Wednesday, March 7, 2012

'ಸಕಾಲ' ಜಿಲ್ಲಾಧಿಕಾರಿಗಳಿಂದ ಪ್ರಗತಿ ಪರಿಶೀಲನೆ

ಮಂಗಳೂರು,ಮಾರ್ಚ್.07:ನಾಗರಿಕರಿಗೆ ಸಮಯಮಿತಿಯಲ್ಲಿ ಸೇವೆ ಕೊಡುವ ನಾಗರಿಕ ಸೇವಾ ಖಾತರಿ ಕಾಯಿದೆ ಪುತ್ತೂರಿನಲ್ಲಿ ಮಾರ್ಚ್ ಒಂದರಿಂದ ಜಾರಿಗೆ ಬಂದಿದ್ದು,ಈ ಸಂಬಂಧ ಸಂಬಂಧಪಟ್ಟು 11 ಇಲಾಖೆಗಳು ಅರ್ಜಿ ಸ್ವೀಕರಿಸಿ, ಉತ್ತರಿಸಿರುವ ಕುರಿತು ಹಾಗೂ ಎದುರಾದ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ಆಲಿಸಲು ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಸಭೆಯನ್ನು ಕರೆದಿದ್ದರು.ಪುತ್ತೂರು ಆರ್ ಟಿ ಒ ಕಚೇರಿ ಕಾಯಿದೆ ಯಡಿ ಅತೀ ಹೆಚ್ಚು ಅರ್ಜಿ ಗಳನ್ನು ಸ್ವೀಕ ರಿಸಿದ್ದು, ಅರ್ಜಿ ಯನ್ನು ನಿಗ ದಿತ ಸಮ ಯದೊ ಳಗೆ ವಿಲೇ ಮಾಡಲು ಕ್ರಮ ಕೈಗೊಳ್ಳ ಲಾಗು ವುದು ಎಂದು ಆರ್ ಟಿ ಒ ಮಲ್ಲಿ ಕಾರ್ಜುನ್ ಜಿಲ್ಲಾ ಧಿಕಾ ರಿಗಳಿಗೆ ತಿಳಿ ಸಿದರು. ಇಲಾಖೆ ಆನ್ ಲೈನ್ ಆಗಿ ರುವು ದರಿಂದ ಕೆಲವು ತಾಂ ತ್ರಿಕ ಸಮಸ್ಯೆ ಗಳನ್ನು ಹೊರತು ಪಡಿಸಿ ದರೆ ತಮ್ಮ ಇಲಾಖೆ ಯಲ್ಲಿ ಸಕಾಲ ನ್ನು ಯಶಸ್ವಿ ಯಾಗಿ ಜಾರಿಗೊಳಿಸುವುದಾಗಿ ಉತ್ತರಿಸಿದರು.
ಆದರೆ, ಮಂಗಳೂರಿನ ಕಚೇರಿಯಲ್ಲಿ ಇಲಾಖೆಯಲ್ಲಿ ಐದು ಸೇವೆಗೆ ಪ್ರತಿದಿನ 800 ಅರ್ಜಿಗಳು ಬರುತ್ತಿದ್ದು, ತಾಂತ್ರಿಕ ಹಾಗೂ ನುರಿತ ಸಿಬ್ಬಂದಿಗಳ ಅಗತ್ಯವಿದೆ ಎಂಬುದನ್ನು ಆರ್ ಟಿ ಒ ಅವರು ಸಭೆಯ ಗಮನಕ್ಕೆ ತಂದರು.ಇನ್ನು ಪುತ್ತೂರು ಆ ರೋಗ್ಯ ಇಲಾಖೆ ಯಲ್ಲಿ 117 ಅರ್ಜಿ ಗಳು ಬಂದಿದ್ದು, ಅರ್ಜಿ ಗಳ ತುರ್ತು ವಿಲೇಗೆ ಎದು ರಾಗು ತ್ತಿರುವ ಸಮಸ್ಯೆ ಗಳನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಗಳಾದ ಓ ಶ್ರೀ ರಂಗಪ್ಪ ಅವರು ವಿವ ರಿಸಿ ದರು. ಈ ಸಂಬಂ ಧ ತಮ್ಮ ಇಲಾಖಾ ಮುಖ್ಯ ಸ್ಥರ ಗಮನ ಸೆಳೆದಿ ರುವು ದಾಗಿಯೂ ಸಭೆಯ ಗಮನಕ್ಕೆ ತಂದರು. ಎಲ್ಲ 11 ಇಲಾಖೆಗಳು ಕಾಯಿದೆ ಅನುಷ್ಠಾನಕ್ಕೆ ಪೂರಕವಾಗಿ ತಮಗೆ ಬೇಕಿರುವ ಅಗತ್ಯಗಳ ಪಟ್ಟಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದರು.
ಸಕಾಲದ ಸಮಗ್ರ ಅನುಷ್ಠಾನಕ್ಕೆ ಜಿಲ್ಲೆಗೆ ಒಬ್ಬ ನೋಡಲ್ ಅಧಿಕಾರಿ ನೇಮಿಸುವ ಬಗ್ಗೆ ಹಾಗೂ ಈ ಸಂಬಂಧ ದಿನನಿತ್ಯದ ಪ್ರಗತಿಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು. ಏಪ್ರಿಲ್ ಎರಡರಿಂದ ದ.ಕ. ಜಿಲ್ಲೆಯಾದ್ಯಂತ ಪೂರ್ಣ ಪ್ರಮಾಣದಲ್ಲಿ ಕಾಯಿದೆ ಜಾರಿಯಾಗಲಿದ್ದು ಇದಕ್ಕೆ ಪೂರಕವಾಗಿ ಪೂರ್ವ ತಯಾರಿ ನಡೆಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಮಾರ್ಚ್ 12ರಿಂದ 30ರವರೆಗೆ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ ಅಧಿಕಾರಿಗಳಿಗೆ ಈ ಸಂಬಂಧ ಕಾರ್ಯಾಗಾರ ಏರ್ಪಡಿಸಲಾಗಿದ್ದು, ಸಂಬಂಧಪಟ್ಟ ಇಲಾಖೆಯಿಂದ ಅಧಿಕಾರಿಗಳು ಕಾರ್ಯಾಗಾರಕ್ಕೆ ಹಾಜರಾಗಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು.
ಅಪರ ಜಿಲ್ಲಾಧಿಕಾರಿ ಕೆ.ದಯಾನಂದ ಅವರು ಸ್ವಾಗತಿಸಿದರು. ಪುತ್ತೂರು ಎಎಸ್ಪಿ ಅನುಚೇತ್ ಅವರನ್ನೊಳಗೊಂಡಂತೆ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Tuesday, March 6, 2012

