನಾಡಿದರು.
ನಮ್ಮಲ್ಲಿ ಇತಿ ಹಾಸ ಪ್ರಜ್ಞೆ ಸಾಕ ಷ್ಟಿದೆ. ಆದರೆ ಆ ಇತಿ ಹಾಸದ ಒಳ್ಳೆಯ ಅಂಶ ಗಳನ್ನು ಅನು ಷ್ಟಾನಕ್ಕೆ ತರು ವಲ್ಲಿ ನಾವು ಎಡ ವಿದ್ದೇವೆ. ಇದು ಅಭಿ ವೃದ್ಧಿಯ ಪರ್ವ ಕಾಲ. ಆದರೆ ಈ ಅಭಿವೃದ್ಧಿಯೊಂದಿಗೆ ಜೀವನದ ಅವಿಭಾಜ್ಯ ಅಂಗವಾಗಿ ಪ್ಲಾಸ್ಟಿಕ್ ಬಳಕೆಯಾಗುತ್ತಿರುವುದು ಪರಿಸರದ ಮೇಲೆ ದೂರಗಾಮಿ ದುಷ್ಪರಿಣಾಮ ಬೀರಲಿದೆ.ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಹಾನಿಯಾಗಲಿದೆ ಎಂದರು.
ಪರಿಸರ ಸಂರ ಕ್ಷಣೆ ನಮ್ಮೆಲ್ಲರ ಹೊಣೆ ಯಾಗಿದೆ ಹಲವು ಜನ ಪರ ಕಾರ್ಯ ಕ್ರಮ ಗಳನ್ನು ಕೇವಲ ಕಾನೂನು ಮೂಲಕ ಅನು ಷ್ಠಾನ ಗೊಳಿಸಿ ಯಶಸ್ಸು ಸಾಧಿ ಸುವುದು ಕಷ್ಟ .ಈ ಸಂದ ರ್ಭದಲ್ಲಿ ಜನರೇ ಪ್ಲಾಸ್ಟಿಕ್ ಬಳಕೆ ಯಿಂದಾ ಗುವ ಹಾನಿ ಯನ್ನು ಮನ ಗಂಡು ಬಳಸುವುದನ್ನು ಕಡಿತಗೊಳಿಸಿದಾಗ ಸಹಜವಾಗಿ ಪ್ಲಾಸ್ಟಿಕ್ ನಿಷೇಧ ಜನರಿಂದಲೇ ಅನುಷ್ಠಾನಗೊಳ್ಳುತ್ತದೆ.ಶತಮಾನದ ಹಿಂದೆ ಜನರು ಪಾಸ್ಟಿಕ್ ಇಲ್ಲದೆ ಬದುಕಿದ್ದಾರೆ.ಹಾಗಿರುವ ಪಾಸ್ಟಿಕ್ ನಿಷೇಧದ ಬಗೆಗಿನ ಬದ್ಧತೆಯನ್ನು ಸಾಮೂಹಿಕವಾಗಿ ಪ್ರದರ್ಶಿಸಬೇಕಾಗಿದೆ .ಪ್ರತಿಯೊಬ್ಬ ನಾಗರೀಕರು ಹೊಣೆಯರಿತು ವರ್ತಿಸುವುದರಿಂದ ಎಲ್ಲರಿಗೂ ಕ್ಷೇಮ .ಇಂದು ಉತ್ಪಾದನೆಯಾಗುತ್ತಿರುವ ಕಸದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ವಿಲೇ ನಮಗೆ ಸವಾಲಾಗಿದೆ ಎಂದರು .
ಮಂಗಳೂರು ನಗರವನ್ನು ಸ್ವಚ್ಛ ಹಾಗೂ ಮಾಲಿನ್ಯ ರಹಿತವಾಗಿಸಲು ಎಲ್ಲರೂ ಒಟ್ಟಾಗಿ ಪ್ಲಾಸ್ಟಿಕ್ ಬಹಿಷ್ಕರಿಸೋಣ ಎಂದು ಕರೆ ನೀಡಿದರು.
   ಸಮಾ ರಂಭ ದಲ್ಲಿ ಮಂಗ ಳೂರು ರೋಟರಿ ಪೂರ್ವ ಅಧ್ಯಕ್ಷ ಗಜೇಂದ್ರ, ಮನಪಾ ಅಧಿ ಕಾರಿ ಮಧು ಎಸ್ ಮನೋ ಹರ್,ಅತ್ತಾ ವರ ಪ್ರಾಥ ಮಿಕ ಶಾಲಾ ಮುಖ್ಯ ಶಿಕ್ಷಕಿ ಹೇಮಾ ವತಿ,ಪ್ರೌಢ ಶಾಲಾ ವಿಭಾ ಗದ ಮುಖ್ಯ ಶಿಕ್ಷಕಿ ಲಿಲ್ಲಿ ಪಾಯಸ್,ರೋಟರಿ ಸಂಸ್ಥೆಯ ಪದಾಧಿಕಾರಿಗಳಾದ ಸದಾಶಿವ ಶೆಟ್ಟಿ,ಫ್ರಾನ್ಸಿಸ್ ಮೊದಲಾದವರು ಉಪಸ್ಥಿತರಿದ್ದರು. 

