Wednesday, December 26, 2012

ವಿಟ್ಲ ಪಂಚಲಿಂಗೇಶ್ವರ ದೇವಾಲಯ: ಪೂರ್ವಭಾವಿ ಸಭೆ

ಮಂಗಳೂರು, ಡಿಸೆಂಬರ್.27:-ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಸಮರ್ಪಣೆ ಪುನ:ಪ್ರತಿಷ್ಠಾಷ್ಟಬಂಧ ಬ್ರಹ್ಮ ಕಲಶಾಭಿಷೇಕೋತ್ಸವ ಜನವರಿ 9ರಿಂದ 21ರವರೆಗೆ ನಡೆಯಲಿದ್ದು, ಈ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಸೇರುವ ಹಿನ್ನಲೆಯಲ್ಲಿ ಕಾರ್ಯಕ್ರಮವನ್ನು ಸುಗಮವಾಗಿ ನಿರ್ವಹಿಸಲು ಸಂಸದ ನಳಿನ್ ಕುಮಾರ್ ಕಟೀಲ್ ಅವರ ಅಧ್ಯಕ್ಷತೆಯಲ್ಲಿ ವಿಟ್ಲದ ಅನಂತ ಸದನದಲ್ಲಿ ಇಂದು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಯಿತು.
  ಜಿಲ್ಲೆಯ ಅತ್ಯಂತ ಪುರಾ ತನ ಸುಮಾರು 400 ವರ್ಷ ಗಳ ಐತಿಹ್ಯ ವುಳ್ಳ ದೇವಾ ಲಯದ ಜೀರ್ಣೋ ದ್ಧಾರ ಮತ್ತು 150 ವರ್ಷ ಗಳ ನಂತರ ಬ್ರಹ್ಮ ಕಲಶ ನಡೆ ಯುತ್ತಿ ರುವ ವೇಳೆ ಯಲ್ಲಿ ಜನವರಿ 9ರಂದು ರಾಜ್ಯದ ಮುಖ್ಯ ಮಂತ್ರಿ ಗಳು ಬರುವ ನಿರೀಕ್ಷೆ ಯಿದ್ದು, ಸಮಾ ರಂಭ ಸುಲಲಿ ತವಾಗಿ ನಡೆ ಯಲು ಎಲ್ಲಾ ಇಲಾಖಾ ಧಿಕಾರಿಗಳು ಸಂಪೂರ್ಣ ಸಹಕಾರ ನೀಡಬೇಕೆಂದು ಸಂಸದರು ಹೇಳಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಎನ್. ಪ್ರಕಾಶ್ ಅವರು, ಅಧಿಕಾರಿಗಳು ಈ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಮುಖ್ಯವಾಗಿ ಲೋಕೋಪಯೋಗಿ, ಮೆಸ್ಕಾಂ ಮತ್ತು ಪೊಲೀಸ್ ವ್ಯವಸ್ಥೆಯ ಹೊಣೆ ಹಿರಿದಾಗಿದ್ದು ಇಲಾಖಾಧಿಕಾರಿಗಳು ಸ್ವಯಂಪ್ರೇರಿತರಾಗಿ ಕಾರ್ಯಕ್ರಮದಲ್ಲಿ ತೊಡಗಿಕೊಂಡು ಕಾರ್ಯಕ್ರಮದ ಯಶಸ್ವಿಗೆ ಸ್ಪಂದಿಸಬೇಕೆಂದರು. ಮುಖ್ಯವಾಗಿ ಜನವರಿ 9, 18 ,21ರಂದು ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದು, ಸಂಚಾರ ವ್ಯವಸ್ಥೆ ಮತ್ತು ಸುರಕ್ಷತೆಯ ಬಗ್ಗೆ ಪೊಲೀಸ್ ಇಲಾಖೆ ಹೆಚ್ಚಿನ ಕಾಳಜಿ ವಹಿಸಬೇಕೆಂದರು.