ವಾಮದಪದವಿನಲ್ಲಿ ಮಾದರಿ ಆರ್ ಸಿ ಹೆಚ್ ಗಾರ್ಡನ್

ಮಂಗಳೂರು,ಮಾರ್ಚ್.06: ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಆರೋಗ್ಯ ಇಲಾಖೆ ಮಹತ್ವದ ಪಾತ್ರ ವಹಿಸುತ್ತದೆ. ಅದರಲ್ಲೂ ನಮ್ಮ ಗ್ರಾಮೀಣ ಪ್ರದೇಶಗಳ ಜನರಿಗೆ ಸರ್ಕಾರಿ ಆರೋಗ್ಯ ಸೇವೆ ಅನಿವಾರ್ಯ.
ಹಲವು ಸಂದರ್ಭಗಳಲ್ಲಿ, ಹಲವೆಡೆ ಸರ್ಕಾರಿ ಸೌಲಭ್ಯಗಳು ಅದರ ಅನುಷ್ಠಾನಗಳ ಕುರಿತು ಅಪಸ್ವರ ಇರುವ ಸನ್ನಿವೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಾಮದಪದವಿನ ಸಮುದಾಯ ಆರೋಗ್ಯ ಭವನ ಇದಕ್ಕೆಲ್ಲ ಅಪವಾದವಾಗಿದೆ. ಇಲ್ಲಿನ ವೈದ್ಯರು ಮತ್ತು ಅವರ ತಂಡ ಇರುವ ವ್ಯವಸ್ಥೆಯೊಳಗೆ ಜನರಿಗೆ ಹೊಸದನ್ನು ನೀಡುವ ಕುರಿತು ಸದಾ ಚಿಂತಿಸುತ್ತದೆ. ಈ ಚಿಂತನೆಯೊಳಗೆ ಮೂಡಿ ಬಂದುದೇ ಆರ್ ಸಿ ಹೆಚ್ ಗಾರ್ಡನ್. ಆರೋಗ್ಯ ಇಲಾಖೆ ಯಲ್ಲಿ ರಾಷ್ಟ್ರೀಯ ಗ್ರಾ ಮೀಣ ಆರೋಗ್ಯ ಅಭಿ ಯಾನ ಒಂದು ಸಂಚ ಲನ ವನ್ನೇ ಸೃಷ್ಟಿ ಸಿತು.ಈ ಯೋಜನೆ ಯಡಿ ಆರೋಗ್ಯ ಇಲಾಖೆ ಸಬಲ ವಾಯಿತು ಎಂದರೆ ತಪ್ಪಾ ಗಲಾ ರದು. ಆದ್ಯತೆ ಗಳ ಪಟ್ಟಿ ಯಲ್ಲಿ ತಾಯಿ ಮಗು ವಿನ ಆರೋ ಗ್ಯಕ್ಕೆ ಹೆಚ್ಚಿನ ಕಾಳಜಿ ಯನ್ನು ವಹಿಸಲಾಯಿತು.
ಈ ಬಗ್ಗೆ ಗ್ರಾಮೀಣ ಮಹಿಳೆಯರಿಗೆ ಸರಳವಾಗಿ, ಸುಲಭವಾಗಿ ಹಾಗೂ ಮನಮುಟ್ಟುವಂತೆ ಅರ್ಥೈಸಲು ಆರ್ ಸಿ ಹೆಚ್ ಗಾರ್ಡನ್ ವಾಮದಪದವಿನಲ್ಲಿ ಸೃಷ್ಟಿಯಾಯಿತು. ಮಡಿಲು, ತಾಯಿಭಾಗ್ಯ, ಜನನಿ ಸುರಕ್ಷಾ ಯೋಜನೆ, ಪ್ರಸೂತಿ ಆರೈಕೆ, ತಾಯಿ ಭಾಗ್ಯ ಪ್ಲಸ್ ಯೋಜನೆ, ಬಾಣಂತಿಯರಿಗೆ ಪೌಷ್ಠಿಕ ಆಹಾರ ಯೋಜನೆಗಳ ಕುರಿತು ಹೆಣ್ಣು ಮಗುವಿನ ಬೆಳವಣಿಗೆಗೆ ಪೂರಕವಾಗಿ ಸರ್ಕಾರ ಕೈಗೊಂಡ ಯೋಜನೆಗಳನ್ನು ಆಕರ್ಷಕವಾಗಿ ಒಂದು ತೋಟದಲ್ಲಿ ಚಿತ್ರಿಸಲಾಯಿತು. ಅರ್ಹರು ಈ ಎಲ್ಲ ಸೌಲಭ್ಯಗಳನ್ನು ಪಡೆಯ ಬಹುದು ಎಂಬುದನ್ನು ಮನದಟ್ಟು ಮಾಡಲು ಈ ಒಂದು ಹೂದೋಟ ಸಾಕು. ಯಾವುದೇ ಖಾಸಗಿ ಆಸ್ಪತ್ರೆಗಿಂತ ಕಡಿಮೆ ಇಲ್ಲದ ಈ ಸುಸ್ಜಜ್ಜಿತ ಸಮುದಾಯ ಆರೋಗ್ಯ ಕೇಂದ್ರ ಸೇವೆಗೆ ಮಾದರಿಯಾಗಿ ನಿಂತಿದೆ. 12,360 ಜನಸಂಖ್ಯೆಯಿರುವ ಇಲ್ಲಿನ ಬಹುತೇಕ ಜನರು ಆರೋಗ್ಯ ಸೇವೆಯನ್ನು ಪಡೆಯುತ್ತಿರುವುದು ಈ ಸಮುದಾಯ ಆರೋಗ್ಯ ಕೇಂದ್ರದಿಂದಲೇ. ಈ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿಯರಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗುತ್ತಿದೆ.ಅರೋಗ್ಯ ಮತ್ತು ಕುಟುಂ ಬ ಕಲ್ಯಾಣ ಇಲಾಖೆ,ರಾ ಷ್ಟ್ರೀಯ ಗ್ರಾ ಮೀಣ ಆ ರೋಗ್ಯ ಅಭಿ ಯಾನ ಮತ್ತು ಸಮಗ್ರ ಶಿಶು ಅಭಿ ವೃದ್ಧಿ ಯೋಜನೆ ಯಿಂದ ಗರ್ಭಿಣಿ ಮಹಿಳೆ ಯರು ಪಡೆಯ ಬೇಕಾದ ಎಲ್ಲಾ ಮಾಹಿತಿ ಗಳು,ತಾಯಿ ಮತ್ತು ಮಗು ವಿನ ಸುರಕ್ಷಾ ಕಾರ್ಡ್ ನಮೂನೆ, ವೈದ್ಯ ಕೀಯ ಸಲಹೆ ಸೂಚನೆ ಗಳು, ಪ್ರಸವ ನಂತರ ಆರೈಕೆ, ಗರ್ಭಿಣಿ ಮಹಿಳೆಯರ ವೈದ್ಯಕೀಯ ತಪಾಸಣೆ, ಹೆರಿಗೆ ನಂತರದ ಆರೈಕೆ, ಚಿಕಿತ್ಸೆಯ ಅವಶ್ಯಕತೆಗಳು, ಮಗುವಿನ ಆಹಾರ, ಮಗುವಿನ ಲಾಲನೆ-ಪಾಲನೆ, ಪೋಷಣೆ, ನವಜಾತ ಶಿಶುವಿನ ಆರೈಕೆ, ರೋಗಗಳ ಬಗ್ಗೆ, ರೋಗ ನಿರೋಧಕಗಳ ಬಗ್ಗೆ ಸಚಿತ್ರ ಮಾಹಿತಿಗಳು ಆರೋಗ್ಯ ಕೇಂದ್ರದಲ್ಲಿದೆ.
ಇಲ್ಲಿನ ಜನರ ಮುಖ್ಯ ಕಸುಬು ಕೃಷಿ ಮತ್ತು ಬೀಡಿ ಸುತ್ತುವುದು. 1988ರಲ್ಲಿ ಆರಂಭಗೊಂಡ ಈ ಆರೋಗ್ಯ ಕೇಂದ್ರ 1992ರಲ್ಲಿ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿತು. ಡಾ ದುರ್ಗಾಪ್ರಸಾದ್ ಅವರ ಸೇವೆಗೆ ಸಕರ್ಾರ ಹಾಗೂ ಸಮಾಜದಿಂದ ಹಲವು ಪ್ರಶಸ್ತಿಗಳು ಲಭ್ಯವಾಗಿದೆ. ಇವರ ಜೊತೆಯಲ್ಲೇ ಅನುಭವ ಪಡೆದ ಡಾ ನವೀನ್ ಕುಮಾರ್ ಪ್ರಸ್ತುತ ಉಳ್ಳಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇದೇ ಮಾದರಿಯನ್ನು ಉಳ್ಳಾಲದಲ್ಲಿ ಅಳವಡಿಸಿಕೊಳ್ಳುತ್ತಿದ್ದು, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಂದ ಪ್ರಶಂಸೆ ಪಡೆದಿರುತ್ತಾರೆ.
ತಾಯಿಯಂದಿರ ಮತ್ತು ಹೆಣ್ಣು ಮಕ್ಕಳ ಆರೋಗ್ಯವನ್ನು ಗಮನದಲ್ಲಿರಿಸಿ ಆರಂಭಗೊಂಡಿರುವ ಈ ಆರ್ ಸಿ ಹೆಚ್ ಗಾರ್ಡನ್ ಮಾಚ್ರ್ ಐದರಂದು ಜನಪ್ರತಿನಿಧಿಗಳು ಹಾಗೂ ಡಾಕ್ಟರ್ ಗಳ ಉಪಸ್ಥಿತಿಯಲ್ಲಿ ಲೋಕಾರ್ಪಣೆಯಾಯಿತು. ಚಿತ್ರಕಲಾ ಶಿಕ್ಷಕ ಪುರುಷೋತ್ತಮ ಆಚಾರ್ಯ ಅವರು ತಾಯಿ ಮತ್ತು ಮಗುವಿನ ಶಿಲ್ಪವನ್ನು ಬಿಡಿಸಿದ್ದು, ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು.ಈ ಸಂದ ರ್ಭದಲ್ಲಿ ಉಚಿತ ಚರ್ಮ ರೋಗ ತಪಾ ಸಣೆ ಹಾಗೂ ಚಿಕಿತ್ಸಾ ಶಿಬಿರ ಮತ್ತು ಅಂಗನ ವಾಡಿ ಮಕ್ಕ ಳಿಗೆ ಛದ್ಮ ವೇಷ ಸ್ಪರ್ಧೆ, ಭಕ್ತಿ ಗೀತೆ ಸ್ಪರ್ಧೆ, ಚಿತ್ರ ಕಲಾ ಸ್ಪರ್ಧೆ ಯನ್ನು ಹಮ್ಮಿ ಕೊಳ್ಳ ಲಾಗಿತ್ತು. ಬಹು ಮಾನದ ಜೊತೆಗೆ ಎಲ್ಲರಿಗೂ ಬಹು ಮಾನ, ಗೌರವ ಹಾಗೂ ಊಟದ ವ್ಯವಸ್ಥೆ ಯನ್ನು ಮಾಡಲಾಯಿತು. 20 ಅಂಗನವಾಡಿ ಕೇಂದ್ರಗಳು, ಆಶಾ ಕಾರ್ಯಕರ್ತೆಯರು ಮತ್ತು ಸ್ಥಳೀಯರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ಜಿಲ್ಲಾ ಪಂಚಾಯತ್ ಸದಸ್ಯರಾದ ನಳಿನಿ ಬಿ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯರಾದ ರಮೇಶ್ ಕುಡುಮೇರು, ಗ್ರಾಮಪಂಚಾಯತ್ ಅಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ, ಅಲ್ಪಸಂಖ್ಯಾತ ಆಯೋಗದ ಸದಸ್ಯರಾದ ತುಂಗಪ್ಪ ಬಂಗೇರ, ಡಾ ಟೆರ್ರಿ ನ್ಯಾನ್ಸಿ ಲೋಬೋ,ಆರ್ ಸಿ ಹೆಚ್ ಡಾ ರುಕ್ಮಿಣಿ, ಡಾ ಹೇಮಲತಾ, ಡಾ ಕಿಶೋರ್, ಡಾ ದಿನೇಶ್ ಕಾಮತ್ ವೇದಿಕೆಯಲ್ಲಿದ್ದರು.

Saturday, March 3, 2012

ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ

ಇಂದು ಜಿಲ್ಲಾ ಧಿಕಾ ರಿಗಳ ಕಚೇ ರಿಯಲ್ಲಿ ನಡೆದ ಪ್ರಾದೇ ಶಿಕ ಸಾರಿಗೆ ಪ್ರಾಧಿ ಕಾರದ ಸಭೆ ಯಲ್ಲಿ 114 ಅರ್ಜಿ ಗಳನ್ನು ಇತ್ಯರ್ಥ ಪಡಿಸ ಲಾಗಿದೆ. ಸಭೆ ಯಲ್ಲಿ ಪ್ರಾದೇ ಶಿಕ ಸಾರಿಗೆ ಪ್ರಾಧಿ ಕಾರದ ಅಧ್ಯಕ್ಷ ರಾದ ಜಿಲ್ಲಾ ಧಿಕಾರಿ ಡಾ ಎನ್ ಎಸ್ ಚನ್ನಪ್ಪ ಗೌಡ, ಎಸ್ ಪಿ ಅಭಿ ಷೇಕ್ ಗೋ ಯಲ್, ಪ್ರಾದೇ ಶಿಕ ಸಾರಿಗೆ ಪ್ರಾಧಿ ಕಾರದ ಕಾರ್ಯ ದರ್ಶಿ ಹಾಗೂ ಆರ್ ಟಿ ಒ ಮಲ್ಲಿ ಕಾರ್ಜುನ್ ಅವರು ಉಪ ಸ್ಥಿತ ರಿದ್ದರು.

