Saturday, January 29, 2011

ಅಬ್ಬಕ್ಕ ಉತ್ಸವಕ್ಕೆ ಪ್ರತಿವರ್ಷ ಅನುದಾನ: ಡಾ.ವಿ.ಎಸ್. ಆಚಾರ್ಯ

ಮಂಗಳೂರು,ಜನವರಿ.29:ಐತಿಹಾಸಿಕ ಉಳ್ಳಾಲದ ರಾಣಿ ಅಬ್ಬಕ್ಕನ ಹೆಸರಿನಲ್ಲಿ ನಡೆಯುವ ಉತ್ಸವಕ್ಕೆ ಪ್ರತಿವರ್ಷ ಅನುದಾನ ನೀಡುವುದರೊಂದಿಗೆ ಶಾಶ್ವತ ವ್ಯವಸ್ಥೆಗೆ ಸರಕಾರ ಸಹಾಯ ನೀಡಲಿದೆ. ಈ ಬಗ್ಗೆ ಮುಂಗಡ ಪತ್ರದಲ್ಲೇ ಅನುದಾನ ಕಾದಿರಿಸಲಾಗುವುದು ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವರಾದ ಡಾ.ವಿ.ಎಸ್. ಆಚಾರ್ಯ ತಿಳಿಸಿದರು.ಅವರು ಇಂದು ಅಸೈಗೋಳಿ ಮೈದಾನದಲ್ಲಿ ಕನ್ನಡ ಸಂಸ್ಕೃತಿ ಮತ್ತು ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯಿಂದ ಎರಡು ದಿನಗಳ ಕಾಲ ಹಮ್ಮಿಕೊಂಡ ವೀರರಾಣಿ ಅಬ್ಬಕ್ಕ ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ವರ್ಷ ಅಬ್ಬಕ್ಕ ಉತ್ಸ ವಕ್ಕೆ ಸರಕಾ ರದಿಂದ ಅನು ದಾನ ನೀಡ ಲಾಗಿದೆ. ಮುಂದಿನ ವರ್ಷ ದಿಂದ ಮುಂಗಡ ಪತ್ರ ದಲ್ಲಿ ಹಣ ಕಾದಿರಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯ ಮೂಲಕ ಉತ್ತಮ ರೀತಿ ಯಲ್ಲಿ ಅಬ್ಬಕ್ಕ ಉತ್ಸವ ಆಚರಿ ಸಲು ಅನು ದಾನ ಮತ್ತು ಶಾಶ್ವತ ವ್ಯವಸ್ಥೆಗೆ ಸಹಕ ರಿಸಲು ಸರಕಾರ ಬದ್ಧ ವಾಗಿದೆ ಎಂದು ಸಚಿವ ಡಾ.ವಿ.ಎಸ್. ಆಚಾರ್ಯ ತಿಳಿಸಿದರು.ಕಳೆದ ನಾಲ್ಕು ವರ್ಷಗಳ ಹಿಂದೆ ಕನ್ನಡ ಸಂಸ್ಕೃತಿ ಇಲಾಖೆಗೆ ಸರಕಾರದಿಂದ 10 ರಿಂದ 15 ಕೋಟಿ ರೂ. ಅನುದಾನ ನೀಡಲಾಗುತ್ತಿತ್ತು. ಪ್ರಸಕ್ತ ರಾಜ್ಯ ಸರಕಾರ ಕನ್ನಡ ಸಂಸ್ಕೃತಿ ಇಲಾಖೆಯ ಬಜೆಟ್ 200 ಕೋಟಿರೂ. ಭಾಷೆ, ಸಂಸ್ಕೃತಿ, ಕಲೆ, ಸಾಹಿತ್ಯ, ಧರ್ಮದ ಅಭಿವೃದ್ಧಿಗೆ ಸರಕಾರದ ಪ್ರೋತ್ಸಾಹ ದೊರೆಯಬೇಕು ಎಂದು ಜನರು ನಿರೀಕ್ಷಿಸುತ್ತಾರೆ. ಆ ಪ್ರಕಾರ ಸರಕಾರ ಎಲ್ಲ ಜಿಲ್ಲೆಗಳ ಉತ್ಸವಗಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಸಚಿವರು ತಿಳಿಸಿದರು.
