Friday, September 28, 2012

ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ




ಶರವು ರಸ್ತೆ ಅಗಲೀಕರಣ ಸ್ಥಳ ಪರಿಶೀಲನೆ


ಮಂಗಳೂರು ಸೆಪ್ಟೆಂಬರ್ 28 : ನಗರದ ಪ್ರಮುಖ ಶರವು ರಸ್ತೆ ಅಗಲೀಕರಣ ಸಂಬಂಧ ಮಹಾ ನಗರಪಾಲಿಕೆ ಆಯುಕ್ತರು ಮತ್ತು ಇತರ ಅಧಿಕಾರಿ ಗಳೊಂದಿಗೆ ಜಿಲ್ಲಾಧಿಕಾರಿ ಡಾ. ಎನ್. ಎಸ್ ಚನ್ನಪ್ಪಗೌಡ ಅವರು ಸೆಪ್ಟೆಂಬರ್ 27 ರಂದು ಸಂಜೆ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಮಾರ್ಗ ದರ್ಶನಗಳನ್ನು ನೀಡಿದರು. ತಕ್ಷಣವೇ ರಸ್ತೆ ಅಗಲೀಕರಣ ಪ್ರಕ್ರಿಯೆ ಯನ್ನು ಮುಗಿಸಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಾಲಿಕೆ ಸದಸ್ಯರಾದ ಶ್ರೀಮತಿ ಆರ್ ಶಾಂತಾ ಅವರು ಉಪಸ್ಥಿತರಿದ್ದರು.

ತ್ಯಾಜ್ಯದಿಂದ ಎರೆಗೊಬ್ಬರ ತಯಾರಿಕೆ

ಮಂಗಳೂರು, ಸೆಪ್ಟೆಂಬರ್. 28 :ಮೂಡಬಿದ್ರೆ ಕೇಂದ್ರದ 23 ವಾರ್ಡುಗಳಲ್ಲಿ ಮನೆಮನೆ ಕಸ ಸಂಗ್ರಹಿಸಿ ಎರೆಗೊಬ್ಬರ ತಯಾರಿಸಿ,ವಿಲೇವಾರಿ ಮಾಡುವ ಕ್ರಮವನ್ನು ಈಗಾಗಲೇ ಕೈಗೊಳ್ಳಲಾಗಿದೆ.ಇದೇ ರೀತಿ ಎಲ್ಲಾ ತಾಲ್ಲೂಕುಗಳಲ್ಲಿ ತ್ಯಾಜ್ಯ ವಿಲೇವಾರಿ ಕ್ರಮ ಕೈಗೊಳ್ಳಲಾಗುವುದು.ಮನೆಮನೆ ಕಸ ಸಂಗ್ರಹಿಸುವಾಗ ಕಸವನ್ನು ವಿಂಗಡಿಸಿ,ಪ್ಲಾಸ್ಟಿಕ್ ಬೇರೆ ಬ್ಯಾಗುಗಳಲ್ಲಿ ಹಾಗೂ ಇತರ ತ್ಯಾಜ್ಯವನ್ನು ಬೇರೆ ತೊಟ್ಟಿಗಳಲ್ಲಿ ಕೊಟ್ಟರೆ ಮಾತ್ರ ತೆಗೆದುಕೊಳ್ಳಲಾಗುವುದು.ಇಲ್ಲದಿದ್ದರೆ ದಂಡ ವಿಧಿಸಲಾಗುವುದು.ಮುಂದಿನ ದಿನಗಳಲ್ಲಿ ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಎಲ್ಲಾ ನಗರಸಭಾ ಪಾಲಿಕೆ ಮುಖ್ಯಸ್ಥರು ಪ್ರಯತ್ನಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಚನ್ನಪ್ಪ ಗೌಡ ತಿಳಿಸಿದರು.
          ಅವರು ಸ್ಥಳೀಯ ಸಂಘ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಸಭೆಯಲ್ಲಿ ವಾಜಪೇಯಿ ನಗರ ವಸತಿ ಹಾಗೂ ನಮ್ಮ ಮನೆ ಯೋಜನೆಯಲ್ಲಿ 2012 ನೇ ಸೆಪ್ಟೆಂಬರ್ ಅಂತ್ಯದವರೆಗೆ ಶೇಕಡಾ 42 ರಷ್ಟು ಸಾಧನೆಯಾಗಿದೆ. ಮುಖ್ಯಮಂತ್ರಿ ಸಣ್ಣ ಮತ್ತು ಬೃಹತ್ ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಮೂಡಬಿದ್ರೆ,ಉಳ್ಳಾಲ ನಗರಸಭೆಗಳನ್ನೊಳಗೊಂಡು ಎಲ್ಲಾ ತಾಲ್ಲೂಕಿನ ನಗರಸಭೆಗಳಿಗೆ ರೂ.2600 ಲಕ್ಷ ಅನುದಾನ ಬಿಡುಗಡೆಯಾಗಿದ್ದು,103 ಕಾಮಗಾರಿಗಳು ಪ್ರಗತಿಯಲ್ಲಿವೆ.ಸಣ್ಣ ಉದ್ದಿಮೆ ಯೋಜನೆಯಲ್ಲಿ ಎಲ್ಲಾ ತಾಲೂಕುಗಳ ನಗರಸಭೆಗಳಿಗೆ  ತಲಾ 4 ಲಕ್ಷ ಅನುದಾನ ಬಿಡುಗಡೆಯಾಗಿದೆ.ಈ ಅನುದಾನದಲ್ಲಿ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಆವರಣಗೋಡೆ ಹಾಗೂ ವಿದ್ಯುದ್ದೀಕರಣ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಯೊಜನಾ ನಿರ್ದೇಶಕರಾದ  ತಾಕತ್ ರಾವ್  ಸಭೆಗೆ ತಿಳಿಸಿದರು. ಸಭೆಯ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು,ಅಧಿಕಾರಿಗಳು ಉಪಸ್ಥಿತರಿದ್ದರು.
 

Thursday, September 27, 2012

ವಿದ್ಯುತ್ ಉತ್ಪಾದನೆ ಮತ್ತು ನಿರ್ವಹಣೆಗೆ ಆದ್ಯತೆ: ಇಂಧನ ಸಚಿವರು

ಮಂಗಳೂರು, ಸೆಪ್ಟೆಂಬರ್ .27: ಗಣನೀಯ ಪ್ರಮಾಣದಲ್ಲಿ ವಿದ್ಯುತ್ ಪೂರೈಕೆಯನ್ನು ರಾಜ್ಯ ನಿರೀಕ್ಷಿಸುತ್ತಿದ್ದು, ಬೇಡಿಕೆಯನ್ನು ಈಡೇರಿಸಲು ಇಲಾಖೆ ಶಕ್ತಿಮೀರಿ ಶ್ರಮಿಸುತ್ತಿದೆ. ಉತ್ಪಾದನೆ ಮತ್ತು ವಿತರಣೆಯಲ್ಲಿ ಲೋಪವಾಗದಿರಲು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲಾಗುತ್ತಿದೆ ಎಂದು ಇಂಧನ ಸಚಿವರಾದ ಕುಮಾರಿ ಶೋಭಾ ಕರಂದ್ಲಾಜೆ ಅವರುಹೇಳಿದರು.
ಅವರು ಗುರುವಾರ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸವಣೂ ರಿನಲ್ಲಿ ಗುಣ ಮಟ್ಟದ ವಿದ್ಯುತ್ ಸರಬ ರಾಜಿಗಾಗಿ 33/11 ಕೆವಿ ವಿದ್ಯುತ್ ಉಪ ಕೇಂದ್ರ ಹಾಗೂ ಪುತ್ತೂರು ಗ್ರಾಮಾಂತರ ಉಪ ವಿಭಾಗದ ಉದ್ಘಾಟನಾ ಸಮಾ ರಂಭದಲ್ಲಿ ಉದ್ಘಾ ಟನೆ ನೆರವೇರಿಸಿ ಮಾತನಾಡುತ್ತಿದ್ದರು.
ಇಂಧನ ಸಚಿವೆಯಾಗಿ ತವರು ಕ್ಷೇತ್ರವನ್ನು ಬೆಳಗಿ ಸಬೇಕೆಂಬ ಇಚ್ಛೆ ಕಾರ್ಯ ರೂಪಕ್ಕೆ ಬಂದಿದೆ. ವೋಲ್ಟೇಜ್ ಸಮಸ್ಯೆ, ಲೈನ್ ಕೊರತೆ ನೀಗಿಸಲು ಕ್ರಮ. 11 ತಿಂಗ ಳ ಕಾಲ ಮಿತಿಯೊಳಗೆ ಸವಣೂ ರಿನಲ್ಲಿ ಯೋಜನೆ ಅನುಷ್ಠಾನ ಗೊಂಡಿದ್ದಕ್ಕೆ ಮೆಸ್ಕಾಂನ್ನು ಅಭಿ ನಂದಿಸಿದರು. ಹಳ್ಳಿಯ ರೈತರ ಆಗ್ರಹ ರಸ್ತೆ, ವಿದ್ಯುತ್, ಅಡಿಕೆ ಬೆಳೆಗೆ ಬೆಲೆ; ಇದೇ ಇಲ್ಲಿನ ಪ್ರಮುಖ ಬೇಡಿಕೆ. ಬರದಿಂದಾಗಿ ರಾಜ್ಯದ ಪ್ರಮುಖ ಅಣೆಕಟ್ಟುಗಳು ಭತರ್ಿಯಾಗದೆ ವಿದ್ಯುತ್ ಕ್ಷಾಮ ನಿರೀಕ್ಷೆಗಿಂತ ಮುಂಚೆ ನಮ್ಮ ಮುಂದಿದೆ.
2,100 ಮೆಗಾವ್ಯಾಟ್ ಪವನವಿದ್ಯುತ್ ಈ ಸಮಯದಲ್ಲಿ ಹಲವೆಡೆಗಳಲ್ಲಿ ಉತ್ಪಾದಿಸಲಾಗುತ್ತಿದ್ದು, ಇಂದು ಪವನಶಕ್ತಿಯಿಂದ ಉತ್ಪಾದನೆಯಾಗುತ್ತಿದ್ದ ವಿದ್ಯುತ್ನ ಪ್ರಮಾಣವು 60ರಿಂದ 70ಕ್ಕೆ ಇಳಿದಿದೆ. ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ. ಉಡುಪಿಯಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತಿರುವುದರಿಂದ ಪರಿಸ್ಥಿತಿ ಜಿಲ್ಲೆಯಲ್ಲಿ ಸಮಾಧಾನಕರ ಎಂದರು.
ಗ್ರಾಹ ಕರಿಗೆ ಗುಣ ಮಟ್ಟದ ವಿದ್ಯುತ್ ಸರಬ ರಾಜು ಮಾಡಲು ಕಂಪೆ ನಿಯು ಹಲವಾರು ಸುಧಾ ರಣಾ ಕ್ರಮ ಗಳನ್ನು ಕೈ ಗೊಂಡಿದ್ದು, ಸವ ಣೂರು ಮತ್ತು ಸುತ್ತ ಮುತ್ತಲಿನ ಪ್ರದೇಶ ದಲ್ಲಿ ಇನ್ನಷ್ಟು ಗುಣ ಮಟ್ಟದ ವಿದ್ಯುತ್ ಸರ ಬರಾಜು ಮಾಡುವ ಸಲುವಾಗಿ ಹಾಲಿ ಕುಂಬ್ರ 33/11 ಕೆ ವಿ ವಿದ್ಯುತ್ ವಿತರಣಾ ಕೇಂದ್ರದ ಮೇಲಿನ ಹೊರೆಯನ್ನು ಬೇರ್ಪಡಿಸಿ ಸವಣೂರು 33/11 ಕೆ ವಿ ವಿದ್ಯುತ್ ವಿತರಣಾ ಕೇಂದ್ರದ ಸ್ಥಾಪನೆಗೊಂಡು ಲೋಕಾರ್ಪಣೆಗೊಂಡಿದೆ. ಗ್ರಾಹಕರಿಗೆ ಉತ್ತಮ ವಿದ್ಯುತ್ ಸೇವೆಯನ್ನು ಒದಗಿಸಲು ಗ್ರಾಮಾಂತರ ಉಪವಿಭಾಗವನ್ನು ಚಾಲನೆಗೊಳಿಸಲಾಗುತ್ತಿದೆ.
ಉದ್ಯಮಗಳು, ಪಂಪ್ ಸೆಟ್ ಮನೆಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಬೇಡಿಕೆ ಜಾಸ್ತಿಯಾಗುತ್ತಿದೆ. ಹಲವು ಪಯರ್ಾಯಗಳನ್ನು ಸಕರ್ಾರ ಕೈಗೊಂಡಿದೆ. ಉತ್ಪಾದನೆ, ಸಾಗಾಣಿಕೆ, ವಿತರಣೆ ನಿರ್ವಹಿಸಲು ಕ್ರಮ. ವಿದ್ಯುತ್ ವ್ಯತ್ಯಯ ಉಳಿಸಲು ಈ ಘಟಕವಿದ್ದು, ಜಿಲ್ಲೆಯ ಎಲ್ಲರ ಸಹಕಾರದಿಂದ ಮೆಸ್ಕಾಂ ನಷ್ಟವಿಲ್ಲದೆ ಸಾಗುತ್ತಿದೆ. ಪವರ್ ಆಡಿಟಿಂಗ್ ಇಂದಿನವರೆಗೆ ಆಗಿಲ್ಲ. ತಮ್ಮ ಅಧಿಕಾರವಧಿಯಲ್ಲಿ ಸ್ಟೇಷನ್ ಮತ್ತು ಲೈನ್ ಗೆ ಕೆಪಿಟಿಸಿ ಎಲ್ ನಿಂದ 10.50 ಕೋಟಿ ಖರ್ಚಾಗಿದೆ. ಸುಳ್ಯದಲ್ಲಿ ವೋಲ್ಟೇಜ್ ಸಮಸ್ಯೆ ಪರಿಹರಿಸುವುದು ಇಲ್ಲಿನ ಆದ್ಯತೆಯಾಗಿದ್ದು, ಗುರಿ ಸಾಧಿಸುವ ನಿರೀಕ್ಷೆ ಇದೆ.
ರಾಜೀವ್ ಗಾಂಧಿ ವಿದ್ಯುದೀಕರಣ ಯೋಜನೆಯಡಿ ಜಿಲ್ಲೆಗೆ 70.88 ಕೋಟಿ ರೂ.ಗಳ ಅನುದಾನ ಬಂದಿದ್ದು, ಹೊಸ ಯೋಜನೆಗಳಡಿ ಸಮಗ್ರ ಅಭಿವೃದ್ದಿಗೆ ಕ್ರಮ. ವಿನೂತನ ತಂತ್ರಜ್ಞಾನದ ಮೂಲಕ ಇಲಾಖೆಯ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಶಾಂತಿಮೊಗರು ಸೇತುವೆ ಮಂಜೂರು ಮಾಡಿದೆ ಎಂದರು.
ಎಂಡೋಸಲ್ಫಾನ್ ಪೀಡಿತರ ಸಮಸ್ಯೆಗೆ ಸೂಕ್ತ ಸ್ಪಂದನೆ. ಸಮೀಕ್ಷೆ, ಕ್ಯಾಂಪ್ ಮೂಲಕ ಪರಿಹಾರ, ಗೌರವಧನ ನೀಡಲು ಯತ್ನಿಸಿದ್ದೇವೆ. ಇನ್ನೂ ಹಲವು ಗ್ರಾಮಗಳಲ್ಲಿ ಈ ಕೆಲಸ ಆಗಬೇಕಿದೆ. ಅದನ್ನು ಸರ್ಕಾರ ನೆರವೇರಿಸಲಿದೆ.
ಅಧ್ಯಕ್ಷೀಯ ಭಾಷಣ ದಲ್ಲಿ ಶಾಸಕ ಶ್ರೀ ಎಸ್ ಅಂಗಾರ ಅವರು ಮಾತ ನಾಡಿ, ಇಂಧನ ಸಚಿ ವರ ಕಾರ್ಯ ಕ್ಷಮತೆ ಯನ್ನು ಪ್ರಶಂ ಸಿಸಿದರು.
ಜಿಲ್ಲಾ ಪಂಚಾ ಯತ್ ಅಧ್ಯಕ್ಷ ಶ್ರೀಮತಿ ಕೆ ಟಿ ಶೈಲಜಾ ಭಟ್, ತಾಲೂಕು ಪಂಚಾಯ ತ್ ಅಧ್ಯಕ್ಷ ಡಿ ಶಂಭು ಭಟ್, ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಸಾವಿತ್ರಿ ಎಚ್ ಎಸ್, ತಾಲೂಕು ಪಂಚಾಯ ತ್ ಉಪಾಧ್ಯಕ್ಷರಾದ ಶ್ರೀಮತಿ ಪುಲಸ್ಯ ರೈ, ಸವಣೂರು ತಾಲೂಕು ಪಂಚಾಯ ತ ಸದಸ್ಯರಾದ ದಿನೇಶ್ ಮೆದು, ಸವಣೂರು ಗ್ರಾಮಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಧಾ ಎಸ್ ರೈ, ಸವಣೂರು ಗ್ರಾಮಪಂಚಾಯತ್ ಉಪಾಧ್ಯಕ್ಷರಾದ ರಾಕೇಶ್ ರೈ, ಕವಿಪ್ರನಿನಿ ವ್ಯವಸ್ಥಾಪಕ ನಿರ್ದೇಶಕರಾದ ಎಸ್ ಸೆಲ್ವ ಕುಮಾರ್ ಉಪಸ್ಥಿತರಿದ್ದರು. ಮೆಸ್ಕಾಂ ನ ವ್ಯವಸ್ಥಾಪಕ ನಿರ್ದೇಶಕರಾದ ವಿಜಯ ನರಸಿಂಹ ಸ್ವಾಗತಿಸಿದರು.