ಎಪ್ರಿಲ್ ನಲ್ಲಿ ಕಂಕನಾಡಿಯಲ್ಲಿ ಪ್ರೀಪೇಯ್ಡ್ ಆಟೋ ಕೌಂಟರ್:ಜಿಲ್ಲಾಧಿಕಾರಿ

ಮಂಗಳೂರು,ಮಾರ್ಚ್.03: ನಗರದಲ್ಲಿ ಪ್ರಸ್ತುತ ಎರಡು ಪ್ರೀಪೇಯ್ಡ್ ಆಟೋ ಕೌಂಟರ್ ಗಳನ್ನು ಆರಂಭಿಸಲಾಗಿದ್ದು, ಎಪ್ರಿಲ್ ಅಂತ್ಯದೊಳಗೆ ಕಂಕನಾಡಿ ಜಂಕ್ಷನ್ ರೈಲ್ವೇ ನಿಲ್ದಾಣದಲ್ಲಿ ಪ್ರೀಪೇಯ್ಡ್ ಆಟೋ ಕೌಂಟರ್ ತೆರೆಯಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಡಾ ಎನ್.ಎಸ್. ಚನ್ನಪ್ಪ ಗೌಡ ತಿಳಿಸಿದ್ದಾರೆ.ಜಿಲ್ಲಾ ಧಿಕಾರಿ ಕಛೇರಿ ಸಭಾಂ ಗಣ ದಲ್ಲಿ ಇಂದು ನಡೆದ ಪ್ರಾಧಿ ಕಾರದ ಸಭೆಯ ಬಳಿಕ ಅವರು ಸುದ್ದಿ ಗಾರರ ಪ್ರಶ್ನೆ ಯೊಂ ದಕ್ಕೆ ಈ ಪ್ರತಿ ಕ್ರಿಯೆ ನೀಡಿ ದ್ದಾರೆ.ಮಂಗ ಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದ ಪ್ರೀ ಪೇಯ್ಡ್ ಆಟೋ ಕೌಂಟರ್ ಉತ್ತಮ ವಾಗಿ ಕಾರ್ಯ ನಿರ್ವ ಹಿಸು ತ್ತಿದ್ದು, ಕೆಎಸ್ ಆರ್ಟಿ ಸಿ ಬಳಿಯ ಕೌಂಟರ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ನಡುವೆ, ಕಂಕ ನಾಡಿ ರೈಲ್ವೇ ಜಂಕ್ಷನ್ ನಲ್ಲಿ ತಡ ರಾತ್ರಿ ಯಿಂದ ಬೆಳಗ್ಗಿನ ಹೊತ್ತು ರೈಲುಗಳಲ್ಲಿ ಬಂದಿಳಿಯುವ ಪ್ರಯಾಣಿಕರಿಗೆ ತಮ್ಮ ಮುಂದಿನ ಪ್ರಯಾಣಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿ ಪ್ರೀಪೇಯ್ಡ್ ಕೌಂಟರ್ ತೆರೆಯಲು ನಿರ್ಧರಿಸಲಾಗಿದೆ ಎಂದರು.
ಈ ಬಗ್ಗೆ ರೈಲ್ವೇ, ಪೊಲೀಸ್ ಹಾಗೂ ಆಟೋ ಮಾಲಕರ ಸಭೆಯನ್ನು ಕೈಗೊಂಡು ಶೀಘ್ರದಲ್ಲೇ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಉಪಸ್ಥಿತರಿದ್ದ ಆರ್ ಟಿ ಒ ಮಲ್ಲಿಕಾರ್ಜುನ ತಿಳಿಸಿದರು.

ವಿಮಾನ ನಿಲ್ದಾಣಕ್ಕೆ ಬಸ್ಸು ಸೇವೆ ಪುನರಾರಂಭಕ್ಕೆ ಚಿಂತನೆ:
ಮಂಗಳೂರಿನ ವಿಮಾನ ನಿಲ್ದಾಣ ಮತ್ತು ಕೆಎಸ್ಆರ್ ಟಿಸಿ ನಡುವೆ ಆರಂಭಿಸಲಾಗಿದ್ದ ವೋಲ್ವೋ ಬಸ್ ಸಂಚಾರ ಸ್ಥಗಿತಗೊಂಡಿರುವ ಕುರಿತಂತೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಪ್ರಯಾಣಿಕರ ನೀರಸ ಪ್ರತಿಕ್ರಿಯಿಂದಾಗಿ ವೋಲ್ವೋ ಬಸ್ ಸಂಚಾರ ಸ್ಥಗಿತಗೊಂಡಿದೆ. ಇದೀಗ ಇಲ್ಲಿಗೆ ಪ್ರಸ್ತುತ ಕಟೀಲು, ಕಿನ್ನಿಗೋಳಿ ಅಥವಾ ಬಜಪೆ ನಡುವೆ ಸಂಚರಿಸುವ ಒಂದೆರಡು ಬಸ್ಸುಗಳನ್ನು ವಿಮಾನ ನಿಲ್ದಾಣದವರೆಗೆ ಸಂಚರಿಸಲು ಅನುವು ಮಾಡಿಕೊಟ್ಟು ಜನರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಚಿಂತನೆ ಇದೆ ಎಂದವರು ತಿಳಿಸಿದರು.

ಕ್ರಿಯಾಶೀಲ ಆಡಳಿತಕ್ಕೆ 'ಸಕಾಲ'

ಮಂಗಳೂರು,ಮಾರ್ಚ್.03:ಆಡಳಿತಾತ್ಮಕ ವ್ಯವಸ್ಥೆಯನ್ನು ಪಾರದರ್ಶಕವಾಗಿಸುವ ಮತ್ತು ಜವಾಬ್ದಾರಿಯುತವಾಗಿಸುವ ನಿಟ್ಟಿನಲ್ಲಿ ಹಲವು ವಿನೂತನ ಕಾಯಿದೆಗಳನ್ನು ಜಾರಿಗೆ ತರಲಾಗಿದ್ದರೂ, ಇವಕ್ಕೆಲ್ಲಾ ಮಿಗಿಲಾಗಿ ಕರ್ನಾಟಕ ನಾಗರಿಕ ಸೇವಾ ಖಾತರಿ ಅಧಿನಿಯಮ ಅನುಷ್ಠಾನಕ್ಕೆ ತರಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರಾ ಸೀಮಂತ್ ಕುಮಾರ್ ಸಿಂಗ್ ಹೇಳಿದರು.
ದ.ಕ.ಜಿಲ್ಲಾ ಪಂಚಾ ಯತ್ ಸಭಾಂ ಗಣ ದಲ್ಲಿ ಮೈ ಸೂರು ಆಡ ಳಿತ ತರ ಬೇತಿ ಸಂಸ್ಥೆ ಯ ಸಹ ಕಾರ ದಿಂದ ಆಯೋ ಜಿಸ ಲಾದ ಎರಡು ದಿನ ಗಳ ಕಾರ್ಯಾ ಗಾರದ ಸಮಾ ರೋಪ ಸಮಾ ರಭ ದಲ್ಲಿ ಮುಖ್ಯ ಅತಿಥಿ ಗಳಾಗಿ ಅವರು ಮಾತ ನಾಡು ತ್ತಿದ್ದರು. ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣದ ಈ ಯುಗದಲ್ಲಿ ಸರ್ಕಾರಿ ಸೇವೆಗಳೂ ಇದೇ ಮಾದರಿಯಲ್ಲಿ ಲಭ್ಯವಾಗಬೇಕಾದುದು ಜನರ ಹಕ್ಕು ಎಂದ ಅವರು ದಕ್ಷಿಣ ಕನ್ನಡ ಜಿಲ್ಲೆ ಈ ಅಧಿನಿಯಮದ ಅನುಷ್ಠಾನದಲ್ಲಿ ಮಾದರಿಯಾಗಲಿದೆ ಎಂದರು.ಸಮಾ ರಂಭದ ಆಶಯ ಭಾಷಣ ಮಾಡಿದ ಮಹಾ ತ್ಮಗಾಂ ಧಿ ಗ್ರಾ ಮೀಣ ಉ ದ್ಯೋಗ ಖಾತ ರಿಯ ಒಂಬ ಡ್ಸ್ ಮನ್ ಶೀನ ಶೆಟ್ಟಿ ಯವರು, ಇಲ್ಲಿನ ವ್ಯವ ಸ್ಥೆಯ ಇಚ್ಛಾ ಶಕ್ತಿ, ಜ್ಞಾನ ಹಾಗೂ ಕ್ರಿಯಾ ಶಕ್ತಿ ಯಿಂದ ಸಕಾಲ ಯಶಸ್ವಿ ಯಾಗ ಲಿದ್ದು, ರಾಜ್ಯಕ್ಕೆ, ದೇಶಕ್ಕೆ ಹಲವು ಮಾದರಿ ಗಳನ್ನು ನೀಡಿದ ಜಿಲ್ಲೆ ನಮ್ಮದು ಎಂದರು. ವೈಯಕ್ತಿಕ ಸ್ವಚ್ಛತೆ ಮತ್ತು ವ್ಯವಸ್ಥೆಯ ಸ್ವಚ್ಛತೆಯಿಂದ ಹಾಗೂ ಸೇವೆ ನೀಡುವ ಅಧಿಕಾರಿಗಳ ಬದ್ಧತೆಯಿಂದ ಮಾತ್ರ ಕಾಯಿದೆ ಯಶಸ್ವಿಯಾಗಲು ಸಾಧ್ಯ ಎಂದರು.ಸಮಾ ರಂಭದ ಅಧ್ಯ ಕ್ಷತೆ ವಹಿ ಸಿದ್ದ ದ.ಕ. ಜಿಲ್ಲಾ ಧಿಕಾರಿ ಡಾ ಎನ್ ಎಸ್ ಚನ್ನಪ್ಪ ಗೌಡ ಅವರು, ಸಂಪ ನ್ಮೂಲ ವ್ಯಕ್ತಿ ಗಳೊಂ ದಿಗೆ ಹಾಗೂ ಕಾರ್ಯಾ ಗಾರ ದಲ್ಲಿ ಪಾಲ್ಗೊಂ ಡವರ ಜೊತೆ ಸಂವಾದ ನಡೆ ಸಿದ ರಲ್ಲದೆ, ಕಾಯಿ ದೆಗೆ ಸಂಬಂ ಧಿಸಿ ದಂತೆ ಹಲವು ಸ್ಪಷ್ಟೀ ಕರಣ ಗಳನ್ನು ಕೇಳಿದರು. ಕಾರ್ಯಾಗಾರದಲ್ಲಿ ಉದ್ಭವವಾದ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡುವಂತೆ ಸಂಪನ್ಮೂಲ ವ್ಯಕ್ತಿಗಳಿಗೆ ಹೇಳಿದರು. ಇದೇ ಸಂದರ್ಭದಲ್ಲಿ ಕಾಯಿದೆ ಅನುಷ್ಠಾನಕ್ಕೆ ಪೂರಕವಾಗಿರುವ ಸೌಕರ್ಯಗಳಿಗೆ ಅಗತ್ಯವಿರುವ ವೆಚ್ಚಗಳ ಪ್ರಸ್ತಾಪವನ್ನು ಮಾರ್ಚ್ 7 ರೊಳಗೆ ಸಲ್ಲಿಸುವಂತೆ ಎಲ್ಲ ಇಲಾಖೆಗಳಿಗೆ ಸೂಚಿಸಿದರು.
ಕಾರ್ಯಾಗಾರದಲ್ಲಿ ಏರ್ಪಡಿಸಲಾದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಉಪಕಾರ್ಯದರ್ಶಿಗಳಾದ ಶಿವರಾಮೇಗೌಡ ಅವರು ಸ್ವಾಗತಿಸಿದರು. ಸಹಾಯಕ ಕಾರ್ಯದರ್ಶಿ ಶಿವರಾಮಯ್ಯ ವಂದಿಸಿದರು.

