Monday, January 31, 2011

ಲೋಕಾಯುಕ್ತ ಬಲವರ್ಧನೆಯಿಂದ ಸರ್ಕಾರದ ಮೇಲೆ ಜನರಿಗೆ ನಂಬಿಕೆ ಹೆಚ್ಚಲಿದೆ -ನ್ಯಾ.ಸಂತೋಷ್ ಹೆಗ್ಡೆ

ಮಂಗಳೂರು, ಜನವರಿ.31: ಭ್ರಷ್ಟಾಚಾರ ನಿಯಂತ್ರಣಕ್ಕೆ ಲೋಕಾಯುಕ್ತವನ್ನು ಬಲಪಡಿಸಬೇಕಾದ್ದು ಅವಶ್ಯ. ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆ ಶಾಶ್ವತವಾಗಿ, ಪ್ರಬಲವಾಗಿ ಕರ್ತವ್ಯ ನಿರ್ವಹಿಸಬೇಕಾದರೆ ಪ್ರತಿ ಜಿಲ್ಲೆಯಲ್ಲಿ ಲೋಕಾಯುಕ್ತ ಸಂಸ್ಥೆ ಆರಂಭಿಸುವುದರೊಂದಿಗೆ ಸ್ವಂತ ಕಟ್ಟಡವಿರಬೇಕಾದ್ದು ಅವಶ್ಯ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿದರು.
ಲೋಕೋ ಪಯೋಗಿ, ಬಂದರು ಮತ್ತು ಒಳ ನಾಡು ಜಲ ಸಾರಿಗೆ ಇಲಾಖೆ ಮತ್ತು ಕರ್ನಾ ಟಕ ಲೋಕಾ ಯುಕ್ತ ಇದರ ಆಶ್ರಯ ದಲ್ಲಿ ಮಂಗ ಳೂರು ನಗರದ ಉರ್ವ ಸ್ಟೋರ್ ಬಳಿ ನಿರ್ಮಾಣ ಗೊಳ್ಳ ಲಿರುವ ಮಂಗ ಳೂರು ಲೋಕಾ ಯುಕ್ತ ಕಚೇರಿಯ ಸ್ವಂತ ಕಟ್ಟಡಕ್ಕೆ ಸೋಮವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.ಸ್ವಂತ ಕಟ್ಟಡವಿದ್ದಲ್ಲಿ ಲೋಕಾಯುಕ್ತ ಕಾರ್ಯಚಟುವಟಿಕೆಗಳಿಗೆ ಹೆಚ್ಚು ಬಲ ಬರುತ್ತದೆ ಮತ್ತು ಸಹಕಾರಿಯಾಗುತ್ತದೆ. ನಗರದ ಜಿಲ್ಲಾಕಾರಿ ಕಚೇರಿ ಬಳಿಯೇ ನಿರ್ಮಾಣವಾಗಿದ್ದರೆ ಜನರಿಗೆ ಹೆಚ್ಚು ಅನುಕೂಲವಾಗುತ್ತಿತ್ತು ಎಂದ ಅವರು ಲೋಕಾಯುಕ್ತಕ್ಕೆ ಇನ್ನೂ ಹೆಚ್ಚಿನ ಸಿಬ್ಬಂದಿಗಳ ಅಗತ್ಯವಿದೆ. ಸರಕಾರ 291 ಅಧಿಕಾರಿಗಳನ್ನಷ್ಟೆ ನೀಡಿದೆ. ಆದರೆ ಅಗತ್ಯ ಸಿಬ್ಬಂದಿಗಳನ್ನು ಒದಗಿಸಿಲ್ಲ. ಲೋಕಾಯುಕ್ತ ಸಮರ್ಪಕವಾಗಿ ಕೆಲಸ ನಿರ್ವಹಿಸಲು ಇನ್ನಷ್ಟು ಇನ್ಸ್ ಪೆಕ್ಟರ್, ಸಿಬ್ಬಂದಿಗಳ ಅಗತ್ಯವಿದೆ ಎಂದರು. ಕಳೆದ ವರ್ಷದಲ್ಲಿ ಒಟ್ಟು 324 ಕಡೆ ಲೋಕಾಯುಕ್ತ ದಾಳಿ ನಡೆಸಿದೆ. ಇದೇ ಜನವರಿಯಲ್ಲಿ 36 ಮಂದಿಯನ್ನು ಲಂಚ ಸ್ವೀಕರಿಸುತ್ತಿರುವಾಗಲೇ ಬಂಧಿಸಿದೆ. 2006 ರಿಂದ ಇದುವರೆಗೆ ಒಟ್ಟು 1,600 ಲಂಚ ಪ್ರಕರಣವನ್ನು ಬಯಲಿಗೆಳೆಯಲಾಗಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ. ಮೊದಲು ನಮ್ಮ ನಮ್ಮೊಳಗೆ ಬದಲಾವಣೆಯಾಗಬೇಕು. ಯಾವುದೇ ಹುದ್ದೆಯಲ್ಲಿದ್ದರೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿದಾಗ ಬದಲಾವಣೆ ಸಾಧ್ಯ ಎಂದು ನುಡಿದ ಲೋಕಾಯುಕ್ತರು ಸರಕಾರದ ಯೋಜನೆಗಳು ಸಮರ್ಪಕವಾಗಿ ಜನರನ್ನು ತಲುಪಿದ್ದರೆ ಈ ದೇಶದಲ್ಲಿ ಬಡತನವೇ ಇರುತ್ತಿರಲಿಲ್ಲ ಎಂದರು.
ಮುಖ್ಯ ಅತಿಥಿ ಗಳಾ ಗಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಮಾತ ನಾಡಿ, ಜಿಲ್ಲೆ ಯನ್ನು ಭ್ರಷ್ಟಾ ಚಾರ ಮುಕ್ತ ವನ್ನಾ ಗಿಸು ವಲ್ಲಿ ಪ್ರತಿಯೊ ಬ್ಬರೂ ಮನಸ್ಸು ಮಾಡ ಬೇಕು ಎಂದರು. ವಿಧಾನ ಸಭೆಯ ಉಪ ಸಭಾಧ್ಯಕ್ಷ ಎನ್.ಯೋಗೀಶ್ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೊದಲು ವ್ಯವಸ್ಥೆಯಲ್ಲಿ ಬದಲಾವಣೆಯಾದಾಗ ಭ್ರಷ್ಟಾಚಾರ ನಿಯಂತ್ರಣ ಸಾಧ್ಯ. ನಮ್ಮ ಮಾನಸಿಕತೆಯಲ್ಲೂ ಬದಲಾವಣೆಯಾಗಬೇಕು. ಲೋಕಾಯುಕ್ತರು ಭ್ರಷ್ಟಾಚಾರ ನಿಯಂತ್ರಣಕ್ಕೆ ಹೊಸ ಹೋರಾಟ ಆರಂಭಿಸಿದ್ದು ಅದಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು. ದ.ಕ. ಜಿಲ್ಲೆಯಿಂದಲೇ ಭ್ರಷ್ಟಾಚಾರ ನಿರ್ಮೂಲನೆಯ ಆಂದೋಲನ ಆರಂಭವಾಗಲಿ ಎಂದು ಯೋಗೀಶ್ ಭಟ್ ಆಶೀಸಿದರು.ಕರಾ ವಳಿ ಅಭಿ ವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಬಿ.ನಾಗ ರಾಜ ಶೆಟ್ಟಿ ಕಾರ್ಯ ಕ್ರಮ ವನ್ನು ದ್ದೇಶಿಸಿ ಮಾತ ನಾಡಿ ಶುಭ ಹಾರೈಸಿ ದರು. ಕರ್ನಾಟಕ ಲೋಕಾಯುಕ್ತ ನಿಬಂಧಕ ಮೂಸಾ ಕುಂಞ ನಾಯರ್ ಮೂಲೆ ಪ್ರಾಸ್ತಾವಿಕವಾಗಿ ಮಾತನಾಡಿ 150 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು ಸರಕಾರ ಈಗಾಗಲೇ 65 ಲಕ್ಷ ಒದಗಿಸಿದೆ. ಲೋಕಾಯಕ್ತ ಇಲಾಖೆಯಲ್ಲಿ ಈ ಹಿಂದೆ 693 ಸಿಬ್ಬಂದಿಗಳಿದ್ದು ಇದೀಗ 1290ಕ್ಕೆ ಏರಿದೆ. ಉತ್ತಮ ಕಾರ್ಯಗಳಿಂದ ಜನರಿಗೆ ಲೋಕಾಯುಕ್ತ ಸಂಸ್ಥೆಯ ಮೇಲೆ ವಿಶ್ವಾಸಾರ್ಹತೆಯೂ ಹೆಚ್ಚಾಗಿದೆ ಎಂದರು.ಲೋಕೋಪಯೋಗಿ ಇಲಾಖೆಯ ಸೂಪರಿಂಟೆಂಡೆಂಟ್ ಇಂಜಿನಿಯರ್ ಬಿ.ಎನ್.ಬಾಲಕೃಷ್ಣ ವಂದಿಸಿದರು.