Wednesday, September 26, 2012

ಸುರತ್ಕಲ್ ನಲ್ಲಿ ಮಂಗಳೂರು ಒನ್ ಸಮಗ್ರ ನಾಗರಿಕ ಸೇವಾ ಕೇಂದ್ರದ ಉದ್ಘಾಟನೆ

ಮಂಗಳೂರು,ಸೆಪ್ಟೆಂಬರ್.26:ಮಂಗಳೂರಿನ ಸುರತ್ಕಲ್ ನಲ್ಲಿ ಸಮಗ್ರ ನಾಗರಿಕ ಸೇವಾ ಕೇಂದ್ರವು ಒಳ್ಳೆಯ ರೀತಿಯಲ್ಲಿ ನಡೆಯಲಿ, ಇದರ ಎಲ್ಲಾ ಸೌಲಭ್ಯವು ಹಿರಿಯ ಕಿರಿಯ ಸಾರ್ವಜನಿಕರಿಗೆ ಉತ್ತಮ ರೀತಿಯಲ್ಲಿ ಸಿಗುವಂತಾಗಲಿ. ಅದೇ ರೀತಿ ಕಾಟಿಪಳ್ಳದ ಗ್ರಾಮ ಪಂಚಾಯತ್ ಕಚೇರಿ ಆವರಣದಲ್ಲಿ ಮಂಗಳೂರು ಒನ್ ಕಚೇರಿಯನ್ನು ತೆರೆಯುವಂತಾಗಲಿಯೆಂದು ಮಂಗಳೂರು ಮಹಾನಗರಪಾಲಿಕೆ ಮೇಯರ್ ಶ್ರೀಮತಿ ಗುಲ್ಜಾರ್ ಭಾನು ತಿಳಿಸಿದರು.
ಅವರು ಇಂದು ಇಡಿಸಿಎಸ್ ನಿರ್ದೇಶ ನಾಲಯ,ಇ ಆಡಳಿತ ಶಾಖೆ,ಕರ್ನಾಟಕ ಸರ್ಕಾರ ,ಜಿಲ್ಲಾಡಳಿತ ಹಾಗೂ ಮಂಗ ಳೂರು ಮಹಾ ನಗರ ಪಾಲಿಕೆ ಇವರ ಸಂಯುಕ್ತಾ ಶ್ರಯ ದಲ್ಲಿ ಮಂಗ ಳೂರು ಒನ್ ಕೇಂದ್ರದ ಉದ್ಘಾ ಟನೆಯನ್ನು ಸುರತ್ಕಲ್ ಮೂಡಾ ಮಾರು ಕಟ್ಟೆ ಸಂಕೀ ರ್ಣದಲ್ಲಿ ನೆರ ವೇರಿಸಿ ಮಾತ ನಾಡು ತ್ತಿದ್ದರು.
ಮಂಗಳೂರು ಒನ್ ಕೇಂದ್ರವು ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸುರತ್ಕಲ್ ಕೇಂದ್ರವು ನಾಲ್ಕನೇಯದಾಗಿದ್ದು, ಈಗಾಗಲೇ ಮಂಗಳೂರು ಮಹಾನಗರಪಾಲಿಕೆ ಕಟ್ಟಡದಲ್ಲಿ ದೂ.ಸಂ.0824-2459959 , ಬಾವುಟಗುಡ್ಡ ನಿಲ್ದಾಣದ ಎದುರು ದೂ.ಸಂ.0824-2420086, ಮಹಾನಗರಪಾಲಿಕೆ ವಾಣಿಜ್ಯ ಸಂಕೀರ್ಣ, ಶಿವಭಾಗ್, ಕದ್ರಿಯಲ್ಲಿ 0824-2216008 ಸೇವೆಯನ್ನು ಒದಗಿಸುತ್ತಿದೆ. ಇಂದು ಉದ್ಘಾಟನೆಗೊಂಡ ಸುರತ್ಕಲ್ ಕೇಂದ್ರ ದೂ.ಸಂ.0824-2474599 ಇಲ್ಲಿ ಬೆಳಿಗ್ಗೆ 8 ರಿಂದ ರಾತ್ರಿ 8 ಗಂಟೆವರೆಗೆ, ವರ್ಷದ ಎಲ್ಲಾ ದಿನಗಳಲ್ಲೂ ಅಂದರೆ ಯಾವುದೇ ಪ್ರತಿಭಟನೆ/ಬಂದ್ ಸಂದರ್ಭಗಳಲ್ಲೂ ನಾಗರಿಕರ ಅನುಕೂಲಕ್ಕಾಗಿ ಸೇವೆಗಳನ್ನು ಒದಗಿಸಲಾಗುತ್ತದೆ.
ಮಂಗಳೂರು ಒನ್ ಸುರತ್ಕಲ್ ಕೇಂದ್ರದಲ್ಲಿ ವಿದ್ಯುತ್ ಬಿಲ್ಲು,ನೀರಿನ ಬಿಲ್ಲು ಆಸ್ತಿ ತೆರಿಗೆ,ದೂರವಾಣಿ ಬಿಲ್ಲು ಪಾವತಿ, ಬಿಎಸ್ಎನ್ಎಲ್ ಮೊಬೈಲ್ ಬಿಲ್ ಪಾವತಿ,ಪಿಯುಸಿ ಉತ್ತರ ಪತ್ರಿಕೆಯ ಪ್ರತಿ,ಜೆರಾಕ್ಸ್ ಕಾಪಿ, ಮರು ಎಣಿಕೆ /ತಪಾಸಣೆ ಶುಲ್ಕ ಪಾವತಿ, ಬೆಂಗಳೂರು ವಿಶ್ವ ವಿದ್ಯಾನಿಲಯದ ಕೋರ್ಸ್ ಗಳಿಗೆ ಅರ್ಜಿ ಶುಲ್ಕ ಪಾವತಿ,ಪೊಲೀಸ್ ವೆರಿಫಿಕೇಷನ್/ಕ್ಲಿಯರೆನ್ಸ್ ದೃಢೀಕರಣ ಪತ್ರ ಪಡೆಯಲು ಶುಲ್ಕ ಪಾವತಿ,ಕೆಎಸ್ಆರ್ಟಿಸಿ ಟಿಕೆಟ್ ಬುಕ್ಕಿಂಗ್, ಏರ್ಟೆಲ್ ಲ್ಯಾಂಡ್ಲೈನ್/ಮೊಬೈಲ್ ಬಿಲ್ಲು ಪಾವತಿ,ವೊಡಾಫೋನ್ ಮೊಬೈಲ್ ಬಿಲ್ಲು ಪಾವತಿ,ಪಾಸ್ ಪೋರ್ಟ್ ಅರ್ಜಿಗಳ ಮಾರಾಟ,ಉದ್ಯೋಗಕ್ಕೆ ಬೇಕಾದ ಅರ್ಜಿಗಳ ಮಾರಾಟ, ವೈಶ್ಯ ಬ್ಯಾಂಕ್ ವಿಮೆ ನವೀಕರಣ ಮುಂತಾದ ಹಲವು ಸೌಲಭ್ಯಗಳನ್ನು ಈ ಕೇಂದ್ರದಲ್ಲಿ ಸಾರ್ವಜನಿಕರಿಗೆ ದೊರಕಿಸಿಕೊಡಲಾಗುವುದು.
ಮಂಗಳೂರು ಒನ್ ಕೇಂದ್ರವನ್ನು ಜೂನ್ 2010 ರಿಂದ ಪ್ರಾರಂಭಿಸಿ ಇದುವರೆಗೆ ಎರಡು ವರ್ಷಗಳಲ್ಲಿ ಮಂಗಳೂರು ಮಹಾನಗರಪಾಲಿಕೆಯ ಒಟ್ಟು ಮೂರು ಸೆಂಟರ್ಗಳಲ್ಲಿ ಸುಮಾರು 9.21 ಲಕ್ಷ ಪ್ರಕರಣಗಳನ್ನೊಳಗೊಂಡು ಸುಮಾರು 110 ಕೋಟಿ ರೂ.ಗಳ ವಹಿವಾಟು ನಡೆದಿದೆಯೆಂದು ಇಡಿಸಿಎಸ್ (ಡೈರೆಕ್ಟರೇಟ್ ಇಲೆಕ್ಟ್ರಾನಿಕ್ಸ್ ಡೆಲಿವೆರಿ ಆಫ್ ಸಿಟಿಜನ್ ಸರ್ವಿಸಸ್) ಶಶಿಧರ ಸಾರಂಗಮಠ್ ಈ ಸಂದರ್ಭದಲ್ಲಿ ತಿಳಿಸಿದರು.
ಸಮಾರಂಭದಲ್ಲಿ ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರಾದ ಡಾ ಹರೀಶ್ ಕುಮಾರ್, ಉಪಮೇಯರ್ ಶ್ರೀಮತಿ ಅಮಿತ ಕಲಾ,ಮಾಜಿ ಮೇಯರ್ ಗಳಾದ ಶ್ರೀಮತಿ ರಜನಿ ದುಗ್ಗಣ್ಣ, ಗಣೇಶ ಹೊಸಬೆಟ್ಟು ಮುಂತಾದವರು ಉಪಸ್ಥಿತರಿದ್ದರು.

Tuesday, September 25, 2012

ಸರ್ವ ಶಿಕ್ಷಣ ಯೋಜನೆಅಭಿಯಾನ,ಜಿಲ್ಲೆಗೆ ರೂ5137.283ಲಕ್ಷ


ಮಂಗಳೂರು,ಸೆಪ್ಟೆಂಬರ್.25:ಸರ್ವ ಶಿಕ್ಷಣ ಯೋಜನೆಅಭಿಯಾನದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ 2012-13ನೆ ಸಾಲಿಗೆ ಒಟ್ಟು ರೂ 5137.283ಲಕ್ಷ ಮಂಜೂರಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಕೆ.ಟಿ.ಶೈಲಜಾ ಭಟ್ ಹೇಳಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಹಮ್ಮಿಕೊಂಡ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಸರ್ವ ಶಿಕ್ಷಣ ಯೋಜನೆಯ ಮೂಲಕ ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದ ಸುಮಾರು 70ಕ್ಕೂ ಅಧಿಕ ಕಾರ್ಯ ಕ್ರಮ ಗಳು ಅನು ಷ್ಠಾನ ಗೊಳ್ಳುತ್ತಿವೆ.ಶಾಲಾ ಕೊಠಡಿ ನಿರ್ಮಾಣ ದಿಂದ ತೊಡಗಿ ಶೈಕ್ಷಣಿಕ ಗುಣ ಮಟ್ಟವನ್ನು ಅಭಿ ವೃದ್ಧಿ ಪಡಿ ಸುವುದು ಸೇರಿ ದಂತೆ ಹತ್ತು ಹಲವು ಕಾರ್ಯ ಕ್ರಮ ಗಳನ್ನು ಹಮ್ಮಿ ಕೊಳ್ಳ ಲಾಗುತ್ತಿದೆ ಎಂದರು.ಜಿಲ್ಲೆ ಯಲ್ಲಿ ಈಗಾಗಲೇ 262 ಶಾಲೆ ಗಳನ್ನು ಮೇಲ್ದರ್ಜೆಗೆ ಏರಿಸ ಲಾಗಿದೆ.2012-13ನೇ ಸಾಲಿನಲ್ಲಿ 42 ಹಿರಿಯ ಪ್ರಾಥ ಮಿಕ ಶಾಲೆ ಗಳಲ್ಲಿ 8 ನೇ ತರಗತಿ ಆರಂಭಿಸಲು ಅನುಮೋದನೆ ದೊರೆತ್ತಿದ್ದು,ಮುಂದಿನ ಹಂತದಲ್ಲಿ ಎಲ್ಲಾ ಪ್ರಾಥಮಿಕ ಶಾಲೆಗಳಲ್ಲೂ 8ನೇ ತರಗತಿ ಆರಂಭಗೊಳ್ಳಲಿದೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರು. ವಿಶೇಷ ಮಕ್ಕಳ ದತ್ತು ಸ್ವೀಕಾರ ಯೋಜನೆ:-ಜಿಲ್ಲೆಯಲ್ಲಿ 6-14 ವಯೋಮಾನದ 602 ಮಕ್ಕಳನ್ನು ಜಿಲ್ಲೆಯ ವಿವಿಧ ಸಹಕಾರಿ ಸಂಘಗಳು ದತ್ತು ಸ್ವೀಕರಿಸಿ,ಅವರ ಶಿಕ್ಷಣ ಮುಂದುವರಿಕೆಗೆ ಪೂರಕವಾಗುವಂತೆ ವಿವಿಧರೀತಿಯ ಸಹಕಾರ ನೀಡಲು ಮುಂದೆ ಬಂದಿರುವುದುರಾಜ್ಯದಲ್ಲಿಯೇ ಪ್ರಥಮ ಪ್ರಯತ್ನವಾಗಿದೆಎಂದು ಶೈಲಜ ಭಟ್ ತಿಳಿಸಿದರು.ಜಿಲ್ಲೆಯ 35 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ 6ನೆ ತರಗತಿಯಿಂದಆಂಗ್ಲ ಮಾಧ್ಯಮವನ್ನು ಪ್ರಾಯೋಗಿಕವಾಗಿ ಈ ವರ್ಷದಿಂದಲೆಆರಂಭಿಸಲಾಗುವುದು.ಜಿಲ್ಲೆಯಲ್ಲಿ 10ಮಕ್ಕಳಿಗಿಂತ ಕಡಿಮೆಇರುವ 17 ಶಾಲೆಗಳಿವೆ ಆದರೆ ಈ ಶಾಲೆಗಳನ್ನು ಮುಚ್ಚುವ ತೀಮರ್ಾನವನ್ನು ಕೈ ಗೊಂಡಿಲ್ಲ.ಜಿಲ್ಲೆಯಲ್ಲಿಜನಸಂಖ್ಯೆಯ ಪ್ರಮಾಣ ಕುಸಿದಿರುವುದರಿಂದ ಮಕ್ಕಳ ದಾಖಲಾತಿಯೂ ಕಡಿಮೆಯಾಗಿದೆ.2011ರಲ್ಲಿ ವಾಷರ್ಿಕ 314220 ಆಗಿತ್ತು.2011-12 ಸಾಲಿನಲ್ಲಿದಾಖಲಾತಿ 273555ಕ್ಕೆ ಇಳಿಕೆಯಾಗಿದೆ.ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಕಳೆದ ಹತ್ತು ವರ್ಷದ ಹಿಂದೆಜಿಲ್ಲೆಯಲ್ಲಿ 7864 ಇತ್ತು.ಈ ಪ್ರಮಾಣ2012-13ರಲ್ಲಿ 137 ಕ್ಕೆ ಇಳಿಕೆಯಾಗುವ ಮೂಲಕ ಉತ್ತಮ ಸಾಧನೆಯಾಗಿದೆ.ಬೆಳ್ತಂಗಡಿಯ ಲಾಲದಲ್ಲಿ ರೂ.1.23ಲಕ್ಷ ವೆಚ್ಚದಲ್ಲಿ ಉತ್ಫಾದಿಸಿರುವ ಸೇಪ್ಟಿ ನ್ಯಾಪ್ಕಿನ್ ಘಟಕದ ಮೂಲಕ ಜಿಲ್ಲೆಯ 10,250 ಶಾಲಾ ಮಕ್ಕಳಿಗೆ ನ್ಯಾಫ್ಕಿನ್ ಒದಗಿಸುವ ಯೋಜನೆರಾಜ್ಯದಲ್ಲೆ ಪ್ರಥಮ ಪ್ರಯತ್ನವಾಗಿದೆ.ಜಿಲ್ಲೆಯಲ್ಲಿ ಪ್ರಾಥಮಿಕ ಹಾಗು ಪ್ರೌಢ ಶಾಲೆಗಳಲ್ಲಿ ಮಕ್ಕಳ ಶೈಕ್ಷಣಿಕಗುಣ ಮಟ್ಟದ ವರ್ಧನೆಗಾಗಿ ಹಾಗು ಶೈಕ್ಷಣಿಕ ವಾತವರಣ ನಿಮರ್ಾಣಕ್ಕಾಗಿ ವಿನೂತನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಶೈಲಜ ತಿಳಿಸಿದರು. ನಕ್ಸಲ್ ಬಾಧಿತ ಪ್ರದೇಶಗಳ ಶಾಲೆಗಳಿಗೆ ವಿಶೇಷ ಕಾರ್ಯಕ್ರಮ:ಸರ್ವ ಶಿಕ್ಷಣ ಯೋಜನೆಯ ಮೂಲಕ ಬೆಳ್ತಂಗಡಿ ತಾಲೂಕಿನ ನಕ್ಸಲ್ ಬಾಧಿತ ಪ್ರದೇಶಗಳ 24 ಶಾಲಾ ವ್ಯಾಪ್ತಿಗೆ ಸಂಬಂಧಿಸಿಸದಂತೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಒಂದು ವಸತಿ ಶಾಲೆಯನ್ನು ಈ ಪ್ರದೇಶದಲ್ಲಿ ಆರಂಭಿಸಲಾಗುವುದು.ಇಲ್ಲಿನ ಸುಮಾರು 2496 ಮಕ್ಕಳಿಗೆ ಬ್ಯಾಗ್,ಚಪ್ಪಲ್,ಛತ್ರಿ,ಕಲಿಕಾ ಸಾಮಾಗ್ರಿ ಸೇರಿದಂತೆಇತರ ಕೆಲವು ಅವಷ್ಯಕ ಸಾಮಾಗ್ರಿಗಳನ್ನು ನೀಡಲು ತೀರ್ಮಾನಿಸಲಾಗಿದೆ.ಇದಕ್ಕಾಗಿರೂ 25 ಲಕ್ಷ ಅನುದಾನ ನಿಗದಿ ಪಡಿಸಲಾಗಿದೆ.ವಸತಿಗೆ ಶಾಲೆಯ ಕಟ್ಟಡ ನಿರ್ಮಾಣಕ್ಕೆ 154.53 ಲಕ್ಷ ಬಿಡುಗಡೆಯಾಗಿದ್ದು,ರಾಜ್ಯ ಕಚೇರಿಯ ಮೂಲಕ ಕಟ್ಟಡ ನಿರ್ಮಾಣವಾಗಲಿದೆ. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ನ ಉಪಾಧ್ಯಕ್ಷರಾದ ಧನಲಕ್ಷ್ಮಿಜನಾರ್ದನ್,ಮುಖ್ಯಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯ ಪ್ರಕಾಶ್,ಉಪ ಕಾರ್ಯದರ್ಶಿ ಶಿವ ರಾಮೇಗೌಡ,ಮುಖ್ಯ ಲೆಕ್ಕಾಧಿಕಾರಿ ಶೇಖ್ ಲತೀಫ್,ಮುಖ್ಯಯೋಜನಾಧಿಕಾರಿ ಮುಹಮ್ಮದ್ ನಝೀರ್,ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಫಿಲೋಮಿನಾ ಲೋಬೊ,ಸರ್ವ ಶಿಕ್ಷಣ ಅಭಿಯಾನದ ಸಮನ್ವಯಾಧಿಕಾರಿ ಮೋಸೆಸ್ ಜಯಶಂಕರ್,ಉಪ ಸಮನ್ವಯಾಧಿಕಾರಿ ಎನ್.ಶಿವ ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.

Monday, September 24, 2012

ಮಾರ್ಗಸೂಚಿ ಅನುಸರಿಸಿ ಕಾಲಮಿತಿಯೊಳಗೆ ಕಾಮಗಾರಿ ಮುಗಿಸಲು ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ

ಮಂಗಳೂರು,ಸೆಪ್ಟೆಂಬರ್. 24: ನಗರೋತ್ಥಾನ ಯೋಜನೆಯ ಎರಡನೇ ಹಂತದಲ್ಲಿ ದಕ್ಷಿಣಕನ್ನಡ ಜಿಲ್ಲೆಗೆ 32 ಕೋಟಿ ರೂ.ಗಳ ಅನುದಾನ ಲಭಿಸಿದ್ದು,ಕ್ರಿಯಾ ಯೋಜನೆ ಸಿದ್ಧಗೊಂಡಿದೆ, ಕಾಲಮಿತಿಯೊಳಗೆ ಕಾಮಗಾರಿ ಮುಗಿಸಲು ಅಧಿಕಾರಿಗಳಿಗೆ ಉನ್ನತ ಶಿಕ್ಷಣ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಸಿ ಟಿ ರವಿ ಸೂಚಿಸಿದರು.
ಇಂದು ಜಿಲ್ಲಾ ಧಿಕಾ ರಿಗಳ ಕಚೇ ರಿಯಲ್ಲಿ ನಗ ರೋತ್ಥಾನ ಸಭೆಯ ಅಧ್ಯಕ್ಷತೆ ವಹಿಸಿ ಮಾತ ನಾಡು ತ್ತಿದ್ದ ಅವರು, ಅಂದಾಜು ಪಟ್ಟಿ ಸಲ್ಲಿಕೆ ಮತ್ತು ಟೆಂಡರ್ ಆಹ್ವಾ ನಿಸಲು ಒಂದು ತಿಂಗಳು ಕಾಲಾ ವಕಾಶ ವಿದ್ದು, ಯಾವುದೇ ಕ್ರಿಯಾ ಯೋಜನೆ ಗಳು ತಕ ರಾರು ಆಗ ದಂತೆ ಸಲ್ಲಿ ಸಲು ಸಚಿವರು ಮಾರ್ಗ ದರ್ಶನ ನೀಡಿದರು. ರಸ್ತೆ ವಲಯಕ್ಕೆ ಶೇ.80ರಷ್ಟು ಅನುದಾನ ಮತ್ತು ನಗರ ಚರಂಡಿಗಳ ಅಭಿವೃದ್ಧಿಗೆ ಶೇ 20ರಷ್ಟು ಅನುದಾನವನ್ನು ಕಾಯ್ದಿರಿಸಿದ್ದು, ಮಾರ್ಗಸೂಚಿಯಂತೆ ಕಾಮಗಾರಿಗಳನ್ನು ಅನುಷ್ಠಾನಕ್ಕೆ ತನ್ನಿ ಎಂದರು ಎಲ್ಲ ಕಾಮಗಾರಿಗಳನ್ನು ಅಭಿವೃದ್ಧಿ ಕಾಮಗಾರಿ ಎಂದು ಸೂಚಿಸದೆ ಕಾಂಕ್ರೀಟ್ರಸ್ತೆ, ಡಾಮರೀಕರಣ ರಸ್ತೆ, ಚರಂಡಿ ಕಾಮಗಾರಿಗಳನ್ನು ಸ್ಪಷ್ಟವಾಗಿ ನಮೂದಿಸಿ ಎಂದು ಸೂಚಿಸಿದರು. ಮುಖ್ಯಮಂತ್ರಿಯವರ ನಗರೋತ್ಥಾನ ಯೋಜನೆ 11 ರಲ್ಲಿ ನೀರು ಸರಬರಾಜು ಮತ್ತು ಯುಜಿಡಿಗೆ ಸಂಬಂಧಿಸಿದಂತೆ ಬೃಹತ್ ಮೂಲ ಸೌಲಭ್ಯ ಯೋಜನೆಗಳನ್ನು ರೂಪಿಸಲಾಗಿದೆ.
ಸಣ್ಣ ಮತ್ತು ಮಧ್ಯಮ ಪಟ್ಟಣ ಗಳ ಅಭಿ ವೃದ್ಧಿಗೆ ಹಲವು ಹಂತದ ಸಮಿತಿ ಗಳನ್ನು ರಚಿಸ ಲಾಗಿದ್ದು, ಕಾಮ ಗಾರಿ ಕಾಲ ಮಿತಿ ಯೊಳಗೆ ಅನು ಷ್ಠಾನಕ್ಕೆ ಬರಲು ಸ್ಪಷ್ಠೀ ಕರಣಕ್ಕೆ ಕೇಳಿ ಪ್ರಸ್ತಾ ವನೆಗಳು ಹಿಂದಿ ರುಗ ದಂತೆ ಅಂದಾಜು ಪಟ್ಟಿ ಸಲ್ಲಿಕೆ ಯಾಗ ಬೇಕಿದೆ ಎಂದರು. ಬಂಟ್ವಾಳ, ಮೂಡಬಿದರೆ, ಪುತ್ತೂರು, ಉಳ್ಳಾಲ ಪುರಸಭೆ ಮತ್ತು ಬೆಳ್ತಂಗಡಿ, ಸುಳ್ಯ, ತಾಲೂಕುಕೇಂದ್ರ ಹಾಗೂ ಮುಲ್ಕಿ ಪಟ್ಟಣ ಪಂಚಾಯತ್ ಗಳಿಗೆ ಒಟ್ಟು 32 ಕೋಟಿ ರೂ.ಗಳಲ್ಲಿ ಅಭಿವೃದ್ಧಿ ಕ್ರಿಯಾಯೋಜನೆ ಸಿದ್ಧಗೊಂಡಿದೆ. ಪ್ರತೀ ಪಟ್ಟಣಕ್ಕೆ ರೂ.5 ಕೋಟಿಗಳಂತೆ ಅನುದಾನ ನೀಡಲಾಗಿದೆ. ಅಭಿವೃದ್ಧಿಯನ್ನು ಸಮಗ್ರವಾಗಿ ರೂಪಿಸಲು ಎಸ್ಎಫ್ ಸಿ ಅಥವಾ ಇತರೆ ಅನುದಾನದ ಸದ್ಬಳಕೆ ಮಾಡಬಹುದು ಎಂದ ಸಚಿವರು, ಜಿಲ್ಲಾವಾರು ಟೆಂಡರ್ ಪ್ಯಾಕೇಜ್ ಕರೆಯುವ ಬಗ್ಗೆ ಸಚಿವ ಬಾಲಕಿಚಂದ್ರ ಜಾರಕಿಹೊಳೆ ಜೊತೆ ಚರ್ಚಿಸಿ ಪರಿಹಾರ ನೀಡುವುದಾಗಿ ಸೂಚಿಸಿದರು. ಬಂಟ್ವಾಳ ಪುರಸಭೆಗೆಒಟ್ಟು 7 ರಸ್ತೆ ಕಾಮಗಾರಿಗಳು ಹಾಗೂ ಎರಡು ಚರಂಡಿ ಕಾಮಗಾರಿಗಳ ಅಂದಾಜು ಪಟ್ಟಿ ತಯಾರಿಸಲಾಗಿದ್ದು, ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 6 ಕಾಮಗಾರಿಗಳಿಗೆ 5 ಕೋಟಿ ರೂ. ವೆಚ್ಚದ ಅಂದಾಜು ಪಟ್ಟಿಯನ್ನು ತಯಾರಿಸಲಾಗಿದೆ. ಮೂಡುಬಿದರೆ ಪುರಸಭಾ ವ್ಯಾಪ್ತಿಯಲ್ಲಿ ಎರಡು ಕಾಂಕ್ರಿಟ್ ರಸ್ತೆ ಸೇರಿದಂತೆ ಒಟ್ಟು 6 ರಸ್ತೆಗಳನ್ನು ಗುರುತಿಸಿ ಅಂದಾಜು ಪಟ್ಟಿ ತಯಾರಿಸಲಾಗಿದೆ. ಮುಲ್ಕಿ ನಗರ ಪಂಚಾಯತ್ ಗೆ 2ಕೋಟಿ ರೂ.ವೆಚ್ಚದಲ್ಲಿ ಮೂರು ರಸ್ತೆ ಕಾಮಗಾರಿ, ಒಂದು ಚರಂಡಿ ಕಾಮಗಾರಿಗಳ ಅಂದಾಜು ಪಟ್ಟಿ ತಯಾರಿಸಲಾಗಿದೆ. ಪುತ್ತೂರು ಪುರಸಭಾ ವ್ಯಾಪ್ತಿಯಲ್ಲಿ 5 ಕೋಟಿರೂ.ವೆಚ್ಚದಲ್ಲಿ 4 ರಸ್ತೆ ಕಾಮಗಾರಿ, ಎರಡು ಚರಂಡಿ ಕಾಮಗಾರಿಗಳ ಅಂದಾಜು ಪಟ್ಟಿ ತಯಾರಿಸಲಾಗಿದೆ. ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ 6 ರಸ್ತೆ ಕಾಮಗಾರಿ, ಎರಡು ಚರಂಡಿ ಕಾಮಗಾರಿಗಳ ಅಂದಾಜುಪಟ್ಟಿ ತಯಾರಿಸಲಾಗಿದೆ.ಉಳ್ಳಾಲ ವ್ಯಾಪ್ತಿಯಲ್ಲಿ 8 ರಸ್ತೆಗಳ ಕಾಮಗಾರಿ, ಎರಡುಚರಂಡಿ ಕಾಮಗಾರಿಗಳ ಅಂದಾಜು ಪಟ್ಟಿತಯಾರಿಸಲಾಗಿದೆ.ಕಳೆದ ಸಾಲಿನಲ್ಲಿ ಬಾಕಿ ಉಳಿದ ಕಾಮಗಾರಿ ಮತ್ತು ಪ್ರಸಕ್ತ ಸಾಲಿನಲ್ಲಿ ಸಾಧಿಸಬೇಕಾದ ಗುರಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿ ವಿಶೇಷ ಅನುದಾನದಡಿ ಮಂಜೂರಾದ ಎರಡು ಕೋಟಿ ರೂ.ಗಳಲ್ಲಿ ನಡೆದ ಕಾಮಗಾರಿಗಳ ಮಾಹಿತಿಯನ್ನು ಪಾಲಿಕೆ ಆಯುಕ್ತರು ಸಚಿವರಿಗೆ ನೀಡಿದರು.ಎರಡನೇ ಹಂತದ ಒಂದು ಕೋಟಿ ರೂ.ಗಳಲ್ಲಿ ಹಲವು ಕಾಮಗಾರಿಗಳು ಮುಗಿದಿದ್ದು, ಹಣ ಬಿಡುಗಡೆಯಾಗಬೇಕಿದೆ ಎಂದರು.ಬಿಡುಗಡೆಯಾಗ ಬೇಕಾದ ಅನುದಾನದ ಬಗ್ಗೆ ಪಾಲಿಕೆ ಮತ್ತು ಲೋಕೋಪಯೋಗಿ ಇಲಾಖೆಯವರು ಸಂಜೆಯೊಳಗೆ ಮಾಹಿತಿ ನೀಡಿದರೆ ಅನುದಾನ ಬಿಡುಗಡೆ ಕುರಿತು ಸಕರ್ಾರದ ಮಟ್ಟದಲ್ಲಿ ಮಾತುಕತೆ ನಡೆಸಲಾಗುವುದು ಎಂದರು. ಸಭೆಯಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಸುಳ್ಯ ಶಾಸಕರಾದ ಅಂಗಾರ, ಮೂಡಬಿದ್ರೆ ಶಾಸಕರಾದ ಅಭಯಚಂದ್ರಜೈನ್, ಮಂಗಳೂರು ಶಾಸಕ ಯು ಟಿ ಖಾದರ್,ಬಂಟ್ವಾಳ ಶಾಸಕ ರಮಾನಾಥ ರೈ, ವಿಧಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಮೇಯರ್ ಗುಲ್ಜಾರ್ ಭಾನು, ಜಿಲ್ಲಾಧಿಕಾರಿ ಡಾಎನ್ಎಸ ಚನ್ನಪ್ಪಗೌಡ, ಸಿಇಒ ಡಾ ಕೆ ಎನ್ ವಿಜಯಪ್ರಕಾಶ್, ಮನಾಪ ಆಯುಕ್ತರಾದ ಡಾ ಹರೀಶ್ ಕುಮಾರ್, ನಗರಾಭಿವೃದ್ಧಿಕೋಶದ ಯೋಜನಾಧಿಕಾರಿ ತಾಕತ್ ರಾವ್ ಅವರನ್ನೊಳಗೊಂಡಂತೆ ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.