Friday, March 2, 2012

ಸಕಾಲ ದಿಂದ ಕರ್ತವ್ಯ ನಿರ್ವಹಣೆಗೆ ವೇಗೋತ್ಕರ್ಷ:ಯೋಗೀಶ್ ಭಟ್

ಮಂಗಳೂರು,ಮಾರ್ಚ್.02:ಕರ್ನಾಟಕ ನಾಗರಿಕರಿಗೆ ಸೇವೆಗಳ ಖಾತರಿ ಅಧಿನಿಯಮ ರಾಜ್ಯದ ನಾಗರಿಕರಿಗೆ ಗೊತ್ತುಮಾಡಿದ ಕಾಲಮಿತಿಯೊಳಗೆ ಸೇವೆಗಳ ಖಾತರಿಗಾಗಿ ಮತ್ತು ಅದಕ್ಕೆ ಸಂಬಂಧಿಸಿದ ಹಾಗೂ ಅದಕ್ಕೆ ಪ್ರಾಸಂಗಿಕವಾದ ವಿಷಯಗಳಿಗೆ ಉಪಬಂಧ ಕಲ್ಪಿಸುವುದಕ್ಕಾಗಿರುವ ಒಂದು ಅಧಿನಿಯಮ. ಈ ಅಧಿನಿಯಮ ನಮ್ಮಲ್ಲಿ ನಿಗದಿತ ಸಮಯದೊಳಗೆ ಕೆಲಸವನ್ನು ಮಾಡಲು ಪ್ರೇರೇಪಿಸುತ್ತದೆ. ಕೆಲಸ ಮಾಡಬೇಕೆಂಬ ಇಚ್ಛಾಶಕ್ತಿಯಿಂದ ಮಾತ್ರ ಈ ಅಧಿನಿಯಮ ಯಶಸ್ವಿಯಾಗಲು ಸಾಧ್ಯ ಎಂದು ವಿಧಾನಸಭಾ ಉಪಸಭಾಧ್ಯಕ್ಷರಾದ ಎನ್ ಯೋಗೀಶ್ ಭಟ್ ಹೇಳಿದರು.ಅವ ರಿಂದು ಜಿಲ್ಲಾ ಪಂಚಾ ಯತ್ನ ನೇತ್ರಾ ವತಿ ಸಭಾಂ ಗಣ ದಲ್ಲಿ ಆಯೋ ಜಿಸ ಲಾದ ಕೆಜಿ ಎಸ್ಸಿ ಆಕ್ಟ್ ಸಮ ರ್ಪಕ ಅನು ಷ್ಠಾನಕ್ಕೆ ಎರಡು ದಿನ ಗಳ ಕಾರ್ಯಾ ಗಾರ ವನ್ನು ಉದ್ಘಾ ಟಿಸಿ ಮಾತ ನಾಡು ತ್ತಿದ್ದರು. ಸರ್ಕಾರಿ ಅಧಿ ಕಾರಿ ಗಳು ಹಾಗೂ ನೌಕ ರರಲ್ಲಿ ತಮ್ಮ ಕೆಲಸದ ಬಗ್ಗೆ ಪ್ರೀತಿ ಹೆಚ್ಚಬೇಕು. ಇದಕ್ಕೆ ಸರ್ಕಾರಿ ಸಂಸ್ಥೆಗಳಲ್ಲಿ ಮೂಲಭೂತ ಸೌಕರ್ಯಗಳಿರಬೇಕು; ಅಗತ್ಯ ಮಾಹಿತಿಗಳು, ಕಂಪ್ಯೂಟರೀಕೃತ ವ್ಯವಸ್ಥೆ ಇರಬೇಕೂ ಎಂದು ವಿಧಾನಸಭಾ ಉಪಾಧ್ಯಕ್ಷರು ಹೇಳಿದರು. ಇಚ್ಛಾಶಕ್ತಿಯಿಂದಾಗು ತ್ತಿರುವ ಉತ್ತಮ ಮಾದರಿಗಳು, ಸರ್ಕಾರಿ ವಲಯದ ಲ್ಲಾಗುತ್ತಿರುವ ಕೆಲಸಗಳನ್ನು ಉದಾಹರಣೆ ಸಹಿತ ವಿವರಿಸಿದರು.ಜಿಲ್ಲಾ ಪಂಚಾ ಯತ್ ನ ಉಪಾ ಧ್ಯಕ್ಷ ರಾದ ಶ್ರೀ ಮತಿ ಧನಲಕ್ಷ್ಮಿ ಅವರು ಮಾತ ನಾಡಿ, ಅಧಿ ನಿಯ ಮದಿಂದ ಗ್ರಾಮೀ ಣರಿಗೆ ನೆರ ವಾಗ ಲಿದೆ. ಜನರು ಒಂದು ಕೆಲ ಸಕ್ಕೆ ಹತ್ತಾರು ಬಾರಿ ಅಲೆ ದಾಡು ವುದು ತಪ್ಪ ಲಿದೆ ಎಂದು ಅಭಿ ಪ್ರಾಯ ಪಟ್ಟರು.ಅಧ್ಯಕ್ಷೀಯ ಭಾಷಣ ಮಾಡಿದ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ, ಅಧಿನಿಯಮದ ಸಮಗ್ರ ಅನುಷ್ಠಾನಕ್ಕೆ ಸಂಬಂಧಪಟ್ಟವರಿಗೆ ಕಾರ್ಯಾಗಾರ ನಡೆಸುವುದರಿಂದ ನೆರವಾಗಲಿದೆ. ಎಲ್ಲರೂ ಜವಾಬ್ದಾರಿಯಿಂದ ಹಾಗೂ ನಿಯಮಾನುಸಾರ ಕೆಲಸ ಮಾಡಿದರೆ ಜಿಲ್ಲೆಗೆ ಒಳ್ಳೆಯ ಹೆಸರು ಎಂದರು. ಪ್ರಾಸ್ತಾವಿಕ ಭಾಷಣ ಮಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಅವರು,ಅಧಿನಿಯಮ ಅನುಷ್ಠಾನ ಕುರಿತು ಮಾತನಾಡಿದರು. ಸಹಾಯಕ ಕಾರ್ಯದರ್ಶಿ ಶಿವರಾಮಯ್ಯ ವಂದಿಸಿದರು.
ಇಂದು ಮತ್ತೆ ನಾಳೆ ಎಲ್ಲ ಜಿಲ್ಲಾ ಮಟ್ಟದ ಹಾಗೂ ಪುತ್ತೂರು ತಾಲೂಕಿನ ಅಧಿಕಾರಿಗಳಿಗೆ ಆಡಳಿತ ತರಬೇತಿ ಸಂಸ್ಥೆ ಮೈಸೂರು ಇವರ ವತಿಯಿಂದ ತರಬೇತಿ ನೀಡಲಾಗುತ್ತಿದೆ.