ವಿಜ್ಞಾನ ಪಾರ್ಕ್ ಅರಂಭಿಸಿ - ಎನ್.ಯೋಗೀಶ್ ಭಟ್

ಮಂಗಳೂರು, ಜನವರಿ.31: ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳು ಅರಳಲು ಅವರಿಗೆ ಸೂಕ್ತವಾದ ಪ್ರೋತ್ಸಾಹ ನೆರವು ಆವಶ್ಯಕ.ಇಂತಹ ನೆರವು ಬಾಲಭವನದಿಂದ ಸಾಧ್ಯವಾಗುತ್ತಿದ್ದು,ಮಕ್ಕಳು ವೈಜ್ಞಾನಿಕವಾಗಿಯೂ ತಮ್ಮಲ್ಲಿನ ಬುದ್ದಿ ಮತ್ತೆಯನ್ನು ಬೆಳಕಿಗೆ ತರಲು ಕದ್ರಿ ಉದ್ಯಾನವನದಲ್ಲಿ ವಿಜ್ಞಾನ ಪಾರ್ಕ್ ಆರಂಭಿಸುವ ಆವಶ್ಯಕತೆ ಇದೆ ಎಂದು ಕರ್ನಾಟಕ ವಿಧಾನಸಭೆಯ ಉಪ ಸಭಾಪತಿ ಎನ್.ಯೋಗೀಶ್ ಭಟ್ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಅವರು ಇಂದು ರಾಜ್ಯ ಬಾಲ ಭವನ ಸೊಸೈಟಿ ಬೆಂಗ ಳೂರು,ಜಿಲ್ಲಾ ಬಾಲ ಭವನ ಸಮಿತಿ ಮಂಗ ಳೂರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿ ವೃದ್ಧಿ ಇಲಾಖೆ ಮಂಗ ಳೂರು ಇವರ ಸಂಯುಕ್ತಾ ಶ್ರಯ ದಲ್ಲಿ ಮಂಗಳೂರು ನಗರದ ಕದ್ರಿ ಉದ್ಯಾನವನ ಬಾಲಭವನದಲ್ಲಿ ಆಯೋಜಿಸಿದ್ದ ಕಲಾಶ್ರೀ ಪ್ರಶಸ್ತಿ ವಿಜೇತರಿಗೆ ಸನ್ಮಾನ ಹಾಗೂ ಜಿಲ್ಲಾ ಬಾಲ ಭವನ ನವೀಕೃತ ಕಟ್ಟಡ ಹಾಗೂ ಚಿಣ್ಣರ ರೈಲು ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ಬಾಲ ಭವನ ದ ಪಕ್ಕ ದಲ್ಲಿ ಖಾಲಿ ಇರುವ ಜಾಗವು ವಿಜ್ಞಾನ ಪಾರ್ಕಿಗೆ ಪ್ರಶಸ್ತ ವಾಗಿದ್ದು,ಕಟ್ಟಡ ನಿರ್ಮಾ ಣಕ್ಕೆ ದಾನಿ ಗಳು ಧನ ಸಹಾಯ ಮಾಡಲು ಉತ್ಸುಕ ರಾಗಿ ದ್ದಾರೆ ಎಂದರು. ಮಕ್ಕಳ ಪ್ರತಿಭೆಗಳ ವಿಕಾಸಕ್ಕೆ ಸಂಘ ಸಂಸ್ಥೆಗಳು ಸಹ ಕೈ ಜೋಡಿಸಬೇಕೆಂದರು.
ಸಮಾರಂಭವನ್ನು ಉದ್ಘಾಟಿಸಿದ ಮಂಗಳೂರು ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ ಮಕ್ಕಳ ಪ್ರತಿಭಾ ವಿಕಾಸಕ್ಕೆ ರಾಜ್ಯ ಸರ್ಕಾರ ಎಲ್ಲಾರೀತಿಯ ನೆರವು ನೀಡಿದೆಯೆಂದರು.ರಾಜ್ಯ ಬಾಲಭವನ ಸೊಸೈಟಿಯ ಅಧ್ಯಕ್ಷರಾದ ಸುಲೋಚನಾ ಜಿ.ಕೆ.ಭಟ್ ಅವರು ಮಾತನಾಡಿ ಬಾಲಭವನ ನಿರಂತರ ಚಟುವಟಿಕೆಯ ತಾಣವಾಗಿರಬೇಕು,ಇಲ್ಲಿಯ ಕಾರ್ಯ ಚಟುವಟಿಕೆಗಳು ತಾಲ್ಲೂಕು ಮಟ್ಟಕ್ಕೂ ವಿಸ್ತರಿಸುವ ಅಗತ್ಯವಿದೆ ಎಂದರು.
ಸಮಾ ರಂಭ ದಲ್ಲಿ ಮೇಯರ್ ರಜನಿ ದುಗ್ಗಣ್ಣ ,ಕರಾ ವಳಿ ಅಭಿ ವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ರಾದ ಬಿ.ನಾಗ ರಾಜ ಶೆಟ್ಟಿ,ಮಹಾ ನಗರ ಪಾಲಿಕೆ ಆಯುಕ್ತ ರಾದ ಡಾ.ವಿಜಯ ಪ್ರಕಾಶ್,ಪಾಲಿಕೆ ಸದಸ್ಯೆ ರೂಪಾ.ಡಿ.ಬಂಗೇರ,ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರಾ ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಶಿವಶಂಕರ್ ಮತ್ತಿತರ ಗಣ್ಯರು ಭಾಗವಹಿಸಿದ್ದರು.
ರಾಜ್ಯ ಮಟ್ಟದಲ್ಲಿ ಬಾಲಶ್ರೀ ಪ್ರಶಸ್ತಿ ಪಡೆದು ರಾಷ್ಟ್ರ ಬಾಲಶ್ರೀ ಪ್ರಶಸ್ತಿ ಪಡೆದಿರುವ ದ.ಕ. ಜಿಲ್ಲೆಯ ಸುಳ್ಯದ ಮಾಸ್ಟರ್ ಸೂರಜ್ ಸೇರಿದಂತೆ ರಾಜ್ಯಬಾಲಶ್ರೀ ಪ್ರಶಸ್ತಿಗೆ ಬಾಜನರಾದ ಕು.ಶಮಾಪರ್ವಿನ್ ತಾಜ್ ಪುತ್ತೂರು,ಕು.ಶರಣ್ಯ.ಬಿ.ಕೆ.,ಕು.ತನುಶ್ರೀ ಇವರುಗಳನ್ನು ಸನ್ಮಾನಿಸಲಾಯಿತು.ಅದೇ ರೀತಿ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗಿ ರಾಜ್ಯ ಮಟ್ಟಕ್ಕೆಹೋಗಿದ್ದ ಚಿನ್ಮಯ್, ನವ್ಯ, ಅನನ್ಯ ರಾಮ್ ಸಿಂಧೂರ ಸರಸ್ವತಿ ಇವರನ್ನು ಸಹ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಶಕುಂತಳಾ ಇವರು ಸ್ವಾಗತಿಸಿದರು.

ಹಾಲು ಉತ್ಪಾದಕರ ರೈತರಿಗೆ ಪ್ರತೀ ಲೀಟರಿಗೆ 50 ಪೈಸೆ ಪ್ರೋತ್ಸಾಹಧನ

ಮಂಗಳೂರು, ಜನವರಿ.31:ದಕ್ಷಿಣಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲು ಹಾಕುವ ಸದಸ್ಯರಿಗೆ ದಿನಾಂಕ 1-2-2011 ರಿಂದ ಅನ್ವಯವಾಗುವಂತೆ ಪ್ರತೀ ಲೀಟರಿಗೆ 50 ಪೈಸೆಯನ್ನು ಪ್ರೋತ್ಸಾಹ ಧನವನ್ನಾಗಿ ನೀಡಲು ನಿರ್ಧರಿಸಲಾಗಿದೆ. ಈ ಹೆಚ್ಚಳವು ದಿನಾಂಕ 31-3-11 ರ ವರೆಗೆ ಅನ್ವಯವಾಗುತ್ತದೆ.ಉಭಯ ಜಿಲ್ಲೆಗಳ ಹಾಲು ಉತ್ಪಾದಕರಿಗೆ ಪ್ರೋತ್ಸಾಹನೀಡುವ ನಿಟ್ಟಿನಲ್ಲಿ ಈ ಹಿಂದೆ 1-12-10 ರಿಂದ ಹೆಚ್ಚಿಸಿದ 50 ಪೈಸೆ ಪ್ರೋತ್ಸಾಹ ಧನ ಸೇರಿದಂತೆ ಒಟ್ಟಾರೆ ರೂ.1.00 ನ್ನು ಪ್ರೋತ್ಸಾಹಧನವಾಗಿ ನೀಡಿದಂತಾಗುವುದರಿಂದ ಈಗಿರುವ ಕನಿಷ್ಠ ಹಾಲು ಖರೀದಿ ಬೆಲೆಯು ರೂ.17.50 ಕ್ಕೆ ಹೆಚ್ಚಿದಂತಾಗುತ್ತದೆ. ಒಕ್ಕೂಟದ ಆಡಳಿತ ಮಂಡಳಿಯ ಈ ತೀರ್ಮಾಣ ನದ ಪೂರ್ಣ ಪ್ರಯೋಜನವನ್ನು ಪಡೆದು ಉಭಯ ಜಿಲ್ಲೆಗಳ ರೈತರು ಉತ್ತಮ ಗುಣಮಟ್ಟದ ಅಧಿಕ ಹಾಲನ್ನು ಉತ್ಪಾದಿಸಿ ತಮ್ಮ ಸಂಘಗಳ ಮೂಲಕ ಒಕ್ಕೂಟಕ್ಕೆ ಒದಗಿಸುವಂತೆ ಒಕ್ಕೂಟದ ಅದ್ಯಕ್ಷರು ವಿನಂತಿಸಿದ್ದಾರೆ.

Sunday, January 30, 2011

ತಂತ್ರಜ್ಞಾನದ ನೆರವಿನಿಂದ ಭತ್ತದ ಕೃಷಿಯತ್ತ ಮುಖ ಮಾಡಿದ ಆರಿಗರು

ಮಂಗಳೂರು, ಜನವರಿ.30:ಕಾರ್ಮಿಕರ ಕೊರತೆಯಿಂದ ಬೇಸತ್ತು ಭತ್ತದ ಕೃಷಿಯಿಂದ ವಿಮುಖರಾದ ರೈತರಿಗೆ ಖುಷಿ ಕೊಡುವ ಸುದ್ದಿಯಿದು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ನಡಾ ಗ್ರಾಮಪಂಚಾಯಿತಿಯ ಒಳಬೈಲಿನ ಅಜಿತ್ ಕುಮಾರ್ ಆರಿಗರ ಮನೆಯಿರುವುದು ಇತಿಹಾಸ ಪ್ರಸಿದ್ದ ಜಮಲಾಬಾದ್ ಕೋಟೆಯ ಬುಡದಲ್ಲಿ.
ಕೃಷಿಯೇ ಇವರ ಕು ಟುಂಬ ದ ಮೂಲ ಆಧಾರ; ಆದರೆ ಇತ್ತೀ ಚೆಗೆ ಕೃಷಿ ಕಾರ್ಮಿ ಕರ ಕೊರತೆ ಯಿಂದಾ ಗಿ ಭತ್ತದ ಕೃಷಿ ಯನ್ನೇ ನಿಲ್ಲಿ ಸಿದ ಆರಿಗ ಅವರು ಬೆಳ್ತಂ ಗಡಿಯ ಜಿಲ್ಲಾ ಕೃಷಿ ತರ ಬೇತಿ ಕೇಂದ್ರದ ಪ್ರೋತ್ಸಾಹ ದಿಂದಾಗಿ ಇದೀಗ ಮತ್ತೆ ಭತ್ತದ ಕೃಷಿ ಮಾಡಿ ಯಶಸ್ಸು ಸಾಧಿಸಿ ದ್ದಾರೆ. ಶೇಕಡ 80 ರಷ್ಟು ಯಾಂತ್ರೀಕೃತ ಕೃಷಿಯ ಪ್ರಯೋ ಜನ ಪಡೆದಿ ರುವ ಇವರು 2.5 ಎಕರೆ ವ್ಯಾಪ್ತಿ ಯಲ್ಲಿ ಬೀಜೋತ್ಪಾ ದನಾ ಕೇಂದ್ರ ದಿಂದ ನೀಡಿದ ಜಯ ಮತ್ತು ರಾಶಿ ಭತ್ತ ಬೆಳೆ ದಿದ್ದಾರೆ.ಇದ ರಿಂದ 50 ದಿನ ಗಳ ಕಾಲ 25 ಜನರು ಮಾಡ ಬೇಕಾದ ಕೃಷಿ ಕೆಲಸ ಒಂದು ದಿನ ದಲ್ಲಾ ಗಿದೆ. ಕೃಷಿ ತರ ಬೇತಿ ಕೇಂದ್ರ ನೀಡಿದ ನಾಟಿ ಯಂತ್ರ ದಿಂದ 6 ಲೀಟರ್ ಡಿಸಿಲ್ ಬಳಸಿ 2 ಜನ ಕಾರ್ಮಿ ಕರ ನೆರವಿ ನಿಂದ ತನ್ನ ಹೊಲ ದಲ್ಲಿ ಭತ್ತದ ಕೃಷಿ ಮಾಡಿ ದ್ದಾರೆ. ಜಿಲ್ಲಾ ಕೃಷಿ ತರ ಬೇತಿ ಕೇಂದ್ರ ರೈತ ರಿಗೆ ನೆರವು ನೀಡು ತ್ತಿದ್ದು ನಬಾರ್ಡ್ ಸಹ ಇಲ್ಲಿನ ರೈತ ರಿಗೆ ಉಚಿತ ಮಾಹಿತಿ, ತರ ಬೇತಿ ಯೋಜನೆ ಯು ಹಮ್ಮಿಕೊಳ್ಳಲು ಮುಂದೆ ಬಂದಿದೆ ಎಂದು ಆರಿಗರು ಹೇಳುತ್ತಾರೆ. ವೈಜ್ಞಾನಿಕತೆಯ ನೆರವು ಹಾಗೂ ಉತ್ತಮ ತರಬೇತಿಯೊಂದಿಗೆ ಭತ್ತದ ಕೃಷಿಯಲ್ಲಿ ಯಶಸ್ವಿಯಾಗಬಹುದು. ಕೃಷಿ ಕಾರ್ಮಿಕರ ಕೊರತೆಯಿಂದ ಭತ್ತದ ಗದ್ದೆ ನಾಶವಾಗಿ ಅಡಿಕೆ ಕೃಷಿಯತ್ತ ಒಲವು ಮೂಡಿತು, ಈಗ ರಬ್ಬರ ಕೃಷಿಯ ಸರದಿ. ಜಮಲಾಬಾದ್ ಕೋಟೆಯ ಮೇಲೆ ನಿಂತು ನೋಡಿದರೆ ರಬ್ಬರ್ ಕೃಷಿಯ ವ್ಯಾಪಕತೆ ಅರಿವು ಕಾಣುತ್ತದೆ. ಬೆಳ್ತಂ ಗಡಿ ಜಿಲ್ಲಾ ಕೃಷಿ ತರ ಬೇತಿ ಕೇಂದ್ರದ ಉಪ ನಿರ್ದೇ ಶಕ ರಾದ ಜಿ.ಟಿ ಪುತ್ತ ಅವರ ಮಾರ್ಗ ದರ್ಶನ ದಿಂದ ಭತ್ತದ ಕೃಷಿ ಯತ್ತ ಬೆಳ್ತಂ ಗಡಿ, ಬಂಟ್ವಾ ಳದ ರೈತರು ಮುಖ ಮಾಡಿ ದ್ದಾರೆ. ಒಟ್ಟು ಹನ್ನೆ ರಡು ಎಕರೆ ಪ್ರದೇಶದಲ್ಲಿ ನೇಂದ್ರ ಬಾಳೆ, ತೆಂಗು, ರಬ್ಬರ್, ಕಂಗಿನ ಗಿಡಗಳಿವೆ. ತರಕಾರಿಯಲ್ಲಿ ಹೆಚ್ಚಿನ ಲಾಭವಿದೆ ಎನ್ನುವ ಆರಿಗರು ಹಸುಗಳನ್ನು ಹೈನುಗಾರಿಕೆಗಿಂತ ಮುಖ್ಯವಾಗಿ ಗೊಬ್ಬರಕ್ಕೆ ಬಳಸಬಹುದಾಗಿದೆ. ಎರಡು ಹಸುಗಳು ದಿನಕ್ಕೆ 12 ಲೀಟರ್ ಹಾಲು ನೀಡುತ್ತಿದೆ. ತರಕಾರಿ ಬೆಳೆದರೆ ನೇರವಾಗಿ ಅದಕ್ಕೆ ಮಾರುಕಟ್ಟೆಯನ್ನು ರೈತರು ಹುಡುಕಿಕೊಂಡರೆ ಉತ್ತಮ ಆದಾಯ ಎಂದರು. ತೊಂಡೆಕಾಯಿ, ಬದನೆ, ಕುಂಬಳ, ಸೌತೆ, ಅಲಸಂಡೆಯ ಜೊತೆಗೆ ಭತ್ತ ಇಲ್ಲದ ಸಂದರ್ಭದಲ್ಲಿ ಉದ್ದು, ಎಳ್ಳು, ಸೆಣಬು ಬಿತ್ತನೆಯಿಂದ ಲಾಭವಿದೆ ಎನ್ನುತ್ತಾರೆ ಅರಿಗರು. ಇಂತಹ ಕೃಷಿಯಿಂದ ವೈಭವೋಪೇತ ಜೀವನ ಸಾಧ್ಯವಿಲ್ಲದಿದ್ದರೂ, ನೆಮ್ಮದಿಯ ಜೀವನಕ್ಕೆ ಮೋಸವಿಲ್ಲ ಎಂಬುದು ಅರಿಗರ ವಾದ.

