Saturday, October 31, 2009

ಸರ್ಕಾರದ ಭದ್ರತೆಗೆ ಅಪಾಯವಿಲ್ಲ: ಸಿ ಎಂ ಯಡಿಯೂರಪ್ಪ

ಮಂಗಳೂರು,ಅ.31:ರಾಜ್ಯ ಸರ್ಕಾರದ ಭದ್ರತೆಗೆ ಯಾವುದೇ ಧಕ್ಕೆ ಇಲ್ಲ;ಸಮಸ್ಯೆಗಳು ಶೀಘ್ರ ನಿವಾರಣೆಯಾಗಲಿದೆ ಎಂದು ರಾಜ್ಯದ ಮುಖ್ಯಮಂತ್ರಿಗಳಾದ ಬಿ. ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ.

ಇಂದು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು ಮೈದಾನದಲ್ಲಿ ಪೊಲೀಸ್ ಪಡೆಯಿಂದ ಗೌರವ ರಕ್ಷೆ ಸ್ವೀಕರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,ಹೈಕಮಾಂಡ್ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಜೇಟ್ಲಿ ಅವರು ಸರ್ಕಾರದ ಕಾರ್ಯವೈಖರಿ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ ಎಂದು ಹೇಳಿದರು. 750 ಕೋಟಿ ರೂ.ಗಳಲ್ಲಿ ಉತ್ತರ ಕರ್ನಾಟಕದಲ್ಲಿ ನಿರಾಶ್ರಿತರಿಗೆ ಮನೆ ನಿರ್ಮಿಸಲು ಉದ್ದೇಶಿಸಲಾಗಿದೆ. ಒಂದು ಸಾವಿರ ಕೋಟಿ ರೂ.ವೆಚ್ಚದಲ್ಲಿ ನಿರಾಶ್ರಿತರ ಹಳ್ಳಿಗಳ ಸ್ಥಳಾಂತರಕ್ಕೆ ಪ್ರಕ್ರಿಯೆಗಳು ನಡೆಯುತ್ತಿವೆ ಎಂದರು.
ಅಧಿಕಾರಕ್ಕಂಟಿರಬೇಕೆಂಬ ಆಸೆ ನನಗಿಲ್ಲ; ಜನಸೇವೆಗೆ ಕಂಕಣ ಬದ್ಧ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಸುಬ್ರಮಣ್ಯ ದೇವಳದ ಕಾಮಗಾರಿ ವೀಕ್ಷಣೆ ಮತ್ತು ದೇವರ ದರ್ಶನದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ,ನವೆಂಬರ್ 1ರಿಂದ ನಾಲ್ಕು ದಿನಗಳ ಉತ್ತರಕನ್ನಡದಲ್ಲಿ ನೆರೆ ಪೀಡಿತರಿಗೆ ಶಾಶ್ವತ ನೆಲೆ ಕಲ್ಪಿಸಲು ಶಂಕುಸ್ಥಾಪನೆ ಕಾಮಗಾರಿಗಳಲ್ಲಿ ಭಾಗವಹಿಸುವುದಾಗಿ ಹೇಳಿದ ಮುಖ್ಯಮಂತ್ರಿಗಳು, ಈ ಸಂಬಂಧ ಶೀಘ್ರವೇ ದೆಹಲಿಗೆ ಭೇಟಿ ನೀಡಿ ಪ್ರಧಾನಿ ಹಾಗೂ ಗೃಹ ಸಚಿವ ಚಿದಂಬರಂ ಅವರನ್ನು ಭೇಟಿ ಮಾಡುವುದಾಗಿ ಹೇಳಿದರು.

ನೆರೆ ಸಂತ್ರಸ್ತರಿಗೆ ಬದುಕು ಕಲ್ಪಿಸುವುದಕ್ಕೆ ಪ್ರಥಮ ಆದ್ಯತೆ ಎಂಬುದನ್ನು ಪುನರುಚ್ಛರಿಸಿದ ಅವರು, ಹೈಕಮಾಂಡ್ ನಿರ್ದೇಶನದಂತೆ ಭಿನ್ನಾಭಿಪ್ರಾಯಗಳ ಬಗ್ಗೆ ಮಾಧ್ಯಮದೊಂದಿಗೆ ಚರ್ಚಿಸಲಾರೆ ಎಂದರು.

Friday, October 30, 2009

ತಾಲೂಕು ಮಟ್ಟದ ಸಭೆಗೆ ಹಾಜರಾಗದಿದ್ದರೆ ಇಲಾಖಾ ವಿಚಾರಣೆ: ಜಿಲ್ಲಾಧಿಕಾರಿ ಪೊನ್ನುರಾಜ್

ಮಂಗಳೂರು,ಅ.30: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪದಾಧಿಕಾರಿಗಳ ಮತ್ತು ದಲಿತ ಮುಖಂಡರ ಸಭೆಗಳನ್ನು ತಾಲೂಕು ಮಟ್ಟದಲ್ಲಿ ಏರ್ಪಡಿಸಿದಾಗ ಸಂಬಂಧ ಪಟ್ಟ ಅಧಿಕಾರಿಗಳು ಸಭೆಗೆ ಹಾಜರಾಗದಿದ್ದರೆ ಕರ್ತವ್ಯ ಲೋಪ ಆರೋಪ ಹೊರಿಸಿ ಇಲಾಖಾ ವಿಚಾರಣೆ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಶಿಸ್ತು ಪ್ರಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಇಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪದಾಧಿಕಾರಿಗಳ ಮತ್ತು ದಲಿತ ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು,ಮೇಲ್ಕಂಡ ಸಭೆಗಳಲ್ಲಿ ಪ್ರಮುಖವಾಗಿ ಭೂಮಿಗೆ ಸಂಬಂಧಿಸಿದ ಸಮಸ್ಯೆಗಳೇ ಚರ್ಚೆಗೆ ಬರುತ್ತದೆ; ಹಲವಾರು ಕಾರಣಗಳಿಂದ ಪ್ರತಿ ಸಭೆಯಲ್ಲೂ ಹಳೆ ಸಮಸ್ಯೆಗಳೇ ಪ್ರಸ್ತಾಪವಾಗುತ್ತವೆ ಹಾಗೂ ಇದಕ್ಕೆ ಸೂಕ್ತ ಪರಿಹಾರ ರೂಪಿಸಲು ವಿಳಂಬವಾಗುತ್ತಿದೆ.ಪ್ರತಿಯೊಂದು ಪ್ರಕರಣಗಳಿಗೂ ಅರ್ಥಪೂರ್ಣ ಪರಿಹಾರ ಒದಗಿಸುವುದೇ ಸಭೆಗಳ ಉದ್ದೇಶವಾಗಬೇಕು;ಕಾಟಾಚಾರದ ಸಭೆಯಿಂದ ಯಾರಿಗೂ ಲಾಭವಿಲ್ಲ ಎಂದರು.
ಸಭೆಗಳು ಪರಿಣಾಮಕಾರಿಯಾಗಿ ಮೂಡಿಬರಲು ತಾಲೂಕು ಮಟ್ಟದಲ್ಲಿ ಪ್ರಥಮ ಹಂತ ಸಭೆ ನಡೆದು ಅಲ್ಲಿ ಪರಿಹಾರ ಸಿಗದ ಸಮಸ್ಯೆಗಳನ್ನು ಜಿಲ್ಲಾ ಮಟ್ಟದ ಸಭೆಯಲ್ಲಿ ಚರ್ಚಿಸಬೇಕು ಇದರಿಂದ ಸಮಸ್ಯೆ ಪರಿಹಾರಕ್ಕೆ ಹಂತಹಂತವಾಗಿ ಕ್ರಮಕೈಗೊಳ್ಳಲು ಸಾಧ್ಯ ಎಂದರು.
ಆದರೆ ತಾಲೂಕು ಮಟ್ಟದ ಸಭೆಗಳಲ್ಲಿ ಅಧಿಕಾರಿಗಳ ಸಕ್ರಿಯ ಹಾಗೂ ಪರಿಣಾಮಕಾರಿ ಭಾಗವಹಿಸುವಿಕೆಯ ಬಗ್ಗೆ ಸಭೆಯಲ್ಲಿ ಅಪಸ್ವರ ಮೂಡಿದ್ದರಿಂದ ಜಿಲ್ಲಾಧಿಕಾರಿಗಳು ಮೇಲ್ಕಂಡಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಜಿಲ್ಲೆಗಳಲ್ಲಿ ಅಂಬೇಡ್ಕರ್ ಭವನ ನಿರ್ಮಾಣ, ಅಂಬೇಡ್ಕರ್ ಜಯಂತಿ ಆಚರಣೆ,100 ವರ್ಷಗಳಿಂದ ಒಂದೇ ಕಡೆ ನೆಲೆಸಿರುವ ದಲಿತ ಕುಟುಂಬಗಳಿಗೆ ಭೂಮಿಯ ಹಕ್ಕು ನೀಡುವ ಬಗ್ಗೆ,ಅವರಿಗೆ ಮೂಲಭೂತ ಸೌಕರ್ಯ ಒದಗಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ನಗರದ ಹೃದಯಭಾಗದಲ್ಲಿರುವ ಕುದ್ಮುಲ್ ರಂಗರಾವ್ ಸಭಾಭವನವನ್ನು ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ಬಳಸಿದ್ದು,ಈ ಜಮೀನು ಮತ್ತು ಕಟ್ಟಡದ ದುರ್ಬಳಕೆಯ ಬಗ್ಗೆ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಯಿತು. ಕುದ್ಮುಲ್ ರಂಗರಾವ್ ನೀಡಿರುವ ಸ್ಥಳವನ್ನು ಸದ್ಬಳಕೆ ಮಾಡಲು ಮತ್ತು ಖಾಲಿ ಉಳಿದ ಮಳಿಗೆಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಬಳಕೆಗೆ ಮೀಸಲಿಡಲು ಇದರಿಂದ ಬರುವ ಉಳಿತಾಯವನ್ನು ಸಾಮಾಜಿಕ ಚಟುವಟಿಕೆ ಬಳಸಲು ಸಭೆಯಲ್ಲಿ ನಿರ್ಧರಿಸಲಾಯಿತು. ರಂಗರಾವ್ ಅವರು 150 ನೇ ಜನ್ಮ ದಿನೋತ್ಸವದ ಸಂದರ್ಭದಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಈಗಾಗಲೇ ಇರುವ ಸಮಿತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಐವರನ್ನು ಸದಸ್ಯರನ್ನಾಗಿ ಸೇರ್ಪಡೆಗೊಳಿಸುವ ಸಲಹೆಯನ್ನು ಜಿಲ್ಲಾಧಿಕಾರಿಗಳು ನೀಡಿದರು.
ಪುತ್ತೂರು, ಸುಳ್ಯ ತಾಲೂಕುಗಳಿಂದ ಆಗಮಿಸಿದ ಮುಖಂಡರು,ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳ ವಿದ್ಯಾರ್ಥಿ ನಿಲಯಗಳ ಸಮಸ್ಯೆ, ಆಶ್ರಮ ಶಾಲೆಯಲ್ಲಿ ಶಿಕ್ಷಕರ ನೇಮಕ ಮಾಡುವಾಗ ಪರಿಶಿಷ್ಟ ವರ್ಗ ಮತ್ತು ಪಂಗಡದವರಿಗೆ ಆದ್ಯತೆ ನೀಡಲು,ವಿದ್ಯಾರ್ಥಿ ನಿಲಯಗಳಲ್ಲಿ ಉತ್ತಮ ಆಹಾರ ಮತ್ತು ಟ್ಯೂಷನ್ ನೀಡುವ ಬಗ್ಗೆಯೂ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು.