ಸೋಮೇಶ್ವರ ಕುಂಪಲದಲ್ಲಿ 76. 80 ಲಕ್ಷ ರೂ. ಕಾಮಗಾರಿ ಉಸ್ತುವಾರಿ ಸಚಿವರಿಂದ ಉದ್ಘಾಟನೆ

ಮಂಗಳೂರು, ಸೆಪ್ಟೆಂಬರ್. 24 :ಮಂಗಳೂರು ತಾಲೂಕಿನ ಉಳ್ಳಾಲ ಸೋಮೇಶ್ವರ ಕಡಲ ತೀರದ ಬಳಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು 76.80 ಲಕ್ಷರೂ. ವೆಚ್ಚದಲ್ಲಿ ನಿರ್ಮಿಸಿದ್ದು ,ಉನ್ನತ ಶಿಕ್ಷಣ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಸಿ ಟಿ ರವಿ ಇಂದು ಉದ್ಘಾಟಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾ ಯತ್, ತಾಲೂಕು ಪಂಚಾ ಯತ್ ಮಂಗ ಳೂರು ಹಾಗೂ ಪ್ರವಾ ಸೋದ್ಯಮ ಇಲಾಖೆ ಮಂಗ ಳೂರು ಸಂಯು ಕ್ತವಾಗಿ ಆಯೋ ಜಿಸಿದ್ದ ಕಾರ್ಯ ಕ್ರಮದಲ್ಲಿ ಗ್ರಾನೈಟ್ ಕಲ್ಲು ಕಟ್ಟಡದ ಮೆಟ್ಟಿಲು ರಚನೆ, ಪಾತ್ ವೇ ರಚನೆ, ಹೈಮಾಸ್ಟ್ ದೀಪ ಮತ್ತು ಮೆಟ್ಟಲು ರಚನೆ, ಕಡಲ ವೀಕ್ಷಣಾಲಯ, ಸೀಟಿಂಗ್ ಎರೇಂಜ್ ಮೆಂಟ್, ವಾಹನ ನಿಲುಗಡೆ ಸ್ಳಳವನ್ನು 76.80 ಲಕ್ಷ ರೂ.ಗಳಲ್ಲಿ ನಿರ್ಮಿಸಲಾಗಿದೆ.
ಇದೇ ಸಂದರ್ಭದಲ್ಲಿ ಸೋಮೇಶ್ವರ ಗ್ರಾಮದ ಕುಂಪಲ ಹನುಮಾನ್ ನಗರ, ಚೇತನ್ ನಗರ, ಕುಜುಮಗದ್ದೆ ರಸ್ತೆಗಳ ಕಾಂಕ್ರೀಟಿಕರಣದ ಕಾಮಗಾರಿ ಶಿಲಾನ್ಯಾಸ ನಡೆಸಿ ಮಾತನಾಡಿದ ಉಸ್ತುವಾರಿ ಸಚಿವರು, ನಮ್ಮ ಗ್ರಾಮ ನಮ್ಮ ರಸ್ತೆಗೆ ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆಯಡಿ 138.27 ಕಿ.ಮೀ ರಸ್ತೆಗೆ 45 ಕೋಟಿ ರೂ.,
ಅನು ದಾನದ ಬಿಡು ಗಡೆ ಯಾಗಿದ್ದು, ಗ್ರಾ ಮೀಣ ರಸ್ತೆಗಳ ಬಗ್ಗೆ ಹೆಚ್ಚಿನ ಅಸ್ಥೆ ವಹಿ ಸಲಾ ಗಿದೆ. ಅಭಿ ವೃದ್ಧಿ ಕಾಮ ಗಾರಿ ಗಳ ಅನು ಷ್ಠಾನ ದಲ್ಲಿ ರಾಜ್ಯ ಇತರ ರಿಗಿಂತ ಮುಂಚೂ ಣಿಯಲ್ಲಿದೆ. ರಾಜ್ಯದ ಒಂದು ಕೋಟಿ 6ಲಕ್ಷ ಜನ ನೇರ ಫಲಾ ನುಭವಿ ಗಳಿಗೆ ಸಹಾಯ ವಾಗು ವಂತೆ ಸರ್ಕಾರ ಹಲವು ಕಾರ್ಯ ಕ್ರಮ ಗಳು ಅನು ಷ್ಠಾನಕ್ಕೆ ಬಂದಿವೆ. ಸಮಾನ ಸಮಾಜ ನಿರ್ಮಾಣದ ಸಂಕಲ್ಪದಿಂದ ಸರ್ಕಾರ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸಭಾ ಕಾರ್ಯಕ್ರಮದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಶಾಸಕ ಯು ಟಿ ಖಾದರ್, ವಿಧಾನಪರಿಷತ್ ಸದಸ್ಯರಾದ ಮೋನಪ್ಪ ಭಂಡಾರಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕೆ ಟಿ ಶೈಲಜಾ ಭಟ್, ಚಂದ್ರಹಾಸ್ ಉಳ್ಳಾಲ, ಚಂದ್ರಶೇಖರ್ ಉಚ್ಚಿಲ, ಸುಶ್ಮಾ ಜನಾರ್ಧನ್, ಗ್ರಾಮಪಂಚಾಯಿತಿ ಅಧ್ಯಕ್ಷ ಕಮಲ,ಬಿಜೆಪಿ ಪಕ್ಷಾಧ್ಯಕ್ಷ ಪದ್ಮನಾಭ ಕೊಟ್ಟಾರಿ ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತ್ ಸದಸ್ಯರಾದ ಸತೀಶ್ ಕುಂಪಲ ಅವರು ಸ್ವಾಗತಿಸಿದರು. 

 

ತಾಂತ್ರಿಕ ನೈಪುಣ್ಯತೆ ಸಾಧಿಸಿ:ವಿದ್ಯಾರ್ಥಿನಿಯರಿಗೆ ಸಚಿವ ರವಿ ಕರೆ

ಮಂಗಳೂರು,ಸೆಪ್ಟೆಂಬರ್.24: ಎಲ್ಲ ಕ್ಷೇತ್ರದಲ್ಲೂ ನಮ್ಮ ಪೂರ್ವಜರು ಪರಿಣತರಾಗಿದ್ದರು. ಲೋಹಶಾಸ್ತ್ರ, ಭೂಗೋಳ, ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಅತೀ ಹೆಚ್ಚು ಪ್ರಾವೀಣ್ಯತೆಯನ್ನು ಪಡೆದ ನಮ್ಮ ಪೂರ್ವೀಕರೇ ನಮಗೆ ಇಂದು ಮಾದರಿಯಾಗಬೇಕು ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಸಿ ಟಿ ರವಿ ಹೇಳಿದರು.
ಅವ ರಿಂದು ನಗ ರದ ಬೋಂ ದೆಲ್ ಮಹಿಳಾ ಐಟಿಐ ಕಾಲೇ ಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾ ಟನೆ ಮತ್ತು ಕ್ರೀಡಾ ಸಂಘ ಉದ್ಘಾ ಟಿಸಿ ಮಾತ ನಾಡು ತ್ತಿದ್ದರು.
ಅತ್ಯಂತ ಪ್ರಾಚೀನ ನಾಗರೀ ಕತೆ ಭಾರತದ ಹರಪ್ಪ ಮೊಹೆಂ ಜಾದಾ ರೋದ ನಗರ ಯೋಜ ನೆಗಳು, ಹಂಪಿಯ ಕುಡಿ ಯುವ ನೀರಿನ ಯೋಜನೆ ಗಳು, ನಮ್ಮ ಭವ್ಯ ದೇವಾ ಲಯ ಗಳ ನಿರ್ಮಾ ಣಗಳು ಪೂರ್ವಿ ಕರ ಇಂಜಿನಿ ಯರಿಂಗ್ ಪ್ರಾವೀ ಣ್ಯತೆಗೆ ಸಾಕ್ಷಿ ಗಳಾಗಿ ನಿಂತಿವೆ.
ನಾವಿಂದು ತಾಂತ್ರಿಕ ಕ್ಷೇತ್ರದಲ್ಲೇ ಅಷ್ಟೇ ನೈಪು ಣ್ಯತೆಯನ್ನು ಸಾಧಿಸಿ ಪ್ರಪಂಚ ದಲ್ಲಿ ನಂಬರ್ ವನ್ ಪಟ್ಟಕ್ಕ್ಕೆ ತಲುಪ ಬೇಕಾ ಗಿದೆ.ಸೇವಾ ಕ್ಷೇತ್ರದಲ್ಲಿ ನಾವಿಂದು ನಂಬರ್ ವನ್ ಸ್ಥಾನ ದಲ್ಲಿ ದ್ದೇವೆ. ವಿದ್ಯಾ ರ್ಥಿಗಳು ತಾಂತ್ರಿಕ ಶಿಕ್ಷಣ ವನ್ನು ಪಡೆದು ಉನ್ನತ ಸ್ಥಾನಕ್ಕೆ ದೇಶವನ್ನು ಏರಿಸುವ ಹೊಣೆ ಹೊರಬೇಕಿದೆ ಎಂದರು. ಕ್ಷಿಪಣಿ ತಂತ್ರಜ್ಞಾನ, ಸಂಶೋಧನೆ, ಭೂಗೋಳದಲ್ಲಿ ಚರಿತ್ರೆ ನಿರ್ಮಿಸಿದವರು ನಾವು.ಪ್ರಸಕ್ತ ಸಂದರ್ಭದಲ್ಲೂ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆಗಳನ್ನು ಮಾಡಬೇಕಿದೆಎಂದು ಸಲಹೆ ಮಾಡಿದರು.ವಿಧಾನ ಪರಿಷತ್ ಸದಸ್ಯ ಮೋನಪ್ಪಭಂಡಾರಿ ಸಭೆಯಲ್ಲಿದ್ದರು.

ಅನಧಿಕೃತ ಕೇಬಲ್ ಆಪರೇಟರ್ಸ್ ವಿರುದ್ಧಕ್ರಮಕ್ಕೆಜಿಲ್ಲಾ ಸಮಿತಿ ನಿರ್ಧಾರ

ಮಂಗಳೂರು, ಸೆಪ್ಟೆಂಬರ್. 24 :ಪರವಾನಿಗೆ ಪಡೆಯದೆ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಕೇಬಲ್ ಆಪರೇಟರ್ಸ್ ಗಳು ಮತ್ತು ಕೇಬಲ್ ಟಿವಿ ನೆಟ್ ವರ್ಕ್ ಕಾಯಿದೆ ಉಲ್ಲಂಘಿಸಿ ಕಾರ್ಯಕ್ರಮ ಪ್ರಸಾರ ಮಾಡುತ್ತಿರುವ ಆಪರೇಟರ್ ಗಳ ವಿರುದ್ಧ ಕಾನೂನು ರೀತಿ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ಡಾಎನ್ ಎಸ್ ಚನ್ನಪ್ಪಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಬಲ್ ಟೆಲಿವಿಷನ್ ನೆಟ್ ವರ್ಕಅಧಿನಿಯಮದಡಿ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆ ನಿರ್ಧರಿಸಿತು.
ಸೆಪ್ಟೆಂ ಬರ್ 22ರಂದು ಜಿಲ್ಲಾ ಧಿಕಾ ರಿಗಳ ಕಚೇರಿ ಯಲ್ಲಿ ಜಿಲ್ಲಾ ಧಿಕಾ ರಿಗಳ ಅಧ್ಯಕ್ಷ ತೆಯಲ್ಲಿ ನಡೆದ ಸಭೆ ಯಲ್ಲಿ ಈಗಾ ಗಲೇ ಕೇಬಲ್ ಆಪರೇ ಟರ್ಸ್ ಗಳಿಗೆ ಮಾಹಿತಿ ಸಲ್ಲಿಸಲು ಸಮ ಯಾವ ಕಾಶ ನೀಡ ಲಾಗಿತ್ತು.ಇದೇ ವೇಳೆ ವಾರ್ತಾ ಇಲಾಖೆ ಸಂಬಂ ಧಪಟ್ಟ ಅಂಚೆ ಇಲಾಖೆ ಗಳಿಂದ ಸಮಗ್ರ ಮಾಹಿತಿ ಯನ್ನು ಕೋರಿ ಮಾಹಿತಿ ಯನ್ನು ಪಡೆ ದಿದೆ.ಈ ಮಾಹಿ ತಿಯ ಆಧಾ ರದಲ್ಲಿ ಪೊಲೀಸ್ ಕಮಿಷ ನರೇಟ್, ಜಿಲ್ಲಾ ಪೊಲೀಸ್  ಮತ್ತು ಮಹಾ ನಗರ ಪಾಲಿಕೆಯ ನೆರವು ಪಡೆದು ಅನಧಿಕೃತ ಕಚೇರಿಗಳ ಬಗ್ಗೆ ಮಾಹಿತಿ ಪರಿಶೀಲನೆಯನ್ನು ತಿಂಗಳೊಳಗೆ ಮುಗಿಸಲಿದ್ದು ಬಳಿಕ ಕಾನೂನು ರೀತಿ ಕ್ರಮ ಕೈಗೊಳ್ಳಲು ಸಮಿತಿ ನಿರ್ಧರಿಸಿತು.
ಅಕ್ಟೋಬರ್ ಒಂದ ರಿಂದ ವಾರ್ತಾ ಇಲಾಖೆ ಮತ್ತು ಜಿಲ್ಲಾಧಿ ಕಾರಿಗಳ ಕಚೇರಿ ಯಲ್ಲಿರುವ ಉಪ ವಿಭಾಗ ಆಯುಕ್ತರ ಕಚೇರಿ ಯಲ್ಲಿ ಈ ಸಂಬಂಧ ಸಾರ್ವ ಜನಿಕ ರಿಂದ ಅಹ ವಾಲು ಸ್ವೀಕ ರಿಸಲು ದೂರು ಕೋಶ ಸ್ಥಾಪಿ ಸಲಾ ಗುವುದು.ತಾಲೂಕು ಮಟ್ಟ ದಲ್ಲಿ ಎಲ್ಲಾ ತಾಲೂಕು ಕಚೇರಿ ಗಳಲ್ಲಿ ಸಾರ್ವ ಜನಿಕರಿಂದ ಈ ಸಂಬಂದದೂರು ಸ್ವೀಕಾರಕ್ಕೆ ಅನುಕೂಲ ವಾಗುವಂತೆ ದೂರು ಪಟ್ಟಿಗೆಗಳನ್ನು ಇರಿಸಲಾಗುವುದು.
ಆನ್ ಲೈನ್ ಮೂಲಕ ದೂರುಸ್ವೀಕರಿಸಲು ವ್ಯವಸ್ಥೆ ಮಾಡಲಾಗುವುದು.ದೂರುದಾರರ ವಿವರಗಳನ್ನು ಗೌಪ್ಯವಾಗಿಡಲಾಗುವುದು. ಇದೇ ವೇಳೆ ಅಧಿಕೃತ ಕೇಬಲ್ ಆಪರೇಟರ್ ಗಳಿಗೆ ಮಾಹಿತಿ ಸಲ್ಲಿಸಲು ಇನ್ನೊಂದು ವಾರ ಕಾಲ ಅವಕಾಶವನ್ನು ನೀಡಲಾಗಿದೆ.ಕೇಬಲ್ ಗಳಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳ ಬಗ್ಗೆ ಸಮಿತಿಯಲ್ಲಿರುವ ಪರಿಣತ ಸದಸ್ಯರಿಗೆ ಕಾರ್ಯಕ್ರಮದ ಕುರಿತು ಸಮೀಕ್ಷೆ ನಡೆಸಲು ಹಾಗೂ ಅಭಿಪ್ರಾಯ ಸಂಗ್ರಹಕ್ಕೂ ಜಿಲ್ಲಾಧಿಕಾರಿಗಳು ಸೂಚನೆಯನ್ನು ನೀಡಿದರು.
ಸಮಿತಿ ಸಭೆಯಲ್ಲಿಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ವಾರ್ತಾಧಿಕಾರಿ ರೋಹಿಣಿ, ಸೈಂಟ್ ಅಲೋಷಿಯಸ್ ಕಾಲೇಜಿನ ಪ್ರೊ. ನರಹರಿ, ಬಲ್ಮಠ ಪದವಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ತಾರಾ, ಧರ್ಮಜ್ಯೋತಿ ಸಂಸ್ಥೆಯ ಸಿಸ್ಟರ್ ಡ್ಯಾಫ್ನಿ, ಮಂಗಳೂರು ವಿವಿ ಕಾಲೇಜಿನ ಎಸೋಸಿಯೇಟ್ ಪ್ರೊ. ಶ್ರೀಮತಿ ಮಹೇಂದ್ರ ಮಣಿರಾವ್, ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಿಂದ ಸಿ ಎನ್ ದಿವಾಕರ್, ಪೊಲೀಸ್ ಕಮಿಷನರೇಟ್ ನಿಂದ ಪೊಲೀಸ್ಇನ್ಸ್ ಪೆಕ್  ದೇವಪ್ಪ, ಸಹಾಯಕ ಆಯುಕ್ತರ ಕಚೇರಿಯಿಂದ ತಹಸೀಲ್ದಾರ್ ಬಾಬು ದೇವಡಿಗ ಪಾಲ್ಗೊಂಡಿದ್ದರು.



