Friday, January 7, 2011

'ಯುವಜನಾಂಗಕ್ಕೆ ಉತ್ತಮ ಮಾರ್ಗದರ್ಶನ ಅಗತ್ಯ'

ಮಂಗಳೂರು, ಜನವರಿ 07: ಸಮಾಜವನ್ನು ಅಪರಾಧ ಮುಕ್ತವಾಗಿಸಲು 16ರಿಂದ 18ರ ಹರೆಯದ ಯುವಜನಾಂಗಕ್ಕೆ ಉತ್ತಮ ಮಾರ್ಗದರ್ಶನ ನೀಡಬೇಕಿದೆ. ಈ ಹರೆಯದಲ್ಲೇ ಮಕ್ಕಳು ಹಾದಿ ತಪ್ಪುವ ಅವಕಾಶಗಳು ಹೆಚ್ಚಿದ್ದು, ಅವರನ್ನು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸುವುದರಿಂದ ಅವರಲ್ಲಿ ಸಾಮಾಜಿಕ ಜವಾಬ್ದಾರಿ ಮೂಡಲಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಡಾ. ಟಿ. ಸಿ ಶಿವಶಂಕರ ಮೂರ್ತಿ ಹೇಳಿದರು.
ಅವರಿಂದು ಮಂಗಳೂರು ಪೊಲೀಸ್ ಕಮಿಷ ನರೇಟ್ ಮತ್ತು ರೋಶನಿ ಕಾಲೇಜಿನ ಅಪ ರಾಧ ಶಾಸ್ತ್ರ ವಿಭಾಗ ಜಂಟಿ ಯಾಗಿ ಹಮ್ಮಿ ಕೊಂಡಿದ್ದ ಅಪರಾಧ ತಡೆ ಮಾಸದ ಸಮಾ ರೋಪ ಸಮಾ ರಂಭ ವನ್ನು ಉದ್ಘಾಟಿಸಿ ಮಾತ ನಾಡು ತ್ತಿದ್ದರು.ಅಪಾರ ಯುವಶಕ್ತಿಯನ್ನು ಹೊಂದಿರುವ ನಮ್ಮ ದೇಶದಲ್ಲಿ ಯುವಶಕ್ತಿಗೆ ಸೂಕ್ತ ಮಾರ್ಗದರ್ಶನ ನೀಡು ವುದರಿಂದ ಸಮಾಜದಲ್ಲಿರುವ ದುಷ್ಟಶಕ್ತಿಗಳಿಂದ ಯುವಶಕ್ತಿಯನ್ನು ದೂರವಿಡಲು ಸಾಧ್ಯ. ಅಂತಹ ಉತ್ತಮ ಪ್ರಯತ್ನವನ್ನು ಪೊಲೀಸ್ ಮತ್ತು ರೋಶನಿ ನಿಲಯದ ಅಪರಾಧ ವಿಭಾಗ ಮಾಡಿದ್ದು, ಇಂತಹ ಪ್ರಯತ್ನ ಗಳಲ್ಲಿ ಮಾಧ್ಯಮದ ಪಾತ್ರ ಪ್ರಮುಖವಾಗಿದೆ ಎಂದರು. ಅಪರಾಧಗಳೆಡೆಗೆ ಮಕ್ಕಳ ಮನಸ್ಸು ಚಲಿಸದಂತೆ ನೋಡಿಕೊಳ್ಳುವ ಹೊಣೆ ಪ್ರತಿಯೊಬ್ಬರದಾಗಿದ್ದು, ಮಧ್ಯದಲ್ಲೇ ಶಾಲೆ ಬಿಡುವ ಮಕ್ಕಳ ಬಗ್ಗೆ ಶಿಕ್ಷಣ ಇಲಾಖೆ ಹೆಚ್ಚಿನ ಜಾಗೃತೆ ವಹಿಸಿದೆ ಎಂದರು. ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಮಾತನಾಡಿ, ಅಪರಾಧವನ್ನು ವೈಜ್ಞಾನಿಕವಾಗಿ ಹಾಗೂ ರಚನಾತ್ಮಕವಾಗಿ ತಡೆಯಲು ಇಲಾಖೆ ಯತ್ನಿಸುತ್ತಿದ್ದು, ಅಪರಾಧ ಶಾಸ್ತ್ರ ವಿಭಾಗದ ಸಹಯೋಗ ತಮ್ಮ ಪ್ರಯತ್ನಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುತ್ತಿದೆ. ಹದಿಹರೆಯದ ಮಕ್ಕಳಲ್ಲಿ ಈ ಬಗ್ಗೆ ಅರಿವು ಮೂಡಿಸುವುದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಸಮಾಜದಲ್ಲಿ ಅಪರಾಧಗಳು ನಡೆದರೆ ನಮ್ಮ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ ಎಂದರು; ಹಾಗಾಗಿ ಇಲಾಖೆ ಅಪರಾಧ ತಡೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದರು.
ಸಮಾ ರಂಭ ದಲ್ಲಿ ಅತಿಥಿಗಳು ಮಾಧ್ಯಮ ಮತ್ತು ಅಪ ರಾಧ - 2010, ಹಾಸ್ಯ ಮತ್ತು ಅಪರಾಧ ಎಂಬ ಪುಸ್ತಕ ಗಳನ್ನು ಬಿಡುಗಡೆ ಮಾಡಿದರು. ಟ್ರಾಫಿಕ್ ಪೊಲೀಸರಿಗಾಗಿ ಇಲೆಕ್ಟ್ರಾನಿಕ್ ಚಲನ್ ಕಲೆಕ್ಷನ್ ಮೀಟರ್ ಅನ್ನು ಬಿಡುಗಡೆ ಮಾಡಲಾಯಿತು. ರೋಶನಿಯ ಪ್ರಾಂಶುಪಾಲರಾದ ಡಾ. ಜೆಸಿಂತ ಡಿ ಸೋಜಾ ಸ್ವಾಗತಿಸಿದರು. ಅಪರಾಧ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ ಅಶೋಕ್, ಡಿಸಿಪಿ ರಮೇಶ್, ಮುತ್ತೂರಾಯ ಅವರು ಉಪಸ್ಥಿತರಿದ್ದರು. ರೋಶನಿ ಮಕ್ಕಳು ಅಪರಾಧ ತಡೆ ಸಂಬಂಧ ಸ್ಕಿಟ್ ಪ್ರದರಶಿಸಿದರು.