ಜಿಲ್ಲೆಯಲ್ಲಿ ಒಟ್ಟು 60 ವಿದ್ಯಾರ್ಥಿ ನಿಲಯಗಳಿದ್ದು, ಪ್ರತಿ ತಿಂಗಳಿಗೊಮ್ಮೆ 4ರಿಂದ 5 ಹಾಸ್ಟೆಲ್ ಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಭೇಟಿ ನೀಡಿ ಊಟ ಮಾಡಿ, ಮಕ್ಕಳೊಂದಿಗೆ ಬೆರೆತು ಸಮಸ್ಯೆ ಅರಿಯುವ ಬಗ್ಗೆ, ಆಹಾರದಲ್ಲಿ ಲೋಪವಾಗದಂತೆ ಡಬಲ್ ಲಾಕ್ ಸಿಸ್ಟಮ್ ಅಳವಡಿಸಲು, ವಾರ್ಡ ನ್ ಬಳಿ ಒಂದು ಬೀಗ ಮತ್ತು ವಿದ್ಯಾರ್ಥಿ ಸಮಿತಿ ಬಳಿ ಒಂದು ಬೀಗವನ್ನಿರಿಸಿ ಸೋರಿಕೆ ತಡೆ ಕೈಗೊಳ್ಳಲು ಜಿಲ್ಲಾಧಿಕಾರಿಗಳು ಸಲಹೆ ಮಾಡಿದರು.ಹಾಸ್ಟೆಲ್ ಭೇಟಿ ಬಳಿಕ ಫೀಡ್ ಬ್ಯಾಕ್ ವರದಿ ಕಡ್ಡಾಯವಾಗಿರಬೇಕೆಂದ ಜಿಲ್ಲಾಧಿಕಾರಿಗಳು, ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸಬ್ಸಿಡಿ ಪಡೆಯಲು ಮಧ್ಯವರ್ತಿಗಳ ಹಾವಳಿ ತಡೆಗೆ ಸೂಕ್ತ ಕ್ರಮಕೈಗೊಳ್ಳಲು ನಿಗಮದ ಮ್ಯಾನೇಜರ್ ಉಳ್ಳಯ್ಯ ಅವರಿಗೆ ಸೂಚಿಸಿದರು. ಡಿ ಸಿ ಮನ್ನಾ ಜಮೀನಿನ ಬಗ್ಗೆ ಸಭೆಯಲ್ಲಿ ವಿಸ್ತ್ರತ ಚರ್ಚೆ ನಡೆಯಿತು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಪುತ್ತೂರು ಎ ಸಿ ಹರೀಶ್ ಕುಮಾರ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಗಣಪತಿ, ನಾಗರಿಕ ಹಕ್ಕು ನಿರ್ದೇಶನಾಲಯದ ಎಸ್ ಪಿ ಮಿತ್ರ ಹೆರಾಜೆ, ತಹಸೀಲ್ದಾರ್ ಮಂಗಳೂರು, ಬಂಟ್ವಾಳ ಉಪಸ್ಥಿತರಿದ್ದರು.

ಜಿಲ್ಲಾ ಸಹಾಯವಾಣಿ:13 ಅಹವಾಲು ಸ್ವೀಕಾರ

ಮಂಗಳೂರು,ಅ.30:ಜಿಲ್ಲಾ ಮಟ್ಟದ ಸಹಾಯವಾಣಿ ಸಭೆಯಲ್ಲಿ ಸ್ವೀಕರಿಸಿದ ಅಹವಾಲುಗಳಿಗೆ 15 ದಿನಗಳೊಳಗಾಗಿ ಪರಿಹಾರ ಅಥವಾ ಸೂಕ್ತ ಉತ್ತರವನ್ನು ನೀಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಪ್ರಭಾಕರ್ ಶರ್ಮಾ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಹಾಯವಾಣಿ ಸಭೆಯಲ್ಲಿ 13 ಅಹವಾಲುಗಳನ್ನು ಸಾರ್ವಜನಿಕರಿಂದ ಸ್ವೀಕರಿಸಿ ಮಾತನಾಡಿದ ಅವರು, ತಿಂಗಳ ಎರಡನೇ ಮತ್ತು ನಾಲ್ಕನೇ ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಹಾಯವಾಣಿ ಸಭೆಯನ್ನು ಏರ್ಪಡಿಸಲಾ ಗುವುದು;ಇಂದಿನ ಸಭೆ ಈ ನಿಟ್ಟಿನಲ್ಲಿ ಪ್ರಥಮ ಸಭೆಯಾಗಿದ್ದು, ಇಲ್ಲಿ ಸ್ವೀಕರಿಸಿದ ಅಹವಾಲುಗಳಿಗೆ ತಕ್ಷಣವೇ ಸ್ಪಂದಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಕೆಮ್ಮಾಜೆ ಶ್ರೀನಿವಾಸ್ ಭಟ್ ಅವರು ಪಿಎಮ್ ಜಿಎಸ್ ಯೋಜನೆಯಡಿ ಮೋರಿ ನಿರ್ಮಿಸಿದ್ದರಿಂದ ಸಂಪೂರ್ಣ ಜಮೀನು ಪಾಳುಬಿದ್ದ ಬಗ್ಗೆ ಅಪರ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ರಾಬರ್ಟ ಡಿ ಸೋಜಾ ಎಂಬವರು ಆರ್ ಟಿಸಿ ಯಲ್ಲಿ 4 ಸೆನ್ಸ್ ಭೂಮಿ ನಾಪತ್ತೆಯಾದ ಬಗ್ಗೆ ಅಹವಾಲು ನೀಡಿದರು. ಆರ್ ಟಿಸಿ ಯನ್ನು ಪ್ರತಿವರ್ಷ ಪರಿಶೀಲಿಸುವುದರಿಂದ ಇಂತಹ ಅನಾಹುತಗಳನ್ನು ತಪ್ಪಿಸಬಹುದು ಎಂದು ಅಪರಜಿಲ್ಲಾಧಿಕಾರಿಗಳು ಸಲಹೆ ಮಾಡಿದರಲ್ಲದೆ ಸೂಕ್ತ ಕ್ರಮದ ಭರವಸೆ ನೀಡಿದರು.
ಮನೆ ನಂಬರ್, ಶಾಲಾ ಕಟ್ಟಡ, ಜಾಗ ಒತ್ತುವರಿಯಂತಹ ಕಂದಾಯ ಇಲಾಖೆಗೆ ಸೇರಿದ 13 ಅಹವಾಲುಗಳನ್ನು ಸ್ವೀಕರಿಸಿ ಸೂಕ್ತ ಕ್ರಮದ ಭರವಸೆಯನ್ನು ಅಧಿಕಾರಿಗಳು ನೀಡಿದರು.ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Thursday, October 29, 2009

ಕೃಷಿ ಸಮಸ್ಯೆಗಳ ಪರಿಹಾರಕ್ಕೆ 1551ಕ್ಕೆ ಕರೆ ಮಾಡಿ

ಮಂಗಳೂರು,ಅ.29: ಜಿಲ್ಲೆಯ ಕೃಷಿಕರು ಕೃಷಿ ಸಂಬಂಧಿ ಸಮಸ್ಯೆಗಳ ಪರಿಹಾರಕ್ಕೆ ಕಿಸಾನ್ ಕಾಲ್ ಸೆಂಟರ್ 1551ಕ್ಕೆ ಕರೆ ಮಾಡಿ;ಇದು ಶುಲ್ಕ ರಹಿತ ಸಂಖ್ಯೆಯಾಗಿದ್ದು,ಕೃಷಿಕರು 1551ಕ್ಕೆ ಕರೆ ಮಾಡಿ ತಮ್ಮ ಹೆಸರು, ಊರು,ತಾಲೂಕು/ಜಿಲ್ಲೆ ಹಾಗೂ ದೂರವಾಣಿ ಸಂಖ್ಯೆ ಇತ್ಯಾದಿಗಳನ್ನು ನೀಡಬೇಕು.ಬಳಿಕ ಕೃಷಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತಿಳಿಸಬೇಕು.
ರೈತರ ಪ್ರಶ್ನೆಗಳಿಗೆ ತಕ್ಷಣ ಉತ್ತರ ದೊರಕದಿದ್ದಲ್ಲಿ ಸಂಬಂಧಪಟ್ಟವರಿಂದ ಮಾಹಿತಿ ಪಡೆದು ಉತ್ತರ ಒದಗಿಸಲಾಗುವುದು. ಸರ್ಕಾರಿ ರಜೆದಿನಗಳನ್ನು ಹೊರತುಪಡಿಸಿ ಕಚೇರಿ ಕೆಲಸದ ದಿನಗಳಂದು ಬೆಳಗ್ಗೆ 9.30ರಿಂದ ಸಾಯಂಕಾಲ 6 ಗಂಟೆಯವರೆಗೆ ಮೇಲ್ಕಂಡ ಸಂಖ್ಯೆಗೆ ಡಯಲ್ ಮಾಡಿ ಖುದ್ದಾಗಿ ಉತ್ತರ ಪಡೆಯಬಹುದು. ಈ ಸೌಲಭ್ಯದ ಪ್ರಯೋಜನವನ್ನು ರೈತರು ಪಡೆದುಕೊಳ್ಳಬೇಕೆಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