ಅಬ್ಬಕ್ಕ ಉತ್ಸವದ ಹೆಸರಿನಲ್ಲಿ ಜಾಗೃತಿ:ರಾಣಿ ಅಬ್ಬಕ್ಕನ ಹೆಸರಿನಲ್ಲಿ ಉಳ್ಳಾಲದಲ್ಲಿ ಈ ಉತ್ಸವವನ್ನು ಆಚರಿಸುವ ಹಿನ್ನೆಲೆಯಲ್ಲಿ ಅಬ್ಬಕ್ಕನ ಕಾಲದ ಮಹಿಳೆಯ ಧೈರ್ಯ, ಶೌರ್ಯ, ಕೋಮು ಸೌಹಾರ್ದತೆ, ರಾಷ್ಟ್ರ ಪ್ರೇಮ ಇಂದಿನ ಜನರಿಗೆ ಮತ್ತೆ ನೆನಪಿಸಿ ಅವರನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಸ್ಥಳೀಯರ ಪ್ರಯತ್ನ ಶ್ಲಾಘನೀಯ.ಇಂತಹ ಕಾರ್ಯಕ್ಕೆ ಸರಕಾರದ ಸಹಾಯ ಅಗತ್ಯ. ಈ ಹಿಂದಿನ ಅಬ್ಬಕ್ಕ ಉತ್ಸವ ಜನರ ದೇಣಿಗೆಯಿಂದ ನಡೆದಿದೆ. ಅದಕ್ಕಾಗಿ ಜನತೆಗೆ ಕೃತಜ್ಞತೆ ಸಲ್ಲಿಸುವುದಾಗಿ ಉತ್ಸವ ಸಮಿತಿಯ ಗೌರವಾಧ್ಯಕ್ಷ ಶಾಸಕ ಯು.ಟಿ.ಖಾದರ್ ತಿಳಿಸಿದರು.ಅಬ್ಬಕ್ಕ ಉತ್ಸವದ ಸಭಾ ಕಾರ್ಯಕ್ರಮವನ್ನು ಮಂಗಳೂರಿನ ಮೇಯರ್ ರಜನಿ ದುಗ್ಗಣ್ಣ, ಉದ್ಘಾಟಿಸಿ ವಿದ್ಯಾರ್ಥಿಗಳಲ್ಲಿ ಅಬ್ಬಕ್ಕನ ಬಗ್ಗೆ ತಿಳಿಸುವ ಕೆಲಸ ಈ ಉತ್ಸವದ ಸಂದರ್ಭದಲ್ಲಿ ಮಾಡಬೇಕು. ಅಬ್ಬಕ್ಕನ ದೇಶ ಪ್ರೇಮ ನಮಗೆ ಮಾದರಿಯಾಗಬೇಕು ಎಂದರು.
ಓಲೆ.. ಕೊರ್ಡ್ ಲೆತ್ತೆರ್.. ಬತ್ತೆ...