Saturday, September 22, 2012

ವೈದ್ಯರ ಮನೋವೃತ್ತಿ ಬದಲಾಗಬೇಕು:ಡಾ.ಎನ್. ವಿನಯ ಹೆಗ್ಡೆ

ಮಂಗಳೂರು, ಸೆಪ್ಟೆಂಬರ್.22: ಎಲ್ಲ ಮುಂಚೂಣಿ ದೇಶಗಳಲ್ಲಿರುವ ವೈದ್ಯಕೀಯ ಸೇವೆಗಳು ದಕ್ಷಿಣ ಕನ್ನಡದಲ್ಲಿ ಇಂದು ಲಭ್ಯ. ಸೇವೆ ನೀಡುವ ವೈದ್ಯರ ಮನೋಭಾವ, ವೈದ್ಯರ ಸಹಕಾರ, ಗ್ರಾಮೀಣ ಪ್ರದೇಶಗಳಲ್ಲಿ ಅತೀ ಅಗತ್ಯ ವಾಗಿದೆ ಎಂದು ನಿಟ್ಟೆ ವೈದ್ಯಕೀಯ ಸಂಸ್ಥೆಯ ಮುಖ್ಯಸ್ಥ ಡಾ. ಎನ್. ವಿನಯ್ ಹೆಗ್ಡೆ ಹೇಳಿದರು.
              ಇಂದು ಜಿಲ್ಲಾ ಪಂಚಾ ಯತ್  ನೇತ್ರಾ ವತಿ ಸಭಾಂಗ ಣದಲ್ಲಿ ಜಿಲ್ಲಾ ಪಂಚಾ ಯತ್  ವತಿ ಯಿಂದ ಆಯೋ ಜಿಸಲಾದ 'ಆರೋಗ್ಯದೆಡೆಗೆ ನಮ್ಮ ನಡಿಗೆ'  ಕಾರ್ಯಾ ಗಾರ ವನ್ನು ಉದ್ಘಾ ಟಿಸಿ ಮಾತ ನಾಡು ತಿದ್ದರು.
ಇಂದು ವೈದ್ಯಕೀಯ ಸೇವೆ ಹೆಚ್ಚು  ನಗರ ಮತ್ತು ಪಟ್ಟಣಿಗರಿಗೆ ಮಾತ್ರ ಲಭ್ಯವಾಗಿದೆ ಎಂದ ಅವರು, ವೈದ್ಯರುಗಳು ಗ್ರಾಮೀಣ ಜನರ ಆರೋಗ್ಯದ ಬಗ್ಗೆಯೂ ಅದೇ ಕಾಳಜಿಯನ್ನು ಹೊಂದಿರಬೇಕು. ಹಾಗಾದಾಗ ಜಿಲ್ಲೆಯಲ್ಲಿ ಸಮಗ್ರ ಆರೋಗ್ಯ ಸೇವೆ ನೀಡಲು ಸಾಧ್ಯ ಎಂದರು.
ಆರೋಗ್ಯ ಮತ್ತು ವಿದ್ಯೆ ಒಂದೇ ನಾಣ್ಯದ ಎರಡು ಮುಖ ಗಳು. ವೈಶಿಷ್ಟ್ಯ ಪೂರ್ಣ ಜಿಲ್ಲೆ ಯಲ್ಲಿ ಆರೋಗ್ಯ ಸೇವೆಗೆ ನಿಟ್ಟೆ ಸಂಸ್ಥೆ ನೀಡಿದ ಕೊಡುಗೆ ಗಮ ನೀಯ ಎಂದ ಅವರು, ಗ್ರಾಮೀಣ ಪ್ರದೇ ಶಗಳ ಮೂಲ ಸೌಕರ್ಯ ಗಳ ಬಗ್ಗೆ ಸರ್ಕಾರ ಇನ್ನಷ್ಟು ಪ್ರಾಶಸ್ತ್ಯ ನೀಡ ಬೇಕು. ಜನ ಪ್ರತಿ ನಿಧಿ ಗಳು ಈ ನಿಟ್ಟಿ ನಲ್ಲಿ ತೊಡ ಗಿಕೊ ಳ್ಳಬೇ ಕೆಂದರು.
ಆರೋಗ್ಯದ ಬಗ್ಗೆ ಗಮನ ನೀಡಲು  ಶಿಕ್ಷಣದ ಜೊತೆಗೆ ಅರಿವು ಮೂಡಿಸುವುದರಿಂದ ಮಾತ್ರ ಆರೋಗ್ಯ ಪಾಲನೆ ಸಾಧ್ಯ. ಇಂದಿನ ಮಲೇರಿಯಾ, ಡೆಂಗ್ಯು ವಿಮರ್ಶೆ ಸಂದರ್ಭದಲ್ಲಿ ಆರೋಗ್ಯದ ಕಡೆಗೆ ವೈದ್ಯಕೀಯ ಕ್ಷೇತ್ರದ ಕೊಡುಗೆ ಅಗತ್ಯ ಎಂದರು. ದಕ್ಷಿಣ ಕನ್ನಡ ಮೆಡಿಕಲ್ ಕಾಲೇಜುಗಳ ತವರೂರು. ನೈರ್ಮಲ್ಯ ಜಿಲ್ಲೆ, ಆದರೆ ವಾಸ್ತವದಲ್ಲಿ ಇಲ್ಲಿ ಇನ್ನಷ್ಟು ಕೆಲಸವಾಗಬೇಕಿದೆ ಎಂದರು. ಹಲವುಕೊರತೆಗಳನ್ನು ಸಾಮಾನ್ಯ ಜನರು ಎದುರಿಸುತ್ತಿದ್ದಾರೆ. ಅಗತ್ಯವಿರುವವರಿಗೆ ತಕ್ಷಣ ವೈದ್ಯಕೀಯ ಔಷಧೋಪಚಾರ ನೀಡಬೇಕು. ದೇವರ ಕೆಲಸ ಎಂದರೆ ಬಡಜನರ ಸೇವೆ ಎಂದರು.
ಮಾನಸಿಕ ರೋಗದ ಬಗ್ಗೆ  ನಿಟ್ಟೆಯಲ್ಲಿ ನಡೆಸುತ್ತಿರುವ ಬಗ್ಗೆ, ಅವರ ಜೀವನಶೈಲಿಯ ಬಗ್ಗೆ; ಚಿಕಿತ್ಸೆ ನೀಡುವ ಬಗ್ಗೆ.  ಮಾದಕ ದ್ರವ್ಯಗಳಿಂದಾಗುತ್ತಿರುವ ಹರಡುವ ರೋಗಗಳ ಬಗ್ಗೆಯೂ ಗಮನ ಹರಿಸಬೇಕೆಂದರು. ವಿದ್ಯೆ ಮತ್ತು ಅರಿವಿನಿಂದ ಶೇಕಡ 50 ಸಮಸ್ಯೆ ಪರಿಹಾರ. ಜ್ಞಾನ ವಿಸ್ತರಿಸುವ ಕೆಲಸ ಪರಿಣಾಮಕಾರಿಯಾಗಿ ಆಗಬೇಕು. ಹಳ್ಳಿಗಳೆಡೆಗೆ ನಡುಗೆಯೂ ಅಗತ್ಯ. ರೋಗ ಗುರುತಿಸುವಿಕೆ ಬಹುಮುಖ್ಯ ಮತ್ತೆ ಚಿಕಿತ್ಸೆ. ಮಾನಸಿಕ ಸ್ಥೈರ್ಯ ನೀಡುವ ಕೆಲಸವಾಗಬೇಕು ಎಂದು ಉದ್ಘಾಟನಾ ಭಾಷಣದಲ್ಲಿ ಹೇಳಿದರು.
ಕಾರ್ಯಾ ಗಾರದ ಅಧ್ಯ ಕ್ಷತೆ ಯನ್ನು  ವಹಿಸಿ ಮಾತ ನಾಡಿದ ಜಿಲ್ಲಾ ಪಂಚಾ ಯತ್ ಅಧ್ಯಕ್ಷ ರಾದ ಶ್ರೀ ಮತಿ ಕೆ.ಟಿ. ಶೈಲಜಾ ಭಟ್ ಅವರು, ಜನ ಜಾಗೃತಿ ಯಿಂದ ಸಮ ಸ್ಯೆಗಳ ನಿರ್ಮೂಲನೆ ಸಾಧ್ಯ. ರೋಗ ತಡೆಗಟ್ಟುವಿಕೆಗೆ ನೀಡಬೇಕಾದ ಪ್ರಾಶಸ್ತ್ಯ. ನೈರ್ಮಲ್ಯಕ್ಕೆ ನೀಡಬೇಕಾದ  ಗಮನದ ಬಗ್ಗೆ ಮಾತನಾಡಿದರು. ಸರ್ಕಾರದಿಂದ ಸಾಮಾನ್ಯ ಜನರಿಗೆ ಈಗಾಗಲೇ ಹಲವು ಆರೋಗ್ಯ ಯೋಜನೆಗಳನ್ನು ಜಾರಿಗೆ ತಂದಿದ್ದು, ಜನಪ್ರತಿನಿಧಿಗಳ ಮೂಲಕ ಜನರಿಗೆ ಮಾಹಿತಿ ತಲುಪಿಸುವ ಕೆಲಸವಾಗಬೇಕೆಂದರು.
ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ಜನಾರ್ಧನ ಗೌಡ ಉಪಸ್ಥಿತರಿದ್ದರು. ಸ್ವಾಗತ, ಪ್ರ್ರಾಸ್ತಾವಿಕ ಮಾತುಗಳು ಜಿಲ್ಲಾ ಪಂಚಾಯತ್ ಸಿಇಓ  ಡಾ ಕೆ ಎನ್ ವಿಜಯಪ್ರಕಾಶ್ ಅವರಿಂದ.  ಮಹೇಶ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ವಿದ್ಯಾ ಪ್ರಾರ್ಥಿಸಿದರು. ಮೊಹಮ್ಮದ್ ನಝೀರ್ ವಂದಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಮಾಹಿತಿ ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು.

ಸಮಗ್ರ ಭಾರತದ ಕಲ್ಪನೆ ಯುವಕರಿಗೆ ಅಗತ್ಯ: ಡಾ. ಡಿ.ವೀರೇಂದ್ರ ಹೆಗ್ಗಡೆ ಅಭಿಮತ

ಮಂಗಳೂರು, ಸೆಪ್ಟೆಂಬರ್.22: ನೆಹರು ಯುವ ಕೇಂದ್ರ  ಮಂಗಳೂರು ಘಟಕದ ಆಶ್ರಯದಲ್ಲಿ  "ಜಿಲ್ಲಾ ಯುವ ಸಮಾವೇಶ" ಮಂಗಳೂರಿನಲ್ಲಿಂದು ಆಯೋಜಿಸಲಾಗಿತ್ತು. ನಗರದ ಮಿಲಾಗ್ರಿಸ್ ಜ್ಯುಬಿಲಿ ಸಭಾಂಗಣದಲ್ಲಿ  ನಡೆದ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಯುವಜನಾಂಗ ಮಾಡುವ ಸೇವೆ ಮುಂದೆ ದೇಶದ ಶಕ್ತಿಯಾಗಿ ಪರಿಣಮಿಸಲಿದೆ ಆದರೆ  ಸಮಗ್ರ ಭಾರತದ ಕಲ್ಪನೆಯ ಕೊರತೆ ಇಂದಿನ ಯುವ ಜನರಲ್ಲಿ ಕಾಣುತ್ತಿದೆ ಎಂದು  ವಿಷಾದ ವ್ಯಕ್ತಪಡಿಸಿದರು.ಯುವ ಜನಾಂಗ ದೇಶದ ಸಂಪತ್ತು. ಆ ಸಂಪ ತ್ತನ್ನು ಜೋಪಾನ ವಾಗಿ ರಕ್ಷಿ ಸಿದರೆ ಈ ದೇಶದ ಶಕ್ತಿ ಯನ್ನು ಮುಂದಿನ ಜನಾಂ ಗಕ್ಕೆ ನೀಡಲು ಸಾಧ್ಯ ವಾಗ ಲಿದೆ, ಭೋಗ ಜೀವ ನದ ಕಡೆಗೆ ವ್ಯಕ್ತಿತ್ವ ಮಾರಿ ಕೊಳ್ಳುವ ಸಂಸ್ಕೃತಿ ಬೆಳೆಸಿ ಕೊಳ್ಳದೆ ಯುವ ಜನರು ವ್ಯಕ್ತಿತ್ವ ನಿರ್ಮಾಣದ ಜೊತೆಗೆ ಚಾರಿತ್ರ್ಯವನ್ನು ಕೂಡಾ ಬೆಳೆಸಿಕೊಳ್ಳುವುದು ಅತಿ ಅಗತ್ಯ ಎಂದು ಯುವಜನರಿಗೆ ಹಿತ ನುಡಿಗಳನ್ನಾಡಿದರು. ನಾವು  ಇಂದು ನೆಮ್ಮದಿಯ ಬದುಕನ್ನು ಸಾಗಿಸಲು ದೇಶದ ಗಡಿಯಲ್ಲಿ ಹಗಲಿರುಳು,ಚಳಿ,ಮಳೆ-ಗಾಳಿ ಎನ್ನದೆ ಕಾವಲು ಕಾಯುವ  ಯೋಧರು ಕಾರಣ.ಆದರೆ ಇವರ ಬಗ್ಗೆ  ಬಹುತೇಕ ಯುವಕರಿಗೆ  ಗೊತ್ತೇ ಇಲ್ಲ. ಹಾಗಾಗಿ ಸೈನ್ಯಕ್ಕೆ ಸೇರುವ ಮೂಲಕ  ರಾಷ್ಟ್ರ ಸೇವೆ ಮಾಡುವ  ಯುವಕರ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಯುವಕರಿಗೆ ರಾಷ್ಟ್ರ ಪ್ರಜ್ಞೆ, ಜಾಗೃತಿ ಮೂಡಿಸುವ ಕೆಲಸ ಅಗಬೇಕಾಗಿದೆ  ಎಂದು ಹೆಗ್ಗಡೆ ಅವರು ನುಡಿದರು.
ಸಮಾರಂಭದಲ್ಲಿ  ಭಾಗವಹಿಸಿದ ಕೇಂದ್ರ ಕಾರ್ಪೋರೇಟ್ ವ್ಯವಹಾರ ಮತ್ತು ಇಂಧನ ಸಚಿವ ಡಾ.ಎಂ. ವೀರಪ್ಪ ಮೊಯ್ಲಿ ಅವರು ಭಾರತ ಸರ್ಕಾದರ ಯೋಜನೆಗಳ ಕುರಿತ ಕಿರು ಹೊತ್ತಿಗೆಯನ್ನು ಬಿಡುಗಡೆಗೊಳಿಸಿ ಮಾತನಾಡಿ ಮುಂದಿನ 15 ರಿಂದ 30 ವರ್ಷಗಳಲ್ಲಿ ನಮ್ಮ ದೇಶ ಯುವಶಕ್ತಿಯಾಗಿ ಜಗತ್ತಿನ ದಿಗಂತದಲ್ಲಿ ಮೂಡಿ ಬರಲಿದ್ದು, ಯುವಶಕ್ತಿ ದೇಶದ ಆಶಾಕಿರಣ.ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ  ರಾಷ್ಟ್ರದ ಯುವ ಸಂಪನ್ಮೂಲವನ್ನು ಸದುಪಯೋಗಪಡಿಸಿಕೊಂಡು ಭಾರತ ಜಗತ್ತಿನ ನಂ.1 ರಾಷ್ಟ್ರವಾಗಿ ಬೆಳೆಸಬೇಕಿದೆ ಎಂದರು.
  ನೆಹರು ಯುವ ಕೇಂದ್ರ ಸಂಘಟ ನೆಯ ಮಹಾ ನಿರ್ದೇ ಶಕ ಸಲೀಂ ಅಹ ಮ್ಮದ್  ಅವರು ಜಿಲ್ಲಾ ಸಮಾ ವೇಶ ವನ್ನು ಉದ್ಘಾ ಟಿಸಿ ಮಾತ ನಾಡಿ ದರು. 2012ನೆ ಸಾಲಿ ನಲ್ಲಿ ಕೌಶಲ್ಯ ಅಭಿ ವೃದ್ಧಿ ವರ್ಷ ವನ್ನಾಗಿ ಆಚರಿ ಸಲಾ ಗುತ್ತಿದೆ. ಯೂತ್ ಕ್ಲಬ್ ಗಳನ್ನು ಸ್ಥಾಪಿಸುವ ಮೂಲಕ ಗ್ರಾಮೀಣ ಯುವಕರಿಗೆ ಶಕ್ತಿ ನೀಡುವ ಕೆಲಸ ಮಾಡಲಾಗುತ್ತಿದೆ. ಈಗಾಗಲೇ ದೇಶದಲ್ಲಿ 3 ಲಕ್ಷ ಕ್ಲಬ್ ಗಳನ್ನು ನೋಂದಣಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ವಿಧಾನಸಭೆ ಉಪಸಭಾಧ್ಯಕ್ಷ ಎನ್. ಯೋಗೀಶ್ ಭಟ್ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರು ಯುವಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಇದೇ ವೇಳೆ 17 ನೇ ಯುವಜನೋತ್ಸವವನ್ನು ಮಂಗಳೂರಿನಲ್ಲಿ ಅತ್ಯುತ್ತಮವಾಗಿ ಸಂಘಟಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ ದ.ಕ. ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪ ಗೌಡರನ್ನು ಸನ್ಮಾನಿಸಲಾಯಿತು.
  ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಬಿ.ರಮಾನಾಥ ರೈ,   ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಮೇಯರ್ ಗುಲ್ಜಾರ್ ಬಾನು, ಉಪ ಮೇಯರ್ ಅಮಿತಕಲಾ, ಮಾಜಿ ಸಚಿವ ಬಿ.ಎ.  ಮೊಯ್ದಿನ್, ಪೊಲೀಸ್ ಆಯುಕ್ತ ಮನೀಶ್ ಕರ್ಬೇಕರ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್, ಯುವ ಕೇಂದ್ರದ ಸಮನ್ವಯಾಧಿಕಾರಿ ಎಂ.ಎನ್. ನಟರಾಜ್, ರಾಜ್ಯ ಕಾರ್ಯದರ್ಶಿ ಆರ್. ನಟರಾಜನ್ ಮತ್ತಿತರ ಗಣ್ಯರು ಸಮಾರಂಭದಲ್ಲಿ  ಉಪಸ್ಥಿತರಿದ್ದರು.
ಕಾರ್ಯ ಕ್ರಮ ದಲ್ಲಿ ಮಾರ್ಗ ದರ್ಶಿ ಯುವಕ ಮಂಡಲ ಗಳಿಗೆ ಧನ ಸಹಾಯ, ಕ್ರೀಡಾ ಸಾಮಗ್ರಿ ವಿತ ರಿಸ ಲಾಯಿತು.
ಜಿಲ್ಲಾ ಧಿಕಾರಿ ಡಾ.ಎನ್.ಎಸ್. ಚನ್ನಪ್ಪ ಗೌಡ ಸ್ವಾಗತಿಸಿದರು. ಆಕಾಶವಾಣಿ ಕಲಾವಿದೆ ಕಸ್ತೂರಿ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ಮನೋಹರ್ ಪ್ರಸಾದ್, ವಸಂತ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಸಂಧ್ಯಾಗೆ ಸರೋಜಿನಿ ನಾಯ್ಡು ಪ್ರಶಸ್ತಿ

ಮಂಗಳೂರು,ಸೆಪ್ಟೆಂಬರ್.22: 2012ನೇ ಸಾಲಿನ ಪ್ರತಿಷ್ಠಿತ ಸರೋಜಿನಿ ನಾಯ್ಡು ರಾಷ್ಟ್ರೀಯ ಪ್ರಶಸ್ತಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಮಂಗಳೂರು ಬ್ಯೂರೋದ ವರದಿಗಾರರಾದ ಕು.ಸಂಧ್ಯಾ ಡಿಸೋಜರವರಿಗೆ ಲಭಿಸಿದೆ.
    ಪಂಚಾಯತ್  ರಾಜ್ ಮತ್ತು ಮಹಿಳೆ ಎಂಬ ವಿಷಯದಲ್ಲಿ ಪ್ರಕಟವಾಗುವ ಅತ್ಯುತ್ತಮ ಲೇಖನಗಳಿಗೆ ಈ ಪ್ರಶಸ್ತಿ ಲಭಿಸುತ್ತದೆ.     ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಡಾ.ರೋನಾಲ್ಡ್ ಅನಿಲ್ ಫೆರ್ನಾಂಡಿಸ್ ಮತ್ತು ಗುರುವಪ್ಪ ಬಾಳೆಪುಣಿಯವರಿಗೆ ಈ ಪ್ರಶಸ್ತಿ ಲಭಿಸಿದ್ದು, ಕು.ಸಂಧ್ಯಾರವರು ಜಿಲ್ಲೆಯ ಪ್ರಶಸ್ತಿ ಪುರಸ್ಕೃತರಲ್ಲಿ 3ನೇ ಯವರಾಗಿರುತ್ತಾರೆ. ಸಾಕ್ಷರತಾ ಆಂದೋಲನದಲ್ಲಿ ಅಕ್ಷರ ಕಲಿತು ಸಶಕ್ತರಾದ ಬೆಳ್ತಂಗಡಿ ತಾಲೂಕಿನ ಲಾಯಿಲದ ಯಶೋಧ ಮತ್ತು ಅವರ ತಂಡದವರ ಯಶೋಗಾಥೆಯ ಲೇಖನಕ್ಕಾಗಿ ಕು.ಸಂಧ್ಯಾರವರಿಗೆ ಈ ಪ್ರಶಸ್ತಿ ಲಭಿಸಿದೆ. ಅಕ್ಟೋಬರ್ 1ನೇ ತಾರೀಕಿಗೆ ನವದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದ್ದು, ಪ್ರಶಸ್ತಿ ` 2 ಲಕ್ಷ ನಗದು ಮತ್ತು ಫಲಕವನ್ನೊಳಗೊಂಡಿರುತ್ತದೆ.