Wednesday, October 28, 2009

ಕೌಶಲ್ಯಯುಕ್ತ ಮಾನವ ಶಕ್ತಿ ಅಭಿವೃದ್ಧಿಗೆ ಮಾನವ ಸಂಪನ್ಮೂಲ ಕೇಂದ್ರ: ಕಾರ್ಮಿಕ ಸಚಿವ ಬಚ್ಚೇಗೌಡ

ಮಂಗಳೂರು,ಅ.28:ರಾಜ್ಯದ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಮತ್ತು ದೇಶದ ಆರ್ಥಿಕ ಪ್ರಗತಿಗೆ ಸಹಕಾರಿಯಾಗುವಂತೆ ಮಾನವಶಕ್ತಿಯನ್ನು ಬಳಸಲು ಕೌಶಲ್ಯಯುಕ್ತ ಮಾನವಶಕ್ತಿ ಒದಗಿಸಲು ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ ಅವರು ಹೇಳಿದರು.
ಅವರು ಇಂದು ಲಾಲ್ ಬಾಗ್ ನ ಮಹಾನಗರ ಪಾಲಿಕೆ ಕಟ್ಟಡದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರವನ್ನು ಉದ್ಘಾಟಿಸಿದ ಬಳಿಕ ಉದ್ಘಾಟನಾ ಸಂದೇಶ ನೀಡಿದರು. ಉದ್ಯೋಗ ವಿನಿಮಯ ಕೇಂದ್ರಗಳನ್ನು ಸಂಪೂರ್ಣವಾಗಿ ಬಳಸಿಕೊಂಡು ಮೆ. ಟೀಮ್ ಲೀಸ್ ಸರ್ವೀಸಸ್ ಪ್ರೈ ಲಿ.ನ ಸಹಭಾಗಿತ್ವದಲ್ಲಿ ಉದ್ಯೋಗಾಭಿವೃದ್ಧಿ, ಉದ್ಯೋಗಾಕಾಂಕ್ಷಿಗಳ ನೋಂದಣಿ, ಕೌಶಲ್ಯ ಮೌಲ್ಯಮಾಪನ, ಸಲಹೆ, ಉದ್ಯೋಗ ಮೇಳ, ಸಂದರ್ಶನಗಳನ್ನು ಏರ್ಪಡಿಸುವುದು, ಕೌಶಲ್ಯ ಕೊರತೆ ಗುರುತಿಸಿ ತರಬೇತಿ, ಉದ್ಯೋಗಾರ್ಹತೆ ಉತ್ತಮಗೊಳಿಸಿ ಉದ್ಯೋಗ ದೊರಕಿಸುವುದು ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ಮುಖ್ಯ ಕೆಲಸ ಎಂದು ಅವರು ವಿವರಿಸಿದರು.ಇದಕ್ಕಾಗಿ ಪ್ರಥಮವಾಗಿ ಶೈಕ್ಷಣಿಕ ನಗರ ಎಂದು ಬಿಂಬಿತವಾಗಿರುವ ಮಂಗಳೂರಿನಲ್ಲಿ ಈ ಕೇಂದ್ರವನ್ನು ಆರಂಭಿಸಿದ್ದು, ಮುಂದಿನ ತಿಂಗಳಲ್ಲಿ ಬಿಜಾಪುರ ಮತ್ತು ಗುಲ್ಬರ್ಗಾಗಳಲ್ಲಿ ಇಂತಹ ಕೇಂದ್ರಗಳನ್ನು ಆರಂಭಿಸಲಾಗುವುದು; ಮುಂದೆ ಹಂತ ಹಂತವಾಗಿ ಎಲ್ಲಾ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಗಳನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರಗಳನ್ನಾಗಿ ಪರಿವರ್ತಿಸಲಾಗುವುದು ಎಂದರು.ಈಗಾಗಲೇ ಉದ್ಯೋಗ ಮೇಳದಲ್ಲಿ ಒಂದೂವರೆ ಲಕ್ಷ ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡಿದ್ದು, 75,000 ಜನಕ್ಕೆ ಉದ್ಯೋಗ ದೊರೆತಿದೆ ಇನ್ನು ಉಳಿದವರಿಗೆ ತರಬೇತಿ ನೀಡಲಾಗಿದೆ. ಸರ್ಕಾರದ ಐಟಿಐಗಳ ಶಿಕ್ಷಣಕ್ಕೆ ಹೆಚ್ಷಿನ ಒತ್ತು ನೀಡಲಾಗಿದೆ ಎಂದರು.
ಪರಿಶಿಷ್ಟ ಜಾತಿ, ಪಂಗಡದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ:
ಬದುಕು ರೂಪಿಸಲು ಕಲಿಸುವ ಶಿಕ್ಷಣ ಇಂದಿನ ಅಗತ್ಯವಾಗಿದ್ದು, ರಾಜ್ಯದ 500 ಹಾಸ್ಟೆಲ್ ಗಳಲ್ಲಿ 100 ಹಾಸ್ಟೆಲ್ ಗಳನ್ನು ಪ್ರಥಮವಾಗಿ ಆಯ್ಕೆ ಮಾಡಿ ಪ್ರತಿ ದಿನ ಒಂದು ಗಂಟೆಯಂತೆ ಉದ್ಯೋಗಾಧಾರಿತ ಶಿಕ್ಷಣ ನೀಡಲು ಯೋಜಿಸಲಾಗಿದೆ; 5 ವರ್ಷಕ್ಕೆ 10ಲಕ್ಷ ಉದ್ಯೋಗ ಸೃಷ್ಟಿಸುವ ಯೋಜನೆಯಂತೆ ಈಗಾಗಲೇ 2ಲಕ್ಷ ಉದ್ಯೋಗಗಳನ್ನು ನೀಡಲಾಗಿದೆ.ತಾಂತ್ರಿಕ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದ್ದು, ಉದ್ಯೋಗಾಕಾಂಕ್ಷಿಗಳಿಗೆ ತರಬೇತಿ ನೀಡಲು ಹಣಕಾಸಿನ ಕೊರತೆಯಿಲ್ಲ ಎಂದು ಅವರು ಸ್ಷಷ್ಟ ಪಡಿಸಿದರು.
ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣ ಪಾಲೇಮಾರ್ ಅವರು, ಯುವ ಜನಾಂಗ ಸರ್ಕಾರದ ಕೆಲಸವನ್ನೇ ಕಾಯದೆ ತಮ್ಮ ಪ್ರತಿಭೆಯನ್ನು ಕೌಶಲ್ಯ ತರಬೇತಿಗಳಿಂದ ಉತ್ತಮ ಪಡಿಸಿಕೊಂಡು ಬದುಕು ರೂಪಿಸಿ ಎಂದು ಸಲಹೆ ಮಾಡಿದರು. ಸರ್ಕಾ ಎಲ್ಲ ವರ್ಗದ ಹಾಗೂ ಮಟ್ಟದ ಜನರಿಗೋಸ್ಕರ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಇದರ ಸದ್ಬಳಕೆಯಾಗಬೇಕಿದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು, ನೂತನ ಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ,ಉದ್ಯೋಗ ಸೃಷ್ಠಿ ಮಾತ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ಧ್ಯೇಯವಾಗದೆ ಸ್ವ ಉದ್ಯೋಗ ತರಬೇತಿಗಳಿಗೆ ಮಾರ್ಗದರ್ಶನ ನೀಡುವ ಕೆಲಸವಾಗಬೇಕಿದೆ ಎಂದರು.ಫಾರ್ಮಲ್ ಎಜುಕೇಶನ್ ಮತ್ತು ತರಬೇತಿ ಪಡೆಯದವರಿಗೂ ಈ ಕೇಂದ್ರಗಳು ನೆರವಾಗುವಂತಿರಬೇಕೆಂಬ ಸಲಹೆಯನ್ನು ನೀಡಿದರು. ಶಾಸಕ ಯು ಟಿ ಖಾದರ್,ಟೀಮ್ ಲೀಸ್ ನ ವ್ಯವಸ್ಥಾಪಕ ಅಶೋಕ್ ರೆಡ್ಡಿ ಮಾತನಾಡಿದರು. ಮಹಾಪೌರ ಎಂ. ಶಂಕರ್ ಭಟ್, ಕಮಿಷನರ್ ವಿಜಯಪ್ರಕಾಶ್ ಉಪಸ್ಥಿತರಿದ್ದರು. ಉದ್ಯೋಗ ಮತ್ತು ತರಬೇತಿ ಆಯುಕ್ತ ಎಸ್ ಆರ್ ಉಮಾಶಂಕರ್ ಸ್ವಾಗತಿಸಿದರು. ಕೆವಿಟಿಎಸ್ ಡಿಸಿ ಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವಿಷ್ಣುಕಾಂತ್ ಎಸ್ ಚಟಪಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಉದ್ಯೋಗಾಧಿಕಾರಿ ಎಚ್ ಟಿ ಬಸವರಾಜ್ ವಂದಿಸಿದರು.ಸಮಾರಂಭದಲ್ಲಿ 12 ಅಭ್ಯರ್ಥಿಗಳಿಗೆ ಕೌಶಲ್ಯ ಮೌಲ್ಯಮಾಪನ ಸರ್ಟಿಫಿಕೇಟ್ ಮತ್ತು ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು.

Tuesday, October 27, 2009

ಗ್ರಾಮ ಸ್ವರಾಜ್ಯ ಸಾಕಾರಕ್ಕೆ ಸ್ವಚ್ಛತಾ ಆಂದೋಲನ ಸ್ಫೂರ್ತಿಯಾಗಲಿ







ªÀÄAUÀ¼ÀÆgÀÄ, C.27(PÀ£ÁðlPÀ ªÁvÉð)-¸ÀéZÀÒvÁ DAzÉÆî£ÀzÀ°è zÀQët PÀ£ÀßqÀ f¯Éè ªÀÄÄA¢zÀÄÝ, CzÀgÀ®Æè ºÉƸÀAUÀr UÁæªÀÄ ¥ÀAZÁ¬Äw ¸ÀéZÀÒvÉAiÀÄ°è ºÀ®ªÀÅ ªÀiÁzÀjUÀ¼À£ÀÄß EvÀgÀjUÉ ¤ÃrzÉ. DzÀgÀÆ aPÀÌ aPÀÌ PÉ®¸ÀUÀ¼ÀÄ E£ÀÆß ¨ÁQ EzÀÄÝ ¸ÀéZÀÒvÉAiÀÄ §UÉÎ ¤gÀAvÀgÀ PÁ¼Àf ªÀ»¸ÀĪÀ CUÀvÀå«zÉ JAzÀÄ f¯Áè ¥ÀAZÁ¬Äw ¸ÀzÀ¸ÀågÁzÀ zsÀgÀuÉÃAzÀæ PÀĪÀiÁgï ºÉýzÀgÀÄ.