Thursday, March 1, 2012

'ಸಕಾಲ' ಸೇವೆಗೆ ಸೇವಾ ಖಾತ್ರಿ ಮಸೂದೆ: ಯೋಗೀಶ್ ಭಟ್

ಮಂಗಳೂರು,ಮಾರ್ಚ್.01:ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಹಕ್ಕಿಗೆ ಆದ್ಯತೆ ಮತ್ತು ಅಧಿಕಾರಿಗಳು ಸಕಾಲದಲ್ಲಿ ಕರ್ತವ್ಯ ನಿರ್ವಹಿಸಲು ಪೂರಕವಾಗಿ ಜನಸ್ನೇಹಿ ವ್ಯವಸ್ಥೆಯ ಇನ್ನೊಂದು ಹೆಜ್ಜೆಯಾಗಿ ನಾಗರೀಕ ಸೇವಾ ಖಾತ್ರಿ ಮಸೂದೆ ಜಾರಿಯಾಗಿದೆ ಎಂದು ವಿಧಾನಸಭಾ ಉಪಸಭಾಧ್ಯಕ್ಷರಾದ ಎನ್ ಯೋಗೀಶ್ ಭಟ್ ಹೇಳಿದರು.
ಅವ ರಿಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂ ರಿನ ಪುರಸಭಾ ಸಭಾಂ ಗಣ ದಲ್ಲಿ ಕಾಯ್ದೆಯ ಲೋಕಾ ರ್ಪಣೆ ಮಾಡಿ ಮಾತ ನಾಡು ತ್ತಿದ್ದರು. 11 ಸರ್ಕಾರಿ ಇಲಾಖೆ ಗಳು 151 ಸೇವೆ ಗಳನ್ನು ನೀಡುವ ವಾಗ್ದಾನ ವನ್ನು ಸರ್ಕಾರ ಪ್ರಥಮ ಹಂತ ದಲ್ಲಿ ಜನ ರಿಗೆ ನೀಡಿದ್ದು, ಪಾರ ದರ್ಶ ಕತೆ ಮತ್ತು ಜವಾ ಬ್ದಾರಿ ಯುತ ಆಡಳಿತ ಕಾಲಮಿತಿಯೊಳಗೆ ಜನಸಾಮಾನ್ಯರಿಗೆ ಲಭಿಸುವಂತೆ ರೂಪಿಸಲಾಗಿದೆಯಲ್ಲದೆ, ಈ ಕಾಯಿದೆಯನ್ನು ಕಾನೂನು ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಪ್ರಥಮ ಹಂತದಲ್ಲಿ ರಾಜ್ಯದ ದಕ್ಷಿಣ ಕನ್ನಡದಿಂದ ಪುತ್ತೂರು, ಬೀದರ್ ನಿಂದ ಔರಾದ್ ಮತ್ತು ಚಿತ್ರದುರ್ಗದಿಂದ ಚಿತ್ರದುರ್ಗ ತಾಲೂಕು ಮತ್ತು ಧಾರವಾಡದಿಂದ ಧಾರವಾಡ ತಾಲೂಕುಗಳನ್ನು ಆರಿಸಲಾಗಿದ್ದು, ಜನಸೇವೆ ಮತ್ತು ಕರ್ತವ್ಯಪ್ರಜ್ಞೆ ಮೆರೆಯಲು ಆಡಳಿತಕ್ಕೆ ಉತ್ತಮ ಅವಕಾಶ ಎಂದರು.
ಲಾಂಛನ ಮತ್ತು ಧ್ಯೇಯ ವಾಕ್ಯ ಗಳನ್ನು ಬಿಡು ಗಡೆ ಗೊಳಿಸಿ ಮಾತ ನಾಡಿದ ಸಂಸ ದರಾದ ನಳಿನ್ ಕುಮಾರ್ ಕಟೀಲ್ ಅವರು, ಸೇವೆಗೆ ಸಿದ್ಧ, ಕಾಲಕ್ಕೆ ಬದ್ಧ ಎಂಬ ಘೋಷ ವಾಕ್ಯ ಅನು ಷ್ಠಾನಕ್ಕೆ ಬಂ ದರೆ ಗ್ರಾಮೀಣ ಪ್ರದೇ ಶದ ಜನರಿಗೆ ಇದು ವರೆಗೆ ಆಗು ತ್ತಿದ್ದ ತೊಂದ ರೆಗ ಳಿಂದ ಮುಕ್ತಿ ಸಿಗ ಲಿದೆ ಎಂದರು. ಜನಪರ ನೂತನ ಅಧಿನಿಯಮವನ್ನು ರೂಪಿಸಿರುವ ಮುಖ್ಯಮಂತ್ರಿಗಳನ್ನು ಅಭಿನಂದಿಸಿದ ಸಂಸದರು, ಮುಂದಿನ ದಿನಗಳಲ್ಲಿ ಈ ಕಾಯಿದೆಯಿಂದ ಜನರು ನೆರವನ್ನು ಪಡೆಯಲಿ ಎಂದು ಹಾರೈಸಿದರು. ಯಾವಗಲೂ ಜನರೊಂದಿಗೆ ಇದ್ದ ಮುಖ್ಯಮಂತ್ರಿಗಳಿಗೆ ಜನರ ನೋವು ನಲಿವುಗಳ ಅರಿವಿದ್ದು ಅವರ ಸಮಸ್ಯೆಗಳಿಗೆ ತಕ್ಕಮಟ್ಟಿಗೆ ಇತಿಶ್ರೀ ಹಾಡಲು ಈ ಕಾಯಿದೆಗೆ ಸಾಧ್ಯವಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುತ್ತೂರಿನ ಶಾಸಕರಾದ ಶ್ರೀಮತಿ ಮಲ್ಲಿಕಾ ಪ್ರಸಾದ್ ಅವರು, ಈ ಕಾಯಿದೆಯಿಂದ ಜನರಿಗೆ ಹಾಗೂ ಜನಪ್ರತಿನಿಧಿಗಳಿಗೆ ಉಪಯೋಗವಾಗಲಿದೆ; ಮಧ್ಯವರ್ತಿಗಳ ಹಾವಳಿ ನಿಯಂತ್ರಣಕ್ಕೆ ಇದು ಸೂಕ್ತ ಕಾಯಿದೆ ಎಂದ ಅವರು, ಜನರ ದೂರು ದುಮ್ಮಾನಕ್ಕೆ ಉತ್ತರ ಕೊಡಲೇ ಬೇಕಾದ ಈ ಕಾಯಿದೆಯಿಂದ ಗ್ರಾಮೀಣರಿಗೆ ನೆರವಾಗಲಿದೆ. ಪುತ್ತೂರು ತಾಲೂಕಿನ ಆಯ್ಕೆ ಸೂಕ್ತವಾಗಿದೆ ಎಂದೂ ಅವರು ಈ ಸಂದರ್ಭದಲ್ಲಿ ಹೇಳಿದರು.
ಕರ್ನಾ ಟಕ ನಾಗ ರಿಕ ಸೇವಾ ಖಾತ್ರಿ ಮಸೂ ದೆಯ ಬಗ್ಗೆ ಪ್ರಾಸ್ತಾ ವಿಕ ಮಾತು ಗಳ ನ್ನಾಡಿದ ಪ್ರಭಾರ ಜಿಲ್ಲಾ ಧಿಕಾರಿ ಕೆ ಎ ದಯಾ ನಂದ ಅವರು, ಕಾಯಿದೆ ಅನು ಷ್ಠಾನಕ್ಕೆ ಪ್ರಾಮಾ ಣಿಕ ಪ್ರಯತ್ನ ಹಾಗೂ ಸೂಕ್ತ ತರ ಬೇತಿ ನೀಡ ಲಾಗು ವುದು ಎಂದರು. ಮುಖ್ಯ ಮಂತ್ರಿಗಳ ತವರು ಜಿಲ್ಲೆಯಲ್ಲಿ ಪೈಲಟ್ ಯೋಜನೆಯಡಿ ಆಯ್ಕೆಗೊಂಡ ತಾಲೂಕು ಹಾಗೂ ಏಪ್ರಿಲ್ ನಿಂದ ಎಲ್ಲ ಜಿಲ್ಲೆಗಳಲ್ಲಿ ಆರಂಭವಾಗುವ ಯೋಜನೆಯನ್ನು ರಾಜ್ಯಕ್ಕೇ ಮಾದರಿಯಾಗಿ ದಕ್ಷಿಣ ಕನ್ನಡದಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂದರು.ಜಿಲ್ಲಾ ಪಂಚಾ ಯತ್ ಅಧ್ಯಕ್ಷ ರಾದ ಶ್ರೀಮತಿ ಶೈ ಲಜಾ ಭಟ್, ಪುರ ಸಭೆ ಅಧ್ಯಕ್ಷ ರಾದ ಶ್ರೀಮತಿ ಕಮಲಾ ಆನಂದ್ ಸಭೆ ಯನ್ನು ದ್ದೇಶಿಸಿ ಮಾತ ನಾಡಿ ದರು. ಉಪಾ ಧ್ಯಕ್ಷ ರಾದ ಶ್ರೀಮತಿ ಧನ ಲಕ್ಷ್ಮಿ ಜನಾ ರ್ಧನ್, ತಾಲೂಕು ಪಂಚಾ ಯತ್ ಅಧ್ಯಕ್ಷ ರಾದ ಡಿ ಶಂಭು ಭಟ್, ಪೂಡಾ ಅಧ್ಯಕ್ಷ ಅಪ್ಪಯ್ಯ ಮಣಿ ಯಾಣಿ, ಜಿ,ಪಂ.ಮುಖ್ಯ ಕಾರ್ಯ ನಿರ್ವ ಹಣಾಧಿ ಕಾರಿ ಗಳಾದ ಡಾ ಕೆ ಎನ್ ವಿಜಯ ಪ್ರಕಾಶ್, ಸಹಾಯಕ ಪೊಲೀಸ್ ಅಧೀಕ್ಷಕರಾದ ಎ ಎನ್ ಅನುಚೇತ್ ಉಪಸ್ಥಿತರಿದ್ದರು. ಪುತ್ತೂರು ತಹಸೀಲ್ದಾರ್ ಡಾ ಎಂ ದಾಸೇಗೌಡ ಸ್ವಾಗತಿಸಿದರು. ಶಿವಲಿಂಗ ಕೊಂಡಕುಳಿ ವಂದನಾರ್ಪಣೆ ಮಾಡಿದರು. ಕಾರ್ಮಿಕ ಇಲಾಖೆಯ ಚಿದಾನಂದ ಕಾರ್ಯಕ್ರಮ ನಿರೂಪಿಸಿದರು.

Wednesday, February 29, 2012

ಕುಡಿಯುವ ನೀರು ಒದಗಿಸಲು ರೂ.120.9 ಲಕ್ಷ ಕ್ರಿಯಾ ಯೋಜನೆ- ಶೈಲಜಾಭಟ್.

