Wednesday, January 26, 2011

ಜಿಲ್ಲೆಯ ಅಭಿವೃದ್ಧಿಗೆ 1150 ಕೋಟಿ ರೂ.:ಸಚಿವ ಪಾಲೆಮಾರ್

ಮಂಗಳೂರು,ಜನವರಿ26: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡೂವರೆ ವರ್ಷಗಳಲ್ಲಿ ವಿವಿಧ ಯೋಜನೆಗಳಿಗೆ 1150 ಕೋಟಿಗೂ ಮಿಕ್ಕಿದ ಪ್ರಗತಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ,ಜೀವಿಶಾಸ್ತ್ರ, ಪರಿಸರ,ಮೀನುಗಾರಿಕೆ,ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಆಗಿರುವ ಜೆ. ಕೃಷ್ಣ ಪಾಲೆಮಾರ್ ಅವರು ಹೇಳಿದರು.ಇಂದು ಜಿಲ್ಲಾ ಮಟ್ಟದ ಗಣ ರಾಜ್ಯೋ ತ್ಸವ ದಿನಾ ಚರಣೆ ಯಲ್ಲಿ


ಧ್ವಜಾ ರೋಹಣ ಗೈದು ಗಣ ರಾಜ್ಯೋ ತ್ಸವ ಸಂ ದೇಶ ನೀಡಿದ ಅವರು, ಜಗ ತ್ತಿನ ಅತೀ ದೊಡ್ಡ ಪ್ರಜಾ ಪ್ರಭುತ್ವ ರಾಷ್ಟ್ರ ಭಾರತ ದಲ್ಲಿ ಜನ ಸಾಮಾನ್ಯ ನಿಂದ ಹಿಡಿದು ರಾಷ್ಟ್ರ ಪ್ರಮುಖ ರವ ರೆಗೆ ಎಲ್ಲ ರಿಗೂ ಸಂವಿ ಧಾನ ದತ್ತ ಸಮಾನ ಹಕ್ಕು ಗಳನ್ನು ನೀಡಿದ್ದು ಇದ ಕ್ಕಾಗಿ ಕೊಡುಗೆ ನೀಡಿದ ಎಲ್ಲ ರನ್ನೂ ಸ್ಮರಿ ಸಿದರು. ಸಂವಿ ಧಾನದ ಮೂಲ ಕರಡು ಸಿದ್ಧ ಪಡಿಸು ವಲ್ಲಿ ಬಹು ಮುಖ್ಯ ಪಾತ್ರ ವಹಿಸಿದ್ದ ದಕ್ಷಿಣ ಕನ್ನಡ ದ ನರ ಸಿಂಗ ರಾಯರ ಸೇವೆ ಯನ್ನು ಸ್ಮರಿ ಸಿದ ಸಚಿವರು, ಅವರು ನೆನ ಪನ್ನು ಶಾಶ್ವತ ವಾಗಿಸಲು ಮಂಗ ಳೂರು ವಿಶ್ವ ವಿದ್ಯಾನಿ ಲಯ ದಲ್ಲಿ ಅವರ ಹೆಸರಿ ನಲ್ಲಿ ಅಧ್ಯ ಯನ ಪೀಠ ವನ್ನು ಶೀಘ್ರ ದಲ್ಲೇ ಆರಂಭಿ ಸಲಾ ಗುವು ದೆಂ ದರು. ಸರ್ಕಾರ ವಿವಿಧ ಯೋಜನೆ ಗಳಡಿ ಅನುಷ್ಠಾ ನಕ್ಕೆ ತಂದಿ ರುವ ಅಭಿ ವೃದ್ಧಿ ಕಾಮ ಗಾರಿ ಹಾಗೂ ಅನು ದಾನದ ಬಗ್ಗೆ ಸಮಗ್ರ ಮಾಹಿತಿ ನೀಡಿದರು.ದೇಶ ಪ್ರೇಮ ನಮ್ಮೆಲ್ಲರ ಉಸಿ ರಾಗಲಿ, ದೇಶದ ಅಖಂ ಡತೆ, ಸಾರ್ವ ಭೌಮತೆ, ಸ್ವಾ ತಂತ್ರ್ಯ ರಕ್ಷಣೆ ನಮ್ಮೆಲ್ಲರ ಧ್ಯೇಯ ವಾಗಲಿ; ಸಮೃದ್ಧ ಕರ್ನಾ ಟಕ ಹಾಗೂ ಸಶಕ್ತ ಭಾರತ ನಿರ್ಮಾ ಣಕ್ಕೆ ಎಲ್ಲರೂ ಶ್ರಮಿ ಸೋಣ ಎಂದು ಕರೆ ನೀಡಿದರು.
ಸಮಾ ರಂಭ ದಲ್ಲಿ ಮುಖ್ಯ ಅತಿಥಿ ಗಳಾಗಿ ಕರ್ನಾ ಟಕ ವಿಧಾನ ಸಭಾ ಉಪ ಸಭಾಧ್ಯ ಕ್ಷರಾದ ಎನ್. ಯೋಗೀಶ್ ಭಟ್, ದ.ಕ ಜಿ.ಪಂ ನ ಅಧ್ಯಕ್ಷ ರಾದ ಕೆ. ಸಂತೋಷ್ ಕುಮಾರ್ ಭಂ ಡಾರಿ, ಲೋಕ ಸಭಾ ಸದಸ್ಯ ರಾದ ನಳಿನ್ ಕುಮಾರ್ ಕಟೀಲ್, ವಿಧಾನಪರಿಷತ್ ಶಾಸಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಶಾಸಕರಾದ ಯು.ಟಿ. ಖಾದರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ ಪಾಲ್ಗೊಂಡಿದ್ದರು. ಜಿಲ್ಲಾಧಿಕಾರಿ ಸುಬೋಧ್ ಯಾದವ್, ಎಸ್ ಪಿ ಡಾ. ಸುಬ್ರಮಣ್ಯೇಶ್ವರ ರಾವ್, ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಎಲ್ಲ ಅಧಿಕಾರಿಗಳು ಪಾಲ್ಗೊಂಡರು. ಸರಕಾರಿ ಪದವಿಪೂರ್ವ ಕಾಲೇಜು ಸುಳ್ಯದ ಪ್ರವೀಣ ಎ ಕೆ ಅವರಿಗೆ ಹೊಯ್ಸಳ ಶೌರ್ಯ ಪ್ರಶಸ್ತಿ, ಕ್ರೀಡೆ ಮತ್ತು ಕಲೆ ಮತ್ತು ಶಿಕ್ಷಣಕ್ಕೆ, ಎಸ್ ಎಸ್ ಎಲ್ ಸಿಯಲ್ಲಿ ಗರಿಷ್ಠ ಅಂಕ ಪಡೆದ ಮಕ್ಕಳಿಗೆ ಪ್ರಶಸ್ತಿ ವಿತರಿಸಲಾಯಿತು.ಬಲ್ಮಠ ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಮಿಲಾಗ್ರಿಸ್ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.ವಿಂಟೇಜ್ ಕಾರ್ ರಾಲಿಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.