CªÀgÀÄ ªÁvÁð E¯ÁSÉ, zÀ.PÀ.f¯Áè ¥ÀAZÁAiÀÄvï, ¨É¼ÀÛAUÀr vÁ®ÆPÀÄ ¥ÀAZÁAiÀÄvï, UÁæªÀÄ ¥ÀAZÁAiÀÄvï ºÉƸÀAUÀrAiÀĪÀgÀ ¸ÀAAiÀÄÄPÁÛ±ÀæAiÀÄzÀ°è ºÉƸÀAUÀr UÁæªÀÄ ¥ÀAZÁ¬ÄwAiÀÄ°è ‘¸ÀéZÀÒvÉ ªÀÄvÀÄÛ DgÉÆÃUÀå’ PÀÄjvÀÄ K¥Àðr¸À¯ÁVzÀÝ «ZÁgÀ ¸ÀAQgÀtzÀ CzsÀåPÀëvÉ ªÀ»¹ ªÀiÁvÀ £ÁqÀÄwÛzÀÝgÀÄ.

¸ÀPÁðgÀzÀ ¸ÀªÀ®vÀÄÛUÀ¼ÀÄ d£ÀjUÉ ®¨sÀåªÁUÀ®Ä ªÀiÁ»w ¤ÃqÀĪÀ PÉ®¸À ¥ÀæªÀÄÄRªÁVzÀÄÝ, GzÉÆåÃUÀ SÁwæ, ªÀÄvÀÄÛ ¥ÁæxÀ«ÄPÀ DgÉÆÃUÀåPÉÃAzÀæUÀ¼À°è zÉÆgÉAiÀÄĪÀ ¸Ë®¨sÀåUÀ¼À §UÉÎ ªÁå¥ÀPÀ ¥ÀæZÁgÀªÁUÀ¨ÉÃQzÉ. EzÀjAzÀ UÁæ«ÄÃt ¥ÀæzÉñÀUÀ¼À d£ÀjUÉ §ºÀ¼ÀµÀÄÖ G¥ÀPÁgÀªÁUÀ°zÉ JAzÀgÀÄ. d£ÀgÀ°è CjªÀÅ ªÀÄÆr¸ÀĪÀÅzÀjAzÀ, eÁUÀ Èw GAlÄ ªÀiÁqÀĪÀÅzÀjAzÀ UÁA¢üÃfAiÀĪÀgÀ UÁæªÀÄ ¸ÀégÁdåzÀ PÀ£À¸ÀÄ £À£À¸ÁUÀ°zÉ JAzÀgÀÄ.

¸À¨sÉAiÀÄ°è ªÀÄÄRå CwyUÀ¼ÁVzÀÝ d£À²PÀët læ¸ïÖ £À ¤zÉÃð±ÀPÀgÁzÀ ²Ã£À±ÉnÖ CªÀgÀÄ ªÀiÁvÀ£Ár, AiÉÆÃd£ÉUÀ¼À AiÀıÀ¹ìUÉ d£ÀgÀ ¥Á¯ÉÆμÀÄî«PÉAiÀÄ CUÀvÀåzÀ §UÉÎ ªÀÄ£ÀªÀjPÉ ªÀiÁrzÀgÀ®èzÉ. CAvÀgÀAUÀ ªÀÄvÀÄÛ §»gÀAUÀ ±ÀÄ¢Þ £ÀªÀÄä£ÀÄß zÉʪÀvÀézÀ ¸À«ÄÃ¥ÀPÉÌ MAiÀÄÄåvÀÛzÉ JAzÀgÀÄ.

«ZÁgÀ¸ÀAQgÀtzÀ°è G¥À£Áå¸À ¤ÃrzÀ £ÉgÀªÀÅ WÀlPÀzÀ f¯Áè ¸ÀAAiÉÆÃdPÀgÁzÀ ªÀÄAdļÁ CªÀgÀÄ ¸ÀéZÀÑvÉAiÀÄ°è gÁdå 12£Éà ¸ÁÜ£ÀzÀ°èzÉAiÀiÁzÀgÀÆ, £ÀªÀÄä f¯Éè ªÀiÁvÀæ ¥ÀæxÀªÀÄ ¸ÁÜ£ÀzÀ°èzÉ. DzÀgÉ ¥ÀæxÀªÀÄ ¸ÁÜ£ÀzÀ¯Éèà EgÀ®Ä ¥ÀæwAiÉƧ⠣ÁUÀjÃPÀgÀÄ §ºÀ¼ÀµÀÄÖ ±ÀæªÀÄ ªÀ»¸À¨ÉÃQzÀÄÝ, §AiÀÄ®Ä ªÀÄ®«¸Àdð£ÉAiÀÄ C¥ÁAiÀĪÀ£ÀÄß ªÀÄ£ÀªÀÄÄlÄÖªÀAvÉ CªÀgÀÄ «ªÀj¹zÀgÀÄ. £ÀªÀÄä ¥ÀæeÉÕUÉ ¨ÁgÀzÉ gÉÆÃUÀ ºÀgÀqÀÄ«PÉAiÀÄ «zsÀUÀ¼À£ÀÄß «ªÀj¹zÀ CªÀgÀÄ,5 gÀµÀÄÖ PÁ¬Ä¯ÉUÀ¼ÀÄ ¤Ãj£À ªÀÄÆ®PÀ ºÀgÀqÀÄvÀÛzÉ JAzÀgÀÄ. ± ËZÁ®AiÀÄ §¼ÀPÉ, ¤ªÀðºÀuÉ ºÁUÀÆ ¥Áè¹ÖPï §¼À¸ÀĪÀÅzÀjAzÀ ¥Àj¸ÀgÀPÉÌ ºÁUÀÆ ªÀiÁ£ÀªÀgÀÄ ªÀivÀÄÛ ¥ÁætÂUÀ½UÉ DUÀĪÀ vÉÆAzÀgÉAiÀÄ£ÀÄß «ªÀj¹zÀgÀÄ.

UÁæªÀÄ¥ÀAZÁ¬Äw CzsÀåPÀë C§Äݯï gÀ»ªÀiÁ£ï CªÀgÀÄ, ¸ÀéZÀÑvÉ ªÀÄvÀÄÛ GzÉÆåÃUÀSÁwæ AiÉÆÃd£É C£ÀĵÁ×£ÀPÉÌ UÁæªÀÄ¥ÀAZÁ¬Äw¬ÄAzÀ zÉÆgÉAiÀÄĪÀ J®è £ÉgÀªÀÅUÀ¼À£ÀÄß CºÀðjUÉ vÀ®Ä¦¸ÀĪÀ ¨sÀgÀªÀ¸É ¤ÃrzÀgÀÄ.

f¯ÁèªÁvÁð¢üPÁj gÉÆût ¸ÁéUÀw¹, PÁAiÀÄðPÀæªÀÄzÀ GzÉÝñÀªÀ£ÀÄß «ªÀj¹zÀgÀÄ. ¹¤ ¤ªÁðºÀPÀ ®Æ¬Ä¸ï ªÀA¢¹zÀgÀÄ.UÀuÉÃ±ï £ÁªÀqÀ vÀAqÀ¢AzÀ £ÀAvÀgÀ ¸ÀéZÀÒvÉ §UÉÎ £ÁlPÀ ¥ÀæzÀ±Àð£À £ÀqɬÄvÀÄ.

Friday, October 23, 2009

ನೆರೆ -ನೂರು ಮುಖ ಛಾಯಾಚಿತ್ರ ಪ್ರದರ್ಶನ









ಶತಮಾನದ ಜಲಪ್ರಳಯದಲ್ಲಿ ಉತ್ತರ ಕರ್ನಾಟಕ ಸಂಪೂರ್ಣ ತತ್ತರಿಸಿತು.ಸಂತ್ರಸ್ತ ಜನರ ನೆರವಿಗೆ ಕರ್ನಾಟಕವೇ ಒಗ್ಗೂಡಿತು. ನೆರವಿನ ಮಹಾಪೂರವೇ ಹರಿಯಿತು. ಮುಖ್ಯಮಂತ್ರಿಗಳು ಪ್ರವಾಹಪೀಡಿತ ಪ್ರದೇಶದಲ್ಲಿ ವಾಸ್ತವ್ಯ ಹೂಡಿ ಖುದ್ದು ಪರಿಹಾರ ವಿತರಣೆಯ ನೇತೃತ್ವವನ್ನು ವಹಿಸಿದರು. ಸಚಿವ ಸಂಪುಟ, ಸಂಘಸಂಸ್ಥೆಗಳು, ಹಗಲಿರುಳು ಪರಿಹಾರ ವಿತರಣೆಯಲ್ಲಿ ತೊಡಗಿವೆ. ಪ್ರಕೃತಿ ವಿಕೋಪ,ಪರಿಹಾರದ ಸಂಪೂರ್ಣ ಚಿತ್ರಗಳ ಪ್ರದರ್ಶನವನ್ನು ವಾರ್ತಾ ಇಲಾಖೆ ಮಂಗಳೂರಿನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಆಯೋಜಿಸಿತು.3ದಿನಗಳ ಕಾಲ ಪ್ರದರ್ಶನ ನಡೆಯಲಿದೆ.ದ.ಕ.ಜಿಲ್ಲಾ ಉಸ್ತುವಾರಿ ಸಚಿವರು ಪ್ರದರ್ಶನವನ್ನು ಉದ್ಘಾಟಿಸಿದರು. ಸಹಾಯಕ ಆಯುಕ್ತ ಪ್ರಭುಲಿಂಗ ಕವಳಿಕಟ್ಟಿ, ಮೀನುಗಾರಿಕ ಇಲಾಖೆಯ ಉಪನಿರ್ದೇಶಕರಾದ ಸುರೇಶ್ ಕುಮಾರ್ . ಕೆ ಎಸ್ ಆರ್ ಟಿ ಸಿ ಡಿಸಿ ಕರುಂಬಯ್ಯ ಪ್ರದರ್ಶನ ವೇಳೆ ಉಪಸ್ಥಿತರಿದ್ದರು.