Wednesday, December 5, 2012

ಎಂಡೋಸಲ್ಫಾನ್ ತಜ್ಞ ಶಿಬಿರದಲ್ಲಿ ಪ್ರಥಮ ದಿನ 1020 ಜನರ ಪರೀಕ್ಷೆ


ಮಂಗಳೂರು, ಡಿಸೆಂಬರ್.05: ಎಂಡೋಸಲ್ಫಾನ್ ಸಿಂಪಡಿಸಿದ ಪ್ರದೇಶದಲ್ಲಿರುವ ಜನರಲ್ಲಿ ಕಂಡು ಬರುವ ಕಾಯಿಲೆಗಳನ್ನು ಕಂಡು ಹಿಡಿಯಲು ವಿಶೇಷ ತಜ್ಞ ಶಿಬಿರಗಳನ್ನು ಪುತ್ತೂರಿನ ಕೊಯ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಬೆಳ್ತಂಗಡಿಯ ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾಗಿದ್ದು ಪ್ರಥಮ ದಿನ ಈ ಪ್ರದೇಶದ 1020 ಜನರ ಪರೀಕ್ಷೆ ನಡೆಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಓ. ಆರ್ ಶ್ರೀರಂಗಪ್ಪ ಹೇಳಿದರು.
              ಪುತ್ತೂರಿನ ಕೊಯ್ಲಾದಲ್ಲಿ 590 ಜನ ಪರೀಕ್ಷೆಗೊಳಗಾಗಿದ್ದಾರೆ. ಇಲ್ಲಿ ಕೆ ಎಸ್ ಹೆಗಡೆ ಮತ್ತು ಯೆನಪೋಯ ಆಸ್ಪತ್ರೆ ಸಹಕಾರದಿಂದ ಶಿಬಿರವು ಯಶಸ್ವಿಯಾಗಿದೆ ಎಂದ ಆರೋಗ್ಯಾಧಿಕಾರಿಗಳು, ಬೆಳ್ತಂಗಡಿಯ ಕೊಕ್ಕಡದಲ್ಲಿ ಫಾದರ್ ಮುಲ್ಲರ್ಸ್ ನಿಂದ ತಜ್ಞ ವೈದ್ಯರು ಆಗಮಿಸಿದ ಕಾರಣ ಪುತ್ತೂರಿನರಿ ಆಸ್ಪತ್ರೆ ಮತ್ತು ಕೊಯ್ಲಾದ ಶಿಬಿರದಲ್ಲಿದ್ದ ಕೆ ಎಸ್ ಹೆಗಡೆ ಆಸ್ಪತ್ರೆಯ ವೈದ್ಯರನ್ನು ಪರ್ಯಾಯವಾಗಿ ನೇಮಿಸಿ ಸೂಕ್ತ ವ್ಯವಸ್ಥೆ ಮಾಡಲಾಯಿತು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಹೇಳಿದ್ದಾರೆ.

