Thursday, January 13, 2011

ದಕ್ಷಿಣ ಕನ್ನಡ ಜಿಲ್ಲೆಯ ಸುಸಂಸ್ಕೃತ ನಾಗರೀಕರು ಸ್ವಚ್ಛತೆಗೂ ಆದ್ಯತೆ ನೀಡಿ: ಡಾ. ವಿಜಯಪ್ರಕಾಶ್

ಮಂಗಳೂರು,ಜನವರಿ.13:ಹಲವು ಪ್ರಥಮಗಳಿಂದ ಇತಿಹಾಸ ಸೃಷ್ಠಿಸಿ, ಎಲ್ಲ ಕ್ಷೇತ್ರದಲ್ಲಿ ಮುಂದಿರುವ ದಕ್ಷಿಣ ಕನ್ನಡ ಜಿಲ್ಲೆ ಘನ ತ್ಯಾಜ್ಯ ವಿಲೇವಾರಿಯಲ್ಲೂ ಪ್ರಥಮ ಸಾಧಿಸುವಂತಾಗ ಬೇಕು; ಪರಿಸರ ಪ್ರಜ್ಞೆ ಎಲ್ಲರಲ್ಲೂ ಮೂಡಲು ಮಂಗಳೂರು ಮಹಾನಗರಪಾಲಿಕೆ ವಿದ್ಯಾರ್ಥಿಗಳನ್ನು ಬ್ರಾಂಡ್ ಅಂಬಾಸಿಡರ್ ಗಳನ್ನಾಗಿ ಗುರುತಿಸಿದೆ ಎಂದು ಪಾಲಿಕೆ ಆಯುಕ್ತರಾದ ಡಾ ಕೆ. ಎನ್ ವಿಜಯಪ್ರಕಾಶ್ ಹೇಳಿದರು.