ಆತ್ಮವಿಶ್ವಾಸದಿಂದ ಗುರಿ ಸಾಧನೆ: ಎಸಿಪಿ ಕವಿತ


 ಮಂಗಳೂರು, ಸೆಪ್ಟೆಂಬರ್. 22 : ಬದುಕು ಕಟ್ಟಲು ಆತ್ಮವಿಶ್ವಾಸ ಮುಖ್ಯ; ಚೆನ್ನಾಗಿ ಬದುಕಬೇಕು ಎಂಬ ಶ್ರದ್ಧೆ ಜೀವನದ ಕಠಿಣ ಪರೀಕ್ಷೆಗಳನ್ನು ಎದುರಿಸಲು ಕಲಿಸುತ್ತದೆ ಎಂದು ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀಮತಿ ಕವಿತ ಬಿ ಟಿ ಹೇಳಿದರು.
           ಅವರು ಶುಕ್ರ ವಾರ ದಂದು  ವಾರ್ತಾ ಇಲಾಖೆ, ಪೊಲೀಸ್ ಕಮಿ ಷನ ರೇಟ್ ಮತ್ತು ಗೋವಿಂದ ದಾಸ ಕಾಲೇಜು ಸುರ ತ್ಕಲ್  ಸಂಯು ಕ್ತಾಶ್ರ ಯದಲ್ಲಿ ಕಾಲೇ ಜಿನ ಸಭಾಂ ಗಣದಲ್ಲಿ ಆಯೋ ಜಿಸಲಾದ 'ಸ್ಪರ್ಧಾತ್ಮಕ ಪರೀಕ್ಷೆ ಗಳು ಮತ್ತು ಆತ್ಮ ವಿಶ್ವಾಸ' ಕುರಿತ ಸಂವಾದ ಕಾರ್ಯ ಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡುತ್ತಿದ್ದರು.
ಬಾಲ್ಯದಿಂದಲೇ ನಮ್ಮ ವ್ಯಕ್ತಿತ್ವ ಅರಳಲಾರಂಭಿಸುತ್ತದೆ. ಪದವಿ ತರಗತಿಗಳಿಗೆ ತಲುಪುವಾಗ ವಿದ್ಯಾರ್ಥಿಗಳು ಯುಪಿಎಸ್ಸಿ, ಕೆಪಿಎಸ್ ಸಿ ಪರೀಕ್ಷೆಗಳನ್ನು ಬರೆಯಲು ಆರಂಭಿಸಬೇಕು. ಎಲ್ಲವೂ, ಎಲ್ಲರಿಗೂ ಪ್ರಥಮ ಪ್ರಯತ್ನದಲ್ಲೇ ಸಾಧ್ಯವಾಗುವುದಿಲ್ಲ. ಇಂದು ಈ ಪರೀಕ್ಷೆಗಳನ್ನು ಎದುರಿಸಲು ಪೂರಕವಾಗಿ ಹಲವು ತರಬೇತಿ ಕಾರ್ಯಕ್ರಮಗಳಿವೆ, ಅಂತಿಮವಾಗಿ ಸ್ಪರ್ಧೆಯಲ್ಲೇ ಜಯಿಸಲು ನಮ್ಮ ಪ್ರಯತ್ನ ಅಗತ್ಯ. ಪರೀಕ್ಷೆಯನ್ನು ಎಷ್ಟು ಬಾರಿ ಬರೆಯಬಹುದು. ಹೇಗೆ ಬರೆಯಬಹುದು. ಕೇವಲ ಓದುವಿಕೆಗೆ ಮಾತ್ರ ತಮ್ಮನ್ನು ಸೀಮಿತಗೊಳಿಸದೆ ಜಗತ್ತಿನ ಪ್ರಸಕ್ತ ವಿದ್ಯಮಾನಗಳನ್ನು ತಿಳಿಯುವ ಆಸಕ್ತಿ ವಿದ್ಯಾರ್ಥಿ ಗಳಿಗಿ ರಬೇ ಕೆಂದು ಕವಿತ ನುಡಿ ದರು.
ಇಂದು ವಿದ್ಯಾ ರ್ಥಿಗ ಳಿಗೆ ವಿಫುಲ ಅವ ಕಾಶ ವಿದ್ದು, ಶ್ರದ್ಧೆ ಮತ್ತು ಪೂರ್ವ ಸಿದ್ಧತೆ, ಶ್ರಮ ನಮ್ಮನ್ನು ಸಾಧ ನೆಯ ಉತ್ತುಂ ಗಕ್ಕೆ ತಲು ಪಲು ನೆರ ವಾಗು ವುದು ಎಂದರು.
ಸಂವಾದ ಕಾರ್ಯ ಕ್ರಮ ಉದ್ಘಾ ಟಿಸಿ ಮಾತ ನಾಡಿದ ಕಾಲೇ ಜಿನ ಉಪ ಪ್ರಾಂಶು ಪಾಲರಾದ ಪ್ರೊ. ಟಿ ಎಸ್. ಶ್ರೀಪೂರ್ಣ ಅವರು, ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಆಸಕ್ತಿ ಹೊಂದಿದರೆ ತರಬೇತಿ ನೀಡಲಾಗುವುದು ಎಂದು ಘೋಷಿಸಿದರಲ್ಲದೆ, ವಿದ್ಯಾರ್ಥಿಗಳು ತಾವು ಯಾವ ರೀತಿಯಲ್ಲೂ ಇತರರಿಗಿಂತ ಕೀಳಲ್ಲ. ಶ್ರಮ ವಹಿಸಿ ಕಲಿತು ಅಧಿಕಾರ ದೊರೆತಾಗ, ಅಧಿಕಾರವನ್ನು ಜನಪರವಾಗಿ ಬಳಸಿಕೊಳ್ಳುವುದನ್ನು ಮರೆಯಬಾರದು. ಕಾಲೇಜಿನ ಹಲವು ವಿದ್ಯಾರ್ಥಿಗಳಿಂದು ಉತ್ತಮ ಸ್ಥಾನದಲ್ಲಿದ್ದಾರೆ. ಇಂದಿನ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರೇರಪಣೆಯಾಗಲಿ ಎಂದರು.
ವಾರ್ತಾಧಿಕಾರಿ ಶ್ರೀಮತಿ ರೋಹಿಣಿ ಕಾರ್ಯಕ್ರಮದ ಉದ್ದೇಶ ವಿವರಿಸಿ ಸ್ವಾಗತಿಸಿದರು.

Tuesday, September 18, 2012

ಗಣಪತಿ ಮೂರ್ತಿ ವಿಸರ್ಜನೆ: ಪಾಲಿಕೆ ವಿನಂತಿ

ಮಂಗಳೂರು,ಸೆಪ್ಟೆಂಬರ್.18 :ಗಣಪತಿ ವಿಸರ್ಜನೆ ಸಮಯದಲ್ಲಿ ಅಲಂಕಾರಿಕ ವಸ್ತುಗಳು, ಹೂವು, ಪ್ರಸಾದ ವಿತರಣಾ ತ್ಯಾಜ್ಯ ಇತ್ಯಾದಿಗಳನ್ನು ವಿಸರ್ಜನಾ ಸ್ಥಳದ ಸುತ್ತಮುತ್ತ ಅಥವಾ ನದಿ, ಚಾನೆಲ್ ನಲ್ಲಿ ವಿಲೇವಾರಿ ಮಾಡುತ್ತಿದ್ದು, ಇದು ಪರಿಸರ ಮಾಲಿನ್ಯ ಉಂಟುಮಾಡುತ್ತಿರುವುದರಿಂದ, ಈ ಕೆಳಕಂಡ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಲು ಭಕ್ತರನ್ನು ಮಹಾನಗರಪಾಲಿಕೆ ಆಯುಕ್ತರು ಕೋರಿದ್ದಾರೆ.
1. ವಿಸರ್ಜನೆ ಸಮಯದಲ್ಲಿ ಗಣಪತಿ ಮೂರ್ತಿಗೆ ಅಲಂಕರಿಸಿದ ಹೂವು, ಅಲಂಕಾರಿಕೆ ಸಾಮಗ್ರಿಗಳು, ಪ್ರಸಾದ ವಿತರಣಾ ತ್ಯಾಜ್ಯ ಇತ್ಯಾದಿಗಳನ್ನು ನೀರಿನಲ್ಲಿ ಹಾಕದೆ ಮಹಾನಗರಪಾಲಿಕೆಯ ಡಂಪರ್ ಪ್ಲೇಸರ್ ಕಂಟೈನರ್ (ಹಳದಿ ಕಬ್ಬಿಣದ ಡಬ್ಬ) ಗಳಲ್ಲಿ ವಿಲೇವಾರಿ ಮಾಡುವುದು.
2. ನೈಸರ್ಗಿಕ ಬಣ್ಣದ ಗಣಪತಿ ಮೂರ್ತಿ ಪೂಜಿಸಿ.
3. ಗಣಪತಿ ಹಬ್ಬದ ಆಚರಣೆಯಲ್ಲಿ ಪ್ಲಾಸ್ಟಿಕ್ ಹೂಗಳು, ಪ್ರಾಸ್ಟಿಕ್ ಬಂಟಿಂಗ್ಸ್ ಇತ್ಯಾದಿಗಳನ್ನು ಬಳಸದಿರುವುದು.
4. ಗಣಪತಿ ಪೂಜೆಯ ನಂತರದ ಪ್ರಸಾದ ವಿತರಣೆಗೆ ಪ್ಲಾಸ್ಟಿಕ್ ತಟ್ಟೆ ಮತ್ತು ಲೋಟಗಳನ್ನು ಕಡ್ಡಾಯವಾಗಿ ನಿಷೇಧಿಸುವುದು.
ಈ ಮೂಲಕ, ಪ್ರಜ್ಞಾವಂತ ಸಾರ್ವಜನಿಕರು, ಪರಿಸರ ಸ್ನೇಹಿ ಗಣಪತಿ ಹಬ್ಬ ಆಚರಣೆಗೆ ಸಹಕರಿಸಬೇಕಾಗಿ ಮಂಗಳೂರು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ

ಪ್ರವಾಸೋದ್ಯಮ ಅಭಿವೃದ್ಧಿಗೆ ಸಚಿವರಿಂದ ತಣ್ಣೀರು ಬಾವಿ ಸುತ್ತಮುತ್ತಲ ಪ್ರದೇಶ ವೀಕ್ಷಣೆ

ಮಂಗಳೂರು, ಸೆಪ್ಟೆಂಬರ್.18 :ಮಂಗಳೂರಿನ ಸಮುದ್ರ ತೀರ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಪ್ರವಾಸೋದ್ಯಮ ಸಚಿವರಾದ ಆನಂದ್ ಸಿಂಗ್ ಅವರು ಸೆಪ್ಟೆಂಬರ್ 17 ಸೋಮವಾರದಂದು ಸಂಜೆ ತಣ್ಣೀರು ಬಾವಿಗೆ ಭೇಟಿ ನೀಡಿದರು.
ಸಮುದ್ರ ತೀರದಲ್ಲಿ ಗಾಲ್ಫ್ ಕ್ಲಬ್ ನಿರ್ಮಾಣ, ಮರೈನ್ ಪಾರ್ಕ್ ನಿರ್ಮಾಣ ಹಾಗೂ ತಣ್ಣೀರು ಬಾವಿಯಿಂದ ಸುಲ್ತಾನಬತ್ತೇರಿಗೆ ತೂಗು ಸೇತುವೆ ನಿರ್ಮಾಣ ಯೋಜನೆಗಳ ನಕ್ಷೆಗಳನ್ನು ಪರಿಶೀಲಿಸಿದರಲ್ಲದೆ, ತಣ್ಣೀರು ಬಾವಿಯಿಂದ ಸುಲ್ತಾನ್ ಬತ್ತೇರಿಗೆ ಬೋಟ್ ನಲ್ಲಿ ಪಯಣಿಸಿ ಪ್ರತ್ಯಕ್ಷವಾಗಿ ಸ್ಥಳ ಪರಿಶೀಲನೆ ನಡೆಸಿದರು.
ಗಾಲ್ಫ್ ಕ್ಲಬ್ ರಚನೆಗೆ ಮೀಸಲಿರುವ ಜಾಗವನ್ನು ಆದಷ್ಟು ಶೀಘ್ರ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಉಪಸಭಾಪತಿ ಗಳಾದ ಎನ್ ಯೋಗೀಶ್ ಭಟ್, ಪ್ರವಾಸೋದ್ಯಮ ಇಲಾಖೆಯ ಮುಖ್ಯ ಕಾರ್ಯದರ್ಶಿ ಶ್ರೀಮತಿ ಲತಾ ಕೃಷ್ಣ ರಾವ್, ನಿರ್ದೇಶಕರಾದ ಶ್ರೀಮತಿ ಸತ್ಯವತಿ, ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಜಿತೇಂದ್ರ, ತಹಸೀಲ್ದಾರ್ ರವಿಚಂದ್ರ ನಾಯಕ್ ಉಪಸ್ಥಿತರಿದ್ದರು.


ಮುಷ್ಕರ ಸಮಸ್ಯೆ ನಿರ್ವಹಣೆಗೆ ಕಂಟ್ರೋಲ್ ರೂಂ

ಮಂಗಳೂರು, ಸೆಪ್ಟೆಂಬರ್.18 : ಸೆಪ್ಟೆಂಬರ್ 19ರಂದು ಮಧ್ಯರಾತ್ರಿಯಿಂದ ಅಖಿಲ ಭಾರತ್ ಮೋಟಾರ್ ಟ್ರಾನ್ಸ್ ಪೋರ್ಟ್ ಕಾಂಗ್ರೆಸ್ ನಡೆಸಲು ಉದ್ದೇಶಿಸಿರುವ ಲಾರಿ ಮಷ್ಕರದ ಸಂದರ್ಭದಲ್ಲಿ ಸಾರ್ವಜನಿಕರಿಗೆ ದಿನಬಳಕೆ ವಸ್ತು ಪೂರೈಕೆಗಳಲ್ಲಿ ಅಡಚಣೆ ಆಗದಂತೆ ನೋಡಿಕೊಳ್ಳಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಟಾಸ್ಕ್ ಫೋರ್ಸ್ ವತಿಯಿಂದ 18.9.12ರಂದು ಸಭೆ ನಡೆಸಿ ದಿನಬಳಕೆ ವಸ್ತುಗಳ ಸಾಗಾಣೆಯಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಲು ವಿವಿಧ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಮಲ್ಲಿಕಾರ್ಜುನ್ ಅವರು ತಿಳಿಸಿದ್ದಾರೆ.
ಲಾರಿ ಮುಷ್ಕರದ ಸಮಯದಲ್ಲಿ 24 ಗಂಟೆ ಕಾರ್ಯನಿರ್ವಹಿಸಲು ಕಂಟ್ರೋಲ್ ರೂಂ ಆರಂಭಿಸಲಾಗಿದೆ. ಸಾರ್ವಜನಿಕರು ಮುಷ್ಕರದಿಂದಾಗಿ ತೊಂದರೆಯಾದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ 1077, ಪೊಲೀಸ್ ಇಲಾಖೆ 100 ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ 2220577 ಇಲ್ಲಿಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.


ಗಣಪತಿ ಮೂರ್ತಿ ವಿಸರ್ಜನೆ: ಮುನ್ನೆಚ್ಚರಿಕೆ

ಮಂಗಳೂರು, ಸೆಪ್ಟೆಂಬರ್.18: ಗಣೇಶ ಹಬ್ಬದಲ್ಲಿ ಗಣೇಶ ಮೂತರ್ಿಗಳನ್ನು ನೀರಿನಲ್ಲಿ ವಿಸರ್ಜಿಸುವಾಗ ನೀರು ರಾಸಾಯಿನಿಕಗಳಿಂದ ಕೂಡಿದ ಬಣ್ಣಗಳಿಂದ ಕಲ್ಮಶಗೊಳ್ಳುವುದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕೆಂದು ಪರಿಸರ ಅಧಿಕಾರಿಗಳು ತಿಳಿಸಿದ್ದಾರೆ.
ಸೀಸದ ಬಣ್ಣದಲ್ಲಿನ ಸೀಸದ ಪ್ರಮಾಣ ನೀರಿನಲ್ಲಿ ಬೆರೆಯುವುದರಿಂದ ಮಕ್ಕಳಲ್ಲಿ ಬುದ್ದಿಶಕ್ತಿ ಕಡಿಮೆಯಾಗಲಿದೆ. ಹಾಗಾಗಿ ಮೂರ್ತಿಗಳನ್ನು ತಯಾರಿಸುವಾಗ ಸಸ್ಯಾಧಾರಿತ ನೈಸರ್ಗಿಕ ಬಣ್ಣಗಳನ್ನು ಮಾತ್ರ ಉಪಯೋಗಿಸಿ. ನಿಂತ ನೀರು ಅಂದರೆ ಕೆರೆ, ಕೊಳ, ಬಾವಿಗಳಲ್ಲಿ ನೀರಿನಲ್ಲಿ ಕಲ್ಮಶ ಸೇರುವುದನ್ನು ತಡೆಯಲು ಹಾಗೂ ಜೇಡಿಮಣ್ಣು ನೀರಿಗೆ ಸೇರುವುದನ್ನು ತಡೆಯಲು ಗಣೇಶ ಮೂರ್ತಿಗಳನ್ನು ಇಂತಹ ನೀರಿನಲ್ಲಿ ಮುಳುಗಿಸದಿರಿ. ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿಗಳು ಕೋರಿದ್ದಾರೆ.