ಮಂಗಳೂರು,ಫೆಬ್ರವರಿ.29:ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತೊಂದರೆ ಆಗದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾ ಪಂಚಾಯತ್ ವತಿಯಿಂದ ಕೈಗೊಳ್ಳಲಾಗಿದ್ದು ಈಗಾಗಲೆ ರೂ. 120.9ಲಕ್ಷಗಳ ಕ್ರಿಯಾಯೋಜನೆಯನ್ನು ತಯಾರಿಸಿ ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕೆ.ಟಿ. ಶೈಲಜಾ ಭಟ್ ಅವರು ಇಂದು ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ತಿಳಿಸಿದರು.
ಈಗಿರುವ ದುರಸ್ತಿ ಯಾಗ ಬೇಕಾದ ಕೊಳವೆ ಬಾವಿ ಗಳನ್ನು ಆಧ್ಯತೆ ಮೇಲೆ ಕೈ ಗೊಳ್ಳ ಬಹು ದಾಗಿದ್ದು ಒಂದು ವೇಳೆ ಅವು ದುರಸ್ತಿ ಪಡಿ ಸಲು ಆಗದಿ ದ್ದಲ್ಲಿ ಮಾತ್ರ ಹೊಸ ಕೊಳವೆ ಬಾವಿ ಗಳನ್ನು ಕೊರೆ ಸಲು ಸರ್ಕಾರ ಅವಕಾಶ ಕಲ್ಪಿ ಸಿದೆ ಎಂದು ಮುಖ್ಯ ಕಾರ್ಯ ನಿರ್ವಹ ಣಾಧಿ ಕಾರಿ ಡಾ ಕೆ.ಎನ್.ವಿಜಯ ಪ್ರಕಾಶ್ ತಿಳಿಸಿದ್ದಾರೆ.
ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಠಾನದಲ್ಲಿ ಜಿಲ್ಲೆಯಲ್ಲಿ ಅನಗತ್ಯ ವಿಳಂಬಗಳಾಗುತ್ತಿರುವ ಬಗ್ಗೆ ಕೆಲವು ಸದಸ್ಯರು ಸಭೆಯ ಅಧ್ಯಕ್ಷರ ಗಮನಕ್ಕೆ ತಂದು ಅವುಗಳನ್ನು ಕೂಡಲೇ ಪರಿಹರಿಸಲು ಕಂದಾಯ ಅಧಿಕಾರಿಗಳನ್ನು ಸಭೆಗೆ ಕರೆಸುವಂತೆ ಒತ್ತಾಯಿಸಿದ ಮೇರೆಗೆ ಸಭೆಯಲ್ಲಿ ಹಾಜರಿದ್ದ ಮಂಗಳೂರು ತಹಸೀಲ್ದಾರರು ಮಾತನಾಡಿ 2011ರ ಜನವರಿಯಿಂದ ಜಿಲ್ಲೆಯಲ್ಲಿ ಕಂದಾಯ ಅದಿಕಾರಿಗಳು ಮನೆಮನೆಗೆ ಭೇಟಿ ನೀಡಿ ಸಾಮಾಜಿಕ ಭದ್ರತೆ ಯೋಜನೆಯಡಿ ಸೌಲಭ್ಯ ಪಡೆಯುತ್ತಿರುವವರ ಪರಿಶೀಲನೆ ನಡೆಸಿ ಸರ್ಕಾರಕ್ಕೆ ಈಗಾಗಲೇ ವರದಿಯೊಂದನ್ನು ಸಲ್ಲಿಸಿದ್ದು ಅದರಂತೆ ಕೆಲವರ ಮಾಸಾಶನಗಳು ತಡೆಹಿಡಿಯಲಾಗಿದೆ, ಉಳಿದಂತೆ ಇತರರ ಮಾಸಾಶನಗಳು ಎಂದಿನಂತೆ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ ಕೊರ ಗರು ಜಾತಿ ದೃಢೀ ಕರಣ ಸೇರಿ ದಂತೆ ಇತರೆ ಸರ್ಕಾರಿ ಸೌಲಭ್ಯ ಗಳನ್ನು ಪಡೆಯಲು ತೊಂ ದರೆ ಆಗು ತ್ತಿರುವ ಬಗ್ಗೆ ಅಧ್ಯಕ್ಷರ ಗಮನ ಸೆಳೆ ದಾಗ ಈ ಬಗ್ಗೆ ಉತ್ತ ರಿಸಿದ ಜಿಲ್ಲಾ ಪಂಚಾ ಯಿತಿ ಉಪ ಕಾರ್ಯ ದರ್ಶಿ ಶಿವ ರಾಮೆ ಗೌಡರು, ಕೊರಗರು ಅಥವಾ ಇನ್ನಿತರೆ ಜನಾಂಗದವರು ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರವಾಗಿ ಮೂಲ ಧರ್ಮದ ಅಡಿಯಲ್ಲಿ ಸೌಲಭ್ಯಗಳನ್ನು ಪಡೆಯಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ. ಆದರೆ ಅವರು ಸ್ವ ಇಚ್ಚೆಯಿಂದ ಮರಳಿ ಮೂಲ ಧರ್ಮಕ್ಕೆ ಬಂದಲ್ಲಿ ಅವರಿಗೆ ಎಲ್ಲಾ ಸೌಲಭ್ಯಗಳು ದೊರೆಯಲಿದೆ ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಶಾಸಕರಾದ ಯು.ಟಿ ಖಾದರ್,ಬಿ.ರಮಾನಾಥ ರೈ, ಉಪಾಧ್ಯಕ್ಷೆ ಶ್ರೀಮತಿ ಧನಲಕ್ಷ್ಮಿ ಜನಾರ್ದನಗೌಡ ಮುಂತಾದವರು ಹಾಜರಿದ್ದರು.

ನಿರ್ಮಲಗ್ರಾಮ ಪುರಸ್ಕಾರಕ್ಕೆ ಜಿಲ್ಲೆ ಆಯ್ಕೆ-ಡಾ.ವಿಜಯಪ್ರಕಾಶ್.

ಮಂಗಳೂರು,ಫೆಬ್ರವರಿ.29: ದಕ್ಷಿಣ ಕನ್ನಡ ಜಿಲ್ಲೆ ನಿರ್ಮಲ ಗ್ರಾಮ ಪುರಸ್ಕಾರಕ್ಕೆ ಅಯ್ಕೆಯಾದ ಜಿಲ್ಲೆಯಾಗಿದ್ದು, ನಿರ್ಮಲ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ ರಾಜ್ಯದ ಪ್ರಥಮ ಜಿಲ್ಲೆ ಎಂಬ ಹೆಗ್ಗಳಿಕೆಗೆ ಜಿಲ್ಲೆ ಪಾತ್ರವಾಗಿದೆ.
ಪುರಸ್ಕಾರ ವಿಜೇತ ಜಿಲ್ಲೆಗೆ ಕೇಂದ್ರ ಸರ್ಕಾರ ರೂ 50ಲಕ್ಷ ಬಹುಮಾನವನ್ನು ನೀಡಲಿದೆ ಎಂದು ಇಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾದಿಕಾರಿ ಡಾ! ಕೆ.ಎನ್. ವಿಜಯಪ್ರಕಾಶ್ ಹರ್ಷೋದ್ಗಾರಗಳ ನಡುವೆ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಘೋಷಿಸಿದರು.
ಜಿಲ್ಲೆಯ 203ಗ್ರಾಮ ಪಂಚಾಯತ್ ಗಳಿಗೆ ನಿರ್ಮಲ ಗ್ರಾಮ ಪುರಸ್ಕಾರ ಈಗಾಗಲೆ ಲಭ್ಯವಾಗಿದ್ದು, ಇದೀಗ ಜಿಲ್ಲೆಗೆ ಜಿಲ್ಲಾ ಮಟ್ಟದ ಪುರಸ್ಕಾರವೂ ಲಭ್ಯವಾಗಿದೆ ಎಂದು ಅವರು. ತಿಳಿಸಿದರು.
2009ರಲ್ಲಿ ಜಿಲ್ಲೆಯ ಪುತ್ತೂರು, ಬಂಟ್ವಾಳ ಮತ್ತು ಬೆಳ್ತಂಗಡಿ ತಾಲ್ಲೂಕುಗಳು ಬ್ಲಾಕ್ ಮಟ್ಟದಲ್ಲಿ ಪುರಸ್ಕಾರಗಳನ್ನು ಪಡೆದಿದ್ದರೆ 2011ರಲ್ಲಿ ಸುಳ್ಯ ಮತ್ತು ಮಂಗಳೂರು ತಾಲ್ಲೂಕುಗಳು ಬ್ಲಾಕ್ ಮಟ್ಟದ ಪುರಸ್ಕಾರ ಪಡೆಯುವ ಮೂಲಕ ಇಡೀ ಜಿಲ್ಲೆಯೇ ನಿರ್ಮಲಗ್ರಾಮ ಪುರಸ್ಕಾರ ಪಡೆದ ಏಕೈಕ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆ ಎಂಬುದಾಗಿ ಅವರು ತಿಳಿಸಿದರು.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ: ವಿವಿಧ ಘಟಕಗಳ ಸ್ಥಾಪನೆಗೆ ಸಹಾಯಧನ

