Tuesday, January 25, 2011

ಮತದಾರರ ದಿನಾಚರಣೆ: 14,635 ಎಪಿಕ್ ಕಾರ್ಡ್ ವಿತರಣೆ

ಮಂಗಳೂರು,ಜನವರಿ.25: ಚುನಾವಣಾ ಆಯೋಗದ ಆಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯ ಜಿಲ್ಲಾ ಮಟ್ಟದ ಕಾರ್ಯಕ್ರಮ ಮಂಗಳೂರಿನ ಪುರಭವನದಲ್ಲಿ ಇಂದು ಆಯೋಜಿಸಲಾಗಿತ್ತು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ ಅವರು ಮತದಾನದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಹೆಚ್ಚಾಗಿ ಗ್ರಾಮೀಣ ಮಟ್ಟದಲ್ಲಿ ಆಗಬೇಕು.ಈ ಮೂಲಕ ಹೊಸ ಬದಲಾವಣೆಯಾಗಿ ಪ್ರತಿಯೊಬ್ಬರೂ ಮತದಾನದಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದು ಹೇಳಿದರು.
ಮತ ದಾನ ಮಾಡುವ ವರ ಸಂಖ್ಯೆ ಇತ್ತೀ ಚಿನ ದಿನ ಗಳಲ್ಲಿ ಕಡಿಮೆ ಯಾಗು ತ್ತಿದೆ. ಈ ನೆಲೆ ಯಲ್ಲಿ ಜನ ರಲ್ಲಿ ಮತ ದಾನದ ಅವಶ್ಯ ಕತೆ ಯನ್ನು ಮನ ವರಿಕೆ ಮಾಡಿ ಆಸಕ್ತಿ ಹುಟ್ಟಿ ಸುವ ಕೆಲಸ ವನ್ನು ಮಾಡು ವಲ್ಲಿ ಚುನಾ ವಣಾ ಆಯೋಗ ಮುಂದಾ ಗಿರು ವುದು ಶ್ಲಾಘ ನೀಯ. ಪ್ರಜಾ ಪ್ರಭುತ್ವ ರಾಷ್ಟ್ರದಲ್ಲಿ ಮತದಾನ ನಮ್ಮ ಹಕ್ಕು ಎಂದುಕೊಂಡು ಪ್ರತಿಯೊಬ್ಬರೂ ಮತದಾನದಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಶಾಸಕ ಯು.ಟಿ.ಖಾದರ್ ಅವರು, ಇಂದು ಹೆಚ್ಚಾಗಿ ವಿದ್ಯಾವಂತ ಯುವ ಸಮುದಾಯ ಮತದಾನದಿಂದ ದೂರಾಗುತ್ತಿರುವುದು ವಿಷಾದನೀಯ. ಯುವಕರು ಮತದಾನದ ಪ್ರಕ್ರೀಯೆಯಲ್ಲಿ ಹೆಚ್ಚು ಪಾಲ್ಗೊಳ್ಳುವ ಅಗತ್ಯವಿದ್ದು, ಅವರನ್ನು ಹುರಿದುಂಬಿಸುವ ಕಾರ್ಯ ತುರ್ತಾಗಿ ನಡೆಯಬೇಕಿದೆ ಎಂದರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು.ವಿದ್ಯಾರ್ಥಿಗಳಾದ ಅಶ್ವತ್ ರಾವ್, ನಿಖಿತಾ, ಪ್ರಣೀತಾ, ಸಾನಾ ಇವರುಗಳು ರಾಜಕೀಯ ವ್ಯವಸ್ಥೆ ಹಾಗೂ ಮತದಾನದ ಕುರಿತು ತಮ್ಮ,ತಮ್ಮ ಅಭಿಪ್ರಾಯ ಮಂಡಿಸಿದರು.
ಕಾರ್ಯ ಕ್ರಮ ದಲ್ಲಿ ಹೊಸ ಮತ ದಾರ ರಿಗೆ ಮತ ದಾನದ ಗುರು ತಿನ ಚೀಟಿ ವಿತರಿ ಸಲಾ ಯಿತು. ಅಲ್ಲದೆ ವಿವಿಧ ಸ್ಪರ್ಧೆ ಗಳಲ್ಲಿ ವಿಜೇತ ರಾದ ವಿದ್ಯಾರ್ಥಿ ಗಳಿಗೆ ಬಹು ಮಾನ ವಿತರಿ ಸಲಾ ಯಿತು.ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಮೇಯರ್ ರಜನಿ ದುಗ್ಗಣ್ಣ, ಉಪ ಮೇಯರ್ ರಾಜೇಂದ್ರ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ಮನಪಾ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶಾಂತಾ ಆರ್. ರೂಪಾ ಡಿ.ಬಂಗೇರ ಮುಖ್ಯ ಅತಿಥಿಗಳಾಗಿದ್ದರು.ಮಂಗಳೂರು ತಹಶೀಲ್ದಾರ್ ಸಿ.ಎನ್.ಮಂಜುನಾಥ್ ಸ್ವಾಗತಿಸಿದರು.