Monday, January 31, 2011

ಲೋಕಾಯುಕ್ತ ಬಲವರ್ಧನೆಯಿಂದ ಸರ್ಕಾರದ ಮೇಲೆ ಜನರಿಗೆ ನಂಬಿಕೆ ಹೆಚ್ಚಲಿದೆ -ನ್ಯಾ.ಸಂತೋಷ್ ಹೆಗ್ಡೆ

ಮಂಗಳೂರು, ಜನವರಿ.31: ಭ್ರಷ್ಟಾಚಾರ ನಿಯಂತ್ರಣಕ್ಕೆ ಲೋಕಾಯುಕ್ತವನ್ನು ಬಲಪಡಿಸಬೇಕಾದ್ದು ಅವಶ್ಯ. ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆ ಶಾಶ್ವತವಾಗಿ, ಪ್ರಬಲವಾಗಿ ಕರ್ತವ್ಯ ನಿರ್ವಹಿಸಬೇಕಾದರೆ ಪ್ರತಿ ಜಿಲ್ಲೆಯಲ್ಲಿ ಲೋಕಾಯುಕ್ತ ಸಂಸ್ಥೆ ಆರಂಭಿಸುವುದರೊಂದಿಗೆ ಸ್ವಂತ ಕಟ್ಟಡವಿರಬೇಕಾದ್ದು ಅವಶ್ಯ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿದರು.
ಲೋಕೋ ಪಯೋಗಿ, ಬಂದರು ಮತ್ತು ಒಳ ನಾಡು ಜಲ ಸಾರಿಗೆ ಇಲಾಖೆ ಮತ್ತು ಕರ್ನಾ ಟಕ ಲೋಕಾ ಯುಕ್ತ ಇದರ ಆಶ್ರಯ ದಲ್ಲಿ ಮಂಗ ಳೂರು ನಗರದ ಉರ್ವ ಸ್ಟೋರ್ ಬಳಿ ನಿರ್ಮಾಣ ಗೊಳ್ಳ ಲಿರುವ ಮಂಗ ಳೂರು ಲೋಕಾ ಯುಕ್ತ ಕಚೇರಿಯ ಸ್ವಂತ ಕಟ್ಟಡಕ್ಕೆ ಸೋಮವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.ಸ್ವಂತ ಕಟ್ಟಡವಿದ್ದಲ್ಲಿ ಲೋಕಾಯುಕ್ತ ಕಾರ್ಯಚಟುವಟಿಕೆಗಳಿಗೆ ಹೆಚ್ಚು ಬಲ ಬರುತ್ತದೆ ಮತ್ತು ಸಹಕಾರಿಯಾಗುತ್ತದೆ. ನಗರದ ಜಿಲ್ಲಾಕಾರಿ ಕಚೇರಿ ಬಳಿಯೇ ನಿರ್ಮಾಣವಾಗಿದ್ದರೆ ಜನರಿಗೆ ಹೆಚ್ಚು ಅನುಕೂಲವಾಗುತ್ತಿತ್ತು ಎಂದ ಅವರು ಲೋಕಾಯುಕ್ತಕ್ಕೆ ಇನ್ನೂ ಹೆಚ್ಚಿನ ಸಿಬ್ಬಂದಿಗಳ ಅಗತ್ಯವಿದೆ. ಸರಕಾರ 291 ಅಧಿಕಾರಿಗಳನ್ನಷ್ಟೆ ನೀಡಿದೆ. ಆದರೆ ಅಗತ್ಯ ಸಿಬ್ಬಂದಿಗಳನ್ನು ಒದಗಿಸಿಲ್ಲ. ಲೋಕಾಯುಕ್ತ ಸಮರ್ಪಕವಾಗಿ ಕೆಲಸ ನಿರ್ವಹಿಸಲು ಇನ್ನಷ್ಟು ಇನ್ಸ್ ಪೆಕ್ಟರ್, ಸಿಬ್ಬಂದಿಗಳ ಅಗತ್ಯವಿದೆ ಎಂದರು. ಕಳೆದ ವರ್ಷದಲ್ಲಿ ಒಟ್ಟು 324 ಕಡೆ ಲೋಕಾಯುಕ್ತ ದಾಳಿ ನಡೆಸಿದೆ. ಇದೇ ಜನವರಿಯಲ್ಲಿ 36 ಮಂದಿಯನ್ನು ಲಂಚ ಸ್ವೀಕರಿಸುತ್ತಿರುವಾಗಲೇ ಬಂಧಿಸಿದೆ. 2006 ರಿಂದ ಇದುವರೆಗೆ ಒಟ್ಟು 1,600 ಲಂಚ ಪ್ರಕರಣವನ್ನು ಬಯಲಿಗೆಳೆಯಲಾಗಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ. ಮೊದಲು ನಮ್ಮ ನಮ್ಮೊಳಗೆ ಬದಲಾವಣೆಯಾಗಬೇಕು. ಯಾವುದೇ ಹುದ್ದೆಯಲ್ಲಿದ್ದರೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿದಾಗ ಬದಲಾವಣೆ ಸಾಧ್ಯ ಎಂದು ನುಡಿದ ಲೋಕಾಯುಕ್ತರು ಸರಕಾರದ ಯೋಜನೆಗಳು ಸಮರ್ಪಕವಾಗಿ ಜನರನ್ನು ತಲುಪಿದ್ದರೆ ಈ ದೇಶದಲ್ಲಿ ಬಡತನವೇ ಇರುತ್ತಿರಲಿಲ್ಲ ಎಂದರು.