Saturday, January 29, 2011

ಪಶುಸಂಗೋಪನಾ ಇಲಾಖೆಯಿಂದ 70 ಸಾವಿರ ಕುಟುಂಬಗಳಿಗೆ ಶೇಕಡಾ 6ರ ಬಡ್ಡಿ ದರದಲ್ಲಿ ಸಾಲ ವಿತರಣೆ

ಮಂಗಳೂರು, ಜನವರಿ.29: ರಾಜ್ಯ ಸರಕಾರ ರೈತರಿಗೋಸ್ಕರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಪಶುಸಂಗೋಪನಾ ಇಲಾಖಾ ವತಿಯಿಂದ ಪ್ರಸಕ್ತ ಸಾಲಿನಲ್ಲಿ 70 ಸಾವಿರ ಕುಟುಂಬಗಳಿಗೆ ಶೇಕಡಾ 6ರ ಬಡ್ಡಿ ದರದಲ್ಲಿ ಸಾಲ ವಿತರಿಸುವ ಯೋಜನೆಯಲ್ಲಿ 2 ಎಮ್ಮೆ ಹಾಗೂ 2 ಆಕಳನ್ನು ನೀಡುವ ಕಾರ್ಯಕ್ರಮ, ಕುರಿ ಸಾಕಾಣೆದಾರರಿಗೆ ಕುರಿಗಳನ್ನು ಖರೀದಿಸಲು ನೆರವು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಶುಸಂಗೋಪನೆ, ಸಮೂಹ ಶಿಕ್ಷಣ, ಸಾರ್ವಜನಿಕ ಗ್ರಂಥಾಲಯ ಸಚಿವರಾದ ಶ್ರೀ ರೇವು ನಾಯಕ್ ಬೆಳಮಗಿ ಅವರು ತಿಳಿಸಿದರು.
ಅವರಿಂದ ಪುತ್ತೂರಿನ ಕ್ಯೊಲದ ಜಾನುವಾರು ಸಂವರ್ಧನಾ ಕೇಂದ್ರದಲ್ಲಿ ಮೈಸೂರು ವಿಭಾಗಮಟ್ಟದ ರೈತರ ಸಮಾವೇಶ ಮತ್ತು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡುತ್ತಿದ್ದರು. ಪಶುಗಳ ಆರೋಗ್ಯ ವರ್ಧನೆಗೆ ಪಶು ಆರೋಗ್ಯ ಕೇಂದ್ರಗಳನ್ನು ತೆರೆಯಲಾಗಿದ್ದು, ಸಿಬ್ಬಂದಿಗಳ ಕೊರತೆಯಿದೆ ಎನ್ನುವುದನ್ನು ಸಮ್ಮತಿಸಿದರು.ಇಲಾಖೆಯಲ್ಲಿ 777 ಸಿಬ್ಬಂದಿಗಳ ಕೊರತೆಯಿದ್ದು, ಹುದ್ದೆ ಭರ್ತಿಗೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದ ಅವರು ತಿಳಿಸಿದರು. ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಆಶಾ ತಿಮ್ಮಪ್ಪ ಗೌಡ, ಬಾಲಕೃಷ್ಣ ಸುವರ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಅಬ್ಬಕ್ಕ ಉತ್ಸವಕ್ಕೆ ಪ್ರತಿವರ್ಷ ಅನುದಾನ: ಡಾ.ವಿ.ಎಸ್. ಆಚಾರ್ಯ

ಮಂಗಳೂರು,ಜನವರಿ.29:ಐತಿಹಾಸಿಕ ಉಳ್ಳಾಲದ ರಾಣಿ ಅಬ್ಬಕ್ಕನ ಹೆಸರಿನಲ್ಲಿ ನಡೆಯುವ ಉತ್ಸವಕ್ಕೆ ಪ್ರತಿವರ್ಷ ಅನುದಾನ ನೀಡುವುದರೊಂದಿಗೆ ಶಾಶ್ವತ ವ್ಯವಸ್ಥೆಗೆ ಸರಕಾರ ಸಹಾಯ ನೀಡಲಿದೆ. ಈ ಬಗ್ಗೆ ಮುಂಗಡ ಪತ್ರದಲ್ಲೇ ಅನುದಾನ ಕಾದಿರಿಸಲಾಗುವುದು ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವರಾದ ಡಾ.ವಿ.ಎಸ್. ಆಚಾರ್ಯ ತಿಳಿಸಿದರು.ಅವರು ಇಂದು ಅಸೈಗೋಳಿ ಮೈದಾನದಲ್ಲಿ ಕನ್ನಡ ಸಂಸ್ಕೃತಿ ಮತ್ತು ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯಿಂದ ಎರಡು ದಿನಗಳ ಕಾಲ ಹಮ್ಮಿಕೊಂಡ ವೀರರಾಣಿ ಅಬ್ಬಕ್ಕ ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ವರ್ಷ ಅಬ್ಬಕ್ಕ ಉತ್ಸ ವಕ್ಕೆ ಸರಕಾ ರದಿಂದ ಅನು ದಾನ ನೀಡ ಲಾಗಿದೆ. ಮುಂದಿನ ವರ್ಷ ದಿಂದ ಮುಂಗಡ ಪತ್ರ ದಲ್ಲಿ ಹಣ ಕಾದಿರಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯ ಮೂಲಕ ಉತ್ತಮ ರೀತಿ ಯಲ್ಲಿ ಅಬ್ಬಕ್ಕ ಉತ್ಸವ ಆಚರಿ ಸಲು ಅನು ದಾನ ಮತ್ತು ಶಾಶ್ವತ ವ್ಯವಸ್ಥೆಗೆ ಸಹಕ ರಿಸಲು ಸರಕಾರ ಬದ್ಧ ವಾಗಿದೆ ಎಂದು ಸಚಿವ ಡಾ.ವಿ.ಎಸ್. ಆಚಾರ್ಯ ತಿಳಿಸಿದರು.ಕಳೆದ ನಾಲ್ಕು ವರ್ಷಗಳ ಹಿಂದೆ ಕನ್ನಡ ಸಂಸ್ಕೃತಿ ಇಲಾಖೆಗೆ ಸರಕಾರದಿಂದ 10 ರಿಂದ 15 ಕೋಟಿ ರೂ. ಅನುದಾನ ನೀಡಲಾಗುತ್ತಿತ್ತು. ಪ್ರಸಕ್ತ ರಾಜ್ಯ ಸರಕಾರ ಕನ್ನಡ ಸಂಸ್ಕೃತಿ ಇಲಾಖೆಯ ಬಜೆಟ್ 200 ಕೋಟಿರೂ. ಭಾಷೆ, ಸಂಸ್ಕೃತಿ, ಕಲೆ, ಸಾಹಿತ್ಯ, ಧರ್ಮದ ಅಭಿವೃದ್ಧಿಗೆ ಸರಕಾರದ ಪ್ರೋತ್ಸಾಹ ದೊರೆಯಬೇಕು ಎಂದು ಜನರು ನಿರೀಕ್ಷಿಸುತ್ತಾರೆ. ಆ ಪ್ರಕಾರ ಸರಕಾರ ಎಲ್ಲ ಜಿಲ್ಲೆಗಳ ಉತ್ಸವಗಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಸಚಿವರು ತಿಳಿಸಿದರು.
ಅಬ್ಬಕ್ಕ ಉತ್ಸವದ ಹೆಸರಿನಲ್ಲಿ ಜಾಗೃತಿ:ರಾಣಿ ಅಬ್ಬಕ್ಕನ ಹೆಸರಿನಲ್ಲಿ ಉಳ್ಳಾಲದಲ್ಲಿ ಈ ಉತ್ಸವವನ್ನು ಆಚರಿಸುವ ಹಿನ್ನೆಲೆಯಲ್ಲಿ ಅಬ್ಬಕ್ಕನ ಕಾಲದ ಮಹಿಳೆಯ ಧೈರ್ಯ, ಶೌರ್ಯ, ಕೋಮು ಸೌಹಾರ್ದತೆ, ರಾಷ್ಟ್ರ ಪ್ರೇಮ ಇಂದಿನ ಜನರಿಗೆ ಮತ್ತೆ ನೆನಪಿಸಿ ಅವರನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಸ್ಥಳೀಯರ ಪ್ರಯತ್ನ ಶ್ಲಾಘನೀಯ.ಇಂತಹ ಕಾರ್ಯಕ್ಕೆ ಸರಕಾರದ ಸಹಾಯ ಅಗತ್ಯ. ಈ ಹಿಂದಿನ ಅಬ್ಬಕ್ಕ ಉತ್ಸವ ಜನರ ದೇಣಿಗೆಯಿಂದ ನಡೆದಿದೆ. ಅದಕ್ಕಾಗಿ ಜನತೆಗೆ ಕೃತಜ್ಞತೆ ಸಲ್ಲಿಸುವುದಾಗಿ ಉತ್ಸವ ಸಮಿತಿಯ ಗೌರವಾಧ್ಯಕ್ಷ ಶಾಸಕ ಯು.ಟಿ.ಖಾದರ್ ತಿಳಿಸಿದರು.ಅಬ್ಬಕ್ಕ ಉತ್ಸವದ ಸಭಾ ಕಾರ್ಯಕ್ರಮವನ್ನು ಮಂಗಳೂರಿನ ಮೇಯರ್ ರಜನಿ ದುಗ್ಗಣ್ಣ, ಉದ್ಘಾಟಿಸಿ ವಿದ್ಯಾರ್ಥಿಗಳಲ್ಲಿ ಅಬ್ಬಕ್ಕನ ಬಗ್ಗೆ ತಿಳಿಸುವ ಕೆಲಸ ಈ ಉತ್ಸವದ ಸಂದರ್ಭದಲ್ಲಿ ಮಾಡಬೇಕು. ಅಬ್ಬಕ್ಕನ ದೇಶ ಪ್ರೇಮ ನಮಗೆ ಮಾದರಿಯಾಗಬೇಕು ಎಂದರು.
ಓಲೆ.. ಕೊರ್ಡ್ ಲೆತ್ತೆರ್.. ಬತ್ತೆ...
ಸಾಂಸ್ಕೃ ತಿಕ ಕಾರ್ಯ ಕ್ರಮ ಗಳನ್ನು ಉದ್ಘಾ ಟಿಸಿದ ಜಾನ ಪದ ಕಲಾ ವಿದೆ ಕರ್ಗಿ ಶೆಡ್ತಿ ಮಾತ ನಾಡು ತ್ತಾ ಬೆಳ್ತಂ ಗಡಿ ಅಜಿಲ ಸೀಮೆದ ಹಕ್ಕ್ದ ಲೆಕ್ಕನೆ ಓಲೆ ಕೊರ್ದ್ ಲೆತ್ತೆರ್, ಬತ್ತೆ... ಕನ್ನಡೊಡು ಪಾತೆರಿಯರೆ ತೆರಿಯಂದ್... ತುಳು ಪಾತೆರುನಾತ್ ಗೊತ್ತಿಜ್ಜಿ ಎನ್ನುತ್ತಾ ತಮಗೆ ತಿಳಿದ ಸಿರಿಯ ಪಾಡ್ದನವನ್ನು ಹಾಡಿದರು.ಸಮಾರಂಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗರಾಜ ಶೆಟ್ಟಿ, ಕರ್ನಾಟಕ ಬಾಲಭವನ ಸೊಸೈಟಿ ಅದ್ಯಕ್ಷೆ ಸುಲೋಚನಾ ಜಿ.ಕೆ. ಭಟ್, ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಕುಂಬ್ಳೆ ಸುಂದರ ರಾವ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಬಿ. ಮಾಧವ ಭಂಡಾರಿ, ಮೀನುಗಾರಿಕಾ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಮೀನುಗಾರಿಕಾ ಇಲಾಖಾ ಉಪ ನಿರ್ದೇಶಕ ಸುರೇಶ್ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಉಪನಿರ್ದೇಶಕಿ ಶಕುಂತಳಾ, ಜಿ.ಪಂ. ಸದಸ್ಯ ಎನ್.ಎಸ್. ಕರೀಂ, ತಾಲೂಕು ಪಂಚಾಯತ್ ಸದಸ್ಯ ಸುರೇಶ್, ಕೋಣಾಜೆ ಗ್ರಾ.ಪಂ. ಉಪಾಧ್ಯಕ್ಷ ರಾಜಾರಾಂ ರೈ, ಉತ್ಸವ ಸಮಿತಿಯ ಅಧ್ಯಕ್ಷ ಜಯರಾಮ ಶೆಟ್ಟಿ, ಸದಸ್ಯರಾದ ಹೈದರ್ ಪರ್ತಿಪ್ಪಾಡಿ, ಡಾ. ವಾಮನ ನಂದಾವರ, ಸದಾನಂದ ಬಂಗೇರ, ಆನಂದ ಅಸೈಗೋಳಿ, ಕೆಎಸ್ ಆರ್ ಪಿ ಕಮಾಂಡೆಂಟ್ ರಾಮದಾಸ ಗೌಡ, ಚಿತ್ರನಟ ಸುರೇಶ್ ಮಂಗಳೂರು ಮತ್ತಿತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಕಾರ್ಯಾಧ್ಯಕ್ಷ ದಿನಕರ ಉಳ್ಳಾಲ್ ಸ್ವಾಗತಿಸಿದರು.ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮ ನಿರೂಪಿಸಿದರು.
ಆಕರ್ಷಕ ಜಾನಪದ ದಿಬ್ಬಣ:
ಸಮಾರಂಭಕ್ಕೂ ಮುನ್ನ ದೇರಳಕಟ್ಟೆಯಿಂದ ಅಸೈಗೋಳಿಯವರೆಗೆ ಅಬ್ಬಕ್ಕ ಉತ್ಸವದ ಅಂಗವಾಗಿ ಜಾನಪದ ದಿಬ್ಬಣ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಅಬ್ಬಕ್ಕನ ವೇಷ ಧರಿಸಿದ ಕುದುರೆ ಸವಾರ ಜನರ ಗಮನ ಸೆಳೆದ. ಕೀಲು ಕುದುರೆ, ಯಕ್ಷಗಾನ ಗೊಂಬೆ, ಸಾಗರದ ಹೆಗ್ಗೋಡಿನ ಮಹಿಳಾ ತಂಡದ ಡೊಳ್ಳು ಕುಣಿತ, ಬೆರಿಪದವು ತಂಡದ ತಾಲೀಮು ನೃತ್ಯ, ದಫ್ ತಂಡ, ಸೃಷ್ಟಿ ಕೀಲು ಕುದುರೆ ತಂಡದ ಆಕರ್ಷಕ ಬೊಂಬೆಗಳು ಜಾನಪದ ದಿಬ್ಬಣದ ಆಕರ್ಷಣೆಯಾಗಿತ್ತು. ಶಾಸಕ ಯು.ಟಿ.ಖಾದರ್ ದೇರಳಕಟ್ಟೆಯಲ್ಲಿ ಮೆರವಣಿಗೆಯನ್ನು ಉದ್ಘಾಟಿಸಿದರು.

