Thursday, December 20, 2012

' ಜನರಲ್ಲಿ ಮಾಹಿತಿ ಹಕ್ಕಿನ ಜಾಗೃತಿ ಅಗತ್ಯ'

ಮಂಗಳೂರು,ಡಿಸೆಂಬರ್.20: ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ಭಾರತ ಸರ್ಕಾರದ ವಾರ್ತಾ ಶಾಖೆ ಹಮ್ಮಿಕೊಂಡಿರುವ 3 ದಿನಗಳ ಮಾಹಿತಿ ಆಂದೋಲನದ ಮೂರನೇ ದಿನವಾದ ಇಂದು ಸರ್ವ ಶಿಕ್ಷಣ ಅಭಿಯಾನ, ಮಧ್ಯಾಹ್ನ ಬಿಸಿಯೂಟ ಯೋಜನೆ, ಸ್ವಸಹಾಯ ಸಂಘಗಳು, ಮಾಹಿತಿ ಹಕ್ಕು ಖಾಯ್ದೆ, ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗಳ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು.

 ಜಿ.ಪಂಉಪ ಕಾರ್ಯದರ್ಶೀ ಶಿವರಾಮೇಗೌಡ ಮಾಹಿತಿ ಹಕ್ಕಿನ ಬಗ್ಗೆ ವಿಶೇಷ ಉಪನ್ಯಾಸ ನೀಡುತ್ತಿರುವುದು
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶಿವರಾಮೇಗೌಡ ಮಾಹಿತಿ ಹಕ್ಕಿನ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಅಕ್ಷರ ದಾಸೋಹದ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ, ಅಕ್ಷರ ದಾಸೋಹದ ಜಿಲ್ಲಾ ಶಿಕ್ಷಣಾಧಿಕಾರಿ  ಶ್ರೀಮತಿ ಮಂಜುಳಾರವರು ಈ ಕಾರ್ಯಕ್ರಮ ಪ್ರಮುಖ ಉದ್ದೇಶಗಳು ಅಕ್ಷರ ದಾಸೋಹದಲ್ಲಿ ಆಹಾರ ಸೇವನೆಯಿಂದ ಮಗು ಬಲಿಷ್ಠವಾಗಿ ಬೆಳೆಯಬೇಕು ಮುಂದೆ ಆ ಮಗು ನಮ್ಮ ಬಲಿಷ್ಠ ಭಾರತ ನಿರ್ಮಾಣ  ಸಹಕಾರಿಯಾಗಬೇಕೆಂಬುದು ಇದರ ಮುಖ್ಯ ಉದ್ದೇಶ ಹಾಗು ನಮ್ಮ ಜಿಲ್ಲೆಯಲ್ಲಿ 806 ಅಡಿಗೆ ಕೋಣೆಗಳಿವೆ ಹಾಗೂ ಪ್ರತಿ ದಿನ ಪ್ರತಿ ಮಕ್ಕಳಿಗೆ 1 ರಿಂದ 5ನೇ ತರಗತಿಯವರೆಗೆ 3 ರೂ 11ಪೈಸೆ ಹಾಗು 6 ರಿಂದ 7 ತರಗತಿ ಮಕ್ಕಳಿಗೆ 4 ರೂ 68 ಪೈಸೆ ಮತ್ತು 8 ರಿಂದ 10ನೇ ತರಗತಿ ಮಕ್ಕಳಿಗೆ 6 ರೂ. 68 ಪೈಸೆ ಪ್ರತಿ ದಿನ ಮಕ್ಕಳಿಗೆ ವೆಚ್ಚವಾಗುತ್ತಿದೆ ಎಂದು ತಿಳಿಸಿದರು.
ಮಂಗಳೂರಿನ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ, ಯೋಜನಾ ನಿರ್ದೇಶಕರಾದ ನಾಗೇಶ್ ಯೋಜನೆ ಬಗ್ಗೆ ವಿವರಿಸಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ, ಜಿಲ್ಲಾ ನಿರೂಪಣಾ ಅಧಿಕಾರಿ, ಸುಂದರ ಪೂಜಾರಿ, ಐ.ಸಿ.ಡಿ.ಎಸ್. ಹಾಗೂ ಸ್ವಸಹಾಯ ಸಂಘಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಭಾರತ ಸರ್ಕಾರ ವಾರ್ತಾ ಶಾಖೆಯ, ಹೆಚ್ಚುವರಿ ಮಹಾ ನಿರ್ದೇಶಕರಾದ ಎಸ್. ವೆಂಕಟೇಶ್ವರ್, ಕ್ಷೇತ್ರ ಪ್ರಚಾರಾಧಿಕಾರಿ ಜಿ. ತುಕಾರಾಂ ಗೌಡ, ಕ್ಷೇತ್ರ ಪ್ರದರ್ಶನಾಧಿಕಾರಿ ಪಿ.ಜಿ. ಪಾಟೀಲ್ ಇನ್ನಿತರರು ಉಪಸ್ಥಿತರಿದ್ದರು.