Wednesday, September 26, 2012

ಸುರತ್ಕಲ್ ನಲ್ಲಿ ಮಂಗಳೂರು ಒನ್ ಸಮಗ್ರ ನಾಗರಿಕ ಸೇವಾ ಕೇಂದ್ರದ ಉದ್ಘಾಟನೆ

ಮಂಗಳೂರು,ಸೆಪ್ಟೆಂಬರ್.26:ಮಂಗಳೂರಿನ ಸುರತ್ಕಲ್ ನಲ್ಲಿ ಸಮಗ್ರ ನಾಗರಿಕ ಸೇವಾ ಕೇಂದ್ರವು ಒಳ್ಳೆಯ ರೀತಿಯಲ್ಲಿ ನಡೆಯಲಿ, ಇದರ ಎಲ್ಲಾ ಸೌಲಭ್ಯವು ಹಿರಿಯ ಕಿರಿಯ ಸಾರ್ವಜನಿಕರಿಗೆ ಉತ್ತಮ ರೀತಿಯಲ್ಲಿ ಸಿಗುವಂತಾಗಲಿ. ಅದೇ ರೀತಿ ಕಾಟಿಪಳ್ಳದ ಗ್ರಾಮ ಪಂಚಾಯತ್ ಕಚೇರಿ ಆವರಣದಲ್ಲಿ ಮಂಗಳೂರು ಒನ್ ಕಚೇರಿಯನ್ನು ತೆರೆಯುವಂತಾಗಲಿಯೆಂದು ಮಂಗಳೂರು ಮಹಾನಗರಪಾಲಿಕೆ ಮೇಯರ್ ಶ್ರೀಮತಿ ಗುಲ್ಜಾರ್ ಭಾನು ತಿಳಿಸಿದರು.
ಅವರು ಇಂದು ಇಡಿಸಿಎಸ್ ನಿರ್ದೇಶ ನಾಲಯ,ಇ ಆಡಳಿತ ಶಾಖೆ,ಕರ್ನಾಟಕ ಸರ್ಕಾರ ,ಜಿಲ್ಲಾಡಳಿತ ಹಾಗೂ ಮಂಗ ಳೂರು ಮಹಾ ನಗರ ಪಾಲಿಕೆ ಇವರ ಸಂಯುಕ್ತಾ ಶ್ರಯ ದಲ್ಲಿ ಮಂಗ ಳೂರು ಒನ್ ಕೇಂದ್ರದ ಉದ್ಘಾ ಟನೆಯನ್ನು ಸುರತ್ಕಲ್ ಮೂಡಾ ಮಾರು ಕಟ್ಟೆ ಸಂಕೀ ರ್ಣದಲ್ಲಿ ನೆರ ವೇರಿಸಿ ಮಾತ ನಾಡು ತ್ತಿದ್ದರು.
ಮಂಗಳೂರು ಒನ್ ಕೇಂದ್ರವು ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸುರತ್ಕಲ್ ಕೇಂದ್ರವು ನಾಲ್ಕನೇಯದಾಗಿದ್ದು, ಈಗಾಗಲೇ ಮಂಗಳೂರು ಮಹಾನಗರಪಾಲಿಕೆ ಕಟ್ಟಡದಲ್ಲಿ ದೂ.ಸಂ.0824-2459959 , ಬಾವುಟಗುಡ್ಡ ನಿಲ್ದಾಣದ ಎದುರು ದೂ.ಸಂ.0824-2420086, ಮಹಾನಗರಪಾಲಿಕೆ ವಾಣಿಜ್ಯ ಸಂಕೀರ್ಣ, ಶಿವಭಾಗ್, ಕದ್ರಿಯಲ್ಲಿ 0824-2216008 ಸೇವೆಯನ್ನು ಒದಗಿಸುತ್ತಿದೆ. ಇಂದು ಉದ್ಘಾಟನೆಗೊಂಡ ಸುರತ್ಕಲ್ ಕೇಂದ್ರ ದೂ.ಸಂ.0824-2474599 ಇಲ್ಲಿ ಬೆಳಿಗ್ಗೆ 8 ರಿಂದ ರಾತ್ರಿ 8 ಗಂಟೆವರೆಗೆ, ವರ್ಷದ ಎಲ್ಲಾ ದಿನಗಳಲ್ಲೂ ಅಂದರೆ ಯಾವುದೇ ಪ್ರತಿಭಟನೆ/ಬಂದ್ ಸಂದರ್ಭಗಳಲ್ಲೂ ನಾಗರಿಕರ ಅನುಕೂಲಕ್ಕಾಗಿ ಸೇವೆಗಳನ್ನು ಒದಗಿಸಲಾಗುತ್ತದೆ.
