Monday, January 17, 2011

ಸೆನ್ಸಸ್ ಡೈರೆಕ್ಟರ್ ಟಿ. ಕೆ ಅನಿಲ್ ಕುಮಾರ್ ಅಧ್ಯಕ್ಷತೆಯಲ್ಲಿ ಸಭೆ

ಮಂಗಳೂರು, ಜನವರಿ.17 : ಫೆಬ್ರವರಿ 9ರಿಂದ 28ರವರೆಗೆ ಜಿಲ್ಲೆಯಲ್ಲಿ ಜನಗಣತಿ ನಡೆಯಲಿದ್ದು, 28ರಂದು ರಾತ್ರಿ ವಸತಿರಹಿತರ ಜನಗಣತಿಗೆ ನಗರದಲ್ಲಿ ವಿಶೇಷ ಗಣತಿ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಗಣತಿ ನಿರ್ದೇಶನಾಲಯದ ನಿರ್ದೇಶಕರಾದ ಟಿ.ಕೆ.ಅನಿಲ್ ಕುಮಾರ್ ಹೇಳಿದರು.

ಅವ ರಿಂದು ಜಿಲ್ಲಾ ಧಿಕಾ ರಿಗಳ ಕಾರ್ಯಾ ಲಯ ದಲ್ಲಿ ಅಧಿಕಾ ರಿಗಳ ಸಭೆಯ ಅಧ್ಯ ಕ್ಷತೆ ವಹಿಸಿ ಮಾತ ನಾಡು ತ್ತಿದ್ದರು. ಸಮಗ್ರ ಜನಗ ಣತಿಗೆ ಪೂರಕ ವಾಗಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಭೇಟಿಯ ಲ್ಲಿರುವ ಅವರು, ಕರಾ ವಳಿ ಪ್ರದೇಶ ಗಳಲ್ಲಿ ಸಮುದ್ರ ದಲ್ಲಿ ಮೀನು ಗಾರಿಕೆ ಯಲ್ಲಿ ನಿರತ ವಾಗಿ ರುವ ಜನ ಸಂಖ್ಯೆ (ಬೋಟ್ ಪಾಪ್ಯುಲೇಷನ್) ಹೆಚ್ಚಿರುವುದರಿಂದ ಜನಗಣತಿಯಲ್ಲಿ ಅರ್ಹ ವ್ಯಕ್ತಿಗಳು ಬಿಟ್ಟು ಹೋಗದಂತೆ ಜನಗಣತಿ ನಿರ್ದೇಶನಾಲಯ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಿದೆ ಎಂದರು. ಈ ಸಂಬಂಧ ಎನ್ ಎಂ ಪಿಟಿಯ ನಿರ್ದೇಶಕರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದರು.
ಹತ್ತು ವರ್ಷಕ್ಕೊಮ್ಮೆ ನಡೆಯುವ ಜನಗಣತಿಯನ್ನು ಸಮಗ್ರ ಹಾಗೂ ಸಮರ್ಪಕವಾಗಿ ನಡೆಸಲು ಸೂಕ್ತ ಸಿದ್ಧತೆಗಳನ್ನು ನಡೆಸಲಾಗಿದ್ದು, ಎಲ್ಲರ ಸಹಕಾರದ ಅಗತ್ಯವಿದೆ ಎಂದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2922 ಗಣತಿದಾರರ ಬ್ಲಾಕ್ ಎಂದು ವಿಂಗಡಿಸಿದ್ದು, 2801 ಗಣತಿದಾರರನ್ನು ನೇಮಿಸಲಾಗಿದೆ. ಮೀಸಲು 281 ಸೇರಿದಂತೆ ಒಟ್ಟು 3082 ಗಣತಿದಾರರಿದ್ದಾರೆ. ಇವರಿಗೆ ಮೇಲ್ವಿಚಾರಕರಾಗಿ 528 ಜನರು, ಮೀಸಲು 55 ಸೇರಿದಂತೆ ಒಟ್ಟು 583 ಮೇಲ್ವಿಚಾರಕರಿರುತ್ತಾರೆ. 53 ಜನರು ಮುಖ್ಯ ತರಬೇತಿಗಾರರಾಗಿ ಕರ್ತವ್ಯ ನಿರ್ವಹಿಸುವರು.