ಸಮಗ್ರ ಕೃಷಿಯಿಂದ ಖುಷಿ - ಪ್ರಗತಿ ಪರ ಕೃಷಿಕ ಪ್ರಭಾಕರ ಮಯ್ಯ

ಮಂಗಳೂರು, ಜನವರಿ.29: ವೈಜ್ಞಾನಿಕ ಮಾಹಿತಿಯನ್ನು ಕೃಷಿಯಲ್ಲಿ ಅಳವಡಿಸಿಕೊಂಡು ದುಡಿದರೆ ಕೃಷಿಯಿಂದ ಸಿಗುವ ಖುಷಿ ಇನ್ನಾವುದೇ ಉದ್ಯೋಗದಿಂದಲೂ ದೊರೆಯುವುದಿಲ್ಲ ಎಂಬುದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಡ ಗ್ರಾಮಪಂಚಾಯಿತಿ ಸುರಿಯಾದ ಪ್ರಗತಿಪರ ಕೃಷಿಕ ಪ್ರಭಾಕರ ಮಯ್ಯ ಅವರ ಸ್ಪಷ್ಟ ಅಭಿಪ್ರಾಯ.

ಮಯ್ಯ ಅವರು ಶಿಕ್ಷಕ ಕೆಲಸವನ್ನು ಬಿಟ್ಟು ಕೃಷಿಯನ್ನು ಆರಂಭಿಸಿದ್ದು 5 ಕೆ. ಜಿ. ಶುಂಠಿ ಹಾಗೂ ಸ್ವಲ್ಪ ಸುವರ್ಣಗೆಡ್ಡೆ ಯೊಂದಿಗೆ.ಮುಂದೆ ಈ ಕೃಷಿಯಿಂದ ದೊರೆತ ಹಣದೊಂದಿಗೆ 6 ಎಕರೆ ಜಮೀನಿಗೆ ನೀರುಣಿಸಲು ನೀರಾವರಿಗಾಗಿ ಬೋರ್ ವೆಲ್ ತೆಗೆದಾಗ ಉತ್ತಮ ನೀರು ದೊರೆಯಿತು. ಬಳಿಕ ಪ್ರತೀ ವರ್ಷ ಸರಾಸರಿ 300 ರಿಂದ 350 ಅಡಿಕೆ ಸಸಿಗಳನ್ನು ನೆಡಲು ಆರಂಭಿಸಿ, ಈಗ ಅವರ ತೋಟದಲ್ಲಿ ಒಟ್ಟು 1700 ಅಡಿಕೆ ಮರಗಳಿದ್ದು ಫಲ ಕೊಡುತ್ತಿವೆ.ಮಯ್ಯ ಅವರ ತೋಟದಲ್ಲಿ ಒಂದು ಸುತ್ತು ಪ್ರದಕ್ಷಿಣೆ ಹಾಕಿದರೆ ಅಗತ್ಯ ಅನ್ವೇಷಣೆಯ ತಾಯಿಯಂತೆ; ಇದರ ಸಾಕ್ಷಾತ್ಕಾರ ನಮಗಾಗುತ್ತದೆ. ಪ್ರತ್ಯಕ್ಷ ಸಾಕ್ಷಾತ್ಕಾರಗಳು ತೋಟದಲ್ಲಾಗುವುದರಿಂದ ಕೃಷಿ ಇಲಾಖೆಯು ಇವರ ತೋಟವನ್ನೇ ಹಲವು ರೈತರಿಗೆ ತರಬೇತಿ ನೀಡಲು, ಪ್ರಾತ್ಯಕ್ಷಿಕೆ ನೀಡಲು ಬಳಸಿಕೊಂಡಿದೆ. ಉತ್ತಮ ಕೃಷಿಕರಾಗಿರುವ ಇವರಿಗೆ ಶಿಕ್ಷಕ ವೃತ್ತಿಯ ಹಿನ್ನಲೆಯೂ ಇರುವುದರಿಂದ ಇವರು ಸಂಪನ್ಮೂಲ ವ್ಯಕ್ತಿಯೂ ಹೌದು.ಗ್ರಾಮೀಣ ಪ್ರದೇಶ ಗಳಲ್ಲೂ ಕೃಷಿ ಕೂಲಿ ಕಾರರು ಅಲಭ್ಯ ವಾಗಿ ರುವ ಇಂದಿನ ದಿನ ಗಳಲ್ಲಿ ಕಾರ್ಮಿಕ ರನ್ನು ಅವ ಲಂಬಿ ಸದೆಯೂ ಯಶಸ್ವಿ ಕೃಷಿಕ ರಾಗಲು ಸಾಧ್ಯ ಎನ್ನುವ ಮಯ್ಯ ಅವರು, ಅಡಿಕೆ ಕೃಷಿ ಯನ್ನು ಹೀಗೆ ವಿವರಿಸುತ್ತಾರೆ - ಹಲವೆಡೆಗಳಲ್ಲಿ ಕಾಂಟಾರ ಮಾದರಿ ಕೃಷಿಯನ್ನು ನೋಡಿರುವ ಇವರು, ತಮ್ಮ ಜಮೀನಿನಲ್ಲಿ ಅಡಿಕೆ ತೋಟದಲ್ಲಿ ಟ್ರಂಚ್ ಮಾದರಿಯನ್ನು ಅವಲಂಬಿಸಿದ್ದಾರೆ. ಈ ಮಾದರಿಯಿಂದ ನೀರಿಂಗಿಸುವಿಕೆ,ಗೊಬ್ಬರ ಹಾಕುವುದು ಸುಲಭ. ಪ್ರತೀ ವರ್ಷ ಗಿಡದ ಬುಡ ಬಿಡಿಸಬೇಕು ಎಂಬ ಕಲ್ಪನೆಯೇ ತಪ್ಪು. ಈ ಬುಡಬಿಡಿಸುವ ಕೆಲಸಕ್ಕೆ ಕಾರ್ಮಿಕರ ಅಗತ್ಯವೂ ಜಾಸ್ತಿ. ಟ್ರಂಚ್ ಮಾದರಿಯಿಂದ ಇಂತಹ ಬಹುತೇಕ ಸಮಸ್ಯೆಗಳಿಗೆ ಇಲ್ಲಿ ಉತ್ತರ ದೊರೆಯುತ್ತದೆ.
ಕೃಷಿಕರು ಮೊದಲು ಯೋಜನೆ ರೂಪಿಸಬೇಕು; ಬಳಿಕ ಅದನ್ನು ವ್ಯವಸ್ಥಿತವಾಗಿ ಕಾರ್ಯಗತಗೊಳಿಸಬೇಕು. ಮಾಧ್ಯಮಗಳಲ್ಲಿ ಬರುವ ಮಾಹಿತಿ, ವಿಜ್ಞಾನಿಗಳ ಸಲಹೆ, ಸ್ಥಳೀಯ ಕೃಷಿ ಅಧಿಕಾರಿಗಳ ಸಹಕಾರವನ್ನು ಪಡೆಯಬೇಕು. ಕೃಷಿಯಿಂದ ಸಂತೃಪ್ತ ಬದುಕು ಸಾಗಿಸಲು ಸಾಧ್ಯ; ಆದರೆ ಒಂದೇ ಬೆಳೆಯನ್ನು ಬೇಳೆಯುವ ಬದಲು ಮಿಶ್ರ ಬೆಳೆಗೆ ಹೆಚ್ಚಿನ ಆದ್ಯತೆ ಕೊಡಬೇಕು.ಒಂದೇ ಬೆಳೆಯಿಂದ ಕಷ್ಟವಾಗದಿದ್ದರೂ ಅನಿಶ್ಚಿತ ಮಾರುಕಟ್ಟೆಯಿಂದ ಕೃಷಿಕರು ಸಮಸ್ಯೆ ಎದುರಿಸುತ್ತಾರೆ.ದೈ ನಂದಿನ ಖರ್ಚಿಗೆ ಹೈನು ಗಾರಿಕೆ, ವಾರದ ಖರ್ಚಿಗೆ ತರ ಕಾರಿ, ವೀಳ್ಯ ದೆಲೆ, ತಿಂ ಗಳ ಖರ್ಚಿಗೆ ತೆಂಗಿನ ಫಲ, ವಾರ್ಷಿಕ ವರ ಮಾನ ಅಡಿಕೆ,ನಡುವೆ ಎರಡು ಭತ್ತದ ಬೆಳೆ ಗಳು. ಸಾಗು ವಾನಿ, ಮಾಗು ವಾನಿ, ಕೋಕೋ, ಕಾಳು ಮೆಣಸು ಬೆಳೆದು ಸಮಗ್ರ ಕೃಷಿ ಮಾಡಿ ದರೆ ಕೃಷಿ ಕನೂ ನೆಮ್ಮದಿ ಯಿಂದ ಬಾಳ ಬಹುದು.
ಕೃಷಿಕ ರಿಗೋ ಸ್ಕರ ಸರ್ಕಾರ ಹಲವು ಯೋಜನೆ ಗಳನ್ನು ಹಮ್ಮಿ ಕೊಂ ಡಿದ್ದು, ರೈತರು ನೇರ ವಾಗಿ ಈ ತರ ಹದ ಸೌಲಭ್ಯ ಗಳನ್ನು ಪಡೆದು ಕೊಳ್ಳ ಬೇಕು. ನಡ ಗ್ರಾಮ ಪಂಚಾ ಯಿತಿ ವ್ಯಾಪ್ತಿ ಯಲ್ಲಿ ಬೆಳ್ತಂ ಗಡಿ ಜಿಲ್ಲಾ ಕೃಷಿ ತರ ಬೇತಿ ಕೇಂದ್ರ ದ ನೆರವಿ ನಿಂದ ಕೃಷಿ ಇಲಾಖೆ ಅಧಿಕಾ ರಿಗಳ ನೆರವಿ ನಿಂದ ಆತ್ಮ ಯೋಜನೆ ಯನ್ನು ಅನುಷ್ಠಾ ನಕ್ಕೆ ತರಲಾ ಗುತ್ತಿದೆ. ಪ್ರಾತ್ಯ ಕ್ಷಿಕೆ ಮೂಲಕ ತರಗ ತಿಗ ಳನ್ನು ನಡೆಸ ಲಾಗು ತ್ತಿದೆ. ಇಲ್ಲಿನ ಗದ್ದೆ ಗಳೇ ಇಲ್ಲಿ ಆಸಕ್ತ ಕೃಷಿ ಕರಿಗೆ ಪಾಠ ಶಾಲೆ ಯಾಗಿದೆ. ಕೃಷಿ ಕಾರ್ಮಿ ಕರ ಅಗತ್ಯ ನಿವಾ ರಿಸಲು ನಾಟಿ ಯಂತ್ರ, ಕಟಾವು ಯಂತ್ರ ಸೇರಿ ದಂತೆ ಹಲವು ಕಡಿಮೆ ವೆಚ್ಚ ದಾಯಕ ಯಂತ್ರ ಗಳನ್ನು ಕೃಷಿ ಕರಿಗೆ ಪರಿಚ ಯಿಸ ಲಾಗು ತ್ತಿದೆ. ಈ ಎಲ್ಲಾ ಕಾರಣಗಳಿಂದ ಇಲ್ಲಿನ ಭತ್ತದ ಗದ್ದೆಗಳು ನಳನಳಿಸುತ್ತಿವೆ.