ಎಂ.ಆರ್.ಪಿ.ಎಲ್ ನಲ್ಲಿ ರಾಸಾಯನಿಕ ವಿಕೋಪ ನಿರ್ವಹಣೆ ಅಣಕು ಪ್ರದರ್ಶನ

Monday, December 3, 2012

ದ.ಕ:ಜಿಲ್ಲಾಧಿಕಾರಿಯಾಗಿ ಎನ್. ಪ್ರಕಾಶ್ ಅಧಿಕಾರ ಸ್ವೀಕಾರ

ಮಂಗಳೂರು,ಡಿಸೆಂಬರ್.03: ದಕ್ಷಿಣ ಕನ್ನಡದ ನೂತನ ಜಿಲ್ಲಾಧಿಕಾರಿಯಾಗಿ ಎನ್.ಪ್ರಕಾಶ್  ಅವರು ಇಂದು ಅಧಿಕಾರ ವಹಿಸಿ ಕೊಂಡಿದ್ದಾರೆ. ನಿರ್ಗಮನ ಜಿಲ್ಲಾಧಿಕಾರಿ  ಡಾ. ಎನ್.ಎಸ್.ಚನ್ನಪ್ಪ ಗೌಡ ಅವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿರ್ದೇಶಕರಾಗಿ  ವರ್ಗಾವಣೆಗೊಂಡಿದ್ದು;  ಅವರು ನೂತನ ಜಿಲ್ಲಾಧಿಕಾರಿ ಅವರಿಗೆ  ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು.
  ನೂತನ ಜಿಲ್ಲಾಧಿ ಕಾರಿ ಎನ್. ಪ್ರಕಾಶ್ ಅವರು ಇದು ವರೆಗೆ ಕೆ.ಎಸ್ ಆರ್. ಟಿ ಸಿ ನಿರ್ದೇ ಶಕ ರಾಗಿ ದ್ದರು.ಮೂಲತ  ಮೈಸೂರು ಜಿಲ್ಲೆಯ ನಂಜನ ಗೂಡಿ ನವ ರಾದ ಅವರು  ಇತಿ ಹಾಸ ದಲ್ಲಿ ಸ್ನಾತ ಕೋತ್ತರ ಪದವಿ ಮತ್ತು ಕಾನೂನು ಪದವಿ ಪಡೆದಿ ದ್ದಾರೆ. `ಬಿ' ದರ್ಜೆಯ ಅಧಿಕಾರಿಯಾಗಿ 1978 ರಲ್ಲಿ ಸರಕಾರಿ ಸೇವೆಗೆ ಸೇರಿದರು. ವಿಧಾನ ಸೌಧ, ಸಹಕಾರಿ ಇಲಾಖೆ ಮತ್ತು ಲೆಕ್ಕ ಪರಿಶೋಧನಾ ಇಲಾಖೆ ಸೇರಿದಂತೆ ವಿವಿಧ ಪ್ರಮುಖ ಇಲಾಖೆಗಳಲ್ಲಿ  ಸೇವೆ ಸಲ್ಲಿಸಿರುವ ಅವರು 1985ರಲ್ಲಿ ಸಹಾಯಕ ಆಯುಕ್ತರಾಗಿ ಭಡ್ತಿ ಪಡೆದರು. 2011ರಲ್ಲಿ ಭಾರ ತೀಯ ಆಡಳಿತ ಸೇವೆಯ (IAS) ಅಧಿ ಕಾರಿ ಯಾಗಿ ಭಡ್ತಿ ಹೊಂದಿ,
ಬೆಳಗಾಂ, ಕುಂದಾ ಪುರ, ಬಳ್ಳಾರಿ, ಹಾವೇರಿ ಮತ್ತು ಬೆಂಗ ಳೂರಿ ನಲ್ಲಿ ಸಹಾ ಯಕ ಆಯುಕ್ತ ರಾಗಿ ಕೆಲಸ ಮಾಡಿದ ಅನು ಭವ ಹೊಂದಿ ದ್ದಾರೆ. ಮುಖ್ಯ ಮಂತ್ರಿ ಗಳಾದ ಹೆಹ್.ಡಿ. ದೇವೇ ಗೌಡ ಮತ್ತು ಜೆ.ಎಚ್.ಪಟೇ ಲರಿಗೆ ಉಪ ಕಾರ್ಯ ದರ್ಶಿ ಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.. ಎಸ್.ಎಂ.ಕೃಷ್ಣ ಅವರಿಗೆ ಹೆಚ್ಚುವರಿ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ..   ಕೆಪಿಟಿಸಿಎಲ್, ಬಿಎಂಆರ್ ಡಿ, ತೂಕ ಮತ್ತು ಅಳತೆ ಇಲಾಖೆಗಳಲ್ಲೂ ಜವಾಬ್ದಾರಿಯುತ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
