Friday, December 14, 2012

ನಂದಿನಿ ಜಾನಪದ ಸ್ಪರ್ಧೆ

ಮಂಗಳೂರು, ಡಿಸೆಂಬರ್.14:- ಸಮಗ್ರ ಆಹಾರ ಹಾಲಿನ ಉಪಯೋಗದ ಬಗ್ಗೆ ಅರಿವು ಮೂಡಿಸಲು ಅತ್ಯಂತ ಸಮೃದ್ಧ ಮಾಧ್ಯಮ ಜಾನಪದವನ್ನು ಬಳಸಿಕೊಂಡು ಬೆಳೆಯುವ ಮಕ್ಕಳಲ್ಲಿ ಜ್ಞಾನವನ್ನು ಹೆಚ್ಚಿಸುವ ಕೆಲಸದಲ್ಲಿ ದಕ್ಷಿಣ ಕನ್ನಡ ಹಾಲು ಒಕ್ಕೂಟ (ನಂದಿನಿ) ನಿರತವಾಗಿರುವುದು ಅಭಿನಂದನಾರ್ಹ ಎಂದು ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ಹರೀಶ್ ಕುಮಾರ್ ಹೇಳಿದರು.
            ದಕ್ಷಿಣ ಕನ್ನಡ ಹಾಲು ಒಕ್ಕೂ ಟವು  ತಾಲೂಕು ಮಟ್ಟದ  ಜಾನ ಪದ ಸ್ಪರ್ಧೆಯ ಅಂತಿಮ ಹಂತ ವನ್ನು ಕುಲ ಶೇಖರದ ಕೊರ್ಡೆಲ್ ಹಾಲ್  ನಲ್ಲಿ ಆಯೋ ಜಿಸಲಾ ಗಿದ್ದು, ಸಾಂಸ್ಕೃತಿಕ ಕಾರ್ಯ ಕ್ರಮದ ಅಧ್ಯ ಕ್ಷತೆ ವಹಿಸಿ ಅವರು ಮಾತ ನಾಡುತ್ತಿದ್ದರು.
ಹೈನುಗಾರಿಕೆ ಮತ್ತು ಕೃಷಿ ಸೊರಗುತ್ತಿರುವ ಸಂದರ್ಭದಲ್ಲಿ ಯುವ ಜನಾಂಗವನ್ನು ಈ ಕ್ಷೇತ್ರದತ್ತ ಆಕರ್ಷಿಸುವುದು ಹಾಗೂ ಈ ಬಗ್ಗೆ ಅವರಿಗೆ ಮಾಹಿತಿ ನೀಡುವ ಕಾರ್ಯಕ್ರಮ ಆಯೋಜಿಸುತ್ತಿರುವುದು ಉತ್ತಮ ಕೆಲಸ ಎಂದು ದಕ್ಷಿಣ ಕನ್ನಡ ಹಾಲು ಒಕ್ಕೂಟದ ಕಾಯಕವನ್ನು ಶ್ಲಾಘಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಮಾ ರಂಭ ದಲ್ಲಿ ಕ್ಷೇತ್ರ ಶಿಕ್ಷಣಾ ಧಿಕಾರಿ ಶ್ರೀಮತಿ ರಾಜ ಲಕ್ಷ್ಮಿ, ಪಶು ಸಂಗೋ ಪನ ಇಲಾ ಖೆಯ ಉಪ ನಿರ್ದೇ ಶಕ ರಾದ ಡಾ. ಕೆ. ವಿ ಹಲ ಗಪ್ಪ ಪಾಲ್ಗೊಂ ಡರು. ಪ್ರಾಸ್ತಾ ವಿಕ ಮಾತು ಗಳ ನ್ನಾಡಿದ ದಕ್ಷಿಣ ಕನ್ನಡ ಹಾಲು ಒಕ್ಕೂ ಟದ ವ್ಯವ ಸ್ಥಾ ಪಕ ನಿರ್ದೇ ಶಕರಾದ ಎಂ ವಿ ಸತ್ಯ ನಾರಾಯಣ ಅವರು ಕಾರ್ಯಕ್ರಮದ ಉದ್ದೇಶ ವಿವರಿಸುತ್ತಾ, ಉಡುಪಿಯ ಮೂರು ತಾಲೂಕು ಮತ್ತು ದಕ್ಷಿಣ ಕನ್ನಡದ ನಾಲ್ಕು ತಾಲೂಕುಗಳಲ್ಲಿ ತಾಲೂಕು ಮಟ್ಟದ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಡಿಸೆಂಬರ್ 19 ರಂದು ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ ಅಂತಿಮ ಸುತ್ತಿನ ಕಾರ್ಯಕ್ರಮಗಳು ನಡೆಯಲಿವೆ ಎಂದರು. ಸುಬ್ಬರಾವ್ ಸ್ವಾಗತಿಸಿದರು. ಜಾನೆಟ್ ವಂದಿಸಿದರು. ಅಪರಾಹ್ನ ಸ್ಪರ್ಧಾ ವಿಜೇತರನ್ನು ಸೈಂಟ್ ಜೋಸೆಫ್ ಶಾಲೆಯ ಮುಖ್ಯೋಪಾಧ್ಯಾಯರಾದ ವಿನುತ ಡಿ ಸೋಜಾ ಸನ್ಮಾನಿಸಿದರು.