Friday, January 28, 2011

ಘನತ್ಯಾಜ್ಯ ವಿಲೇವಾರಿ ಸವಾಲು ಎದುರಿಸಲು ಎಲ್ಲರ ಸಹಕಾರ ಅಗತ್ಯ: ಶಾಸಕ ಅಭಯಚಂದ್ರಜೈನ್

ಮಂಗಳೂರು,ಜನವರಿ.28: ಜನಸಂಖ್ಯಾ ಸ್ಫೋಟದಿಂದ ಭೂಮಿ ವಿರಳವಾಗಿದೆ; ತ್ಯಾಜ್ಯ ಜಾಸ್ತಿಯಾಗಿದೆ. ಅಭಿವೃದ್ಧಿ ಹಾಗೂ ಸ್ವಚ್ಛತೆಗೆ ಘನತ್ಯಾಜ್ಯ ವಿಲೇವಾರಿ ಇಂದು ದೊಡ್ಡ ಸವಾಲಾಗಿದ್ದು ಅವರವರ ಕಸವನ್ನು ಅವರವರೇ ಶುಚಿಮಾಡಬೇಕು; ನಮ್ಮ ಸುತ್ತಲಿನ ಪರಿಸರ ಮನೆಯಂತೆ ಸ್ವಚ್ಛವಾಗಿರಬೇಕು ಎಂಬ ಜವಾಬ್ದಾರಿ ಪ್ರತಿಯೊಬ್ಬರಲ್ಲೂ ಮೂಡಿದರೆ ಮಾತ್ರ ತ್ಯಾಜ್ಯ ವಿಲೇವಾರಿ ಸಾಧ್ಯ ಎಂದು ಮೂಡಬಿದ್ರೆ ಶಾಸಕರಾದ ಅಭಯಚಂದ್ರ ಜೈನ್ ಹೇಳಿದರು.

ಅವರಿಂದು ವಾರ್ತಾ ಇಲಾಖೆ ಮಂಗ ಳೂರು, ವಿಜಯ ಕಾಲೇಜು ಮೂಲ್ಕಿ ಮತ್ತು ಮೂಲ್ಕಿ ಸುತ್ತ ಮುತ್ತಲ ಶಾಲೆಯ ಎನ್ ಎಸ್ ಎಸ್ ಮತ್ತು ಎನ್ ಸಿಸಿ ಘಟಕ ಗಳ ಸಂ ಯುಕ್ತ ಆಶ್ರಯ ದಲ್ಲಿ ಮುಲ್ಕಿ ವಿಜಯಾ ಕಾಲೇಜಿ ನಲ್ಲಿ ಏರ್ಪಡಿ ಸಲಾದ ಘನ ತ್ಯಾಜ್ಯ ವಿಲೇ ವಾರಿ ವಿಷಯದ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಎಳೆಯ ವಯಸ್ಸಿನಿಂದಲೇ ಪರಿಸರ, ಸ್ವಚ್ಛತೆಯ ಬಗ್ಗೆ ಮಕ್ಕಳು ಅರಿತರೆ ಅನುಷ್ಠಾನ ಸುಲಭ ಮಾತ್ರವಲ್ಲದೆ ಹೆತ್ತವರನ್ನು ಈ ಸಂಬಂಧ ಪ್ರೇರಿಪಿಸಲು ಸಾಧ್ಯ ಎಂದ ಅವರು ನುಡಿದರು. ಮುಲ್ಕಿ ನಗರಪಂಚಾಯಿತಿ ಈ ನಿಟ್ಟಿನಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕರ್ತವ್ಯನಿರ್ವಹಿಸಬೇಕೆಂದು ಅಭಯಚಂದ್ರ ಜೈನ್ ಹೇಳಿದರು.ಮುಖ್ಯ ಅತಿಥಿ ಗಳಾ ಗಿದ್ದ ಮಣಿ ಪಾಲ ಮೀಡಿಯಾ ನೆಟ್ ವಕ್ರ್ ನ ಸಹ ಉಪಾ ಧ್ಯಕ್ಷ ಕೆ. ಆನಂದ್ ಅವರು ಮಾತ ನಾಡಿ, ಕಸ ದಿಂದ ರಸ ಉತ್ಪಾ ದನೆ ಮಾಡಿದ ಹಲವು ಮಾದರಿ ಗಳು ಇಂದು ನಮ್ಮ ಮುಂ ದಿದ್ದು, ಇಂತಹ ಮಾದರಿ ಗಳ ಬಗ್ಗೆ ಅರಿವು ಪಡೆದು ಕೊಂಡು ಅನುಷ್ಠಾ ನಕ್ಕೆ ತರ ಬೇಕು. ಅರಿವು ಮೂಡಿಸು ವಲ್ಲಿ ನಮ್ಮ ವಿದ್ಯಾರ್ಥಿ ಗಳೇ ರಾಯ ಭಾರಿ ಗಳಾಗ ಬೇಕೆಂದರು.
ಇನ್ನೋರ್ವ ಅತಿಥಿಗಳಾದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಸರ್ವೋತ್ತಮ ಅಂಚನ್, ರಾಜ್ಯದ ಎಲ್ಲ ವಿದ್ಯಾರ್ಥಿಗಳು ಮುಲ್ಕಿಯ ವಿಜಯಾ ಕಾಲೇಜಿನಲ್ಲಿದ್ದು, ಸ್ವಚ್ಛತೆ ಹಾಗೂ ಘನತ್ಯಾಜ್ಯ ವಿಲೇವಾರಿ ಪಾಠ ರಾಜ್ಯಮಟ್ಟಕ್ಕೆ ತಲುಪಿದೆ ಎಂದರು.
ಅಧ್ಯಕ್ಷೀಯ ಭಾಷಣ ಮಾಡಿದ ವಿಜಯಾ ಕಾಲೇಜಿನ ಪ್ರೊ. ಎಸ್ ಅರವಿಂದ ಜೋಷಿ ಅವರು ಕಸ ನಿರ್ವಹಣೆಗಿಂತ ಕಸ ಉತ್ಪಾದನೆ ಕಡಿಮೆ ಮಾಡುವ ಬಗ್ಗೆ ಚಿಂತಿಸಲು ಇದು ಸೂಕ್ತ ಕಾಲ ಎಂದರು. ಪ್ಲಾಸ್ಟಿಕ್ ನಿಷೇಧ ಮಾಡುವ ಬಗ್ಗೆಯೂ ಚಿಂತಿಸುವ ಸಂದರ್ಭ ಇದು ಎಂದರು.
ವಿಚಾರಸಂಕಿರಣದಲ್ಲಿ ಉಪನ್ಯಾಸ ನೀಡಿದ ಮಹಾನಗರಪಾಲಿಕೆ ಸಹಾಯಕ ಆರೋಗ್ಯಾಧಿಕಾರಿಗಳಾದ ರಘುನಾಥ ಯು ಅವರು, ಹಸಿಕಸ, ಒಣ ಕಸ, ಅಪಾಯಕಾರಿ ಕಸಗಳನ್ನು ವಿಂಗಡಿಸುವ ಹಾಗೂ ಆರೋಗ್ಯಕ್ಕೆ ಹಾನಿಯುಂಟು ಮಾಡುವ ರೋಗಾಣುಗಳು ಉತ್ಪನ್ನ ಸ್ಥಳಗಳ ಬಗ್ಗೆ, ಭೂಮಿಯಲ್ಲಿ ಪ್ಲಾಸ್ಟಿಕ್ ನಿಂದಾಗಿರುವ ಹಾನಿಯ ಬಗ್ಗೆ ಪವರ್ ಪಾಯಿಂಟ್ ಪ್ರಸೆಂಟೇಷನ್ ಮೂಲಕ ಸವಿವರ ಮಾಹಿತಿ ನೀಡಿದರು. ವಾರ್ತಾಧಿಕಾರಿ ರೋಹಿಣಿ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ವಿಜಯ ಕಾಲೇಜಿನ ಅಧ್ಯಕ್ಷರಾದ ಡಾ.ಎಂ ಎ ಆರ್ ಕುಡ್ವ, ಎನ್ ಸಿ ಸಿ ಅಧಿಕಾರಿ ಎಚ್.ಜಿ.ನಾಗರಾಜ ನಾಯಕ್ ಉಪಸ್ಥಿತರಿದ್ದರು.ಪ್ರೊ. ಹಯವದನ ಉಪಾಧ್ಯಾಯ ವಂದಿಸಿದರು. ಉಪನ್ಯಾಸಕಿ ಅರುಣ ಕಾರ್ಯಕ್ರಮ ನಿರೂಪಿಸಿದರು.

