Monday, January 17, 2011

ಜಾನುವಾರು ವಿಮಾ ಯೋಜನೆ

ಮಂಗಳೂರು, ಜನವರಿ. 17:ಜಾನುವಾರು ವಿಮಾ ಯೋಜನೆಯು ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು, ರೈತರಿಗೆ ಜೀವನಾಧಾರವಾಗಿರುವ ರಾಸುಗಳು ಆಕಸ್ಮಿಕವಾಗಿ ಮರಣ ಹೊಂದಿದಲ್ಲಿ ರೈತರ ಕುಟುಂಬವು ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಸಾಧ್ಯತೆಯನ್ನು ಮನಗಂಡ ಭಾರತ ಸರ್ಕಾರವು ಈ ವಿಮಾ ಯೋಜನೆಯನ್ನು ರೂಪಿಸಿದೆ.ಈ ಯೋಜನೆಯಡಿ ಪ್ರತೀ ಸೂಲಿಗೆ 1500 ಲೀಟರ್ ಹಾಲು ಕರೆಯುವ ಮಿಶ್ರತಳಿ/ದೇಶೀಯ ಹಸು ಎಮ್ಮೆಗಳನ್ನು ವಿಮೆ ಗೊಳಪ ಡಿಸಲಾ ಗುವುದು.11ನೇ ಪಂಚ ವಾರ್ಷಿಕ ಯೋಜನೆ ಅವಧಿಯಲ್ಲಿ ,ದಕ್ಷಿಣಕನ್ನಡ ಜಿಲ್ಲೆಯಲ್ಲಿ 10,000 ರಾಸುಗಳ ಭೌತಿಕ ಗುರಿ ಇದ್ದು, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ.ಕುಲಶೇಖರ,ಮಂಗಳೂರು ಹಾಗೂ ನ್ಯಾಷನಲ್ ಇನ್ಸೂರೆನ್ಸ್ ಕಂಪೆನಿ ಲಿ.ಮಂಗಳೂರು ಇವರ ಸಹಯೋಗದೊಂದಿಗೆ ಪಶುಪಾಲನಾ ಇಲಾಖೆಯಿಂದ ಡಿಸೆಂಬರ್ ಅಂತ್ಯದ ವರೆಗೆ ಒಟ್ಟು 4085 ರಾಸುಗಳನ್ನು ವಿಮೆಗೆ ಒಳಪಡಿಸಲಾಗಿರುತ್ತದೆ. ಈ ಯೋಜನೆಯ ಪ್ರಯೋಜನವನ್ನು ಮಾರ್ಚ್ 2011 ರ ವರೆಗೆ ವಿಸ್ತರಿಸಿದ್ದು, ಪಶುಪಾಲನಾ ಇಲಾಖೆ, ಹಾಲು ಉತ್ಪಾದಕರ ಒಕ್ಕೂಟ,ಪಶು ವೈದ್ಯಕೀಯ ಸಿಬ್ಬಂದಿಗಳು ಕಾರ್ಯಕ್ರಮ ಅನುಷ್ಠಾನಗೊಳಿಸಲು ಮನೆಮನೆಗೆ ಭೇಟಿ ನೀಡುತ್ತಿದ್ದು, ಮಾಲೀಕರುಗಳು ಸಹಕರಿಸಬೇಕೆಂದು ಪಶುಪಾಲನಾ ಇಲಾಖೆ ಉಪನಿರ್ದೇಶಕರು ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗೆ ಪಶುಪಾಲನಾ ಉಪನಿರ್ದೇಶಕರು ದೂ.ಸಂ.0824-2492337,ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಕುಲಶೇಖರ 0824-2230042,ನ್ಯಾಷನಲ್ ಇನ್ಸೂರೆನ್ಸ ಕಂಪೆನಿ ಲಿಮಿಟೆಡ್ನ ಹಿರಿಯ ವಿಭಾಗೀಯ ಪ್ರಬಂಧಕರು ದೂ.ಸಂ.0824-2440674 ನ್ನು ಸಂಪರ್ಕಿಸಿ ಪಡೆದುಕೊಳ್ಳಬಹುದಾಗಿದೆ.