ದೇವಳದ ಆಡಳಿತಮಂಡಳಿಯೊಂದಿಗೆ ಸಮನ್ವಯ ಸಾಧಿಸಿ, ಪರಸ್ಪರ ಸಹಕಾರದಿಂದ ಸಂಕ್ಷಿಪ್ತ ಅವಧಿಯಲ್ಲಿ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕೆಂದ ಅವರು, ಸಭೆಗೆ ಬಾರದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಲೋಕೋಪಯೋಗಿ ಇಲಾಖೆ ಎಕ್ಸಿಕ್ಯೂಟಿವ್ ಇಂಜಿನಿಯರ್  ಗೋಪಾಲ್ ನಾಯಕ್ ಅವರು ಮಾತನಾಡಿ, ಡಿಸೆಂಬರ್ 30ರೊಳಗೆ ರಸ್ತೆ ಕಾಮಗಾರಿ ಸಂಪೂರ್ಣಗೊಳಿಸುವುದಾಗಿ ನುಡಿದರು. ರಸ್ತೆ ಬದಿಯಲ್ಲಿರುವ ಮೆಸ್ಕಾಂನ ಕಂಬಗಳ ಸ್ಥಳಾಂತರಿಸುವ ಕುರಿತು ನಾಳೆ ಮೆಸ್ಕಾಂ ಮತ್ತು ಲೋಕೋಪಯೋಗಿ ಇಲಾಖಾಧಿಕಾರಿಗಳ ಸಭೆಯನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆಯುವುದಾಗಿ ಜಿಲ್ಲಾಧಿಕಾರಿಗಳು ಹೇಳಿದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ  ಎಲ್ ಎನ್ ಕೂಡೂರು ಅವರು ಜಿಲ್ಲಾಡಳಿತದಿಂದಾಗ ಬೇಕಾದ ನೆರವುಗಳನ್ನು ಪಟ್ಟಿ ಮಾಡಿದರು. ಸ್ಥಳದಲ್ಲಿ ನೀರಿನ ಕೊರತೆ ಇಲ್ಲ; ಆದರೆ ಸುಮಾರು 20,000 ಲೀಟರ್ ನೀರಿನ ಟ್ಯಾಂಕ್ ನೀರು ಸಂಗ್ರಹಿಸಲು ಮತ್ತು ನೀರು ಕೊಂಡೊಯ್ಯಲು ಟ್ಯಾಂಕರುಗಳ ಅಗತ್ಯವಿದೆ ಎಂದರು.
        ಸಂಸ ದರು ಈ ಸಮಸ್ಯೆ ಗಳನ್ನು ಪರಿ ಹರಿ ಸುವು ದಾಗಿ ಭರ ವಸೆ ನೀಡಿದ ಬಳಿಕ, ಲೋಕೋ ಪಯೋಗಿ ಇಲಾಖೆ ಯಿಂದ ವಾಹನ ಸಂಚ ರಿಸಲು ಯೋಗ್ಯ ರಸ್ತೆ, ವೇದಿಕೆ ನಿರ್ಮಾಣ, ಚಪ್ಪರ ಗಳನ್ನು ಪರಿ ಶೀಲಿಸ ಬೇಕೆಂ ದರು. ದೇವಾ ಲಯದ ಪುಷ್ಕರಿಣಿ ನವೀಕರಿಸಲು 18.50 ಲಕ್ಷ ರೂ., ಹಾಗೂ ಶೌಚಾಲಯ ನಿರ್ಮಾಣಕ್ಕೆ 4 ಲಕ್ಷ ರೂ.,ಬಿಡುಗಡೆ ಮಾಡಲು ಕ್ರಮಕೈಗೊಳ್ಳುವುದಾಗಿ ಹೇಳಿದರು. ಈ ದಿನಗಳಲ್ಲಿ ಯಾವುದೇ ಕಾರಣಕ್ಕೂ ಪವರ್ ಕಟ್ ಇರಬಾರದೆಂದ ಸಂಸದರು, ಮೆಸ್ಕಾಂ ಮತ್ತು ಅಗ್ನಿಶಾಮಕ ಪಡೆಯವರು ವ್ಯವಸ್ಥೆಗಳನ್ನು ಅಧಿಕಾರಿಗಳು ಖುದ್ದಾಗಿ ನಿಂತು ಪರಿಶೀಲಿಸಿ ಸಮ್ಮತಿ ಪತ್ರನೀಡಬೇಕೆಂದರು. ಈ ದಿನಗಳಲ್ಲಿ ಸಂತೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಆರೋಗ್ಯ ಇಲಾಖೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಸದರು ಸಲಹೆ ಹಾಗೂ ಸೂಚನೆಗಳನ್ನು ಜಿಲ್ಲಾ ಆರೋಗ್ಯಾಧಿಕಾರಿ ( ಪ್ರಭಾರ) ಡಾ. ರಾಮಕೃಷ್ಣ ರಾವ್ ಅವರಿಗೆ ನೀಡಿದರು. ಅಗತ್ಯ ಬಿದ್ದಲ್ಲಿ ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ನೆರವನ್ನು ಪಡೆಯಲೂ ಸಂಸದರು ಸೂಚಿಸಿದರು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದ್ದು, ತ್ಯಾಜ್ಯ ವಿಲೇಗೂ ಕ್ರಮಕೈಗೊಳ್ಳಲು ಸಹಕಾರ ಹಾಗೂ ಸಲಹೆಗಳನ್ನು ನೀಡಿದರು. ನೀರು ವಿತರಣೆ, ಊಟದ ವ್ಯವಸ್ಥೆಯ ಬಗ್ಗೆ ಈ ಸಂದರ್ಭದಲ್ಲಿ ಯಾವುದೇ ಗೊಂದಲಗಳಾದಂತೆ ನೆರವಿಗಾಗಿ ಉತ್ತಮ ಸ್ವಯಂಸೇವಕರ ಪಡೆಯನ್ನು ದೇವಾಲಯದ ಆಡಳಿತ ಮಂಡಳಿ ಪಡೆದಿದ್ದು ಅವರನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ ಎಂದರು. ಕರಸೇವೆ ದೇವಾಲಯ ಪುನರ್ ನಿಮರ್ಾಣ ಸಂದರ್ಭದಲ್ಲೂ ಪರಿಣಾಮಕಾರಿಯಾಗಿ ನಡೆದಿದೆ. ಎಲ್ಲರೂ ತಮ್ಮ ಮನೆಯ ಕೆಲಸದಂತೆ ದೇವಾಲಯದ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದ ಸಂಸದರು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೆ ಕಾರ್ಯತತ್ಪರಾಗಬೇಕೆಂದರು. ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರಲ್ಲದೆ ಕಾರ್ಯಕ್ರಮದ ಬೆಳವಣಿಗೆ ಬಗ್ಗೆ ಜನವರಿ ಒಂದರಂದು ಮತ್ತೆ ಆಗಮಿಸಿ ಪರಿಶೀಲನೆ ನಡೆಸುವುದಾಗಿಯೂ ನುಡಿದರು.
ಸಭೆಯಲ್ಲಿ ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ್ ಸ್ವಾಮೀಜಿ, ಪುತ್ತೂರಿನ ಶಾಸಕರಾದ ಶ್ರೀಮತಿ ಮಲ್ಲಿಕಾ ಪ್ರಸಾದ್, ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಕೆ ಟಿ ಶೈಲಜಾ ಭಟ್,  ಸಹಾಯಕ ಆಯುಕ್ತರಾದ ಡಾ ವೆಂಕಟೇಶ್, ಪುತ್ತೂರು ಎ ಎಸ್ ಪಿ ಅನುಚೇತ್, ಆರ್ ಟಿ ಒ ಮಲ್ಲಿಕಾರ್ಜುನ್, ಬಂಟ್ವಾಳ ತಹಸೀಲ್ದಾರ್ ಆನಂದ ನಾಯಕ್,  ಕೆ ಎಸ್ ಆರ್ ಟಿ ಸಿ ಅಧಿಕಾರಿಗಳು, ಅಗ್ನಿಶಾಮಕ ದಳದ ಮುಖ್ಯಸ್ಥರಾದ ವರದರಾಜ್ ಅವರನ್ನೊಳಗೊಂಡಂತೆ ದೇವಾಲಯದ ಆಡಳಿತ ಮಂಡಳಿಯವರು, ಸ್ಥಳೀಯರು ಉಪಸ್ಥಿತರಿದ್ದರು.