ಕಾಲಮಿತಿಯೊಳಗೆ ಗುಣಮಟ್ಟದೊಂದಿಗೆ ನಿರ್ಮಾಣ ಇಂಜಿನಿಯರುಗಳ ಹೊಣೆ

ಮಂಗಳೂರು,ಸೆಪ್ಟೆಂಬರ್.18: ಕಾಲಮಿತಿಯೊಳಗೆ ನಿರ್ಮಾಣ ಕಾಮಗಾರಿ ಮತ್ತು ಗುಣಮಟ್ಟ ಕಾಯ್ದುಕೊಳ್ಳುವಿಕೆ ಸಿವಿಲ್ ಇಂಜಿನಿಯರ್ಗಳ ಹೊಣೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕೆ ಟಿ ಶೈಲಜಾ ಭಟ್ ಅವರು ಹೇಳಿದರು.
ಅವರು ಇಂದು ಜಿಲ್ಲಾ ಪಂಚಾಯತ್ ನಲ್ಲಿ ಇಂಜಿನಿಯರಿಂಗ್ ದಿನಾಚರಣೆ ಸಮಾರಂಭದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸರ್ ಎಂ ವಿಶ್ವೇಶ್ವರಯ್ಯನವರಷ್ಟು ದಕ್ಷವಾಗಿ ಕರ್ತವ್ಯ ನಿರ್ವಹಿಸಿ ಎಂದು ನಾನು ಒತ್ತಾಯಿಸುವುದಿಲ್ಲ. ಆದರೆ ಉತ್ತಮ ನಿರ್ಮಾಣಗಳಿಂದ ಜಿಲ್ಲೆಯ ಪ್ರತಿಷ್ಠೆ ಹೆಚ್ಚಲಿದೆ. ಕಾರ್ಯಾಗಾರಗಳು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಪೂರಕವಾಗಲಿ ಎಂದರು. ಕನ್ನಂಬಾಡಿ ಅಣೆಕಟ್ಟು ಇಂದೂ ನಮ್ಮ ಹೆಮ್ಮೆ. ಈ ನಿರ್ಮಾಣಗಳು ನಮ್ಮ ಜಿಲ್ಲಾ ಪಂಚಾಯತ್ ಇಂಜಿನಿಯರ್ ಗಳಿಗೆ ಮಾದರಿಯಾಗಬೇಕು ಎಂದರು.
ಅತಿಥಿಗಳಾಗಿದ್ದ ಎನ್ ಐ ಟಿ ಕೆಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು ಮತ್ತು ಪ್ರೊಫೆಸರ್ ಡಾ ಎ ಯು ರವಿಶಂಕರ್ ಅವರು, ನಮ್ಮ ಸರ್ವಋತು ರಸ್ತೆಗಳು ಹೈವೇಗಳ ಬದಲು ಲೋ ವೇ ಗಳಾಗಿವೆ. ಗ್ರಾಮೀಣ ರಸ್ತೆಗಳಂತೂ ಇನ್ನೂ ದುಸ್ಥಿತಿಯಲ್ಲಿದೆ. ರಸ್ತೆಗಳ ಯೋಜನೆ ರೂಪಿಸುವಾಗ ದಕ್ಷಿಣ ಕನ್ನಡ ಜಿಲ್ಲೆಯ ಮಳೆಯನ್ನು ಗಮನದಲ್ಲಿಟ್ಟು ನಿರ್ಮಿಸಿದರೆ ನಮ್ಮಲ್ಲೂ ಉತ್ತಮ ನಿರ್ಮಾಣಗಳು ಸಾಧ್ಯ ಎಂದರು. ಉತ್ತಮ ನಗರ ನಿರ್ಮಾಣ ಅವಕಾಶಗಳು ಇಲ್ಲಿ ಮುಕ್ತವಾಗಿದ್ದು, ಉತ್ತಮ ನಿರ್ಮಾಣಗಳಿಗೆ ಅತ್ಯಾಧುನಿಕ ತಂತ್ರಜ್ಞಾನಗಳಿವೆ. ಅತ್ಯುತ್ತಮ ಸಂಪರ್ಕ ವ್ಯವಸ್ಥೆಯಿಂದ ಮಂಗಳೂರನ್ನು ಉತ್ತಮ ನಗರವಾಗಿ ರೂಪಿಸಲು ಸಾಧ್ಯ ಎಂದರು.
ಸಿವಿಲ್ ಇಂಜಿನಿಯರ್ ಅಸೋಸಿಯೇಷನ್ ನ ಉಪಾಧ್ಯಕ್ಷ (ದಕ್ಷಿಣ) ಅಶೋಕ್ ಕುಮಾರ್ ಅವರು ಮಾತನಾಡಿದರು. ಕಾರ್ಯಾಗಾರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಅವರು ಮಾತನಾಡಿ, ಸರ್ ಎಂ ವಿಶ್ವೇಶ್ವರಯ್ಯನವರ ಬದ್ಧತೆ ಮತ್ತು ಇಂದಿನ ವಿನೂತನ ತಂತ್ರಜ್ಞಾನಗಳನ್ನು ಸಿವಿಲ್ ಇಂಜಿನಿಯರಿಂಗ್ ನಲ್ಲಿ ಅಳವಡಿಸಿಕೊಳ್ಳುವುದರಿಂದ ಅದ್ಭುತ ನಿರ್ಮಾಣಗಳನ್ನು ಸಾಧ್ಯವಾಗಿಸಬಹುದು ಎಂದರು.
ವಿಶ್ವೇಶ್ವರಯ್ಯನವರ ಆಡಳಿತ ಜಾಣ್ಮೆ, ಪಾರದರ್ಶಕ ಕಾರ್ಯವೈಖರಿ ಎಲ್ಲರಿಗೂ ಮಾರ್ಗದರ್ಶನ ನೀಡುವಂತಹುದು. ಕೈಗಾರಿಕಾ ಇಂಜಿನಿಯರಿಂಗ್, ವ್ಯಾವಹಾರಿಕ ಇಂಜಿನಿಯರಿಂಗ್ ಜೊತೆ ಇಂದು ಮಾನವೀಯ ಇಂಜಿನಿಯರಿಂಗ್ ಬಗ್ಗೆಯೂ ನಾವಿಂದು ಮಾತನಾಡುತ್ತೇವೆ. ಸಾಧ್ಯತೆಗಳು ವಿಫುಲವಾಗಿರುವ ಇಂದಿನ ಕಾಲಘಟ್ಟದಲ್ಲಿ ಎಲ್ಲ ಇಂಜಿನಿಯರಿಂಗ್ ವಿಭಾಗಗಳು ಸಮರ್ಥವಾಗಿ, ಕಾಮಗಾರಿಗಳನ್ನು ಸಕಾಲದಲ್ಲಿ ಮುಗಿಸುವುದರಿಂದ ಅಂದಾಜುಪಟ್ಟಿ 20 ಕೋಟಿಗಳಿಂದ 300 ಕೋಟಿಗಳಿಗೆ ತಲುಪುವ ಸಾಧ್ಯತೆಗಳನ್ನು ತಪ್ಪಿಸಬಹುದಾಗಿದೆ ಎಂದರು.
ಜಿಲ್ಲಾ ಪಂಚಾಯತ್ ನಲ್ಲಿ ಪ್ರಥಮ ಬಾರಿಗೆ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಮತ್ತು ಮೆಡ್ರಾಸ್ ಸಿಮೆಂಟ್ಸ್ ಲಿಮಿಟೆಡ್ ಸಹಕಾರದಿಂದ ಇಂದಿನ ಕಾರ್ಯಾಗಾರವನ್ನು ಆಯೋಜಿಸಲಾಗಿದ್ದು, ಅಧ್ಯಕ್ಷ ವಿಜಯ್ ವಿಷ್ಣು ಮಯ್ಯ ಸ್ವಾಗತಿಸಿದರು. ಜಿಲ್ಲಾ ಪಂಚಾಯತ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಸತ್ಯಾನಾರಾಯಣ್ ವಂದಿಸಿದರು. ನಿರ್ಮಿತಿಯ ರಾಜೇಂದ್ರ ಕಲ್ಬಾವಿ ಕಾರ್ಯಕ್ರಮ ನಿರೂಪಿಸಿದರು. ಇಂಜಿನಿಯರ್ ಲಕ್ಷ್ಮೀಶ್ ಯೆಡಿಯಾಳ್ ಮತ್ತು ಡಾ ಎಚ್ ಸಿ ಚನ್ನಗಿರಿ ಗೌಡ ಉಪಸ್ಥಿತರಿದ್ದರು.


ಕಾಮಗಾರಿಗಳ ಸಂಯುಕ್ತ ಸಮೀಕ್ಷೆ ಮಾಡಿ ಛಾಯಾಚಿತ್ರ ಸಹಿತ ವರದಿ ಕೊಡಿ: ಜಿಲ್ಲಾಧಿಕಾರಿ

ಮಂಗಳೂರು, ಸೆಪ್ಟೆಂಬರ್. 18 : ಬೆಳ್ತಂಗಡಿ ತಹಸೀಲ್ದಾರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮತ್ತು ಸಬ್ಇನ್ಸ್ಪೆಕ್ಟರ್ ಸಂಯುಕ್ತವಾಗಿ ಎಳನೀರು ಸುತ್ತಮುತ್ತಲ 10ರಿಂದ 11 ಕಾಮಗಾರಿಗಳ ಸ್ಥಳ ಪರಿಶೀಲನೆಯನ್ನು ಸೆಪ್ಟೆಂಬರ್ 18ರಂದು ನಡೆಸಿ ಛಾಯಾಚಿತ್ರ ಸಹಿತ ವರದಿ ನೀಡಬೇಕೆಂದು ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸೋಮವಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಬಹುದೂರದ ಮತ್ತು ಒಳನಾಡಿನ ಪ್ರದೇಶ ಅಭಿವೃದ್ಧಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಕಾಮಗಾರಿಗಳು ನಡೆಯುತ್ತಿರುವ ವೇಗದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದರು. ಅಧಿಕಾರಿಗಳು ಅಭಿವೃದ್ಧಿ ಕುರಿತು ಬದ್ಧತೆ ಪ್ರದರ್ಶಿಸಿ ಕರ್ತವ್ಯ ನಿರ್ವಹಿಸಬೇಕೆಂದರು.
ಶಿರ್ಲಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲೆಕ್ಕಿಲ-ಮಾಣಿಲ ರಸ್ತೆಯಲ್ಲಿ ಎರಡು ಮೋರಿ ರಚನೆ, ಮಿತ್ತಬಾಗಿಲು ಕಲ್ಸಾರು ಪ್ರದೇಶವನ್ನು ಸಂಪರ್ಕಿಸುವ ಮಿತ್ತಬಾಗಿಲು ಗ್ರಾಮದ ಎಲುವೇರೆ ಹಳ್ಳಕ್ಕೆ ಸೇತುವೆ ನಿರ್ಮಾಣ, ಎಳನೀರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ, ಮಲವಂತಿಗೆ ಗ್ರಾಮದ ಪರಾರಿ ಪನಿಕಲ್ ದಿಡುಪೆ ರಸ್ತೆಯ ನೇತ್ರ ಕೋಡಂಗೆ ಎಂಬಲ್ಲಿ ಸೇತುವೆ ರಚನೆ, ಇಂದಬೆಟ್ಟು ಗ್ರಾಮ ಪಂಚಾಯತ್ ನ ನಾವೂರು ಗ್ರಾಮದ ಕುಂಡಡ್ಕ ಎಂಬಲ್ಲಿ ಕುಸಿದು ಬಿದ್ದ ಸೇತುವೆ ಪುನರ್ ನಿಮರ್ಾಣ ಕಾಮಗಾರಿ, ನಡ ಗ್ರಾಮದ ಕಂಬುಜೆ ಬಳಿ ನಾಲ್ಕು ಮೋರಿ ರಚನೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸಂಯುಕ್ತವಾಗಿ ಸಮೀಕ್ಷೆ ಮಾಡಿ ಛಾಯಾಚಿತ್ರ ಸಹಿತ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳು ಹೇಳಿದರು.
ಈ ಮೊದಲು ಸಂಬಂಧ ಪಟ್ಟ ಇಲಾಖಾಧಿಕಾರಿಗಳು ಸಮನ್ವಯದಿಂದ ಕರ್ತವ್ಯನಿರ್ವಹಿಸಬೇಕೆಂದು ಸೂಚಿಸಲಾಗಿದ್ದರೂ, ಸಮನ್ವಯತೆ ಸಾಧಿಸಿದೆ ಕಾಮಗಾರಿ ಅನುಷ್ಠಾನದಲ್ಲಿ ನಿರ್ಲಕ್ಷ್ಯ ವಹಿಸಿದರೆ ನೋಟೀಸು ನೀಡುವ ಎಚ್ಚರಿಕೆಯನ್ನೂ ನೀಡಿದರು.
ನಾರಾವಿ ಗ್ರಾಮದ ನುಜ್ಜೋಡಿ ಅಂಗನವಾಡಿಗೆ 4.15 ಲಕ್ಷ ರೂ.ಗಳ ಅನುದಾನ ಬಿಡುಗಡೆಯಾಗಿದ್ದು, ಅಕ್ಟೋಬರ್ 2ರ ಗಾಂಧೀಜಯಂತಿಯಂದು ಅಂಗನವಾಡಿ ಆರಂಭಿಸಬೇಕೆಂದ ಜಿಲ್ಲಾಧಿಕಾರಿಗಳು, ಮಾಳಿಗೆ ಮನೆಯಲ್ಲಿ ಅಂಗನವಾಡಿ ಆರಂಭಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳು ಹೇಳಿದರು.
ಕುತ್ಲೂರು -ಕುಕ್ಕಾಜೆ-ಅಳಂಬದ 2.5 ಕಿ. ಮೀ ವ್ಯಾಪ್ತಿಯ ರಸ್ತೆಗೆ 23.65 ಅಂದಾಜುಪಟ್ಟಿ ಸಲ್ಲಿಸಲಾಗಿದ್ದು, ಈ ವಾರದಲ್ಲಿ ಕೆಲಸ ಆರಂಭವಾಗಲಿದೆ. ಸುಲ್ಕೇರಿ ಮೊಗ್ರು ಮತ್ತು ಮಾಳಿಗೆ ರಸ್ತೆಯ ಕಾಮಗಾರಿ ಆರಂಭಿಸಲು ಕಚ್ಚಾಸಾಮಗ್ರಿಗಳನ್ನು ಸಾಗಾಟ ಮಾಡಲು ಸಮಸ್ಯೆ ಇದೆ ಎಂದಾಗ ಪೊಲೀಸ್ ಇಲಾಖೆ ಸ್ಥಳೀಯರ ಸಹಕಾರ ಹಾಗೂ ವಾಹನ ಒದಗಿಸುವ ವ್ಯವಸ್ಥೆಗೆ ನೆರವಾಗಲಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಅಭಿಷೇಕ್ ಗೋಯಲ್ ಹೇಳಿದರು.
ಒಟ್ಟಿನಲ್ಲಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿಗಳು ಆರಂಭಗೊಳ್ಳಬೇಕು ಇದಕ್ಕೆ ಪೊಲೀಸ್ ಇಲಾಖೆ ಎಲ್ಲ ಸಹಕಾರ ನೀಡಲಿದೆ ಅಧಿಕಾರಿಗಳು ಸಹಕರಿಸಬೇಕೆಂದರು. ಶಿಲಾಳು ಸುಡೆಲಾಯಿ ಸೇತುವೆ ನಿರ್ಮಾಣ ಅಕೋಬರ್ ಮೊದಲ ವಾರದಲ್ಲಿ ನಿರ್ಮಾಣವಾಗಬೇಕೆಂದ ಜಿಲ್ಲಾಧಿಕಾರಿಗಳು ಅಧಿಕಾರಿಗಳು ಸಮಯ ಮಾಡಿ ಸ್ಥಳ ಪರಿಶೀಲಿಸಿ ಕಾಮಗಾರಿ ಆರಂಭವಾದ ಕುರಿತು ಮಾಹಿತಿ ನೀಡಬೇಕೆಂದರು.
ಪರಾರಿ- ಪನಿಕಲ್ ದಿಡುಪೆಯ ನೇತ್ರಕೊಡಂಗೆ ಎಂಬಲ್ಲಿ, ಇಂದಬೆಟ್ಟುವಿನ ಕುಂಡಡ್ಕ ಎಂಬಲ್ಲಿ ಸೇತುವೆ ರಚನೆ, ನಡ ಗ್ರಾಮದ ಕಂಬುಜೆ ಬಳಿ ಮೋರಿ ರಚನೆಗಳ ಕಾಮಗಾರಿಗಳಿಗೆ, ಮಲವಂತಿಗೆ ಸಂಪಿಗೆಕಟ್ಟೆ, ಎಳನೀರು ರಸ್ತೆ ಕಾಮಗಾರಿಗೆ ಟೆಂಡರ್ 27ರಂದು ಓಪನ್ ಆಗಲಿದೆ ಎಂದು ಜಿಲ್ಲಾ ಪಂಚಾಯತ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಹೇಳಿದರು.
ಪಲ್ಲಿ ಬಸ್ ನಿಲ್ದಾಣ ಬಳಿ ನೀರಾವಿ ಚರಂಡಿಗೆ, ಸೋಲಾರ್ ಘಟಕಗಳ ಬಗ್ಗೆ, ಗ್ರಾಮೀಣ ಉದ್ಯೋಗ ಖಾತ್ರಿ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಕಾಮಗಾರಿ ನಡೆಸಿ ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಅವರನ್ನೊಳಗೊಂಡಂತೆ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.



Saturday, September 15, 2012

ಜಿಲ್ಲೆಯಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿಯನ್ನು ಯಶಸ್ವಿಗೊಳಿಸಿ: ಕೆ.ಟಿ. ಶೈಲಜಾ ಭಟ್