ಮಂಗಳೂರು,ಫೆಬ್ರವರಿ.29:ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗು ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿಯಡಿ ಫಲಾನುಭವಿ ಆಧಾರಿತ ಕಾರ್ಯಕ್ರಮಗಳನ್ನು ಕೈಗೊಳ್ಳಲು ಮುಂದೆ ಬರುವ ಫಲಾನುಭವಿಗಳಿಗೆ ಸಹಾಯಧನ ಪಡೆಯಲು ಇಚ್ಚಿಸುವವರು ಆಯಾ ತಾಲ್ಲುಕು ಪಶುಪಾಲನಾ ಸಹಾಯಕ ನಿರ್ದೇಶಕರಿಗೆ ದಿನಾಂಕ 05-3-2012 ರೊಳಗಾಗಿ ಅರ್ಜಿಗಳನ್ನು ಸಲ್ಲಿಸುವಂತೆ ಉಪನಿರ್ದೇಶಕರು ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
ಕುಕ್ಕುಟ ಅಭಿವೃದ್ದಿ ಯೋಜನೆ; ವಾಣಿಜ್ಯ ಮೊಟ್ಟೆ ಕೋಳಿ ಸಾಕಾಣಿಕೆಗೆ ಪ್ರೋತ್ಸಾಹ ನೀಡುವ ದಿಸೆಯಲ್ಲಿ ದಿನಕ್ಕೆ ಸರಾಸರಿ 800 ಮೊಟ್ಟೆ ಉತ್ಪಾದಿಸಲು ವಾಣಿಜ್ಯ ಕೋಳಿ (ಕನಿಷ್ಟ 1000 ವಾಣಿಜ್ಯ ಮೊಟ್ಟೆ ಕೋಳಿ) ಘಟಕ ಸ್ಥಾಪಿಸಲು ರೈತರಿಗೆ/ಗ್ರಾಮೀಣ ಯುವಕರಿಗೆ ಘಟಕದ ವೆಚ್ಚ 7.50ಲಕ್ಷದಲ್ಲಿ ರೂ.1.00ಲಕ್ಷ ಸಹಾಯಧನ/ಪ್ರೋತ್ಸಾಹ ಧನ, ಇನ್ನುಳಿದ ರೂ.6.50ಲಕ್ಷ ಬ್ಯಾಂಕಿನ ಸಾಲ/ಫಲಾನುಭವಿ ವಂತಿಗೆ ಸೇರಿದೆ.
ಹುಲ್ಲುಗಾವಲುಗಳ ಸ್ಥಾಪನೆಗಾಗಿ ರೈತರ ಅನುಪಯುಕ್ತ ಭೂಮಿಯಲ್ಲಿ ಸುಧಾರಿತ ವಿವಿಧ ಮೇವಿನ ಬಳೆ ಮರಗಳನ್ನು 10 ಎಕರೆ ಭೂಮಿಯಲ್ಲಿ ಬೆಳೆಯಲು ಅರ್ಹ ಆಸಕ್ತ ರೈತರಿಗೆ ಘಟಕದ ವೆಚ್ಚ ರೂ.50,000/ದ ಶೇಕಡ 50 ರಷ್ಟು (25,000/-) ಸಹಾಯಧನವಾಗಿ ನೀಡಲಾಗುವುದು.

ವರಾಹ ಅಭಿವೃದ್ದಿ ಯೋಜನೆ ಯಡಿ ಆಧುನಿಕ ಹಂದಿ ಸಾಕಾಣಿಕೆಗೆ ಪ್ರೋತ್ಸಾಹ ನೀಡಲಾ ಗುತ್ತಿದ್ದು ತಳಿ ಸಂವರ್ಧನೆಗೆ ಘಟಕ ವೆಚ್ಚ ರೂ 20,000/- ಸಹಾಯಧನ ರೂ.10,000/-, ಮಿಶ್ರತಳಿ ಅಭಿವೃದ್ದಿ ಘಟಕ ವೆಚ್ಚ ರೂ.3,000/- ಸಹಾಯಧನ ರೂ. 1,500 /- ಮತ್ತು ಮರಿ ಕೊಬ್ಬಿಸುವುದು ಘಟಕ ಸ್ಥಾಪನೆಗೆ ಘಟಕ ವೆಚ್ಚದ ರೂ.6,000/-ಕ್ಕೆ ಸಹಾಯಧನ ರೂ.3,000/- ನೀಡಲಾಗುವುದು.
ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿ(ನಿ) ಇವರ ವತಿಯಿಂದ ನಿರುದ್ಯೋಗ ಯುವಕ: ಯುವತಿಯರಿಗೆ: ಸಣ್ಣರೈತರಿಗೆ ಮಾಂಸ ಕೋಳಿ ಕ್ಷೇತ್ರ ಸ್ಥಾಪಿಸಲು ಪ್ರೋತ್ಸಾಹ ನೀಡಲಾಗುತ್ತಿದ್ದು ಇದರ ಘಟಕ ವೆಚ್ಚದ ರೂ.70,000/-ಕ್ಕೆ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಸಹಾಯಧನ ರೂ.17,500/- ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ರೂ.23,100/- ಸಹಾಯಧನ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಡಾ.ಕೆ.ಅಶೋಕ್ ಕುಮಾರ್, ಮಂಗಳೂರು ದೂರವಾಣಿ 0824/2492369 ಮೊ.9448124601, ಡಾ. ಸಿ. ನಾಗರಾಜ, ಬಂಟ್ವಾಳ 08255/232512,ಮೊ.9980322369, ಡಾ ಹೆಚ್ .ಸುಧಾಕರ ಶೆಟ್ಟಿ, ಬೆಳ್ತಂಗಡಿ 08256/232067,ಮೊ 9448329065, ಡಾ. ಕೆ. ರಾಮಚಂದ್ರ ಶೆಟ್ಟಿ, ಪುತ್ತೂರು 08251/230664 ಮೊ.9448869129, ಡಾ. ಎಂ.ಎನ್.ರಾಜಣ್ಣ, ಸುಳ್ಯ 08257/230412, ಮೊ.9448725698 ಇವರನ್ನು ಆಯಾ ತಾಲ್ಲುಕುಗಳವರು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.

Monday, February 27, 2012

'ಕೇಂದ್ರ ಸರ್ಕಾರದ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಕ್ಕೆ ತನ್ನಿ'

ಮಂಗಳೂರು,ಫೆಬ್ರವರಿ.27:ಕೇಂದ್ರ ಸರ್ಕಾರದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ವಿವಿಧ ಯೋಜನೆಗಳ ಮೂಲಕ ಬಿಡುಗಡೆಯಾಗಿರುವ ಅನುದಾನವನ್ನು ತ್ವರಿತಗತಿಯಲ್ಲಿ ಬಳಸಿಕೊಂಡು ಯೋಜನೆಗಳು ಸದುಪಯೋಗವಾಗುವಂತೆ ಕ್ರಮ ಕೈಗೊಳ್ಳಬೇಕೆಂದು ದ.ಕ.ಲೋಕಸಭಾ ಕ್ಷೇತ್ರದ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅವರು ಇಂದು ಜಿಲ್ಲಾ ಪಂಚಾ ಯತ್ ನೇತ್ರಾವತಿ ಸಭಾಂಗ ಣದಲ್ಲಿ ನಡೆದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿದ್ದರು.ಕುಡಿಯುವ ನೀರು ಯೋಜನೆಗಳು, ರಸ್ತೆಗಳು, ಸರ್ವ ಶಿಕ್ಷಣ ಅಭಿಯಾನದಡಿ ಶಾಲಾ ಕೊಠಡಿಗಳ ನಿರ್ಮಾಣ, ಇಂದಿರಾ ಆವಾಜ್ ಯೋಜನೆ ವಸತಿ, ಬಸವ ವಸತಿ ಯೋಜನೆ ಮುಂತಾದ ಯೋಜನೆಗಳ ಅನುಷ್ಠಾನ ಕುರಿತಂತೆ ಪ್ರಗತಿ ಪರಿಶಿಲನೆ ಮಾಡಿದರು.ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳಿಗೆ ವಿಶೇಷವಾಗಿ ವೃದ್ದಾಪ್ಯ ವೇತನದಾರರಿಗೆ ಕ್ಲಪ್ತ ಸಮಯದಲ್ಲಿ ಮಾಸಾಶನ ದೊರಕುವಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ವಿಧಾನಸಭಾ ಉಪಸಭಾಪತಿಗಳಾದ ಎನ್.ಯೋಗೀಶ್ ಭಟ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವಿಜಯಪ್ರಕಾಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ನಾಗರಿಕ ಸೇವಾ ಖಾತರಿಗೆ ಸಜ್ಜಾಗಿ: ಪೊನ್ನುರಾಜ್