ಅವ ರಿಂದು ನಗ ರದ ಗಣ ಪತಿ ಕಾಲೇ ಜಿನಲ್ಲಿ ಏರ್ಪ ಡಿಸ ಲಾದ ಸ್ವಚ್ಛತಾ ಅಭಿ ಯಾನ ಕಾರ್ಯ ಕ್ರಮ ವನ್ನು ದ್ದೇಶಿಸಿ ಮಾತ ನಾಡು ತ್ತಿದ್ದರು. ಯುವ ಜನಾಂ ಗದ ಶಕ್ತಿಯ ಸದ್ಬ ಳಕೆ ಈ ವಲಯ ದಲ್ಲೂ ಆಗಲಿ ಎಂಬ ಘನ ಉದ್ದೇ ಶವ ನ್ನಿರಿಸಿ ನಗ ರದ ಎಲ್ಲ ಶಾಲಾ ಕಾಲೇ ಜುಗಳ ವಿದ್ಯಾರ್ಥಿ ಗಳನ್ನೂ ಅರಿವು ಮೂಡಿಸುವ ಕಾರ್ಯ ಯೋಜನೆ ಯಲ್ಲಿ ಸೇರಿಸಿದ್ದು, ತ್ಯಾಜ್ಯ ಉತ್ಪತ್ತಿ ವಿಲೇಯಲ್ಲಿ ಹೆತ್ತವರಿಗೆ ವಿದ್ಯಾರ್ಥಿಗಳು ಮಾರ್ಗದರ್ಶರಾಗಬೇಕು ಎಂದರು.ಸಮರ್ಪಕ ತ್ಯಾಜ್ಯ ವಿಲೇ ಇಲ್ಲದೆ ನಗರೀಕರಣ ಹಾಗೂ ಕೈಗಾರೀಕೀಕರಣಗೊಂಡರೆ 2050ರ ವೇಳೆಗೆ ಕನಿಷ್ಠ ಶೇಕಡ 50 ನಗರಗಳು ಕೊಳಚೆ ನಗರಗಳಾಗಿ ಮಾರ್ಪಾಡಾಗುವ ದುರ್ಗತಿ ಬರಲಿದೆ ಎಂದ ಆಯುಕ್ತರು, ಮಂಗಳೂರು ನಗರವೊಂದರಲ್ಲೇ ಪ್ರತಿದಿನ 220 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ ಎಂದರು. ಕಸವನ್ನು ರಸವನ್ನಾಗಿ ಮಾರ್ಪಾಡು ಮಾಡದಿದ್ದರೆ ಉತ್ತಮ ನಗರಿಯಾಗಿ ಮಂಗಳೂರು ಗುರುತಿಸಲ್ಪಡುವುದ ಕಷ್ಟ ಸಾಧ್ಯ; ಈ ದಿಸೆಯಲ್ಲಿ ಮಂಗಳೂರು ಮಹಾನಗರಪಾಲಿಕೆ ಹಲವಾರು ನೂತನ ಯೋಜನೆಗಳನ್ನು ಕೈಗೊಂಡಿದ್ದು, ಸಮರ್ಪಕ ಘನತ್ಯಾಜ್ಯ ನಿರ್ವಹಣೆ ವಿಷಯವಾಗಿ ನೂತನ ಮಾದರಿಯ 3 ಪ್ಯಾಕೇಜ್ ಗುತ್ತಿಗೆಯನ್ನು ಸದ್ಯದಲೇ ಹೊರತರಲಿದೆ ಎಂದರು.
ಈ ಯೋಜನೆಯಡಿ ಮಾನ್ಯ ಉಚ್ಛ ನ್ಯಾಯಾಲಯದ ನಿರ್ದೇಶನದಂತೆ ಘನ ತ್ಯಾಜ್ಯ ನಿರ್ವಹಣೆ ಎಲ್ಲ ವಿಭಾಗಗಳ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಲು ಯೋಜಿಸಲಾಗಿದೆ. ಮಂಗಳೂರು ಸೂರತ್ ನಗರವನ್ನು ಮೀರಿ ಬೆಳೆಯಬೇಕು ಎಂಬ ಉದ್ದೇಶ ಪಾಲಿಕೆಯದ್ದು ಎಂದು ನುಡಿದರು.
ಸಮಾರಂಭದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಮುಂಬಯಿಯ ಬಾಬಾ ಅಟೋಮಿಕ್ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಡಾ. ಶರದ್ ಕಾಳೆ ಅವರು, ನಮ್ಮ ಮನೆಯನ್ನು ಸುಂದರ ವಾಗಿರಿಸಿದಂತೆ ವಸುಂಧರೆಯನ್ನು ಸುಂದರವಾಗಿರಿಸಿಕೊಳ್ಳಬೇಕು. ಪ್ರಕೃತಿಯಲ್ಲಿ ತ್ಯಾಜ್ಯ ಎಂಬುದು ಇಲ್ಲ; ದೀಪಾವಳಿ ಹಬ್ಬದಂದು ಬಂಗಾರ ಬೆಳ್ಳಿಯೊಂದಿಗೆ, ಪೊರಕೆಯನ್ನು ಪೂಜಿಸುವ ಸಂಸ್ಕೃತಿ ನಮ್ಮದು. ಪ್ರಕೃತಿಗಿರುವ ಶಕ್ತಿ ಅಪಾರ. ನಾವು ಉಸಿರಾಡುವ ಗಾಳಿ ಶುದ್ಧವಾಗಿರಬೇಕಾದರೆ ಪರಿಸರ ಶುದ್ಧವಾಗಿರಬೇಕು ಎಂದರು. ಆಸ್ಪತ್ರೆಯಲ್ಲಿ ಆಮ್ಲಜನಕಕ್ಕೆ ಕೊಡುವ ದುಡ್ಡು ಲೆಕ್ಕ ಹಾಕಿದರೆ ಸ್ವಚ್ಛ, ಮಾಲಿನ್ಯರಹಿತ ಪರಿಸರದ ಮೌಲ್ಯದ ಅರಿವಾಗುತ್ತದೆ. ಕಸವನ್ನು ರಸವಾಗಿ ಪರಿವರ್ತಿಸುವುದು ಎಲ್ಲರ ಹೊಣೆ ಎಂದು ಡಾ. ಕಾಳೆ ಅವರು ಹೇಳಿದರು. ತ್ಯಾಜ್ಯವನ್ನು ಸುರಿಯುವ ಡಂಪ್ ಯಾಡ್ರ್ ಗಳು ಉತ್ಪನ್ನ ಕೇಂದ್ರಗಳಾಗಬೇಕು, ಮನೆಗಳಿಂದಲೇ ಕಸ ವಿಂಗಡಣೆಯಾಗಬೇಕು; ಪ್ರತಿಯೊಬ್ಬ ನಾಗರೀಕನು ಹೊಣೆಯರಿತುಕೊಳ್ಳಬೇಕು; ಪ್ರಕೃತಿ ನೀಡಿರುವ ವರಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೇಯರ್ ರಜನಿದುಗ್ಗಣ್ಣ ಅವರು ಮಾತನಾಡಿ, ಮಕ್ಕಳೇ ಹಿರಿಯರಾಗಿ ಮಾರ್ಗದರ್ಶಕರಾಗಬೇಕು; ಪ್ರತಿಯೊಂದು ವಿಷಯಕ್ಕೂ ಮಹಾನಗರಪಾಲಿಕೆಯನ್ನು ಹೊಣೆಯಾಗಿಸದೆ ಜವಾಬ್ದಾರಿ ಅರಿತು ನಾಗರೀಕರು ಕರ್ತವ್ಯ ನಿರ್ವಹಿಸಬೇಕೆಂದರು. ನಗರಪಾಲಿಕೆ ಶಾಲಾ, ಕಾಲೇಜುಗಳೊಂದಿಗೆ ಸಂಪರ್ಕವಿರಿಸಿ ನಗರವನ್ನು ಅತ್ಯುತ್ತಮ ನಗರವನ್ನಾಗಿಸಲು ಶಕ್ತಿಮೀರಿ ಯತ್ನಿ ಸುತ್ತಿದೆ ಎಂದರು. ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಾಂತಾ ಆರ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಶಾಂತಕುಮಾರಿ ದೇವಿ ಸ್ವಾಗತಿಸಿದರು. ಪಾಲಿಕೆಯ ಸಹಾಯಕ ಆರೋಗ್ಯಾಧಿಕಾರಿ ರಘುನಾಥ ವಂದಿಸಿದರು.
ಬಳಿಕ ಕಾಲೇಜಿನಿಂದ ಭವಂತಿ ಸ್ಟ್ರೀಟ್, ಸೆಂಟ್ರಲ್ ಮಾರ್ಕೆಟ್ ನಲ್ಲಿ ಮಕ್ಕಳ ಜಾಥಾ ನಡೆಯಿತು. ಇಂjavascript:void(0)ದು ಮಧ್ಯಾಹ್ನ ಸೇಕ್ರೆಡ್ ಹಾಟ್ರ್ ಹೈಸ್ಕೂಲ್ ನಲ್ಲೂ ಶಾಲಾ ವಿದ್ಯಾರ್ಥಿಗಳಿಂದ ಜಾಥಾ ಆಯೋಜಿಸಲಾಗಿದೆ.