Wednesday, January 26, 2011

ಮುಂದಿನ 2.5 ವರ್ಷದೊಳಗೆ ರಾಜ್ಯವಿದ್ಯುತ್ ಸ್ವಾವಲಂಬಿ: ಸಚಿವೆ ಶೋಭಾ ಕರಂದ್ಲಾಜೆ

ಮಂಗಳೂರು,ಜನವರಿ.26:ಕರ್ನಾಟಕ ರಾಜ್ಯ ಮುಂದಿನ ಎರಡೂವರೆ ವರ್ಷದೊಳಗೆ ವಿದ್ಯುತ್ ಸ್ವಾವಲಂಬಿಯಾಗಲಿದೆ ಎಂದು ರಾಜ್ಯ ಇಂಧನ ಸಚಿವರಾದ ಶೋಭಾ ಕರಂದ್ಲಾಜೆ ಹೇಳಿದರು.ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ವತಿಯಿಂದ ಮಂಗಳೂರು ನಗರದಲ್ಲಿ ಗುಣಮಟ್ಟದ ವಿದ್ಯುತ್ ಸರಬರಾಜಿಗಾಗಿ 33/ 11ಕೆವಿ ಕುದ್ರೋಳಿ ಮತ್ತು ನಂದಿಗುಡ್ಡ ವಿದ್ಯುತ್ ಉಪಕೇಂದ್ರಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಳ್ಳಾರಿ ಮತ್ತು ಉಡುಪಿ ಯಲ್ಲಿ 2012 ರ ಮೇ ಒಳಗೆ ಉಷ್ಣ ವಿದ್ಯುತ್ ಸ್ಥಾವರ ದ 2ನೇ ಘಟಕ ಪೂರ್ಣ ಗೊಳಿಸ ಲಾಗು ವುದು.ಉಷ್ಣ ಸ್ಥಾವರ ದ 2 ನೇ ಘಟಕ ಆರಂಭಿ ಸುವು ದರಿಂದ ಬಹು ತೇಕ ವಿದ್ಯುತ್ ಸಮಸ್ಯೆ ಪರಿಹಾರ ಸಾಧ್ಯ ವಿದೆ. ಜನತೆಗೆ ಗುಣಮಟ್ಟದ ವಿದ್ಯುತ್ ನೀಡಬೇಕೆಂಬುದು ಸರಕಾರದ ಧ್ಯೇಯ. ತಾನು ಇಂಧನ ಖಾತೆಯ ಅಧಿಕಾರ ವಹಿಸಿಕೊಂಡ ಬಳಿಕ ಕಳೆದ ಒಂದು ತಿಂಗಳಿನಿಂದ ಎಂಟು ಘಟಕಗಳಲ್ಲಿ 1,500 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಪ್ರತಿ ಘಟಕದಲ್ಲಿ 600 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಬೇಕೆಂಬುದು ಉದ್ದೇಶ. ಆದರೆ ಸದ್ಯ 500 ರಿಂದ 550 ಮೆ.ವ್ಯಾ. ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಈಗಾಗಲೇ ಮಂಗಳೂರಿನಲ್ಲಿದ್ದ 3 ಕೇಂದ್ರಗಳನ್ನು ವಿಸ್ತರಿಸಿ 7 ಕೇಂದ್ರಗಳನ್ನಾಗಿ ಮಾಡಲಾಗಿದೆ.ಮಂಗಳೂರಿನ ಬಿಜೈನಲ್ಲೂ ವಿದ್ಯುತ್ ಸ್ಟೇಶನ್ ಸ್ಥಾಪಿಸಲು ಒತ್ತು ನೀಡಲಾಗಿದೆ ಎಂದರು.
ಸಮಸ್ಯೆ ಪರಿಹಾ ರಕ್ಕಾಗಿ ವಿಶೇಷ ವಾಹನ:
ವಿದ್ಯುತ್ ಸಮಸ್ಯೆ ನೀಗಿ ಸಲು ದಿನದ 24 ಗಂಟೆ ಸೇವೆ ನಿರ್ವಹಿ ಸಲಿ ರುವ 58 ಗ್ರಾಹಕ ಸ್ನೇಹಿ ವಾಹನ ಗಳನ್ನು ಬೆಂಗ ಳೂರಿ ನಲ್ಲಿ ಈಗಾಗಲೇ ಸಾರ್ವಜನಿಕ ಸೇವೆಗೆ ಬಿಡುಗಡೆ ಮಾಡಲಾಗಿದೆ. ಈ ವ್ಯವಸ್ಥೆಯನ್ನು ರಾಜ್ಯದ ಗ್ರಾಮೀಣ ಭಾಗಕ್ಕೂ ವಿಸ್ತರಿಸಲಾಗುವುದು. ವಾಹನದಲ್ಲಿ ಒಬ್ಬ ಇಂಜಿನಿಯರ್ ಮತ್ತು 4 ಮಂದಿ ತಾಂತ್ರಿಕ ತಜ್ಞರು ಕಾರ್ಯನಿರ್ವಹಿಸುತಿದ್ದು, ಜನ ತಮ್ಮ ಊರಿನಲ್ಲಿ ವಿದ್ಯುತ್ ಅಡಚಣೆ ಉಂಟಾದಾಗ ಈ ವಿಶೇಷ ವಾಹನದ ಮೊರೆ ಹೋಗಿ ಸಹಾಯ ಪಡೆದುಕೊಳ್ಳಬಹುದು. ಹಳ್ಳಿಯ ಜನತೆಗೆ ಈ ವಾಹನ ಹೆಚ್ಚು ಉಪಯಕ್ತವಾಗಲಿದೆ ಎಂದ ಅವರು ರಾಜ್ಯದಲ್ಲಿನ ವಿದ್ಯುತ್ ಕೇಂದ್ರಗಳಲ್ಲಿನ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಮುಂದಿನ 10 ವರ್ಷಗಳಿಗೆ ಬೇಕಾಗುವಷ್ಟು ವಿದ್ಯುತ್ ಸಂಗ್ರಹದತ್ತ ಗಮನಹರಿಸಲಾಗಿದೆ ಎಂದು ಹೇಳಿದರು. ಸಮಾ ರಂಭ ದಲ್ಲಿ ಮುಖ್ಯ ಅತಿಥಿ ಯಾಗಿದ್ದ ಪಾ ಲ್ಗೊಂಡು ಮಾತ ನಾಡಿದ ಜಿಲ್ಲಾ ಉಸ್ತು ವಾರಿ ಸಚಿವ ಜೆ.ಕೃಷ್ಣ ಪಾಲೆ ಮಾರ್ ಅವರು ರಾಜ್ಯ ಸರ ಕಾರ ಮೂಲ ಭೂತ ಸೌಕರ್ಯ ಗಳಾದ ನೀರು, ರಸ್ತೆ ಮತ್ತು ನಿ ರಂತರ ಗುಣ ಮಟ್ಟದ ವಿದ್ಯುತ್ ಪೂರೈ ಕೆಗೆ ಒತ್ತು ನೀಡಿದೆ ಮತ್ತು ಮೆಸ್ಕಾಂ ಉತ್ತಮ ವಾಗಿ ಕೆಲಸ ನಿರ್ವಹಿ ಸುತ್ತಿದೆ ಎಂದು ಶ್ಲಾಘಿ ಸಿದರು. ವಿಧಾನ ಸಭೆಯ ಉಪ ಸಭಾ ಧ್ಯಕ್ಷ ಎನ್.ಯೋಗೀಶ್ ಭಟ್,ಶಾಸಕ ಯು.ಟಿ.ಖಾದರ್,ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಮಂಗಳೂರು ಮೇಯರ್ ರಜನಿ ದುಗ್ಗಣ್ಣ, ಉಪ ಮೇಯರ್ ರಾಜೇಂದ್ರ ಕುಮಾರ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ, ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್ ಮುಖ್ಯ ಅತಿಥಿಗಳಾಗಿದ್ದರು. ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಎಸ್.ಸುಮಂತ್ ಅವರು ಅಥಿತಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪೋಲಿಸ್ ಕಮಿಷನರೇಟಿಗೆ ನೂತನ ವಾಹನಗಳ ಹಸ್ತಾಂತರ

ಮಂಗಳೂರು,ಜನವರಿ.26:ಮಂಗಳೂರು ಪೋಲಿಸ್ ಕಮಿಷನರೇಟ್ ಗೆ
ರಾಜ್ಯ ಸರ್ಕಾರ ನೀಡಿದ ನೂತನ ವಾಹನ ಗಳ ಹಸ್ತಾಂ ತರ ಕಾರ್ಯ ಕ್ರಮ ಮಂಗಳೂ ರಿನಲ್ಲಿ ಇಂದು ನಡೆ ಯಿತು.ಜಲ್ಲಾ ಉಸ್ತುವಾರಿ ಸಚಿವ ರಾದ ಕೃಷ್ಣ ಜೆ. ಪಾಲೇ ಮಾರ್ ಅವರು 10 ಶವರ್ಲೆ ಕಾರು ಗಳು ಮತ್ತು 40 ದ್ವಿಚಕ್ರ ವಾಹನ ಗಳನ್ನು ಪೋಲಿಸ್ ಇಲಾಖೆಗೆ ಹಸ್ತಾಂ ತರಿಸಿ ದರು.ವಿಧಾನ ಸಭಾ ಉಪಾಧ್ಯ ಕ್ಷರಾದ ಎನ್.ಯೋಗಿಶ್ ಭಟ್,ವಿಧಾನ ಪರಿ ಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್,ಕರಾ ವಳಿ ಅಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಬಿ.ನಾಗ ರಾಜ ಶೆಟ್ಟಿ,ಪೋಲಿಸ್ ಆಯು ಕ್ತರಾದ ಸೀ ಮಂತ್ ಕುಮಾರ್ ಸಿಂಗ್,ಜಿಲ್ಲಾ ಎಸ್ಪಿ ಡಾ.ಸುಬ್ರಹ್ಮ ಣ್ಯೇಶ್ವರ ರಾವ್,ಮತ್ತಿ ತರ ಗಣ್ಯರು ಸಮಾ ರಂಭ ದಲ್ಲಿ ಪಾಲ್ಗೊಂ ಡಿದ್ದರು.

'ಸಮಾಜ ಮುಖಿ ಕರ್ತವ್ಯಗಳಲ್ಲಿ ತೊಡಗಿಸಿ'

ಮಂಗಳೂರು,ಜನವರಿ.26:ಸಮಾಜಮುಖಿ ಕರ್ತವ್ಯಗಳಲ್ಲಿ ನಿರತವಾದ ಸಂಘಟನೆಗಳು ತಮ್ಮ ಮಾದರಿ ಕಾರ್ಯಕ್ರಮಗಳಿಂದ ಸಮಾಜಕ್ಕೆ ಉತ್ತಮ ಮಾದರಿಗಳನ್ನು ನೀಡಬೇಕಿದೆ. ಇಂತಹ ಸಂಘಟನೆಗಳಲ್ಲಿ ಸಕ್ರಿಯವಾಗಿರುವ ಯುವಶಕ್ತಿಗೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರೇ ಸ್ಫೂರ್ತಿ ಎಂದು ವಿಧಾನಸಭೆ ಉಪ ಸಭಾಧ್ಯಕ್ಷರಾದ ಎನ್ ಯೋಗೀಶ್ ಭಟ್ ಹೇಳಿದರು.