ಮಹಾ ನಗರ ಪಾಲಿಕೆ ವ್ಯಾಪ್ತಿ ಯಲ್ಲಿ ಒಟ್ಟು 810 ಗಣತಿ ದಾರರು, 136 ಮೇಲ್ವಿಚಾ ರಕರು, 11 ಮೀಸಲು, 17 ಮುಖ್ಯ ತರ ಬೇತಿ ದಾರರಿ ರುತ್ತಾರೆ. ನಗರ ಪ್ರದೇಶ ದಲ್ಲಿ ರುವ ಜನರು ಜನ ಗಣತಿ ಕಾರ್ಯಕ್ಕೆ ಸ್ಪಂದಿಸ ಬೇಕೆಂ ದರು. ಜನ ವರಿ 28 ರಿಂದ ಫೆಬ್ರ ವರಿ 5 ರವರೆಗೆ ಎಲ್ಲ ತಾಲೂಕು ಕೇಂದ್ರಗಳಲ್ಲಿ ಗಣತಿದಾರರಿಗೆ, ಮೇಲ್ವಿಚಾರಕರಿಗೆ ತರಬೇತಿ ನೀಡಲಾಗುವುದು. ಸ್ಪಷ್ಟ ಹಾಗೂ ಯೋಜಿತ ರೂಪುರೇಷೆ ಗಳಿಂದ ಹಾಗೂ ಸಮರ್ಪಕ ಮೇಲ್ವಿಚಾರಣೆಯಿಂದ ಮಾತ್ರ ಜನಗಣತಿ ಕಾರ್ಯ ಯಶಸ್ವಿಯಾಗಲಿದೆ ಎಂದ ನಿರ್ದೇಶಕರು, ವಸತಿ ರಹಿತ ಮತ್ತು ಸಂಸ್ಥೆಗಳಲ್ಲಿರುವ ಜನಸಂಖ್ಯೆಯನ್ನು ಸಮರ್ಪಕವಾಗಿ ದಾಖಲಿಸಬೇಕಿದೆ ಎಂದರು. ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸಹಾಯವಾಣಿ ಸ್ಥಾಪನೆ ಹಾಗೂ ಸಮನ್ವಯತೆಯಿಂದ ಕೆಲಸ ಸುಲಭವಾಗಲಿದೆ ಎಂದು ನಿರ್ದೇಶಕರು ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸುಬೋಧ್ ಯಾದವ್, ಈ ಸಂಬಂಧ ರಚಿಸಿದ ಕಾರ್ಯಸೂಚಿಯ ಬಗ್ಗೆ ಹಾಗೂ ದೈನಂದಿನ ಕಾರ್ಯಾಭಿವೃದ್ಧಿ ಚಟುವಟಿಕೆ ಬಗ್ಗೆ ಚುನಾವಣಾ ಸಮಯದಲ್ಲಿ ಮಾಡಿದ ಸಂಪರ್ಕ ವ್ಯವಸ್ಥೆಯನ್ನು, ಮಾಹಿತಿ ಸಂಗ್ರಹ ವ್ಯವಸ್ಥೆಯನ್ನು ರಚಿಸುವ ಬಗ್ಗೆ ಮಾಹಿತಿ ನೀಡಿದರು. ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಸ್ವಾಗತಿಸಿದರು. ಪಾಲಿಕೆ ಆಯುಕ್ತರಾದ ಡಾ. ಕೆ. ಎನ್ ವಿಜಯಪ್ರಕಾಶ್ ವಂದಿಸಿದರು. ಮಹಾನಗರಪಾಲಿಕೆ ಅಧಿಕಾರಿಗಳು, ಸಹಾಯಕ ಆಯುಕ್ತರಾದ ಪ್ರಭುಲಿಂಗ ಕವಳಿಕಟ್ಟಿ, ತಹಸೀಲ್ದಾರ್ ಮಂಜುನಾಥ್ ಉಪಸ್ಥಿತರಿದ್ದರು.