ಮಂಗಳೂರು ಒನ್ ಸುರತ್ಕಲ್ ಕೇಂದ್ರದಲ್ಲಿ ವಿದ್ಯುತ್ ಬಿಲ್ಲು,ನೀರಿನ ಬಿಲ್ಲು ಆಸ್ತಿ ತೆರಿಗೆ,ದೂರವಾಣಿ ಬಿಲ್ಲು ಪಾವತಿ, ಬಿಎಸ್ಎನ್ಎಲ್ ಮೊಬೈಲ್ ಬಿಲ್ ಪಾವತಿ,ಪಿಯುಸಿ ಉತ್ತರ ಪತ್ರಿಕೆಯ ಪ್ರತಿ,ಜೆರಾಕ್ಸ್ ಕಾಪಿ, ಮರು ಎಣಿಕೆ /ತಪಾಸಣೆ ಶುಲ್ಕ ಪಾವತಿ, ಬೆಂಗಳೂರು ವಿಶ್ವ ವಿದ್ಯಾನಿಲಯದ ಕೋರ್ಸ್ ಗಳಿಗೆ ಅರ್ಜಿ ಶುಲ್ಕ ಪಾವತಿ,ಪೊಲೀಸ್ ವೆರಿಫಿಕೇಷನ್/ಕ್ಲಿಯರೆನ್ಸ್ ದೃಢೀಕರಣ ಪತ್ರ ಪಡೆಯಲು ಶುಲ್ಕ ಪಾವತಿ,ಕೆಎಸ್ಆರ್ಟಿಸಿ ಟಿಕೆಟ್ ಬುಕ್ಕಿಂಗ್, ಏರ್ಟೆಲ್ ಲ್ಯಾಂಡ್ಲೈನ್/ಮೊಬೈಲ್ ಬಿಲ್ಲು ಪಾವತಿ,ವೊಡಾಫೋನ್ ಮೊಬೈಲ್ ಬಿಲ್ಲು ಪಾವತಿ,ಪಾಸ್ ಪೋರ್ಟ್ ಅರ್ಜಿಗಳ ಮಾರಾಟ,ಉದ್ಯೋಗಕ್ಕೆ ಬೇಕಾದ ಅರ್ಜಿಗಳ ಮಾರಾಟ, ವೈಶ್ಯ ಬ್ಯಾಂಕ್ ವಿಮೆ ನವೀಕರಣ ಮುಂತಾದ ಹಲವು ಸೌಲಭ್ಯಗಳನ್ನು ಈ ಕೇಂದ್ರದಲ್ಲಿ ಸಾರ್ವಜನಿಕರಿಗೆ ದೊರಕಿಸಿಕೊಡಲಾಗುವುದು.
ಮಂಗಳೂರು ಒನ್ ಕೇಂದ್ರವನ್ನು ಜೂನ್ 2010 ರಿಂದ ಪ್ರಾರಂಭಿಸಿ ಇದುವರೆಗೆ ಎರಡು ವರ್ಷಗಳಲ್ಲಿ ಮಂಗಳೂರು ಮಹಾನಗರಪಾಲಿಕೆಯ ಒಟ್ಟು ಮೂರು ಸೆಂಟರ್ಗಳಲ್ಲಿ ಸುಮಾರು 9.21 ಲಕ್ಷ ಪ್ರಕರಣಗಳನ್ನೊಳಗೊಂಡು ಸುಮಾರು 110 ಕೋಟಿ ರೂ.ಗಳ ವಹಿವಾಟು ನಡೆದಿದೆಯೆಂದು ಇಡಿಸಿಎಸ್ (ಡೈರೆಕ್ಟರೇಟ್ ಇಲೆಕ್ಟ್ರಾನಿಕ್ಸ್ ಡೆಲಿವೆರಿ ಆಫ್ ಸಿಟಿಜನ್ ಸರ್ವಿಸಸ್) ಶಶಿಧರ ಸಾರಂಗಮಠ್ ಈ ಸಂದರ್ಭದಲ್ಲಿ ತಿಳಿಸಿದರು.
ಸಮಾರಂಭದಲ್ಲಿ ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರಾದ ಡಾ ಹರೀಶ್ ಕುಮಾರ್, ಉಪಮೇಯರ್ ಶ್ರೀಮತಿ ಅಮಿತ ಕಲಾ,ಮಾಜಿ ಮೇಯರ್ ಗಳಾದ ಶ್ರೀಮತಿ ರಜನಿ ದುಗ್ಗಣ್ಣ, ಗಣೇಶ ಹೊಸಬೆಟ್ಟು ಮುಂತಾದವರು ಉಪಸ್ಥಿತರಿದ್ದರು.