   ಅಧಿಕಾರ ಸ್ವೀಕ ರಿಸಿದ ಬಳಿಕ ತಮ್ಮನ್ನು ಭೇಟಿ ಯಾದ ಸುದ್ದಿ ಗಾರೊಂದಿಗೆ ಮಾತ ನಾಡಿದ ಜಿಲ್ಲಾಧಿ ಕಾರಿ ಎನ್. ಪ್ರಕಾಶ್ ಅವರು ಆಡಳಿ ತಕ್ಕೆ ಚುರುಕು ಮುಟ್ಟಿ ಸುವುದು ಮತ್ತು  ಸರ ಕಾರಿ ಕಾರ್ಯ ಕ್ರಮ ಗಳನ್ನು ಪರಿ ಣಾಮ ಕಾರಿ ಯಾಗಿ ಜಾರಿ ಗೊಳಿಸಲಾಗುವುದು ತನ್ನ ಆದ್ಯತೆಗಳಲ್ಲಿ ಒಂದಾಗಿದೆ ಎಂದರು.
ಪ್ಲಾಸ್ಟಿಕ್ ನಿಷೇಧ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಇಲ್ಲಿ ಜನರು ವಿದ್ಯಾವಂತರಾಗಿರುವ ಕಾರಣ ಜಾಗೃತಿ ಮೂಡಿಸುವುದು ಸುಲಭ. ಪ್ಲಾಸ್ಟಿಕ್ ನಿಷೇಧದ ಅಭಿಯಾನ ಮುಂದುವರಿಯಲಿದೆ ಮತ್ತು ಇದರ  ಒಟ್ಟಿಗೆ  ಜಾಗೃತಿ ಕಾರ್ಯಕ್ರಮಗಳು ಇರುತ್ತವೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಅಪರ ಜಿಲ್ಲಾಧಿಕಾರಿ ದಯಾನಂದ ಕೆ.ಎ., ಜಿ.ಪಂ.ಸಿಇಒ ಡಾ.ವಿಜಯಪ್ರಕಾಶ್, ಉಪ ವಿಭಾಗಧಿಕಾರಿ ಡಾ. ವೆಂಕಟೇಶ್, ಪಾಲಿಕೆ ಆಯುಕ್ತರಾದ ಡಾ.ಹರೀಶ್  ಕುಮಾರ್ ಅವರು ನೂತನ ಜಿಲ್ಲಾಧಿಕಾರಿಯವರನ್ನು ಸ್ವಾಗತಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿರ್ದೇಶಕರಾಗಿ  ವರ್ಗಾವಣೆಗೊಂಡಿರುವ ಡಾ.ಎನ್ ಎಸ್. ಚನ್ನಪ್ಪ ಗೌಡ ಅವರು 15.5.2011ರಂದು  ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ಜಿಲ್ಲೆಯ  ತೀರ ಹಿಂದುಳಿದ ರಾಷ್ಟ್ರೀಯ ಉದ್ಯಾನ ವನದ ಪ್ರದೇಶದ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡು ಜನ ಮನ್ನಣೆಗೆ ಪಾತ್ರರಾದರು.  ಸ್ಥಳಿಯ ನಿವಾಸಿಗಳಾದ ಬುಡಕಟ್ಟು ಜನಾಂಗದಲ್ಲಿ ವಿಶ್ವಾಸ ತುಂಬಲು ಯಶಸ್ವಿಯಾದ ಚನ್ನಪ್ಪ ಗೌಡ; ಅಲ್ಲಿನ ಅರ್ಹರಿಗೆ ಉದ್ಯೋಗ, ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮುನ್ನುಡಿ ಬರೆದವರು. ಅಲ್ಲಿನ  ಗ್ರಾಮಗಳಲ್ಲಿಯೇ ಜನ ಸಂಪರ್ಕ ಸಭೆಗಳನ್ನು ನಡೆಸಿ ಅನೇಕ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಿದ್ದಾರೆ.ಎಂಡೋ ಸಲ್ಫಾನ್ ಬಾಧಿತರಿಗೆ ಪುನರ್ವಸತಿ ಕಲ್ಪಿಸುವಲ್ಲಿಯೂ ಡಾ.ಚನ್ನಪ್ಪ ಗೌಡ ಅವರ ಪಾತ್ರ ಹಿರಿದಾದುದು. ಮಂಗಳೂರು ನಗರ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ಅವರು ಪರಿಣಾಮಕಾರಿ ಯೋಜನೆ ರೂಪಿಸಿದ್ದರು.