ಸಾಂಸ್ಕೃ ತಿಕ ಕಾರ್ಯ ಕ್ರಮ ಗಳನ್ನು ಉದ್ಘಾ ಟಿಸಿದ ಜಾನ ಪದ ಕಲಾ ವಿದೆ ಕರ್ಗಿ ಶೆಡ್ತಿ ಮಾತ ನಾಡು ತ್ತಾ ಬೆಳ್ತಂ ಗಡಿ ಅಜಿಲ ಸೀಮೆದ ಹಕ್ಕ್ದ ಲೆಕ್ಕನೆ ಓಲೆ ಕೊರ್ದ್ ಲೆತ್ತೆರ್, ಬತ್ತೆ... ಕನ್ನಡೊಡು ಪಾತೆರಿಯರೆ ತೆರಿಯಂದ್... ತುಳು ಪಾತೆರುನಾತ್ ಗೊತ್ತಿಜ್ಜಿ ಎನ್ನುತ್ತಾ ತಮಗೆ ತಿಳಿದ ಸಿರಿಯ ಪಾಡ್ದನವನ್ನು ಹಾಡಿದರು.ಸಮಾರಂಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗರಾಜ ಶೆಟ್ಟಿ, ಕರ್ನಾಟಕ ಬಾಲಭವನ ಸೊಸೈಟಿ ಅದ್ಯಕ್ಷೆ ಸುಲೋಚನಾ ಜಿ.ಕೆ. ಭಟ್, ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಕುಂಬ್ಳೆ ಸುಂದರ ರಾವ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಬಿ. ಮಾಧವ ಭಂಡಾರಿ, ಮೀನುಗಾರಿಕಾ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಮೀನುಗಾರಿಕಾ ಇಲಾಖಾ ಉಪ ನಿರ್ದೇಶಕ ಸುರೇಶ್ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಉಪನಿರ್ದೇಶಕಿ ಶಕುಂತಳಾ, ಜಿ.ಪಂ. ಸದಸ್ಯ ಎನ್.ಎಸ್. ಕರೀಂ, ತಾಲೂಕು ಪಂಚಾಯತ್ ಸದಸ್ಯ ಸುರೇಶ್, ಕೋಣಾಜೆ ಗ್ರಾ.ಪಂ. ಉಪಾಧ್ಯಕ್ಷ ರಾಜಾರಾಂ ರೈ, ಉತ್ಸವ ಸಮಿತಿಯ ಅಧ್ಯಕ್ಷ ಜಯರಾಮ ಶೆಟ್ಟಿ, ಸದಸ್ಯರಾದ ಹೈದರ್ ಪರ್ತಿಪ್ಪಾಡಿ, ಡಾ. ವಾಮನ ನಂದಾವರ, ಸದಾನಂದ ಬಂಗೇರ, ಆನಂದ ಅಸೈಗೋಳಿ, ಕೆಎಸ್ ಆರ್ ಪಿ ಕಮಾಂಡೆಂಟ್ ರಾಮದಾಸ ಗೌಡ, ಚಿತ್ರನಟ ಸುರೇಶ್ ಮಂಗಳೂರು ಮತ್ತಿತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಕಾರ್ಯಾಧ್ಯಕ್ಷ ದಿನಕರ ಉಳ್ಳಾಲ್ ಸ್ವಾಗತಿಸಿದರು.ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮ ನಿರೂಪಿಸಿದರು.
ಆಕರ್ಷಕ ಜಾನಪದ ದಿಬ್ಬಣ:
ಸಮಾರಂಭಕ್ಕೂ ಮುನ್ನ ದೇರಳಕಟ್ಟೆಯಿಂದ ಅಸೈಗೋಳಿಯವರೆಗೆ ಅಬ್ಬಕ್ಕ ಉತ್ಸವದ ಅಂಗವಾಗಿ ಜಾನಪದ ದಿಬ್ಬಣ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಅಬ್ಬಕ್ಕನ ವೇಷ ಧರಿಸಿದ ಕುದುರೆ ಸವಾರ ಜನರ ಗಮನ ಸೆಳೆದ. ಕೀಲು ಕುದುರೆ, ಯಕ್ಷಗಾನ ಗೊಂಬೆ, ಸಾಗರದ ಹೆಗ್ಗೋಡಿನ ಮಹಿಳಾ ತಂಡದ ಡೊಳ್ಳು ಕುಣಿತ, ಬೆರಿಪದವು ತಂಡದ ತಾಲೀಮು ನೃತ್ಯ, ದಫ್ ತಂಡ, ಸೃಷ್ಟಿ ಕೀಲು ಕುದುರೆ ತಂಡದ ಆಕರ್ಷಕ ಬೊಂಬೆಗಳು ಜಾನಪದ ದಿಬ್ಬಣದ ಆಕರ್ಷಣೆಯಾಗಿತ್ತು. ಶಾಸಕ ಯು.ಟಿ.ಖಾದರ್ ದೇರಳಕಟ್ಟೆಯಲ್ಲಿ ಮೆರವಣಿಗೆಯನ್ನು ಉದ್ಘಾಟಿಸಿದರು.