Thursday, October 22, 2009

ಕಂದಾಯ ಸಮಸ್ಯೆಗಳಿಗೆ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ

ಮಂಗಳೂರು,ಅ.22: ತಿಂಗಳ ಪ್ರತೀ ಎರಡನೇ ಮತ್ತು ನಾಲ್ಕನೇ ಶುಕ್ರವಾರ ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ಸಾರ್ವಜನಿಕರು ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ತಿಳಿಸಿದ್ದಾರೆ.

ದ.ಕ ಪತ್ರಕರ್ತರಿಂದ ನೆರೆ ಸಂತ್ರಸ್ತರಿಗೆ ದೇಣಿಗೆ

ಮಂಗಳೂರು,ಅ.22:ದಕ್ಷಿಣ ಕನ್ನಡ ಪತ್ರಕರ್ತರ ಸಂಘ ಮತ್ತು ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಮುಖ್ಯಮಂತ್ರಿಗಳನೆರೆ ಪರಿಹಾರ ನಿಧಿಗೆ 22,507 ರೂ.ಗಳನ್ನು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಅವರಿಗೆ ಸಲ್ಲಿಸಲಾಯಿತು.

ಬಿಕ್ಕಟ್ಟು ನಿರ್ವಹಣೆ ಪ್ರಾತ್ಯಕ್ಷಿಕೆ




ಮಂಗಳೂರು,ಅ.22:ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಬಿಕ್ಕಟ್ಟು ನಿರ್ವಹಣೆ (disaster management)ಬಗ್ಗೆ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸ ಲಾಗಿತ್ತು.ಅಗ್ನಿಶಾಮಕ ಪಡೆ ಸೇರಿದಂತೆ ಪೊಲೀಸ್ , ಆರೋಗ್ಯ ಇಲಾಖೆಯವರು ಪ್ರಾತ್ಯಕ್ಷಿಕೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪತ್ರಕರ್ತರಿಗೆ ಬೀಳ್ಕೊಡುಗೆ


ಮಂಗಳೂರು,ಅ.22:ಪಿಟಿಐ ವರದಿಗಾರರಾದ ಸದಾನಂದ ಮತ್ತು ಸಂಯುಕ್ತ ಕರ್ನಾಟಕದ ವರದಿಗಾರರಾದ ಹರೀಶ್ ಅದೂರ್ ಅವರಿಗೆ ಪ್ರೆಸ್ ಕ್ಲಬ್ ನಲ್ಲಿಂದು ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು.

Wednesday, October 21, 2009

ಹುತಾತ್ಮ ಪೊಲೀಸರಿಗೆ ಭಾವಪೂರ್ಣ ಶ್ರದ್ಧಾಂಜಲಿ

ದಕ್ಷಿಣ ಕನ್ನಡ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಚೇರಿಯ ಆವರಣದಲ್ಲಿ ಹುತಾತ್ಮ ಪೊಲೀಸರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಚ್.ಆರ್.ದೇಶಪಾಂಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಪೊಲೀಸ್ ವರಿಷ್ಠಾಧಿಕಾರಿಗಳು ಸ್ವಾಗತಿಸಿ ಹುತಾತ್ಮರ ದಿನಾಚರಣೆಯ ಹಿನ್ನಲೆಯನ್ನು ವಿವರಿಸಿದರು. ದೇಶದಾದ್ಯಂತ ಕರ್ತವ್ಯ ನಿರತರಾಗಿದ್ದಾಗ ಮೃತಪಟ್ಟ 833 ಪೊಲೀಸರ ಬಲಿದಾನವನ್ನು ಸ್ಮರಿಸಲಾಯಿತಲ್ಲದೆ, ಜಿಲ್ಲೆಯ ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಲಾಯಿತು. ಸಮಾರಂಭದಲ್ಲಿ ಐಜಿಪಿ ಗೋಪಾಲ್ ಹೊಸೂರ್, ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಬ್ರಮಣ್ಯೇಶ್ವರ ರಾವ್, ಜಿಲ್ಲಾಧಿಕಾರಿ ವಿ.ಪೊನ್ನುರಾಜ್, ಅಡಿಷನಲ್ ಎಸ್ ಪಿ ರಮೇಶ್ ವೇದಿಕೆಯಲ್ಲಿದ್ದರು.

Thursday, October 15, 2009

ರಾಜ್ಯೋತ್ಸವ ಆಚರಣೆಗೆ ಪೂರ್ವಭಾವಿ ಸಭೆ

ಮಂಗಳೂರು,ಅ.15:ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ನೇತೃತ್ವದಲ್ಲಿ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಲಾಯಿತು.

ಕೆಇಆರ್ ಸಿಯಿಂದ ಸಾರ್ವಜನಿಕರಿಂದ ಅಹವಾಲು ಸ್ವೀಕಾರ

ಮಂಗಳೂರು,ಅ.15: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ವಿದ್ಯುತ್ ದರ ಪರಿಷ್ಕರಣೆ ಬಗ್ಗೆ ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕರ ಅರ್ಜಿ ವಿಚಾರಣೆ ನಡೆಸಿತು. ಆಯೋಗದ ಅಧ್ಯಕ್ಷರಾದ ಕೆ.ಪಿ.ಪಾಂಡೆ, ಸದಸ್ಯರಾದ ವಿ.ಹಿರೇಮಠ, ಶ್ರೀನಿವಾಸ್ ರಾವ್ ಉಪಸ್ಥಿತರಿದ್ದರು.ಒಟ್ಟು 6,284 ಅರ್ಜಿಗಳನ್ನು ಕೆ ಇ ಆರ್ ಸಿ ಸ್ವೀಕರಿಸಿದೆ. ನಾಳೆಯೂ ಆಯೋಗ ದೂರುಗಳನ್ನು ಆಲಿಸಲಿದೆ.

Wednesday, October 14, 2009

ದೀಪಾವಳಿ ಬಾಳು ಬೆಳಗಲಿ

ಮಂಗಳೂರು,ಅ.14:ಬೆಳಕಿನ ಹಬ್ಬ ದೀಪಾವಳಿ ಬಾಳನ್ನು ಬೆಳಗಲಿ.ಬದುಕಿನ ಕತ್ತಲನ್ನು ಮಾಯವಾಗಿಸಿ ಬಾಳನ್ನು ಬೆಳಗುವ ಶುಭ ಸಂದರ್ಭದಲ್ಲಿ ಅತಿಯಾದ ಪಟಾಕಿಗಳ ಸಿಡಿಸುವಿಕೆ ಹಾಗೂ ಬಾಣ ಬಿರುಸುಗಳನ್ನು ಹೆಚ್ಚಾಗಿ ಬಳಸುವುದರಿಂದ ಶಬ್ದ ಹಾಗೂ ವಾಯು ಮಾಲಿನ್ಯಕ್ಕೆ ಕಾರಣವಾಗಿದೆ.ದೀಪಾವಳಿ ಕಾಲದ ಬೆಳಕಿನ ಹಾವಳಿಯ ಬಗ್ಗೆ ನಡೆಸಿದ ಸಮೀಕ್ಷೆಗಳ ಪ್ರಕಾರ ಮಾಪನ ಮಾಡಿರುವ ಶಬ್ದದ ಮಟ್ಟ ನಿಗದಿ ಪಡಿಸಿದ ಮಟ್ಟಕ್ಕಿಂತ ಹೆಚ್ಚಾಗಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ಅಪಾಯಕಾರಿ ಪರಿಣಾಮವನ್ನು ಬೀರಿದೆ.ಪಟಾಕಿಗಳನ್ನು ಸಿಡಿಸುವಾಗ ಸರಿಯಾದ ಎಚ್ಚರಿಕೆಗಳನ್ನು ತೆಗೆದುಕೊಳ್ಳದೆ ದೀಪಾವಳಿಯ ಮರುದಿನ ಬೆಂಕಿಯಿಂದ ಸಂಭವಿಸಿದ ಅನಾಹುತ, ಕಣ್ಣು ಕಳಕೊಂಡವರ ಚಿತ್ರಗಳು ಸುದ್ದಿಯಾಗಿರುತ್ತದೆ. ಹಾಗಾಗಿ ಜಿಲ್ಲಾಡಳಿತ ಸಾರ್ವಜನಿಕರ ಹಿತರಕ್ಷಣೆಯನ್ನು ಗಮನದಲ್ಲಿರಿಸಿ ಅನಾಹುತಗಳ ಕಡಿವಾಣಕ್ಕೆ, ಶಬ್ದ ಹಾಗೂ ವಾಯು ಮಾಲಿನ್ಯವನ್ನು ಕಡಿಮೆಗೊಳಿಸಲು ಮಾರ್ಗಸೂಚಿಯನ್ನು ಜಾರಿಗೆ ತಂದಿದೆ. ಸಾರ್ವಜನಿಕರು ಈ ಮಾರ್ಗಸೂಚಿಗಳನ್ನು ಅನುಸರಿಸಿ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ವಿನಂತಿಸಿದ್ದಾರೆ.
ಮಾರ್ಗಸೂಚಿ: 4 ಮೀಟರ್ ಅಂತರದಲ್ಲಿ 125 ಡೆಸಿಬಲ್ ಮಟ್ಟಕ್ಕಿಂತ ಹೆಚ್ಚು ಶಬ್ದ ಉಂಟು ಮಾಡುವ ಪಟಾಕಿಗಳ ಉತ್ಪಾದನೆ,ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಿದೆ. ಇಂತಹ ಪಟಾಕಿಗಳನ್ನು ಸಿಡಿಸದಿರಲು ಮನವಿ ಮಾಡಲಾಗಿದೆ.
ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ಪಟಾಕಿಗಳ ಸಿಡಿಸುವಿಕೆಯನ್ನು ನಿಷೇಧಿಸಲಾಗಿದೆ.
ಪ್ರಶಾಂತ ಪ್ರದೇಶದಲ್ಲಿ ಪಟಾಕಿಗಳನ್ನು ಸಿಡಿಸಬಾರದು. (ಆಸ್ಪತ್ರೆ,ನ್ಯಾಯಾಲಯಗಳ ಬಳಿ), ಪಟಾಕಿಗಳ ಬಳಕೆಯನ್ನು ನಿಗದಿಪಡಿಸಿದ ಸ್ಥಳದಲ್ಲಿ ಹಾಗೂ ಖಾಲಿ ಪ್ರದೇಶದಲ್ಲಿ ಮಾಡತಕ್ಕದ್ದು. ಪಟಾಕಿ ಮಾರಾಟಗಾರರು ಹೆಚ್ಚು ಶಬ್ದ ಉಂಟುಮಾಡುವಂತಹ ಪಟಾಕಿಗಳಾದ ಲಕ್ಷ್ಮೀ, ಆನೆ ಗುರುತಿನ ಪಟಾಕಿ ಹಾಗೂ ಇತರೆ 125 ಡೆಸಿಬಲ್ ಗಿಂತ ಹೆಚ್ಚು ಶಬ್ದ ಉಂಟು ಮಾಡುವಂತಹ ಪಟಾಕಿಗಳನ್ನು ಮಾರಾಟ ಮಾಡಬಾರದು. ನಗರ ಮತ್ತು ಪಟ್ಟಣಗಳ ಚಿಕ್ಕ ಚಿಕ್ಕ ಬೀದಿಯಲ್ಲಿ ಪಟಾಕಿ ಹಾಗೂ ಬಾಣ ಬಿರುಸು ಮಾಡುವುದರಿಂದ ಅಲ್ಲಿನ ನಿವಾಸಿಗಳಿಗೆ ಹಾನಿಯುಂಟಾಗುವ ಅಥವಾ ಬೆಂಕಿ ಹಾಗೂ ಸ್ಫೋಟದಿಂದ ಅಪಾಯಗಳು ಆಗುವ ಸಾಧ್ಯತೆಗಳು ಇರುವುದರಿಂದ ಸಾರ್ವಜನಿಕರು ಊರ್ವ ಮೈದಾನ, ಕದ್ರಿ ಮೈದಾನ ತೇಜಸ್ವಿನಿ ನರ್ಸಿಂಗ್ ಹೋಮ್ ಹತ್ತಿರ, ಪದವು ಶಾಲೆ ಮೈದಾನ ಕದ್ರಿ ಗುಡ್ಡ, ಕೆಪಿಟಿ ಹತ್ತಿರ, ಮಾರ್ನಮಿ ಕಟ್ಟೆ ಮೈದಾನ,ವಾಮನ ನಾಯಕ್ ವಾಚ್ ಫ್ಯಾಕ್ಟರಿ ಎದುರು, ಎಮ್ಮೆಕೆರೆ ಮೈದಾನ,ಬೋಳಾರದ ಹತ್ತಿರ, ಭಾರತ್ ಮೈದಾನ, ಜೆಪ್ಪು ಮಾರ್ಕೆಟ್ ಹತ್ತಿರ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ.ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತ ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದೆ.

