Wednesday, December 19, 2012

ನೀರು ಪೂರೈಸುವ ಹಳ್ಳಿಗಳಿಗೆ ಜನವಸತಿ ಗ್ರಾಮ ಘೋಷಣೆ

ಮಂಗಳೂರು,ಡಿಸೆಂಬರ್.19: 2,500 ಸಾವಿರ ಜನವಸತಿ ಇರುವ ಗ್ರಾಮಕ್ಕೆ ಪ್ರತಿ ಒಬ್ಬರಿಗೆ 40 ಲೀಟರ್ ನೀರಿನಂತೆ 10,000 ಲೀಟರ್ ನೀರನ್ನು ಜನರಿಗೆ ಪೂರೈಸಲು ಸಾಧ್ಯವಾದರೆ ಅದನ್ನು ಜನವಸತಿ ಗ್ರಾಮ ಎಂದು ಘೋಘಿಸಲಾಗುವುದು. ಗ್ರಾಮಕ್ಕೆ ನೀರು ಪೂರೈಸಲಾಗುತ್ತದೆ.  ನೀರು ಪೂರೈಸಲು ಸಾಧ್ಯವಾಗಿಲ್ಲವಾದರೆ ಆ ಗ್ರಾಮಕ್ಕೆ ಬೋರ್ವೆಲ್ ಇಳುವರಿ ಸಾಮತ್ರ್ಯ ಕಡಿಮೆಯಾದರೆ ಅದನ್ನು ಹೆಚ್ಚಿಸಲಿಕ್ಕೆ ಪ್ರಯತ್ನಪಡಲಾಗುತ್ತದೆ ಹಾಗು ಈ ಯೋಜನೆಯಲ್ಲಿ ಶಾಲೆಗಳಿಗೆ ಹಾಗೂ ಅಂಗನವಾಡಿಗಳಿಗೆ ನೀರು ಪೂರೈಸಲಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಇಂಜಿನಿಯರಿಂಗ್ ವಿಭಾಗ, ಕಾರ್ಯನಿರ್ವಾಹಕ ಅಧಿಕಾರಿಯಾದ  ಸತ್ಯನಾರಾಯಣ ಅವರು ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ಭಾರತ ಸರ್ಕಾರದ ವಾರ್ತಾ ಶಾಖೆ ಹಮ್ಮಿಕೊಂಡಿರುವ 3 ದಿನಗಳ ಮಾಹಿತಿ ಆಂದೋಲನದ ಎರಡನೇ ದಿನವಾದ ಇಂದು ರಾಷ್ಟ್ರೀಯ ಕುಡಿಯುವ ನೀರು ಯೋಜನೆ, ಕೃಷಿ, ತೋಟಗಾರಿಕೆ, ರೇಷ್ಮೆ, ಜಲಾನಯನ ಹಾಗೂ ಭರತ ನಿರ್ಮಲ ಅಭಿಯಾನ (ಟಿ.ಎಸ್.ಸಿ.) ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು,
ಜಿಲ್ಲಾ ನೆರವು ಘಟಕದ ಸಂಯೋಜಕರಾದ ಶ್ರೀಮತಿ ಮಂಜುಳಾ ಅವರು ಮಾತನಾಡಿ ಗ್ರಾಮೀಣ ಜನರಿಗೆ ಯೋಜನೆ ಇದೆಯೋ ಅದರ ಬಗ್ಗೆ ಅರಿವು ಮೂಡಿಸುವುದು ಅಗತ್ಯ. ಅದ್ದರಿಂದ ಸ್ವಯಂಪ್ರೇರಿತರಾಗಿ ಅನುಸರಿಸಿದಾಗ ಮಾತ್ರ ಈ ಕಾರ್ಯಕ್ರಮ ಯಶಸ್ಸು ಹೊಂದಲು ಸಾಧ್ಯವಾಗುತ್ತದೆ. ಹೊರತು ಕೇವಲ ಸಹಾಯ ಧನ ಪ್ರೋತ್ಸಾಹ ಧನದಿಂದ ಈ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯವಿಲ್ಲ. ನಿರ್ಮಲ ಭಾರತ ಅಡಿಯಲ್ಲಿ ಶೌಚಾಲಯ ನಿರ್ಮಿಸಲು ಬಿ.ಪಿ.ಎಲ್ ಕಾಡರ್ುದಾರರಿಗೆ ಹಾಗೂ ಎ.ಪಿ.ಎಲ್, ಕಾರ್ಡುದಾರರಿಗೆ ಮಹಿಳೆ ಮುಖ್ಯಸ್ಥರು ಹಾಗು ಅಂಗವಿಕಲರಿಗೆ 1.4.12 ರಿಂದ 4-700 ರೂ ಅನುದಾನ ನೀಡಲಾಗುತ್ತದೆ ಎಂದು ಹೇಳಿದರು.
ಪುತ್ತೂರಿನ ಕಡಬ ಗ್ರಾಮಪಂಚಾಯಿತಿಯ ಘನ ಹಾಗೂ ದ್ರವ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಮಾಡುವಲ್ಲಿ ರಾಜ್ಯಕ್ಕೆ  ಮಾದರಿಯಾಗಿದೆ ಎಂದು ಈ ಸಂದರ್ಭದಲ್ಲಿ ಅವರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಅಬ್ದುಲ್ ನಹೀಮ್ ಅವರು ಮಾತನಾಡಿ ನಮ್ಮಲ್ಲಿ ನೀರಾವರಿ ಸೌಲಭ್ಯವಿಲ್ಲ ಮಳೆಯನ್ನು ನಂಬಿ ಕೃಷಿ ಮಾಡುವ ಹಾಗಿದೆ ಎಂದು ರಸಗೊಬ್ಬರ ಬಳಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭೂಮಿಯಲ್ಲಿ ಸವಳು ಜವಳು ಪ್ರಮಾಣ ಹೆಚ್ಚುತ್ತಿದ್ದು, ರೈತರು ಹೇಗೆ ಅದನ್ನು ನಿವಾರಿಸಬಹುದು ಎಂಬ ಬಗ್ಗೆ ಸಲಹೆ ನೀಡಿದರು.
ಜಲಾಂತರ್ಗಾಮಿ ಪಂಪ್ ಸೆಟ್ ಗಳಿಗೆ ಶೇ 90 ರಷ್ಟು ಸಹಾಯಧನ , ಹಾಗೂ ಕೃಷಿ ಮಾಡುವ ಸಮಯದಲ್ಲಿ ರೈತರಿಗೆ ಹಾವು ಕಡಿದರೆ ಒಂದು ಲಕ್ಷ ರೂಪಾಯಿಗಳು ಪರಿಹಾರ ಧನ, ಮುಸುಕಿನ ಜೋಳ ಉತ್ಪಾದನೆಗೆ ರಸಗೊಬ್ಬರ ಹಾಗು ಲಘು ಪೋಷಕಾಂಶಗಳಿಗೆ ಶೇ 50 ರಷ್ಟು ಸಹಾಯ ಧನ ನೀಡಲಾಗುವುದು ಎಂದು ಈ ಸಂದರ್ಭದಲ್ಲಿ ಅವರು ಹೇಳಿದರು.
ಪುತ್ತುರು ತಾಲೂಕು, ತೋಟಗಾರಿಕೆ ಇಲಾಖೆ, ಸಹಾಯಕ ನಿರ್ದೇಶಕ ಪ್ರವೀಣ್ ಮೊದಲಾದವರು ಈ ಕಾರ್ಯಾಗಾರದಲ್ಲಿ ಮಾತನಾಡಿದರು.