ಮಂಗಳೂರು, ಸೆಪ್ಟೆಂಬರ್.15 : ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಂಚೂಣಿಯಲಿದ್ದರೂ, ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆಯಡಿ ಸಾಧನೆ ದಾಖಲಿಸುವಲ್ಲಿ ದಕ್ಷಿಣ ಕನ್ನಡ ವಿಫಲವಾಗಿರುವುದು ವಿಷಾದದ ಸಂಗತಿಯೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕೆ.ಟಿ.ಶೈಲಜಾ ಭಟ್ ತಿಳಿಸಿದ್ದಾರೆ.
ಇಂದು ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ನಲ್ಲಿ ನಡೆದ ಮಾಸಿಕ ಕೆಡಿಪಿ ಸಮೀಕ್ಷಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಜನಪರ ಯೋಜನೆಯ ಅನುಷ್ಠಾನ ವಿಳಂಬಕ್ಕೆ ಕಾರ್ಯ ನಿರ್ವಹಣಾಧಿಕಾರಿಗಳು ಕಾರಣ ಕೊಡಿ ಎಂದು ಸೂಚಿಸಿದರು.
ಇತ್ತೀಚೆಗೆ ಹೈದರಾಬಾದ್ ನಲ್ಲಿ ಈ ಸಂಬಂಧದ ಕಾರ್ಯಕ್ರಮದಲ್ಲಿ ಇದೇ ಪ್ರಶ್ನೆಯನ್ನು ತಾನು ಎದುರಿಸಿದ್ದು, ಖಾತ್ರಿ ಯೋಜನೆ ಜಿಲ್ಲೆಯಲ್ಲಿ ಹೀಗ್ಯಾಕೆ ಎನ್ನುವುದಕ್ಕೆ ಉತ್ತರವಿರಲಿಲ್ಲ. ಹಾಗಾಗಿ ತನಗೆ ಮಾಹಿತಿ ನೀಡಿ ಎಂದು ಅಧ್ಯಕ್ಷರು ಕೇಳಿದಾಗ, ಈಗಾಗಲೇ ಜಿಲ್ಲೆಗೆ ನೀಡಿರುವ ಅನುದಾನವನ್ನು ಸದ್ಬಳಕೆ ಮಾಡುವ ಭರವಸೆಯನ್ನು ಕಾರ್ಯನಿರ್ವಾಹಕ ಅಧಿಕಾರಿಗಳು ನೀಡಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಅವರು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಸಚಿವರು ಖಾತ್ರಿ ಯೋಜನೆಯ ಅನುಷ್ಠಾನದಲ್ಲಿ ಅತ್ಯುತ್ಸಕರಾಗಿದ್ದು ಪ್ರತಿದಿನವೆಂಬಂತೆ ಬೆಂಗಳೂರಿನ ಕೇಂದ್ರ ಕಚೇರಿಯಿಂದ ವರದಿ ಕೇಳುತ್ತಿದ್ದರೆ, ವಾರಕ್ಕೊಮ್ಮೆ ಪ್ರಧಾನ ಕಾರ್ಯದರ್ಶಿಗಳು, ಉಸ್ತುವಾರಿ ಕಾರ್ಯದರ್ಶಿಗಳು, ಪ್ರಗತಿ ಪರಿಶೀಲನೆ ಮಾಡಿ ದಕ್ಷಿಣಕನ್ನಡ ಹಿನ್ನಡೆಗೆ ಕಾರಣ ಕೇಳುತ್ತಿದ್ದಾರೆ. ಹೀಗಾಗಿ ಯಾವುದೇ ಕಾರಣ ನೀಡದೇ ಸಾಧನೆ ಮಾಡಿ ಅನುಪಾಲನಾ ವರದಿ ಕೊಡಿ ಎಂದರು.
ಯೋಜನಾ ನಿರ್ದೇಶಕರಾದ ಶ್ರೀಮತಿ ಸೀತಮ್ಮ ಅವರು ಮಾತನಾಡಿ, ಎಲ್ಲಾ ಪಂಚಾಯತ್ಗಳು ಪಂಚಾಯತಿಗೊಂದು ಕಾಯಕ ಬಂಧುಗಳನ್ನು ನೇಮಿಸಿಕೊಂಡು ಯೋಜನೆ ದುರುಪಯೋಗವಾಗದಂತೆ ಅನುಷ್ಠಾನಕ್ಕೆ ತರಲು ಸಾಧ್ಯವಿದೆ ಎಂದರು.
ಸಾಮಾಜಿಕ ಅರಣ್ಯ, ಅರಣ್ಯ ಇಲಾಖೆ, ತೋಟಗಾರಿಕಾ ಇಲಾಖೆಗಳ ಸಹಕಾರದೊಂದಿಗೆ ಈಗಾಗಲೇ 866 ಲಕ್ಷ ರೂ.ಗಳ ಕ್ರಿಯಾ ಯೋಜನೆ ರೂಪಿಸಿ ಗ್ರಾಮ ಸಭೆಯಿಂದ ಅನುಮೋದನೆ ಪಡೆಯಲು ಸೂಚಿಸಿದರೂ ಸಂಬಂಧಪಟ್ಟವರು ಸ್ಪಂದಿಸುತ್ತಿಲ್ಲ. ಸೆಪ್ಟೆಂಬರ್ 10ರಿಂದ 20ರೊಳಗಾಗಿ ಕ್ರಿಯಾಯೋಜನೆ ಅನುಮೋದನೆಗೊಳ್ಳಬೇಕೆಂದರು. ಪ್ರತೀ ದಿನದ ಪ್ರಗತಿ ಕಳುಹಿಸಿ ಎಂದು ರಾಜ್ಯ ಸರ್ಕಾರದಿಂದ ಸೂಚನೆ ಬಂದಿದ್ದು ಅಧಿಕಾರಿಗಳು ಸ್ಪಂದಿಸುವಂತೆ ಕೋರಿದರು. ಬೀದಿ ಬದಿಗಳಲ್ಲಿ ಸಸಿ ಬೆಳೆಸಿ ಎಂಬ ಸೂಚನೆ ನೀಡಿದ ಬಳಿಕ ಸಸಿಗಳ ಲಭ್ಯತೆ ಇಲ್ಲ ಎಂಬ ಮಾಹಿತಿ ಈಗ ಲಭ್ಯವಾಗುತ್ತಿದ್ದು ಖಾಸಗಿ ನರ್ಸರಿಗಳಿಂದ ಖರೀದಿಸಿ ನಿಗದಿತ ಗುರಿ ಸಾಧಿಸಿ ಎಂದು ಯೋಜನಾ ನಿರ್ದೇಶಕರು ಹೇಳಿದರು.
ಯೋಜನೆ ಅನುಷ್ಠಾನದಲ್ಲಿ ಸಾಧನೆ ಆಗದಿದ್ದರೆ ಪಿಡಿಒ,ಇಒ ಮತ್ತು ಸಹಾಯಕ ನಿರ್ದೇಶಕರು ಹಾಗೂ ವಿಭಾಗ ಮುಖ್ಯಸ್ಥರನ್ನೆ ಹೊಣೆಗಾರರನ್ನಾಗಿಸುವುದು ಎಂದು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಎಚ್ಚರಿಕೆ ನೀಡಿದರಲ್ಲದೆ, ಉತ್ತರ ಕನ್ನಡದಂತಹ ಪ್ರದೇಶಗಳಲ್ಲಿ 300 ಕೋಟಿ ರೂ.ಗಳಷ್ಟು ಬಳಕೆಯಾದರೆ ನಮ್ಮ ಜಿಲ್ಲೆಗೆ ನೀಡಿದ 29.19 ಕೋಟಿ ರೂ.ಗಳನ್ನು ವೆಚ್ಚಮಾಡಲಾಗುತ್ತಿಲ್ಲ. ಮುಂದಿನ ಆರುತಿಂಗಳೊಳಗೆ ಪ್ರಗತಿ ದಾಖಲಿಸಲ್ಪಡಬೇಕೆಂದರು. ಸಾಕಷ್ಟು ಮಾಹಿತಿ ಕಾಯಿದೆಯ ಸಂಬಂಧ ನೀಡಿದ್ದು, ಮಾರ್ಗದರ್ಶಿ ಸೂತ್ರಗಳನ್ನು ಸ್ಪಷ್ಟಪಡಿಸಲಾಗಿದೆ ಎಂದರು.
ಶಾಲೆಗಳಲ್ಲಿ ಮಳೆ ನೀರಿನ ಕೊಯ್ಲು ನಿರ್ವಹಣೆಗೆ ಶಾಲಾ ನಿರ್ವಹಣಾ ನಿಧಿಯಿಂದ 5000 ರೂ.ಗಳನ್ನು ಖರ್ಚು ಮಾಡಿ ನಿರ್ವಹಿಸಿ ಎಂದು ಸಿಇಒ ಸೂಚಿಸಿದರು. ಈ ಸಂಬಂಧ ಈಗಾಗಲೇ ಮುಖ್ಯ ಯೋಜನಾಧಿಕಾರಿಗಳ ನೇತೃತ್ವದಲ್ಲಿ ಶಿಕ್ಷಣ ಇಲಾಖಾಧಿಕಾರಿಗಳ ಸಭೆ ನಡೆಸಲಾಗಿದೆ.
ಜಲಾನಯನ, ಪಂಚಾಯತ್ ರಾಜ್ ಇಲಾಖೆ ಮತ್ತು ಸಣ್ಣ ನೀರಾವರಿ ಇಲಾಖೆಗಳು ಸಮನ್ವಯದಿಂದ ಕರ್ತವ್ಯ ನಿರ್ವಹಿಸಿದರೆ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಪರಿಹರಿಸಲು ಸಾಧ್ಯ. ಆದರೆ ಸಣ್ಣ ನೀರಾವರಿ ಇಲಾಖೆಯವರು ಈ ಬಗ್ಗೆ ಯಾವುದೇ ರೀತಿಯ ಸಹಕಾರ ಸ್ಪಂದನ ನೀಡದಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಿಇಒ ಅವರು, ಸಣ್ಣ ನೀರಾವರಿಯವರು ಕಳೆದ ಮೂರು ವರ್ಷಗಳಿಂದ ಅನುಷ್ಠಾನಗೊಳಿಸಿರುವ ಕಾಮಗಾರಿಗಳ ಸಮಗ್ರ ಮಾಹಿತಿ ಇಂದು ಸಂಜೆಯೊಳಗಾಗಿ ನೀಡಬೇಕೆಂದು ಸೂಚಿಸಿದರು.
2011-12ನೇ ಸಾಲಿನಲ್ಲಿ 86 ಕಾಮಗಾರಿಗಳು ಸಂಪೂರ್ಣಗೊಂಡಿದೆ. 68 ಕಾಮಗಾರಿಗಳು ಪ್ರಗತಿಯಲ್ಲಿದೆ. ಪ್ರಸಕ್ತ ಸಾಲಿನಲ್ಲಿ 40.99 ಕೋಟಿ ರೂ. ವೆಚ್ಚದಡಿ ನೂತನ 125 ಕಾಮಗಾರಿಗಳು ಆಗಬೇಕಿದೆ ಎಂದು ಇಂಜಿನಿಯರ್ ಮಾಹಿತಿ ನೀಡಿದರು. ಇನ್ನು ಪ್ರವಾಹ ನಿಯಂತ್ರಣ ಯೋಜನೆಯಡಿ 42ಕಾಮಗಾರಿಗಳು 708.6 ಲಕ್ಷ ರೂ.ವೆಚ್ಚದಲ್ಲಿ ಸಂಪೂರ್ಣಗೊಂಡಿವೆ. ಜಿಲ್ಲೆಗೆ ಈ ಯೋಜನೆಯಡಿ ಬಂದಿರುವ ಅನುದಾನ ಮುಗಿದ ಕಾಮಗಾರಿಗಳ ಬಗ್ಗೆ ಪ್ರಗತಿಯಲ್ಲಿರುವ ಬಗ್ಗೆ ಸಮಗ್ರ ವರದಿ ನೀಡಬೇಕಲ್ಲದೆ ಇಲಾಖೆ ಮುಖ್ಯಸ್ಥರೇ ಸಭೆಗೆ ಹಾಜರಾಗಬೇಕೆಂದು ಸಿಇಒ ಸೂಚಿಸಿದರು.
ತೋಟಗಾರಿಕೆ ಇಲಾಖೆಯಿಂದ ತಾರಸಿ ತೋಟದ ಬಗ್ಗೆ ಸ್ವಯಂ ಪ್ರೇರಣೆಯಿಂದ ಯೋಜನೆಗಳನ್ನು ಕೈಗೊಂಡಿದ್ದು, ನಗರದಲ್ಲಿ ಕುದ್ಮುಲ್ ರಂಗರಾವ್ ಮತ್ತು ಕದ್ರಿಯಲ್ಲಿರುವ ಆಶ್ರಮ ಶಾಲೆಗಳಲ್ಲಿ ತಾರಸಿ ತೋಟ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಸುರತ್ಕಲ್ ನ ಹೊಸಬೆಟ್ಟಿನಲ್ಲಿ 2 ಕೃಷಿಕರು ತಾರಸಿ ತೋಟ ಆರಂಭಿಸಲು ಉತ್ಸುಕರಾಗಿದ್ದಾರೆ. ಸಿಇಒ ಉಪಸ್ಥಿತಿಯುಲ್ಲಿ ಈ ಸಂಬಂಧ ಗೋವಿಂದದಾಸ ಕಾಲೇಜಿನಲ್ಲಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂಬಂಧ ವಿಜಯಾ ಬ್ಯಾಂಕ್ನ ಅಧ್ಯಕ್ಷರು ಆಸಕ್ತರಾಗಿದ್ದು, ಮಾತುಕತೆ ನಡೆಯಲಿದೆ ಎಂದು ಸಿಇಒ ಹೇಳಿದರು.
ಪ್ರಸಕ್ತ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಎದುರಿಸಲಿರುವ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಹಾಗೂ ಆತ್ಮವಿಶ್ವಾಸ ಬೆಳೆಸುವ ಕ್ರಮಗಳನ್ನು, ಕ್ವಶ್ಚನ್ ಬ್ಯಾಂಕ್ ತಯಾರಿಸಲು ವಿಶೇಷ ಗಮನ ಹರಿಸಲಾಗಿದೆ ಎಂದರು.
ಘನತ್ಯಾಜ್ಯ ವಿಲೇವಾರಿಯ ಬಗ್ಗೆ ಕ್ರಮವಹಿಸಲಾಗಿದ್ದು, ಪ್ರಗತಿಯಲ್ಲಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿಗಳು ವಿವರಿಸಿದರು. ಹಲವು ಜಿಲ್ಲೆಗಳಲ್ಲಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಜಾರಿತರಲಾಗಿದ್ದು, ಜಿಲ್ಲೆಯಲ್ಲಿ ನವೆಂಬರ್ ವೇಳೆಗೆ ಪ್ಲಾಸ್ಟಿಕ್ ನಿಷೇಧ ಚಾಲನೆಗೆ ಬರಲು ಪೂರ್ವತಯಾರಿ ನಡೆಸಬೇಕಿದೆ ಎಂದು ಸಿಇಒ ಹೇಳಿದರು.
ಜಿಲ್ಲಾ ಪಂಚಾಯತ್ ನಲ್ಲಿ ಕಳೆದ ಎರಡು ಸಭೆಗಳಲ್ಲಿ ಅಬಕಾರಿ ಇಲಾಖೆ ಮದ್ಯ ಮಾರಾಟ ನಿಯಂತ್ರಿಸುತ್ತಿಲ್ಲ ಹಾಗೂ ಮಾಹಿತಿ ನೀಡಿದ್ದನ್ನು ಸಂಬಂಧಪಟ್ಟವರಿಗೆ ತಲುಪಿಸಿ ದಾಳಿ ನಡೆಸುತ್ತಿದೆ ಎಂಬ ಜಿಲ್ಲಾ ಪಂಚಾಯತ್ ಸದಸ್ಯರ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳಬೇಕೆಂದು ಸಿಇಒ ಸೂಚಿಸಿದರು. ಅಂಗವಿಕಲರಿಗೆ ಸೌಲಭ್ಯಗಳನ್ನು ಸ್ವೀಕರಿಸಿದ ಅರ್ಜಿಗಳ ಮುಖಾಂತರ ನೀಡದೆ ಎಲ್ಲರಿಗೂ ಸೌಲಭ್ಯಗಳನ್ನು ತಲುಪಿಸುವಲ್ಲಿ ಸ್ವಯಂಪ್ರೇರಿತ ಮಾಹಿತಿ ನೀಡಿ ಅರ್ಜಿ ಸ್ವೀಕರಿಸುವ ಕ್ರಮವಾಗಬೇಕೆಂದರು. ಅರ್ಜಿಗಳು ಬರಲಿಲ್ಲ ಎಂಬ ಕಾರಣ ಪ್ರಗತಿ ಪರಿಶೀಲನ ಸಭೆಯಲ್ಲಿ ನೀಡಬಾರದು ಎಂದು ಸಿಇಒ ಸ್ಪಷ್ಟಪಡಿಸಿದರು.
ಉಪಾಧ್ಯಕ್ಷರಾದ ಶ್ರೀಮತಿ ಧನಲಕ್ಷ್ಮಿ ಜನಾರ್ಧನ್, ಸಾಮಾಜಿಕ ನ್ಯಾಯಸಮಿತಿ ಅಧ್ಯಕ್ಷರಾದ ಜನಾರ್ಧನಗೌಡ, ಕೃಷಿ ಸ್ಥಾಯಿಸಮಿತಿ ಅಧ್ಯಕ್ಷರಾದ ನವೀನ್ ಕುಮಾರ್ ಮೇನಾಲ, ಉಪಕಾರ್ಯದರ್ಶಿಗಳಾದ ಶಿವರಾಮೇಗೌಡ, ಸಿಪಿಒ ಮೊಹಮ್ಮದ್ ನಝೀರ್, ಮುಖ್ಯ ಲೆಕ್ಕಾಧಿಕಾರಿ ಶೇಖ್ ಲತೀಫ್ ಅವರು ಉಪಸ್ಥಿತರಿದ್ದರು.


Friday, September 14, 2012

'ಸೈಬರ್ ಅಪರಾಧದ ವ್ಯಾಪ್ತಿ ಅಗಾಧ'

ಮಂಗಳೂರು, ಸೆಪ್ಟೆಂಬರ್.14: ಕಾನೂನು ಪಾಲನೆ ಪೊಲೀಸ್ ಇಲಾಖೆಯ ಕರ್ತವ್ಯ; ಈ ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ ಎಂಬ ಕೂಗುಗಳು ಕೇಳಿಬರುವುದು ಸಾಮಾನ್ಯ. ಮಾತು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸಂವಿಧಾನಾತ್ಮಕ ಹಕ್ಕು 19 ಎ ಜೊತೆ ಮಾಹಿತಿ ತಂತ್ರಜ್ಞಾನ ಅಧಿನಿಯಮ 66 ಎ ಯನ್ನು ಓದಿದರೆ ಸೈಬರ್ ಕಾನೂನು ಪಾಲನೆ ಸುಲಭ ಎಂದು ಸಿಐಡಿಯ ಅಪರಾಧ ಪತ್ತೆ ವಿಭಾಗದ ಇನ್ಸ್ ಪೆಕ್ಟರ್ಎಂ ಡಿ ಶರತ್ ಹೇಳಿದರು.
ಇಂದು ನಗರದ ರೋಶನಿ ನಿಲಯದ ಸ್ಕೂಲ್ ಆಫ್ ಸೋಶಿಯಲ್ ವರ್ಕ್ಸ್ ನ ಅಪರಾಧ ಶಾಸ್ತ್ರ ಮತ್ತು ವಿಧಿ ವಿಜ್ಞಾನ ವಿಭಾಗವು ಪಶ್ಚಿಮ ವಲಯ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಸೈಬರ್ ಕ್ರೈಮ್ ಅಪರಾಧದ ಕುರಿತು ಸವಿವರ ಮಾಹಿತಿ ಹಾಗೂ ತಮ್ಮ ಅನುಭವಗಳನ್ನು ಕಾರ್ಯಾಗಾರದಲ್ಲಿ ಹಂಚಿಕೊಂಡ ಅವರು, ಮಾಹಿತಿ ಸೋರಿಕೆ ಹಾಗೂ ಮಾಹಿತಿ ಸಂಗ್ರಹ ಇಂದು ಅತಿ ಸುಲಭ. ಎಲ್ಲವೂ ಇಂದು ಇಂಟರ್ನೆಟ್ ನಲ್ಲಿ ಲಭ್ಯ ಎಂದು ಪ್ರಕರಣಗಳ ಸಹಿತ ವಿವರಿಸಿದರು.ಸೈಬರ್ ಕ್ರೈಮ್ ಸವಾಲುಗಳು ಮತ್ತು ಕಾನೂನಿನ ಕುರಿತು ಶಿವಮೊಗ್ಗದ ವಕೀಲರಾದ ಡಾ ಮನ್ ಮೋಹನ್ ಅವರು ವಿವರಿಸಿದರು.ಇದಕ್ಕೂ ಮುಂಚೆ ನಡೆದ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ, ಸೈಬರ್ ಅಪರಾಧದಿಂದ ಸಂಸ್ಥೆಗಳು, ಸಾರ್ವಜನಿಕವಾಗಿ ತೊಂದರೆಗೆ ಒಳಗಾಗುವುದಕ್ಕಿಂತಲೂ ವ್ಯಕ್ತಿಗತ ಅಪಾಯವೇ ಅಧಿಕವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ದೇಶದಲ್ಲಿಂದು 100 ಕೋಟಿ ಮೊಬೈಲ್ ಸಂಪರ್ಕಗಳಿದ್ದು, ಇದರಲ್ಲಿ ಶೇ. 40ರಷ್ಟು ಮಂದಿ ಇಂಟರ್ನೆಟ್, ಎಸ್ಎಂಎಸ್ ಸೇರಿದಂತೆ ಮೌಲ್ಯಾಧಾರಿತ ಸೇವೆಗಳ ಬಳಕೆದಾರರು. ಈ ಸೇವೆಗಳು ಹಲವು ಸಂದರ್ಭಗಳಲ್ಲಿ ವ್ಯಕ್ತಿಯ ವಿಳಾಸದೊಂದಿಗೆ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರುತ್ತದೆ. ಇದು ಹಲವು ರೀತಿಯಲ್ಲಿ ವ್ಯಕ್ತಿಯಿಂದ ದುಷ್ಕಮರ್ಿಯ ಕೈ ಸೇರಿದ್ದಲ್ಲಿ ಯೋಜಿತ ಅಪರಾಧಕ್ಕೆ ಕಾರಣವಾಗುತ್ತದೆ. ವ್ಯಕ್ತಿಗತ ದಾಖಲೆಗಳು, ವಿಳಾಸ, ದೂ.ಸಂ. ಮೊದಲಾದ ಮಾಹಿತಿಗಳನ್ನು ಬಳಸಿಕೊಂಡು ಅಪರಾಧ ಎಸಗಲಾಗುತ್ತದೆ. ತಂತ್ರಜ್ಞಾನಗಳ ಅತಿಯಾದ ಹಾಗೂ ಅಜಾಗರೂಕ ಬಳಕೆಯು ಸೈಬರ್ ಅಪರಾಧಕ್ಕೆ ಕಾರಣವಾಗುತ್ತದೆ. ಈ ಕಾರಣದಿಂದ ತಂತ್ರಜ್ಞಾನಗಳ ಬಳಕೆಯ ಸಂದರ್ಭ ಅತ್ಯಂತ ಎಚ್ಚರಿಕೆ ವಹಿಸಬೇಕು ಎಂದವರು ಸಲಹೆ ಮಾಡಿದರು.
ಕೊಲೆ, ಸುಲಿಗೆ, ಕಳ್ಳತನದಂತಹ ಅಪರಾಧದ ಸಂದರ್ಭ ಅಪರಾಧಿಯನ್ನು ಪತ್ತೆಹಚ್ಚಲು ಕೆಲವೊಂದು ಕುರುಹುಗಳ ಮೂಲಕ ಸಾಧ್ಯವಾಗುತ್ತದೆ. ಆದರೆ ಸೈಬರ್ ಅಪರಾಧದ ಸಂದರ್ಭ ಸಾಕ್ಷಗಳ ಅಲಭ್ಯತೆಯಿಂದಾಗಿ ತನಿಖೆಗೆ ತೊಡಕಾಗುತ್ತದೆ. ಸೈಬರ್ ಅಪರಾಧಕ್ಕೆ ಸಂಬಂಧಿಸಿ ತಂತ್ರಜ್ಞರ ಸಹಾಯವನ್ನು ಪಡೆಯಬೇಕಾಗುತ್ತದೆ ಎಂದು ಐಜಿಪಿ ಪ್ರತಾಪ್ ರೆಡ್ಡಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಶನಿ ನಿಲಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಸೋಫಿಯ ಎನ್. ಫೆರ್ನಾಂಡಿಸ್ ಮಾತನಾಡಿ, ತಂತ್ರಜ್ಞಾನ ಬಳಕೆ ಅನಿವಾರ್ಯವಾಗುತ್ತಿರುವ ಸಂದರ್ಭದಲ್ಲಿ ಸೈಬರ್ ಅಪರಾಧ ಕೂಡಾ ಗಣನೀಯ ಹಾಗೂ ಗಂಭೀರ ಪ್ರಮಾಣದಲ್ಲಿ ನಡೆಯುತ್ತಿರುವುದರಿಂದ ಇದನ್ನು ತಡೆಗಟ್ಟುವುದು ಅಗತ್ಯವಾಗಿದೆ ಎಂದರು.
ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲರಾದ ಡಾ. ಜೆಸಿಂತಾ ಡಿಸೋಜಾ, ರಿಜಿಸ್ಟ್ರಾರ್ ಡಾ.ಎಲ್.ಎನ್. ಭಟ್ ಉಪಸ್ಥಿತರಿದ್ದರು. ಅಪರಾಧ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಬಿ. ಅಶೋಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಸರಿತಾ ಡಿಸೋಜಾ ಸ್ವಾಗತಿಸಿದರು.

Thursday, September 13, 2012

ಸುಳ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಪ್ರಗತಿ ಪರಿಶೀಲನೆ

ಮಂಗಳೂರು,ಸೆಪ್ಟೆಂಬರ್.13 : ಸುಳ್ಯ ತಾಲೂಕು ಪಂಚಾಯತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ ಟಿ ರವಿ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ಜರುಗಿದ್ದು, ತಾಲೂಕಿನ ವಿವಿಧ ಇಲಾಖೆ ಪ್ರಗತಿ ಪರಿಶೀಲನೆ ನಡೆಸಲಾಯಿತು.
ತಾಲೂಕು ಮಟ್ಟದಲ್ಲಿ ಸರ್ವೇ ಇಲಾಖೆಯ ವಿರುದ್ಧ ಸಾರ್ವಜನಿಕರಿಂದ ದೂರುಗಳು ಬಂದಿದ್ದು, ಇಲಾಖಾಧಿಕಾರಿಗಳು ಸಮಸ್ಯೆ ಪರಿಹರಿಸಲು ತುರ್ತು ಗಮನಹರಿಸಬೇಕೆಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಪೊಲೀಸ್ ಇಲಾಖೆಯ ಕಾರ್ಯನಿರ್ವಹಣೆಯನ್ನು ಶ್ಲಾಘಿಸಿದ ಅವರು, ವಸತಿ ರಹಿತರಿಗೆ, ನಿವೇಶನ ರಹಿತರಿಗೆ ಹಾಗೂ ಸಮಾಜ ಸುರಕ್ಷಾ ಯೋಜನೆಗಳಡಿ ಅರ್ಹರಿಗೆ ಸೌಲಭ್ಯ ನೀಡುವಲ್ಲಿ ವ್ಯತ್ಯಯ ಉಂಟಾಗಬಾರದು ಎಂದು ಎಚ್ಚರಿಕೆ ನೀಡಿದರು.