ವಿವಿ ಕಾಲೇಜು ಕಟ್ಟಡ ಉದ್ಘಾಟನೆ


ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ನಿರ್ಮಿಸಲಾದ ಡಾ.ಪಿ.ದಯಾನಂದ ಪೈ ಕಟ್ಟಡವನ್ನು ಕೇಂದ್ರ ಕಾನೂನು ಸಚಿವರಾದ ಶ್ರೀ ವೀರಪ್ಪ ಮೊಯಿಲಿ ಅವರು ಉದ್ಘಾಟಿಸಿದರು.
ಕಾಲೇಜಿನ ಇತಿಹಾಸ ಫಲಕವನ್ನು ಅನಾವರಣ ಗೊಳಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಕೃಷ್ಣ ಪಾಲೆಮಾರ್.

Monday, October 12, 2009

ಅಪರಾಧ ಮುಕ್ತ ಸಮಾಜ ನಿರ್ಮಾಣ ಮಾಡಲು ಪೋಲಿಸರಿಗೆ ಸಕಲ ನೆರವು : ಸಚಿವ ಪಾಲೇಮಾರ್

ಮಂಗಳೂರು, ಸೆಪ್ಟೆಂಬರ್ 12: ರಾಜ್ಯದ ಜನತೆ ಶಾಂತಿ ಮತ್ತು ನೆಮ್ಮದಿಯಿಂದ ಬದುಕಬೇಕು. ಇದರಲ್ಲಿ ಪೋಲಿಸರ ಪಾತ್ರ ಮಹತ್ವದ್ದು,ಅಪರಾಧ ಮತ್ತು ಶೋಷಣೆ ಮುಕ್ತ ಸಮಾಜ ನಿರ್ಮಾಣ ಮಾಡಲು ಪೋಲಿಸ್ ಇಲಾಖೆಗೆ ಬೇಕಾದ ಸಕಲ ನೆರವು ನೀಡಲು ಸರ್ಕಾರ ಬದ್ದವಾಗಿದೆ ಎ0ದು ರಾಜ್ಯ ಬಂದರು,ಪರಿಸರ ಮತ್ತು ಜಿಲ್ಲಾ ಉಸ್ತುವರಿ ಸಚಿವರಾದ ಕ್ರಷ್ಣ ಜೆ. ಪಾಲೇಮಾರ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ತರಬೇತಿ ಶಾಲೆಯಲ್ಲಿ ತರಬೇತಿ ಪಡೆದ 12 ನೇ ತಂಡದ ಸಶಸ್ತ್ರ ಪೋಲಿಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಸಮಾರಂಭದಲ್ಲಿ ಪಥ ಸಂಚಲನವನ್ನು ಪರಿವೀಕ್ಷಿಸಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.ಅಧಿಕಾರಿಗಳಲ್ಲಿನ ದಕ್ಚತೆಯಿಂದ ಇತ್ತಿಚಿನ ದಿನಗಳಲ್ಲಿ ಪೋಲಿಸ್ ಇಲಾಖೆ ಅತ್ಯುತ್ತಮ ಕೆಲಸವನ್ನು ಮಾಡುತ್ತಿದೆ.ಇದರಿಂದ ರಾಜ್ಯದಲ್ಲಿ ಅಪರಾಧಗಳು ಗಣನೀಯವಾಗಿ ಕಡಿಮೆಯಾಗಿವೆ ಎಂದು ಶ್ಲಾಘಿಸಿದ ಅವರು ಪೋಲಿಸ್ ಠಾಣೆಗಳಿಗೆ ಬರುವ ಜನ ಸಾಮಾನ್ಯನನ್ನು ಗೌರವದಿಂದ ಕಂಡು ಅವನೊಂದಿಗೆ ಸೌಜನ್ಯದಿಂದ ವರ್ತಿಸಿ, ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕೆಂದು ಅವರು ಇದೇ ಸಂದರ್ಭದಲ್ಲಿ ಕರೆ ನೀಡಿದರು. ರಾಜ್ಯ ಹೆಚ್ಚುವರಿ ಪೋಲಿಸ್ ಮಹಾ ನಿರ್ದೇಶಕ (ನೇಮಕಾತಿ ಮತ್ತು ತರಬೇತಿ) ಎಸ್. ಟಿ. ರಮೇಶ್, ತರಬೇತಿ ಐಜಿಪಿ ಡಾ. ಎಸ್. ಪರಶಿವಮೂರ್ತಿ, ಪಶ್ಚಿಮ ವಲಯ ಐಜಿಪಿ ಗೋಪಾಲ್ ಬಿ. ಹೊಸೂರು, ಜಿಲ್ಲಾ ಎಸ್ಪಿ ಡಾ. ಸುಬ್ರಹ್ಮಣ್ಯೇಶ್ವರ ರಾವ್, ಪ್ರಾಂಶುಪಾಲ ಮತ್ತು ಎಡಿಶನಲ್ ಎಸ್ಪಿ ಆರ್. ರಮೇಶ್ ಮತ್ತಿತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Thursday, October 8, 2009

