Wednesday, January 5, 2011

ಪ್ಲಾಸ್ಟಿಕ್ ನಿರ್ಮೂಲನೆಗೆ ಪರಿಸರ ಸ್ನೇಹಿ ಜೂಟ್ ಉತ್ಪನ್ನಗಳನ್ನು ಬಳಸಿ - ಮೇಯರ್

ಮಂಗಳೂರು, ಜನವರಿ 05:ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ನಿರ್ಮೂಲನೆಗೆ ಪರಿಸರ ಸ್ನೇಹಿ ದೇಶಿಯ ಉತ್ಪನ್ನ ಸೆಣಬಿನ ಉತ್ಪನ್ನಗಳನ್ನು ಹೆಚ್ಚಾಗಿ ಬಳಸುವಂತೆ ಮಂಗಳೂರು ಮಹಾನಗರಪಾಲಿಕೆ ಮೇಯರ್ ರಜನಿ ದುಗ್ಗಣ್ಣ ಅವರು ಜನತೆಗೆ ಕರೆ ನೀಡಿದ್ದಾರೆ.ಅವರು ಇಂದು ಮಂಗಳೂರಿನಲ್ಲಿ ರಾಷ್ಟ್ರೀಯ ಸೆಣಬು ಮಂಡಳಿ, ದಕ್ಷಿಣ ಚೆನ್ನೈ ಇವರ ವತಿಯಿಂದ ಜನವರಿ 5 ರಿಂದ 9 ರ ವರೆಗೆ ಐದು ದಿನಗಳ ಕಾಲ ನಡೆಯಲಿರುವ ಸೆಣಬು ಉತ್ಪನ್ನಗಳ ಮಾರಾಟ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಈ ಮಾರಾಟ ಪ್ರದರ್ಶ ನದಲ್ಲಿ ಪಶ್ಚಿಮ ಬಂ ಗಾಳ,ತಮಿಳು ನಾಡು,ಕರ್ನಾ ಟಕ,ಪಾಂಡಿ ಚೇರಿ ಸೇರಿ ದಂತೆ ದೇಶದ ನಾನಾ ರಾಜ್ಯ ಗಳ ಸೆಣಬು ಉತ್ಪನ್ನ ಗಳ ಮಾರಾಟ ಗಾರರು ತಮ್ಮ ವಿವಿಧ ಉತ್ಪನ್ನ ಗಳಾದ ಊಟದ ಬುತ್ತಿ ಬ್ಯಾಗ್, ಬೀಚ್ ಬ್ಯಾಗ್, ಜೂಟ್ ಫೈಲ್ ಬ್ಯಾಗ್,ಶಾಪ್ಪಂಗ್ ಮತ್ತು ಫ್ಯಾನ್ಸಿ ಕ್ಯಾರಿ ಬ್ಯಾಗ್,ಗೋಡೆ ಸೌಂದ ರ್ಯಯ ಹೆಚ್ಚಿಸುವ ಅಲಂ ಕಾರಿಕ ವಸ್ತುಗಳು,ಬೀಗದ ಕೈ ಗೊಂಚಲು ಹೀಗೆ ನೂರಾರು ಬಗೆಬಗೆಯ ಜೂಟ್(ನಾರಿನ) ಉತ್ಪನ್ನಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.ಕನಿಷ್ಠ 10 ರೂ.ಗಳಿಂದ ಗರಿಷ್ಠ 1500 ರೂ.ವರೆಗಿನ ಪದಾರ್ಥ ಗಳು ಗ್ರಾಹ ಕರ ಕೈ ಗೆಟ ಕುವ ದರ ಗಳಲ್ಲಿ ಪ್ರದ ರ್ಶಿಸ ಲಾಗಿದೆ ಯೆಂದು ರಾಷ್ಟ್ರೀಯ ಸೆಣಬು ಮಂಡಳಿ(ದಕ್ಷಿಣ)ಮಾರು ಕಟ್ಟೆ ವಿಭಾಗದ ಅಧಿಕಾರಿ ಟಿ.ಅಯ್ಯಪ್ಪ ತಿಳಿ ಸಿದರು.ರಾಷ್ಟ್ರ ದಲ್ಲಿ 1187 ಕುಟುಂಬ ಘಟಕ ಗಳು ಸೆಣಬು ಉದ್ಯಮ ದಲ್ಲಿ ತೊಡ ಗಿದ್ದು ಸುಮಾರು 1,83,200 ಕ್ಕೂ ಹೆಚ್ಚು ಜನವರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ಸೃಜಿಸಿದೆ ಎಂದ ಅಯ್ಯಪ್ಪ ದೇಶದಲ್ಲಿರುವ 77 ಸೆಣಬು ಕಂಪೆನಿಗಳಿಂದ ವಾರ್ಷಿಕ 1.60 ಮಿಲಿಯನ್ ಮೆಟ್ರಿಕ್ ಟನ್ ಗಳಷ್ಟು ಸೆಣಬು ಉತ್ಪನ್ನ ಉತ್ಪಾದಿಸಲಾಗುತ್ತಿದೆ ಎಂದರು.