ಅವರಿಂದು ಮಂಗ ಳೂರು ವಿಶ್ವ ವಿದ್ಯಾ ನಿಲಯ ಕಾಲೇಜು ಮಂಗ ಳೂರು ಇಲ್ಲಿನ ರ ವೀಂದ್ರ ಕಲಾ ಭವನ ದಲ್ಲಿ ಏರ್ಪಡಿ ಸಲಾದ ಜಿಲ್ಲಾ ಮಟ್ಟದ ಯುವ ಸಮಾ ವೇಶ ಮತ್ತು 2009-10ರ ಅತ್ಯುತ್ತಮ ಯುವ ಮಂಡಲ ಹಾಗೂ ಯುವ ಪ್ರಶಸ್ತಿ ವಿತರಣಾ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತಿದ್ದರು.ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿರುವ ಎನ್ ಎಸ್ ಎಸ್ ಘಟಕಗಳು ಪಾಲಿಕೆಯ 60 ವಿಭಾಗಗಳಲ್ಲಿ ಆರೋಗ್ಯ ಮತ್ತು ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವಂತಹ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು. ರಕ್ತದಾನದಂತಹ ಕಾರ್ಯಕ್ರಮಗಳು ಹಲವರಿಗೆ ಬದುಕು ನೀಡುತ್ತದೆ; ಶಿಕ್ಷಣದಲ್ಲಿ ಸಾಮಾಜಿಕ ಸೇವೆಗೂ ಅಂಕ ನೀಡುವಂತಾಗಬೇಕು ಎಂದರು.
2009 -10ನೇ ಸಾಲಿನ ಯುವ ಪ್ರಶಸ್ತಿ ಯನ್ನು ಕುಳಾ ಯಿಯ ಕುಮಾರಿ ವಾಣಿ ಹಾಗೂ ಬೆಳ್ತಂ ಗಡಿ ಲಾಯಿಲಾ ಗ್ರಾಮದ ಉದಯ್ ಕುಮಾರ್ ಅವರಿಗೆ ಪ್ರದಾನ ಮಾಡ ಲಾಯಿತು. ಹೊಸಂ ಗಡಿಯ ಫ್ರೆಂಡ್ಸ್ ಕ್ಲಬ್ ಅತ್ಯುತ್ತಮ ಯುವಕ ಮಂಡಲ ಪ್ರಶಸ್ತಿ ಯನ್ನು ಪಡೆಯಿತು. ಸಮಾ ರಂಭ ದಲ್ಲಿ ಬ್ಯಾರಿ ಸಾಹಿತ್ಯ ಅಕಾಡೆ ಮಿಯ ಎಂ. ಬಿ. ಅಬ್ದುಲ್ ರೆಹಮಾನ್, ಡಾ ಗಣನಾಥ ಎಕ್ಕಾರು, ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಸಿ. ಜೆ. ಎಫ್. ಡಿ'ಸೋಜ ಅವರು ಉಪಸ್ಥಿತರಿದ್ದರು.

ಜಿಲ್ಲೆಯ ಅಭಿವೃದ್ಧಿಗೆ 1150 ಕೋಟಿ ರೂ.:ಸಚಿವ ಪಾಲೆಮಾರ್

ಮಂಗಳೂರು,ಜನವರಿ26: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡೂವರೆ ವರ್ಷಗಳಲ್ಲಿ ವಿವಿಧ ಯೋಜನೆಗಳಿಗೆ 1150 ಕೋಟಿಗೂ ಮಿಕ್ಕಿದ ಪ್ರಗತಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ,ಜೀವಿಶಾಸ್ತ್ರ, ಪರಿಸರ,ಮೀನುಗಾರಿಕೆ,ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಆಗಿರುವ ಜೆ. ಕೃಷ್ಣ ಪಾಲೆಮಾರ್ ಅವರು ಹೇಳಿದರು.ಇಂದು ಜಿಲ್ಲಾ ಮಟ್ಟದ ಗಣ ರಾಜ್ಯೋ ತ್ಸವ ದಿನಾ ಚರಣೆ ಯಲ್ಲಿ


ಧ್ವಜಾ ರೋಹಣ ಗೈದು ಗಣ ರಾಜ್ಯೋ ತ್ಸವ ಸಂ ದೇಶ ನೀಡಿದ ಅವರು, ಜಗ ತ್ತಿನ ಅತೀ ದೊಡ್ಡ ಪ್ರಜಾ ಪ್ರಭುತ್ವ ರಾಷ್ಟ್ರ ಭಾರತ ದಲ್ಲಿ ಜನ ಸಾಮಾನ್ಯ ನಿಂದ ಹಿಡಿದು ರಾಷ್ಟ್ರ ಪ್ರಮುಖ ರವ ರೆಗೆ ಎಲ್ಲ ರಿಗೂ ಸಂವಿ ಧಾನ ದತ್ತ ಸಮಾನ ಹಕ್ಕು ಗಳನ್ನು ನೀಡಿದ್ದು ಇದ ಕ್ಕಾಗಿ ಕೊಡುಗೆ ನೀಡಿದ ಎಲ್ಲ ರನ್ನೂ ಸ್ಮರಿ ಸಿದರು. ಸಂವಿ ಧಾನದ ಮೂಲ ಕರಡು ಸಿದ್ಧ ಪಡಿಸು ವಲ್ಲಿ ಬಹು ಮುಖ್ಯ ಪಾತ್ರ ವಹಿಸಿದ್ದ ದಕ್ಷಿಣ ಕನ್ನಡ ದ ನರ ಸಿಂಗ ರಾಯರ ಸೇವೆ ಯನ್ನು ಸ್ಮರಿ ಸಿದ ಸಚಿವರು, ಅವರು ನೆನ ಪನ್ನು ಶಾಶ್ವತ ವಾಗಿಸಲು ಮಂಗ ಳೂರು ವಿಶ್ವ ವಿದ್ಯಾನಿ ಲಯ ದಲ್ಲಿ ಅವರ ಹೆಸರಿ ನಲ್ಲಿ ಅಧ್ಯ ಯನ ಪೀಠ ವನ್ನು ಶೀಘ್ರ ದಲ್ಲೇ ಆರಂಭಿ ಸಲಾ ಗುವು ದೆಂ ದರು. ಸರ್ಕಾರ ವಿವಿಧ ಯೋಜನೆ ಗಳಡಿ ಅನುಷ್ಠಾ ನಕ್ಕೆ ತಂದಿ ರುವ ಅಭಿ ವೃದ್ಧಿ ಕಾಮ ಗಾರಿ ಹಾಗೂ ಅನು ದಾನದ ಬಗ್ಗೆ ಸಮಗ್ರ ಮಾಹಿತಿ ನೀಡಿದರು.ದೇಶ ಪ್ರೇಮ ನಮ್ಮೆಲ್ಲರ ಉಸಿ ರಾಗಲಿ, ದೇಶದ ಅಖಂ ಡತೆ, ಸಾರ್ವ ಭೌಮತೆ, ಸ್ವಾ ತಂತ್ರ್ಯ ರಕ್ಷಣೆ ನಮ್ಮೆಲ್ಲರ ಧ್ಯೇಯ ವಾಗಲಿ; ಸಮೃದ್ಧ ಕರ್ನಾ ಟಕ ಹಾಗೂ ಸಶಕ್ತ ಭಾರತ ನಿರ್ಮಾ ಣಕ್ಕೆ ಎಲ್ಲರೂ ಶ್ರಮಿ ಸೋಣ ಎಂದು ಕರೆ ನೀಡಿದರು.
ಸಮಾ ರಂಭ ದಲ್ಲಿ ಮುಖ್ಯ ಅತಿಥಿ ಗಳಾಗಿ ಕರ್ನಾ ಟಕ ವಿಧಾನ ಸಭಾ ಉಪ ಸಭಾಧ್ಯ ಕ್ಷರಾದ ಎನ್. ಯೋಗೀಶ್ ಭಟ್, ದ.ಕ ಜಿ.ಪಂ ನ ಅಧ್ಯಕ್ಷ ರಾದ ಕೆ. ಸಂತೋಷ್ ಕುಮಾರ್ ಭಂ ಡಾರಿ, ಲೋಕ ಸಭಾ ಸದಸ್ಯ ರಾದ ನಳಿನ್ ಕುಮಾರ್ ಕಟೀಲ್, ವಿಧಾನಪರಿಷತ್ ಶಾಸಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಶಾಸಕರಾದ ಯು.ಟಿ. ಖಾದರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ ಪಾಲ್ಗೊಂಡಿದ್ದರು. ಜಿಲ್ಲಾಧಿಕಾರಿ ಸುಬೋಧ್ ಯಾದವ್, ಎಸ್ ಪಿ ಡಾ. ಸುಬ್ರಮಣ್ಯೇಶ್ವರ ರಾವ್, ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಎಲ್ಲ ಅಧಿಕಾರಿಗಳು ಪಾಲ್ಗೊಂಡರು. ಸರಕಾರಿ ಪದವಿಪೂರ್ವ ಕಾಲೇಜು ಸುಳ್ಯದ ಪ್ರವೀಣ ಎ ಕೆ ಅವರಿಗೆ ಹೊಯ್ಸಳ ಶೌರ್ಯ ಪ್ರಶಸ್ತಿ, ಕ್ರೀಡೆ ಮತ್ತು ಕಲೆ ಮತ್ತು ಶಿಕ್ಷಣಕ್ಕೆ, ಎಸ್ ಎಸ್ ಎಲ್ ಸಿಯಲ್ಲಿ ಗರಿಷ್ಠ ಅಂಕ ಪಡೆದ ಮಕ್ಕಳಿಗೆ ಪ್ರಶಸ್ತಿ ವಿತರಿಸಲಾಯಿತು.ಬಲ್ಮಠ ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಮಿಲಾಗ್ರಿಸ್ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.ವಿಂಟೇಜ್ ಕಾರ್ ರಾಲಿಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

Tuesday, January 25, 2011

ಸುಸ್ಥಿರ ಅಭಿವೃದ್ಧಿಯೇ ಸರ್ಕಾರದ ಆದ್ಯತೆ: ಸಚಿವ ಪಾಲೆಮಾರ್

ಮಂಗಳೂರು,ಜನವರಿ.25:ಸುಸ್ಥಿರ ಅಭಿವೃದ್ಧಿಯೇ ಸರ್ಕಾರದ ಮೂಲ ಮಂತ್ರವಾಗಿದ್ದು, ಇತ್ತೀಚಿನ ಚುನಾವಣಾ ವಿಜಯಗಳು ಜನಪರ ಆಡಳಿತಕ್ಕೆ ಸಾಕ್ಷಿಯಾ ಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾದ ಕೃಷ್ಣ ಜೆ. ಪಾಲೆಮಾರ್ ಅವರು ಹೇಳಿದರು.
ಅವರಿಂದು ಕರಾವಳಿ ಉತ್ಸವ ಮೈದಾನ ದಲ್ಲಿ ವಾರ್ತಾ ಇಲಾಖೆ ಪ್ರಗತಿ ದರ್ಶನ ವಸ್ತು ಪ್ರದರ್ಶನ ವನ್ನು ಉದ್ಘಾ ಟಿಸಿ ಮಾತ ನಾಡುತ್ತಿ ದ್ದರು. ಜನತೆಯ ಆಶೀರ್ವಾದ ಸದಾ ತಮ್ಮ ಮೇಲಿದ್ದು, ನಿರಂತರ ಅಭಿವೃದ್ಧಿಯೇ ನಮ್ಮ ಸರ್ಕಾರದ ಮೂಲಮಂತ್ರ ಎಂದು ಅವರು ಪುನರುಚ್ಛರಿಸಿದರು. ಎಲ್ಲ ವಲಯಗಳ ಅಭಿವೃದ್ಧಿಗೆ ಬಜೆಟ್ ನಲ್ಲಿ ಅನುದಾನ ಮೀಸಲಿರಿಸಿದ್ದು, ಸಮಗ್ರ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುವುದು ಎಂದರು. ಕರಾವಳಿ ಉತ್ಸವದ ಜೊತೆಗೆ ರಾಣಿ ಅಬ್ಬಕ್ಕ ಉತ್ಸವಕ್ಕೆ 25 ಲಕ್ಷ ರೂ. ನೀಡಲಾಗಿದೆ. ಪಿಲಿಕುಳದ ಕಂಬಳಕ್ಕೆ 5 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಸ್ಥಳೀಯ ಪರಂಪರೆ ಸಂರಕ್ಷಣೆಗೂ ಸರ್ಕಾರ ಬದ್ಧವಾಗಿದೆ ಎಂದರು.