ಪ್ರವಾಹ ಸಂತ್ರಸ್ತರ ನೆರವಿಗೆ 1,74,83,727ರೂ.ದೇಣಿಗೆ ಸಂಗ್ರಹ

ಮಂಗಳೂರು,ಅ.8:ರಾಜ್ಯದಲ್ಲ್ಲಿ ಪ್ರವಾಹದಿಂದ ತತ್ತರಿಸಿರುವ ಸಂತ್ರಸ್ತರಿಗೆ ನೆರವಾಗಲು ಎಲ್ಲರೂ ಧಾರಾಳವಾಗಿ ಸಹಾಯಹಸ್ತ ಚಾಚಿದ್ದು,ದಾನಿಗಳು ನಗದು ಹಾಗೂ ವಸ್ತುಗಳ ರೂಪದಲ್ಲಿ ದೇಣಿಗೆ ನೀಡಿ ನಿರೀಕ್ಷೆಗೆ ಮೀರಿ ಸ್ಪಂದಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೆಮಾರ್ ತಿಳಿಸಿದ್ದಾರೆ.
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾದ್ಯಮಾಗೋಷ್ಟಿಯಲ್ಲಿ ವಿವರಗಳನ್ನು ನೀಡಿದರು. ಇಂದು ಮುಂಜಾನೆ ತಮ್ಮ ನೇತೃತ್ವದಲ್ಲಿ ನಡೆದ ದೇಣಿಗೆ ಸಂಗ್ರಹ ಪಾದಯಾತ್ರೆಯಲ್ಲಿ 27,54,583 ರೂ. ಸಂಗ್ರಹಿಸಲಾಗಿದ್ದು, ಅ.5 ರಿಂದ 8 ರವರೆಗೆ ಜಿಲ್ಲಾಡಳಿತ ಒಟ್ಟು 1,74,83,727 ರೂ.ಗಳ ದೇಣಿಗೆ ಸಂಗ್ರಹಿಸಿದೆ ಎಂದು ಹೇಳಿದರು. ಜಿಲ್ಲೆಯ ಸಂಘ ಸಂಸ್ಥೆಗಳು, ದೇವಾಲಯಗಳು ಮತ್ತು ಸಾರ್ವಜನಿಕ ವಲಯದಿಂದ ಇನ್ನಷ್ಟು ನೆರವನ್ನು ನಿರೀಕ್ಷಿಸಲಾಗುತ್ತಿದ್ದು, ಪ್ರಮುಖ ಕಂಪೆನಿಗಳಾದ ಎಂ ಆರ್ ಪಿಎಲ್ 50 ಲಕ್ಷ, ನಗರಪಾಲಿಕೆ 15 ರಿಂದ 20 ಲಕ್ಷ, ಡಿಸಿಸಿ ಬ್ಯಾಂಕ್ ಸೇರಿದಂತೆ ಸಹಕಾರಿ ಕ್ಷೇತ್ರದ ಬ್ಯಾಂಕ್ ಗಳಿಂದ ಒಂದು ಕೋಟಿ ರೂ.,ಎಂಎಸ್ಇಝಡ್ 5 ಲಕ್ಷ, ಭಾರತ್ ಬೀಡೀಸ್ 5 ಲಕ್ಷ, ಶರವು ದೇವಾಲಯ 2 ಲಕ್ಷ ರೂ.ನಗದು ನೆರವನ್ನು ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಿಲ್ಡರ್ಸ್ ಅಸೋಸಿಯೇಷ್ ನ ಆಶ್ರಯದಲ್ಲಿ ನೆರೆ ಸಂತ್ರಸ್ತರ ಗ್ರಾಮಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸುವ ಬಗ್ಗೆ ಚಿಂತನೆ ನಡೆಸಿದೆ ಎಂದು ಸಚಿವರು ತಿಳಿಸಿದರು. ಕಟೀಲು ಕ್ಷೇತ್ರದಿಂದ 7,000 ಸೀರೆ, ಆರೋಗ್ಯ ಇಲಾಖೆಯಿಂದ 17 ಕ್ವಿಂಟಾಲ್ ಅಕ್ಕಿಯನ್ನು ನೆರೆಪೀಡಿತರ ನೆರವಿಗೆ ನೀಡಲಾಗಿದೆ ಎಂದರು. ಜಿಲ್ಲಾಧಿಕಾರಿ ವಿ.ಪೊನ್ನುರಾಜ್,ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಕರಾವಳಿ ಪ್ರಾಧಿಕಾದ ಅಧ್ಯಕ್ಚ ಬಿ. ನಾಗರಾಜ ಶೆಟ್ಟಿ,ಸಂಸದ ನಳಿನ್ ಕುಮಾರ್ ಕಟೀಲ್,ಶಾಸಕ ಯೋಗಿಶ್ ಭಟ್, ಎಸ್ಪಿ ಡಾ.ಸುಬ್ರಹ್ಮಣ್ಯೇಶ್ವರ ರಾವ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ ಸುದ್ದಿಗೋಷ್ಟಿಯಲ್ಲಿದ್ದರು.

Wednesday, October 7, 2009

ಮಂಗಳೂರಿನಿಂದ ಹಜ್ ಯಾತ್ರೆಗೆ 6 ವಿಶೇಷ ವಿಮಾನಗಳು

ಮಂಗಳೂರು,ಅ.7:ಅಕ್ಟೋಬರ್ 25 ರಿಂದ ಮಂಗಳೂರಿನ ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಜ್ ಯಾತ್ರೆಗೆ ತೆರಳಲು ವಿವಿಧ ದಿನಾಂಕಗಳಂದು 6 ನೇರ ವಿಮಾನ ಯಾನಗಳನ್ನು ಆರಂಭಿಸಲಾಗಿದ್ದು, ನಾಲ್ಕು ಜಿಲ್ಲೆಗಳ 700 ಯಾತ್ರಿಕರು ಇಲ್ಲಿಂದ ನೇರ ಸಂಪರ್ಕದ ಸೌಲಭ್ಯವನ್ನು ಪಡೆಯಲಿದ್ದಾರೆ ಎಂದು ಹಜ್,ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಪ್ರೊ.ಮುಮ್ತಾಜ್ ಆಲಿ ಖಾನ್ ತಿಳಿಸಿದರು.
ಇಂದು ನಗರದ ಯೆನಪೋಯಾ ಆಸ್ಪತ್ರೆಯಲ್ಲಿ ಹಜ್ ಯಾತ್ರಿಕರಿಗೆ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡ, ಮಡಿಕೇರಿಯ ಹಜ್ ಯಾತ್ರಿಗಳು ನೇರ ವಿಮಾನ ಯಾನದ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದ್ದು,ಅ.23ರಿಂದ ಬಜಪೆಯಲ್ಲಿ ಈ ಸಂಬಂಧ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಪ್ರಥಮ ಪ್ರಯೋಗದಲ್ಲಿ ನ್ಯೂನತೆಗಳಿದ್ದರೂ ಅದಕ್ಕೆ ಪ್ರಾಧನ್ಯತೆ ನೀಡದೆ ಸೌಲಭ್ಯಗಳ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ವಿದ್ಯಾವಂತರು ಹೆಚ್ಚಿರುವ ಮಂಗಳೂರು ನಗರದಲ್ಲಿ ಹಿಂಸೆ,ಅಶಾಂತಿಗೆ ಅವಕಾಶವಿರಬಾರದು ಎಂದು ಹೇಳಿದ ಅವರು ಸಮಾಜವನ್ನು ವಿಭಾಗಿಸುವ ಭಾವನೆಯನ್ನು ತೊರೆದು ಪ್ರತಿಯೊಬ್ಬರು ಭಾರತೀಯತೆಯನ್ನು ಬೆಳೆಸಿಕೊಳ್ಳಬೇಕು;ಮಾನವ ಧರ್ಮ ಶಾಶ್ವತ ಎಂಬುದನ್ನು ಎಲ್ಲರೂ ಮನಗಾಣಬೇಕು ಅವರು ಈ ಸಂದರ್ಭದಲ್ಲಿ ಕರೆ ನೀಡಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣ ಪಾಲೆಮಾರ್ ಅವರು ಹಜ್ ಯಾತ್ರಿಕರ ಅನುಕೂಲಕ್ಕೆ ಸರ್ಕಾರದಿಂದ ಅಗತ್ಯ ನೆರವು ನೀಡುವ ಭರವಸೆ ನೀಡಿದರಲ್ಲದೆ, ನೇರ ವಿಮಾನದಲ್ಲಿ ಜಿಲ್ಲೆಯ 700 ಜನರು ಪವಿತ್ರ ಹಜ್ ಯಾತ್ರೆಯನ್ನು ಕೈಗೊಳ್ಳಬಹುದಲ್ಲದೆ ಕರ್ನಾಟಕದಿಂದ 6,000 ಮತ್ತು ದೇಶದಿಂದ 1,42,000 ಜನರು ಹಜ್ ಯಾತ್ರೆ ಕೈಗೊಳ್ಳಲಿದ್ದಾರೆ ಎಂದು ಹೇಳಿದರು. ಸರ್ಕಾರ ಈಗಾಗಲೇ ಉರುಸ್ ಹಬ್ಬದ ಪ್ರಯುಕ್ತ ಉಳ್ಳಾಲ ದರ್ಗಾಕ್ಕೆ ಒಂದು ಕೋಟಿ ರೂ.ಗಳನ್ನು ನೀಡಿದ್ದು ಹಜ್ ಯಾತ್ರಿಕರಿಗೆ ಸಬ್ಸಿಡಿಯಾಗಿ 18,000ರೂ.ಗಳನ್ನು ಸರ್ಕಾರ ನೀಡುತ್ತಿದೆ ಎಂದರು. ಸಮಾರಂಭದಲ್ಲಿ ಶಾಸಕರಾದ ಯೋಗೀಶ್ ಭಟ್,ಹಜ್ ಸಮಿತಿ ಅಧ್ಯಕ್ಷ ಮಹಮದ್ ಗೌಸ್,ಸದಸ್ಯರಾದ ಸಲೀಂ ಅಂಬಾಗಿಲು, ಇಕ್ಬಾಲ್, ಮಾಜಿ ಸಚಿವರಾದ ಬಿ.ಎ.ಮೊಯ್ದಿನ್, ಅಲ್ಸಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಪಿ.ಅಬೂಬಕ್ಕರ್, ಪ್ರಧಾನ ಕಾರ್ಯದರ್ಶಿ ಸಲೀಂ, ಬಿಜೆಪಿ ಉಪಾಧ್ಯಕ್ಷ ಅನ್ವರ್ ಮಾಣಿಪ್ಪಾಡಿ,ಹಜ್ ಕಮಿಟಿ ಇಒ ನಿಯಾಝ್ ಅಹಮದ್, ಮತ್ತಿರರು ಉಪಸ್ಥಿತರಿದ್ದರು.ಯೆನೊಪೋಯ ಆಸ್ಪತ್ರೆಯ ಆಡಳಿತ ಮಂಡಳಿ ಅಧ್ಯಕ್ಷ ಹಾಜಿ ವೈ.ಮೊಹಮ್ಮದ್ ಕುಂಞಿ ಸ್ವಾಗತಿಸಿದರು. ಅಝೀಝ್ ಬೈಕಂಪಾಡಿ ವಂದಿಸಿದರು.