ಮಂಗಳೂರು,ಫೆಬ್ರವರಿ.27 :ನಾಗರಿಕರಿಗೆ ವಿಳಂಬವಿಲ್ಲದೆ ಸರ್ಕಾರಿ ಸೇವೆಗಳನ್ನು ಒದಗಿಸುವ ದೃಷ್ಟಿಯಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಕರ್ನಾಟಕ ನಾಗರಿಕ ಸೇವಾ ಖಾತರಿ ಅಧಿನಿಯಮ ಮಾರ್ಚ್ ಒಂದರಿಂದ ಅನುಷ್ಠಾನಕ್ಕೆ ಬರಲಿದೆ.
ಅಧಿಕಾರಿಗಳು ಈ ಅಧಿನಿಯಮವನ್ನು ಸಮರ್ಪಕವಾಗಿ ಜಾರಿಗೊಳಿಸಲು ಸನ್ನದ್ಧರಾಗಬೇಕೆಂದು ಅಧಿನಿಯಮ ಅನುಷ್ಠಾನದ ಮಾರ್ಗದರ್ಶಿ ಅಧಿಕಾರಿ ವಿ.ಪೊನ್ನುರಾಜ್ ಹೇಳಿದರು.ಅವ ರಿಂದು ಜಿಲ್ಲಾ ಧಿಕಾ ರಿಗಳ ಕಚೇರಿ ಯಲ್ಲಿ ನಡೆದ ಅಧಿ ಕಾರಿ ಗಳ ಸಭೆ ಯನ್ನು ದ್ದೇಶಿಸಿ ಮಾತ ನಾಡು ತ್ತಿದ್ದರು. ಮುಖ್ಯ ಮಂತ್ರಿ ಗಳ ತವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂ ಕನ್ನು ಪೈಲಟ್ ಯೋಜನೆ ಯಡಿ ಸೇರಿ ಸಿದ್ದು ಪುತ್ತೂರು ವ್ಯಾ ಪ್ತಿಯ ಕಚೇರಿ ಹಾಗೂ ಅಲ್ಲಿನ ವ್ಯ ವಸ್ಥೆ ಗಳ ಬಗ್ಗೆ ಮಾಹಿತಿ ಯನ್ನು ಅಧಿ ಕಾರಿ ಗಳಿಂದ ಪಡೆದು ಕೊಂಡರು.
ಈಗಾಗಲೇ ಅಧಿಕಾರಿಗಳಿಗೆ ಅಧಿನಿಯಮ ಸಂಬಂಧ ತರಬೇತಿಗಳನ್ನು ಆರಂಭಿಸಲಾಗಿದ್ದು, ಮಂಗಳವಾರ ಜಿಲ್ಲಾ ತರಬೇತಿ ಕೇಂದ್ರದಲ್ಲಿ ತರಬೇತಿ ಆಯೋಜಿಸಲಾಗಿದೆ. ಕಂಪ್ಯೂಟರೀಕರಣಗೊಂಡಿರುವ ಇಲಾಖೆಗಳಲ್ಲಿ ಯೋಜನಾ ಅನುಷ್ಠಾನಕ್ಕೆ ಹೆಚ್ಚಿನ ತೊಂದರೆಯಾಗಲಾರದೆಂದ ಅವರು, ಎಲ್ಲ ಕಚೇರಿಗಳಲ್ಲೂ ಮಾಹಿತಿ ಫಲಕಗಳನ್ನು ಅಳವಡಿಸಬೇಕೆಂದರು.
ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಪ್ರತಿದಿನ ಸಾರ್ವಜನಿಕರಿಂದ ಸ್ವೀಕರಿಸಲಾಗುವ ಅರ್ಜಿಗಳ ಮಾಹಿತಿ ಪಡೆದ ಪೊನ್ನುರಾಜ್ ಅವರು, ಸೇವೆ ನೀಡುವಲ್ಲಿ ಲೋಪವಾದರೆ ಸಂಬಂಧಪಟ್ಟ ಅಧಿಕಾರಿಗಳು ದಂಡ ಪಾವತಿಸಬೇಕಾಗುತ್ತದೆ. ಹಾಗಾಗಿ ಹೆಚ್ಚಿನ ಕಾಳಜಿಯಿಂದ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು.
ಪ್ರಸ್ತಾವಿತ ಅಧಿನಿಯಮದಡಿ ಪ್ರತಿಯೊಬ್ಬ ನಾಗರಿಕರು ಅನುಸೂಚಿಯಲ್ಲಿ ನಿರ್ದಿಷ್ಟ ಪಡಿಸಿ ನಿಗದಿ ಮಾಡಿದ ಕಾಲದೊಳಗೆ, ಈ ಅಧಿನಿಯಮಕ್ಕನುಸಾರವಾಗಿ ರಾಜ್ಯದಲ್ಲಿ ನಾಗರಿಕ ಸಂಬಂಧಿ ಸೇವೆಗಳನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ ಎಂಬುದನ್ನು ಎಲ್ಲರೂ ಗಮನದಲ್ಲಿರಿಸಿ ಕೊಳ್ಳಬೇಕು ಎಂದರು. ಸ್ಥಳೀಯ ಪ್ರಾಧಿ ಕಾರ, ಆರೋಗ್ಯ ಇಲಾಖೆ, ಸಾರಿಗೆ ಇಲಾಖೆ, ಕಂ ದಾಯ ಇಲಾಖೆ, ಆಹಾರ ಮತ್ತು ನಾಗ ರಿಕ ಸರಬ ರಾಜು ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಅಧಿಕಾ ರಿಗಳು ಉಪ ಸ್ಥಿತರಿದ್ದು ತಮ್ಮ ಇಲಾಖೆ ಗಳ ಗಣಕೀ ಕರಣ ಮಟ್ಟದ ಬಗ್ಗೆ ಮಾಹಿತಿ ನೀಡಿದರು. ಸಿಇಒ ಡಾ ಕೆ ಎನ್ ವಿಜಯ ಪ್ರಕಾಶ್, ಅಪರ ಜಿಲ್ಲಾಧಿಕಾರಿ ದಯಾನಂದ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ಡಾ. ಹರೀಶ್ ಕುಮಾರ್ ಉಪಸ್ಥಿತರಿದ್ದರು.

Sunday, February 26, 2012

ಬಜೆಟ್ ನಲ್ಲಿ ಯುವಜನತೆಗೆ ಒತ್ತು :ಡಿ.ವಿ.ಸದಾನಂದ ಗೌಡ

ಮಂಗಳೂರು,ಫೆಬ್ರವರಿ.26: ರಾಷ್ಟ್ರದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.40 ಕ್ಕಿಂತಲೂ ಹೆಚ್ಚಿರುವ ಯುವಜನತೆಯ ಕನಸುಗಳನ್ನು ಸಾಕಾರಗೊಳಿಸುವ ದಿಸೆಯಲ್ಲಿ ಕರ್ನಾಟಕ ರಾಜ್ಯ ಯುವ ಜನರಿಗಾಗಿಯೆ ಪ್ರತ್ಯೇಕ ಬಜೆಟ್ ಮಂಡಿಸಲು ಉತ್ಸುಕವಾಗಿದೆ, ಆದರೆ ಇದರ ಸಾಧಕ ಬಾಧಕಗಳನ್ನು ಅಧ್ಯಯನ ಮಾಡಿ ಮುಂದಿನ ವರ್ಷ ಬಜೆಟ್ ನಲ್ಲಿ ಯುವಜನರಿಗಾಗಿ ಪ್ರತ್ಯೆಕ ಬಜೆಟನ್ನು ಮಂಡಿಸಲಾಗುವುದು, ಆದರೆ ಈ ಬಾರಿಯ ಬಜೆಟ್ ನಲ್ಲಿ ಯುವ ಸಮೂಹಕ್ಕೆ ಹೆಚ್ಚಿನ ಒತ್ತು ನೀಡುವುದಾಗಿ ಕರ್ನಾಟಕದ ಮಾನ್ಯಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದ ಗೌಡರು ತಿಳಿಸಿದ್ದಾರೆ.ಅವರು ಇಂದು ಉಡು ಪಿಗೆ ತೆರ ಳುವ ಮಾರ್ಗ ದಲ್ಲಿ ಮಂಗ ಳೂರು ವಿಮಾನ ನಿಲ್ದಾ ಣದಲ್ಲಿ ಮಾಧ್ಯಮ ಪ್ರತಿ ನಿಧಿ ಗಳೊಂ ದಿಗೆ ಮಾತ ನಾಡು ತ್ತಿದ್ದರು.ದೇಶ ದಲ್ಲಿಯೇ ಪ್ರಥಮ ಬಾರಿಗೆ ರೈ ತಾಪಿ ಜನ ರಿಗಾ ಗಿಯೇ ಪ್ರತ್ಯೇಕ ಬಜೆಟ್ ನೀಡಿದ ಮಾದ ರಿಯ ಲ್ಲಿಯೇ ಯುವ ಜನ ರಿಗೂ ಪ್ರತ್ಯೇಕ ಬಜೆಟ್ ಮಂಡಿ ಸುವು ದಾಗಿ ಅವರು ತಿಳಿ ಸಿದರು.
ಲೋಕಾಯುಕ್ತ ನೇಮಾಕಾತಿ ಬಗ್ಗೆ ರಾಜ್ಯದ ಮುಖ್ಯ ನ್ಯಾಯಮೂರ್ತಿಗಳಿಗೆ, ವಿರೋಧಪಕ್ಷದ ನಾಯಕರಿಗೆ ಎಲ್ಲರಿಗೂ ಸೂಕ್ತ ವ್ಯಕ್ತಿಯನ್ನು ಗುರ್ತಿಸುವಂತೆ ಈಗಾಗಲೆ ಪತ್ರ ಬರೆಯಲಾಗಿದೆ ಎಂದ ಮುಖ್ಯಮಂತ್ರಿಗಳು ಈ ಬಾರಿಯ ಬಜೆಟ್ ಸಮಾಜದ ಎಲ್ಲಾ ವರ್ಗದ ಜನರಿಗೂ ಒಳಿತಾಗುವಂತೆ ಸಿದ್ದಪಡಿಸಲಾಗುತ್ತಿದೆ ಎಂದರು.
ಇದ ಕ್ಕಾಗಿ ಮುಂದಿನ ವಾರ ವಿವಿಧ ರೈತ ಸಂಘ ಗಳ ನಾಯ ಕರ ಜೊತೆ ಬಜೆಟ್ ಕುರಿ ತಂತೆ ಚರ್ಚಿ ಸುವು ದಾಗಿ ತಿಳಿಸಿದ ಅವರು, ಈಗಾ ಗಲೇ ಶೇ.60-65 ರಷ್ಟು ಇಲಾಖೆ ಗಳ ಪರಿ ಶೀಲನೆ ಕಾರ್ಯ ಮುಗಿ ದಿದ್ದು, ಎಲ್ಲಾ ಇಲಾಖೆ ಗಳ ಪರಿ ಶೀಲನೆ ಕಾರ್ಯ ವನ್ನು ನಡೆಸು ವುದಾಗಿ ತಿಳಿಸಿ ದರು.
ರಾಜ್ಯಕ್ಕೆ ಉತ್ತಮ ಬಜೆಟ್ ನೀಡುವಲ್ಲಿ ವಿರೋಧ ಪಕ್ಷಗಳ ಉತ್ತಮ ಸಲಹೆಗಳನ್ನು ಸ್ವೀಕರಿಸುವುದಾಗಿ ತಿಳಿಸಿದರು. ಮುಖ್ಯ ಮಂತ್ರಿಗಳ ಜೊತೆಯಲ್ಲಿ ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕೆ.ಟಿ. ಶೈಲಜಾ ಭಟ್, ವಿಧಾನಸಭೆ ಉಪಾಧ್ಯಕ್ಷರಾದ ಎನ್.ಯೋಗೀಶ್ ಭಟ್, ವಿಧಾನ ಪರಿಷತ್ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಸಂಸದರಾದ ನಳಿನ್ ಕುಮಾರ್ ಕಟೀಲ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಿ.ನಾಗರಾಜ ಶೆಟ್ಟಿ,ಮೇಯರ್ ಪ್ರವಿಣ್, ಬಿಜೆಪಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ ಮುಂತಾದವರು ಹಾಜರಿದ್ದರು.