ಮತದಾರರ ದಿನಾಚರಣೆ: 14,635 ಎಪಿಕ್ ಕಾರ್ಡ್ ವಿತರಣೆ

ಮಂಗಳೂರು,ಜನವರಿ.25: ಚುನಾವಣಾ ಆಯೋಗದ ಆಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯ ಜಿಲ್ಲಾ ಮಟ್ಟದ ಕಾರ್ಯಕ್ರಮ ಮಂಗಳೂರಿನ ಪುರಭವನದಲ್ಲಿ ಇಂದು ಆಯೋಜಿಸಲಾಗಿತ್ತು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ ಅವರು ಮತದಾನದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಹೆಚ್ಚಾಗಿ ಗ್ರಾಮೀಣ ಮಟ್ಟದಲ್ಲಿ ಆಗಬೇಕು.ಈ ಮೂಲಕ ಹೊಸ ಬದಲಾವಣೆಯಾಗಿ ಪ್ರತಿಯೊಬ್ಬರೂ ಮತದಾನದಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದು ಹೇಳಿದರು.
ಮತ ದಾನ ಮಾಡುವ ವರ ಸಂಖ್ಯೆ ಇತ್ತೀ ಚಿನ ದಿನ ಗಳಲ್ಲಿ ಕಡಿಮೆ ಯಾಗು ತ್ತಿದೆ. ಈ ನೆಲೆ ಯಲ್ಲಿ ಜನ ರಲ್ಲಿ ಮತ ದಾನದ ಅವಶ್ಯ ಕತೆ ಯನ್ನು ಮನ ವರಿಕೆ ಮಾಡಿ ಆಸಕ್ತಿ ಹುಟ್ಟಿ ಸುವ ಕೆಲಸ ವನ್ನು ಮಾಡು ವಲ್ಲಿ ಚುನಾ ವಣಾ ಆಯೋಗ ಮುಂದಾ ಗಿರು ವುದು ಶ್ಲಾಘ ನೀಯ. ಪ್ರಜಾ ಪ್ರಭುತ್ವ ರಾಷ್ಟ್ರದಲ್ಲಿ ಮತದಾನ ನಮ್ಮ ಹಕ್ಕು ಎಂದುಕೊಂಡು ಪ್ರತಿಯೊಬ್ಬರೂ ಮತದಾನದಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಶಾಸಕ ಯು.ಟಿ.ಖಾದರ್ ಅವರು, ಇಂದು ಹೆಚ್ಚಾಗಿ ವಿದ್ಯಾವಂತ ಯುವ ಸಮುದಾಯ ಮತದಾನದಿಂದ ದೂರಾಗುತ್ತಿರುವುದು ವಿಷಾದನೀಯ. ಯುವಕರು ಮತದಾನದ ಪ್ರಕ್ರೀಯೆಯಲ್ಲಿ ಹೆಚ್ಚು ಪಾಲ್ಗೊಳ್ಳುವ ಅಗತ್ಯವಿದ್ದು, ಅವರನ್ನು ಹುರಿದುಂಬಿಸುವ ಕಾರ್ಯ ತುರ್ತಾಗಿ ನಡೆಯಬೇಕಿದೆ ಎಂದರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು.ವಿದ್ಯಾರ್ಥಿಗಳಾದ ಅಶ್ವತ್ ರಾವ್, ನಿಖಿತಾ, ಪ್ರಣೀತಾ, ಸಾನಾ ಇವರುಗಳು ರಾಜಕೀಯ ವ್ಯವಸ್ಥೆ ಹಾಗೂ ಮತದಾನದ ಕುರಿತು ತಮ್ಮ,ತಮ್ಮ ಅಭಿಪ್ರಾಯ ಮಂಡಿಸಿದರು.
ಕಾರ್ಯ ಕ್ರಮ ದಲ್ಲಿ ಹೊಸ ಮತ ದಾರ ರಿಗೆ ಮತ ದಾನದ ಗುರು ತಿನ ಚೀಟಿ ವಿತರಿ ಸಲಾ ಯಿತು. ಅಲ್ಲದೆ ವಿವಿಧ ಸ್ಪರ್ಧೆ ಗಳಲ್ಲಿ ವಿಜೇತ ರಾದ ವಿದ್ಯಾರ್ಥಿ ಗಳಿಗೆ ಬಹು ಮಾನ ವಿತರಿ ಸಲಾ ಯಿತು.ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಮೇಯರ್ ರಜನಿ ದುಗ್ಗಣ್ಣ, ಉಪ ಮೇಯರ್ ರಾಜೇಂದ್ರ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ಮನಪಾ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶಾಂತಾ ಆರ್. ರೂಪಾ ಡಿ.ಬಂಗೇರ ಮುಖ್ಯ ಅತಿಥಿಗಳಾಗಿದ್ದರು.ಮಂಗಳೂರು ತಹಶೀಲ್ದಾರ್ ಸಿ.ಎನ್.ಮಂಜುನಾಥ್ ಸ್ವಾಗತಿಸಿದರು.

ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹಕ್ಕೆ ಚಾಲನೆ

ಮಂಗಳೂರು,ಜನವರಿ.25:ರಸ್ತೆ ಸುರಕ್ಷತೆಯು ನಮ್ಮ ನಿರಂತರ ಧ್ಯೇಯ ಎಂಬ ಘೋಷ ವಾಕ್ಯದೊಂದಿಗೆ ಆರಂಭವಾದ 22ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಇಂದು ಮಂಗಳೂರಿನಲ್ಲಿ ಚಾಲನೆ ನೀಡಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಡಳಿತ,ಸಾರಿಗೆ ಇಲಾಖೆ,ಮಂಗ ಳೂರು ನಗರ ಪೊಲೀಸ್ ಮತ್ತು ದ.ಕ. ಜಿಲ್ಲಾ ಪೊಲೀಸ್ ಆಶ್ರಯ ದಲ್ಲಿ ಆಯೋ ಜಿಸಿದ ಈ ಕಾರ್ಯ ಕ್ರಮ ವನ್ನು ಮಾಹೆ ವಿಶ್ವ ವಿದ್ಯಾ ನಿಲಯ ದ ವಿ ಶ್ರಾಂತ ಕುಲ ಪತಿ ಗಳಾದ ಡಾ.ಬಿ.ಎಂ.ಹೆಗ್ಡೆ ಅವರು ಉದ್ಘಾ ಟಿಸಿ ದರು.ಮೂಡದ ಅಧ್ಯಕ್ಷ ರಾದ ಡಾ. ಮಾಧವ ಭಂಡಾರಿ,ಮುಖ್ಯ ಅತಿಥಿ ಗಳಾಗಿ ಮಂಗ ಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್, ಜಿಲ್ಲಾ ಎಸ್ಪಿ ಡಾ.ಸುಬ್ರಮಣ್ಯೇಶ್ವರ ರಾವ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಸೇವಾ ನಾಯಕ್, ಡಿಸಿಪಿ ಮುತ್ತೂರಾಯ, ದ.ಕ. ಜಿಲ್ಲಾ ಸಿಟಿ ಬಸ್ ಮಾಲೀಕರ ಸಂಘದ ಕಾರ್ಯದರ್ಶಿಗಳಾದ ಅಜೀಜ್ ಪರ್ತಿಪಾಡಿ ಮತ್ತಿರರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Monday, January 24, 2011

ಭಾರತರತ್ನ ಪಂಡಿತ್ ಭೀಮಸೇನ ಜೋಷಿ ನಿಧನಕ್ಕೆ ಸಂತಾಪ

ಮಂಗಳೂರು ಜನವರಿ 24::-ಭಾರತ ರತ್ನ ಪಂಡಿತ್ ಭೀಮಸೇನ್ ಜೋಷಿಯವರ ನಿಧನವು ಸಂಗೀತ ಸಾರಸ್ವತ ಲೋಕದ ಎಲ್ಲಾ ಶೋತೃಗಳಿಗೆ ಅತೀವವಾದ ದು:ಖವನ್ನುಂಟುಮಾಡಿದೆ.ವಿಶ್ವ ಮಾನ್ಯರಾದ ಪಂಡಿತ್ ಭೀಮಸೇನ ಜೋಷಿಯವರು ದಾಸ ಸಾಹಿತ್ಯದ ಅನೇಕ ಸಂಗೀತ ಪ್ರಾಕಾರಗಳನ್ನು ತನ್ನ ಅದ್ಬುತ ಕಂಠಸಿರಿಯಿಂದ ವಿಶ್ವದೆಲ್ಲೆಡೆ ಪಸರಿಸಿದ್ದಾರೆ. ಮಂಗಳೂರು ಮತ್ತು ದಿವಂಗತ ಜೋಷಿಯವರಿಗೆ ಇದ್ದ ಆತ್ಮೀಯ ನಂಟು ಇಲ್ಲಿನ ಕಲಾರಾಧಕರಿಗೆ ಸ್ಮರಣೀಯವಾಗಿದ್ದು, ತೀವ್ರ ಆಘಾತವನ್ನುಂಟುಮಾಡಿದೆ.ಇವರ ನಿಧನಕ್ಕೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಕೃಷ್ಣ ಪಾಲೇಮಾರ್ ತೀವೃ ಸಂತಾಪ ವ್ಯಕ್ತ ಪಡಿಸಿದ್ದಾರೆ.
ಜಿಲ್ಲಾಡಳಿತ ಮತ್ತು ಸಾಹಿತ್ಯ ಪರಿಷತ್ ಸಂತಾಪ ಸಭೆ:
ಮಂಗಳೂರಿನ ಕರಾವಳಿ ಉತ್ಸವ ಸಾಂಸ್ಕೃತಿಕ ವೇದಿಕೆ ಭಾರ್ಗವ ಮಂಟಪದಲ್ಲಿ ನಾಳೆ (25-1-2011)ಸಂಜೆ 5.30 ಗಂಟೆಗೆ ದ.ಕ.ಜಿಲ್ಲಾಡಳಿತ ಮತ್ತು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಭಾರತರತ್ನ ಪಂಡಿತ್ ಭೀಮಸೇನ ಜೋಷಿ ನಿಧನದ ಶೃದ್ದಾಂಜಲಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.

Sunday, January 23, 2011

ಪಲ್ಸ್ ಪೋಲಿಯೊ ಲಸಿಕಾಭಿಯಾನಕ್ಕೆ ಚಾಲನೆ

ಮಂಗಳೂರು,ಜನವರಿ.23:ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಮಂಗಳೂರಿನ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಆಯೋಜಿಸಿರುವ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ವಿಧಾನ ಸಭಾ ಉಪ ಸಭಾಧ್ಯಕ್ಷರಾದ ಎನ್. ಯೋಗಿಶ್ ಭಟ್ ಅವರು ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು.ಜಿಲ್ಲಾಧಿಕಾರಿ ಸುಭೊದ್ ಯಾದವ್,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಓ.ಆರ್. ರಂಗಪ್ಪ, ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Friday, January 21, 2011

ಬೀಚ್ ಉತ್ಸವದಲ್ಲಿ ಲೇಸರ್ ಶೋ..

ಮಂಗ ಳೂರು, ಜನ ವರಿ. 21:ದಕ್ಷಿಣ ಕನ್ನಡ ಜಿಲ್ಲಾ ಡಳಿತ ಆಯೋ ಜಿಸಿ ರುವ ಕರಾ ವಳಿ ಉತ್ಸ ವದ ಅಂಗ ವಾಗಿ ಪಣಂ ಬೂರು ಕಡಲ ಕಿನಾರೆ ಯಲ್ಲಿ ಮೂರು ದಿನ ಗಳ ಕಾಲ ಹಮ್ಮಿ ಕೊಂಡಿ ರುವ ಬೀಚ್ ಉತ್ಸವ ಮತ್ತು ಸಾಂಸ್ಕೃ ತಿಕ ಉತ್ಸ ವಕ್ಕೆ ಮಂಗ ಳೂರು ಮಹಾ ನಗರ ಪಾಲಿಕೆ ಮೇಯರ್ ರಜನಿ ದುಗ್ಗಣ್ಣ ಅವರು ಇಂದು ಚಾಲನೆ ನೀಡಿ ದರು.ಸಂಜೆ ವಾರ್ತಾ ಇಲಾಖೆ ಪ್ರಸ್ತುತ ಪಡಿಸಿದ ಸರ್ಕಾ ರದ ಅಭಿವೃದ್ದಿ ಕಾರ್ಯ ಕ್ರಮಗಳ ಕುರಿತ ಲೇಸರ್ ಶೋ ಪ್ರಮುಖ ಆಕರ್ಷ ಣೆಯಾ ಗಿದ್ದು,ಜನ ಮೆಚ್ಚು ಗೆಗೆ ಪಾತ್ರ ವಾಯಿತು.ಈ ಸಂದರ್ಭ ದಲ್ಲಿ ಸಹಾ ಯಕ ಆಯುಕ್ತ ರಾದ ಪ್ರಭು ಲಿಂಗ ಕವಳಿ ಕಟ್ಟಿ,ಬಂದರು ಇಲಾಖಾ ಧಿಕಾರಿ ಕ್ಯಾಪ್ಟನ್ ಮೋಹನ್ ಕುದ್ರಿ,ಪಾಲಿಕೆ ಕಂದಾಯ ಅಧಿಕಾರಿ ಮೇಘನಾ,ಪಣಂ ಬೂರು ಬೀಚ್ ಅಭಿ ವೃದ್ಧಿ ಯೋಜ ನೆಯ ಯತೀಶ್ ಬೈಂಕ ಪಾಡಿ,ಮತ್ತಿ ತರರು ಉಪ ಸ್ಥಿತ ರಿದ್ದರು.