Tuesday, October 6, 2009

ಪ್ರವಾಹ ಸಂತ್ರಸ್ತರ ನೆರವಿಗೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಾಳೆ ಪಾದಯಾತ್ರೆ

ಮಂಗಳೂರು,ಅ.6:ರಾಜ್ಯದ 15 ಜಿಲ್ಲೆಗಳು ನೆರೆ ಪ್ರವಾಹದಿಂದ ತತ್ತರಿಸಿದ್ದು, ಪ್ರವಾಹ ಪೀಡಿತರಿಗೆ ಸಕಾಲದಲ್ಲಿ ಅಗತ್ಯ ನೆರವು ನೀಡಲು ದಕ್ಷಿಣ ಕನ್ನಡ ಜಿಲ್ಲೆ ಮುಂದಾಗಿದ್ದು, ದೇಣಿಗೆ ಸಂಗ್ರಹ ದುರುಪಯೋಗವಾಗದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೆಮಾರ್ ಅವರು ತಿಳಿಸಿದ್ದಾರೆ.
ಇಂದು ನಗರದ ಸರ್ಕ್ಯುಟ್ ಹೌಸ್ ನಲ್ಲಿ ಏರ್ಪಡಿಸಲಾದ ಜಂಟಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಣಿಗೆ ಸಂಗ್ರಹಕ್ಕೆ ಮುಂದಾಗುವ ಯಾವುದೇ ಸಂಘ ಸಂಸ್ಥೆಗಳು ಅಥವಾ ವ್ಯಕ್ತಿಗಳು ಜಿಲ್ಲಾಧಿಕಾರಿಗಳಿಂದ ಅಧಿಕೃತ ಒಪ್ಪಿಗೆ ಪತ್ರವನ್ನು ಪಡೆಯಬೇಕು ಎಂದು ಹೇಳಿದರು. ಈ ಸಂಬಂಧ ಸಂಪೂರ್ಣ ಹೊಣೆ ಜಿಲ್ಲಾಧಿಕಾರಿಗಳದಾಗಿದ್ದು, ಅ.7 ರಂದು ಬೆಳಗ್ಗೆ 9.30ಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಪರಿಹಾರ ನಿಧಿ ಸಂಗ್ರಹಕ್ಕೆ ಪಾದಯಾತ್ರೆ ನಡೆಯಲಿದೆ. ಪಾದಯಾತ್ರೆಯಲ್ಲಿ ಎಲ್ಲಾ ಅಧಿಕಾರಿಗಳು ಪಾಲ್ಗೊಳ್ಳಲಿದ್ದು ನಗರದ ವಿವಿಧೆಡೆ ಎರಡು ಗಂಟೆಗಳ ಕಾಲ ನಾಲ್ಕು ಗುಂಪುಗಳಲ್ಲಿ ಪಾದಯಾತ್ರೆ ನಡೆಯಲಿದೆ. ತಾಲೂಕು ಮಟ್ಟದಲ್ಲಿ ತಹಸೀಲ್ದಾರರ ನೇತೃತ್ವದಲ್ಲಿ ನಿಧಿ ಸಂಗ್ರಹ ಕಾರ್ಯ ನಡೆಯಲಿದ್ದು,ನಗದು ದಾನ ನೀಡುವವರಿಗೆ ರಶೀದಿಯನ್ನು ನೀಡಲಾಗುವುದು ಎಂದು ಸಚಿವರು ಹೇಳಿದರು.
ಎರಡು ತಿಂಗಳೊಳಗೆ ಕಾಮಗಾರಿ ಪೂರ್ಣ: ನಗರದ ಪ್ರಮುಖ ರಸ್ತೆಗಳ ಕಾಮಗಾರಿ ಎರಡು ತಿಂಗಳೊಳಗೆ ಸಂಪೂರ್ಣಗೊಳಿಸಲಾಗುವುದು ಎಂದು ಹೇಳಿದ ಸಚಿವರು, ರಸ್ತೆ ಕಳಪೆ ಕಾಮಗಾರಿ ಪರಿಶೀಲನೆಗೆ 5 ಲ್ಯಾಬ್ ಗಳನ್ನು ಆರಂಭಿಸಲಾಗುವುದು.ಕಾಮಗಾರಿಯ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದ ಅವರು, ಪ್ರತೀ ತಾಲೂಕಿಗೆ ಒಂದರಂತೆ ಲ್ಯಾಬ್ ಗಳನ್ನು ಆರಂಭಿಸಲಾಗುವುದು. ಮಂಗಳೂರಿನಲ್ಲಿ ಮಾಸ್ಟರ್ ಲ್ಯಾಬ್ ಆರಂಭಿಸಲಾಗುವುದು ಎಂದು ನುಡಿದರು. ಅಕ್ಟೋಬರ್ ಒಳಗಾಗಿ ಉಡುಪಿ, ಮಡಿಕೇರಿಯಲ್ಲೂ ರಸ್ತೆ ಗುಣಮಟ್ಟ ಪರಿಶೀಲನೆಗೆ ಲ್ಯಾಬ್ ಗಳನ್ನು ಆರಂಭಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಂಸದ ಡಿ ವಿ ಸದಾನಂದ ಗೌಡ ಅವರು, ರಾಜ್ಯದಲ್ಲಿ ಸಂಭವಿಸಿದ ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ಗೃಹಸಚಿವರಲ್ಲಿ ಮೂರು ಪ್ರಮುಖ ಬೇಡಿಕೆಗಳನ್ನಿರಿಸಲಾಗಿದ್ದು, ತುರ್ತು ಮಧ್ಯಂತರ ಪರಿಹಾರ ಹತ್ತು ಸಾವಿರ ಕೋಟಿ ರೂ., ಆದಷ್ಟು ಶೀಘ್ರ ನೆರೆ ಪೀಡಿತ ಪ್ರದೇಶಗಳ ಸಮೀಕ್ಷೆ ಹಾಗೂ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕೆಂದು ಬೇಡಿಕೆ ಮಂಡಿಸಲಾಗಿದೆ ಎಂದು ಹೇಳಿದರು.
ಇದುವರೆಗೆ 192 ಜೀವಹಾನಿ,4,600ಜಾನುವಾರು ನಷ್ಟ, 2,04270 ಮನೆಗಳು ಸಂಪೂರ್ಣ ಹಾಳಾಗಿದ್ದು, 25ಲಕ್ಷ ಹೆಕ್ಟರ್ ಭೂಮಿ ಪ್ರವಾಹದಿಂದ ನಾಶವಾಗಿದೆ. ರಾಜ್ಯದ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಮರೋಪಾದಿಯಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದ್ದು, 2,211 ರಿಲೀಫ್ ಕ್ಯಾಂಪ್ ಗಳು, 3,55,769ಪ್ರವಾಹಪೀಡಿತರಿಗೆ ಆಹಾರ,ವಸತಿ ಸೌಲಭ್ಯ ಒದಗಿಸಲಾಗಿದೆ.12 ಹೆಲಿಕಾಪ್ಟರ್, ಎನ್ ಡಿ ಆರ್ ನ 220 ಜವಾನರು,329 ದೋಣಿಗಳನ್ನು ಬಳಸಲಾಗಿದೆ.ಪ್ರಾಥಮಿಕ ಅಂದಾಜು ನಷ್ಟ 16,500 ಕೋಟಿ ಎನ್ನಲಾಗಿದ್ದು,ಐದು ಸಾವಿರ ಕೋಟಿ ರಸ್ತೆ ಹಾಗೂ ಸೇತುವೆ ಹಾನಿ,ಒಂದು ಸಾವಿರ ಕೋಟಿ ಮನೆ, ಬೆಳೆ ಹಾನಿ 2,500 ಕೋಟಿ, ಒಂದು ಸಾವಿರ ಕೋಟಿ ಇಲೆಕ್ಟ್ರಿಕಲ್ ಡ್ಯಾಮೇಜ್, ಮೂಲಭೂತ ಸೌಕರ್ಯ ಒಂದೂವರೆ ಸಾವಿರ ಕೋಟಿ ಹಾಗೂ ಇತರೆ ಹಾನಿ ಒಂದು ಸಾವಿರ ಕೋಟಿ, ಮೂರುವರೆ ಸಾವಿರ ಕೋಟಿ ನೀರಾವರಿ ಸೌಲಭ್ಯಗಳಲ್ಲಿ ಹಾನಿ ಎಂದು ಅಂದಾಜಿಸಲಾಗಿದೆ ಎಂದು ಸಂಸದರು ವಿವರಿಸಿದರು. ಸಂಘಸಂಸ್ಥೆಗಳು,ಮಠಗಳು ಸಹಕಾರದ ಭರವಸೆ ಹಾಗೂ ಮನೆ ನಿರ್ಮಾಣಕ್ಕೆ ನೆರವಾಗಲಿದೆ ಎಂದು ತಿಳಿಸಿದ ಅವರು, ಎಲ್ಲಾ ಸಚಿವರು, ಸಂಸದರ ಒಂದು ತಿಂಗಳ ವೇತನ ಪರಿಹಾರವಾಗಿ ನೀಡಬೇಕೆಂದು ಸುತ್ತೋಲೆಯನ್ನು ಕಳುಹಿಸಲಾಗಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಜಿಲ್ಲಾಧಿಕಾರಿ ಪೊನ್ನುರಾಜ್ ಉಪಸ್ಥಿತರಿದ್ದರು.

Friday, October 2, 2009

Deccan Herald Principal Correspondent Dr. Ronald Fernandes gets Sarojini Naidu award

New Delhi, Oct.2: Deccan Herald Principal Correspondent Dr. Ronald Anil Fernandes was presented the prestigious Sarojini Naidu award 2009, a national award for best reporting on Women and Panchayati Raj in English category by Union Minister of State for External Affairs Dr Shashi Tharoor, at India Habitat Centre in New Delhi today.
Incidentally, Dr Fernandes is the first South Indian to win this award in English category which comprises a sum of Rs 2 lakh in cash and a citation.
The other awardees included Mr Amarpal Singh Verma of Rajasthan Patrika from Rajasthan (Hindi) and Ms G Meenakshi of Dinamani from Tamilnadu (other Indian languages – Tamil). Besides, Mr Vijay Chormare of Prahar from Maharashtra was given a special jury citation (Marathi).
The jury included Dr George Mathew (Chair, The Sarojini Naidu prize jury and Director, Institute of Social Sciences), Ms Urvashi Butalia (Co-founder, Kali for Women and Director, Zubaan), Mr Maalan Narayanan (Political Analyst and Media consultant), Mr Alok Mehta (Chief Editor, Nai Dunia) and Prof Niraja Gopal Jayal (Chairperson, Centre for Study of Law and Governance, Jawaharlal Nehru University, Delhi).
The award winning story on Koila Gram Panchayat in Puttur taluk was published in City Herald (a supplement of Deccan Herald) on July 4, 2009.
Speaking on the occasion, Hunger Project Country Director Rita Sarin said that the organization received a total of 928 articles from all over India.
The chief guest on the occasion, Union Minister of State for External Affairs Dr Shashi Tharoor while lauding the journalists for winning the prestigious award, said that there is a bright future for media in India unlike the foreign countries where newspapers and magazines are being closed down.
Regretting the recent trend of ‘herd instinct’ of newspapers and TV channels, he called upon media persons to publish more and more stories which ‘the public need to know’ rather than ‘what the public want’
Wellknown social activist and former IAS officer Aruna Roy and Doordarshan Director General Aruna Sharma also spoke on how the RTI Act and NREGA has brought a ray of hope among rural women folk.
Incidentally, the year 2009 also marks the 50th anniversary of Panchayati Raj.