Wednesday, September 12, 2012

ಪುತ್ತೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ

ಮಂಗಳೂರು, ಸೆಪ್ಟೆಂಬರ್.12: ಪುತ್ತೂರು ತಾಲೂಕಿನ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕು ಸ್ಥಾಪನೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಅವರು ತಾಲೂಕು ಅಭಿವೃದ್ಧಿಗೆ ಸರ್ಕಾರ ಹೆಚ್ಚು ಅನುದಾನ ನೀಡಿದೆ ಎಂದರು.
ಪುತ್ತೂರು ತಾಲೂಕಿನ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣ ಎರಡನೇ ಹಂತಕ್ಕೆ 450.00 ಲಕ್ಷ ರೂ, ಪುತ್ತೂರು ತಾಲೂಕಿನ ಹಂಟ್ಯಾರು ಬೆಟ್ಟಂಪಾಡಿ ರಸ್ತೆ ಅಗಲೀಕರಣ ಮತ್ತು ಡಾಮರೀಕರಣ ಕಾಮಗಾರಿಗೆ 185 ಲಕ್ಷ ರೂ., ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆ, ಸಜ್ಜಮೂಲೆ, ಅಲೆಪ್ಪಾಡಿ, ನೂಜಿಬೈಲು ರಸ್ತೆ ಅಭಿವೃದ್ದಿ ಕಾಮಗಾರಿಗೆ 60 ಲಕ್ಷ ರೂ., ಬಿಡುಗಡೆ ಮಾಡಲಾಗಿದ್ದು, ಸಚಿವರು ಶಂಕು ಸ್ಥಾಪನೆ ನೆರವೇರಿಸಿದರು.
ಪುತ್ತೂರು ತಾಲೂಕು ಬನ್ನೂರು ಗ್ರಾಮಪಂಚಾಯತ್ ನ ಕಟ್ಟಡ 15 ಲಕ್ಷ ರೂ., ಹಾಗೂ 20.75 ಲಕ್ಷ ರೂ. ಗಳ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಕಟ್ಟಡವನ್ನು ಉದ್ಘಾಟಿಸಿದರು.

ನೆಟ್ಟಣಿಗೆ ಮುಡ್ನೂರು ಶಾಲೆ ಅಭಿವೃದ್ಧಿಗೆ 25,48,000 ರೂ.:ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ

ಮಂಗಳೂರು, ಸೆಪ್ಟೆಂಬರ್.12: ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಸರಕಾರಿ ಪ್ರೌಢಶಾಲೆಯ ಅಭಿವೃದ್ಧಿಗೆ 25,48,000 ರೂ.ಗಳ ಅನುದಾನದಡಿ ನಿರ್ಮಿಸಲಾದ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಮತ್ತು ನೂತನ ಕಟ್ಟಡವನ್ನು ಇಂದು ಉನ್ನತ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಟಿ ರವಿಯವರು ಉದ್ಘಾಟಿಸಿದರು.
ತಮ್ಮ ಉದ್ಘಾಟನಾ ಭಾಷಣದಲ್ಲಿ, ಕೇವಲ ಕಟ್ಟಡದಿಂದ ಮಾತ್ರ ಶಾಲೆ ನಿರ್ಮಾಣವಾಗುವುದಿಲ್ಲ, ಅಲ್ಲಿ ದೊರಕುವ ಮೌಲ್ಯಯುತ ಶಿಕ್ಷಣವು ಮಕ್ಕಳ ಬದುಕನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಈ ನಿಟ್ಟಿನಲ್ಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣದ ಜೊತೆಗೆ ಸಾಮಾಜಿಕ ಮೌಲ್ಯಗಳನ್ನು ಕಲಿಸಿದರೆ ಸುಭದ್ರ ಭಾರತ ನಿರ್ಮಾಣ ಸಾಧ್ಯ ಎಂದು ಅವರು ನುಡಿದರು. ಮಾಜಿ ರಾಷ್ಟ್ರಪತಿಗಳಾದ ಅಬ್ದುಲ್ ಕಲಾಂ ನಮಗೆ ಮಾದರಿಯಾಗಲಿ.ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ; ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲಿ ಎಂದು ಹಾರೈಸಿದರು.
ಪುತ್ತೂರು ವಿಧಾನಸಭಾ ಸದಸ್ಯರಾದ ಶ್ರೀಮತಿ ಮಲ್ಲಿಕಾ ಪ್ರಸಾದ್, ವಿಧಾನ ಪರಿಷತ್ ಸದಸ್ಯರಾದ ಮೋನಪ್ಪ ಭಂಡಾರಿ,ತಾಲೂಕು ಪಂಚಾಯತ್ ಅಧ್ಯಕ್ಷರಾದ ಶಂಭುಭಟ್, ತಾಲೂಕು ಪಂಚಾಯತ್ ಸದಸ್ಯ ಮಹಮ್ಮದ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಫೌಜಿಯಾ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.


ಶಿಕ್ಷಣಕ್ಕೆ 12 ಕೋಟಿ ರೂ. ಬಿಡುಗಡೆ:ಸಿ.ಟಿ.ರವಿ

ಮಂಗಳೂರು, ಸೆಪ್ಟೆಂಬರ್.12: ದಕ್ಷಿಣಕನ್ನಡ ಜಿಲ್ಲೆಗೆ ಉನ್ನತ ಶಿಕಕ್ಷಣ ಇಲಾಖೆ ವತಿಯಿಂದ ಶಿಕ್ಷಣಕ್ಕಾಗಿ 12 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆಯೆಂದು ಉನ್ನತ ಶಿಕ್ಷಣ ಮತ್ತು ಉಸ್ತುವಾರಿ ಸಚಿವರಾದ ಸಿ.ಟಿ ರವಿಯವರು ತಿಳಿಸಿದರು.
ಅವರು ಇಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ, ಮಂಗಳೂರಿನ ಕಾರ್ ಸ್ಟ್ರೀಟ್, ಬೆಳ್ತಂ ಗಡಿಯ ಪುಂಜಾಲ್ ಕಟ್ಟೆ, ಶಾಲೆ ಗಳಿಗೆ ತಲಾ 2ಕೋಟಿ ರೂಪಾಯಿ ಗಳಂತೆ ಒಟ್ಟು 6 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡ ಲಾಗಿದೆ. ಉಪ್ಪಿನಂಗಡಿ ಶಾಲೆಯ ಪ್ರಯೋಗಾಲಯಕ್ಕೆ ರೂ.30 ಲಕ್ಷ ಬಿಡುಗಡೆ ಮಾಡಲಾಗಿದೆ ಬಂಟ್ವಾಳ ,ಪುತ್ತೂರು ಮತ್ತು ವಿಟ್ಲದ ಶಾಲೆಗಳ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ತಲಾ 1 ಕೋಟಿಯಂತೆ ಒಟ್ಟು 3ಕೋಟಿ ರೂ., ಸುಳ್ಯಕ್ಕೆ 1.50 ಲಕ್ಷ ,ಕಾವೂರಿಗೆ 50 ಲಕ್ಷ ಸೇರಿದಂತೆ ಒಟ್ಟು 5 ಕೋಟಿ ರೂ., ಬೆಟ್ಟಂಪಾಡಿ ,ಬೆಳ್ತಂಗಡಿ, ಹಳೆಯಂಗಡಿ, ಕಾವೂರು, ಬೆಳ್ಳಾರೆ, ಬಂಟ್ವಾಳ, ಸುಳ್ಯ , ವಾಮದಪದವು, ಪುತ್ತೂರು, ವಿಟ್ಲ, ಉಪ್ಪಿನಂಗಡಿಯ ಹೆಣ್ಮಕ್ಕಳ ಶೌಚಾಲಯಕ್ಕೆ ಒಟ್ಟು 70ಲಕ್ಷ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ರಾಜ್ಯ ಸರ್ಕಾರ ಅಡಿಕೆ ಕೊಳೆ ರೋಗಕ್ಕೆ ಪರಿಹಾರ ನೀಡಲು ಸಂಪೂರ್ಣವಾಗಿ ಯತ್ನಿಸಿದ್ದು, ಗೋರಕ್ ಸಿಂಗ್ ವರದಿಯನ್ನು ಸಲ್ಲಿಸಲಾಗಿದೆ. ರೋಗ ಪರಿಹಾರದ ಸಂಶೋಧನೆಗೆ ನೆರವು ನೀಡಿದ್ದು, ಕೇಂದ್ರದಿಂದಲೂ ನೆರವು ಕೋರಿದೆ. ರೈತಪರ ಕೃಷಿ ಬಜೆಟ್ ನ್ನು ಮಂಡಿಸಲಾಗಿದ್ದು, ರೈತರ ಸಮಸ್ಯೆಗಳಿಗೆ ಸ್ಪಂದಿಸಿದೆ, ಎಂಡೋ ಸಲ್ಫಾನ್ ಸಂತ್ರಸ್ತರಿಗೆ ಕೇರಳ ಮಾದರಿಯ ಪರಿಹಾರಕ್ಕೆ ಚಿಂತನೆ ನಡೆಸಲಾಗುತ್ತಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಇದಕ್ಕೂ ಮುಂಚೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಗತಿಯನ್ನು ಪರಿಶೀಲಿಸಿದ ಸಚಿವರು ಕಾಲಮಿತಿಯೊಳಗೆ ಅಧಿಕಾರಿಗಳು ಪ್ರಗತಿ ಗುರಿ ಸಾಧಿಸಲು ಕ್ರಮ ಕೈಗೊಳ್ಳಲು ತಿಳಿಸಿದರು. ಕೆಆರ್ ಡಿ ಸಿಎಲ್ ನವರಿಗೆ ಸರಿಯಾಗಿ ಕೆಲಸ ಮಾಡಲು ಕಾಲಮಿತಿ ನಿಗದಿಪಡಿಸಿದರು.
ಸಂಸದ ನಳಿನ್ ಕುಮಾರ್ ಕಟೀಲ್ ರವರು ಸಭೆಯಲ್ಲಿ ಮಾತನಾಡಿ ಅಡಿಕೆ ಕೊಳೆ ರೋಗದಿಂದ 67 ಕೋಟಿ 83 ಲಕ್ಷ ರೂ.ಗಳ ನಷ್ಟವಾಗಿದ್ದು, ಈ ನಷ್ಟ ದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಸ್ಥಳೀಯ ಅಡಿಕೆ ಬೆಳೆಗಾರರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಜಿಲ್ಲಾಧಿಕಾರಿಗಳಾದ ಡಾ. ಎನ್.ಎಸ್ ಚನ್ನಪ್ಪ ಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್, ಪುತ್ತೂರು ವಿಧಾನಸಭಾ ಸದಸ್ಯರಾದ ಶ್ರೀಮತಿ ಮಲ್ಲಿಕಾ ಪ್ರಸಾದ್, ವಿಧಾನ ಪರಿಷತ್ ಸದಸ್ಯರಾದ ಮೋನಪ್ಪ ಭಂಡಾರಿ,ತಾಲೂಕು ಪಂಚಾಯತ್ ಅಧ್ಯಕ್ಷರಾದ ಶಂಭುಭಟ್, ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಪುಲಸ್ತ್ಯ ರೈ ಮುಂತಾದವರು ಉಪಸ್ಥಿತರಿದ್ದರು.

Tuesday, September 11, 2012

ಸುವರ್ಣಗ್ರಾಮದಡಿ ಜಿಲ್ಲೆಗೆ 33.50 ಕೋಟಿ ರೂ.

ಮಂಗಳೂರು,ಸೆಪ್ಟೆಂಬರ್.11 : ದಕ್ಷಿಣ ಕನ್ನಡ ಜಿಲ್ಲೆಯ 32 ಗ್ರಾಮಗಳಿಗೆ ಸುವರ್ಣ ಗ್ರಾಮ ಯೋಜನೆಯಡಿ 33.50 ಕೋಟಿ ರೂ. ಬಿಡುಗಡೆಯಾಗಿದ್ದು, ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಎರಡು ಗ್ರಾಮಗಳಾದ ಕೊಂಡೆಮೂಲಕ್ಕೆ 51.52 ಲಕ್ಷ ಮತ್ತು ಬಜಪೆಗೆ 204.07 ಲಕ್ಷ ರೂ. ಬಿಡುಗಡೆಯಾಗಿದೆ ಎಂದು ಉನ್ನತ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಟಿ. ರವಿ ಹೇಳಿದರು.
ಇಂದು ಮೂಡಬಿದ್ರೆಯ ಸಮಾಜಮಂದಿರದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಜನಪರ ಯೋಜನೆಗಳಿಗೆ ಸಾಕಷ್ಟು ಅನುದಾನ ಬಿಡುಗಡೆಯಾಗುತ್ತಿದ್ದು ಎಲ್ಲರೂ ಸಹಕಾರ ಸಮನ್ವಯದಿಂದ ಯೋಜನೆಯ ಫಲ ಎಲ್ಲರಿಗೂ ತಲುಪಿಸುವಂತೆ ಕಾರ್ಯೋನ್ಮುಖವಾಗಬೇಕೆಂದರು.
ಮೂಡಬಿದರೆ ಪುರಸಭೆಗೆ ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ನಿಧಿಯಡಿ 5 ಕೋಟಿ ರೂ., ಮುಲ್ಕಿಗೆ ಎರಡು ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ಯೋಜನೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕಾಲಮಿತಿಯೊಳಗೆ ಅನುಷ್ಠಾನಕ್ಕೆ ತರಬೇಕೆಂದು ಸೂಚಿಸಿದರು.
ಅನುಪಾಲನಾ ವರದಿಯಲ್ಲಿ ಕಾರ್ಯಾನುಷ್ಠಾನದ ಮಾಹಿತಿ ಇರಬೇಕೆಂದ ಸಚಿವರು, ಇಲಾಖೆಗಳು ಜನಪರ ಕೆಲಸಕ್ಕೆ ಸಮನ್ವಯತೆಯಿಂದ ಕೆಲಸ ಮಾಡಬೇಕೆಂದರು. ಕುಡಿಯುವ ನೀರು, ಆರೋಗ್ಯ ಇಲಾಖೆ ಹೆಚ್ಚಿನ ಶ್ರಮವಹಿಸಿ ಶ್ರದ್ಧೆಯಿಂದ ಕೆಲಸ ಮಾಡಬೇಕು; ಪುರಸಭೆ ವಸತಿ ರಹಿತರ ಪಟ್ಟಿ ಮಾಡಬೇಕು. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಇತರ ಜಿಲ್ಲೆಗಳಿಗೆ ಹೋಲಿಸಿದರೆ ದಕ್ಷಿಣ ಕನ್ನಡದಲ್ಲಿ ಸಾಧನೆ ಕಡಿಮೆಯಾಗಿದೆ ಎಂದರು. ಗ್ರಾಮಪಂಚಾಯತ್ ಗಳು ಸಕ್ರಿಯ ಅಭಿವೃದ್ದಿಗೆ ಸ್ಪಂದಿಸಬೇಕು. ಯೋಜನೆಗಳ ಸದ್ಬಳಕೆಯಿಂದ ಅಭಿವೃದ್ಧಿ ಸಾಧ್ಯ ಎಂದರು. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಎಲ್ಲರ ಸಂಘಟಿತ ಯತ್ನವಾದರೆ ಮಾತ್ರ ಅನುದಾನ ಸದ್ಬಳಕೆಯಾಗಲಿದೆ ಎಂದರು.
ಶಾಸಕರಾದ ಅಭಯಚಂದ್ರ ಜೈನ್ ಅವರು ಮಾತನಾಡಿ, ಮಳೆಗಾಲ ಮುಗಿದ ಕೂಡಲೇ ಸರ್ಕಾರ ನೀಡಿರುವ ಎಲ್ಲ ಅನುದಾನಗಳ ಸದ್ಬಳಕೆಯಾಗಬೇಕೆಂದರು. ಕುಡಿಯುವ ನೀರು, ಆಶ್ರಯ ಯೋಜನೆಗಳ ನಿಗದಿತ ಗುರಿ ಸಾಧಿಸಬೇಕೆಂದರು. ಸರ್ಕಾರಿ ಶಾಲೆ ವಿಲೀನದ ಚರ್ಚೆಗೆ ಉತ್ತರಿಸಿದ ಸಚಿವರು, ಮಕ್ಕಳಿಗಾಗಿ ಶಾಲೆ ಎಂಬುದನ್ನು ಎಲ್ಲರೂ ಮನಗಾಣಬೇಕೆಂದರು.
ಸಂಸದ ನಳಿನ್ ಕುಮಾರ್ ಕಟೀಲ್ ಅವರು, ಲೋಕೋಪಯೋಗಿ ಇಲಾಖಾ ವ್ಯಾಪ್ತಿಗೆ ಬರುವ ರಸ್ತೆ ಕಾಮಗಾರಿಗಳ ಅಭಿವೃದ್ಧಿ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದರು.ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಭತ್ತದ ಕೃಷಿ ಕಾಮಗಾರಿಗಳನ್ನು ಸೇರಿಸುವ ಬಗ್ಗೆ ಸಂಸತ್ ನಲ್ಲಿ ಚರ್ಚೆಯಾಗಿದೆ ಎಂದು ಸ್ಥಳೀಯ ಜನಪ್ರತಿನಿಧಿಗಳ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದರು. ವಿಧಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಶಾಸಕ ಯು ಟಿ ಖಾದರ್ ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಮಾತನಾಡಿ, ಅಧಿಕಾರಿಗಳು ಸಮಗ್ರ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಅಭಿವೃದ್ದಿ ಸಭೆಗಳನ್ನು ಸ್ಥಳೀಯರೊಂದಿಗೆ ಚರ್ಚಿಸಿ ಪರಿಹರಿಸಲು ತಾಲೂಕು ಮಟ್ಟದಲ್ಲಿ ಪ್ರಗತಿ ಪರಿಶೀಲನೆ ನಡೆಸುತ್ತಿದ್ದಾರೆ. ಅಭಿವೃದ್ದಿ ಅಂಕಿ ಅಂಶಗಳು ಸರಿಯಾಗಿರಬೇಕೆಂದರು. ಇಂದು ಸಚಿವರನ್ನು ಸ್ವಾಗತಿಸಲು ಹೂವಿನ ಬಳಕೆಯ ಬದಲಿಗೆ ಒಂದು ಸಾವಿರ ರೂ.ಗಳನ್ನು ರೆಡ್ ಕ್ರಾಸ್ ಸೊಸೈಟಿಗೆ ನೀಡಲಾಗಿದೆ. ಇದೊಂದು ಉತ್ತಮ ಮಾದರಿ ಎಂದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ , ತಾಲೂಕು ಪಂಚಾಯತ್ ಅಧ್ಯಕ್ಷೆ ಭವ್ಯ ಗಂಗಾಧರ್ ಉಪಸ್ಥಿತರಿದ್ದರು.
ಸಭೆಗೆ ಹಾಜರಾಗದ ಸಾಮಾಜಿಕ ಅರಣ್ಯ ವಿಭಾಗದ ವಲಯ ಅರಣ್ಯಾಧಿ ಕಾರಿ,ಪಶು ಸಂಗೋಪನಾ ಇಲಾ ಖೆಯ ಸಹಾ ಯಕ ನಿರ್ದೇಶಕ ಮತ್ತು ಮೂಡ ಬಿದ್ರೆ ಪಟ್ಟಣ ಯೋಜನಾ ಪ್ರಾಧಿಕಾರದ ಅಧಿಕಾರಿಗಳಿಗೆ ನೋಟಿಸ್ ನೀಡಲು ಸಚಿವರು ಸೂಚಿಸಿದರು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಿತಿ ಮೀರಿದ ಪ್ಲಾಸ್ಟಿಕ್ ಹಾವಳಿಯನ್ನು ತಡೆಯಲು ಕ್ರಮ ಕೈಗೊಂಡಿದ್ದು, ನವೆಂಬರ್ ಒಂದರೊಳಗೆ ಪ್ಲಾಸ್ಟಿಕ್ ನಿಷೇಧವನ್ನು ಕಟ್ಟುನಿಟ್ಟಾಗಿ ಅನುಷ್ಟಾನಕ್ಕೆ ತರಲಾಗುವುದು ಎಂದರು. ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಕೊಂಡವರು ಸಮಾಜದ ಮುಖ್ಯವಾಹಿನಿಯಲ್ಲಿ ಸೇರ ಬಯಸಿದರೆ ಮಾತ್ರ ಸರ್ಕಾರ ಅವರಿಗೆ ಸ್ಪಂದಿಸುವುದು, ಇದಕ್ಕೆ ಹೊರತಾಗಿ ನಕ್ಸಲರೊಂದಿಗೇ ಯಾವುದೇ ಮಾತುಕತೆ ಅಸಾಧ್ಯ ಎಂದು ಸಚಿವರು ಹೇಳಿದರು.
ಇದಕ್ಕೂ ಮುನ್ನ ಸಚಿವರು ಪುತ್ತಿಗೆ ಗ್ರಾಮ ಪಂಚಾಯತ್ ಗ್ರಾಮ ಯೋಜನೆಯಡಿ 1.50 ಕೋಟಿ ರೂ. ಯೋಜನೆಯಲ್ಲಿ ಸಮುದಾಯ ಭವನ ಹಾಗೂ ಇತರ ಕಾಮ ಗಾರಿಗಳ ಉದ್ಘಾಟನಾ ಕಾರ್ಯ ಕ್ರಮದಲ್ಲಿ ಪಾಲ್ಗೊಂಡರು. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಅಭಯ ಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಜಿ.ಪಂ. ಸಿಇಒ ಡಾ. ವಿಜಯ ಪ್ರಕಾಶ್, ಮಾಜಿ ಸಚಿವ ಅಮರನಾಥ ಶೆಟ್ಟಿ, ತಾಲೂಕು ಪಂಚಾಯತ್ ಅಧ್ಯಕ್ಷೆ ಭವ್ಯ ಗಂಗಾಧರ, ಜಿ.ಪಂ.ಸದಸ್ಯೆ ಸುನೀತಾ ಸುಚರಿತ ಶೆಟ್ಟಿ, ಮುಡದ ಅಧ್ಯಕ್ಷ ಬಾಹುಬಲಿ ಪ್ರಸಾದ್, ತಾ.ಪಂ.ಸದಸ್ಯ ಪ್ರಕಾಶ್, ಪಂಚಾಯತ್ ಅಧ್ಯಕ್ಷ ಶಶಿಧರ ನಾಯಕ್ ಉಪಸ್ಥಿತರಿದ್ದರು.