Friday, January 28, 2011

ಘನತ್ಯಾಜ್ಯ ವಿಲೇವಾರಿ ಸವಾಲು ಎದುರಿಸಲು ಎಲ್ಲರ ಸಹಕಾರ ಅಗತ್ಯ: ಶಾಸಕ ಅಭಯಚಂದ್ರಜೈನ್

ಮಂಗಳೂರು,ಜನವರಿ.28: ಜನಸಂಖ್ಯಾ ಸ್ಫೋಟದಿಂದ ಭೂಮಿ ವಿರಳವಾಗಿದೆ; ತ್ಯಾಜ್ಯ ಜಾಸ್ತಿಯಾಗಿದೆ. ಅಭಿವೃದ್ಧಿ ಹಾಗೂ ಸ್ವಚ್ಛತೆಗೆ ಘನತ್ಯಾಜ್ಯ ವಿಲೇವಾರಿ ಇಂದು ದೊಡ್ಡ ಸವಾಲಾಗಿದ್ದು ಅವರವರ ಕಸವನ್ನು ಅವರವರೇ ಶುಚಿಮಾಡಬೇಕು; ನಮ್ಮ ಸುತ್ತಲಿನ ಪರಿಸರ ಮನೆಯಂತೆ ಸ್ವಚ್ಛವಾಗಿರಬೇಕು ಎಂಬ ಜವಾಬ್ದಾರಿ ಪ್ರತಿಯೊಬ್ಬರಲ್ಲೂ ಮೂಡಿದರೆ ಮಾತ್ರ ತ್ಯಾಜ್ಯ ವಿಲೇವಾರಿ ಸಾಧ್ಯ ಎಂದು ಮೂಡಬಿದ್ರೆ ಶಾಸಕರಾದ ಅಭಯಚಂದ್ರ ಜೈನ್ ಹೇಳಿದರು.

