Tuesday, September 18, 2012

ಗಣಪತಿ ಮೂರ್ತಿ ವಿಸರ್ಜನೆ: ಪಾಲಿಕೆ ವಿನಂತಿ

ಮಂಗಳೂರು,ಸೆಪ್ಟೆಂಬರ್.18 :ಗಣಪತಿ ವಿಸರ್ಜನೆ ಸಮಯದಲ್ಲಿ ಅಲಂಕಾರಿಕ ವಸ್ತುಗಳು, ಹೂವು, ಪ್ರಸಾದ ವಿತರಣಾ ತ್ಯಾಜ್ಯ ಇತ್ಯಾದಿಗಳನ್ನು ವಿಸರ್ಜನಾ ಸ್ಥಳದ ಸುತ್ತಮುತ್ತ ಅಥವಾ ನದಿ, ಚಾನೆಲ್ ನಲ್ಲಿ ವಿಲೇವಾರಿ ಮಾಡುತ್ತಿದ್ದು, ಇದು ಪರಿಸರ ಮಾಲಿನ್ಯ ಉಂಟುಮಾಡುತ್ತಿರುವುದರಿಂದ, ಈ ಕೆಳಕಂಡ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಲು ಭಕ್ತರನ್ನು ಮಹಾನಗರಪಾಲಿಕೆ ಆಯುಕ್ತರು ಕೋರಿದ್ದಾರೆ.
1. ವಿಸರ್ಜನೆ ಸಮಯದಲ್ಲಿ ಗಣಪತಿ ಮೂರ್ತಿಗೆ ಅಲಂಕರಿಸಿದ ಹೂವು, ಅಲಂಕಾರಿಕೆ ಸಾಮಗ್ರಿಗಳು, ಪ್ರಸಾದ ವಿತರಣಾ ತ್ಯಾಜ್ಯ ಇತ್ಯಾದಿಗಳನ್ನು ನೀರಿನಲ್ಲಿ ಹಾಕದೆ ಮಹಾನಗರಪಾಲಿಕೆಯ ಡಂಪರ್ ಪ್ಲೇಸರ್ ಕಂಟೈನರ್ (ಹಳದಿ ಕಬ್ಬಿಣದ ಡಬ್ಬ) ಗಳಲ್ಲಿ ವಿಲೇವಾರಿ ಮಾಡುವುದು.
2. ನೈಸರ್ಗಿಕ ಬಣ್ಣದ ಗಣಪತಿ ಮೂರ್ತಿ ಪೂಜಿಸಿ.
3. ಗಣಪತಿ ಹಬ್ಬದ ಆಚರಣೆಯಲ್ಲಿ ಪ್ಲಾಸ್ಟಿಕ್ ಹೂಗಳು, ಪ್ರಾಸ್ಟಿಕ್ ಬಂಟಿಂಗ್ಸ್ ಇತ್ಯಾದಿಗಳನ್ನು ಬಳಸದಿರುವುದು.
4. ಗಣಪತಿ ಪೂಜೆಯ ನಂತರದ ಪ್ರಸಾದ ವಿತರಣೆಗೆ ಪ್ಲಾಸ್ಟಿಕ್ ತಟ್ಟೆ ಮತ್ತು ಲೋಟಗಳನ್ನು ಕಡ್ಡಾಯವಾಗಿ ನಿಷೇಧಿಸುವುದು.
ಈ ಮೂಲಕ, ಪ್ರಜ್ಞಾವಂತ ಸಾರ್ವಜನಿಕರು, ಪರಿಸರ ಸ್ನೇಹಿ ಗಣಪತಿ ಹಬ್ಬ ಆಚರಣೆಗೆ ಸಹಕರಿಸಬೇಕಾಗಿ ಮಂಗಳೂರು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