ಮುಖ್ಯ ಅತಿಥಿ ಗಳಾ ಗಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಮಾತ ನಾಡಿ, ಜಿಲ್ಲೆ ಯನ್ನು ಭ್ರಷ್ಟಾ ಚಾರ ಮುಕ್ತ ವನ್ನಾ ಗಿಸು ವಲ್ಲಿ ಪ್ರತಿಯೊ ಬ್ಬರೂ ಮನಸ್ಸು ಮಾಡ ಬೇಕು ಎಂದರು. ವಿಧಾನ ಸಭೆಯ ಉಪ ಸಭಾಧ್ಯಕ್ಷ ಎನ್.ಯೋಗೀಶ್ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೊದಲು ವ್ಯವಸ್ಥೆಯಲ್ಲಿ ಬದಲಾವಣೆಯಾದಾಗ ಭ್ರಷ್ಟಾಚಾರ ನಿಯಂತ್ರಣ ಸಾಧ್ಯ. ನಮ್ಮ ಮಾನಸಿಕತೆಯಲ್ಲೂ ಬದಲಾವಣೆಯಾಗಬೇಕು. ಲೋಕಾಯುಕ್ತರು ಭ್ರಷ್ಟಾಚಾರ ನಿಯಂತ್ರಣಕ್ಕೆ ಹೊಸ ಹೋರಾಟ ಆರಂಭಿಸಿದ್ದು ಅದಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು. ದ.ಕ. ಜಿಲ್ಲೆಯಿಂದಲೇ ಭ್ರಷ್ಟಾಚಾರ ನಿರ್ಮೂಲನೆಯ ಆಂದೋಲನ ಆರಂಭವಾಗಲಿ ಎಂದು ಯೋಗೀಶ್ ಭಟ್ ಆಶೀಸಿದರು.ಕರಾ ವಳಿ ಅಭಿ ವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಬಿ.ನಾಗ ರಾಜ ಶೆಟ್ಟಿ ಕಾರ್ಯ ಕ್ರಮ ವನ್ನು ದ್ದೇಶಿಸಿ ಮಾತ ನಾಡಿ ಶುಭ ಹಾರೈಸಿ ದರು. ಕರ್ನಾಟಕ ಲೋಕಾಯುಕ್ತ ನಿಬಂಧಕ ಮೂಸಾ ಕುಂಞ ನಾಯರ್ ಮೂಲೆ ಪ್ರಾಸ್ತಾವಿಕವಾಗಿ ಮಾತನಾಡಿ 150 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು ಸರಕಾರ ಈಗಾಗಲೇ 65 ಲಕ್ಷ ಒದಗಿಸಿದೆ. ಲೋಕಾಯಕ್ತ ಇಲಾಖೆಯಲ್ಲಿ ಈ ಹಿಂದೆ 693 ಸಿಬ್ಬಂದಿಗಳಿದ್ದು ಇದೀಗ 1290ಕ್ಕೆ ಏರಿದೆ. ಉತ್ತಮ ಕಾರ್ಯಗಳಿಂದ ಜನರಿಗೆ ಲೋಕಾಯುಕ್ತ ಸಂಸ್ಥೆಯ ಮೇಲೆ ವಿಶ್ವಾಸಾರ್ಹತೆಯೂ ಹೆಚ್ಚಾಗಿದೆ ಎಂದರು.ಲೋಕೋಪಯೋಗಿ ಇಲಾಖೆಯ ಸೂಪರಿಂಟೆಂಡೆಂಟ್ ಇಂಜಿನಿಯರ್ ಬಿ.ಎನ್.ಬಾಲಕೃಷ್ಣ ವಂದಿಸಿದರು.