ಅವರಿಂದು ವಾರ್ತಾ ಇಲಾಖೆ ಮಂಗ ಳೂರು, ವಿಜಯ ಕಾಲೇಜು ಮೂಲ್ಕಿ ಮತ್ತು ಮೂಲ್ಕಿ ಸುತ್ತ ಮುತ್ತಲ ಶಾಲೆಯ ಎನ್ ಎಸ್ ಎಸ್ ಮತ್ತು ಎನ್ ಸಿಸಿ ಘಟಕ ಗಳ ಸಂ ಯುಕ್ತ ಆಶ್ರಯ ದಲ್ಲಿ ಮುಲ್ಕಿ ವಿಜಯಾ ಕಾಲೇಜಿ ನಲ್ಲಿ ಏರ್ಪಡಿ ಸಲಾದ ಘನ ತ್ಯಾಜ್ಯ ವಿಲೇ ವಾರಿ ವಿಷಯದ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಎಳೆಯ ವಯಸ್ಸಿನಿಂದಲೇ ಪರಿಸರ, ಸ್ವಚ್ಛತೆಯ ಬಗ್ಗೆ ಮಕ್ಕಳು ಅರಿತರೆ ಅನುಷ್ಠಾನ ಸುಲಭ ಮಾತ್ರವಲ್ಲದೆ ಹೆತ್ತವರನ್ನು ಈ ಸಂಬಂಧ ಪ್ರೇರಿಪಿಸಲು ಸಾಧ್ಯ ಎಂದ ಅವರು ನುಡಿದರು. ಮುಲ್ಕಿ ನಗರಪಂಚಾಯಿತಿ ಈ ನಿಟ್ಟಿನಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕರ್ತವ್ಯನಿರ್ವಹಿಸಬೇಕೆಂದು ಅಭಯಚಂದ್ರ ಜೈನ್ ಹೇಳಿದರು.ಮುಖ್ಯ ಅತಿಥಿ ಗಳಾ ಗಿದ್ದ ಮಣಿ ಪಾಲ ಮೀಡಿಯಾ ನೆಟ್ ವಕ್ರ್ ನ ಸಹ ಉಪಾ ಧ್ಯಕ್ಷ ಕೆ. ಆನಂದ್ ಅವರು ಮಾತ ನಾಡಿ, ಕಸ ದಿಂದ ರಸ ಉತ್ಪಾ ದನೆ ಮಾಡಿದ ಹಲವು ಮಾದರಿ ಗಳು ಇಂದು ನಮ್ಮ ಮುಂ ದಿದ್ದು, ಇಂತಹ ಮಾದರಿ ಗಳ ಬಗ್ಗೆ ಅರಿವು ಪಡೆದು ಕೊಂಡು ಅನುಷ್ಠಾ ನಕ್ಕೆ ತರ ಬೇಕು. ಅರಿವು ಮೂಡಿಸು ವಲ್ಲಿ ನಮ್ಮ ವಿದ್ಯಾರ್ಥಿ ಗಳೇ ರಾಯ ಭಾರಿ ಗಳಾಗ ಬೇಕೆಂದರು.
ಇನ್ನೋರ್ವ ಅತಿಥಿಗಳಾದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಸರ್ವೋತ್ತಮ ಅಂಚನ್, ರಾಜ್ಯದ ಎಲ್ಲ ವಿದ್ಯಾರ್ಥಿಗಳು ಮುಲ್ಕಿಯ ವಿಜಯಾ ಕಾಲೇಜಿನಲ್ಲಿದ್ದು, ಸ್ವಚ್ಛತೆ ಹಾಗೂ ಘನತ್ಯಾಜ್ಯ ವಿಲೇವಾರಿ ಪಾಠ ರಾಜ್ಯಮಟ್ಟಕ್ಕೆ ತಲುಪಿದೆ ಎಂದರು.
ಅಧ್ಯಕ್ಷೀಯ ಭಾಷಣ ಮಾಡಿದ ವಿಜಯಾ ಕಾಲೇಜಿನ ಪ್ರೊ. ಎಸ್ ಅರವಿಂದ ಜೋಷಿ ಅವರು ಕಸ ನಿರ್ವಹಣೆಗಿಂತ ಕಸ ಉತ್ಪಾದನೆ ಕಡಿಮೆ ಮಾಡುವ ಬಗ್ಗೆ ಚಿಂತಿಸಲು ಇದು ಸೂಕ್ತ ಕಾಲ ಎಂದರು. ಪ್ಲಾಸ್ಟಿಕ್ ನಿಷೇಧ ಮಾಡುವ ಬಗ್ಗೆಯೂ ಚಿಂತಿಸುವ ಸಂದರ್ಭ ಇದು ಎಂದರು.
ವಿಚಾರಸಂಕಿರಣದಲ್ಲಿ ಉಪನ್ಯಾಸ ನೀಡಿದ ಮಹಾನಗರಪಾಲಿಕೆ ಸಹಾಯಕ ಆರೋಗ್ಯಾಧಿಕಾರಿಗಳಾದ ರಘುನಾಥ ಯು ಅವರು, ಹಸಿಕಸ, ಒಣ ಕಸ, ಅಪಾಯಕಾರಿ ಕಸಗಳನ್ನು ವಿಂಗಡಿಸುವ ಹಾಗೂ ಆರೋಗ್ಯಕ್ಕೆ ಹಾನಿಯುಂಟು ಮಾಡುವ ರೋಗಾಣುಗಳು ಉತ್ಪನ್ನ ಸ್ಥಳಗಳ ಬಗ್ಗೆ, ಭೂಮಿಯಲ್ಲಿ ಪ್ಲಾಸ್ಟಿಕ್ ನಿಂದಾಗಿರುವ ಹಾನಿಯ ಬಗ್ಗೆ ಪವರ್ ಪಾಯಿಂಟ್ ಪ್ರಸೆಂಟೇಷನ್ ಮೂಲಕ ಸವಿವರ ಮಾಹಿತಿ ನೀಡಿದರು. ವಾರ್ತಾಧಿಕಾರಿ ರೋಹಿಣಿ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ವಿಜಯ ಕಾಲೇಜಿನ ಅಧ್ಯಕ್ಷರಾದ ಡಾ.ಎಂ ಎ ಆರ್ ಕುಡ್ವ, ಎನ್ ಸಿ ಸಿ ಅಧಿಕಾರಿ ಎಚ್.ಜಿ.ನಾಗರಾಜ ನಾಯಕ್ ಉಪಸ್ಥಿತರಿದ್ದರು.ಪ್ರೊ. ಹಯವದನ ಉಪಾಧ್ಯಾಯ ವಂದಿಸಿದರು. ಉಪನ್ಯಾಸಕಿ ಅರುಣ ಕಾರ್ಯಕ್ರಮ ನಿರೂಪಿಸಿದರು.